Tuesday, 16 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಮಹಾನಾತ್ಮಾನುಗತ ಪಿತೃತತ್ತ್ವ (೩)

೩. ಮಹಾನಾತ್ಮಾನುಗತ ಪಿತೃತತ್ತ್ವ –

ಆತ್ಮವಿಜ್ಞಾನೋಪನಿಷದನ್ತರ್ಗತ ಮಹದಾತ್ಮವಿಜ್ಞಾನೋಪನಿಷತ್ತಿನ ಪ್ರತಿಪಾದನೆ ಮಾಡುತ್ತಾ ಸಿದ್ಧವಾಗಿರುವುದೇನೆಂದರೆ ಪುರುಷಾತ್ಮಾ-ಅವ್ಯಕ್ತಾತ್ಮಾ-ಯಜ್ಞಾತ್ಮಾ-ಪ್ರಜ್ಞಾನಾತ್ಮಾ-ವಿಜ್ಞಾನಾತ್ಮಾ-ಕರ್ಮ್ಮಾತ್ಮಾ-ಹಂಸಾತ್ಮಾ ಈ ಎಲ್ಲಾ ಖಣ್ಡಾತ್ಮಗಳಲ್ಲಿಯೂ ಶ್ರಾದ್ಧಕರ್ಮ್ಮದ ಸಮ್ಬನ್ಧದಲ್ಲಿ ಏಕಮಾತ್ರ ಚನ್ದ್ರ ಮಹಾನಾತ್ಮಾದೊಂದಿಗಿದೆ. ಮಹಾನಾತ್ಮದ ಆರಮ್ಭಿಕ (ಉಪಾದಾನವು) ಚನ್ದ್ರನಾಗಿದೆ. ಇಲ್ಲಿ ಅಧ್ಯಾತ್ಮ ಸಂಸ್ಥಾದಲ್ಲಿ ಶುಕ್ರ ಎಂಬ ಹೆಸರಿನಿಂದ ಪ್ರಸಿದ್ಧ ಏಳನೇ ಧಾತುವೇ ಚಾನ್ದ್ರ. ಚಾನ್ದ್ರ ಶುಕ್ರದಲ್ಲಿ ಚಾನ್ದ್ರ ಮಹಾನಾತ್ಮವು ಪ್ರತಿಷ್ಠಿತವಾಗಿರುವುದೇ ಈ ಸಜಾತೀಯತೆಯ ಕಾರಣವು. ಈ ಚಾನ್ದ್ರ ಮಹತ್‍ಸೌಮ್ಯಪ್ರಾಣವೇ “ಪಿತರ” ಎಂಬ ಹೆಸರಿನಿಂದ ಸಮ್ಬೋಧಿಸಲ್ಪಟ್ಟಿದೆ. ‘ವಿಧೂರ್ಧ್ವಭಾಗೇ ಪಿತರೋ ವಸನ್ತಿ” ಎಂಬುದು ಆಪ್ತ ಸಿದ್ಧಾನ್ತ. ಸೌಮ್ಯ ಪಿತರವು ಪ್ರೇತ-ಪಾರ್ವಣ-ನಾನ್ದೀಮುಖ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದೆ.

ಶುಕ್ರಗತ ಮಹಾನಾತ್ಮವು ಪಿತರಪ್ರಾಣಮೂರ್ತ್ತಿಯಾಗಿದೆ. ಈ ಪಿತರಪ್ರಾಣವು ಪೃಥಿವೀ-ಅನ್ತರಿಕ್ಷ-ದ್ಯೌ ಭೇದದಿಂದ ಮೂರು ಭಾಗಗಳಲ್ಲಿ ವಿಭಕ್ತವಾಗಿದೆ. ಪಾರ್ಥಿವ ಪಿತರರು ಅಗ್ನಿಪ್ರಧಾನರಾಗಿದ್ದಾರೆ. “ಅಗ್ನಿರ್ಭೂಸ್ಥಾನಃ” (ಯಾ.ನಿ.ದೈ.ಕಾ. ೫|೧) ಎಂಬುದು ಸರ್ವವಿದಿತ ಸಿದ್ಧಾನ್ತವಾಗಿದೆ. ಆನ್ತರಿಕ್ಷ್ಯ ಪಿತರರು ಯಮಾಖ್ಯ ವಾಯುಪ್ರಧಾನರಾಗಿದ್ದಾರೆ. “ವಾಯುರ್ವೇನ್ದ್ರೋ ವಾಽನ್ತರಿಕ್ಷಸ್ಥಾನಃ” (ಯಾ.ನಿ.) ಎಂಬುದು ಪ್ರಸಿದ್ಧವಾಗಿದೆ. ದಿವ್ಯಪಿತರರು ಆದಿತ್ಯಪ್ರಧಾನರಾಗಿದ್ದಾರೆ. “ಸೂರ್ಯ್ಯೋ ದ್ಯುಸ್ಥಾನಃ” (ಯಾ.ನಿ.) ಎಂಬುದೂ ಪ್ರಸಿದ್ಧವಾಗಿದೆ. ಅಗ್ನಿ-ಯಮ-ಆದಿತ್ಯ, ಇವು ಮೂರೂ ಅಗ್ನಿಗಳೇ ಆಗಿವೆ. ಈ ಮೂರರೊಂದಿಗೆ ಕ್ರಮವಾಗಿ ದಿಕ್‍ಸೋಮ, ಚಾನ್ದ್ರಸೋಮಮಯ ಗನ್ಧರ್ವಸೋಮ, ಅಂದರೆ ಗನ್ಧರ್ವಸೋಮಮಯ ಚಾನ್ದ್ರಸೋಮ, ಬ್ರಹ್ಮಣಸ್ಪತಿ ಎಂದು ಪ್ರಸಿದ್ಧವಾದ ಪ್ರಾಣಾತ್ಮಕ ಪವಿತ್ರಸೋಮದ ಸಮ್ಬನ್ಧವಿದೆ. ಅಗ್ನಿ-ಸೋಮ, ಯಮ-ಸೋಮ, ಆದಿತ್ಯ-ಸೋಮ, ತ್ರೈಲೋಕ್ಯದ ಈ ಮೂರು ವಿವರ್ತ್ತಗಳಲಿ ಒಂದುವೇಳೆ ಅಗ್ನಿ-ಸೋಮ ಎರಡರ ಸತ್ತೆ ಇದ್ದರೆ, ಹಾಗೆಯೇ ಸ್ವಸ್ಥಾನದ ಪ್ರಧಾನತೆಯಿಂದ ದಿವ್ಯಲೋಕಸ್ಥ ಪವಿತ್ರಸೋಮವು ಆದಿತ್ಯಾಗ್ನಿಯ ಅಧಿಷ್ಠಾತೃವಾಗುತ್ತದೆ; ಸೋಮದ ಪ್ರಧಾನತೆ ಇರುತ್ತದೆ. ಅಷ್ಟಲ್ಲದೆ ಅಗ್ನಿಸೋಮಗಳೆರಡೂ ಇರುವುದರಿಂದ ಈ ನಾನ್ದೀಮುಖ ಎಂಬ ಹೆಸರಿನ ದಿವ್ಯಪಿತರರಿಗೂ “ಸೌಮ್ಯ” ಎಂದೇ ಕರೆಯಲ್ಪಡುತ್ತದೆ. ಇದೇ ರೀತಿ ವಾಯುಪ್ರಧಾನ ಅನ್ತರಿಕ್ಷದಲ್ಲಿ ಯಮ ವಾಯುವಿನ ಪ್ರಧಾನತೆ ಹಾಗೂ ಗನ್ಧರ್ವಸೋಮದ ಗೌಣತೆಯೂ ಸ್ವತಃ ಸಿದ್ಧವಾಗಿದೆ. ಆದ್ದರಿಂದ ಈ ಪಾರ್ವಣ ಎಂಬ ಹೆಸರಿನ ಆನ್ತರಿಕ್ಷ್ಯ ಪಿತರರನ್ನು “ಯಾಮ್ಯ” ಎನ್ನುವುದು ನ್ಯಾಯಸಙ್ಗತವಾಗಿದೆ. ಹಾಗೆಯೇ ಪೃಥಿವಿಯಲ್ಲ್ ಅಗ್ನಿಯ ಪ್ರಧಾನತೆ ಇದೆ. ಫಲಿತವಾಗಿ ಪಾರ್ಥಿವ ಅಶ್ರುಮುಖ ಪಿತರರಿಗೆ “ಆಗ್ನೇಯ” ಎನ್ನುವುದರಲ್ಲಿ ಯಾವುದೇ ಆಪತ್ತಿ ಇರಲು ಸಾಧ್ಯವಿಲ್ಲ.

ಪೂರ್ವೋಕ್ತ ಮಹಾನಾತ್ಮದಲ್ಲಿ ಸೌಮ್ಯ-ಯಾಮ್ಯ-ಆಗ್ನೇಯ, ಎಂಬ ಮೂರು ಪಿತರರು ಪ್ರತಿಷ್ಠಿತರಾಗಿರುತ್ತಾರೆ. ಈ ಮೂರು ಪಿತರರ ಕಾರಣದಿಂದಲೇ ಮಹಾನಾತ್ಮದಲ್ಲಿ ಸತ್ತ್ವ-ರಜ-ತಮ, ಎಂಬ ಮೂರು ಗುಣ, ಹಾಗೂ ಅಹಙ್ಕೃತಿ-ಪ್ರಕೃತಿ-ಆಕೃತಿ, ಎಂಬ ಮೂರು ಭಾವಗಳು ಉತ್ಪನ್ನವಾಗುತ್ತವೆ. ದಿವ್ಯಸೋಮವು ಶುದ್ಧ ಸತ್ತ್ವಮೂರ್ತ್ತಿಯಾಗಿದೆ. ಅದಕ್ಕೆ ಸಮ್ಬನ್ಧಿಸಿದ ಸತ್ತ್ವಪ್ರಧಾನ ನಾನ್ದೀಮುಖ ಪಿತರಪ್ರಾಣವು ಮಹಾನ್ ಎಂಬುದರಲ್ಲಿ ಸತ್ತ್ವಗುಣದ ವಿಕಾಸ ಮಾಡುತ್ತದೆ. ಆನ್ತರಿಕ್ಷ್ಯ ಸೋಮವು ವಾಯುಮಯ ಆಗಿರುವುದರಿಂದ ಕ್ರಿಯಾಮೂರ್ತ್ತಿ ಆಗುತ್ತಾ ರಜೋಮೂರ್ತ್ತಿ ಆಗಿದೆ. ಅದಕ್ಕೆ ಸಮ್ಬನ್ಧಿಸಿದ ರಜಃ ಪ್ರಧಾನ ಪಾರ್ವಣ ಪಿತರರು ಮಹಾನ್ ಎಂಬುದರಲ್ಲಿ ರಜೋಗುಣದ ಉತ್ತೇಜಕರಾಗಿರುತ್ತಾರೆ. ಪಾರ್ಥಿವಸೋಮವು ಅಗ್ನಿಮಯ ಆಗಿರುವುದರಿಂದ ಅರ್ಥಮೂರ್ತ್ತಿ (ಆವರಣಮೂರ್ತ್ತಿ) ಆಗುತ್ತಾ ತಮೋಮೂರ್ತ್ತಿ ಆಗಿದೆ. ತತ್ಸಮ್ಬನ್ಧೀ ತಮಃಪ್ರಧಾನ ಅಶ್ರುಮುಖ ಪಿತರರು ಮಹಾನ್ ಎಂಬುದರಲ್ಲಿ ತಮೋಗುಣದ ಸಞ್ಚಾರ ಮಾಡಿಸುತ್ತಾರೆ.

ಪಾರ್ಥಿವಾಗ್ನಿಯು ತ್ವಷ್ಟಾಪ್ರಾಣದೊಂದಿಗಿನ ಸಮ್ಬನ್ಧದಿಂದ ಅಪೇನ್ದ್ರಸೋಮಾಹುತಿಯಿಂದ ಇನ್ದ್ರತತ್ತ್ವವನ್ನು ಖಣ್ಡಖಣ್ಡವಾಗಿ ಪರಿಣತಗೊಳಿಸಿ ಆಕಾರರೂಪದ ಅಧಿಷ್ಠಾತೃವಾಗುತ್ತದೆ (ಶತಪಥ ೧೨|೭|೧|೧೪ ಸೌತ್ರಾಮಣೀಯಾಗ). ಈ ಪಾರ್ಥಿವಾಗ್ನಿಯ ಸಮ್ಬನ್ಧದಿಂದಲೇ ಮಹದವಚ್ಛಿನ್ನ ಶುಕ್ರಸ್ಥಿತ ಪಾರ್ಥಿವ ಅರ್ಥಮೂರ್ತ್ತಿಯಾದ ಅಗ್ನಿಪ್ರಧಾನ ಪಿತರಪ್ರಾಣವು ಆಯಾಯ ಪ್ರಾಣಿಗಳ ಆಕಾರಗಳ ಅಧಿಷ್ಠಾತೃವಾಗುತ್ತದೆ. ಆನ್ತರಿಕ್ಷ್ಯ ಯಮವಾಯುವು ಚಾನ್ದ್ರಸೋಮದ ಸಮ್ಬನ್ಧದಿಂದ (ಯಾವುದು ಚಾನ್ದ್ರಸೋಮ ಇನ್ದ್ರಿಯಪ್ರವರ್ತಕ ಪ್ರಜ್ಞಾಮಯ ಪ್ರಾಣೇನ್ದ್ರಮೂರ್ತ್ತಿಯಾಗಿದೆಯೋ ಅದು) ಪ್ರಕೃತಿಭಾವದ (ಇನ್ದ್ರಿಯಸ್ವಭಾವ-ಇನ್ದ್ರಿಯಸಾಮರ್ಥ್ಯದ) ಪ್ರೇರಕವಾಗುತ್ತದೆ. ಈ ಆನ್ತರಿಕ್ಷ್ಯ ರಜೋಮೂರ್ತ್ತಿಯು ಚಾನ್ದ್ರಸೋಮಮಯ ಯಮನ ಸಮ್ಬನ್ಧದಿಂದ, ಅಂದರೆ ಚನ್ದ್ರನ ಸಮ್ಬನ್ಧದಿಂದಲೇ ಶುಕ್ರಸ್ಥ ಮಹದವಚ್ಛಿನ್ನ ಆನ್ನ್ತರಿಕ್ಷ್ಯ ಕ್ರಿಯಾಮೂರ್ತ್ತಿಯಾದ ವಾಯುಪ್ರಧಾನ ಪಿತರಪ್ರಾಣವು ಆಯಾಯ ಪ್ರಕೃತಿಗಳ ಅಧಿಷ್ಠಾತೃವಾಗುತ್ತದೆ. ದಿವ್ಯಲೋಕಸ್ಥ ಆದಿತ್ಯವು ವಿಶುದ್ಧ, ಹಾಗೇ ವಿಧ್ರ ಚಿನ್ಮಯ (ಆತ್ಮಮಯ) ಪವಿತ್ರಸೋಮದ ಸಮ್ಬನ್ಧದಿಂದ ಅಹಂ ಭಾವದ ಪ್ರವರ್ತ್ತಕವಾಗುತ್ತದೆ. ಉದಾ – “ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ” ಇತ್ಯಾದಿ ಮನ್ತ್ರವರ್ಣನೆಗಳಲ್ಲಿ ಸ್ಪಷ್ಟವಾಗಿದೆ. ಈ ಅಹಂ ಭಾವವು ಎಲ್ಲಿಯವರೆಗೆ ಸ್ವಸ್ವರೂಪದಿಂದ ಪ್ರಬುದ್ಧವಾಗಿರುತ್ತದೆಯೋ, ಅಲ್ಲಿಯವರೆಗೆ ಆಯಾಯ ಪ್ರಾಣಿಗಳ ಜೀವನ ಸತ್ತೆಯು ಇರುತ್ತದೆ. ಘೋರತಮ ಸುಷುಪ್ತಿಕಾಲದಲ್ಲಿಯೂ ಅಹಂಭಾವವು ವಿಕಸಿತವಾಗಿರುತ್ತದೆ. ಸದಾ ಜಾಗ್ರತ ಮಹತ್‍ಸ್ವರೂಪದ ಇದೇ ಅಹಂ ಭಾವದ ಅನುಗ್ರಹದಿಂದ ಸುಷುಪ್ತಿಕಾಲದ ಸಮಾಪ್ತಿಯಾದಾಗ ನಮ್ಮ ಮುಖದಿಂದ – “ಸುಖಮಹಮಸ್ವಾಪ್ಸೀಃ” ಎಂಬ ಅಕ್ಷರಗಳು ಹೊರಡುತ್ತವೆ.

ಈ ರೀತಿ ಅಗ್ನಿ-ಯಮ-ಆದಿತ್ಯ, ಎಂಬ ೩ ಪಿತೃಕಲೆಗಳಿಂದ ಕ್ರಮವಾಗಿ ಮಹಾನ್ ಎಂಬುದರಲ್ಲಿ ಆಕೃತಿ-ಪ್ರಕೃತಿ-ಅಹಙ್ಕೃತಿ ಭಾವಗಳ ಉದಯವಾಗುತ್ತದೆ ಹಾಗೂ ದಿಕ್‍ಸೋಮ-ಚಾನ್ದ್ರಸೋಮ-ಪವಿತ್ರಸೋಮ ಎಂಬೀ ೩ ಪಿತೃಕಲೆಗಳಿಂದ ಕ್ರಮವಾಗಿ ತಮ-ರಜ-ಸತ್ತ್ವ ಎಂಬ ೩ ಗುಣಗಳ ಉದಯವಾಗುತ್ತದೆ. ಮಹಾನಾತ್ಮವೇ ಅಧ್ಯಾತ್ಮಸಂಸ್ಥಾದ ಮೂಲಾಧಾರವಾಗಿದೆ; ಇದು ಷಡ್‍ಭಾವಾಪನ್ನವಾಗಿದೆ. ಇದೇ ಆಧಾರದಲ್ಲಿ – ಷಾಟ್ಕೌಶಿಕಮಿದಂ ಸರ್ವಮ್ ಎಂಬ ಸೂಕ್ತಿಯು ಪ್ರಚಲಿತವಾಗಿದೆ.

ಷಾಟ್‍ಕೌಶಿಕ ಮಹಾನಾತ್ಮ ಪರಿಲೇಖಃ


ಮಹಾನಾತ್ಮಾ-ಸೌಮ್ಯಃ, ಶುಕ್ರಸ್ಥಃ ಪಿತರಪ್ರಾಣಾಧಿಷ್ಠಾತಾ


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ

No comments:

Post a comment