Wednesday, 24 December 2014

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೧

||  ಶ್ರೀಗುರುಭ್ಯೋನಮಃ ||

        ಜಗತ್ತಿನ ಅತಿಶ್ರೇಷ್ಠ ವ್ಯಕ್ತಿಯೆಂದರೆ ವಸಿಷ್ಠರು. ಇವರನ್ನು ಮೈತ್ರಾವರುಣಿ ಎಂದೂ ಕರೆಯುತ್ತವೆ ಪುರಾಣಗಳು. ಆದರೆ ವಸಿಷ್ಠರು ಮೈತ್ರಾವರುಣಿಯಲ್ಲ. ತಮ್ಮನ್ನು ತಾವು ಎಂದೂ ಘೋಷಿಸಿಕೊಂಡವರಲ್ಲ. ಹಾಗಾಗಿ ಅವರ ಪೂರ್ವ ನಿರ್ಧಿಷ್ಟವಾಗಿಲ್ಲ. ಕಲ್ಪಾದಿಯಿಂದ ಆರಂಭಿಸಿ ಈ ವರ್ತಮಾನದ ಕಾಲದವರೆಗೆ ನಿರಂತರ ಈ ಭುವಿಯಲ್ಲಿಯೇ ಉಳಿದು ಎಂದೂ ಕೋಪಗೊಳ್ಳದೇ ಸಮಾಧಾನ ಚಿತ್ತದಿಂದ ನಿರಂತರ ಲೋಕಕ್ಷೇಮ ಚಿಂತನೆ ಮಾಡುತ್ತಾ ಬ್ರಹ್ಮರ್ಷಿಯಾಗಿ ಇಲ್ಲಿಯ ಕರ್ತವ್ಯ ನಿರ್ವಹಣೆ ಮಾಡಿ ಸೈಯೆನಿಸಿಕೊಂಡು ಸಪ್ತರ್ಷಿಗಳಲ್ಲಿ ಒಬ್ಬರಾಗಿ ಇಂದಿನವರೆಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ದೋಷ ದೂಷಣೆಯಿಲ್ಲದೇನೇ ಬದುಕಿ ಬಂದವರು. ಅಂದಾಜು 30 ಚಿಲ್ಲರೆ ಕೋಟಿ ವರ್ಷಗಳಿಂದ ವಸಿಷ್ಠರ ಅಸ್ತಿತ್ವವಿಲ್ಲಿದೆ. ಹಾಗಾಗಿಯೇ ಜನ ಮದುವೆಯಾಗುತ್ತಾರೆ. ಏನೋ ಒಂದು ಸಂಪ್ರದಾಯ ಪಾಲಿಸುತ್ತಾರೆ. ಕೆಲವರಾದರೂ ಗೃಹಸ್ಥಧರ್ಮ ಪಾಲಿಸುತ್ತಾರೆ. ಪ್ರಪಂಚ ನಿರಂತರ ನಡೆಯುತ್ತಿದೆಯೆಂದರೆ ಅದು ವಸಿಷ್ಠರ ಕರ್ತವ್ಯ ಪ್ರಜ್ಞೆಯ ದ್ಯೋತಕ. ಸಪ್ತರ್ಷಿಗಳಾಗಿ ಅವರ ಕಾರ್ಯಕ್ಷೇತ್ರವಿದು, ಗೃಹಸ್ಥಾಶ್ರಮ ನಿರ್ವಹಣೆಯಲ್ಲಿ ಸಮತೋಲನ ಕಾಯ್ದುಕೊಂಡು ಬರುವುದು. 

ಹಾಗಾಗಿಯೇ ಮದುವೆಯಾದ ದಂಪತಿಗಳು ವಸಿಷ್ಠಾರುಂಧತೀ ಪೂಜೆ ಮಾಡುವುದು. ಅದು ಈಗಲೂ ಇದೆ. ಇವರ ಗೃಹಸ್ಧಧರ್ಮದ ರಕ್ಷಕರು ವಸಿಷ್ಠರೇ. ಹಾಗಾಗಿಯೇ ಪೂಜಿಸುತ್ತಾರೆ. ಇವರ ಕರ್ತವ್ಯದಲ್ಲಿ ಯಾವುದೇ ಒಂದು ನ್ಯೂನತೆಯೂ ಇಲ್ಲ. ಈಗಲೂ ಜನರಲ್ಲಿ ವೈವಾಹಿಕ ಜೀವನದ ಆಕಾಂಕ್ಷೆ, ಅದರ ಸ್ಥಿರತೆಯ ಹೋರಾಟ ಉಳಿದಿರುವುದು ವಸಿಷ್ಠರಿಂದಲೇ. ಇಲ್ಲವಾಗಿದ್ದಲ್ಲಿ ಈಗಿನ ಕಾಲಮಾನ ರೀತ್ಯಾ ಜನರು ಇದನ್ನು ಬಿಟ್ಟು ಕೇವಲ ಪಶುಗಳಂತೆ ಕಾಮತೃಪ್ತಿ ಪಡೆದು ಸ್ವೇಚ್ಛಾಚಾರಿಗಳಾಗಿ ಬದುಕುತ್ತಿದ್ದರು.  ಈಗ ಕೆಲವು ಜನ ಅಂತಹವರಿರಬಹುದು. ಆದರೆ ಹೆಚ್ಚಿನವರು ತಮ್ಮ ಸಂಸ್ಕಾರದ ಬದ್ಧತೆಯಲ್ಲಿ ವಿವಾಹ ಸಂಸ್ಕಾರ ಪೂರ್ವಕವೇ ಗೃಹಸ್ಥರಾಗುತ್ತಿದ್ದಾರೆ. ನಮ್ಮಲ್ಲಿ ಎಷ್ಟೋ ಜನ ವಿಚಾರವಾದಿಗಳು ಮದುವೆ ಆಚರಣೆಗಳನ್ನು ದೂಷಿಸಿದ್ದಾರೆ, ಖಂಡಿಸಿದ್ದಾರೆ, ಅವರ ಆದರ್ಶವಾದವನ್ನೇ ಮಂಡಿಸಿದ್ದಾರೆ. ಆದರೂ ಮದವೆಯಾಗುತ್ತಿದ್ದಾರೆ. ಅವರೂ ಏನೋ ಒಂದು ರೀತಿ ಆಚಾರಕ್ಕೆ ಕಟ್ಟು ಬೀಳುತ್ತಿದ್ದಾರೆ. ಇದೆಲ್ಲಾ ವಸಿಷ್ಠರ ಕರ್ತೃತ್ವ ಶಕ್ತಿ ಗೃಹಸ್ಥಾಶ್ರಮ ಆಧಾರಸ್ತಂಭ. ಈ ಹಿನ್ನೆಲೆಯಲ್ಲಿ ವಸಿಷ್ಠರ ಅಭಿಪ್ರಾಯ ಗಮನಿಸೋಣ. ವಿವಾಹ, ಗೃಹಸ್ಥಜೀವನ, ಸಂತಾನ, ಮೋಕ್ಷಸಾಧನೆ, ಸದಾಮೈತ್ರಿ, ಜೊತೆಯಾಗಿ ಜೀವನಸಾರ ಗೃಹಿಣಿ ಇವೆಲ್ಲಾ ಒಂದು ಲೆಕ್ಕಾಚಾರದಡಿಯಲ್ಲಿ ನಿರ್ದೇಶಿತವಾಗಿದೆ ಯೆಂದು ಸ್ವಯಂ ನಿರ್ದೇಶಕರಾದ ವಸಿಷ್ಠರೇ ನಿರೂಪಿಸಿದ್ದಾರೆ. ಅದರ ಆಧಾರದಲ್ಲಿ ಈ ಲೇಖನ ಸಿದ್ಧಪಡಿಸಿದ್ದೇನೆ.  ಗಮನಿಸಿ
ಋ.ಮಂ.7 ಸೂ.3 ಮಂ.7
ಯಥಾ ವಃ ಸ್ವಾಹಾಗ್ನಯೇ ದಾಶೇಮ ಪರೀಳಾಭಿರ್ಘೃತವದ್ಭಿಶ್ಚ ಹವ್ಯೈಃ |
ತೇಭಿರ್ನೋ ಅಗ್ನೇ ಅಮಿತೈರ್ಮಹೋಭಿಃ ಶತಂ ಪೂರ್ಭಿರಾಯಸೀಭಿರ್ನಿಪಾಹಿ ||

ನಿರಂತರ ಜೀವಜಗತ್ತಿನ ಸುಸ್ಥಿರತೆ ಅಗ್ನಿಯ ಕೈಯಲ್ಲಿದೆ. ಅದು ನಿರಂತರ ಜ್ವಲನಶೀಲವಾಗಿರಬೇಕು. ಅದು ಸುಪ್ತವಾದರೆ ಜೀವವಿಲ್ಲ. ಹಾಗಾಗಿಯೇ ಗೃಹಸ್ಥರು ಅಗ್ನಿ ಕಾಯ್ದುಕೊಂಡು ಬರಬೇಕು, ನಿತ್ಯ ಉಪಾಸನೆ ಮಾಡಬೇಕು ಎಂದಿದೆ. ಜೀವರಾಶಿಗಳಲ್ಲಿ ಜೀವವನ್ನು ಗುರುತಿಸುವುದು ನೀರಿನಿಂದ. ಅದು ಪ್ರವರ್ತನಾಶೀಲವಾಗಿದೆಯೆಂದು ಗುರುತಿಸುವುದು ಅಗ್ನಿಯಿಂದ. ಅಂದರೆ ಬದುಕಿದೆಯೆಂದು ತಿಳಿಯುವುದು. ಮೈತಣ್ಣಗಾಗುತ್ತಾ ಬಂದರೆ ಸ್ವಾಭಾವಿಕ ಶವಾಭಾಸ. ಅದನ್ನೇ ಸ್ವಾಹಾಗ್ನಯೇ ಎಂದರು. 4 X 3 X 2 X 7 = 168 ಅಂಶಗಳಿಂದ 84 ಲಕ್ಷ ಜೀವಕೋಟಿಗಳಲ್ಲಿ ವ್ಯವಹರಿಸುತ್ತಾನೆ. ಅದನ್ನು ರಕ್ಷಿಸಿರುವುದು ಪ್ರಧಾನ 3 ಋಣಗಳು. ಈ ಮೂರು ಋಣಗಳು ಇರುವಲ್ಲಿಯವರೆಗೆ ಜೀವಿಗಳ ಹಾರಾಟ, ಓಡಾಟ, ಜೀವನ, ಹೊಡೆದಾಟ. ಋಣ ತೀರಿತೋ ಅಗ್ನಿ ಸುಪ್ತ, ದೇಹತ್ಯಾಗ. ಇದು ಈ ಮರ್ತ್ಯಜ ಸ್ವಭಾವ ಲಕ್ಷಣ. ಇದನ್ನು ಅಗ್ನಿ ಧ್ಯಾನದಲ್ಲಿ ಹೇಳಿದೆ ಗಮನಿಸಿ-

ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ |
ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾಙ್ ಆವಿವೇಶ ||

ಎಂದಿದೆ. ಮಾನವ ಮಾತ್ರವಲ್ಲ, ಸಕಲ ಜೀವಿಗಳಲ್ಲೂ ಇದು ಸಾಮಾನ್ಯ, ಸ್ವಾಭಾವಿಕ ಸತ್ಯ. ಹಾಗೇ ವಸಿಷ್ಠರು ನಿರಂತರ ಅಗ್ನಿ ಪ್ರವೃತ್ತಿಯನ್ನು ಒಂದು ಗಣಿತ ಸೂತ್ರದಲ್ಲಿ ತೋರಿಸಿ ಕೊಟ್ಟರು. ಆ ಸೂತ್ರವೇ ಗೃಹಸ್ಥಾಶ್ರಮ ಸ್ಥಿರತೆಯ ದಾರಿಯೆಂದರು. ಜೀವಿಗಳಿಗೆ ಸಂಚಿತ, ಆಗಾಮಿ, ಪ್ರಾಪ್ತಿಯೆಂಬ ಋಣತ್ರಯಗಳಂತೆಯೇ ಕರ್ಮಗಳೂ ಇವೆ. ಅವನ್ನು ಘೃತವತ್ ಸಂಸ್ಕಾರ ಪೂರ್ವಕ ಅನುಭವಿಸಿದರೆ ಪಕ್ವತೆ, ಪೂರ್ಣತೆ, ಶಾಶ್ವತತೆ ಸಾಧ್ಯವೆಂದರು. ಹಾಗಿದ್ದಾಗ ಮಾತ್ರ ವಿಶೇಷವಾಗಿ ಮಾನವನು ತನ್ನ ಜೀವಿತೋದ್ದೇಶವಾದ ಮೋಕ್ಷಸಾಧನೆ ಸಾಧ್ಯವೆಂದರು. ಅದಕ್ಕಾಗಿ ನೂರು ವರ್ಷದ ಸಾಧನೆಯಿದೆ, ನೂರು ವರ್ಷ ಬದುಕು ಗಳಿಸಬೇಕೆಂದರು. ಅದೆಲ್ಲಾ ವಿಶೇಷ ಸಂಶೋಧನೆಯಿಂದ ವಸಿಷ್ಠರು ತಮ್ಮ ಜೀವನದಲ್ಲಿ ಕಂಡ ಸತ್ಯವನ್ನೇ ಹೇಳಿದ್ದಾರೆ. ಒಟ್ಟಾರೆ ಅಗ್ನಿಯು ಗೃಹಸ್ಥಾಶ್ರಮ ಧರ್ಮ ಮತ್ತು ಮಾನವನ ಜೀವನದ ಅನಿವಾರ್ಯ ಅಂಗ ಹಾಗೂ ರಕ್ಷಕನೆಂದಿದ್ದಾರೆ. ಹಾಗೇ ಇದರೊಂದಿಗೆ ಒಂದು ಗಣಿತ ಸೂತ್ರ ಹೇಳಿದ್ದಾರೆ.

ಎರಡು ಜೀವಗಳೊಂದಾಗಿ ಈ ನೆಲದ
ಬರಡುತನ ಮರೆ ಮಾಡಿ ಜೀವ ಸೃಷ್ಠಿಪ
ವರ ಶ್ರೇಷ್ಠದಾ ಕ್ರಿಯೆಯಿದು ಸಂಸ್ಕಾರವಿರಲಿ ಬದ್ಧತೆಯೊಳೂ |
ಬರಡು ಜೀವನವಲ್ಲ ಕುರುಡುತನ
ವೆರಸದಿರಿ ಜಗವ ನಡೆಸುವ ಬದ್ಧತೆ
ಯೆರಡು ಜೀವಿಗಳಿಗೂ ಸಮಾನ ಜಗವ ನಡೆಸಿರಿ ಕ್ಷೇಮದಿಂದಾ || 1 ||

ಜಗವ ನಡೆಸುವ ನಿರಂತರದಿ
ಜಗವ ಕಾಯ್ವ ನಿತ್ಯಮಾಪನವೆನಿಪ
ಜಗದಾಟ ಜಂಜಾಟವೆಲ್ಲ ಮರೆಸುವ ಅನಂತದಾಟ |
ಜಗದಾದಿ ದೇವನಿದಕೆ ಹರಸಿಹ ಅರಿ
ಜಗವ ದೂರದಿರು ನೀ ಈ ಲೆಕ್ಕದಲಿ
ಜಗವ ಜಯಿಸಲು ಬಹುದು ಮಾನವ ಜೀವನ ಸಾರ್ಥಕ || 2 ||

ಕೇಳು ಅಗ್ನಿಯು ಕೊಳುವನೊ ಕೊಡುವನೊ
ಹೇಳಲಾಗದು ಘೃತವನೆರೆಸುತ ನೀ ನಿತ್ಯ
ಜಾಳವಿಸು ಅಮಿತ ಮೊತ್ತದಲಿ ಅದ್ಭಿಯಲಿ ನೆನೆ ನೆನೆಸುತಾಗಾ |
ಕೋಳು ಹೋಗದಿರೆ ಶತವೇನು ಸಹಸ್ರ ಮೋದಿಸು
ಬಾಳುವೆ ಲೆಕ್ಕಕೆ ಮಿತಿಯಿಲ್ಲವೈ ರಾಯ ನೀ
ಕಳವ ಸೇರಿದೆ ಈಗ ಈ ಲೆಕ್ಕದಲಿ ಸರಿದೂಗಿಸೆಂಬೆ ನಾನೂ || 3 ||

ಈ ರೀತಿಯಲ್ಲಿ ಸಂಸಾರ ಬದ್ಧತೆಯು ಒಂದು ಲೆಕ್ಕದ ಅಡಿಯಲ್ಲಿ ನಿರ್ದೇಶಿತವಾಗಿದೆ. ಅದು ನಿತ್ಯ ಸತ್ಯವೆಂದಿದ್ದಾರೆ. ಹಾಗೆ ಸಂಸಾರವೆಂಬುದು ಋಣ+ಕರ್ಮ ಜಂಜಾಟವಾದರೂ ಅಲ್ಲಿ ಜೀವರಿಗೆ ಮನಸ್ಸಂತೋಷಗೊಳಿಸುವ ಜೀವನವಿದೆ, ಆತ್ಮೋದ್ಧಾರವಿದೆ. ಎಲ್ಲಾ ಜಂಜಾಟಗಳನ್ನೂ ನಿವಾರಿಸುವ ಆನಂದವಿದೆ. ಸಕಲ ಜೀವ ಜಂತುಗಳ ಜೀವ ಸೂತ್ರ ನೀನು, ನಿರ್ದೇಶಕ ಅಗ್ನಿ. ಅಗ್ನಿಯ ಮುಂದಿನ ರೂಪವೇ ನೀರಾದ್ದರಿಂದ ಪುತ್ರವತ್ ಭಾವದಿಂದ ನಿನ್ನನ್ನು ಕಾಯುತ್ತಾನೆ ಎಂದಿದ್ದಾರೆ. ಅದಕ್ಕೆ ಈ ಗಣಿತ ಸೂತ್ರದಲ್ಲಿ ಹೇಗೆ ಅಗ್ನಿಯಿಂದ ರಕ್ಷಣೆ? ನೀವೇಕೆ ಅಗ್ನಿಯನ್ನು ರಕ್ಷಣೆ ಮಾಡಬೇಕು ಸೂತ್ರೀಕರಿಸಿದ್ದಾರೆ ವಸಿಷ್ಠರು.

ಯೋ ಮರ್ತ್ಯೇಷು ನಿಧ್ರುವಿರ್ಋತಾವಾ ತಪುರ್ಮೂರ್ಧಾ ಘೃತಾನ್ನಃ ಪಾವಕಃ  ಎಂದಿದ್ದಾರೆ. ಹಾಗಾಗಿ ಜೀವನಸೂತ್ರ ಘೃತವತ್ ಆಗಿದ್ದಲ್ಲಿ ನಿನ್ನನ್ನ ನಿನ್ನನ್ನು ರೂಪಿಸುತ್ತದೆ, ನಡೆಸುತ್ತದೆ. ಹಾಗಾಗಿ ಅನ್ನ ಸೂತ್ರವನ್ನು ತಿಳಿದು ವ್ಯವಹರಿಸಬೇಕು. ಇದು ಮಾನವ ಧರ್ಮದ ಕರ್ತವ್ಯವೆಂದರು. ನಂತರ ವಸಿಷ್ಠರು ಮಾನವ ಜೀವನ ಬದ್ಧತೆಗೆ ಕೆಲ ಮುಖ್ಯ ನಿಯಮ ಹೇಳುತ್ತಾ ಅವೆಲ್ಲಾ ಲೆಕ್ಕಾಚಾರದಂತಿದೆ. ಅದನ್ನು ಹೊರತು ಪಡಿಸಿ ಇನ್ನೇನಿಲ್ಲವೆಂದರು. ಆ ಲೆಕ್ಕಾಚಾರಗಳಲ್ಲಿ ಋಣ+ಕರ್ಮ+ಪ್ರಾಪ್ತಿಗಳ ಕಾರ್ಯಭಾರ ಮುಖ್ಯ. ಅದನ್ನರ್ಥ ಮಾಡಿಕೊಂಡು ಪಡೆದು ಸುಖವಾಗಿರು. ಅದರ ಹೊರತಾದ್ದನ್ನು ಆಶಿಸಿ ಸುಮ್ಮನೆ ಹೋರಾಟ ಬೇಡವೆಂದಿದ್ದಾರೆ. ಅದನ್ನೇ ಈ ಮಂತ್ರಪುಂಜಗಳು ಹೇಳುತ್ತವೆ. ಅವನ್ನೆಲ್ಲ ಗಮನಿಸಿ.

ಋ.ಮಂ.7 ಸೂ.4 ಮಂ.1-10
ಪ್ರವಃ ಶುಕ್ರಾಯ ಭಾನವೇ ಭರಧ್ವಂ ಹವ್ಯಂ ಮತಿಂ ಚಾಗ್ನಯೇ ಸುಪೂತಮ್ |
ಯೋ ದೈವ್ಯಾನಿ ಮಾನುಷಾ ಜನೂಷ್ಯಂತರ್ವಿಶ್ವಾನಿ ವಿದ್ಮನಾ ಜಿಗಾತಿ || 1 ||
ಸ ಗೃತ್ಸೋ ಅಗ್ನಿಸ್ತರುಣಶ್ಚಿದಸ್ತು ಯತೋ ಯವಿಷ್ಠೋ ಅಜನಿಷ್ಟ ಮಾತುಃ |
ಸಂ ಯೋ ವನಾ ಯುವತೇ ಶುಚಿದನ್ ಭೂರಿ ಚಿದನ್ನಾ ಸಮಿದತ್ತಿ ಸದ್ಯಃ || 2 ||
ಅಸ್ಯ ದೇವಸ್ಯ ಸಂಸದ್ಯನೀಕೇ ಯಂ ಮರ್ತಾಸಃ ಶ್ಯೇತಂ ಜಗೃಭ್ರೇ |
ನಿ ಯೋ ಗೃಭಂ ಪೌರುಷೇಯೀ ಮುವೋಚ ದುರೋಕಮಗ್ನಿರಾ ಯವೇ ಶುಶೋಚ || 3 ||
ಅಯಂ ಕವಿರಕವಿಷು ಪ್ರಚೇತಾ ಮರ್ತೇಷ್ವಗ್ನಿರಮೃತೋ ನಿಧಾಯಿ|
ಸ ಮಾನೋ ಅತ್ರ ಜುಹುರಃ ಸಹಸ್ವಃ ಸದಾ ತ್ವೇ ಸುಮನಸಃ ಸ್ಯಾಮ || 4 ||
ಆ ಯೋ ಯೋನಿಂ ದೇವಕೃತಂ ಸಸಾದ ಕ್ರತ್ವಾ ಹ್ಯ1(ಅ)ಗ್ನಿರಮೃತಾಙ್ ಅತಾರೀತ್ |
ತಮೋಷಧೀಶ್ಚ ವನಿನಶ್ಚ ಗರ್ಭಂ ಭೂಮಿಶ್ಟ ವಿಶ್ವಧಾಯಸಂ ಬಿಭರ್ತಿ || 5 ||
ಈಶೇ ಹ್ಯ (ಅ) 1 ಗ್ನಿರಮೃತಸ್ಯ ಭೂರೇರೀಶೇ ರಾಯಃ ಸುವೀರ್ಯಸ್ಯ ದಾತೋಃ |
ಮಾ ತ್ವಾ ವಯಂ ಸಹಸಾವನ್ನವೀರಾ ಮಾಪ್ಸವಃ ಪರಿಷದಾಮ ಮಾದುವಃ || 6 ||
ಪರಿಷದ್ಯಂ ಹ್ಯರಣಸ್ಯ ರೇಕ್ಣೋ ನಿತ್ಯಸ್ಯ ರಾಯಃ ಪತಯಃ ಸ್ಯಾಮ |
ನ ಶೇಷೋ ಅಗ್ನೇ ಅನ್ಯ ಜಾತಮಸ್ತ್ಯಚೇತಾನಸ್ಯ ಮಾ ಪಥೋ ವಿ ದುಕ್ಷಃ || 7 ||
ನ ಹಿ ಗ್ರಭಾಯಾರಣಃ ಸುಶೇವೋಽನ್ಯೋದರ್ಯೋ ಮನಸಾ ಮಂತವಾ ಉ |
ಅಧಾ ಚಿದೋಕಃ ಪುನರಿತ್ಸ ಏತ್ಯಾ ನೋ ವಾಜ್ಯಭೀಷಾಳೇತು ನವ್ಯಃ || 8 ||
ತ್ವಮಗ್ನೇ ವನುಷ್ಯತೋ ನಿ ಪಾಹಿ ತ್ವಮುನಃ ಸಹಸಾವನ್ನದ್ಯಾತ್ |
ಸಂ ತ್ವಾ ಧ್ವಸ್ಮನ್ವದಭ್ಯೇತು ಪಾಥಃ ಸಂ ರಯಿಃ ಸ್ಪೃಹಯಾಯ್ಯಃ ಸಹಸ್ರೀ || 9 ||
ಏತಾ ನೋ ಅಗ್ನೇ ಸೌಭಗಾ ದಿದೀಹ್ಯಪಿ ಕ್ರತುಂ ಸುಚೇತಸಂ ವತೇಮ |
ವಿಶ್ವಾ ಸ್ತೋತೃಭ್ಯೋ ಗೃಣತೇ ಚ ಸಂತು ಯೂಯಂ ಪಾತ ಸ್ವಸ್ತಿಭಿಃ ಸದಾ ನಃ || 10 ||

ಈ ಮಂತ್ರಗಳಲ್ಲಿ ಹೇಳಿದಂತೆ ಮಾನವ ಜೀವನದ ಹಲವು ಘಟ್ಟಗಳು ಆಯಾಯ ಕಾಲಕ್ಕೆ ಪೂರೈಕೆಯಾಗಬೇಕಾದ ವಿಷಯೋಪಭೋಗ ವಸ್ತು, ಪರಿಕರ, ನೆಮ್ಮದಿ, ಶಾಂತಿ, ಸುಖ, ಸಂಪತ್ತು, ಎಲ್ಲವೂ ಒಂದೊಂದು ಲೆಕ್ಕಾಚಾರದಲ್ಲಿ ನಿಮ್ಮ ಪ್ರಾಪ್ತಿಯಾಧರಿಸಿ ಋಣಕಾರಣದಿಂದ ಸಿಗುತ್ತವೆ ಎಂದಿದ್ದಾರೆ. ಅವಕ್ಕೆಲ್ಲಾ ಋಣವೆಂಬ ತ್ರಿಕಾರಣಾತ್ಮಕವು ಕರ್ಮವೆಂಬ ಸಂಪಾದಿತ ಆಸ್ತಿಯೊಂದಿಗೆ ಒಂದು ಸೂತ್ರದಡಿಯಲ್ಲಿ ಯೋಜಿಸಲ್ಪಟ್ಟಿದೆ. ಅದು ನಿಮಗೆ ಪ್ರಾಪ್ತವಾಗುತ್ತದೆ. ಅದಲ್ಲದೇ ಬೇರೆಯದು ನಿಮಗೆ ಸಿಗಲಿಕ್ಕಿಲ್ಲ. ಅದರ ಬಗ್ಗೆ ತಿಳಿಯೋಣ.

1) ಬುದ್ಧಿ, ಜ್ಞಾನ, ಶಕ್ತಿ:-  ಇವು ಕರ್ಮಕಾರಣ ಪ್ರಾಪ್ತವು. ಸಂಚಿತವಿರಬೇಕು. (ಪೂರ್ವಾರ್ಜಿತ)

2) ತಂದೆ, ತಾಯಿ, ಬಂಧುವರ್ಗ:- ಇವು ಋಣಕಾರಣ ಪ್ರಾಪ್ತವು. ಪ್ರಾಪ್ತ ಕರ್ಮ ಪ್ರಾಬಲ್ಯದಿಂದ ಒದಗುತ್ತದೆ.

3) ಕೀರ್ತಿ, ಪ್ರತಿಷ್ಠೆ, ಸ್ಥಾನಮಾನ:- ಇದು ಸಂಚಿತ ಋಣಕಾರಣದಿಂದ ಪ್ರಾಪ್ತವಾಗುತ್ತದೆ. (ಪೂರ್ವಾರ್ಜಿತ)

4) ಸೌಮನಸ್ಯ, ಸ್ನೇಹ, ಆತ್ಮೀಯತೆ:- ಪ್ರಾಪ್ತ ಕರ್ಮ ಆಧರಿಸಿ ಒದಗುವ ಪ್ರಾಪಂಚಿಕ ಅಸತ್ಯಗಳು. ಆದರೆ ಬೇಕು.

5) ಹೆಂಡತಿ, ಮಕ್ಕಳು, ಮನೆ, ಸಂಸ್ಕಾರ:- ಪೂರ್ವಾರ್ಜಿತ ಸಂಸ್ಕಾರ ಮತ್ತು ಋಣ ಕಾರಣದಿಂದ ಒದಗುವುದು.

6) ಅಧಿಕಾರ, ಯಶಸ್ಸು, ಸಮಾಜದ ಪ್ರೀತಿ :- ಪ್ರಾಪ್ತ ಕರ್ಮಾಧಾರಿತ ತಾತ್ಕಾಲಿಕ ಸತ್ಯ. ಎಚ್ಚರ ತಪ್ಪಿದರೆ ಅಸತ್ಯ.

7) ಆಚಾರ, ಸಂಪ್ರದಾಯ, ಶ್ರೇಷ್ಠತೆಯುಕ್ತ ಸಂಸ್ಕಾರ:- ಆಗಾಮಿಯುಕ್ತವಾದ ಸ್ವಾಭಾವಿಕ ಪ್ರಾಪ್ತಗಳು.

8) ಹೊಸ ವಿಚಾರ, ಅನ್ವೇಷಣೆ, ತುರೀಯಾವಸ್ಥೆ:- ಋಣತ್ರಯ ಹೊರತುಪಡಿಸಿದ ಧೈವಾಯತ್ತಗಳು. (ಸಚ್ಚಾರಿತ್ರ್ಯ ಬೇಕು)

9) ಮನಃ ಪಕ್ವತೆ, ಋಣಂಚಯ, ಆನಂದಾನುಭೂತಿ :- ಇದೂ ಧೈವಾಯತ್ತ. (ಸಚ್ಚಾರಿತ್ರ್ಯ ಬೇಕು)

ಇವೆಲ್ಲವೂ ಸ್ವಾಭಾವಿಕ  ಪ್ರಾಪ್ತವಾದರೂ ನಿಮ್ಮ ಹುಟ್ಟು, ಕುಲ, ಗೋತ್ರ, ಪ್ರವರ, ದೇಶ, ಕಾಲ, ಶಕ್ತಿ, ಪುಣ್ಯ, ಧೈವಗಳ ಪ್ರಾಬಲ್ಯತೆಯಿಂದ ಪ್ರಾಪ್ತವಾಗುವವು. ಅವು ದೊರಕುವುದು 9 ರೀತಿಯ ಗಣಿತ ಲೆಕ್ಕಾಚಾರದಂತೆಯೇ. ಅದನ್ನರಿತು ಪ್ರಾಪ್ತಕ್ಕೆ ಮಾತ್ರಾ ಹೋರಾಡಿದರೆ ಸಾಕು. ತನ್ನಲ್ಲಿದ್ದುದ್ದರ ಬಗ್ಗೆ ಚಿಂತನೆ ಬಿಟ್ಟು ಸುಖಾನಂದ ಅನುಭವಿಸುತ್ತಾ ನೆಮ್ಮದಿ ಜೀವನ ಕಳೆಯಬಹುದು. ಇದು ಆಯಾಯ ವರ್ಷದ ವರ್ಷಾದಾಯ ಫಲಾಧಾರಿತವಾಗಿ ಪಂಚಾಂಗದಲ್ಲಿ ವಿವರಿಸಿರುತ್ತಾರೆ. ಅದನ್ನು ಅರ್ಥ ಮಾಡಿಕೊಂಡರೆ ಸುಲಭ. ಅದನ್ನು ಗಣಿತರೀತ್ಯಾ ಲೆಕ್ಕಾಚಾರ ಹಾಕಿದರೆ ನಮ್ಮ ಪ್ರಾಪ್ತಿ ನಮಗೆ ದೊರಕುತ್ತದೆ. ಅದರ ಒಟ್ಟು ಸೂತ್ರ ಸಮೀಕರಣ ಈ ರೀತಿಯಿದೆ. 4-3-2-7 ರ ಅನುಪಾತದಲ್ಲಿ ಎಲ್ಲವೂ ಲಭ್ಯ ಪ್ರಾಪ್ತ. 4 ರೀತಿಯ ಅರ್ಥಗಳಲ್ಲಿ 3 ರೀತಿಯ ಋಣಗಳು ಮತ್ತು 2 ರೀತಿಯ ಪ್ರವರ್ತನೆ ಹೊಂದಿಸಿ ಕೊಂಡಲ್ಲಿ 7 ರೀತಿಯ ಎಲ್ಲವುದರ ಕೂಡುವಿಕೆ, ಕೊಳ್ಳುವಿಕೆ, ಕೊಡುವಿಕೆ ಸಾಧ್ಯ. ಇದು ಒಟ್ಟು ಸೂತ್ರ. ಇದರೊಂದಿಗೆ ಹಿಂದೆ ತಿಳಿಸಿದ ಜನ್ಮಾದಿ 9 ಭಾಜಕವಾದರೆ ಪ್ರಾಪ್ತಿ. ಶೇಷವಾದರೆ ಇಲ್ಲ. ಇದು ವಸಿಷ್ಠರ ಅನ್ವೇಷಣೆಯ ಒಂದಂಶದ ಸ್ಥೂಲ ಪರಿಚಯ. ಇದಕ್ಕೆ ಉದಾಹರಣೆಯಾಗಿ ಗಮನಿಸಿ.

ಉದಾ:- ಒಂದು ಗಂಡು ಹೆಣ್ಣು ಮನಃಪೂರ್ವಕವಾಗಿ ಒಪ್ಪಿ ಮದುವೆಯಾಗುತ್ತಾರೆ. ಅವರ ಸಾಂಸಾರಿಕ ಜೀವನ ಆರಂಭಿಸುತ್ತಾರೆ. ಅವರಲ್ಲಿ ಸಂತಾನ ಆಗುವುದಿಲ್ಲ. ನಾನಾ ಪ್ರಯತ್ನ ಮಾಡುತ್ತಾರೆ. ಪೂಜೆ, ಪುನಸ್ಕಾರ, ತೀರ್ಥಯಾತ್ರೆ, ಕ್ಷೇತ್ರಪರ್ಯಟನೆ, ನಾನಾ ಚಿಕಿತ್ಸೆ ಎಲ್ಲವೂ ಮಾಡಿದರೂ ಆಗುವುದಿಲ್ಲ. ಕಾರಣ ಗೊತ್ತಿಲ್ಲ. ಆದರೆ ಋಣ ಭೋಜ್ಯವಾದ ಪ್ರಾಪ್ತಿಯಿರುವುದಿಲ್ಲವಾದ ಕಾರಣ ಮಕ್ಕಳಾಗುವುದಿಲ್ಲ. ಉಳಿದೆಲ್ಲಾ ಸಂಸ್ಕಾರ, ಸಂಸಾರ ಸರಿಯಾಗಿದೆ. ಕಾರಣ ತಿಳಿಯದೇ ಬಸವಳಿಯುತ್ತಾರೆ, ಬೆಂಡಾಗುತ್ತಾರೆ. ತನ್ಮೂಲಕ ತಮ್ಮ ಮನಃ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳುತ್ತಾ ಎಲ್ಲವನ್ನೂ ದೂಷಿಸ ಲಾರಂಭಿಸುತ್ತಾರೆ. ಧೈವನಿಂದನೆ ಮಾಡುತ್ತಾರೆ. ಆದರೆ ಅದು ಫಲದಾಯಕವಲ್ಲ. ಈ ಮೇಲೆ ಹೇಳಿದ ಐದನೆಯ ಮಂತ್ರದ ಸೂತ್ರದಂತೆ ನಡೆದುಕೊಂಡರೆ ಋಣವಿದ್ದರೆ ಸಂತಾನ. ಇಲ್ಲದಿದ್ದರೆ ವ್ಯರ್ಥ. ಯಾವ ವೈದ್ಯಕೀಯ ವಿಜ್ಞಾನಕ್ಕೂ ಸಾಧ್ಯವಿಲ್ಲ. ನಂತರ, ಕೃತಕವಿಧಾನ ಅಥವಾ ದತ್ತಕಾದಿ ವಿಧಾನ ಅಷ್ಟೆ.

ಮಂತ್ರ ಹೇಳಿದೆ , ಯೋ, ಯೋನಿಂ ದೇವಕೃತಂ ಸಸಾದ ಅಗ್ನಿಂ, ಅಮೃತಾ, ಕೃತ್ವ್ಯಾ ಎಂದಿದೆ. ಹಾಗೇ ವ್ಯಾಪ್ತತೆಯಲ್ಲಿ ವಿಶ್ವಕರ್ಮ, ಓಷಧಿ, ವನಿನ, ಭೂಮಿ, ಗರ್ಭ ಈ ಸಂಸ್ಕಾರಗಳೂ ಬೇಕು ಎಂದಿದ್ದಾರೆ. ಹಾಗೇ ಓಷಧಿ ಎಂದಾಗ ಓಷಧೀ ತ್ರಯ ವನಿನ ಪಂಚಾಪಂಚಾಃ ಭೂಮಿರೇಕಂ  ವಿಶ್ವಕರ್ಮಾ ಷೋಡಶಃ ಗರ್ಭ ಅಷ್ಟಮ ಎಂದಿದೆ. ಎಲ್ಲವೂ ಸಮನಿದ್ದರೆ ಋಣದಲ್ಲಿ ಭಾಗಿಸಿದಲ್ಲಿ ಶೇಷವೇ ಸಂತಾನವೆಂದಿದ್ದಾರೆ. ಗರ್ಭ ಅಷ್ಟಮವೆಂದರೆ ಏಳು ಭಾಗಾಕಾರ ಧಾತು ಋಣ. 8 ನೆಯದು ಫಲ ಮಗುವೆಂದರ್ಥ. ಹೀಗೆ ಎಲ್ಲಾ 9 ಪ್ರಾಕಾರಗಳೂ ಅಷ್ಟೆ. ಋಣದಲ್ಲಿ ಭಾಗಿಸಿ ಹೋಗಿ ಶೇಷವಿದ್ದರೆ ಫಲ. ಅಂದರೆ ಉಳಿಕೆ ಋಣವೇ ನಿನ್ನಂಟಿಕೊಳ್ಳುವುದು ಎಂದರ್ಥ. ಇದನ್ನು ಹಲವು ರೀತಿಯಲ್ಲಿ ವಿಮರ್ಶಿಸಿ ಬೇರೆ ಬೇರೆ ಕೋಣದಿಂದ ವಸಿಷ್ಠರು ಕಂಡುಕೊಂಡಿದ್ದಾರೆ. ಒಟ್ಟು ಗೃಹಸ್ಥಾಶ್ರಮ ಮತ್ತು ಮಾನವನ ನಿರ್ಧಿಷ್ಟ ಜೀವನಕ್ಕೆ ಒಂದು ವಿಶೇಷ ಮಾರ್ಗದರ್ಶನ ಮಾಡಿದ್ದಾರೆ.

ಹಾಗೇ ಜೀವಗತಿ ಮತ್ತು ಜೀವವೈವಿಧ್ಯವನ್ನಾದರೂ ಕೂಡ ಗಣಿತ ಸಮೀಕರಣ ಬಿಟ್ಟಿಲ್ಲವೆಂದೂ ಹೇಳಿದ್ದಾರೆ. ಅದರ ವಿವರ ಗಮನಿಸೋಣ.

ಋ.ಮಂ.7 ಸೂ.8 ಮಂ.6
ಇದಂ ವಚಃ ಶತಸಾಃ ಸಂಸಹಸ್ರಮುದಗ್ನಯೇ ಜನಿಷೀಷ್ಟ ದ್ವಿಬರ್ಹಾಃ |
ಶಂ ಯತ್ ಸ್ತೋತೃಭ್ಯ ಆಪಯೇ ಭವಾತಿ ದ್ಯುಮದಮೀವಚಾತನಂ ರಕ್ಷೋಹಾ ||

ವಸಿಷ್ಠರು ಹೇಳುತ್ತಾರೆ, ಜಗತ್ತಿನ ಬಾಧೆಗಳು, ಸಂಕಷ್ಟಗಳು, ಆಪತ್ತುಗಳು, ವಿಪತ್ತುಗಳು ಎಲ್ಲವೂ ಋಣ+ ಕರ್ಮಾಧಾರಿತವೇ. ಆದರೆ ಅದನ್ನು ವ್ಯಾವಹಾರಿಕ ಜಗತ್ತಿನ ಭಿನ್ನತೆಯ ಹೊಂದಾಣಿಕೆಯಿಂದ ಸರಿಪಡಿಸಬಹುದು. ವಿಪತ್ತು ಸಂಕಷ್ಟಾದಿಗಳಿಲ್ಲದ ಸಮಾಜ ಸೃಷ್ಟಿಸಬಹುದು. ಅದೂ ಸೂತ್ರದಲ್ಲಿದೆ ಎಂದರು. ಪ್ರಮೇಯ ಒಂದು ವಿಧಿ ಬದ್ಧ ನಿಯಮಕ್ಕೆ ಒಳಪಟ್ಟ ವಿಚಾರ, ವಿಷಯ ಎಂದರ್ಥ. ಜನರು ಒಗ್ಗಟ್ಟಾಗಿ ಏಕತೆಯಿಂದ ಬದುಕುವುದರಿಂದ ಹಲವು ರೀತಿಯ ಸಮಸ್ಯೆಗಳು ದೂರಾಗುತ್ತವೆ. ಅದರಲ್ಲಿ ಮುಖ್ಯವಾಗಿ ಗ್ರಹಗತಿಯಾಧರಿಸಿ ನೂರಾರು ಸಮಸ್ಯೆಗಳು ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತವೆ. ಹಾಗೆ ನಮ್ಮ ಪ್ರಾಪಂಚಿಕ ಜೀವನ ಮಧ್ಯದ ಸಾವಿರಾರು ಸಮಸ್ಯೆಗಳಿಂದ ಒಕ್ಕೂಟ ಜೀವನ ಪರಿಹಾರ ಕೊಡಬಲ್ಲದು ಎಂದಿದ್ದಾರೆ. ಅವೆಲ್ಲ ಒಂದು ವಿಶಿಷ್ಟ ಪ್ರಮೇಯದಡಿಯಲ್ಲಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವಸಿಷ್ಠರು.


ಉದಾ:- ಒಬ್ಬ ಮನುಷ್ಯನಿಗೆ ಏಳೂವರೆ ಶನಿಕಾಟ, ಅವನಿಗೆ ಯಾವುದೇ ದುಡಿಮೆ ಕೈಗೂಡುವುದಿಲ್ಲವೆಂದಿಟ್ಟುಕೊಳ್ಳಿ. ಅವನು ಏಕಾಕಿಯಾದರೆ ಊಟಕ್ಕೂ ಗತಿ ಇರಲಾರದು. ಆದರೆ ಒಕ್ಕೂಟದಲ್ಲಿ ಬದುಕುತ್ತಿದ್ದರೆ ಅವನನ್ನು ಆ ಸಮಸ್ಯೆ ಕಾಡಲಾರದು. ಏಕೆಂದರೆ ಉಳಿಕೆಯವರು ತಮ್ಮ ಉತ್ತಮ ಗ್ರಹಗತಿ ಕಾರಣದಿಂದಾಗಿ ಚೆನ್ನಾಗಿ ದುಡಿಯುವುದರಿಂದ ಯಾರಿಗೂ ಯಾವ ಕೊರತೆಯೂ ಉಂಟಾಗಲಾರದಲ್ಲವೆ? ಇಂತಹಾ ಹಲವು ಉದಾಹರಣೆಗಳು ಇವೆ. ಅವೆಲ್ಲಾ ಸಮಸ್ಯೆಗಳ ಸಮತೋಲನ ಸೂತ್ರದಂತೆ ಇವೆ. ವಸಿಷ್ಠರ ಸಾಧನೆ ಲೆಕ್ಕಾಚಾರ ಹೇಳುತ್ತಾ ಹೋದರೆ ಮುಗಿಯದ ಕಥೆ. ಈಗಿನ ಕಾಲದವರಿಗೆ ಅದು ಅರ್ಥವಾಗದಿರಬಹುದು. ವಸಿಷ್ಠರು ನಡೆದು ಬಂದ ದಾರಿ ಗಮನಿಸಿದರೆ ಆ ಕಾಲದ ಅಗತ್ಯ ಅರ್ಥವಾಗುತ್ತದೆ.

ಅವುಗಳಲ್ಲಿ ಕೆಲ ಗೃಹಸ್ಥರ ಗೃಹಕೃತ್ಯದ ಅಗತ್ಯಗಳ ಬಗ್ಗೆ, ಆಹಾರ ಉತ್ಪಾದನೆ ಮತ್ತು ಹಂಚುವಿಕೆಯ ಸಮತೋಲನ ವಿಚಾರ ಎಲ್ಲವನ್ನೂ ವಿವರಿಸಿದ್ದಾರೆ. ಹಾಗೇ ವೃತ್ತಿಗಳ ಹಂಚಿಕೆ, ವೃತ್ತಿಗಾರರ ಏಕತೆ, ಸಾಮಾಜಿಕ ಸಮಾನತಾಸೂತ್ರ, ಸಮಾನ ಗೌರವ ಇವನ್ನೆಲ್ಲಾ ಕೆಲ ವಿಶೇಷ ಸೂತ್ರಗಳಲ್ಲಿ ಸಮೀಕರಿಸಿ ಬದ್ಧ ಭದ್ರ ಸಮಾಜಕ್ಕೆ ಬುನಾದಿ ಹಾಕಿದವರು ವಸಿಷ್ಠರು. ಅವರ ಎಲ್ಲಾ ವಿಚಾರವನ್ನೂ ಮುಂದೆ ಪ್ರಕಟಿಸುತ್ತೇವೆ.
ಇಂತು

ಕೆ. ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ, 
ಬಂದ್ಯೋಡು, ಕಾಸರಗೋಡು.

Wednesday, 10 December 2014

सर्वभाषामयी भाषा सिरिभूवलय ग्रंथ का उदय तथा विकास

आंग्लमे परिवर्तित कन्नड अंकों के एक चक्र के दृष्टांत जिससे ७१८ भाषावों के साहित्य निकाला जासक्ता है ।
२२ वें तीर्थंकर नेमीजी से यह देववाणी द्वारका नगर के श्रीकृष्णजी को उपदेश के रूप में प्राप्त हुई । तदनंतर व्यास महर्षिजी को यह देववाणी उनकी रचना जयाख्यान में संग्रहित हुई । यही देववाणी 'भगवद्गीता' के एक सौ तिरसठ श्लोकों के रूप संकलित हुए । युद्ध से बिमुख हुए अर्जुनदेव को श्रीकृष्णजी ने 'भगवद्गीता' का उपदेश दिया ।

तेईस्वे तीर्थंकर पार्श्वनाथजी के शिष्य गौतम, बुद्ध बनकर बौद्धमत की स्थापना की । चौबीसवें तीर्थंकर महावीरजी से उनके गणधर गौतमजी को यह देववाणी उपदेश के रूप में  प्राप्त हुई । गौतम गणधरजी ने इस भगवद्वाणी को 'पूर्वेकाव्य' के नाम से ग्रंथस्त कर लिया । इस ग्रंथ के अन्य नाम हैं - 'मंगलपाहूड' तथा करणसूत्र । गौतमजी ने इस देववाणी को श्रेणिक नाम के राजा को उपदेश दिया । दस गुरु परम्परा के पश्चात प्रभावसेनजी नामक गुरू ने कन्नड, संस्कृत और प्राकृत प्रधान 'मंगलपाहुड' को निरूपण किया । इसी गुरू परम्परा में आगे चलकर ई.सन ४०० में भूतबलीजी इस देववाणी को 'भूवलय' के नाम से निरूपण किया । यही गुरू परम्परा आगे चलकर पंचदवलो के रूप की देववाणी को वीरसेनाचार्यजी ने व्याख्यान की रचना की । इ.सन ८२० इनका शिष्य जिनसेनजी ने लगभग इसी समय में 'महापुराण' का संकलन किया । चौबीसवें तीर्थंकर महावीरजी के निर्वाण होनॆ के पश्चात एक हजार डेढ़ वर्ष में कुमुदेन्दु मुनीजी ने ई.सन ८०० कॆ लग्भग में 'नूतन-प्राक्तन' नामक दो क्रमों में जो 'भगवद्वाणी' थी, उसे कन्नड अंकों में, और नवमांक क्रम में, सर्वभाषामयी कन्नड भाषा में रचा गया । हां! उन्होंनॆ 'सर्वभाषामयी-भाषा सिरिभूवलय' कॆ नाम से कन्नड अंक काव्य के रूप में ताल पत्रों में लिखा है ।

भरतखंड (भारत) का एक प्राचीन सम्राट का नाम था ऋषभदेव (आदी तीर्थंकर) । उनकॆ दो पत्निया‍ थी - यशस्वतीदेवी और सुनन्दादेवी । उनकी संतानें थी - भरत, बाहुबली, ब्राह्मीदेवी और सौन्दरीदेवी । बाहुबली के अन्य नाम थे अजित और गॊम्मट ।

आदितीर्थंकर ऋषभदेवजी को केवलज्ञान (मोक्षज्ञान) प्राप्त था । उसका (केवलज्ञान का) सारही सिरिभूवलय ग्रंथ का मूलाधार है । ऋषभदेवजी ने अपनी पुत्रियों को समझाया कि कन्नड अंक ही अक्षर है और कन्नड अक्षर ही अंक है एवं उन्होंनॆ इनके स्वरूप को भी समझाया ।

ऋषभदेवजी के मुख से निकली हुई देववाणी को आदिमन्मथ स्वरूपी गोम्मटदेव ने अंकबंध के रूप में स्वीकार किया तथा यह देववाणी बडे भाई भरतजी को उनसे प्राप्त हुई । यह दिव्यवाणी आगे तीर्थंकर संभवजी को प्राप्त हुई । इसी क्रम में एक के बाद एक को यानी अभिनंदन सुमति; पद्मप्रभा; सुपार्श्व; चन्द्रप्रभा, पुष्पदन्त, शीतल, श्रेयांस, वासुपूज्य; विमल; अनंत; धर्म; शांती; कुन्थू; अर; मल्ली, मुनिसुब्रत, नमी, नेमी आदि २१ तीर्थंकरों तक यह देववाणी की धारा उपदेश के रूप मे प्रवाहित हुई । जैन सम्प्रदाय के प्राचीन ग्रंथों से पता चलता है कि इन तीर्थंकरों की कालावधी में कभी-कभी तीन हजार वर्षों का अंतर था । अति प्राचीन तीर्थंकरों की जीवनावधी लाखों वर्षों का अंतर था ।

कुमुदेन्दु मुनीजी नें 'सर्वभाषामयी भाषा सिरिभूवलय' ग्रंथ को गंगरस यानी गंगवंश के राजा शिवमारजी (सन ७८८-८१२), और राष्ट्रकूट चक्रवर्ती (सम्राट) अमोघवर्ष नृपतुंग (ई.सन ८१४-८८०) को उपदेश किया । भविष्य में सेनगण के सेनाधिपति सेनजी की धर्मपत्नी मल्लिकब्बेजी ने 'सिरिभूवलय' ग्रंथ का कोरे कागज में नकल करवाया । उन्होंनॆ अपने गुरू माधनंदीजी (माघणनंदी) को शास्त्रदान किया । इस ग्रंथ की प्रति लिपियों में एक प्रति लिपि बॆंगळूर-तुमकूर रेल मार्ग पर स्थित दॊड्डबेलॆ नामक ग्राम (कर्नाटक प्रांत) के निवासी सुप्रसिद्ध आयुर्वेद चिकित्सक धरणेन्द्र पंडितजी के घर में रही थी । वे अपने मित्र चन्दापंडितजी के साथ अंकलिपि में रचित 'सिरिभूवलय' सुनाकर व्याख्यान देते थॆ । यह एक ऐतिहासिक (विषय) प्रसंग है । सन १९१३ में धरणेंद्र पंडितजी का देहांत हुआ । आगे चलकर बॆंगळूर के औषधालय के मालिक ऎल्लप्प शास्त्रीजी ने इस प्राचीन अंक-काव्य खरीद लिया और अपने ग्रंथालय में संग्रह किया ।

सर्वभाषामयी, सर्वशास्त्रमयी, एवं सर्वज्ञानमयी के नामों से विख्यात सिरिभूवलय में रसविध्या है । इस ग्रंथ का अध्ययन कर 'सुवर्ण (सोनॆ)' की सृष्टि करने का स्वन्प ऎल्लप्पशास्त्रीजी ने देखा था । सन १९२७ के स्वातंत्र्य आन्दोलन के संदर्भ में कर्लमंगलम श्रीकंठय्याजी बॆंगळूर में आकर बस गए । वे बहुभाषा विद्वान थे । उन्होंने इस ग्रन्थ का रहस्य खोजनॆ का निश्चय किया । उनके अथक परिश्रम से सिरिभूवलय अंकों के शृंखला से मुक्त हो गया । उन्होनॆ कन्नड के सांगत्य नामक छन्दों में तथा कन्नड अक्षर लिपि में सिरिभूवलय की रचना की ।

सन २९५३ ई. में बॆंगळूर कॆ कन्नड साहित्य परिषद ने सिरिभूवलय को पुस्तक के रूप में प्रकाशित किया । इस ग्रंथ के उत्तराधिकारी (वारिसदार) ऎल्लप्पशास्त्रीजी, ग्रंथ-संशोधक कर्लमंगलम श्रीकंठय्याजी, इनके सगे मित्र कन्नड के परम सेवक अनंतसुब्बरावजी ने जीवन पर्यंत ग्रन्थ के प्रचारक बनकर सेवा की । अनंतसुब्बराव जी से सुप्रेरणा प्राप्त कर निश्चय इतिहास के आधार पर सिरिभूवलय सार रूप को सुधार्थीजी ने पाठकों कॆ करकमलों में समर्पित किया है । 'सर्वभाषामयी भाषा सिरिभूवलय सार' नामक कन्नड ग्रन्थ में प्राचीन अंक काव्य का उदय, विकास, तथा इतिहास पर सुधार्थिजी ने एक विहंगम दृष्टी डाली है ।

मूल कन्नड परिचयकार : सुधाथी हासन
भावानुवाद : ऎस. रामण्ण
अंतर्जाल्मे प्रचारक : हेमन्त कुमार जि