Sunday, 17 March 2013

Mulky Kings, Arasu Kambala & Bappanadu Devi

Bappanaadu Durgaparameshwari Devi
Bappanaadu Durgaparameshwari Temple

ಇಲ್ಲಿನ ದೇವಾಲಯಕ್ಕೂ ಈ ಮನೆತನಕ್ಕೂ ಅವಿನಾಭಾವ ಸಂಬಂಧ ಈಗಲೂ ಇದೆ. ಅಂದರೆ ಕ್ಷೇತ್ರವು ವಾಜಪೇಯ ಯಾಗ ಕಾರಣದಿಂದಾಗಿ ನಿರ್ಮಾಣವಾಗಿ ಈಗಿನವರೆಗೆ ನಡೆದುಕೊಂಡು ಬಂದಿರುತ್ತಾ ಈ ಮನೆತನದ ಅರಸೊತ್ತಿಗೆ, ಅದರ ನಿರ್ವಹಣೆಯ ಮುಖ್ಯ ಜವಾಬ್ದಾರಿ ನಿರ್ವಹಿಸುತ್ತದೆ. ಈ ದೇವಾಲಯದಿಂದ ಪ್ರತಿನಿತ್ಯವೂ ಪ್ರಸಾದ ತಲುಪಿದ ನಂತರವೇ ಅಲ್ಲಿನ ಪಟ್ಟದೇವರ ಪೂಜೆ. ಅರಸರಿಗೆ ಊಟ ಇತ್ಯಾದಿ ವ್ಯವಸ್ಥೆ ಇತ್ತು. ಆ ಪ್ರಸಾದ ತರುವುದಕ್ಕೆ ಒಂದು ಕುಟುಂಬ ಮೀಸಲಿತ್ತು. 

Seemantha Arasu's old palace
ಅರಮನೆಗೆ ಪ್ರಸಾದ ಕೊಟ್ಟು ಬರುವುದೇ ಅವರ ಕೆಲಸವಾಗಿತ್ತು. ಗುತ್ತಿನ ಹತ್ತು ಮನೆಯವರೂ ಕೂಡ ಅರಸೊತ್ತಿಗೆಗೆ ಬಾಧ್ಯರೂ, ನಿಷ್ಠರೂ ಆಗಿದ್ದರು. ಈ ಅರಸೊತ್ತಿಗೆ ಒಂದು ರಾಜಪಟ್ಟವೆಂಬುದಕ್ಕಿಂತ ತ್ಯಾಗರೂಪದ ಸನ್ಯಾಸಪಟ್ಟವೆನ್ನಬಹುದು. ಅಷ್ಟು ಶ್ರದ್ಧೆಯಿಂದ ಧರ್ಮಕ್ಕೆ ಬದ್ಧರಾಗಿ ವ್ಯವಹರಿಸುತ್ತಿದ್ದರು. ಈಗ ಮೂಲಿಕಾಪುರದ ಪ್ರಸಾದ ಬರುವುದು ನಿಂತ ಕಾರಣದಿಂದಾಗಿ ಇಲ್ಲಿಯೂ ಪಟ್ಟದ ದೇವರ ಪೂಜೆಗೆ ಭಿನ್ನತೆ ಉಂಟಾಗಿರುತ್ತದೆ. ಅಲ್ಲದೆ ಪೂಜಾ ನಿರ್ವಹಣೆಯೂ ಕೂಡ ಈಗಿನ ಪದ್ಧತಿಯಂತೆ ನಡೆಯುತ್ತಿದೆ. ಅದು ತಾರಾತಂತ್ರ ರೀತ್ಯಾ ನಡೆಯಬೇಕಾದ ಅಗತ್ಯತೆ ಇದೆ. 

During Basadi Jeernoddhaara Gosti
Renovated Padmavati Devi Basadi in Mulky Aramane
ದಶಮಹಾವಿಧ್ಯಾ ಭಾಗದಲ್ಲಿ ತಾರಾತಂತ್ರವೂ ಒಂದಾಗಿರುತ್ತದೆ. ಒಂದಾನೊಂದು ಕಾಲದಲ್ಲಿ ಜಿನಪಾಲರೆಂಬ ಅರಸರು ದೇಹತ್ಯಾಗ ಮಾಡಿದಾಗ ಪಟ್ಟದ ಆಯ್ಕೆಗೆ ನಿಧಾನವಾಯಿತು. ಗುತ್ತಿನವರು ಅಸಹಕಾರ ತೋರಿದ್ದರಿಂದ ಅರಸರ ಆಯ್ಕೆ ಆಗಿರಲಿಲ್ಲ. ೪ ವರ್ಷಗಳ ಕಾಲ ಈ ವ್ಯವಸ್ಥೆ ನಿಂತಿತ್ತು. ಆ ಕಾಲದಲ್ಲಿ ದೇವಾಲಯ ನಿರ್ವಹಣೆಗೆ ಇತರೆ ಧರ್ಮದರ್ಶಿ ಮಂಡಳಿಯು ನೇಮಿಸಲ್ಪಟ್ಟು ರಾಜಲಾಂಛನಗಳು ದೇವಾಲಯ ಸ್ವಾಧೀನ ಕೊಡಲಾಗಿತ್ತು. ನಂತರ ಗುತ್ತಿನವರು ಒಮ್ಮತದ ತೀರ್ಮಾನಕ್ಕೆ ಬಂದು ಪುನಃ ಅರಸೊತ್ತಿಗೆ ಅಂಗೀಕಾರವಾಗಿ ಪಟ್ಟಾಭಿಷೇಕವಾಯ್ತು. ಆದರೆ ದೇವಾಲಯಕ್ಕೆ ಒಪ್ಪಿಸಿದ ರಾಜಲಾಂಛನ ಹಿಂತಿರುಗಿಸಿಲ್ಲ ಅಥವಾ ಇವರು ಪುನಃ ಪಡೆದಿಲ್ಲ. ಒಟ್ಟಾರೆ ರಾಜಲಾಂಛನ, ಸತ್ತಿಗೆ, ದಂಡ, ಛತ್ರಗಳು ದೇವಾಲಯದಲ್ಲೇ ಉಳಿದು ಹೋದವು. ಅದರ ಜೊತೆಯಲ್ಲಿ ಸಂಪತ್ತು ಕೂಡ. ಈ ವ್ಯವಸ್ಥೆ ಲೋಪವಿದ್ದರೂ ಕೂಡ ಈ ಅರಸರ ಮನೆತನ ಮುಂದೆ ದೇವಾಲಯಕ್ಕೆ ನಿಷ್ಠರಾಗಿ ನಡೆದುಕೊಂಡು ಬಂದಿರುತ್ತದೆ.
ಎರಡನೆಯ ಕುರುಹಾದ ಆಡಳಿತ ವ್ಯವಸ್ಥೆಯಲ್ಲಿ ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ, ರಕ್ಷಣೆಯನ್ನು ಸುತ್ತಿನ ಸಮಾಜಕ್ಕೆ ಒದಗಿಸುತ್ತಾ ಈಗಲೂ ಆ ಮಟ್ಟಿನ ಗೌರವ ಉಳಿಸಿಕೊಂಡು ಬಂದಿರುವುದು. ಈಗಲೂ ಸುತ್ತಮುತ್ತಿನ ಊರಿನಲ್ಲಿ ಮೂಲ್ಕಿ ಅರಸುಮನೆತನಕ್ಕೆ ಒಂದು ಸ್ಥಾನಮಾನವಿದೆ.
Saavantha Arasu Shri Duggana Sawanth at his Basadi in
Padapanambur. The lineage of this king is 23rd in succession.
Their reign dates back to being the feudatories
of  the Vijaynagar Empire.
ಹಾಗೇ ಮೂರನೆಯ ಕುರುಹಾಗಿ ಸುತ್ತಿನ ಸಮಾಜದಲ್ಲಿ ವಿಕೃತಮನಸ್ಸಿನ ಕೋಣಭಾವದ ಜನರನ್ನು ದಂಡಿಸಿ ಅವರನ್ನು ಸಮಾಜ ವ್ಯವಸ್ಥೆಯಲ್ಲಿ ಸೇರುವಂತೆ ರೂಪಿಸುವ ವ್ಯವಸ್ಥೆಯಾದ ಕಂಬಳವನ್ನು ನಡೆಸಿಕೊಂಡು ಬರುತ್ತಿರುವುದು. ಮೇಲ್ನೋಟಕ್ಕೆ ತೀರಾ ಒಂದು ಕ್ರೀಡೆಯಂತೆ ಕಂಡರೂ ಅಲ್ಲಿ ಮಹತ್ತರವಾದ ತಂತ್ರವೊಂದು ಕೆಲಸಮಾಡುತ್ತದೆ. ಸಮಾಜಕ್ಕೆ ಕಂಟಕಪ್ರಾಯರಾಗಿ, ಸಮಸ್ಯಾತ್ಮಕವಾಗಿ, ಮಲೆತುನಿಂತ ಜನರನ್ನು ಅಂದರೆ ಈಗಿನ ಭಾಷೆಯಲ್ಲಿ ಹೇಳುವುದಿದ್ದರೆ ಗೂಂಡಾಗಳನ್ನು ದಂಡಿಸಿ ಎಲ್ಲರಿಗೂ ನಿರ್ಭಯ ಜೀವನ ಒದಗಿಸುವ ಬದ್ಧತೆ ಅರಸು ಮನೆತನಕ್ಕಿತ್ತು. ಅದರ ಜೊತೆಯಲ್ಲಿ ಅಲ್ಲಿ ಇನ್ನೊಂದು ಆಚರಣೆಯಿತ್ತು ಅದನ್ನು ಮುಂದಿನ ಲೇಖನದಲ್ಲಿ ಗಮನಿಸಿ.

No comments:

Post a Comment

Note: only a member of this blog may post a comment.