Monday, 5 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಆತ್ಮವಿವರ್ತ್ತ ಸಮ್ಪರಿಷ್ವಕ್ತಿ ಮತ್ತು ಚನ್ದ್ರಲೋಕಾನುಗತ ಮಹಾನಾತ್ಮಾ (೧೪-೧೫)

೧೪. ಆತ್ಮವಿವರ್ತ್ತ ಸಮ್ಪರಿಷ್ವಕ್ತಿ -

ಭುಕ್ತಾನ್ನವು ರಸಾಸೃಗಾದಿಗಳಿಂದ ಅನ್ತತಃ ತಮ್ಮ ಪಾರ್ಥಿವ ಇರಾಮಯ ಸಾರಭಾಗದಿಂದ ‘ಶುಕ್ರ’ ರೂಪದಲ್ಲಿ ಪರಿಣತವಾಯಿತು. ಅನ್ನಗತ ಸೌಮ್ಯಯುಕ್ತ ಚಾನ್ದ್ರ ಪಿತೃಪ್ರಾಣವೂ ಶುಕ್ರದಲ್ಲಿ ಸಮಾವೇಶವಾಯಿತು. ಈ ಚಾನ್ದ್ರಪ್ರಾಣದಿಂದ ಆಕೃತಿ-ಪ್ರಕೃತಿ-ಅಹಂಕೃತಿ ಭಾವಸಮರ್ಪಕ ‘ಮಹಾನಾತ್ಮಾ’ ಎಂಬುದರ ಉದಯವಾಗುತ್ತದೆ. ಶುಕ್ರದಲ್ಲಿ ಪ್ರತಿಷ್ಠಿತ ಬೀಜಿಯು ಇದೇ ಮಹಾನಾತ್ಮದ ಇಚ್ಛೆಯಿಂದಲೇ ಮುಂದಿನ ಭೂತಸಮ್ಭೂತಿಯ (ಪ್ರಜೋತ್ಪತ್ತಿಯ) ಲಕ್ಷಣವಾದ ಸನ್ತಾನಧಾರೆಯನ್ನು ಪ್ರವಹಿಸುತ್ತದೆ. ಬೀಜಾವಸ್ಥಾಪನ್ನ ಮಹಾನ್ ಎಂಬುದಕ್ಕೆ ಎಷ್ಟು ಆಕಾರಗಳಿವೆಯೋ; ಹೇಗೆ ಪ್ರಕೃತಿ, ಯಾವ ಅಹಂಭಾವ ಇವೆಯೋ, ಅವು ಶುಕ್ರಸೇಕದಿಂದ ಗರ್ಭದಲ್ಲಿ ಪ್ರತಿಷ್ಠಿತ ಗರ್ಭಿಯ ಅಷ್ಟೇ ಆಕಾರವು, ಅದೇ ಪ್ರಕೃತಿ, ಅದೇ ಅಹಂಭಾವಗಳು ಸಮ್ಪನ್ನವಾಗುತ್ತವೆ. ಉದಾ – “ಆತ್ಮವಿಜ್ಞಾನೋಪನಿಷತ್” ಪ್ರಕರಣದ ‘ಮಹದಾತ್ಮೋಪನಿಷತ್’ ಎಂಬ ಅವಾನ್ತರ ಪ್ರಕರಣದಲ್ಲಿ ವಿಸ್ತಾರ ವರ್ಣನೆ ಇದೆ.

ಉಕ್ತ ಸನ್ದರ್ಭದಿಂದ ನಮಗೆ ಕೇವಲ ಮಹಾನಾತ್ಮಾ, ಕ್ಷೇತ್ರಜ್ಞ, ಕರ್ಮ್ಮಾತ್ಮಾ ಎಂಬ ೩ ಆತ್ಮವಿವರ್ತ್ತಗಳತ್ತ ಓದುಗರ ಧ್ಯಾನವನ್ನು ಆಕರ್ಷಿತಗೊಳಿಸುವ ಇಚ್ಛೆ ಇದೆ.
ಭುಕ್ತಾನ್ನದ ಪಾರ್ಥಿವ ಭಾಗವು (ವೈಶ್ವಾನರ-ಹಿರಣ್ಯಗರ್ಭ-ಸರ್ವಜ್ಞಾತ್ಮಕ ಸ್ತೌಮ್ಯಲೋಕಗಳ ಪ್ರವರ್ಗ್ಯಭಾಗವು) ವೈಶ್ವಾನರ-ತೈಜಸ-ಪ್ರಾಜ್ಞಮೂರ್ತ್ತಿ ಕರ್ಮ್ಮಾತ್ಮವಾಗಿದೆ.

* ಭುಕ್ತಾನ್ನದ ಚಾನ್ದ್ರಸೋಮಭಾಗವು ಷಡ್‍ಗುಣಕ ‘ಮಹಾನಾತ್ಮ’ ಆಗಿದೆ.
ಕರ್ಮ್ಮಾತ್ಮದಿಂದ ಯುಕ್ತ ಅನ್ನಮಯ ಪ್ರಜ್ಞಾನದ ಮೇಲೆ ಪ್ರತಿಬಿಮ್ಬಿತ ಸೌರ ಹಿರಣ್ಮಯತೇಜ ವಿಜ್ಞಾನಾತ್ಮವಾಗಿದೆ, ಇದೇ ಕ್ಷೇತ್ರಜ್ಞವಾಗಿದೆ.

* ಕ್ಷೇತ್ರಜ್ಞವು ಬುದ್ದಿಯಾಗಿದೆ, ಪ್ರಜ್ಞಾನವು ಮನವಾಗಿದೆ, ಕರ್ಮ್ಮಾತ್ಮವು ಕರ್ಮ್ಮಭೋಕ್ತಾ ಆಗಿದೆ, ಮಹಾನಾತ್ಮವು ಶ್ರಾದ್ಧಪಿಣ್ಡರಸ ಭೋಕ್ತಾ ಆಗಿದೆ.

* ಜೀವನದಶೆಯಲ್ಲಿ ಎಲ್ಲಾ ಆತ್ಮವಿವರ್ತ್ತಗಳು ಪರಸ್ಪರ ಸಮ್ಪರಿಷ್ವಕವಾಗಿರುತ್ತವೆ.
ಪ್ರಯಾಣ ಕಾಲದಲ್ಲಿ ಬುದ್ಧಿರೂಪ ಕ್ಷೇತ್ರಜ್ಞವು ‘ತೇಜಃ ಪರಸ್ಯಾಂ ದೇವತಾಯಾಮ್’ ಎಂಬುದರ ಅನುಸಾರ ಸ್ವಪ್ರಭವ ಸೌರ ಹಿರಣ್ಮಯ ಮಣ್ಡಲದಲ್ಲಿ ಚ್ಯುತವಾಗುತ್ತದೆ.

* ಪ್ರಜ್ಞಾನ ಮನವು ಅನುಶಯ ರೂಪದಿಂದ ಭೋಕ್ತಾತ್ಮದ ಸಹಯೋಗಿ ಆಗಿರುತ್ತದೆ. ಎಲ್ಲಿಯವರೆಗೆ ಮಹಾನಾತ್ಮವು ಸ್ವಪ್ರಭವ ಚನ್ದ್ರಲೋಕಕ್ಕೆ ಹೋಗುವುದಿಲ್ಲವೋ, ಅಲ್ಲಿಯವರೆಗೆ ಕರ್ಮ್ಮಾತ್ಮವು ಮಹಾನಾತ್ಮದೊಂದಿಗೆ ಇರುತ್ತದೆ.

* ಮಹಾನಾತ್ಮವು ಚನ್ದ್ರಲೋಕಕ್ಕೆ ತಲುಪಿ ಸ್ವವಂಶಜ ಅನ್ಯ ಮಹಾನಾತ್ಮಗಳೊಂದಿಗೆ ಎಂದು ಸಾಪಿಣ್ಡ್ಯಭಾವವನ್ನು ಹೊಂದುತ್ತದೆಯೋ, ತದನನ್ತರ ‘ದೇಹೀ ಕರ್ಮ್ಮಗತಿಂ ಗತಃ’ ಎಂಬ ಸಿದ್ಧಾನ್ತಾನುಸಾರ ಕರ್ಮ್ಮಾತ್ಮವು ಶುಭಾಶುಭ ಕರ್ಮ್ಮೋದರ್ಕ ಭೋಗಾರ್ಥ ಯಾತ್ರೆಯ ಅನುಗಮನ ಮಾಡಿಬಿಡುತ್ತದೆ. ಏಕೆಂದರೆ ಶ್ರಾದ್ಧದ ಲಕ್ಷ್ಯವು ಏಕಮಾತ್ರ ಮಹಾನಾತ್ಮ ಆಗಿದೆ.


ಹಾಗಾಗಿ ಇದರತ್ತಲೇ ಓದುಗರ ಧ್ಯಾನವನ್ನು ವಿಶೇಷರೂಪದಿಂದ ಆಕರ್ಷಿಸಲಾಗಿದೆ.೧೪. ಚನ್ದ್ರಲೋಕಾನುಗತ ಮಹಾನಾತ್ಮಾ

“ಮಹಾನಾತ್ಮವು ಸಜಾತೀಯಾನುಬನ್ಧಸಮ್ಬನ್ಧದಿಂದ ಸೌಮ್ಯ ಶುಕ್ರದಲ್ಲಿ ಪ್ರತಿಷ್ಠಿತವಾಗಿದೆ, ಇದು ಸ್ವಯಂ ಚಾನ್ದ್ರ ಸೋಮ ಪ್ರಧಾನವಾಗಿದೆ, ಷಡ್ ಗುಣಕವಾಗಿದೆ, ಚಿದಾತ್ಮದ ಯೋನಿ ಆಗಿದೆ”. ಈ ನಿಷ್ಕರ್ಷೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ವಿಚಾರ ವಿಮರ್ಶೆ ಮಾಡಿರಿ.

ಯಾವ ವಸ್ತುತತ್ತ್ವವು ಯಾವ ಲೋಕದ, ಯಾವ ಜಾತಿಯದ್ದಾಗಿರುತ್ತದೆಯೋ, ಸಜಾತೀಯಾಕರ್ಷಣ ಸಿದ್ಧಾನ್ತಾನುಸಾರ ಆ ವಸ್ತುತತ್ತ್ವದೊಂದಿಗೆ ಆ ಲೋಕ, ಆ ಜಾತಿಯ ಸ್ವಾಭಾವಿಕ ಆಕರ್ಷಣವಾಗುತ್ತದೆ. ಹಾಗೂ ಈ ಆಕರ್ಷಣಸೂತ್ರದ ಆಧಾರದಲ್ಲಿ ಆಯಾಯ ಸಜಾತೀಯ, ಸಮಾನಸ್ಥಾನೀಯ ವಸ್ತುತತ್ತ್ವಗಳ ಪ್ರವರ್ಗ್ಯರೂಪದಿಂದ ಪರಸ್ಪರ ಆದಾನ ಪ್ರದಾನ ಆಗುತ್ತಿರುತ್ತದೆ. ಮಣ್ಣಿನ ಹೆಂಟೆಗಳನ್ನು ನೀವು ಎಷ್ಟೇ ಎತ್ತರಕ್ಕೆ ಎಸೆದರೂ, ಸಜಾತೀಯ ಸಮಾನಸ್ಥಾನೀಯ ಪಾರ್ಥಿವ ಆಕರ್ಷಣೆಯಿಂದ ತತ್ಕ್ಷಣ ಧರಾತಲದ ಮೇಲೆಯೇ ಬಂದು ಬೀಳುತ್ತದೆ. ಅಗ್ನಿಮಯೀ ಬಲವದ್ ಆಕ್ರಮಣದಿಂದಲೂ ಊರ್ಧ್ವಗಮನದ ಕಡೆಯಿಂದ ವಞ್ಚಿತವಾಗಿಸಲು ಸಾಧ್ಯವಿಲ್ಲ. ಈ ಸಾಮಾನ್ಯ ಸಿದ್ಧಾನ್ತದ ಆಧಾರದಲ್ಲಿ ಚಾನ್ದ್ರಸೋಮಪ್ರಧಾನ-ಶುಕ್ರಸ್ಥಿತ ಮಹಾನಾತ್ಮವು ಚಾನ್ದ್ರ ಆಕರ್ಷಣೆಯಿಂದ ನಿತ್ಯವೂ ಆಕರ್ಷಿತವಾಗಿರುತ್ತದೆ ಎಂಬುದನ್ನು ನಮಗೆ ಸ್ವೀಕರಿಸುವುದರಲ್ಲಿ ಯಾವುದೇ ಆಪತ್ತಿ ಇರುವುದಿಲ್ಲ. ಏಕೆಂದರೆ ಭೂತಾತ್ಮವು ಶುಕ್ರಾವಚ್ಛಿನ್ನವಾಗಿದೆ, ಹಾಗಾಗಿ ತದಭಿನ್ನ ಮಹಾನಾತ್ಮದ ನಿತ್ಯ ಸಮ್ಪರಿಷ್ವಙ್ಗದಿಂದ ಇದನ್ನೂ ಪ್ರತ್ಯೇಕಿಸಲು ಆಗುವುದಿಲ್ಲ. ಇದೇ ಕಾರಣದಿಂದ ಎಲ್ಲಿಯವರೆಗೆ ಮಹಾನಾತ್ಮವು ಚನ್ದ್ರಲೋಕಕ್ಕೆ ತಲುಪಿ ಸಾಪಿಣ್ಡ್ಯಭಾವವನ್ನು ಪ್ರಾಪ್ತವಾಗುವುದಿಲ್ಲವೋ, ಅಲ್ಲಿಯವರೆಗೆ ಭೂತಾತ್ಮವು ಇದರೊಂದಿಗೆ ಬದ್ಧವಾಗಿರುತ್ತದೆ. ಸ್ಥೂಲಶರೀರ ನಿಧನಾನನ್ತರ ಮಹಾನಾತ್ಮವು ಚಾನ್ದ್ರಾಕರ್ಷಣೆಯಿಂದ ಆಕರ್ಷಿತವಾಗಿ ಚನ್ದ್ರಲೋಕಕ್ಕೆ ಹೋಗುತ್ತದೆ, ಜೊತೆಯಲ್ಲಿ ಮಹಾನಾತ್ಮದಿಂದ ಬದ್ಧ ಕರ್ಮ್ಮಾತ್ಮವೂ ಒಂದು ಬಾರಿ ಅವಶ್ಯವಾಗಿ ಚನ್ದ್ರಲೋಕಕ್ಕೆ ಹೋಗಬೇಕಾಗುತ್ತದೆ. ಘೋರಾತಿಘೋರ ಪಾಪಿಷ್ಠ, ಸರ್ವೋತ್ಕೃಷ್ಟ ಪುಣ್ಯಾತ್ಮಾ, ಯಾವುದೇ ಆಗಲಿ, ದೇಹವಿಚ್ಯುತಿಯ ಅನನ್ತರ ಒಂದು ಬಾರಿ ಅವಶ್ಯವಾಗಿ ‘ಮಹಾನಾತ್ಮ’ದ ಅನುಗ್ರಹದಿಂದ ಅದಕ್ಕೆ (ಕರ್ಮ್ಮಾತ್ಮನಿಗೆ) ಚನ್ದ್ರಲೋಕವನ್ನು ತಲುಪಬೇಕಾಗುತ್ತದೆ. ಅಲ್ಲಿ ತಲುಪಿದ ನನ್ತರ ಮಹಾನಾತ್ಮದಿಂದ ಎಂದು ಇದರ ಗ್ರನ್ಥಿ-ವಿಚ್ಛೇದ ಆಗುತ್ತದೆಯೋ, ಅಂದು ಇದು ಕರ್ಮ್ಮಾನುಸರ ಪಿತೃಯಾಣ, ದೇವಯಾನ ಪಥಗಳಲ್ಲಿ ಯಾವುದಾದರೂ ಒಂದರ ಆಶ್ರಯ ಪಡೆಯುತ್ತಾ ಕರ್ಮ್ಮಫಲ ಭೋಗಾರ್ಥವಾಗಿ ಗಮನ ಮಾಡುತ್ತದೆ. ಇದೇ ಸಾಮಾನ್ಯ ಗತಿವಿಜ್ಞಾನವನ್ನು ಲಕ್ಷ್ಯದಲ್ಲಿಟ್ಟುಕೊಂಡು –

“ಯೇ ವೇ ಕೇಚಾಸ್ಮಾಲ್ಲೋಕಾತ್ ಪ್ರಯನ್ತಿ, ಚನ್ದ್ರಮಸಮೇವ ತೇ ಸರ್ವೇ ಗಚ್ಛನ್ತಿ” – ಕೌಷೀತಕಿ ಬ್ರಾಹ್ಮಣೋಪನಿಷತ್ ೧|೨

ಭೂತಾತ್ಮಾವಚ್ಛಿನ್ನ ಮಹದಾತ್ಮಪಿತರ ಶರೀರದ ಪರಿತ್ಯಾಗಾನನ್ತರ ಈ ಪೃಥಿವಿಯಿಂದ ಮೇಲಕ್ಕೆ (ಚನ್ದ್ರಲೋಕದತ್ತ) ಗಮನ ಮಾಡುತ್ತದೆ, ಹಾಗಾಗಿ – ‘ಇತಃ (ಪೃಥಿವಿಸ್ಥಾನಾತ್) ಪ್ರಯನ್ತಿ’ ಎಂಬೀ ನಿರ್ವಚನದಿಂದ ಇದಕ್ಕೆ ‘ಪ್ರೇತಪಿತರ’ ಎಂದು ಹೇಳಲಾಗುತ್ತದೆ, ಉದಾ – ‘ಪ್ರೇತಪಿತರೋಪನಿಷತ್’ ಪ್ರಕರಣದಲ್ಲಿ ವಿಸ್ತಾರದಿಂದ ಇದನ್ನು ಹೇಳಲಾಗಿದೆ. ಪ್ರೇತಸಂಜ್ಞಕ ಮಹಾನಾತ್ಮವು ಸ್ವಪ್ರಭವ ಚನ್ದ್ರಲೋಕಕ್ಕೆ ಬರುತ್ತದೆ. ಈ ಗಮನಸ್ಥಿತಿಯ ವಿಶ್ಲೇಷಣೆಯನ್ನು ಮುಂದಿನ  ೧೬. ಗಮನಸ್ಥಿತಿ ವಿಶ್ಲೇಷಣೆ  ಎಂಬ ಲೇಖನದಲ್ಲಿ ಮಾಡಲಾಗುವುದು.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment