Tuesday, 9 October 2018

ಆತ್ಮಗತಿಯ ಮೂಲಕ ಆತ್ಮಸ್ವರೂಪದ ಪರಿಚಯ – ಅನ್ನಮಯ ಕೋಶ (೨)


೧. ಅನ್ನಮಯಕೋಶಃ (ಅನ್ನಮ್) -

ಸತ್ಯ-ಜ್ಞಾನ-ಅನನ್ತಲಕ್ಷಣ, ಗುಹಾನಿಹಿತ, ಪರಮಾಕಾಶಪ್ರತಿಷ್ಠಿತ, ಸಚ್ಚಿದಾನನ್ದಘನ, ಸರ್ವಧರ್ಮೋಪಪನ್ನ ಆಧಿದೈವಿಕ ಸತ್ಯಬ್ರಹ್ಮವು ಎಲ್ಲಿ ತನ್ನ ಮನಃ ಪ್ರಾಣ-ವಾಗ್‍ಗರ್ಭಿತ ಅನನ್ದವಿಜ್ಞಾನಮನೋಮಯ ಮುಕ್ತಿಸಾಕ್ಷೀ ವಿಧ್ಯಾಭಾಗದ ಮುಮುಕ್ಷೆಯಿಂದ ಸೃಷ್ಟಿಗ್ರಂಥಿ ವಿಮೋಕದ ಕಾರಣವಾಗುತ್ತದೆ. ಅದೇ ಈ ಸತ್ಯಬ್ರಹ್ಮ ಆನನ್ದ-ವಿಜ್ಞಾನ-ಮನೋಗರ್ಭಿತ ಮನಃ ಪ್ರಾಣ ವಾಙ್ಮಯ ಸೃಷ್ಟಿಸಾಕ್ಷಿಯ ಭಾಗದಿಂದ ಸಿಸೃಕ್ಷೆಯಿಂದ ಸೃಷ್ಟಿ-ಗ್ರಂಥಿ-ಬನ್ಧನದ ಕಾರಣವಾಗುತ್ತದೆ. ಸೃಷ್ಟಿಸಾಕ್ಷಿಯಾದ ಆನನ್ದ ವಿಜ್ಞಾನಘನ ಮನೋಮಯ ಪ್ರಾಣಗರ್ಭಿತ ವಾಕ್ ತತ್ತ್ವವೇ ಸೃಷ್ಟಿಯ (ಭೂತಸೃಷ್ಟಿಯ) ಮೂಲಪ್ರಭಾ ಎಂದಾಗುತ್ತದೆ. ಆನನ್ದವಿಜ್ಞಾನಘನ ಮನದಿಂದ ಕಾಮನೆಯ (ಸಿಸೃಕ್ಷಾ) ಉದಯವಾಗುತ್ತದೆ. ಇದನ್ನು ‘ಏಕೋಽಹಂ ಬಹುಸ್ಯಾಮ್’ ‘ಪ್ರಜಾಯೇಯ’ ಎಂಬೀ ಶಬ್ದಗಳಲ್ಲಿ ಅಭಿನಯ ಮಾಡಲ್ಪಟ್ಟಿದೆ. ಪ್ರಾಣಭಾಗದಿಂದ ತಪೋಲಕ್ಷಣದ ಅನ್ತರ್ವ್ಯಾಪಾರದ ಉದಯವಾಗುತ್ತದೆ, ಹಾಗೂ ವಾಕ್‍ ಭಾಗದಿಂದ ಶ್ರಮಲಕ್ಷಣದ ಬಹಿರ್ವ್ಯಾಪಾರದ ಉದಯವಾಗುತ್ತದೆ. ಕಾಮ-ತಪಃ-ಶ್ರಮ, ಸೃಷ್ಟಿಕರ್ಮ್ಮ ಸಹಯೋಗೀ ಈ ಸಾಮಾನ್ಯ ಸೃಷ್ಟ್ಯನುಬನ್ಧನಗಳಿಂದ ಮೊತ್ತಮೊದಲಿಗೆ ‘ಆಕಾಶ’ ಎಂಬ ಹೆಸರಿನ ಮಹಾಭೂತದ ವ್ಯಕ್ತೀಭಾವ ಆಗುತ್ತದೆ. ವ್ಯಕ್ತೀಭಾವ ಎಂದು ಏಕೆ ಹೇಳಿದ್ದೆಂದರೆ ‘ಮನಃ-ಪ್ರಾಣ-ವಾಕ್’ ಸಮಷ್ಟಿರೂಪ ಸೃಷ್ಟಿಸಾಕ್ಷೀ ಸತ್ಯಬ್ರಹ್ಮದ ಮನಃಕಲೆಯ ಮೇಲೆ ಪ್ರತಿಷ್ಠಿತ ಪ್ರಾಣಕಲೆಯು ಯತ್-ಲಕ್ಷಣ ಗತಿಯಾಗಿದೆ, ಹಾಗೇ ವಾಕ್ ಕಲೆಯು ಜೂ-ಲಕ್ಷಣ ಸ್ಥಿತಿ ಆಗಿದೆ. ಜೂ-ರೂಪೀ ಸ್ಥಿತಿಯು ಆಕಾಶವಾಗಿದೆ, ಯತ್-ರೂಪೀ ಗತಿಯು ವಾಯು (ಸುಸೂಕ್ಷ್ಮಸೂತ್ರ ವಾಯು) ಆಗಿದೆ. ಇವೆರಡರ ಸಮಷ್ಟಿಯೇ ‘ಯಜ್ಜೂ’ ಲಕ್ಷಣವುಳ್ಳ ‘ಯಜುರ್ವೇದ’ ಆಗಿದೆ. ಮನೋಮಯೀ ಸತ್ಯಬ್ರಹ್ಮ ಕಲೆಯ ಮೇಲೆ ಪ್ರತಿಷ್ಠಿತ ಯಜುರ್ವೇದವು ಪ್ರಾಣ-ವಾಕ್‍ಗಳ ಸಮಷ್ಟಿಮಾತ್ರ ಆಗಿದೆ. ಇದರಲ್ಲಿ ಅವಿಕುರ್ವಾಣ ಪ್ರಾಣವು ನಿತ್ಯ ಮನಃ ಕಲೆಯಲ್ಲಿ ಅನ್ತರ್ಭೂತವಾಗಿರುತ್ತದೆ. ಹಾಗೇ ವಿಕುರ್ವಾಣ ವಾಕ್ ಕಲೆಯು (ಆಕಾಶವು) ಭೂತಮರ್ಯ್ಯಾದೆಯಲ್ಲಿ ಸಮಾವಿಷ್ಟವಾಗಿರುತ್ತದೆ. ಅದೇ ವ್ಯಕ್ತರೂಪಕ್ಕೆ ಬಂದು ತನ್ನ ವಾಗ್ ಭಾಗದಿಂದ ‘ಪ್ರಕಾಶ’ ರೂಪದಲ್ಲಿ ಪರಿಣತವಾಗುತ್ತದೆ. ಈ ರೀತಿ ‘ತಸ್ಮಾದ್ವಾ ಏತಸ್ಮಾದಾತ್ಮನಃ’ದ ‘ಆತ್ಮನಃ’ದಿಂದ ‘ಮನೋಗರ್ಭಿತ ಪ್ರಾಣೇನ’ ಎಂಬ ತಾತ್ಪರ್ಯವು ಬರುತ್ತದೆ. ಹಾಗೇ ‘ಆಕಾಶಃ ಸಮ್ಭೂತಃ’ ಎಂಬ ವಾಕ್ಯದಿಂದ ‘ವಾಚೋ ವ್ಯಕ್ತಿಭಾವಃ’ ಎಂಬ ತಾತ್ಪರ್ಯವು ಬರುತ್ತದೆ. ಇದರಿಂದಲೇ ‘ಮನಃಪ್ರಾಣವಾಙ್ಮಯ’ ಸತ್ಯಬ್ರಹ್ಮದ ಮನಃಪ್ರಾಣ ಭಾಗವು ಆತ್ಮಸೃಷ್ಟಿಯ ಪ್ರತಿಷ್ಠೆ ಆಗಿದ್ದರೆ ವಿಕುರ್ವಾಣ ವಾಗ್ ಭಾಗವು ಶರೀರಸೃಷ್ಟಿಯ ಪ್ರತಿಷ್ಠೆ ಆಗಿದೆ ಎಂಬುದೂ ಸಿದ್ಧವಾಗುತ್ತದೆ. ವಾಙ್ಮಯ, ಅಂದರೆ ವಾಗ್‍ರೂಪ ಪ್ರಕಾಶ ಎಂಬ ಹೆಸರಿನ ಮೊದಲನೆಯ ಭೂತವೇ ಬಲಗ್ರನ್ಥಿಯ ತಾರತಮ್ಯದಿಂದ ಅವಿಕೃತ-ಪರಿಣಾಮವಾದ ದ್ರಷ್ಟ್ಯಾ ಉತ್ತರೋತ್ತರ ನಾಲ್ಕು ಭೂತಗಳ ಜನಕವಾಗುತ್ತಾ ಪಂಚಭೌತಿಕ ವಿಶ್ವಸ್ವರೂಪದಲ್ಲಿ ಪರಿಣತವಾಗುತ್ತಿದೆ, ಉದಾ – ‘ವಾಚೀಮಾವಿಶ್ವಾ ಭುವನಾನ್ಯರ್ಪಿತಾ’ – ‘ಅಥೋ ವಾಗೇವೇದಂಸರ್ವಂ’ – ‘ವಾಗ್‍ವಿವೃತಾಶ್ಚ ವೇದಾಃ’ ಇತ್ಯಾದಿ ಶ್ರುತಿಗಳಿಂದ ಪ್ರಮಾಣಿತವಾಗಿದೆ.

ಈ ಸಂಬಂಧದಲ್ಲಿ ಒಂದು ವಿಚಾರದ ಸ್ಪಷ್ಟೀಕರಣ ಮಾಡಿಕೊಳ್ಳಬೇಕು. ಸತ್ಯಬ್ರಹ್ಮದ ವಾಸ್ತವಿಕ ಸ್ವರೂಪವು ಅಶೇಷಬಲಗರ್ಭಿತ-ರಸಾತ್ಮಕವೆಂದೇ ಒಪ್ಪಲಾಗಿದೆ. ಇದನ್ನು ವಿಜ್ಞಾನ ಭಾಷೆಯಲ್ಲಿ ‘ಪರಾತ್ಪರ’ ಎಂದು ಉಪಯೋಗಿಸಲಾಗಿದೆ. ಇದೇ ಪರಾತ್ಪರ ಬ್ರಹ್ಮವು ಮುಂದುವರೆದು ಮಾಯಾಬಲೋದಯದಿಂದ ಆನನ್ದ-ವಿಜ್ಞಾನ-ಮನ-ಪ್ರಾಣ-ವಾಕ್ ರೂಪಗಳಲ್ಲಿ ಪರಿಣತವಾಗುತ್ತದೆ. ಆನನ್ದಾದಿ ಐದೂ ಚಿತಿಗಳು ಆ ರಸಮೂರ್ತ್ತಿ ಬ್ರಹ್ಮದ ಮೇಲೆ ಬಲಚಿತಿಗಳಾಗಿವೆ. ಈ ೫ ಬಲಚಿತಿಗಳಿಂದ ಅವೇ ೫ ವಿವರ್ತ್ತಭಾವಗಳಲ್ಲಿ ಪರಿಣತವಾಗುತ್ತಿದೆ. ಹೇಗೆ ಅವಾರಪಾರೀಣ ಎಂಬ ಒಂದು ಸೂತ್ರದ ಆಧಾರದಲ್ಲಿ ೫ ಮುಕ್ತಗಳು ಪ್ರತಿಷ್ಠಿತವಾಗಿರುತ್ತವೆಯೋ, ಅಂತಹಾ ೫ ಭಿನ್ನತೆಗಳಲ್ಲಿಯೂ ಆ ಸೂತ್ರವು ಭಿನ್ನವತ್ ಪ್ರತಿಷ್ಠಿತವಾಗಿದ್ದಾಗ್ಯೂ ಅಭಿನ್ನವಾಗಿದೆ. ಹಾಗೇ ಅವಾರಪಾರೀಣವು ಒಂದು ಅಖಣ್ಡ ಪರಾತ್ಪರದ ಆಧಾರದ ಮೇಲೆ ಪ್ರತಿಷ್ಠಿತ ಆನನ್ದಾದಿ ಐದೂ ಚಿತಿಗಳಲ್ಲಿ ಭಿನ್ನವತ್ ಪ್ರತಿಷ್ಠಿತವಾಗಿದ್ದಾಗ್ಯೂ ಅದು ಅಭಿನ್ನವಾಗಿದೆ; ಏಕಾತ್ಮವಾಗಿದೆ. ಇದೇ ಆಧಾರದ ಮೇಲೆ ‘ಏತೇದಾತ್ಮ್ಯಮಿದಂ ಸರ್ವಮ್’-‘ಸರ್ವಂ ಖಲ್ವಿದಂ ಬ್ರಹ್ಮ’ ಇತ್ಯಾದಿ ಸಿದ್ಧಾಂತಗಳು ಪ್ರತಿಷ್ಠಿತವಾಗಿವೆ. ಅಂತಹಾ ಒಂದರ ಹೆಸರು ಆತ್ಮಸತ್ಯ ಎಂದು. ಇದೇ ಆನನ್ದಾದಿ ಬಲಸತ್ಯಗಳ ಆಧಾರಭೂತ ‘ಸತ್ಯಸ್ಯಸತ್ಯಮ್’ ಆಗಿದೆ. ಈ ಸತ್ಯಸ್ಯಸತ್ಯಂ ಅವಾರಪಾರೀಣ ಅಭಿನ್ನ ಆತ್ಮದ ಮೇಲೆ ಮೊತ್ತಮೊದಲು ಆನನ್ದಚಿತಿ ಇದೆ, ಅನಂತರ ಕ್ರಮಶಃ ವಿಜ್ಞಾನ-ಮನ-ಪ್ರಾಣ-ವಾಕ್ ಎಂಬ ನಾಲ್ಕು ಚಿತಿಗಳು ಪ್ರತಿಷ್ಠಿತವಾಗಿವೆ. ‘ತತ್ ಸೃಷ್ಟ್ವಾ ತದೇವಾನುಪ್ರವಿಶತ್’ ನ್ಯಾಯದಿಂದ ಸತ್ಯವು ಆನನ್ದದಲ್ಲಿ, ಸತ್ಯ-ಆನನ್ದವು ವಿಜ್ಞಾನದಲ್ಲಿ, ಸತ್ಯಾನನ್ದವಿಜ್ಞಾನವು ಮನದಲ್ಲಿ, ಸತ್ಯಾನನ್ದವಿಜ್ಞಾನಮನವು ಪ್ರಾಣದಲ್ಲಿ, ಸತ್ಯಾನನ್ದವಿಜ್ಞಾನಮನಃಪ್ರಾಣವು ವಾಕ್ಕಿನಲ್ಲಿ ಅನ್ತರ್ಭೂತವಾಗಿವೆ. ಇದೇ ಕ್ರಮವು ವಾಕ್ (ಆಕಾಶ) ಭೂತದಿಂದ ಉತ್ಪನ್ನ ವಾಯ್ವಾದಿ ಶೇಷ ಭೂತಸರ್ಗಗಳಲ್ಲಿಯೂ ಇದೆಯೆಂದು  ತಿಳಿದುಕೊಳ್ಳಬೇಕು. ಇದೇ ಸೃಷ್ಟ-ಪ್ರವಿಷ್ಟ ಮರ್ಯ್ಯಾದೆಯಿಂದ ಸರ್ವತ್ರ ಎಲ್ಲಾ ಅವಸ್ಥೆಗಳಲ್ಲಿ ಅದರ ಉಪಲಬ್ಧಿಯು ಸಂಭವವಾಗಿದೆ. ಉದಾ – ‘ಭೂತೇಷು ಭೂತೇಷು ವಿಚಿತ್ಯಧೀರಾಃ ಪ್ರೇತ್ಯಾಸ್ಮಾಲೋಕಾದಮೃತಾ ಭವನ್ತಿ’ ಯಿಂದ ಸ್ಪಷ್ಟವಾಗುತ್ತದೆ. ಈ ಸ್ಥಿತಿಯನ್ನು ಲಕ್ಷ್ಯದಲ್ಲಿರಿಸಿ ಕ್ರಮಪ್ರಾಪ್ತ ‘ಅನ್ನಮಯ’ ಕೋಶದ ವಿಚಾರ ಮಾಡೋಣ.

ಆತ್ಮದಿಂದ (ಮನೋಗರ್ಭಿತಪ್ರಾಣದಿಂದ) ಆಕಾಶವು (ವಾಕ್) ಉತ್ಪನ್ನ(ವ್ಯಕ್ತ)ವಾಯಿತು. ಆಕಾಶದಿಂದ ಬಲಗ್ರನ್ಥಿಯ (ಇಂದ್ರದ) ಮುಖೇನ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಪೃಥಿವೀ ಉತ್ಪನ್ನವಾಯಿತು. ಆಕಾಶ-ವಾಯು-ಅಗ್ನಿ-ಜಲ ಸಹಯೋಗದಿಂದ ಪಾರ್ಥಿವ ಭಾಗದಿಂದ ಗೋಧೂಮ-ಯವ-ತಂಡುಲಾದಿ ಔಷಧಿಗಳು ಉತ್ಪನ್ನವಾದವು. ಔಷಧಿಗಳ ವಿತುಷೀಕರಣ-ಪೇಷಣ-ಪರಿಪಾಕಾದಿಗಳಿಂದ ಭೋಗ್ಯ ಯೋಗ್ಯ ಅನ್ನದ ಸ್ವರೂಪವು ನಿಷ್ಪನ್ನವಾಯಿತು. ಈ ಅನ್ನದಲ್ಲಿ ಅದೇ ಸೃಷ್ಟಪ್ರವಿಷ್ಟ ನ್ಯಾಯದಿಂದ ಪೂರ್ವದ ಎಲ್ಲಾ ಪರ್ವಗಳು ಗರ್ಭೀಭೂತವಾಗಿವೆ. ಹಾಗಾಗಿಯೇ ಅನ್ನವನ್ನು ‘ಬ್ರಹ್ಮ’ ಎಂದು ಕರೆಯಲು ಅನ್ವರ್ಥವಾಗುತ್ತದೆ. ಈ ಅನ್ನವು ಪುರುಷಾಗ್ನಿಯಲ್ಲಿ ಆಹುತಿಯಾಯಿತು. ಪುರುಷಾಗ್ನಿಯಲ್ಲಿ ಹುತ ಅನ್ನವು ಷಡ್‍ಧಾತ್ವನಂತರ ರೇತೋರೂಪದಲ್ಲಿ ಪರಿಣತವಾಯಿತು.  ಈ ರೇತವು ಯೋಷಿದಗ್ನಿಯಲ್ಲಿ ಆಹುತಿಯಾಯಿತು. ಯೋಷಿದಗ್ನಿ ಪುರುಷರೇತ, ಇವೆರಡರ ಸಮನ್ವಯದಿಂದ ಗರ್ಭಾಧಾನ ಆಯಿತು. ಚಾನ್ದ್ರಸಮ್ವತ್ಸರದಲ್ಲಿ ಗರ್ಭಪುಷ್ಟಿಯಾಯಿತು. ದಶಮಾಸಾಂತರ ಅದೇ ಸಿಕ್ತರೇತವು ಪುರುಷ (ಅಪತ್ಯ) ರೂಪದಲ್ಲಿ ಪರಿಣತವಾಗಿ ಭೂಮಿಷ್ಠವಾಗುತ್ತದೆ. ಇದನ್ನು ಪ್ರತ್ಯಕ್ಷ ದೃಷ್ಟಿಯಿಂದ ‘ಅನ್ನರಸಮಯ’ ಎನ್ನಬಹುದು. ಪಂಚಕೋಶಗರ್ಭಿತ ಇದೇ ಪುರುಷವು (ಶರೀರವು) ಮೊದಲ ಅನ್ನರಸಮಯಕೋಶವಾಗಿದೆ. ಇದೇ ಸಂಬಂಧದಲ್ಲಿ ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದೇನೆಂದರೆ, ಹೇಗೆ ಎಲ್ಲಾ ಪಾರ್ಥಿವ ಜಡ-ಚೇತನ ಪದಾರ್ಥಗಳು ಬಾಹ್ಯಸ್ತರಾಪೇಕ್ಷೆಯಿಂದ ಅನ್ನರಸಮಯವಾಗುತ್ತಾ ‘ಪುರುಷ’ ಎಂದು ಕರೆಯಿಸಿಕೊಳ್ಳಬಲ್ಲವೋ, ಆದರೆ ಯಾವುದೋ ವಿಶೇಷ ಕಾರಣದಿಂದ ‘ಪುರುಷ’ ಶಬ್ದವು ಮುಂದುವರೆದು ಕೇವಲ ಮಾನವ ವರ್ಗಕ್ಕೆ ಮಾತ್ರವೇ ರೂಢಿಯಲ್ಲಿ ಉಳಿಯಿತು. ಇದಕ್ಕೆ ವಿಶೇಷ ಕಾರಣವಿದೆ – ಪೂರ್ಣ ಆಧಿದೈವಿಕ ಬ್ರಹ್ಮವು ಪೂರ್ಣ ಪ್ರಮಾಣದಲ್ಲಿ ಮಾನವ ಸರ್ಗದಲ್ಲಿ ಸಮನ್ವಯವಾದದ್ದು. ಇತರೆ ಸರ್ಗಗಳಲ್ಲಿ ಮಾತ್ರಾಲ್ಪತೆಯೊಂದಿಗೆ ಮಾತ್ರಾ ಹ್ರಾಸವೂ ಇದೆ, ಆದರೆ ಮಾನವ ಸರ್ಗದಲ್ಲಿ ಕೇವಲ ಮಾತ್ರಾಲ್ಪತೆಯೇ ಇದೆ. ಈ ಅಲ್ಪತೆಯ ಅತಿರಿಕ್ತವಾಗಿ ಆಧಿದೈವಿಕ ಪೂರ್ಣೇಶ್ವರ ವಿರಾಟ್ ಪ್ರಜಾಪತಿಯ ಸಂಪೂರ್ಣ ಮಾತ್ರಾಗಳು ಮಾನವ ಸರ್ಗದಲ್ಲಿ ಸಮಾವೇಶಗೊಂಡಿವೆ. ಇದೇ ಆಧಾರದಲ್ಲಿ ಇದನ್ನು ಉಳಿದ ಸರ್ಗಗಳ ಉಪೇಕ್ಷೆಯಲ್ಲಿ ಪ್ರಜಾಪತಿಯಿಂದ ನೇದಿಷ್ಠ (ಸಮ ಸಂಬಂಧೀ, ಸಮತುಲಿತ) ಎಂದು ಒಪ್ಪಲಾಗಿದೆ. ಉದಾ – ‘ಪುರುಷೋ ವೈ ಪ್ರಜಾಪತೇರ್ನೇದಿಷ್ಠಮ್’ (ಶತ ೪|೩|೪|೩) ಇತ್ಯಾದಿ ಬ್ರಾಹ್ಮಣ ಶ್ರುತಿಗಳಿಂದ ಪ್ರಮಾಣಿತವಾಗಿದೆ. ಇದೇ ಪೂರ್ಣತೆಯ ಆಧಾರದಲ್ಲಿ ‘ಪುರುಷ’ ಶಬ್ದವು ಮಾನವ ವರ್ಗಕ್ಕಾಗಿಯೇ ರೂಢಿಯಾಗಿದೆ.

ರೇತಃಸೇಕದಿಂದ ಉತ್ಪನ್ನವಾದಂತಹ ಪೂರ್ಣಮೂರ್ತಿಯು ಅನ್ನರಸಮಯವಾಗಿದ್ದು, ಇದೇ ಪುರುಷವು ಶರೀರಚಿತಿ-ವೈಶಿಷ್ಟ್ಯದಿಂದ  ಮುಂದುವರೆದು ‘ಸಪ್ತಪುರುಷಪುರುಷಾತ್ಮಕಪುರುಷ’ ಎಂದು ಕರೆಯಲ್ಪಡುತ್ತದೆ. ಶಿರ, ಆತ್ಮ, ಪಕ್ಷ, ಪುಚ್ಛ ಎಂಬ ೪ ಸಂಸ್ಥಾಗಳ ಭೇದದಿಂದ ಈ ಚಿತ್ಯಪುರುಷವು ಸಪ್ತಚಿತಿ-ರೂಪದಲ್ಲಿ ಪರಿಣತವಾಗುತ್ತಿದ್ದಾನೆ. ಇದು ಶತಪಥದ ಚಯನವಿಜ್ಞಾನ-ಪ್ರಕರಣದಲ್ಲಿ ವಿಸ್ತಾರವಾಗಿ ಪ್ರತಿಪಾದನೆಯಾಗಿದೆ. ಸರ್ವಾಂಗ ಶರೀರದಿಂದ ಮಸ್ತಕವನ್ನು ಬಿಟ್ಟು ಶೇಷ ಭಾಗದ ವಿಚಾರ ಮಾಡಿರಿ. ಈ ಶೇಷ ಭಾಗವನ್ನು ಸಮಾನ ರೂಪದಿಂದ ಹೋಲುವ ಏಳು ಭಾಗಗಳಲ್ಲಿ ವಿಭಜಿಸಿರಿ.

೧. ವಾಮ-ಹಸ್ತಪಾದಲಕ್ಷಣವು ಉತ್ತರಪಕ್ಷದಲ್ಲಿ ಸಪ್ತಭಾಗಾತ್ಮಕ ಅನ್ನರಸದ ಒಂದು ಭಾಗವು ಭುಕ್ತವಾಗಿದೆ.

೨. ಹಾಗೇ ದಕ್ಷಿಣ-ಹಸ್ತಪಾದಲಕ್ಷಣವು ದಕ್ಷಿಣಪಕ್ಷದಲ್ಲಿ ಒಂದು ಭಾಗವು ಭುಕ್ತವಾಗಿದೆ.

೩-೬. ಮೂಲಗ್ರಂಥಿಯಿಂದ ಆರಂಭಿಸಿ ಕಂಠಪ್ರದೇಶ ಪರ್ಯಂತ ವ್ಯಾಪ್ತ ಮಧ್ಯಾಂಗದಲ್ಲಿ ನಾಲ್ಕು ಭಾಗವು ಭುಕ್ತವಾಗಿದೆ.

೭. ಮೇರುದಂಡದ (ಬೆನ್ನುಮೂಳೆಯ) ಅಂತಿಮವು ಪಶ್ಚಿಮಸೀಮೆಯಲ್ಲಿ ಪ್ರತಿಷ್ಠಿತ, ಶರೀರಯಷ್ಟಿಯನ್ನು ವಿತತವಾಗಿರಿಸುವ ತ್ರಿಕಾಸ್ಥಿಯೇ ಪುಚ್ಛಪ್ರತಿಷ್ಠೆ ಆಗಿದೆ. ಇದರಲ್ಲಿ ಒಂದು ಭಾಗವು ಭುಕ್ತವಾಗಿದೆ.

ಹೇಗೆ ಪಕ್ಷಿಯು ತನ್ನೆರಡೂ ಪಕ್ಷಗಳಿಂದ ಸ್ವಕರ್ಮ್ಮ ಹಾಗೂ ಮತಿಯಲ್ಲಿ ಸಮರ್ಥವಾಗುತ್ತದೋ, ಅಂತೆಯೇ ವಾಮ-ದಕ್ಷಿಣ ಹಸ್ತಪಾದದಿಂದ ಗತಿ ಹಾಗೂ ಕರ್ಮಗಳು ಸಂಚಲನಗೊಳ್ಳುತ್ತವೆ. ಇದೇ ಸಾದೃಶ್ಯದಿಂದ, ಒಂದೊಂದು ಭಾಗಾತ್ಮಕ ವಾಮದಕ್ಷಿಣ ಹಸ್ತ-ಪಾದಗಳನ್ನು ಉತ್ತರ-ದಕ್ಷಿಣ ಪಕ್ಷ ಎಂದು ಒಪ್ಪಲಾಗಿದೆ. ಹೇಗೆ ಚೇತನಾಧಾತುಲಕ್ಷಣ  ಆತ್ಮಸತ್ತೆಯಿಂದ ಶರೀರಯಷ್ಟಿಯು ವಿಧೃತವಾಗಿರುತ್ತದೋ, ಹಾಗೆಯೇ ಚತುರ್ಭಾಗಾತ್ಮಕ ಮಧ್ಯಾಂಗದ ಆಧಾರದಲ್ಲಿಯೇ ಶಿರ-ಪಾದ-ಹಸ್ತ ಇತ್ಯಾದಿ ಇತರೆ ಅವಯವಗಳು ಪ್ರತಿಷ್ಠಿತವಾಗಿರುತ್ತವೆ. ಮಧ್ಯಾಂಗೋಪಲಕ್ಷಿತ ಉದರಭುಕ್ತ ರಸದಿಂದಲೇ ಸರ್ವಾಂಗ ಶರೀರದ ಪೋಷಣೆ ರಕ್ಷಣೆ ಆಗುತ್ತದೆ. ಆದ್ದರಿಂದ ಭಾಗ ಚತುಷ್ಟಯಾತ್ಮಕ ಈ ಮಧ್ಯತನೂವನ್ನು ‘ಆತ್ಮಾ’ ಎನ್ನಲಾಗಿದೆ. ಈ ಆತ್ಮ ಶಬ್ದವು ಮಧ್ಯಾಂಗಲಕ್ಷಣ ತನುವಿನ ವಾಚಕವೇ ಆಗಿದೆ, ಅದಕ್ಕೆ ‘ಆತ್ಮಾ ವೈ ತನೂಃ’ (ಶತ ೬|೭|೨|೬) ಎಂಬ ನಿಗಮವಾಕ್ಯವು ಪ್ರಸಿದ್ಧವಾಗಿದೆ. ಕನ್ನಡದ ಪ್ರಾಚೀನ ಸಾಹಿತ್ಯವಾದ ಸಿರಿಭೂವಲಯದಲ್ಲೂ ಇದಕ್ಕೆ ಹತ್ತಿರವಾದ ‘ತನುರೂಪಿನಂತಾತ್ಮ ರೂಪು’ ಎಂಬ ಉಲ್ಲೇಖ ಸಿಗುತ್ತದೆ.  ಹೇಗೆ ಪಕ್ಷಿಯ ಸರ್ವಾಂಗಶರೀರವು ಅದರ ಪುಚ್ಛಭಾಗದ ಮೇಲೆ ಪ್ರತಿಷ್ಠಿತವಾಗಿ ಊರ್ಧ್ವ ವಿತತವಾಗಿರುತ್ತದೆಯೋ, ಹಾಗೆಯೇ ಪುರುಷದ ಶರೀರವು ತನ್ನ ತ್ರಿಕಾಸ್ಥಿಯ ಮೇಲೆ ಪ್ರತಿಷ್ಠಿತವಾಗಿ ಊರ್ಧ್ವ ವಿತತವಾಗಿರುತ್ತದೆ (ವಿಸ್ತಾರ ಹೊಂದಿದೆ). ಇದೇ ಸಾದೃಶ್ಯದಿಂದ ಇದನ್ನು ‘ಪುಚ್ಛಂ ಪ್ರತಿಷ್ಠಾ’ ಎನ್ನಲಾಗಿದೆ. ಈ ಏಳು ಪುರುಷಗಳ ಸಾರ ಭಾಗವೇನಿರುವುದೋ (ಶ್ರೀ ಭಾಗ, ರಸ ಭಾಗ) ಅದುವೇ ಎಂಟನೆಯ ಶಿರೋಭಾಗ; ಅದರ ಪರಿಮಾಣವಾದರೂ ಒಂದು ಭಾಗತ್ಮಕವಾಗಿದೆ. ಆದರೆ ಒಂದೇ ಭಾಗದಲ್ಲಿ ಏಳೂ ಪುರುಷಗಳ ಸಮಾನ ಶ್ರೀಯು ಪ್ರತಿಷ್ಠಿತವಾಗಿದೆ. ಇದೇ ಸಪ್ತ ಶ್ರೀ ಸಂಬಂಧದಿಂದ ಇದನ್ನು ‘ಶಿರ’ ಎನ್ನಲಾಗಿದೆ – (ನೋಡಿ ಶತ ೬|೧|೧). ಈ ರೀತಿ ಸರಿಯಾಗಿ ಸುಪರ್ಣಪಕ್ಷಿಯಂತೆ (ಗರುಡದಂತೆ) ಈ ಅನ್ನರಸಮಯ ಪುರುಷದ ವಿತಾನ (ಮೇಲ್ಕಟ್ಟು) ಆಗಿದೆ. ಇದೇ ಆಧಾರದಲ್ಲಿ ಈ ಪುರುಷವು ‘ಸುಪರ್ಣ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ. ಈ ಸುಪರ್ಣದ ಪರಲೋಕಗತಿಯ ವಿಶ್ಲೇಷಣೆ ಮಾಡುವ ಪುರಾಣವೂ ಸುಪರ್ಣಪುರಾಣ (ಗರುಡ ಪುರಾಣ) ಎಂಬ ಹೆಸರಿನಿಂದ ವ್ಯವಹೃತವಾಗಿದೆ.

ಸರ್ವಮಾತ್ರಗರ್ಭಿತ ಇದೇ ಅನ್ನಬ್ರಹ್ಮದಿಂದ ಉಕ್ತ ಕ್ರಮಾನುಸಾರ ಪೃಥ್ವಿಯ ಮೇಲೆ (ಪಾರ್ಥಿವ ಶರೀರದಿಂದ) ಪ್ರತಿಷ್ಠಿತ ಆ ಸಂಪೂರ್ಣ ಪ್ರಜೆಗಳ ಉತ್ಪತ್ತಿಯಾಗುತ್ತದೆ. ಅನ್ನದಿಂದ ಉತ್ಪನ್ನವಾಗಿ ಅನ್ನಾದಾನ ಲಕ್ಷಣ ಭೈಷಜ್ಯ ಯಜ್ಞದಿಂದಲೇ ಈ ಪ್ರಜಾ ಆಯುರ್ಭೋಗವಿರುವಷ್ಟು ಕಾಲ ಜೀವಿತರಿದ್ದು, ಅಂತ್ಯದಲ್ಲಿ ಈ ಅನ್ನಬ್ರಹ್ಮದಲ್ಲಿಯೇ (ಪಂಚಭೂತ) ಇದರ ಲಯ ಆಗುತ್ತದೆ. ಹೇಗೆ ಐದೂ ಭೂತಗಳಲ್ಲಿ ಪೂರ್ವ-ಪೂರ್ವಭೂತ, ಉತ್ತರ-ಉತ್ತರಭೂತದ ಅಪೇಕ್ಷೆಯಿಂದ ಜ್ಯೇಷ್ಠ ಹಾಗೂ ಶ್ರೇಷ್ಠ ಎಂದು ನಂಬಲಾಗಿದೆಯೋ ಹಾಗೆಯೇ ಈ ಪಂಚಭೂತಗಳ ಅಪೇಕ್ಷೆಯಲ್ಲಿ ಪಾರ್ಥಿವ ಅನ್ನವನ್ನು ನಾವು ಜ್ಯೇಷ್ಠ ಎನ್ನಬಹುದು, ಏಕೆಂದರೆ ಇದರಲ್ಲಿ ಆ ಐದರ ಮಾತ್ರಾ ಸಮಾವಿಷ್ಟವಾಗಿರುತ್ತದೆ. ಹಾಗಾಗಿಯೇ ಇದನ್ನು ‘ಸರ್ವೌಷಧ’ ಎಂದು ಕರೆಯಲು ಅನ್ವರ್ಥವಾಗುತ್ತದೆ. ಇದೇ ಸರ್ವೌಷಧ ರೂಪೀ ಅನ್ನದಿಂದ ಭೂತ (ಭೂತಭೌತಿಕ ಸತ್ವ ಪ್ರಜಾ) ಉತ್ಪನ್ನವಾಗುತ್ತವೆ. ಇದರಿಂದಲೇ ಇವುಗಳ ಆಯತನ ವೃದ್ಧಿಯಾಗುತ್ತದೆ. ಹಾಗೇ ಪ್ರಜಾವರ್ಗದಿಂದ ಇದ್ದು ತಿನ್ನಲ್ಪಡುತ್ತದೆ, ಹಾಗಾಗಿ ‘ಅದ್ಯತೇ’ ಎಂಬ ನಿರ್ವಚನದಿಂದಲೂ ಇದನ್ನು ‘ಅನ್ನ’ ಎಂದು ಕರೆಯಬಹುದಾಗಿದೆ. ಜೊತೆಗೆ ಇದೇ ಅನ್ನವು ಸ್ವಸ್ವರೂಪ ನಿರ್ಮಾಣಕ್ಕಾಗಿ ಭೂತಗಳನ್ನೂ ತಿನ್ನುತ್ತದೆ, ಅಷ್ಟಲ್ಲದೆ ಅಂತ್ಯಕಾಲದಲ್ಲಿ ಭೂತರೂಪದಿಂದ ಇದು ಪ್ರಜಾವರ್ಗವನ್ನೂ ತನ್ನಲ್ಲಿ ಲೀನಗೊಳಿಸಿಕೊಳ್ಳುತ್ತದೆ. ಹಾಗಾಗಿ ‘ಅತ್ತಿ’ ಎಂಬ ನಿರ್ವಚನದಿಂದಲೂ ಇದನ್ನು ‘ಅನ್ನ’ ಎಂದು ಕರೆಯುವುದು ಸದಾ ಅನ್ವರ್ಥಕವೇ ಆಗಿರುತ್ತದೆ. ಇದೇ ಪಾಂಚಭೌತಿಕ ಶರೀರಾತ್ಮಕ, ಪ್ರತ್ಯಕ್ಷದೃಷ್ಟ ಈ ಮೊದಲ ಅನ್ನಮಯಕೋಶದ ಸಂಕ್ಷಿಪ್ತರೂಪದ ಪ್ರದರ್ಶನವಾಗಿದೆ. ಇದಕ್ಕೆ ನಿಮ್ನಲಿಖಿತ ಶಬ್ದಗಳಲ್ಲಿ ಸ್ಪಷ್ಟೀಕರಣವಿದೆ –

೧ – ಸತ್ಯಂ ಜ್ಞಾನಮನನ್ತಂ ಬ್ರಹ್ಮ, ಯೋ ವೇದ ನಿಹಿತಂ ಗುಹಾಯಾಮ್ |
      ಸೋಽಶ್ನುತೇ ಸರ್ವಾನ್ ಕಾಮಾನ್ ಸಹ ಬ್ರಹ್ಮಣಾವಿಪಶ್ಚಿತಾ” ಇತಿ ||

೨ – “ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ, ಆಕಾಶಾದ್ವಾಯುಃ, ವಾಯೋರಗ್ನಿಃ, ಅಗ್ನೇರಾಪಃ, ಅದ್ಭ್ಯಃ ಪೃಥಿವೀ, ಪೃಥಿವ್ಯಾ ಓಷಧಯಃ, ಓಷಧೀಭ್ಯೋಽನ್ನಂ, ಅನ್ನಾದ್ರೇತಃ, ರೇತಸಃ ಪುರುಷಃ | ಸ ವಾ ಏಷ ಪುರುಷೋಽನ್ನರಸಮಯಃ | ತಸ್ಯೇದಮೇವ ಶಿರಃ, ಅಯಂ ದಕ್ಷಿಣಃ ಪಕ್ಷಃ, ಅಯಮುತ್ತರಃ ಪಕ್ಷಃ, ಅಯಮಾತ್ಮಾ, ಇದಂ ಪುಚ್ಛಂ ಪ್ರತಿಷ್ಠಾ |”

೩ – “ಅನ್ನಂ ಬ್ರಹ್ಮೇತಿ ವ್ಯಜಾನಾತ್ ಅನ್ನಾದ್ವೈ ಪ್ರಜಾಃ ಪ್ರಜಾಯನ್ತೇ, ಯಾ ಕಾಶ್ಚ ಪೃಥಿವೀಂ ಶ್ರಿತಾಃ | ಅಥೋಽನ್ನೇನೈವ ಜೀವನ್ತಿ, ಅಥೈನದಪಿ ಯನ್ತ್ಯನ್ತತಃ ||“

೪ – “ಅನ್ನಂ ಹಿ ಭೂತಾನಾಂ ಜ್ಯೇಷ್ಠಂ ತಸ್ಮಾತ್ ಸರ್ವೌಷಧಮುಚ್ಯತೇ |
       ಸರ್ವಂ ವೈ ತೇ ಽನ್ನಮಾಪ್ನುವನ್ತಿ ಯೇಽನ್ನಂ ಬ್ರಹ್ಮೋಽಪಾಸತೇ ||
       ಅನ್ನಾದ್ ಭೂತಾನಿ ಜಾಯನ್ತೇ ಜಾತಾನ್ಯನ್ನೇನ ವರ್ದ್ಧನ್ತೇ |
       ಅದ್ಯತೇಽತ್ತಿ ಚ ಭೂತಾನಿ ತಸ್ಮಾದನ್ನಂ ತದುಚ್ಯತೇ ||”(ತೈ.ಉ. ೨|೧-೨)

ಸಪ್ತಪುರುಷಾತ್ಮಕ ಪುರುಷಾವಚ್ಛಿನ್ನಸ್ಯ ಅನ್ನಮಯಕೋಶಸ್ಯ ಪ್ರತಿಕೃತಿಃ
(ಸಪ್ತಪುರುಷಪುರುಷಾತ್ಮಕಂ-ಸಪ್ತಚಿತಿಮಯಂ-ಮರ್ತ್ಯಂ ಶರೀರಂ)ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

1 comment: