Saturday, 26 October 2013

ಉಪನಯನ ವಿಚಾರ: ಕಾಲಾಕಾಲ ನಿರ್ಣಯ ಮತ್ತು ಸಾಧ್ಯಾಸಾಧ್ಯ ನಿರ್ಣಯ
ಉಪನಯನವು ಒಂದು ಅತಿ ಉಪಯುಕ್ತವಾದ ಅಗತ್ಯ ಸಂಸ್ಕಾರವಾಗಿದ್ದು ಸೂಕ್ತಕಾಲದಲ್ಲಿ ಸೂಕ್ತಸ್ಥಳದಲ್ಲಿ ಮಾಡಬೇಕು. ಮುಖ್ಯವಾಗಿ ಸೂಕ್ತಕಾಲ, ಸ್ಥಳಾಭಾವ, ಮನೆಯಲ್ಲಿ ಉಪನಯನ ಮಾಡುವ ಸಾಧ್ಯಾಸಾಧ್ಯಗಳ ಕುರಿತು ಋತ್ವಿಕ್‍ವಾಣಿ ವಿದ್ವತ್ ಸಭೆಯ ಚರ್ಚೆಯ ವರಧಿ ಇದಾಗಿರುತ್ತದೆ. ಆ ವಿಚಾರವಾಗಿ ಶೃತಿಸ್ಮೃತಿಗಳು ಏನು ಹೇಳುತ್ತವೆ, ಧರ್ಮಶಾಸ್ತ್ರಗಳು ಏನು ಹೇಳುತ್ತವೆ ಎಂಬ ವಿಚಾರವಾಗಿ ಲಭ್ಯ ಗ್ರಂಥಾಧಾರಗಳಿಂದ ಸ್ಪಷ್ಟೀಕರಣ ಕೊಡಲು ಇಚ್ಛಿಸುತ್ತೇವೆ. ಇದಕ್ಕೆ ಆಧರಿಸಲ್ಪಟ್ಟ ಗ್ರಂಥಗಳ ವಿವರ ಹೀಗಿರುತ್ತದೆ:
೧. ಮನು
೨. ವಿಷ್ಣುಧರ್ಮೋತ್ತರ
೩. ಅಪರಾರ್ಕವೃತ್ತಶಾಕಾದಪ
೪. ಪರಧತ್ತ
೫. ಗೌತಮ
೬. ಆಪಸ್ತಂಭ
೭. ಆಶ್ವಲಾಯನ
೮. ಗರ್ಗ
೯. ವೃತ್ತಶತ ಕರ್ತುವಾದ ಆನಂದ ವಸಿಷ್ಟ
೧೦. ಮದನ ರತ್ನ ಕರ್ತುವಾದ ನಾರದ
೧೧. ಬೃಹಸ್ಪತಿ ಪ್ರೋಕ್ತ ಪಾರಿಜಾತ
೧೨. ರಾಜಮಾರ್ತಾಂಡ
೧೩. ವೃದ್ಧ ಗಾರ್ಗ್ಯ ಪ್ರೋಕ್ತ ಕಾಲಾದರ್ಶ
೧೪. ಮೈತ್ರೇಯಿ ಸೂತ್ರ
೧೫. ಸುದರ್ಶನ ಭಷ್ಯ
೧೬. ಜ್ಯೋತಿರ್ನಿಬಂಧ
೧೭. ಧನುರ್ವಿಧ್ಯಾ ದೀಪಿಕ

ಅಲ್ಲದೇ ಇನ್ನೂ ಹಲವಾರು ಪುರಾತನ ಪ್ರಕಟಣಾ ಗ್ರಂಥಗಳು ಹೇಳಿದ ಮುಖ್ಯ ಸಮಾನಭಿಪ್ರಾಯಿಕ ಅಥವಾ ಭಾವಾಭಿಪ್ರಾಯ ವಿಚಾರಗಳನ್ನು ಇಲ್ಲಿ ಮಂಡಿಸಲು ಇಚ್ಛಿಸುತ್ತೇವೆ. ಇದು ಚಾಲ್ತಿಯಲ್ಲಿರಬಹುದು ಅಥವಾ ಸುಪ್ತವಾಗಿರಬಹುದು. ಅವುಗಳಲ್ಲಿ ಮುಖ್ಯವಾದ ಗೌಣ ಸೂತ್ರವನ್ನು ಗಮನಿಸಬೇಕೇ ವಿನಃ ವಾಕ್ಯಾರ್ಥಗಳಲ್ಲ! ಹಾಗೆ ನೋಡಿದಾಗ ಉಪನಯನಕ್ಕೆ ಎಲ್ಲರ ಅಭಿಮತವೂ ಒಂದು ರೀತಿಯಲ್ಲಿ ಒಮ್ಮತವಿರುವುದು ಕಂಡುಬರುತ್ತದೆ. ಅದರಂತೆ ಗರ್ಭಾಷ್ಟಮ, ಅಷ್ಟಮ, ಪಂಚಮ, ಸಪ್ತಮ ಈ ಕಾಲಗಳು ತುಂಬ ಸೂಕ್ತ ಎಂದೇ ಅಭಿಪ್ರಾಯವಾಗುತ್ತದೆ.

ಗರ್ಭಾಷ್ಟಮೈಷ್ಟಮೇ ವಾಬ್ದೇ ಪಂಚಮೇ ಸಪ್ತಮೇ ಪಿವ
ದ್ವಿಜತ್ವಂ ಪ್ರಾಪ್ನುಯಾದ್ವಿಪ್ರೇ ವರ್ಷೇತ್ವೇಕಾದಶೇನೃಪಃ ||

ಎಂಬಂತೆ ಗ್ರಂಥಾಂತರಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರಬಹುದು. ಆದರೆ ಅವೆಲ್ಲವೂ ಪುರಾಕೃತವೆಂದೇ ಅಥವಾ ಶೃತ್ಯುಕ್ತ ವಚನವೆಂದೇ ಧೃಡೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಹಲವಾರು ಗ್ರಂಥಗಳ ಸಾಭಿಪ್ರಾಯ ಅಥವಾ ಏಕಾಭಿಪ್ರಾಯ ಇರುವಂತಾದ್ದನ್ನೇ ಸೂಕ್ತ ಮತ್ತು ಅನುಕರಣೀಯವೆಂದು ಕಂಡುಬರುತ್ತದೆ. ಆತ್ರೇಯ ತತ್ವ ಎಂಬ ಬಹು ಪ್ರಾಚೀನವಾದ ಸೂತ್ರಗ್ರಂಥವೊಂದು ಸೂತ್ರಭೇದವಿಲ್ಲದೇನೆ ಎಲ್ಲರೂ ಸಮಾನವಾಗಿ ಸ್ವೀಕರಿಸಬೇಕಾದ ಕೆಲವು ಮಾನವೀಯ ನಿಬಂಧನೆಗಳು, ಮನುಷ್ಯನ ಆಧ್ಯಾತ್ಮಿಕ, ದೈವೀಕ ಮತ್ತು ಭೌತಿಕ ಉನ್ನತಿಗಾಗಿ ಬರೆದಿಟ್ಟಿದ್ದು ಕಂಡುಬರುತ್ತದೆ. ಉಳಿದ ಸೂತ್ರಗಳೆಲ್ಲಾ ಅದರ ನಂತರದ್ದಾಗಿಯೂ ಒಂದು ರೀತಿಯಲ್ಲಿ ಆ ಗ್ರಂಥಕ್ಕೆ ಅವಿನಾಭಾವ ಸಂಬಂಧ ಹೊಂದಿರುವುದನ್ನು ಕಾಣಬಹುದು. ಆದ್ದರಿಂದ ಸರ್ವಮಾನ್ಯವಾದ ಮಾನವೀಯ ಬದುಕಿನ ಮೂಲೋದ್ದೇಶವಾದ ವಿಧ್ಯಾರ್ಥಿ ಜೀವನಕ್ಕೆ ಕಾಲಿಡಲು ೫ನೇ ವರ್ಷವೇ ಸೂಕ್ತವಾದರೂ ೧೧ ವರ್ಷದವರೆಗೆ ಎಲ್ಲಾ ವರ್ಷಗಳು ಅತ್ಯುಪಯುಕ್ತವಾಗಿರುತ್ತದೆ. ಆ ಕಾಲದಲ್ಲಿ ಉಪನಯನ ಮಾಡುವ ಕರ್ತವ್ಯವನ್ನು ತಂದೆಯು ನಿರ್ವಹಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ತಪ್ಪಾಗುತ್ತದೆ ಎಂದು ಸಭೆಯ ಮತ್ತು ಧರ್ಮಶಾಸ್ತ್ರಗಳ ಅಭಿಪ್ರಾಯವಾಗಿರುತ್ತದೆ.

ಇನ್ನು ಉಪನಯನ ಪ್ರಕ್ರಿಯೆ ವಿಚಾರದಲ್ಲಿ ಹೇಳುವುದಾದರೆ ಒಬ್ಬ ಮನುಷ್ಯನಿಗೆ ವಿಧ್ಯಾರ್ಥಿಯಾಗಿ ಜ್ಞಾನವೃದ್ಧಿ ಮಾಡಿಕೊಳ್ಳಬೇಕೆಂಬ ವಿಶೇಷ ಆಕಾಂಕ್ಷೆಗಳನ್ನು ಹುಟ್ಟಿಸುವುದೇ ಈ ಉಪನಯನ ಕರ್ಮದ ಮೂಲೋದ್ದೇಶ ಆಗಿರುತ್ತದೆ. ಪ್ರಪಂಚದಲ್ಲಿ ಮಖ್ಯವಾಗಿರುವ ಅಗ್ನಿವಿಧ್ಯೆ ಮತ್ತು ಮೃತ್ಯುವಿಧ್ಯೆ ಎಂಬ ಎರಡು ಪ್ರಾಕಾರಗಳಿರುವುದು ಸರ್ವವಿದಿತ. ಮೃತ್ಯುವಿಧ್ಯೆಯಲ್ಲಿ ಸೃಷ್ಟಿವಿಚಾರ, ರಕ್ಷಣಾತತ್ವ, ಅಭಿಚಾರಿಕಾದಿ ತತ್ವಗಳು, ಶಕ್ತಿ ಮತ್ತು ಶಕ್ತಿಯ ಬಳಕೆ, ಜನ್ಮಾಂತರ ವಿಚಾರಗಳು, ಆತ್ಮ-ಪರಮಾತ್ಮ ವಿಚಾರಗಳು ಹೇಗೆ ಅರಿಯಬಹುದೋ, ಅದರಂತೆಯೇ ಅಗ್ನಿವಿಧ್ಯೆಯೂ ಮಾನವನಿಗೆ ಜ್ಞಾನವನ್ನು, ಜೀವನಧರ್ಮವನ್ನು, ಶ್ರೌತಾದಿ ಚತುರ್ದಶ ತಾತ್ವಿಕ ವಿಜ್ಞಾನವನ್ನು ಅಲ್ಲದೆ ಚತುರ್ದಶ ವಿಧ್ಯೆಯನ್ನು, ಚತುಃಷಷ್ಠಿ ಕಲೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ಒಂದು ಉತ್ತಮ ವಿಧ್ಯಾ ಪ್ರಾಕಾರವಾಗಿರುತ್ತದೆ.

ಆ ಅಗ್ನಿವಿಧ್ಯೆಯನ್ನು ವಿದ್ಯುಕ್ತವಾಗಿ ಸಂಸ್ಕಾರಪೂರ್ವಕವಾಗಿ ಕೊಡುವುದರ ಸಂಕೇತವಾಗಿ ಮೇಧಾನಾಮಕ ಅಧಿಷ್ಠಾನ ದೇವತೆಯ ಪೂಜೆಯೊಂದಿಗೆ ವಿಧ್ಯಾರ್ಜನೆಯಲ್ಲಿ ಹೆಚ್ಚಿನ ಶ್ರದ್ಧೆ ಹುಟ್ಟಲಿ, ತಾನು ವಿಧ್ಯಾರ್ಥಿಯಾಗಬೇಕೆಂಬ ಅತೀವ ಆಕಾಂಕ್ಷೆ ಹುಟ್ಟಲಿ, ಆ ಮಾರ್ಗದಲ್ಲಿಯೇ ತನ್ನ ಬುದ್ಧಿಗೆ ಪ್ರಚೋದನೆ ಸಿಗಲಿ. ಈ ನಿಟ್ಟಿನಲ್ಲಿಯೇ ಗಾಯತ್ರಿ ಮಂತ್ರದ ಉಪದೇಶವು ವಟುವಿಗೆ ಅಲ್ಲಿ ಸಿಗುತ್ತದೆ. ವಟುವಾಗಲು ಸ್ತ್ರೀಪುರುಷ, ಜಾತಿ-ಮತ-ಪಂಥ-ಸಿದ್ಧಾಂತ, ಭೇದವಿಲ್ಲ. ಉಪನಯನವು ಸರ್ವರಿಗೂ ಅವಶ್ಯಕವಾದ ಸಂಸ್ಕಾರವಾಗಿದೆ. ಗಾಯತ್ರಿಯ ಉಪದೇಶದಿಂದ ವಟುವಿಗೆ ವಿಧ್ಯಾರ್ಥಿಯಾಗಬೇಕೆಂಬ ಅತೀವ ಆಕಾಂಕ್ಷೆಯೊಂದು ಹುಟ್ಟುತ್ತದೆಯೇ ವಿನಃ ಆತನು ವಿಧ್ಯಾವಂತನಾಗುತ್ತಾನೆ ಎಂದಲ್ಲ. ಸತತ ಪರಿಶ್ರಮದಿಂದ ಸಕಲ ಶಾಸ್ತ್ರಾಧ್ಯಯನ ಮಾಡಿದಾಗಲೂ ಪರಿಪೂರ್ಣನಾಗಲಾರ. ದೇಶಸಂಚಾರ, ಕಲಿತ ವಿಧ್ಯೆಯ ಪ್ರಾಯೋಗಿಕ ಉಪಯೋಗ. ತತ್ಸಂಬಂಧವಾಗಿ ಜನತಾ ಜನಾರ್ಧನ ಸೇವೆ ಮಾಡಿಕೊಳ್ಳುವುದರ ಮುಖೇನ ಸತ್ಯ, ಜ್ಞಾನ, ಧರ್ಮ, ದಯಾ, ಶಾಂತಿ, ಕ್ಷಮೆಗಳಿಂದ ಷಡ್ಗುಣಗಳನ್ನು ಮೈಗೂಡಿಸಿಕೊಂಡಲ್ಲಿ ಅವನು ವಿಧ್ಯಾವಂತನಾಗುತ್ತಾನೆ ಎಂದು ಶೃತಿ ಸ್ಮೃತಿಗಳೆಲ್ಲಾ ಸಾರಿ ಹೇಳುತ್ತದೆ. “ವಿಧ್ಯಾ ದಧಾತಿ ವಿನಯಂ” – ವಿನಯ ಸಹಿತವಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು ಯಾರು ತಾನು ಕಲಿತ ವಿಧ್ಯೆಯಿಂದ ಪರೋಪಕಾರಿಯಾಗಿ ಜೀವಿಸುತ್ತಾನೋ ಅವನೇ ನಿಜವಾದ ವಿಧ್ಯಾವಂತ ಎಂದು ಘೋಷಿಸಬಹುದು.

ಆದ್ದರಿಂದ ತಂದೆಯಾದವನ ಮುಖ್ಯ ಕರ್ತವ್ಯವೆಂದರೆ ಯಾವುದೇ ಆಡಂಬರವಿಲ್ಲದೆ ಸೂಕ್ಷ್ಮವಾಗಿಯಾದರೂ ಶಾಸ್ತ್ರೀಯ ರೀತಿಯಲ್ಲಿ ತನ್ನ ಮಕ್ಕಳಿಗೆ ಅಗ್ನಿವಿಧ್ಯಾ ಪ್ರಧಾನ ಮಾಡುವ ಉದ್ದೇಶದಿಂದ ಸಕಲ ಜ್ಞಾನಾಕಾಂಕ್ಷೆಯನ್ನು ಹುಟ್ಟಿಸತಕ್ಕ ಗಾಯತ್ರಿ ಉಪದೇಶವನ್ನು ಮಾಡಿ ಸತ್ಪ್ರಜೆಗಳಾಗಿ ರೂಪಿಸಿ ದೇಶಕ್ಕೆ ಸಮರ್ಪಿಸಿ ಕೃತಕೃತ್ಯರಾಗಿ ಎಂದು ಹಾರೈಸುತ್ತೇನೆ. ಇಲ್ಲವಾದಲ್ಲಿ ಸೂಕ್ತ ವಿಧ್ಯಾಭ್ಯಾಸವಿಲ್ಲದ ಒಬ್ಬ ಮನುಷ್ಯನು “ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ” ಎಂಬಂತೆ ಸರಿಯಾದ ಮಾರ್ಗದರ್ಶನವಿಲ್ಲದೆ, ಉಪಯುಕ್ತ ವಿಧ್ಯಾಭ್ಯಾಸವಿಲ್ಲದೆ, ಉತ್ತಮ ಸಂಸ್ಕಾರವಿಲ್ಲದೆ ದುಷ್ಟ ಸಹವಾಸವನ್ನು ಹೊಂದಿ ಮನುಷ್ಯನೊಬ್ಬನು ಬೆಳೆದಲ್ಲಿ ಹಿಂದೆ ಸೂಕ್ತಿಯಲ್ಲಿ ತಿಳಿಸಿದಂತೆ ಸಾಕ್ಷರಾ ಎಂಬ ಶಬ್ದವು ಹಿಂದುಮುಂದಾಗಿ ಓದಲ್ಪಟ್ಟು ರಾಕ್ಷಸಾ ಆಗಲು ಸಾಧ್ಯ! ಹಾಗಾಗದಂತೆ ನಿಮ್ಮದ್ದಾದಂತಹಾ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ಲೋಕಕ್ಕೆ ಉತ್ತಮ ಪ್ರಜೆಯನ್ನು ಒದಗಿಸುವ ಕಂಕಣಬದ್ಧರಾಗಿ ಎಂದು ಇನ್ನೊಮ್ಮೆ ಹಾರೈಸುತ್ತಾ ಈ ಪುರಾಣ ಶಾಸ್ತ್ರ ಗ್ರಂಥಗಳು ವೇದ ಸ್ಮೃತಿಗಳು ಕುಲಾಚಾರಗಳು ನಿಮಗೆ ಆಯುರಾರೋಗ್ಯ ಮಂಗಳವನ್ನು ಉಂಟುಮಾಡಲಿ ಎಂದು ಆ ವೇದ ಪುರುಷನಲ್ಲಿ ಪ್ರಾರ್ಥಿಸುತ್ತೇನೆ.

Friday, 25 October 2013

ಸಂಧ್ಯಾವಂದನೆ ಮತ್ತು ಸಂಧ್ಯೋಪಾಸನೆ


ಸಂಧ್ಯಾವಂದನೆ ಮತ್ತು ಸಂಧ್ಯೋಪಾಸನೆಗಳೆರಡೂ ಬೇರೆ ಬೇರೆ ಅರ್ಥವನ್ನು ಕೊಡತಕ್ಕ ಎರಡು ವಿಧಗಳು. ಇವುಗಳ ವ್ಯತ್ಯಾಸವನ್ನು ಈ ಲೇಖನದಲ್ಲಿ ಮಂಡಿಸುತ್ತೇವೆ. 

ಸಂಧ್ಯಾವಂದನೆ ಎಂಬ ಆಚರಣೆಯು ಮನುಷ್ಯನ ಮನೋ ವಿಕಾಸ, ಮಾನವೀಯ ಧರ್ಮ ಸಹಿಷ್ಣುತೆ ರೂಢಿಸಿಕೊಳ್ಳುವ ಮತ್ತು ಬಳಸುವ ಒಂದು ಅಗತ್ಯ ಕರ್ತವ್ಯವಾಗಿದೆ. ಮನುಷ್ಯ ಸೃಷ್ಟಿಯಾದ್ದಾಗಿನಿಂದಲೂ ಇದಕ್ಕೆ ಮೂಲ ಸ್ಥಾನವಾದ ಮಾತೆಯನ್ನು ಸಹ ಪ್ರಕೃತಿಗೆ ಹೋಲಿಸಿದ್ದಾನೆ. ಆ ಮಾತೆ ಇರುವುದು ಸಹ ಈ ನಿಸರ್ಗದಲ್ಲಿ. ಮಾನವನು ಹುಟ್ಟಿದ ಮೇಲೆ ಪ್ರಕೃತಿಯನ್ನು ಅವಲಂಬಿಸಿಕೊಂಡು ಬೆಳೆದು, ತನ್ನ ಉಪಯೋಗಕ್ಕೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾ ಬಂದನು. ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ತಾನು ಅನುಭವಿಸಿ ವಿಶೇಷವಾಗಿ ಅದನ್ನು ವಾಣಿಜ್ಯವಾಗಿ ಉಪಯೋಗಿಸಿಕೊಂಡು ಬಂದನು. ಮಾನಸಿಕ ನೆಮ್ಮದಿಯನ್ನೂ ಅದರಿಂದಲೇ ಸಾಧಿಸಿದನು. ಅದರಿಂದಲೇ ಹೆಚ್ಚು ವ್ಯವಹಾರ ನಡೆಸುವವನು, ಅದನ್ನೇ ಆವರಿಸಿಕೊಂಡನು. ಆದ್ದರಿಂದ ಮೂಲ ವಸ್ತು ರೂಪದಲ್ಲಿ ಅಥವಾ ನಗದು ರೀತಿಯಲ್ಲಿ ಪರರಿಗೆ ಸಹಕಾರಿಯಾಗಿ ತಾನು ಉನ್ನತ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಇವಿಷ್ಟನ್ನೂ ಪ್ರಕೃತಿಯಿಂದ ಪಡೆದು ಅದಕ್ಕೆ ಸಹಜವಾದ ಮನವೀಯ ಧರ್ಮ ರೀತ್ಯಾ ಕೃತಜ್ಞತೆ ಸಲ್ಲಿಸಬಕಾಗಿರುವುದು ಕರ್ತವ್ಯವಾಗಿರುತ್ತದೆ. ಅದರಂತೆ ಸಂಧ್ಯಾವಂದನೆಯಲ್ಲಿಆದಿತ್ಯಾನ್ ದ್ಯಾವಾ ಪೃಥಿವೀ ಆಪಃ ಸ್ವಹಾಎಂಬಂತೆ ಪಂಚಭೂತಗಳನ್ನು ಸ್ಮರಿಸಿ ಕೃತಜ್ಞತಾ ಸಮರ್ಪಣೆಯೇ ಸಂಧ್ಯಾವಂದನೆ ಆಗಿರುತ್ತದೆ. ಇದು ಮಾನವನ ಆದ್ಯ ಕರ್ತವ್ಯವಾಗಿರುತ್ತದೆ.

ಸಂಧ್ಯೋಪಾಸನೆಯು ಆಯಾಯ ಕಾಲಕ್ಕೆ ತಕ್ಕ ಆಯಾಯ ಗುಣಾತ್ಮಕ ಶಕ್ತಿಯನ್ನು ಸಂಧಿಸುವ ಅಷ್ಟವಿಧ ಭಕ್ತಿಗಳಲ್ಲಿ ಮುಖ್ಯವಾಗಿರುವಲ್ಲಿ ಉಪಾಸನೆಯೂ ಒಂದು. ಇದು ಬೇರೆ ಅರ್ಥವನ್ನು ಕೊಡತಕ್ಕ ಉಪಾಸನಾ ಉದ್ದೇಶದ ಒಂದು ಉಪಾಯ ಅಥವಾ ತಂತ್ರ ಎಂದು ಹೇಳಬಹುದು. ಆ ಗುಣಾತ್ಮಕ ಶಕ್ತಿಯ ಸೂತ್ರವನ್ನು ಅಭ್ಯಸಿಸುವ ಉದ್ದೇಶದಿಂದ ಮಾಡುವ ಸಾಧನೆಯೇ ಸಂಧ್ಯೋಪಾಸನೆ. ಯಾವುದೇ ಒಂದು ಶಕ್ತಿ ಮೂಲದ ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ಸತತ ಅಧ್ಯಯನ ಮಾಡುವುದನ್ನು ಕೂಡ ಉಪಾಸನೆ ಎಂದು ಹೇಳಬಹುದು. ಹೀಗಿದ್ದಲ್ಲಿ ಈ ಉಪಾಸನಾ ವಿಧಾನದಿಂದ ಏನು ಸಾಧಿಸಬಹುದು? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಉಪಾಸನೆಗಾಗಿ ಯಾವುದೇ ಮಂತ್ರ ಅಥವಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನೇ ಮತ್ತೆ ಮತ್ತೆ ಸತತವಾಗಿ ಮನನ ಮಾಡುವಾದರಿಂದ ಉಂಟಾಗತಕ್ಕ ಜ್ಞಾನಾರ್ಜನೆಯೇ ಲಾಭ. ಆ ಜ್ಞಾನ ಸಮೂಹವೇ ಕೈವಲ್ಯ ಪ್ರಾಪ್ತಿಯ ದಾರಿಯಾಗುತ್ತದೆ. ಆದ್ದರಿಂದ ಜ್ಞಾನಾಕಾಂಕ್ಷಿಯಾದ ಪ್ರತಿಯೊಬ್ಬನೂ ತನ್ನ ಜೀವನದಲ್ಲಿ ಯಾವುದಾದರೊಂದು ಉಪಾಸನೆ ಮಾಡುವುದು ಉತ್ತಮ. 

ಉದಾ:- ಸಹಜವಾಗಿ ಉಪವೀತ ವಟುವಿಗೆ ಉಪನಯನ ಕಾಲದಲ್ಲಿ, ಗಾಯತ್ರಿ, ಅಷ್ಟಾಕ್ಷರೀ, ಪಂಚಾಕ್ಷರೀ, ದ್ವಾದಶಾಕ್ಷರೀ ಇತ್ಯಾದಿ ಉಪದೇಶವು ಪ್ರಾದೇಶ ಮಾತ್ರದಿಂದ ಲಭ್ಯವಿರುವುದು ಸರಿಯಷ್ಟೆ. ಇವೆಲ್ಲಾ ನಾದೋಪಾಸನಾ ತಂತ್ರ ಆಗಿರುತ್ತದೆ. ನಾದದಿಂದ ಆನಂದವನ್ನು ಸಾಧಿಸಬಹುದು. ಉಪಾಸನೆಯಿಂದ ಮಾರ್ಗವನ್ನು ಕಂಡುಹಿಡಿದು ಬ್ರಹ್ಮಾನಂದವೆಂಬ ಕೈವಲ್ಯ ಸ್ಥಾನ ಹೊಂದಬಹುದು. ಬ್ರಹ್ಮಜ್ಞಾನವನ್ನು ಹೊಂದುವ ಮಾರ್ಗದಲ್ಲಿ ಅತೀ ಸೂಕ್ತ ಮತ್ತು ಉಪಯುಕ್ತ ಮಾರ್ಗವಿದಾಗಿರುತ್ತದೆ. ಆದ್ದರಿಂದ ಯಾವುದೇ ಒಂದು ವಿಷಯದ ಬಗ್ಗೆ ಅತೀ ವಿಶದವಾಗಿ ಅಧ್ಯಯನ ಮಾಡುವುದಕ್ಕೆ ಅತೀ ಸೂಕ್ತವಾದ ಉಪಾಯವೇ ಉಪಾಸನೆ. ಅದು ತ್ರಿಕಾಲದಲ್ಲಿಯೂ ಮಾಡಿದಲ್ಲಿ ಸೂಕ್ತ ಎಂದು ಹೇಳತ್ತಾ ಸಂಧ್ಯಾವಂದನೆಯು ಒಂದು ಕೃತಜ್ಞತಾ ಸಮರ್ಪಣೆಯಾದರೆ, ಸಂಧ್ಯೋಪಾಸನೆಯು ಜ್ಞಾನ ಸಂಗ್ರಹ ಮಾರ್ಗವಾಗಿರುತ್ತದೆ.

Wednesday, 23 October 2013

Every place is India; all are Indians in this Earth!!

  कृण्वंतो विश्वमार्यम् ॥

Rushis have traveled all over the world, even out of Earth, Solar System & also galaxy!! Vedas never put a border between places. Its the next level Saptaanga Yukta Raajyaanaga Vyavasthaa which has Raajya, Kosha, Gadi, Prajaa for its rule. All the Prajaa's are equal, there is no distinction between them when they are considered as Prajaa. When it comes to administration, the Varna vyavasthaa which is division of duties for oneness of the Desha. In the Chakravarti vyavasthaa, he is the owner of whole Earth. There is no region in the world which is not covered by our Rushis. So by leaving narrow mindedness if we envision the Earth, every country comes under Vishaala Bhaarata!!

What is Russia? It is the region where some Rushi Gana did their Samshodhanaas.
What is Australia? Its our "Astraalaya" which was reserved for warfare practices, mainly Astra Siddhi & its prayoga, which is prohibited in core regions of Bharata Bhoomi.
What is Somalia? Its our "Somaalaya" for the Samshodhana of Soma.
What is Jambhu-Dweepa? Asia + Europe
What is South-America? Pushkara-Dweepa
What is Antartica? Yama-Dweepa
What is Meru? Lots of explanation is there for this. Even local map references of each major country have been called Meru. E.g., Search places near Tanzania, Malaysia, Western Australia, Bangkok, China, Peru, etc.,

Like this, every country is based on some civilizations started by our own Rushis. There is no limits to "Saadhana"!! If one properly understands the scientific imporatnce of "Sandhyaavandana", he/she will realize that there is no place or time limit for it. It is the Adhyayana of Kaala + Prakruti vyavahaara. A Saadhaka may divide any number of Sandhyaa kaalaas for his studies. If one wants to achieve something from Sandhyaavandana, don't leave it if you are in any country, may be in sky, in water, in fire!!

Discussion of Sandhyavandana with respect to Dharmashaastra comes in the next level, where Raajyaanga Vyavastha required to utilize the Energy of Sandhyavandana performed by each individual. Even a Kshatriya, who may be residing in deep waters for the protection of country can do Sandhyaavandana. It gives him proper knowledge of Jala vyavahaara (Prakruti).

Rushis who have explored all the regions in the Earth, never bypass their Sandhya giving silly reasons. Tons of archaeological proofs are available now to say that Murthy Pooja was present in almost all the places. So there is no restriction to any kind of Devataa Pooja in any Desha.

Some people say that Agni-Vidhyaa cannot be practiced in abroad. But I found no proper reasons for that assertion. Take for example Zoroastrians, It is the remaining of people who were the followers of Aatreya Rushis (among 3 lakh crore Aatreya Gana) who practiced the Agni-Vidhyaa in those regions to win the aging. Zorastra is formed due the practice of Agni Vidhya called "Jaraa-Tushta" which satisfies the aging factors to remain young forever. It may not be possible without Sandhyavandana, Agni kaaraya, Deva pooja in its roots.

Aatma-Vidhyaa was practiced by our Rushis in Egypt. Its their Tantra-Bala by which they built the Pyramids for their Saadhana.

Ati-Maanusha Vidhyaa & Vidhyaas which may cause adverse effects have been restricted from the Vibhajikruta Bharata Bhumi. So it was important for Saadhakaas to explore region suitable for their Saadhana.

None of the original Dharmashaastra Granthaas restrict a person to do his Pitru Kaarya in any Desha he is residing!! No authority can restrict anything related to one's own Pitru Kaarya. If any person or Shaastra restricts the performance of Shraadhaadi Prakriyaas, it is Khandaneeya according to Uttara Meemaamsa. That kind of restrictions are injected later. The reasons are several; may be improper understanding or foreign invasion.

When ever Rushis went to Samshodhana to any other region, the disciples also used to follow them with all their family, property, cows, grains, etc., It will take several thousands of years for those Rushis to succeed in their Saadhana. Their longevity will be enormous due to Siddhis, but followers may not live longer. But they continue the Satprajaa vruddhi. Those immigrants become local citizens after several generations. Usually Rushis continue their Saadhana silently and may relocate to other region or come back to Bhaarata. But the followers who have settled there will be hardly knowing about their forefathers & the discipleship for Rushis. But they will follow the Siddhhaanta of their ancestors.

The rule of Prakruti is to become "Ksheena". So they will forget their Moola-Uddesha and divisions start among them due to Abhipraaya-Bheda. To resolve those ambiguities, it requires Purottariya Meemaamsa which was mastered only by Rushis. So these citizens will be in Andhakaara & some pravaadi will come to show path to them. Pick the Samshodhaana of Aatreya Gana & formulate it as Islam. In India, we used to ask proof for everything. So Khuron was made as Aadhaara Grantha. It has Tantra-Khaanda, Karma-Khaanda, but there is no Jnaana-Khaanda in it. So the originator knew that it won't withstand for long, so he announced that it will perish within around 1200 years. Now also known person can see the remains of Aatreya-Tantra-Khaanda in Khuron.

Similar is the case for Bible which was formulated by seeing the structure of Bhagavadgeeta. Any Darshanakaara like Prophet Muhammed or Christ came to India to get Anumodana from Saptarshi Parishat & Vyaasji.

So every place & person is influenced by Bhaaratiya Rushis in one or the other manner. We should be happy to see that every country in this world is being occupied by Indians. Lets hope whole world will become one India. That's real Raama Raajya without any borders.

"Let the noble thoughts spread across the Universe"

Monday, 21 October 2013

ವೈಧಿಕ ಭೌತಶಾಸ್ತ್ರೋಕ್ತ ಮಳೆಯ ಚಕ್ರ


 • ಸೂರ್ಯನಿಂದ ಕಿರಣಗಳು ಮಾತ್ರ ಬರುತ್ತವೆ ವಿನಃ ಶಾಖ ಬರುವುದಿಲ್ಲ. ಸೂರ್ಯನಿಂದ ಶಾಖ ಉಂಟಾಗುತ್ತದೆ ಎನ್ನವುದು ಪ್ರಕೃತಿಯಲ್ಲೇ ಉಂಟಾಗಿರುವ ಭಾಸ ಪರಿಣಾಮ.
 • ಬ್ರಾಹ್ಮ್ಯೋದಯ ಕಾಲದಿಂದ ಆರಂಭಿಸಿ ಸಂಜೆಯವರೆಗೆ ಭೂಗರ್ಭದಿಂದ ಮೇಲಕ್ಕೆ ಶಾಖ ಪ್ರಸರಿಸಲ್ಪಡುತ್ತದೆ. ಅದು ತನ್ನ ಅಂತ್ಯ ಕ್ಷೇತ್ರದವರೆಗೆ ಪ್ರಸರಿಸಿ ಅಲ್ಲಿಂತ ಪ್ರತಿಫಲಿತವಾಗಿ ಭೂಮಿಗೆ ಶಾಖ ಲಭಿಸುತ್ತದೆ. ಸಂಜೆಯಿಂದ ಬೆಳಗ್ಗೆವರೆಗೆ ಶಾಖ ಬಿಂದುಗಳು ಶೈತ್ಯವಾಗಿ ಕೆಳಗೆ ಪ್ರಸರಿಸಲ್ಪಡುತ್ತಿರುತ್ತವೆ. ಈ ಶಾಖ-ಶೈತ್ಯ ವ್ಯವಹಾರವೇ ಭೂಪ್ರಕೃತಿ ಸ್ಥಿರತೆಗೆ ಕಾರಣವೆಂಬುದು ವೈಧಿಕ ಭೌತಶಾಸ್ತ್ರ ಉದ್ಘಾಟಿಸುವ ಕಠೋರ ಸತ್ಯ!!
 • ಮೋಡಗಳು ಸ್ಥಿರ.

 • ಆ ಬಿಂದುವಿಗೆ ಭೂಮಿಯು ಚಲಿಸಿದಾಗ ಮಳೆ ಬರುತ್ತದೆ.
 • ಭೂಮಿಯು ಮೋಡವಿಲ್ಲದ ಪ್ರದೇಶಕ್ಕೆ ಚಲಿಸಿದಾಗ ಆ ಪ್ರದೇಶದಲ್ಲಿ ಮಳೆ ಬರುವುದಿಲ್ಲ.
 • ಮೋಡಕ್ಕೆ ತನ್ನದೇ ಆದ ಕಕ್ಷವಿದೆ.
 • ಮೋಡ ಒಂದೇ ಕಡೆ ನಿಂತಿದೆ ಎನ್ನುವುದು ಸತ್ಯ.
 • ಗಾಳಿಯಿಂದಲೇ ಮೋಡ ಚಲಿಸುತ್ತವೆ ಎನ್ನುವುದು ನಮಗೆ ಉಂಟಾಗುವ ಭಾಸ.
 • ಆದರೆ ಆ ಸಮಯದಲ್ಲಿ ನಮಗೆ ಉಂಟಾಗುವುದು ಭೂಮಿಯ ಚಲನೆಯ ಅನುಭವ.
 • ಶಾಖವು ಎಲ್ಲಿ ಹೆಚ್ಚಿರುತ್ತದೋ ಅಲ್ಲಿಂದ ನೀರು ಆವಿಯಾಗಿ ಮೋಡ ಶೇಖರಣೆಯಾಗುತ್ತದೆ.
 • ಭೂಮಿಯ ಶೈತ್ಯಾಕರ್ಷಣ ಬಿಂದುವು ಮೋಡಗಳ ಸಂಗ್ರಹ ಪ್ರದೇಶಕ್ಕೆ ಬಂದಾಗ ಕೆಳಗೆ ಸೆಳೆತ ಉಂಟಾಗುತ್ತದೆ. ಆಗ ಉಂಟಾಗುವ ಋಣಾಂಶಗಳ (ಎಲೆಕ್ಟ್ರಾನ್‍ಗಳ) ಹರಿಯುವಿಕೆಯಿಂದ ಘರ್ಷಣೆ ಉಂಟಾಗಿ ಮಳೆ ಬರುತ್ತದೆ.
 • ಒಂದು ಜಾಗದಲ್ಲಿ ಹಿಂದಿನಿಂದ ಮಳೆ ವಿಫುಲವಾಗಿದ್ದು ಈಗ ಕಡಿಮೆಯಾಗಿದೆ ಎಂದರೆ ಅಲ್ಲಿ ಶಾಖದ ಸಂಗ್ರಹ ಹೆಚ್ಚಾಗುತ್ತಿದೆ ಎಂದರ್ಥ.
 • ಕಾಡು ಹೆಚ್ಚಿದ್ದಲ್ಲಿ ಮಳೆ ಹೆಚ್ಚು ಎನ್ನುವುದು ಇದೇ ಆಧಾರದಲ್ಲಿ.
 • ಕಾಡು ಹೆಚ್ಚಿದ್ದರೆ ಶೈತ್ಯಾಕರ್ಷಣ ಬಿಂದುವು ಹೆಚ್ಚುತ್ತದೆ. ಹಾಗಾಗಿ ಕಾಡು ಬೆಳೆಸಬೇಕು.
 • ಶಾಖದ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಮಣ್ಣು-ಕಲ್ಲುಗಳೆಲ್ಲಾ ಚೈತನ್ಯಭೇದ ಹೊಂದಿ ಮರಳಾಗಿ ಪರಿವರ್ತಿತವಾಗುತ್ತದೆ.
 • ಶಾಖ ಹೆಚ್ಚಿದಾಗ ನೀರು ಆವಿಯಾಗಿ ತನ್ನ ಕೋನದಲ್ಲಿ ಚಲಿಸಿ ಶೈತ್ಯಾಕರ್ಷಣ ಬಿಂದುವಿರುವ ಕಡೆಗೆ ಹೋಗಿ ಸಂಗ್ರಹವಾಗುತ್ತದೆ.
 • ಸಂಗ್ರಹವಾಗುವ ಬಿಂದು ವ್ಯತ್ಯಾಸವಾಗುತ್ತಿರುತ್ತದೆ.
 • ಭೂಗರ್ಭದಿಂದ ಹೆಚ್ಚಿನ ಶಾಖವು ಭೂಮಧ್ಯ ರೇಖೆಯ ಜಾಗಗಳಲ್ಲಿ ಪ್ರಸರಿಸಲ್ಪಡುತ್ತದೆ.
 • ಅದರ ಪ್ರಮಾಣ ಹೆಚ್ಚದಾಗ ಉತ್ಪಾತಗಳು ಘಟಿಸುತ್ತವೆ.
 • ಹಾಗಾಗಿ ಧ್ರುವ ಪ್ರದೇಶದಲ್ಲಿ ಮಂಜುಗೆಡ್ಡೆ ಕರಗಿ ನೀರಾಗುವ ಸಂಭವ ಬಹಳಾ ಕಡಿಮೆ!
 • ಮೋಡದ ಬಿಂದುವಿಗೂ, ಭೂಮಿಯ ಚಲನೆಗೂ ಸಂಬಂಧವಿಲ್ಲ!
 • ಭೂಮಿಯಲ್ಲಿರುವ ಆ ಬಿಂದುಗಳು ಸಿಕ್ಕಿದಾಗ ಮಾತ್ರ ಸಂಪರ್ಕ ಏರ್ಪಟ್ಟು ಮಳೆಬರುತ್ತದೆ.
 • ದಿನಕ್ಕೆ ನಿರ್ಧಿಷ್ಟ ಪ್ರಮಾಣದ ಮೋಡ ಸಂಗ್ರಹವಾಗುತ್ತದೆ.
 • ಉದಾಹರಣೆಗೆ ವರ್ಷಕ್ಕೆ ೩-೪ ಸೆಂ.ಮೀ. ಮಳೆ ಕಾಣುತ್ತಿದ್ದ ಇಟಲಿ ದೇಶದಲ್ಲಿ ೨೦೦೬ರಲ್ಲಿ ಒಂದೇ ದಿನದಲ್ಲಿ ೪೦೦ ಸೆಂ.ಮೀ ಮಳೆ ಕಂಡಿದೆ. ಹಾಗೇ ಅಮೇರಿಕಾವು ೩೦೦-೪೦೦ ವರ್ಷಗಳಿಂದ ಕಂಡು ಕೇಳರಿಯದ ಮಳೆ ಬಂದಿತ್ತು. ಇದಕ್ಕೆ ಕಾರಣ ಇತರೆ ದೇಶಗಳಿಂದ ಮೋಡ ಸಂಗ್ರಹವಾಗಿ (ಶಾಖ ಹೆಚ್ಚಾದ್ದರಿಂದ) ಬರುವುದು. ಈ ದೇಶಗಳಲ್ಲಿ ಶೈತ್ಯ ಬಿಂದುಗಳು ಹೆಚ್ಚಾಗಿ  ಮಳೆ ಹೆಚ್ಚಾಗುತ್ತದೆ.
 • ಈಗ ವೈಜ್ಞಾನಿಕವಾಗಿ ಮೋಡ ಬಿತ್ತನೆ ಹಾಗೂ ಮೋಡಗಳ ಘರ್ಷಣೆಯ ಪ್ರಯೋಗಗಳು ನಡೆಯುತ್ತಿವೆ.
 • ಇದರಲ್ಲಿ ಒಂದು ರೀತಿಯ ಉಪ್ಪನ್ನು ಬಳಸಲಾಗುತ್ತದೆ.
 • ಸಹಜವಾಗಿ ನೀರು ಮಂಜುಗೆಡ್ಡೆಯಾಗಲು ಹತ್ತಿರ -೪ ಸೆ ಬೇಕಾಗುತ್ತದೆ.
 • ಅದೇ ಉಪ್ಪುನೀರಿಗೆ -೧೧೦ ಸೆ ಅಷ್ಟು ಬೇಕಾಗುತ್ತದೆ.
 • ವಿಶಿಷ್ಟ ರೀತಿಯ ಉಪ್ಪೊಂದು -೨೭೩ ಸೆ”ನಲ್ಲಿ ಮಂಜಾಗುತ್ತದೆ.
 • ಅಂತಹದ್ದನ್ನು ಬಳಸಿ ಮೋಡಗಳ ಮೇಲೆ ಸಿಂಪಡಿಸಿದಾಗ ಅಲ್ಲಿ ಶೈತ್ಯಾಕರ್ಷಣ ಉಂಟಾಗಿ ಕೆಳಗಿನಿಂದ ನೀರು ಆವಿಯಾಗಿ ಈ ಜಾಗಕ್ಕೆ ಸೆಳೆದು ಬಂದು ಸಂಗ್ರಹವಾಗುತ್ತದೆ.
 • ಆಗ ಭೂಮಿಯಲ್ಲಿನ ಕಡಿಮೆ ಶೈತ್ಯಾಂಶ ಸಾಕಾಗುತ್ತದೆ.
 • ಆದರೆ ಇದರಿಂದ ಆಗುವ ಉಪಪರಿಣಾಮಗಳನ್ನು ಚಿಂತಿಸಬೇಕಾಗುತ್ತದೆ. ಅದು ಸಹಜ ಚಕ್ರಕ್ಕೆ ಧಕ್ಕೆಯಾಗದಂತೆ ಇರಬೇಕು.
 • ನೀರಿನ ಒಂದು ಗುಣವೆಂದರೆ ಕಾಯಿಸಿದಾಗಲೂ, ತಣಿಸಿದಾಗಲೂ ಅದು ಹಿಗ್ಗುತ್ತದೆ. ಆದ್ದರಿಂದ ಶೈತ್ಯ ಬಿಂದು ಆಕರ್ಷಿಸುತ್ತದೆ.
 • ಚಂಡಮಾರುತ ಬರುವಾಗ ಅತೀ ವೇಗದಲ್ಲಿ ತಿರುಗುವಾಗ ಅದರ ಮಧ್ಯದಲ್ಲಿ ವಿಪರೀತ ಶೈತ್ಯಾಂಶ ಉಂಟಾಗುತ್ತದೆ. ಅದು ಎಲ್ಲಾ ಮೋಡ ಬಿಂದುಗಳನ್ನ ತನ್ನಲ್ಲಿ ಆಕರ್ಷಿಸಿ ಹೆಚ್ಚು ಹೆಚ್ಚಾಗಿ ಆವಿಯಾಗುವುದನ್ನು ಎಳೆದು ಮಳೆಯಾಗಿ ತಾನು ಹೋದಲ್ಲೆಲ್ಲಾ ಸುರಿಸುತ್ತದೆ. ಅದರ ವ್ಯಾಪ್ತಿ ಬಹಳ ವಿಶಾಲವಾಗಿರುತ್ತದೆ. ಹಾಗಾಗಿ ಎಲ್ಲೋ ಚಂಡಮಾರುತ ಎದ್ದರೆ ಇನ್ನೆಲ್ಲೋ ಮಳೆ ಬರುತ್ತದೆ.
 • ಒಂದು ಬಿಂದುವಿನಲ್ಲಿ ಮೋಡಗಳು ಸಂಗ್ರಹವಾಗುತ್ತಿರುತ್ತವೆ.
 • ಮೊದಲು ಬಂದದ್ದು ಶೈತ್ಯಾಂಶದ ಕಾರಣದಿಂದಾಗಿ ಕಲ್ಲಿನ ಹಾಗೆ ಗಟ್ಟಿಯಾದ ಮಂಜುಗೆಡ್ಡೆಯಾಗುತ್ತವೆ.
 • ಅವುಗಳಿಗೆ ಮುಂದೆ ಬರುವ ಮೃದು ಮೋಡಗಳಲ್ಲಿ ಇರುವ ಶಾಖಾಂಶ ತಗುಲಿದಾಗ ಘರ್ಷಣೆ ಉಂಟಾಗಿ ಗುಡುಗು ಉಂಟಾಗುತ್ತದೆ.
 • ಭೂಮಿಯಲ್ಲಿ ಋಣಾಂಶ (-ve energy) ಇರುವಾ ಜಾಗದ ಸಂಪರ್ಕವು ಅಲ್ಲಿ ಏರ್ಪಟ್ಟರೆ ಆ ಜಾಗಕ್ಕೆ ಸಿಡಿಲು ಹೊಡೆಯುತ್ತದೆ.

 • ಹಾಗಾಗಿ ಕೆಲವು ಸಮಯ ಆಕಾಶದಲ್ಲಿ ಮೋಡ ಕಾಣಲು ಸಿಗದಿದ್ದರೂ, ಮಳೆಯ ಮುನ್ಸೂಚನೆ ಇಲ್ಲದಿದ್ದರೂ ಶಾಖ-ಶೈತ್ಯಕ್ಕೆ ಹೊರತು ಪಡಿಸಿದ ಕಾಂತಕ ಶಕ್ತಿಯ ಋಣಾಂಶ ಭಾಗದ ವ್ಯವಹಾರದಿಂದ ಸಿಡಿಲು ಉಂಟಾಗುತ್ತದೆ.
 • ಭೂಮಿಯ ಗುರುತ್ವಾಕರ್ಷಣ ಶಕ್ತಿಯಿಂದ ನೀರು ಕೆಳಮುಖ ಹರಿಯುವಿಕೆ ಪಡೆದಿರುತ್ತದೆ ಎನ್ನುವ ವಾದವೇ ತಪ್ಪು. ಅದು ಮಾತ್ರವಾಗಿದ್ದರೆ ತಲೆಗೆ ರಕ್ತ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ.
 • ನೀರು ಹರಿಯುತ್ತದೆ ಎನ್ನುವುದು ಸತ್ಯವಾಕ್ಯ. ಆದರೆ ಅದಕ್ಕೆ ಗುರುತ್ವ ಶಕ್ತಿ ಕಾರಣವೆನ್ನುವುದು ಸುಳ್ಳು.
 • ಇದಕ್ಕೆ ಕಾರಣ ಜ್ವಲ ಎನ್ನುವ ಗುಣ. ಇದರ ಹರಿಯುವ ಗುಣದ ಕಾರಣ ಎಲ್ಲಾ ಕಡೆ ಸಮನಾಗಿ ಹರಿಯುತ್ತದೆ. ಅದರ ಸ್ವಭಾವವನ್ನು “ಪ್ರವರ್ತಯತಿ” ಎಂದರು.
 • ಮಳೆಚಕ್ರವನ್ನು ಷಡೃತೂ, ಗ್ರಹ ಗೋಚಾರ ಗಣಿತ, ಕಿರಣ ಪರಿಣಾಮಗಳಿಂದ ಅಭ್ಯಸಿಸಬಹುದು.
 • ಉದಾಹರಣೆಗೆ ವಿಕರ್ಷಣ ಕಿರಣವು ವೃಶ್ಚಿಕ ಕುಜನ ಕ್ಷೇತ್ರಕ್ಕೆ ಬಂದಾಗ ಅತ್ಯುಷ್ಣತೆ ಉಂಟಾಗುತ್ತದೆ. ಆಗ ನೀರು ಆವಿಯಾಗಿ ಮಳೆ ಬರಲ ಕಾರಣವಾಗುತ್ತದೆ.
 • ಎಷ್ಟು ಪ್ರಮಾಣ ಮಳೆಯಾಗುತ್ತದೆ ಎನ್ನುವುದು ಗೋಚಾರದಲ್ಲಿ ಇರುವ ಗ್ರಹಗಳು ತಮ್ಮ ಸ್ವಸ್ಥಾನದಲ್ಲಿ ಇರುವರೇ? ಅದಕ್ಕೆ ದೃಷ್ಟಿ ಇದೆಯೇ? ಎನ್ನುವ ಆಧಾರದಲ್ಲಿ ನಿರ್ಣಯವಾಗುತ್ತದೆ.
 • ಪ್ರಾದೇಶಿಕವಾಗಿ ಮಳೆಯ ಪ್ರಮಾಣ ತಿಳಿಯುವುದು ಹೇಗೆ? ಇಲ್ಲಿ ಪ್ರದೇಶಗಳನ್ನು ೧೨ ವಿಭಾಗ ಮಾಡಲಾಗುತ್ತದೆ. ಹಾಗೆಯೇ ೧೨ರಂತೆ ಉಪವಿಭಾಗಗಳನ್ನು ಮಾಡಲಾಗುತ್ತದೆ. ಇದರಿಂದ ಪ್ರಾದೇಶಿಕವಾಗಿಯೇ ಎಷ್ಟು ಪ್ರಮಾಣದ ಮಳೆ, ಗಾಳಿ, ಉತ್ಪಾತಗಳನ್ನು ಋತುಮಾನ ಪದ್ಧತಿಯಂತೆ ವ್ಯತ್ಯಾಸವಾಗುವ ಪರಿಣಾಮಗಳನ್ನು ತಿಳಿಯಬಹುದು.
 • ಈ ವಿಧಾನಗಳನ್ನು ಕರಗತ ಮಾಡಿಕೊಂಡರೆ ಕ್ಷಣಾರ್ಧದಲ್ಲಿ ಪರಿಣಾಮ ವಿಶ್ಲೇಷಿಸಬಹುದು. ಆಗ ಕೆಲವರು ನೀಡುವ “ಸಾಮಾನ್ಯದಿಂದ ಭಾರಿ ಮಳೆಯ ಸಾಧ್ಯತೆಯಿದೆ” ಎಂಬಂತಹಾ ನಾಟಕೀಯ ಹೇಳಿಕೆಗಳು ಬೇಕಾಗುವುದಿಲ್ಲ.
 • ಸೂರ್ಯನಿಂದ ಕುಜನ ಮೇಲೆ ಬಿದ್ದು ಅಲ್ಲಿಂದ ಭೂಮಿಯ ಮೇಲೆ ಕಿರಣ ಪಾತವಾಗುವ ಕಾರಣದಿಂದ ಧಾತು ಸೃಷ್ಟಿಯಾಗುತ್ತದೆ.
 • ಆ ಸೂತ್ರದಂತೆಯೇ ಧಾತು ವೃದ್ಧಿ, ಧಾತು ಕ್ಷಯ, ಸವರ್ಣ ವೃದ್ಧಿ, ಸುವರ್ಣ ಕ್ಷಯ, ಇತ್ಯಾದಿಗಳನ್ನು ವರ್ಷ ಧಾನ್ಯಾದಯ ಎಂಬ ಭಾಗದಲ್ಲಿ ಪಂಚಾಂಗದಲ್ಲಿ ನಮೂದಿಸಿರುತ್ತಾರೆ.
 • ನಿವೇಶನಿ ಪಂಚಕ ಕಿರಣ ಸೂತ್ರದಂತೆ ಆಘಾತಗಳನ್ನು ವಿಶ್ಲೇಷಿಸಬಹುದು.
 • ಇವು ರವಿಯಿಂದ ಭೂಮಿಯ ಮೇಲೆ ಬಿದ್ದು ಅಲ್ಲಿಂದ ಇತರೆ ಗ್ರಹಗಳಿಗೆ ಹೋಗುತ್ತವೆ.
 • ಇದರಿಂದ ಪರಸ್ಪರ ಪರಿಣಾಮಗಳ ಭಾಗದ ಅಧ್ಯಾಯ ಆರಂಭ.
 • ಉದಾಹರಣೆಗೆ ಗುರು + ಕುಜ ಪರಸ್ಪರ ಪರಿಣಾಮದಿಂದ ಭೂಮಿಯಲ್ಲಿ ಅತಿವೃಷ್ಟಿ ಉಂಟಾಗುತ್ತದೆ.
 • ಏನ್ ಸರ್ ಜ್ಯೋತಿಷ್ಯ ಹೇಳ್ತಿದ್ದೀರಾ ಎನ್ನಬೇಡಿ. ಇದು ಶುದ್ಧ ಭೌತಶಾಸ್ತ್ರ. ಇಲ್ಲಿ ಕುಜ ಎಂದರೆ ತೀಷ್ಣತೆ, ಗುರು ಎಂದರೆ ಒತ್ತಡ. ಈ ಗುರು-ಕುಜಗಳನ್ನು ಅಸಂಖ್ಯ-ಅನಂತ ಎಂದೂ ಕರೆದರು.
 • ಭೂಮಿಯ ಆಳದಲ್ಲಿ ಇರುವುದೇ ಗುರು+ಕುಜ ಎಂಬ ವಜ್ರ ಪ್ರಭೇದಗಳು. ಇದು ಜಡಭಾಗದ ವಿಶ್ಲೇಷಣೆಯಲ್ಲಿ ಬರುವ ವಿಚಾರವಾಗಿರುತ್ತದೆ. ಅಲ್ಲಿ ಭೂಮಿಯಲ್ಲಿನ ವಜ್ರಗಳನ್ನು ವಿವರಿಸುತ್ತದೆ. ಅದಕ್ಕೂ ಶಾಖ-ಶೈತ್ಯ ವ್ಯವಹಾರಕ್ಕೂ, ಭೂ+ಖಗೋಲ ಸಂಪರ್ಕಕ್ಕೂ ಇರುವ ಪ್ರಾಕೃತಿಕ ಸೂತ್ರಗಳನ್ನು ಅನಾವರಣಗೊಳಿಸುತ್ತದೆ.
 • ಈ ಮಟ್ಟಕ್ಕೆ ಏರಲು ಶೈಶವ್ಯದಲ್ಲೇ ಅಂಬೆಗಾಲಿಡುತ್ತಿರೋ ಆಧುನಿಕ ವಿಜ್ಞಾನವು ಈಗ ಹೋಗುತ್ತಿರೋ ಮಾರ್ಗದಲ್ಲಿ ಇನ್ನೂ ಸಾವಿರ ವರ್ಷ ತೆವಳಿದರೂ ಕಷ್ಟಸಾಧ್ಯ!

Sunday, 20 October 2013

ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೧


ಅಂದಾಜು ಭರತಖಂಡವನ್ನು ಏಕಚಕ್ರಾಧಿಪತ್ಯದ ಆಡಳಿತದಲ್ಲಿ ಒಂದೇ ಸಮಗ್ರತೆಯ ಸೂತ್ರದಲ್ಲಿ ಆಳಿದವರು ಕೊನೆಯಲ್ಲಿ ಪಾಂಡವರು ನಂತರ ಪರೀಕ್ಷಿತ. ಅವನ ಕಾಲಕ್ಕೇ ಕ್ಷೀಣಿಸುತ್ತಾ ಬಂದು, ಜನಮೇಜಯನ ಕಾಲಕ್ಕೆ ಪ್ರತಿಕ್ರಿಯಾ ಪ್ರವೃತ್ತಿ ಹೆಚ್ಚುತ್ತಾ, ಅವನ ಮೊಮ್ಮಗನ ಕಾಲಕ್ಕೆ ಒಂದು ಸಮಗ್ರ ಶಾಸನದಿಂದ ಆಳ್ವಿಕೆ ಕಷ್ಟಸಾಧ್ಯವೆಂದು ಮನಗಂಡ ಜನಮೇಜಯನ ಮೊಮ್ಮಗ ಸುಧನ್ವನು ಒಂದು ವಿಸ್ತೃತ ವಿಭಜೀಕೃತ ಪ್ರಾದೇಶಿಕ ಶಾಸನ ಪದ್ಧತಿಯನ್ನು ರೂಪಿಸಿದ. ಅದರಂತೆ ರಾಜ್ಯಾಂಗ ರಚಿಸಿ ಆಳ್ವಿಕೆ ರೂಪಿಸಿದ. ಆಡಳಿತ ಪದ್ಧತಿಯೇ ಈಗ ಪ್ರಸಕ್ತ ಅಳಿದುಳಿದು ಬಂದಿರುವ ಈಗ ನಮ್ಮ ಮುಂದಿರುವ ಬೀಡು ಗುತ್ತಿನ ಆಡಳಿತ ವ್ಯವಸ್ಥೆ. ಅದರ ಓಘವನ್ನು ಸಿಕ್ಕಿದ ಲಭ್ಯ ಆಧಾರಗಳ ಮುಖೇನ ಸ್ಪಷ್ಟ ಪಡಿಸುತ್ತೇನೆ. ವಿಶಾಲ ಭಾರತದಲ್ಲಿ ಸೈಂಧವ, ಮ್ಲೇಂಛ, ಗುರ್ಜರ, ಪಠಾಣ, ಪಾರಶೀಯ, ಕಾಲಯವನ, ಯವನ ಇತ್ಯಾದಿಯವರನ್ನು ಸೇರಿಸಿ ಈಗಿನ ಕೆಲ ಅರಬ್ ಪ್ರದೇಶ ಬಲೂಚಿಸ್ಥಾನ, ಅಫ್ಘಾನಿಸ್ಥಾನ, ಪಾಕಿಸ್ಥಾನ, ಟಿಬೆಟ್, ಬರ್ಮಾ ಸೇರಿದ ವಿಶಾಲ ಭಾರತದಲ್ಲಿ ಏಕಮುಖ ಅಂದರೆ ವಿಕೇಂದ್ರೀಕೃತ ಪ್ರಾದೇಶಿಕ ಸಂವಿಧಾನಾತ್ಮಕ ಆಡಳಿತ ಜಾರಿಗೆ ತಂದರು. ಅವನ್ನೆಲ್ಲಾ ಸ್ಥೂಲವಾಗಿ ವಿವರಿಸುವುದು ಈ ಲೇಖನದ ಉದ್ದೇಶ. ಕೆಲ ಇತಿಹಾಸಕಾರರ ಮನಸ್ಸಿಗೆ ಇದರಿಂದ ಕಿರಿಕಿರಿಯಾದರೆ ಕ್ಷಮೆ ಇರಲಿ. ಯಾವುದೇ ಧರ್ಮದ, ಪಂಥದ ನಿಂದನೆ ಇದರಲ್ಲಿ ಇಲ್ಲ. ಭಾಷಾ ಕಾರಣದಿಂದ ನಿಂದನಯೆಂದು ಕಂಡುಬಂದರೆ ಕ್ಷಮಸಿರೆಂದು ವಿದ್ವಜ್ಜನರಲ್ಲಿ ಪ್ರಾರ್ಥಿಸಿ ಲೇಖನ ಆರಂಭಿಸುತ್ತೇನೆ.

ಸಮಗ್ರ ಆಡಾಳಿತ ವ್ಯವಸ್ಥೆಯ ರೂಪುರೇಷೆ ಒಂದು ಕೋಷ್ಟಕ ವಿಭಾಗ ರೀತಿ ಇರುತ್ತದೆ:
) ಸಾಮಾಜಿಕ ನ್ಯಾಯ ಪದ್ಧತಿ.
) ಆಸ್ತಿ, ಋಣ, ವಿಭಾಗ, ಹಕ್ಕು ಬಾಧ್ಯತೆಗಳು.
) ಸಾಮಾಜಿಕ ರಕ್ಷಣೆ, ಪೂರೈಕೆ ಕಾನೂನುಗಳು.
) ಉತ್ಪಾದಕತೆ ಮತ್ತು ವಿತರಣೆ ಕಾನೂನು.
) ಕಂದಾಯ, ಸುಂಕ, ಮೋಜಣಿ ದಾಖಲಾತಿ ಕಾನೂನು.
) ನಾಗರೀಕ ವಿಧ್ಯಾರ್ಜನೆ, ದೇವಸ್ವಾಧೀನ ಪದ್ಧತಿ.
) ಗಡಿ ರಕ್ಷಣೆ, ರಾಜಸ್ವಾಧೀನ ಪದ್ಧತಿ.
) ಅರಸು ಮತ್ತು ಪರಿವಾರ ರಕ್ಷಣೆಯ ವಿಚಾರ.

ಹೀಗೆ ಎಂಟು ವಿಧದಲ್ಲಿ ಸಮಗ್ರ ಮತ್ತು ಏಕರೂಪ. ಆದರೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ರೂಪುಗೊಟ್ಟನು ಸುಧನ್ವ ಮಹಾರಾಜ್”. ಅದರ ವಿವರಣೆ ಹೀಗಿದೆ:

) ಚಕ್ರವರ್ತಿ:- ಸಮಗ್ರದೇಶ. ಅದಕ್ಕೆ ಆಧರಿಸಿದ ಮುಖ್ಯ ಸಂವಿಧಾನ.
) ಮಹಾಮಂಡಲಾಧಿಪತಿ:- ೧೬ನೇ ಒಂದು ಭಾಗ. (ಪ್ರಾದೇಶಿಕ ವಿಭಜನೆ)
) ಮಂಡಲಾಧಿಪತಿ:- ೧೬ನೇ ಒಂದು ಭಾಗ. (ಪ್ರಾದೇಶಿಕ ವಿಭಜನೆ)
) ಅರಸು:- ಮಂಡಲದ ಒಂದು ಭಾಗದ ರಾಜಮನೆತನ.
) ಬೀಡು:- ಅರಸು ಮನೆತನಕ್ಕೆ ಆಧರಿಸಿ ಕಂದಾಯ ಮತ್ತು ನ್ಯಾಯ ನಿರ್ವಹಣೆ.
) ಗುತ್ತು:- ವಿಭಾಗೀಯ ಆಡಳಿತ. ಆಂಶಿಕ ನ್ಯಾಯ ಮತ್ತು ನಿರ್ವಹಣೆ.

ಇದಲ್ಲದೆ ನಾಯಕ, ಪಟೇಲ, ಕೈಯಾಲ, ಸರದಾರ, ಇತ್ಯಾದಿ ರಾಜೋದ್ಯೋಗಿ ಪಂಗಡವಿರುತ್ತದೆ. ಒಟ್ಟು ದೇಶದ ೧೬*೧೬ ಒಂದು ಭಾಗದಲ್ಲಿ ಅರಸು+ಬೀಡು+ಗುತ್ತು ಮನೆಯು ಆಡಳಿತ ವ್ಯವಸ್ಥೆಯಲ್ಲಿ ಪರಸ್ಪರ ಪೂರಕತೆಯೊಂದಿಗೆ ಯಾವುದೇ ರೀತಿಯ ಭಂಗ, ಬಾಧೆಗಳಿರದಂತೆ ಮೂಲ ರಾಜವಿಕ ಸಂವಿಧಾನಕ್ಕೆ ಭಂಗವಿರದಂತೆ ಆಡಳಿತ ಒದಗಿಸುತ್ತಿತ್ತು. ಇಲ್ಲಿ ಗುತ್ತಿನ ವ್ಯಾಪ್ತಿಯ ತಳಹದಿಯ ನ್ಯಾಯ ಪದ್ಧತಿ ಅಂದರೆ ಆಂಶಿಕ ನ್ಯಾಯ. ಗುತ್ತಿನ ಮುಖ್ಯರ ಮಾತಿನ ಮೇಲೇ ಆಡಳಿತ ಭದ್ರತೆ ಇರುತ್ತಿತ್ತು. ಒಟ್ಟು ಆಡಳಿತವು ೨೫೬ ವಿಭಾಗವಗಿ ಅಲ್ಲಲ್ಲಿಯ ಉತ್ಪಾದಕತೆ ಕೃಷಿ, ವಾಣಿಜ್ಯ, ಭೂಮಿ, ಅರಣ್ಯೋತ್ಪನ್ನ ಆಧರಿಸಿ ಕಂದಾಯ, ಕಾನೂನು ಇರುತ್ತಿತ್ತು. ರಾಜಾದಾಯ ಸಂಗ್ರಹಣೆ, ನಿರ್ವಹಣೆ, ದೇವಸ್ವಾದಾಯ ಸಂಗ್ರಹಣೆ ಹಾಗೂ ನಿರ್ವಹಣೆ, ಸುಂಕ ಸಂಗ್ರಹಣೆ ಹಾಗೂ ನಿರ್ವಹಣೆ. ರೀತಿಯಲ್ಲಿ ಮೂರು ಬಗೆಯಲ್ಲಿ ಮಾತ್ರಾ ತೆರಿಗೆ ಪದ್ಧತಿ ಇತ್ತು.

) ರಾಜಾದಾಯ ಸಂಗ್ರಹಣೆ:-
 • ಅರಣ್ಯೋತ್ಪನ್ನಗಳಲ್ಲಿ ೧೬ ನೇ ಭಾಗ ತೆರಿಗೆ
 • ಕೃಷಿ ಉತ್ಪನ್ನಗಳಲ್ಲಿ ನೇ ಭಾಗ ತೆರಿಗೆ
 • ಇತರೆ ಉತ್ಪಾದನೆಯಲ್ಲಿ ನೇ ಭಾಗ ತೆರಿಗೆ 
 • ಯುದ್ಧ, ಕಪ್ಪ, ಗಣಿ, ಭೂಗತ ದ್ರವ್ಯಪೂರ್ತಿ ರಾಜಾದಾಯ.
ಧನವೆಲ್ಲಾ ಆಹಾರವಸ್ತು ಸಂಗ್ರಹಣೆ, ದೇವಾಲಯ ಧರ್ಮಛತ್ರ ನಿರ್ವಹಣೆ, ರಸ್ತೆ, ಸಾರಿಗೆ, ರಕ್ಷಣೆ, ಋಷ್ಯಾಶ್ರಮ, ಗುರುಕುಲ ನಿರ್ವಹಣೆ, ವೈದ್ಯಾದಿಗಳಿಗೆ, ರಾಜೋದ್ಯೋಗಿಗಳಿಗೆ ಸಂಬಳ, ಉಂಬಳಿ ನಿರ್ವಹಣೆಗೆ ಬಳಕೆಯಾಗುತ್ತದೆ. ಇದಕ್ಕೆ ಪೂರ್ತಿ ಚಕ್ರವರ್ತಿ ಅಧಿಕಾರಿ. ಅವನ ಆದೇಶದಂತೆ ಅಲ್ಲಲ್ಲಿ ಬಳಕೆಯಾಗುತ್ತದೆ. ಅರನು ಮನೆತನಸ್ಥರ ನಿರ್ವಹಣೆಯೂ ಇದರಲ್ಲಿ ಸೇರಿರುತ್ತದೆ. ವಸ್ತುಗಳು, ಚಿನ್ನ, ಬೆಳ್ಳಿ ಮಾತ್ರ ಚಲಾವಣೆಯಲ್ಲಿ ಪರಿವರ್ತಕಗಳು. ಬಿಟ್ಟರೆ ಗೋವು ಸಂಪತ್ತಾಗಿ ಪರಿಗಣಿಸಲ್ಪಡುತ್ತದೆ.

) ದೇವಸ್ವಾಧಾಯ ಸಂಗ್ರಹಣೆ:-
ಚಮ್ಮಾರ, ಕ್ಷೌರಿಕ, ಅಕ್ಕಸಲಿಗ, ನೇಕಾರ ಹೀಗೆ ವೃತ್ತಿಗಳವರಿಗೆ ಕೊಡುವ ಅಶನಾರ್ಥಗಳು. ಪುರೋಹಿತ, ವೈದ್ಯ, ಅರ್ಚಕ, ಜ್ಯೋತಿಷಿಗಳಿಗೆ ಕೊಡುವ ಅಗ್ರಹಾರ ಭತ್ಯೆ. ಇವೆಲ್ಲಾ ಕೃಷಿ ಉತ್ಪನ್ನ ಆಧರಿಸಿ ಆಹಾರ ಧಾನ್ಯರೂಪದಲ್ಲಿ ಸಂಗ್ರಹಿಸಿ ಹಂಚುವುವು. ವಿವಾಹಕಾಲದಲ್ಲಿ ವಿಧಿಸಿದ ದಂಡರೂಪದ ಹಣ, ಶಿಕ್ಷಾರೂಪದಲ್ಲಿ ವಿಧಿಸಿದ ಶ್ರಮಿಕ ಕಾರ್ಯದ ಆಯಧನ ಇತರೆ ಚರಾದಾಯಗಳೆಲ್ಲಾ ಆಯಾಯ ಗುತ್ತಿನ ಮನೆಯವರು ಸಂಗ್ರಹಿಸಿ ಸೂಕ್ತ ವಿನಿಯೋಗ ಮಾಡುವುದು.

) ಸುಂಕ ಸಂಗ್ರಹಣೆ:-
೨೫೬ ವಿಭಾಗ ಮಟ್ಟದಲ್ಲಿ ಆಡಳಿತವಿದ್ದು ಒಂದು ವಿಭಾಗದಿಂದ ಒಂದು ವಸ್ತು ಇನ್ನೊಂದು ವಿಭಾಗದಲ್ಲಿ ಮಾರಾಟ, ಪರಿವರ್ತನೆ ಆಗಬೇಕಿದ್ದಲ್ಲಿ ಸುಂಕ ಕಡ್ಡಾಯ. ಸುಂಕದ ಹಣವು ಮತ್ತು ಬಿಕರಿಯಾಗದ ವಸ್ತುಗಳ ಮೇಲಿನ ದಂಡ, ಇನ್ನಿತರೆ ವಂಚನೆ ಕಾರಣದ ದಂಡಗಳು ಕೂಡ ಮಂಡಲೇಶ್ವರರ ಅನುಮತಿಯ ಮೇರೆಗೆ ಆಯಾಯ ಪ್ರದೇಶಗಳಲ್ಲಿ ವಿತರಣೆಯಾಗುತ್ತದೆ. ರೀತಿಯಲ್ಲಿ ಮೂರು ಬಗೆಯ ಆರ್ಥಿಕ ನಿರ್ವಹಣೆಯಿರುತ್ತದೆ.

ವಂಶಪಾರಂಪರ್ಯ ಮತ್ತು ನೇಮಕಾತಿ ನಿಯಮದಂತೆ ರಾಜೋದ್ಯೋಗಿಗಳಿರುತ್ತಾರೆ. ಆರ್ಹತೆಯೇ ಮಾನದಂಡವಾಗಿರುತ್ತದೆ. ನೇಮಕಾತಿಯ ಅಧಿಕಾರ ಒಂದರಿಂದ ಎರಡನೆಯವರು, ಎರಡನೆಯವರಿಂದ ಮೂರನೆಯವರು, ಮೂರನೆಯವರಿಂದ ನಾಲ್ಕನೆಯವರು, ನಾಲ್ಕನೆಯವರಿಂದ ಐದನೆಯವರು, ಐದನೆಯವರಿಂದ ಆರನೆಯವರು, ಆರನೆಯವರಿಂದ ಏಳನೆಯವರು ಹೀಗಿರುತ್ತದೆ. ಅಲ್ಲಿ ಯಾವುದೇ ಮೇಲಿನವರ ಕೈವಾಡವಿರುವುದಿಲ್ಲ. ಚಕ್ರಾಧಿಪತಿಯು ಮಹಾಮಂಡಲೇಶ್ವರರನ್ನು ನೇಮಿಸುತ್ತಾರೆ. ಆದರೆ ಮಂಡಲೇಶ್ವರ ನೇಮಕಾತಿಯಲ್ಲಿ ಚಕ್ರವರ್ತಿಗೆ ಯಾವುದೇ ಅಧಿಕರವಿಲ್ಲ. ಮಹಾಮಂಡಲೇಶ್ವರರೇ ಪೂರ್ಣಾಧಿಕಾರಿಯಾಗಿರುತ್ತಾರೆ. ಹಾಗೆಯೇ ಗುತ್ತಿನವರೆಗೆ ಇರುತ್ತದೆ. ಇನ್ನು ಅವರವರಿಗೆ ಬೇಕಾದ ಲೆಕ್ಕಪತ್ರನಿರ್ವಹಣೆ, ರಕ್ಷಣೆ ಭಾಗಗಳು ಅವರವರ ಅಧಿಕಾರವಾಗಿರುತ್ತದೆ. ಇಲ್ಲಿ ಸ್ಫಟಿಕದಂತೆ ಶುದ್ಧ ಆಡಳಿತವಿರುತ್ತದೆ. ಮತ್ತು ಭ್ರಷ್ಟಾಚಾರಾದಿಗಳಿಗೆ ಅವಕಾಶವಿರುವುದಿಲ್ಲ

) ಚಕ್ರಾಧಿಪತಿಗೆ ಸಮಗ್ರ ದೇಶದ ಸಾಮಾಜಿಕ ನ್ಯಾಯ ಮತ್ತು ರಕ್ಷಣೆ ಮತ್ತು ಕಲಾ ನೈಪುಣ್ಯತೆಯ ಪೋಷಣೆ ಮಾತ್ರಾ ಜವಾಬ್ದಾರಿ.

) ಮಹಾಮಂಡಲೇಶ್ವರರು:- ತಮ್ಮ ಮಂಡಲದ ಹದಿನಾರು ಪ್ರದೇಶಗಳ ಸಮಗ್ರ ಅಭಿವೃದ್ಧಿ, ಆಂತರಿಕ ಭದ್ರತೆ, ಕಾನೂನು ಪಾಲನೆ, ಸೈನಿಕರ ಪೋಷಣೆ, ನಿರ್ವಹಣೆ, ಯುದ್ಧಸಾಮಗ್ರಿ ಉತ್ಪಾದನೆ, ಕರ್ತವ್ಯ.

) ಮಂಡಲೇಶ್ವರರು:- ತಮ್ಮ ಪ್ರದೇಶದ ಉತ್ಪಾದಕತೆ, ಖನಿಜ, ಗಣಿಗಾರಿಕೆ, ಲೋಹಾದಿಗಳ ಉತ್ಪನ್ನ, ವಿನಿಯೋಗ, ರೈತಾಪಿ ಜನರ ಆವಶ್ಯಕ ಸಾಮಗ್ರಿ ಪೂರೈಕೆ, ಆಡಳಿತ ಭದ್ರತೆ, ಕರ್ತವ್ಯ.

) ಅರಸು ಮನೆತನ:- ಮಂಡಲೇಶ್ವರ ಆದೇಶದಂತೆ ಅಲ್ಲಲ್ಲಿನ ರಾಜಾದಾಯ ಸಂಗ್ರಹ, ಸುಂಕ ನಿರ್ವಹಣೆ, ಪ್ರಾದೇಶಿಕ ಸಾಂಸ್ಕೃತಿಕ ಬೆಳವಣಿಗೆ, ಆರ್ತರಕ್ಷಣೆ, ಆಪತ್ಕಾಲೀನ ನಿರ್ವಹಣೆ (ರಾಜಮುದ್ರಾಧಿಕಾರಿ), ಭೂ, ವಂಶ, ಕಂದಾಯ, ದೇವಸ್ವ ಲೆಕ್ಕಾಧಿಕಾರಿ, ಇತಿಹಾಸ ಲೇಖಾಪಾಲನೆ, ಕರ್ತವ್ಯ.

) ಬೀಡಿನ ಮನೆತನ:- ಧಾರ್ಮಿಕ ಆಚರಣೆ, ನ್ಯಾಯಿಕ ಧರ್ಮಪಾಲನೆ, ದಂಡ, ಪ್ರಮಾಣ, ಮಂಡೆಕೋಲು ಇತ್ಯಾದಿ ಇತ್ಯಾದಿ ಶಿಕ್ಷಾದಿ ನಿರ್ವಹಣೆ, ವಿಧ್ಯಾವರ್ಧನೆ ಕರ್ತವ್ಯ.

) ಗುತ್ತಿನ ಮನೆತನ:- ಗ್ರಾಮರಕ್ಷಣೆ, ಕೃಷ್ಯಾದಿ ಆಹಾರ ಧಾನ್ಯ ಉತ್ಪಾದನೆ, ಸಂಗ್ರಹಣೆ, ರೈತಾಪಿ ಜನರ ರಕ್ಷಣೆ, ಗ್ರಾಮೀಣ ಕ್ರೀಡಾದಿಗಳ ಉತ್ತೇಜನ, ಶಿಕ್ಷಾದಿಗಳ ಶಿಫಾರಸು, ಶಿಕ್ಷೆ ಜಾರಿ ಇತ್ಯಾದಿಗಳ ಕರ್ತವ್ಯ (ಆಂಗಿಕ ನ್ಯಾಯ). ಗರಡಿ ಮನೆ, ಮಲ್ಲ ಯುದ್ಧ ತರಬೇತಿ, ಕಶಲ ಕೈಗಾರಿಕಾ ತರಬೇತಿ, ಅಲ್ಲದೆ ಮನೋರಂಜನಾವೃತ್ತಿ ಕುಲಕಸುಬುಗಳ ಮೇಲ್ವಿಚಾರಣೆ, ಕುಲವೃತ್ತಿ ಮಾಡದವರ ಸಂಬಂಧಿ ವಿಚಾರ, ಕಾರ್ಯಕಾರಣವರಿತು ವ್ಯವಸ್ಥೆಗಳು.

ಹೀಗೆ ಆರು ವಿಭಾಗದಲ್ಲಿ ಬೇರೆ ಬೇರೆ ರೀತಿಯಲ್ಲಿ ಮೂಲ ಸಂವಿಧಾನಕ್ಕೆ ಬದ್ಧವಾಗಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಂಡು ಒಟ್ಟು ಉತ್ತಮ ಆಡಳಿತಾತ್ಮಕ ಕಾನೂನುಗಳನ್ನು ರೂಪಿಸಿ ಅಂದಿನ ಚಕ್ರವರ್ತಿಯಾದ ಸುಧನ್ವನು ಬಳಕೆಗೆ ತರುತ್ತಾನೆ. ಅಂದಾಜು ೪೦೦೦ ವರ್ಷಗಳ ಹಿಂದಿನ ಮಾತು. ಜನರೆಲ್ಲಾ ಸುಖ ಸಂತೋಷ, ಸಂಭ್ರಮಗಳಿಂದಲೇ ಬಾಳುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳಿರಲಿಲ್ಲ. ಹಾಗಾಗಿ ಗುತ್ತಿನ ಮನೆಯ ಗ್ರಾಮಪದ್ಧತಿಯ ಆಡಳಿತ ಸುಸೂತ್ರವಾಗಿತ್ತು.
(ಸಶೇಷ..)

ಲೇಖಕರು -
ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು.