Sunday, 7 October 2018

ಶ್ರಾದ್ಧಾದಿ ಕರ್ಮಗಳ ವಿರುದ್ಧವಾದ ಪ್ರಶ್ನಪರಂಪರೆಯ ಸಮಾಧಿ!!!


೧. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಶ್ರುತಿಯು ಪಾರ್ಥಿವ ಅಧ್ಯಾತ್ಮ ಸಂಸ್ಥಾವನ್ನು ಸಂಘಟನ ವಿಘಟನಾನಂತರ ಐದೂ ಪಾರ್ಥಿವ ಭೂತಗಳಲ್ಲಿ ಅಪ್ಯಯವೆಂದು ಹೇಳಿ ಪಂಚತ್ವಗತಿಯ ಸಮರ್ಥನೆ ಮಾಡುತ್ತದೆ. ಪಂಚತ್ವಗತಿಯು ‘ಭಸ್ಮಾಂತಂ ಶರೀರಂ’ ರೂಪದಿಂದ ನಮ್ಮ ದೃಷ್ಟಿಯ ಎದುರಿಗೇ ಭುಕ್ತವಾಗುತ್ತದೆ. ಹಾಗಾಗಿ ಪರಲೋಕಗತಿಯ ಲಕ್ಷಣವಾದ ಆತ್ಮಗತಿಯು ಸರ್ವಥಾ ವಿಪ್ರತಿಪನ್ನವಾಗಿದೆ.

ಉತ್ತರ:- ಈ ವಿಪ್ರತಿಪತ್ತಿಯ ಸಮಾಧಿ ಏನೆಂದರೆ – ‘ಅನ್ನರಸಮಯಪುರುಷ’, ಅಂದರೆ ಪಂಚಭೌತಿಕ ಅನ್ನಮಯಕೋಶ. ಈ ದೃಷ್ಟಿಯಲ್ಲಿ ವಸ್ತುತಃ ಪಂಚತ್ವಗತಿಯು ಪ್ರಧಾನವಾಗಿದೆ. ಕೇವಲ ಪಂಚತ್ವಗತಿ-ಸಮರ್ಥನೆಯಿಂದಲೇ, ಯಾವ ಆಧಾರದಿಂದ ಸ್ಥೂಲ ಶರೀರವನ್ನು ತ್ಯಜಿಸಿದ ಮೇಲೆ ಆತ್ಮಗತಿ (ಪರಲೋಕಗತಿ) ಇಲ್ಲವೆಂದು ಒಪ್ಪಿದ್ದೀರಿ? ಇದೇ ಪ್ರಶ್ನೋಚ್ಛೇದಾತ್ಮಕ ಒಂದು ನವೀನ ಪ್ರಶ್ನೆ. ಇದು ಕೇವಲ ಶರೀರಾತ್ಮವಾದಿಗಳಿಗೆ ಅಸಮಾಧೇಯ ಪ್ರಶ್ನೆಯಾಗುತ್ತಿದೆ.

೨. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಚೇತನಾಲಕ್ಷಣ ಆತ್ಮವನ್ನು ಶರೀರದಿಂದ  ಬೇರೆ ಎಂದು ಒಪ್ಪಿದರೆ ಪಂಚಭೂತಗಳಂತೆ ಚೇತನಾಲಕ್ಷಣ ಆತ್ಮವು ತತ್ಕಾಲ ಸರ್ವವ್ಯಾಪಕ ಚೈತನ್ಯಘನದಲ್ಲಿ – ‘ಯಥೋದಕಂಶುದ್ಧೇಶುದ್ಧಂ’ ನ್ಯಾಯದಂತೆ ವಿಲೀನವಾಗುತ್ತದೆ ಎಂದಾಗ ಆತ್ಮಗತಿಯ ಸಮರ್ಥನೆ ಮಾಡಲಾಗುವುದಿಲ್ಲ.

ಉತ್ತರ:- ವಿಪ್ರತಿಪನ್ನನು ವಿಚಾರ ಮಾಡದ್ದೇನೆಂದರೆ ಯಾವ ಮುಕ್ತಾತ್ಮಗಳು ಚಿದಾತ್ಮಾ ಕ್ರಮಗತಿಯ ಆಶ್ರಯ ಪಡೆದುಕೊಳ್ಳದೆ ಕೂಡಲೇ ಮುಕ್ತವಾಗುತ್ತವೆ? ನಿಷ್ಕಾಮಕರ್ಮ ಯೋಗಿ ಜೀವನ್ಮುಕ್ತ-ವಿದೇಹಪುರುಷರೇ (ಲಿಂಗಭೇದವಿಲ್ಲ) ಈ ಸದ್ಯೋಮುಕ್ತಿ ಲಕ್ಷಣ ಸಮವಲಯ-ಗತಿಯ ಅನುಯಾಯಿ ಆಗುತ್ತಾರೆ, ಆದರೆ ಯಾರು ವಿಷಯಾಸಕ್ತ-ಕರ್ಮಬಂಧನಾನುಗತ-ಬದ್ಧಜೀವರೋ, ಅವರ ಚಿದಾತ್ಮಾ (ಪ್ರತ್ಯಗಾತ್ಮಾ) ಸದ್ಯೋಮುಕ್ತಿಯನ್ನು ಹೊಂದುವುದಿಲ್ಲ.

೩. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಒಂದೆಡೆ ಆತ್ಮವನ್ನು ಪ್ರಾಣಮಯ ಎಂದು ಹೇಳಲಾಗುತ್ತಿದೆ, ಅಂದರೆ ಪ್ರಾಣವು ಆತ್ಮದೊಂದಿಗೆ ಉತ್ಕ್ರಮಣ ಮಾಡುತ್ತದೆ ಎಂದು ಹಲವರು ನಂಬಿ  ಪ್ರಾಣವನ್ನು ಆತ್ಮದಿಂದ ಭಿನ್ನವೆಂದು ತಿಳಿಯುತ್ತಿದ್ದಾರೆ.

ಉತ್ತರ:- ಪ್ರಾಣಸ್ವರೂಪ ವಿಜ್ಞಾನವು ಈ ವಿಪ್ರತಿಪತ್ತಿಯ ಮೂಲವನ್ನೂ ಛೇದಿಸುತ್ತದೆ. ಆಗ್ನೇಯ ವೈಶ್ವಾನರ ಪ್ರಾಣ, ವಾಯವ್ಯ ತೈಜಸ ಪ್ರಾಣ, ಐಂದ್ರ ಪ್ರಾಜ್ಞ ಪ್ರಾಣ, ಎಂಬೀ ೩ ಪಾರ್ಥಿವ ಸ್ತೌಮ್ಯ ಪ್ರಾಣಗಳ ಸಮಷ್ಟಿಯು ಆತ್ಮವಾಗಿದೆ. ಹಾಗೇ ಆತ್ಮದೊಂದಿಗೆ (ಪ್ರತ್ಯಗಾತ್ಮದೊಂದಿಗೆ) ಉತ್ಕ್ರಾಂತವಾಗುವ ಸೂಕ್ಷ್ಮಶರೀರಾವಚ್ಛಿನ್ನ-ಆತಿವಾಹಿಕಪ್ರಾಣವು ಈ ಪ್ರಾಣಾತ್ಮದ ಪ್ರಾಣತತ್ತ್ವದಿಂದ ಸರ್ವಥಾ ಇನ್ನೊಂದು ವಸ್ತುತತ್ತ್ವವಾಗಿದೆ. ಕೇವಲ ನಾಮ ಸಾಮ್ಯದಿಂದ ಉತ್ಪನ್ನ ವಿಪ್ರತಿಪತ್ತಿಯ ಈ ರೀತಿ ತತ್ವಭೇದದ ಆಧಾರದಿಂದ ಸ್ಪಷ್ಟವಾದ ನಿರಾಕರಣೆಯಾಗುತ್ತದೆ.

೪. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಶ್ರುತಿಯು – ‘ಆತ್ಮೈವಾಧಸ್ತಾತ್ ..’ ಇತ್ಯಾದಿ ರೂಪದಿಂದ ಆತ್ಮವನ್ನು ವ್ಯಾಪಕವೆಂದು ಹೇಳಿರುವಾಗ ಆ ಆತ್ಮಕ್ಕೆ ಪರಲೋಕ ಗತಿಯು ಹೇಗೆ ಸಾಧ್ಯ?

ಉತ್ತರ:- ನಿರಾಕರಣೆಯ ಆಧಾರವು ಅದೇ ಅಖಂಡ ಸತ್ಯಾತ್ಮ. ಅಖಂಡಾತ್ಮವು ವಾಸ್ತವದಲ್ಲಿ ವ್ಯಾಪಕವಾಗಿದೆ. ಹಾಗೇ ಅವಶ್ಯಕವಾಗಿ ಅದು ಗತಿ ಮರ್ಯಾದೆ ಮಾತ್ರವಲ್ಲ, ಎಲ್ಲಾ ರೀತಿಯ ದ್ವಂದ್ವಗಳಿಂದ ಅತೀತವಾಗಿದೆ. ಗತಿಯ ಲಕ್ಷ್ಯವಂತೂ ಆ ಅಖಂಡಾತ್ಮವೇ ಆಗಿದೆ. ಅದು ಉಪಾಧಿ ರೂಪದಿಂದ ಜನ್ಮಮೃತ್ಯು-ಪ್ರವಾಹದಿಂದ ಯುಕ್ತವಾಗಿರುತ್ತಾ, ಸದದ್ವಂದ್ವಗಳ ಅನುಗಾಮೀ ಆಗಿರುತ್ತದೆ. ಅನ್ಯ (ಅಖಂಡ) ಆತ್ಮಕ್ಷೇತ್ರಕ್ಕೆ ಸಂಬಂಧಿಸಿದ ಆಗತಿಭಾವದ ಆಧಾರದಲ್ಲಿ ಅನ್ಯ (ಖಂಡ) ಆತ್ಮಕ್ಷೇತ್ರಾನುಗತ ಗತಿಭಾವವನ್ನು ವಿಪ್ರತಿಪನ್ನವೆಂದು ನಂಬಿ ಕುಳಿತಿರುವುದು ಯಾವ ರೀತಿಯಲ್ಲಿ ಮಾನ್ಯವಾದ ವಿಚಾರ?

೫. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಒಂದು ಕಡೆ ಕರ್ಮಸಂಸ್ಕಾರವನ್ನು ಗತಿಯ ನಿಮಿತ್ತ ಎನ್ನುತ್ತಾರೆ, ಹಾಗೇ ಕರ್ಮ ತಾರತಮ್ಯದಿಂದ ಆತ್ಮದ ಹ್ರಾಸ-ವೃದ್ಧಿಯ ಸಮರ್ಥನೆ ಮಾಡುತ್ತಾರೆ. ಇನ್ನೊಂದು ಕಡೆ ಅದೇ ಪ್ರಾಜ್ಞ ಆತ್ಮವನ್ನು ಅಮೃತಲಕ್ಷಣವೆಂದು ಹೇಳುತ್ತಾ, ಅದನ್ನು ಕರ್ಮಸಂಸ್ಕಾರಲೇಪದಿಂದ ಭಿನ್ನವೆಂದು ಹೇಳುತ್ತಾ ‘ನ ಕರ್ಮಣಾ ವರ್ಧತೇ, ನಾ ಕನೀಯಾನ್’ ರೂಪದಿಂದ ಹ್ರಾಸ-ವೃದ್ಧಿ ಧರ್ಮಗಳಲ್ಲಿ ಬಹಿರ್ಭೂತ ಎಂದು ನಂಬಲಾಗುತ್ತಿದೆ.

ಉತ್ತರ:- ಪ್ರಾಣಮೂರ್ತಿ ಪ್ರಾಜ್ಞ ಆತ್ಮದ ಸ್ವರೂಪವನ್ನು ವಿಶ್ಲೇಷಿಸುವಾಗ, ಉಕ್ತ ಎರಡೂ ವಿರುದ್ಧ ಕಥನಗಳ ಸಮನ್ವಯವಾಗುತ್ತದೆ. ಪ್ರಾಜ್ಞ ಆತ್ಮದಲ್ಲಿ ಪ್ರಾಣ, ಪ್ರಜ್ಞಾ, ಭೂತ ಎಂಬ ೩ ಪರ್ವಗಳಿವೆ. ಕ್ರಿಯಾತತ್ವವು ಪ್ರಾಣ, ಚಿದಂಶವು ಪ್ರಜ್ಞಾ ಭಾಗವಾಗಿದೆ, ಮತ್ತು ಚಿದಂಶಗ್ರಾಹಕ ವೀಧ್ರಸೋಮವು ಭೂತಭಾಗವಾಗಿದೆ. ಪ್ರಾಣ ಹಾಗೂ ಚಿದಂಶಗಳೆಂಬ ಎರಡೂ ಭಾಗಗಳು ಸರ್ವಥಾ ಅಸಂಗವಾಗಿರುತ್ತವೆ. ಇವುಗಳು ಸ್ವರೂಪದಲ್ಲಿ ಹ್ರಾಸ-ವೃದ್ಧಿ ಹೊಂದುವುದಿಲ್ಲ. ಮೂರನೇಯದಾದ ಸೋಮಾತ್ಮಕ ಭೂತ ಭಾಗವು ಸ್ವಸ್ನೇಹಗುಣಾತಿಶಯದಿಂದ ವಿಷಯಸಂಸರ್ಗದಿಂದ ಉತ್ಪನ್ನ ಸಂಸ್ಕಾರಗಳನ್ನು ಗ್ರಹಿಸುತ್ತಾ ತಾರತಮ್ಯದಿಂದ ಅವಶ್ಯವಾಗಿ ಕನೀಯಾನ್ ಕೂಡ ಆಗುತ್ತದೆ, ಭೂಯಾನ್ ಕೂಡ ಆಗುತ್ತದೆ.

೬. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಶ್ರುತಿಯು ಜನ್ಮಕಾಲದಲ್ಲಿ ಆತ್ಮವು ಪಾಪ್ಮದೋಷಗಳಿಂದ ಯುಕ್ತವಾದದ್ದೆಂದು ಹೇಳಿದೆ. ಅದು ಮರಣಾನಂತರ ಆತ್ಮವನ್ನು ವಿಶುದ್ಧವೆಂದು ಹೇಳಿದೆ. ವಿಶುದ್ಧವೇ ಆತ್ಮಮುಕ್ತಿಯಾಗಿರಬೇಕಾದರೆ, ಮರಣೋತ್ತರ ಈ ವಿಶುದ್ಧಿಯು ನಿತ್ಯಪ್ರಾಪ್ತವಾಗುತಿರಬೇಕಾದರೆ, ಪರಲೋಕಗತಿಯ ಪ್ರಶ್ನೆ ಎಲ್ಲಿ ಉಳಿಯುತ್ತದೆ?

ಉತ್ತರ:- ಪಾಪ್ಮ ಸ್ವರೂಪದ ವಿಶ್ಲೇಷಣೆಯೇ ಈ ವಿಪ್ರತಿಪತ್ತಿಯ ನಿರಾಕರಣೆ ಮಾಡುತ್ತಿದೆ. ಸ್ಥೂಲ-ಸೂಕ್ಷ್ಮ-ಕಾರಣಾದಿ ಭೇದದಿಂದ ದೋಷಗಳು ಅನೇಕ ಶ್ರೇಣಿಗಳಲ್ಲಿ ವಿಭಕ್ತವಾಗಿದೆ. ಮಹಾಭೂತಾದಿ ವಿಕಾರಭೂತ ಸ್ಥೂಲಶರೀರವು ಸ್ಥೂಲಪಾಪ್ಮ ಆಗಿದೆ, ಕಾಮ-ಕ್ರೋಧಾದಿವೃತ್ತಿಗಳು ಸೂಕ್ಷ್ಮಶರೀರಾನುಗತ ಸೂಕ್ಷ್ಮಪಾಪ್ಮ ಆಗಿದೆ, ಹಾಗೂ ಕರ್ಮಸಂಸ್ಕಾರ-ಅವಿಧ್ಯಾ-ಕಾಮ-ಸಂಕಲ್ಪಾದಿ-ಕಾರಣಶರೀರಾನುಗತ ಸುಸೂಕ್ಷ್ಮಪಾಪ್ಮ ಆಗಿದೆ. ಮರಣಾನಂತರ ಸ್ಥೂಲಪಾಪ್ಮಗಳಿಂದ ಅವಶ್ಯಕವಾಗಿ ಪ್ರಾಜ್ಞಾತ್ಮವು ವಿಮುಕ್ತವಾಗುತ್ತದೆ. ಆದರೆ ಎಲ್ಲಿಯವರೆಗೆ ಅಖಂಡ-ಸತ್ಯಾತ್ಮದೊಂದಿಗೆ ಐಕ್ಯತೆಯನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಗತಿನಿಮಿತ್ತಕ ಸೂಕ್ಷ್ಮ-ಸುಸೂಕ್ಷ್ಮ ಪಾಪ್ಮವು ಇದರಲ್ಲಿ ಪ್ರತಿಷ್ಠಿತವಾಗಿರುತ್ತದೆ. ಅಂದರೆ ಎಂದು ಇದರ ಸೂಕ್ಷ್ಮಾದಿ ದೋಷಗಳು ಆತ್ಯಂತಿಕ ರೂಪದಿಂದ ನಿವಾರಣೆ ಆಗುತ್ತವೋ, ಅಂದೇ ಆತ್ಯಂತಿಕ ರೂಪದಿಂದ ವಿಶುದ್ಧವಾಗಿ ಆ ಶುದ್ಧದಲ್ಲಿ ಲೀನವಾಗುತ್ತಾ ಗತಿಚಕ್ರದಿಂದ ಪಾರಾಗುತ್ತದೆ. ‘ಉತ್ಕ್ರಾಮನ್ ಮ್ರಿಯಮಾಣಃ ಪಾಪ್ಮನೋ ವಿಜಹಾತಿ’ ಯಿಂದ ಕೇವಲ ಸ್ಥೂಲ ಪಾಪ್ಮಗಳ ತ್ಯಾಗವನ್ನು ಮಾತ್ರ ಹೇಳಿದೆ.

೭. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಒಂದು ಶ್ರುತಿಯ ವಚನದಿಂದ ಏನು ನಿಷ್ಕರ್ಷೆ ಬರುತ್ತದೆಂದರೆ, ಮರಣೋತ್ತರ ಆತ್ಮಕ್ಕೆ ಭೋಗಸಾಧನ ಲಕ್ಷಣವಾದ ಇಂದ್ರಿಯವರ್ಗವು ಉಳಿದಿರುವುದಿಲ್ಲ. ಆದರೆ ಈ ಭೋಗಸಾಧನೆಗಳನ್ನು ಅದು ಮುಮೂರ್ಷು-ಅವಸ್ಥೆಯಲ್ಲಿಯೇ ಬಿಟ್ಟಿರುತ್ತದೆ. ಪರಲೋಕಗತಿ ಫಲಭೋಗವನ್ನು ಲಕ್ಷ್ಯವಾಗಿಸಿಕೊಳ್ಳುತ್ತದೆ. ಸಾಧನಗಳ ಅಭಾವವಿರುವಾಗ, ಗತಿಯ ಪ್ರಯೋಜನವೇನು?

ಉತ್ತರ:- ಭಿನ್ನ-ಭಿನ್ನ ಭೋಗಸಾಧನಗಳಿಂದ (ಇಂದ್ರಿಯಗಳಿಂದ) ಈ ವಿಪ್ರತಿಪತ್ತಿಯೂ ತಿರಸ್ಕೃತವಾಗಿದೆ. ಅವಶ್ಯವಾಗಿ ಸುಷುಪ್ತಿ ಅವಸ್ಥೆಯಂತೆಯೇ ಮರಣೋತ್ತರ ಸ್ಥೂಲಶರೀರಾನುಬಂಧೀ ಯಾವುದೇ ಭೋಗಸಾಧನ (ಇಂದ್ರಿಯ) ಶೇಷವು ಉಳಿದಿರುವುದಿಲ್ಲ. ಆದರೆ ಯಾವ ರೀತಿಯಲ್ಲಿ ಆತ್ಮಗತಿನಿಮಿತ್ತಕ ಸೂಕ್ಷ್ಮ ಶರೀರದಿಂದ ಮುಕ್ತವಾಗಿ ಈ ಆತ್ಮವು ಪರಲೋಕಗಮನಕ್ಕೆ ಸಮರ್ಥವಾಗುತ್ತದೋ, ಹಾಗೆಯೇ ಸೂಕ್ಷ್ಮಶರೀರ ನಿಬಂಧಿತ ಸೂಕ್ಷ್ಮ ಭೋಗಸಾಧನವೂ ಅವಶ್ಯವಾಗಿ (ಅಪೂರ್ವ) ಉತ್ಪನ್ನವಾಗುತ್ತವೆ.

೮. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಸ್ವಯಂ ಶ್ರೌತ ವಚನಗಳ ಆಧಾರದಲ್ಲಿಯೇ ಹೇಳಬೇಕಾಗುತ್ತದೆ – ‘ಆತ್ಮವೇ ಶರೀರವಾ? ಅಥವಾ ಆತ್ಮವು ಶರೀರದಿಂದ ಭಿನ್ನವಾ?’ ಈ ಪ್ರಶ್ನೆಯು ಸಂದಿಗ್ಧವಾಗುತ್ತಿದೆ. ಆತ್ಮಸ್ವರೂಪವೇ ಸಂದಿಗ್ಧವಾಗಿರುವಾಗ, ಆತ್ಮಗತಿಯ ಸಂಬಂಧದಲ್ಲಿ ವಿಚಾರ ಮಾಡುವುದೂ ಸರ್ವಥಾ ನಿರರ್ಥಕವೆಂದು ನಂಬಬಹುದು.

ಉತ್ತರ:- ಶ್ರುತಿ-ತಾತ್ಪರ್ಯ ಸಮನ್ವಯವೇ ಈ ವಿಪ್ರತಿಪತ್ತಿಯ ನಿರಾಕರಣೆಯನ್ನೂ ಮಾಡುತ್ತಿದೆ. ಶರೀರದಿಂದ ಭಿನ್ನವಾಗಿ ಆತ್ಮತತ್ತ್ವವಿದೆ. ಹಾಗೇ ಅದು ಅವಶ್ಯವಾಗಿ ಆತಿವಾದಿಕ ಶರೀರ ಧಾರಣೆ ಮಾಡಿ ಲೋಕಾಂತರ ಗಮನ ಮಾಡುತ್ತದೆ; ಇದೇ ಮುಖ್ಯ ಸಿದ್ಧಾಂತ. ಯಾರು ಈ ಅಸ್ತಿಲಕ್ಷಣ ಆತ್ಮದ ಸ್ವರೂಪವನ್ನು ಗುರುತಿಸಿಕೊಳ್ಳುತ್ತಾರೋ, ಅವರೆಂದಿಗೂ ಪ್ರೇತಭಾವದಲ್ಲಿ ವಿಚಿಕಿತ್ಸಾ ಮಾಡುವುದಿಲ್ಲ. ಉದಾಹರಣೆಗೆ – ‘ಅಸ್ತೀತ್ಯೇಕೇ’ ಸಮರ್ಥಕ – ‘ಏತಮಿತಃ ಪ್ರೇತ್ಯಾಭಿಸಮ್ಭವಿತಾಸ್ಮಿ, ಇತಿ ಯಸ್ಯ ಸ್ಯಾದದ್ಧಾ, ನ ವಿಚಿತ್ಸಾಽಸ್ತಿ, ಇತಿ ಹ ಸ್ಮಾಹ ಶಾಂಡಿಲ್ಯಃ’ ಇತ್ಯಾದಿ ವಚನಗಳಿಂದ ಪ್ರಮಾಣಿತವಾಗಿದೆ. ‘ಯಥಾ ಸೈಂಧವಾಖಿಲ್ಯ..’ ಇತ್ಯಾದಿ ಯಾವ ಶ್ರುತಿಯಿಂದ ವಿಚಿಕಿತ್ಸಕ ಶರೀರಾತ್ಮವಾದವು ಸಿದ್ಧಪಡಿಸುತ್ತಾ ‘ನಾಯಮಸ್ತಿ’ ಪಕ್ಷದ ಸಮರ್ಥನೆ ಮಾಡಲು ಹೊರಟಿದೆಯೋ ಆ ಶ್ರುತಿಯು ಆ ಆತ್ಮತತ್ತ್ವವನ್ನು ದೃಷ್ಟಾಂತದಿಂದ ವಿಶ್ಲೇಷಿಸುತ್ತಿದೆ. ಅದರ ಸಂಬಂಧವಾಗಿ ಆರಂಭದಲ್ಲಿಯೇ – ‘ಇದಂ ಸರ್ವಂ ಯದಯಮಾತ್ಮಾ’ (ಬೃ ೨|೪|೬) ಎಂದು ಪ್ರತಿಜ್ಞೆ ಮಾಡಿದೆ. ಆ ಸಲಿಲವತ್-ಏಕದ್ರಷ್ಟಾ ಅಖಂಡ ಸತ್ಯಾತ್ಮತತ್ತ್ವದೊಂದಿಗೆ ಅದ್ವೈತ ಸಂಬಂಧ ಪ್ರಾಪ್ತಿಯಾದೊಡನೆ ಭೂತ-ಭೌತಿಕ ನಿಬಂಧನೆ, ಎಲ್ಲಾ ವಿಶೇಷಭಾವಗಳು ಸರ್ವಥಾ ನಷ್ಟವಾಗುತ್ತವೆ – ‘ತಾನ್ಯೇವಾನುವಿನಶ್ಯತಿ’ ಎಂಬುದರಿಂದ ಅದನ್ನೇ ಹೇಳಿರುವುದು. ‘ವಾಯುರ್ವೇಗೌತಮತತ್‍ಸೂತ್ರಮ್..’ ಇತ್ಯಾದಿ ಶ್ರುತಿಗಳಿಂದಲೂ ಭಿನ್ನಾತ್ಮವಾದ ಸಿದ್ಧಾಂತದ ಮೇಲೆ ಯಾವುದೇ ಆಕ್ರಮಣವಾಗುತ್ತಿಲ್ಲ. ವಾಯುಸೂತ್ರವು (ಪ್ರಾಣಸೂತ್ರವು) ಉತ್ಕ್ರಾಂತವಾದಾಗ ಶರೀರ ಸಂಘಟನೆಯು ಮುರಿದು ಬೀಳುತ್ತದೆ. ಈ ಪ್ರಾಕೃತಿಕ ಸ್ಥಿತಿಯ ವಿಶ್ಲೇಷಣೆ ಮಾಡುವ ಉಕ್ತ ಶ್ರುತಿಯು ಆತ್ಮಸತ್ತೋಚ್ಛೇದದಲ್ಲಿ  ಹೇಗೆ ಪ್ರಮಾಣವಾಯಿತು? ಎಂಬುದನ್ನು ಅದೇ ವಿಪ್ರತಿಪನ್ನಮತಿಗಳಿಗೆ ಪ್ರಶ್ನಿಸಬೇಕಾಗುತ್ತದೆ. ನಮ್ಮ ದೃಷ್ಟಿಯಲ್ಲಂತೂ ಇದೇ ಶ್ರುತಿಯು ಪರಂಪರಾಗತ ಆತ್ಮಸತ್ತೆಯ ಸಮರ್ಥನೆಯನ್ನೇ ಮಾಡುತ್ತಿದೆ. ಪ್ರಾಣಸೂತ್ರವು ಅಕಸ್ಮಾತಾಗಿ ಯಾವುದೇ ನಿಮಿತ್ತವಿಲ್ಲದೆ ಹೊರ ಹೊರಟು ಹೋದದ್ದೇಕೆ? ಈ ಪ್ರಶ್ನೆಗೆ ಸಮಾಧಾನವೆಂದರೆ ಅದೇ ಆತ್ಮೋತ್ಕ್ರಾಂತಿ. ‘ತಮುತ್ಕ್ರಾಮನ್ತಂ ಪ್ರಾಣೋಽನೂತ್ಕ್ರಾಮತಿ’ ಈ ಶ್ರುತ್ಯಂತರ ಪ್ರಾಮಾಣ್ಯದಿಂದ ಆತ್ಮನಿಷ್ಕ್ರಮಣವೇ ಪ್ರಾಣಸೂತ್ರ ನಿರ್ಗಮನದ ನಿಮಿತ್ತವಾಗುತ್ತಿದೆ.

೯. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಒಂದು ಕಡೆ ಶ್ರುತಿಯು ಹೇಳುತ್ತದೆ – ಪ್ರಾಣಾತ್ಮದ ಉತ್ಕ್ರಮಣವು ಆಗುವುದಿಲ್ಲ, ಆದರೆ ಅದು ಇಲ್ಲಿಯೇ ಸದ್ಯೋ ವಿಲೀನವಾಗುತ್ತದೆ. ಇನ್ನೊಂದು ಶ್ರುತಿ ಹೇಳುತ್ತದೆ – ಪ್ರಾಣಾತ್ಮದ ಉತ್ಕ್ರಮಣವಾಗುತ್ತದೆ, ಅದು ಲೋಕಾಂತರ ಗಮನ ಮಾಡುತ್ತದೆ. ಈ ರೀತಿ ಉತ್ಕ್ರಮಣವೇ ಸಂದಿಗ್ಧವಾಗಿರುವಾಗ, ಆತ್ಮಗತಿಯ ವಿಪ್ರತಿಪನ್ನ ಆಗಲು ಸಂದೇಹವೇನು?

ಉತ್ತರ:- ಅವಸ್ಥಾಭೇದದಿಂದ ಈ ವಿಪ್ರತಿಪತ್ತಿಯ ನಿರಾಕರಣೆಯೂ ಆಗುತ್ತಿದೆ.  ‘ಪ್ರಾಣಾತ್ಮದ ಉತ್ಕ್ರಮಣವಾಗುವುದಿಲ್ಲ, ಆದರೆ ಅದು ಇಲ್ಲಿಯೇ ಸದ್ಯೋ ವಿಲೀನವಾಗುತ್ತದೆ’ ಎಂಬ ಸಿದ್ಧಾಂತವು ಯಾರ ಪ್ರಾಜ್ಞಾತ್ಮವು ನಿಷ್ಕಾಮ ಭಾವದಿಂದ ಅಕಾಮಯಮಾನ ಆಗುತ್ತಾ ವಿಶುದ್ಧ ಭಾವದಲ್ಲಿ ಪರಿಣತವಾಗಿ ಸರ್ವವ್ಯಾಪಕ ಶುದ್ಧ ಬ್ರಹ್ಮದಲ್ಲಿ ಸದ್ಯಃ ವಿಲೀನವಾಗುತ್ತದೆಯೋ, ಅಂತಹಾ ಮುಕ್ತಾತ್ಮರ ಸಂಬಂಧದಲ್ಲಿ ಹೇಳಿದ್ದು. ಇದೇ ಅದರ ಸಮವಲಯ-ಲಕ್ಷಣವಾದ ಸದ್ಯೋಮುಕ್ತಿ (ಅಗತಿ) ಆಗಿದೆ. ‘ಇತಿ ನು-ಅಕಾಮಯಮಾನಸ್ಯ’ ಎಂದು ಹೇಳುತ್ತಾ ಶ್ರುತಿಯು ಮುಕ್ತಾವಸ್ಥೆಯ ಅನುಗತ ಈ ಅನುಕ್ರಾಂತಿಯ ಉತ್ಕ್ರಾಂತಿ ಪಕ್ಷದೊಂದಿಗಿನ ಭೇದವನ್ನು ಸಿದ್ಧಪಡಿಸಿ ತೋರಿಸಿತು. ‘ಅಥ ಕಾಮಯಮಾನಸ್ಯ’ ಅನುಸಾರವಾಗಿ ಕಾಮಕಾಮೀ ಪ್ರಾಜ್ಞಾತ್ಮದ ಸದ್ಯೋಮುಕ್ತಿಯಾಗುವುದಿಲ್ಲ. ಆದರೆ ಅದು ಉತ್ಕ್ರಾಂತವಾಗಿ ಅವಶ್ಯಕವಾಗಿ ಕ್ರಮಗತಿಯ ಆಶ್ರಯ ಪಡೆಯಬೇಕಾಗುತ್ತದೆ.

೧೦. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಕೆಲವೆಡೆ ಹೀಗೆ ಹೇಳಲಾಗುತ್ತಿದೆ – ಶರೀರದ ಅವಯವಗಳಿಂದ ನಿಷ್ಕ್ರಾಂತ ಆತ್ಮವು ಕ್ಷಣಮಾತ್ರದಲ್ಲಿ ಆದಿತ್ಯಲೋಕಕ್ಕೆ ಹೋಗುತ್ತದೆ, ಆದರೆ ಇನ್ನೂ ಕೆಲವೆಡೆ ಹೀಗೆ ಹೇಳಲಾಗುತ್ತಿದೆ – ಉತ್ಕ್ರಾಂತ ಆತ್ಮವು ಮೊದಲು ಚಾಂದ್ರಲೋಕಕ್ಕೆ ಹೋಗುತ್ತದೆ. ಈ ರೀತಿ ಗಂತವ್ಯ ಲೋಕವು ಸಂದಿಗ್ಧವಾಗುತ್ತಿದೆ.

ಉತ್ತರ:- ಆತ್ಮಾವಸ್ಥಾ ಹಾಗೂ ಆತ್ಮಭೇದದಿಂದ ಈ ವಿಪ್ರತಿಪತ್ತಿಯೂ ಉಚ್ಛಿನ್ನಪ್ರಾಯವಾಗಿದೆ. ಮುಕ್ತ (ಕ್ರಮಮುಕ್ತ) ವ್ಯಕ್ತಿಗಳ ಆತ್ಮವು ತತ್ ಕ್ಷಣ ಆದಿತ್ಯಭೇದೀ ಆಗುತ್ತದೆ. ಬ್ರಹ್ಮಾಂಡಸ್ಫೋಟದಿಂದ ಯಾರ ಆತ್ಮವೂ ನಿಷ್ಕ್ರಾಂತವಾಗುತ್ತದೋ, ಅವರ ಈ ಆತ್ಮವು ಅವಶ್ಯವಾಗಿ ಕ್ಷಣಮಾತ್ರದಲ್ಲಿ ಸೂರ್ಯಭೇದೀ ಆಗುತ್ತದೆ. ಇವರನ್ನು ಮಹಾನಾತ್ಮದೊಂದಿಗೆ ಚಂದ್ರಗತಿಯ ಅನುಗಮನ ಮಾಡಬೇಕಾಗಿರುವುದಿಲ್ಲ. ಇಂತಹಾ ಮುಕ್ತಾತ್ಮರಾದ ಯೋಗಿಗಳಿಗೆ ಗಯಾ ಶ್ರಾದ್ಧಾದಿಗಳೂ ಅನಪೇಕ್ಷಿತ. ಆದರೆ ಯಾರು ಮುಕ್ತರಾಗಿಲ್ಲವೋ, ಅವರ ಪ್ರಾಜ್ಞಾತ್ಮಕ್ಕೆ ಅವಶ್ಯವಾಗಿ ಮಹಾನಾತ್ಮದೊಂದಿಗೆ ಒಂದು ಬಾರಿಯಾದರೂ ಚಂದ್ರಲೋಕಕ್ಕೆ ಹೋಗಬೇಕಾಗುತ್ತದೆ. ಜೊತೆಗೆ, ಯಾವ ಮುಕ್ತಾತ್ಮವಿದೆಯೋ, ಅವರ ಮಹಾನಾತ್ಮವೂ ಪ್ರತ್ಯೇಕ ದೆಸೆಯಲ್ಲಿ ಚಂದ್ರಲೋಕಕ್ಕೆ ಹೋಗಬೇಕಾಗುತ್ತದೆ.

೧೧. ಸಂಪ್ರದಾಯ ವಿರೋಧಿಗಳ ಪ್ರಶ್ನೆ:- ಅನ್ಯ ಶರೀರವನ್ನು ಲಕ್ಷ್ಯವಾಗಿಸಿಕೊಂಡೇ ಜೀವಾತ್ಮವು ಪೂರ್ವ ಶರೀರವನ್ನು ಪರಿತ್ಯಜಿಸುತ್ತದೆ. ಇಂತಹಾ ದೆಸೆಯಲ್ಲಿ ಪರಲೋಕಗಮನ, ಅಲ್ಲಿ ಹೋಗಿ ಭೋಗ ಭುಕ್ತಿ, ಇವೆಲ್ಲವೂ, ಅನರ್ಗಲ ಪ್ರಲಾಪವಾಗುತ್ತದೆ.

ಉತ್ತರ:- ಪೂರ್ವ ಶರೀರ ತ್ಯಾಗದ ಅವ್ಯವಹಿತೋತ್ತರ ಕಾಲದಲ್ಲಿಯೇ ಜೀವಾತ್ಮವು (ತೃಣಜಲೌಕಾವತ್) ಅನ್ಯ ಶರೀರ ಧಾರಣೆ ಮಾಡುವುದಿಲ್ಲ ಎಂದು  ಯಾರು ಹೇಳಿದ್ದು? ಅವಶ್ಯವಾಗಿ ಪ್ರತ್ಯೇಕ ಅವಸ್ಥೆಯಲ್ಲಿ ಆತ್ಮಕ್ಕೆ ಸಶರೀರವಾಗಿಯೇ ಇರಬೇಕಾಗುತ್ತದೆ. ಅವಶ್ಯವಾಗಿ ಸ್ಥೂಲಶರೀರದ ತ್ಯಾಗಾನಂತರ ಸೂಕ್ಷ್ಮ ಆತಿವಾಹಿಕ ಶರೀರ ಧಾರಣೆ ಮಾಡಿ ಆತ್ಮವು ಲೋಕಾಂತರ ಗಮನವನ್ನು ಮಾಡುತ್ತದೆ. ಈ ರೀತಿಯಲ್ಲಿ ಪ್ರಸಕ್ತ ವಿಪ್ರತಿಪತ್ತಿಯಿಂದಲೂ ಆತ್ಮಗತಿಯ ಸಂಬಂಧದಲ್ಲಿ ಯಾವುದೇ ಅವ್ಯವಸ್ಥೆಯು ಪ್ರವೇಶ ಪಡೆಯಲಾಗುವುದಿಲ್ಲ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment