Saturday, 15 February 2014

ಋಗ್ವೇದದಲ್ಲಿ ಗೃತ್ಸಮದ ಋಷಿವರೇಣ್ಯರ ಗಣಿತಸೂತ್ರಗಳು - ೨

ಹಿಂದಿನ ಲೇಖನದಲ್ಲಿ ಗೃತ್ಸಮದರು ಮಾನವನ ಉನ್ನತಿ ತನ್ಮೂಲಕ ಜೀವ ವಿಕಾಸ ದೃಷ್ಟಿಯಿಂದ ಈ ಯಜ್ಞಗಳು, ಧ್ಯಾನಾದಿಗಳು, ತಪಸ್ಸು, ಸೇವೆ + ಚಿಕಿತ್ಸೆ, ಅಧ್ಯಯನ + ಅಧ್ಯಾಪನ, ಚಿಂತನೆ + ಮನನ, ಕೃಷಿ + ಪಶುಸಂಗೋಪನೆ, ಕ್ಷೇತ್ರಾಧಿವಾಸ,  ಪರ್ಯಟನೆ, ಆತ್ಮನಿವೇದನೆ ಎಂಬ ೧೦ ವಿಶೇಷ ಮಾರ್ಗಗಳನ್ನು ಹೇಳಿದರು ಮತ್ತು ಅವಕ್ಕೆ ಕೆಲ ಉತ್ತಮ ಮಾರ್ಗದರ್ಶನ ಮಾಡಿದರು. ಈ ದಶವಿಧ ಉಪಾಯಗಳನ್ನು ತಿಳಿಸುತ್ತಾ ಇದರ ಬಗ್ಗೆ ವಿಶೇಷ ಸೂತ್ರಗಳನ್ನೂ ಕನ್ನಡ ಕಂದಪದ್ಯಗಳಲ್ಲಿ ನೀಡಲಾಗಿತ್ತು.
        
ಮಾನವನಿಗೆ ಒಂದು ಲೆಕ್ಕವಿದೆ. ಅವನ ಬಂಧುಗಳೂ, ಬಾಂಧವರೂ, ತಂದೆ, ತಾಯಿ, ಸಹೋದರರೂ ಕೂಡ ಋಣ ಲೆಕ್ಕವೇ. ಹಾಗೇ ಹರಿಹರರೂ ಲೆಕ್ಕದಲ್ಲಿರುವವರೇ! ಅವರವರ ಲೆಕ್ಕ ಅವರವರಿಗೆ. ಮಾನವ ತನ್ನ ಲೆಕ್ಕವನ್ನು ಸರಿಯಾಗಿಟ್ಟು ಯಾರ ಲೆಕ್ಕದಲ್ಲಿ ನಿಶ್ಶೇಷನಾಗುತ್ತಾನೋ ಅವನಾಗಿ ಪರಿವರ್ತಿತನಾಗುತ್ತಾನೆ. ಅದೇ ಸಾಧನೆಯೆಂದರು.

ಋಗ್ವೇದ ಮಂಡಲ -, ಸೂಕ್ತ-೧೪, ಮಂತ್ರ-, , , , .
अध्व॑र्यवो॒ यो दृभी॑कं ज॒घान॒ यो गा उ॒दाज॒दप॒ हि व॒लं वः ।
तस्मा॑ ए॒तम॒न्तरि॑क्षे॒ न वात॒मिन्द्रं॒ सोमै॒रोर्णु॑त॒ जूर्न वस्त्रै॑: ॥   
अध्व॑र्यवो॒ य उर॑णं ज॒घान॒ नव॑ च॒ख्वांसं॑ नव॒तिं च॑ बा॒हून् ।
यो अर्बु॑द॒मव॑ नी॒चा ब॑बा॒धे तमिन्द्रं॒ सोम॑स्य भृ॒थे हि॑नोत ॥    
अध्व॑र्यवो॒ यः स्वश्नं॑ ज॒घान॒ यः शुष्ण॑म॒शुषं॒ यो व्यं॑सम् ।
यः पिप्रुं॒ नमु॑चिं॒ यो रु॑धि॒क्रां तस्मा॒ इन्द्रा॒यान्ध॑सो जुहोत ॥    
अध्व॑र्यवो॒ यः श॒तं शम्ब॑रस्य॒ पुरो॑ बि॒भेदाश्म॑नेव पू॒र्वीः ।
यो व॒र्चिन॑: श॒तमिन्द्र॑: स॒हस्र॑म॒पाव॑प॒द्भर॑ता॒ सोम॑मस्मै ॥ 
अध्व॑र्यवो॒ यः श॒तमा स॒हस्रं॒ भूम्या॑ उ॒पस्थेऽव॑पज्जघ॒न्वान् ।
कुत्स॑स्या॒योर॑तिथि॒ग्वस्य॑ वी॒रान्न्यावृ॑ण॒ग्भर॑ता॒ सोम॑मस्मै ॥    

ಆ ಸಾಧನೆಯಾಗಬೇಕಿದ್ದಲ್ಲಿ ಮೊದಲಾಗಿ ನಿನ್ನ ಮೊತ್ತವೆಷ್ಟು ಅರಿತುಕೊ. ಅದಕ್ಕೆ ಸರಿತೂಗುವ ನಿನ್ನ ಸಂಪತ್ತೆಷ್ಟು? ಹಾಗೆ ನಿನ್ನ ಸಾಂಸಾರಿಕ ಸಂಬಂಧಗಳೆಷ್ಟು? ಅವೆರಡರ ಮೊತ್ತವೂ ಸರಿಗಟ್ಟುತ್ತದೆ. ನಿನ್ನ ಪತ್ನೀ ಸುತರ ಮೊತ್ತಕ್ಕೆ ನೀನೇ ಭಾಜನನು. ಹಾಗೇ ನಿನ್ನ ವಸತಿ, ವಸನ, ವಿಹಾರ, ಆಹಾರ, ಚಯನ, ಅಯನಗಳನ್ನು ಗುಣಿಸಿದರೆ ಅದು ನಿನ್ನ ಅಧಿಕೃತ ಮೊತ್ತ. ಅವೆಲ್ಲವೂ ನೀನು ಅನುಭವಿಸಿಯೇ ತೀರಬೇಕಾದ ಋಣಗಳು.

        ಅವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಜೀರ್ಣಿಸಿಕೊಂಡಲ್ಲಿ ಶುಭವೂ, ಸುಲಭವೂ ಆದ ರೀತಿಯಲ್ಲಿ ಅದರಿಂದ ಮುಕ್ತನಾಗಬಹುದು. ಆ ಲೆಕ್ಕ ಅರ್ಥವಾಯ್ತೇ? ನಿನ್ನ ಮೊತ್ತ x ನಿನ್ನ ಸಂಪದ + ಸಾಂಸಾರಿಕ ಸಂಬಂಧ ಮೊತ್ತ = ಪತ್ನಿ = ಮಗ = ಒಟ್ಟು ಮೊತ್ತ x ಆಯ, ವಸತಿ, ವಸನ, ಆಹಾರ, ವಿಹಾರ, ಚಯನ, ಆಯನಗಳ ಮೊತ್ತ. ಇವೆಲ್ಲವೂ ನಿನ್ನ ಸ್ವಂತ. ಅದು ನಿನ್ನದ್ದೇ ಆಗಿರುತ್ತದೆ. ಇನ್ನು ಎರಡನೆಯದಾದ ಕರ್ಮ + ಋಣ. ಅದಕ್ಕೊಂದು ಸೂತ್ರವಿದೆ. ನಿನ್ನ ಹುಟ್ಟು + ವಂಶೀಕ ಬದ್ಧತೆ + ಕುಲಾಚಾರ ಮೊತ್ತಗಳ ದ್ವಿಗುಣೀಕೃತ ಮೊತ್ತಕ್ಕೆ ಶುಷ್ಣ + ಉಷಸಗಳನ್ನು ಸೇರಿಸಿದರೆ ಅದೇ ನಿನ್ನ ಸಾಮಾಜಿಕ ಋಣ ಅಥವಾ ಬದ್ಧತೆ. ಇನ್ನು ಯೋಗಗಳು :- ಮನಸ್ಸನ್ನು ಕೇಂದ್ರೀಕರಿಸಿ ವಿಚಾರ ಬದ್ಧತೆಯಲ್ಲಿ ನೆಲೆನಿಂತು ನಿರಂತರ ಜಾಗ್ರತ್ಸ್ವಪ್ನ ಸುಷುಪ್ತಿಯಲ್ಲಿಯೂ ವಿಚಾರ ಭೇದ ಹೊಂದದೆ ವಿವೇಕಯುತ ನಡೆಯೇ ಧ್ಯಾನವೆನ್ನಿಸುತ್ತದೆ. ಇದು ನಿರಂತರ. ವಿಕ್ಷಿಪ್ತ ಮನಸ್ಸಿನ ಸಂಸ್ಕಾರ. ಅದು ವಿಚಾರ ಬದ್ಧತೆಯಲ್ಲಿರಲೇಬೇಕು. ಎಂದೆಂದಿಗೂ ಭಿನ್ನವಾಗಲಾರದು. ಅದನ್ನೇ ಹಿರಿಯರು "ಆತ್ಮಾನುಸಂಧಾನ" ಎಂದರು. ಯೋಗಿಗೆ ಆಸೆ ಆಕಾಂಕ್ಷೆಗಳಿಲ್ಲ. ಮದ ಮೋಹಗಳಿಲ್ಲ. ಲೋಭವಿಲ್ಲ, ಕೋಪವಿಲ್ಲ, ನಿರಂತರ ಏಕೀಭವಿಸಿದ ಮನಸ್ಸಿನಲ್ಲಿ ಏಕತಾನತೆಯ ಆನಂದಾನುಭೂತಿ ಕೂಡಿರುತ್ತದೆ. ಅದೇ ಯೋಗವೆನ್ನುವರು.

        ಈ ಮೇಲೆ ಉದಾಹರಿಸಿದ ಹತ್ತು ಮಾರ್ಗವೂ ಕೂಡ ಯಾರು ಚರಿಸಬಲ್ಲರೋ ಅವರೇ ನಿಜವಾದ ಯೋಗಿಗಳು ಅಥವಾ "ದಶರಥರು" ಎನ್ನಿಸಿಕೊಳ್ಳುತ್ತಾರೆ. ಅದಕ್ಕಾಗಿ ಮಾನವ ಜೀವನ ಅಧ್ವರ್ಯವಾಗಿರಬೇಕು. ನಿತ್ಯನೂತನವಾಗಿರಬೇಕು. ಹಾಗೆಂದು ಪ್ರಲೋಭನೆಗೆ ಸಿಗಬಾರದು. ಅಹಿಂಸಾತ್ಮಕ ಜೀವನವಾಗಿರಬೇಕು. ಅದನ್ನೇ ಗೃತ್ಸಮದರು ಸೂಚಿಸಿದ ಮಂತ್ರಗಳಲ್ಲಿ ಸೂತ್ರೀಕರಿಸಿ ವಿವರಿಸಿದ್ದಾರೆ.

೧. ಕೇಳು ಮಾನವ ನಿನಗೆ ಕೈಯೆರಡು ಕಾಲೆರಡು
    ಕೇಳುವಾ ಕಿವಿಯೆರಡು ಮೂಗೆರಡು ನಾಲಗೆ
    ಹೇಳುವಾ ಮಾತಿನಲೆರಡು ಇವೆ ಕೇಳು ಉಚ್ಛರಿಪ ತುಟಿಗಳೆರಡೂ ಕಾಣೆಲೊ |
    ಹೇಳುವೆನು ಕೇಳ್ ಎಲ್ಲವೂ ಎರಡೆರಡಿದ್ದರೂ
    ಕೇಳದು ಏಕಕಾಲದಿ ಕೆಲಸವೊಂದೇ ಮಾಡುವವು
    ಬಾಳಿನಾ ಸತ್ಯವಿದು ಲೋಕದಲಿ ಬ್ರಹ್ಮವೊಂದೇ ತೋರ್ಪುದು ಎರಡಾಗಿ ನಿನಗೇ ||

೨. ಈ ಒಂದೆರಡರ ಮಧ್ಯದಲಿ ತಿಣುಕದಿರು ನೀ
    ಈಜಲುಬೇಕು ಲೋಕಸಾಗರವ ಮೂರರಲಿ
    ನೀ ಒಂದನಾರಿಸಿಕೊಂಡಾಡೆ ಜಗ ಮೆಚ್ಚುವಾ ಮಗನಪ್ಪೆ ಮೂರು ಬೇಡಾ |
    ಈ ಸತ್ಯವನರಿತವನು ಯೋಗಿಯು ಲೋಕದಲಿ
    ಈಜಬಲ್ಲನು ಭವದ ಸಾಗರವ ದಾಟಬಲ್ಲನು
    ಈಶನಪ್ಪನು ಲೋಕಾಕೆಲ್ಲವು ಅವನ ಅಡಿಯಾಳು ಪ್ರಾಪಂಚಿಕವು ||

ಋಗ್ವೇದ ಮಂಡಲ - ೨, ಸೂಕ್ತ - ೧೫, ಮಂತ್ರ - ೯
स्वप्ने॑ना॒भ्युप्या॒ चुमु॑रिं॒ धुनिं॑ च ज॒घन्थ॒ दस्युं॒ प्र द॒भीति॑मावः ।
र॒म्भी चि॒दत्र॑ विविदे॒ हिर॑ण्यं॒ सोम॑स्य॒ ता मद॒ इन्द्र॑श्चकार ॥

೩. ಈಗಲೀಗವು ಜಗವು ತೋರ್ಪುದು ಬಹುವರ್ಣದಲಿ
    ಈಗಲೋ ಆಗಲೋ ಕರ್ಮ ಭೇದವ ಹೊಂದಿ ಮರೆಯಾಗಿ
    ಈ ಜನುಮದಾಟವಿದು ಕೇಳು ಸ್ವಪ್ನವದು ಜಾಗೃತನಾಗು ಆಗೆಂಬೇ |
    ಈಜು ಕಲಿಯದ ನೀನು ನಾವೆಯೇರಲು ಬೇಡ ಕೇಳೆಲವೊ
    ಈ ಜಗದ ನಾನಾ ಬಣ್ಣಗಳ ಮರೆತು ನೀನೊಂದು ಬಣ್ಣವು
    ಈಂಕೃತಿಯೊಳ್ ನಿನ್ನಾಟ ಚೆನ್ನಾಟ ಎನ್ನಾಟ ಜಗದಾಟವೆಲ್ಲ ಭಗವಂತನಾಟಾ ||

ಋ.ಮಂ.೨, ಸೂಕ್ತ ೨೨, ಮಂತ್ರ ೧
त्रिक॑द्रुकेषु महि॒षो यवा॑शिरं तुवि॒शुष्म॑स्तृ॒पत्सोम॑मपिब॒द्विष्णु॑ना सु॒तं यथाव॑शत् ।
स ईं॑ ममाद॒ महि॒ कर्म॒ कर्त॑वे म॒हामु॒रुं सैनं॑ सश्चद्दे॒वो दे॒वं स॒त्यमिन्द्रं॑ स॒त्य इन्दु॑: ॥   

೪. ಮೂರರೊಳು ಮತ್ಸ್ವವಿದೆ ಅದನಿಟ್ಟು ನೋಡಲು
    ಮೂರು ಮೂರಾರು ಕಿಣ್ವವು ಕಣ್ವನಲಿ ಏಳಿದೆ
    ಮಾರಿಯಿದೆ ಮನುಜ ಕೇಳ್ ಮೂರನು ಬಿಟ್ಟವನೇ ಯೋಗಿಯು ಸತ್ಯ ಕೇಳು |
    ಮೂರೆಂದರೇನೆಂಬೆ ಋಣ + ಕರ್ಮ + ಜಗತವಿದು
    ಮೂರಕೂ ಸಂಬಂಧ ಬಂಧುತ್ವವಿದೆ ಬೊಮ್ಮನಾಣತಿ
    ಮೂರರಿಂ ಹೊರತಾದ ಬಾಳುವೆಯೇ ಜೀವನದ ಸುಪಥ ಕೇಳ್ ಮನುಜ ನೀನೂ ||

ಋ.ಮಂ.೨, ಸೂಕ್ತ ೨೩, ಮಂತ್ರ ೫
न तमंहो॒ न दु॑रि॒तं कुत॑श्च॒न नारा॑तयस्तितिरु॒र्न द्व॑या॒विन॑: ।
विश्वा॒ इद॑स्माद्ध्व॒रसो॒ वि बा॑धसे॒ यं सु॑गो॒पा रक्ष॑सि ब्रह्मणस्पते ॥  

೫. ನರನೇ ಕೇಳ್ ದುರಿತಗಳು ತಾ ಹೊಸಗೆಯಲಿಂದು
    ವರಬಲಾನ್ವಿತ ರಕ್ಷಸರಂತೆ ಬಾರಿಬಾರಿಗು ತದಕಿ
    ಇರಗೊಡವು ಅವುಗಳ ಮೂಲಶಕ್ತಿಯು ನಿನ್ನ ಋಣ ಕರ್ಮದೊಳಗಿಹುದು ಕೇಳು |
    ಎರಡರೊಳು ಮೊದಲಿನಾ ಏಳು ಭಾಜಿಸದು ಕೇಳು ಮೊತ್ತ
    ವೆರಡು ಕಳೆ ಐದುಳಿಯೆ ಅದರಂಕೆಯಲಿ ಬೇಸತ್ತು
    ಬರಡಾಗದಿರು ಮಾನವನೆ ನಾರಾತದೊಳು ಬೆಸುಗೆ ಸಾಧ್ಯವಿಲ್ಲವು ಮುಕ್ತನಾಗೂ ||

ಇಂತೆಲ್ಲಾ ಕೆಲ ಮುಖ್ಯವಿಚಾರಗಳನ್ನಿಟ್ಟು ಆತ್ಮ, ಆತ್ಮವಿಮರ್ಶೆ, ಋಣ, ಕಾರಣ, ಕರ್ಮ, ಜಿಜ್ಞಾಸೆಯನ್ನು ಮಾಡುತ್ತಾ ಈ ಮಾನವ ದೇಹ ಹೇಗೆ ಅಂಕಿ ಅಂಶಗಳ ಗೂಡೆಂದು ವಿವರಿಸಿದ್ದಾರೆ ಗಮನಿಸಿ.

        ಮಾನವ ದೇಹವೊಂದು ವಿಚಿತ್ರ ಗೂಢವೂ, ವಿಶಿಷ್ಟವೂ ಆದ ಒಂದು ಲೆಕ್ಕ; ಅಂಕೆ ಸಂಖ್ಯೆಗಳ ಹೊಂದಾಣಿಕೆ; ಕಾಲ ನಿಯಾಮಕ ಗಡಿಯಾರ. ಹುಟ್ಟುವಾಗ ಮಗು, ನಂತರ ಬಾಲ, ಪ್ರೌಢ, ಯೌವನ, ವೃದ್ಧಾಪ್ಯ ಇತ್ಯಾದಿಗಳೆಲ್ಲಾ ಪರಿವರ್ತನೆಯಾಗುವುದು ಕಾಲ ನಿಯಾಮಿತ. ಅದಕ್ಕೆ ದೇಹದ್ದೇ ಆದ ಗಡಿಯಾರವಿದೆ; ಪಂಚಾಂಗವಿದೆ. ಆಯಾಯ ಕಾಲಕ್ಕಾಧರಿಸಿ ದೇಹದಲ್ಲಿ ಪರಿವರ್ತನೆ ಬೇಕಾದ ಬೆಳವಣಿಗೆ ಆಗುತ್ತಲೇ ಇರುತ್ತದೆ. ಅದೆಲ್ಲಾ ಹೇಗೆ? ಒಂದು ರೀತಿಯ ಗಣಿತ ಲೆಕ್ಕಾಚಾರ. ಒಂದು ಮಗು - ಅದಕ್ಕೆ ಹುಟ್ಟುವಾಗ ಸಾಮಾನ್ಯ ಎಲ್ಲಾ ಅಂಗಗಳೂ ಇರುತ್ತವೆ; ಮಗುವಾಗಿರುವಾಗಿನ ಹಂತಕ್ಕೆ. ನಂತರ ಬಾಲಕನಾಗಲು ಕೆಲ ವಿಶಿಷ್ಟ ಬೆಳವಣಿಗೆ ಬೇಕು. ಆ ಬೆಳವಣಿಗೆ ಕಾಲ ಆಧರಿಸಿ ದೇಹ ಪ್ರಚೋದನೆಗೊಂಡು ಮಾರ್ಪಾಟಾಗುತ್ತದೆ. ಹಾಗೇ ಯುವಕನಾದಾಗ ಇನ್ನೂ ಕೆಲವು ಬೆಳವಣಿಗೆ ಬೇಕು. ಆಗಲೂ ಕಾಲ ನಿರ್ಧಾರಿತವಾಗಿ ಆಗುತ್ತದೆ. ನಂತರ ಪ್ರೌಢತೆ, ಆಗಲೂ ಕಾಲ ನಿರ್ಧಾರಿತವಾಗಿ ಬೆಳವಣಿಗೆಗಳಾಗುತ್ತವೆ. ನಂತರ ವೃದ್ಧಾಪ್ಯ. ಅಲ್ಲಿಯೂ ಕಾಲ ನಿರ್ಧಾರಿತವಾಗಿ ಬೆಳವಣಿಗೆ ಆಗುತ್ತದೆ. ಅದೆಲ್ಲಾ ಒಂದು ಕಾಲಗಣಕದ ಭೌತಿಕ ಗುಣಾಂಶ ಆಧರಿಸಿ ನಡೆಯುವ ದೇಹ ಪ್ರಕ್ರಿಯೆ. ಅದಕ್ಕೆ ನಿರ್ದಿಷ್ಟ ಗಣಿತವಿದೆ. ಅದನ್ನೇ ಗೃತ್ಸಮದರು ಅರ್ಥಪೂರ್ಣವಾಗಿ ಹದಿನೇಳು (೧೭) ಅಂಶಗಳಿಂದ ಕೂಡಿದ ಒಂದು ವಿಶಿಷ್ಟ ಪ್ರಮೇಯವನ್ನು ಉದಾಹರಿಸಿ ಹೇಗೆ ಲೆಕ್ಕಾಚಾರದಂತೆ ದೇಹ ಬೆಳವಣಿಗ ಆಗುತ್ತದೆ ಎಂದರು. ಅದನ್ನೇ ಹೇಳಿದ್ದು:
ಋಗ್ವೇದ ಮಂಡಲ - ೨, ಸೂಕ್ತ - ೨೩, ಮಂತ್ರ ೬-೧೫
त्वं नो॑ गो॒पाः प॑थि॒कृद्वि॑चक्ष॒णस्तव॑ व्र॒ताय॑ म॒तिभि॑र्जरामहे ।
बृह॑स्पते॒ यो नो॑ अ॒भि ह्वरो॑ द॒धे स्वा तं म॑र्मर्तु दु॒च्छुना॒ हर॑स्वती ॥  
उ॒त वा॒ यो नो॑ म॒र्चया॒दना॑गसोऽराती॒वा मर्त॑: सानु॒को वृक॑: ।
बृह॑स्पते॒ अप॒ तं व॑र्तया प॒थः सु॒गं नो॑ अ॒स्यै दे॒ववी॑तये कृधि ॥ 
त्रा॒तारं॑ त्वा त॒नूनां॑ हवाम॒हेऽव॑स्पर्तरधिव॒क्तार॑मस्म॒युम् ।
बृह॑स्पते देव॒निदो॒ नि ब॑र्हय॒ मा दु॒रेवा॒ उत्त॑रं सु॒म्नमुन्न॑शन् ॥  
त्वया॑ व॒यं सु॒वृधा॑ ब्रह्मणस्पते स्पा॒र्हा वसु॑ मनु॒ष्या द॑दीमहि ।
या नो॑ दू॒रे त॒ळितो॒ या अरा॑तयो॒ऽभि सन्ति॑ ज॒म्भया॒ ता अ॑न॒प्नस॑: ॥
त्वया॑ व॒यमु॑त्त॒मं धी॑महे॒ वयो॒ बृह॑स्पते॒ पप्रि॑णा॒ सस्नि॑ना यु॒जा ।
मा नो॑ दु॒:शंसो॑ अभिदि॒प्सुरी॑शत॒ प्र सु॒शंसा॑ म॒तिभि॑स्तारिषीमहि ॥   
अ॒ना॒नु॒दो वृ॑ष॒भो जग्मि॑राह॒वं निष्ट॑प्ता॒ शत्रुं॒ पृत॑नासु सास॒हिः ।
असि॑ स॒त्य ऋ॑ण॒या ब्र॑ह्मणस्पत उ॒ग्रस्य॑ चिद्दमि॒ता वी॑ळुह॒र्षिण॑: ॥   
अदे॑वेन॒ मन॑सा॒ यो रि॑ष॒ण्यति॑ शा॒सामु॒ग्रो मन्य॑मानो॒ जिघां॑सति ।
बृह॑स्पते॒ मा प्रण॒क्तस्य॑ नो व॒धो नि क॑र्म म॒न्युं दु॒रेव॑स्य॒ शर्ध॑तः ॥  
भरे॑षु॒ हव्यो॒ नम॑सोप॒सद्यो॒ गन्ता॒ वाजे॑षु॒ सनि॑ता॒ धनं॑धनम् ।
विश्वा॒ इद॒र्यो अ॑भिदि॒प्स्वो॒३॒॑ मृधो॒ बृह॒स्पति॒र्वि व॑वर्हा॒ रथाँ॑ इव ॥   
तेजि॑ष्ठया तप॒नी र॒क्षस॑स्तप॒ ये त्वा॑ नि॒दे द॑धि॒रे दृ॒ष्टवी॑र्यम् ।
आ॒विस्तत्कृ॑ष्व॒ यदस॑त्त उ॒क्थ्यं१॒॑ बृह॑स्पते॒ वि प॑रि॒रापो॑ अर्दय ॥    
बृह॑स्पते॒ अति॒ यद॒र्यो अर्हा॑द्द्यु॒मद्वि॒भाति॒ क्रतु॑म॒ज्जने॑षु ।
यद्दी॒दय॒च्छव॑स ऋतप्रजात॒ तद॒स्मासु॒ द्रवि॑णं धेहि चि॒त्रम् ॥

ಇದರಂತೆ ಗಣಿತ ಸೂತ್ರದ ಆಧಾರದಲ್ಲಿ ಒಂದು ಗಂಡು ಅಥವಾ ಹೆಣ್ಣು ತನ್ನ ದೈಹಿಕ, ಬೌದ್ಧಿಕ ಬೆಳವಣಿಗೆ ಸಾಧಿಸುತ್ತದೆ. ಅದಕ್ಕೆ ಕಾರಣವಾದ ಅಂಶಗಳು ಮುಖ್ಯವಾಗಿ ಹದಿನೇಳು. ಅದೇ ತ್ರಿಪಂಚ ಮತ್ತು ಆತ್ಮಾ + ದೇವವೆಂಬ ಸೂತ್ರದಲ್ಲಿದೆ.

೧. ಆತ್ಮಾ
೨. ದೇವ
೩. ಕಾರಣ
೪. ಕರ್ಮ
೫. ಋಣ
೬. ಲೋಕ
೭. ಕುಲ
೮. ಧರ್ಮ
೯. ಪ್ರದೇಶ
೧೦. ಸಮಾಜ
೧೧. ಶಿಕ್ಷ
೧೨. ಸೂತ್ರ
೧೩. ಗತಿ
೧೪. ಕಾಲ
೧೫. ಯೋಗ
೧೬. ಜ್ಞಾನ
೧೭. ಸತ್ಯ

ಈ ಹದಿನೇಳು ಅಂಶಗಳನ್ನೊಳಗೊಂಡು ಒಂದು ವಿಶೇಷ ರೀತಿಯ ಸಮೀಕರಣ ಸಿದ್ಧಪಡಿಸಿದ್ದಾರೆ. ಅದು ಕ್ರಮವಾಗಿ ಅಂಕಾಂಶಗಳನ್ನು ಹೊಂದಿ ಅದರ ಪೂರ್ಣಾಂಕವೇ ಪುರುಷ. ಕ್ಷೀಣಾಂಕವೇ ಸ್ತ್ರೀ ಅಥವಾ ಶಕ್ತಿ. ಮಧ್ಯಾಂಕವೇ ಇನ್ನಿತರೆ ಚರಾಚರಗಳೆಲ್ಲಾ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳೆಂದು ವಿವರಿಸಿದರು.

ಈ ಮೇಲ್ತಿಳಿಸಿದ ಹದಿನೇಳರ ಮುಂದಿನ ಆಯಾಮವೇ ಚಿತ್ರ ಎಂಬ ಸ್ವರೂಪ. ಅದಕ್ಕೆ ಪ್ರಕೃತಿಯಿಲ್ಲ; ವಿಕೃತಿ ಮಾತ್ರ. ಅದನ್ನು ಈ ಸಂದರ್ಭದಲ್ಲಿ ವಿವರಿಸುವುದುದಿಲ್ಲ. ಈ ಪ್ರಕೃತಿ ಮಾತ್ರಾ ವಿವರಿಸುತ್ತೇನೆ.
       
"ಪ್ರಕೃತಿಯೆಂದರೇನು?"
"ಕೇವಲ ಭಾಸವಾಗಿದ್ದು ದೃಶ್ಯವಾಗಿದ್ದರೂ ನಾಮ ನಿರ್ದೇಶನ ಸ್ವತಂತ್ರವಲ್ಲದ, ರೂಪಶಃ ಗೋಚಾರದಿಂದ ಅನುಭವಕ್ಕೆ ಬರುವ ಅನಿವಾರ್ಯವಾಗಿ ನಿರ್ದೇಶಿತವಾದ ಸ್ವಭಾವಜನ್ಯ ಕಾರಣದಿಂದ ವ್ಯವಹರಿಸುವ ಅಸ್ವತಂತ್ರರೂಪವೇ ಪ್ರಕೃತಿ ಎಂದು ಹೇಳಲಾಗುತ್ತದೆ."

ಪ್ರಕೃತಿಯು ಪ್ರಕಟ ಪ್ರಪಂಚದಲ್ಲಿ ವ್ಯವಹರಿಸುತ್ತದೆ. ಆದರೆ ಯಾವುದೊ ಹಿಂದಣ ಶಕ್ತಿಯ ಪ್ರಚೋದನೆಯಿಂದ ಮಾತ್ರ ವ್ಯವಹಾರವಿರುತ್ತದೆ. ಅದಿಲ್ಲದಿದ್ದಲ್ಲಿ ಇದರ ವ್ಯವಹಾರವಿಲ್ಲ. ಅದೇನು? ಅದೇಕೆ? ಅದ್ಹೇಗೆ? ಉತ್ತರವಿಲ್ಲ! ಒಬ್ಬ ಮಾನವನನ್ನೇ ಉದಾಹರಣೆಯಾಗಿಟ್ಟುಕೊಳ್ಳೋಣ. ಮಾನವ ದೇಹ ಕೈಕಾಲು, ಕಣ್ಣು, ಮೂಗು ಎಲ್ಲವೂ ಎರಡೆರಡು. ಆದರೆ ಏಕಕಾಲದಲ್ಲಿ ಒಂದೇ ಕೆಲಸ ಮಾಡುವವು. ಕಾರಣ ಮನಸ್ಸೆಂಬ ಹಿಂಬಲ ಅದರಲ್ಲಿ ತೊಡಗಿರಬೇಕು. ಇಲ್ಲವಾದಲ್ಲಿ ಕಾರ್ಯವಿಲ್ಲ. ದೇಹದ ಯಾವುದೇ ಅಂಗವೂ ಹಿಂದಣ ಶಕ್ತಿಯ ಪ್ರಚೋದನೆಯಿಲ್ಲದೆ ಕಾರ್ಯ ನಿರ್ವಹಣೆ ಇಲ್ಲ.


Ardhanarishwara ( Shiva and his consort Parvati share one body).
Courtesy: Mithila Painting: 
http://peterzirnis.com/

ಕಣ್ಣೆರಡಿದೆ; ಆದರೆ ಏಕಕಾಲದಲ್ಲಿ ಒಂದನ್ನು ಮಾತ್ರಾ ನೋಡಬಲ್ಲಿರಿ. ಕಿವಿಯೆರಡಿದೆ; ಏಕಕಾಲದಲ್ಲಿ ಒಂದು ವಿಷಯ ಮಾತ್ರ ಕೇಳಬಲ್ಲಿರಿ. ನಾಲಗೆ ಎರಡಿದೆ; ಆದರೆ ಕಿನ್ನಾಲಗೆಯಂತೆ ನಾಲಗೆ ನುಡಿಯುತ್ತದೆಯೇ ವಿನಃ ಎರಡನೇ ವಿಷಯ ನುಡಿಯಲಾರದು. ಹಾಗೇ ದೇಹಸ್ಥನಾದ ಮಾನವ ಒಂದು ಹೆಸರಿನಿಂದ ಗುರುತಿಸಲ್ಪಡುತ್ತಾನೆ. ಆ ಹೆಸರು ಯಾರಿಗೆ? ಯಾವ ಲಿಂಗಕ್ಕೆ? ಆ ಹೆಸರಿನಂತೆ ಪ್ರವರ್ತನೆಗಿಳಿವ ನಾನ ಎಂಬ ಯಾರು? ಯಾವ ವಸ್ತು? ಯಾವ ಅಂಗ? ಉತ್ತರ ಸಾಧ್ಯವಿಲ್ಲ. ಕೈನಾನಲ್ಲ, ಕಣ್ಣು ನಾನಲ್ಲ, ಮೂಗು ನಾನಲ್ಲ, ಎಲ್ಲವೂ ನನ್ನದ್ದು. ಅಂದರೆ ನಾನು ಎಂಬುದು ಬೇರೆ. ಹಾಗಿದ್ದರೆ ನಾನು ಎಂಬ ವಸ್ತು ಯಾವುದೆಂದು ಹೇಳಲು ಸಾಧ್ಯವೇ? ಹಾಗಾದರೆ ನಾನು ಯಾವುದು? ಗೊತ್ತಿಲ್ಲ ಅಲ್ಲವೆ? ಹಾಗಾದರೆ ದೇಹವಾಗಲಿ, ದೇಹಾಂತರ್ಗತವಾದ ಅಂಗ, ಪ್ರತ್ಯಂಗಗಳಾಗಲಿ ನಾನಲ್ಲವೆಂದರೆ ನಾನ್ಯಾವುದು? ನಾನ್ಯಾರು? ನಾನೆಲ್ಲಿಂದ ಬಂದೆ? ಇಲ್ಲಿಯ ಈ ಪ್ರಾಪಂಚಿಕಕ್ಕೆ ಏನು ಸಂಬಂಧ ಇಲ್ಲ ಅಲ್ಲವೆ? ಇದೆ. ಅದೇ ರಹಸ್ಯ!! ಅರಿವಿಲ್ಲದ ಸತ್ಯ. ಅದರ ವಿಷಯವಾಗಿ ಹೇಳುವುದಿದ್ದರೆ ಒಂದು ಗಣಿತಸೂತ್ರ ಹೇಳಬೇಕು. ಆ ಗಣಿತಸೂತ್ರ ಇಲ್ಲಿದೆ ಗಮನಿಸಿ:

ಋಗ್ವೇದ ಮಂಡಲ - ೨, ಸೂಕ್ತ - ೨೪, ಮಂತ್ರ - ೨
यो नन्त्वा॒न्यन॑म॒न्न्योज॑सो॒ताद॑र्दर्म॒न्युना॒ शम्ब॑राणि॒ वि ।
प्राच्या॑वय॒दच्यु॑ता॒ ब्रह्म॑ण॒स्पति॒रा चावि॑श॒द्वसु॑मन्तं॒ वि पर्व॑तम् ॥

೧. ಏಕಾತ್ಮ ನೀನೊಲಿವೆ ಈ ದೇಹದೊಳು ನಿನಗೊಂದು ವಿ
    ಪಾಕಗೊಳ್ಳದ ಕರ್ಮ ತುಂಬಿದೆ ಅದುವೆ ಋಣದುರಿ
    ತಾಕಿಕೊಂಡಿದೆ ಈ ಪಂಚಪಂಚಗಳ ಮುಸುಕಿನಲಿ ಅಂಗ ಅಂಗಕು ಪ್ರತ್ಯೇಕವಿದೆ ಕೇಳು |
    ನೂಕಿ ಕೊಲುವರೆ ಬರಿ ದೇಹ ಸಾವಿಲ್ಲವಾತ್ಮನಿಗೆ ಈ ಲೆಕ್ಕ
    ಬಾಕಿ ಲೆಕ್ಕದಂತಲ್ಲ ಆತ್ಮನಿಗೇಳು ಹದಿನಾರು ಎಂಟರ
    ಮೇಕಿನ್ನು ನೂರೆಂಟು ಅದರಲಿ ಮೂರಾರು ಸೇರಿದೆ ತ್ರಿಪಂಚಕವೇ ಮಸ್ತಕವು || ೧ ||

೨. ಹರಿ ಹರಿದು ಸೇರಿತು ಹರನುರಿದು ಹೊತ್ತಿತು
    ಹೊರೆಯಾಯ್ತು ಕರ್ಮ ನಿತ್ಯದಾ ಋಣಭಾರ
    ಮರೆಯದೆಲೆ ಚಿಂತಿಸುವ ಮನದ ಸಂಸ್ಕಾರ ಹೊಂದಿತು |
    ನರಗೆ ತನ್ನ ಮನೆ ಇದಲ್ಲವೆಂಬರಿವು ಮೂಡೆ
    ನಿರಂತರ ಹರಿ ಜಪದ ಸುಖಕಾಂಬ ಮನ

    ವಿರುವ ಮನುಜನೇ ಅದು ನೀನು ನೀ ನಿನ್ನ ದೇಹವಲ್ಲಾ || ೨ ||

ಹಾಗಾಗಿ ಪ್ರಪಂಚದ ಇಂಗಿತವೆಲ್ಲಾ ಏನೆಂದೂ, ಉಪಾಂಶು, ಭೂತಾಂಶುಗಳು ಹೇಗೆ ಪ್ರಲೋಭನೆಯೆಂದೂ ಅದರಿಂದ ದೂರವಿರುವ ಬಯಕೆ ಹುಟ್ಟುವ ಸ್ವಭಾವಜನ್ಯ ವೈರಾಗ್ಯರೂಪಿಯೇ "ನೀನು" ಸತ್ಯ.

ಋಗ್ವೇದ ಮಂಡಲ - ೨, ಸೂಕ್ತ - ೨೬, ಮಂತ್ರ - ೩
स इज्जने॑न॒ स वि॒शा स जन्म॑ना॒ स पु॒त्रैर्वाजं॑ भरते॒ धना॒ नृभि॑: ।
दे॒वानां॒ यः पि॒तर॑मा॒विवा॑सति श्र॒द्धाम॑ना ह॒विषा॒ ब्रह्म॑ण॒स्पति॑म् ॥ 
   
ಎಂದು ಹೇಳುತ್ತಾ ಈ ಪ್ರಪಂಚದ ಅಂಟಿಕೊಳ್ಳುವ ಯಾವುದನ್ನೂ ನಾನೆಂದು ತಿಳಿಯಲು ಸಾಧ್ಯವಿಲ್ಲ. ಅವೆಲ್ಲಾ ನನ್ನದು ಅಷ್ಟೆ. ಯಾವಾಗ ಅವಕ್ಕೆಲ್ಲಾ ಅಂಟದ ಸ್ಥಿತಿಗೆ ತಲುಪಿದ ನಾನು ಇರುತ್ತೇನೆ. ಅದೇ ನಾನು ಎಂದು ತಿಳಿಯೆಂದರು.


        ನಂತರ ಗೃತ್ಸಮದರು ಪ್ರಪಂಚ ಸಂಘಟನೆ, ಅವುಗಳಲ್ಲಿ ಜೀವಜಗತ್ತು, ಅದರ ಅನಿವಾರ್ಯತೆ, ಅವುಗಳ ಪರಸ್ಪರ ಸಮತೋಲನ, ಅವುಗಳ ವ್ಯಾಪ್ತಿ, ವಿಶೇಷತೆ, ಋಜುತ್ವ, ನಿಯಮ ಇವುಗಳನ್ನು ಹೇಳಿದರು. ಈ ಭೂಮಿಯಲ್ಲಿ ಮಿತ್ರವೆಷ್ಟು? ಶತ್ರುವೆಷ್ಟು? ಆದಿತ್ಯಾಂಶವೆಷ್ಟು? ಅದಿತಿಯರೆಷ್ಟು? ಯೋಗಿನೀ ಶಕ್ತಿಗಳು, ಮಾಯೆಯೂ ಎಷ್ಟೆಷ್ಟು? ವರುಣ ದಕ್ಷಾಂಶಗಳ ನಿರ್ವಹಣೆ ಹೇಗೆ? ಎಂದು ವಿವರಿಸುತ್ತಾ ಅದನ್ನೂ ಕೂಡ ಒಂದು ಸೂತ್ರಬದ್ಧ ರೀತಿಯಲ್ಲಿ ಇದೆಯೆಂದು ಹೇಳಿದರು; ನೋಡಿರಿ ಮುಂದಿನ ಲೇಖನದಲ್ಲಿ.