Friday, 2 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಮಾಸಿ-ಮಾಸಿ-ವೋಽಶನಮ್ (೧೨)

೧೨. ಮಾಸಿ-ಮಾಸಿ-ವೋಽಶನಮ್
  • ಉಕ್ತ ಕಥನದಿಂದ ದಿವ್ಯಪಿತೃಪ್ರಾಣಯುಕ್ತ ಚಾನ್ದ್ರಪಿತೃಪ್ರಾಣವು (ಋತುಪಿತೃಪ್ರಾಣ, ಅಂದರೆ ಶ್ರದ್ಧಾಸೋಮಮಯವಾಗಿದ್ದು) ವೃಷ್ಟಿಯಿಂದ ಓಷಧಿರೂಪದಲ್ಲಿ ಪರಿಣತವಾಗುತ್ತದೆ ಎಂದು ನಿಖರವಾಗಿ ಸಿದ್ಧವಾಗುತ್ತದೆ. ದಿವ್ಯಪಿತೃಪ್ರಾಣವು ಆದಿತ್ಯಾತ್ಮಕವಾಗಿದೆ, ಹಾಗಾಗಿ ಆದಿತ್ಯಾಜ್ಜಾಯತೇ ವೃಷ್ಟಿಃಎಂದು ಹೇಳುವುದೂ ನಿರ್ವಿರೋಧವಾಗಿ ಸುರಕ್ಷಿತವಾಗುತ್ತದೆ.

  • ಆದಿತ್ಯರಶ್ಮಿಗಳು ಆದಿತ್ಯಪ್ರಾಣಾತ್ಮಿಕವಾಗಿವೆ, ಇವೇ ಪ್ರಾಣಗಳು ದಿವ್ಯಪಿತರವಾಗಿವೆ. ಇವುಗಳು ಸುಷುಮ್ನಾನಾಡಿಯಲ್ಲಿ ಭೋಗವಾಗುತ್ತದೆ.

  • ಸುಷುಮ್ನಾದಿಂದ ದಿವ್ಯಪ್ರಾಣಗಳು ಚಾನ್ದ್ರಮಣ್ಡಲದಲ್ಲಿ ಭೋಗವಾಗುತ್ತವೆ.

  • ಚಾನ್ದ್ರಸೋಮವು ಆದಿತ್ಯರಶ್ಮಿಗತ ಪ್ರಾಣಾಗ್ನಿಯ ಸಮ್ಬನ್ಧದಿಂದ ದ್ರುತವಾಗಿ ವೃಷ್ಟಿರೂಪದಲ್ಲಿ ಪರಿಣತವಾಗುತ್ತವೆ

  • ಇದೇ ವೃಷ್ಟಿಭಾಗವು ಓಷಧಿರೂಪದಲ್ಲಿ ಪರಿಣತವಾಗುತ್ತದೆ

  • ಓಷಧಿಗಳ ಆಪ್ಯಾಯನವು ಚಾನ್ದ್ರತತ್ತ್ವದಿಂದ ಸ್ವತನ್ತ್ರರೂಪದಿಂದಲೂ ಆಗುತ್ತದೆ. ಆಪ್ಯಾಯನ ಕರ್ಮ್ಮವು ಕೃಷ್ಣಪಕ್ಷದಲ್ಲಿ ಅಧಿಕ ಬಲವುಳ್ಳದ್ದಾಗಿರುತ್ತದೆ  • ಸೌರರಶ್ಮಿಗತ ಇನ್ದ್ರ ಎಂಬ ಹೆಸರಿನ ಪ್ರಾಣ ವಿಶೇಷವು ಸೋಮಾನ್ನ ಗ್ರಾಹಕವಾಗಿರುತ್ತದೆ. ಶುಕ್ಲಪಕ್ಷದಲ್ಲಿ ಇದರ ಪ್ರಾಧಾನ್ಯತೆ ಇರುತ್ತದೆ. ಹಾಗಾಗಿ ಚಾನ್ದ್ರಸೋಮವು ಶುಕ್ಲಪಕ್ಷದಲ್ಲಿ ಓಷಧಿ ಆಪ್ಯಾಯನ ಕರ್ಮ್ಮ ಮಾಡಲು ಅಸಮರ್ಥವಾಗಿರುತ್ತದೆ

  • ಕೃಷ್ಣಪಕ್ಷದಅಮಾವಾಸ್ಯಾದಲ್ಲಿ ಆಪ್ಯಾಯನ ಕರ್ಮ್ಮವು ಸರ್ವಪ್ರಧಾನವಾಗಿರುತ್ತದೆ. ಏಕೆಂದರೆ ತಿಥಿಯಲ್ಲಿ ಇನ್ದ್ರನು ಸೋಮಗ್ರಹಣದಲ್ಲಿ ಅಸಮರ್ಥನಾಗಿರುತ್ತಾನೆ

  • ಅಮಾವಾಸ್ಯೆಯು ಓಷಧಿಗಳ ಆಪ್ಯಾಯನ ಕಾಲವಾಗಿದೆ, ಹಾಗಾಗಿ ದಿನ ಓಷಧಿಯನ್ನು ಕತ್ತರಿಸುವುದು ನಿಷಿದ್ಧವೆಂದು ನಂಬಲಾಗಿದೆ

  • ಚಾನ್ದ್ರಸೌಮ್ಯಪ್ರಾಣ ಸಮ್ಬನ್ಧದಿಂದಲೇ ಅಮಾವಾಸ್ಯೆಯು ಪಾರ್ವಣಶ್ರಾದ್ಧತಿಥಿ ಎಂದು ನಂಬಲಾಗಿದೆ, ಇದರ ಸಮ್ಬನ್ಧದಲ್ಲಿಮಾಸಿ ಮಾಸಿ ವೋ ಅಶನಮ್ (ಶತ |||), ಅಂದರೆ ತಿಂಗಳು ತಿಂಗಳಿಗೆ ಸರಿಯಾಗಿ ಆಹಾರ ಎಂಬುದು ಪ್ರಸಿದ್ಧವಾಗಿದೆ.


ಮುಂದಿನ ಲೇಖನದಲ್ಲಿ  ೧೩. ದಧಿ-ಘೃತ-ಮಧು-ಲಕ್ಷಣ ಕರ್ಮ್ಮಾತ್ಮಾ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment