Sunday, 7 October 2018

ಆತ್ಮಗತಿಯ ಮೂಲಕ ಆತ್ಮಸ್ವರೂಪದ ಪರಿಚಯ (೧)


ಆತ್ಮದ ಯಥಾರ್ಥ ಸ್ವರೂಪವನ್ನು ತಿಳಿಯದ ಕಾರಣದಿಂದಲೇ ನಮ್ಮೆದುರಿಗೆ ಉಕ್ತ ಆತ್ಮಗತಿ ವಿಷಯದ ಪ್ರಶ್ನಪರಂಪರಾ ಉಪಸ್ಥಿತವಾಗುತ್ತದೆ. ಆತ್ಮಸ್ವರೂಪದ ದಾರ್ಶನಿಕ ಮೀಮಾಂಸೆ ಮಾಡುವ ಮಾತ್ರದಿಂದ ಈ ಪ್ರಶ್ನಪರಂಪರೆಯ ಸಮಾಧಾನವು ಎಲ್ಲಿ ಸರ್ವಥಾ ಅಸಂಭವವೆನಿಸುತ್ತದೆಯೋ, ಅಲ್ಲಿ ಆತ್ಮಸ್ವರೂಪದ ವೈಜ್ಞಾನಿಕ ವ್ಯಾಖ್ಯಾನ ಸಂಬಂಧಿ ಸ್ವ-ಸ್ವ ತಂತ್ರದಲ್ಲಿ ಸರ್ವಥಾ ವಿಭಕ್ತ ಅವ್ಯಕ್ತಾತ್ಮಾ, ಯಜ್ಞಾತ್ಮಾ, ಮಹಾನಾತ್ಮಾ, ಪ್ರಜ್ಞಾನಾತ್ಮಾ, ಪ್ರಾಣಾತ್ಮಾ, ಶರೀರಾತ್ಮಾ ಇತ್ಯಾದಿ ತಂತ್ರಗಳಿಂದ ನಿಶ್ಚಯವಾಗಿ ಪ್ರಶ್ನಪರಂಪರೆಯ ಸಮಾಧಿಯಾಗಲು ಸಾಕಾಗುತ್ತದೆ. ಆತ್ಮಸ್ವರೂಪದ ಈ ವೈಜ್ಞಾನಿಕ-ವಿಭಕ್ತತಂತ್ರಾನುಗತ-ಸ್ವರೂಪವು ಲುಪ್ತಪ್ರಾಯವಾಗುವುದರಿಂದಲೇ ಉಕ್ತ ಪ್ರಶ್ನಪರಂಪರೆಯು ಒಂದು ಭಯಾನಕ ಕಾಂಡವನ್ನು ತಂದಿಟ್ಟಿದೆ. ಈ ಎಲ್ಲಾ ಆತ್ಮತಂತ್ರಗಳ ನಿಬಂಧದ ‘ಆತ್ಮವಿಜ್ಞಾನೋಪನಿಷತ್’ ಎಂಬ ಪ್ರಾಚೀನ ಮೀಮಾಂಸಾ ಸರಣಿಯಲ್ಲಿ ವಿಸ್ತಾರವಾಗಿ ವೈಜ್ಞಾನಿಕ ವಿವಚನೆಯಾಗಿದೆ. ಆ ವಿವೇಚನೆಯ ಸಮ್ಯಗವಲೋಕನ-ಸಮನ್ವಯದ ಅನಂತರ ಉಕ್ತ ಪ್ರಶ್ನೆಗಳು ಸುಸಮಾಹಿತವಾಗುತ್ತವೆ. ಪ್ರಕೃತಪರಿಚ್ಛೇದದಲ್ಲಿ ನಾವು ಯಾವ ‘ಸಾಮ್ಪರಾಯಿಕ’ ಗತಿ ನಾಮಕ ಆತ್ಮಗತಿ, ಅಂದರೆ ಪರಲೋಕಗತಿಗೆ ಸಂಬಂಧಿಸಿದ ವಿಚಾರ ಪ್ರಸ್ತುತಿಗೆ, ಕೇವಲ ಆ ಆತ್ಮದ ಸ್ವರೂಪದಲ್ಲಿ ಕೆಲ ಮೀಮಾಂಸೆಯನ್ನು ಮಾಡಬೇಕಾಗಿದೆ. ಆತ್ಮವಿಜ್ಞಾನೋಪನಿಷದಂತರ್ಗತ ‘ಪ್ರಾಣಾತ್ಮವಿಜ್ಞಾನೋಪನಿಷತ್’ ನಾಮಕ ಅವಾಂತರ ಪ್ರಕರಣದಲ್ಲಿ ಆತ್ಮಗತಿಮೂಲಭೂತ ಪ್ರಾಣಾತ್ಮದ ಸ್ವರೂಪವನ್ನು ಹೇಳಲಾಗಿದೆ. ಹಾಗೆಯೇ ಸರ್ವಥಾ ಒಂದು ಅಪೂರ್ವದೃಷ್ಟಿಕೋಣಕ್ಕೆ ಸಂಬಂಧಿತ, ಪ್ರಕೃತಪರಿಚ್ಛೇದದಲ್ಲಿ ಮೀಮಾಂಸ್ಯಆತ್ಮಸ್ವರೂಪ-ಪರಿಚಯವು ತನ್ನ ಒಂದು ವಿಶೇಷ ಮಹತ್ವ ಪಡೆದಿದೆ.

ಸಾಪಿಣ್ಡ್ಯವಿಜ್ಞಾನೋಪನಿಷದನ್ತರ್ಗತ ‘ಆಶೌಚವಿಜ್ಞಾನೋಪನಿಷತ್’ ನಾಮಕ ಅವಾಂತರ ಪ್ರಕರಣದಲ್ಲಿ ವೀಜೀ-ಕೂಟಸ್ಥ ಪುರುಷದಲ್ಲಿ ಭುಕ್ತ ಕ್ರಮಶಃ “೨೧-೧೫-೧೦-೬-೩-೧” ಈ ಕಲೆಗಳಿಂದ ಯುಕ್ತ ಸಪ್ತಕೋಶಗಳನ್ನು (ಪಿತೃಪಿಣ್ಡಕೋಶಗಳನ್ನು) ವಿವರಿಸುತ್ತಾ ಸ್ಪಷ್ಟಪಡಿಸುವುದೇನೆಂದರೆ, ಇವುಗಳಲ್ಲಿ ಆರಂಭಿಕ ೬ ಕೋಶಗಳು ಕ್ರಮಶಃ: ’೨೧-೧೫-೧೦-೬-೩-೧’ ಎಂಬ ಈ ೫೬ ಕಲೆಗಳನ್ನು ಋಣ ಪಡೆದು ಕೂಟಸ್ಥ ಪುರುಷದ ಶರೀರ ನಿರ್ಮಾಣವಾಗುತ್ತದೆ ಹಾಗೂ ಈ ಷಟ್ಪಞ್ಚಾಶತ್ಕಲಾತ್ಮಕ (೫೬) ಪಿತೃಪಿಣ್ಡಕೋಶದ ಋಣದಿಂದ ಉತ್ಪನ್ನ ಪುತ್ರಶರೀರವು ಪಿತನ ಷಟ್ಕೋಶದ ಪ್ರವರ್ಗ್ಯಭಾಗದಿಂದ ನಿಷ್ಪನ್ನವಾಗುತ್ತಲಿರುವ ಷಾಟ್‍ಕೌಶಿಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಶರೀರವು ಈ ಅಪತ್ಯದೃಷ್ಟಿಯಿಂದ ಷಾಟ್‍ಕೌಶಿಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವಲಕ್ಷಣವು ಅಭಿವ್ಯಕ್ತಿ ’ಆತ್ಮಾ-ಶರೀರ’ ಭೇದದಿಂದ ಎರಡೆರಡು ಭಾಗಗಳಲ್ಲಿ ವಿಭಕ್ತವಾಗಿದೆ. ಅಷ್ಟೇ ಅಲ್ಲದೆ ಎರಡೂ ಭಾಗಗಳು ಪರಸ್ಪರ ನಿತ್ಯ ಸಾಪೇಕ್ಷವಾಗಿವೆ. ‘ಯತ್ರಾತ್ಮಾ, ತತ್ರ ಶರೀರಮ್, ಯತ್ರ ವಾ ಶರೀರಂ ತತ್ರಾತ್ಮಾ’ ಎಂಬ ನ್ಯಾಯದಿಂದ ಎರಡೂ ಅವಿನಾಭೂತವಾಗಿವೆ. ಆತ್ಮೋತ್‍ಕ್ರಾಂತಿಯ ಅನಂತರ ಉಳಿದಿರುವ ಶೇಷ ಶವಶರೀರವು ‘ಶ್ರಿಯಮಾತ್ಮಾನಮಶ್ರಯತ’ ಈ ನಿರ್ವಚನದಿಂದ ಯುಕ್ತ ಶರೀರಮರ್ಯಾದೆಯಿಂದ ವಂಚಿತವಾಗಿದೆ. ಹಾಗಾಗಿ ಉಕ್ತ ವ್ಯಾಪ್ತಿಯಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ. ‘ಶ್ರಿಯಮಶ್ರಯತ’ ಲಕ್ಷಣವುಳ್ಳ ಶರೀರ ಆತ್ಮ ಸಂಬಂಧದಿಂದಲೇ ಶರೀರವೆಂದು ಹೆಸರು ಪಡೆದಿದೆ. ಹಾಗೇ ಉತ್‍ಕ್ರಾಂತ ಆತ್ಮವೂ ಸೂಕ್ಷ್ಮ-ಕಾರಣದಿಂದ, ಶರೀರಗಳನ್ನು ಹೊಂದಿಯೇ ಇರಬೇಕಾಗುತ್ತದೆ. ಆತ್ಮ ಸಂಬಂಧ ವಿಚ್ಛೇದದಿಂದ ಹೇಗೆ ಬಲಸಂಘಾತರೂಪೀ ಶರೀರವು ಅವ್ಯಕ್ತಬಲಗರ್ಭದಲ್ಲಿ ವಿಲೀನವಾಗುತ್ತಾ ‘ಶರೀರ’ ಎಂಬಭಿಧಾನವನ್ನು ಬಿಟ್ಟು ಕೇವಲ ಅವ್ಯಕ್ತ ಬಲಸಂಜ್ಞೆಯಲ್ಲಿ ಪರಿಣತವಾಗುತ್ತದೆ. ಹಾಗೇ ಶರೀರತ್ರಯಿಯ ಆತ್ಯನ್ತಿಕ ಉಚ್ಛೇದದಿಂದ ಆತ್ಮವೂ ವಿಶುದ್ಧರಸರೂಪದಲ್ಲಿ ಪರಿಣತವಾಗುತ್ತಾ ನಿತ್ಯಶುದ್ಧಬುದ್ಧ-ಮುಕ್ತ ಪರಾತ್ಪರ ಪುರುಷದಲ್ಲಿ ಲೀನವಾಗುತ್ತಾ ‘ಆತ್ಮಾ’ ಎಂಬಭಿಧಾನವನ್ನು ಬಿಟ್ಟು ಕೇವಲ ಅವ್ಯಕ್ತ ‘ರಸ’ ಸಂಜ್ಞೆಯಲ್ಲಿ ಪರಿಣತವಾಗುತ್ತದೆ. ವಸ್ತು-ತಸ್ತು ಇನ್ನೂ ಸೂಕ್ಷ್ಮದೃಷ್ಟಿಯಿಂದ ವಿಚಾರ ಮಾಡಲು, ‘ಆತ್ಮಾ ಶರೀರ’ ಎರಡರ ಸ್ವರೂಪದ ಸತ್ತೆಯು ಹಾಗೂ ತದನುಗತ ಸಾಪೇಕ್ಷಭಾವವುಳ್ಳ ಸತ್ಕಾರ್ಯವಾದಸಿದ್ಧಾಂತದ ಅನುಸಾರ ಏಕಾನ್ತತಃ ಶಾಶ್ವತವಾಗಿದೆ ಎಂಬ ನಿಷ್ಕರ್ಷೆಗೆ ನಾವು ಬರಬೇಕಾಗುತ್ತದೆ. ರಸಾವಸ್ಥೆಯಲ್ಲಿ ಪರಿಣತ ಆತ್ಮದ ಶರೀರವು ಬಲಾವಸ್ಥೆಯಲ್ಲಿ ಪರಿಣತ ಶರೀರವಾಗಿದೆ. ರಸವು ಬಲಸಾಪೇಕ್ಷವಾಗಿದ್ದರೆ, ಬಲವು ರಸಸಾಪೇಕ್ಷವಾಗಿದೆ. ರಸವು ಬಲದ ಸರ್ವಥಾ  ಪಾರ್ಥಕ್ಯವಾಗುವಂತಹಾ ಅವಸರವು ಎಂದೂ ಉಂಟಾಗುವುದಿಲ್ಲ.  ರಸಪ್ರಧಾನ ಶರೀರಸಾಪೇಕ್ಷ- ಅಮೃತ-ಅನಿರುಕ್ತ-ಅಮೂರ್ತ್ತ ಆತ್ಮ, ಹಾಗೇ ಬಲಪ್ರಧಾನ ಆತ್ಮಸಾಪೇಕ್ಷ-ಮರ್ತ್ಯ-ನಿರುಕ್ತ-ಮೂರ್ತ್ತ ಶರೀರ, ಇವೆರಡರ ಸಮಷ್ಟಿಯೇ ‘ಶರೀರೀ’ - ‘ದೇಹೀ’ ‘ಪ್ರಜಾಪತಿ’ ‘ಆತ್ಮನ್ವೀ’ ಇತ್ಯಾದಿ ಹೆಸರುಗಳಿಂದ ವ್ಯವಹರಿಸಲ್ಪಟ್ಟಿದೆ. ಪೂರ್ವಕಥನಾನುಸಾರ ಹೇಗೆ ಈ ಶರೀರಿಯ ಶರೀರವು ಪಿತೃಪಿಣ್ಡಪ್ರವರ್ಗ್ಯಭೋಗದ ಸಂಬಂಧದಿಂದ ಷಾಟ್‍ಕೌಶಿಕವಾಗಿದೆಯೋ, ಹಾಗೆಯೇ ಆತ್ಮ-ಶರೀರ ಸಮಷ್ಟಿ ಲಕ್ಷಣವುಳ್ಳ ಸ್ವಯಂ ಈ ‘ಶರೀರಿಯೂ’ ‘ಷಾಟ್‍ಕೌಶಿಕ’ ಎಂದೇ ಒಪ್ಪಲಾಗಿದೆ. ಮತ್ತೊಂದು ರೀತಿಯಲ್ಲಿ ವಿವರಿಸುವುದಾದರೆ ಶರೀರ-ಆತ್ಮ ಸಮಷ್ಟಿ ಲಕ್ಷಣವುಳ್ಳ ಅಧ್ಯಾತ್ಮಸಂಸ್ಥಾವೂ ಶರೀರವತ್ ಷಾಟ್‍ಕೌಶಿಕೀ ಆಗುತ್ತಿದೆ. ಅಧ್ಯಾತ್ಮದ (ಶರೀರದ) ಈ ೬ ಕೋಶಗಳ ಸಂಕ್ಷಿಪ್ತ ದಿಗ್ದರ್ಶನ ಮಾಡಿಸುವುದೇ ಆತ್ಮಸ್ವರೂಪದ ಪರಿಚಯ ಮಾಡಿಕೊಡುವುದಾಗಿದೆ. ಅದೇ ?್ರಕೃತ ಪರಿಚ್ಛೇದದ ಮುಖ್ಯ ಪ್ರತಿಪಾದ್ಯ ವಿಷಯವಾಗಿದೆ.

ಶರೀರಿಯಲ್ಲಿ, ಯಾವುದನ್ನು ನಾವು ‘ಪುರುಷ’ ಎಂದು ಕರೆದಿದ್ದೇವೆಯೋ, ಸಾಮನ್ಯವಾಗಿ ಅದು  ಆತ್ಮಾ-ಶರೀರ ಎಂಬೆರಡು ಭಾವಗಳೇ ಪ್ರತೀತವಾಗುತ್ತದೆ. ಆದರೆ ಸೂಕ್ಷ್ಮ ದ್ರಷ್ಟಾ ವೈಜ್ಞಾನಿಕರು ಈ ಪುರುಷ ಸಂಸ್ಥಾದಲ್ಲಿ
೧. ಅನ್ನ
೨. ಪ್ರಾಣ
೩. ಮನ
೪. ವಿಜ್ಞಾನ
೫. ಆನಂದ
೬. ಸತ್ಯ
ಎಂಬ ೬ ಭಾವಗಳ ದರ್ಶನ ಪಡೆದಿದ್ದಾರೆ. ಹಾಗೂ ಇವೇ ೬ ಭಾವಗಳ ಆಧಾರದಲ್ಲಿ ಅವರು ಪುರುಷ-ಸಂಸ್ಥಾಗಳನ್ನೂ ಶರೀರವತ್ ಷಾಟ್‍ಕೌಶಿಕವೆಂದು ಘೋಷಿಸಿದ್ದಾರೆ.


ಉಕ್ತ ಆರೂ ಆಧ್ಯಾತ್ಮಿಕ ಕೋಶಗಳನ್ನು ನಾವು ‘೫-೧’ ಎಂಬ ಕ್ರಮದಲ್ಲಿ ಅದೃಶ್ಯ-ದೃಶ್ಯದ ಸಾಪೇಕ್ಷೆಯಿಂದ ಎರಡು ವಿಭಾಗ ಮಾಡುತ್ತೇವೆ. ಸತ್ಯ, ಆನಂದ, ವಿಜ್ಞಾನ, ಮನ, ಪ್ರಾಣ ಈ ೫ ಕೋಶಗಳು ಅದೃಶ್ಯವಾಗಿದ್ದು, ಚರ್ಮಚಕ್ಷುಗಳಿಂದ ಇವುಗಳ ಪ್ರತ್ಯಕ್ಷವು ಅಸಂಭವ. ಹಾಗಾಗಿ ಈ ಪಂಚಕೋಶ ಸಮಷ್ಟಿಯನ್ನು ‘ಅನ್ತಃಸಂಸ್ಥಾ’ ಎನ್ನಲಾಗಿದೆ. ಅನ್ನ ಎಂಬ ಹೆಸರಿನ ಮೊದಲ ಕೋಶವು ದೃಶ್ಯವಾಗಿದೆ. ಹಾಗಾಗಿ ಇದನ್ನು ‘ಬಹಿಃಸಂಸ್ಥಾ’ ಎನ್ನಲಾಗಿದೆ. ಈ ಎರಡು ಸಂಸ್ಥಾಗಳಲ್ಲಿ ಯುಕ್ತ ೬ ಕೋಶಗಳ ಪರಸ್ಪರ ದೃಷ್ಟಿಕೋನದಿಂದ ‘೧-೪-೧’ ಎಂಬ ಕ್ರಮದಿಂದ ಮೂರು ವಿಭಾಗ ಮಾಡಲಾಗುತ್ತದೆ. ಆರನೆಯ ಸತ್ಯಕೋಶವು ಮುಖ್ಯ ವಿಭಾಗವಾಗಿದೆ, ಇದೇ ‘ಆತ್ಮಾ’. ೫-೪-೩-೨ ಸಂಖ್ಯೆಯುಳ್ಳ ಆನಂದ-ವಿಜ್ಞಾನ-ಮನ-ಪ್ರಾಣ ಎಂಬೀ ನಾಲ್ಕು ಕೋಶಗಳ ಸಮಷ್ಟಿಯೇ ‘ಅತಃಶರೀರ’ ಆಗಿದೆ. ಉಳಿದ ಒಂದು ಅನ್ನಕೋಶವು ‘ಬಹಿಃಶರೀರ’ ಆಗಿದೆ. ಇದೇ ದೃಷ್ಟಿಯಿಂದ ಸತ್ಯಕೋಶವು ಆತ್ಮವಾಗಿದ್ದು, ಉಳಿದ ಪಂಚಕೋಶಸಮಷ್ಟಿಯೇ ‘ಶರೀರ’ ಆಗಿದೆ, ಅವೆರಡರ ಸಮಷ್ಟಿಯೇ ‘ಶರೀರೀ’ ಎಂದಾಗುತ್ತದೆ, ಆಧಿದೈವತ ಪುರುಷದೊಂದಿಗೆ ಹೋಲಿಕೆಯಾಗುತ್ತಿದೆಯೋ ಅಂತಹಾ ಅಧ್ಯಾತ್ಮಸಂಸ್ಥಾ ಇದೇ –


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment