Saturday, 10 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಗೋತ್ರಸೃಷ್ಟಿಮೀಮಾಂಸಾ (೧೭)

೧೭. ಗೋತ್ರಸೃಷ್ಟಿಮೀಮಾಂಸಾ-
ಸಾಪಿಣ್ಡ್ಯ ಸಮ್ಬನ್ಧದಿಂದ ಚನ್ದ್ರಲೋಕಸ್ಥ ವಂಶಜ ಪಿತರರ ಪ್ರಸಙ್ಗವು ಚಲಾವಣೆಗೊಂಡಿತು. ಆದ್ದರಿಂದ ಒಂದೆರಡು ಶಬ್ದಗಳಲ್ಲಿ ಇದರ ಮೀಮಾಂಸೆಯನ್ನು ಮಾಡಿಕೊಳ್ಳುವುದು ಅಪ್ರಾಸಙ್ಗಿಕವೇನೂ ಆಗುವುದಿಲ್ಲ. ಯಾವ ಪ್ರೇತಾತ್ಮದ ಗಮನವು ಇಂದು ಆಗುತ್ತಲಿರುವುದೋ, ಅದರ ಮೂಲಪಿತರ (ವಂಶಜ ಪಿತರ) ‘ಸಪಿಣ್ಡ, ಸೋದಕ, ಸಗೋತ್ರ’ ಭೇದದಿಂದ ೩ ಶ್ರೇಣಿಗಳಲ್ಲಿ ವಿಭಕ್ತವಾಗಿದೆ.

೧ – ಸ್ವಯಂ ಪ್ರೇತಪಿತರ,
೨ – ಪ್ರೇತಪಿತರದ ಪಿತಾ,
೩ – ಪಿತಾಮಹ;
೪ – ಪ್ರಪಿತಾಮಹ,
೫ – ವೃದ್ಧ ಪ್ರಪಿತಾಮಹ,
೬ – ಅತಿವೃದ್ಧಪ್ರಪಿತಾಮಹ,
೭ – ವೃದ್ಧಾತಿವೃದ್ಧಪ್ರಪಿತಾಮಹ,

ಎಂಬ ೭ ಪಿತರರು ‘೧-ಸಪಿಣ್ಡಪಿತರ’ ಎಂದು ಕರೆಯಲ್ಪಡುತ್ತಾರೆ. ತಾತ್ಪರ್ಯವೇನೆಂದರೆ – ‘ಸಾಪಿಣ್ಡ್ಯಂ ಸಾಪ್ತಪೌರುಷಂ, ಸಪಿಣ್ಡತಾ ತು ಪುರುಷೇ ಸಪ್ತಮೇ ವಿನಿವರ್ತ್ತತೇ’ ಸಿದ್ಧಾನ್ತದ ಅನುಸಾರ ಪಿಣ್ಡ ಸಮ್ಬನ್ಧಿ ಏಳು ಧಾರೆಗಳಲ್ಲಿಯೂ ಉಪಭುಕ್ತವಾಗಿರುತ್ತದೆ. ಪ್ರೇತಾತ್ಮದ ಹಿಂದಿನ ೬ ಪಿಣ್ಡಗಳು, ಸ್ವಯಂ ಪ್ರೇತಾತ್ಮವು ಸೇರಿ ೭ನೇ ಪಿಣ್ಡ, ಇದೇ ಸಪ್ತಪುರುಷಾನುಗತ ಸಾಪಿಣ್ಡ್ಯಭಾವವಾಗಿದೆ. ಏಳನೇ ವೃದ್ಧಾತಿವೃದ್ಧಪ್ರಪಿತಾಮಹನಿಂದ ಹಿಂದಿನ ಏಳು ಪೀಳಿಗೆಗಳ ಏಳು ಕ್ರಮಿಕ ಪಿತರರು (೧೪ ಪರ್ಯ್ಯನ್ತ) ‘೨-ಸೋದಕಪಿತರ’ ಎಂದು ಕರೆಯಲ್ಪಡುತ್ತಾರೆ. ಇದಕ್ಕೂ ಹಿಂದಿನ ಪಿತೃಸಪ್ತಕವು (೨೧ ಪರ್ಯ್ಯನ್ತ) ‘೩-ಸಗೋತ್ರಪಿತರ’ ಎಂಬ ಸಂಜ್ಞೆಯಿಂದ ಪ್ರಸಿದ್ಧವಾಗಿದೆ. ಈ ಮೂರು ಪಿತೃಸಪ್ತಕಗಳ ಅನಂತರ ‘೪-ಸಜಾತೀಯ ಬನ್ಧುಪಿತರ’ ವಿಭಾಗವಿದೆ.

‘ಸೃಷ್ಟಿ-ವೇದ-ಗೋತ್ರ’ ಭೇದದಿಂದ ಋಷಿತತ್ತ್ವವು ಮೂರು ಸೃಷ್ಟಿಗಳ ಪ್ರವರ್ತ್ತಕ ಎಂದು ನಂಬಲಾಗಿದೆ. ಸೃಷ್ಟಿ ಪ್ರವರ್ತ್ತಕ ಋಷಿ, ಗೋತ್ರಪ್ರವತ್ತಕ ಋಷಿ, ವೇದಪ್ರವರ್ತ್ತಕ ಋಷಿ, ಈ ಮೂರೂ ಋಷಿತತ್ತ್ವಗಳ ಮೂಲ ಆಧಾರವು (ಪ್ರತಿಷ್ಠಾ ವಿಕಾಸಭೂಮಿಯು) ಏಕಮಾತ್ರ ಆಙ್ಗಿರಸ-ಸ್ವಾಯಮ್ಭುವ-ಅಗ್ನಿತತ್ತ್ವವಾಗಿದೆ. ಇದರ ವಿಕಾಸವು ಆಪೋಮಯ ಪರಮೇಷ್ಠೀ-ಮಣ್ಡಲದಲ್ಲಿ ಎಂದು ನಂಬಲಾಗಿದೆ. ಋಷಿತತ್ತ್ವದ ಇದೇ ಮೂಲ ಪ್ರತಿಷ್ಠಾದ ಸ್ಪಷ್ಟೀಕರಣ ಕೊಡುತ್ತಾ ವೇದ ದ್ರಷ್ಟಾರರು ಇಂತೆಂದಿದ್ದಾರೆ –
“ವಿರೂಪಾಸ ಇದೃಷಯಸ್ತ ಇದ್ ಗಮ್ಭೀರವೇಪಸಃ |
ತೇ ಅಙ್ಗಿರಸಃ ಸೂನವಸ್ತೇ ಅಗ್ನೇಃ ಪರಿಜಜ್ಞಿರೇ” |
-       ಋಕ್ಸಂಹಿತಾ ೧೦|೬೨|೫

“ಏಕವಿಂಶಿನೋಽಙ್ಗಿರಸಃ” ಎಂಬ ಶ್ರೌತಸಿದ್ಧಾನ್ತದ ಅನುಸಾರ ಈ ಋಷಿಪ್ರಾಣಧಾರೆಯು ಮೂಲಭೂತ ಅಙ್ಗಿರಾದ ೨೧ ಧಾರೆಗಳ ಸಮ್ಬನ್ಧದಿಂದ ಗೋತ್ರಸೃಷ್ಟಿಯಲ್ಲಿ ೨೧ ಪೀಳಿಗೆಯ ಪರ್ಯ್ಯನ್ತ ಪ್ರವಾಹಿತವಾಗುತ್ತದೆ. ಇದೇ ಮೌಲಿಕ-ಶ್ರೌತ ರಹಸ್ಯದ ಆಧಾರದಲ್ಲಿ ಸ್ಮಾರ್ತ್ತಾಚಾರ್ಯ್ಯರು ಸಗೋತ್ರ ಪಿತರರ ಸೀಮೆಯನ್ನು ೨೧ನೇ ಪೀಳಿಗೆಯ ಪರ್ಯ್ಯನ್ತವೆಂದು ನಂಬಿದ್ದಾರೆ.

“ಲೋಕಸ್ತು ಭುವನೇ ಜನೇ” (ಅಮರಃ ೩|೩|೨) ಇದರ ಅನುಸಾರ ಭುವನ, ಜನ, ಇವೆರಡಕ್ಕೂ ಲೋಕ ಶಬ್ದವು ಪ್ರಯುಕ್ತವಾಗಿದೆ. ಭೂತಸರ್ಗವು (ಭೂತಪ್ರಜಾಜನರು) ೧೪ ಭಾಗಗಳಲ್ಲಿ ವಿಭಕ್ತರಾಗಿದ್ದಾರೆ. ಇದು ಸಾಂಖ್ಯ ಪರಿಭಾಷೆಯಲ್ಲಿ – ‘ಚತುರ್ದ್ದಶವಿಧ ಭೂತಸರ್ಗ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ೧೪ ಜನರ (ಪ್ರಜಾಸೃಷ್ಟಿವರ್ಗದ) ಅಪೇಕ್ಷೆಯಿಂದಲೂ ೧೪ ಲೋಕಗಳು ಪ್ರಸಿದ್ಧವಾಗಿವೆ. ಹಾಗೂ ಭೂರಾದಿ ೭ ಊರ್ಧ್ವ ಭುವನ, ಅತಲಾದಿ ೭ ಅಧೋಭುವನ, ಸಂಕಲನದಿಂದ ೧೪ ಭುವನ ದೃಷ್ಟಿಯಿಂದಲೂ ೧೪ ಲೋಕಗಳು ಪ್ರಸಿದ್ಧವಾಗಿವೆ. ಪ್ರಕೃತದಲ್ಲಿ ಜನಾತ್ಮಕ ೧೪ ಲೋಕವೇ ಅಪೇಕ್ಷಿತವಾಗಿದೆ. ‘ಮಹಾವ್ಯಾಹೃತಿ’ ಯೊಂದಿಗೆ ಸಮ್ಬನ್ಧವಿರುವ ಆಬ್ರಹ್ಮಭುವನ – ‘ಭೂಃ-ಭುವಃ-ಸ್ವಃ’ ಎಂಬ ತ್ರೈಲೋಕ್ಯದಿಂದ ಯುಕ್ತ ಭೂಃ (ರೋದಸೀ ತ್ರೈಲೋಕ್ಯ), ಭುವಃ (ಕ್ರನ್ದಸೀ ತ್ರೈಲೋಕ್ಯ), ಸ್ವಃ (ಸಂಯತೀ ತ್ರೈಲೋಕ್ಯ) ಎಂಬ ಹೆಸರಿನ ಸಪ್ತಲೋಕಾತ್ಮಕ ಮೂರು ಲೋಕಗಳಿವೆ. ಇವುಗಳ ಸಮಷ್ಟಿಗಾಗಿ ‘ತ್ರೈಲೋಕ್ಯತ್ರಿಲೋಕೀ’ ಸಂಜ್ಞೆಯು ವ್ಯವಹೃತವಾಗಿದೆ. ಇದೇ ತ್ರೈಲೋಕ್ಯತ್ರಿಲೋಕಿಯ ಗರ್ಭದಲ್ಲಿ ಚತುರ್ದಶಲೋಕಗಳು (ಪ್ರಜಾಸೃಷ್ಟಿಯು) ಪ್ರತಿಷ್ಠಿತವಾಗಿವೆ.

ಭುವನಾತ್ಮಕ (ಸ್ಥಾನಾತ್ಮಕ) ಲೋಕವನ್ನು, ಅಥವಾ ಜನಾತ್ಮಕ (ಸ್ಥಾನಸ್ಥಿತ ಪ್ರಜಾತ್ಮಕ) ಲೋಕವನ್ನು, ಉಭಯವಿಧ ಲೋಕಸೃಷ್ಟಿಯ (ಲೋಕಸೃಷ್ಟಿ ಹಾಗೂ ಲೋಕೀಸೃಷ್ಟಿ) ಮೂಲವು ಅಪ್ ತತ್ತ್ವವೆಂದೇ ಪ್ರಸಿದ್ಧವಾಗಿದೆ. ಸಿಸೃಕ್ಷ-ಪ್ರಜಾಪತಿಯು ತನ್ನ ಆಪೋಮುಖದಿಂದಲೇ ಉಭಯವಿಧ ಲೋಕಸೃಷ್ಟಿಯ ಸ್ರಷ್ಟಾ ಆಗುತ್ತಾನೆ. ಉದಾ – ‘ಅಪ ಏವ ಸಸರ್ಜಾದೌ’ ಇತ್ಯಾದಿ ಮಾನವ ಸಿದ್ಧಾನ್ತದಿಂದಲೂ ಪ್ರಮಾಣಿತವಾಗಿದೆ:

ಸೋಽಭಿಧ್ಯಾಯ ಶರೀರಾತ್ ಸ್ವಾತ್ ಸಿಸೃಕ್ಷುರ್ವಿವಿಧಾಃ ಪ್ರಜಾಃ |
ಅಪ ಏವ ಸಸರ್ಜಾದೌ ತಾಸು ಬೀಜಮವಾಸೃಜತ್ || (ಮನುಃ ೧|೮)

‘ಇತಿ ತು ಪಞ್ಚಮ್ಯಾಮಾಹುತಾವಾಪಃ ಪುರುಷವಚಸೋ ಭವನ್ತಿ’ ಇತ್ಯಾದಿ ಉಪನಿಷಚ್ಛ್ರುತಿಗಳು ಎಲ್ಲಿ ಅಪ್ ತತ್ತ್ವವನ್ನು ಪ್ರಜಾಸೃಷ್ಟಿಯ ಆರಮ್ಭಕ ಎಂದು ಘೋಷಿಸುತ್ತಿವೆಯೋ, ಅಲ್ಲಿ – ‘ಆಪೋ ವೈ ಸರ್ವಾಣಿ ಭೂತಾನಿ’ (ಶತ ೧೧|೧|೬|೧೬) ಇತ್ಯಾದಿ ಬ್ರಾಹ್ಮಣ ಶ್ರುತಿಯನ್ನು ಭೂತಾತ್ಮಿಕಾ ಲೋಕ ಸೃಷ್ಟಿಯ ಆರಮ್ಭಕ ಎಂದೂ ನಂಬಲಾಗಿದೆ. ನಿಮ್ನ ಲಿಖಿತ ವ್ಯಾಸಸೂಕ್ತಿಯೂ ಲೋಕಸೃಷ್ಟಿಯ ಅಬ್‍ರೂಪತೆಯನ್ನು ಸಮರ್ಥನೆ ಮಾಡುತ್ತಾ ಇದನ್ನು ಸರ್ವಸೃಷ್ಟಿಪ್ರವರ್ತ್ತಕ ಎಂದು ಹೇಳುತ್ತಿದೆ –
“ಅಪ್ಸು ತಂ ಮುಞ್ಚ ಭದ್ರಂ ತೇ ಲೋಕಾಹ್ಯಪ್ಸು ಪ್ರತಿಷ್ಠಿತಾಃ |
ಆಪೋಮಯಾಃ ಸರ್ವರಸಾಃ ಸರ್ವಮಾಪೋಮಯಂ ಜಗತ್ ||”
(ಮಹಾಭಾರತ)

ಚತುರ್ದ್ದಶ ಲೋಕ (ಪ್ರಜಾ) ಭೇದದಿಂದ ಅಪ್‍ತತ್ತ್ವವೂ ಚತುರ್ದ್ದಶಧಾ ವಿಭಕ್ತವಾಗಿದೆ. ಆದರೆ ಲೋಕಾತ್ಮಕ ಅಪ್‍ತತ್ತ್ವವು ಚತುರ್ದ್ದಶಧಾ ವಿಭಕ್ತವಾಗಿ ಇರುವುದರಿಂದ ಲೋಕವೂ (ಪ್ರಜಾ) ಚತುರ್ದ್ದಶಧಾ ವಿಭಕ್ತವಾಗಿದೆ. ಉಭಯಥಾ ಅಪ್‍ತತ್ತ್ವದ ೧೪ ಸಂಖ್ಯಾತತ್ತ್ವವು ಅಕ್ಷುಣ್ಣವಾಗಿದೆ. ಏಕೆಂದರೆ ಅಪ್‍ತತ್ತ್ವವು ೧೪ ಭಾಗಗಳಲ್ಲಿ ವಿಭಕ್ತವಾಗಿದೆ, ಹಾಗಾಗಿ ತದ್ರೂಪ ಪಿತೃಪರಮ್ಪರೆಯೂ ಇದೇ ಸಂಖ್ಯೆಯ ಮೇಲೆ ಉಪಸಂಹೃತವಾಗಿದೆ. ಏಕಮಾತ್ರ ಇದೇ ಮೂಲದ ಆಧಾರದ ಮೇಲೆ ಚತುರ್ದ್ದಶಪರ್ಯ್ಯನ್ತ ‘ಸೋದಕ’ (ಜಲಾಞ್ಜಲಿಯೊಂದಿಗೆ ಸಮ್ಬನ್ಧವಿರುವ) ಪಿತರರ ಸತ್ತೆ ಎಂದು ಮಾನ್ಯತೆ ಪಡೆದಿದೆ.

ಮೂರನೆಯ “ಸಪಿಣ್ಡಪಿತರ” ಎಂಬ ವಿಭಾಗವಿದೆ. ಸೋಮಗರ್ಭಿತ ಅಗ್ನಿಯೇ ಪಿಣ್ಡಸ್ವರೂಪದ ನಿಷ್ಪಾದಕ ಎಂದು ನಂಬಲಾಗಿದೆ. ಸಾಮ್ವತ್ಸರಿಕ ಅಗ್ನಿತತ್ತ್ವವು ಸೋಮಾಹುತಿಯನ್ನು ಗರ್ಭದಲ್ಲಿ ಆತ್ಮದೊಂದಿಗೆ ಸೇರಿಸುತ್ತಾ ಪಿಣ್ಡಸೃಷ್ಟಿಯ ಪ್ರವರ್ತ್ತಕವಾಗುತ್ತದೆ. ಈ ಸಾಮ್ವತ್ಸರಿಕ ಪಿಣ್ಡಭಾವವು ಸಮ್ಪಾದಕ ಋಙ್ಮೂರ್ತ್ತಿ ಅಗ್ನಿ ಸಪ್ತಸಂಸ್ಥಾ ಎಂದು ನಂಬಲಾಗಿದೆ.

“ಅಗ್ನೇರ್ ಋಗ್ವೇದಃ” – ಋಗ್ಭ್ಯೋ ಜಾತಾಂ ಸರ್ವಶೋ ಮೂರ್ತ್ತಿಮಾಹುಃ (ತೈ ೩|೧೨|೯|೧,೨)

ಏಳು ಸಂಸ್ಥಾ ಪರ್ಯ್ಯನ್ತವೇ ಸೋಮಗರ್ಭಿತ ಒಂದು ಅಗ್ನಿಘನದ (ಸ್ಥಿರ-ಧ್ರುವಾಗ್ನಿಯ) ವಿತಾನವಾಗುತ್ತದೆ. ಇದೇ ಸಪ್ತಾಗ್ನಿಪಿಣ್ಡಸಂಸ್ಥಾದ ಆಧಾರದಲ್ಲಿ ಜ್ಯೋತಿಷ್ಟೋಮ ಯಾಗದ ಏಳು ಸಂಸ್ಥಾಗಳ ಉದಯವಾಗುತ್ತದೆ. ಅದು ಸಪ್ತಕ-

೧. ಅಗ್ನಿಷ್ಟೋಮ,
೨. ಅತ್ಯಗ್ನಿಷ್ಟೋಮ,
೩. ಉಕ್ಥ್ಯಸ್ತೋಮ,
೪. ಷೋಡಶೀಸ್ತೋಮ (ಗವಾಮಯನ),
೫. ಅತಿರಾತ್ರಸ್ತೋಮ,
೬. ವಾಜಪೇಯಸ್ತೋಮ,
೭. ಆಪ್ತೋರ್ಯ್ಯಾಮಸ್ತೋಮ.

ಎಂಬ ಹೆಸರುಗಳಿಂದ ಪ್ರಸಿದ್ಧವಾಗಿವೆ. ಇದೇ ಸಪ್ತಭಾವದ ಕಾರಣದಿಂದಾಗಿ ಸೋಮಗರ್ಭಿತ ಅಗ್ನಿದೇವತಾ ‘ಸಪ್ತಾರ್ಚಿ, ಸಪ್ತ ಜಿಹ್ವ’ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧವಾಗಿದೆ. ಏಳರ ನನ್ತರ ಘನತೆಯು ಉತ್ಕ್ರಾನ್ತವಾಗಿಬಿಡುತ್ತದೆ, ಅಗ್ನಿದೇವನು ಸಂಕೋಚ ಪ್ರವರ್ತ್ತಕ ಸೋಮಸಮ್ಬನ್ಧದಿಂದ ವಞ್ಚಿತನಾಗಿರುತ್ತಾ ಸ್ವಯಂ ಸೋಮರೂಪದಲ್ಲಿ ಪರಿಣತವಾಗುತ್ತಾನೆ. ಇದೇ ಆಧಾರದಲ್ಲಿ ಋಷಿಗಳು ಪ್ರೇತಪಿತರರ ಪಿಣ್ಡತ್ತ್ವವನ್ನು ಏಳಕ್ಕೆಂದೇ ವಿಶ್ರಾನ್ತವಾಗಿದೆ ಎಂದು ಹೇಳಿದ್ದಾರೆ. ಆ ವಿಶ್ರಾನ್ತಿಯು ಪ್ರಾಕೃತಿಕ ನಿಯಮಾನುಗತ ಆಗುವುದರಿಂದ ಸರ್ವಥಾ ಮಾನ್ಯವಾಗಿದೆ. ಇದೇ ಮೂರನೆಯ ‘ಸಪಿಣ್ಡಪಿತರ’ ವಿಭಾಗವಾಗಿದೆ.

ಸೌರಸಮ್ವತ್ಸರಾನುಗತ ಪಾರ್ಥಿವ ಸಮ್ವತ್ಸರವು ಸೋಮಗರ್ಭಿತ ಅಗ್ನಿಪ್ರಧಾನವಾಗಿದೆ. ಭೃಗ್ವಙ್ಗಿರೋಮಯ ಪರಮೇಷ್ಠೀ ಸಮುದ್ರವು ಆಪಃ ಪ್ರಧಾನವಾಗಿದೆ. ಹಾಗೂ ಋತ-ಸತ್ಯಮಯ ಸ್ವಯಮ್ಭೂ ವಿಶ್ವರೂಪವು ಪ್ರಾಣಪ್ರಧಾನವಾಗಿದೆ. ಪ್ರಾಣಪ್ರಧಾನ ಸ್ವಯಮ್ಭೂವಿನ ವ್ಯಾಪ್ತಿಯು ಇತರೆ ಎರಡರ ಮೇಲಿದೆ. ಅಪ್‍ಪ್ರಧಾನ ಪರಮೇಷ್ಠಿಯ ವ್ಯಾಪ್ತಿಯು ಸೌರಪಾರ್ಥಿವ ಸಮ್ವತ್ಸರದ ಮೇಲಿದೆ. ಫಲಿತವಾಗಿ ಸ್ವಾಯಮ್ಭುವ ಪ್ರಾಣದ ವ್ಯಾಪ್ತಿಯೂ ಪೃಥಿವೀ ಪರ್ಯ್ಯನ್ತವಿದೆ, ಹಾಗೂ ಪಾರಮೇಷ್ಠ್ಯ ಅತ್‍ತತ್ತ್ವದ ವ್ಯಾಪ್ತಿಯೂ ಪೃಥಿವೀ ಪರ್ಯ್ಯನ್ತವಿದೆ ಎಂದು ಸಿದ್ಧವಾಗುತ್ತದೆ. ಹಾಗೂ ಈ ವ್ಯಾಪ್ತಿ ಪ್ರದರ್ಶನದಿಂದ ನಮಗೆ ಕೆಲ ನಿಷ್ಕರ್ಷೆ ಸಿಗುತ್ತದೆ. ಈಗ ಹೇಳಬೇಕಾಗಿರುವುದು ಏನೆಂದರೆ – ಸ್ವಾಯಮ್ಭುವ ಪ್ರಾಣವು ‘ಋಷಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಹಾಗೂ ಈ ಮೂಲರೂಪವು ಅಙ್ಗಿರಾ ಸಮ್ಬನ್ಧದಿಂದ ೨೧ ವಿಭೂತಿಭಾವಗಳಲ್ಲಿ ವಿಭಕ್ತವಾಗಿದೆ. ಇದೇ ಋಷಿಯು ಗೋತ್ರಸೃಷ್ಟಿಯ ಪ್ರವರ್ತ್ತಕವಾಗಿದೆ, ಇದೇ ಸಗೋತ್ರಪಿತೃಪ್ರಾಣದ ಮೂಲಪ್ರತಿಷ್ಠಾ ಆಗಿದೆ. ಸ್ವಾಯಮ್ಭುವ ವಿಭೂತಿಯಿಂದ ಯುಕ್ತವಾದ ಸಗೋತ್ರಪಿತರರೇ ದಿವ್ಯ ನಾನ್ದೀಮುಖ ಪಿತರರು. ಇವರಿಂದ – ‘ಗೋತ್ರಂ ನೋಽಭಿವರ್ದ್ಧನ್ತಾಮ್’ ಎಂಬ ಆಶಿಷವನ್ನು ಕೇಳಿಕೊಳ್ಳಲಾಗುತ್ತದೆ. ಪಾರಮೇಷ್ಠ್ಯ ಅಪ್‍ತತ್ತ್ವವು ಸೋದಕ ಪಿತೃಪ್ರಾಣದ ಪ್ರತಿಷ್ಠಾ ಆಗುತ್ತದೆ. ಅಪ್‍ತತ್ತ್ವಾನುಬನ್ಧೀ ಚತುರ್ದ್ದಶ ವಿಕಾಸದೊಂದಿಗೆ ಸಮ್ಬನ್ಧಿಸಿದ ಸೋದಕ ಪಿತರರು ಚತುರ್ದ್ದಶ ಶಾಖಾಪರ್ಯ್ಯನ್ತ ವ್ಯಾಪ್ತರಾಗಿರುತ್ತಾರೆ. ಇವರೇ ಆನ್ತರಿಕ್ಷ್ಯ ಪಾರ್ವಣ ಪಿತರರು. ಪಾರ್ಥಿವ ಅಗ್ನಿತತ್ತ್ವವು ಸಪಿಣ್ಡ ಪಿತರರ ಪ್ರತಿಷ್ಠಾ ಆಗಿದೆ. ಸಪ್ತಧಾ ವಿಭಕ್ತ ಅಗ್ನಿಯ ಸಮ್ಬನ್ಧದಿಂದ ಸಪಿಣ್ಡತೆಯು ಏಳು ಪೀಳಿಗೆಯ ಪರ್ಯ್ಯನ್ತ ಪ್ರಕಾನ್ತವಾಗಿರುತ್ತದೆ. ಇದುವೇ ಸಪಿಣ್ಡ ಪಿತರರ ಪಾರ್ಥಿವ ಅಶ್ರುಮುಖ ಪಿತರವಾಗಿದೆ.

ಸ್ವಯಮ್ಭುವು ಸ್ವಃ ಆಗಿದೆ, ಪರಮೇಷ್ಠಿಯು ಭುವಃ ಆಗಿದೆ, ಸಮ್ವತ್ಸರವು ಭೂಃ ಆಗಿದೆ, ಇದೇ ಮಹಾವ್ಯಾಹೃತಿರೂಪವೇ ಮಹಾವಿಶ್ವವಾಗಿದೆ. ಇದರ ಮೂರೂ ಪರ್ವಗಳಲ್ಲಿ ಕ್ರಮವಾಗಿ ಸಗೋತ್ರ-ಸೋದಕ-ಸಪಿಣ್ಡ ಪಿತರರು ಪ್ರತಿಷ್ಠಿತರಾಗಿದ್ದಾರೆ. ಋಷಿಸಮ್ಬನ್ಧದಿಂದ ಸ್ವಾಯಮ್ಭುವ ಪಿತರರು ‘ಆರ್ಷೇಯ’ ಎಂದು ಹೇಳಲ್ಪಟ್ಟಿದ್ದಾರೆ, ಅಪ್‍ಸಮ್ಬನ್ಧದಿಂದ ಪಾರಮೇಷ್ಠ್ಯ ಪಿತರವು ‘ಆಪ್ಯ’ ಎಂದು ಹೇಳಲ್ಪಟ್ಟಿದೆ. ಹಾಗೂ ಸಮ್ವತ್ಸರ-ಮಣ್ಡಲಾನ್ತರ್ವರ್ತ್ತಿ ಋತುಸೋಮದ ಸಮ್ಬನ್ಧದಿಂದ ಪಾರ್ಥಿವ-ಸಾಮ್ವತ್ಸರಿಕ ಪಿತರರು ‘ಸೌಮ್ಯ’ ಎಂದು ಹೇಳಲ್ಪಟ್ಟಿದ್ದಾರೆ. ಇದುವೇ ಈ ತ್ರಿವಿಧ ಪಿತೃಪ್ರಾಣಗಳ ಮೌಲಿಕ ಸ್ವರೂಪ ಪರಿಚಯವಾಗಿದೆ.


ಭೂಃ-ಭುವಃ-ಸ್ವಃ-ಪರಿಲೇಖ

ಇನ್ನೊಂದು ದೃಷ್ಟಿಯಿಂದ ವಿಷಯದ ಸಮನ್ವಯ ಮಾಡೋಣ. ನಿಷ್ಠಾತ್ಮಿಕಾ ಆರ್ಷವೈದಿಕ ಪರಿಭಾಷೆಗಳ ಸಮ್ಪರ್ಕಕ್ಕೆ ಬಂದಿರುವ ವಿಜ್ಞ ಓದುಗರು ದೃಶ್ಯಸ್ಥಿತಿಯ ಅಪೇಕ್ಷೆಯಿಂದ ಪೃಥಿವಿಯು (ಭೂಪಿಣ್ಡವು) ಆಧಾರ ಶಿಲೆಯಾಗಿದೆ ಎಂಬುದನ್ನು ಅವಶ್ಯವಾಗಿ ಸ್ವೀಕಾರ ಮಾಡುತ್ತಾರೆ. ಪೃಥಿವಿಯ ಮೇಲೆ ಚನ್ದ್ರವಿದೆ, ಅದರ ಮೇಲೆ ಸೂರ್ಯ್ಯನಿದ್ದಾನೆ, ತದುಪರಿ ಪರಮೇಷ್ಠೀಯ ನಿವಾಸ, ಸರ್ವೋಪರಿ ಸ್ವಯಮ್ಭೂ ಪ್ರತಿಷ್ಠವಾಗಿದೆ. ಸ್ವಾಯಮ್ಭುವ ಪ್ರಾಣವು ‘ಋಷಿ’ ಎಂಬ ಹೆಸರಿನಿಂದ, ಪಾರಮೇಷ್ಠ್ಯ ಪ್ರಾಣವು ‘ಪಿತರ’ ಎಂಬ ಹೆಸರಿನಿಂದ, ಸೌರಪ್ರಾಣವು ‘ದೇವ’ ಎಂಬ ಹೆಸರಿನಿಂದ, ಚಾನ್ದ್ರಪ್ರಾಣವು ‘ಗನ್ಧರ್ವ’ ಎಂಬ ಹೆಸರಿನಿಂದ, ಹಾಗೂ ಪಾರ್ಥಿವಪ್ರಾಣವು ‘ಪುರುಷ’ (ವೈಶ್ವಾನರ) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಪ್ರಾಣಮಯ ಸ್ವಯಮ್ಭುವು ಋಷಿತತ್ತ್ವದ, ಆಯೋಮಯ ಪರಮೇಷ್ಠಿಯು ಪಿತೃತತ್ತ್ವದ, ವಾಙ್ಮಯ ಸೂರ್ಯ್ಯವು ದೇವತತ್ತ್ವದ, ಅನ್ನಮಯ ಚನ್ದ್ರವು ಗನ್ಧರ್ವತತ್ತ್ವದ ಪ್ರವರ್ತ್ತಕ ಮತ್ತು ಅನ್ನಾದಮಯೀ ಪೃಥಿವಿಯು ಪುರುಷಸೃಷ್ಟಿಯ ಪ್ರವರ್ತ್ತಿಕಾ ಆಗಿವೆ. ಈ ಪಞ್ಚವಿವರ್ತ್ತಗಳಲ್ಲಿ ಪಾರಮೇಷ್ಠ್ಯ ಪಿತೃಪ್ರಾಣವು ನಮ್ಮ ಪ್ರಧಾನ ಲಕ್ಷ್ಯವಾಗಿದೆ.

‘ಸರ್ವಹುತಯಜ್ಞ’ ವಿಜ್ಞಾನದ ಆಧಾರದಲ್ಲಿ ನಮಗೆ ಈ ಐದೂ ಪ್ರಾಕೃತಿಕ ಪ್ರಾಣಗಳು ಪರಸ್ಪರ ಸಮನ್ವಿತವಾಗಿವೆ ಎಂದು ಕಂಡುಬರುತ್ತದೆ. ಇದೇ ಸಮನ್ವಯದ ಆಧಾರದಲ್ಲಿ ಪಾರಮೇಷ್ಠ್ಯ ಪಿತೃಪ್ರಾಣದೊಂದಿಗೂ ಶೇಷ ಋಷಿ-ದೇವ-ಗನ್ಧರ್ವ-ಪುರುಷ ಎಂಬ ನಾಲ್ಕು ಪ್ರಾಣಗಳ ಸಮನ್ವಯ ಸಮ್ಬನ್ಧವಾಗುತ್ತಿದೆ ಎಂದು ಹೇಳಬಹುದು. ನಾವಂತೂ ಈ ಮಹಾನ್ ಮೂರ್ತ್ತಿ ಪಾರಮೇಷ್ಠ್ಯ ಪಿತರಪ್ರಾಣದ ಸಮ್ಬನ್ಧದಲ್ಲಿ, ಇವೇ ನಾಲ್ಕು ಪ್ರಾಣಗಳ ವಿಕಾಸಭೂಮಿಯಾಗಿದೆ ಎಂದು ನಂಬುವವರು. ಸೃಷ್ಟಿಮರ್ಯ್ಯಾದೆಯಿಂದ ಅತೀತ, ಅಸಙ್ಗ, ಋಷಿತತ್ತ್ವಪ್ರಧಾನ ಅವ್ಯಕ್ತ ಸ್ವಯಮ್ಭೂವಿನ ಯೋಗಜ ಸಸಙ್ಗ ಸರ್ಗದಲ್ಲಿ ಪ್ರವೃತ್ತವಾಗುವುದು ಏಕಮಾತ್ರ ಇದೇ ಪಾರಮೇಷ್ಠ್ಯತತ್ತ್ವದ ಸಮನ್ವಯದ ಫಲವಾಗಿದೆ. ದೇವಪ್ರಾಣವತ್ ಹಿರಣ್ಯಗರ್ಭಸೂರ್ಯ್ಯವು ಇದೇ ಪರಮೇಷ್ಠಿಯ ಅಙ್ಗಿರಾಭಾಗದ ವಿಕಾಸವಾಗಿದೆ. ಗನ್ಧರ್ವಪ್ರಾಣಾತ್ಮಕ ಚನ್ದ್ರವು ಇದೇ ಪಾರಮೇಷ್ಠ್ಯ ಭಾರ್ಗವ ಆಪ್ಯ ವಾಯುವಿನ ವಿಕಾಸವಾಗಿದೆ. ಪುರುಷಪ್ರಾಣಾತ್ಮಿಕಾ ಪೃಥಿವಿಯೂ ಪಾರಮೇಷ್ಠ್ಯ ಅಪ್‍ತತ್ತ್ವದ ರೂಪಾನ್ತರಿತ ‘ಮರ’ ಎಂಬ ಹೆಸರಿನ ಮರ್ತ್ಯವು ನೀರಿನ ಪ್ರಯಾಸದ ಪರಿಣಾಮವೇ ಆಗಿದೆ. ಇದೇ ಈ ಪರಮೇಷ್ಠಿಯ ಮಹತ್ತ್ವವಾಗಿದೆ, ಆದರೆ ಈ ಸಲಿಲಾಧಿಷ್ಠಾತನಿಗೆ ‘ಮಹಾನ್’ ಎಂದು ಹೇಳುವುದು ಅನ್ವರ್ಥವಾಗುತ್ತದೆ, ಇದರ ಮಹತ್ತ್ವವನ್ನು ಋಷಿಗಳು ನಿಮ್ನ ಲಿಖಿತ ಶಬ್ದಗಳಲ್ಲಿ ಯಶೋಗಾನ ಮಾಡಿದ್ದಾರೆ –

“ಮಹಾ ಅಸಿ ಮಹಿಷ ವೃಷ್ಣಯೋಭಿರ್ಧನಸ್ಪೃದುಗ್ರ ಸಹಮಾನೋ ಅನ್ಯಾನ್ |
ಏಕೋ ವಿಶ್ವಸ್ಯ ಭುವನಸ್ಯ ರಾಜಾ ಸ ಯೋಧಯಾ ಚ ಕ್ಷಯಯಾ ಚ ಜನಾನ್” || (ಋಕ್ ಸಂ ೩|೪೬|೨)

ಋಷಿ-ಗನ್ಧರ್ವ-ದೇವ-ಪುರುಷ ಎಂಬ ನಾಲ್ಕೂ ಪ್ರಾಣ-ವಿಶೇಷಗಳ ಸಮನ್ವಯದಿಂದಲೇ ಪಾರಮೇಷ್ಠ್ಯ ಪಿತೃಪ್ರಾಣವು ಗೋತ್ರ, ಉದಕ, ಪಿಣ್ಡ ಭಾವತ್ರಯಿಯಲ್ಲಿ ಪರಿಣತವಾಗುತ್ತಿದೆ. ಸ್ವಾಯಮ್ಭುವ ಋಷಿಪ್ರಾಣಸಮನ್ವಯದಿಂದ ಋಷಿಮೂಲಕ ೨೧ ಅಙ್ಗಿರಾ ವಿಕಾಸ ಸಮ್ಬನ್ಧದಿಂದ ೨೧ ಭಾಗಗಳಲ್ಲಿ ವಿತತವಾದ ಅದೇ ಪಿತೃಪ್ರಾಣವು ‘ಸಗೋತ್ರಪಿತರ’ ಆಗುತ್ತಿದೆ. ಗನ್ಧರ್ವ-ಪ್ರಾಣಸಮನ್ವಯದಿಂದ ಅದೇ ಸ್ವಸ್ವರೂಪದಿಂದ ೧೪ ವಿಧ ‘ಸೋದಕ ಪಿತರ’ ಆಗುತ್ತಿದೆ. ಹಾಗೇ ದೇವ-ಪುರುಷ ಪ್ರಾಣದ್ವಯಿಯ ಸಮನ್ವಯದಿಂದ ಅದೇ ಸಪ್ತಸಂಸ್ಥಾವು ಅಗ್ನಿಮಯವಾಗುತ್ತಾ ‘ಸಪಿಣ್ಡ ಪಿತರ’ ಆಗುತ್ತಿದೆ.

ಸಪಿಣ್ಡ ಪಿತೃಸಪ್ತಕ ಸೋದಕವೂ ಆಗಿದೆ, ಸಗೋತ್ರವೂ ಆಗಿದೆ. ಏಕೆಂದರೆ ಸೋದಕ ಪಿತೃಪ್ರಾಣದ ವ್ಯಾಪ್ತಿಯು ೧೪ ಪರ್ಯ್ಯನ್ತವಿದ್ದರೆ, ಸಗೋತ್ರಪಿತೃಪ್ರಾಣದ ವ್ಯಾಪ್ತಿಯು ೨೧ ಪರ್ಯ್ಯನ್ತವಿದೆ. ಇದನ್ನು ಹಿಂದೆಯೇ ತಿಳಿಸಲಾಗಿದೆ. ಫಲಿತವಾಗಿ ಸಪ್ತಸಂಖ್ಯಾಕ ಸಪಿಣ್ಡ ಪಿತರರಲ್ಲಿ ಚತುರ್ದಶ ಸಂಖ್ಯಾಕ ಸೋದಕ ಪಿತರರ, ಹಾಗೂ ಏಕವಿಂಶತಿ ಸಂಖ್ಯಾಕ ಸಗೋತ್ರ ಪಿತರರು; ಇವೆರಡರ ಉಪಭೋಗವು ಸಿದ್ಧವಾಗುತ್ತಿದೆ. ಎರಡನೇ ವಿಭಾಗವು ‘ಸೋದಕ ಪಿತರ’ ಆಗಿದೆ. ಇದಕ್ಕೆ ೧೪ ವಿಭಾಗವಿದೆ. ಈ ೧೪ ಸೋದಕ ಪಿತರರ ಮೊದಲ ಸಪ್ತಕವು ಸಪಿಣ್ಡವೂ ಆಗಿದೆ, ಸೋದಕವೂ ಆಗಿದೆ, ಸಗೋತ್ರವೂ ಆಗಿದೆ, ಆದರೆ ಎರಡನೆಯ ಸಪ್ತಕವು ಸೋದಕ ಸಗೋತ್ರವೇ ಆಗಿದೆ. ಮೂರನೆಯ ವಿಭಾಗವು ‘ಸಗೋತ್ರಪಿತರ’, ಇದಕ್ಕೆ ೨೧ ವಿಭಾಗವಿದೆ. ಈ ೨೧ ಸಗೋತ್ರಪಿತರರ ಮೊದಲ ಸಪ್ತಕವು ಸಪಿಣ್ಡ, ಸೋದಕ, ಸಗೋತ್ರವಾಗಿದೆ, ಎರಡನೆಯ ಸಪ್ತಕವು ಸೋದಕ, ಸಗೋತ್ರವಾಗಿದೆ ಮತ್ತು ಮೂರನೆಯ ಅನ್ತಿಮ ಸಪ್ತಕವು ವಿಶುದ್ಧ ಸಗೋತ್ರವಾಗಿದೆ.

ಉಕ್ತ ವಿಭಾಗದ ತಾತ್ಪರ್ಯ್ಯವೇನೆಂದರೆ ಸೋದಕ ಪ್ರಥಮ ಸಪ್ತಕದ, ಸಗೋತ್ರ ಪ್ರಥಮ ಸಪ್ತಕದ ಸಪಿಣ್ಡ ಸಪ್ತಕದಲ್ಲಿ ಅನ್ತರ್ಭಾವವಾಗುತ್ತಿದೆ. ಸಪ್ತಸಪಿಣ್ಡ ಪಿತರರ ಅರ್ಥವೇನೆಂದರೆ – ‘ಸಪ್ತಸೋದಕ, ಸಪ್ತಸಗೋತ್ರ ಪಿತರಪ್ರಾಣಾವಚ್ಛಿನ್ನ ಸಪ್ತಸಪಿಣ್ಡ ಪಿತರ’. ಪ್ರಥಮ ಸಪ್ತಕಕ್ಕೆ ಸಪಿಣ್ಡ ಸಪ್ತಕದಲ್ಲಿ ಅನ್ತರ್ಭಾವವಿದೆ. ಸೋದಕ ಪಿತರರು ಉದಕಮರ್ಯ್ಯಾದೆಯಿಂದ ಏಳಾಗಿಯೇ ಉಳಿಯುತ್ತಾರೆ, ಇವರ ಗರ್ಭದಲ್ಲಿ ಸಗೋತ್ರ ಪಿತರರ ದ್ವಿತೀಯ ಸಪ್ತಕವು ಅನ್ತರ್ಮೂರ್ತ್ತಿಯಾಗಿರುತ್ತದೆ. ಸಪ್ತಸೋದಕ ಪಿತರರ ಅರ್ಥವೇನೆಂದರೆ – ‘ದ್ವಿತೀಯ ಸಗೋತ್ರ ಸಪ್ತಕ ಗರ್ಭಿತ ದ್ವಿತೀಯ ಸೋದಕ ಸಪ್ತಕ’. ಇದೇ ಸ್ಥಿತಿಯು ಸಗೋತ್ರ ಪಿತರರದ್ದೂ ಎಂದು ತಿಳಿದುಕೊಳ್ಳಬೇಕು. ಸಗೋತ್ರದ ಪ್ರಥಮ ಸಪ್ತಕವು ಸಪಿಣ್ಡ ಸಪ್ತಕದಲ್ಲಿ ಅನ್ತರ್ಭೂತವಾಗಿದೆ, ಮಧ್ಯಮ ಸಪ್ತಕವು ಸೋದಕ ದ್ವಿತೀಯ ಸಪ್ತಕದಲ್ಲಿ ಅನ್ತರ್ಭೂತವಾಗಿದೆ. ಫಲಿತಾಂಶವಾಗಿ ವಿಶುದ್ಧ ಸಗೋತ್ರ ಎಂದು ಹೇಳುವುದಕ್ಕೆ ಸಗೋತ್ರದ ತೃತೀಯ ಸಪ್ತಕ ಉಳಿಯುತ್ತದೆ. ಹಾಗೂ ಈ ವ್ಯವಸ್ಥೆಯ ದೃಷ್ಟಿಯಿಂದ ಸಪಿಣ್ಡ-ಸೋದಕ-ಸಗೋತ್ರ, ಮೂರರ ೭-೭-೭ ಸಂಖ್ಯೆಗಳು ಅವಶಿಷ್ಟವಾಗುತ್ತದೆ. ಮುಂದೆ ಬರಲಿರುವ ಪಿಣ್ಡಸ್ವರೂಪ ನಿರುಕ್ತಿಯಲ್ಲಿ ಈ ಎಲ್ಲಾ ವಿಷಯಗಳ ವಿವೇಚನೆ ಆಗಲಿದೆ. ಹಾಗಾಗಿ ಈ ಪ್ರಾಸಙ್ಗಿಕ ಚರ್ಚೆಯನ್ನು ಇಲ್ಲಿಯೇ ಉಪರತ ಗೊಳಿಸಲಾಗುತ್ತದೆ.

ಶ್ರಾದ್ಧಸಗೋತ್ರಪಿತರ ಪರಿಲೇಖಃಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a Comment