Tuesday, 4 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪಿತೃಧನಾವಾಪ ಮೀಮಾಂಸೆ (೨೪)

೨೪. ಪಿತೃಧನಾವಾಪ ಮೀಮಾಂಸೆ-

(೧)- ಬೀಜಿ ಪಿತನು ತನ್ನ ಆರ್ಜಿತ ಸಮ್ಪತ್ತಿನ ೨೮ ಪಿತೃಸಹಗಳಲ್ಲಿ ೨೧ ಸಹಗಳನ್ನು ಋಣ ಪಡೆದುದರಿಂದ ಪುತ್ರನು ಉತ್ಪನ್ನವಾದನು. ಪುತ್ರನಲ್ಲಿ ಪಿತನಿಂದ ಬರುವ ಏಕವಿಂಶತಿ ಕಲೋಪೇತ ಈ ಸಹಃಪಿಣ್ಡವು ‘ಪ್ರಥಮಾವಾಪ’ ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತದೆ. ಪ್ರಥಮಪಾತ್ರ ಸ್ಥಾನದಲ್ಲಿ, ಪಿತನ ಈ ೨೧ ಪಿತೃಸಹಗಳ ಮೊದಲ ಅಧಿಕಾರಿಯು ಪುತ್ರನಾಗುತ್ತಾನೆ. ಪ್ರಥಮಪಾತ್ರ (ಪಿತ)ನಿಂದ ಪ್ರಥಮಾಧಿಕಾರಿಯಲ್ಲಿ (ಪುತ್ರನಲ್ಲಿ) ಆಹುತ ಈ ಪಿತೃಸಹವು ಅವಶ್ಯವಾಗಿ ‘ಪ್ರಥಮಾವಾಪ’ ಎಂದು ಕರೆಯಿಸಿಕೊಳ್ಳುತ್ತದೆ. ಇದರಲ್ಲಿ ಪಿತನ ಶೇಷ ಅಸುತಲಕ್ಷಣ ಸಪ್ತಕಲೆಗಳ (೭) ಧನವೇ ‘ಪಿತರಃ’ ಆಗಿದೆ, ಹಾಗೂ ಪುತ್ರನಿಂದ ಹುಟ್ಟುವ ಸುತನಿಗೆ ಏಕವಿಂಶತಿಕಲೆಗಳ (೨೧) ಋಣವೇ ‘ಸೂನವಃ’ ಆಗಿದೆ. ಈ ರೀತಿ ೨೮ ಪಿತೃಸಹಗಳ ಪ್ರಥಮಾವಾಪದ ಸಮ್ಬನ್ಧದಿಂದ ೭-೨೧ ಭೇದದಿಂದ ‘ಪಿತರಃ-ಸೂನವಃ’ ಎಂಬೆರಡು ಶ್ರೇಣಿ-ವಿಭಾಗವಾಗುತ್ತವೆ. ೭ರ ಪ್ರತಿಷ್ಠಾ ಸ್ವಯಂ ಪಿತನು; ೨೧ ಎಂಬುದು ಪುತ್ರರಲ್ಲಿ ಭುಕ್ತವಾಗುತ್ತದೆ.

(೨) – ಬೀಜಿ ಪಿತನಿಂದ ೨೧ ಮಾತ್ರಾ ಪಡೆದು ಜನ್ಮಧಾರಣೆ ಮಾಡುವ ಪುತ್ರನಲ್ಲಿಯೂ ಸ್ವತನ್ತ್ರರೂಪದಿಂದ ೨೮ ಸಹಗಳ ಆಗಮನವಾಯಿತು. ಎಲ್ಲಿ ತನ್ನ ಪುತ್ರನಿಗೆ ಸ್ವಧನ ರೂಪದಿಂದ ಉಕ್ತ ನಿಯಮಾನುಸಾರ ೨೧ ಮಾತ್ರಾ ಋಣ ಕೊಡುತ್ತಾನೆಯೋ, ಅಲ್ಲಿ ಪಿತನಿಂದ ದೊರಕಿರುವ ೨೧ ಮಾತ್ರಾಗಳಿಂದಲೂ ಈತನು ತನ್ನ ಪುತ್ರನಿಗೆ ಋಣ ಕೊಡಬೇಕಾಗುತ್ತದೆ. ಪ್ರಥಮಾವಾಪದಲ್ಲಿ ಹೇಳಲ್ಪಟ್ಟ ಕ್ರಮವೇ ಈ ಪಾರಮ್ಪರಿಕ ಧನದ ಋಣದಾನದ ಕ್ರಮವಾಗಿರುತ್ತದೆ. ಪಿತನಿಂದ ಪ್ರಾಪ್ತ ೨೧ರಲ್ಲಿ ೧೫ ಭಾಗವಂತೂ ಈ ಪುತ್ರನಲ್ಲಿ (ಬೀಜಿಯ ಪೌತ್ರನಲ್ಲಿ, ಹಾಗೂ ತನ್ನ ಪುತ್ರನಲ್ಲಿ) ಪ್ರದಾನ ಮಾಡುತ್ತಾನೆ, ಶೇಷ ೬ ಭಾಗವು ಈತನಲ್ಲಿಯೇ ಪ್ರತಿಷ್ಠಿತವಾಗಿ ಉಳಿಯುತ್ತದೆ. ಈ ೬ ಕಲೆಗಳು ಸುತನಾಗುವುದಿಲ್ಲ, ಅಸುತರೂಪದಿಂದ ಈತನಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ. ಆದ್ದರಿಂದ ಪೂರ್ವ ಪರಿಭಾಷಾನುಸಾರ ಇವುಗಳನ್ನು ‘ಪಿತರಃ’ ಎಂದು ಕರೆಯಲಾಗುತ್ತದೆ. ಹಾಗೂ ಪೌತ್ರಸ್ಥಾನೀಯ ಪುತ್ರನಲ್ಲಿ ಸುಪ್ತ ೧೫ ಕಲೆಗಳು ‘ಸೂನವಃ’ ಎಂದು ಕರೆಯಲ್ಪಡುತ್ತವೆ. ಈ ೧೫ ಕಲೆಗಳ ಆವಾಪವು ಪುತ್ರನಿಂದ ಆಗುತ್ತದೆ, ಹಾಗಾಗಿ ಇದು ದ್ವಿತೀಯಪಾತ್ರ. ಪೌತ್ರ ಸ್ಥಾನದಲ್ಲಿ, ಪುತ್ರನಲ್ಲಿ ಬೀಜಿಯ ಪುತ್ರನಿಂದ ಇವುಗಳ ಆವಾಪವಾಗುತ್ತದೆ, ಹಾಗಾಗಿ ಈ ಪೌತ್ರಸ್ಥಾನೀಯ ಪುತ್ರನು ‘ದ್ವಿತೀಯಾಧಿಕಾರಿ’ ಆಗುತ್ತಾನೆ. ದ್ವಿತೀಯಪಾತ್ರ (ಪುತ್ರ)ನಿಂದ ದ್ವಿತೀಯಾಧಿಕಾರಿಯಲ್ಲಿ (ಪೌತ್ರನಲ್ಲಿ) ಆಹುತ ಪಞ್ಚದಶಕಲೋಪೇತ ಈ ಪಿತೃಸಹವು ಅವಶ್ಯವಾಗಿ ‘ದ್ವಿತೀಯಾವಾಪ’ ಎಂದು ಕರೆಯಲ್ಪಡುತ್ತದೆ. ಈ ರೀತಿ ೨೧ ಪಿತೃಸಹಗಳಲ್ಲಿ ದ್ವಿತೀಯಾವಾಪ ಸಮ್ಬನ್ಧದಿಂದ ೬-೧೫ ಭೇದದಿಂದ ‘ಪಿತರಃ-ಸೂನವಃ’ ಎಂಬ ಶ್ರೇಣಿ-ವಿಭಾಗ ಆಗುತ್ತದೆ. ೬ರ ಪ್ರತಿಷ್ಠಾವು ಸ್ವಯಂ ಪುತ್ರವಾಗಿವೆ; ೧೫ ಪೌತ್ರನಲ್ಲಿ ಭುಕ್ತವಾಗುತ್ತದೆ.

(೩) – ಬೀಜಿಯ ಪುತ್ರ ಸ್ಥಾನದಲ್ಲಿ, ತನ್ನ ಪಿತನಿಂದ ಪ್ರಾಪ್ತ ೧೫ರ ರಾಶಿಯನ್ನು ಸುರಕ್ಷಿತವಾಗಿರಿಸುವ ಪೌತ್ರನ ಪುತ್ರನು ಉತ್ಪನ್ನವಾಗುತ್ತಾನೆ. ಇಲ್ಲಿಯೂ ನಿಯಮಾನುಸಾರ ೨೮ ಉತ್ಪನ್ನವಾಗುತ್ತವೆಯಾದರೂ, ಇದು ತನ್ನ ೨೮ರಲ್ಲಿ ೨೧ನ್ನು ಮಾತ್ರ ತನ್ನ ಪುತ್ರ (ಬೀಜಿಯ ಪ್ರಪೌತ್ರ)ನಿಗೆ ಕೊಡುವುದಲ್ಲದೆ, ಜೊತೆಯಲ್ಲಿ ಪಿತನಿಂದ ಪ್ರಾಪ್ತ ೨೫ ರಾಶಿಯಿಂದಲೂ ಇದಕ್ಕೆ ಋಣ-ದಾನ ಮಾಡಬೇಕಾಗುತ್ತದೆ. ಪಿತನಿಂದ (ಬೀಜಿ ಪುತ್ರನಿಂದ) ಪ್ರಾಪ್ತ ೧೫ರಲ್ಲಿ ೧೦ ಭಾಗವಂತೂ ಈ ಪುತ್ರನಲ್ಲಿ (ಬೀಜಿಯ ಪ್ರಪೌತ್ರನಲ್ಲಿ, ಹಾಗೂ ತನ್ನ ಪುತ್ರನಲ್ಲಿ) ಪ್ರದಾನ ಮಾಡುತ್ತಾನೆ. ಶೇಷ ೫ ಭಾಗವು ಸ್ವಯಂ ಇವನಲ್ಲಿ (ಪೌತ್ರನಲ್ಲಿ) ಪ್ರತಿಷ್ಠಿತವಾಗಿ ಉಳಿಯುತ್ತವೆ. ಈ ೫ ಕಲೆಗಳು ಸುತನಾಗುವುದಿಲ್ಲ, ಅಸುತರೂಪದಿಂದ ಇದರಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ, ಹಾಗಾಗಿ ಇವನ್ನು – ‘ಪಿತರಃ’ ಎಂದು ಕರೆಯಲಾಗುತ್ತದೆ. ಹಾಗೂ ಪ್ರಪೌತ್ರಸ್ಥಾನೀಯ ಪುತ್ರನಲ್ಲಿ ಸುತನ ೧೦ ಕಲೆಗಳು ‘ಸೂನವಃ’ ಎಂದು ಕರೆಯಲ್ಪಡುತ್ತವೆ. ಈ ೧೦ ಕಲೆಗಳ ಆವಾಪವು ಪೌತ್ರನಿಂದ ಆಗುತ್ತದೆ, ಹಾಗಾಗಿ ಇದು ತೃತೀಯಪಾತ್ರವಾಗಿದೆ. ಯಾವ ಪ್ರಪೌತ್ರನಲ್ಲಿ ಆವಾಪವಾಗುತ್ತದೆಯೋ, ಅವನು ತೃತೀಯಾಧಿಕಾರಿ ಆಗುತ್ತಾನೆ. ತೃತೀಯಪಾತ್ರ (ಪೌತ್ರ)ನಿಂದ ತೃತೀಯಾಧಿಕಾರಿಯಲ್ಲಿ (ಪ್ರಪೌತ್ರನಲ್ಲಿ) ಆಹುತ ದಶಕಲೋಪೇತ (೧೦) ಇದೇ ಪಿತೃಸಹವು ‘ತೃತೀಯಾವಾಪ’ ಆಗಿದೆ. ಈ ರೀತಿ ೧೫ ಪಿತೃಸಹಗಳಲ್ಲಿ ತೃತೀಯಾವಾಪ ಸಮ್ಬನ್ಧದಿಂದ ೫-೧೦ ಭೇದದಿಂದ ‘ಪಿತರಃ-ಸೂನವಃ’ ಎಂಬ ೨ ಶ್ರೇಣಿ-ವಿಭಾಗವಾಗುತ್ತದೆ. ೫ರ ಪ್ರತಿಷ್ಠಾ ಸ್ವಯಂ ಪೌತ್ರವಾಗಿದೆ; ೧೦ ಪ್ರಪೌತ್ರನಲ್ಲಿ ಭುಕ್ತವಾಗುತ್ತದೆ.

(೪)- ಬೀಜಿಯ ಪೌತ್ರ ಸ್ಥಾನದಲ್ಲಿ, ತನ್ನ ಪಿತನಿಂದ ಪ್ರಾಪ್ತ ೧೦ ರಾಶಿಗಳನ್ನು ಸುರಕ್ಷಿತವಾಗಿರಿಸುವ ಪ್ರಪೌತ್ರನ ಪುತ್ರನು ಉತ್ಪನ್ನವಾಗುತ್ತಾನೆ. ಈ ಪ್ರಪೌತ್ರನಲ್ಲಿ ೨೮ ಸ್ವತಃ ಸಿದ್ಧವಾಗಿರುತ್ತವೆ, ಇವುಗಳಲ್ಲಿ ೨೧ರ ನಿಯಮಾನುಸಾರ ಇವನು ತನ್ನ ಪುತ್ರನಲ್ಲಿ (ಬೀಜಿಯ ವೃದ್ಧಪ್ರಪೌತ್ರನಲ್ಲಿ) ಆಧಾನ ಮಾಡುತ್ತಾನೆ. ಇದಲ್ಲದೆ ಪಿತನಿಂದ ಪ್ರಾಪ್ತ ೧೦ ಸಂಖ್ಯೆಯ ಪಿತೃಧನದಲ್ಲಿಯೂ ಇವನಿಗೆ ಋಣದಾನ ಮಾಡಬೇಕಾಗುತ್ತದೆ. ಪಿತನಿಂದ (ಬೀಜಿಯ ಪೌತ್ರನಿಂದ) ಪ್ರಾಪ್ತ ೧೦ರಲ್ಲಿ ೬ ಭಾಗಗಳಂತೂ ಈ ಪುತ್ರನಲ್ಲಿ (ಬೀಜಿಯ ವೃದ್ಧಪ್ರಪೌತ್ರನಲ್ಲಿ, ಹಾಗೂ ತನ್ನ ಪುತ್ರನಲ್ಲಿ) ಪ್ರದಾನ ಮಡುತ್ತಾನೆ, ಶೇಷ ೪ ಭಾಗಗಳು ಸ್ವಯಂ ಈತನಲ್ಲಿ (ಪ್ರಪೌತ್ರನಲ್ಲಿ) ಪ್ರತಿಷ್ಠಿತವಾಗಿ ಉಳಿಯುತ್ತವೆ. ಈ ೪ ಕಲೆಗಳು ಅಸುತಭಾವದಿಂದ ‘ಪಿತರ’ ಆಗಿವೆ, ಸುತನು ೬ ಕಲೆಗಳ ‘ಸೂನವಃ’ ಆಗಿರುತ್ತಾನೆ. ಈ ೬ ಕಲೆಗಳ ಆವಾಪವೇ ಪ್ರಪೌತ್ರನಿಂದ ಆಗುತ್ತದೆ. ಹಾಗಾಗಿ ಇವನು ಚತುರ್ಥಪುತ್ರನು. ಇದೇ ಪಿತೃಸಹವು ‘ಚತುರ್ಥಾವಾಪ’ ಎಂದು ಕರೆಯಲ್ಪಡುತ್ತದೆ.

(೫)- ಬೀಜಿಯ ಪ್ರಪೌತ್ರ ಸ್ಥಾನದಲ್ಲಿ, ತನ್ನ ಪಿತನಿಂದ ಪ್ರಾಪ್ತ ೬ ಸಹೋಭಾಗಗಳನ್ನು ಸುರಕ್ಷಿತವಾಗಿಡುವ ವೃದ್ಧಪ್ರಪೌತ್ರನಿಗೆ ಪುತ್ರನು ಉತ್ಪನ್ನವಾಗುತ್ತಾನೆ. ಇವನಲ್ಲಿಯೂ ೨೮ ಸ್ವತಃ ಸಿದ್ಧವಾಗಿರುತ್ತವೆ, ಅದರಲ್ಲಿ ೨೧ನ್ನು ಇವನು (ಬೀಜಿಯ ಅತಿವೃದ್ಧಪ್ರಪೌತ್ರನು) ತನ್ನ ಪುತ್ರನಿಗೆ ಆಧಾನ ಮಾಡುತ್ತಾನೆ. ಇದರೊಂದಿಗೆ ಪಿತನಿಂದ ಪ್ರಾಪ್ತ ೬ ಸಂಖ್ಯಾಯುತ ಪಿತೃಧನದಿಂದಲೂ ಇವನಿಗೆ ಋಣದಾನ ಮಾಡಬೇಕಾಗುತ್ತದೆ. ಪಿತನಿಂದ (ಬೀಜಿಯ ಪ್ರಪೌತ್ರನಿಂದ) ಪ್ರಾಪ್ತ ೬ರಲ್ಲಿ ೩ ಭಾಗವಂತೂ ಈ ಪುತ್ರನಲ್ಲಿ (ಬೀಜಿಯ ಅತಿವೃದ್ಧಪ್ರಪೌತ್ರನಲ್ಲಿ, ಹಾಗೂ ತನ್ನ ಪುತ್ರನಲ್ಲಿ) ಪ್ರದಾನ ಮಾಡಿಬಿಡುತ್ತಾನೆ, ಉಳಿದ ೩ ಭಾಗವು ಸ್ವಯಂ ಇವನಲ್ಲಿ (ವೃದ್ಧ ಪ್ರಪೌತ್ರನಲ್ಲಿ) ಪ್ರತಿಷ್ಠಾ ರೂಪದಿಂದ ಉಳಿದುಬಿಡುತ್ತದೆ. ಈ ೩ ಕಲೆಗಳು ಅಸುತಭಾವದ ದೃಷ್ಟಿಯಲ್ಲಿ ‘ಪಿತರಃ’ ಆಗಿವೆ, ಸುತನ ೩ ಕಲಿಗಳು ‘ಸೂನವಃ’ ಆಗಿವೆ. ಈ ೩ ಸೂನು ಕಲೆಗಳ ಆವಾಪವು ವೃದ್ದಪ್ರಪೌತ್ರನಿಂದ ಉಂಟಾಗುತ್ತದೆ, ಹಾಗಾಗಿ ಇದು ಪಞ್ಚಮಪಾತ್ರವಾಗಿದೆ. ಯಾವ ಅತಿವೃದ್ಧಪ್ರಪೌತ್ರನಲ್ಲಿ ಆವಾಪವಾಗುತ್ತದೆಯೋ, ಅವನು ಪಞ್ಚಮಾದಿಕಾರಿಯಾಗುತ್ತಾನೆ. ಪಞ್ಚಮಪಾತ್ರ (ವೃದ್ಧಪ್ರಪೌತ್ರ)ನಿಂದ ಪಞ್ಚಮಾಧಿಕಾರಿಯಲ್ಲಿ (ಅತಿವೃದ್ಧಪ್ರಪೌತ್ರನಲ್ಲಿ) ಆಹುತ ಕಲಾತ್ರಯೋಪೇತ ಇದೇ ಪಿತೃಸಹವು ‘ಪಞ್ಚಮಾವಾಪ’ ಆಗುತ್ತದೆ. ಈ ರೀತಿ ೬ ಪಿತೃಸಹಗಳಲ್ಲಿ ಪಞ್ಚಮಾವಾಪ ಸಮ್ಬನ್ಧದಿಂದ ೩-೩ ಭೇದದಿಂದ ‘ಪಿತರಃ-ಸೂನವಃ’ ಎಂಬೆರಡು ಶ್ರೇಣಿ-ವಿಭಾಗ ಆಗುತ್ತವೆ. ೩ರ ಪ್ರತಿಷ್ಠಾವು ಸ್ವಯಂ ವೃದ್ಧಪ್ರಪೌತ್ರನಾಗಿದ್ದಾನೆ, ೩ ಕಲೆಗಳು ಅತಿವೃದ್ಧಪ್ರಪೌತ್ರನಲ್ಲಿ ಭುಕ್ತವಾಗಿರುತ್ತವೆ.

(೬)- ಬೀಜಿಯ ವೃದ್ಧಪ್ರಪೌತ್ರ ಸ್ಥಾನದಲ್ಲಿ, ತನ್ನ ಪಿತನಿಂದ ಪ್ರಾಪ್ತ ೩ ಸಹೋಭಾಗಗಳನ್ನು ಸುರಕ್ಷಿತವಾಗಿರಿಸುವ ಅತಿವೃದ್ಧಪ್ರಪೌತ್ರನಿಗೆ ಪುತ್ರನು ಉತ್ಪನ್ನವಾಗುತ್ತಾನೆ. ಇವನಲ್ಲಿಯೂ ೨೮ ಕಲೆಗಳು ಸ್ವತಃ ಸಿದ್ಧವಾಗಿದ್ದರೂ, ಅದರಲ್ಲಿ ೨೧ನ್ನು ಇವನು ತನ್ನ ಪುತ್ರನಿಗೆ (ಬೀಜಿಯ ವೃದ್ಧಾತಿವೃದ್ಧಪ್ರಪೌತ್ರನಿಗೆ) ಆಧಾನ ಮಾಡುತ್ತಾನೆ. ಹಾಗೂ ಇದರೊಂದಿಗೆ ಪಿತನಿಂದ ಪ್ರಾಪ್ತ ೩ ಸಂಖ್ಯೆಯ ಪಿತೃ ಧನದಿಂದಲೂ ಇವನು ಋಣ ಕೊಡಬೇಕಾಗುತ್ತದೆ. ಪಿತನಿಂದ (ಬೀಜಿಯ ವೃದ್ಧಪ್ರಪೌತ್ರನಿಂದ) ಪ್ರಾಪ್ತ ೩ರಿಂದ ೧ ಭಾಗವಂತೂ ಈ ಪುತ್ರನಲ್ಲಿ (ಬೀಜಿಯ ವೃದ್ಧಾತಿವೃದ್ಧಪ್ರಪೌತ್ರನಲ್ಲಿ, ಹಾಗೂ ತನ್ನ ಪುತ್ರನಲ್ಲಿ) ಪ್ರದಾನ ಮಡುತ್ತಾನೆ, ಉಳಿದ ೨ ಭಾಗವು ಸ್ವಯಂ ಈತನಲ್ಲಿಯೇ (ಅತಿವೃದ್ಧಪ್ರಪೌತ್ರನಲ್ಲಿ) ಪ್ರತಿಷ್ಠಾರೂಪದಿಂದ ಪ್ರತಿಷ್ಠಿತವಾಗಿರುತ್ತವೆ. ಈ ೨ ಕಲೆಗಳು ಅಸುತಭಾವಾಪೇಕ್ಷೆಯಿಂದ ‘ಪಿತರೌ’ ಆಗಿವೆ, ಸುತನ ೧ ಕಲೆಯು ‘ಸೂನುಃ’ ಆಗಿದೆ. ಈ ೧ ಸೂನು ಕಲೆಯ ಆವಾಪವು ಅತಿವೃದ್ಧಪ್ರಪೌತ್ರನಿಂದ ಆಗುತ್ತದೆ, ಹಾಗಾಗಿ ಇವನು ಷಷ್ಠಪಾತ್ರನು. ಯಾವ ವೃದ್ಧಾತಿವೃದ್ಧಪ್ರಪೌತ್ರನಲ್ಲಿ ಆವಾಪವಾಗುತ್ತದೆಯೋ, ಅವನು ಷಷ್ಠ ಅದಿಕಾರೀ ಆಗುತ್ತಾನೆ. ಷಷ್ಠಪಾತ್ರ (ಅತಿವೃದ್ಧಪ್ರಪೌತ್ರ)ನಿಂದ ಷಷ್ಠ ಅಧಿಕಾರಿಯಲ್ಲಿ (ವೃದ್ಧಾತಿವೃದ್ಧಪ್ರಪೌತ್ರನಲ್ಲಿ) ಆಹುತ ಏಕಕಲೆ ಇದುವೇ ಪಿತೃಸಹದ ‘ಷಷ್ಠಆವಾಪ’ ಆಗಿದೆ. ಈ ರೀತಿ ೩ ಪಿತೃಸಹಗಳಲ್ಲಿ ಷಷ್ಠಆವಾಪದ ಸಮ್ಬನ್ಧದಿಂದ ೨-೧ ಭೇದದಿಂದ ‘ಪಿತರೌ-ಸೂನುಃ’ ಎಂಬೆರಡು ಶ್ರೇಣಿ ವಿಭಾಗವಾಗುತ್ತದೆ. ೨ರ ಪ್ರತಿಷ್ಠಾವು ಸ್ವಯಂ ಅತಿವೃದ್ಧಪ್ರಪೌತ್ರನಾಗಿದ್ದಾನೆ, ೧ ಕಲೆಯು ವೃದ್ಧಾತಿವೃದ್ಧಪ್ರಪೌತ್ರನಲ್ಲಿ ಭುಕ್ತವಾಗಿರುತ್ತದೆ. 

(೭)- ಬೀಜಿಯ ವೃದ್ಧಾತಿವೃದ್ಧಪ್ರಪೌತ್ರನಲ್ಲಿ ಬೀಜಿಯ ಕೇವಲ ೧ ಸಹೋಮಾತ್ರವು ಉಳಿದಿರುತ್ತದೆ. ಆದ್ದರಿಂದ ಇಲ್ಲಿಗೆ ಬಂದು ಋಣದಾನದ ಕ್ರಮವು ಸಮಾಪ್ತವಾಗುತ್ತದೆ. ಈ ೧ ಕಲೆಯು ಸ್ವಯಂ ಇದರ ಪ್ರತಿಷ್ಠಾದಲ್ಲಿ ಉಪಯುಕ್ತವಾಗುತ್ತದೆ. ಒಂದುವೇಳೆ ಇದರಲ್ಲಿ ಪಿತೃಧನದ ೧ ಕಲೆಯೂ ಇರದಿದ್ದರೆ, ಇದರ ಪ್ರತಿಷ್ಠಾವೇ ಉಚ್ಛೇದವಾಗಿಬಿಡುತ್ತದೆ. ಈ ರೀತಿ ಅತಿವೃದ್ಧಪ್ರಪಿತಾಮಹನಿಂದ ಬರುವ ಈ ೧ ಕಲೆಯು ಸ್ವರೂಪರಕ್ಷೆಗಾಗೆ ಉಪಯುಕ್ತವಾಗುತ್ತಾ ಮುಂದುವರೆಯದೆ ಕೇವಲ ‘ಪಿತರ’ ರೂಪದಿಂದಲೇ ಪ್ರತಿಷ್ಠಿತವಾಗಿ ಉಳಿದುಬಿಡುತ್ತದೆ. ಫಲಿತಾಂಶ ಏನೆಂದರೆ ಬೀಜಿಯಿಂದ ಮುಂದೆ ಉತ್ತರೋತ್ತರ ‘ಪಿತರ-ಸೂನವಃ’ ರೂಪದಿಂದ ವಿತತವಾಗುವ ೨೮ ಕಲಾತ್ಮಕ ಪಿತೃಸಹಗಳು “೭-೨೧ x ೬-೧೫ x ೫-೧೦ x ೪-೬ x ೩-೩ x ೨-೧ +” ಎಂಬೀ ಕ್ರಮಧಾರೆಯಿಂದ ಆರನೇ ಪೀಳಿಗೆಯಲ್ಲಿಯೇ ಸಮಾಪ್ತಿಯಾಗಿಬಿಡುತ್ತದೆ. ಏಕ ಕಲೋಪೇತ ಏಳನೇ ಪೀಳಿಗೆಯಲ್ಲಿ ಮುಂದೆ ವಿತತವಾಗಲು ಯೋಗ್ಯ ಪಿಣ್ಡದ ಅಭಾವವಿರುತ್ತದೆ. ಆದ್ದರಿಂದ ಏಳನೇ ಪೀಳಿಗೆಗೆ ಹೋಗಿ ಸಪಿಣ್ಡತಾ ಸಮ್ಬನ್ಧವು (೨೮ ಕಲಾತ್ಮಕ ಒಂದು ಪಿಣ್ಡದ ವಿತಾನಕ್ರಮವು) ಸಮಾಪ್ತಿಯಾಗುತ್ತದೆ. ಇದೇ ವಿಜ್ಞಾನದ ಆಧಾರದ ಮೇಲೆ – “ಸಾಪಿಣ್ಡ್ಯಂ ಸಾಪ್ತಪೌರುಷಂ, ಸಪಿಣ್ಡತಾ ತು ಪುರುಷೇ ಸಪ್ತಮೇ ವಿನಿವರ್ತ್ತತೇ” ಇತ್ಯಾದಿ ರಾದ್ಧಾನ್ತಗಳು ಪ್ರತಿಷ್ಠಿತವಾಗಿವೆ.

೧೬ - ಷಡ್ವಿಧ-ಆವಾಪ ಪರಿಲೇಖಃ

೧೭ - ಪಿತೃ-ಸೂನು ಪರಿಲೇಖ




ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

No comments:

Post a Comment