Tuesday, 23 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪ್ರಜಾತನ್ತು ಪ್ರತಿಷ್ಠಾ ಲಕ್ಷಣ ಮಹಾನಾತ್ಮಾ (೪)

೪. ಪ್ರಜಾತನ್ತು ಪ್ರತಿಷ್ಠಾ ಲಕ್ಷಣ ಮಹಾನಾತ್ಮಾ

ಷಾಟ್‍ಕೌಶಿಕ ಮಹಾನಾತ್ಮವು ವಾಸ್ತವದಲ್ಲಿ ಮಹಾನ್-ಆತ್ಮಾ ಆಗಿದೆ. ವಿಜ್ಞಾನ-ಪ್ರಜ್ಞಾನ-ಭೂತಾತ್ಮಾ ಇತ್ಯಾದಿ ಇತರೆ ಖಣ್ಡಾತ್ಮಗಳು, ಸಮ್ಪೂರ್ಣ ಖಣ್ಡಾತ್ಮಗಳ ಆಧಾರಭೂಮಿಯು, ಸ್ವಯಂ ಚಿದಾತ್ಮವೂ (ಅವ್ಯಯಪ್ರಧಾನ ಷೋಡಶೀ ಪುರುಷವೂ), ಈ ಪಾರಮೇಷ್ಠ್ಯ, ಅಂದರೆ ಚಾನ್ದ್ರ ಮಹಾನ್ ಎಂಬುದರ ಗರ್ಭದಲ್ಲಿ ಪ್ರವಿಷ್ಟವಾಗಿದೆ – “ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ” (ಗೀ. ೭|೧೪). ಸತ್ತ್ವವಿಶಾಲ ಊರ್ಧ್ವಸರ್ಗ, ರಜೋವಿಶಾಲ ತಿರ್ಯಕ್‍ಸರ್ಗ, ತಮೋವಿಶಾಲ ಮೂಲಸರ್ಗ, ಪದಾರ್ಥಮಾತ್ರದ ಆಕೃತಿಗಳು, ಪ್ರಕೃತಿಗಳು, ಅಹಙ್ಕೃತಿಗಳು, ಇವೆಲ್ಲದರ ಆಧಾರಭೂಮಿಯು ಇದೇ ಮಹಾನಾತ್ಮವಾಗಿದೆ. ಅಗ್ನೀಷೋಮಾತ್ಮಿಕಾ ಯಾಜ್ಞಿಕೀ ಸೃಷ್ಟಿ, ಯೋಷಾವೃಷಾತ್ಮಿಕಾ ಮೈಥುನೀಸೃಷ್ಟಿಯ ಮೂಲಾಧಾರವಾದ, ಭೃಗುಮೂರ್ತ್ತಿ ಎಂಬುದೇ ಮಹಾನ್ ಆಗಿದೆ. ಜಗತ್ತಿನ ಉಪಾದಾನಭೂತ ಪೂರ್ವೋಕ್ತ ತ್ರಿವಿಧ ಪಿತರರೂ ಇದೇ ಸೌಮ್ಯ ಮಹಾನ್ ಎಂಬುದರ ಗರ್ಭದಲ್ಲಿ ಪ್ರವಿಷ್ಟರಾಗಿದ್ದಾರೆ. ವಸು-ರುದ್ರ-ಆದಿತ್ಯಾದಿ ೩೩ ಆಙ್ಗಿರಸ ದೇವತಾ, ೬೬ ಆಪ್ಯ ಅಸುರ, ೩೭-ವಾಯವ್ಯ ಗನ್ಧರ್ವ, ಸಮ್ಪೂರ್ಣ ಸೌಮ್ಯ ದೇವತಾ, ಸಮ್ಪೂರ್ಣ ಪಶುಪ್ರಾಣ, ಭೃಗ್ವಙ್ಗಿರೋಮೂರ್ತ್ತಿಗಳು ಇದೇ ಮಹಾನ್ ಎಂಬುದರ ಆಧಾರದಲ್ಲಿ ಜೀವಿತರಾಗಿದ್ದಾರೆ. ಆಪೋಮಯೀ ಲೋಕಸೃಷ್ಟಿಯು ಇದೇ ಆಪ್ಯ ಮಹಾನ್ ಎಂಬುದರ ಮೇಲೆ ಪ್ರತಿಷ್ಠಿತವಾಗಿದೆ. ಆಪ್ಯ ಮಹಾನ್ ಎಂಬುದರ ಇದೇ ಮಹತ್ತನ್ನು ಲಕ್ಷ್ಯದಲ್ಲಿಟ್ಟುಕೊಂಡು, ಇದನ್ನು ಇತರೆ ಖಣ್ಡಾತ್ಮಗಳ ಅಪೇಕ್ಷೆಯಲ್ಲಿ ಒಂದುವೇಳೆ ಮಹಾನ್ ಎಂದು ಕರೆದರೆ, ಅದರಲ್ಲಿ ಆಪತ್ತಿ ಏನು? ಮಹದವಚ್ಛಿನ್ನ ಪಿತರ ಪ್ರಾಣವೇ ಏಳನೇ ಪೀಳಿಗೆಯ ಪರ್ಯ್ಯನ್ತ ವಿತತವಾಗುವ ಪ್ರಜಾತನ್ತುವಿನ ಪ್ರತಿಷ್ಠಾ ಆಗಿದೆ.

ಭೂತಸಂಪೃಕ್ತ ಮಹಾನಾತ್ಮಾ –

ತಾವುಭೌ ಭೂತಸಂಪೃಕ್ತೌ ಮಹಾನ್ ಕ್ಷೇತ್ರಜ್ಞ ಏವ ಚ |
ಉಚ್ಚಾವಚೇಷು ಭೂತೇಷು ಸ್ಥಿತಂ ತಂ ವ್ಯಾಪ್ಯ ತಿಷ್ಠತಃ || ಮನುಃ ೧೨-೧೪ ||
ಉಕ್ತ ಮಾನವ ಸಿದ್ಧಾನ್ತದ ಅನುಸಾರ ಮಹಾನಾತ್ಮಾ ಹಾಗೂ ವಿಜ್ಞಾನಾತ್ಮ ಎಂಬ ಹೆಸರುಗಳಿಂದ ಪ್ರಸಿದ್ಧವಾದ ಕ್ಷೇತ್ರಜ್ಞಾತ್ಮ, ಇವೆರಡೂ ಪೃಥಿವ್ಯಾದಿ ಪಞ್ಚಮಹಾಭೂತಮಾತ್ರಾಗಳಿಂದ (ಸುಸೂಕ್ಷ್ಮ ಭೂತಮಾತ್ರಾಗಳಿಂದ) ಸಂಶ್ಲಿಷ್ಟವಾಗಿ ಅಣೋರಣೀಯಾನ್-ಮಹತೋಮಹೀಯಾನ್ ಭೇದಭಿನ್ನ ಉಚ್ಚಾವಚ ಭೂತಗಳಲ್ಲಿ (ಪ್ರಾಣಿಗಳಲ್ಲಿ) ಅವಿಭಕ್ತ ರೂಪದಲ್ಲಿ ಪ್ರತಿಷ್ಠಿತ ಆ ಚಿದಾತ್ಮವನ್ನು ನಾಲ್ಕೂ ಕಡೆ ವ್ಯಾಪ್ತಗೊಳಿಸಿ ಆಧ್ಯಾತ್ಮಿಕ ಸಂಸ್ಥಾದಲ್ಲಿ ಪ್ರತಿಷ್ಠಿತವಾಗಿರುತ್ತವೆ. ಮನುವಿನ ತಾತ್ಪರ್ಯ್ಯವೇನೆಂದರೆ, ಮಹಾನಾತ್ಮಾ ವೀಧ್ರತತ್ತ್ವವಾಗಿದೆ, ಶುಕ್ರಸಮ್ಬನ್ಧದಿಂದ ಪಞ್ಚಭೂತಗಳಿಂದ ಸಮ್ಪೃಕ್ತವಾಗಿದೆ. ಇದುವೇ ಚಿದಾತ್ಮದ ಯೋನಿ ಆಗಿದೆ. ‘ಯೋ ಬುದ್ಧೇಃ ಪರತಸ್ತು ಸಃ’ ಲಕ್ಷಣವುಳ್ಳ ಚಿದಾತ್ಮವು ಮಹಾನ್ ಎಂಬುದರ ಗರ್ಭದಲ್ಲಿ ಪ್ರತಿಷ್ಠಿತವಾಗಿರುತ್ತಾ ‘ಕ್ಷೇತ್ರಜ್ಞ’ (ಬುದ್ಧಿ-ವಿಜ್ಞಾನಾತ್ಮದ) ಅನುಗ್ರಾಹಕ ಆಗುತ್ತಿದೆ. ಏಕಮಾತ್ರ ಇದೇ ಅಭಿಪ್ರಾಯದಿಂದ ‘ಮಹಾನ್ ಕ್ಷೇತ್ರಜ್ಞ ಏವ ಚ’ ಎಂದು ಹೇಳಲ್ಪಟ್ಟಿದೆ. ಮುಖ್ಯ ಲಕ್ಷ್ಯವು ಮಹಾನಾತ್ಮವೇ ಆಗಿದೆ. ಇದರ ಉತ್ಪತ್ತಿಯು ಪ್ರಧಾನತಃ ‘ಶುಕ್ರ’ದೊಂದಿಗೆ ಸಮ್ಬನ್ಧವಿದೆ ಎಂದು ನಂಬಲಾಗಿದೆ.

ನಮ್ಮ ಆಧ್ಯಾತ್ಮಿಕ ಸಂಸ್ಥಾದಲ್ಲಿ ಪ್ರತಿಷ್ಠಿತ ಮಹಾನಾತ್ಮವು ಕರ್ಮ್ಮಾತ್ಮನೆಂಬ ಹೆಸರಿನಿಂದ ಪ್ರಸಿದ್ಧವಾದ ಜೀವಾತ್ಮದ ಸ್ಥೂಲಶರೀರ ನಿಬನ್ಧನ ಐಹಲೌಕಿಕ ಕರ್ಮ್ಮಭೋಗಾನನ್ತರ ಸ್ವಪ್ರಭವಸ್ಥಾನಾತ್ಮಕ ಚನ್ದ್ರಲೋಕಕ್ಕೆ ಹೋಗುತ್ತದೆ. ಹೇಗೆ ಮಹಾನಾತ್ಮವು ಪ್ರೇತಾವಸ್ಥೆಯಲ್ಲಿ ಸೂಕ್ಷ್ಮ ಭೂತಗಳಿಂದ ಸಮ್ಪರಿಷ್ವಕ್ತ ಆಗಿರುತ್ತದೆಯೋ, ಹಾಗೆಯೇ ಕರ್ಮ್ಮಭೋಕ್ತಾ ಕರ್ಮ್ಮಾತ್ಮವೂ ಈ ಪ್ರಾರಬ್ಧ ನಿಬನ್ಧನ ಸ್ಥೂಲಶರೀರದ ಪರಿತ್ಯಾಗಾನನ್ತರ ಸರ್ವತ್ರ (ಖಗೋಲ) ವ್ಯಾಪ್ತ ಸೂಕ್ಷ್ಮಭೂತಗಳಿಂದ ಸಮ್ಪರಿಷ್ವಕ್ತವಾಗಿದ್ದಾಗ್ಯೂ ಯಾಮೀಯಾತನೆಗಳನ್ನು ಭೋಗಿಸುವುದಕ್ಕಾಗಿ ಆಯಾಯ ಲೋಕ-ವಿಶೇಷಗಳತ್ತ ಗಮನ ಮಾಡುತ್ತದೆ. ‘ತದನ್ತರಪ್ರತಿಪತ್ತೌ ರಹಂತಿ, ಸಮ್ಪರಿಷ್ವಕ್ತಃ – ಪ್ರಶ್ನ ನಿರೂಪಣಾಭ್ಯಾಮ್” (ಬ್ರಹ್ಮಸೂತ್ರ ೩|೧) ಈ ಸೂತ್ರ ಸಿದ್ಧಾನ್ತದ ಅನುಸಾರ ಪೃಥಿವ್ಯಾದಿ ಭೂತಸೂಕ್ಷ್ಮಗಳಿಂದ ಸಮ್ಪನ್ನವಾದ ಸೂಕ್ಷ್ಮ ಆತಿವಾಹಿಕ ಶರೀರ ಧಾರಣೆ ಮಾಡಿಯೇ, ಅದೇ ರೀತಿ ಲೋಕಾನ್ತರೋಪಲಕ್ಷಿತ ಸ್ಥಾನಾನನ್ತರದಲ್ಲಿ ಈ ಕರ್ಮ್ಮಾತ್ಮವು ಗಮನ ಮಾಡುತ್ತದೆ. ಅದು ಹೇಗೆಂದರೆ, ‘ತೃಣಜಲೌಕಾ’ ಎಂಬ ಹೆಸರಿನ ವರ್ಷಾಋತುವಿನ ಜನ್ತುವು ಉತ್ತರ ಪ್ರದೇಶವನ್ನು ಹಿಡಿದುಕೊಂಡು, ಪೂರ್ವಪ್ರದೇಶವನ್ನು ಬಿಡುತ್ತಾ, ಸ್ಥಾನಾನ್ತರ ಮಾಡುತ್ತದೆ. ಕರ್ಮ್ಮಾತ್ಮದ ಇದೇ ಜಲೌಕಾಗತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಭಕ್ತಿಗ್ರನ್ಥವು ಇಂತೆಂದಿದೆ –
ವ್ರಜಂಸ್ತಿಷ್ಠನ್ ಪದೈಕೇನ ಯಥೈವೈಕೇನ ಗಚ್ಛತಿ |
ಯಥಾ ತೃಣಜಲೌಕೇಯಂ ದೇಹೀ ಕರ್ಮ್ಮಗತಿಂ ಗತಃ || (ಶ್ರೀಮದ್ಭಾಗವತ)


ಮುಂದಿನ ಲೇಖನದಲ್ಲಿ  ೫.ಮಹಾನಾತ್ಮದ ಆವಿರ್ಭಾವಕ

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment