Sunday, 31 August 2014

ಭರದ್ವಾಜ ಮಂಡಲ : ಪ್ರಸೂತಿಕಾ ಶಾಸ್ತ್ರ ಗಣಿತ - 1
ಓದುಗರೇ, ಹಿಂದಿನ ಆತ್ರೇಯ ಮಂಡಲ ಮುಗಿಸಿ ಈಗ ಭರದ್ವಾಜ ಮಂಡಲದಲ್ಲಿರುವ ಸೃಷ್ಟಿ ಸೂತ್ರದ ಬಗ್ಗೆ ಬರೆಯಲುಪ ಕ್ರಮಿಸುತ್ತೇನೆ. ಇದೊಂದು ಆಳವಾದ ವಿಜ್ಞಾನ ಮತ್ತು ಸಾಂಖ್ಯರು ಕಂಡ ಸೃಷ್ಟಿಯ ನಿಯಮ ಬದ್ಧತೆ. ಅದನ್ನಾಧರಿಸಿ 8 ವಿಭಾಗ ಮಾಡಿ ಒಂದು ವಿಶಿಷ್ಟ ಗಣಿತ ಸೂತ್ರದಲ್ಲಿ ಅಳವಡಿಸಿ ಇಟ್ಟರು ಒಟ್ಟು ಸೃಷ್ಟಿ ಸೂತ್ರವನ್ನು. ಅದರ ಬಗ್ಗೆ ಬರೆಯುವ ಮೊದಲು ಕೆಲ ಮುಖ್ಯ ವಿವರಣೆ ಅಗತ್ಯವೆಂದು ವಿವರಣೆಯನ್ನು ಮೊದಲಾಗಿ ಬರೆಯುತ್ತಿದ್ದೇನೆ. ಭಾಗವನ್ನು ಓದಿ ಅರ್ಥಮಾಡಿಕೊಂಡು ನಂತರ ಮುಂದಿನ ಭಾಗ ಓದಿರೆಂದು ವಿಜ್ಞಾಪನೆ. ಸೃಷ್ಟಿ ಸೂತ್ರದ ಬಗ್ಗೆ ಭರದ್ವಾಜರು ಅನ್ವೇಷಣೆ ಮಾಡಲು ಕಾರಣ ಕೂಡ ಕಥಾ ಭಾಗದಿಂದ ನಿಮಗೆ ವಿದಿತವಾಗುತ್ತದೆ. ಅವಶ್ಯಕತೆಗೆ ಆಧರಿಸಿ ಸಂಶೋಧನೆ ಎಂಬುದು ನಿಯಮ. ಹಾಗಾಗಿ ಭರದ್ವಾಜರಿಗೆ ಅಗತ್ಯವಿತ್ತು ಮತ್ತು ಅನಿವಾರ್ಯವಿತ್ತು. ಕಾರಣದಿಂದಾಗಿ ಅನ್ವೇಷಣೆ ಮಾಡಿರುತ್ತಾರೆ.

ಪ್ರಸಕ್ತಕಾಲ ಇಪ್ಪತೆಂಟನೆಯ ಯುಗ ಪರಿವರ್ತನೆ ಇಪ್ಪತ್ತೆಂಟನೇ ಕಲಿಯುಗ. ಆದರೆ ವಿಚಾರ ಮೂರನೇ ಕೃತಯುಗದ ವಿಚಾರ. ಆಗ ಭಾರ್ಗವರು ಅಂದರೆ ಭೃಗು ವಂಶೀಕರು ಪ್ರಬಲರಾಗಿದ್ದರು. ಎಲ್ಲವನ್ನೂ ಅವರ ಇಚ್ಛೆಯಂತೆಯೇ ನಿರ್ದೇಶಿಸುತ್ತಿದ್ದರು. ಅವರ ಆಣತಿ ಮೀರಿ ಬದುಕು ಅಸಾಧ್ಯವಾಗಿತ್ತು. ಮಾನವ ಸಹಿತ ಪ್ರಾಣಿವರ್ಗಗಳೂ ಕೂಡ ಅವರ ಆಣತಿಗಾಗಿಯೇ ಕಾದಿರುತ್ತಿತ್ತು. ಇಂತಹಾ ಸಂದರ್ಭದಲ್ಲಿ ಇದನ್ನು ಪ್ರತಿಭಟಿಸಿ ನಿಂತ ಒಂದು ವರ್ಗವೆಂದರೆ ಆಂಗೀರಸರು. ಇವರು ಭಾರ್ಗವರನ್ನು ಧಿಕ್ಕರಿಸಿ ನಿಂತರು. ಆಗ ಪರಸ್ಪರ ಹೋರಾಟ, ಹೊಡೆದಾಟ, ಜಗಳ, ದೊಂಬಿ, ಕೊಲೆ, ಸುಲಿಗೆ ಎಲ್ಲವೂ ನಡೆಯಲಾರಂಭಿಸಿದವು. ಎರಡೂ ಕಡೆಯೂ ಸಾಮರ್ಥ್ಯವಂತರಿದ್ದುದರಿಂದ ಅಂದಾಜು ಐದು ಸಾವಿರ ವರ್ಷ ಪರಸ್ಪರ ಹೋರಾಟದಲ್ಲೇ ಕಳೆದು ಫಲ ಕಾಣದ ಭಾರ್ಗವರು ಕೊನೆಗೆ ಮಂತ್ರಾಸ್ತ್ರಗಳ ಮೂಲಕ ಆಂಗೀರಸರ ನಾಶಕ್ಕೆ ಪ್ರಯತ್ನಿಸಿದರು. ಆಗ ಪ್ರಯೋಗವಾದ ಒಂದು ವಿಶಿಷ್ಟ ಅಸ್ತ್ರವೇ ಪಾವಕಾಸ್ತ್ರ. ಅಸ್ತ್ರ ಕಾರಣದಿಂದ ಆಂಗೀರಸರಲ್ಲಿ ಸಂತಾನಶಕ್ತಿ ಕ್ಷೀಣಿಸಲಾರಂಭಿಸಿತು. ಗರ್ಭಧಾರಣೆ ಆಗುತ್ತಿರಲಿಲ್ಲ. ಆದರೂ ಗರ್ಭರಕ್ಷಣೆ ಸಾಧ್ಯವಿರಲಿಲ್ಲ. ಹಾಗಾಗಿ ಸಂತಾನ ಕ್ಷೀಣತೆಯಿಂದ ಸಂಖ್ಯಾಬಲ ಕಳೆದುಕೊಳ್ಳುತ್ತಾ ಬಂದ ಆಂಗೀರಸರಲ್ಲಿ ಸಮಸ್ಯೆಗೆ ಪರಿಹಾರ ರೂಪದ ಒಂದು ವಿಶಿಷ್ಟ ಸಂಶೋಧನೆ ಆರಂಭವಾಯ್ತು. ಅದೇ ಸೃಷ್ಟಿಸೂತ್ರ ಅಥವಾ ಪ್ರಸೂತಿಕಾ ಶಾಸ್ತ್ರ. ಮಾನವಶಕ್ತಿಯನ್ನೇ ಹ್ರಾಸ ಮಾಡುವ ಅಸ್ತ್ರದ ಬಗ್ಗೆ ಭರದ್ವಾಜರು ಹೀಗೆ ಉದಾಹರಿಸಿದ್ದಾರೆ.

.ಮಂ.6 ಸೂ.1 ಮಂತ್ರ-5,6
ತ್ವಾಂ ವರ್ಧಂತಿ ಕ್ಷಿತಯಃ ಪೃಥಿವ್ಯಾಂ ತ್ವಾಂ ರಾಯ ಉಭಯಾಸೋ ಜನಾನಾಮ್ | 
ತ್ವಂ ತ್ರಾತಾ ತರಣೇ ಚೇತ್ಯೋ ಭೂಃ ಪಿತಾ ಮಾತಾ ಸದಮಿನ್ಮಾನುಷಾಣಾಮ್ ||  5 ||
ಸಪರ್ಯೇಣ್ಯಃ ಪ್ರಿಯೋ ವಿಕ್ಷ್ವ()1ಗ್ನಿರ್ಹೋತಾ ಮಂದ್ರೋ ನಿಷಸಾದಾ ಯಜೀಯಾನ್ |
ತಂ ತ್ವಾ ವಯಂ ದಮ ದೀದಿವಾಂಸಮುಪ ಜ್ಞುಬಾಧೋ ನಮಸಾ ಸದೇಮ || 6 ||

ಅಗ್ನಿಯು ಸರ್ವಭಕ್ಷಕ ಹಾಗೇ ಪ್ರಯೋಗ ಗುರಿ. ಅದರಂತೆ ಆಂಗೀರಸರ ಸಂತಾನಶಕ್ತಿಯ ಗುರಿಯಾಗಿಟ್ಟು ಪ್ರಯೋಗಿಸಿದ್ದರಿಂದ ಮೈಥುನ ಭಂಗ, ವೀರ್ಯಭಂಗ, ಗರ್ಭಭಂಗವೆಂಬ ಮೂರು ರೀತಿಯಲ್ಲಿ ಅಸ್ತ್ರವು ಕೆಲಸ ಮಾಡುತ್ತಾ ಮಕ್ಕಳಾಗದಂತೆ ತಡೆದು ಆಂಗೀರಸರ ಸಂಖ್ಯಾಬಲ ಕ್ಷೀಣಿಸುವಂತೆ ಮಾಡಿತು. ಅದು ಅಸ್ತ್ರಶಕ್ತಿ. ಅದನ್ನು ಸ್ಥೂಲವಾಗಿ ವಿವರಿಸುತ್ತೇನೆ.

ಮೊದಲಾಗಿ ಜೀವ ಸಹಜವಾದ ಕಾಮವನ್ನು ನಿರ್ಬಂಧಿಸಿ ಆಂಗೀರಸರಲ್ಲಿ ಮೈಥುನ ಶಕ್ತಿಯನ್ನು ಕ್ಷೀಣಿಸುವಂತೆ ಪ್ರಯೋಗಿಸಿದರು. ಪಾವಕವೆಂಬುದು ಒಂದು ಅಗ್ನಿ ಪ್ರಭೇದ. ಅದು ದೇಹದಲ್ಲಿ ನಡೆಯುವ ದೈಹಿಕ ಆಂತರಿಕ ಕ್ರಿಯೆಗೆ ಸಹಕಾರಿ. ಹಾಗೇ ಪ್ರಚೋದಕ. ಅದನ್ನೇ ನಿಯಂತ್ರಿಸಿ ಅವರಲ್ಲಿ ಕಾಮೇಚ್ಛೆ ಹುಟ್ಟದಂತೆ ತಡೆದರು. ಪರಿಣಾಮವಾಗಿ ಆಂಗೀರಸರು ವಿಶಿಷ್ಠ ಸಾಧಕರಾಗಿ ದೇವ ಪೌರೋಹಿತ್ಯದಂತಹಾ ವಿಶೇಷ ಮನ್ನಣೆ ಸ್ಥಾನಮಾನ ಪಡೆದರು. ಇದನ್ನರಿತ ಭಾರ್ಗವರು ಆಂಗೀರಸರ ಆಹಾರ ಪಕ್ವಾ ವಿಧಾನದಿಂದ ಉಂಟಾಗುವ ದೈಹಿಕ ಶಕ್ತಿಯಾದ ವೀರ್ಯ ನಾಶವಾಗುವಂತೆ ಪ್ರಯೋಗಿಸಿದರು. ಅಲ್ಲಿಯೂ ಆಂಗಿರಸರ ಸಮಯೋಚಿತ ಜ್ಞಾನದಿಂದ ನೇರ ಆಹಾರವನ್ನೇ ಪಿಂಡರೂಪದಲ್ಲಿ ಸ್ವೀಕರಿಸಿ ಗರ್ಭಧಾರಣೆ ಮಾಡುವ ವಿಧಾನ ಕಂಡುಹಿಡಿದರು. ಅಥವಾ ನಿಯೋಗ ಪದ್ಧತಿಯಿಂದ ಸಂತಾನ ಪಡೆದರು. ಉದಾ:- ಬುಧ, ಬುಧ ಸೌಮ್ಯ, ಕೇತುರಾತ್ರೇಯ, ಉಚಥ್ಯ, ಋಣಂಚಯ, ಸಾರ್ಪರಾಜ್ಞಿ, ಶ್ರಮಣಕ, ವಿಧೇಯಕ, ಸೋಮಕ, ಸೋಮಶ್ರವ, ಭರದ್ವಾಜ, ಕಲ್ಪ, ಕೃತು, ಋತು, ದ್ರೋಣ, ಪಾರಿಯಾತ್ರ, ಯಾಜಿ, ಅನುಯಾಜಿ, ಕೃತ, ಕೃತಶ್ರವಣ, ಅಕೃತವೃಣ, ಇತ್ಯಾದಿ ಇತ್ಯಾದಿ ಮಹಾಪುರುಷರು ಹುಟ್ಟಿಕೊಂಡರು. ಹಾಗಾಗಿ ಭಾರ್ಗವರು ಅದೇ ಅಸ್ತ್ರವನ್ನು ಆಂಗೀರಸ ಗಣದ ಸ್ತ್ರೀಯರ ಮೇಲೆ ಗರ್ಭನಾಶವಾಗುವಂತೆ ಪ್ರಯೋಗಿಸಿದರು. ಆಗ ಅಷ್ಟು ಹೊತ್ತಿಗೆ ಆಂಗೀರಸ ಗಣದ ಸ್ತ್ರೀಯರೂ ಜ್ಞಾನಿಗಳೂ, ಬುದ್ಧಿವಂತರೂ ಆಗಿದ್ದರಿಂದ ಅವರೂ ಗರ್ಭ ಹೊರತು ಪಡಿಸಿ ಸಂತಾನ ಪಡೆಯುವ ವಿಧ್ಯೆ ಅರಿತಿದ್ದರು. ಉದಾ:- ಔರ್ವ, ವತ್ಸನಾಭ, ಅಂಗುಲೀಯಕ, ಕರ್ಣ್ವ, ವಿಕರ್ಣಕ, ಪುಲಿಕೇಶಿ, ಸುನೇತ್ರ, ವಿಕೃತ, ಅಷ್ಟಾವಕ್ರ, ದಂತವಕ್ರ, ಭುಜ್ವಕಂಠಕ, ವಾಲಕಂಠಕ, ಕಪಾಲಜ, ಹನೂಜ, ಕನೂಜ, ಸುಭ್ರೂ, ಶೀತಭ್ರೂ ಹೀಗೆ ಹಲವು ಜನ ಪುತ್ರರನ್ನು ಪಡೆದು ಅವರೆಲ್ಲಾ ಮಹಾಪುರುಷರಾದರು. ಈಗಿನ ಅಥರ್ವವೇದದ ಹೆಚ್ಚಿನ ಭಾಗ ಆಂಗೀರಸರಿಂದಲೇ ಕಂಡುಹಿಡಿಯಲ್ಪಟ್ಟಿದ್ದು. ಹಾಗಾಗಿಯೇ ಅಥರ್ವವೇದಕ್ಕೆ ಆಂಗೀರಸವೇದ ವೆಂದೇ ಹೆಸರಿದೆ. ಹಾಗೇ ಅಲ್ಲಿಗೆ ಭಾರ್ಗವರ ಅಸ್ತ್ರದ ಉಪಸಂಹಾರವನ್ನೂ ಕಂಡುಹಿಡಿದು ಎಲ್ಲಾ ಅಸ್ತ್ರಗಳಿಗೂ ಒಂದೇ ಆದ ಉಪಸಂಹಾರಸೂತ್ರ ರಚಿಸಿದರು (ಅದೇ ಪ್ರತ್ಯಂಗಿರಾವೆಂಬ ಅಸ್ತ್ರ). ಅಲ್ಲಿಗೆ ಭಾರ್ಗವರೂ ಕೈಕಟ್ಟಿ ಕುಳಿತರು. ಆದರೆ ಅಲ್ಲಿಯವರೆಗಿನ ಭಾರ್ಗವರ ಹೋರಾಟ ದೇಶಕ್ಕೆ ಸಮಾಜಕ್ಕೆ ಒಂದು ಉತ್ತಮ ಸಂಶೋಧನೆ ದೊರಕಲು ಸಹಾಯಕವಾಯ್ತು. ಅದೇ ನಂತರದ ಭರದ್ವಾಜರ ಸಂಶೋಧನೆ ಹಿಂದೆ ಹೇಳಿದ ಪ್ರಸೂತಿಕಾಶಾಸ್ತ್ರ. ಸಂತಾನಾಭಿವೃದ್ಧಿಗೆ ಇರತಕ್ಕ ಎಲ್ಲಾ ಹನ್ನೆರಡು ವಿಧಾನಗಳೂ ಹೇಗೆ ಶಾಸ್ತ್ರೀಯವಾಗಿ ಧರ್ಮಬದ್ಧವಾಗಿ ಪಡೆಯಬಹುದೆಂದು ವೈಜ್ಞಾನಿಕವಾಗಿ ಸಂಶೋಧಿಸಿ ದಾಖಲಿಸಿದರು. ಅದನ್ನು ಸಾಂಖ್ಯರು ರಹಸ್ಯ ಕಾಪಾಡುವ ದೃಷ್ಟಿಯಿಂದ ಗಣಿತ ಸಮೀಕರಣ ರೂಪದಲ್ಲಿ ವೇದದಲ್ಲಿ ಅಳವಡಿಸಿದರು. ಮುಂದಿನ ಭಾಗ ಅದರ ಸ್ಥೂಲ ವಿವರಣೆ ನನ್ನ ಚಿಕ್ಕ ಪ್ರಯತ್ನವಷ್ಟೆ. ನನ್ನ ಇತಿ ಮಿತಿಯಲ್ಲಿ ವಿವರಿಸುತ್ತೇನೆ ಗಮನಿಸಿ.
.ಮಂ.6, ಸೂಕ್ತ 2, ಮಂತ್ರ 5,6,7,8 ಒಟ್ಟು ನಾಲ್ಕು ಮಂತ್ರ.
ಸಮಿಧಾ ಯಸ್ತ ಆಹುತಿಂ ನಿಶಿತಿಂ ಮರ್ತ್ಯೋ ನಶತ್ |
ವಯಾವಂತಂ ಪುಷ್ಯತಿ ಕ್ಷಯಮಗ್ನೇ ಶತಾಯುಷಮ್ || 5 ||
ತ್ವೇಷಸ್ತೇ ಧೂಮ ಋಣ್ವತಿ ದಿವಿಷನ್ ಛುಕ್ರ ಆತತಃ |
ಸೂರೋ ಹಿ ದ್ಯುತಾ ತ್ವಂ ಕೃಪಾ ಪಾವಕ ರೋಚಸೇ || 6 ||
ಅಧಾ ಹಿ ವಿಕ್ಷ್ವೀಡ್ಯೋಽಸಿ ಪ್ರಿಯೋ ನೋ ಅತಿಥಿಃ |
ರಣ್ವಃ ಪುರೀವ ಜೂರ್ಯಃ ಸೂನುರ್ನ ತ್ರಯಯಾಯ್ಯಃ || 7 ||
ಕ್ರತ್ವಾ ಹಿ ದ್ರೋಣೇ ಅಜ್ಯಸೇಽಗ್ನೇ ವಾಜೀ ಕೃತ್ವ್ಯಃ |
ಪರಿಜ್ಮೇವ ಸ್ವಧಾ ಗಯೋಽತ್ಯೋ ಹ್ವಾರ್ಯಃ ಶಿಶುಃ || 8 ||

ಎಂಬಂತೆ ಪಾವಕಾಗ್ನಿಯ ಕಾರ್ಯವೈಖರಿಯನ್ನು ಒಂದು ಸೂತ್ರ ಬದ್ಧರೀತಿಯಲ್ಲಿ ಸಂಯೋಜಿಸಿ ವಿವರಿಸಿದ್ದಾರೆ. ಪಾವಕಾಗ್ನಿಯು ಒಂದು ಸೃಷ್ಟಿ ಚಕ್ರದ ನಿರ್ವಾಹಕ. ಅದು ನಿರಂತರ ಆಹಾರ ಸತ್ವ ಸ್ವೀಕಾರ ಮಾಡಿ ತನ್ಮೂಲಕ ಬೀಜವನ್ನು ದೇಹದಲ್ಲಿ ಸೃಷ್ಟಿಸಿ ಜೀವಿಯನ್ನು ನಿರಂತರ ಚಟುವಟಿಕೆಯಲ್ಲಿರುವಂತೆ ಪ್ರಚೋದಿಸಿ ಸಂವೇದನಾ ಶಕ್ತಿಯನ್ನು ಉಂಟುಮಾಡುತ್ತದೆ. ಹಾಗಾಗಿಯೇ ಜೈವಿಕ ಸಂಕುಲ ಬೆಳೆಯಲು ಕಾರಣ. ಹಾಗಾಗಿಯೇ ನಿತ್ಯ ನಿರಂತರ ಪ್ರಕೃತಿ ಜೀವಸೃಷ್ಟಿ ಹಾಗೇ ನಿತ್ಯನೂತನ. ದೇಹದ ವಾಜಗಳು ನಿರಂತರತೆಯ ಸ್ಪಂದನ ಸಂವೇದನೆ ಪಡೆದು ನೂತನತೆಯತ್ತ ಚಲನಶೀಲವಾಗಲು ಕಾರಣ. ಅದನ್ನೇ ಸೃಷ್ಟಿ ಚಕ್ರದ ಚಲನೆಯೆಂದರು. ದೇಹದಲ್ಲಿ ಆಗತಕ್ಕ ಸ್ವೇದಾದಿ ಸಪ್ತಗಳ ಉತ್ಪಾದನೆ ವಿಸರ್ಜನೆಯೆಲ್ಲವೂ ಪಾವಕಾಗ್ನಿಯಿಂದಲೇ. ಹಾಗೇ ದೇಹವನ್ನು ನಿರ್ದಿಷ್ಟ ಪ್ರಮಾಣದ ಶಾಖದಲ್ಲಿ ಕಾಯ್ದುಕೊಂಡು ಬರುವುದೂ ಅದೇ ಆಗಿರುತ್ತದೆ. ನಿರಂತರ ಶಾಖದ ಪರಿಣಾಮವೇ ಅನ್ನಗತವಾದ ಶಕ್ತಿಯ ಉತ್ಪಾದನೆ ತನ್ಮೂಲಕ ವೀರ್ಯೋತ್ಪತ್ತಿ. ಅದೇ ಸೃಷ್ಟಿಬೀಜವೆಂದರು. ಅವುಗಳನ್ನು ಅಷ್ಟ ಪರಿಣಾಮ ವೆಂಬ ಸೂತ್ರದಲ್ಲಿ ಸೇರಿಸಿದರು. ಅದರ ವಿವರ ರೀತಿ ಇದೆ.

ರವಿಯಾರು ಕುಜನೇಳೆ ಹತ್ತೊಂಬತ್ತು ಶನಿ
ಕವಿ ಹತ್ತು ಜೀವ ಹದಿನಾರು ಇಪ್ಪತ್ತು ಭಾ
ರ್ಗವ ಕುರುಡ ಕೇಳ್ ಹದಿನೇಳ್ ಒಟ್ಟಾಯುಷ್ಯ ತೊಂಭತ್ತು ಐದಾಯ್ತು ಜೀವರಿಗೆ ||
ಜೀವ ಛಾಯೆಯು ಕೇಳು ಪಂಚಪಂಚೀಕರಣ
ಸಾವ ಕಾಲಕೆ ಜೀವಭಯ ಬದುಕಿರುವಾಗಿಲ್ಲ
ದೇವ ಶರಣಾಗತಿಯ ಸಂಖ್ಯೆಯ ಕೂಡೆ ಮೊತ್ತವದು ನೂರಿಪತ್ತು ಸರಿದೂಗೇ || 1 ||

ಕೇಳ್ಮನುಜ ನೀ ರವಿಯೊಳು ಹುಟ್ಟಿ ಶಶಿಯಲಿ
ಬಾಳ್ಬೆಳಗಿ ಕುಜನೊಳ್ ಕರ್ಮ ಹೊಂದುತ
ಹೇಳಲಾರದ ಬವಣೆ ಮಂದನಲಿ ಜೀವ ಕುರುಡಾಯ್ತು ಮಾಯೆಯಲಿ ||
ಬಾಳ ಪಯಣದ ಶಾಖ ಜೀವನಲಿ ಪಕ್ವವಾಗುತ
ಕೇಳು ಮೋಕ್ಷದಾಕಾಂಕ್ಷೆ ಹುಟ್ಟಲು ಬಾಳೆಲ್ಲ ಕತ್ತಲು
ತಾಳು ತಾಳು ಸೈರಿಸು ಛಾಯೆಯವಧಿಯು ನಿನ್ನ ದಾಟಿಸುವುದೈ ಮುಂದೇ || 2 ||

ಜೀವ ಸೃಷ್ಟಿಯ ರಹಸ್ಯವಿದೆ ಶಶಿಮೊತ್ತದಲಿ
ನವಾಗೆ ಜೀವರಿಗೆ ಋಣ ಮೊತ್ತ ಕರ್ಮಗಳ
ಭವವ ದಾಟಲು ಜೀವ ಜೀವನೇ ಏನೆಲ್ಲವೆಂದರಿವು ಮೂಡೆ ಮುಂದೇ ||
ಭಾವದೊಳಗುದಿಸಿದಾ ದಾರಿಯರ್ಥವದು ಅನೃತ
ಹೇವರಿಕೆ ಏಕೈ ಜೀವನೇ ನಿನ್ನಾಯುಷ್ಯವದು
ಜೀವ ಸಂಕುಲವೆಲ್ಲ ಇದರೊಳು ಬಂಧಿಸಿದೆ ಬಿಡಲೊಲ್ಲದೈ ಕಾರಣವಿದು || 3 ||

ಮೇಲ್ಕಂಡಂತೆ ಮನುಜ ಸೃಷ್ಟಿಯು ಪರಾಶರೀಯ ಪದ್ಧತಿಯ ಆಯುರ್ದಾಯ ದಶಾಭುಕ್ತಿ ವಿವರದಂತಿದೆ ಎಂಬ ಸೂಚನೆಯನ್ನು ಕಾಣಿಸುತ್ತಾ ಹಾಗೇ ಯಾವ ಅಂಶದಲ್ಲಿ ಯಾವ ದಾಯ ಭಾಗದಲ್ಲಿ ಶಿಶು ಜನಿಸುತ್ತದೆ ಹಾಗೇ ಅದರ ಆಯುಃ ಪ್ರಮಾಣ, ಅದರ ಯಶಸ್ಸು, ಓಜ ತೇಜಗಳು, ಜೀವನ ಸೌಖ್ಯ ಇತ್ಯಾದಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದೆಂದು ಭರದ್ವಾಜರು ವಿಶದಪಡಿಸಿದರು. ಅದನ್ನೇ ಅಷ್ಟ ಪರಿಣಾಮ ರವಿ ಶಶಿ ಕುಜ ಶುಕ್ರ ವಂದ್ಯ ಸೌಮ್ಯ ಮಂದಾದಿಗಳು ಹೇಗೆ ಜೀವರಿಗೆ ಪ್ರವರ್ತಕರು ಎಂದು ವಿವರಿಸುತ್ತಾ ಅದರ ಜೊತೆಯಲ್ಲಿ ಹಿಂಬಾಲಿಸಿ ಬರುವ ಕರ್ಮಪಾಪ ಶೇಷಗಳು ಛಾಯೆ ಅರ್ಥಾತ್ ರಾಹು+ಕೇತು  ಇವುಗಳನ್ನಾಧರಿಸಿ ಜೀವಸೃಷ್ಟಿ ಇದೆಯೆಂದರು. ಹಾಗೇ ಗ್ರಹಾಧಾರಿತ ಲೆಕ್ಕದಂತೆ ಯಾವ್ಯಾವ ಅಂಶದಲ್ಲಿ ಜನನವಾಗಿರುತ್ತೆ ಅದನ್ನಾಧರಿಸಿ ಅದರ ಜೀವನ, ಸುಖ, ದುಃಖ, ಲಾಭಾಲಾಭ, ಜಯಾಪಜಯಗಳು ಸೇರಿರುತ್ತೆ ಎಂದು ಮೇಲಿನ ರೀತ್ಯಾ ವಿವರಿಸಿದ್ದಾರೆ.

ಹಾಗೇ ಋಗ್ವೇದದಲ್ಲಿ ವಿವರಿಸಿದ ವಿಶಿಷ್ಟ ಜನ್ಮಾನ್ + ಅಗ್ನಿ+ ಪಾತ್ರ+ ಧೈವ+ ಕಾರಣವೆಂಬ ಐದು ರೀತಿಯ ಜೀವ ಸಂಕುಲದ ನಿಯಮದಂತೆಯೇ ಜಗತ್ತು ಸೃಷ್ಟಿಯಾಗುತ್ತದೆ. ಅದಕ್ಕೆಲ್ಲಾ ತಂದೆ ಸೂರ್ಯ ತಾಯಿ ಪ್ರಕೃತಿ ಅರ್ಥಾತ್ ಚಂದ್ರ. ಅದನ್ನು ವಿವರಿಸುತ್ತಾ  ಹನ್ನೆರಡು ಪೂರಕ, ಹದಿನಾರು ಪೋಷಕ. ಕಾರಣದಿಂದಾಗಿ ಹತ್ತು ನಿರಂತರ ಇಪ್ಪತ್ತೇಳು + ಒಂದರ ನಡೆಯೇ ಜೀವಜಗತ್ತು ಎಂದು ಹೇಳಿದರು. ಹಾಗಾಗಿಯೇ ಗ್ರಹಾಧಾರಿತ, ಗ್ರಹಚಲನೆಯಾಧಾರಿತ ಜ್ಯೋತಿಷ ಗಣಿತ ಉದ್ಭವವಾಯ್ತು. ಆದರೆ ಜ್ಯೋತಿಷ ಗಣಿತ ಹೇಳುವುದು ಮಂತ್ರದ ಉದ್ದೇಶವಾಗಿರಲಿಲ್ಲ. ಅದರಲ್ಲಿ ಭ್ರೂಣ ಸಂಯೋಜನೆ ಹೇಗೆ ಮಾಡಬೇಕು ಎಂಬ ಗಣಕೀಕೃತ ಉಪಾಯ ಅಡಕವಾಗಿರುತ್ತೆ ಅದನ್ನೇ ಮುಂದೆ ಹೆಚ್ಚಿನ ವಿವರಣೆಯಾಗಿ ಕೆಳಕಂಡ ಮಂತ್ರಗಳಲ್ಲಿ ಉದಾಹರಿಸಿದ್ದಾರೆ. ಅದರ ವಿವರಣೆ ಹೀಗಿದೆ ಗಮನಿಸಿ.
..6 ಸೂಕ್ತ 7 ಮಂತ್ರ 1-7
ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾ ವೈಶ್ವಾನರಮೃತ ಜಾತಮಗ್ನಿಮ್ |
ಕವಿಂ ಸಮ್ರಾಜಮತಿಥಿಂ ಜನಾನಾಮಾಸನ್ನಾ ಪಾತ್ರಂ ಜನಯಂತ ದೇವಾಃ || 1 ||
ನಾಭಿಂ ಯಜ್ಞಾನಾಂ ಸದನಂ ರಯೀಣಾಂ ಮಹಾಮಾಹಾವಮಭಿ ಸಂ ನವಂತ |
ವೈಶ್ವಾನರಂ ರಥ್ಯಮಧ್ವರಾಣಾಂ ಯಜ್ಞಸ್ಯ ಕೇತುಂ ಜನಯಂತ ದೇವಾಃ || 2 ||
ತ್ವದ್ವಿಪ್ರೋ ಜಾಯತೇ ವಾಜ್ಯಗ್ನೇ ತ್ವದ್ವೀರಾಸೋ ಅಭಿಮಾತಿಷಾಹಃ |
ವೈಶ್ವಾನರ ತ್ವಮಸ್ಮಾಸು ಧೇಹಿ ವಸೂನಿ ರಾಜಂತ್ಸ್ಪೃಹಯಾಯ್ಯಾಣಿ || 3 ||
ತ್ವಾಂ ವಿಶ್ವೇ ಅಮೃತ ಜಾಯಮಾನಂ ಶಿಶುಂ ದೇವಾ ಅಭಿ ಸಂ ನವಂತೇ |
ತವ ಕ್ರತುಭಿರಮೃತತ್ವಮಾಯನ್ವೈಶ್ವಾನರ ಯತ್ಪಿತ್ರೋ ರದೀದೇಃ || 4 ||
ವೈಶ್ವಾನರ ತವ ತಾನಿ ವ್ರತಾನಿ ಮಹಾನ್ಯಗ್ನೇ ನಕಿರಾ ದಧರ್ಷ |
ಯಜ್ಜಾಯಮಾನಃ ಪಿತ್ರೋರುಪಸ್ಥೇಽವಿಂದಃ ಕೇತುಂ ವಯುನೇ ಷ್ವಹ್ನಾಮ್ || 5 ||
ವೈಶ್ವಾನರಸ್ಯ ವಿಮಿತಾನಿ ಚಕ್ಷಸಾ ಸಾನೂನಿ ದಿವೋ ಅಮೃತಸ್ಯ ಕೇತುನಾ |
ತಸ್ಯೇದು ವಿಶ್ವಾ ಭುವನಾಧಿ ಮೂರ್ಧನಿ ವಯಾ ಇವ ರುರುಹುಃ ಸಪ್ತ ವಿಸ್ರುಸಃ || 6 ||
ವಿ ಯೋ ರಜಾಂಸ್ಯಮಿಮೀತ ಸುಕ್ರತುರ್ವೈಶ್ವಾನರೋ ವಿ ದಿವೋ ರೋಚನಾ ಕವಿಃ |
ಪರಿ ಯೋ ವಿಶ್ವಾ ಭುವನಾನಿ  ಪಪ್ರಥೇಽ ದಬ್ಧೋ ಗೋಪಾ ಅಮೃತಸ್ಯ ರಕ್ಷಿತಾ || 7 ||

ಅದರ ವಿವರಣೆಗೆ ಮೊದಲು ನೀವು ಗ್ರಹಗಳ ಪರಿಚಯ ಮಾಡಿಕೊಳ್ಳಬೇಕು. ಯಾವುದಕ್ಕೆ ಸ್ವೀಕರಿಸುವ ಮತ್ತು ಕೊಡುವ ಶಕ್ತಿ ಇದೆಯೊ ಅದನ್ನು ಗ್ರಹವೆಂದು ಹೆಸರಿಸಿರುತ್ತಾರೆ. ಅದರಲ್ಲಿ ರವಿ 1 ಚಂದ್ರ 2 ಕುಜ 3 ಶುಕ್ರ 4 ವಂದ್ಯ ಅಂದರೆ ಗುರು 5 ಸೌಮ್ಯ ಅಥವಾ ಬುಧ 6 ಮಂದ ಅಥವಾ ಶನಿ 7 ಇವಲ್ಲದೆ ಛಾಯೆಗಳೆಂಬ ರಾಹುಕೇತು 8. ರವಿ = ಬೀಜ, ಚಂದ್ರ= ಕಾಯ ಅಥವಾ ಭೌತಿಕ, ಕುಜ= ಋಣ+ಕರ್ಮಗಳು. ಶುಕ್ರ= ಜೀವನಾವಕಾಶ ಹಾಗೂ ವಂದ್ಯ = ಗುರು ಅರ್ಥಾತ್ ಜ್ಞಾನ. ಸೌಮ್ಯ = ಬುಧ = ಜೀವನ ಮೌಲ್ಯ ಅಥವಾ ಪಕ್ವತೆ. ಮಂದ = ಶನಿ = ಧೈವಗುರಿಯನ್ನು ಹೇಳುತ್ತಾ ಜೈವಿಕ ಜೀವಜಾಲದ ಒಟ್ಟಾರೆ ಗತಿಯನ್ನು ರೂಪಿಸುತ್ತದೆ. ಅವೆಲ್ಲಾ ತುಂಬಾ ಜಟಿಲವಾಗಿ ಕಂಡರೂ ಸ್ವಾಭಾವಿಕ ಸರಳ ಸೂತ್ರದಲ್ಲಿ ಅಳವಡಿಸಲಾಗಿದೆ. ಇದೇ ಮಂತ್ರದ ರಹಸ್ಯ. ಜ್ಯೋತಿಷಗಳಲ್ಲಿ ಜ್ಯೋತಿಷ ಪ್ರಶ್ನೆ ಸಂಬಂಧಿಸಿಲ್ಲದಿದ್ದರೂ ಕೆಲ ಲೆಕ್ಕವಿದೆ. ತಿಥಿ= ಚಂದ್ರ ಚಾರವನ್ನು ಹೇಳುತ್ತದೆ. ಹಾಗೇ ನಕ್ಷತ್ರವೂ ಕೂಡ. ದಿನ ಸೂರ್ಯ ಚಾರವನ್ನು ಹೇಳುತ್ತದೆ. ರಾಶಿ, ಋತು, ಆಯನ, ಕಾಲಗಳನ್ನು ಹೇಳುತ್ತದೆ. ಬೀಜ= ಪುಂ. ಹಾಗಾಗಿ ಪುಂ. ಅರ್ಥಗಳು 4. ತಿಥಿ+ ನಕ್ಷತ್ರಗಳ ಸಂಯೋಗ ಇದರಿಂದಾಗುತ್ತದೆ. ಪೌರ್ಣಮಿ ನಿರ್ಣಯವೆಂಬ ಸೂತ್ರದಂತೆ ನಾಮಾನುಶಾಸನ ವಿಧಿಯಂತೆ  ರವಿಚಾರವಿರುತ್ತದೆ. ಇವೆರಡೂ ಋಣ+ಕರ್ಮ ಬಾಧಿತ ಜೀವ ಸಂಕುಲಕ್ಕೆ ರಂಗಭೂಮಿ ಒದಗಿಸುತ್ತದೆ. ಅದೇ ವ್ಯವಸ್ಥೆಯ ಲಿಂಗ, ಜೀವನ ಕಾಲ, ಸುಖ+ದುಃಖ, ಲಾಭ+ಅಲಾಭ, ಸೃಷ್ಟಿ+ನಾಶ, ವಿಪಾಕ, ಸಂಚಯನಕ್ಕೆ ಕಾರಣವಾಗಿ ಶುಕ್ರವೆಂಬ ಧಾತುವು ವ್ಯವಹರಿಸುತ್ತದೆ. ತನ್ಮೂಲಕ ಪರಿಣಾಮವೇ ಜ್ಞಾನ ಮತ್ತು ಪಕ್ವತೆ. ಪರಿಣಾಮವಾದ ಗುರಿ, ದಾರಿ ನಿರ್ಣಯವಾಗುತ್ತದೆ. ಇವೆಲ್ಲಾ ನಿಮಗೆ ಗೊತ್ತಿರುವ ಗ್ರಹಚಲನೆಯಾಧಾರಿತ ಗಣಿತಸೂತ್ರದಲ್ಲಿ ಸೇರಿದೆ. ಮೇಲೆ ಹೇಳಿದ ಆಧಾರದಿಂದ ನೀವು ಲೆಕ್ಕ ಹಾಕಿದಲ್ಲಿ ಸಂಪೂರ್ಣ ಜೀವ ಸಂಕುಲ ಸೃಷ್ಟಿಯ ರಹಸ್ಯ ಅರಿವಾಗುತ್ತದೆ. ಅದನ್ನೇ ಮೇಲ್ಕಂಡ ಮಂತ್ರ ವಿವರಿಸುತ್ತದೆ. ಜೀವ ಸಂಕುಲದ ಹುಟ್ಟು + ಸಾವುಗಳ ಮಧ್ಯದ ಕಾಲವನ್ನು ಭರದ್ವಾಜರು ಮಹಾಮಾಹಾಹವ ವೆಂದರು. ಅದನ್ನು ಇದಮಿತ್ಥಂ ಎಂದು ಸಂಶೋಧಿಸಿ ಬರೆದಿಟ್ಟರು ಮೇಲ್ಕಂಡ ಮಂತ್ರಗಳಲ್ಲಿ ಅವೆಲ್ಲವನ್ನೂ ಕಾಣಬಹುದು. ಹಾಗಾಗಿಯೇ ಏಳುಗ್ರಹಗಳೂ ಎರಡು ಛಾಯೆಗಲು ಒಟ್ಟು ಒಂಭತ್ತು ಎಂದರು. ಅದನ್ನೆಲ್ಲಾ ಸೇರಿಸಿ ವಿಸ್ತೃತ ಗಣಿತ ರಚಿಸಿ ಕೋಷ್ಠಕ ರೂಪದಲ್ಲಿ ಸಂಗ್ರಹಿಸುವ ಭಾಗವೇ ಆಗಿರುತ್ತದೆ. ಹಾಗೇ ಮುಂದೆ ಕೆಳಗಿನಂತೆ ವಿಸ್ತರಿಸಿದ್ದಾರೆ.

..6 ಸೂಕ್ತ 8, ಮಂತ್ರ 1-7
ಪೃಕ್ಷಸ್ಯ ವೃಷ್ಣೋ ಅರುಷಸ್ಯ ನೂ ಸಹಃ ಪ್ರ ನು ವೋಚಂ ವಿದಥಾ ಜಾತವೇದಸಃ | 
ವೈಶ್ವಾನರಾಯ ಮತಿರ್ನವ್ಯಸೀ ಶುಚಿಃ ಸೋಮ ಇವ ಪವತೇ ಚಾರುರಗ್ನಯೇ || 1 ||
ಜಾಯಮಾನಃ ಪರಮೇ ವ್ಯೋಮನಿ ವ್ರತಾನ್ಯಗ್ನಿರ್ವ್ರತಪಾ ಅರಕ್ಷತ |
ವ್ಯ(ಅಂ)1ತರಿಕ್ಷ ಮಮಿಮೀತ ಸುಕ್ರತುರ್ವೈಶ್ವಾನರೋ ಮಹಿನಾ ನಾಕಮಸ್ಪೃಶತ್ || 2 ||
ವ್ಯಸ್ತಭ್ನಾ ದ್ರೋದಸೀ ಮಿತ್ರೋ ಅದ್ಭುತೋಂಽತರ್ವಾವದಕೃಣೋ ಜ್ಜೋತಿಷಾ ತಮಃ |
ವಿ ಚರ್ಮಣೀವ ಧಿಷಣೇ ಅವರ್ತಯದ್ವೈಶ್ವಾನರೋ ವಿಶ್ವಮಧತ್ತ ವೃಷ್ಣ್ಯಮ್ || 3 ||
ಅಪಾಮುಪಸ್ಥೇ ಮಹಿಷಾ ಅಗೃಭ್ಣತ ವಿಶೋ ರಾಜಾನಮುಪ ತಸ್ಥುರ್ಋಗ್ಮಿಯಮ್ |
ದೂತೋ ಅಗ್ನಿಮಭರದ್ವಿವಸ್ವತೋ ವೈಶ್ವಾನರಂ ಮಾತರಿಶ್ವಾ ಪರಾವತಃ || 4 ||
ಯುಗೇ ಯುಗೇ ವಿದಥ್ಯಂ ಗೃಣದ್ಭ್ಯೋಽಗ್ನೇ ರಯಿಂ ಯಶಸಂ ಧೇಹಿ ನವ್ಯಸೀಮ್ |
ಪವ್ಯೇವ ರಾಜನ್ನಘಶಂಸಮಜರ ನೀಚಾ ನಿ ವೃಶ್ಚ ವನಿನಂ ತೇಜಸಾ || 5 ||
ಅಸ್ಮಾಕಮಗ್ನೇ ಮಘವತ್ಸು ಧಾರಯಾನಾಮಿ ಕ್ಷತ್ರಮಜರಂ ಸುವೀರ್ಯಮ್ |
ವಯಂ ಜಯೇಮ ಶತಿನಂ ಸಹಸ್ರಿಣಂ ವೈಶ್ವಾನರ ವಾಜಮಗ್ನೇ ತವೋತಿಭಿಃ || 6 ||
ಅದಬ್ಧೇಭಿಸ್ತವ ಗೋಪಾಭಿರಿಷ್ಟೇಽಸ್ಮಾಕಂ ಪಾಹಿ ತ್ರಿಷಧಸ್ಥ ಸೂರೀನ್ |
ರಕ್ಷಾ ನೋ ದದುಷಾಂ ಶರ್ಧೋ ಅಗ್ನೇ ವೈಶ್ವಾನರ ಪ್ರ ತಾರೀಃ ಸ್ತವಾನಃ || 7 ||

ಮೇಲ್ಕಂಡ ಗಣಿತ ಸೂತ್ರದಂತೆ ಗ್ರಹಚಲನಾಧಾರಿತ ಸೃಷ್ಟಿ ಪ್ರಕ್ರಿಯೆ ಭೂಮಂಡಲದಲ್ಲಿ ನಡೆದರೂ ಅದು ಪಂಚ ಭೂತಾತ್ಮಕ ಸಿದ್ಧಾಂತಕ್ಕೆ ಬದ್ಧವಾಗಿದೆ. ಅದರಲ್ಲಿ ಮುಖ್ಯವಾಗಿ ಅಗ್ನಿ ಅಥವಾ ಶಾಖ ಅದರ ಮುಖ್ಯ ಕಾರ್ಯನಿರ್ವಾಹಕ. ಅದರ ಏರು ಪೇರುಗಳೇ ಜಗತ್ತಿನ ಎಲ್ಲಾ ಆಗುಹೋಗುಗಳು. ಇದೊಂದು ಅದ್ಭುತವಾದ ಕ್ರಮ ಸಂಯೋಜನೆಯೆಂದರು. ಅದು ಹೇಗಿದೆಯೆಂದರೆಎಂಬಂತೆ ಸೌರಮಾನಾದಿ ಪಂಚಗಣಿತ ಸಂಯೋಜನೆ ಉಂಟಾಗಿರುತ್ತದೆ. ಅದನ್ನೇ ಮುಂದೆ ಗ್ರಹ ಚಲನಾಧಾರಿತ ಜ್ಯೋತಿಷವಾಗಿ ರೂಪಿಸಿದರು. ಅಜ್ಞಾನದಿಂದ ತುಂಬಿದ ಕತ್ತಲೆಗೆ ಇದು ಬೆಳಕಾಗಿ ಪ್ರತಿ ಸೂರ್ಯನಾಗಿ ಜ್ಞಾನರೂಪದಲ್ಲಿ ಹೊರಹೊಮ್ಮುವ ಬೆಳಕಿದು ಎಂದು ಉದ್ಗರಿಸಿದ್ದಾರೆ ಭರದ್ವಾಜರುನಿರಂತರ ಚಲನಶೀಲವಾದ ಪ್ರಕೃತಿ ತನ್ನ ಪುನರುತ್ಪತ್ತಿ ಕಾರಕ ಗುಣವನ್ನು ಪ್ರಕಟಿಸುತ್ತಲೇ ಇರುತ್ತದೆ. ಆದರೆ ಕಾಲ ಬಾಧೆಯನ್ನಾಧರಿಸಿ ಎಲ್ಲವೂ ಸೃಷ್ಟಿಯಾಗಲಾರದು. ಅದರ ನಿಯಮಕ್ಕೆ ಸಿಕ್ಕಿದ ಕೆಲ ಸೃಷ್ಟಿ ಮಾತ್ರಾ ಆಗುತ್ತದೆ. ಕಾಲ ನಿರ್ಣಯ ಹೇಗೆ ಎಂಬುದನ್ನು ಕೆಳಕಂಡ ಮಂತ್ರಗಳಿಂದ ಗಮನಿಸಿ.

..6 ಸೂಕ್ತ 9, ಮಂತ್ರ 1-7
ಅಹಶ್ಚ ಕೃಷ್ಣಮಹರರ್ಜುನಂ ವಿ ವರ್ತೇತೇ ರಜಸೀ ವೇದ್ಯಾಭಿಃ |
ವೈಶ್ವಾನರೋ ಜಾಯಮಾನೋ ರಾಜಾವಾತಿರಜ್ಜ್ಯೋತಿಷಾಗ್ನಿ ಸ್ತಮಾಂಸಿ || 1 ||
ನಾಹಂ ತಂತುಂ ವಿ ಜಾನಾಮ್ಯೋತುಂ ಯಂ ವಯಂತಿ ಸಮರೇಽತಮಾನಾಃ |
ಕಸ್ಯ ಸ್ವಿತ್ಪುತ್ರ ಇಹ ವಕ್ತ್ವಾನಿ ಪರೋ ವದಾತ್ಯವರೇಣ ಪಿತ್ರಾ || 2 ||
ಇತ್ತಂತುಂ ವಿ ಜಾನಾತ್ಯೋತುಂ ವಕ್ತ್ವಾನ್ಯೃತುಥಾ ವದಾತಿ |
ಈಂ ಚಿಕೇತದಮೃತಸ್ಯ ಗೋಪಾ ಅವಶ್ಚರನ್ಪರೋ ಅನ್ಯೇನ ಪಶ್ಯನ್ || 3 ||
ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು |
ಅಯಂ ಜಜ್ಞೇ ಧ್ರುವ ನಿಷತ್ತೋಽಮರ್ತ್ಯಸ್ತ ನ್ವಾ ()3 ವರ್ಧಮಾನಃ || 4 ||
ಧ್ರುವಂ ಜ್ಯೋತಿರ್ನಿಹಿತಂ ದೃಶಯೇ ಕಂ ಮನೋ ಜವಿಷ್ಠಂ ಪತಯತ್ಸ್ವಂತಃ  |
ವಿಶ್ವೇ ದೇವಾಃ ಸಮನಸಃ ಸಕೇತಾ ಏಕಂ ಕ್ರತುಮಭಿ ವಿ ಯಂತಿ ಸಾಧು || 5 ||
ವಿ ಮೇ ಕರ್ಣಾ ಪತಯತೋ ವಿ ಚಕ್ಷುರ್ವೀ()3ದಂ ಜ್ಯೋತಿರ್ಹೃದಯ ಆಹಿತಂ ಯತ್ | ವಿ ಮೇ  ಮನಶ್ಚರತಿ ದೂರ ಧೀಃ ಕಿಂ ಸ್ವಿದ್ವಕ್ಷ್ಯಾಮಿ ಕಿಮುನೂ ಮನಿಷ್ಯೇ || 6 ||
ವಿಶ್ವೇ ದೇವಾ ಅನಮಸ್ಯನ್ಭಿಯಾನಾಸ್ತ್ವಾಮಗ್ನೇ ತಮಸಿ ತಸ್ಥಿವಾಂಸಮ್ |
ವೈಶ್ವಾನರೋಽವ ತೂತಯೇ ನೋಽಮರ್ತ್ಯೋ ಽವತೂತಯೇ ನಃ || 7 ||

ರವಿಯು ತಾ ಋತುವಿನೊಳು ಶಶಿವೆರಸಿ
ಕವಿಯಧ್ವರವಾಗೆ ಋಣವಿಮೋಚಕೆ ತಾನು
ರವಿಯಂಶ ಬೆರೆಸಿ ಸೃಷ್ಟಿಯು ನಿತ್ಯನೂತನ ನಿರಂತರವೆನಿಸಿ ಬೆಳೆಯೇ ||
ಶಿವನಿಚ್ಛೆಯದರೊಳಗೆ ಬೆರೆಯುವುದು
ಜೀವಗರಿವಾಗುವುದು ಸತ್ಯ ಮಿಥ್ಯಾಲೋಕ
ಕಾವ ಜೀವಿಯು ಬರಲು ಇದು ಮುಖ್ಯ ಕಾಲವೆಂದು ಅರಿಯಿರೋ ಮನುಜರೆಲ್ಲಾ || 1 ||

ಕರ್ಮಕಾರಕ ಕುಜನು ತಾನುಣಿಸಿ ಬೆಳೆ
ಕರ್ಮವೆಳೆಸಿದಂತೆ ಸೃಷ್ಟಿಯಾಗಲು ಜೀವ
ಕರ್ಮಕೆಳಸದೈ ಮಂದ ತಾ ಮುಂದುವರಿದು ನಡೆಸಿಹುದು ಕಾಲಚಕ್ರವನು ||
ಕರ್ಮದಾ ಲೆಕ್ಕಕಿದೆ ಮಿತಿಯಿಂದ ಸೌಮ್ಯನ
ಕರ್ಮ ಬಾಧ್ಯನು ಶಶಿಯದಪಿತನರಿತೆಯೊ
ಕರ್ಮ ರಹಿತ ಜೀವಿಗಳಿಲ್ಲ ಲೋಕದಲಿ ಗುಣಕರ್ಮವಾಧರಿಸಿ ರವಿ ಬೆಳಗಲೂ || 2 ||

ಎಂಬಂತೆ ಜೀವಿಗಳಲ್ಲಿ ಸ್ವತಂತ್ರವಾದ ದೈವಾದೇಶದಂತೆ ಉತ್ತಮ ಜನನ ಮತ್ತು ಋಣ+ಕರ್ಮಾಧಾರಿತವಾದ ಬಾಧಾ ಜನನ. ಹಾಗೇ ಕಾರಣ ಜನ್ಮವೆಂಬ ಪ್ರಭೇದಗಳು ಇರುತ್ತವೆ. ಅದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಜ್ಯೋತಿಷ ತುಂಬಾ ಸಹಕಾರಿ. ಹಾಗಾಗಿ ಜ್ಯೋತಿಷ ಗಣಿತ ಆಧರಿಸಿ ಜನ್ಮ, ಜೀವನ, ಮುಕ್ತಿಯೆಂಬ ವಿಶೇಷ ಗಣಿತಾಧ್ಯಯನ ಮಾಡಿದಲ್ಲಿ ಯಶಸ್ವಿಯಾಗಿ ವಿಚಾರ ತಿಳಿದುಕೊಳ್ಳಬಹುದು. ಅದರಿಂದಾಗಿ ಉತ್ತಮವಾದ ಸಂತಾನ ಪಡೆಯಲು ಸಾಧ್ಯ. ಮತ್ತು ಸ್ಥಿರತೆ, ನಿರ್ದಿಷ್ಟತೆ, ಬದ್ಧತೆಯ ಅರಿವೂ ಪಡೆಯಲು ಸಾಧ್ಯವಾಗುತ್ತದೆಯೆಂದರು ಭರದ್ವಾಜರು. ಇನ್ನು ತಮ್ಮ ವಿಶಿಷ್ಟ ಸಾಧನೆಯನ್ನು ಕೂಡ ಇದರಲ್ಲಿ ಸೇರಿಸಿದರು. ಬಗ್ಗೆ ಬರೆಯುತ್ತೇನೆ.

..6 ಸೂಕ್ತ 15 ಮಂತ್ರ 1-19
ಇಮ ಮೂಷುವೋ ಅತಿಥಿಮುಷರ್ಬುಧಂ ವಿಶ್ವಾಸಾಂ ವಿಶಾಂ ಪತಿಮೃಂಜಸೇ ಗಿರಾ | 
ವೇತೀದ್ದಿವೋ ಜನುಷಾ ಕಚ್ಚಿದಾ ಶುಚಿರ್ಜ್ಯೋಕ್ಚಿದತ್ತಿ ಗರ್ಭೋ ಯದಚ್ಯುತಮ್ || 1 ||
ಮಿತ್ರಂ ಯಂ ಸುಧಿತಂ ಭೃಗವೋ ದಧುರ್ವನಸ್ಪತಾವೀಡ್ಯ ಮೂರ್ಧ್ವಶೋಚಿಷಮ್ |
ತ್ವಂ ಸುಪ್ರೀತೋ ವೀತಹವ್ಯೇ ಅದ್ಭುತ ಪ್ರಶಸ್ತಿಭಿರ್ಮಹಯಸೇ || 2 ||
ತ್ವಂ ದಕ್ಷಸ್ಯಾವೃಕೋ ವೃಧೋ ಭೂರರ್ಯಃ ಪರಸ್ಯಾಂತರಸ್ಯ ತರುಷಃ |
ರಾಯಃ ಸೂನೋ ಸಹಸೋ ಮರ್ತ್ಯೇಷ್ವಾ ಛರ್ದಿಯಚ್ಛ ವೀತಹವ್ಯಾಯ ಸಪ್ರಥೋ ಭರದ್ವಾಜಾಯ ಸಪ್ರಥಃ || 3 ||
ದ್ಯುತಾನಂ ವೋ ಅತಿಥಿಂ ಸ್ವರ್ಣರಮಗ್ನಿಂ ಹೋತಾರಂ ಮನುಷಃ ಸ್ವಧ್ವರಮ್ |
ವಿಪ್ರಂ ದ್ಯುಕ್ಷವಚಸಂ ಸುವೃಕ್ತಿಭಿರ್ಹವ್ಯವಾಹ ಮರತಿಂ ದೇವಮೃಂಜಸೇ || 4 ||
ಪಾವಕಯಾ ಯಶ್ಚಿತಯಂತ್ಯಾ ಕೃಪಾ ಕ್ಷಾಮನ್ರುರುಚ ಉಷಸೋ ಭಾನುನಾ | ತೂರ್ವನ್ನಯಾಮನ್ನೇತಶಸ್ಯ ನೂ ರಣ ಯೋ ಘೃಣೇ ತತೃಷಾಣೋ ಅಜರಃ || 5 ||
ಅಗ್ನಿಮಗ್ನಿಂ ವಃ ಸಮಿಧಾ ದುವಸ್ಯತ ಪ್ರಿಯಂಪ್ರಿಯಂ ವೋ ಅತಿಥಿಂ ಗೃಣೀಷಣಿ |
ಉಪ ವೋ ಗೀರ್ಭಿರಮೃತಂ ವಿವಾಸತ ದೇವೋ ದೇವೇಷು ವನತೇ ಹಿ ವಾರ್ಯಂ ದೇವೋ ದೇವೇಷು ವನತೇ ಹಿ ನೋ ದುವಃ || 6 ||
ಸಮಿದ್ಧಮಗ್ನಿಂ ಸಮಿಧಾ ಗಿರಾ ಗೃಣೇ ಶುಚಿಂ ಪಾವಕಂ ಪುರೋ ಅಧ್ವರೇ ಧ್ರುವಮ್ |
ವಿಪ್ರಂ ಹೋತಾರಂ ಪುರುವಾರಮದ್ರುಹಂ ಕವಿಂ ಸುಮ್ನೈರೀಮಹೇ ಜಾತವೇದಸಮ್ || 7 ||
ತ್ವಾಂ ದೂತಮಗ್ನೇ ಅಮೃತಂ ಯುಗೇ ಯುಗೇ ಹವ್ಯವಾಹಂ ದಧಿರೇ ಪಾಯುಮೀಡ್ಯಮ್ | 
ದೇವಾಸಶ್ಚ ಮರ್ತಾಸಶ್ಚ ಜಾಗೃವಿಂ ವಿಭುಂ ವಿಶ್ಪತಿಂ ನಮಸಾ ನಿಷೇದಿರೇ || 8 ||
ವಿಭೂಷನ್ನಗ್ನ ಉಭಯಾಙ್ ಅನುವ್ರತಾ ದೂತೋ ದೇವಾನಾಂ ರಜಸೀ ಸಮೀಯಸೇ |
ಯತ್ತೇ ಧೀತಿಂ ಸುಮತಿಮಾವೃಣೀಮಹೇ ಽಧ ಸ್ಮಾನಸ್ತ್ರಿವರೂಥಃ ಶಿವೋ ಭವ || 9 ||
ತಂ ಸುಪ್ರತೀಕಂ ಸುದೃಶಂ ಸ್ವಂಚಮವಿದ್ವಾಂಸೋ ವಿದುಷ್ಟರಂ ಸಪೇಮ |
ಯಕ್ಷದ್ವಿಶ್ವಾ ವಯುನಾನಿ ವಿದ್ವಾನ್ಪ್ರ ಹವ್ಯಮಗ್ನಿ ರಮೃತೇಷು ವೋಚತ್ || 10 ||
ತಮಗ್ನೇ ಪಾಸ್ಯುತ ತಂ ಪಿಪರ್ಷಿ ಯಸ್ತ ನಟ್ಕವಯೇ ಶೂರ ಧೀತಿಮ್ |
ಯಜ್ಞಸ್ಯ ವಾ ನಿಶಿತಿಂ ವೋದಿತಿಂ ವಾ ತಮಿತ್ಪೃಣಕ್ಷಿ  ಶವಸೋತ ರಾಯಾ || 11 ||
ತ್ವಮಗ್ನೇ ವನುಷ್ಯತೋ ನಿ ಪಾಹಿ ತ್ವಮುನಃ ಸಹಸಾವನ್ನವದ್ಯಾತ್  ಸಂ ತ್ವಾ ಧ್ವಸ್ಮನ್ವದಭ್ಯೇತು ಪಾಥಃ ಸಂ ರಯಿಃ ಸ್ಪೃಹಯಾಯ್ಯಃ ಸಹಸ್ರೀ || 12 ||
ಅಗ್ನಿರ್ಹೋತಾ ಗೃಹಪತಿಃ ರಾಜಾ ವಿಶ್ವಾ ವೇದ ಜನಿಮಾ ಜಾತವೇದಃ |
ದೇವಾನಾಮುತ ಯೋ ಮರ್ತ್ಯಾನಾಂ ಯಜಿಷ್ಠಃ ಪ್ರ ಯಜತಾಮೃತಾವಾ || 13 ||
ಅಗ್ನೇ ಯದದ್ಯ ವಿಶೋ ಅಧ್ವರಸ್ಯ ಹೋತಃ ಪಾವಕಶೋಚೇ  ವೇಷ್ಟ್ವಂ ಹಿ ಯಜ್ವಾ |
ಋತಾ ಯಜಾಸಿ ಮಹಿನಾ ವಿ ಯದ್ಭೂರ್ಹವ್ಯಾ ವಹ ಯವಿಷ್ಠ ಯಾ ತೇ ಅದ್ಯ || 14 ||
ಅಭಿ ಪ್ರಯಾಂಸಿ ಸುಧಿತಾನಿ ಹಿ ಖ್ಯೋ ನಿ ತ್ವಾ ದಧೀತ ರೋದಸೀ ಯಜಧ್ಯೈ |
ಅವಾ ನೋ ಮಘವನ್ ವಾಜಸಾತಾವಗ್ನೇ ವಿಶ್ವಾನಿ ದುರಿತಾ ತರೇಮ 
ತಾ ತರೇಮ ತವಾವಸಾ ತರೇಮ || 15 ||
ಅಗ್ನೇ ವಿಶ್ವೇಭಿಃ ಸ್ವನೀಕ ದೇವೈರೂರ್ಣಾವಂತಂ ಪ್ರಥಮಃ ಸೀದ ಯೋನಿಮ್ |
ಕುಲಾಯಿನಂ ಘೃತವಂತಂ ಸವಿತ್ರೇ ಯಜ್ಞಂ ನಯ ಯಜಮಾನಾಯ ಸಾಧು || 16 ||
ಇಮಮುತ್ಯಮಥರ್ವವದಗ್ನಿಂ ಮಂಥಂತಿ ವೇಧಸಃ |
ಯಮಂಕೂಯಂತ ಮಾನಯನ್ನಮೂರಂ ಶ್ಯಾವ್ಯಾಭ್ಯಃ || 17 ||
ಜನಿಷ್ಟಾ ದೇವವೀತಯೇ ಸರ್ವತಾತಾ ಸ್ವಸ್ತಯೇ |
ದೇವಾನ್ ವಕ್ಷ್ಯಮೃತಾಙ್ ಋತಾವೃಧೋ ಯಜ್ಞಂ ದೇವೇಷು ಪಿಸ್ಪೃಶಃ ||
ವಯಮುತ್ವಾ ಗೃಹಪತೇ ಜನಾನಾಮಗ್ನೇ ಅಕರ್ಮ ಸಮಿಧಾ ಬೃಹಂತಮ್ |
ಅಸ್ಥೂರಿನೋ ಗಾರ್ಹಪತ್ಯಾನಿ ಸಂತು ತಿಗ್ಮೇನ ನಸ್ತೇಜಸಾ ಸಂ ಶಿಶಾಧಿ || 19 ||

ಭರದ್ವಾಜರು ಇಲ್ಲಿ ರಹಸ್ಯವಾಗಿ ಹಾಗೆ ಕೆಲ ಗೂಢ ವಾಕ್ಯಗಳನ್ನೂ ಬಳಸಿ ತಮ್ಮ ಸಂಶೋಧನೆಯನ್ನು ವಿಶದಪಡಿಸಿದ್ದಾರೆ. ಇದರಲ್ಲಿ ಸಂತಾನ ಕ್ರಮ ಸ್ವಾಭಾವಿಕವಾಗಿ ಸಂತಾನ ಆಗುವ ವಿಧಾನ, ಅಲ್ಲಿ ತೊಂದರೆ ಕಂಡು ಬಂದರೆ ಕೈಗೊಳ್ಳಬೇಕಾದ ವ್ರತ, ಉಪವಾಸ, ಆಚರಣೆ, ಪಥ್ಯ, ವಿಷನಾಶ, ಶುಚಿತ್ವ, ತೃಷಾ, ಕೃಪಾ, ವೃಕ, ಛರ್ದಿ, ರಜೋವೃದ್ಧಿ, ಕ್ಷೇತ್ರಬಲ, ವೀರ್ಯವೃದ್ಧಿ, ಓಜ, ತೇಜ, ಶಿವಗಳು ಹೇಗೆ ಸದೃಢಪಡಿಸಿಕೊಳ್ಳಬೇಕೆಂದೂ ವಿವರಿಸಿದರು. ಹದಿನಾರು ಸ್ವಾಭಾವಿಕ ಪ್ರಕೃತಿಯಲ್ಲಿ ಇರುವಂತಹದ್ದು. ನಾವು ಅನುಪಾತವರಿತು ತೊಡಗಿಕೊಳ್ಳಬೇಕು. ಅವುಗಳ ಸದೃಢತೆಯಿಂದ ಸಂತಾನ ಪ್ರಾಪ್ತಿಯಾದರೆ ಉತ್ತಮ ಸಂತಾನವೆಂಬುದು ಭರದ್ವಾಜರ ಅಭಿಪ್ರಾಯವಾಗಿತ್ತು. ಇದರ ಅಸಮರ್ಥತೆ ಜೀವಿಗಳಲ್ಲಿ ಉಂಟಾಗಲು ಹಲವು ಕಾರಣ ಹೆಸರಿಸುತ್ತಾರೆ. ದೇಹದಲ್ಲಿ ಪಾವಕಾಗ್ನಿಯು ತನ್ನ ನಿರ್ವಹಣೆಯಲ್ಲಿ ವಿಕೃತವಾದರೆ ಎಲ್ಲಾ ಕ್ಷೀಣತೆ ಹುಟ್ಟುತ್ತದೆ. ಹಾಗಾಗಿ ಪಾವಕಾಗ್ನಿಯನ್ನು ಸುಸ್ಥಿತಿಯಲ್ಲಿಡಲು ಮೇಲೆ ಹೇಳಿದ ಕೆಲ ಪೂಜಾದಿಗಳು ವ್ರತ, ಉಪವಾಸ, ಪಥ್ಯ, ಅನುಪಾನಗಳ ಸಹಕಾರಿ. ಹಾಗೇ ಪಾವಕ ಕ್ಷೀಣವು ಇನ್ನಿತರೆ ಬಾಧಾ ಕಾರಣದಿಂದಾಗಿ ಉಂಟಾಗಿದ್ದರೆ ಜಪ, ಹೋಮ, ಶಾಂತಿ ಪ್ರಾಯಶ್ಚಿತ್ತಗಳನ್ನೂ ಉದಾಹರಿಸಿದ್ದಾರೆ. ಅವನ್ನೆಲ್ಲಾ ಹೇಗೆ ಮಾಡಬೇಕು, ಅದರ ವಿಧಿ ವಿಧಾನಗಳನ್ನೂ ಕೂಡ ವಿವರಿಸಿದ್ದಾರೆ. ಹಾಗೇ ಇದು ತನ್ನ ಸ್ವಂತ ಅನುಭವವೆಂದೂ ಉದಾಹರಿಸುತ್ತಾ ಕೆಳಕಂಡ ಗಣಿತರೂಪದ ಸಮಸ್ಯಾ ಪರಿಹಾರೋಪಾಯಗಳನ್ನು ತಿಳಿಸಿದ್ದಾರೆ. ಹಿಂದೆ ತಿಳಿಸಿದ ಹದಿನಾರು ಕಾರಣಗಳೂ ಕೇವಲ ಚಂದ್ರಕಲಾರಾಧನೆ ಮತ್ತು ಅದರ ಉಪಾಸನೆಯಿಂದ ಸೂಕ್ತ ಪರಿಹಾರ ಕಂಡುಕೊಳ್ಳಬಹುದೆಂದರು. ಅವೆಲ್ಲಾ ಮನೋದೃಢತೆ ಸಾಧಿಸುವ ವಿಧಾನಗಳಾಗಿವೆ ಮನಶ್ಶಾಸ್ತ್ರ ರೀತ್ಯಾ. ಹಾಗಿದ್ದಲ್ಲಿ ಮುಖ್ಯವಾಗಿ ಬೇಕು ಸಂತಾನ ಪಡೆಯಲು ದೃಢಮನಸ್ಸು ಅಲ್ಲವೆ. ದೇವಾಸಶ್ಚ ಮರ್ತಾಸಶ್ಚ ಜಾಗೃವಿಂ ವಿಭುಂ ವಿಶ್ಪತಿಂ ನಮಸಾ ನಿಷೇಧಿರೇ ಎಂದರು. ಹಾಗೇ ಉಭಯಾ ಅನುವ್ರತಾ ಎಂದರು. ಎರಡು ಮನಸ್ಸಿನ ಏಕಾಭಿಪ್ರಾಯವೇ ಸಂತಾನಫಲವೆಂಬ ಯಜ್ಞಫಲವೆಂದರು. ಅದನ್ನು ಕಾವ್ಯ ಭಾಷೆಯಲ್ಲಿ ಹೇಳುವುದಾದರೆ ಅತೀ ದೀರ್ಘವಾದೀತು. ಆದರೂ ಹೇಳಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಚೌಪದಿ ರೂಪದಲ್ಲಿ ಬರೆಯುತ್ತಿದ್ದೇನೆ ಗಮನಿಸಿ.

1)    ಒಂದು ಕಾಲದ ಋಣವು ಕರ್ಮವು
ಇಂದುವಿನ ನಿಜಕಲೆಯು ತಾನೊದಗಿ
ಬಂದು ಜೀವರಜೀವ ಸವೆಸುವವೆಂದು
ಇಂದು ನಾ ಪೇಳ್ವೆ ಮನುಜ ಕೇಳೆಂಬೇ || 1 ||

2)    ಅಮೃತವು ಕಲೆಯೊಳಗೆ ತುಂಬಿದೆ
ಅಮೃತಬಿಂದು ಕಲೆ ತುಷ್ಠಿ ಪುಷ್ಠಿಗಳು
ಮೃತವಾಗೆ ಸೃಷ್ಟಿ ಬೀಜದೊಳು ತಾನಾಗಿ
ವ್ಯಷ್ಠಿಯೊಳು ಪ್ರಕಟವದು ಶಿಶುವೂ || 2 ||

3)    ಯುಗ ಯುಗವು ಕಳೆದರೂ ಬದಲಿಲ್ಲ
ಈಗಲೂ ನಾಳೆಯೂ ಮತ್ತೆಂದೊ ಚಂದ್ರನೇ
ಈಗೆಲ್ಲದಕೆ ಕಾರಣನು ಕೇಳೈ ಮರುಳೇ
ಮಗುತನವ ಬಿಡು ಪ್ರೌಢನಾಗೆಂಬೆ ನಾನೂ || 3 ||

4)    ವಿಭೂತಿತನವಿಲ್ಲ ವೃತ್ತಿ ಕಾರಣವಲ್ಲ
ಸುಭೂತುನಹುದೈ ಆತ್ಮನೇ ಎಲ್ಲ ವಲ್ಲ
ವಿಭೂತವಿದೆ ಅದರೊಳು ತಾನಂಶವಿದೆ
ಅಭೂತವನು ಗ್ರಹಿಸಿ ಲೆಕ್ಕಿಸೆ ನಲೆ ಸತ್ಯ || 4 ||

5)    ಸಾಕ್ಷಿಯಿದೆ  ಕೇಳ್ ಇತಿಹಾಸವಿದೆ ಪ್ರ
ತ್ಯಕ್ಷ ಪ್ರಮಾಣವಲ್ಲವೊ ಪರಾಂಬರಿಸು ನಿ
ತ್ಯಕ್ಷತ್ರವದು ರಾಜಸವು ಮೆಣೆಲ್ಲ
ಅಕ್ಷ ನಿಯಮದೊಳು ಏಕಾಗ್ರತೆಯೊಳಗೆ || 5 ||

6)    ಮನವು ತಾನ್ ಮಡಿಯಲ್ಲ ಮುಟ್ಟುವುದು
ಮನದ ಮುಸುರೆಯ ಹೊಲಸನರಿಯಲು
ಮನಸ್ಸಾಕ್ಷಿಯಿಂದಲೇ ಅಳೆಯ ಬೇಕಿದೆ
ಮನುಜ ನೀ ಮೊದಲು ಮನದ ಮುಸುರೆ ಕಳೆಯೊ ||

7)    ನಿತ್ಯ ಶಾಶ್ವತವಲ್ಲವಿದು ತಿಳಿ ನೀ ಅರಿಯೈ
ಸತ್ಯ ಶಾಶ್ವತವಯ್ಯ ಮುಸುಕಿಹುದು ಮಾಯೆ
ಸತ್ಯದಾ ಮರೆಯಲಿ ನಿತ್ಯವಿದೆ ಅಸತ್ಯದಾ
ಪಥ್ಯವಿರಲಿ ನೀ ಜಗಮೆಚ್ಚುವಾ ಮಗನಾಗುವೇ ಎಂಬೆ || 7 ||

8)    ಅದಕಾಗಿ ನೀ ಚಂದ್ರನಾ ಹದಿನಾರು ಕಿರಣ
ಕೆದಕಿ ನೋಡಲು ಬೇಕು ಅದರೊಳು ರತಿ
ಇದೆ ಧೃತಿ ಇದೆ ಮಾನವಿದೆ ಮನವಿದೆ
ಅದಕೆಂದೆ ವಿಭಾಗಿಸಿದರು ಚಂದ್ರನನು ಕಲೆಗಳಾಗಿ || 8 ||

9)    ಮೇಲೆಂಟು ದ್ವಿಗುಣಿತವೇ ಹದಿನಾರು
ಮೇಲು ಕೀಳುಗಳ ವೃದ್ಧಿ ಕ್ಷಯ ಕ್ಷೀಣ
ದಾ ಮೇಲಣ ಋತುವೇ ಋತುಚಕ್ರ ಪ್ರಕೃತಿ
ಮೇಲಣ ಗುಣ ಹೊಂದಿ ತಾ ಮಾತೆ ತಾಯಿಯೆಂಬೆ || 9 ||

ಹೀಗೆ ಚಂದ್ರನಿಗೂ ತಾಯಿಗೂ ಅವಿನಾಭಾವ ಸಂಬಂಧ ಬೆಸೆದು ತನ್ಮೂಲಕ ಶಿಶುವಿನ ಕರ್ತೃತ್ವ ಶಕ್ತಿಯ ಮೂಲ ತಾಯಿಯೆಂದು ವೇದವೂ, ಜ್ಯೋತಿಷವೂ ಆರ್ಷಗ್ರಂಥಗಳು ಹಾಡಿ ಹೊಗಳಿದವು. ತಾಯಿಯೇ ಶ್ರೇಷ್ಠವೆಂದರು. ಅದೇ ಮೇಲಣ ಮಂತ್ರ ಒಟ್ಟು ಭಾವಾರ್ಥವಾಗಿರುತ್ತೆ. ಹಾಗೇ ಮಾತೃ ಪ್ರಧಾನ ಸೃಷ್ಟಿ ವ್ಯವಸ್ಥೆಯನ್ನು ಸಂಶೋಧಿಸುತ್ತಾ ಪಿಂಡರೂಪದ ಭ್ರೂಣ ಸೃಷ್ಟಿಯ ಆವಿಷ್ಕಾರವಾಯ್ತು. ಕೃತಕ ಭ್ರೂಣ ತಯಾರಿಕೆ ತನ್ಮೂಲಕ ಸಂತಾನ ಪಡೆಯುವುದು ಆಗಿನ ಕಾಲದ ಆಂಗೀರಸರ ಅಗತ್ಯವಾಗಿತ್ತು. ಅದಕ್ಕಾಗಿ ಕೃತಕತೆಯನ್ನು ಅವರು ಅಂಗೀಕರಿಸಿದರು. ಅದನ್ನು ಒಂದು ಅನ್ನ ಸೂತ್ರದಲ್ಲಿ ಹೀಗೆ ವಿವರಿಸಿದ್ದಾರೆ ನೋಡಿ.
ಆರು ಮೂರರ ಮೇಲೆ ಮೂರು ತಾನೊರಗಿಹುದು
ಮಾರ ನಿಲ್ಲದೆ ಜೀವ ಸೃಷ್ಟಿಯಿದು ಸತ್ಯ
ಮೇರೆ ಮೀರುತ ಇರಲು ಹರಿ ತಾನು ಮಾರನಾ ಸೃಷ್ಟಿಸುತ
ಮೇರೆಯಿಕ್ಕಿದ ಜೀವ ಸಂಕುಲಕೆ ಮೊದಲಿರಲಿಲ್ಲವಯ್ಯಾ
ಇದೊಂದು ಕನ್ನಡದ ಪುರಾತನ ಕವಿಯ ಅಂಬೋಣ. ಹಿಂದಿನ ಕಾಲದಲ್ಲಿ ಮಾರ = ಮನ್ಮಥ ಇರಲಿಲ್ಲ ಅಂದರೆ ಕಾಮವಿರಲಿಲ್ಲ. ಆದರೂ ಜೀವಜಗತ್ತು ಬೆಳೆಯುತ್ತಿತ್ತು. ಅದಕ್ಕೆ ಕಾರ್ಯ+ಕಾರಣ ಸಂಬಂಧ ಬೆಸೆಯುವುದಕ್ಕಾಗಿ ಹರಿ ಮಾರನನ್ನು ಸೃಷ್ಟಿಸಿದ. ಕಾಮವೇ ಸಂತಾನಕಾರಕವೆಂದಾಯ್ತು. ಮೋಕ್ಷ ಅಥವಾ ಮುಕ್ತಿ ಅಥವಾ ನಿವೃತ್ತಿ ಇಲ್ಲದ ಜೀವ ಜಗತ್ತನ್ನು ಸರಿದೂಗಿಸಲು ಶಿವ ಮಾರನನ್ನು ಸುಟ್ಟ. ಇದು ಸತ್ಯ. ಅಂದರೆ ಪ್ರಾಪಂಚಿಕ ಸತ್ಯ ಅಥವಾ ಆಧ್ಯಾತ್ಮಿಕ ದೃಷ್ಟಿಯಿಂದ ಪ್ರಕಟಿತ ಸಮಾಜ ಜೀವನವೆಲ್ಲಾ ಮಿಥ್ಯ. ಹಾಗಾಗಿ ಕಾಮವೇ ಮಿಥ್ಯಾ ಪ್ರಪಂಚದ ಮಾಯಾವರಣದ ನಾಟಕ. ಸತ್ಯ ದರ್ಶನ ಮಾಡಿಸಲು ಶಿವ ಅದನ್ನು ಸುಟ್ಟ. ಸತ್ಯದರಿವು ಗೋಚರಿಸಿತು. ಹಾಗಾಗಿಯೇ ಮಾತೃ ಪ್ರಧಾನವೆಂಬ ಪ್ರಕಟ ಪ್ರಪಂಚ ಬಂಧ, ಬಾಂಧವ್ಯ, ಬಳಗವೆಲ್ಲಾ ಮಿಥ್ಯೆ. ಆದರೆ ಪ್ರತ್ಯಕ್ಷ ಸತ್ಯ. ಪರಾಂಬರಿಸಿದರೆ ಸುಳ್ಳು. ಅದಕ್ಕೆ ಕಾರಣ ಬೇಕು ಎಂಬ ಕಾಮನೆಯ ಆಟದಡಿಯಲ್ಲಿ ನಡೆವ ಚಲಿತ ಪ್ರಪಂಚ ಅಸ್ಥಿರ ಅಭದ್ರ. ಅಲ್ಲಿ ಬೇಕು ಇಲ್ಲವಾದಲ್ಲಿ ಅವ್ಯಾವುದೂ ಇಲ್ಲ. ಆತ್ಮ ಸ್ವತಂತ್ರ, ಸತ್ಯ, ಬಂಧನವಿಲ್ಲ. ಹಾಗಾಗಿ ಆತ್ಮಸಂಬಂಧವೆಂಬುದೇ ಮಿಥ್ಯಾವಾದವಲ್ಲವೆ? ಕಾಯಿಕ ಸಂಬಂಧವನ್ನು ಆತ್ಮ ಸಂಬಂಧವೆಂಬ ಭ್ರಾಂತಿಯನ್ನು ಹುಟ್ಟಿಸಿದ ಮಾಯೆಯ ಮೋಸದಲ್ಲಿ ಸಿಲುಕಿ ನರಳುತ್ತಿದೆಯೆಂದರು ಭರದ್ವಾಜರು. ಹಾಗಾಗಿ ಜೀವಸೃಷ್ಟಿಗೆ ತಾಯಿ+ತಂದೆ ಎರಡೂ ಇಲ್ಲದ ಜೀವಜಗತ್ತೊಂದಿದೆಯೆಂದು ಸಂಶೋಧಿಸಿ ಕಂಡು ಹಿಡಿದರು. ಅದೇ ಅಂಶಿಕಜನನವೆಂಬ ಭರದ್ವಾಜರ ಮಂಡಿತ ಸಿದ್ಧಾಂತ. ಇದನ್ನು ಗಣಿತದಲ್ಲಿ ಸಂಯೋಜಿಸಿ ಬರೆದಿಟ್ಟರು. ಮತ್ತು ಗಣಿತ ಸೂತ್ರ ನೋಡಿರಿ.
1)    ಏಳು ಮತ್ತೊಂದು ಹನ್ನೆರಡು ಇಪ್ಪತ್ತೇಳರಲಿ
ಹೇಳಿದೆ ಎಂಟೆಂಟರಲಿ ಒಂಬತ್ತು ಪಾದವು ಮೊತ್ತ
ಪೇಳುತಿದೆ ಅದುವೇ ರಹಸ್ಯ ಪುತ್ರ ಸಂಖ್ಯೆಯಲಿ
ಕೋಳು ಹೋಗದಿರು ಮನುಜನೀ ನೆಲ್ಲ ಹರಿ ಕಾಯ್ವನೂ
2)    ಬಾಳ ಪುಟ ತೆರೆದಿಡಲು ಅದರಲಿ ಅದರಲಿ ಶ್ವಾನ, ಗಜ, ಅಜ
ಗಳೆಷ್ಟೊ ಆಗಿ ಹೋಗಿವೆ ಮತ್ತೆರಡು ನೂರೆಂಟು ಕೊನೆ
ಯೊಳ್ ಸಂಧಿ ಸಮಸಂಖ್ಯೆಯಲಿ ಬಾಜಿಸಲು ಮಿತ್ರ
ಇಳೆಯೊಳ್ ಹದಿನಾರು ಕಲೆ ಕೂಡಿರೆಂದು ಪೇಳುವೆನೂ ||
3)    ಕಣಿಯ ಹೇಳುವುದಲ್ಲ ಮಗು ತಾನು ಉಚ್ಚರಿಪ ತೊದಲು
ಮಣಿ ಮುತ್ತುಗಳು ಮಾತುಗಳಲ್ಲ ಸಂಖ್ಯೆ ಕಾಣೈ
ಅಣಿಯಾಗು ಪಡೆ ಫಲವ ಏಳು ಬೀಳುಗಳೆಲ್ಲ ಋತವು
ಮಣಿದು ಜೀವನ ಮಾರ್ಗವದು ದೇವಮಾರ್ಗ ಕಾಣಯ್ಯಾ ||

ರೀತಿಯಲ್ಲಿ ಹಲವು ಬೇರೆ ಅರ್ಥದಲ್ಲಿ ಕೋಷ್ಟಕ ವಿಧಾನದಲ್ಲಿ ಕೆಲ ಮಾತುಗಳನ್ನು ಹೇಳುತ್ತಾ ಅದರೊಂದಿಗೆ ವಿಶೇಷ ಗಣಿತ ಪ್ರಮೇಯಗಳನ್ನು ಉದಾಹರಿಸಿದ್ದಾರೆ. ಅವನ್ನೆಲ್ಲವನ್ನೂ ಭರದ್ವಾಜರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದರು. ನಂತರ ಇತರೆ ಕೃತಕ ಗರ್ಭವಿಚಾರ ವಿಮರ್ಶೆಯನ್ನೂ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಕೃತಕ ಗರ್ಭಧಾರಣಾ ವಿಧಿಗಳಲ್ಲಿ 7 ಬಗೆಯನ್ನು ವಿವರಿಸಿದ್ದಾರೆ.
1)    ಸಂಕರ
2)    ಶುಕ್ರ ಸಂಕರ
3)    ಪೌಂಢ್ರಕ
4)    ನಿಯೋಗಿತ
5)    ದ್ರೋಣ
6)    ಕಪಾಲ
7)    ವರದಾ

ವೆಂಬ 7 ರೀತಿಯ ಕೃತಕ ಗರ್ಭಧಾರಣೆಯನ್ನು ವಿವರಿಸಿದರು. ಅವೆಲ್ಲಾ ಒಂದಕ್ಕಿಂತ ಒಂದು ಹೆಚ್ಚಿನದ್ದಾದ ಉತ್ತಮ ಸಂತಾನ ವಿಧಾನಗಳು. ಇಲ್ಲಿ ಬೀಜ+ಕ್ಷೇತ್ರ ಎರಡರ ಅಸಮರ್ಪಕತೆಯನ್ನೂ ಸೂಕ್ಷ್ಮಾತಿಸೂಕ್ಷ್ಮವಾಗಿ ವಿಮರ್ಶಿಸುತ್ತಾ ವ್ಯವಸ್ಥಿತವಾಗಿ ವಿವರಣೆ ಕೊಟ್ಟಿರುತ್ತಾರೆ. ಒಂದೊಂದಾಗಿ ಬಗ್ಗೆ ಒಂದೊಂದು ಗಣಿತ ಲೆಕ್ಕಾಚಾರವನ್ನು ಹೇಳುತ್ತಾ ಅದರ ಮೂಲ ಉದ್ದೇಶಕ್ಕೆ ಭಂಗವಾಗದ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.
1)    ಸಂಕರ:- ಇದರಲ್ಲಿ ಅಜಾಶ್ವ, ಪಶುಪಾ, ವಾಜಪತ್ಯವೆಂದು ಮೂರು ವಿಧ. ಉತ್ತಮ ನಿರೋಗಿ ಸದೃಢ ಸಂತಾನಕ್ಕಾಗಿ ವಿಧಾನ ಬಳಸಬೇಕೆಂದೂ, ಇದು ಶ್ರೇಷ್ಠ ಮಾರ್ಗವೆಂದೂ ಉದಾಹರಿಸಿದರು. ರಾವಣ, ಕುಂಭಕರ್ಣ, ವಿಭೀಷಣಾದಿಗಳು ವೃತ್ತಿ ಸಂತಾನಗಳು. ಅದು ವಾಜಪತ್ಯ ಸಂತಾನ. ಕೌರವಾದಿಗಳು ಅಜಾಶ್ವ ಸಂತಾನ. ನೃಮೇಧ, ಸುಷೇಣ, ವಾಲಿ, ಸುಗ್ರೀವ, ಇವು ಪಶುಪಾ ಸಂತಾನ.
2)    ಶುಕ್ರ ಸಂಕರ:- ಶುಕ್ರ+ರಜಗಳ ಸಹವರ್ತಿತ್ವ ದೋಷ ಕಂಡು ಬಂದಲ್ಲಿ ರಜಸ್ಸು ಗುಣಾವಗುಣ, ರಸಶುದ್ಧಿ, ರಸಪಾಕ, ಮುದ್ವರೀಯಕಗಳಿಂದ ಪರಿಷ್ಕರಿಸಿ ತನ್ನ ಸ್ವಂತ ಕ್ಷೇತ್ರದಲ್ಲಿ ನ್ಯಾಸಮಾಡಿ ಸಂತಾನ ಪಡೆಯುವ ಒಂದು ವಿಶಿಷ್ಟ ಸಂತಾನ ಪ್ರಯೋಗ.
3)    ಪೌಂಢ್ರಕ:- ಇದೊಂದು ಕ್ರೂರ ಪದ್ಧತಿಯೂ, ಆದರೆ ಬದ್ಧತೆಯೂ ಇರುವಂತಹಾ ವಿಧಾನ ಕೇವಲ ಸಂತಾನಕ್ಕಾಗಿ ಮಾತ್ರ. ಕೆಲ ವಿಶಿಷ್ಟ ಗುಣ ಶಕ್ತಿಯನ್ನು ಹೊಂದಿದ ಎರಡು ಕ್ಷೇತ್ರಗಳನ್ನು ಆರಿಸಿ ಅದರಲ್ಲಿ ನಿಯೋಗ ಮಾಡಿಸಿ ನಂತರ ಯಾವುದು ಉದ್ದೇಶಿತ ಫಲ ನೀಡಿತೋ ಅದನ್ನು ಬಿಟ್ಟು ಉಳಿದೆಲ್ಲವನ್ನೂ ನಾಶಪಡಿಸಿ ಪಡೆಯುವ ವಿಧಾನ.
4)    ನಿಯೋಗಿಕ:- ಇತ್ತೀಚಿನವರೆಗೂ ಅಧಿಕೃತವಾಗಿ ಅಂಗೀಕರಿಸಲ್ಪಟ್ಟು ಇತ್ತೀಚೆಗೆ ದೂರೀಕರಿಸಲ್ಪಟ್ಟ ಕ್ಷೇತ್ರಶಕ್ತಿಯ ಪ್ರದಾನ್ಯತೆಯಿಂದ ಪಡೆಯುವ ಐಚ್ಛಿಕ ಸಂತಾನ ಕ್ರಮ.
5)    ದ್ರೋಣ:- ರಾಸಾಯನಿಕ, ಪೌಷ್ಠಿಕ, ಸತ್ವಗಳ ಸಂಯೋಜನೆ ಮಾಡಿ ಅಲ್ಲಿ ಅಂಡಾಣು+ಬೀಜವನ್ನು ನ್ಯಾಸಗೊಳಿಸಿ ತಾಯಿ+ತಂದೆಯೆಂಬ ಪರಿಕರ ಸಹಾಯವಿಲ್ಲದೇನೆ ಪಾತ್ರೆಯಲ್ಲಿ ಮಗುವನ್ನು ಬೆಳೆಸುವ ವಿಧಾನ.
6)    ಕಪಾಲ:- ಅಗ್ನಿ ಮುಖ ಸೃಷ್ಟಿ. ಮಂತ್ರ ಮುಖೇನ ಶಕ್ತಿ ಪ್ರಯೋಗಿಸಿ ಸದ್ಯೋಜಾತ ಗರ್ಭೋತ್ಪನ್ನ ವಿಧಾನದಿಂದ ಸಂತಾನ ಪಡೆಯುವುದುಉದಾ:- ದ್ರೌಪದಿ, ದೃಷ್ಟದ್ಯುಮ್ನ, ಇಳಾ, ವೃತ್ರ, ಬಾದ್ರಯ, ದೇವಕ್ರಮ, ಉಮಶ್ರಮ ಇತ್ಯಾದಿಗಳು ಕಪಾಲ ಸಂತಾನಗಳು.
7)    ವರದಾ:- ಅಗ್ನಿಯ ಮುಖೇನ ಯಾಗದಲ್ಲಿ ನೇರ ಶಿಶು ಪಡೆದು ಸಂಸ್ಕಾರಸಹಿತವಾಗಿ ಸ್ವೀಕೃತಿ ಪಡೆದು ಪಡೆಯುವ ಸಂತಾನಗಳನ್ನು ವರಪುತ್ರ ಅಥವಾ ವರಸಂತಾನವೆಂದು ಹೆಸರು.
ಇವೆಲ್ಲಾ ರೀತಿಯ ಸಂತಾನ ವಿಧಾನಗಳನ್ನು ನಾನಾ ರೀತಿಯ ಸಂಶೋಧನೆಗಳಿಂದ ಕಂಡುಹಿಡಿದು ಅವುಗಳನ್ನು ಗಣಿತ ಪ್ರಮೇಯ ರೂಪದಲ್ಲಿ ಬರೆದಿಟ್ಟು ವೈಜ್ಞಾನಿಕ ಕ್ರಾಂತಿಯನ್ನೇ ಉಂಟು ಮಾಡಿದರು. ಅಲ್ಲೆಲ್ಲಾ ಆಗಿನ ಕಾಲದ ಭರದ್ವಾಜರ ಅನಿವಾರ್ಯತೆ, ಅಗತ್ಯತೆ ಕಾರಣವಾಗಿತ್ತು. ಆದರೆ ಅವರ ಸಂಶೋಧನೆಯೆಲ್ಲವೂ ಈಗಲೂ ಮುಂದುವರಿದ ವಿಜ್ಞಾನ ಯುಗದಲ್ಲಿ ಪ್ರಸ್ತುತವಾಗಿರುತ್ತೆ. ವಿಚಾರವಾಗಿ ಹೆಚ್ಚಿನ ವಿಚಾರಗಳಿಗಾಗಿ ಮುಂದಿನ ಲೇಖನದಲ್ಲಿ ನೋಡಿರಿ.
ಇಂತು
ಕೆ. ಎಸ್. ನಿತ್ಯಾನಂದ,
ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು