Sunday, 9 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪಿತೃಸೋಮಯಜ್ಞದಿಂದ ಋಣಪ್ರವೃತ್ತಿ (೨೩)

೨೩. ಪಿತೃಸೋಮಯಜ್ಞದಿಂದ ಋಣಪ್ರವೃತ್ತಿ

“ಸ್ವ ಜನ್ಮದಾತಾ ಪಿತನಿಗೆ, ಚನ್ದ್ರಲೋಕಸ್ಥ ಪಿತಾಮಹಾದಿಗಳಿಗೆ, ಹಾಗೂ ಸ್ವಯಂ ತನಗೆ ತಾನೂ ಅಪತ್ಯಭಾವದಲ್ಲಿ ಸುರಕ್ಷಿತವಾಗಿರಿಸುವ ಪಿತೃಸಹವು ಸನ್ತಾನಧಾರೆಯಲ್ಲಿ ತನ್ತುರೂಪದಿಂದ ಪ್ರವಾಹಿತವಾಗಿರುತ್ತದೆ” ಎಂದು ಹೇಳಲ್ಪಟ್ಟಿದೆ.

ಈಗ ಈ ಸಮ್ಬನ್ಧದಲ್ಲಿ ಮೂಲಪುರುಷನಿಂದ (ಬೀಜೀ ಪಿತನಿಂದ) ಆರಮ್ಭವಾಗಿ ಆತನ ಏಳನೇ ಪೀಳಿಗೆಯ ಪರ್ಯ್ಯನ್ತ ವಿತತವಾಗಿರುವ ಸನ್ತಾನ ಪರಮ್ಪರೆಯಲ್ಲಿ ಮೂಲಪುರುಷನ ಶುಕ್ರದಲ್ಲಿ ಪ್ರತಿಷ್ಠಿತ ೨೮ ಕಲೆಗಳು ಪಿತೃಸಹೋರೂಪೀ ಪಿತೃಧನವು ಯಾವ ಕ್ರಮದಿಂದ ವಿಭಕ್ತವಾಗಿ ಋಣ ರೂಪದಲ್ಲಿ ಆಹುತವಾಗುತ್ತದೆ? ಚಾನ್ದ್ರರಸದಿಂದ ಅನ್ನದ ಮುಖೇನ ಉತ್ಪನ್ನವಾಗುವ ಶುಕ್ರದಲ್ಲಿ ನಕ್ಷತ್ರಸಮ್ಬನ್ಧದಿಂದ ಚಾನ್ದ್ರನಾಡಿಯ ಮುಖೇನ ಸಾಕ್ಷಾತ್ ರೂಪದಿಂದ ಪ್ರತಿಷ್ಠಿತ ೨೮ ಕಲೆಗಳು ಪಿತೃಸಹಃ-ಪಿಣ್ಡವೇ ಮೂಲಧನವಾಗಿದೆ, ಇದು ಪೂರ್ವನಿರೂಪಣೆಯಿಂದ ಗತಾರ್ಥವಾಗಿದೆ. ಇದೇ ಪಿತೃಪಿಣ್ಡವು ಸ್ತ್ರೀಯ ಯೋಷಾಪ್ರಾಣಪ್ರಧಾನ ಶೋಣಿತಾಗ್ನಿಯಲ್ಲಿ ಆಹುತವಾಗುವ ಶುಕ್ರದ ಜೊತೆಜೊತೆಗೆ ಆಹುತವಾಗುತ್ತದೆ. ಇದು ಸೋಮಮಯ ಶುಕ್ರ, ಅಂದರೆ ಶುಕ್ರಮಯ ಸೋಮವಾಗಿದ್ದು ಪಿತರಪ್ರಾಣಪ್ರಧಾನವಾಗಿದೆ, ಹಾಗಾಗಿ ಈ ಅಗ್ನಿಷೋಮೀಯ ಸೋಮಯಜ್ಞವನ್ನು ಸೌಮ್ಯಪಿತೃಪ್ರಾಣದ ಪ್ರಧಾನತೆಯಿಂದ ‘ಪಿತೃಸೋಮಯಜ್ಞ’ ಎನ್ನಲಾಗಿದೆ. ಇದೇ ಸೋಮಷ್ಟೋಮ – (ಪಿತೃಸೋಮ) – ಯಜ್ಞವಾಗಿದ್ದು ಪ್ರಜಾಸೃಷ್ಟಿಯ ಮೂಲಪ್ರತಿಕವೆಂದು ನಂಬಲಾಗಿದೆ.

ಶುಕ್ರದ ಆಹುತಿ ಆಗುತ್ತದೆ, ಶುಕ್ರದ ಜೊತೆಜೊತೆಗೆ ತದ್ಗತ ಪಿತೃಸಹವೂ ಆಹುತವಾಗುತ್ತದೆ. ಈ ಸಮ್ಬನ್ಧದಲ್ಲಿ ಪ್ರಶ್ನೆ ಏನೆಂದರೆ, ದಾಮ್ಪತ್ಯಕಾಲದಲ್ಲಿ ಸಮ್ಪೂರ್ಣ ಶರೀರದ ಶುಕ್ರವು ಆಹುತವಾಗುತ್ತದೆಯೇ? ಹಾಗೂ ತದ್ಗತ ಪಿತೃಸಹದ ೨೮ ಕಲೆಗಳೂ ಆಹುತವಾಗುತ್ತವೆಯೇ? ಈ ಪ್ರಶ್ನೆಗಳಿಗೆ ಉತ್ತರವು ‘ಸರ್ವಥಾ ಇಲ್ಲ’ ಎಂದು. ಜೀವನಧಾರಣೋಪಾಯಿಕ ಸಮ್ಪೂರ್ಣ ಶುಕ್ರಮಾತ್ರಾ, ಹಾಗೂ ತದ್ಗತ ಪಿತ್ರ್ಯಸಹದ ೨೮ ಕಲೆಗಳು ಒಂದೇ ಕಾಲದಲ್ಲಿ ಏನಾದರೂ ಆಹುತವಾದರೆ, ಆ ಕ್ಷಣವೇ ಜೀವನಲೀಲೆಯು ಸಮಾಪ್ತವಾಗುತ್ತದೆ. ಇಂತಹಾ ದಶೆಯಲ್ಲಿ, ಒಂದು ಸಮಯದಲ್ಲಿ ಸಮ್ಪೂರ್ಣ ಶುಕ್ರವು, ಹಾಗೂ ತದವಿನಾಭೂತ ಪಿತೃಸಹಃಪಿಣ್ಡವು ಆಹುತವಾಗುವುದಿಲ್ಲ, ಆದರೆ ಅಂಶ ಮಾತ್ರವೇ, ಈ ಸಹೋಮಾತ್ರಾಗಳ ಆಹುತಿಯಾಗುತ್ತದೆ ಎಂದು ಒಪ್ಪಬೇಕಾಗುತ್ತದೆ. ಇದು ಅಂಶಾಹುತಿ ‘ಪ್ರವರ್ಗ್ಯಾಹುತಿ’-‘ಉಚ್ಛಿಷ್ಟಯಜ್ಞ’ ಇತ್ಯಾದಿ ಹೆಸರುಗಳಿಂದ ವ್ಯವಹೃತವಾಗಿದೆ.

ಪ್ರಾಕೃತಿಕ ಉಚ್ಛಿಷ್ಟಯಜ್ಞವೂ ಇದೇ ಅಂಶದಾನದ ಸಮರ್ಥನೆ ಮಾಡುತ್ತಿದೆ. ಸೌರಪ್ರಾಣವು ವನಸ್ಪತಿಗಳಲ್ಲಿ ಆಹುತವಾಗುತ್ತದೆ, ಆದರೆ ಅಂಶರೂಪದಿಂದ, ಪ್ರವರ್ಗ್ಯರೂಪದಿಂದ ಆಹುತವಾಗುತ್ತದೆ. ಸಮ್ಪೂರ್ಣ ಮಾತ್ರೋಚ್ಛೇದವಾಗಿದ್ದರೆ ಇಂದು ಬ್ರಹ್ಮಾಣ್ಡದಲ್ಲಿ ಸೂರ್ಯ್ಯಸತ್ತೆಯೇ ಉಪಲಬ್ಧವಾಗುತ್ತಿರಲಿಲ್ಲ. ಹಾಗೂ ನಕ್ಷತ್ರ, ಗ್ರಹ, ಚನ್ದ್ರ, ವಾಯು, ಇನ್ದ್ರ, ವರುಣ, ಮರುತ್ತ್ವಾನ್, ವಸು, ರುದ್ರ, ಪೃಥಿವೀ, ಇತ್ಯಾದಿ ಇತ್ಯಾದಿ ಎಲ್ಲಾ ಪ್ರಾಕೃತಿಕ ಪ್ರಜಾಪತಿ (ಸ್ರಷ್ಟಾ) ಪ್ರಜಾತಿ – (ಸರ್ಗ) – ಕಾಮನೆಯಿಂದ ಸ್ವಾಂಶದಾನದಿಂದಲೇ ಅವರವರ ಸರ್ಗದ ಪ್ರಭವವಾಗುತ್ತಿವೆ. ಈ ಆಂಶಿಕ ನಿಯಮಿತ ಮಾತ್ರಾ ಪ್ರದಾನಕ್ಕಾಗಿಯೇ ಬ್ರಾಹ್ಮಣಗ್ರನ್ಥಗಳಲ್ಲಿ ‘ವಿಸ್ರಸ್ತಿ’ ಎಂಬ ಶಬ್ದವು ಪ್ರಯುಕ್ತವಾಗಿದೆ. ಸೃಷ್ಟಿಕಾಮುಕ ಪ್ರಜಾಪತಿಯು ಸರ್ವಾತ್ಮನಾ ಆಹುತವಾಗುವುದಿಲ್ಲ, ಆದರೆ ಅಂಶರೂಪದಿಂದಲೇ ಪ್ರಜಾಪತಿಯ ವಿಸ್ರಸನವಾಗುತ್ತದೆ. ಒಂದು ಪ್ರಯೋಗ ಮಾಡೋಣ. ಧರಾತಲದಲ್ಲಿ ಬಿದ್ದ ಜಲದ ಬಿನ್ದುವನ್ನು ದೂರ ಸರಿಸಿರಿ. ಅವಶ್ಯವಾಗಿಯೇ ಅನುಶಯರೂಪದಿಂದ ಅಪ್‍ಭಾಗವು ಸ್ವಸ್ಥಾನದಲ್ಲಿಯೇ ಇರುತ್ತದೆ. ಇದೇ ಆಂಶಿಕಪ್ರದಾನ ವಿಸ್ರಸ್ತಿ, ಅಂದರೆ ವಿಸ್ರಸನವಾಗಿದೆ. ಇದಕ್ಕೆ ಲೋಕಭಾಷೆಯಲ್ಲಿ ‘ಸ್ಖಲನ’ ಎಂಬ ಶಬ್ದವು ಪ್ರಯುಕ್ತವಾಗಿದೆ. ಅದೇ ರೀತಿಯ ವ್ಯವಸ್ಥೆಯು ಶುಕ್ರಾಹುತಿಯ ಸಮ್ಬನ್ಧದಲ್ಲಿ ತಿಳಿಯಬೇಕು. ಶುಕ್ರದ ಸರ್ವಾತ್ಮನಾ ಉಚ್ಛೇದವಾಗುವುದಿಲ್ಲ, ಆದರೆ ಆಂಶಿಕರೂಪದಿಂದ ವಿಸ್ರಸನವಾಗುತ್ತದೆ. ಆದ್ದರಿಂದ ಶುಕ್ರವಿನಿರ್ಗಮ-ಪ್ರಕ್ರಿಯೆಯು ‘ರೇತಃಸ್ಖಲನ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ.

ವಿಚಾರವು ಪುರುಷಸೃಷ್ಟಿಯ ಪ್ರಕ್ರಾನ್ತವಾಗಿದೆ, ಇದರ ಸಮ್ಬನ್ಧದಲ್ಲಿ ‘ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಸ್ಯೇಹಾಭವತ್ಪುನಃ’ (ಯಜುಃ ಸಂಹಿತಾ) ಎಂಬ ನಿಯಮವು ವ್ಯವಸ್ಥಿತವಾಗಿದೆ. “ಮೂರು ಭಾಗಗಳ ಆಹುತಿ, ಹಾಗೂ ಒಂದು ಭಾಗದ ‘ಇಹ’ದಿಂದ ಗೃಹೀತ ಆಹುತಿಪ್ರದಾತಾದಲ್ಲಿ ಪ್ರತಿಷ್ಠಾ” ಎಂಬುದೇ ಇದರ ನಿಷ್ಕರ್ಷೆಯಾಗಿದೆ. ೨೮ ಕಲಾತ್ಮಕ ಪಿತೃಸಹದ ಮೂರು ಭಾಗಗಳಂತೂ ಶೋಣಿತಾಗ್ನಿಯಲ್ಲಿ ಆಹುತವಾಗುತ್ತದೆ, ಹಾಗೂ ಒಂದು ಭಾಗವು ಸ್ವಯಂ ಆಹುತಿಯನ್ನಾಗಿ ಕೊಡುವ ಪಿತನಲ್ಲಿ ಪ್ರತಿಷ್ಠಾರೂಪದಿಂದ ಪ್ರತಿಷ್ಠಿತವಾಗಿರುತ್ತದೆ. ಇದೇ ೩-೧ರ ಕ್ರಮವು ಮುಂದಿನ ಆಹುತಿ-ಕ್ರಮದಲ್ಲಿ ಹೋಗುತ್ತದೆ. ಆಹುತವಾಗುವ ಭಾಗವು ‘ಸೂಯತೇ’ – ‘ಸುತೋ ಭವತಿ’ – (ಅಹುತೋ ಭವತಿ) – ‘ಅಭಿಷುತೋ ಭವತಿ’ ಎಂಬಂತಹಾ ನಿರ್ವಚನಗಳಿಂದ ‘ಸುತಃ’ ಎಂದು ಕರೆಯಲ್ಪಡುತ್ತದೆ, ಹಾಗೂ ಶೇಷ ಅನಾಹುತಭಾಗವು ‘ಅಸುತಃ’ (ಅನಾಹುತಃ-ಶೇಷಃ) ಎಂದು ಕರೆಯಲ್ಪಡುತ್ತದೆ.ಭಾಗತ್ರಯರೂಪದಿಂದ ಯಾವ ಪಿತೃಧನವು ಪ್ರಜೋತ್ಪತ್ತಿಗಾಗಿ ಯೋಷಾಗ್ನಿಯಲ್ಲಿ ಹುತವಾಗುತ್ತದೆಯೋ, ಅದಂತೂ ಸನ್ತಾನ (ಸನ್ತನನ-ವಿಸ್ತಾರ) ಭಾವದಲ್ಲಿ ಪರಿಣತವಾಗುತ್ತಾ ಸಪ್ತಸಂಸ್ಥ ಪಿತೃಸ್ತೋಮ-ಯಜ್ಞದ ಪ್ರವರ್ತ್ತಕವಾಗುತ್ತದೆ, ಹಾಗೂ ಯಾವ ಒಂದು ಭಾಗವು ಆಹುತ ಆಗುವುದಿಲ್ಲ, ಆ ಅಸುತಭಾಗವು ಸ್ವಯಂ ಆಹುತಿಪ್ರದಾತಾನಲ್ಲಿಯೇ ಪ್ರತಿಷ್ಠಿತವಾಗಿರುತ್ತದೆ. ೨೮ ಕಲಾತ್ಮಕ ಆತ್ಮಪಿಣ್ಡದ ಸಪ್ತಕಲಾಭಾಗದ ಒಂದು ಚತುರ್ಥಾಂಶವು ಆತ್ಮಪ್ರತಿಷ್ಠಾದ ಕಾರಣವಾಗುತ್ತದೆ, ಇದೇ ‘ಆತ್ಮಧಾರಣಾಃ ಪಿತರಃ’ ಆಗಿದೆ. ಬೀಜ ಬಿತ್ತುವ (ಆವಾಪ) ಪಿತರದಲ್ಲಿಯೇ ಈ ಸಪ್ತಕಲಾ ಪಿತೃಸಹವು ಪ್ರತಿಷ್ಠಿತವಾಗಿರುತ್ತದೆ. ಇತರೆ ಶಬ್ದಗಳಲ್ಲಿ ಬೀಜಿಯಲ್ಲಿ ಈ ೭ ಪಿತೃಪ್ರಾಣಗಳ ವಿಶುದ್ಧ ಪಿತೃಪ್ರಾಣರೂಪದಿಂದ ಅವಸ್ಥಾನವಾಗಿದೆ, ಹಾಗಾಗಿ ಈ ಅಸುತ ಪಿತೃಪ್ರಾಣಸಮಷ್ಟಿಯನ್ನೇ ಅವಶ್ಯವಾಗಿ ‘ಪಿತರಃ’ ಸಂಜ್ಞೆಯಿಂದ ವ್ಯವಹೃತಗೊಳಿಸಲು ಸಾಧ್ಯ. ಎರಡನೆಯ ಭಾಗತ್ರಯಾತ್ಮಕ ಪಿತೃಭಾಗವು ಏಕೆಂದರೆ ಜಾಯಾಗ್ನಿಯಲ್ಲಿ ಅಭಿಷುತವಾಗುತ್ತದೆ, ಹಾಗಾಗಿ ಇದನ್ನು ‘ಸೂನುಃ’ ಎಂಬ ಶಬ್ದದಿಂದ ವ್ಯವಹೃತಗೊಳಿಸುವುದು ನ್ಯಾಯಸಙ್ಗತವಾಗುತ್ತದೆ.

ಆವಾಪಕರ್ತ್ತನ (ಶುಕ್ರಾತ್ಮಕ ಬೀಜದ ಆಹುತಿ ಕೊಡುವವನ) ಶುಕ್ರದಲ್ಲಿ ೨೮ ಪಿತೃಸಹವು ಪ್ರತಿಷ್ಟಿತವೆಂದು ಹೇಳಲ್ಪಟ್ಟಿದೆ. ಇದರಲ್ಲಿ ೭ ಇಲ್ಲಿ ಸ್ವಪ್ರತಿಷ್ಠಾಗಾಗಿ ಪ್ರತಿಷ್ಠಿತವಾಗಿ ಉಳಿಯುತ್ತವೆ, ಶೇಷ ೨೧ ಅಂಶಗಳು ಯೋಷಿದಗ್ನಿಯಲ್ಲಿ ಸುತವಾಗುತ್ತವೆ. ಸಪ್ತಪಿತೃಪ್ರಾಣ ಧನಭಾಗವಾಗಿದೆ, ೨೧ ಪಿತೃಪ್ರಾಣ ಋಣಭಾಗವಾಗಿವೆ. ಧನಭಾಗವು ಅಸುತವಾಗಿದೆ, ಇದೇ ‘ಪಿತರ’ವಾಗಿದೆ. ಋಣಭಾಗವು ಸುತವಾಗಿದೆ, ಇದೇ ‘ಸೂನು’ ಆಗಿದೆ. ದಮ್ಪತೀ-ಸಮ್ಬನ್ಧದಿಂದ ಎಂದಿಗೆ ಪುತ್ರ ಉತ್ಪನ್ನವಾಗುತ್ತದೆಯೋ, ೨೧ ಪಿತೃಸಹಗಳ ಋಣವನ್ನು ಹೊತ್ತುಕೊಂಡೇ ಉತ್ಪನ್ನವಾಗುತ್ತದೆ. ಉತ್ಪತ್ತಿಯ ಅನಂತರ ಈ ಉತ್ಪನ್ನ ಪುತ್ರನಲ್ಲಿ ತನ್ನ ಸ್ವತನ್ತ್ರ ಇನ್ನೂ ೨೮ ಹೆಚ್ಚು ಅಂಶಗಳು ಉತ್ಪನ್ನವಾಗುತ್ತವೆ ಎಂಬುದು ಕಥಾನ್ತರವು. ಆದರೆ ಪುತ್ರನ ಈ ಔಪಪಾತಿಕ ಆತ್ಮಕ್ಕೆ ತನ್ನ ಭೌಮಜನ್ಮಸತ್ತೆಗಾಗಿ, ಭೂಪೃಷ್ಠದ ಮೇಲೆ ಶರೀರ ಧಾರಣೆ ಮಾಡುವ ಸಲುವಾಗಿ ತನ್ನ ಪಿತನಿಂದ ಶುಕ್ರದ ಮುಖೇನ ೨೧ ಅಂಶಗಳನ್ನು ಪಡೆಯುವುದು ಪರಮಾವಶ್ಯಕವಾಗುತ್ತದೆ. ಈ ಋಣ-ಪ್ರದಾನತೆಯ ಹೊರತು ಇದರ ಪ್ರಭವವೇ ಅಸಮ್ಭವವಾಗುತ್ತದೆ. ಹಾಗಾಗಿ ಪುತ್ರರೂಪದಲ್ಲಿ ಉಪಯುಕ್ತ ಪಿತನ ಈ ೨೧ ಭಾಗಸಂಘಾತವನ್ನು ಶಾಸ್ತ್ರಕಾರರು ‘ಪಿತೃ-ಋಣ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದಾರೆ. ೬ ಧಾರೆಯಲ್ಲಿ ವಿತತ ಈ ೨೧ ಮಾತ್ರಾಗಳನ್ನು ಚನ್ದ್ರಲೋಕಸ್ಥ ಪಿತನ ೭ ಅಂಶಗಳೊಂದಿಗೆ ಸಪಿಣ್ಡೀಕರಣದಿಂದ ಎಲ್ಲಿಯವರೆಗೆ ಈ (ಪುತ್ರ) ಆತನ (ಪಿತನ) ಪೂರ್ತಿ (೨೧) ಮಾತ್ರಾಗಳನ್ನು ಹಿಂತಿರುಗಿಸಿ ಅದನ್ನು ಪೂರ್ಣ (೨೮ ಕಲೆಗಳನ್ನಾಗಿ) ಮಾಡುವುದಿಲ್ಲವೋ, ಅಲ್ಲಿಯವರೆಗೆ ಇದು ಋಣಿಯಾಗಿರುತ್ತದೆ. ಹಾಗೂ ಅಲ್ಲಿಯವರೆಗೆ ಈ ಬನ್ಧನವಿಮೋಕವಾಗುವುದಿಲ್ಲ. ಈ ಪಿತೃಋಣಮುಕ್ತಿಯ ಅನೇಕ ಪ್ರಕಾರಗಳಲ್ಲಿ ‘ಸನ್ತಾನೋತ್ಪತ್ತಿ’ ಒಂದು ಮುಖ್ಯ ಸಾಧನೆ ಎಂದು ನಂಬಲಾಗಿದೆ. ಈ ಪಿತೃಋಣದ ಅತಿರಿಕ್ತ ಪಿತನ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತ ಋಷಿಮಾತ್ರಾ, ದೇವಮಾತ್ರಾ, ಇವುಗಳೂ ಋಣರೂಪದಲ್ಲಿ ಇದರಲ್ಲಿ ಆಗಮಿಸುತ್ತವೆ. ಆ ಎರಡು ಋಣಗಳೇ ಋಷಿಋಣ ಹಾಗೂ ದೇವಋಣ ಎಂದು ಪ್ರಸಿದ್ಧವಾಗಿವೆ. ಈ ಮೂರು ಋಣಗಳ ಮೋಚನವು ಹೇಗೆ ಸಮ್ಭವ? ಈ ಪ್ರಶ್ನೆಯ ಮೀಮಾಂಸೆಯನ್ನು ಮುಂದೆ ಮಾಡಲಾಗುತ್ತದೆ. ಪ್ರಕೃತದಲ್ಲಿ ಈ ಋಣ-ಧನ ಭಾವದಿಂದ ತಿಳಿಸಬೇಕಾದದ್ದು ಏನೆಂದರೆ, ಪಿತನಿಂದ ಪುತ್ರನಲ್ಲಿ ಉಪಾದಾನ ರೂಪದಲ್ಲಿ ಪ್ರಾಪ್ತ ೨೧ ಸಹಃವೇ ‘ಪಿತೃಋಣ’ವು. ಇದು ಮುಂದಕ್ಕೆ ಯಾವ ಕ್ರಮದಿಂದ ವಿತಾನವಾಗುತ್ತದೆ, ಎಂಬುದೇ ವಿಜಿಜ್ಞಾಸೆಯಾಗಿದೆ. ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

No comments:

Post a Comment