Saturday, 30 March 2013

ಜೀವಜಗತ್ತಿನ ರೋಗಮೂಲವ್ಯಾವುದು?

ಆಪ ಇದ್ವಾಹು ಭೇಷಜೀಃ | ಆಪೋರಮೀವಚಾತನೀಃ | ಆಪಃ ಸರ್ವಸ್ಯ ಭೇಷಜೀಃ | 
ತಾಸ್ತೇ ಕೃಣ್ವಂತು ಭೇಷಜಂ | ಭೇಷಜಮೀವಾಸ್ಮೈ ಕರೋತಿ | ಸರ್ವಮಾಯುರೇತಿ ||
ಓಷಧಯಃ ಸಂ ವದಂತೇ ಸೋಮೇನ ಸಹ ರಾಜ್ಞಾ | 
ಯಸ್ಮೈ ಕೃಣೋತಿ ಬ್ರಾಹ್ಮಣಸ್ತಂ ರಾಜನ್ ಪಾರಯಾಮಸಿ ||
ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ | 
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶಣಃ ||

ಇವೆಲ್ಲಾ ಮಂತ್ರಗಳು ವೇದಮುಖದವು. ನಿರಂತರ ಲೋಕ ಕ್ಷೇಮ ಚಿಂತನೆಯೇ ಆಗಿರುವ ನಿಸ್ವಾರ್ಥ ನೆಲೆಯ ಓಷಧೀ ಮಂತ್ರಗಳು. ಆದರೆ ಇದರ ಪೂರ್ವ ಚಿಂತನೆಯನ್ನೂ ವೇದ ಮಾಡಿದೆ. ರೋಗಗಳು, ಅವುಗಳ ಬಗೆ, ಬರಲು ಕಾರಣ, ನಾಡೀ ಸಂಬಂಧಿಯಾಗಿ ರೋಗ ನಿದಾನ, 
 1. ನರ, 
 2. ವಾಘೆ, 
 3. ನಾಡೀ, 
 4. ನಾಳ, 
 5. ಸ್ನಾಯು, 
 6. ಕೂಟ, 
 7. ಗ್ರಂಥಿ, 
 8. ಸಂಧಿ
     - ಎಂಬ ೮ ಪ್ರಸ್ತಾರಗಳನ್ನು ಮಾನವ+ಮತ್ತಿತರ ಜೀವಿಗಳಲ್ಲಿ ಗುರುತಿಸಿ ಅದರ ಕಾರಣ ತಿಳಿದು ಸೂಕ್ತ ಚಿಕಿತ್ಸಾ ವಿಧಾನವನ್ನು “ಪೂರ್ವಜನ್ಮಕೃತಂ ಪಾಪಂ ವ್ಯಾಧಿ ರೂಪೇಣ ಪೀಡ್ಯತೇ” ಎಂದು ಪ್ರಸಿದ್ಧ ಆಯುರ್ವೇದ ಗ್ರಂಥಗಳೂ ಘೋಷಿಸುತ್ತಾ ಜ್ಯೋತಿರಾಯುರ್ವೇದ ಸಿದ್ಧಾಂತ ರೂಪಿಸಿ ಇಂತಿಂತಹಾ ನಕ್ಷತ್ರದಲ್ಲಿ ಆರಂಭವಾದ ಖಾಯಿಲೆಯು ಹೇಗೆ ಹೇಗೆ ಪರಿಣಾಮ ಮಾಡುತ್ತದೆ ಎಂದವು. ಇವೆಲ್ಲವುಗಳ ನೆಲೆಯಲ್ಲಿ “ಈ ಜೀವ ಜಗತ್ತಿನ ರೋಗ ಮೂಲವ್ಯಾವುದು?” ಎಂಬ ವಿಚಾರವಾಗಿ ಚಿಂತಿಸೋಣ.

ಮೊದಲಾಗಿ ಮಾನವ+ಇತರೆ ಜೀವಿಗಳು ಎಂದು ೨ ವಿಭಾಗ ಮಾಡಿಕೊಂಡು ಅದರ ಸಾಧ್ಯಾಸಾಧ್ಯತೆ ಚಿಂತನೆ ಮಾಡಬೇಕಾಗಿದೆ. ಮಾನವನಿಗೆ ೧೦ ವಿಧ ಕಾರಣಗಳಿಂದ ರೋಗಜನ್ಯವಾದರೆ ಇತರೆ ನಮ್ಮ ಸಹಚರಿ ಪ್ರಾಣಿ ಪಕ್ಷಿಗಳಿಗೆ ೫ ವಿಧ ಕಾರಣವಿದೆ. ಹಾಗಾಗಿ ಈ ಎಲ್ಲವನ್ನೂ ಏಕರೂಪವಾಗಿ ಮಾಡಿಕೊಂಡು ರೋಗಮೂಲವನ್ನು ಚಿಂತಿಸಬೇಕಿದೆ.

೧. ಆಹಾರ ಕಾರಣ               = ಮಾನವ+ಇತರೆ ಜೀವಿಗಳು
೬. ವಿಹಾರ ಕಾರಣ         = ಮಾನವ
೨. ಸಾಹಚ‍ರ್ಯ ಕಾರಣ       = ಮಾನವ+ಇತರೆ ಜೀವಿಗಳು
೭. ಜನ್ಮಾಂತರ ಕಾರಣ    = ಮಾನವ
೩. ಸಾಂಪ್ರದಾಯಿಕ ಕಾರಣ  = ಮಾನವ+ಇತರೆ ಜೀವಿಗಳು
೮. ದುರಾಶಾ ಕಾರಣ       = ಮಾನವ
೪. ಸ್ವಾಭಾವಿಕ ಕಾರಣ        = ಮಾನವ+ಇತರೆ ಜೀವಿಗಳು
೯. ಪಾಪಕೃತ್ಯ ಕಾರಣ     = ಮಾನವ
೫. ಸ್ವಯಂಕೃತ ಕಾರಣ       = ಮಾನವ+ಇತರೆ ಜೀವಿಗಳು
೧೦. ದ್ರೋಹ ಕಾರಣ       = ಮಾನವ

   
      ಈ ಮೇಲ್ಕಂಡ ೧೦ ವಿಧ ಕಾರಣಗಳಿಂದ ಸಕಲ ಜೀವಿಗಳೂ ನಿರಂತರ ರೋಗಬಾಧೆಯಿಂದ ಪೀಡಿತವಾಗುತ್ತವೆ. ಅವುಗಳಲ್ಲಿ ಮಾನವ+ಇತರೆ ಸಹಚರ ಜೀವಿಗಳು ೫ ಕಾರಣಗಳಲ್ಲಿ ಬಾಧಿಸಲ್ಪಡುತ್ತವೆ. ಉಳಿಕೆ ೫ ಮಾನವರಿಗೆ ಮಾತ್ರ. ಇವುಗಳ ಬಗ್ಗೆ ಒಂದೊಂದಾಗಿ ವಿವರಿಸುತ್ತೇನೆ. ಗಮನಿಸಿ ಓದಿ ಅರ್ಥ ಮಾಡಿಕೊಂಡಲ್ಲಿ ರೋಗಮುಕ್ತ ಆರೋಗ್ಯದಾಯಕ ಜೀವನ ನಿಮ್ಮದಾಗುವುದೆಂದು ಈ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ನಿಮಗೆ ಅರ್ಥವಾದರೆ ನಾನು ಕೃತಜ್ಞ.

೧. ಆಹಾರ ಕಾರಣ:- ಆಹಾರ = ಅನ್ನವು ಪ್ರತಿಯೊಂದು ಜೀವಿಗೂ ಬದುಕಲು ಅಗತ್ಯವಾದದ್ದು. ಅದು ಸರ್ವಗ್ರಾಹ್ಯವಲ್ಲ. ವಿವೇಚಿತ ವಿಚಾರವಾಗಿ ಪ್ರಾಣಿಗಳಿಗೆ ಸಾಂಪ್ರದಾಯಿಕ ಆಹಾರ ಅವುಗಳೇ ಆಯ್ಕೆ ಮಾಡಿಕೊಳ್ಳುವುದು. ಹಾಗೇ ಮಾನವನೂ ಕೂಡ ಒಂದು ರೀತಿಯ ಬದ್ಧ, ಸಾಂಪ್ರದಾಯಿಕ ಆಹಾರಪದ್ಧತಿ ರೂಢಿಸಿಕೊಂಡಿದ್ದ. ಅದರ ಬಗ್ಗೆ ಈಗಿನ ಜನರಿಗೆ ತಿಳಿದಿಲ್ಲ. ಹಾಗಾಗಿ ಆಹಾರ ಪದ್ಧತಿಯಲ್ಲಿ ಉಂಟಾದ ಏರುಪೇರುಗಳೇ ನಾನಾರೋಗಗಳಿಗೆ ಕಾರಣವಾಗಿರುತ್ತವೆ. “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಗಾದೆ ಮಾತಿನಂತೆ ಊಟದ ವಿಚಾರವಾಗಿ ವಿವೇಚನೆ ಇಲ್ಲದ ಆಹಾರ ಪದ್ಧತಿಯೇ ಸದ್ಯದ ರೋಗಕ್ಕೆ ಒಂದು ಮುಖ್ಯ ಕಾರಣ. ಪ್ರಾದೇಶಿಕ ಸಾಂಪ್ರದಾಯಿಕ ಆಹಾರ ಪದ್ಧತಿ ಬಿಟ್ಟ ಕಾರಣದಿಂದಾಗಿ ಮಾನವನು ರೋಗಗಳ ಗೂಡಾಗಿ ನಿರಂತರ ನರಳುತ್ತಾ ತನ್ನ ಸಹಚರಿ ಇತರೆ ಜೀವಿಗಳನ್ನೂ ರೋಗಿಗಳನ್ನಾಗಿ ಮಾಡುತ್ತಿದ್ದಾನೆ.

      ಉದಾ:- ನಾವು ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಬದುಕುತ್ತಿದ್ದೇವೆ ಎಂದರೆ ಅಲ್ಲಿಗೇ ಸಂಬಂಧಿಸಿದ ಆಹಾರ ಪದ್ಧತಿ ಇತ್ತು. ಆದರೆ ಈಗ ಭಾರತೀಯನು ಇತರೆ ಪ್ರದೇಶದ ಆಹಾರವಲ್ಲದೇ ಚೈನೀ, ಜಪಾನೀ, ಇಟಲೀ ಇನ್ನಿತರೆ ದೇಶಗಳ ಆಹಾರ ಇಲ್ಲಿ ಬಳಸಲಾರಂಭಿಸಿದ್ದಾರೆ. ಕಾರಣ ರುಚಿಯೆಂಬ ಕಲ್ಪನೆ. ಹೀಗೆ ಆಹಾರ ಪದ್ಧತಿಯ ಏರುಪೇರು ರೋಗಕ್ಕೆ ಕಾರಣವಾಗುತ್ತದೆ. ಮಾನವನ ಸಹಜ ಸ್ವಾಭಾವಿಕ ಆಹಾರ ಶಾಖಾಹಾರ. ಎಲ್ಲೋ ವರ್ಷಕ್ಕೆ ಒಂದೆರಡು ಬಾರಿ ಹಬ್ಬದ ಕಾರಣ ನೀಡಿ ಕೋಳಿ, ಕುರಿ ತಿನ್ನುತ್ತಿದ್ದರು ಕೆಲ ಜನರು. ಆದರೆ ಈಗ ನಿತ್ಯವೂ ಮಾಂಸಾಹಾರವೇ ಊಟಕ್ಕೆ ಒದಗುತ್ತಿದೆ. ಗಮನಿಸಿ, ನಿತ್ಯವೂ ಶಾಖಾಹಾರಿಯಾಗಿ ಬದುಕ ಬೇಕಾದ ಮಾನವ ಅದು ಬಿಟ್ಟು ಬಾಯಿ ಚಪಲಕ್ಕೆ ದಿನಾ ಮಾಂಸಾಹಾರ ಮಾಡಿದರೆ ಆರೋಗ್ಯ ಹೇಗೆ ಕಾಪಾಡಲು ಸಾಧ್ಯ? ಮತ್ತು ಸಹಜವಾಗಿ ತನ್ನ ಮನೆಯಲ್ಲಿಯೇ ಅಥವಾ ಪರಿಸರದಲ್ಲಿಯೇ ಬೆಳೆದ ಕೋಳಿ, ಕುರಿ, ಹಂದಿ ಮಾಂಸವನ್ನು ತಿನ್ನುತ್ತಿಲ್ಲ. ಎಲ್ಲಿಯೋ ಬೆಳೆದ ಯಾರಿಂದಲೋ ಒದಗಿಸಲ್ಪಟ್ಟ ಆಹಾರ ರೂಪದ ಮಾಂಸವು ನಿರ್ಬಾಧಿತವೆಂದು ಹೇಳಲು ಸಾಧ್ಯವೇ? ಯಾವುದೋ ಒಂದು ಕಂಪೆನಿ, ದೇಶದ ಯಾವುದೋ ಒಂದು ಭಾಗದಲ್ಲಿ ಕೋಳಿ ಸಾಕಣೆ ಮಾಡಿ ಅಲ್ಲಿನ ಪರಿಸರಕ್ಕೆ ಹೊಂದಿದ ಯಾವುದೋ ರೋಗಾಣುವನ್ನು ಕೋಳಿ ಮಾಂಸದ ರೂಪದಲ್ಲಿ ದೇಶವೆಲ್ಲಾ ಹಂಚಲಾರದೇ? ಒಂದು ಪ್ರದೇಶದ ವಾತಾವರಣ, ಜೀವನ ಪದ್ಧತಿ, ಆಹಾರ ಇನ್ನೊಂದು ಪ್ರದೇಶಕ್ಕೆ ಮಾರಕವಾಗಬಹುದು, ಒಗ್ಗದಿರಬಹುದು. ಈ ಬಗ್ಗೆ ಚಿಂತನೆ ಮಾಡದೇನೇ ತಿನ್ನುವುದಕ್ಕಾಗಿಯೇ ಬದುಕಿದರೆ ಅದನ್ನು ಬದುಕೆನ್ನಲಾದೀತೆ? “ಮಾನವ ಬದುಕುವುದಕ್ಕಾಗಿ ತಿನ್ನಬೇಕೇ ವಿನಃ ತಿನ್ನುವುದಕ್ಕಾಗಿ ಬದುಕಬಾರದು” ಇದು ಕಠೋರ ಸತ್ಯ ಅರ್ಥಮಾಡಿಕೊಳ್ಳಿ.
         
      ಮಾನವನು ತಿನ್ನುವ ಅನ್ನವು ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬ ಅಗ್ನಿರೂಪದಲ್ಲಿ ಜಠರಾಗ್ನಿಯಲ್ಲಿ ಪಚನಗೊಂಡು ನಿರಂತರ ದೇಹಕ್ಕೆ ಶಕ್ತಿ ಪೂರೈಸುತ್ತದೆ. ಆದರೆ ಆ ಜಠರಾಗ್ನಿಗೆ ಒಂದು ಬದ್ಧತೆ ಇದೆ. ತನ್ನ ಕರ್ತವ್ಯವಲ್ಲದ ಆಹಾರವನ್ನು ಪಚನಗೊಳಿಸಲಾರದು. ಹಾಗೆ ಆಹಾರ ಪಚನ ಸರಿಯಾಗದಿದ್ದಲ್ಲಿ ಅದನ್ನೇ “ವಾಯು ವಿಕೋಪ” ಎನ್ನುವರು. ಇಂಗ್ಲೀಷಿನಲ್ಲಿ “ಗ್ಯಾಸ್ಟ್ರಿಕ್” ಎನ್ನುತ್ತಾರೆ. ಅದು ನಮ್ಮೀ ದೇಶದಲ್ಲಿ ೭೨% ಜನರಿಗೆ ನಿತ್ಯ ಕಾಡುವ ಖಾಯಿಲೆಯಾಗಿದೆ. ಕಾರಣ ಅರ್ಥವಾಯ್ತೇ? ಈ ವಾಯು ಪ್ರಕೋಪ ಮತ್ತು ಅಗ್ನಿಮಾಂದ್ಯ ಸರ್ವರೋಗ ಕಾರಕವಾಗುತ್ತದೆ. ಅದರಿಂದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಪಿತ್ತಕೋಶ ಸಂಬಂಧಿ ಖಾಯಿಲೆಗಳು, ನರ ಸಂಬಂಧೀ ಖಾಯಿಲೆಗಳೂ ಕೂಡ ಈ ಆಹಾರ ಕಾರಣದಿಂದಾಗಿ ಬರಬಹುದು. ಹಾಗಾಗಿಯೇ ನಮ್ಮ ಪೂರ್ವೀಕರು ಮೇಲೆ ತಿಳಿಸಿದ ನಾಣ್ಣುಡಿಯನ್ನು ಹೇಳಿದರು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಆಹಾರದ ವಿವೇಚನೆ, ಅಗತ್ಯ ಅರಿತು ತಿನ್ನಿರಿ ಎಂಬುದು ಈ ವಾಕ್ಯದ ಮೂಲೋದ್ದೇಶವಾಗಿದೆ. ಈ ಮೇಲ್ಕಂಡ ಖಾಯಿಲೆ ನಿಮ್ಮ ಅವಿವೇಕದಿಂದ ಬಂದಿದ್ದರೂ ಅದಕ್ಕೆ ಪರಿಹಾರ ರೂಪದ ಔಷಧ ತಯಾರಿಕಾ ಕಂಪೆನಿಗಳು ಔಷಧ ತಯಾರಿಸಿ ಮಾರಿ ವರ್ಷಕ್ಕೆ ೮೦ ಸಾವಿರ ಕೋಟಿ ಹಣ ಗಳಿಸುತ್ತವೆ. ಆದರೆ ಅವರ್ಯಾರೂ ಆಹಾರ ಬದ್ಧತೆ ರೂಢಿಸಿಕೊಳ್ಳಿ ಎನ್ನುವುದಿಲ್ಲ. ಕಾರಣ ಅರ್ಥವಾಯ್ತೇ?

೨. ಸಾಹಚರ್ಯ ಕಾರಣ:- ಸಹವಾಸದಿಂದಾಗಿ ಬರುವ ರೋಗಗಳು - ದೈಹಿಕ ಸಹವಾಸಗಳು ಮತ್ತು ಮಾನಸಿಕ ಸಹವಾಸಗಳು ಎಂದು ೨ ಬಗೆಯವು.

ದೈಹಿಕ ರೋಗಗಳು: ಅವುಗಳಲ್ಲಿ ಕೆಲವು
೧. ಅಂಟುರೋಗಗಳು,
೨. ಚರ್ಮ ರೋಗಗಳು,
೩. ಮಹಾವ್ಯಾಧಿಗಳು 

ಮಾನಸಿಕ ರೋಗಗಳು: ಸಹವಾಸ ಕಾರಣ
೧. ವಿಕ್ಷಿಪ್ತತೆ,
೨.ವಿಕೋಪತೆ,
೩. ಕೀಳುತನ,
೪. ಹಿರಿತನ,
೫. ಅಪಸ್ಮಾರ,
೬. ವಿಚ್ಛಿದ್ರ,
೭. ದೈವಾವೇಶ,
೮. ಅತಿ ಪ್ರಸನ್ನತೆ,
೯. ತೀವ್ರತರ ಕ್ಲೇಶ,
೧೦. ಮೂರ್ಛೆ,
೧೧. ಭಯ,
೧೨. ದುಃಖ,
೧೩. ಕೋಪ,
೧೪. ಮೋಹ,
೧೫. ಆವೇಶ,
೧೬. ಹುಚ್ಚು.


ಇವೆಲ್ಲಾ ಕೂಡ ಸಹವಾಸದಿಂದ ಬರುವ ರೋಗಗಳು. ತತ್ಸಂಬಂಧಿಯಾದ ಇತರೆ ದೈಹಿಕ ರೋಗಗಳೂ ಉಂಟಾಗುತ್ತವೆ. ಅದಕ್ಕಾಗಿಯೇ ನಮ್ಮ ಹಿರಿಯರು “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದರು. ಅಂದರೆ ಅದರರ್ಥ ಸದಾ ಸಜ್ಜನರ ಸಹವಾಸ ಮಾಡಿರಿ, ಸತ್ಸಂಗ ಮಾಡಿರಿ, ಆರೋಗ್ಯ ಸಿಗುತ್ತದೆ ಎಂದೇ ಅಲ್ಲವೇ? ಸತ್ಸಂಗವೆಂದರೆ ಆರೋಗ್ಯವಂತ ಮನಃಸ್ಥಿತಿಯ ಜನರೊಂದಿಗೆ ಸಹವಾಸ ಮಾಡಿದಲ್ಲಿ ಹಲವು ರೋಗಭೀತಿಗಳು ಕಡಿಮೆಯಾಗಿ ನಿರೋಗಿಯಾಗಿರಲು ಸಾಧ್ಯ. ದೇಶದ ಒಟ್ಟು ಸಮಾಜದ ರೋಗಗಳಲ್ಲಿ ೬೦% ಮಾನಸಿಕ ಕಾರಣವೇ. ಅವೆಲ್ಲವನ್ನೂ ಸತ್ಸಂಗದಿಂದ ನಿವಾರಿಸಿಕೊಳ್ಳಲು ಸಾಧ್ಯ. ಹಾಗಾಗಿ ಸಹವಾಸ ಯೋಗ್ಯ ಸಜ್ಜನರೆಂದರೆ ಯಾರು? ಪ್ರಾಣಿಗಳೂ, ಪಕ್ಷಿಗಳೂ ಯಾವವು ತಿಳಿಯೋಣ.

·        ಪಂಡಿತ
·        ವಿದ್ವಾಂಸ
·        ನಿರಹಂಕಾರಿ
·        ಸಾತ್ವಿಕ
·        ಸರಳ
·        ಸಜ್ಜನ
·        ಸಾಧಕ
·        ಯೋಗಿ
·        ದಯಾಮಯಿ
·        ಅಹಿಂಸಾವಾದಿ
·        ಸತ್ಯಪರಿಪಾಲಕ
·        ನ್ಯಾಯನಿಷ್ಠುರ
·        ಧರ್ಮನಿಷ್ಠುರ
 - ಯಾರಾಗಿರುತ್ತಾರೋ ಅವರು ಸಹವಾಸ ಯೋಗ್ಯರು. ಅವರ ಸಹವಾಸವನ್ನು ಸತ್ಸಂಗವೆನ್ನುತ್ತಾರೆ. ಅದು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಕಾರಿ. ಹಾಗೇ ಯಾವುದೇ ರೀತಿಯ ಮನೋರೋಗಗಳಿಗೆ ಆಸ್ಪದವಿರುವುದಿಲ್ಲ. ತೃಪ್ತ, ಸುಖಕರ, ಆಹ್ಲಾದದಾಯಕ ಜೀವನ ಒದಗಿ ಬರುತ್ತದೆ. ಹಾಗಾಗಿ ಸದಾ ಸಜ್ಜನರ ಸಹವಾಸ ನಿಮ್ಮದಾಗಿರಲಿ. ಆಗ ದುರ್ಜನರೂ ಸಜ್ಜನರಾಗಲು ಸಾಧ್ಯ. ಅದೇ ಉತ್ತಮ ಬೆಳವಣಿಗೆ.

ದೈಹಿಕ ಸಹವಾಸವೆಂದರೆ: 
1.     ಉಚ್ಛಿಷ್ಟ ಭೋಜನ
2.     ಏಕವಸ್ತ್ರ
3.     ಶಯ್ಯಾ
4.     ಅನ್ನ
5.     ಶ್ಲೇಷ್ಮ
6.     ಶಂಖಾ
7.     ವ್ಯಜನ
8.     ಪೂಲನ
9.     ಮೈಥುನ ಆಲಿಂಗನ
  
- ಏತೇ ನವಾಃ ಎಂದಿದೆ ಮಾನವ ಧರ್ಮಶಾಸ್ತ್ರ. ಇವುಗಳಿಂದ ಹಲವು ರೀತಿಯ ಅಂಟುರೋಗಗಳು ಬರಬಹುದು. ಅದನ್ನು ಎಚ್ಚರಿಕೆಯಿಂದ ಪಾಲಿಸಿದರೆ ರೋಗರಹಿತ ಜೀವನ ಸಿಗುತ್ತದೆ.
 
೩. ಸಾಂಪ್ರದಾಯಿಕ ಕಾರಣ:- ಪ್ರತಿಯೊಂದು ಜೀವಿಗೂ ಅನ್ನ, ಬಟ್ಟೆ, ಜೀವನ, ವಯಸ್ಸು, ವಿಹಾರ ಧರ್ಮಗಳಿಗೆ ಆಧರಿಸಿ ಸಾಂಪ್ರದಾಯಿಕತೆ ಇರುತ್ತದೆ. ಅದನ್ನು ಸಾಂಪ್ರದಾಯಿಕ ಜೀವನ ಪದ್ಧತಿ ಎನ್ನುತ್ತಾರೆ. ಅದೂ ಕೂಡ ಈಗ ವಿಕೃತಿ ಹೊಂದುತ್ತಿರುವುದರಿಂದ ರೋಗ ಕಾರಣವಾಗಿರುತ್ತದೆ. ಅದನ್ನು ಒಗ್ಗದಿರುವಿಕೆ ಅಥವಾ ಇಂಗ್ಲೀಷಿನಲ್ಲಿ ಅಲರ್ಜಿ ಎನ್ನುತ್ತಾರೆ. ಸಾಂಪ್ರದಾಯಿಕ ಜೀವನ ಪದ್ಧತಿಯ ನ್ಯೂನತೆಯಿಂದ ಈ ಅಲರ್ಜಿಯು ದೈಹಿಕವಾಗಿಯೂ, ಮಾನಸಿಕವಾಗಿಯೂ ಹಲವು ಖಾಯಿಲೆಗಳಿಗೆ ಕಾರಣವಾಗಿರುತ್ತದೆ.

೪. ಸ್ವಾಭಾವಿಕ ಕಾರಣ:- ಉತ್ತರಾಯಣ, ದಕ್ಷಿಣಾಯನ ಪರಿವರ್ತನೆಗಳು ಮತ್ತು ಋತುಮಾನ ಪರಿವರ್ತನೆಗಳು, ಮಾಸಿಕ ಪ್ರವರ್ತನೆ, ಮೂರು ಕಾಲದ ವ್ಯತ್ಯಾಸಗಳು, ಆಯಾಯ ಕಾಲಕ್ಕನುಸರಿಸಿದ ವಾತ, ಪಿತ್ತ, ಪ್ರಕೋಪಗಳು, ಶೀತಾದಿ ಕ್ಲೇಶಗಳು; ಈ ಕಾರಣದಿಂದಾಗಿ ಬರತಕ್ಕ ರೋಗಗಳು.

೫. ಸ್ವಯಂಕೃತ ಕಾರಣ:- ಕಾಲಮಾನವನ್ನರಿಯದೇ ತಾನೇ ಸ್ವತಃ ತನ್ನ ಆಹಾರ, ವಿಹಾರ ಇತ್ಯಾದಿಗಳಿಂದ ತಂದುಕೊಳ್ಳುವ ಅವಿವೇಕತನದ ಖಾಯಿಲೆಗಳು. ಮದ್ಯಪಾನ, ಧೂಮಪಾನ, ಅಭೋಜ್ಯ ಭಕ್ಷಣ ಇವುಗಳಿಂದ ಬರುವ ಸಮಸ್ಯೆಗಳು.

೬. ವಿಹಾರ ಕಾರಣ:- ಇವು ಮಾನವ ಮಾತ್ರರಿಗೆ ಬರುವ ಸಮಸ್ಯೆಗಳು. ಅನಗತ್ಯ ಪ್ರಯಾಣ, ಒಂದೇ ದಿನದಲ್ಲಿ ಹಲವು ವಿಭಿನ್ನ ವಾತಾವರಣದಲ್ಲಿ ಪ್ರಯಾಣ, ಬೇರೆ ಬೇರೆ ಪದ್ಧತಿಯ ಆಹಾರ ಸ್ವೀಕರಣೆ, ವಿಕೃತ ಮನೋರಂಜನೆ, ದುಷ್ಟಸಹವಾಸ ಇತ್ಯಾದಿಗಳಿಂದ ಬರುವ ಮನೋ ವಿಕ್ಷಿಪ್ತತೆ, ದೈಹಿಕ ಅಶಕ್ತತೆ ಮತ್ತು ಇತರೆ ರೋಗಗಳು.

೭. ಜನ್ಮಾಂತರ ಕಾರಣ:- ಅತೀ ಮುಖ್ಯವಾದ ಭಾಗ. “ಜನ್ಮಾಂತರ ಕೃತಂ ಪಾಪಂ ವ್ಯಾಧಿರೂಪೇಣ ಪೀಡ್ಯತೆ” ಎಂಬ ಉಕ್ತಿಯಂತೆ ಕೆಲವೊಂದು 

1.     ಮಹಾವ್ಯಾಧಿಗಳು,
2.     ಕ್ಷಯ,
3.     ಕುಷ್ಟ,
4.     ಅಪಸ್ಮಾರ,
5.     ಅರ್ಬುದ,
6.     ಮೇಹ,
7.     ಹುಚ್ಚು,
8.     ಶೂಲಾದಿಗಳು,
9.     ಸಂಧಿವಾತಗಳು,
10. ಪಕ್ಷವಾತಗಳು.

           
         - ಇವುಗಳೆಲ್ಲಾ ಬರಲು ಸಾಧ್ಯವಿದೆ. ಅದಕ್ಕೆ ಈ ಜನ್ಮ ಕಾರಣವಲ್ಲದಿದ್ದರೂ ಖಾಯಿಲೆ ರೂಪದಲ್ಲಿ ಕಾಡಬಹುದು. ಇವುಗಳನ್ನು ಪಾಪರೋಗಗಳು ಎನ್ನಬಹುದು. ಒಂದು ರೀತಿಯಲ್ಲಿ ಪೂರ್ವಜನ್ಮದ ಪಾಪಗಳಿಗೆ ಪರಿಷ್ಕರಣೆ ಎನ್ನಿಸುತ್ತದೆಯಾದ್ದರಿಂದ ಅನುಭವಿಸುವುದರಿಂದ ಕರ್ಮ ವಿಪಾಕ ಹೊಂದುತ್ತದೆ. ಇವುಗಳು ಪೂರ್ವದ ನಾನಾ ರೀತಿಯ ನಾನಾ ಜನ್ಮದ ಹಲವು ರೀತಿಯ ಪಾಪಕೃತ್ಯಗಳಿಂದ ದೂಷಿತಗೊಂಡು ನಿರಂತರ ಕಾಡುವ ರೋಗಗಳು; ಮಾನವನನ್ನು ಕಾಡಬಹುದು. ಅದಕ್ಕೆ ಕರ್ಮ ವಿಪಾಕ ಪದ್ಧತಿಯಲ್ಲಿ ಪರಿಹಾರ ವಿಧಾನಗಳೂ ಇವೆ. ಚಿಕಿತ್ಸಾ ವಿಧಾನಗಳೂ ಇವೆ. ಅವಕ್ಕೆ ಸಂಬಂಧಪಟ್ಟು ಮಾನವನು ಕೆಲ ತ್ಯಾಗ, ಕೆಲ ದಾನ, ಕೆಲವೊಂದು ಜೀವನ ಮಾರ್ಪಾಡುಗಳು ಮತ್ತು ಪ್ರದೇಶ ಬದಲಾವಣೆಗಳಿಂದ ಪರಿಹಾರ ಪಡೆಯಬೇಕಿರುತ್ತದೆ. ಇದು ಜನ್ಮಾಂತರ ಕೃತವೆಂದು ಪೋಷಿಸಲ್ಪಟ್ಟಿದ್ದರಿಂದ ಅವುಗಳನ್ನು ಸಾತ್ವಿಕ, ಸರಳ, ಶುದ್ಧ, ಬದ್ಧ, ನ್ಯಾಯಯುತ ಜೀವನ ಶೈಲಿಯಿಂದಲೂ ವಿಪಾಕಗೊಳಿಸಿಕೊಳ್ಳಬಹುದು. ಬರೇ ಔಷಧದಿಂದಲೋ ಅಥವಾ ಇನ್ನಿತರೆ ಧನಬಲದ ಚಿಕಿತ್ಸಾ ವಿಧಾನದಿಂದಲೋ ಪರಿಹರಿಸಿಕೊಳ್ಳಲಾಗದ ಸಮಸ್ಯೆಗಳಿದಾಗಿರುತ್ತವೆ.

೮. ದುರಾಶಾ ಕಾರಣ:- ಮಾನವನ ಅತೀ ಅಪೇಕ್ಷೆ ದುರಾಸೆ. ಇದೂ ಕೂಡ ಕೆಲ ರೋಗಗಳಿಗೆ ಕಾರಣವಾಗಿರುತ್ತದೆ. ತನ್ಮೂಲಕ ಪ್ರಾಪ್ತವಾಗದ ನಾನಾ ರೋಗಗಳಿಗೆ ಕಾರಣವಾಗಿ ಹಲವು ರೀತಿಯ ಹಿಂಸೆಗೆ ಸಿಲುಕಿ ನರಳಬಹುದು. ಇದು ತನ್ನನ್ನು ತಾನು ತಿದ್ದಿಕೊಳ್ಳುವುದರ ಹೊರತು ಬೇರೆ ಪರಿಹಾರವೇ ಇಲ್ಲದ ವಿಚಾರವಾಗಿರುತ್ತದೆ.

೯. ಪಾಪಕೃತ್ಯ ಕಾರಣ:- ಮಾನವನು ತನ್ನ ಜೀವನ ವಿಧಾನದಲ್ಲಿ ಮಾಡುವ ಪಾಪಕೃತ್ಯಗಳು ಹಲವು ರೀತಿಯವು. ಅವೂ ಕೂಡ ಅಗೋಚರ ಖಾಯಿಲೆಗಳಾಗಿ ಮಾನವನನ್ನು ಕಾಡುತ್ತವೆ. 

1.     ಹಿಂಸೆ
2.     ಅನೃತವಚನ
3.     ನಿಂದೆ
4.     ಊಹಾತ್ಮಕ ಮಿಥ್ಯಾರೋಪ
5.     ಕ್ರೋಧ
6.     ದ್ವೇಷ
7.     ಮತ್ಸರ
8.     ಪರಿಸರ ನಾಶ
9.     ಸೋಮಾರಿತನ
10. ಕರ್ತವ್ಯ ಭ್ರಷ್ಟತೆ


 - ಎಂಬ ದಶವಿಧ ಕಾರಣಗಳು ಮಾನವನ ಸಾಮಾಜಿಕ ಜೀವನ ಪಾಪಕೃತ್ಯಕಾರಣ ಹೇತುವಾಗಿರುತ್ತವೆ. ಆ ಕಾರಣದಿಂದ ಬರುವ ಶಾಪರೂಪವಾದ ರೋಗಗಳು ಬಾಧಿಸಬಹುದು.

೧೦. ದ್ರೋಹಕಾರಣ:- ಇದೊಂದು ವಿಶೇಷವಾದದ್ದು; ಮಾನವನು ಮಾತ್ರ ತನ್ನ ಸುತ್ತಿನ ಸಮಾಜಕ್ಕೆ ಮಾಡುವ ದ್ರೋಹ. ಅಂದರೆ ಕೃತಘ್ನತೆ ಮಾನವನ ಅತೀ ಕೆಟ್ಟಗುಣಗಳಲ್ಲಿ ಮೊದಲನೆಯದು. ಇವುಗಳಲ್ಲಿ

1.    ಗುರುದ್ರೋಹ
2.    ಮಾತೃದ್ರೋಹ
3.    ಪಿತೃದ್ರೋಹ
4.    ಮಿತ್ರದ್ರೋಹ
5.    ರಾಜದ್ರೋಹ
6.    ಧರ್ಮದ್ರೋಹ
7.    ದೇಶದ್ರೋಹ
8.    ಸಮಾಜದ್ರೋಹ
9.    ಭಾರ್ಯಾದ್ರೋಹ
10. ಬಂಧುದ್ರೋಹ
11. ದೈವದ್ರೋಹ
12. ಕರ್ತವ್ಯದ್ರೋಹ
13. ಸಾಹಚರ್ಯದ್ರೋಹ
14. ಅನ್ನದ್ರೋಹ
15. ಜಲದ್ರೋಹ
16. ಆತ್ಮದ್ರೋಹ

       - ಎಂಬ ೧೬ ರೀತಿಯ ದ್ರೋಹವೃತ್ತಿಗಳಿವೆ. ಇವುಗಳನ್ನು ಯಾರು ಮಾಡುತ್ತಾರೋ ಅವರು ತಮ್ಮ ಕೊನೆಗಾಲದಲ್ಲಿ ಖಂಡಿತವಾಗಿಯೂ ನಾನಾ ರೀತಿಯ ಹಿಂಸಾತ್ಮಕ ಜೀವನ ನಡೆಸಲೇ ಬೇಕು. ಈ ದ್ರೋಹ ಕಾರಣಕ್ಕೆ ಪರಿಹಾರವಿಲ್ಲ. ಅವೆಲ್ಲವೂ ನಂಬಿಕೆಯ ಆಧಾರದಲ್ಲಿ ನಡೆಯಬೇಕಾದ ಸಾಮಾಜಿಕ ವ್ಯವಸ್ಥೆಯಾದ್ದರಿಂದ ಈ ನಂಬಿಕೆ ದ್ರೋಹವು ಸಾಮಾನ್ಯ ಪಾಪಹೇತುವಲ್ಲ. ಆದ ಕಾರಣ ಯಾರು ದ್ರೋಹ ಕಾರಣರೋ ಅವರು ಶಿಕ್ಷಾರ್ಹ ಅಪರಾಧಿಗಳೇ! ಅವರನ್ನು ಪ್ರಕೃತಿ ಶಿಕ್ಷಿಸುವ ವಿಧಾನವೇ ಈ ರೋಗಮೂಲಗಳು. ಇವುಗಳನ್ನು ಅರಿತು ಮಾನವ ಬಾಳಿದಲ್ಲಿ ದೇಹದಲ್ಲಿ ಯಾವುದೇ ರೋಗರುಜಿನಗಳಿಲ್ಲದ ಸುಖ ಬಾಳ್ವೆ, ದೀರ್ಘಾಯುಷ್ಯ, ಚಿರಯೌವನ ಪ್ರಾಪ್ತಿಯೆಂದು ಖಂಡಿತವಾಗಿ ಹೇಳಬಹುದು.

    ಇಂತಹಾ ರೋಗಮೂಲದ ಬಗ್ಗೆ ಜ್ಯೋತಿರಾಯುರ್ವೇದ ಏನು ಹೇಳುತ್ತದೆ ಎಂಬುದನ್ನು ಮೊದಲಾಗಿ ತಿಳಿಯೋಣ. “ಶಶಿ ಶಿಖಿ ಮಂದಾಂಗಾರಕ ಶುಕ್ರ ಏತೇ ಗ್ರಹಾಃ ರೋಗಕಾರಕಃ” “ಮನಃ ಶಶಿ ಶಿಖಿ ಶುಕ್ರಃ ಪ್ರಕೃತೇ ಮಂದಾಂಗಾರಕ ಶುಕ್ರಃ” “ತೇ ತೇ ಗ್ರಹಾಃ ಪೀಡತೇ ಕರ್ಮಾನುಸಾರೇಣ ಮಾನವಃ” ಇವೆಲ್ಲಾ ಚಂದ್ರ ರಾಹು ಶನಿ ಕುಜ ಶುಕ್ರರು ಮಾನವರನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಖಾಯಿಲೆಗಳಿಗೆ ಕಾರಕರಾಗಿ ಬಾಧಿಸುತ್ತಾರೆ. ಅಲ್ಲದೇ “ಸೌಮ್ಯ ಸೌಮ್ಯತರಾ ಶೇಷ ಯಾ ಯಾತಿ ಸಮದಾ ಮುಪಸ್ಥೇ” || ಬುಧನೂ ಕೂಡ ಜೀವಿಯ ಪಾಪಶೇಷವನ್ನು ವಿಪಾಕಗೊಳಿಸಲೋಸುಗ ಹಲವು ರೀತಿಯ ರೋಗ ಕಾರಣವಾಗುತ್ತಾನೆ. ಹಾಗಾಗಿ ಆಯಾಯ ಗ್ರಹಗತಿಯ ಕಾರಣ ಆಧರಿಸಿ ರೋಗಮೂಲವನ್ನು ಗುರುತಿಸಿ ಕರ್ಮವಿಪಾಕವಾಗುವ ರೀತಿಯಲ್ಲಿ ಶಾಂತಿ ಪ್ರಕ್ರಿಯೆ ನಡೆಸಬೇಕು.

ಹೋತಾ ಯಕ್ಷತ್ ಸ್ವಾಹಾಕೃತಿಂ ಏಹ್ಯಗ್ನಿಂ ಗೃಹಪತಿಂ ಪ್ರಥಕ್ ಪ್ರಥಕ್ 
ವರುಣಂ ಭೇಷಜಂ ಕವಿಂ ಕ್ಷತ್ರಂ ಇಂದ್ರಂ ಅವ್ಯಯೋ ವ್ಯಯೋಧಸಮ್ ||
ಅತಿ ಚ್ಚಂಧ ಸಂ ಛಂಧ ಇಂದ್ರಿಯಂ ಬೃಹತಾ ವೃಷಭಂ ಗಾಂ ಅವ್ಯಯೋ 
ಯೋಷಾ ದಧತ್ ಅತ್ವಾ ಯಂತ್ಯಜ್ಞಸ್ಯ ಹೋತುಃ ಯಜಃ || ಶುಕ್ಲ ಯಜುರ್ವೇದ ||

ತನ್ನ ಕರ್ಮವನ್ನೂ ಋಣವನ್ನೂ ಹವಿರೂಪದಲ್ಲಿ ಹೋಮಿಸುವ ಸಂಕಲ್ಪಿತ ಮಾನವ ಜನ್ಮ ಜೀವನ ಯಜ್ಞವೆಂಬ ಗೃಹ್ಯಾಗ್ನಿ ಸೂತ್ರದಂತೆ ತಾನು ತನ್ನೆಲ್ಲಾ ಕರ್ಮಶೇಷಗಳನ್ನೂ ಬೇರೆ ಬೇರೆಯಾಗಿ ಉಪಾಸನೆಗಳ ಮುಖೇನ ಜೀವನ ಮಾರ್ಗದ ಋಣಬಂಧವೆಂಬ ವರುಣಪಾಶವನ್ನು ಪಾಶುಪತವೆಂಬ ಜೀವ ಪಾಶವನ್ನೂ ಔಷಧೀಗಳೆಂಬ ಋಣ ರಸ ಪಾಶವನ್ನೂ ಅರಿತು ಬುದ್ಧಿವಂತಿಕೆಯಿಂದ, ಕಠೋರ ವೃತ, ಸಾದ್ದಿಷ್ಠ ಶಕ್ತಿಯಿಂದ ವ್ಯಜನಗೊಳಿಸಿ ಹವಿಸ್ಸಾಗಿ ಮಾರ್ಪಡಿಸಿ ನಿರಂತರ ಜೀವನ ಯಜ್ಞದ ಅಧ್ವರ್ಯುವಾಗಬೇಕು. ಈ ಪ್ರಾಪಂಚಿಕ ಜೀವನವು ಹಲವು ಭಿನ್ನ ಭಿನ್ನ ರಾಗ ರೋಗಭರಿತವಾಗಿರುತ್ತದೆ. ಅವೆಲ್ಲಾ ಇಂದ್ರಿಯಜನ್ಯ ಕಾರಣವೂ, ಮನೋಜನ್ಯ ಕಾರಣವೂ ಆಗಿರುತ್ತವೆ. ಅವೆಲ್ಲವೂ ೪೦ ರೀತಿಯ ಕಲಾರಸರೂಪದಲ್ಲಿ ನಮ್ಮ ನರನಾಡಿಗಳಲ್ಲಿ ಪ್ರಚೋದನೆಗೊಂಡು ನಿರಂತರವಾದ ರೋಗವನ್ನುಂಟು ಮಾಡುತ್ತವೆ. ಅವನ್ನು ತನ್ನ ನಿರಂತರ ಸಾಧನಾ ಶಕ್ತಿಯಿಂದ ಗಾರ್ಹಪತ್ಯ ನಿಯಮದಂತೆ ಜೀವನ ಸಾಗಿಸುತ್ತಾ ಯಜ್ಞಮುಖೀ ಹವಿರ್ಭಾಗ ರೂಪದಲ್ಲಿ ಹೋಮಿಸಿ ಕಳೆದುಕೊಂಡು ಮಾನವಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು.  
|| ಶುಕ್ಲ ಯಜುರ್ವೇದ ||
ಇಂದ್ರಸ್ಯನು ವಿಕಂ ಕ್ರೋಳೋದಿತ್ಯ ಉಪ ಪಾಜಸ್ಯ ದಶಾಂ ಜತ್ರವೋ ಉದಿತ್ಯೈಭ ಆಭಸತ್ |
ಜೀಮೂತಾನ್ ವಿಭವಾನ್ ಭವಾನ್ ಹೃದಯೌ ಉಪಶೇನಾ ಅಂತರಿಕ್ಷಂ ಶಿಕ್ಷಾಂ ಪುರೀತತಾಂ || 
        ಹಲವಾರು ರೀತಿಯ-
·        ರಕ್ತ ಪರಿಚಲನೆ
·        ನರವ್ಯೂಹ
·        ಸ್ನಾಯುವ್ಯೂಹ
·        ನಾಡೀವ್ಯೂಹ
·        ರಸ ಪರಿಚಲನೆ
·        ಕಾಂತೀಯ ಶಕ್ತಿ ಪರಚಲನೆ ಇತ್ಯಾದಿಗಳೆಲ್ಲವೂ ಮತ್ತು
·        ಉಸಿರಾಟ
·        ಹೃದಯ ಸಂಬಂಧಿ ಖಾಯಿಲೆಗಳು ಇತ್ಯಾದಿ..

1.     ವಾಕ್
2.     ನಾದ
3.     ಶ್ರುತಿ
4.     ಅಭಂಗ
5.     ಧ್ಯುತಿ
6.     ದ್ರುಮ
7.     ಇಳಾ ಎಂಬ ಸಪ್ತವಿಧಗಳಲ್ಲಿ ವ್ಯವಹರಿಸುವ ಮಾನವ ಜೀವ + ದೇಹ
o   ಪರಿಚಲನೆ
o   ಪರಿಕ್ರಮಣ
o   ಪರಿವ್ಯೂಹ
o   ಪರಿಪೋಷಣೆ ಇವುಗಳಲ್ಲಿ ಮಾನವನಾದವನು ತನ್ನ –
§  ಸಚ್ಚಾರಿತ್ರ್ಯ
§  ಶುದ್ಧ ಜೀವನ
§  ಸಾಧನೆ
§  ಜಪ
§  ತಪ
§  ಪರೋಪಕಾರ ಇವುಗಳಿಂದ ಕರ್ಮವಿಪಾಕ ಮಾಡಿಕೊಳ್ಳಬೇಕೆಂದಿದೆ.
    ದೈಹಿಕ ವ್ಯಾಪಾರದ ನವಶ್ಲೇಷ್ಮಗಳೂ ಕೂಡ ದೇಹದಿಂದ ಹೊರಹೋಗ ಬೇಕೆಂದಿದ್ದರೆ ಅದಕ್ಕೆ ಅದರದ್ದೇ ಆದ ನಿಯಮ ಬದ್ಧತೆ ಇರುತ್ತದೆ. ಶ್ರಮೈಃ ಸ್ವೇದಃ ಪಚನೈ ಪುರೀಷಾತ್ ಪೂರಣೈ ಮೂತ್ರಂ ಎಂಬಂತೆ ಬೆವರು, ಕಣ್ಣೀರು, ಅಮೇಧ್ಯ, ಮೂತ್ರಗಳೂ ಕೂಡ ದೇಹವರ್ತನೆಗೆ ಬದ್ಧವಾಗಿ ಇರುತ್ತವೆ.
 • ·         ಶ್ರಮವಿಲ್ಲದಿದ್ದಲ್ಲಿ ಬೆವರಿಲ್ಲ,
 • ·         ದಯೆ ಇಲ್ಲದಿದ್ದಲ್ಲಿ ಕರುಣೆ ಇಲ್ಲದಿದ್ದಲ್ಲಿ ಕಣ್ಣೀರಿಲ್ಲ,
 • ·         ವಾರ್ತಾದಿ ವಾಚಕ ದೋಷವಿದ್ದರೆ ಕಿವಿಯ ಶ್ಲೇಷ್ಮವಿಲ್ಲ,
 • ·         ವಾತಾದಿ ದೂಷ್ಯ ಅಪಕ್ವ ವಾಕ್ಯಾನುಸರಣಿ ಇಲ್ಲದಿದ್ದಲ್ಲಿ ಮೂಗಿನ ಶ್ಲೇಷ್ಮವಿಲ್ಲ,
 • ·         ರಸಾದಿ ಸಂಯೋಗವಿಲ್ಲದೆ ಎಂಜಲಿಲ್ಲ.
      ಇದೆಲ್ಲಾ ಸತ್ಯವೇ! ಅರ್ಥಮಾಡಿಕೊಂಡರೆ ಅರಿವಾಗುವುದು. ಕೇಶ ನಖಗಳೂ ಕೂಡ ಶ್ಲೇಷ್ಮಾದಿ ಭಾಗದಲ್ಲಿರುವುದರಿಂದ ಅವುಗಳೂ ಆರೋಗ್ಯವಾಗಿರಲು ಈ ಬದ್ಧತೆ ಅಗತ್ಯವಾಗಿರುತ್ತದೆ.

ಮಯಃ ಪ್ರಾಜಾಪತ್ಯ ಉಲೋ ಹಲಿಕ್ಷ್ಣೋ ವೃಪದಗ್ಂಶಸ್ತೇ ಧಾತ್ರೇ ದಿಶಾಂ ಕಙ್ಕೋ ಧುಙ್ಕ್ಷಾಗ್ನೇಯೀ ||
ಕಲವಿಙ್ಕೋ ಲೋಹಿತಾಹಿಃ ಪುಷ್ಕರಸಾದಸ್ತೇ ತ್ವಾಷ್ಟ್ರಾ ವಾಚೇ ಕ್ರುಙ್ಚಃ || ೧ || ೩೫ ||

ಸೋಮಾಯ ಕುಲಙ್ಗ ಆರಣ್ಯೋಽಜೋ ನಕುಲಶ್ಶಕಾ ತೇ ಪೌಷ್ಣಾಃ ಕ್ರೋಷ್ಟಾ ಮಾಯೋರಿಂದ್ರಸ್ಯ ಗೌರಮೃಗಃ || ಪಿದ್ವೋ ನ್ಯಙ್ಕುಃ ಕಕ್ಕಟಸ್ತೇಽನುಮತ್ಯೈ ಪ್ರತಿಶ್ರುತ್ಕಾಯೈ ಚಕ್ರವಾಕಃ || ೨ || ೩೬ ||

ಸೌರೀ ಬಲಾಕಾ ಶಾರ್ಗಸ್ಸೃಜಯಶ್ಶಯಾಂಡಕಸ್ತೇ ವೈತ್ರಾಃ ಸರಸ್ವತ್ಯೈ ಶಾರಿಃ ಪುರುಷವಾಕ್ ಶ್ವಾವಿದ್ಭೌಮೀ || ಶಾರ್ದೂಲೋ ವೃಕಃ ಪೃದಾಕುಸ್ತೇ ಮನ್ಯವೇ ಸರಸ್ವತೇ ಶುಕಃ ಪುರುಷವಾಕ್ || ೩ || ೩೭ ||

ಸುಪರ್ಣಃ ಪಾರ್ಜನ್ಯ ಆತಿರ್ವಾಹಸೋ ದರ್ವಿದಾ ತೇ ವಾಯವೇ ಬೃಹಸ್ಪತಯೇ ವಾಚಸ್ಪತಯೇ ಪೈಙ್ಗ ರಾಜೋ ಽಲಜ ಅಂತರಿಕ್ಷಃ || ಪ್ಲವೋ ಮದ್ಗುರ್ಮತ್ಸ್ಯಸ್ತೇ ನದೀಪತಯೇ ದ್ಯಾವಾಪೃಥಿವೀಯಃ ಕೂರ್ಮಃ || ೪ || ೩೮ ||

ಪುರುಷಮೃಗಶ್ಚಂದ್ರಮಸೋ ಗೋಧಾ ಕಾಲಕಾ ದಾರ್ವಾಘಾಟಸ್ತೇ ವನಸ್ಪತೀನಾಂ ಕೃಕವಾಕುಸ್ಸಾವಿತ್ರೋ ಹಗ್ಂಸೋ ವಾತಸ್ಯ || ಕ್ರೋ ಮಕರಃ ಕುಲೀಪಯಸ್ತೇಽಕೂಪಾರಸ್ಯ ಹ್ರಿಯೈ ಶಲ್ಯಕಃ || ೫ || (೭) || ೩೯ ||

ಏಣ್ಯಹ್ನೋ ಮಂಡೂಕೋ ಮೂಷಿಕಾ ತಿತ್ತಿರಿಸ್ತೇ ಸರ್ಪಾಣಾಗ್ಂಲ್ಲೋಪಾಶ ಆಶ್ವಿನಃ ಕೃಷ್ಣೋ ರಾತ್ರ್ಯೈ ||
ಋಕ್ಷೋ ಜತೂ ಸ್ಸುಷಿಲಿಕಾ ತ ಇತರ ಜನಾನಾಂ ಜಹಕಾ ವೈಷ್ಣವೀ || ೧ || ೪೦ ||

ಅನ್ಯವಾಪೋಽರ್ಧಮಾಸಾನಾಮೃಶ್ಯೋ ಮಯೂರಸ್ಸುಪರ್ಣಸ್ತೇ ಗಂಧರ್ವಾಣಾಮಪಾಮುದ್ರೋ ಮಾಸಾಂ ಕಶ್ಯಪಃ || ರೋಹಿತ್ಕುಂಡೃಣಾಚೀ ಗೋಲತ್ತಿಕಾ ತೇಽಪ್ಸರಾ ಮ್ಮೃತ್ಯವೇಽಸಿತಃ || ೨ || ೪೧ ||

ವರ್ಷಾಹೂಋರ್ತೂನಾಮಾಖುಃ ಕಶೋ ಮಾನ್ಥಾಲಸ್ತೇಪಿತೃಣಾಂ ಬಲಾಯಾಜಗರೋ ವಸೂನಾಂ ಕಪಿಞ್ಜಲಃ || ಕಪೋತ ಉಲೂಕ ಶ್ಶಶಸ್ತೇ ನಿಋತ್ಯೈ ವರುಣಾಯಾರಣ್ಯೋ ಮೇಷಃ || ೩ || ೪೨ ||

ಶ್ವಿತ್ರ ಆದಿತ್ಯಾನಾಮುಷ್ಟ್ರೋ ಘೃಣೀವಾನ್ವಾರ್ಧ್ರೀನಸಸ್ತೇ ಮತ್ಯಾ ಅರಣ್ಯಾಯ ಸೃಮರೋ ರುರೂ ರೌದ್ರಃ ||
ಕ್ವಯಿಃ ಕುಟುರ್ದಾತ್ಯೌಹಸ್ತೇ ವಾಜಿನಾಂ ಕಾಮಾಯ ಪಿಕಃ || ೪ || ೪೩ ||

ಖಡ್ಗೋ ವೈಶ್ವದೇವಃ ಶ್ವಾ ಕೃಷ್ಣಃ ಕರ್ಣೋ ಗರ್ದಭಸ್ತರಕ್ಷುಸ್ತೇ ರಕ್ಷಸಾಮಿಂದ್ರಾಯ ಸೂಕರಃ || ಸಿಗ್ಂಹೋ ಮಾರುತಃ ಕೃಕಲಾಸಃ ಪಿಪ್ಪಕಾ ಶಕುನಿಸ್ತೇ ಶರವ್ಯಾಯೈ ವಿಶ್ವೇಷಾಂ ದೇವಾನಾಂ ಪೃಷತಃ || ೫ || ೪೪ ||
  
     ಮಾನವನಾಗಿ ಜನಿಸಿದ ಎಲ್ಲರಿಗೂ ನಿರಂತರ ವ್ಯವಸ್ಥೆಯನ್ನು ಪ್ರಕೃತಿ ಒದಗಿಸುತ್ತದೆ. ಅದನ್ನು ಮಾನವನಾಗಿ ಬಳಸಿದಲ್ಲಿ ಎಂದಿಗೂ ಯಾವುದೇ ರೀತಿಯ ಬಾಧಕ ಸಮಸ್ಯೆಯು ಬರಲಾರದು. ಮಾನವ ಜನ್ಮವೇ ವಿಶೇಷ ಪುಣ್ಯ ಕಾರಣದಿಂದಾಗಿ ಲಭ್ಯವಾಗುವ ವಿಶೇಷ ಜನ್ಮವಾದ್ದರಿಂದ ಸದುಪಯೋಗ ಜೀವನವನ್ನು ಮಾಡಿ ಆತ್ಮೋನ್ನತಿ ಸಾಧಿಸಿಕೊಳ್ಳುವತ್ತ ನಮ್ಮ ಜೀವನ ವಿಧಾನವಿರಬೇಕೇ ವಿನಃ ನಿರಂತರ ರೋಗಿಯಾಗಿ ನರಳುತ್ತಾ ಕಷ್ಟ ಕೋಟಲೆಗಳಿಗೆ ಸಿಕ್ಕಿ ತೊಳಲಾಳಬೇಡಿ ಎಂದು ವಿನೀತನಾಗಿ ಪ್ರಾರ್ಥಿಸುತ್ತೇನೆ.
                                                                                             -  ಕೆ. ಎಸ್. ನಿತ್ಯಾನಂದ,
                                                                                              ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು


2 comments:

Note: only a member of this blog may post a comment.