Thursday, 6 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಆವಾಪಪಿಣ್ಡ-ಬೀಜಪಿಣ್ಡ ಮೀಮಾಂಸೆ (೨೫)

೨೫. ಆವಾಪಪಿಣ್ಡ-ಬೀಜಪಿಣ್ಡ ಮೀಮಾಂಸೆ

ಹಿಂದಿನ ಲೇಖನಗಳಲ್ಲಿ ಉಲ್ಲೇಖಿಸಲ್ಪಟ್ಟ ಪಿತೃಸಹಃ-ಪಿಣ್ಡದ ‘ಪಿತರಃ-ಸೂನವಃ’ ಭೇದದಿಂದ ಎರಡು ವಿವರ್ತ್ತಗಳನ್ನು ಹೇಳಲಾಗಿದೆ. ಈಗ ಒಂದು ವಿಭಿನ್ನ ದೃಷ್ಟಿಯಿಂದ ಈ ವಸ್ತುತತ್ತ್ವದ ಸಮನ್ವಯ ಮಾಡಲಾಗುತ್ತದೆ. ಈ ದೃಷ್ಟಿಯಲ್ಲಿ ಈ ಪಿತೃಸಹಃ ಪಿಣ್ಡದ ‘ಆವಾಪಪಿಣ್ಡ-ಬೀಜಪಿಣ್ಡ’ ಭೇದದಿಂದ ಎರಡು ವಿಭಾಗ ಎಂದು ನಂಬಬಹುದು. ಆವಾಪಪಿಣ್ಡವು ಪಿತೃಋಣವಾಗಿದೆ, ಅದು ಪಿತನ (ಬೀಜೀಯ) ಧನವಾಗಿದೆ, ಇದನ್ನು ಋಣರೂಪದಿಂದ ಗ್ರಹಣ ಮಾಡಿ ಉತ್ಪನ್ನವಾಗುವ ಪುತ್ರಾದಿ ಸ್ವಯಂ ಕೂಡ ಸಹಃಪಿಣ್ಡದ ಸಂಗ್ರಾಹಕರಾಗುತ್ತಾರೆ. ಇವರ ಶುಕ್ರದಲ್ಲಿಯೂ ಅದೇ ಕ್ರಮಾನುಸಾರ ನಕ್ಷತ್ರಪ್ರಾಣಾವಚ್ಛಿನ್ನ ಅಷ್ಟಾವಿಂಶತಿಕಲ ಪಿತೃಸಹಃ ಪಿಣ್ಡವು ಪ್ರತಿಷ್ಠಿತವಾಗುತ್ತದೆ, ತನ್ಮುಖೇನ ನಾವು ಇದನ್ನು ನಮ್ಮ ಧನವೆಂದು ಹೇಳಲು ಸಾಧ್ಯವಾಗುತ್ತದೆ. ನಮ್ಮ ಇದೇ ಧನವು ನಮ್ಮ ಪುತ್ರನಿಗೆ ಬೀಜವಾಗುತ್ತದೆ, ಹಾಗಾಗಿ ಇದನ್ನು ನಾವು ‘ಬೀಜಪಿಣ್ಡ’ ಎಂದೂ ಹೇಳಬಹುದು. ಈ ಸ್ವಾರ್ಜಿತ ಧನದ ಬೀಜತ್ವವು ೧೬ನೇ ವರ್ಷದ ಸಮಾಪ್ತಿಯಾದಾಗಲೇ ಪೂರ್ಣರೂಪದಿಂದ ವಿಕಸಿತವಾಗುತ್ತದೆ. ಇದಕ್ಕೂ ಮುನ್ನ ಇದರ ಪಿತೃಸಹಃಪಿಣ್ಡವು ನಿರ್ವೀರ್ಯ್ಯವೇ ಆಗಿರುತ್ತದೆ. ಇದರಲ್ಲಿ ಯಾವ ಮಾತ್ರಾಗಳು ಪಿತಾದಿಗಳಿಂದ ಬರುತ್ತವೆಯೋ, ಅವುಗಳೇ ‘ಆವಾಪ ಪಿಣ್ಡ’ ಎಂದು ಕರೆಯಲ್ಪಡುತ್ತವೆ. ಆವಾಪಪಿಣ್ಡಕ್ಕೂ ‘ಪಿತರಃ-ಸೂನವಃ’ ಎಂಬ ಎರಡು ವಿಭಾಗಗಳಿರುತ್ತವೆ, ಹಾಗೂ ಬೀಜಪಿಣ್ಡದ ಎರಡೂ ವಿಭಾಗಗಳೂ ಸುರಕ್ಷಿತವಾಗಿರುತ್ತವೆ.

ಉದಾಹರಣೆಗೆ ೨೧ ಸಂಖ್ಯಾಯುಕ್ತ ಪುತ್ರನ ಆವಾಪಪಿಣ್ಡವನ್ನು ತೆಗೆದುಕೊಳ್ಳೋಣ. ಯಾವ ೨೧ ಪಿತೃಧನಗಳಿವೆಯೋ, ಇದನ್ನು ಋಣವಾಗಿ ಪಡೆದು ಪುತ್ರನು ಜನ್ಮ ಧಾರಣೆ ಮಾಡಿರುತ್ತಾನೆ. ಇದೇ ಆವಾಪಪಿಣ್ಡವಾಗಿದೆ. ಇದರ ೬ ಭಾಗವಂತೂ ಪೂರ್ವ ಕಥನಾನುಸಾರ ಇದರಲ್ಲಿಯೇ ಉಳಿದಿರುತ್ತವೆ, ಶೇಷ ೧೫ ಭಾಗಗಳು ಮುಂದಿನ ಪುತ್ರಸನ್ತತಿಯಲ್ಲಿ ಸ್ವಧನದೊಂದಿಗೆ ಆಹುತವಾಗುತ್ತವೆ. ೭ ಕಲೆಗಳು ಸ್ವಾತ್ಮಪ್ರತಿಷ್ಠಾಭಾಗ ‘ಪಿತರಃ’ ಆಗಿದೆ, ೧೫ ಕಲೆಗಳು ಸನ್ತತಿಪ್ರವಿಷ್ಟಭಾಗ ‘ಸೂನವಃ’ ಆಗಿವೆ. ಇದನ್ನು ಹೊರತುಪಡಿಸಿ ೨೮ ಕಲಾತ್ಮಕ ಬೀಜಪಿಣ್ಡವು ಇವನಲ್ಲಿ ಪ್ರತಿಷ್ಠಿತವಾಗಿರುತ್ತದೆ. ಇದರಲ್ಲಿ ೭ ಕಲೆಗಳು ಇವನಲ್ಲಿ ಉಳಿಯುತ್ತವೆ, ಇದೇ ‘ಪಿತರಃ’ ಆಗಿವೆ, ೨೧ ಕಲೆಗಳು ಪುತ್ರನಲ್ಲಿ ನ್ಯಾಸಗೊಳ್ಳುತ್ತವೆ, ಇದೇ ‘ಸೂನವಃ’ ಆಗಿದೆ. ಈ ರೀತಿ ಪಿತೃಧನರೂಪ ಆವಾಪಪಿಣ್ಡ, ಹಾಗೂ ಸ್ವಾತ್ಮಧನರೂಪ ಬೀಜಪಿಣ್ಡ, ಎರಡೂ ಪಿಣ್ಡಗಳ ಪ್ರತಿಷ್ಠಿತ-ಸನ್ತತಿಗತ ಭೇದದಿಂದ ಎರಡೆರಡು ವಿಭಾಗವಾಗುತ್ತವೆ.

ಈ ಪರಮ್ಪರಯಾ ಆಗತ ಆವಾಪಪಿಣ್ಡಕಲೆಗಳ ಹಾಗೂ ಸ್ವಾರ್ಜಿತ ಬೀಜಪಿಣ್ಡಕಲೆಗಳ ಸಂಕಲನವನ್ನು ಮಾಡಿದರೆ ಪ್ರತ್ಯೇಕ ಪುರುಷನ ಶುಕ್ರದಲ್ಲಿ ಚತುರಶೀತಿಕಲಾ (೮೪) ಸಹಃಪಿಣ್ಡದ ಸತ್ತೆಯು ಸಿದ್ಧವಾಗುತ್ತದೆ.

ಪ್ರತ್ಯೇಕ ಪುರುಷನ ಶುಕ್ರದಿಂದ ೨೮ ಸಹೋಭಾಗವಂತೂ ಸ್ವತನ್ತ್ರ ರೂಪದಿಂದ ಉತ್ಪನ್ನವಾಗುತ್ತವೆ.

* ಇದನ್ನು ಹೊರತುಪಡಿಸಿ ೨೧ ಸಹೋಭಾಗವಂತೂ ತನ್ನ ಪಿತನಿಂದ ಬಂದಿರುತ್ತವೆ, 
* ೧೫ ಸಹೋಭಾಗವು ಪಿತಾಮಹನಿಂದ ಬಂದಿರುತ್ತವೆ,
* ೧೦ ಸಹೋಭಾಗವು ಪ್ರಪಿತಾಮಹನಿಂದ ಬಂದಿರುತ್ತವೆ,
* ಸಹೋಭಾಗವು ವೃದ್ಧಪ್ರಪಿತಾಮಹನಿಂದ ಬಂದಿರುತ್ತವೆ,
* ಸಹೋಭಾಗವು ಅತಿವೃದ್ಧಪ್ರಪಿತಾಮಹನಿಂದ ಬಂದಿರುತ್ತವೆ, ಹಾಗೂ
* ಸಹೋಭಾಗವು ವೃದ್ಧಾತಿವೃದ್ಧಪ್ರಪಿತಾಮಹನಿಂದ ಬಂದಿರುತ್ತದೆ. 

ಏಳು ತಲೆಮಾರುಗಳ ವಂಶವೃಕ್ಷ


ಈ ರೀತಿ ಸ್ವಾತ್ಮಧನರೂಪ ೨೮ನ್ನು ಹೊರತುಪಡಿಸಿ ತನ್ನಿಂದ ಮೇಲಿನ ೬ ಪಿತೃಪರಮ್ಪರೆಗಳಿಂದ ಇವನಲ್ಲಿ ೨೧-೧೫-೧೦-೬-೩-೧, ಇಷ್ಟು ಸಹೋಭಾಗಗಳು ಋಣರೂಪದಿಂದ ಬರುತ್ತವೆ, ಇವುಗಳ ಸಂಕಲನದಿಂದ ೫೬ ಕಲೆಗಳಾಗುತ್ತವೆ. ಇವೇ ೫೬ರ ಸಮೂಹವು ‘ಆವಾಪಪಿಣ್ಡ’ ಆಗಿದೆ, ಹಾಗೂ ೨೮ ಕಲಾ ಭಾಗವು ಬೀಜಪಿಣ್ಡವಾಗಿದೆ. ೫೬ + ೨೮ ಇದರ ಸಂಕಲನದಿಂದ ೮೪ ಎಂಬ ಸಂಖ್ಯೆಯ ನಿಷ್ಕರ್ಷವು ಹೊರಡುತ್ತದೆ. ಶುಕ್ರಧಾರೆಯಿಂದ ಪ್ರತಿಷ್ಠಿತ, ಆವಾಪ-ಬೀಜಪಿಣ್ಡಾತ್ಮಕ, ಚತುರಶೀತಿಕಲೆಗಳು ಈ ಪಿತೃಸಹಃಪಿಣ್ಡದ ಆವಾಪನ ಭೂಮಿಯಲ್ಲಿ ಶುಕ್ರಗತ ಚಾನ್ದ್ರ ಮಹಾನಾತ್ಮನೆಂದೇ ನಂಬಲಾಗಿದೆ. ಇದೇ ೮೪ರ ವ್ಯೂಹನದಿಂದ ಯೋನಿಭಾವಪ್ರವರ್ತ್ತಕ ಮಹಾನಾತ್ಮವು ಚತುರಶೀತಿಲಕ್ಷ (೮೪,೦೦,೦೦೦) ಯೋನಿಗಳ ಪ್ರವರ್ತ್ತಕವಾಗುತ್ತದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

No comments:

Post a Comment