Monday, 15 October 2018

ಸಾಪಿಣ್ಡ್ಯವಿಜ್ಞಾನೋಪನಿಷತ್ತಿನಲ್ಲಿ – “ಪ್ರಜಾತನ್ತುವಿತಾನವಿಜ್ಞಾನೋಪನಿಷತ್” (೧-೨)

|| ಶ್ರೀಗುರುಭ್ಯೋ ನಮಃ ||
|| ಹರಿಃ ಓಂ ||

೧. ಮಹಾಮಾಙ್ಗಲಿಕ ಪಿತೃಸ್ವರೂಪ ಸಂಸ್ಮರಣೆ (ಸ್ತ್ಯುತ್ಯಾತ್ಮಕ ಹಾಗೂ ಸ್ವರೂಪ ವರ್ಣನಾತ್ಮಕ)

ನಿಗಮಾನುಗತಾ ಮಹಾಮಙ್ಗಲಪ್ರದಾ ಪಿತೃಸ್ತುತಿಃ ಸ್ವರೂಪವರ್ಣನಾತ್ಮಿಕಾ

(೧) – ಉದೀರತಾಮವರ ಉತ್ಪರಾಸ ಉನ್ಮಧ್ಯಮಾಃ ಪಿತರಃ ಸೋಮ್ಯಾಸಃ |
ಅಸುಂ ಯ ಈಯುರವೃಕಾ ಋತಜ್ಞಾಸ್ತೇ ನೋಽವನ್ತು ಪಿತರೋ ಹವೇಷು ||

(೨) – ಇದಂ ಪಿತೃಭ್ಯೋ ನಮೋ ಅಸ್ತ್ವದ್ಯ ಯೇ ಪೂರ್ವಾಸೋ ಯ ಉಪರಾಸ ಈಯುಃ |
ಯೇ ಪಾರ್ಥಿವೇ ರಜಸೋ ನಿಷತ್ತಾ ಯೇ ವಾ ನೂನಂ ಸುವೃಜನಾ ಸು ವಿಕ್ಷು ||

(೩) – ಅಹಂ ಪಿತೄನ್ತ್ಸುವಿದತ್ರಾ ಅವಿತ್ಸಿ ನಪಾತಂ ಚ ವಿಕ್ರಮಣಂ ಚ ವಿಷ್ಣೋಃ |
ಬರ್ಹಿಷದೋ ಯೇ ಸ್ವಧಯಾ ಸುತಸ್ಯ ಭಜನ್ತ ಪಿತ್ವಸ್ತ ಇಹಾಗಮಿಷ್ಠಾಃ ||

(೪) – ಬರ್ಹಿಷದಃ ಪಿತರ ಊತ್ಯರ್ವಾಗಿಮಾ ವೋ ಹವ್ಯಾ ಚಕೃಮಾ ಜುಷಧ್ವಮ್ |
ತ ಆ ಗತಾವಸಾ ಶನ್ತಮೇನಾಥಾ ನಃ ಶಂಯೋರರಪೋ ದಧಾತ ||

(೫) – ಉಪಹೂತಾಃ ಪಿತರಃ ಸೋಮ್ಯಾಸೋ ಬರ್ಹಿಷ್ಯೇಷು ನಿಧಿಷು ಪ್ರಿಯೇಷು |
ತ ಆ ಗಮನ್ತು ತ ಇಹ ಶ್ರುವನ್ತ್ಯಧಿ ಬ್ರುವನ್ತು ತೇಽವನ್ತ್ವಸ್ಮಾನ್ ||

(೬) – ಆಚ್ಯಾ ಜಾನು ದಕ್ಷಿಣತೋ ನಿಷದ್ಯೇಮಂ ಯಜ್ಞಮಭಿ ಗೃಣೀತ ವಿಶ್ವೇ |
ಮಾ ಹಿಂಸಿಷ್ಟ ಪಿತರಃ ಕೇನ ಚಿನ್ನೋ ಯದ್ವ ಆಗಃ ಪುರುಷತಾ ಕರಾಮ ||

(೭) – ಆಸೀನಾಸೋ ಅರುಣೀನಾಮುಪಸ್ಥೇ ರಯಿಂ ಧತ್ತ ದಾಶುಷೇ ಮರ್ತ್ಯಾಯ |
ಪುತ್ರಭ್ಯಃ ಪಿತರಸ್ತಸ್ಯ ವಸ್ವಃ ಪ್ರ ಯಚ್ಛತ ತ ಇಹೋರ್ಜಂ ದಧಾತ ||

(೮) – ಯೇ ನಃ ಪೂರ್ವೇ ಪಿತರಃ ಸೋಮ್ಯಾಸೋಽನೂಹಿರೇ ಸೋಮಪೀಥಂ ವಸಿಷ್ಠಾಃ |
ತೇಭಿರ್ಯಮಃ ಸಂರರಾಣೋ ಹವೀಂಷ್ಯುಶನ್ನುಶದ್ಭಿಃ ಪ್ರತಿಕಾಮಮತ್ತು ||

(೯) – ಯೇ ತಾತೃಷುರ್ದೇವತ್ರಾ ಜೇಹಮಾನಾ ಹೋತ್ರಾವಿದಃ ಸ್ತೋಮತಷ್ಟಾಸೋ ಅರ್ಕೈಃ |
ಆಗ್ನೇ ಯಾಹಿ ಸುವಿದತ್ರೇಭಿರರ್ವಾಙ್ ಸತ್ಯೈಃ ಕವ್ಯೈಃ ಪಿತೃಭಿರ್ಘರ್ಮಸದ್ಭಿಃ ||

(೧೦) – ಯೇ ಸತ್ಯಾಸೋ ಹವಿರದೋ ಹವಿಷ್ಪಾ ಇನ್ದ್ರೇಣ ದೇವೈಃ ಸರಥಂ ದಧಾನಾಃ |
ಆಗ್ನೇ ಯಾಹಿ ಸಹಸ್ರಂ ದೇವವನ್ದೈಃ ಪರೈಃ ಪೂರ್ವೈಃ ಪಿತೃಭಿರ್ಘರ್ಮಸದ್ಭಿಃ ||

(೧೧) – ಅಗ್ನಿಷ್ವಾತ್ತಾಃ ಪಿತರ ಏಹ ಗಚ್ಛತ ಸದಃಸದಃ ಸದತ ಸುಪ್ರಣೀತಯಃ |
ಅತ್ತಾ ಹವೀಂಷಿ ಪ್ರಯತಾನಿ ಬರ್ಹಿಷ್ಯಥಾ ರಯಿಂ ಸರ್ವವೀರಂ ದಧಾತನ ||

(೧೨) – ತ್ವಮಗ್ನ ಈಲಿತೋ ಜಾತವೇದೋಽವಾಡ್ಢವ್ಯಾನಿ ಸುರಭೀಣಿ ಕೃತ್ವೀ |
ಪ್ರಾದಾಃ ಪಿತೃಭ್ಯಃ ಸ್ವಧಯಾ ತೇ ಅಕ್ಷನ್ನದ್ಧಿ ತ್ವಂ ದೇವ ಪ್ರಯತಾ ಹವೀಂಷಿ ||

(೧೩) – ಯೇ ಚೇಹ ಪಿತರೋ ಯೇ ಚ ನೇಹ ಯಾಂಶ್ಚ ವಿದ್ಮ ಯಾँ ಉ ಚ ನ ಪ್ರವಿದ್ಮ |
ತ್ವಂ ವೇತ್ಥ ಯತಿ ತೇ ಜಾತವೇದಃ ಸ್ವಧಾಭಿರ್ಯಜ್ಞಂ ಸುಕೃತಂ ಜುಷಸ್ವ ||

(೧೪) – ಯೇ ಅಗ್ನಿದಗ್ಧಾ ಯೇ ಅನಗ್ನಿದಗ್ಧಾ ಮಧ್ಯೇ ದಿವಃ ಸ್ವಧಯಾ ಮಾದಯನ್ತೇ |
ತೇಭಿಃ ಸ್ವರಾಡಸುನೀತಿಮೇತಾಂ ಯಥಾವಶಂ ತನ್ವಂ ಕಲ್ಪಯಸ್ವ ||

- ಋಗ್ವೇದಸಂಹಿತಾ, ಮಂಡಲ ೧೦, ಸೂಕ್ತ ೧೫

ಖಣ್ಡಚತುಷ್ಟಯಾತ್ಮಿಕಾ ಶ್ರಾದ್ಧವಿಜ್ಞಾನೋಪನಿಷತ್ತಿನಿಂದ ನಾವು ‘ಶ್ರಾದ್ಧ’ ಕರ್ಮ್ಮದ ಸಮ್ಬನ್ಧದಲ್ಲಿ ತರ್ಕ-ಯುಕ್ತಿ-ವಿಜ್ಞಾನಮಾಧ್ಯಮದಿಂದ ಏನು ಪ್ರತಿಪಾದನೆ ಮಾಡಲು ಹೊರಟಿರುವೆವೋ, ಆ ಎಲ್ಲಾ ವಿಷಯಗಳ ಮೂಲವು (ಮೌಲಿಕ ರಹಸ್ಯವು) ಪೂರ್ವೋಪಾತ್ತ ಪಿತೃಸ್ವರೂಪ ಸಂಸ್ಮರಣಾತ್ಮಕ ಋಗ್ವೇದೀಯ ದಶಮ ಮಂಡಲಾನ್ತರ್ಗತ ಪಞ್ಚದಶಮಸೂಕ್ತದ ಚತುರ್ದಶಮನ್ತ್ರ ಸಮಷ್ಟಿಯಿಂದ ಸರ್ವಾತ್ಮನಾ ಗತಾರ್ಥವಾಗಿದೆ. ಮಹರ್ಷಿ ‘ಯಮ’ನ ಪುತ್ರ, ಹಾಗಾಗಿ ‘ಯಾಮಾಯನ’ ಎಂಬ ಹೆಸರಿನಿಂದ ಪ್ರಸಿದ್ಧ ಮನ್ತ್ರದ್ರಷ್ಟಾ ಶಙ್ಖಮಹರ್ಷಿಯಿಂದ ದ್ರಷ್ಟ, ‘ಪಿತರದೇವತಾ’ತ್ಮಕ, ವಿರಾಟ್‍ತ್ರಿಷ್ಟುಪ್-ತ್ರಿಷ್ಟುಪ್-ಪಾದನಿಚೃತ್‍ತ್ರಿಷ್ಟುಪ್-ಆರ್ಚೀಭುರಿಕ್‍ತ್ರಿಷ್ಟುಪ್-ನಿಚೃಜ್ಜಗತೀ-ಛನ್ದಸ್ಸುಗಳಿಂದ ಛನ್ದಿತ, ಧೈವತ ಹಾಗೂ ನಿಷಾದ ಸ್ವರದ್ವಯದಿಂದ ಸನ್ತುಲಿತ ಉದ್ಧೃತ ಪ್ರಸ್ತುತ ಋಗ್ವೇದೀಯ ಸೂಕ್ತದಲ್ಲಿ ಸ್ತುತಿಮಾಧ್ಯಮದಿಂದ ‘ಪಿತೃದೇವತೆಯ’ ಯಾವ ಮೌಲಿಕ ಸ್ವರೂಪದ ವಿಶ್ಲೇಷಣೆಯಾಗಿದೆಯೋ, ಅದರ ಆನುಪೂರ್ವೀಯಿಂದ ನಿರೂಪಣೆಗಾಗಿಯೇ ಒಂದು ಸ್ವತನ್ತ್ರ ಮಹಾನಿಬನ್ಧವೇ ಅಪೇಕ್ಷಿತವಾಗಿದೆ. ಸ್ತುತಿಯ ಒಂದು ಉದ್ದೇಶವೆಂದರೆ ಆಸ್ಥಾಪರಿಪೂರ್ಣತೆಯಿಂದ ಸಾತ್ತ್ವಿಕವಾದ ಅನನ್ಯಶ್ರದ್ಧೆ. ನಂತರ ಆ ಪಿತೃಸ್ತುತಿಯ ಸಮ್ಬನ್ದದಲ್ಲಿ ಹೇಳಲೇನೂ ಇರುವುದಿಲ್ಲ, ಏಕೆಂದರೆ ಇದರ ಏಕಮಾತ್ರ ಮೂಲಾಧಾರ-ಸರ್ವಾಧಾರ-ಸರ್ವಸ್ವವು ಚಾನ್ದ್ರೀ ‘ಶ್ರದ್ಧಾ’ವೇ ಆಗಿದೆ. ಪಿತೃಕರ್ಮ್ಮಭಕ್ತರು, ಅನನ್ಯ ಶ್ರದ್ಧಾಳುಗಳು, ಆಸ್ತಿಕ ಭಾರತೀಯ ದ್ವಿಜಾತಿಮಾನವರ (ಗಂಡು-ಹೆಣ್ಣು) ದೃಷ್ಟಿಯಲ್ಲಿ ಈ ಪೂತತಮ ಶ್ರದ್ಧಾಕ್ಷೇತ್ರದೊಂದಿಗೆ ಸಮ್ಬನ್ಧಿತ ಪಿತೃಸ್ತುತಿರೂಪ ವೇದಸೂಕ್ತದ ಯುಕ್ತಿ-ತರ್ಕ-ವಿಜ್ಞಾನ ಸಮ್ಮತೆಗಳ ನೈಷ್ಠಿಕೀ ವ್ಯಾಖ್ಯೆಯ ಜಿಞ್ಞಾಸೆಯು ಸ್ವಲ್ಪವಾದರೂ ಮಹತ್ವವಿಲ್ಲದೆ ಇರಲು ಸಾಧ್ಯವೇ? ಆದ್ದರಿಂದ ಸಹಜ ಶ್ರದ್ಧಾತನ್ತುಗಳನ್ನು ಆರಮ್ಭದಲ್ಲಿ ವಿಕಮ್ಪಿತಗೊಳಿಸುವ ವೈಜ್ಞಾನಿಕ ವ್ಯಾಖ್ಯೆಯ ಉತ್ತರದಾಯಿತ್ವವು ‘ಸ್ವತನ್ತ್ರಗ್ರನ್ಥ’ದ ಮೇಲೆ ಬಿಟ್ಟು ಪ್ರಕೃತದಲ್ಲಿ ಕೇವಲ ಸೂಕ್ತಮನ್ತ್ರಗಳ ಭಾವಾರ್ಥವನ್ನು ಉದ್ಧೃತಗೊಳಿಸಲಾಗುತ್ತದೆ.

(೧) ಉದೀರತಾಮವರ …
“ಅವರೇ, ಉತ್-ಪರಾಸಃ, ಉತ-ಮಧ್ಯಮಾಃ, ಪಿತರಃ, ಸೋಮ್ಯಾಸಃ, ಉದೀರತಮ್ | ಯೇ ಅವೃಕಾಃ, ಋತಜ್ಞಾಃ, ಅಸು, ಯೇ ಈಯುಃ, ತೇ, ಪಿತರಃ, ನಃ, ಹವೇಷು, ಅವನ್ತು” ಇತ್ಯನ್ವಯಃ |

“ಅವರಸ್ಥಾನೀಯಾಃ ಪಾರ್ಥಿವಾಃ, ಉತ ದ್ಯುಲೋಕಸ್ಥಾನೀಯಾಃ ಪರಾಸಃ, ಉತ ಆನ್ತರಿಕ್ಶಷಯಾ ಮಧ್ಯಮಾಃ ಪಿತರಃ ಸೋಮಾತ್ಮಕಾಃ (ಪಿತೃಕರ್ಮ್ಮಾನುಷ್ಠಾನಪರಾಯಣಾಯ ಯಜಮಾನಾಯ) ಯಶಸ್ವಿನೋ ಭವನ್ತು | 

ಯೇ ಪಿತರಃ ಸುಶಾನ್ತಾಃ ಸನ್ತೋ ಋತಭಾವಾಪನ್ನಾಃ ಪಾರಮೇಷ್ಠ್ಯಭಾವಾಪನ್ನಾಃ ಯಜಮಾನಸ್ಯಾಧ್ಯಾತ್ಮಿಕಂ ಪ್ರಾಣಮನುಗತಾಃ-ಆಗತಾಸ್ತ ಪಿತರಃ-ಅತ್ರ-ಪಿತ್-ಕರ್ಮ್ಮಾಣಿ-ಅಸ್ಮದೀಯೇಷು ಆಹ್ವಾನೇಷು ರಕ್ಷನ್ತ್ವಸ್ಮಾನ್” ಇತಿ-ಅಕ್ಷರಾರ್ಥಃ |

“ಪ್ರಥಮಶ್ರೇಣಿಯ ಪಾರ್ಥಿವ ಪಿತರ, ಉತ್ತಮಶ್ರೇಣಿಯ ದಿವ್ಯ ಪಿತರ ಮತ್ತು ಮಧ್ಯಮಶ್ರೇಣಿಯ ಆನ್ತರಿಕ್ಷ್ಯ ಪಿತರ; ಇವರು ಸ್ವರೂಪತಃ ಸೋಮಪ್ರಾಣಪ್ರಧಾನರಾಗುತ್ತಾ ಸೋಮ್ಯರಾಗಿದ್ದು, ನಮಗಾಗಿ ಯಶಃಪ್ರದಾತರಾಗಲಿ. ಇಂತಹಾ ಯಾವ ಪಿತರರಿದ್ದಾರೋ, ಅವರು ತಮ್ಮ ಸುಶಾನ್ತ-ಸೋಮ್ಯಭಾವದಿಂದ, ತಮ್ಮ ಸೋಮಲೋಕಾತ್ಮಕ ಪಾರಮೇಷ್ಠ್ಯ ಋತಸ್ವರೂಪದಿಂದ ಪಿತೃಕರ್ಮ್ಮಾನುಷ್ಠಾತಾ ಯಜಮಾನನ ಅಧ್ಯಾತ್ಮಸಂಸ್ಥಾದತ್ತ ಅಭಿಮುಖರಾಗುತ್ತಾ ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಳ್ಳಲಿ, ನಮ್ಮನ್ನು ರಕ್ಷಣೆ ಮಾಡಲಿ”. ಇತಿ ಕನ್ನಡಭಾಷಾ ಸಮನ್ವಯಃ |

ಸೂರ್ಯ್ಯ ಹಾಗೂ ಪೃಥಿವಿಗಳೆರಡರ ಮಧ್ಯಸ್ಥಾನವು ಅನ್ತರಿಕ್ಷವಾಗಿದೆ. ಇದನ್ನು ‘ಪ್ರಥಮ ದ್ಯುಲೋಕ’ ಎಂದು ನಂಬಲಾಗಿದೆ. ಸ್ವಯಂ ಸೂರ್ಯ್ಯನು ‘ಸೂರ್ಯ್ಯೋ ದ್ಯುಸ್ಥಾನಃ’ ಎಂಬನುಸಾರ ‘ದ್ವಿತೀಯ ದ್ಯುಲೋಕ’ ಆಗಿದೆ, ಹಾಗೂ ಸೂರ್ಯ್ಯನಿಂದಲೂ ಪರಮ-ಊರ್ಧ್ವ ಸ್ಥಾನದಲ್ಲಿ ಅವಸ್ಥಿತವಾಗಿದೆ, ಹಾಗಾಗಿ ‘ಪರಮೇ ಸ್ಥಾನೇ ತಿಷ್ಠತಿ’ ಎಂಬ ನಿರ್ವಚನಾನುಸಾರ ‘ಪರಮೇಷ್ಠೀ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಋತಭಾವಪ್ರಧಾನ ಭೃಗ್ವಙ್ಗಿರೋಮಯ ಲೋಕವು ‘ತೃತೀಯ ದ್ಯುಲೋಕ’ ಆಗಿದೆ-
ಋತಮೇವ ಪರಮೇಷ್ಠೀ ಋತೇ ಭೂಮಿರಿಯಂ ಶ್ರಿತಾ |
ಋತೇ ಸಮುದ್ರ ಆಹಿತ ಋತಂ ನಾತ್ಯೇತಿ ಕಿಙ್ಚನ || (ಗೋಪಥಬ್ರಾಹ್ಮಣ)

‘ತೃತೀಯಸ್ಯಾಂ-ವೈ ಇತೋ ದಿವಿ  ಸೋಮ ಆಸೀತ್’ ಇತ್ಯಾದಿ ಬ್ರಾಹ್ಮಣಶ್ರುತಿಯ ಅನುಸಾರ ಈ ತೃತೀಯ ದ್ಯುಲೋಕದಲ್ಲಿಯೇ ‘ಅಮ್ಭಃ’ ಎಂಬ ಹೆಸರಿನ ಪವಿತ್ರವಾದ ‘ಬ್ರಹ್ಮಣಸ್ಪತಿ’ ಸೋಮದ ಸಾಮ್ರಾಜ್ಯವಿದೆ, ಇದು ಪಿತರರ ಮೂಲಪ್ರತಿಷ್ಠಾ ಎಂದು ನಂಬಲಾಗಿದೆ –
ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ ಪರ್ಯೇಷಿ ವಿಶ್ವತಃ |
ಅತಪ್ತತನೂರ್ನ ತದಾಮೋ ಸಮಶ್ನುತೇ ಶೃತಾಸ ಇದ್ವಹನ್ತಸ್ತತ್ ಸಮಾಸತ || (ಋಕ್ಸಂಹಿತಾ)

ಪಾರಮೇಷ್ಠ್ಯ ಸೌಮ್ಯ ಪಿತರರೇ ಸೌರ ತ್ರೈಲೋಕ್ಯದ ಪ್ರಭಾವ-ಪ್ರತಿಷ್ಠಾ ಪರಾಯಣರು. ತೃತೀಯ ದ್ಯುಸ್ಥಾನೀಯ ಪಾರಮೇಷ್ಠ್ಯ ಪಿತರರು ಸೌರ ತ್ರೈಲೋಕ್ಯದಲ್ಲಿ ಬಂದು ಕ್ರಮವಾಗಿ ಸೌರ ದಿವ್ಯ ಪಿತರ, ಚಾನ್ದ್ರ ಆನ್ತರಿಕ್ಷ್ಯ ಪಿತರ, ಪಾರ್ಥಿವ ಪಿತರ, ಎಂಬ ಮೂರು ಶ್ರೇಣಿಗಳಲ್ಲಿ ವಿಭಕ್ತರಾಗುತ್ತಾರೆ. ಮೂರೂ ಕ್ರಮವಾಗಿ ‘ಪರಾಸಃ’-‘ಮಧ್ಯಮಾಃ’-‘ಅವರೇ’ ಎಂದೆನಿಸಿಕೊಂಡಿದ್ದಾರೆ. ಮೂರರಲ್ಲಿಯೂ ಮಧ್ಯಸ್ಥ ಆನ್ತರಿಕ್ಷ್ಯ ಚನ್ದ್ರವು ಭಾಸ್ವರ ಸೋಮಾತ್ಮಕ ಸತ್ಯಸೋಮಪಿಣ್ಡವಾಗಿದೆ; ಇದರ ‘ರೇತಃ-ಶ್ರದ್ಧಾ-ಯಶಃ’ ಎಂಬ ಮೂರು ಮನೋತಗಳಿಗೆ ಮಾನ್ಯತೆ ಇದೆ. ಈ ಮೂರೂ ಕ್ರಮವಾಗಿ ಪೃಥಿವೀ-ಚನ್ದ್ರ-ಸೂರ್ಯ್ಯ ಎಂಬ ಮೂರು ಸೌರ ಲೋಕಗಳೊಂದಿಗೆ ಪ್ರಾಕೃತಿಕ ಸಮನ್ವಯವಾಗುತ್ತಿರುತ್ತವೆ. ಪೃಥಿವೀ ರೇತೋಮಯೀ ಆಗಿದೆ, ಸ್ವಯಂ ಚನ್ದ್ರನು ಶ್ರದ್ಧಾಪ್ರಧಾನವಾಗಿದೆ, ಹಾಗೂ ದ್ವಾದಶಾದಿತ್ಯಪ್ರಾಣಸಮಷ್ಟಿರೂಪ ಸೂರ್ಯ್ಯವು ಯಶೋಮೂರ್ತ್ತಿ ಆಗಿದೆ. ಈ ಯಶೋಭಾವವೇ ತ್ರಿವಿಧ ಪಿತರರ ಪ್ರಧಾನ ವಿಶಿಷ್ಟ ಗುಣವಾಗಿದೆ. ‘ಉದೀರತಾಮ್’ ಎಂಬುದರಿಂದ ಇದೇ ವಿಶಿಷ್ಟ ಗುಣದತ್ತ ಬೊಟ್ಟು ಮಾಡಿ ತೋರಿಸುತ್ತಿರುತ್ತದೆ. ಶರೀರಪ್ರತಿಷ್ಠಾರೂಪೀ ಅಙ್ಗಿರೋಭಾವಾಪನ್ನ ಆಗ್ನೇಯ ಪ್ರಾಣದ ಸಂರಕ್ಷಣೆಯು ಇದೇ ತ್ರಿವಿಧ ಸೋಮ್ಯಪಿತರಪ್ರಾಣದಿಂದ ಆಗುತ್ತಿರುತ್ತದೆ. ಇದುವೇ ಮನ್ತ್ರದ ಸಂಕ್ಷಿಪ್ತ ವಿಜ್ಞಾನ ದಿಕ್ಕಾಗಿದೆ.

(೨) ಇದಂ ಪಿತೃಭ್ಯೋ ನಮಃ …
‘ಯೇ ಪೂರ್ವಾಸಃ, ಯೇ ಉಪರಾಸಃ ಈಯುಃ, ಯೇ ಪಾರ್ಥಿವೇ ರಜಸಿ ಆನಿಷತ್ತಾಃ, ಯೇ ವಾ ನೂನಂ ಸುವೃಜನಾಸು ವಿಕ್ಷು-ಆನಿಷಕ್ತಾಃ -(ತೇಭ್ಯಃ-ಸರ್ವೇಭ್ಯಃ) ಪಿತೃಭ್ಯಃ-ಇದಂ ನಮಃ ‘ಅಸ್ತು’ ಇತ್ಯನ್ವಯಃ |

ಪ್ರಾಕೃತಿಕ ಪೂರ್ಣಾಯುರ್ಭೋಗಾನನ್ತರ ಯಾವ ಆಧ್ಯಾತ್ಮಿಕ ಮಹತ್‍ಪಿತರರು ಚನ್ದ್ರಲೋಕದಲ್ಲಿ ಅವಸ್ಥಿತರಾಗಿದ್ದಾರೆಯೋ, ಅವರೇ ‘ಪೂರ್ವಾಸಃ’ ಆಗಿದ್ದಾರೆ. ಹಾಗೂ ಅಕಾಲಮೃತ್ಯುವಿನಿಂದ ಯಾರು ಚನ್ದ್ರಲೋಕಕ್ಕೆ ಸ್ವಲ್ಪಾವಸ್ಥೆಯಲ್ಲಿಯೇ ಹೋಗಿದ್ದಾರೆಯೋ – ಅವರು ‘ಉಪರಾಸಃ’ ಆಗಿದ್ದಾರೆ. ಯಾವ ಮಹತ್‍ಪಿತರರಿಗೆ ಔಪಪಾತಿಕ ಭಾವಾನುಬನ್ಧದಿಂದ ಇಲ್ಲಿಯವರೆಗೂ ಚನ್ದ್ರಲೋಕಗತಿ ಉಂಟಾಗಿಲ್ಲವೋ, ಅವರು ಪಾರ್ಥಿವ ರಜೋಲೋಕದಲ್ಲಿ ಇತಸ್ತತಃ ಚಕ್ರಮಾನ ಪಿತರರು. ಆಧ್ಯಾತ್ಮಿಕ ಪಿತರರಲ್ಲಿ ಈ ಮೂರು ಶ್ರೇಣಿ ವಿಭಾಗವಾಗುತ್ತದೆ. ಮೂರು ಶ್ರೇಣಿಗಳ ಪ್ರೇತಪಿತರರು ಸಮ್ಪತ್ತಿಶಾಲೀ ಶ್ರದ್ಧಾಶೀಲ ತಮ್ಮ ಪುತ್ರಾದಿ ಪ್ರಜಾಗಳಲ್ಲಿ (ಸುವೃಜನಾಸು ವಿಕ್ಷು) ಆಶಾ ರೂಪದಲ್ಲಿ ಅನುಗತರಾಗುತ್ತಾರೆ, ಇವರಿಗೆ ನಮಸ್ಕಾರ ಪೂರ್ವಕ-ಹವ್ಯಪ್ರದಾನದಿಂದ ಶ್ರದ್ಧಾಳು ಪ್ರಜೆಗಳು ತೃಪ್ತಿಗೊಳಿಸುತ್ತಾರೆ.

(೩) ಆಹಂ ಪಿತೄನ್ …
ಪಿತೃಕರ್ಮ್ಮಕರ್ತ್ತಾ ಶ್ರದ್ಧಾಳು ಯಜಮಾನನು ತಮಗೆ ಅನುಗ್ರಹ ಮಾಡುವ ಪಿತರರನ್ನು ತಮ್ಮ ಅನುಕೂಲಗೊಳಿಸಿಕೊಂಡರು, ಪಾರಮೇಷ್ಠ್ಯ ಸೌಮ್ಯ ವಿಷ್ಣುವಿಗೂ ಈ ಸೌಮ್ಯ ಪಿತರರ-ಅನುಗ್ರಹದಿಂದ ಅನುಗ್ರಹ ಪ್ರಾಪ್ತವಾಯಿತು. ‘ಬರ್ಹಿಷದಃ’ ಎಂಬ ಹೆಸರಿನ ಅನ್ನಪಿತರ-ಪಾರ್ಥಿವ ಪಿತರರು ಈ ಪುರೋಡಾಶಾಹುತಿರೂಪ ದ್ರವ್ಯದ, ಹಾಗೂ ಸೋಮದ ಯಜಮಾನನ ಈ ಪಿತೃಯಜ್ಞಕರ್ಮ್ಮದಲ್ಲಿ ಉಪಭೋಗ ಮಾಡುತ್ತಿರುತ್ತಾರೆ.

(೪) ಬರ್ಹಿಷದಃ ಪಿತರಃ …
ಹೇ ‘ಬರ್ಹಿಷದಃ’ ಎಂಬ ಹೆಸರಿನ ಪಿತೃದೇವತೆಗಳೇ! ನೀವು ನಮ್ಮ ಅರ್ವಾಚೀನ-ಅನಾಗತ (ಹಿಂದಿನ-ಮುಂದಿನ) ವಂಶಪರಮ್ಪರೆಯನ್ನು ಅವಶ್ಯವಾಗಿ ಸಂರಕ್ಷಣೆ ಮಾಡುತ್ತೀರಿ. ನಾವು ತಮಗಾಗಿ ಈ ಹವಿರ್ದ್ರವ್ಯವನ್ನು ಸಮ್ಪನ್ನಗೊಳಿಸುತ್ತಿದ್ದೇವೆ. ನೀವು ಇದರಿಂದ ತುಷ್ಟ-ತೃಪ್ತರಾಗಿರಿ. ಹಾಗೂ ನಮಗಾಗಿ ಹಾಗೂ ನಮ್ಮ ಪರಿವಾರಕ್ಕಾಗಿ ಶಾನ್ತಿ-ಸ್ವಸ್ತಿ ಪ್ರದಾನ ಮಾಡಲು ಅನುಗ್ರಹ ಮಾಡಿರಿ.

(೫) ಉಪಹೂತಾಃ ಪಿತರಃ …
ಅವರು ನಮ್ಮ ಪಿತೃದೇವತೆಗಳು, ನಮ್ಮ ಈ ಶ್ರದ್ಧಾತ್ಮಕ ಪಿತೃಕರ್ಮ್ಮದಲ್ಲಿ ನಮ್ಮ ಪ್ರಾರ್ಥನೆಯಿಂದ ಇಲ್ಲಿ ಬರಲಿ. ಇಲ್ಲಿ ಬಂದು ಅವರು ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುವ ಅನುಗ್ರಹ ಮಾಡಲಿ. ಪ್ರಾರ್ಥನೆ ಕೇಳಿಸಿಕೊಂಡು ನಮಗೆ ಆಶಿಷ ಪ್ರದಾನದ ಅನುಗ್ರಹ ಮಾಡಲಿ.

(೬) ‘ಪ್ರಾಚ್ಯಾ ಜಾನು ದಕ್ಷಿಣತಃ…’
‘ದಕ್ಷಿಣಂ ಜಾನ್ವಾಚ್ಯ ಪಿತರಃ ಉಪಾಸೀದನ್’ (ಶತಪಥ) ಇತ್ಯಾದಿ ಶ್ರುತಿಯ ಅನುಸಾರ ಪಿತೃಕಾರ್ಯ ಮಾಡುವಾಗ ಬರುವ ಭಾಗವಾದ ದಕ್ಷಿಣ ಜಾನುವನ್ನು ಬಗ್ಗಿಸಿ ನತಮಸ್ತಕರಾದಾಗ, ಸಮುಪಸ್ಥಿತ ಪಿತರರು ಬಹಳ ಅನುಗ್ರಹದಿಂದ ನಮ್ಮ ಈ ಕರ್ಮ್ಮದಿಂದ ಸನ್ತುಷ್ಟ-ತೃಪ್ತರಾಗುತ್ತಿರುತ್ತಾರೆ. ಹೇ ಪಿತೃದೇವತೆಗಳೇ! ಈ ಪಿತೃಕರ್ಮ್ಮದಲ್ಲಿ ಒಂದುವೇಳೆ ನಿಮ್ಮ ಆತಿಥ್ಯದಲ್ಲಿ ನಮ್ಮಿಂದ ಏನಾದರೂ ಅಪರಾಧವಾಗಿದ್ದರೆ, ವಿಶ್ವಾಸಪೂರ್ವಕವಾಗಿ ನಮಗೆ, ನೀವು ಅವಶ್ಯವಾಗಿ ಕ್ಷಮಿಸುತ್ತೀರಿ.

(೭) ಆಸೀನಾಸೋ ಅರುಣೀನಾಮ್ …
ತೇಜೋಮಯ ಆಗ್ನೇಯ ದೇವತೆಗಳ ಸಾನ್ನಿಧ್ಯದಲ್ಲಿ ಸಮುಪಸ್ಥಿತ ಹೇ ಪಿತೃದೇವತೆಗಳೇ! ನೀವು ಈ ಪಿತೃಕರ್ಮ್ಮದಲ್ಲಿ ಹವಿಃಪ್ರದಾನ ಮಾಡುವ ಯಜಮಾನರಿಗೆ ಸಮ್ಪತ್ತಿಪ್ರದಾನದಿಂದ ಅನುಗ್ರಹ ಮಾಡುತ್ತಿದ್ದೀರಿ. ಯಜಮಾನನು ಪ್ರಜೆಗಳ ಸಮ್ಪತ್ತಿಶಾಲಿನೀ, ಹಾಗೂ ‘ಊರ್ಕ್’ ಎಂಬ ಸಹೋಬಲಶಾಲಿನೀ ಆಗುವ ಅನುಗ್ರಹ ಮಾಡುತ್ತಿದ್ದೀರಿ.

(೮) ಯೇ ನಃ ಪೂರ್ವೇ ಪಿತರಃ …
ಯಾವ ನಮ್ಮ ವೃದ್ಧಾತಿವೃದ್ಧಪ್ರಪಿತಾಮಹಾದಿ ಪೂರ್ವ ಪಿತರರು ಯಥಾಸಮಯ ದೇವ-ಪಿತೃ-ಕರ್ಮ್ಮಗಳಿಂದ ತುಷ್ಟ-ತೃಪ್ತರಾಗುತ್ತಾರೆಯೋ, ಆ ಪಿತರರೊಂದಿಗೆ ಸಮನ್ವಿತ ದಕ್ಷಿಣಪಥಾಧಿಷ್ಠಾತಾ ಯಮದೇವತೆಯೂ (ರುದ್ರದೇವತೆಯೂ) ತುಷ್ಟ-ತೃಪ್ತರಾಗುತ್ತಾ ನಮಗಾಗಿ ಅನುಗ್ರಹಪ್ರದಾತರಾಗಿ ಪ್ರಮಾಣಿತರಾಗುತ್ತಿರುತ್ತಾರೆ.

(೯) ಯೇ ತಾತೃಷುರ್ದೇವತ್ರಾ …
ಪ್ರಾಕೃತಿಕ ಸ್ಥಿತಿಯ ಕ್ರಮಾನುಸಾರ ಕಾಲಾನ್ತರದಲ್ಲಿ ತಮ್ಮ ಪಿತೃಭಾವದಿಂದ ದೇವಭಾವದಲ್ಲಿ ಪರಿಣತರಾಗುತ್ತಾ ‘ನಾನ್ದೀಮುಖ’ರಾಗುವ ಪಿತರರು ಸ್ತುತಿಕರ್ತ್ತಾ-ಹವಿಃಪ್ರದಾತಾ-ಶ್ರದ್ಧಾಶೀಲ-ಯಜಮಾನರಿಗೆ ಅನುಗ್ರಹಕಾರಕರಾಗುತ್ತಾರೆ. ಹೇ ಅಗ್ನಿರ್ದೇವತೆ! ದೇವಭಾವಾಪನ್ನ ಆ ದಿವ್ಯ ನಾನ್ದೀಮುಖ ಪಿತರರು ತಮ್ಮೊಂದಿಗೆ ನಮ್ಮಯ ಈ ದೇವಕರ್ಮ್ಮದಲ್ಲಿ ಯಥಾಸಮಯಕ್ಕೆ ಬರುವ ಅನುಗ್ರಹ ಮಾಡುತ್ತಲಿರಲಿ.

(೧೦) ಯೇ ಸತ್ಯಾಸಃ…
ತಮ್ಮ ಋತಸೋಮಧರ್ಮ್ಮದಿಂದ ಸ್ವರೂಪತಃ ‘ಋತಾಸಃ’ (ಸೌಮ್ಯ) ಎಂಬುದೂ ಪಿತರ ದೇವಪ್ರಾಣನುಶಯ ಸಮ್ಬನ್ಧದಿಂದ ‘ಸತ್ಯಾಸಃ’ (ಆಗ್ನೇಯ) ಆಗುತ್ತಾ ದೇವವರ್ಗ-ಸಂಯುಕ್ತ ಇನ್ದ್ರದೇವತೆಯೊಂದಿಗೆ ಸಂಯುಕ್ತರಾಗುತ್ತಾ ದೇವಕರ್ಮ್ಮದಲ್ಲಿಯೂ ಬರುತ್ತಾರೆ.

(೧೧) ಅಗ್ನಿಷ್ವಾತ್ತಾಃ ಪಿತರಃ …
ಅಗ್ನಿಯಿಂದ ಆಸ್ವಾದಿತ, ಹಾಗಾಗಿ ‘ಅಗ್ನಿಷ್ವಾತ್ತಾ’ ಎಂಬ ಹೆಸರಿನಿಂದ ಪ್ರಸಿದ್ಧ ಅನ್ನಪಿತರರು (ಗೃಹ-ಭೌಮ-ಪಾರ್ಥಿವ ಪಿತರರು) ಈ ಪಿತೃಕರ್ಮ್ಮಕ್ಕೆ ಬರಲಿ. ಬಂದು ತಮ್ಮ ಅನುರೂಪ ಸ್ಥಾನಗಳಲ್ಲಿ ಪ್ರತಿಷ್ಠಿತರಾಗುವ ಅನುಗ್ರಹ ಮಾಡಲಿ. ಸ್ವಸ್ಥತೆಯಿಂದ ವಿರಾಜಮಾನರಾಗಿ ಹವಿರ್ಭಕ್ಷಣದ ಅನುಗ್ರಹ ಮಾಡಲಿ. ಇದರಿಂದ ತುಷ್ಟ-ತೃಪ್ತರಾಗುತ್ತಾ ಅವರು ಪುತ್ರಪೌತ್ರಾದಿ ಯುಕ್ತ ಸಮ್ಪತ್ತಿಪ್ರದಾನ ಮಾಡುವ ಅನುಗ್ರಹ ಮಾಡಲಿ.

(೧೨) – ತ್ವಮಗ್ನ ಈಳಿತಃ …
ಹೇ ಅಗ್ನೇ! ನೀವು ಅನುಗ್ರಹ ಮಾಡಿ ನಮ್ಮ ಪ್ರಾರ್ಥನೆಯ ಮೇರೆಗೆ ಅನುಗ್ರಹದೃಷ್ಟಿಯಿಂದ ನಮ್ಮ ಯಜ್ಞಸಾಮಗ್ರಿಯನ್ನು ನೀವು ನಿಮ್ಮ ವಿಶಕಲನಧರ್ಮ್ಮದಿಂದ ದೇವಪಿತೃಭೋಗ್ಯ ಆಗುವಂತೆ ಮಾಡಿರಿ. ನೀವು ಎಲ್ಲಾ ಪ್ರಾಣದೇವಪಿತರರಲ್ಲಿ ಆಹುತಿದ್ರವ್ಯವನ್ನು ವಿಭಕ್ತಗೊಳಿಸಿದ್ದೀರಿ. ಹೇ ಪಿತೃದೇವತೆಗಳೇ! ಅಗ್ನಿಯ ಅನುಗ್ರಹದಿಂದ ಯಥಾಭಾಗವಿಭಕ್ತ ಸ್ವಧಾಪೂರ್ವಕ ಪ್ರದತ್ತ ಈ ಹವಿಸ್ಸನ್ನು ನೀವು ಗ್ರಹಿಸಿರಿ. ಹೇ ಅಗ್ನಿದೇವ! ನೀವೂ ಹವಿರ್ಗ್ರಹಣದಿಂದ ತೃಪ್ತರಾಗುವ ಅನುಗ್ರಹ ಮಾಡಿರಿ.

(೧೩) – ಯೇ ಚೇಹ ಪಿತರಃ…
ಯಾವ ಪಿತರರು ಇಲ್ಲಿ ಸಮುಪಸ್ಥಿತರಾಗಿದ್ದಾರೆಯೋ, ಯಾರು ಉಪಸ್ಥಿತರಿಲ್ಲವೋ, ಯಾರನ್ನು ನಾವು ಬಲ್ಲೆವೋ, ಹಾಗೂ ಯಾರು ನಮಗೆ ಗೊತ್ತಿಲ್ಲವೋ, ಅವರೆಲ್ಲರೂ ಉಪಸ್ಥಿತ-ಅನುಪಸ್ಥಿತ-ಜ್ಞಾತ-ಅಜ್ಞಾತ ನಮ್ಮ ವಂಶಪಿತರರು ಅಗ್ನಿದೇವತೆಯಿಂದ ಅವಶ್ಯರಾಗಿ ಉಪಸ್ಥಿತ ಹಾಗೂ ವಿಜ್ಞಾತರಾಗಿದ್ದಾರೆ. ಹಾಗಾಗಿ ನಾವು ಜಾತವೇದನೂ ಸರ್ವಜ್ಞನೂ ಆದ ಆ ಅಗ್ನಿದೇವನಿಗೇ ಈ ಪ್ರಾರ್ಥನೆ ಮಾಡುತ್ತೇವೆ. ನೀವೇ ಅನುಗ್ರಹ ಮಾಡಿ ಅವರೆಲ್ಲರಿಗೂ ಪ್ರದತ್ತ ಹವಿಯಿಂದ ತೃಪ್ತಗೊಳಿಸುವ ಅನುಗ್ರಹ ಮಾಡಿರಿ.

(೧೪) – ಯೇ ಅಗ್ನಿದಗ್ಧಾಃ …
ಯಾವ ಮಹತ್‍ಪಿತರರು ಅಗ್ನಿಸಂಸ್ಕಾರದಿಂದ ಚನ್ದ್ರಲೋಕಕ್ಕೆ ತಲುಪಿದ್ದಾರೆಯೋ, ಯಾವ ಪಿತರರು (ಗಾಙ್ಗೇಯತೋಯ ಪ್ರವಾಹ ವಿಕ್ಷೇಪಾದಿಯಿಂದ) ಅಬಗ್ನಿರೂಪದಿಂದ ಅಲ್ಲಿ ಪ್ರಾಪ್ತವಾಗಿದ್ದಾರೆಯೋ, ದ್ಯುಲೋಕದ (ಸೌರಲೋಕದ) ಮಧ್ಯಸ್ಥಾನರೂಪ ಆನ್ತರಿಕ್ಷ್ಯ ಚನ್ದ್ರಲೋಕದಲ್ಲಿ ಅವಸ್ಥಿತ ಅವರೇ ಸರ್ವವಿಧ ಪ್ರೇತಪಿತರರು ಸ್ವಧಾಪೂರ್ವಕ ಪ್ರದತ್ತ ಈ ಹವಿಯಿಂದ ತೃಪ್ತರಾಗುತ್ತಿದ್ದಾರೆ. ಹೇ ಅಗ್ನಿದೇವಾ! ನೀವು ಹವಿಃಪ್ರದಾನರೂಪ ಕರ್ಮ್ಮದಿಂದ ವಿರಾಡ್‍ರೂಪ (ದಶಾವಯವ) ಆಗಿದ್ದು ನೀವು ಆ ಪಿತರರೊಂದಿಗೆ ಸಂಯುಕ್ತರಾಗುತ್ತಾ ಈ ಪ್ರದತ್ತ ಹವಿರ್ದ್ರವ್ಯದಿಂದ ಆ ನಮ್ಮ ಪ್ರೇತಪಿತರರ ಶರೀರಸ್ವರೂಪನಿಷ್ಪತ್ತಿಯ ಅನುಗ್ರಹ ಮಾಡಿರಿ.

|| ಇತಿ ನೈಗಮಿಕ ಮಙ್ಗಲಸ್ತುತಿಃ ಪಿತೄಣಾಮ್ ||

ಆಗಮಾನುಗತಾ ಮಹಾಮಙ್ಗಲಪ್ರದಾ ಪಿತೃಸ್ತುತಿಃ –
ಸ್ವರೂಪ ವರ್ಣನಾತ್ಮಿಕಾ –

ನಮಸ್ಯೇಽಹಂ ಪಿತೄನ್ ಶ್ರಾದ್ಧೇ ಯೇ ವಸನ್ತ್ಯಧಿದೇವತಾಃ |
ದೇವೈರಪಿ ಹಿ ತರ್ಪ್ಯನ್ತೇ ಯೇ ಚ ಶ್ರಾದ್ಧೇ ಸ್ವಧೋತ್ತರೈಃ || ೧ ||
ನಮಸ್ಯೇಽಹಂ ಪಿತೄನ್ ಸ್ವರ್ಗೇ ಯೇ ತರ್ಪ್ಯನ್ತೇ ಮಹರ್ಷಿಭಿಃ |
ಶ್ರಾದ್ಧೈರ್ಮ್ಮನೋಮಯೈರ್ಭಕ್ತ್ಯಾ ಭುಕ್ತಿ-ಮುಕ್ತಿಮಭೀಪ್ಸುಭಿಃ || ೨ ||
ನಮಸ್ಯೇಽಹಂ ಪಿತೄನ್ ಸ್ವರ್ಗೇ ಸಿದ್ಧಾಃ ಸನ್ತರ್ಪಯನ್ತಿ ಯಾನ್ |
ಶ್ರಾದ್ಧೇಷು ದಿವ್ಯೈಃ ಸಕಲೈರುಪಹಾರೈರನುತ್ತಮೈಃ || ೩ ||
ನಮಸ್ಯೇಽಹಂ ಪಿತೄನ್ ಭಕ್ತ್ಯಾ ಯೇಽರ್ಚ್ಯನ್ತೇ ಗುಹ್ಯಕೈರಪಿ |
ತನ್ಮಯತ್ತ್ವೇನ ವಾಞ್ಛನ್ತಿ ಋದ್ಧಿಮಾತ್ಯನ್ತಿಕೀಂ ಪರಾಮ್ || ೪ ||
ನಮಸ್ಯೇಽಹಂ ಪಿತೄನ್ಮರ್ತ್ತೈರರ್ಚ್ಯನ್ತೇ ಭುವಿ ಯೇ ಸದಾ |
ಶ್ರಾದ್ಧೇಷು ಶ್ರದ್ಧಯಾಭೀಷ್ಟಲೋಕಪ್ರಾಪ್ತಿಪ್ರದಾಯಿನಃ || ೫ ||
ನಮಸ್ಯೇಽಹಂ ಪಿತೄನ್ ವಿಪ್ರೈರರ್ಚ್ಯನ್ತೇ ಭುವಿ ಯೇ ಸದಾ |
ವಾಞ್ಛಿತಾಭೀಷ್ಟಲಾಭಾಯ ಪ್ರಾಜಾಪತ್ಯ ಪ್ರದಾಯಿನಃ || ೬ ||
ನಮಸ್ಯೇಽಹಂ ಪಿತೄನ್ ಯೇ ವೈ ತರ್ಪ್ಯನ್ತೇಽರಣ್ಯವಾಸಿಭಿಃ |
ವನ್ಯೈಃ ಶ್ರಾದ್ಧೈರ್ಯತಾಹಾರೈಸ್ತಪೋನಿರ್ಧೂತಕಿಲ್ವಿಷೈಃ || ೭ ||
ನಮಸ್ಯೇಽಹಂ ಪಿತೄನ್ ವಿಪ್ರೈರ್ನೈಷ್ಠಿಕ ವ್ರತಚಾರಿಭಿಃ |
ಯೇ ಸಂಯತಾತ್ಮಭಿರ್ನಿತ್ಯಂ ಸನ್ತರ್ಪ್ಯನ್ತೇ ಸಮಾಧಿಭಿಃ || ೮ ||
ನಮಸ್ಯೇಽಹಂ ಪಿತೄನ್ ಶ್ರಾದ್ಧೈ ರಾಜನ್ಯಾಸ್ತರ್ಪಯನ್ತಿ ಯಾನ್ |
ಕವ್ಯೈರಶೇಷೈರ್ವಿಧಿರ್ವಲ್ಲೋಕತ್ರಯಫಲಪ್ರದಾನ್ || ೯ ||
ನಮಸ್ಯೇಽಹಂ ಪಿತೄನ್ ವೈಶ್ಯೈರರ್ಚ್ಯನ್ತೈರ್ಭುವಿ ಯೇ ಸದಾ |
ಸ್ವಕರ್ಮ್ಮಭಿರತೈರ್ನಿತ್ಯಂ ಪುಷ್ಪಧೂಪಾನ್ನವಾರಿಭಿಃ || ೧೦ ||
ನಮಸ್ಯೇಽಹಂ ಪಿತೄನ್ ಶ್ರಾದ್ಧೈರ್ಯೇ ಶೂದ್ರೈರಪಿ ಭಕ್ತಿತಃ |
ಸನ್ತರ್ಪ್ಯನ್ತೇ ಜಗತ್ಯತ್ರ ನಾಮ್ನಾಃ ಖ್ಯಾತಾಃ ಸುಕಾಲಿನಃ || ೧೧ ||
ನಮಸ್ಯೇಽಹಂ ಪಿತೄನ್ ಶ್ರಾದ್ಧೈಃ ಪಾತಾಲೇ ಯೇ ಮಹಾಸುರೈಃ |
ಸನ್ತರ್ಪ್ಯನ್ತೇ ಸ್ವಧಾಹಾರಾಸ್ತ್ಯಕ್ತದಮ್ಭಮದೈಃ ಸದಾ || ೧೨ ||
ನಮಸ್ಯೇಽಹಂ ಪಿತೄನ್ ಶ್ರಾದ್ಧೈರರ್ಚ್ಯನ್ತೇ ಯೇ ರಸಾತಲೇ |
ಭೋಗೈರಶೇಷೈರ್ವಿಧಿವನ್ನಾಗೈಃ ಕಾಮಾನಭೀಪ್ಸುಭಿಃ || ೧೩ ||
ನಮಸ್ಯೇಽಹಂ ಪಿತೄನ್ ಶ್ರಾದ್ಧೈಃ ಸರ್ಪೈಃ ಸನ್ತರ್ಪಿತಾನ್ ಸದಾ |
ತತ್ರೈವ ವಿಧಿವನ್ಮನ್ತ್ರಭೋಗಸಮ್ಪತ್ ಸಮನ್ವಿತೈಃ || ೧೪ ||
----------------------------------------*----------------------------------------
ಪಿತೄನ್ನಮಸ್ಯೇ ನಿವಸನ್ತಿ ಸಾಕ್ಷಾತ್-ಯೇ ದೇವಲೋಕೇ ಚ ತಥಾನ್ತರಿಕ್ಷೇ |
ಮಹೀತಲೇ ಯೇ ಚ ಸುರಾದಿಪೂಜ್ಯಾಸ್ತೇ ಮೇ ಪ್ರತೀಚ್ಛನ್ತು ಮಯೋಪನೀತಮ್ || ೧ ||
ಪಿತೄನ್ನಮಸ್ಯೇ ಪರಮಾತ್ಮಭೂತಾ ಯೇ ವೈ ವಿಮಾನೇ ನಿವಸನ್ತಿ ಮೂರ್ತ್ತಾಃ |
ಯಜನ್ತಿ ಯಾನಸ್ತಮಲೈರ್ಮ್ಮನೋಭಿರ್ಯೋಗೀಶ್ವರಾ ಕ್ಲೇಶವಿಮುಕ್ತಿಹೇತೂನ್ || ೨ ||
ಪಿತೄನ್ನಮಸ್ಯೇ ದಿವಿ ಯೇ ಚ ಮೂರ್ತ್ತಾಃ ಸ್ವಧಾಭುಜಃ ಕಾಮ್ಯಕಲಾಭಿಸನ್ಧೌ |
ಪ್ರದಾನಶಕ್ತಾಃ ಸಕಲೇಪ್ಸಿತಾನಾಂ ವಿಮುಕ್ತದಾ ಯೇಽನಭಿಸಂಹಿತೇಷು || ೩ ||
ತೃಪ್ಯನ್ತು ತೇಽಸ್ಮಿನ್ ಪಿತರಃ ಸಮಸ್ತಾ ಇಚ್ಛಾವತಾಂ ಯೇ ಪ್ರದಿಶನ್ತಿ ಕಾಮಾನ್ |
ಸುರತ್ತ್ವಮಿನ್ದ್ರತ್ವಮತೋಽಧಿಕಂ ವಾ ಸುತಾನ್ ಪಶೂನ್ ಸ್ವಾನಿ ಬಲಂ ಗೃಹಾಣಿ || ೪ ||
ಸೋಮಸ್ಯ ಯೇ ರಶ್ಮಿಷು ಯೇಽರ್ಕಬಿಮ್ಬೇ ಶುಕ್ಲೇವಿಮಾನೇ ಚ ಸದಾ ವಸನ್ತಿ |
ತೃಪ್ಯನ್ತು ತೇಽಸ್ಮಿನ್ ಪಿತರೋಽನ್ನತೋಯೈರ್ಗನ್ಧಾದಿನಾ ಪುಷ್ಟಿಮತೋ ವ್ರಜನ್ತು || ೫ ||
ಯೇಷಾಂ ಹುತೇಭ್ಯೋ ಹವಿಷಾ ಚ ತೃಪ್ತಿರ್ಯೇ ಭುಜ್ಜತೇ ವಿಪ್ರಶರೀರಸಂಸ್ಥಾಃ |
ಯೇ ಪಿಣ್ಡದಾನೇನ ಮುದಂ ಪ್ರಯಾನ್ತಿ ತೃಪ್ಯನ್ತು ತೇಽಸ್ಮಿನ್ ಪಿತರೋಽನ್ನತೋಯೈಃ || ೬ ||
ಯೇ ಖಡ್ಗಿ ಅನ್ನೇನ ಸುರೈರಭೀಷ್ಟೈಃ ಕೃಷ್ಣಸ್ತಿಲೈರ್ದಿವ್ಯಮನೋಹರೈಶ್ಚ |
ಕಾಲೇನ ಶಾಕೇನ ಮಹರ್ಷಿವರ್ಯ್ಯೈಃ ಸಮ್ಪ್ರೀಣಿತಾಸ್ತೇ ಮುದಮತ್ರ ಯನ್ತು || ೭ ||
ಕವ್ಯಾನಶೇಷಾಣಿ ಚ ಯಾನ್ಯಭೀಷ್ಯಾನ್ಯತೀವ ಯೇಷಾಮಮರಾರ್ಚಿತಾನಾಮ್ |
ತೇಷಾನ್ತು ಸಾನ್ನಿಧ್ಯಮಿಹಾಸ್ತು ಪುಷ್ಪಗನ್ಧಾನ್ನಭೋಜ್ಯೇಷು ಮಯಾ ಕೃತೇಷು || ೮ ||
ದಿನೇ ದಿನೇ ಯೇ ಪ್ರತಿಗೃಹ್ಯತೇಽಚ್ಚ ಮಾಸಾನ್ತಪೂಜ್ಯಾ ಭುವಿ ಯೇಽಷ್ಟಕಾಸು |
ಯೇ ವತ್ಸರಾನ್ತೇಽಭ್ಯುದಯೇ ಚ ಪೂಜ್ಯಾಃ ಪ್ರಯಾನ್ತು ತೇ ಮೇ ಪಿತರೋಽತ್ರ ತೃಪ್ತಿಮ್ || ೯ ||
ಪೂಜ್ಯಾ ದ್ವಿಜಾನಾಂ ಕುಮುದೇನ್ದ್ರಭಾಸೋ ಯೇ ಕ್ಷತ್ರಿಯಾಣಾಞ್ಚ ನವಾರ್ಕವರ್ಣಾಃ |
ತಥಾ ವಿಶಾಂ ಯೇ ಕನಕಾವದಾತಾ ನೀಲೀನಿಭಾಃ ಶೂದ್ರಜನಸ್ಯ ಯೇ ಚ || ೧೦ ||
ತೇಽಸ್ಮಿನ್ ಸಮಸ್ತಾ ಮಮ ಪುಷ್ಪಗನ್ಧಧೂಪಾನ್ನತೋಯಾದಿನಿವೇದನೇನ |
ತಥಾಗ್ನಿಹೋಮೇನ ಚ ಯನ್ತು ತೃಪ್ತಿಂ ಸದಾ ಪಿತೃಭ್ಯಃ ಪ್ರಣತೋಽಸ್ಮಿ ತೇಭ್ಯಃ || ೧೧ ||
ಯೇ ದೇವಪೂರ್ವ್ವೋನ್ಯತಿತೃಪ್ತಹೇತೋರಶ್ನನ್ತಿ ಕವ್ಯಾನಿ ಶುಭಾಹುತಾನಿ |
ತೃಪ್ತಾಶ್ಚ ಯೇ ಭೂತಿಸೃಜೋ ಭವನ್ತಿ ತೃಪ್ಯನ್ತು ತೇಽಸ್ಮಿನ್ ಪ್ರಣತೋಽಸ್ಮಿ ತೇಭ್ಯಃ || ೧೨ ||
ರಕ್ಷಾಂಸಿ ಭೂತಾನ್ಯಸುರಾಂಸ್ತಥಾಗ್ರಾನ್ ನಿರ್ನಾಶಯನ್ತಸ್ತ್ವಶಿವಂ ಪ್ರಜಾನಾಮ್ |
ಆದ್ಯಾಃ ಸುರಾಣಾಮಮರೇಶಪೂಜ್ಯಾಸ್ತೃಪ್ಯನ್ತು ತೇಽಸ್ಮಿನ್ ಪ್ರಣತೋಽಸ್ಮಿ ತೇಭ್ಯಃ || ೧೩ ||
ಅಗ್ನಿಷ್ವಾತ್ತಾ ಬರ್ಹಿಷದ ಆಜ್ಯಪಾಃ ಸೋಮಪಾಸ್ತಥಾ |
ಬ್ರಜನ್ತು ತೃಪ್ತಿಂ ಶ್ರಾದ್ಧೇಽಸ್ಮಿನ್ ಪಿತರಸ್ತರ್ಪಿತಾ ಮಯಾ || ೧೪ ||
ಅಗ್ನಿಷ್ವಾತ್ತಾಃ ಪಿತೃಗಣಾಃ ಪ್ರಾಚೀಂ ರಕ್ಷನ್ತು ಮೇ ದಿಶಮ್ |
ತಥಾ ಬರ್ಹಿಷದಃ ಪಾನ್ತು ಯಾಮ್ಯಾಂ ಯೇ ಪಿತರಃ ಸ್ಮೃತಾಃ || ೧೫ ||
ಪ್ರತೀಚೀಮಾಜ್ಯಪಾಸ್ತದ್ವದುದೀಚೀಮಪಿ ಸೋಮಪಾಃ |
ರಕ್ಷೋಭೂತಪಿಶಾಚೇಭ್ಯಸ್ತಥೈವಾಸುರದೋಷತಃ || ೧೬ ||
ಸರ್ವಸ್ವಶ್ಚಾಧಿಪಸ್ತೇಷಾಂ ಯಮೋ ರಕ್ಷಾಂ ಕರೋತು ಮೇ |
ವಿಶ್ವೋ ವಿಶ್ವಭುಗಾರಾಧ್ಯೋ ಧರ್ಮ್ಮೋ ಧನ್ಯಃ ಶುಭಾನನಃ || ೧೭ ||
ಭೂತಿದೋ ಭೂತಿಕೃದ್‍ಭೂತಿಃ ಪಿತೃಣಾಂ ಯೇ ಗಣಾ ನವ | (೯)
ಕಲ್ಯಾಣಃ ಕಲ್ಯತಾ ಕರ್ತ್ತಾ ಕಲ್ಯಃ ಕಲ್ಯತರಾಶ್ರಯಃ || ೧೮ ||
ಕಲ್ಯತಾಹೇತುರನಘಃ ಷಡಿಮೇ ತೇ ಗಣಾಃ ಸ್ಮೃತಾಃ | (೬)
ವರೋ ವರೇಣ್ಯೋ ವರದಃ ಪುಷ್ಟಿದಸ್ತುಷ್ಠಿದಸ್ತಥಾ || ೧೯ ||
ವಿಶ್ವಪಾತಾ ತಥಾ ಧಾತಾ ಸಪ್ತೈವೈತೇ ತಥಾ ಗಣಾಃ | (೭)
ಮಹಾನ್ ಮಹಾತ್ಮಾ ಮಹಿತೋ ಮಹಿಮಾವಾನ್ ಮಹಾಬಲಃ || ೨೦ ||
ಗಣಾಃ ಪಞ್ಚ ತಥೈವೈತೇ ಪಿತೄಣಾಂ ಪಾಪನಾಶನಾಃ | (೫)
ಸುಖದೋ ಧನದಶ್ಚಾನ್ಯೋ ಧರ್ಮ್ಮದೋಽನ್ಯಶ್ಚ ಭೂತಿದಃ || ೨೧ ||
ಪಿತೄಣಾಂ ಕಥ್ಯತೇ ಚೈತ್ತತ್ತಥಾ ಗಣಾಚತುಷ್ಟಯಮ್ | (೪)
ಏಕತ್ರಿಂಶತ್‍ಪಿತೃಗಣಾ ಯೈರ್ವ್ಯಾಪ್ತಮಖಿಲಂ ಜಗತ್ || ೨೨ || (೯+೬+೭+೫+೪=೩೧)
ತೇ ಮೇಽನುತೃಪ್ತಾಸ್ತುಷ್ಯನ್ತು ಯಚ್ಛನ್ತು ಚ ಸದಾ ಹಿತಮ್ || ೨೩ ||

-       ಶ್ರೀಮಾರ್ಕಣ್ಡೇಯಪುರಾಣ ಅಧ್ಯಾಯ ೯೬ |
-       ಗರುಡಪುರಾಣ ಪಿತೃಸ್ತೋತ್ರಾಧ್ಯಾಯ ೮೯ |

|| ಇತ್ಯಾಗಮಿಕ  ಮಙ್ಗಲಸ್ತುತಿಃ ಪಿತೄಣಾಮ್-ಪ್ರೀಯತಾಮನಯಾ ಪಿತೃದೇವತಾ ||

ವಿಷಯಸೂಚೀ:-
೧. ಮಹಾಮಾಙ್ಗಲಿಕ ಪಿತೃಸ್ವರೂಪಸಂಸ್ಮರಣೆ (ಸ್ತ್ಯುತ್ಯಾತ್ಮಕ ತಥಾಸ್ವರೂಪವರ್ಣನಾತ್ಮಕ)
೨. ವಿಷಯೋಪಕ್ರಮ
೩. ಮಹಾನಾತ್ಮಾನುಗತ ಪಿತೃತತ್ತ್ವ
೪. ಪ್ರಜಾತನ್ತುಪ್ರತಿಷ್ಠಾಲಕ್ಷಣ ಮಹಾನಾತ್ಮಾ
೫. ಮಹಾನಾತ್ಮದ ಆವಿರ್ಭಾವಕ
೬. ರೇತೋಮಯ ಕರ್ಮ್ಮಾತ್ಮಾ
೭. ಪ್ರಪದಪ್ರತಿಷ್ಠ ಕರ್ಮ್ಮಾತ್ಮಾ
೮. ಕರಾರವಿನ್ದೇನ ಪದಾರವಿನ್ದಮ್
೯. ಕರ್ಮ್ಮಾತ್ಮದ ಮೂರು ಜನ್ಮ
೧೦. ರೇತ-ಯೋನಿ-ರೇತೋಧಾ
೧೧. ಕೌಷೀತಕಿಯ ವಿಚಕ್ಷಣೆ
೧೨. ಮಾಸಿ ಮಾಸಿ ವೋಽಶನಮ್
೧೩. ದಧಿ-ಮಧು-ಘೃತಲಕ್ಷಣ ಕರ್ಮ್ಮಾತ್ಮಾ
೧೪. ಆತ್ಮವಿವರ್ತ್ತಸಮ್ಪರಿಷ್ವಕ್ತಿ
೧೫. ಚನ್ದ್ರಲೋಕಾನುಗತ ಮಹಾನಾತ್ಮಾ
೧೬. ಗಮನಸ್ಥಿತಿ ವಿಶ್ಲೇಷಣೆ
೧೭. ಗೋತ್ರಸೃಷ್ಟಿಮೀಮಾಂಸೆ
೧೮. ಪಿತೃಸಹಃ ಸ್ವರೂಪವಿಜ್ಞಾನ
೧೯. ಸಹಸ್ತತ್ತ್ವದ ಆಹ್ನಿಕಾದಿ ನಾಲ್ಕು ಪಿಣ್ಡಗಳು
೨೦. ಸಹೋಭಾಗದ ಪಿತೃಪ್ರಾಣಾತ್ಮಕತ್ತ್ವ
೨೧. ಶುಕ್ರಕ್ಷಯಮೀಮಾಂಸೆ
೨೨. ಅಪತ್ಯ-ಪತ್ಯಪುರುಷ ಮೀಮಾಂಸೆ
೨೩. ಪಿತೃಸೋಮಯಜ್ಞದಿಂದ ಋಣಪ್ರವೃತ್ತಿ
೨೪. ಪಿತೃಧನಾವಾಪ ಮೀಮಾಂಸೆ
೨೫. ಆವಾಪಪಿಣ್ಡ-ಬೀಜಪಿಣ್ಡ ಮೀಮಾಂಸೆ
೨೬. ನಿವಾಪ-ಪಿತೃ-ತನ್ಯ-ಪಿಣ್ಡತ್ರಯೀ ಮೀಮಾಂಸೆ
೨೭. ಆತ್ಮಧನ-ಆತ್ಮಋಣ-ಸ್ವರೂಪಮೀಮಾಂಸೆ
೨೮. ‘ಕೋ ದದರ್ಶ ಪ್ರಥಮಂ ಜಾಯಮಾನಮ್ (೧)’
೨೯. ‘ಪಾಕಃ ಪೃಚ್ಛಾಮಿ ಮನಸಾಽವಿಜಾನನ್ (೨)’
೩೦. ‘ಅಚಿಕಿತ್ತ್ವಾಞ್ಚಿಕಿತುಷಶ್ಚಿದತ್ರ (೩)’
೩೧. ‘ಮಾತಾಪಿತರಮೃತ ಆಬಭಾಜ (೪)’
೩೨. ‘ಸ್ತ್ರಿಯಃ ಸತೀಸ್ತಾ ಉ ಮೇ ಪುಂಸ (೫)’
೩೩. ‘ಅವಃ ಪರೇಣ ಪರ ಏನಾವರೇಣ (೬)’
೩೪. ‘ಅವಃ ಪರೇಣ ಪಿತರಮ್ (೭)’
೩೫. ‘ಯೇಽ ರ್ವಾಞ್ಚಸ್ತಾ ಉ ಪರಾಚಃ (೮)’
೩೬. ಮಹರ್ಷಿಬೃಹದುಕ್ಥರ ಪ್ರಜಾತನ್ತುವಿತಾನ
೩೭. ‘ಮಹಿಮ್ನ ಏಷಾಂ ಪಿತರಃ (೧)’
೩೮. ‘ಸಹೋಭಿರ್ವಿಶ್ವಂ ಪರಿಚಕ್ರಮ್ (೨)’
೩೯. ‘ದ್ವಿಧಾ ಸೂನವೋಽಸುರಮ್ (೩)’
೪೦. ‘ನಾವಾನಕ್ಷೋದಃ ಪ್ರದಿಶಃ (೪)’
೪೧. ಪ್ರಕರಣೋಪಸಂಹಾರ

|| ಸಾಪಿಣ್ಡ್ಯವಿಜ್ಞಾನನೋಪನಿಷತ್ತಿನಲ್ಲಿ ಮೊದಲನೆಯದಾದ
ಪ್ರಜಾತನ್ತುವಿತಾನವಿಜ್ಞಾನೋಪನಿಷತ್ ||

ಕುಲಕ್ಷಯೇ ಪ್ರಣಶ್ಯನ್ತಿ ಕುಲಧರ್ಮ್ಮಾಃ ಸನಾತನಾಃ |
ಧರ್ಮ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮ್ಮೋಽಭಿಭವತ್ಯುತ || ೧ ||
ಅಧರ್ಮ್ಮಾಭಿಭವಾತ್ ಕೃಷ್ಣ! ಪ್ರದುಷ್ಯನ್ತಿ ಕುಲಸ್ತ್ರಿಯಃ |
ಸ್ತ್ರೀಷು ದುಷ್ಟಾಷು ವಾರ್ಷ್ಣೇಯ! ಜಾಯತೇ ವರ್ಣಸಂಕರಃ || ೨ ||
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ |
ಪತನ್ತಿ ಪಿತರೋ ಹ್ಯೇಷಾಂ ಲುಪ್ತಪಿಣ್ಡೋದಕಕ್ರಿಯಾಃ || ೩ ||
ಶ್ರೀಮದ್ಭಗವದ್ಗೀತಾ ೧|೪೦,೪೧,೪೨
೨. ವಿಷಯೋಪಕ್ರಮ

ಶ್ರಾದ್ಧಕರ್ಮ್ಮದ ಮೂಲಪ್ರತಿಷ್ಠಾರೂಪ ಅನೇಕಾತ್ಮವಾದದ, ಹಾಗೂ ಪಿತರಪ್ರಾಣದ ವಿಶದ ವಿವೇಚನೆಯು ಕ್ರಮಶಃ ಪೂರ್ವದ ಆತ್ಮವಿಜ್ಞಾನೋಪನಿಷತ್, ಹಾಗೂ ಪಿತರವಿಜ್ಞಾನೋಪನಿಷತ್ ಇವುಗಳಲ್ಲಿದೆ. ಇವೆರಡೂ ಪ್ರಕರಣಗಳ ಸಮ್ಯಕ್ ಆಲೋಡನೆ ವಿಲೋಡನೆಯಿಂದ ಓದುಗರಿಗೆ ನಮ್ಮ ಶರೀರದಲ್ಲಿ ಮಹಾನಾತ್ಮ ಎಂಬ ಹೆಸರಿನ ಒಂದು ಆತ್ಮವು ಅವಶ್ಯವಾಗಿ ಕರ್ಮ್ಮಾತ್ಮದ ಉತ್ಕ್ರಾನ್ತವಾಗುತ್ತಲೇ ಚನ್ದ್ರಲೋಕಕ್ಕೆ ಹೋಗಿ ಪ್ರತಿಷ್ಠಿತವಾಗುತ್ತದೆ. ಹಾಗೂ ಜೊತೆಯಲ್ಲಿ ಮಹಾನಾತ್ಮದಲ್ಲಿ ಪ್ರತಿಷ್ಠಿತ ಸೌಮ್ಯಪ್ರಾಣದ ಸಂಜ್ಞೆಯೇ ‘ಪಿತರ’ ಆಗಿದೆ. ಲೋಕಾನ್ತರದಲ್ಲಿ ಸಞ್ಚರಣ ಮಾಡುವ ಈ ಪಿತರಕ್ಕೆ ಲೋಕಭೇದದಿಂದ ಕ್ರಮಶಃ ಅಶ್ರುಮುಖ-ಪಾರ್ವಣ-ನಾನ್ದೀಮುಖ ಎಂಬ ಸಂಜ್ಞೆಗಳು ದೊರಕುತ್ತವೆ. ಲೋಕಾನ್ತರಕ್ಕೆ ಹೋಗುತ್ತಾ ಈ ಪ್ರೇತಾತ್ಮಕ್ಕೆ ಯಾವ ಪಿಣ್ಡದಾನಾದಿ ಕರ್ಮ್ಮದಿಂದ ತೃಪ್ತಗೊಳಿಸಲಾಗುತ್ತದೆಯೋ, ಅದೇ ಕರ್ಮ್ಮವು “ಶ್ರಾದ್ಧ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಸಮ್ಬನ್ಧವಾಗಿ ಪ್ರಶ್ನೆ ಬರುವುದೇನೆಂದರೆ, ಲೋಕಾನ್ತರ (ಚನ್ದ್ರಲೋಕ)ಕ್ಕೆ ಗಮನ ಮಾಡುವ ಪ್ರೇತಾತ್ಮದೊಂದಿಗೆ (ಮಹಾನಾತ್ಮದೊಂದಿಗೆ) ತದ್‍ವಂಶಧರರಿಗೆ ವಾಸ್ತವಿಕವಾಗಿ ಏನು ಸಮ್ಬನ್ಧವಿರುತ್ತದೆ? ಪುತ್ರಾದಿಗಳಿಂದ ದತ್ತವಾದ ಪಿಣ್ಡವು ಪರಲೋಕಗತ ಪ್ರೇತಾತ್ಮದ ತೃಪ್ತಿಯ ಕಾರಣವಾಗುವ ಅದ್ಯಾವ ಮಾರ್ಗವದು? ಚಮ್ಮಚಕ್ಷುವು ಈ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನ ನೀಡುವಲ್ಲಿ ಕುಣ್ಠಿತವಾಗಿದೆ. ಆದ್ದರಿಂದಲೇ ನಾವು ವಿಜ್ಞಾನಚಕ್ಷುವಿನ ಆಶ್ರಯ ಪಡೆಯಬೇಕಾಗುತ್ತದೆ. ಸಾಪಿಣ್ಡ್ಯವಿಜ್ಞಾನೋಪನಿಷತ್ತು ಇವೇ ಪ್ರಶ್ನೆಗಳ ಸಮಾಧಾನದ ಪ್ರಯತ್ನ ಮಾಡುತ್ತದೆ. ವಿಹಙ್ಗಮ ದೃಷ್ಟಿಯಿಂದ ಪ್ರಸ್ತುತ ಖಣ್ಡದಲ್ಲಿ ಪ್ರೇತಾತ್ಮವು ತದ್‍ವಂಶಧರರೊಂದಿಗೆ ಯಾವ ಸಮ್ಬನ್ಧ ಹೊಂದಿರುತ್ತದೆ? ಏಳು ಪೀಳಿಗೆಗಳ ಪರ್ಯನ್ತ ಸಾಪಿಣ್ಡ್ಯ ಸಮ್ಬನ್ಧ ಎಂದು ಏಕೆ ನಂಬಲಾಗಿದೆ? ಪಿತೃಋಣದ ಸ್ವರೂಪವೇನು? ೫೪ ಸಂಖ್ಯೆಯಲ್ಲಿ ವಿಭಕ್ತ ಶುಕ್ರಸ್ಥಿತ ಪಿತರಪ್ರಾಣದ ವಿತಾನವು ಹೇಗಾಗುತ್ತದೆ? ಇತ್ಯಾದಿ ಪ್ರಶ್ನೆಗಳ ಮೇಲೆ ವಿಶೇಷ ರೂಪದಲ್ಲಿ ಬೆಳಕು ಚೆಲ್ಲಲಾಗಿದೆ. ನಮ್ಮ ದೃಢ ವಿಶ್ವಾಸವೇನೆಂದರೆ, ವೇದ ವಿಜ್ಞಾನವು ವಿಲುಪ್ತಪ್ರಾಯವಾಗುವುದರಿಂದ, ಜೊತೆಗೆ ಅಙ್ಗಭಕ್ತ ಭಾರತೀಯ ವಿದ್ವಾಂಸರಿಂದ ಯುಕ್ತಿಯುಕ್ತ ಸಮಾಧಾನ ಪ್ರಾಪ್ತವಾಗದ್ದರಿಂದ ಯಾವ ಮಹಾನುಭಾವರು ಈ ಶ್ರೌತಸಿದ್ಧ ಪಿಣ್ಡದಾನ ಲಕ್ಷಣವಾದ ಶ್ರಾದ್ದಕರ್ಮ್ಮದ ಪರಿತ್ಯಾಗ ಮಾಡಿದರೋ, ಅವರು ಈ ಪ್ರಕರಣದಿಂದ ಸತ್ಯನಿರ್ಣಯಕ್ಕೆ ತಲುಪುತ್ತಾ ಅವಸ್ಯವಾಗಿ ತಮ್ಮ ವಿಚಾರಗಳಲ್ಲಿ ಪರಿವರ್ತನೆ ಮಾಡಿಕೊಳ್ಳಬಹುದು, ಹಾಗೂ ದೇವಕಾರ್ಯಕ್ಕಿಂತಲೂ ಅಧಿಕ ಮಹತ್ತ್ವವುಳ್ಳ ಈ ಪಿತೃಕಾರ್ಯದಲ್ಲಿ ಶ್ರದ್ಧೆಯಿಂದ ಪ್ರವೃತ್ತರಾಗಲು ಸಾಧ್ಯ.

|| ಇಲ್ಲಿಗೆ ವಿಷಯೋಪಕ್ರಮವಾಯಿತು ||ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment