Friday, 30 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಅಪತ್ಯ-ಪತ್ಯಪುರುಷ ಮೀಮಾಂಸೆ (೨೨)

೨೨. ಅಪತ್ಯ-ಪತ್ಯಪುರುಷ ಮೀಮಾಂಸೆ-

ಹಿಂದಿನ ಲೇಖನದಲ್ಲಿ ಉಕ್ತ ೩ ಶ್ರೇಣಿಗಳಲ್ಲಿ ಅಧಃಸ್ರೋತಾವಸ್ಥಾಪನ್ನ ಗೃಹಸ್ಥರತ್ತ ಈಗ ಓದುಗರ ಧ್ಯಾನಾಕರ್ಷಿತಗೊಳಿಸಲಾಗುತ್ತದೆ. ಈ ವರ್ಗವನ್ನು ‘ಅಪತ್ಯಪುರುಷ, ಪತ್ಯಪುರುಷ’ ಭೇದದಿಂದ ೨ ಶ್ರೇಣಿಗಳಲ್ಲಿ ವಿಭಕ್ತಗೊಳಿಸಬಹುದು. ಪರಿಭಾಷಾ ಜ್ಞಾನ ವಿಲುಪ್ತತೆಯಿಂದ, ವಿಶೇಷವಾಗಿ ತತ್ತ್ವವಿಜ್ಞಾನದ ಮೂಲಕ ವೈಧಿಕ ಸ್ವಾಧ್ಯಾಯ ಪರಮ್ಪರೆಯ ಉಚ್ಛೇದದಿಂದ ವರ್ತಮಾನ ಪರಮ್ಪರೆಯಲ್ಲಿ ಅಪತ್ಯ, ಸೂನು, ತನಯ, ಇತ್ಯಾದಿ ಶಬ್ದಗಳು ಅಭಿನ್ನಾರ್ಥಕಗಳೆಂದು ನಂಬಲಾಗಿದೆ. ಆದರೆ ಈ ಶಬ್ದಗಳು ಸರ್ವಥಾ ಭಿನ್ನ ಭಿನ್ನ ಅರ್ಥಗಳ ವಾಚಕವಾಗುತ್ತಿವೆ. ಇದು ನಿಮ್ನಲಿಖಿತ ‘ಪತ್ಯಾಪತ್ಯಮೀಮಾಂಸೆ’ಯೆಂದ ಸ್ಪಷ್ಟವಾಗುತ್ತದೆ.

ಅಧಃ, ತಿರ್ಯ್ಯಕ್, ಊರ್ಧ್ವ ಭೇದದಿಂದ ಶುಕ್ರವು ೩ ಮಾರ್ಗಗಳಲ್ಲಿ ವಿನಿರ್ಗಮಿಸುತ್ತದೆ ಎಂದು ಹೇಳಲಾಗಿದೆ. ಈ ಮೂರರಲ್ಲೂ ತಿರ್ಯ್ಯಕ್-ಊರ್ಧ್ವ ವಿಭಾಗಗಳಲ್ಲಿ ಯಾವುದೇ ವಿಶೇಷತೆ ಇಲ್ಲ. ಮೂರನೆಯ ಅಧಃಸ್ರೋತ ವಿಭಾಗದಲ್ಲಿಯೇ ಶುಕ್ರ ವಿನಿರ್ಗಮದ ಸಮ್ಬನ್ಧದಿಂದ ಅಪತ್ಯ-ಪತ್ಯ ರೂಪದಿಂದ ೨ ಅವಸ್ಥೆಗಳು ಉತ್ಪನ್ನವಾಗುತ್ತವೆ. ‘ಪ್ರಜಾತನ್ತುಂ ಮಾ ವ್ಯವಚ್ಛೇತ್ಸೀಃ’ ಎಂಬೀ ಶ್ರೌತಸಿದ್ಧಾನ್ತವನ್ನು ಶಿರೋಧಾರ್ಯ್ಯವೆಂದು ಒಪ್ಪಿ ಓರ್ವ ಸದ್ಗೃಹಸ್ಥರು ಋತುಕಾಲದಲ್ಲಿ (ಶಾಸ್ತ್ರ ನಿರ್ದ್ದಿಷ್ಟ ದಾಮ್ಪತ್ಯಕಾಲದಲ್ಲಿ) ರತಿಪ್ರಸಙ್ಗ ಮಾಡುತ್ತಾರೆ. ಯೋಷಾ (ಸ್ತ್ರೀ) ಗರ್ಭಾಶಯದಲ್ಲಿ ಪ್ರತಿಷ್ಠಿತ ಆರ್ತ್ತವದಲ್ಲಿ (ಶೋಣಿತದಲ್ಲಿ) ಇರುವ ಅತ್ರಿಪ್ರಾಣಸಂಶ್ಲಿಷ್ಟ, ಹಾಗೂ ಪ್ರಜನನಧರ್ಮ್ಮಶಾಲೀ ಪ್ರಾಣವಿಶೇಷವನ್ನು ‘ಯೋಷಾ’ ಎಂದು ಕರೆಯಲಾಗಿದೆ. ವೃಷಾ (ಪತಿ-ಪುರುಷ) ಎಂಬುವನ ಶುಕ್ರದಲ್ಲಿ ಪ್ರತಿಷ್ಠಿತ ಪಿತೃಪ್ರಾಣಯುಕ್ತ (ಸಹೋಭಾಗಯುಕ್ತ), ತತ್ಕಾರಣ ಪ್ರಜನನಕರ್ಮ್ಮದಲ್ಲಿ ಸಮರ್ಥವಾದ ಪ್ರಾಣವಿಶೇಷವು ‘ವೃಷಾ’ ಎಂದು ಕರೆಯಲ್ಪಟ್ಟಿದೆ. ಪತಿಪತ್ನೀರೂಪೀ ಪುರುಷಸ್ತ್ರೀಗಳ ದಾಮ್ಪತ್ಯಲಕ್ಷಣವು ಮಿಥುನಸಮ್ಬನ್ಧದಿಂದ ಸ್ತ್ರೀಯ ಯೋಷಾಪ್ರಾಣಪ್ರಧಾನ ಶೋಣಿತಾಗ್ನಿಯಲ್ಲಿ ಪುರುಷನ ವೃಷಾಪ್ರಾಣಪ್ರಧಾನ ಶುಕ್ರದ ಆಹುತಿಯಾಗುತ್ತದೆ. ಈ ಆಹುತ ಸೌಮ್ಯ ಶುಕ್ರ, ಹಾಗೂ ಆಹುತಿ-ಗ್ರಾಹಕ ಆಗ್ನೇಯ ಶೋಣಿತ, ಇವೆರಡರ ಸಮನ್ವಯದಿಂದ ‘ಗರ್ಭಸ್ಥಿತಿ’ಯು ಉಂಟಾಗುತ್ತದೆ. ‘ಆಧಿಕ್ಯೇ ರೇತಸಃ ಪುಂಸಃ’ ಸಿದ್ಧಾನ್ತದ ಅನುಸಾರ ಶುಕ್ರಾಧಿಕ್ಯದಿಂದ ಪುರುಷಸನ್ತಾನದ ಕಾರಣವಾಗುತ್ತದೆ. ಶುಕ್ರವು ಸೌಮ್ಯವಾಗಿದೆ, ಇದುವೇ ಶೋಣಿತಾಗ್ನಿಯಲ್ಲಿ ಅಭಿಷುತವಾಗಿ (ನಿಕ್ಷೇಪವಾಗಿ) ಪುತ್ರರೂಪದಲ್ಲಿ ಪರಿಣತವಾಗುತ್ತದೆ. ಇದೇ ಸೋಮಾಭಿಷವ (ಶುಕ್ರಾಭಿಷವ) ಸಮ್ಬನ್ಧದಿಂದ ಪುತ್ರನನ್ನು ‘ಸೂಯತೇ-ಇತಿ-ಅಭಿಷುತೋ-ಭವತಿ’ ಇತ್ಯಾದಿ ನಿರ್ವಚನಗಳಿಂದ ‘ಸೂನು’ ಎಂಬ ಹೆಸರಿನಿಂದ ವ್ಯವಹೃತಗೊಳಿಸಲಾಗಿದೆ. ಶೋಣಿತಾಗ್ನಿಯಲ್ಲಿ ಸುತನಾದ (ಆಹುತವಾದ) ಈ ಸೋಮವು (ಶುಕ್ರವು) ಎಂಟನೇ ಸನ್ತಾನಕ್ಕಾಗಿ ಸುತನಾಗುತ್ತದೆ, ಹಾಗಾಗಿ ಇದನ್ನು ‘ಅಪತ್ಯ’ ಎಂದು ಕರೆಯುತ್ತಾರೆ.

ತಾತ್ಪರ್ಯ್ಯವೇನೆಂದರೆ, ಪ್ರೇತಪಿತರಪಿಣ್ಡವು ಶರೀರತ್ಯಾಗಾನನ್ತರ ಚಾನ್ದ್ರಸಮ್ವತ್ಸರಾನುಗತ ೧೩ ಮಾಸಗಳ ನನ್ತರ ಪೂರ್ವಪ್ರದರ್ಶಿತ ಕ್ರಮಾನುಸಾರ ಸ್ವಪ್ರಭವ ಸ್ಥಾನೀಯ ಚನ್ದ್ರಲೋಕದಲ್ಲಿ ಪ್ರತಿಷ್ಠಿತವಾಗುತ್ತದೆ. ಚನ್ದ್ರಲೋಕಸ್ಥ ಆ ಪ್ರೇತಪಿಣ್ಡದ ಅಂಶವು ಎಲ್ಲಿಯವರೆಗೆ ಭೂಪಿಣ್ಡದಲ್ಲಿ ಪ್ರತಿಷ್ಠಿತವಾಗಿರುತ್ತದೆಯೋ, ಅಲ್ಲಿಯವರೆಗೆ ಅದು ತನ್ನ ಸ್ವರೂಪದಿಂದ ಚನ್ದ್ರಲೋಕದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಚನ್ದ್ರಲೋಕದಿಂದ ಬೀಳುವುದಿಲ್ಲ. ಚನ್ದ್ರಲೋಕಸ್ಥಿತ ಪ್ರೇತಪಿತರದ ಕೆಲ ಅಂಶ, ಚಾನ್ದ್ರಶ್ರದ್ಧಾಸೂತ್ರದ ಆಧಾರದಲ್ಲಿ (ದೂರದಿಂದ) ತನ್ನ ಪುತ್ರ-ಪೌತ್ರ-ಪ್ರಪೌತ್ರಾದಿಗಳಲ್ಲಿ ಸನ್ತಾನ ರೂಪದಿಂದ ಪೃಥಿವಿಯ ಮೇಲೆ ಪ್ರತಿಷ್ಠಿತವಾಗಿರುತ್ತದೆ. ಈ ಪಾರ್ಥಿವ ಪುತ್ರ-ಪೌತ್ರ-ಪ್ರಪೌತ್ರಾದಿ ಸನ್ತಾನಗಳಲ್ಲಿ ಬರಲಿರುವ ತನ್ನ ಅಂಶಗಳ ಬನ್ಧನದಿಂದ ಆಯಾಯ ಅಂಶೀ ಪಿತರರು ಸ್ವರ್ಲೋಕದಿಂದ ಚ್ಯುತರಾಗುವುದಿಲ್ಲ. ಎಂದಿಗೆ ಆ ಪ್ರೇತಪಿತರರ ಏಳನೇ ಸನ್ತಾನವು ಪೃಥಿವಿಯ ಮೇಲೆ ಜನ್ಮ ಪಡೆಯುತ್ತದೆಯೋ, ಆಗ ಆ ಪ್ರೇತಪಿತರವು ಸ್ವಪ್ರತಿಷ್ಠಾದಿಂದ ಚ್ಯುತವಾಗಿಬಿಡುತ್ತದೆ. ಆಗಲೇ ಇದು ಚನ್ದ್ರಲೋಕದಿಂದ ಚ್ಯುತಿ ಹೊಂದುತ್ತದೆ. ಪುತ್ರ-ಪೌತ್ರಾದಿ ೬ ಸನ್ತಾನಗಳಲ್ಲಿ ಆ ಮೂಲ ಪಿತರರ ಭಿನ್ನ ಭಿನ್ನ ಸಂಖ್ಯಾಯುಕ್ತ ಸ್ವಾಂಶಗಳು ಪ್ರತಿಷ್ಠಿತವಾಗಿರುತ್ತವೆ. ಪುತ್ರಾದಿಗಳ ಲೀಲಾಸಂವರಣದ ಮೇಲೆ ತತ್ತದಂಶಗಳು ಪುನಃ ಅದಕ್ಕೆ ಸಿಗುತ್ತಾ ಹೋಗುತ್ತದೆ. ಇದೇ ‘ಪಿಣ್ಡಪ್ರತ್ಯರ್ಪಣಕರ್ಮ್ಮ’ ಆಗಿದೆ; ಇದು ಸ್ವತಃ ಆಗುತ್ತದೆ. ಈ ೬ ಸನ್ತತಿ-ಧಾರೆಗಳಲ್ಲಿ ಮೂಲ ಪ್ರೇತಪಿತರರ ೨೧ ಅಂಶಗಳು ವಿಭಕ್ತವಾಗಿವೆ, ಅದರ ಸಮೀಪ ಕೇವಲ ೭ ಅಂಶಗಳ ಶೇಷವಿರುತ್ತದೆ. ಈ ೭ ಪಿತೃಸಹಗಳನ್ನು ತೆಗೆದುಕೊಂಡೇ ಅದು ಚನ್ದ್ರಲೋಕದಲ್ಲಿ ಗಮನ ಮಾಡುತ್ತದೆ. ಆಯಾಯ ಸನ್ತಾನದ ತತ್ತದಂಶವು ಸಪಿಣ್ಡೀಕರಣದಿಂದ ಪುನಃ ಆಯಾಯಾ ಸಪ್ತಾಂಶಯುಕ್ತ ಮೂಲಪುರುಷರಲ್ಲಿ ಪ್ರತ್ಯರ್ಪಿತವಾಗುತ್ತವೆ (ವಾಪಸ್ ಸಿಗುತ್ತದೆ). ಈ ಪ್ರತ್ಯರ್ಪಿತ-ಸನ್ತಾನಗತ ೨೧ ಪಿತೃಸಹಗಳಿಂದ ಮೂಲಪಿತರರು ೨೮ ಅಂಶಗಳಿಂದ ಯುಕ್ತವಾಗುತ್ತಾ ತಮ್ಮ ಪೂರ್ಣಭಾವವನ್ನು ಹೊಂದುತ್ತಾರೆ. ಈ ಪ್ರತ್ಯರ್ಪಣ ಕರ್ಮ್ಮದಿಂದ ಪ್ರಕೃತದಲ್ಲಿ ಹೇಳಬೇಕಾಗಿರುವುದು ಏನೆಂದರೆ, ಈ ೬ ಸನ್ತಾನಗಳು ಅವರಿಂದ ಪ್ರಾಪ್ತ ಪಿತೃಸಹಗಳ ಆಕರ್ಷಣೆಯಿಂದ ಆ ಪ್ರೇತಪಿತರರನ್ನು ಚನ್ದ್ರಲೋಕದಿಂದ ಪತನವಾಗುವ ಭಯದಿಂದ ಮುಕ್ತರನ್ನಾಗಿಸುವ ಹೇತುವಾಗಿರುತ್ತವೆ, ಹಾಗಾಗಿ ಶುಕ್ರಾಹುತಿಯಿಂದ ಉತ್ಪನ್ನವಾದ ಇವರನ್ನು ‘ಅಪತ್ಯ’ ಎಂದು ಕರೆಯಲಾಗಿದೆ.

ಇನ್ನೊಂದು ದೃಷ್ಟಿಯಲ್ಲಿ ‘ಅಪತ್ಯ’ ಶಬ್ದದ ಸಮನ್ವಯ ಮಾಡಿರಿ. ಬೀಜೀ ಪಿತನ ಶುಕ್ರದಲ್ಲಿ ಪ್ರತಿಷ್ಠಿತ ಸೌಮ್ಯ ಪಿತೃಸಹವೇ ಶುಕ್ರಾಹುತಿಯಿಂದ ಸನ್ತಾನರೂಪದಲ್ಲಿ ಪರಿಣತವಾಗುತ್ತದೆ. ಸನ್ತಾನರೂಪದಲ್ಲಿ ಪರಿಣತವಾಗುವ ಈ ಪಿತ್ರ್ಯಸಹದ ಗತಿಯು ನಿಮ್ನವಾಗಿದೆ. ತನ್ನ ಕ್ಷೇತ್ರದಿಂದ ನಿಮ್ನ ಕ್ಷೇತ್ರದತ್ತ ಗಮನ ಮಾಡುತ್ತ ಇದು ಸನ್ತತಿರೂಪದಲ್ಲಿ ಪರಿಣತವಾಗುತ್ತದೆ. ಅದೇ ಪಿತರವು (ಪಿತೃಸಹವು) ನಿಮ್ನಗತಿಯ ಆಶ್ರಯ ಪಡೆಯುತ್ತಾ ಸನ್ತಾನಭಾವದಿಂದ ಪೃಥಿವಿಯ ಮೇಲೆ ಪ್ರತಿಷ್ಠಿತವಾಗಿರುತ್ತದೆ. ಹಾಗಾಗಿ ಇದನ್ನು (ಸನ್ತತಿರೂಪಾತ್ಮಕ ಪಿತರಭಾಗವು) ‘ಅಪತ್ಯ’ ಎಂದು ಕರೆಯುವುದು ನ್ಯಾಯಸಙ್ಗತವಾಗಿದೆ. ‘ಅಪ್’ ಶಬ್ದವು ಅಧೋಭಾವ-ನಿಮ್ನಭಾವದ ಸೂಚಕವಾಗಿದೆ. ಅಪತ್ಯಶಬ್ದದ ‘ಅಧಸ್ತಾದ್‍ಭವತಿ’ ಎಂಬುದೇ ನಿರ್ವಚನವಾಗಿದೆ. ‘ಅಪ್’ ಎಂಬುದರಿಂದ ‘ಅವ್ಯಯಾತ್ ತ್ಯಪ್’ ಸೂತ್ರದಿಂದ ‘ತ್ಯಪ್’ ಪ್ರತ್ಯಯವಾಗಿ ‘ಅಪತ್ಯ’ ಶಬ್ದವು ನಿಷ್ಪನ್ನವಾಗುತ್ತದೆ. ಈ ‘ಅಪತ್ಯಭಾವ’ವು ಆ ಅಧೋರೇತಾ-ಗೃಹಸ್ಥರೊಂದಿಗೆ ಸಮ್ಬನ್ಧ ಹೊಂದಿರುತ್ತದೆ. ಇದು ಸನ್ತಾನದೊಂದಿಗೆ ಯುಕ್ತವಾಗಿದೆ. ಓರ್ವ ಗೃಹಸ್ಥನು ಜನ್ಮ ಪರ್ಯ್ಯನ್ತ ಸನ್ತತಿಯ ದರ್ಶನ ಪಡೆಯಲಿಲ್ಲ ಎಂದು ತಿಳಿಯೋಣ. ಆತನು ನಿಃಸನ್ತಾನನಾಗಿಯೇ (ನಿರಪತ್ಯ-ನಿಪೂತಾ) ಆಗಿಯೇ ಸತ್ತುಹೋದನು ಎಂದುಕೊಳ್ಳೋಣ. ನಿಃಸನ್ತಾನನಾಗಿ ಮರಣ ಹೊಂದುವ ಈ ವ್ಯಕ್ತಿಯ ಸ್ವಯಂ ಹಾಗೂ ಇವನ ಪಿತಾ, ಪಿತಾಮಹಾದಿಯ ಚನ್ದ್ರಲೋಕಸ್ಥಿತ ಪಿತೃಸಹವು ‘ಪತ್ಯ’ ಎಂದೇ ಕರೆಯಲ್ಪಡುತ್ತದೆ. ಈತನಿಗೆ ಸನ್ತಾನವು ಆಗಿಲ್ಲ. ಶುಕ್ರಗತ ಪಿತೃಸಹವು ವ್ಯರ್ಥ ಮೈಥುನಾದಿಯಲ್ಲಿ ೨೧ ಮಾತ್ರಾ ಪ್ರಮಾಣದಲ್ಲಿ ವಿಗತ (ಖರ್ಚು) ಅವಶ್ಯವಾಗಿ ಆಗಿರುತ್ತದೆ. ಫಲಿತವಾಗಿ ಪ್ರೇತದಶೆಯಲ್ಲಿ ೭ ಭಾಗ ತೆಗೆದುಕೊಂಡೇ ಇದು ವಾಪಸ್ ಚನ್ದ್ರಲೋಕಕ್ಕೆ ಹೋಗುತ್ತದೆ. ಈಗ ಸನ್ತಾನಾಭಾವದಿಂದ ವ್ಯಯೀಭೂತವಾದ ಆ ಶೇಷ ೨೧ ಪಿತೃಸಹಗಳನ್ನು ವಾಪಸ್ ಪಡೆಯಲಾಗುವುದಿಲ್ಲ. ಫಲಿತವಾಗಿ ಆತನ ಪತನವು ಅವಶ್ಯಂಭಾವೀ ಆಯಿತು.

ಇಲ್ಲಿಗೇ ವಿಶ್ರಾಮ ಆಗುವುದಿಲ್ಲ. ಆದರೆ ನಿಃಸನ್ತಾನದ ಶುಕ್ರಸ್ಥ ಮಾಸಿಕ ಪಿಣ್ಡವು ಖರ್ಚಾಗುತ್ತಿರುತ್ತದೆ, ಸನ್ತಾನ ಆಗಿಲ್ಲದಿರುವುದರಿಂದ ಈ ವ್ಯಯಭಾವವು ವ್ಯರ್ಥವಾಗಿರುತ್ತದೆ. ಈ ದೃಷ್ಟಿಯಲ್ಲಿ ಇದು ಪ್ರತಿಮಾಸದಲ್ಲಿ ‘ಪತ್ಯ’ ಆಗಿದೆ. ಅಯೋನಿಜರಲ್ಲಿ, ವನ್ಧ್ಯಾ ಸ್ತ್ರೀಯರಲ್ಲಿ ಸಿಕ್ತ ರೇತವು ವ್ಯರ್ಥವಾಗಿ ಹೋಗುತ್ತದೆ, ಹಾಗೂ ಇದೇ ಇದರ ಪತ್ಯಭಾವವಾಗಿದೆ. ವ್ಯರ್ಥವಾಗಿ ಖರ್ಚಾಗುವ ಶುಕ್ರವು (ತದ್ಗತ ಪಿತರಪ್ರಾಣವು) ತನ್ನ ಸ್ವರೂಪದಿಂದ ಹೇಗೂ ಪತ್ಯವಾಗಿದೆ. ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ ಸ್ವಪ್ರತಿಷ್ಠಾದಿಂದ ಚ್ಯುತವಾಗುತ್ತಾ ಇದು ಪತ್ಯವಾಗಿದೆ. ಹಾಗೂ ಗೃಹಮೇಧಿಗೆ ಇದಕ್ಕಿಂತ ಹೆಚ್ಚಿನ ಅಮಙ್ಗಲವು ಇನ್ನೊಂದಿಲ್ಲ, ಇದಕ್ಕಾಗಿ ‘ಅಪುತ್ರಸ್ಯ ಗತಿರ್ನಾಸ್ತಿ’ ಇತ್ಯಾದಿಗಳಿಂದ ಪ್ರತಿಧ್ವನಿತವಾಗಿದೆ. ಇದೇ ಮಹಾ ಅಮಙ್ಗಲದ ನಿರೋಧಕ್ಕಾಗಿ ಋಷಿಗಳು ‘ಪ್ರಜಾತನ್ತು ಮಾ ವ್ಯವಚ್ಛೇತ್ಸೀಃ’ ಎಂಬ ಆದೇಶವನ್ನು ಉದ್ಘೋಷಿಸಿದ್ದಾರೆ. ಇದೇ ಮಹಾಮಾಙ್ಗಲಿಕ ಅಪತ್ಯಭಾವದ ರಕ್ಷಣೆಗಾಗಿ ವ್ಯರ್ಥ ಮೈಥುನ ನಿಷಿದ್ಧವೆಂದು ನಂಬಿದ್ದಾರೆ. ಇದೇ ಅಪತ್ಯಸಮ್ಪತ್ತಿಯ ರಕ್ಷಣೆಗಾಗಿ ಋತುಕಾಲದಲ್ಲಿಯೇ ಸ್ತ್ರೀಗಮನ ವಿಹಿತ (ಶಾಸ್ತ್ರಾನುಮೋದಿತ) ಎಂದು ನಂಬಲಾಗಿದೆ. ಈ ನಿಯಮವೂ ಪ್ರಾದೇಶಿಕವಾಗಿದೆ.


ಇದು ನಿರ್ಧಿಷ್ಟ ಕಾಲದ ಸಮಸ್ಯೆ ಹಾಗೂ ಸಂಬಂಧಿತ ಸಮಾಧಾನಗಳನ್ನು ದಾಖಲು ಮಾಡಿದ ಬ್ರಾಹ್ಮಣ ಗ್ರಂಥದ ಅಂಬೊಣ. ಆದರೆ ಧರ್ಮಶಾಸ್ತ್ರವು ಕಾಲ ಕಾಲಕ್ಕೆ ಪರಿಷ್ಕರಣೆ ಹೊಂದುತ್ತಾ ಜನರ ಜೀವನವನ್ನು ಸುಗಮಗೊಳಿಸುವುದರೊಂದಿಗೆ ಉನ್ನತ ಧ್ಯೇಯಗಳತ್ತ ಕರೆದೊಯ್ಯುತ್ತದೆ. ಹಾಗಾಗಿ ಮುಂದಿನ ಪರಿಷ್ಕರಣೆಯಲ್ಲಿ ಅಪುತ್ರಸ್ಯ ಗತಿರ್ನಾಸ್ತಿ ಎಂಬುದು ಪೂರ್ಣ ಸತ್ಯವಲ್ಲ. ಸಾಮಾಜಿಕ ಋಣವನ್ನು ತೀರಿಸುವಂತಹಾ ಕಾರ್ಯಗಳನ್ನು ಮಾಡಿದರೆ ಅದು ಪುತ್ರೋತ್ಪತ್ತಿಯ ಸಮಾನವೆಂದು ಧರ್ಮ ಸಂಸತ್ತು ನಿರ್ಧಾರ ಮಾಡಿತು. ಹಾಗಾಗಿ ಅಂತಹವರಿಗೆ ಸನ್ತಾನಾಭಾವದಿಂದ ವ್ಯಯೀಭೂತವಾದ ಆ ಶೇಷ ೨೧ ಪಿತೃಸಹಗಳನ್ನು, ಸಮಾಜಿಕ ಋಣ ತೀರಿಸುವ ಕೆಲಸವೇ ಪುತ್ರ ಸಮಾನ ಪುಣ್ಯಾಂಶ ವೃದ್ಧಿ ಮಾಡಿಕೊಡುವುದರಿಂದ, ವಾಪಸ್ ಪಡೆಯಲು ಸಾಧ್ಯ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Thursday, 29 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಸಹೋಭಾಗದ ಪಿತೃಪ್ರಾಣಾತ್ಮಕತ್ತ್ವ ಮತ್ತು ಶುಕ್ರಕ್ಷಯಮೀಮಾಂಸೆ (೨೦-೨೧)

೨೦. ಸಹೋಭಾಗದ ಪಿತೃಪ್ರಾಣಾತ್ಮಕತ್ತ್ವ

ಶುಕ್ರದಲ್ಲಿ ಸಾಕ್ಷಾತ್-ರೂಪದಿಂದ ಬರುವ ಈ ಚಾನ್ದ್ರರಸದಲ್ಲಿ ‘ಸಹಃಪಿಣ್ಡ’ದಲ್ಲಿ ರಸಾತ್ಮಕ ಸೂಕ್ಷ್ಮ ಭೂತ ಮತ್ತು ಪ್ರಾಣಾತ್ಮಕ ಸುಸೂಕ್ಷ್ಮ ದೇವತೆ ಎಂಬ ಎರಡೂ ತತ್ತ್ವಗಳು ಪ್ರತಿಷ್ಠಿತವಾಗಿವೆ. ಇತರೆ ಶಬ್ದಗಳಲ್ಲಿ ಹೇಳುವುದಾದರೆ ಎರಡೂ ಸಮಷ್ಟಿಯಲ್ಲಿ ‘ಸಹಃ’ ಆಗಿದೆ. ರಸಭೂತಸಮ್ಪರಿಷ್ವಕ್ತ ಈ ಚಾನ್ದ್ರ ಪ್ರಾಣರೂಪೀ ದೇವತೆಯೇ ‘ಪಿತರ’ ಆಗಿದೆ. ಇದೇ ಪ್ರಾಣಪಿತರರ ಸಮ್ಬನ್ಧದಿಂದ ಈ ಸಹೋಭಾಗವು ‘ಪಿತೃಸಹ’, ಅಂದರೆ ‘ಪಿತ್ರ್ಯಸಹ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ. ಇದೇ ಶ್ರೌತ ಪಿತೃಸಹವು ಸ್ಮಾರ್ತ್ತ ಪರಿಭಾಷೆಯಲ್ಲಿ ‘ಪಿತ್ರ್ಯಂಶ’ ಎಂದು ಹೇಳಲ್ಪಡುತ್ತದೆ. ತ್ರಯೋದಶ ಮಾಸಾತ್ಮಕ ಚಾನ್ದ್ರಸಮ್ವತ್ಸರದ ಸಮ್ಬನ್ಧದಿಂದ ಶುಕ್ರವನ್ನು ತ್ರಯೋದಶಮಾಸಿಕ ಪಿಣ್ಡಾತ್ಮಕ ಎಂದು ಹೇಳಲಾಗಿದೆ. ಈ ಸಮ್ಬನ್ಧದಲ್ಲಿ ಉತ್ತರೋತ್ತರ ಮಾಸಿಕ ಪಿಣ್ಡಗಳ ಉತ್ಪತ್ತಿಯ ಜೊತೆಜೊತೆಗೆ ಪೂರ್ವ-ಪೂರ್ವದ ಸಞ್ಚಿತ ಮಾಸಿಕ ಪಿಣ್ಡವು ಇನ್ದ್ರಿಯ ವ್ಯಾಪಾರದಿಂದ, ಪ್ರಧಾನತಃ ಶುಕ್ರದಿಂದ ವಿಗತ (ಖರ್ಚು) ಆಗುತ್ತಿರುತ್ತದೆ.

೨೧. ಶುಕ್ರಕ್ಷಯಮೀಮಾಂಸೆ

ಶುಕ್ರವ್ಯಯಕ್ಕೆ ಪ್ರಧಾನತಃ ದ್ವಾರಗಳಿವೆ, ಗೌಣತಃ ದ್ವಾರಗಳಿವೆ. ವಾಕ್-ಪ್ರಾಣ-ಚಕ್ಷುಃ-ಶ್ರೋತ್ರ-ಮನ ಎಂಬೀ ೫ ಇನ್ದ್ರಿಯಗಳ ವ್ಯಾಪಾರಗಳಿಂದ ಯಾವ ಶುಕ್ರವು ವಿನಿರ್ಗತವಾಗುತ್ತದೆಯೋ, ಅದು ಇದರ ಗೌಣಾತ್ಮಕ ವ್ಯಯೀಭಾವವಾಗಿದೆ. ಪ್ರತಿಯೊಂದು ಇನ್ದ್ರಿಯ ಸ್ವವ್ಯಾಪಾರಕ್ಕಾಗಿ ಸರ್ವೇನ್ದ್ರಿಯ ಪ್ರಜ್ಞಾನ ಮನದ ಸಹಯೋಗದ ಅಪೇಕ್ಷೆ ಇರುತ್ತದೆ. ಮನದ ಮೂಲಾಧಾರವು ಓಜವಾಗಿದೆ, ಓಜದ ಮೂಲಪ್ರತಿಷ್ಠಾ ಶುಕ್ರವಾಗಿದೆ. ಈ ರೀತಿ ಶುಕ್ರವು ಓಜದಿಂದ ಮಾನಸ ಭಾವದಲ್ಲಿ ಪರಿಣಾತವಾಗುತ್ತಾ ಪರಮ್ಪರಯಾ ಐದು ದ್ವಾರಗಳಿಂದ ಖರ್ಚಾಗುತ್ತಿರುತ್ತದೆ. ಈ ಐದು ಗೌಣ ದ್ವಾರಗಳ ಅತಿರಿಕ್ತ ೩ ಪ್ರಧಾನ ದ್ವಾರಗಳಿವೆ. ಪ್ರಜೋತ್ಪತ್ತಿ ಕರ್ಮ್ಮದಲ್ಲಿ ಮೂಲೇನ್ದ್ರಿಯದಿಂದ ಶುಕ್ರ-ವಿನಿರ್ಗಮನವು ಮೊದಲ ವ್ಯಯೀಭಾವವಾಗಿದೆ. ಈ ವ್ಯಯೀಭಾವವು ಗೃಹಮೇಧಿಗಳ (ಗೃಹಸ್ಥಾಶ್ರಮಿಗಳ) ಸಮ್ಬನ್ಧ ಹೊಂದುತ್ತದೆ. ಪ್ರಜಾತನ್ತುವಿತಾನದ ಕಾಮನೆಯಿಂದ (ಅವಿವಾಹಿತ) ಗೃಹಮೇಧಿಗಳ ಅಧೋಭಾಗದಿಂದ ಶುಕ್ರ-ವ್ಯಯವಾಗುತ್ತಾ ‘ಅಧೋರೇತಾ’ ಎಂದು ಕರೆಯಲ್ಪಡುತ್ತದೆ. ವಿವಾಹಿತರಾಗಿಯೂ ಗೃಹಸ್ಥರು ಪೂರ್ಣಸಂಯಮದೊಂದಿಗೆ ಲೋಕಯಾತ್ರೆಯ ನಿರ್ವಹಣೆ ಮಾಡುತ್ತಲಿದ್ದರೆ, ಅವರ ಶುಕ್ರ-ಪ್ರವಾಹವು ಅವರ ಶರೀರಪುಷ್ಟಿಯ ಕಾರಣಭೂತ ರಸಾಸೃಙ್ ಮಾಂಸಾದಿಗಳ ವೃದ್ಧಿಯಲ್ಲಿ ಉಪಯುಕ್ತವಾಗುತ್ತಿರುತ್ತದೆ, ಹಾಗೂ ಇದನ್ನೇ ‘ತಿರ್ಯ್ಯಕ್‍ಸ್ರೋತಾ’ ಎಂದು ಕರೆಯಲ್ಪಡುತ್ತದೆ.

ಯಾವ ಬ್ರಹ್ಮಚಾರಿಯು ಸತತ ವಿಧ್ಯಾಭ್ಯಾಸದಲ್ಲಿ ಅನುರಕ್ತವಾಗಿರುವನೋ, ಯಾರು ವೀತರಾಗ ಸಂನ್ಯಾಸಧರ್ಮ್ಮದಲ್ಲಿ ದೀಕ್ಷಿತನೋ, ಯಾವ ಮಹರ್ಷಿಯು ಅಹರ್ನಿಶ ತತ್ತ್ವಾನ್ವೇಷಣೆಯ ಕರ್ಮ್ಮದಲ್ಲಿ ಸಂಲಗ್ನವಾಗಿದ್ದಾನೆಯೋ, ಚಿನ್ತಾಶೀಲ ಈ ಪುರುಷಪುಙ್ಗವರ ಶುಕ್ರವು ಕ್ರಮವಾಗಿ ಓಜ ಹಾಗೂ ಮನೋರೂಪದಲ್ಲಿ ಪರಿಣತವಾಗುತ್ತಾ ಶಿರೋಭಾಗಾವಸ್ಥಿತ ಜ್ಞಾನಾಗ್ನಿಯಲ್ಲಿ ಆಹುತವಾಗುತ್ತಾ ಇರುತ್ತದೆ. ಇವರು ಎಷ್ಟು ಅಧಿಕ ಚಿನ್ತಾಶೀಲರಾಗುತ್ತಾರೆಯೋ, ಅಷ್ಟೇ ಅಧಿಕ ಮಾತ್ರಾದಲ್ಲಿ ಶುಕ್ರಕ್ಷಯ ಆಗುತ್ತಿರುತ್ತದೆ; ಹಾಗೂ ತದನುರೂಪವಾಗಿಯೇ ವಿಜ್ಞಾನವು ವಿಕಸಿತವಾಗುತ್ತಿರುತ್ತದೆ. ಇದೇ ಕಾರಣದಿಂದ ಜ್ಞಾನಾಗ್ನಿಯಲ್ಲಿ ಶುಕ್ರದ ಆಹುತಿ ಕೊಡುವ ವಿದ್ವಾಂಸರು ಶಾರೀರಿಕ ಶ್ರಮ ಮಾಡಲು ಪ್ರಾಯಶಃ ಅಸಮರ್ಥರಾಗಿರುತ್ತಾರೆ. ಇದೇ ವಿಭಾಗವು ‘ಊರ್ಧ್ವರೇತಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಶುಕ್ರವಿನಿರ್ಗಮದ ಇವೇ ಮೂರು ಅವಸ್ಥೆಗಳಿಗೆ ಕ್ರಮವಾಗಿ ‘ಅವಪತನ, ಆಯತನ, ಉತ್ಪತನ’ ಎಂಬ ಸಾಙ್ಕೇತಿಕ ಶಬ್ದವು ಪ್ರಯುಕ್ತವಾಗಿದೆ.


ಅಧಃ-ತಿರ್ಯ್ಯಕ್-ಊರ್ಧ್ವರೇತಃ-ಪರಿಲೇಖಃ


ಈ ಮೂರರಲ್ಲಿ ಯಾವುದೋ ಒಂದು ಮಾರ್ಗದಿಂದ ಮತ್ತು ಪಞ್ಚೇನ್ದ್ರಿಯ ವ್ಯಾಪಾರದ ಮುಖೇನ ಶುಕ್ರವ್ಯಯವು ಪ್ರತಿಯೊಂದು ದಶೆದಲ್ಲಿ ನಿಶ್ಚಿತವಾಗಿರುತ್ತದೆ. ಈ ವಿಸರ್ಗಕ್ರಿಯೆಯ ಜೊತೆಜೊತೆಗೆ ಅದೇ ಚಾನ್ದ್ರನಾಡಿಯಿಂದ ಆದಾನ ಪ್ರಕ್ರಿಯೆಯೂ ಪ್ರಕ್ರಾನ್ತವಾಗಿರುತ್ತದೆ. ಈ ಸಾಮ್ವತ್ಸರಿಕ ಪಿಣ್ಡದಾನ, ವಿಸರ್ಗಕ್ರಮ ಪರಮ್ಪರೆಯುಕ್ತ ಪುರುಷನೇ ಜೀವನಧಾರಣೆಯಲ್ಲಿ ಸಮರ್ಥನಾಗುತ್ತಾನೆ. ಒಂದುವೇಳೆ ಒಂದೇ ಮಾಸಿಕ ಪಿಣ್ಡವು ಉತ್ಪನ್ನವಾಗಿ ಮುಂದೆ ಆದಾನಕರ್ಮ್ಮವು ಉಪರತವಾದರೆ, ಅವಶ್ಯಕವಾಗಿ ಮೊದಲ ಮಾಸಿಕ ಪಿಣ್ಡವು ಮೇಲ್ತಿಳಿಸಿದ ಯಾವುದಾದರೂ ದ್ವಾರದಿಂದ ವ್ಯಯಭಾವದ ಅನುಗಾಮೀ ಆಗುತ್ತಾ ವಿನಷ್ಟಿಯ ಕಾರಣವಾಗುತ್ತದೆ. ಈ ಸಾಮ್ವತ್ಸರಿಕ ಆದಾನ-ವಿಸರ್ಗದ ಅನುಗ್ರಹದಿಂದ ಜೀವನ ಸತ್ತೋಪಯಿಕ ಒಂದು ಮಾಸಿಕ ಪಿಣ್ಡವು ಅವಶ್ಯವಾಗಿ ಸುರಕ್ಷಿತವಾಗಿರುತ್ತದೆ. ಯಾವ ದಿನ ಈ ಸ್ವರೂಪದ ಮೇಲೂ ಆಘಾತ ಆಗುತ್ತದೆಯೋ, ಆಗ ಕ್ಷಯರೋಗಾಕ್ರಾನ್ತ ಇಂತಹಾ ವ್ಯಕ್ತಿಯನ್ನು ಶೀಘ್ರವಾಗಿ ಕೀನಾಶನಿಕೇತನಾತಿಥ್ಯ (ಕೀನಾಶ = ಯಮ, ನಿಕೇತನ = ನಿವಾಸ, ಅಂದರೆ ಮರಣದ ಮುಖೇನ ಯಮಲೋಕದ ಪಯಣ) ಸ್ವೀಕಾರ ಮಾಡಬೇಕಾಗುತ್ತದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Friday, 23 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಸಹಸ್ತತ್ತ್ವದ ಆಹ್ನಿಕಾದಿ ನಾಲ್ಕು ಪಿಣ್ಡಗಳು (೧೯)

೧೯. ಸಹಸ್ತತ್ತ್ವದ ಆಹ್ನಿಕಾದಿ ನಾಲ್ಕು ಪಿಣ್ಡಗಳು

‘ಪಿತೄಣಾಂ ಪಿತರೋಪನಿಷತ್’ ಎಂಬ ಪ್ರಕರಣದಿಂದ ಸ್ಪಷ್ಟವಾಗುವುದೇನೆಂದರೆ ಸೌರಸಂಸ್ಥಾದಲ್ಲಿ ಇನ್ದ್ರ, ಧಾತಾ, ಭಗ, ಪೂಷಾ ಇತ್ಯಾದಿ ೧೨ ಪ್ರಾಣಗಳು ಪ್ರತಿಷ್ಠಿತವಾಗಿವೆ. ಇವುಗಳಲ್ಲಿ ಇನ್ದ್ರಪ್ರಮುಖ ಆದಿತ್ಯಪ್ರಾಣವು ‘ಸೋಮಪಾ’ ಆಗಿದೆ. ಸೋಮಪಾನವು ಇವರ ಪ್ರಾತಿಸ್ವಿಕ ಧರ್ಮ್ಮವಾಗಿದೆ. ರಾತ್ರಿಯಲ್ಲಿ ಅನ್ಯಾನ್ಯ ಅಸೋಮಪಾವು ಆದಿತ್ಯಪ್ರಾಣಗಳ ವಿದ್ಯಮಾನವಾಗುತ್ತಾ ಇನ್ದ್ರಪ್ರಮುಖ ಸೋಮಪಾವು ಪ್ರಾಣಗಳ ಅಭಾವ ಉಂಟುಮಾಡುತ್ತದೆ. ಆದರೆ ರಾತ್ರಿಯಲ್ಲಿ ಉಪರ್ಯುಕ್ತ ಸಹೋಮೂರ್ತ್ತಿ ಚಾನ್ದ್ರಸೋಮದ ನಿರ್ವಿಘ್ನ ಆಗಮನವಾಗುತ್ತದೆ, ಇದನ್ನು ಪೂರ್ವದಲ್ಲಿ ಸ್ಪಷ್ಟ ಪಡಿಸಲಾಗಿದೆ. ರಾತ್ರಿಕಾಲದಲ್ಲಿ ಶುಕ್ರದಲ್ಲಿ ಆಗತ ಈ ಒಂದು ದಿನದ (ಒಂದು ರಾತ್ರಿಯ) ಹಾಗೂ ‘ಆಹ್ನಿಕ’ ಎಂಬ ಹೆಸರಿನಿಂದ ವ್ಯವಹೃತವಾದ ಸಹೋಭಾಗವು ಅಹರಗ್ನಿಯ ಹಾಗೂ ಶಾರೀರಾಗ್ನಿಯ ಪರಿಪಾಕದಿಂದ ಘನಭಾವದಲ್ಲಿ ಪರಿಣತವಾಗುತ್ತದೆ. ಇದೇ ಆಹ್ನಿಕ ಪಿಣ್ಡವನ್ನು ವೈಜ್ಞಾನಿಕರು – ‘ತನ್ದುಲ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದಾರೆ.

ಎಲ್ಲಾ ಓಷಧಿಗಳ ನಿರ್ಮ್ಮಾಣವು ಚಾನ್ದ್ರಸೋಮದಿಂದ ಆಗುತ್ತದೆ ಎಂಬುದು ನಿಃಸಂದಿಗ್ಧ ವಿಷಯವಾಗಿದೆ. ಆದರೆ ಎಲ್ಲಾ ಓಷಧಿಗಳ ಈ ಚಾನ್ದ್ರಸೋಮವು ಆನ್ತರಿಕ್ಷ್ಯ ವಾಯುಗತ ಸೋಮಪಾವು ಮರುತ್ತ್ವಾನಿನ್ದ್ರನಿಂದ ಆಂಶಿಕರೂಪದಿಂದ ಉತ್ಕ್ರಾನ್ತವಾಗುತ್ತದೆ. ಮರುತ್ತ್ವಾನಿನ್ದ್ರವಲ್ಲದೆ ಸೌರರಶ್ಮಿಗತ ಮಘವೇನ್ದ್ರವೂ ಈ ಕರ್ಮ್ಮದಲ್ಲಿ ತನ್ನ ಹಸ್ತಕ್ಷೇಪ ಮಾಡುತ್ತಿರುತ್ತದೆ. ಫಲಿತವಾಗಿ ಓಷಧಿಗಳಲ್ಲಿ ಆಗತ ಚಾನ್ದ್ರರಸವು ಪರಿಪೂರ್ಣವಾಗದೆ ‘ಕ್ಷತ’ (ಅಪೂರ್ಣ) ಆಗಿರುತ್ತದೆ. ಎಲ್ಲಾ ಓಷಧಿಗಳು ಈ ರಸಮಾತ್ರದ ವಿಚ್ಯುತಿಯಿಂದ ‘ಕ್ಷತ’ ಆಗಿವೆ. ಓಷಧಿಗಳಲ್ಲಿ ಕೇವಲ ತನ್ದುಲವೇ ಒಂದು ವಿಶೇಷ ಓಷಧಿಯು, ಏಕೆಂದರೆ ಇದರಲ್ಲಿ ಇನ್ದ್ರನು ಸೋಮವನ್ನು ಮಾತ್ರ ತೆಗೆದುಕೊಳ್ಳಲಾಗುವುದಿಲ್ಲ. ಕಾರಣವೇನೆಂದರೆ ಪೂರ್ವದಿಕ್ಕಿನ ಲೋಕಪಾಲನು ಇನ್ದ್ರನು, ಪಶ್ಚಿಮ ದಿಕ್ಕಿನ ಲೋಕಪಾಲನು ವರುಣನು. ಇನ್ದ್ರನು ಜ್ಯೋತಿಯ ಅಧಿಷ್ಠಾತಾ ಆಗಿದ್ದರೆ, ವರುಣನು ಅಪ್-ತತ್ತ್ವದ ಅಧಿಷ್ಠಾತಾ ಆಗಿದ್ದಾನೆ. ಇವೇ ವಿರುದ್ಧ ಧರ್ಮಗಳ ಕಾರಣದಿಂದ ಎರಡರಲ್ಲಿಯೂ ಅಶ್ವಮಾಹಿಷ್ಯದಂತೆ ಸಹಜ ವೈರವಿದೆ. ವಿಶುದ್ಧ ವರುಣಸಾಮ್ರಾಜ್ಯದಲ್ಲಿ ಇನ್ದ್ರನ ಪ್ರವೇಶವು ನಿಷಿದ್ಧವಾಗಿದೆ, ವಿಶುದ್ಧ ಇನ್ದ್ರನ ಸಾಮ್ರಾಜ್ಯದಲ್ಲಿ ವರುಣನ ಪ್ರವೇಶವು ನಿಷಿದ್ಧವಾಗಿದೆ. ವಾಯುವಿನಲ್ಲಿ ಮರುತ್ತ್ವಾನಿನ್ದ್ರ ಇರುತ್ತದೆ. ಇದೇ ಕಾರಣದಿಂದ ಎಲ್ಲಿ ವಾಯುವಿನ ಆತ್ಯನ್ತಿಕರೂಪದಿಂದ ಅಭಾವವಿರುತ್ತದೆಯೋ, ಅಲ್ಲಿ ತತ್ ಪ್ರತಿದ್ವನ್ದ್ವೀ ವರುಣನ ಪ್ರವೇಶವು ಸಹಜವಾಗುತ್ತದೆ, ಉದಾ – “ಯದ್ವೈ ವಾತೋ ನಾಭಿವಾತಿ, ತತ್ಸರ್ವಂ ವರುಣದೈವತ್ಯಮ್” ಇತ್ಯಾದಿ ನಿಗಮದಿಂದ ಪ್ರಮಾಣಿತವಾಗಿದೆ. ಅಕ್ಕಿಯ ಕೃಷಿಯು ಅಪ್‍ಪ್ರಧಾನವಾಗಿದೆ. ಜಲಾದಿಕ್ಯವೇ ಅಕ್ಕಿಯ ಉತ್ಪತ್ತಿಯ ಕಾರಣವು. ನೀರಿನಲ್ಲಿ ಇನ್ದ್ರವಿರೋಧೀ ಪ್ರಾಣದ ಪ್ರಭುತ್ತ್ವವಿದೆ. ಹಾಗಾಗಿ ಜಲಾಧಿಕ್ಯದಿಂದ ಪ್ರಬಲವಾಗಿರುವ ವಾರುಣಕ್ಷೇತ್ರದಲ್ಲಿ ಇನ್ದ್ರಪ್ರವೇಶವು ಅವರುದ್ಧವಾಗಿದೆ. ಸೋಮ, ಹಾಗೂ ಅಪ್‍ತತ್ತ್ವ, ಎರಡೂ ಸಜಾತೀಯಗಳು. ಹಾಗಾಗಿ ಅಪ್‍ಪ್ರಧಾನತೆಯಿಂದ ಅಕ್ಕಿಯಲ್ಲಿ ಸೋಮವು ಮಾತ್ರ ಸರ್ವಥಾ ‘ಅಕ್ಷತ’  ಆಗಿರುತ್ತದೆ. ಇದೇ ರಹಸ್ಯವನ್ನು ಸೂಚಿಸಲು ವೈಜ್ಞಾನಿಕರು ಇದನ್ನು ‘ಅಕ್ಷತ’ ಎಂಬ ಹೆಸರಿನಿಂದ ಸಂಬೋಧಿಸುವುದು ಅನ್ವರ್ಥ ಎಂದು ತಿಳಿದಿದ್ದಾರೆ. ಸೋಮದಿಂದಲೇ ಓಷಧಿಗಳ ಆಪ್ಯಾಯನವಾಗುತ್ತದೆ. ಇಲ್ಲಿ ಅಕ್ಷತಗಳಲ್ಲಿ ಇದರ ಪೂರ್ವ ವಿಕಾಸವಿದೆ. ಇದೇ ಕಾರಣದಿಂದ ಇತರೆ ಓಷಧಿಗಳ ಹೋಲಿಕೆಯಲ್ಲಿ ಅಕ್ಕಿಯ ಕೃಷಿಯು ಸ್ವಲ್ಪಸಮಯದಲ್ಲಿಯೇ ಸಮ್ಪನ್ನಗೊಳ್ಳುತ್ತದೆ.

ಪ್ರಸಙ್ಗೋಪಾತ್ತವಾಗಿ ಏಕಾದಶಿಯು ವಿಷ್ಣುದೇವತಾ-ಪ್ರಧಾನ ತಿಥಿ ಎಂದು ಹೇಳಲಾಗಿದೆ. ವಿಷ್ಣುತತ್ತ್ವಕ್ಕೆ ಆ ಆಪೋಮಯ ಪರಮೇಷ್ಠಿಯೊಂದಿಗೆ ಸಮ್ಬನ್ಧವಿದೆ, ಇದರಲ್ಲಿ – ‘ತೃತೀಯಸ್ಯಾಂ ವೈ ಇತೋ ದಿವಿ ಸೋಮ ಆಸೀತ್’ ಎಂಬನುಸಾರ ಸೋಮದ ಪ್ರತಿಷ್ಠಾ ಎಂದು ಒಪ್ಪಲಾಗಿದೆ. ಇದೇ ಸೋಮ-ಸಮ್ಬನ್ಧದಿಂದ ವಿಷ್ಣುದೇವತೆಯು ‘ಸೋಮವಂಶೀ’ ಎಂದು ಒಪ್ಪಲಾಗಿದೆ. ಏಕಾದಶೀ ತಿಥಿಯು ವಿಷ್ಣು-ಉಪಾಸನಾ ಪ್ರಧಾನ ಕಾಲವು. ಮಾನಸ-ಧರಾತಲದಲ್ಲಿ ವಿಷ್ಣುತತ್ತ್ವವು ಪ್ರಕೃತ್ಯಾ ಪ್ರತಿಷ್ಠಿತವಾಗಿರುತ್ತದೆ. ಆಗ ಉಪವಾಸ ಪ್ರಕ್ರಿಯೆಯಿಂದಲೂ ಇದನ್ನು ಆತ್ಮದೊಂದಿಗೆ ಸೇರಿಸಲಾಗುತ್ತದೆ. ಮನವು ಸೋಮಮಯವಾಗಿದೆ, ಇವತ್ತು ಇದರಲ್ಲಿ ಸೋಮಮಯ ವಿಷ್ಣುಪ್ರಾಣವೇ ಬರುತ್ತಿದೆ ಎಂದುಕೊಳ್ಳೋಣ. ಇಂತಹಾ ದೆಸೆಯಲ್ಲಿ ಒಂದುವೇಳೆ ಏಕಾದಶಿಯಲ್ಲಿ ಅಕ್ಕಿ ತಿಂದರೆ, ಮನದ ಆಯತನವು ಪರಿಪೂರ್ಣವಾಗುತ್ತದೆ. ವಿಷ್ಣು ಪ್ರವೇಶಕ್ಕಾಗಿ ಸ್ಥಾನವೇ ಇರುವುದಿಲ್ಲ. ನಾವು ಪ್ರಕೃತಿಪ್ರದತ್ತ ವೈಷ್ಣವ ತತ್ತ್ವಾಗನದಿಂದ ವಞ್ಚಿತರಾಗುವುದು ಬೇಡವೆಂಬ ಒಂದೇ ಉದ್ದೇಶದಿಂದ ಏಕಾದಶಿಯಲ್ಲಿ ಅಕ್ಕಿಯಿಂದ ಮಾಡಿದ ಭೋಜನವು ನಿಷಿದ್ಧ ಎಂದು ಆಚರಣೆಗೆ ತಂದರು.

ಈ ಪ್ರಾಸಙ್ಗಿಕ ಚರ್ಚೆಯನ್ನು ಸಮಾಪ್ತಿಗೊಳಿಸುತ್ತಾ ಕೊನೆಗೆ ಹೇಳಬೇಕಾಗಿರುವುದೇನೆಂದರೆ, ಅಕ್ಷತವು ಸತ್ಯವಾಗಿ ಅಕ್ಷತ ಸೋಮವಾಗಿದೆ, ಅಲ್ಲಿ ‘ಪಞ್ಚಮ್ಯಾಮಾಹುತಾವಾಪಃ ಪುರುಷವಚಸೋ ಭವನ್ತಿ’ ಎಂಬನುಸಾರ ಪುರುಷೋತ್ಪಾದಕ ಶುಕ್ರವು ಅಪ್‍ಪ್ರಧಾನ, ಹಾಗೇ ವರುಣಪ್ರಧಾನವಾಗಿದೆ. ಆದ್ದರಿಂದ ಇದರಲ್ಲಿ ಸಹೋರೂಪದಲ್ಲಿ ಪ್ರತಿಷ್ಠಿತ ಚಾನ್ದ್ರರಸವೂ ಇನ್ದ್ರ ಪ್ರವೇಶಾಭಾವದಿಂದ ಅಕ್ಷತವಾಗಿ ಇರುತ್ತದೆ. ಹಾಗಾಗಿ ಇದನ್ನು ‘ತನ್ದುಲ’ ಅಂದರೆ ‘ಅಕ್ಷತ’ ಎಂಬ ಹೆಸರಿನಿಂದ ವ್ಯವಹೃತಗೊಳಿಸುವುದು ಸಮೀಚೀನವಾಗುತ್ತದೆ. ಅಷ್ಟಾವಿಂಶತಿ ಕಲೆಗಳು ಆಹ್ನಿಕ ಸಹಃಪಿಣ್ಡದ ಮಾಸಿಕ ಪಿಣ್ಡದಲ್ಲಿ ಅನ್ತರ್ಭಾವವಾಗಿದೆ. ಈ ದೃಷ್ಟಿಯಲ್ಲಿ ೧೩ ಮಾಸಿಕ, ೨-ಷಾಣ್ಮಾಸಿಕ, ೧-ಸಾಮ್ವತ್ಸರಿಕ ಭೇದದಿಂದ ಒಟ್ಟು ೧೬ ಪಿಣ್ಡಗಳಾಗುತ್ತವೆ. ಇದನ್ನು ಪೂರ್ವದಲ್ಲಿ ಸ್ಪಷ್ಟಪಡಿಸಲಾಗಿದೆ –

ಪಿಣ್ಡಸಮ್ಪತ್ತಿ ಪರಿಲೇಖಃಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Tuesday, 20 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪಿತೃ “ಸಹಃ” ಸ್ವರೂಪವಿಜ್ಞಾನ (೧೮)

೧೮. ಪಿತೃ “ಸಹಃ” ಸ್ವರೂಪವಿಜ್ಞಾನ

ಈಗ ಪ್ರಜಾತನ್ತುವಿತಾನಕ್ಕೆ ಸಮ್ಬನ್ಧವಿರುವಂತಹಾ ಒಂದು ವಿಶೇಷ ತತ್ತ್ವದತ್ತ ಶ್ರಾದ್ಧಕರ್ಮ್ಮಪ್ರೇಮಿಗಳ ಧ್ಯಾನವನ್ನು ಆಕರ್ಷಿತಗೊಳಿಸಲಾಗುತ್ತದೆ. ಇದರ ಆಧಾರದಲ್ಲಿಯೇ ಆರ್ಷ ಶ್ರಾದ್ಧಕರ್ಮ್ಮವು ಪ್ರಧಾನರೂಪದಲ್ಲಿ ಪ್ರತಿಷ್ಠಿತವಾಗಿದೆ. ಇದೇ ನಿರೂಪಣೀಯ ಪ್ರಧಾನ ತತ್ತ್ವವು ಋಗ್ವೇದ ಪರಿಭಾಷಾನುಸಾರ ‘ಸಹ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸರ್ವಜಗದಾಲಮ್ಬನ, ಬ್ರಹ್ಮಕರ್ಮ್ಮಮಯ, ಸದಸನ್ಮೂರ್ತ್ತಿ ಅವ್ಯಯ ಪುರುಷನ ಆನನ್ದ-ವಿಜ್ಞಾನ-ಮನಃ-ಪ್ರಾಣ-ವಾಕ್ ಎಂಬ ಹೆಸರಿನ ಐದು ಕಲೆಗಳು ಸುಪ್ರಸಿದ್ಧವಾಗಿವೆ. ಪಞ್ಚಕಲಾ ಅವ್ಯಯ ಪುರುಷನ ಕಲಾತ್ಮಕ ವಿವರ್ತ್ತಭಾವದ ಹೆಸರೇ ‘ಇದಂ ವಿಶ್ವಂ’ ಎಂಬುದು. ಪ್ರಯಾಸ ಪಟ್ಟರೂ ಐದು ಕಲೆಗಳ ಹೊರತು ಅನ್ಯ ವಸ್ತುತತ್ತ್ವಗಳು ಸರ್ವಥಾ ಅನುಪಲಬ್ಧವಾಗಿವೆ. ಐದು ಕಲೆಗಳ, ಅಂದರೆ ಪಞ್ಚಕಲೋಪೇತ ಅವ್ಯಯಪುರುಷನ ಇದೇ ಸರ್ವಾಧಾರರೂಪೀ ಸರ್ವರೂಪತೆಯ ಸ್ಪಷ್ಟೀಕರಣ ಮಾಡುತ್ತಾ, ಅವ್ಯಯಾವತಾರವನ್ನು ಭಗವದ್ಗೀತೆಯು ಹೇಳುತ್ತದೆ –

ಮತ್ತಃ ಪರತರಂ ನಾನ್ಯತ್ ಕಿಞ್ಚಿದಸ್ತಿ ಧನಞ್ಜಯ !
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ || (ಗೀ ೭|೭)

ಈ ೫ ಅವ್ಯಯಕಲೆಗಳ ಸಮನ್ವಯದಿಂದ ಈ ವಿಶ್ವ ಸಮಷ್ಟಿ ಹಾಗೂ ವ್ಯಷ್ಟಿ ಎಂಬೆರಡು ಪ್ರಕಾರದಿಂದ ಪಞ್ಚಭಾವಾತ್ಮಕವಾಗುತ್ತಿವೆ. ಉದಾ – ವ್ಯಷ್ಟಿ ಸಮರ್ಥಕ ಮಾನವ ಶರೀರವನ್ನೇ ನಿಮ್ಮ ಲಕ್ಷ್ಯ ಮಾಡಿಕೊಳ್ಳಿ. ಏಕೆಂದರೆ ಶ್ರಾದ್ಧಪ್ರಕರಣದಲ್ಲಿ ಶ್ರಾದ್ಧಕರ್ಮ್ಮಾನುಗತ ಮಾನವೋದಾಹರಣೆಯೇ ಸುಸಙ್ಗತ ಎಂದು ಒಪ್ಪಲಾಗಿದೆ. ಪುರುಷಸಂಸ್ಥಾದಲ್ಲಿ ಆನನ್ದ, ವಿಜ್ಞಾನ, ಮನಃ, ಪ್ರಾಣ, ಅನ್ನ ಎಂಬ ೫ ಕೋಶಗಳೆಂದು ನಂಬಲಾಗಿದೆ.

ಐದರಲ್ಲೂ ವಾಙ್ಮಯ ಅನ್ನಕೋಶವು ಸರ್ವಾಪೇಕ್ಷಯಾ ಬಹಿಃಸ್ತರವಾಗಿದೆ, ಆನನ್ದಮಯಕೋಶವು ಸರ್ವಾನ್ತರತಮವಾಗಿದೆ. ಆನನ್ದಮಯಕೋಶದ ಆಧಾರದಲ್ಲಿ ವಿಜ್ಞಾನಮಯ ಕೋಶ, ಇದರ ಆಧಾರದಲ್ಲಿ ಮನೋಮಯಕೋಶವು, ಇದರ ಆಧಾರದಲ್ಲಿ ಪ್ರಾಣಮಯಕೋಶವು, ಹಾಗೂ ಇದರ ಆಧಾರದಲ್ಲಿ ಅನ್ನಮಯ ಕೋಶವು  ಪ್ರತಿಷ್ಠಿತವಾಗಿವೆ. ಪ್ರತ್ಯಕ್ಷದೃಷ್ಟ ಭೌತಿಕ ಪಿಣ್ಡವೇ (ಶರೀರ) ಅನ್ನಮಯಕೋಶವಾಗಿದೆ. ಅಂದರೆ ರಸಾಸೃಙ್ ಮಾಂಸಮೇದೋಽಸ್ಥಿ ಮಜ್ಜಾಶುಕ್ರಾತ್ಮಕ ಸಪ್ತಧಾತು ಸಮಷ್ಟಿಯೇ ಅನ್ನಮಯಕೋಶವಾಗಿದೆ. ಹಾಗೂ ವಿಕಾರ ಕ್ಷರ ಭಾವಾನುಬನ್ಧದಿಂದ ಕ್ಷಣ ಕ್ಷಣ ಶೀರ್ಯ್ಯಮಾಣವಾಗುವುದರಿಂದ ಈ ಕೋಶವು ‘ಶರೀರ’ ಎಂಬ ಹೆಸರಿನಿಂದ; ಅಥವಾ ಇತರೆ ಆತ್ಮವಿವರ್ತ್ತಗಳ ಆಶ್ರಯ ಭೂಮಿಯಾಗುವುದರಿಂದ ಶರೀರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
(ಹೆಚ್ಚಿನ ವಿವರಣೆ – ೧. ಅನ್ನಮಯಕೋಶಃ (ಅನ್ನಮ್) - http://veda-vijnana.blogspot.com/2018/10/blog-post_9.html)

ಕ್ಷರಪರಮಾಣು ಸಂಘವನ್ನು ಒಂದು ಸೂತ್ರದಲ್ಲಿ ಬದ್ಧವಾಗಿರಿಸುವ ವಿಧರ್ತ್ತಾ ತತ್ತ್ವವೇ ಪ್ರಾಣಮಯಕೋಶವಾಗಿದೆ. ಅದು ಶರೀರಚೇಷ್ಟಾಗಳ ಮೂಲಪ್ರವರ್ತ್ತಕ ಎಂದು ನಂಬಲಾಗಿದೆ. ಪ್ರಾಣೋತ್ಕ್ರಾನ್ತಿಯಿಂದ ಅದೇ ರೀತಿಯ ಶಾರೀರಧಾತುಗಳು ಶ್ಲಥಾವಯವ ಆಗುತ್ತವೆ. ಉದಾ – ಕಾಲಾತಿಕ್ರಮದಿಂದ ಉತ್ಕ್ರಾನ್ತ ಪ್ರಾಣಾನುಗತ ಭೂತಪಿಣ್ಡವು ಜೀರ್ಣ-ಶೀರ್ಣವಾಗುತ್ತದೆ.
(ಹೆಚ್ಚಿನ ವಿವರಣೆ – ೨. ಪ್ರಾಣಮಯಕೋಶಃ (ಪ್ರಾಣಃ) - http://veda-vijnana.blogspot.com/2018/10/blog-post_11.html)

ಕ್ರಿಯಾಪ್ರವರ್ತ್ತಕ ಪ್ರಾಣದ ಕ್ರಿಯಾಧರ್ಮ್ಮದ ಮೂಲಾಲಮ್ಬದ ಕಾಮನಾಪ್ರವರ್ತ್ತಕ ತತ್ತ್ವವಿಶೇಷವೇ ಮನೋಮಯ ಕೋಶವಾಗಿದೆ.
(ಹೆಚ್ಚಿನ ವಿವರಣೆ – ೩. ಮನೋಮಯಕೋಶಃ (ಮನಃ) - http://veda-vijnana.blogspot.com/2018/10/blog-post_43.html)

ಮಾನಸ ಜಗತ್ತಿನಲ್ಲಿ ಚಿಚ್ಛಕ್ತಿಯ ಸಞ್ಚಾರ ಮಾಡುವ, ಮನೋಮಯಕೋಶವನ್ನು ಭೂತಾಸಕ್ತಿಯಿಂದ ಉಳಿಸುವಂತಹಾ ಚೇತನಾಮಯ ತತ್ತ್ವವಿಶೇಷವೇ ವಿಜ್ಞಾನಮಯಕೋಶವಾಗಿದೆ.
(ಹೆಚ್ಚಿನ ವಿವರಣೆ – ೪. ವಿಜ್ಞಾನಮಯಕೋಶಃ (ವಿಜ್ಞಾನಮ್) - http://veda-vijnana.blogspot.com/2018/10/blog-post_12.html)

ವಿಜ್ಞಾನ-ಮನಃ-ಪ್ರಾಣ-ಅನ್ನ, ಎಂಬ ನಾಲ್ಕನ್ನೂ ತಮ್ಮ ಆಕಾಶಾತ್ಮಕ ಭೂಮಾಭಾಗದಲ್ಲಿ ಪ್ರತಿಷ್ಠಿತವಾಗಿರಿಸುವ, ಸ್ವಾನುಗ್ರಹದಿಂದ ಗ್ರನ್ಥಿವಿಮೋಕದಿಂದ ಶಾಶ್ವತ ಶಾನ್ತಿ ಪ್ರದಾನ ಮಾಡುವ ‘ರಸ’ ಎಂಬ ಹೆಸರಿನ ತತ್ತ್ವ ವಿಶೇಷವೇ ಆನನ್ದಮಯಕೋಶವಾಗಿದೆ.
(ಹೆಚ್ಚಿನ ವಿವರಣೆ – ೫. ಆನನ್ದಮಯಕೋಶಃ (ಆನನ್ದಮ್) - http://veda-vijnana.blogspot.com/2018/10/blog-post_13.html)

ಈ ಐದರಲ್ಲಿ ಮಧ್ಯಸ್ಥ ಮನೋಮಯಕೋಶಕ್ಕೆ ಎರಡೂ ಕಡೆ ಸಮ್ಬನ್ಧವಿದೆ. ಇದೇ ಮನವು ವಿಜ್ಞಾನಾನುಗತವಾಗುತ್ತಾ ಆನನ್ದಸಮ್ಪತ್ತಿಯ ಅನುಗ್ರಹದಿಂದ ಮುಕ್ತಿಭಾವಪ್ರವರ್ತ್ತಕವಾಗುತ್ತದೆ, ಹಾಗೂ ಇದೇ ಮನವು ಪ್ರಾಣಾನುಗತವಾಗುತ್ತಾ ಅನ್ನಸಮ್ಪತ್ತಿಯ ಅನುಗ್ರಹದಿಂದ ಸೃಷ್ಟಿಭಾವ-ಪ್ರವರ್ತ್ತಕವಾಗುತ್ತದೆ. ಉದಾ – ‘ಮನ ಏವ ಮನುಷ್ಯಾಣಾಂ ಕಾರಣಂ-ಬನ್ಧಮೋಕ್ಷಯೋಃ’ ಇತ್ಯಾದಿ ವಚನಗಳಿಂದ ಸ್ಪಷ್ಟವಾಗಿದೆ.

ಉಕ್ತ ಐದೂ ಕೋಶಗಳಿಂದ ಕೇವಲ ‘ಅನ್ನಮಯ’ ಕೋಶದತ್ತ ವಿಶೇಷ ರೂಪದಲ್ಲಿ ಓದುಗರ ಧ್ಯಾನವನ್ನು ಆಕರ್ಷಿತಗೊಳಿಸುವ ಉದ್ದೇಶವಿಲ್ಲಿದೆ. ಅನ್ನಾಹುತಿಯಿಂದ ಉತ್ಪನ್ನವಾಗುವ ರಸಾದಿ ಶುಕ್ರಾನ್ತ ೭ ಧಾತುಗಳು, ಓಜ, ಮನ, ಎಂಬ ಮೂರೂ ವಿವರ್ತ್ತಗಳು ಅನ್ನಮಯಕೋಶದಲ್ಲಿಯೇ ಅನ್ತರ್ಭಾವವಾಗಿದೆ. ತ್ರಿಭಾವಾಪನ್ನ ಇದೇ ಅನ್ನಮಯಕೋಶವು ಪ್ರಾಣಮಯ ಅವ್ಯಯಕೋಶದ ಮೇಲೆ ಪ್ರತಿಷ್ಠಿತವಾಗಿದೆ.
> ಅನ್ನರಸಮಯ (ತದ್ಗತ ಶುದ್ಧ ಸೋಮಮಯ) ಮನವು ದಿವ್ಯ ಧಾತುವಾಗಿದೆ,
> ಅನ್ನಗತ ಪ್ರಾಣಾತ್ಮಕ ಓಜವು ಆನ್ತರಿಕ್ಷ್ಯ ಧಾತುವಾಗಿದೆ, ಹಾಗೂ
> ಅನ್ನಗತ ವಾಗಾತ್ಮಿಕಾ ಸಪ್ತಧಾತು ಸಮಷ್ಟಿಯು ಪಾರ್ಥಿವ ಧಾತುವರ್ಗವಾಗಿದೆ.

ದಿವ್ಯ ಮನ, ಆನ್ತರಿಕ್ಷ್ಯ ಓಜ, ಪಾರ್ಥಿವ ಸಪ್ತ ಧಾತು, ಎಂಬೀ ಮೂರೂ ವಿವರ್ತ್ತಗಳ ಪ್ರತಿಷ್ಠಾವು ಅನ್ನವಾಗಿದೆ. ಅನ್ನದ ಉತ್ಪತ್ತಿಯು ಚಾನ್ದ್ರಸೋಮದ ಪ್ರಧಾನ ಸಹಯೋಗದಿಂದ ಎಂದು ಈಗಾಗಲೇ ಹೇಳಲಾಗಿದೆ. ಇತರೆ ಶಬ್ದಗಳಲ್ಲಿ ವಿವರಿಸುವುದಾದರೆ ಚಾನ್ದ್ರಸೋಮವೇ ವೃಷ್ಟಿಯಿಂದ ಅನ್ನರೂಪದಲ್ಲಿ ಪರಿಣತವಾಗುತ್ತದೆ. ಸ್ವಸೋಮರಸದಿಂದ ವೃಷ್ಟಿಯ ಮುಖೇನ ಅನ್ನದ ಉಪಾದಾನವಾಗುವ ಈ ಸೋಮಮಯ ಚನ್ದ್ರನ ‘ರೇತಃ-ಯಶಃ -ಶ್ರದ್ಧಾ’ ಎಂಬ ಹೆಸರಿನ ಮೂರು ಮನೋತಾ ಎಂದು ನಂಬಲಾಗಿದೆ. ಯಾವ ತತ್ತ್ವದ ಆಧಾರದಲ್ಲಿ ಯಾವ್ಯಾವ ಸ್ವಸ್ವರೂಪದಲ್ಲಿ ಪ್ರತಿಷ್ಠಿತವಾಗಿರುತ್ತದೆಯೋ, ಯಾವ ತತ್ತ್ವದ ಹೃದ್ಯ ಮನವು ಸ್ವಸ್ವರೂಪ ರಕ್ಷೆಗಾಗಿ ಯಾವ ತತ್ತ್ವವನ್ನು ಆಶ್ರಯಿಸುತ್ತದೆಯೋ, ಆ ಆಶ್ರಯವೇ ‘ಮನಾಂಸಿ-ಓತಾನಿ’ ನಿರ್ವಚನದಿಂದ ‘ಮನೋತಾ’ ಎಂದು ಕರೆಯಲ್ಪಟ್ಟಿದೆ.

ಚನ್ದ್ರದ ಸ್ವರೂಪವು ಉಕ್ತ ಮೂರು ತತ್ತ್ವಗಳ ಆಶ್ರಯದಿಂದಲೇ ಪ್ರತಿಷ್ಠಿತವಾಗಿದೆ. ಮೂರೂ ಉತ್ಕ್ರಾನ್ತವಾಗಲು ಚನ್ದ್ರನ ಯಾವುದೇ ಸ್ವರೂಪವು ಉಳಿಯುವುದಿಲ್ಲ. ಹಾಗಾಗಿ ಇದನ್ನು ನಾವು ಅವಶ್ಯವಾಗಿಯೇ ‘ಚಾನ್ದ್ರಮನೋತಾ’ ಎಂದು ಹೇಳಬಹುದು. ಸಿದ್ಧ ವಿಷಯವೇನೆಂದರೆ, ಚಾನ್ದ್ರರಸವು ಈ ಮೂರೂ ಮನೋತಾ-ರಸಗಳಿಂದ ನಿತ್ಯ ಸಂಶ್ಲಿಷ್ಟವಾಗಿಯೇ ಅನ್ನದ ಉತ್ಪಾದಕವಾಗುತ್ತದೆ. ಫಲಿತವಾಗಿ ಉತ್ಪನ್ನ ಅನ್ನದಲ್ಲಿಯೂ ಈ ಮೂರರ ಸಮನ್ವಯವು ಸಿದ್ಧವಾಗುತ್ತದೆ. ಉತ್ಪನ್ನ ಅನ್ನದಲ್ಲಿ ಚಾನ್ದ್ರರಸಾನುಗೃಹೀತಾ ಮನೋತ್ರಯೀ ಪ್ರತಿಷ್ಠಿತವಾಗಿದೆ. ಅಲ್ಲಿ ಉತ್ಪನ್ನ ಅನ್ನದಲ್ಲಿ ಪಾರ್ಥಿವ-ಆನ್ತರಿಕ್ಷ್ಯ-ದಿವ್ಯ, ಎಂಬೀ ಮೂರೂ ಧಾತುಗಳು ಪ್ರತಿಷ್ಠಿತವಾಗಿವೆ ಎಂದು ಹೇಳಲಾಗಿದೆ, ಹಾಗೂ ಇವುಗಳನ್ನು ಕ್ರಮವಾಗಿ ಸಪ್ತಧಾತುಸಮಷ್ಟಿ, ಓಜ, ಮನ ಎಂಬ ಹೆಸರುಗಳಿಂದ ವ್ಯವಹೃತಗೊಳಿಸಲಾಗಿದೆ. ಚಾನ್ದ್ರರಸದಿಂದ ಅನ್ನದಲ್ಲಿ ಭುಕ್ತ ರೇತಃ-ಯಶಃ-ಶ್ರದ್ಧಾ ಎಂಬ ಮೂರು ಮನೋತಾ ರಸಗಳ ಕ್ರಮವಾಗಿ ಶುಕ್ರ-ಓಜ-ಮನದೊಂದಿಗೆ ಸಮ್ಬನ್ಧವಾಗುತ್ತದೆ. ರೇತೋಭಾವವು ಶುಕ್ರದ ಪ್ರತಿಷ್ಠಾ ಆಗುತ್ತದೆ, ಯಶೋಭಾವ ಓಜದ ಪ್ರತಿಷ್ಠಾ ಆಗುತ್ತದೆ, ಹಾಗೂ ಶ್ರದ್ಧಾತತ್ತ್ವವು ಮನದ ಆಲಮ್ಬನವಾಗುತ್ತದೆ. ಶ್ರದ್ಧೆಯು ಮನದಿಂದ ಉಂಟಾಗುತ್ತದೆ, ಯಶವು ಓಜಸ್ವೀಗೆ ಸಿಗುತ್ತದೆ, ರೇತಃಪ್ರಜಾತಿಯು ಶುಕ್ರದ ಮೇಲೆ ಅವಲಮ್ಬಿತವಾಗಿರುತ್ತದೆ. ಈ ರೀತಿ ಚಾನ್ದ್ರರಸದಿಂದ ಅನ್ನದಲ್ಲಿ ಭುಕ್ತ ಮನೋತಾತ್ರಯಗಳು ಈ ಕ್ರಮದಿಂದ ವಿಭಕ್ತವಾಗಿರುತ್ತದೆ –


ಉಕ್ತ ಮೂರೂ ಚಾನ್ದ್ರ ಮನೋತಗಳಲ್ಲಿ ಪ್ರಕೃತದಲ್ಲಿ ಶುಕ್ರಧಾತುವಿಗೆ ಸಮ್ಬನ್ಧವಿರುವ ‘ರೇತಃ’ ಎಂಬ ಹೆಸರಿನ ಮೊದಲ ಮನೋತವೇ ನಮ್ಮ ‘ಸಹ’ ತತ್ತ್ವದ ಪ್ರತಿಷ್ಠಾ ಆಗಿದೆ, ಇದರ ನಿರೂಪಣೆಯು ಪ್ರಕ್ರಾನ್ತವಾಗಿದೆ. ಚಾನ್ದ್ರರಸದ ಸ್ವಾಭಾವಿಕ ಆಕರ್ಷಣೆಯು ರೇತೋಮಯ ಶುಕ್ರದೊಂದಿಗೆ ನಿತ್ಯ ಸುರಕ್ಷಿತವಾಗಿರುತ್ತದೆ, ಹಾಗೂ ಇದಕ್ಕೆ ಕಾರಣವು ಏಕಮಾತ್ರ ಸಜಾತೀಯಾನುಬನ್ಧವು. ಚಾನ್ದ್ರರಸವು ವೃಷ್ಟಿರೂಪದಲ್ಲಿ ಪರಿಣತವಾಯಿತು. ವೃಷ್ಟಿಯು ಅನ್ನರೂಪದಲ್ಲಿ ಪರಿಣತವಾಯಿತು, ಭುಕ್ತಾನ್ನವು ಶುಕ್ರರೂಪದಲ್ಲಿ ಪರಿಣತವಾಯಿತು. ಈ ರೀತಿ ಪರಮ್ಪರಾನುಗತವಾಗಿ ಅನ್ನದಿಂದ ಚಾನ್ದ್ರಪಿತೃತತ್ತ್ವವು ಶುಕ್ರದಲ್ಲಿ ಪ್ರತಿಷ್ಠಿತವಾಗುತ್ತದೆ. ಇದನ್ನು ನಾವು ಪೂರ್ವದಲ್ಲಿ ‘ಭೂತಸಂಪರಿಷ್ವಕ ಮಹಾನಾತ್ಮಾ’ ಎಂದು ಹೇಳಿದ್ದೇವೆ. ಅದು ಕರ್ಮ್ಮಾತ್ಮೋತ್ಕ್ರಾನ್ತಿಯ ನಂತರ ‘ಪ್ರೇತಾತ್ಮಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಾ, ಅದೇ ಆಗಮನ ಪಥದಲ್ಲಿ ಸ್ವಪ್ರಭವದಿಂದ ಚನ್ದ್ರಲೋಕಕ್ಕೆ ಹೋಗಿ ೧೩ ಮಾಸಾನನ್ತರ ಸಾಪಿಣ್ಡ್ಯಭಾವವನ್ನು ಹೊಂದುತ್ತದೆ.

ಯಾವ ರೀತಿ ಇರಾರಸಮಯ ಪಾರ್ಥಿವ ಕರ್ಮ್ಮಾತ್ಮವು ಪರಮ್ಪರಾನುಗತವಾಗಿ, ಸಾಕ್ಷಾತ್-ರೂಪದಿಂದ ಎರಡು ರೀತಿಯಿಂದ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತವಾಗುತ್ತದೆಯೋ, ಇವೆರಡೂ ರೂಪಗಳನ್ನು ಪೂರ್ವದಲ್ಲಿ ‘ಕರ್ಮ್ಮಾತ್ಮಾ, (ಪ್ರಪದದ್ವಾರಾ ಪ್ರವಿಷ್ಟ) ಪ್ರತಿಷ್ಠಾತ್ಮಾ’ ಎಂಬ ಹೆಸರಿನಿಂದ ವಿಸ್ತಾರವಾಗಿ ನಿರೂಪಣೆ ಮಾಡಲಾಗಿದೆಯೋ ಹಾಗೆಯೇ ಚಾನ್ದ್ರರೇತೋರಸಮಯ ಮಹಾನಾತ್ಮವೂ ಪರಮ್ಪರಾನುಗವಾಗಿ, ಸಾಕ್ಷಾತ್‍ರೂಪದಿಂದ, ಎರಡು ಪ್ರಕಾರದಿಂದಲೇ ಶುಕ್ರದಲ್ಲಿ ಪ್ರತಿಷ್ಠಿತವಾಗುತ್ತದೆ. ಪರಮ್ಪರಾನುಗತವಾಗಿ ಶುಕ್ರದಲ್ಲಿ ಪ್ರತಿಷ್ಠಿತವಾಗುವ ಪಿತೃಪ್ರಾಣಮೂರ್ತ್ತಿ ಮಹಾನಾತ್ಮದ ನಿರೂಪಣೆಯನ್ನು ‘ಅಥಾತೋ ರೇತಸಃ ಸೃಷ್ಟಿಃ’ ರೂಪದಲ್ಲಿ ಪೂರ್ವದಲ್ಲಿ ಮಾಡಲಾಗಿದೆ. ಅನ್ನದಿಂದ ಪರಮ್ಪರಾನುಗತ ಇದೇ ಚಾನ್ದ್ರ ಮಹಾನ್ ಎಂಬುದು ಕರ್ಮ್ಮಾನುಸಾರವಾಗಿ ಯೋನಿಯ ಪ್ರದಾತಾ ಆಗುತ್ತದೆ. ಇದೇ ಪರಮ್ಪರಾಸಿದ್ಧ ಯೋನಿಭಾವಪ್ರವರ್ತ್ತಕ ಚಾನ್ದ್ರ ಮಹಾನಾತ್ಮದ ಆಗಮನದ ರಹಸ್ಯವನ್ನು ಅನಾವರಣ ಮಾಡುತ್ತಾ ಮಹರ್ಷಿ ಕೌಷೀತಕಿಯು ಹೇಳುತ್ತಾರೆ –
“ಏತದ್ವೈ ಸ್ವರ್ಗಸ್ಯ ಲೋಕಸ್ಯ ದ್ವಾರಃ-ಯಚ್ಚನ್ದ್ರಮಃ | ತಂ ಯಃ ಪ್ರತ್ಯಾಹ-ತಮತಿಸೃಜತೇ | ಅಥ ಯ ಏನಂ ನ ಪ್ರತ್ಯಾಹ-ತಮಿಹ ವೃಷ್ಟಿರ್ಭೂತ್ತ್ವಾ ವರ್ಷತಿ | ಸ ಇಹ ಕೀಟೋ ವಾ, ಪತಙ್ಗೋ ವಾ, ಶಕುನಿರ್ವಾ, ಶಾರ್ದುಲೋ ವಾ, ಮತ್ಸೋ ವಾ, ಪರಶ್ವಾ ವಾ, ಪುರುಷೋ ವಾ, ಅನ್ಯೋ ವಾ-ಏತೇಷು ಸ್ಥಾನೇಷು ಪ್ರತ್ಯಾಜಾಯತೇ-ಯಥಾಕರ್ಮ್ಮ, ವಥಾವಿದ್ಯಮ್” – ಕೌಷೀತಕಿ ಬ್ರಾಹ್ಮಣೋಪನಿಷತ್ ೧|೨|೨

ಈಗ ನಮ್ಮ ಸಮ್ಮುಖದಲ್ಲಿ ಆ ಪಿತೃಪ್ರಾಣವು ಬರುತ್ತದೆ; ಅದು ಚಾನ್ದ್ರನಾಡಿಯಿಂದ ಸಾಕ್ಷಾತ್ ರೂಪದಿಂದ ಶುಕ್ರಕ್ಕೆ ಬಂದು ಅಲ್ಲಿಯೇ ಪ್ರತಿಷ್ಠಿತವಾಗುತ್ತದೆ, ಹಾಗೂ ‘ಸಹಃ’ ಎಂಬ ಹೆಸರಿನಿಂದ ವಿಭೂಷಿತ, ಸಾಕ್ಷಾತ್ ರೂಪದಿಂದ ಆಗತ ಪಿತೃಪ್ರಾಣವನ್ನು ನಾವೀಗ ವಿವರಿಸಲಿದ್ದೇವೆ. ಯಾವ ನಕ್ಷತ್ರದಲ್ಲಿ ಪ್ರಾಣಿಯ ಜನ್ಮವು ಆಗುತ್ತದೆಯೋ, ಜನ್ಮಾನನ್ತರ ಅದೇ ನಕ್ಷತ್ರಪ್ರಣಾಲಿಯನ್ನು ಉಪಕ್ರಮ ಮಾಡಿಕೊಂಡು ಆ ಚಾನ್ದ್ರಪಿತೃಪ್ರಾಣವು ಪ್ರಾಣಿಯ ಶುಕ್ರದಲ್ಲಿ ಸಾಕ್ಷಾತ್ ರೂಪದಿಂದ ಬರಲಾರಮ್ಬಿಸುತ್ತದೆ. ಚಾನ್ದ್ರರಸವು ವಿಶುದ್ಧರೂಪದಿಂದ ಬರದೆ, ನಾಕ್ಷತ್ರಿಕ ರಸಗಳಿಂದ ಸಮ್ಪರಿಷ್ವಕ್ತವಾಗಿಯೇ ಬರಬೇಕು. ಯಾವ ತಿಥಿಯಲ್ಲಿ ಚನ್ದ್ರನು ಯಾವ ನಕ್ಷತ್ರದಲ್ಲಿ ಯೋಗ ಹೊಂದುತ್ತಾನೆಯೋ, ಆ ತಿಥಿಯಲ್ಲಿ ಆ ಚನ್ದ್ರನು ಅದೇ ನಕ್ಷತ್ರದ ಹೆಸರಿನಿಂದ ವ್ಯವಹೃತವಾಗುತ್ತಾನೆ. ಈ ನಕ್ಷತ್ರ ವ್ಯವಹಾರಕ್ಕೆ ಕಾರಣವು ಏನೆಂದರೆ ಆ ತಿಥಿಯಲ್ಲಿ ಆ ತಿಥಿಯ ಚಾನ್ದ್ರರಸವು ತಿಥಿಯ ನಾಕ್ಷತ್ರಿಕ ರಸದಿಂದ ಸಂಶ್ಲಿಷ್ಟವಾಗಿರುವುದು. ಉದಾಹರಣೆಗೆ ಅಶ್ವಿನಿಯ ಚನ್ದ್ರವು, ಭರಣಿಯ ಚನ್ದ್ರವು, ಕೃತ್ತಿಕೆಯ ಚನ್ದ್ರವು, ಇತ್ಯಾದಿ ಲೋಕ ವ್ಯವಹಾರಗಳ ಅರ್ಥವೇನೆಂದರೆ ಅಶ್ವಿನೀ ಪ್ರಾಣಾತ್ಮಕ ಚನ್ದ್ರನು, ಭರಣೀ ಪ್ರಾಣಾತ್ಮಕ ಚನ್ದ್ರನು, ಕೃತ್ತಿಕಾ ಪ್ರಾಣಾತ್ಮಕ ಚನ್ದ್ರನು ಇತ್ಯಾದಿ. ಈ ನಾಕ್ಷತ್ರಿಕ ಸ್ಥಿತಿಯನ್ನು ಮುಂದಿಡುತ್ತಾ ನಾವು ಚಾನ್ದ್ರ ರಸಾಗಮನದ ಮೀಮಾಂಸೆ ಮಾಡೋಣ.

ಇಂದು ಭೂಪಿಣ್ಡದ ಮೇಲೆ ಖಗೋಲೀಯ ಅಶ್ವಿನೀ ನಕ್ಷತ್ರದ ಭೋಗವಾಗುತ್ತಿದೆ ಎಂದು ಕಲ್ಪನೆ ಮಾಡಿಕೊಳ್ಳಿ. ಹಾಗೂ ತತ್ಸಮ್ಬನ್ಧದಿಂದ ಚನ್ದ್ರನೂ ತದ್ರಸ ಪ್ರಧಾನವಾಗುತ್ತಾ ‘ಅಶ್ವಿನಿಯ ಚನ್ದ್ರ’ ಎಂದು ಕರೆಯಲ್ಪಡುತ್ತಾನೆ. ಈ ಪ್ರಾಕೃತಿಕ ಸ್ಥಿತಿಯಲ್ಲಿ ಚಾನ್ದ್ರನಾಡಿಯಿಂದ ಸಮಾನಾಕರ್ಷಣೆಯ ಆಧಾರದಲ್ಲಿ ಶುಕ್ರದಲ್ಲಿ ಯಾವ ಚಾನ್ದ್ರರಸ ಬರುತ್ತದೆಯೋ, ಅದೂ ಅಶ್ವಿನೀ ನಕ್ಷತ್ರ ಪ್ರಾಣಪ್ರಧಾನವೆಂದೇ ನಂಬಲಾಗಿದೆ. ಅಶ್ವಿನೀ ಪ್ರಾಣಸಮ್ಪೃಕ್ತ ಚಾನ್ದ್ರರಸವು ಅವಶ್ಯಕವಾಗಿ ಬರುತ್ತದೆ; ಆದರೆ ದಿನದಲ್ಲಲ್ಲ, ರಾತ್ರಿಯಲ್ಲಿ. ‘ಏಷ ವೈ ಸೋಮೋ ರಾಜಾ ದೇವಾನಾಮನ್ನ ಯಚ್ಚನ್ದ್ರಮಾಃ’ (ಶತ ೧|೬|೪|೫). ಈ ಶ್ರೌತಸಿದ್ಧಾನ್ತದ ಅನುಸಾರ ಚಾನ್ದ್ರರಸವು ಇನ್ದ್ರಾಗ್ನಿಮಯ ಸೌರಪ್ರಾಣದೇವತೆಗಳ ಅನ್ನವಾಗಿದೆ. ಸೂರ್ಯ್ಯೋದಯದಿಂದ ಸೂರ್ಯ್ಯಾಸ್ತದ ಪರ್ಯ್ಯನ್ತ ಎಷ್ಟು ಚಾನ್ದ್ರರಸ ಮಾತ್ರಾವು ಪ್ರವರ್ಗ್ಯರೂಪದಿಂದ ಭೂಪಿಣ್ಡದತ್ತ ಬರುತ್ತದೆಯೋ, ಅಷ್ಟನ್ನು ಸೂರ್ಯ್ಯರಶ್ಮಿಗತ ಪ್ರಾಣದೇವತೆಯು ತನ್ನ ಉದರದಲ್ಲಿ ಪ್ರತಿಷ್ಠಿತಗೊಳಿಸಿಕೊಳ್ಳುತ್ತದೆ. ಅದು ಸೌರಪ್ರಾಣ ರಶ್ಮಿಗಳಿಂದ ಪಾರ್ಥಿವ ದ್ರುತ ರಸಗಳವರೆಗೆ ಆದಾನ ಮಾಡುತ್ತದೆ, ಅವು ಆನ್ತರಿಷ್ಯ ಸ್ವಾನ್ನಭೂತ ಚಾನ್ದ್ರರಸವನ್ನು ಹೇಗೆ ತಾನೇ ಬಿಡಲು ಸಾಧ್ಯ? ಈ ರಸಾದಾನದಿಂದಲೇ ಪ್ರಾಣದೇವತೆಯು ‘ಆದದಾನಾ’ ಆಗುತ್ತಾ ‘ಆದಿತ್ಯ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೌರಸಾವಿತ್ರಾಗ್ನಿ ಮತ್ತು ಸೌರಮಘವೇನ್ದ್ರ, ಎರಡೂ ಚಾನ್ದ್ರಸೋಮಾನ್ನಕ್ಕಾಗಿ ‘ಅನ್ನಾದ’ ಆಗಿವೆ. ಈ ಪ್ರಬಲ ಅನ್ನಾದಗಳ ಸತ್ತೆಯಿಂದ ಆಕ್ರಾನ್ತ ಅಹಃಕಾಲವೇ ಸೋಮಾಗಮನದ ನಿರೋಧಕವಾಗಿರುತ್ತದೆ. ರಾತ್ರಿಯಲ್ಲಿ ಸೂರ್ಯ್ಯಾಸ್ತದಿಂದ ಸೂರ್ಯ್ಯೋದಯಕ್ಕೂ ಮೊದಮೊದಲು ಎರಡೂ ಅನ್ನಾದಗಳು ಸುಪ್ತವಾಗಿರುತ್ತವೆ. ಆದ್ದರಿಂದ ಪಾರ್ಥಿವ ಪ್ರಜೆಗಳಲ್ಲಿ ರಾತ್ರಿಯಲ್ಲಿಯೇ ಚಾನ್ದ್ರ ರಸವು ಬರಲಾರಮ್ಭಿಸುತ್ತದೆ. ಸೋಮದಾತ್ರೀ ರಾತ್ರಿಯು ಇದೇ ಸೋಮಭಾವದ ಸಮ್ಬನ್ಧದಿಂದ ‘ಸೌಮ್ಯಾ’ ಎಂದು ಕರೆಯಲ್ಪಟ್ಟಿದೆ.

ಈಗ ರಾತ್ರಿಯಲ್ಲಿ ಚಾನ್ದ್ರರಸದ ಆಗಮನ ಆರಮ್ಭವಾಗುತ್ತದೆ. ಸಾಯಂಕಾಲದಿಂದ ಆರಮ್ಭವಾದ ಆಗಮನವು, ಮರುದಿನ ಸೂರ್ಯ್ಯೋದಯಕ್ಕೆ ಮೊದಮೊದಲು ಆಗಮನ ಪ್ರಕ್ರಾನ್ತವಾಗಿದ್ದು, ಸೂರ್ಯ್ಯೋದಯದ ನಂತರ ಆಗಮನದ ಬಾಗಿಲು ಮುಚ್ಚಿತು. ಈ ಅಶ್ವಿನೀ ನಕ್ಷತ್ರ ಪ್ರಾಣಾತ್ಮಕ ಚನ್ದ್ರನ ಯಾವ ರಸವು ರಾತ್ರಿಯೆಲ್ಲಾ ಬಂದಿದೆಯೋ, ಅದು ಶುಕ್ರದಲ್ಲಿ ಪ್ರತಿಷ್ಠಿತವಾಗುತ್ತದೆ. ದಿನವೆಲ್ಲಾ ಸಾವಿತ್ರಾಗ್ನಿಯು ಶುಕ್ರಸ್ಥ ಚಾನ್ದ್ರರಸದ ಪರಿಪಾಕ ಮಾಡಿತು. ಪ್ರಾತಃ ಸೂರ್ಯ್ಯೋದಯದಿಂದ ಯಾವ ಪಾಕ ಕ್ರಿಯೆಯು ಆರಮ್ಭವಾಯಿತೋ, ಅದು ಸಾಯಂ ಸೂರ್ಯ್ಯಾಸ್ತ ಪರ್ಯ್ಯನ್ತ ಆ ಚಾನ್ದ್ರರಸವನ್ನು ಘನತೆಯಲ್ಲಿ ಪರಿಣತಗೊಳಿಸಿತು. ಇದೇ ಘನತ್ವ್ವವನ್ನು ಲಕ್ಷ್ಯದಲ್ಲಿಟ್ಟುಕೊಂಡು ಋಷಿಗಳು ಶುಕ್ರಸ್ಥ ಈ ಚಾನ್ದ್ರರಸವನ್ನು ‘ಪಿಣ್ಡ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದಾರೆ. ಎರಡನೇ ದಿನ ಭರಣೀ ನಕ್ಷತ್ರದ ಪ್ರವೇಶವಾಗುತ್ತದೆ, ಫಲಿತವಾಗಿ ಚಾನ್ದ್ರರಸವು ಭರಣೀರಸದಿಂದ ಸಂಶ್ಲಿಷ್ಟವಾಗುತ್ತದೆ. ರಾತ್ರಿಯಲ್ಲಿ ಪರಿಪಾಕವಾಗುತ್ತದೆ, ಹಾಗೇ ಸ್ವತನ್ತ್ರ ಪಿಣ್ದವಾಗುತ್ತದೆ. ಮೊದಲ ರಾತ್ರಿಯಲ್ಲಿ ಆಗತ ಚಾನ್ದ್ರರಸವು ದಿನದ ಬಿಸಿಯಿಂದ ಘನವಾಗಿರುತ್ತದೆ,  ಹಾಗಾಗಿ ಎರಡನೇ ರಾತ್ರಿಯಲ್ಲಿ ಆಗತ ಚಾನ್ದ್ರರಸವು ಈ ಮೊದಲ ಪಿಣ್ಡದೊಂದಿಗೆ ಸೇರದೆ ಒಂದು ಸ್ವತನ್ತ್ರ ಪಿಣ್ಡ ರೂಪದಲ್ಲಿಯೇ ಪರಿಣತವಾಗುತ್ತದೆ. ಅಶ್ವಿನ್ಯಾದಿ ನಕ್ಷತ್ರಗಳು ೨೮ ಎಂದು ನಂಬಲಾಗಿದೆ. ನಕ್ಷತ್ರ ಭೇದದಿಂದ ೨೮ ದಿನದಲ್ಲಿ ಚಾನ್ದ್ರಮಾಸದಲ್ಲಿ ೨೮ ಚಾನ್ದ್ರರಾತ್ರಿಗಳಲ್ಲಿ ೨೮ ಬಾರಿ ಚಾನ್ದ್ರರಸದ ಆಗಮನವಾಗುತ್ತದೆ, ಹಾಗೂ ಶುಕ್ರದಲ್ಲಿ ಈ ೨೮ ಚಾನ್ದ್ರರಸಗಳೇ ೨೮ ಪಿಣ್ಡಗಳಾಗುತ್ತವೆ.

ಯಾವ ಚಾನ್ದ್ರ ಸೌಮ್ಯರಸವು ಒಂದು ರಾತ್ರಿಯಲ್ಲಿ ಶುಕ್ರದಲ್ಲಿ ಸೇರುತ್ತದೆಯೋ, ಅದನ್ನು ನಾವು ಸ್ವಲ್ಪ ಸಮಯಕ್ಕೆ ಪಿಣ್ಡವಲ್ಲವೆಂದು ಹೇಳಿ ‘ತನ್ದುಲ’ (ತಂಡುಲ) ಎಂದು ಹೇಳೋಣ. ಯಾವ ರೀತಿ ಅನೇಕ ತನ್ದುಲಗಳ ಸಮಷ್ಟಿಯಿಂದ ಒಂದು ಪಿಣ್ಡವಾಗುತ್ತದೆಯೋ, ಅದೇ ರೀತಿ ೨೮ ನಾಕ್ಷತ್ರಿಕ ಚಾನ್ದ್ರರಾತ್ರಿಗಳ ತನ್ದುಲ ಸ್ಥಾನೀಯ ೨೮ ಘನರಸಗಳ ಸಮಷ್ಟಿಯಿಂದ ಒಂದು ಸ್ಥೂಲಪಿಣ್ಡದ ಸ್ವರೂಪವು ನಿಷ್ಪನ್ನವಾಗುತ್ತದೆ. ಚಾನ್ದ್ರಮಾಸದ ಸಮ್ಬನ್ಧದಿಂದ ೨೮ ಕಲೆಗಳ ಇದೇ ಶುಕ್ರಪಿಣ್ಡವು ‘ಮಾಸಿಕಪಿಣ್ಡ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ. ಅಷ್ಟಾವಿಂಶತಿ ಕಲೆಗಳ ಒಂದು ಮಾಸಿಕ ಪಿಣ್ಡವು ಒಂದು ಚಾನ್ದ್ರಮಾಸದ ಘನವಾಗಿದೆ. ಚಾನ್ದ್ರ ಸಮ್ವತ್ಸರದಲ್ಲಿ ಇಂತಹಾ ೧೩ ಮಾಸಗಳಿವೆ. ಫಲತಃ ತ್ರಯೋದಶ ಮಾಸಾತ್ಮಕ ಒಂದು ಚಾನ್ದ್ರ ಸಮ್ವತ್ಸರದಲ್ಲಿ ಶುಕ್ರದಲ್ಲಿ ೧೩ ಮಾಸಿಕ ಪಿಣ್ಡಗಳು ಪ್ರತಿಷ್ಠಿತವಾಗುತ್ತವೆ. ಈ ೧೩ ಮಾಸಿಕ ಪಿಣ್ಡಗಳ ಹೊರತುಪಡಿಸಿ ಉತ್ತರಾಯಣ ಮತ್ತು ದಕ್ಷಿಣಾಯನ ಭೇದದಿಂದ ಎರಡು ಚಾನ್ದ್ರಪಿಣ್ಡಗಳು ಉತ್ಪನ್ನವಾಗುತ್ತವೆ ಹಾಗೂ ಒಂದು ಪೂರ್ತಿ ಸಮ್ವತ್ಸರದಲ್ಲಿ ಒಂದು ಪಿಣ್ಡ ಸಮಷ್ಟಿ ರೂಪವು ಉತ್ಪನ್ನವಾಗುತ್ತದೆ. ವಸ್ತುತಸ್ತು ಪಿಣ್ಡವು ಕೇವಲ ೧೩ ಮಾತ್ರವಿದೆ. ಮಾಸ ಭೇದದಿಂದ ಎಲ್ಲಿ ಈ ೧೩ ಇವೆಯೋ, ಅಲ್ಲಿ ಅಯನ ಭೇದದಿಂದ ಹದಿಮೂರನ್ನು ಎರಡು ಭಾಗಗಳಲ್ಲಿ ವಿಭಕ್ತಗೊಳಿಸಲಾಗುತ್ತದೆ, ಹಾಗೂ ಪೂರ್ಣ ಸಮ್ವತ್ಸರದ ದೃಷ್ಟಿಯಿಂದ ಒಂದೇ ಭಾಗದಲ್ಲಿ ನೋಡಬಹುದು. ಮಾಸಿಕ, ಆಯನಿಕ, ಸಾಮ್ವತ್ಸರಿಕ ಈ ಮೂರೂ ಅವಸ್ಥೆಗಳು ಶ್ರಾದ್ಧಕರ್ಮ್ಮದಲ್ಲಿ ಗೃಹೀತವಾಗಿವೆ. ಹಾಗಾಗಿ ೧೩-ಮಾಸಿಕ, ೨-ಆಯನಿಕ, ೧-ಸಾಮ್ವತ್ಸರಿಕ, ಎಂಬೀ ದೃಷ್ಟಿಯಿಂದ ‘ಷೋಡಶಶ್ರಾದ್ಧ’ ವಿಹಿತವಾಗಿದೆ. ಇದನ್ನು ಇನ್ನೂ ವಿಸ್ತರಿಸಬಹುದು. ಒಂದುವೇಳೆ ಇನ್ನೂ ಸೂಕ್ಷ್ಮ ದೃಷ್ಟಿಯಿಂದ ವಿಚಾರ ಮಾಡಿದರೆ, ಕೇವಲ ೨೮ ಕಲೆಗಳು ಒಂದು ಮಾಸಿಕ ಪಿಣ್ಡದ ಮೇಲೆಯೇ ಉಕ್ತ ೧೬ ಪಿಣ್ಡಗಳ ಪರ್ಯ್ಯವಸಾನ ಎಂದು ಒಪ್ಪಬೇಕಾಗುತ್ತದೆ. ಮಾಸಿಕ ಪಿಣ್ಡವೇ ಮೂಲಧನವು. ಇದು ಋಣಭಾವದಲ್ಲಿ ಪರಿಣತವಾಗುತ್ತಾ, ಪೂರ್ತ್ತಿಯಾಗಿ ಪುನಃ ಧನಭಾವದ ಆಗಮನವಾಗುತ್ತದೆ. ಈ ಧಾರಾವಾಹಕ ಆದಾನ-ವಿಸರ್ಗ ಕ್ರಮದಿಂದ ೨೮ರ ಪರಿವರ್ತ್ತನೆ ಆಗುತ್ತಿರುತ್ತದೆ. ೨೮ ಕಲಾ ಪಿಣ್ಡವು ಸದಾ ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ ಹಾಗೂ ಇದುವೇ ‘ಬೀಜೀ’ ನಾಮಕ ಮೂಲಧನವಾಗಿರುತ್ತದೆ. ಇದರ ವಿವರಣೆಯು ಅನುಪದದಲ್ಲಿ ಸ್ಪಷ್ಟವಾಗಲಿದೆ.

ಮೂಲ-ತೂಲ-ಧನಭಾವ ಪರಿಲೇಖಃನಕ್ಷತ್ರ ಪ್ರಾಣ ಸಂಯುಕ್ತ ಯಾವ ಚಾನ್ದ್ರರಸವು ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆಯೋ, ಅದು ‘ಸಹಃ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಶುಕ್ರಸ್ಥ ಇದೇ ಸಹಃಪಿಣ್ಡದ ಪ್ರಭಾವದಿಂದ ಶರೀರದಲ್ಲಿ ‘ಸಾಹಸ’ ವೃತ್ತಿಯ ಉದಯವಾಗುತ್ತದೆ. ಈ ಸಹಃಪಿಣ್ಡವು ಪಿತೃಪ್ರಾಣಮಯವಾಗುತ್ತಾ ತತ್‍ಪ್ರಧಾನವಾಗಿದೆ. ಯಾವ ವ್ಯಕ್ತಿಯ ಅಧ್ಯಾತ್ಮ ಸಂಸ್ಥಾದಲ್ಲಿ ಈ ಸಹೋಮೂರ್ತ್ತಿ ಪಿತರಪ್ರಾಣವು ವಿಕಸಿತವಾಗಿರುತ್ತದೆಯೋ, ಅವರ ಶರೀರದಲ್ಲಿ ಒಂದು ರೀತಿಯ ಸ್ಫೂರ್ತ್ತಿ ಇರುತ್ತದೆ. ಇಂತಹಾ ವ್ಯಕ್ತಿಯನ್ನು ಆಲಸ್ಯವು ಸರ್ವಥಾ ಪ್ರಣಮ್ಯ ಎಂದು ನಂಬಲಾಗಿದೆ. ಇಂತಹಾ ಸಾಹಸೀ ದುಸ್ತರ ಕರ್ಮ್ಮ-ಪ್ರವೃತ್ತಿಯಲ್ಲಿಯೂ ಸಂಕೋಚ ಇರುವುದಿಲ್ಲ. ಸರಿಯಾಗಿ ಇದರ ವಿಪರೀತವಾದ ಯಾವ ವ್ಯಕ್ತಿಯ ಈ ಸಹೋಭಾಗವು ಶಿಥಿಲವಾಗಿರುತ್ತದೆಯೋ, ಅಂದರೆ ಮೂರ್ಚ್ಛಿತವಾಗಿರುತ್ತದೆಯೋ, ಆಲಸ್ಯವು ಸಾಹಸ ಪೂರ್ವಕ ಇವರ ಅತಿಥ್ಯವನ್ನು ಸ್ವೀಕಾರ ಮಾಡುತ್ತದೆ. ಮುಖದ ಮೇಲೆ ಮಕ್ಷಿಕಾಸಂಘದ ಸಾಮ್ರಾಜ್ಯಸಹಿತ ಶರೀರವು ಬಿದ್ದಿರುತ್ತದೆ, ಯಾವುದೇ ಕೆಲಸದಲ್ಲಿ ಮನೋಯೋಗವಿರುವುದಿಲ್ಲ. ಉತ್ಸಾಹವು ಏಕಾನ್ತತಃ ವಿಲೀನ ರಹಿತವಾಗಿದ್ದು ಸರ್ವತ್ರ ನಿರಾಶೆಯೇ ಸಮ್ಮುಖವಾಗಿರುತ್ತದೆ. ಶುಕ್ರಸ್ಥ ಪಿತರಪ್ರಾಣ, ಅಂದರೆ ಕೇವಲ ಪಿತೃಪ್ರಾಣ (ಜನ್ಮದಾತನ ಋಣರೂಪ ಪಿತ್ರ್ಯಂಶ) ಮಾತ್ರ ಮೂರ್ಛಿತವಾಗಿರುವುದಿಲ್ಲ, ಪಿತಾಮಹಾದಿಗಳ ಭಾಗವೂ ಮೂರ್ಚ್ಛಿತವಾಗಿರುತ್ತದೆ. ಶುಕ್ರ ಪ್ರತಿಷ್ಠಿತ ೬ ಪೀಳಿಗೆಗಳ ಪ್ರವರ್ಗ್ಯ ಭಾಗವು ಶಿಥಿಲವಾಗಿರುತ್ತದೆ. ಇಂತಹಾ ವ್ಯಕ್ತಿಯ ಇದೇ ಸ್ಥಿತಿಯ ಕಾರಣಕ್ಕಾಗಿ ಪ್ರಾನ್ತೀಯ ನುಡಿಗಟ್ಟು ಪ್ರಚಲಿತವಿದೆ – “ಇಂತಹಾ ವ್ಯಕ್ತಿಯು ಇಂತಹಾ ಕರ್ಮ್ಮದಲ್ಲಿ ಏಕೆ ನಿಮಗ್ನನಾಗಿರುತ್ತಾನೆ? ಇವನಿಗೆ ಹತಪ್ರಭ-ಹತಶ್ರೀ ಮುಖ ಎಂದು ಕರೆಯುತ್ತಾರೆ, ಅವನು ಇಂತಹಾ ಕರ್ಮ್ಮ ಮಾಡಲು ಸಾಧ್ಯವಿಲ್ಲ, ಹಾಗಾಗಿ ಅಪ್ಪ-ಅಜ್ಜರು ಸಾಯುತ್ತಿದ್ದಾರೆ”. ಸತ್ಯವಾಗಿ ಇವನ ತಂದೆ-ಅಜ್ಜರು (ಪಿತರಪ್ರಾಣಸಂಘವು) ಮೂರ್ಚ್ಛಿತರಾಗಿರುತ್ತಾರೆ.

ಭರ್ಗಃ, ಮಹಃ, ಯಶಃ, ಓಜಃ, ಊರ್ಕ್, ವರ್ಚಸ್, ಸಹಃ, ಇತ್ಯಾದಿ ಭೇದದಿಂದ ಬಲತತ್ತ್ವವು ಅನೇಕ ಶ್ರೇಣಿಯಲ್ಲಿ ವಿಭಕ್ತವೆಂದು ಒಪ್ಪಲಾಗಿದೆ. ಈ ಎಲ್ಲಾ ಬಲಗಳಲ್ಲಿ ಪ್ರಕೃತದಲ್ಲಿ ಚಾನ್ದ್ರಪ್ರಭವ ‘ಸಹೋಬಲ’ ನಾಮಕ ಬಲವಿಶೇಷದ ವ್ಯವಹಾರವೇ ಇರುವುದು. ಸೂರ್ಯ್ಯ-ಚನ್ದ್ರ-ಪೃಥಿವೀ,  ಈ ಮೂರೂ ಪ್ರಧಾನವಾಗಿ ಪ್ರಜಾಸೃಷ್ಟಿಯ ಆರಮ್ಭಕವೆಂದು ಒಪ್ಪಲಾಗಿದೆ. ಇವು ನಿರ್ಮ್ಮಾತಾ ಪ್ರವರ್ಗ್ಯ ಭಾಗದಿಂದಲೇ ತಮ್ಮ ನಿರ್ಮ್ಮಾಣ ಕರ್ಮ್ಮದಲ್ಲಿ ಸಮರ್ಥರಾಗುತ್ತವೆ, ಉದಾ – ‘ಉಚ್ಛಿಷ್ಟಾಜ್ಜಜ್ಞಿರೇ’ (ಅಥರ್ವ ಸಂಹಿತಾ) ಇತ್ಯಾದಿ ಅಥರ್ವ ಸಿದ್ಧಾನ್ತದಿಂದ ಪ್ರಮಾಣಿತವಾಗಿದೆ. ಇದರ ಈ ಪ್ರವರ್ಗ್ಯ ಭಾಗವು ಅನ್ತಃ ಬಹಿರ್ಯ್ಯಾಮ, ಭೇದದಿಂದ ಎರಡು ಪ್ರಕಾರದಲ್ಲಿ ಸ್ವಸರ್ಗಗಳಲ್ಲಿ ಪ್ರವಿಷ್ಟವಾಗುತ್ತದೆ. ಪೃಥಿವಿಯನ್ನು ಗಣಿಸೋಣ. ಇರಾಮಯ ರಸದ ಅನ್ತರ್ಯ್ಯಾಮ ರೂಪವು ‘ಕರ್ಮ್ಮಾತ್ಮಾ’ ಆಗಿದೆ, ಇದು ಅನ್ನದಿಂದ ಪರಮ್ಪರಯಾ ಔಪಪಾತಿಕ ರೂಪದಿಂದ ಉಂಟಾಗಿದೆ. ಹಾಗೇ ಪ್ರಪದದಿಂದ ಪ್ರವಿಷ್ಟವಾಗುವ ಪಾರ್ಥಿವ ಇರಾಮಯ ರಸವು ಸಾಕ್ಷಾತ್ ರೂಪದಿಂದ ಬರುತ್ತಾ ಬಹಿರ್ಯ್ಯಾಮದಿಂದ ಪ್ರತಿಷ್ಠಿತವಾಗುತ್ತದೆ; ಇದು ‘ಪ್ರತಿಷ್ಠಾತ್ಮಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೌರತತ್ತ್ವವು ಅನ್ತರ್ಯ್ಯಾಮ ಸಮ್ಬನ್ಧದಿಂದ ಪ್ರವಿಷ್ಟವಾಗಿ ಆಧ್ಯಾತ್ಮಿಕ ಪ್ರಾಣದೇವತೆ, ಬುದ್ಧಿರೂಪದಲ್ಲಿ ಪರಿಣತವಾಗುತ್ತದೆ, ಈ ಬುದ್ಧಿಯನ್ನು ನಾವು ‘ಕ್ಷೇತ್ರಜ್ಞ’ (ವಿಜ್ಞಾನಾತ್ಮಾ) ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದೇವೆ. ಬಹಿರ್ಯ್ಯಾಮ ಸಮ್ಬನ್ಧದಿಂದ ಪ್ರವಿಷ್ಟ ಅದೇ ಸೌಮ್ಯ ಕರ್ಮ್ಮಬಲಪ್ರದಾನ ಮಾಡುತ್ತದೆ, ಚರ್ಮ್ಮಗತ ದೋಷಾಣುಗಳ ಸಂಹಾರ ಮಾಡುತ್ತದೆ, ಇದನ್ನು ನಾವು ‘ಜ್ಯೋತಿ’ ಎಂದು ಕರೆಯುತ್ತೇವೆ. ಹಾಗೆಯೇ ಚಾನ್ದ್ರರಸ ಅನ್ತರ್ಯ್ಯಾಮ ಸಮ್ಬನ್ದದಿಂದ ಅನ್ನದ ಮುಖೇನ ಅಧ್ಯಾತ್ಮದಲ್ಲಿ ಪ್ರವಿಷ್ಟವಾಗುತ್ತಲಿರುವುದು ಮನದ ನಿರ್ಮ್ಮಾಪಕವಾಗುತ್ತದೆ, ಸ್ವ ಪಿತೃಭಾಗದಿಂದ ಶುಕ್ರಸ್ಥ ‘ಮಹಾನಾತ್ಮ’ದ ಸ್ವರೂಪ ಸಮ್ಪಾದಕವಾಗುತ್ತಾ ಬಹಿರ್ಯ್ಯಾಮ ಸಮ್ಬನ್ಧದಿಂದ ಆಗತ ಅದೇ ಚಾನ್ದ್ರರಸವು ಸಾಕ್ಷಾತ್‍ರೂಪದಲ್ಲಿ ಮನೋಜಗತ್ತಿನ ಆಹ್ಲಾದದ ಕಾರಣವಾಗುತ್ತದೆ. ಹಾಗೂ ಶುಕ್ರಸ್ಥಿತ ಮಹಾನಾತ್ಮದಲ್ಲಿ ಸ್ವಪಿತೃಪ್ರಾಣ ಪ್ರದಾನದಿಂದ ಅಷ್ಟಾವಿಂಶತಿಕಲಾ ಸಹಪಿಣ್ಡವು ಉತ್ಪನ್ನವಾಗುತ್ತದೆ. ಈ ರೀತಿ ಪರಮ್ಪರೆಯಿಂದ ಅನ್ತರ್ಯ್ಯಾಮ ಸಮ್ಬನ್ಧದಿಂದ, ಸಾಕ್ಷಾತ್ ರೂಪದಲ್ಲಿ ಬಹಿರ್ಯ್ಯಾಮ ಸಮ್ಬನ್ಧದಿಂದ ಮೂರೂ ಎರಡೆರಡು ಭಾಗಗಳಲ್ಲಿ ನಮ್ಮ ಅಧ್ಯಾತ್ಮಸಂಸ್ತಾದಲ್ಲಿ ಪ್ರವಿಷ್ಟವಾಗಿರುತ್ತವೆ. ಇದನ್ನು ಕೆಳಗಿನ ಪರಿಲೇಖವು ಸ್ಪಷ್ಟ ಪಡಿಸುತ್ತದೆ –

ಕ್ಷೇತ್ರಜ್ಞ-ಮಹಾನ್-ಕರ್ಮ್ಮಾತ್ಮ ಪರಿಲೇಖಃಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Saturday, 10 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಗೋತ್ರಸೃಷ್ಟಿಮೀಮಾಂಸಾ (೧೭)

೧೭. ಗೋತ್ರಸೃಷ್ಟಿಮೀಮಾಂಸಾ-
ಸಾಪಿಣ್ಡ್ಯ ಸಮ್ಬನ್ಧದಿಂದ ಚನ್ದ್ರಲೋಕಸ್ಥ ವಂಶಜ ಪಿತರರ ಪ್ರಸಙ್ಗವು ಚಲಾವಣೆಗೊಂಡಿತು. ಆದ್ದರಿಂದ ಒಂದೆರಡು ಶಬ್ದಗಳಲ್ಲಿ ಇದರ ಮೀಮಾಂಸೆಯನ್ನು ಮಾಡಿಕೊಳ್ಳುವುದು ಅಪ್ರಾಸಙ್ಗಿಕವೇನೂ ಆಗುವುದಿಲ್ಲ. ಯಾವ ಪ್ರೇತಾತ್ಮದ ಗಮನವು ಇಂದು ಆಗುತ್ತಲಿರುವುದೋ, ಅದರ ಮೂಲಪಿತರ (ವಂಶಜ ಪಿತರ) ‘ಸಪಿಣ್ಡ, ಸೋದಕ, ಸಗೋತ್ರ’ ಭೇದದಿಂದ ೩ ಶ್ರೇಣಿಗಳಲ್ಲಿ ವಿಭಕ್ತವಾಗಿದೆ.

೧ – ಸ್ವಯಂ ಪ್ರೇತಪಿತರ,
೨ – ಪ್ರೇತಪಿತರದ ಪಿತಾ,
೩ – ಪಿತಾಮಹ;
೪ – ಪ್ರಪಿತಾಮಹ,
೫ – ವೃದ್ಧ ಪ್ರಪಿತಾಮಹ,
೬ – ಅತಿವೃದ್ಧಪ್ರಪಿತಾಮಹ,
೭ – ವೃದ್ಧಾತಿವೃದ್ಧಪ್ರಪಿತಾಮಹ,

ಎಂಬ ೭ ಪಿತರರು ‘೧-ಸಪಿಣ್ಡಪಿತರ’ ಎಂದು ಕರೆಯಲ್ಪಡುತ್ತಾರೆ. ತಾತ್ಪರ್ಯವೇನೆಂದರೆ – ‘ಸಾಪಿಣ್ಡ್ಯಂ ಸಾಪ್ತಪೌರುಷಂ, ಸಪಿಣ್ಡತಾ ತು ಪುರುಷೇ ಸಪ್ತಮೇ ವಿನಿವರ್ತ್ತತೇ’ ಸಿದ್ಧಾನ್ತದ ಅನುಸಾರ ಪಿಣ್ಡ ಸಮ್ಬನ್ಧಿ ಏಳು ಧಾರೆಗಳಲ್ಲಿಯೂ ಉಪಭುಕ್ತವಾಗಿರುತ್ತದೆ. ಪ್ರೇತಾತ್ಮದ ಹಿಂದಿನ ೬ ಪಿಣ್ಡಗಳು, ಸ್ವಯಂ ಪ್ರೇತಾತ್ಮವು ಸೇರಿ ೭ನೇ ಪಿಣ್ಡ, ಇದೇ ಸಪ್ತಪುರುಷಾನುಗತ ಸಾಪಿಣ್ಡ್ಯಭಾವವಾಗಿದೆ. ಏಳನೇ ವೃದ್ಧಾತಿವೃದ್ಧಪ್ರಪಿತಾಮಹನಿಂದ ಹಿಂದಿನ ಏಳು ಪೀಳಿಗೆಗಳ ಏಳು ಕ್ರಮಿಕ ಪಿತರರು (೧೪ ಪರ್ಯ್ಯನ್ತ) ‘೨-ಸೋದಕಪಿತರ’ ಎಂದು ಕರೆಯಲ್ಪಡುತ್ತಾರೆ. ಇದಕ್ಕೂ ಹಿಂದಿನ ಪಿತೃಸಪ್ತಕವು (೨೧ ಪರ್ಯ್ಯನ್ತ) ‘೩-ಸಗೋತ್ರಪಿತರ’ ಎಂಬ ಸಂಜ್ಞೆಯಿಂದ ಪ್ರಸಿದ್ಧವಾಗಿದೆ. ಈ ಮೂರು ಪಿತೃಸಪ್ತಕಗಳ ಅನಂತರ ‘೪-ಸಜಾತೀಯ ಬನ್ಧುಪಿತರ’ ವಿಭಾಗವಿದೆ.

‘ಸೃಷ್ಟಿ-ವೇದ-ಗೋತ್ರ’ ಭೇದದಿಂದ ಋಷಿತತ್ತ್ವವು ಮೂರು ಸೃಷ್ಟಿಗಳ ಪ್ರವರ್ತ್ತಕ ಎಂದು ನಂಬಲಾಗಿದೆ. ಸೃಷ್ಟಿ ಪ್ರವರ್ತ್ತಕ ಋಷಿ, ಗೋತ್ರಪ್ರವತ್ತಕ ಋಷಿ, ವೇದಪ್ರವರ್ತ್ತಕ ಋಷಿ, ಈ ಮೂರೂ ಋಷಿತತ್ತ್ವಗಳ ಮೂಲ ಆಧಾರವು (ಪ್ರತಿಷ್ಠಾ ವಿಕಾಸಭೂಮಿಯು) ಏಕಮಾತ್ರ ಆಙ್ಗಿರಸ-ಸ್ವಾಯಮ್ಭುವ-ಅಗ್ನಿತತ್ತ್ವವಾಗಿದೆ. ಇದರ ವಿಕಾಸವು ಆಪೋಮಯ ಪರಮೇಷ್ಠೀ-ಮಣ್ಡಲದಲ್ಲಿ ಎಂದು ನಂಬಲಾಗಿದೆ. ಋಷಿತತ್ತ್ವದ ಇದೇ ಮೂಲ ಪ್ರತಿಷ್ಠಾದ ಸ್ಪಷ್ಟೀಕರಣ ಕೊಡುತ್ತಾ ವೇದ ದ್ರಷ್ಟಾರರು ಇಂತೆಂದಿದ್ದಾರೆ –
“ವಿರೂಪಾಸ ಇದೃಷಯಸ್ತ ಇದ್ ಗಮ್ಭೀರವೇಪಸಃ |
ತೇ ಅಙ್ಗಿರಸಃ ಸೂನವಸ್ತೇ ಅಗ್ನೇಃ ಪರಿಜಜ್ಞಿರೇ” |
-       ಋಕ್ಸಂಹಿತಾ ೧೦|೬೨|೫

“ಏಕವಿಂಶಿನೋಽಙ್ಗಿರಸಃ” ಎಂಬ ಶ್ರೌತಸಿದ್ಧಾನ್ತದ ಅನುಸಾರ ಈ ಋಷಿಪ್ರಾಣಧಾರೆಯು ಮೂಲಭೂತ ಅಙ್ಗಿರಾದ ೨೧ ಧಾರೆಗಳ ಸಮ್ಬನ್ಧದಿಂದ ಗೋತ್ರಸೃಷ್ಟಿಯಲ್ಲಿ ೨೧ ಪೀಳಿಗೆಯ ಪರ್ಯ್ಯನ್ತ ಪ್ರವಾಹಿತವಾಗುತ್ತದೆ. ಇದೇ ಮೌಲಿಕ-ಶ್ರೌತ ರಹಸ್ಯದ ಆಧಾರದಲ್ಲಿ ಸ್ಮಾರ್ತ್ತಾಚಾರ್ಯ್ಯರು ಸಗೋತ್ರ ಪಿತರರ ಸೀಮೆಯನ್ನು ೨೧ನೇ ಪೀಳಿಗೆಯ ಪರ್ಯ್ಯನ್ತವೆಂದು ನಂಬಿದ್ದಾರೆ.

“ಲೋಕಸ್ತು ಭುವನೇ ಜನೇ” (ಅಮರಃ ೩|೩|೨) ಇದರ ಅನುಸಾರ ಭುವನ, ಜನ, ಇವೆರಡಕ್ಕೂ ಲೋಕ ಶಬ್ದವು ಪ್ರಯುಕ್ತವಾಗಿದೆ. ಭೂತಸರ್ಗವು (ಭೂತಪ್ರಜಾಜನರು) ೧೪ ಭಾಗಗಳಲ್ಲಿ ವಿಭಕ್ತರಾಗಿದ್ದಾರೆ. ಇದು ಸಾಂಖ್ಯ ಪರಿಭಾಷೆಯಲ್ಲಿ – ‘ಚತುರ್ದ್ದಶವಿಧ ಭೂತಸರ್ಗ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ೧೪ ಜನರ (ಪ್ರಜಾಸೃಷ್ಟಿವರ್ಗದ) ಅಪೇಕ್ಷೆಯಿಂದಲೂ ೧೪ ಲೋಕಗಳು ಪ್ರಸಿದ್ಧವಾಗಿವೆ. ಹಾಗೂ ಭೂರಾದಿ ೭ ಊರ್ಧ್ವ ಭುವನ, ಅತಲಾದಿ ೭ ಅಧೋಭುವನ, ಸಂಕಲನದಿಂದ ೧೪ ಭುವನ ದೃಷ್ಟಿಯಿಂದಲೂ ೧೪ ಲೋಕಗಳು ಪ್ರಸಿದ್ಧವಾಗಿವೆ. ಪ್ರಕೃತದಲ್ಲಿ ಜನಾತ್ಮಕ ೧೪ ಲೋಕವೇ ಅಪೇಕ್ಷಿತವಾಗಿದೆ. ‘ಮಹಾವ್ಯಾಹೃತಿ’ ಯೊಂದಿಗೆ ಸಮ್ಬನ್ಧವಿರುವ ಆಬ್ರಹ್ಮಭುವನ – ‘ಭೂಃ-ಭುವಃ-ಸ್ವಃ’ ಎಂಬ ತ್ರೈಲೋಕ್ಯದಿಂದ ಯುಕ್ತ ಭೂಃ (ರೋದಸೀ ತ್ರೈಲೋಕ್ಯ), ಭುವಃ (ಕ್ರನ್ದಸೀ ತ್ರೈಲೋಕ್ಯ), ಸ್ವಃ (ಸಂಯತೀ ತ್ರೈಲೋಕ್ಯ) ಎಂಬ ಹೆಸರಿನ ಸಪ್ತಲೋಕಾತ್ಮಕ ಮೂರು ಲೋಕಗಳಿವೆ. ಇವುಗಳ ಸಮಷ್ಟಿಗಾಗಿ ‘ತ್ರೈಲೋಕ್ಯತ್ರಿಲೋಕೀ’ ಸಂಜ್ಞೆಯು ವ್ಯವಹೃತವಾಗಿದೆ. ಇದೇ ತ್ರೈಲೋಕ್ಯತ್ರಿಲೋಕಿಯ ಗರ್ಭದಲ್ಲಿ ಚತುರ್ದಶಲೋಕಗಳು (ಪ್ರಜಾಸೃಷ್ಟಿಯು) ಪ್ರತಿಷ್ಠಿತವಾಗಿವೆ.

ಭುವನಾತ್ಮಕ (ಸ್ಥಾನಾತ್ಮಕ) ಲೋಕವನ್ನು, ಅಥವಾ ಜನಾತ್ಮಕ (ಸ್ಥಾನಸ್ಥಿತ ಪ್ರಜಾತ್ಮಕ) ಲೋಕವನ್ನು, ಉಭಯವಿಧ ಲೋಕಸೃಷ್ಟಿಯ (ಲೋಕಸೃಷ್ಟಿ ಹಾಗೂ ಲೋಕೀಸೃಷ್ಟಿ) ಮೂಲವು ಅಪ್ ತತ್ತ್ವವೆಂದೇ ಪ್ರಸಿದ್ಧವಾಗಿದೆ. ಸಿಸೃಕ್ಷ-ಪ್ರಜಾಪತಿಯು ತನ್ನ ಆಪೋಮುಖದಿಂದಲೇ ಉಭಯವಿಧ ಲೋಕಸೃಷ್ಟಿಯ ಸ್ರಷ್ಟಾ ಆಗುತ್ತಾನೆ. ಉದಾ – ‘ಅಪ ಏವ ಸಸರ್ಜಾದೌ’ ಇತ್ಯಾದಿ ಮಾನವ ಸಿದ್ಧಾನ್ತದಿಂದಲೂ ಪ್ರಮಾಣಿತವಾಗಿದೆ:

ಸೋಽಭಿಧ್ಯಾಯ ಶರೀರಾತ್ ಸ್ವಾತ್ ಸಿಸೃಕ್ಷುರ್ವಿವಿಧಾಃ ಪ್ರಜಾಃ |
ಅಪ ಏವ ಸಸರ್ಜಾದೌ ತಾಸು ಬೀಜಮವಾಸೃಜತ್ || (ಮನುಃ ೧|೮)

‘ಇತಿ ತು ಪಞ್ಚಮ್ಯಾಮಾಹುತಾವಾಪಃ ಪುರುಷವಚಸೋ ಭವನ್ತಿ’ ಇತ್ಯಾದಿ ಉಪನಿಷಚ್ಛ್ರುತಿಗಳು ಎಲ್ಲಿ ಅಪ್ ತತ್ತ್ವವನ್ನು ಪ್ರಜಾಸೃಷ್ಟಿಯ ಆರಮ್ಭಕ ಎಂದು ಘೋಷಿಸುತ್ತಿವೆಯೋ, ಅಲ್ಲಿ – ‘ಆಪೋ ವೈ ಸರ್ವಾಣಿ ಭೂತಾನಿ’ (ಶತ ೧೧|೧|೬|೧೬) ಇತ್ಯಾದಿ ಬ್ರಾಹ್ಮಣ ಶ್ರುತಿಯನ್ನು ಭೂತಾತ್ಮಿಕಾ ಲೋಕ ಸೃಷ್ಟಿಯ ಆರಮ್ಭಕ ಎಂದೂ ನಂಬಲಾಗಿದೆ. ನಿಮ್ನ ಲಿಖಿತ ವ್ಯಾಸಸೂಕ್ತಿಯೂ ಲೋಕಸೃಷ್ಟಿಯ ಅಬ್‍ರೂಪತೆಯನ್ನು ಸಮರ್ಥನೆ ಮಾಡುತ್ತಾ ಇದನ್ನು ಸರ್ವಸೃಷ್ಟಿಪ್ರವರ್ತ್ತಕ ಎಂದು ಹೇಳುತ್ತಿದೆ –
“ಅಪ್ಸು ತಂ ಮುಞ್ಚ ಭದ್ರಂ ತೇ ಲೋಕಾಹ್ಯಪ್ಸು ಪ್ರತಿಷ್ಠಿತಾಃ |
ಆಪೋಮಯಾಃ ಸರ್ವರಸಾಃ ಸರ್ವಮಾಪೋಮಯಂ ಜಗತ್ ||”
(ಮಹಾಭಾರತ)

ಚತುರ್ದ್ದಶ ಲೋಕ (ಪ್ರಜಾ) ಭೇದದಿಂದ ಅಪ್‍ತತ್ತ್ವವೂ ಚತುರ್ದ್ದಶಧಾ ವಿಭಕ್ತವಾಗಿದೆ. ಆದರೆ ಲೋಕಾತ್ಮಕ ಅಪ್‍ತತ್ತ್ವವು ಚತುರ್ದ್ದಶಧಾ ವಿಭಕ್ತವಾಗಿ ಇರುವುದರಿಂದ ಲೋಕವೂ (ಪ್ರಜಾ) ಚತುರ್ದ್ದಶಧಾ ವಿಭಕ್ತವಾಗಿದೆ. ಉಭಯಥಾ ಅಪ್‍ತತ್ತ್ವದ ೧೪ ಸಂಖ್ಯಾತತ್ತ್ವವು ಅಕ್ಷುಣ್ಣವಾಗಿದೆ. ಏಕೆಂದರೆ ಅಪ್‍ತತ್ತ್ವವು ೧೪ ಭಾಗಗಳಲ್ಲಿ ವಿಭಕ್ತವಾಗಿದೆ, ಹಾಗಾಗಿ ತದ್ರೂಪ ಪಿತೃಪರಮ್ಪರೆಯೂ ಇದೇ ಸಂಖ್ಯೆಯ ಮೇಲೆ ಉಪಸಂಹೃತವಾಗಿದೆ. ಏಕಮಾತ್ರ ಇದೇ ಮೂಲದ ಆಧಾರದ ಮೇಲೆ ಚತುರ್ದ್ದಶಪರ್ಯ್ಯನ್ತ ‘ಸೋದಕ’ (ಜಲಾಞ್ಜಲಿಯೊಂದಿಗೆ ಸಮ್ಬನ್ಧವಿರುವ) ಪಿತರರ ಸತ್ತೆ ಎಂದು ಮಾನ್ಯತೆ ಪಡೆದಿದೆ.

ಮೂರನೆಯ “ಸಪಿಣ್ಡಪಿತರ” ಎಂಬ ವಿಭಾಗವಿದೆ. ಸೋಮಗರ್ಭಿತ ಅಗ್ನಿಯೇ ಪಿಣ್ಡಸ್ವರೂಪದ ನಿಷ್ಪಾದಕ ಎಂದು ನಂಬಲಾಗಿದೆ. ಸಾಮ್ವತ್ಸರಿಕ ಅಗ್ನಿತತ್ತ್ವವು ಸೋಮಾಹುತಿಯನ್ನು ಗರ್ಭದಲ್ಲಿ ಆತ್ಮದೊಂದಿಗೆ ಸೇರಿಸುತ್ತಾ ಪಿಣ್ಡಸೃಷ್ಟಿಯ ಪ್ರವರ್ತ್ತಕವಾಗುತ್ತದೆ. ಈ ಸಾಮ್ವತ್ಸರಿಕ ಪಿಣ್ಡಭಾವವು ಸಮ್ಪಾದಕ ಋಙ್ಮೂರ್ತ್ತಿ ಅಗ್ನಿ ಸಪ್ತಸಂಸ್ಥಾ ಎಂದು ನಂಬಲಾಗಿದೆ.

“ಅಗ್ನೇರ್ ಋಗ್ವೇದಃ” – ಋಗ್ಭ್ಯೋ ಜಾತಾಂ ಸರ್ವಶೋ ಮೂರ್ತ್ತಿಮಾಹುಃ (ತೈ ೩|೧೨|೯|೧,೨)

ಏಳು ಸಂಸ್ಥಾ ಪರ್ಯ್ಯನ್ತವೇ ಸೋಮಗರ್ಭಿತ ಒಂದು ಅಗ್ನಿಘನದ (ಸ್ಥಿರ-ಧ್ರುವಾಗ್ನಿಯ) ವಿತಾನವಾಗುತ್ತದೆ. ಇದೇ ಸಪ್ತಾಗ್ನಿಪಿಣ್ಡಸಂಸ್ಥಾದ ಆಧಾರದಲ್ಲಿ ಜ್ಯೋತಿಷ್ಟೋಮ ಯಾಗದ ಏಳು ಸಂಸ್ಥಾಗಳ ಉದಯವಾಗುತ್ತದೆ. ಅದು ಸಪ್ತಕ-

೧. ಅಗ್ನಿಷ್ಟೋಮ,
೨. ಅತ್ಯಗ್ನಿಷ್ಟೋಮ,
೩. ಉಕ್ಥ್ಯಸ್ತೋಮ,
೪. ಷೋಡಶೀಸ್ತೋಮ (ಗವಾಮಯನ),
೫. ಅತಿರಾತ್ರಸ್ತೋಮ,
೬. ವಾಜಪೇಯಸ್ತೋಮ,
೭. ಆಪ್ತೋರ್ಯ್ಯಾಮಸ್ತೋಮ.

ಎಂಬ ಹೆಸರುಗಳಿಂದ ಪ್ರಸಿದ್ಧವಾಗಿವೆ. ಇದೇ ಸಪ್ತಭಾವದ ಕಾರಣದಿಂದಾಗಿ ಸೋಮಗರ್ಭಿತ ಅಗ್ನಿದೇವತಾ ‘ಸಪ್ತಾರ್ಚಿ, ಸಪ್ತ ಜಿಹ್ವ’ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧವಾಗಿದೆ. ಏಳರ ನನ್ತರ ಘನತೆಯು ಉತ್ಕ್ರಾನ್ತವಾಗಿಬಿಡುತ್ತದೆ, ಅಗ್ನಿದೇವನು ಸಂಕೋಚ ಪ್ರವರ್ತ್ತಕ ಸೋಮಸಮ್ಬನ್ಧದಿಂದ ವಞ್ಚಿತನಾಗಿರುತ್ತಾ ಸ್ವಯಂ ಸೋಮರೂಪದಲ್ಲಿ ಪರಿಣತವಾಗುತ್ತಾನೆ. ಇದೇ ಆಧಾರದಲ್ಲಿ ಋಷಿಗಳು ಪ್ರೇತಪಿತರರ ಪಿಣ್ಡತ್ತ್ವವನ್ನು ಏಳಕ್ಕೆಂದೇ ವಿಶ್ರಾನ್ತವಾಗಿದೆ ಎಂದು ಹೇಳಿದ್ದಾರೆ. ಆ ವಿಶ್ರಾನ್ತಿಯು ಪ್ರಾಕೃತಿಕ ನಿಯಮಾನುಗತ ಆಗುವುದರಿಂದ ಸರ್ವಥಾ ಮಾನ್ಯವಾಗಿದೆ. ಇದೇ ಮೂರನೆಯ ‘ಸಪಿಣ್ಡಪಿತರ’ ವಿಭಾಗವಾಗಿದೆ.

ಸೌರಸಮ್ವತ್ಸರಾನುಗತ ಪಾರ್ಥಿವ ಸಮ್ವತ್ಸರವು ಸೋಮಗರ್ಭಿತ ಅಗ್ನಿಪ್ರಧಾನವಾಗಿದೆ. ಭೃಗ್ವಙ್ಗಿರೋಮಯ ಪರಮೇಷ್ಠೀ ಸಮುದ್ರವು ಆಪಃ ಪ್ರಧಾನವಾಗಿದೆ. ಹಾಗೂ ಋತ-ಸತ್ಯಮಯ ಸ್ವಯಮ್ಭೂ ವಿಶ್ವರೂಪವು ಪ್ರಾಣಪ್ರಧಾನವಾಗಿದೆ. ಪ್ರಾಣಪ್ರಧಾನ ಸ್ವಯಮ್ಭೂವಿನ ವ್ಯಾಪ್ತಿಯು ಇತರೆ ಎರಡರ ಮೇಲಿದೆ. ಅಪ್‍ಪ್ರಧಾನ ಪರಮೇಷ್ಠಿಯ ವ್ಯಾಪ್ತಿಯು ಸೌರಪಾರ್ಥಿವ ಸಮ್ವತ್ಸರದ ಮೇಲಿದೆ. ಫಲಿತವಾಗಿ ಸ್ವಾಯಮ್ಭುವ ಪ್ರಾಣದ ವ್ಯಾಪ್ತಿಯೂ ಪೃಥಿವೀ ಪರ್ಯ್ಯನ್ತವಿದೆ, ಹಾಗೂ ಪಾರಮೇಷ್ಠ್ಯ ಅತ್‍ತತ್ತ್ವದ ವ್ಯಾಪ್ತಿಯೂ ಪೃಥಿವೀ ಪರ್ಯ್ಯನ್ತವಿದೆ ಎಂದು ಸಿದ್ಧವಾಗುತ್ತದೆ. ಹಾಗೂ ಈ ವ್ಯಾಪ್ತಿ ಪ್ರದರ್ಶನದಿಂದ ನಮಗೆ ಕೆಲ ನಿಷ್ಕರ್ಷೆ ಸಿಗುತ್ತದೆ. ಈಗ ಹೇಳಬೇಕಾಗಿರುವುದು ಏನೆಂದರೆ – ಸ್ವಾಯಮ್ಭುವ ಪ್ರಾಣವು ‘ಋಷಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಹಾಗೂ ಈ ಮೂಲರೂಪವು ಅಙ್ಗಿರಾ ಸಮ್ಬನ್ಧದಿಂದ ೨೧ ವಿಭೂತಿಭಾವಗಳಲ್ಲಿ ವಿಭಕ್ತವಾಗಿದೆ. ಇದೇ ಋಷಿಯು ಗೋತ್ರಸೃಷ್ಟಿಯ ಪ್ರವರ್ತ್ತಕವಾಗಿದೆ, ಇದೇ ಸಗೋತ್ರಪಿತೃಪ್ರಾಣದ ಮೂಲಪ್ರತಿಷ್ಠಾ ಆಗಿದೆ. ಸ್ವಾಯಮ್ಭುವ ವಿಭೂತಿಯಿಂದ ಯುಕ್ತವಾದ ಸಗೋತ್ರಪಿತರರೇ ದಿವ್ಯ ನಾನ್ದೀಮುಖ ಪಿತರರು. ಇವರಿಂದ – ‘ಗೋತ್ರಂ ನೋಽಭಿವರ್ದ್ಧನ್ತಾಮ್’ ಎಂಬ ಆಶಿಷವನ್ನು ಕೇಳಿಕೊಳ್ಳಲಾಗುತ್ತದೆ. ಪಾರಮೇಷ್ಠ್ಯ ಅಪ್‍ತತ್ತ್ವವು ಸೋದಕ ಪಿತೃಪ್ರಾಣದ ಪ್ರತಿಷ್ಠಾ ಆಗುತ್ತದೆ. ಅಪ್‍ತತ್ತ್ವಾನುಬನ್ಧೀ ಚತುರ್ದ್ದಶ ವಿಕಾಸದೊಂದಿಗೆ ಸಮ್ಬನ್ಧಿಸಿದ ಸೋದಕ ಪಿತರರು ಚತುರ್ದ್ದಶ ಶಾಖಾಪರ್ಯ್ಯನ್ತ ವ್ಯಾಪ್ತರಾಗಿರುತ್ತಾರೆ. ಇವರೇ ಆನ್ತರಿಕ್ಷ್ಯ ಪಾರ್ವಣ ಪಿತರರು. ಪಾರ್ಥಿವ ಅಗ್ನಿತತ್ತ್ವವು ಸಪಿಣ್ಡ ಪಿತರರ ಪ್ರತಿಷ್ಠಾ ಆಗಿದೆ. ಸಪ್ತಧಾ ವಿಭಕ್ತ ಅಗ್ನಿಯ ಸಮ್ಬನ್ಧದಿಂದ ಸಪಿಣ್ಡತೆಯು ಏಳು ಪೀಳಿಗೆಯ ಪರ್ಯ್ಯನ್ತ ಪ್ರಕಾನ್ತವಾಗಿರುತ್ತದೆ. ಇದುವೇ ಸಪಿಣ್ಡ ಪಿತರರ ಪಾರ್ಥಿವ ಅಶ್ರುಮುಖ ಪಿತರವಾಗಿದೆ.

ಸ್ವಯಮ್ಭುವು ಸ್ವಃ ಆಗಿದೆ, ಪರಮೇಷ್ಠಿಯು ಭುವಃ ಆಗಿದೆ, ಸಮ್ವತ್ಸರವು ಭೂಃ ಆಗಿದೆ, ಇದೇ ಮಹಾವ್ಯಾಹೃತಿರೂಪವೇ ಮಹಾವಿಶ್ವವಾಗಿದೆ. ಇದರ ಮೂರೂ ಪರ್ವಗಳಲ್ಲಿ ಕ್ರಮವಾಗಿ ಸಗೋತ್ರ-ಸೋದಕ-ಸಪಿಣ್ಡ ಪಿತರರು ಪ್ರತಿಷ್ಠಿತರಾಗಿದ್ದಾರೆ. ಋಷಿಸಮ್ಬನ್ಧದಿಂದ ಸ್ವಾಯಮ್ಭುವ ಪಿತರರು ‘ಆರ್ಷೇಯ’ ಎಂದು ಹೇಳಲ್ಪಟ್ಟಿದ್ದಾರೆ, ಅಪ್‍ಸಮ್ಬನ್ಧದಿಂದ ಪಾರಮೇಷ್ಠ್ಯ ಪಿತರವು ‘ಆಪ್ಯ’ ಎಂದು ಹೇಳಲ್ಪಟ್ಟಿದೆ. ಹಾಗೂ ಸಮ್ವತ್ಸರ-ಮಣ್ಡಲಾನ್ತರ್ವರ್ತ್ತಿ ಋತುಸೋಮದ ಸಮ್ಬನ್ಧದಿಂದ ಪಾರ್ಥಿವ-ಸಾಮ್ವತ್ಸರಿಕ ಪಿತರರು ‘ಸೌಮ್ಯ’ ಎಂದು ಹೇಳಲ್ಪಟ್ಟಿದ್ದಾರೆ. ಇದುವೇ ಈ ತ್ರಿವಿಧ ಪಿತೃಪ್ರಾಣಗಳ ಮೌಲಿಕ ಸ್ವರೂಪ ಪರಿಚಯವಾಗಿದೆ.


ಭೂಃ-ಭುವಃ-ಸ್ವಃ-ಪರಿಲೇಖ

ಇನ್ನೊಂದು ದೃಷ್ಟಿಯಿಂದ ವಿಷಯದ ಸಮನ್ವಯ ಮಾಡೋಣ. ನಿಷ್ಠಾತ್ಮಿಕಾ ಆರ್ಷವೈದಿಕ ಪರಿಭಾಷೆಗಳ ಸಮ್ಪರ್ಕಕ್ಕೆ ಬಂದಿರುವ ವಿಜ್ಞ ಓದುಗರು ದೃಶ್ಯಸ್ಥಿತಿಯ ಅಪೇಕ್ಷೆಯಿಂದ ಪೃಥಿವಿಯು (ಭೂಪಿಣ್ಡವು) ಆಧಾರ ಶಿಲೆಯಾಗಿದೆ ಎಂಬುದನ್ನು ಅವಶ್ಯವಾಗಿ ಸ್ವೀಕಾರ ಮಾಡುತ್ತಾರೆ. ಪೃಥಿವಿಯ ಮೇಲೆ ಚನ್ದ್ರವಿದೆ, ಅದರ ಮೇಲೆ ಸೂರ್ಯ್ಯನಿದ್ದಾನೆ, ತದುಪರಿ ಪರಮೇಷ್ಠೀಯ ನಿವಾಸ, ಸರ್ವೋಪರಿ ಸ್ವಯಮ್ಭೂ ಪ್ರತಿಷ್ಠವಾಗಿದೆ. ಸ್ವಾಯಮ್ಭುವ ಪ್ರಾಣವು ‘ಋಷಿ’ ಎಂಬ ಹೆಸರಿನಿಂದ, ಪಾರಮೇಷ್ಠ್ಯ ಪ್ರಾಣವು ‘ಪಿತರ’ ಎಂಬ ಹೆಸರಿನಿಂದ, ಸೌರಪ್ರಾಣವು ‘ದೇವ’ ಎಂಬ ಹೆಸರಿನಿಂದ, ಚಾನ್ದ್ರಪ್ರಾಣವು ‘ಗನ್ಧರ್ವ’ ಎಂಬ ಹೆಸರಿನಿಂದ, ಹಾಗೂ ಪಾರ್ಥಿವಪ್ರಾಣವು ‘ಪುರುಷ’ (ವೈಶ್ವಾನರ) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಪ್ರಾಣಮಯ ಸ್ವಯಮ್ಭುವು ಋಷಿತತ್ತ್ವದ, ಆಯೋಮಯ ಪರಮೇಷ್ಠಿಯು ಪಿತೃತತ್ತ್ವದ, ವಾಙ್ಮಯ ಸೂರ್ಯ್ಯವು ದೇವತತ್ತ್ವದ, ಅನ್ನಮಯ ಚನ್ದ್ರವು ಗನ್ಧರ್ವತತ್ತ್ವದ ಪ್ರವರ್ತ್ತಕ ಮತ್ತು ಅನ್ನಾದಮಯೀ ಪೃಥಿವಿಯು ಪುರುಷಸೃಷ್ಟಿಯ ಪ್ರವರ್ತ್ತಿಕಾ ಆಗಿವೆ. ಈ ಪಞ್ಚವಿವರ್ತ್ತಗಳಲ್ಲಿ ಪಾರಮೇಷ್ಠ್ಯ ಪಿತೃಪ್ರಾಣವು ನಮ್ಮ ಪ್ರಧಾನ ಲಕ್ಷ್ಯವಾಗಿದೆ.

‘ಸರ್ವಹುತಯಜ್ಞ’ ವಿಜ್ಞಾನದ ಆಧಾರದಲ್ಲಿ ನಮಗೆ ಈ ಐದೂ ಪ್ರಾಕೃತಿಕ ಪ್ರಾಣಗಳು ಪರಸ್ಪರ ಸಮನ್ವಿತವಾಗಿವೆ ಎಂದು ಕಂಡುಬರುತ್ತದೆ. ಇದೇ ಸಮನ್ವಯದ ಆಧಾರದಲ್ಲಿ ಪಾರಮೇಷ್ಠ್ಯ ಪಿತೃಪ್ರಾಣದೊಂದಿಗೂ ಶೇಷ ಋಷಿ-ದೇವ-ಗನ್ಧರ್ವ-ಪುರುಷ ಎಂಬ ನಾಲ್ಕು ಪ್ರಾಣಗಳ ಸಮನ್ವಯ ಸಮ್ಬನ್ಧವಾಗುತ್ತಿದೆ ಎಂದು ಹೇಳಬಹುದು. ನಾವಂತೂ ಈ ಮಹಾನ್ ಮೂರ್ತ್ತಿ ಪಾರಮೇಷ್ಠ್ಯ ಪಿತರಪ್ರಾಣದ ಸಮ್ಬನ್ಧದಲ್ಲಿ, ಇವೇ ನಾಲ್ಕು ಪ್ರಾಣಗಳ ವಿಕಾಸಭೂಮಿಯಾಗಿದೆ ಎಂದು ನಂಬುವವರು. ಸೃಷ್ಟಿಮರ್ಯ್ಯಾದೆಯಿಂದ ಅತೀತ, ಅಸಙ್ಗ, ಋಷಿತತ್ತ್ವಪ್ರಧಾನ ಅವ್ಯಕ್ತ ಸ್ವಯಮ್ಭೂವಿನ ಯೋಗಜ ಸಸಙ್ಗ ಸರ್ಗದಲ್ಲಿ ಪ್ರವೃತ್ತವಾಗುವುದು ಏಕಮಾತ್ರ ಇದೇ ಪಾರಮೇಷ್ಠ್ಯತತ್ತ್ವದ ಸಮನ್ವಯದ ಫಲವಾಗಿದೆ. ದೇವಪ್ರಾಣವತ್ ಹಿರಣ್ಯಗರ್ಭಸೂರ್ಯ್ಯವು ಇದೇ ಪರಮೇಷ್ಠಿಯ ಅಙ್ಗಿರಾಭಾಗದ ವಿಕಾಸವಾಗಿದೆ. ಗನ್ಧರ್ವಪ್ರಾಣಾತ್ಮಕ ಚನ್ದ್ರವು ಇದೇ ಪಾರಮೇಷ್ಠ್ಯ ಭಾರ್ಗವ ಆಪ್ಯ ವಾಯುವಿನ ವಿಕಾಸವಾಗಿದೆ. ಪುರುಷಪ್ರಾಣಾತ್ಮಿಕಾ ಪೃಥಿವಿಯೂ ಪಾರಮೇಷ್ಠ್ಯ ಅಪ್‍ತತ್ತ್ವದ ರೂಪಾನ್ತರಿತ ‘ಮರ’ ಎಂಬ ಹೆಸರಿನ ಮರ್ತ್ಯವು ನೀರಿನ ಪ್ರಯಾಸದ ಪರಿಣಾಮವೇ ಆಗಿದೆ. ಇದೇ ಈ ಪರಮೇಷ್ಠಿಯ ಮಹತ್ತ್ವವಾಗಿದೆ, ಆದರೆ ಈ ಸಲಿಲಾಧಿಷ್ಠಾತನಿಗೆ ‘ಮಹಾನ್’ ಎಂದು ಹೇಳುವುದು ಅನ್ವರ್ಥವಾಗುತ್ತದೆ, ಇದರ ಮಹತ್ತ್ವವನ್ನು ಋಷಿಗಳು ನಿಮ್ನ ಲಿಖಿತ ಶಬ್ದಗಳಲ್ಲಿ ಯಶೋಗಾನ ಮಾಡಿದ್ದಾರೆ –

“ಮಹಾ ಅಸಿ ಮಹಿಷ ವೃಷ್ಣಯೋಭಿರ್ಧನಸ್ಪೃದುಗ್ರ ಸಹಮಾನೋ ಅನ್ಯಾನ್ |
ಏಕೋ ವಿಶ್ವಸ್ಯ ಭುವನಸ್ಯ ರಾಜಾ ಸ ಯೋಧಯಾ ಚ ಕ್ಷಯಯಾ ಚ ಜನಾನ್” || (ಋಕ್ ಸಂ ೩|೪೬|೨)

ಋಷಿ-ಗನ್ಧರ್ವ-ದೇವ-ಪುರುಷ ಎಂಬ ನಾಲ್ಕೂ ಪ್ರಾಣ-ವಿಶೇಷಗಳ ಸಮನ್ವಯದಿಂದಲೇ ಪಾರಮೇಷ್ಠ್ಯ ಪಿತೃಪ್ರಾಣವು ಗೋತ್ರ, ಉದಕ, ಪಿಣ್ಡ ಭಾವತ್ರಯಿಯಲ್ಲಿ ಪರಿಣತವಾಗುತ್ತಿದೆ. ಸ್ವಾಯಮ್ಭುವ ಋಷಿಪ್ರಾಣಸಮನ್ವಯದಿಂದ ಋಷಿಮೂಲಕ ೨೧ ಅಙ್ಗಿರಾ ವಿಕಾಸ ಸಮ್ಬನ್ಧದಿಂದ ೨೧ ಭಾಗಗಳಲ್ಲಿ ವಿತತವಾದ ಅದೇ ಪಿತೃಪ್ರಾಣವು ‘ಸಗೋತ್ರಪಿತರ’ ಆಗುತ್ತಿದೆ. ಗನ್ಧರ್ವ-ಪ್ರಾಣಸಮನ್ವಯದಿಂದ ಅದೇ ಸ್ವಸ್ವರೂಪದಿಂದ ೧೪ ವಿಧ ‘ಸೋದಕ ಪಿತರ’ ಆಗುತ್ತಿದೆ. ಹಾಗೇ ದೇವ-ಪುರುಷ ಪ್ರಾಣದ್ವಯಿಯ ಸಮನ್ವಯದಿಂದ ಅದೇ ಸಪ್ತಸಂಸ್ಥಾವು ಅಗ್ನಿಮಯವಾಗುತ್ತಾ ‘ಸಪಿಣ್ಡ ಪಿತರ’ ಆಗುತ್ತಿದೆ.

ಸಪಿಣ್ಡ ಪಿತೃಸಪ್ತಕ ಸೋದಕವೂ ಆಗಿದೆ, ಸಗೋತ್ರವೂ ಆಗಿದೆ. ಏಕೆಂದರೆ ಸೋದಕ ಪಿತೃಪ್ರಾಣದ ವ್ಯಾಪ್ತಿಯು ೧೪ ಪರ್ಯ್ಯನ್ತವಿದ್ದರೆ, ಸಗೋತ್ರಪಿತೃಪ್ರಾಣದ ವ್ಯಾಪ್ತಿಯು ೨೧ ಪರ್ಯ್ಯನ್ತವಿದೆ. ಇದನ್ನು ಹಿಂದೆಯೇ ತಿಳಿಸಲಾಗಿದೆ. ಫಲಿತವಾಗಿ ಸಪ್ತಸಂಖ್ಯಾಕ ಸಪಿಣ್ಡ ಪಿತರರಲ್ಲಿ ಚತುರ್ದಶ ಸಂಖ್ಯಾಕ ಸೋದಕ ಪಿತರರ, ಹಾಗೂ ಏಕವಿಂಶತಿ ಸಂಖ್ಯಾಕ ಸಗೋತ್ರ ಪಿತರರು; ಇವೆರಡರ ಉಪಭೋಗವು ಸಿದ್ಧವಾಗುತ್ತಿದೆ. ಎರಡನೇ ವಿಭಾಗವು ‘ಸೋದಕ ಪಿತರ’ ಆಗಿದೆ. ಇದಕ್ಕೆ ೧೪ ವಿಭಾಗವಿದೆ. ಈ ೧೪ ಸೋದಕ ಪಿತರರ ಮೊದಲ ಸಪ್ತಕವು ಸಪಿಣ್ಡವೂ ಆಗಿದೆ, ಸೋದಕವೂ ಆಗಿದೆ, ಸಗೋತ್ರವೂ ಆಗಿದೆ, ಆದರೆ ಎರಡನೆಯ ಸಪ್ತಕವು ಸೋದಕ ಸಗೋತ್ರವೇ ಆಗಿದೆ. ಮೂರನೆಯ ವಿಭಾಗವು ‘ಸಗೋತ್ರಪಿತರ’, ಇದಕ್ಕೆ ೨೧ ವಿಭಾಗವಿದೆ. ಈ ೨೧ ಸಗೋತ್ರಪಿತರರ ಮೊದಲ ಸಪ್ತಕವು ಸಪಿಣ್ಡ, ಸೋದಕ, ಸಗೋತ್ರವಾಗಿದೆ, ಎರಡನೆಯ ಸಪ್ತಕವು ಸೋದಕ, ಸಗೋತ್ರವಾಗಿದೆ ಮತ್ತು ಮೂರನೆಯ ಅನ್ತಿಮ ಸಪ್ತಕವು ವಿಶುದ್ಧ ಸಗೋತ್ರವಾಗಿದೆ.

ಉಕ್ತ ವಿಭಾಗದ ತಾತ್ಪರ್ಯ್ಯವೇನೆಂದರೆ ಸೋದಕ ಪ್ರಥಮ ಸಪ್ತಕದ, ಸಗೋತ್ರ ಪ್ರಥಮ ಸಪ್ತಕದ ಸಪಿಣ್ಡ ಸಪ್ತಕದಲ್ಲಿ ಅನ್ತರ್ಭಾವವಾಗುತ್ತಿದೆ. ಸಪ್ತಸಪಿಣ್ಡ ಪಿತರರ ಅರ್ಥವೇನೆಂದರೆ – ‘ಸಪ್ತಸೋದಕ, ಸಪ್ತಸಗೋತ್ರ ಪಿತರಪ್ರಾಣಾವಚ್ಛಿನ್ನ ಸಪ್ತಸಪಿಣ್ಡ ಪಿತರ’. ಪ್ರಥಮ ಸಪ್ತಕಕ್ಕೆ ಸಪಿಣ್ಡ ಸಪ್ತಕದಲ್ಲಿ ಅನ್ತರ್ಭಾವವಿದೆ. ಸೋದಕ ಪಿತರರು ಉದಕಮರ್ಯ್ಯಾದೆಯಿಂದ ಏಳಾಗಿಯೇ ಉಳಿಯುತ್ತಾರೆ, ಇವರ ಗರ್ಭದಲ್ಲಿ ಸಗೋತ್ರ ಪಿತರರ ದ್ವಿತೀಯ ಸಪ್ತಕವು ಅನ್ತರ್ಮೂರ್ತ್ತಿಯಾಗಿರುತ್ತದೆ. ಸಪ್ತಸೋದಕ ಪಿತರರ ಅರ್ಥವೇನೆಂದರೆ – ‘ದ್ವಿತೀಯ ಸಗೋತ್ರ ಸಪ್ತಕ ಗರ್ಭಿತ ದ್ವಿತೀಯ ಸೋದಕ ಸಪ್ತಕ’. ಇದೇ ಸ್ಥಿತಿಯು ಸಗೋತ್ರ ಪಿತರರದ್ದೂ ಎಂದು ತಿಳಿದುಕೊಳ್ಳಬೇಕು. ಸಗೋತ್ರದ ಪ್ರಥಮ ಸಪ್ತಕವು ಸಪಿಣ್ಡ ಸಪ್ತಕದಲ್ಲಿ ಅನ್ತರ್ಭೂತವಾಗಿದೆ, ಮಧ್ಯಮ ಸಪ್ತಕವು ಸೋದಕ ದ್ವಿತೀಯ ಸಪ್ತಕದಲ್ಲಿ ಅನ್ತರ್ಭೂತವಾಗಿದೆ. ಫಲಿತಾಂಶವಾಗಿ ವಿಶುದ್ಧ ಸಗೋತ್ರ ಎಂದು ಹೇಳುವುದಕ್ಕೆ ಸಗೋತ್ರದ ತೃತೀಯ ಸಪ್ತಕ ಉಳಿಯುತ್ತದೆ. ಹಾಗೂ ಈ ವ್ಯವಸ್ಥೆಯ ದೃಷ್ಟಿಯಿಂದ ಸಪಿಣ್ಡ-ಸೋದಕ-ಸಗೋತ್ರ, ಮೂರರ ೭-೭-೭ ಸಂಖ್ಯೆಗಳು ಅವಶಿಷ್ಟವಾಗುತ್ತದೆ. ಮುಂದೆ ಬರಲಿರುವ ಪಿಣ್ಡಸ್ವರೂಪ ನಿರುಕ್ತಿಯಲ್ಲಿ ಈ ಎಲ್ಲಾ ವಿಷಯಗಳ ವಿವೇಚನೆ ಆಗಲಿದೆ. ಹಾಗಾಗಿ ಈ ಪ್ರಾಸಙ್ಗಿಕ ಚರ್ಚೆಯನ್ನು ಇಲ್ಲಿಯೇ ಉಪರತ ಗೊಳಿಸಲಾಗುತ್ತದೆ.

ಶ್ರಾದ್ಧಸಗೋತ್ರಪಿತರ ಪರಿಲೇಖಃಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.