Thursday, 11 October 2018

ಆತ್ಮಗತಿಯ ಮೂಲಕ ಆತ್ಮಸ್ವರೂಪದ ಪರಿಚಯ – ಮನೋಮಯ ಕೋಶ (೪)

೩. ಮನೋಮಯಕೋಶಃ (ಮನಃ) –

ಅನ್ನಮಯಕೋಶವು ಅರ್ಥಪ್ರಧಾನವಾಗಿದೆ. ತದನ್ತರ್ಗರ್ಭಿತ ಪ್ರಾಣಮಯಕೋಶವು ಕ್ರಿಯಾ ಪ್ರಧಾನವಾಗಿದೆ. ಅರ್ಥಾತ್ಮಕ ಶರೀರದಲ್ಲಿ ಪ್ರತಿಷ್ಠಿತ ಅನ್ನಶರೀರನೇತಾ ಪ್ರಾಣವು ಆಧ್ಯಾತ್ಮಿಕ ಕರ್ಮ್ಮ-ಕಲಾಪದ ಸಞ್ಚಾಲನ ಮಾಡಲು ಯಾವಾಗ ಸಮರ್ಥವಾಗುತ್ತದೆ? ಅದು ಯಾವುದೋ ಅನ್ಯ ಜ್ಞಾನಭೂಮಿಕೆಯನ್ನು ತನ್ನ ಆಧಾರ ಮಾಡಿಕೊಂಡಾಗ. ಕಾಮನೆಯಿಲ್ಲದೆ ಪ್ರಾಣಾತ್ಮಿಕೆಯಿಂದ ಜಡ ಕ್ರಿಯೆಯ ಸಞ್ಚಾಲನೆಯು ಸರ್ವಥಾ ಅಸಮ್ಭವ. ಕ್ರಿಯಾತ್ಮಕ, ಕ್ರಿಯಾಪ್ರವರ್ತಕ, ಪ್ರಾಣಮಯ ಕೋಶದ ಒಳಗೆ ಓತಪ್ರೋತ ಸಮ್ಬನ್ಧದಿಂದ ಪ್ರತಿಷ್ಠಿತವಾಗಿರುವ ಕಾಮಮಯವಾದ ಅದೇ ಮೂರನೇಯ ಜ್ಞಾನಕೋಶವು ‘ಮನೋಮಯಕೋಶ’ ಎನ್ನಲ್ಪಟ್ಟಿದೆ. ಪ್ರತಿಷ್ಠಾ-ಜೀವನೀಯ-ಇನ್ದ್ರಿಯ-ದೇವ-ಬ್ರಹ್ಮ ಎಂಬ ಭಿನ್ನ ಭೇದಗಳಿಂದಾದ ಪಞ್ಚಪ್ರಾಣಮೂರ್ತ್ತಿ ಕ್ರಿಯಾಮಯಪ್ರಾಣ ಕೋಶವು ಈ ಮನೋಮಯ ಕೋಶದ ಶರೀರವಾಗಿದೆ. ಹಾಗಾಗಿ ಇದನ್ನು ‘ಪ್ರಾಣಶರೀರನೇತಾ’ ಎನ್ನಲಾಗಿದೆ. ಇಂತಹಾ ಮನೋಮಯ ಆತ್ಮದಿಂದ ಈ ಪ್ರಾಣಮಯ ಆತ್ಮವು ಪರಿಪೂರ್ಣವಾಗಿದೆ. ಯದವಚ್ಛೇದೇನ ಪ್ರಾಣಮಯ ಕೋಶವು ವ್ಯಾಪ್ತವಾಗಿದೆ, ತದವಚ್ಛೇದೇನೈವ ಮನೋಮಯ ಕೋಶವು ವ್ಯಾಪ್ತವಾಗಿದೆ. ಈ ಮನೋಮಯ ಕೋಶವೂ ಪ್ರಾಣಮಯ ಕೋಶದಂತೆ  ಸಪ್ತಪುರುಷಪುರುಷಾತ್ಮಕವಾಗುತ್ತಾ ಪುರುಷವಿಧ ಆಗಿದೆ. ಸೂಕ್ಷ್ಮದೃಷ್ಟಿಯಿಂದ ಮನೋಮಯಕೋಶದ ಪುರುಷ ವಿಧತಾ ಎಂಬುದೇ ಪ್ರಾಣಮಯಕೋಶದ ಪುರುಷ ವಿಧತಾ ಆಗಿದೆ, ಹಾಗೇ ಸ್ಥೂಲ ದೃಷ್ಟಿಯಿಂದ ಪ್ರಾಣಮಯಕೋಶದ ಪುರುಷವಿಧತಾ ಎಂಬುದೇ ಮನೋಮಯಕೋಶದ ಪುರುಷವಿಧತಾ ಎಂಬುದರ ಪ್ರತಿಷ್ಠಾ ಆಗಿದೆ.

ಋಕ್, ಯಜುಃ, ಸಾಮ, ಅಥರ್ವ ಭೇದದಿಂದ ಅಪೌರುಷೇಯ-ಬ್ರಹ್ಮನಿಃಶ್ವಸಿತ ವೇದತತ್ತ್ವವು ನಾಲ್ಕು ವಿವರ್ತ್ತಭಾವಗಳಲ್ಲಿ ಪರಿಣತವಾಗಿರುತ್ತದೆ. ಈ ನಾಲ್ಕರಲ್ಲೂ ಋಕ್-ಸಾಮ-ಯಜುಃ ಇವುಗಳ ಸಮಷ್ಟಿಯೇ ಬ್ರಹ್ಮ ವೇದವಾಗಿದೆ, ಇದೇ ಸ್ವಾಯಮ್ಭುವ ಸತ್ಯಾಗ್ನಿವೇದ ಆಗಿದೆ. ಅಥರ್ವವು ಸುಬ್ರಹ್ಮ ವೇದವಾಗಿದೆ, ಅದೇ ಪರಮೇಷ್ಠ್ಯ ಋತಸೋಮವೇದ ಆಗಿದೆ. ಸತ್ಯ-ಋತಾತ್ಮಕ ಈ ವೇದಚತುಷ್ಟಯಿಯು ಮನೋಮಯ ಆತ್ಮವನ್ನು ಕಾಮನಾ ಪೂರ್ವಕ ಪ್ರಾಣಸಮ್ಬನ್ಧದಿಂದ ವಾಗ್ ಉಪಾದಾನತ್ವದಿಂದ ಸೃಷ್ಟಿ ಕರ್ಮ್ಮದಲ್ಲಿ ಪ್ರವೃತ್ತಗೊಳಿಸುತ್ತದೆ. ತ್ರಯೀವೇದದಲ್ಲಿ ಯಜುರ್ಭಾಗವು ವಯ (ವಿಷಯ) ರೂಪವಾಗಿದೆ, ವಸ್ತುತತ್ತ್ವಾತ್ಮಕವಾಗಿದೆ ಹಾಗೂ ಋಕ್-ಸೋಮವು  ವಯೋನಾಧದ (ಆಯತನ-ಛನ್ದ-ಸೀಮಾ) ಲಕ್ಷಣವಾಗಿದೆ. ಹೇಗೆ ದಕ್ಷಿಣೋತ್ತರಪಾರ್ಶ್ವರೂಪ ಕಪಾಟದ್ವಯದಿಂದ ವಸ್ತುತತ್ತ್ವಲಕ್ಷಣದ ಬೀಜವು ಸೀಮಿತವಾಗಿದ್ದು ಸುರಕ್ಷಿತವಾಗಿರುತ್ತದೆಯೋ, ಹಾಗೆಯೇ ಋಕ್-ಸಾಮ ಕಪಾಟಗಳಿಂದ ವಯರೂಪ ಯಜುವು ಸೀಮಿತವಾಗಿದ್ದು ಸುರಕ್ಷಿತವಾಗಿರುತ್ತದೆ.

ಋಕ್ ಅಗ್ನಿ ಪ್ರಧಾನವಾಗಿದ್ದು, ಅಗ್ನಿಗೆ ತನ್ನದ್ದಾದ ದಿಕ್ಕೆಂಬುದು ದಕ್ಷಿಣ, ಹಾಗಾಗಿ ಋಗಾಗ್ನಿಯನ್ನು ಈ ಯಜುವಿನ ದಕ್ಷಿಣಪಾರ್ಶ್ವವೆಂದು ನಂಬಬಹುದು. ಸಾಮವು ಆದಿತ್ಯ ಪ್ರಧಾನವಾಗಿದ್ದು, ಆದಿತ್ಯದ ಪ್ರತಿಷ್ಠಾ ಉತ್ತರದಿಕ್ಕಿನಲ್ಲಿ ಎಂದು ನಂಬಲಾಗಿದೆ –

“ಉದಿತಿ, ಸೋಽಸಸಾವಾದಿತ್ಯಃ |” (ಜೈ ಉ ೨|೯|೮) |
“ದ್ಯೌರ್ವಾ ಉತ್ತರಂ ಸಧಸ್ತಮ್ |” (ಶತ ೮|೬|೩|೨೩) |
“ಸ ವಾ ಏಷ (ಆದಿತ್ಯಃ) ಉತ್ತರಃ |” (ಐ ಬ್ರಾ ೪|೧೮) |

ಹಾಗಾಗಿ ಸಾಮಾದಿತ್ಯವನ್ನು ಈ ಯಜುವಿನ ಉತ್ತರಪಾರ್ಶ್ವವೆಂದು ನಂಬಲಾಗಿದೆ. ಶರೀರದಲ್ಲಿ ಶಿರವು ಹೇಗೆ ಪ್ರಧಾನವೋ, ಹಾಗೆಯೇ ತ್ರಯೀವೇದದಲ್ಲಿ ಮಧ್ಯಸ್ಥ ಯಜುವು ಪ್ರಧಾನವಾಗಿದೆ. ಇದೇ ದೃಷ್ಟಿಯಲ್ಲಿ ಯಜುವನ್ನು ‘ಶಿರ’ವೆಂದು ಹೇಳಬಹುದು. ಪಾರಮೇಷ್ಠ್ಯ ಅಥರ್ವತತ್ತ್ವವು ಅಥರ್ವಾಙ್ಗಿರೋಮಯವಾಗಿದೆ. ಭೃಗುಭಾಗವು ಅಥರ್ವ ಆಗಿದೆ, ಅಙ್ಗಿರಾ ಭಾಗವು ಅಙ್ಗಿರಾ ಆಗಿದೆ. ಸ್ನೇಹಗುಣಕ ಭೃಗು, ತೇಜೋಗುಣಕ ಅಙ್ಗಿರಾ, ಇವೆರಡರ ಸಮಷ್ಟಿಯೇ ‘ಆಪೋ ಭೃಗ್ವಾಙ್ಗಿರೋಮಯಮ್’ ಎಂಬುದರ ಅನುಸಾರ ‘ಆಪಃ’ ಆಗಿದೆ, ಇದೇ ಸೋಮಾತ್ಮಕ ಅಥರ್ವವೇದ ಆಗಿದೆ. ಸೋಮಾನ್ನ ಮನವೇ ಪ್ರತಿಷ್ಠಾ ಆಗಿದೆ. ಹಾಗಾಗಿ ಈ ಸೋಮಾನ್ನ ಲಕ್ಷಣವು ಅಥರ್ವಾಙ್ಗಿರಾ ರೂಪೀ ಅಥರ್ವವೇದಕ್ಕೆ (ಸೋಮವೇದಕ್ಕೆ) ಪುಚ್ಛಪ್ರತಿಷ್ಠಾ ಎಂದು ಹೇಳಬಹುದು.

‘ಇದಂ ಕುರು, ಇದಂ ಮಾ ಕುರು, ಇದಂ ಕುರ್ವೀಯ, ಇದಂ ಮೇ ಸ್ಯಾತ್’ – ಅಂದರೆ ಇದನ್ನು ಮಾಡು, ಇದನ್ನು ಮಾಡಬೇಡ, ಇದು ಮಾಡಬೇಕಾದ್ದು, ಇದುವೇ ಸ್ಥಿರವಾದದ್ದು ಇತ್ಯಾದಿ ಕಾರಕ ಮನಸ್ಸಿನ ಸಂಕಲ್ಪವೇ ಮನದ ಸ್ವರೂಪದ ಪರಿಚಾಯಕವಾಗಿದೆ. ಅಂದರೆ ಈ ಆಧ್ಯಾತ್ಮಿಕ ಆದೇಶವೇ ಮನದ ಮುಖ್ಯ ಸ್ವರೂಪವಾಗಿದೆ. ಹಾಗಾಗಿ ಇದನ್ನು ಆತ್ಮ ಸ್ಥಾನೀಯ ಎಂದು ನಂಬಬಹುದು. ಸೋಮಮಯ ಮನ ಅಗ್ನಿಮಯ ತ್ರಯೀವೇದ, ಸೋಮಮಯ ಅಥರ್ವವೇದ, ಈ ರೀತಿ ಅಗ್ನಿ-ಸೋಮ ದ್ವಯಿಯ ಸಹಯೋಗದಿಂದಲೇ ಕೋಶರೂಪದಲ್ಲಿ ಪರಿಣಾತವಾಗುತ್ತಲಿರುವ ಆಧ್ಯಾತ್ಮ ಸಂಸ್ಥಾದಲ್ಲಿ ಪ್ರತಿಷ್ಠಿತವಾಗಿದೆ. ಚತುರ್ವೇದ ಪ್ರಾಣ ಸಮ್ಬನ್ಧದಿಂದ ಶಿರ-ಪಕ್ಷ-ಪುಚ್ಛ ಪ್ರತಿಷ್ಠಾತ್ಮಕವಾಗುತ್ತಾ ಹಾಗೂ ಸ್ವಸಂಕಲ್ಪದಿಂದ ಆತ್ಮಲಕ್ಷಣವಾಗುತ್ತಾ ಇದೇ ಕೋಶವು ಕಾಮ, ಸಂಕಲ್ಪ, ವಿಚಿಕಿತ್ಸಾ, ಶ್ರದ್ಧಾ, ಅಶ್ರದ್ಧಾ, ಧೃತಿ, ಅಧೃತಿ, ಧೀ, ಹ್ರೀ  ಇತ್ಯಾದಿ ಆಧ್ಯಾತ್ಮಿಕ ವೃತ್ತಿಗಳ ಪ್ರತಿಷ್ಠಾ ಆಗುತ್ತಿದೆ. ಇವೇ ವಿರುದ್ಧಾವಿರುದ್ಧ ಭಾವಗಳಿಂದ ಈ ಕಾಮಮಯ-ಅಕಾಮಮಯ, ಕ್ರೋಧಮಯ-ಅಕ್ರೋಧಮಯ, ಧರ್ಮ್ಮಮಯ-ಅದರ್ಮ್ಮಮಯ ಆಗುತ್ತಾ ಉಚ್ಚಾವಚ ಭಾವಗಳ ಅನುಗಾಮೀ ಆಗುತ್ತಿದೆ. ಶೇಷ ಭಾಗವು ಪೂರ್ವದ ಪ್ರಾಣಮಯಕೋಶದ ನಿರೂಪಣೆಯಿಂದ ಗತಾರ್ಥವಾಗಿದೆ. ಪ್ರಾಣಶರೀರನೇತಾ ಮನೋಮಯ ಕೋಶದ ಇದೇ ಸ್ವರೂಪವನ್ನು ಲಕ್ಷ್ಯದಲ್ಲಿಟ್ಟುಕೊಂಡು ಶ್ರುತಿಯು ಹೀಗೆ ಹೇಳುತ್ತದೆ –

೧ – “ತಸ್ಮಾದ್ವಾ ಏತಸ್ಮಾತ್ ಪ್ರಾಣಮಯಾದನ್ಯೋಽನ್ತರ ಆತ್ಮಾ ಮನೋಮಯಃ | ತೇನೈಷ ಪೂರ್ಣಃ | ಸ ವಾ ಏಷ ಪುರುಷವಿಧ ಏವ | ತಸ್ಯ ಪುರುಷವಿಧತಾಮನು-ಅಯಂ ಪುರುಷವಿಧಃ | ತಸ್ಯ ಯಜುರೇವ ಶಿರಃ, ಋಗ್ದಕ್ಷಿಣಃ ಪಕ್ಷಃ, ಸೋಮೋತ್ತರಃ ಪಕ್ಷಃ, ಆದೇಶ ಆತ್ಮಾ, ಅಥರ್ವಾಙ್ಗಿರಸಃ ಪುಚ್ಛಂ ಪ್ರತಿಷ್ಠಾ |”

೨ – “ಮನೋ ಬ್ರಹ್ಮೇತಿ ವ್ಯಜಾನಾತ್, ಮನಸೋ ಹ್ಯೇವ ಖಲ್ವಿಮಾನಿ ಭೂತಾನಿ ಜಾಯನ್ತೇ, ಮನಸಾ ಜಾತಾನಿ, ಜೀವನ್ತಿ, ಮನಃ ಪ್ರಯನ್ತ್ಯಭಿ ಸಂವಿಶನ್ತಿ |”

೩ – “ಯತೋ ವಾಚೋ ನಿವರ್ತ್ತನ್ತೇ ಅಪ್ರಾಪ್ಯ ಮನಸಾ ಸಹ |
ಆನನ್ದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕದಾಚನ ||
ತಸ್ಯೈಷ ಏವ ಶಾರೀರಾತ್ಮಾ, ಯಃ ಪೂರ್ವಸ್ಯ ||” (ತೈ ಉ ೨|೩-೪)
ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ

No comments:

Post a Comment