Thursday, 29 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಸಹೋಭಾಗದ ಪಿತೃಪ್ರಾಣಾತ್ಮಕತ್ತ್ವ ಮತ್ತು ಶುಕ್ರಕ್ಷಯಮೀಮಾಂಸೆ (೨೦-೨೧)

೨೦. ಸಹೋಭಾಗದ ಪಿತೃಪ್ರಾಣಾತ್ಮಕತ್ತ್ವ

ಶುಕ್ರದಲ್ಲಿ ಸಾಕ್ಷಾತ್-ರೂಪದಿಂದ ಬರುವ ಈ ಚಾನ್ದ್ರರಸದಲ್ಲಿ ‘ಸಹಃಪಿಣ್ಡ’ದಲ್ಲಿ ರಸಾತ್ಮಕ ಸೂಕ್ಷ್ಮ ಭೂತ ಮತ್ತು ಪ್ರಾಣಾತ್ಮಕ ಸುಸೂಕ್ಷ್ಮ ದೇವತೆ ಎಂಬ ಎರಡೂ ತತ್ತ್ವಗಳು ಪ್ರತಿಷ್ಠಿತವಾಗಿವೆ. ಇತರೆ ಶಬ್ದಗಳಲ್ಲಿ ಹೇಳುವುದಾದರೆ ಎರಡೂ ಸಮಷ್ಟಿಯಲ್ಲಿ ‘ಸಹಃ’ ಆಗಿದೆ. ರಸಭೂತಸಮ್ಪರಿಷ್ವಕ್ತ ಈ ಚಾನ್ದ್ರ ಪ್ರಾಣರೂಪೀ ದೇವತೆಯೇ ‘ಪಿತರ’ ಆಗಿದೆ. ಇದೇ ಪ್ರಾಣಪಿತರರ ಸಮ್ಬನ್ಧದಿಂದ ಈ ಸಹೋಭಾಗವು ‘ಪಿತೃಸಹ’, ಅಂದರೆ ‘ಪಿತ್ರ್ಯಸಹ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ. ಇದೇ ಶ್ರೌತ ಪಿತೃಸಹವು ಸ್ಮಾರ್ತ್ತ ಪರಿಭಾಷೆಯಲ್ಲಿ ‘ಪಿತ್ರ್ಯಂಶ’ ಎಂದು ಹೇಳಲ್ಪಡುತ್ತದೆ. ತ್ರಯೋದಶ ಮಾಸಾತ್ಮಕ ಚಾನ್ದ್ರಸಮ್ವತ್ಸರದ ಸಮ್ಬನ್ಧದಿಂದ ಶುಕ್ರವನ್ನು ತ್ರಯೋದಶಮಾಸಿಕ ಪಿಣ್ಡಾತ್ಮಕ ಎಂದು ಹೇಳಲಾಗಿದೆ. ಈ ಸಮ್ಬನ್ಧದಲ್ಲಿ ಉತ್ತರೋತ್ತರ ಮಾಸಿಕ ಪಿಣ್ಡಗಳ ಉತ್ಪತ್ತಿಯ ಜೊತೆಜೊತೆಗೆ ಪೂರ್ವ-ಪೂರ್ವದ ಸಞ್ಚಿತ ಮಾಸಿಕ ಪಿಣ್ಡವು ಇನ್ದ್ರಿಯ ವ್ಯಾಪಾರದಿಂದ, ಪ್ರಧಾನತಃ ಶುಕ್ರದಿಂದ ವಿಗತ (ಖರ್ಚು) ಆಗುತ್ತಿರುತ್ತದೆ.

೨೧. ಶುಕ್ರಕ್ಷಯಮೀಮಾಂಸೆ

ಶುಕ್ರವ್ಯಯಕ್ಕೆ ಪ್ರಧಾನತಃ ದ್ವಾರಗಳಿವೆ, ಗೌಣತಃ ದ್ವಾರಗಳಿವೆ. ವಾಕ್-ಪ್ರಾಣ-ಚಕ್ಷುಃ-ಶ್ರೋತ್ರ-ಮನ ಎಂಬೀ ೫ ಇನ್ದ್ರಿಯಗಳ ವ್ಯಾಪಾರಗಳಿಂದ ಯಾವ ಶುಕ್ರವು ವಿನಿರ್ಗತವಾಗುತ್ತದೆಯೋ, ಅದು ಇದರ ಗೌಣಾತ್ಮಕ ವ್ಯಯೀಭಾವವಾಗಿದೆ. ಪ್ರತಿಯೊಂದು ಇನ್ದ್ರಿಯ ಸ್ವವ್ಯಾಪಾರಕ್ಕಾಗಿ ಸರ್ವೇನ್ದ್ರಿಯ ಪ್ರಜ್ಞಾನ ಮನದ ಸಹಯೋಗದ ಅಪೇಕ್ಷೆ ಇರುತ್ತದೆ. ಮನದ ಮೂಲಾಧಾರವು ಓಜವಾಗಿದೆ, ಓಜದ ಮೂಲಪ್ರತಿಷ್ಠಾ ಶುಕ್ರವಾಗಿದೆ. ಈ ರೀತಿ ಶುಕ್ರವು ಓಜದಿಂದ ಮಾನಸ ಭಾವದಲ್ಲಿ ಪರಿಣಾತವಾಗುತ್ತಾ ಪರಮ್ಪರಯಾ ಐದು ದ್ವಾರಗಳಿಂದ ಖರ್ಚಾಗುತ್ತಿರುತ್ತದೆ. ಈ ಐದು ಗೌಣ ದ್ವಾರಗಳ ಅತಿರಿಕ್ತ ೩ ಪ್ರಧಾನ ದ್ವಾರಗಳಿವೆ. ಪ್ರಜೋತ್ಪತ್ತಿ ಕರ್ಮ್ಮದಲ್ಲಿ ಮೂಲೇನ್ದ್ರಿಯದಿಂದ ಶುಕ್ರ-ವಿನಿರ್ಗಮನವು ಮೊದಲ ವ್ಯಯೀಭಾವವಾಗಿದೆ. ಈ ವ್ಯಯೀಭಾವವು ಗೃಹಮೇಧಿಗಳ (ಗೃಹಸ್ಥಾಶ್ರಮಿಗಳ) ಸಮ್ಬನ್ಧ ಹೊಂದುತ್ತದೆ. ಪ್ರಜಾತನ್ತುವಿತಾನದ ಕಾಮನೆಯಿಂದ (ಅವಿವಾಹಿತ) ಗೃಹಮೇಧಿಗಳ ಅಧೋಭಾಗದಿಂದ ಶುಕ್ರ-ವ್ಯಯವಾಗುತ್ತಾ ‘ಅಧೋರೇತಾ’ ಎಂದು ಕರೆಯಲ್ಪಡುತ್ತದೆ. ವಿವಾಹಿತರಾಗಿಯೂ ಗೃಹಸ್ಥರು ಪೂರ್ಣಸಂಯಮದೊಂದಿಗೆ ಲೋಕಯಾತ್ರೆಯ ನಿರ್ವಹಣೆ ಮಾಡುತ್ತಲಿದ್ದರೆ, ಅವರ ಶುಕ್ರ-ಪ್ರವಾಹವು ಅವರ ಶರೀರಪುಷ್ಟಿಯ ಕಾರಣಭೂತ ರಸಾಸೃಙ್ ಮಾಂಸಾದಿಗಳ ವೃದ್ಧಿಯಲ್ಲಿ ಉಪಯುಕ್ತವಾಗುತ್ತಿರುತ್ತದೆ, ಹಾಗೂ ಇದನ್ನೇ ‘ತಿರ್ಯ್ಯಕ್‍ಸ್ರೋತಾ’ ಎಂದು ಕರೆಯಲ್ಪಡುತ್ತದೆ.

ಯಾವ ಬ್ರಹ್ಮಚಾರಿಯು ಸತತ ವಿಧ್ಯಾಭ್ಯಾಸದಲ್ಲಿ ಅನುರಕ್ತವಾಗಿರುವನೋ, ಯಾರು ವೀತರಾಗ ಸಂನ್ಯಾಸಧರ್ಮ್ಮದಲ್ಲಿ ದೀಕ್ಷಿತನೋ, ಯಾವ ಮಹರ್ಷಿಯು ಅಹರ್ನಿಶ ತತ್ತ್ವಾನ್ವೇಷಣೆಯ ಕರ್ಮ್ಮದಲ್ಲಿ ಸಂಲಗ್ನವಾಗಿದ್ದಾನೆಯೋ, ಚಿನ್ತಾಶೀಲ ಈ ಪುರುಷಪುಙ್ಗವರ ಶುಕ್ರವು ಕ್ರಮವಾಗಿ ಓಜ ಹಾಗೂ ಮನೋರೂಪದಲ್ಲಿ ಪರಿಣತವಾಗುತ್ತಾ ಶಿರೋಭಾಗಾವಸ್ಥಿತ ಜ್ಞಾನಾಗ್ನಿಯಲ್ಲಿ ಆಹುತವಾಗುತ್ತಾ ಇರುತ್ತದೆ. ಇವರು ಎಷ್ಟು ಅಧಿಕ ಚಿನ್ತಾಶೀಲರಾಗುತ್ತಾರೆಯೋ, ಅಷ್ಟೇ ಅಧಿಕ ಮಾತ್ರಾದಲ್ಲಿ ಶುಕ್ರಕ್ಷಯ ಆಗುತ್ತಿರುತ್ತದೆ; ಹಾಗೂ ತದನುರೂಪವಾಗಿಯೇ ವಿಜ್ಞಾನವು ವಿಕಸಿತವಾಗುತ್ತಿರುತ್ತದೆ. ಇದೇ ಕಾರಣದಿಂದ ಜ್ಞಾನಾಗ್ನಿಯಲ್ಲಿ ಶುಕ್ರದ ಆಹುತಿ ಕೊಡುವ ವಿದ್ವಾಂಸರು ಶಾರೀರಿಕ ಶ್ರಮ ಮಾಡಲು ಪ್ರಾಯಶಃ ಅಸಮರ್ಥರಾಗಿರುತ್ತಾರೆ. ಇದೇ ವಿಭಾಗವು ‘ಊರ್ಧ್ವರೇತಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಶುಕ್ರವಿನಿರ್ಗಮದ ಇವೇ ಮೂರು ಅವಸ್ಥೆಗಳಿಗೆ ಕ್ರಮವಾಗಿ ‘ಅವಪತನ, ಆಯತನ, ಉತ್ಪತನ’ ಎಂಬ ಸಾಙ್ಕೇತಿಕ ಶಬ್ದವು ಪ್ರಯುಕ್ತವಾಗಿದೆ.


ಅಧಃ-ತಿರ್ಯ್ಯಕ್-ಊರ್ಧ್ವರೇತಃ-ಪರಿಲೇಖಃ


ಈ ಮೂರರಲ್ಲಿ ಯಾವುದೋ ಒಂದು ಮಾರ್ಗದಿಂದ ಮತ್ತು ಪಞ್ಚೇನ್ದ್ರಿಯ ವ್ಯಾಪಾರದ ಮುಖೇನ ಶುಕ್ರವ್ಯಯವು ಪ್ರತಿಯೊಂದು ದಶೆದಲ್ಲಿ ನಿಶ್ಚಿತವಾಗಿರುತ್ತದೆ. ಈ ವಿಸರ್ಗಕ್ರಿಯೆಯ ಜೊತೆಜೊತೆಗೆ ಅದೇ ಚಾನ್ದ್ರನಾಡಿಯಿಂದ ಆದಾನ ಪ್ರಕ್ರಿಯೆಯೂ ಪ್ರಕ್ರಾನ್ತವಾಗಿರುತ್ತದೆ. ಈ ಸಾಮ್ವತ್ಸರಿಕ ಪಿಣ್ಡದಾನ, ವಿಸರ್ಗಕ್ರಮ ಪರಮ್ಪರೆಯುಕ್ತ ಪುರುಷನೇ ಜೀವನಧಾರಣೆಯಲ್ಲಿ ಸಮರ್ಥನಾಗುತ್ತಾನೆ. ಒಂದುವೇಳೆ ಒಂದೇ ಮಾಸಿಕ ಪಿಣ್ಡವು ಉತ್ಪನ್ನವಾಗಿ ಮುಂದೆ ಆದಾನಕರ್ಮ್ಮವು ಉಪರತವಾದರೆ, ಅವಶ್ಯಕವಾಗಿ ಮೊದಲ ಮಾಸಿಕ ಪಿಣ್ಡವು ಮೇಲ್ತಿಳಿಸಿದ ಯಾವುದಾದರೂ ದ್ವಾರದಿಂದ ವ್ಯಯಭಾವದ ಅನುಗಾಮೀ ಆಗುತ್ತಾ ವಿನಷ್ಟಿಯ ಕಾರಣವಾಗುತ್ತದೆ. ಈ ಸಾಮ್ವತ್ಸರಿಕ ಆದಾನ-ವಿಸರ್ಗದ ಅನುಗ್ರಹದಿಂದ ಜೀವನ ಸತ್ತೋಪಯಿಕ ಒಂದು ಮಾಸಿಕ ಪಿಣ್ಡವು ಅವಶ್ಯವಾಗಿ ಸುರಕ್ಷಿತವಾಗಿರುತ್ತದೆ. ಯಾವ ದಿನ ಈ ಸ್ವರೂಪದ ಮೇಲೂ ಆಘಾತ ಆಗುತ್ತದೆಯೋ, ಆಗ ಕ್ಷಯರೋಗಾಕ್ರಾನ್ತ ಇಂತಹಾ ವ್ಯಕ್ತಿಯನ್ನು ಶೀಘ್ರವಾಗಿ ಕೀನಾಶನಿಕೇತನಾತಿಥ್ಯ (ಕೀನಾಶ = ಯಮ, ನಿಕೇತನ = ನಿವಾಸ, ಅಂದರೆ ಮರಣದ ಮುಖೇನ ಯಮಲೋಕದ ಪಯಣ) ಸ್ವೀಕಾರ ಮಾಡಬೇಕಾಗುತ್ತದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

No comments:

Post a comment