Sunday, 17 July 2016

ನಮ್ಮ ಋಷೀ ಪರಂಪರೆ-೫ : ವಸಿಷ್ಠರು-೧


ಕಲ್ಪಾಂತರಗಳಿಂದ ಇಂದಿಗೂ ಸದೇಹರಾಗಿರುವ
೯೦ ಅಡಿ ಎತ್ತರ ಉಳ್ಳ ವಸಿಷ್ಠ ಋಷಿವರೇಣ್ಯರು

ಲೋಕಮುಖದಲ್ಲಿ ಮೈತ್ರವರುಣಿಯರ ಮಗನೆಂದೂ, ಬ್ರಹ್ಮಮಾನಸ ಪುತ್ರನೆಂದೂ ಪ್ರಸಿದ್ಧರು. ಇವರ ಇತಿಹಾಸ ದೀರ್ಘಕಾಲೀನ. ಎಲ್ಲಿ ಆರಂಭ? ಎಲ್ಲಿ ಮುಕ್ತಾಯ? ಕಂಡು ಬರುವುದಿಲ್ಲ. ಆದರೆ ಈಗಲೂ ಪ್ರಕಟಣೆಯಲ್ಲಿರತಕ್ಕ ವಿಶಿಷ್ಟ ವ್ಯಕ್ತಿಯೇ, ಋಷಿಯೇ, ಬ್ರಹ್ಮರ್ಷಿಯೇ, "ವಸಿಷ್ಠರು". ಇಂತಹಾ ಮಹಾತ್ಮರ ಬಗ್ಗೆ, ಅವರ ಜೀವನದ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದೇನೆ; ಅವರ ಅನುಮತಿಯ ಮೇರೆಗೆ. ಮೊದಲು ವ್ಯಕ್ತಿ ಚಿತ್ರಣ ನೋಡೋಣ.

        ವಸಿಷ್ಠರು ಪುರಾಣೇತಿಹಾಸಗಳಲ್ಲಿ ಕಂಡು ಬಂದಂತೆ ಮೈತ್ರ+ವರುಣಿಯರ ಮಗನಾಗಲೀ ಅಥವಾ ಬ್ರಹ್ಮಮಾನಸ ಪುತ್ರರಾಗಲೀ ಆಧಾರ ಸಹಿತವಾಗಿ ಕಂಡು ಬರುವುದಿಲ್ಲ. ಹಾಗೂ ಕಲ್ಪ ಕಲ್ಪಾಂತರದಲ್ಲೂ ವಸಿಷ್ಠರು ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಹಾಗಾಗಿ ಈ ಮೇಲಿನ ಎರಡೂ ವಾದವೂ ನಿರ್ಬಲವಾಗುತ್ತದೆ. ಈ ಮಂತ್ರ ಗಮನಿಸಿ:

ಋಗ್ವೇದ ಮಂಡಲ-೭, ಸೂಕ್ತ-೪, ಮಂತ್ರ-೪
ಅಯಂ ಕವಿರಕವಿಷು ಪ್ರಚೇತಾ ಮರ್ತೇಷ್ವಗ್ನಿರಮೃತೋ ನಿ ಧಾಯಿ |
ಸ ಮಾ ನೋ ಅತ್ರ ಜುಹುರಃ ಸಹಸ್ವಃ ಸದಾ ತ್ವೇ ಸುಮನಸಃ ಸ್ಯಾಮ ||

ನೇರವಾಗಿ ಮರ್ತ್ಯವ್ಯಾಪ್ತಿಯ ಸಂದೇಶವನ್ನು ಯಾರೂ ಹೇಳದ ರೀತಿಯಲ್ಲಿ ವಿವರಿಸಿದ್ದಾರೆ. ಶುದ್ಧ ಕರ್ಮಠರಾದ ವಸಿಷ್ಠರು ಕರ್ಮಕಾಂಡ ಪ್ರವರ್ತಕರು ಎಂಬುದೂ ಇದರಿಂದ ಸಿದ್ಧವಾಗುತ್ತದೆ. ಮರ್ತ್ಯರಿಗೆ ಕರ್ಮವೇ ಪ್ರಧಾನವೆಂದೂ, ಕರ್ಮ ಚಾರಿತ್ರ್ಯದಿಂದ ದೇವ ದೇವೋತ್ತಮನಾಗಬಹುದೆಂದೂ, ಜ್ಞಾನವು ಕರ್ಮದಿಂದ ಸಿದ್ಧವೆಂದೂ ಪ್ರತಿಪಾದಿಸಿದ ಮಹಾತ್ಮರಿವರು. ಜೀವರಿಗೆ ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಯೇ ಪ್ರಧಾನವೆಂದೂ ತನ್ಮೂಲಕ ಸಂಜನಿಸುವುದು ಜ್ಞಾನಶಕ್ತಿಯೆಂದೂ ಪ್ರತಿಪಾದಿಸಿದ ಕರ್ಮವಿಪಾಕ ಸಿದ್ಧಾಂತವನ್ನು ಕೊಟ್ಟರು. ಅದು ಸಕಲ ಚರಾಚರಗಳೆಲ್ಲವೂ ಒಂದಲ್ಲಾ ಒಂದು ಕರ್ಮ ಚೇಷ್ಟಿತವೇ. ಅದನ್ನು ವಿಪಾಕಗೊಳಿಸಿಕೊಂಡಲ್ಲಿ ಮಾತ್ರಾ ಜ್ಞಾನ ಪ್ರಕಟವೆಂದು ಸಾಧಿಸಿ ತೋರಿಸಿಕೊಟ್ಟವರು. ಇಂತಹಾ ಶ್ರೇಷ್ಠ ಸಾಧಕರ ವಾಣಿಯಲ್ಲೇ ಅವರ ಜೀವನೇತಿಹಾಸವನ್ನು ದಾಖಲಿಸುವುದೊಂದು ಆನಂದ. ಈ ನೆಲೆಯಲ್ಲಿ ಆತ್ಮಸಂತೋಷವೆಂಬ ನೆಲೆಯಲ್ಲಿ ವಿವರಿಸುತ್ತೇನೆ.

        ಆರಂಭ ಬ್ರಹ್ಮಕಲ್ಪದಲ್ಲಿ ಒಂದು ಘಟನೆಯನ್ನು ಆಧರಿಸಿ ನೋಡಿದಲ್ಲಿ ಈ ವಸಿಷ್ಠರು ಬ್ರಹ್ಮ ಮಾನಸಪುತ್ರರಲ್ಲವೆಂದು ಸ್ಪಷ್ಟವಾಗುತ್ತದೆ. ಅದರಂತೆ ವಿಶ್ಲೇಷಣೆಗೆ ಒಳಪಡಿಸಿದಾಗ ಇವರು "ಸ್ವಯಂಭೂ" ಎಂಬುದೂ ಸಾಬೀತಾಗುತ್ತದೆ. ಹಾಗೂ ಆ ಕಾಲೀನ ಒಂದು ಘಟನೆಯೂ ಇದಕ್ಕೆ ಪೂರಕವಾಗಿರುತ್ತದೆ. ಅದೇನೆಂದರೆ ಋಗ್ವೇದದಲ್ಲಿ ಒಂದು ಮಂತ್ರ ಒಂದು ಘಟನೆಯನ್ನು ಹೇಳುತ್ತದೆ. ಅದೇನೆಂದರೆ "ವ್ಯೇತು ದಿದ್ಯುದ್ವಿಷಾಮಶೇವಾ ಯುಯೋತ ವಿಷ್ವಗ್ರಪಸ್ತನೂನಾಮ್" - ದ್ವಿಪದಾ ಛಂದಸ್ಸಿನಲ್ಲಿದೆ ಈ ಮಂತ್ರ. ಇದಕ್ಕೆ ವೇದ ರೀತ್ಯಾ ವಸಿಷ್ಠರೇ ದ್ರಷ್ಟಾರರು. ಅದು ಅವರ ಮನೋಭೂಮಿಕೆಯಿಂದ ಪರಿಷ್ಕರಣೆಗೊಂಡು ಹೊರಹೊಮ್ಮಿದ ಉದ್ಗಾರ. ಹಾಗೂ ಇಡೀ ವಿಶ್ವವೇ ಆಪಃ - ಅಂದರೆ ನೀರಾವಾರವಾಗಿರುವಾಗ ಇಲ್ಲಿ ದ್ವೇಷಾಸೂಯೆಗಳಾಗಲೀ, ನಾನು+ನೀನೆಂಬ ಭೇದವಾಗಲಿ ಇಲ್ಲ; ಆದರೆ ನೀರಿನಿಂದ ಆವರಿಸಲ್ಪಟ್ಟಿದೆ. ಅಂದರೆ ನೀರು = ಜೀವ. ಅಂದರೆ ಆಗಲೇ ಜೀವರಿಂದ ಆವರಿಸಲ್ಪಟ್ಟಿದೆಯೆಂದೇ ಅರ್ಥವಾಗುತ್ತದೆ. ಅದನ್ನಾಧರಿಸಿ ತನು = ರೂಪ ವ್ಯಾವೃತ್ತವಾಗಿದೆ. ಅಂದರೆ ಪರಿಪೂರ್ಣ ಜ್ಞಾನಾವೃತ್ತವಾದ ಬ್ರಹ್ಮವಿದೆ ಎಂದೇ ಅರ್ಥವಲ್ಲವೇ? ಹಾಗಿದ್ದರೆ ನಂತರ ಬಂದ ಬ್ರಹ್ಮನಿಗೆ, ಅಂದರೆ ಕಮಲೋದ್ಭವನಿಗೆ ಸಿಕ್ಕಿದ ಸೃಷ್ಟಿಯ ಅಧಿಕಾರ ನಂತರದ್ದೇ ಎಂದಲ್ಲವೆ? ಹಾಗಿದ್ದ ಮೇಲೆ ಮೂಲಚೈತನ್ಯಯುಕ್ತವಾದ ಒಂದು ಜೀವಕೋಟಿ ಪ್ರಭೇದವಿತ್ತು. ಅದರಲ್ಲಿ ವಸಿಷ್ಠರೊಬ್ಬರಾಗಿ ಗುರುತಿಸಿ ಉದ್ಭವಿಸಿದರು ಎಂದೇ ಅರ್ಥವಲ್ಲವೇ?

        ಹಾಗೇ ಅಥರ್ವದಲ್ಲಿ ಒಂದು ಮಂತ್ರ ಉದಾಹರಿಸಿದಲ್ಲಿ ಇನ್ನೂ ಸ್ಪಷ್ಟವಾಗುತ್ತದೆ. "ನಾ ಶಂಖಾ ನಾ ಲಂಕಾ ನಾ ಜೀವ ಪುರುಹೇತಿನಃ | ನಾ ದ್ವಿಷೋ ನಾ ವಿಮ್ರೋತ ನಾ ದೇವ ಸಮಹರ್ಷಿಣಃ" ||  ಈ ಪ್ರಕೃತಿಯಲ್ಲಿ ತಾನು, ನಾನು, ನನ್ನದು ಎಂಬ ಯಾವುದೂ ಪ್ರತ್ಯೇಕವಾಗಿ ಗುರುತಿಸಲ್ಪಡುವುದಿಲ್ಲ, ವ್ಯವಹಾರವಿಲ್ಲ, ಪ್ರಕಟವಿಲ್ಲ, ಭಾವ, ಬೋಧನೆ ಇಲ್ಲ; ಹಾಗಾಗಿ ರಾಗದ್ವೇಷಗಳಿಲ್ಲದ್ದು ಎಂದಿದ್ದಾರೆ. ಮುಂದಿನ ಹಿರಣ್ಯಗರ್ಭ ಬ್ರಹ್ಮನ ಸೃಷ್ಟಿಯಲ್ಲಿ ಇವೆಲ್ಲಾ ಬೆರೆತಿರಬಹುದು ಎಂದರೆ ವಸಿಷ್ಠ ಇವರಿಗಿಂತ ಪೂರ್ವೀಕನೆಂದೇ ಅರ್ಥ. ಇಲ್ಲಿ ದೇವನಿಲ್ಲ, ಆದರೆ ಶಿವ ಇದೆ ಎಂದಿದ್ದಾನೆ. ಅಂದರೆ ಸರ್ವದಾ ಶುಭವಿದೆ ಎಂದೇ ಅರ್ಥ. ಅದು ಹೀಗಿದೆ "ಸಜೂರ್ದೇವೇಭಿರ್ವಪಾಂ ನಪಾತಂ ಕೃದ್ವಂ ಶಿವೋ ನೋ ಅಸ್ತು" ಎಂದಿದೆ ವೇದ. ಅಂದರೆ ಈ ಹಿರಣ್ಯಗರ್ಭನಿಗಿಂತಲೂ ಮೊದಲೇ ಸೃಷ್ಟಿ ಇತ್ತು, ಅದು ಶುಭಪ್ರದವಾಗಿತ್ತು, ಅಲ್ಲಿ ವಸಿಷ್ಠರು ಇದ್ದರು ಎಂದೇ ಅರ್ಥ. ಹಾಗೇ "ಧಾತಾ ಯಥಾ ಪೂರ್ವಮಕಲ್ಪಯತ್" ಎಂದಿದೆ ವೇದ. ಧಾತನೆಂಬ ಬ್ರಹ್ಮನೂ ಹಿಂದಿನಂತೆಯೇ ಸೃಷ್ಟಿ ಮಾಡಿದ ಎಂದಿದೆ ವೇದ. ಹಾಗಿದ್ದರೆ ಈ ಉದಾಹರಣೆ ಗಮನಿಸಿದರೆ ವಸಿಷ್ಠರು ಯಾವ ಕಲ್ಪದವರು ಎಂದು ಊಹಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿ ವಸಿಷ್ಠರನ್ನು ಈ ಬ್ರಹ್ಮ ಸೃಷ್ಟಿಯ ಹೊರಗಿಟ್ಟೇ ಚಿಂತಿಸುವ ಔಚಿತ್ಯ ಕಂಡುಬರುತ್ತದೆ. ಹಾಗೇ ಅವರು ರಾಗದ್ವೇಷಾದಿಗಳನ್ನೇ ಅರಿಯದವರೆಂದೂ ಕಂಡು ಬರುತ್ತದೆ. ಅದಕ್ಕೆ ಆಧರಿಸಿದ ಕೆಲ ಮುಖ್ಯ ಉದಾಹರಣೆ ಗಮನಿಸೋಣ. ಪ್ರಸಿದ್ಧ ಕರ್ಮಕಾಂಡ ಪ್ರವರ್ತಕರಾದ ಇವರು ಹೆಚ್ಚಾಗಿ ರಾಜ ರಾಜಾಧಿರಾಜರಿಗೆಲ್ಲಾ ಪುರೋಹಿತರಾಗಿದ್ದು ಕಂಡು ಬರುತ್ತದೆ. ಹಾಗೇ ಅವರ ಕರ್ಮಾಂಗ ಬದ್ಧತೆ, ಅಳತೆ, ವ್ಯಾಪ್ತಿ ಮೀರಿದ ಶಿಸ್ತು ಕೂಡ ಇವರಲ್ಲಿ ಕಂಡು ಬರುತ್ತದೆ. ಇದಕ್ಕೆ ಆಧರಿಸಿದ ಪುರಾಣೇತಿಹಾಸಗಳಲ್ಲಿ ಕಂಡು ಬರುವ ಕೆಲ ಉದಾಹರಣೆ ಗಮನಿಸೋಣ.

        ಸೂರ್ಯವಂಶಕ್ಕೆ ಪುರೋಹಿತರಾಗಿದ್ದರು. ದಶರಥನ ಪುತ್ರಕಾಮ್ಯೇಷ್ಟಿಯಾಗ ಮಾಡಿಸಲಿಲ್ಲ, ರಾಮನ ವನವಾಸ ತಪ್ಪಿಸಲಿಲ್ಲ, ಸೀತಾ ಪರಿತ್ಯಾಗ ತಡೆಯಲಿಲ್ಲ. ಹರಿಶ್ಚಂದ್ರನಲ್ಲಿ ಅತೀವ ಪ್ರೇಮ ವಿಶ್ವಾಸ ಇಟ್ಟವರು. ಅದಕ್ಕಾಗಿ ವಿಶ್ವಾಮಿತ್ರನಂತಹಾ ಶೀಘ್ರಕೋಪಿಗಳೊಂದಿಗೆ ವಿರೋಧ ಕಟ್ಟಿಕೊಂಡರು. ಹಾಗೇ ಹರಿಶ್ಚಂದ್ರನು ಜಲೋದರ ರೋಗದಿಂದ ಬಳಲುತ್ತಿದ್ದಾಗ ವರುಣಯಾಗ ಮಾಡಿಸಲಿಲ್ಲ. ಅದೆಲ್ಲ ಅವರವರ ಕರ್ಮವೆಂದೇ ನಿರ್ಣಯಿಸಿರುವ ಮಹನೀಯರು. ಸದೇಹನಾಗಿಯೇ ಸ್ವರ್ಗಕ್ಕೆ ಹೋಗುವ ಇಚ್ಛೆಯನ್ನು ಹೊಂದಿದ ತ್ರಿಶಂಕುವಿನ ಬಯಕೆಗೆ ಸೊಪ್ಪು ಹಾಕಲಿಲ್ಲ. ತನ್ಮೂಲಕ ತನ್ನೆಲ್ಲಾ ನೂರು ಮಂದಿ ಮಕ್ಕಳನ್ನೂ ವಿಶ್ವಾಮಿತ್ರ ಬಲಿ ಪಡೆದ, ಆದರೆ ವಸಿಷ್ಠರು ದುಃಖಿಸಲಿಲ್ಲ. ಶೋಕ, ವೀತ, ರಾಗ ಭರಿತರೆಂದರೆ ಇದೇ ಅಲ್ಲವೇ? ಸುಖ+ದುಃಖ ಸಮೇ ಕೃತ್ವಾ, ಲಾಭ+ಅಲಾಭ, ಜಯ+ಅಪಜಯಗಳಲ್ಲಿ ಸಮಭಾವ ಹೊಂದಿದ್ದರು. ಅಂದರೆ ಈ ಬ್ರಹ್ಮಸೃಷ್ಟಿಯ ಪೂರ್ವದವರೇ ಅನ್ನುವುದಕ್ಕೆ ಇದೊಂದು ಸಾಕ್ಷಿ. ಅದು ಅವರ ಮಾನಸಿಕ ಮಟ್ಟ, ಸಂಸ್ಕಾರ. ತನ್ನನ್ನು ನಿರಂತರ ದ್ವೇಷಿಸುತ್ತಾ, ವಿರೋಧಿಸುತ್ತಾ ಬಂದ ವಿಶ್ವಾಮಿತ್ರನನ್ನು "ಬ್ರಹ್ಮರ್ಷಿ" ಎಂದು ಘೋಷಿಸಿದ್ದು ವಸಿಷ್ಠರೇ. ವಿಶ್ವಾಮಿತ್ರನೂ ಬ್ರಹ್ಮನ ವರದಿಂದಲಾಗುವ ಬ್ರಹ್ಮರ್ಷಿ ಪಟ್ಟ ಬೇಡ, ವಸಿಷ್ಠರ ಅನುಗ್ರಹಪೂರ್ವಕವಾದ ಬ್ರಹ್ಮರ್ಷಿಯಾಗಬೇಕೆಂದ. ಅದರ್ಥವೇನು? ವಸಿಷ್ಠರು ಬ್ರಹ್ಮನಿಗಿಂತ ಹೆಚ್ಚಿನವರೆಂದಲ್ಲವೇ? ಪುರಾತನರೆಂದಲ್ಲವೇ?

        ಅಧಿಕಾರದಲ್ಲಿ ಬ್ರಹ್ಮನೇ ಹೆಚ್ಚು, ಅದನ್ನು ವಸಿಷ್ಠರೂ ಒಪ್ಪಿದವರೇ, ಆದರೆ ಬ್ರಹ್ಮನಿಗಿಂತಲೂ "ಕಾಲಾತೀತರು" ಎಂಬುದನ್ನು ವಿಶ್ವಾಮಿತ್ರ ಅರ್ಥಮಾಡಿಕೊಂಡಿದ್ದ. ಶಿವನು ಶತ್ರುಜಯಕ್ಕಾಗಿ ವಿಶ್ವಾಮಿತ್ರನಿಗೆ ಅನುಗ್ರಹಿಸಿ ಕೊಟ್ಟ ದಿವ್ಯಾಸ್ತ್ರಗಳು ವಸಿಷ್ಠರ ದಂಡದಲ್ಲಿ ಲೀನವಾಯ್ತು. ಅಂದರೆ ಈ ಸೃಷ್ಟಿ, ಸ್ಥಿತಿ, ಲಯದ ಈ ಬ್ರಹ್ಮಕಲ್ಪಕ್ಕೆ ಅತೀತರೆಂದರ್ಥವಲ್ಲವೇ? ಸದಾ, ಸಚ್ಚಿಂತನೆ, ಸತ್ಸಂಗ, ಸಜ್ಜನ ಸಹವಾಸ, ಸದ್ವರ್ತನಗಳೇ ಈ ಶಕ್ತಿಯೆಂದು ಸಾಧಿಸಿ ತೋರಿಸಿಕೊಟ್ಟವರು ಇವರು. ಈ ಪ್ರಪಂಚವನ್ನಾಳಿದ ಬಹುತೇಕ ರಾಜರು, ಚಕ್ರವರ್ತಿಗಳು, ಮನು, ಮುನಿಗಳೆಲ್ಲರಿಗೂ ಪುರೋಹಿತರಾಗಿ ಆಚಾರ್ಯರಾಗಿದ್ದು ವಿನೀತಭಾವದಿಂದಲೇ ಸೇವೆ ಸಲ್ಲಿಸಿದವರು. ಇಂತಹಾ ಶ್ರೇಷ್ಠ ವಾಗ್ಮಿ, ತಾಳ್ಮೆಯ ಪ್ರತಿರೂಪ, ಸತ್ಯಸಂಧ, ಜ್ಞಾನಿ, ಲೋಕಮಾನ್ಯ, ತಪಸ್ವಿ, ಬ್ರಹ್ಮರ್ಷಿಯಾಗಿದ್ದರೂ ಇವರಲ್ಲಿ ಈ ಭೌತಿಕಗುಣವಾದ ಕಾಮ, ಕ್ರೋಧಾದಿ ಗುಣಗಳು ತೋರಲೇ ಇಲ್ಲ. ಈ ಸೃಷ್ಟಿಯ ಭೌತಿಕ ಜೀವಾಳವೇ ಈ ಆರು ಗುಣಗಳು. ಅವಿಲ್ಲದೇ ಸೃಷ್ಟಿಯಿಲ್ಲ. ಹಾಗಿದ್ದಾಗ ಇವರು ಈ ಭೌತಿಕ ಸೃಷ್ಟಿಗೇ ಅತೀತರೆಂಬುದಕ್ಕೆ ಬೇರೆ ಸಾಕ್ಷಿ ಬೇಕೆ?

ಈ ಸೃಷ್ಟಿಯಲ್ಲಿ ಕಾಮ=ಇಚ್ಛೆ ಇರಲೇಬೇಕು. ಅದು ಸೃಷ್ಟಿಯ ನಡೆ ಅಥವಾ ಚಲನೆ. ಕ್ರೋಧವಿರಲೇ ಬೇಕು; ಅದು ಹಸಿವೆ ಹುಟ್ಟಿಸಲು, ಬದುಕನ್ನು ಜಯಿಸಲು. ಲೋಭವಿರಲೇ ಬೇಕು; ಬದುಕನ್ನು ಸಾಗಿಸಲು. ಮತ್ಸರವಿರಲೇಬೇಕು; ಸಾಧಕನಾಗಲು. ಅವೆಲ್ಲಾ ಅವವುಗಳ ಅಳತೆಯಲ್ಲಿದ್ದರೇನೇ ಸೃಷ್ಟಿ, ಪ್ರಕೃತಿ, ಜೈವಿಕ ಸಮಭಾವ, ಸದ್ಯೋಜಾತಾದಿ ಭವಿಷ್ಯ ನಿರ್ಣಯಗಳು. ಆದರೆ ವಸಿಷ್ಠರು ಈ ಸೃಷ್ಟಿಗೆ ಅತೀತರಾದ್ದರಿಂದ ಅವರಲ್ಲಿ ಈ ಯಾವ ಗುಣ+ದೋಷಗಳೂ ಕಂಡುಬರುವುದಿಲ್ಲ. ಅದಿಲ್ಲದ ಸೃಷ್ಟಿಯೊಂದು ಹಿಂದೆ ಇತ್ತು ಎನ್ನುವುದಕ್ಕೆ ವಸಿಷ್ಠರೇ ಉದಾಹರಣೆ. ಈ ಸೃಷ್ಟಿಯಲ್ಲಿ ಅದು ಸ್ವಾಭಾವಿಕ ಹಾಗೂ ಅದನ್ನು ಜಯಿಸುವುದೇ ಜೀವನ ಸಾರ್ಥಕತೆ ಎಂಬಂತೆ ಆಧ್ಯಾತ್ಮಗಳು ಬಿಂಬಿಸುತ್ತಿವೆ. ಹಾಗಿದ್ದರೆ ಈ ಸೃಷ್ಟಿಯಲ್ಲಿ ಈ ದೋಷಗಳನ್ನು ಬ್ರಹ್ಮನು ಏಕೆ ಸೇರಿಸಿದ? ಇದರರ್ಥವೇನು? ಇವನ್ನೆಲ್ಲಾ ಮೆಟ್ಟಿ ನಿಂತವರೇ ವಸಿಷ್ಠರೆಂದು ಸಾಬೀತು ಪಡಿಸಿದ್ದಾರೆ. ಕಾರಣ ಅವರಿಗೆ ಈ ಜನ್ಮಸಂಸ್ಕಾರವಿರಲಿಲ್ಲ; ಹಾಗಾಗಿ. ಇವರ ಬಗ್ಗೆ ಇವರು ನಮಗೆ ನೀಡಿದ ಲೋಕಕಲ್ಯಾಣಕಾರಕ ಕಾರ್ಯಗಳ ಬಗ್ಗೆ ಹೇಳುವುದಿದ್ದರೆ. ಒಂದೆರಡಲ್ಲ. ಅದರ ಕೆಲ ಮುಖ್ಯಾಂಶಗಳನ್ನು ನೋಡೋಣ. ಅದನ್ನು ಅನಿವಾರ್ಯ ಕಾರಣದಿಂದಾಗಿ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.

-      ಕೆ. ಎಸ್. ನಿತ್ಯಾನಂದ ಸ್ವಾಮೀಜಿ,
 ಸಂಸ್ಥಾಪಕರು,
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು


Wednesday, 6 July 2016

ಮೇರುಕೇಂದ್ರ ವಾದ

ಮೇರು : ಸೃಷ್ಟಿ-ಕೇಂದ್ರದ ಆರ್ಷ ಅವಧಾರಣೆಯ ಗಣಿತೀಯ ಪ್ರಮಾಣ

ಬ್ರಹ್ಮಾಂಡ ಕಲ್ಪನೆ:-
ಆಧುನಿಕ ವೈಜ್ಞಾನಿಕರಿಗೆ ಬ್ರಹ್ಮಾಂಡದ ಕೇಂದ್ರದ ಜ್ಞಾನವಿಲ್ಲ. ಭೌತಿಕ ಬ್ರಹ್ಮಾಂಡದ ಯಾವುದೇ ನಿರಪೇಕ್ಷ ಕೇಂದ್ರವು (ಆಬ್ಸಲ್ಯೂಟ್ ಸೆಂಟರ್) ಐನ್ಸ್ಟೈನ್ ಸಾಪೇಕ್ಷತಾವಾದ ಸಿದ್ಧಾಂತದ (ಥಿಯರಿ ಆಫ್ ರಿಲೇಟಿವಿಟಿ) ಅನುಸಾರ ಉಂಟಾಗಲು ಸಾಧ್ಯವೇ ಇಲ್ಲ! ಏಕೆಂದರೆ ಅಂತಹ ಸಾಪೇಕ್ಷ ಭೌತಿಕ ಪ್ರಣಾಳಿಗಳ ಅಳತೆ ಮಾಡಲಿಕ್ಕೆ ಸಾಧ್ಯವಾಗುವಂತಹಾ ಯಾವುದೇ ನಿರಪೇಕ್ಷ ದೇಶ-ಕಾಲದ ಸಂದರ್ಭವೇ ಇಲ್ಲ. ಆದರೆ ವಾಸ್ತವಿಕದಲ್ಲಿ 'ಬ್ಯಾಕ್ಗ್ರೌಂಡ್ ರೇಡಿಯೇಶನ್' ಎಂಬುದರ ಅನ್ವೇಷಣೆಯಿಂದ 'ಬಿಗ್ ಬ್ಯಾಂಗ್' ಸಿದ್ಧಾಂತಕ್ಕೆ ಬಲ ದೊರಕಿತು, ಇದರ ಅನುಸಾರ ಬ್ರಹ್ಮಾಂಡದ ಆರಂಭವು ಕೆಲ ಕೋಟಿ ವರ್ಷ ಪೂರ್ವದಲ್ಲಿ ಉಂಟಾಗಿತ್ತು. ಆದರೆ ವರ್ತಮಾನ ಬ್ರಹ್ಮಾಂಡವು ಕಾಲದಲ್ಲಿ ಅನಂತವಾಗಿಲ್ಲ, ಇದರ ಆರಂಭವು ಎಂದಿಗೋ ಆಗಿದೆ, ಹೀಗಾಗಿ ಅದರ ದೇಶವು ಅನಂತವಾಗುವುದಿಲ್ಲ. ಏಕೆಂದರೆ ಸಾಪೇಕ್ಷತಾವಾದದ ಅನುಸಾರ ದೇಶ ಹಾಗೂ ಕಾಲಗಳು ಪರಸ್ಪರ ಅಭಿನ್ನ ರೂಪದಿಂದ ಸಂಯೋಗ ಹೊಂದಿರುವ, ದಿಕ್ಕಾಲ ಅಥವಾ ಸ್ಪೇಸ್-ಟೈಮ್-ಕಂಟೀನ್ಯೂಮ್ ಎನ್ನಿಸಿಕೊಳ್ಳುತ್ತದೆ. ಅನಂತ ವಸ್ತುವೇ ಕೇಂದ್ರಹೀನ ಆಗಲಿಕ್ಕೆ ಸಾಧ್ಯ. ಏಕೆಂದರೆ ಬ್ರಹ್ಮಾಂಡವು ದೇಶ ಮತ್ತು ಕಾಲದಲ್ಲಿ ಸಾಂತ (ಫೈನೈಟ್) ಆಗಿದ್ದು, ಇದಕ್ಕೆ ಒಂದಿಲ್ಲದಿನ್ನೊಂದು ಆಕಾರವಿರಲಿಕ್ಕೇ ಬೇಕು ಮತ್ತು ಅದರ ಆಕೃತಿಯ ಕೇಂದ್ರವು ಎಲ್ಲಿಯಾದರೂ ಇರಲೇಬೇಕು. ಅದು ಸಾಪೇಕ್ಷತಾವಾದದ ಪರೀಕ್ಷೆಯಲ್ಲಿ ಕೇಂದ್ರವು ನಿರಪೇಕ್ಷ ಮತ್ತು ಸನಾತನ ಆಗಿದ್ದರೂ ಕೂಡ ಪರವಾಗಿಲ್ಲ. ಮತ್ತೊಂದು ಮರೆಯಬಾರದ ವಿಚಾರವೆಂದರೆ ಸಾಪೇಕ್ಷತಾ ವಾದದ ಪರೀಕ್ಷೆಯು ಕೇವಲ ಭೌತಿಕ ವಿಶ್ವಕ್ಕೆ ಮಾತ್ರವಾಗಿದ್ದಾಗ್ಯೂ, ಭಾರತದ ಆರ್ಷ ಮಾನ್ಯತೆಯ ಅನುಸಾರ ಶಾಶ್ವತವಲ್ಲ. ಈಗ ವೈಜ್ಞಾನಿಕರೂ ಸೂರ್ಯಕೇಂದ್ರವಾದ ಹಾಗೂ ಭೂಕೇಂದ್ರವಾದಗಳು ತಮ್ಮಯ ಸಾಂದರ್ಭಿಕ ಉಲ್ಲೇಖಗಳಿಗೆ (ಫ್ರೇಮ್ ಆಫ್ ರೆಫರೆನ್ಸ್) ಮಾತ್ರ ಸರಿ. ಇಷ್ಟೇ ಮಹತ್ವ ಕೊಟ್ಟರೆ ಪರವಾಗಿಲ್ಲ, ಆದರೆ ಗಣಿತ ನಿಖರವಾಗಿರಬೇಕು. ರಿಚರ್ಡ್ ಫಿಟ್ಸ್ಜಗೆರಲ್ಡ್ (ಟೆಕ್ಸಸ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರೊಫೇಸರ್) ಇವರು ಟಾಲೆಮೀಯ ಅಲಮಾಜೆಸ್ಟ್ ಇದರ ಆಧುನೀಕರಣ ಮಾಡುವ ಪ್ರಯಾಸದಲ್ಲಿ ( ಮಾಡ್ರನ್ ಆಲ್ಮಾಗೆಸ್ಟ್) ಹೀಗೆ ಬರೆಯುತ್ತಾರೆ: "ಆಲ್ಮಗೆಸ್ಟ್ನಲ್ಲಿ ವರ್ಣಿಸಿರುವ ಮಾದರಿಯು ಭೂಕೇಂದ್ರಯುತವಾಗಿದ್ದು ಅದರಲ್ಲಿ ಯಾವುದೇ ಗೊಂದಲಗಳಿಲ್ಲ, ಏಕೆಂದರೆ ಭೂಮಿಯು ತನ್ನಯ ಸಾಂದರ್ಭಿಕ ಉಲ್ಲೇಖದಲ್ಲಿ ಸ್ಥಿರವೇ ಆಗಿರುತ್ತದೆ".

ಆರ್ಷ ಮಾನ್ಯತೆಯ ಅನುಸಾರ ಸೃಷ್ಟಿಯ ಕೇಂದ್ರ ಮತ್ತು ಅದರ ಪ್ರಮಾಣದ ಅನ್ವೇಷಣೆಯೇ ಪ್ರಸ್ತುತ ಲೇಖನದ ವಿಷಯವಾಗಿದೆ. ಇದು ಜ್ಯೋತಿಷದ ಸಿದ್ಧಾಂತ ಸ್ಕಂಧದಲ್ಲಿ ಬರುತ್ತದೆ.


http://www.harekrsna.com/sun/editorials/04-13/home4.jpg
Note: Unrealistic Picture (ಕಾಲ್ಪನಿಕ ಚಿತ್ರ)


ಸಿದ್ಧಾಂತ-ಜ್ಯೋತಿಷದ ಅವನತಿ

ಗ್ರಹಲಾಘವಕಾರ ಗಣೇಶ ದೈವಜ್ಞನಿಂದ ಜ್ಯಾ-ಚಾಪಾದಿಗಳ ಹೊರತು ಪಂಚಾಂಗ ನಿರ್ಮಾಣದ ಲಾಘವ ಅಥವಾ ಶಾರ್ಟ್ಕಟ್ ವಿಧಿಯ ಪ್ರಚಾರ ಮಾಡಿದ ನಂತರ ಜ್ಯೋತಿಷದ ಸಿದ್ಧಾಂತ ಸ್ಕಂಧದಲ್ಲಿ ಲೋಗರಿಗೆ ರುಚಿ ಸಮಾಪ್ತಿ ಆಗಿದೆ ಮತ್ತು ಕಾಲಾಂತರದಲ್ಲಿ ಸಿದ್ಧಾಂತ-ಗಣಿತದ ಅನೇಕ ಪ್ರಕ್ರಿಯೆಗಳ ಜ್ಞಾನವನ್ನೂ ಲೋಗರು ಮರೆತಿದ್ದಾರೆ. ದೌರ್ಭಾಗ್ಯವಶಾತ್ ಭಾರತೀಯ ಸಿದ್ಧಾಂತ-ಗಣಿತದ ಅಂಧಯುಗದಲ್ಲಿ ಮುಂಚೂಣಿಯಲ್ಲಿದ್ದ ಗ್ರಹಲಾಘವೀಯ ಅಪಕ್ರಾಂತಿಯು ಎಂಥಾ ಕಾಲದಲ್ಲಿ ಆಯಿತೆಂದರೆ ಯುರೋಪ್ನಲ್ಲಿ ಪುನರ್ಜಾಗರಣ ಆರಂಭವಾಗುತ್ತಿದ್ದಾಗ. ಭಾರತೀಯರಿಗದು ದಾಸ್ಯತ್ವದ ಕಾಲವಾಗಿತ್ತು, ಸಿದ್ಧಾಂತದ ಪಕ್ಷಧರ ಮಕರಂದಾಚಾರ್ಯ ಮತ್ತು ಕಮಲಾಕರ ಭಟ್ಟರಂತಹಾ ವಿದ್ವಾಂಸರಿದ್ದರೂ ಏನೂ ಮಾಡಲಾಗಲಿಲ್ಲ. ಕಮಲಾಕರ ಭಟ್ಟರ ಸೋದರ ದಿವಾಕರ ದೈವಜ್ಞನು ಕಮಲಾಕರ ಭಟ್ಟರ ಮಾತು ಕೇಳಲಿಲ್ಲ ಮತ್ತು ಮಕರಂದ ಪದ್ಧತಿಯಿಂದ ಮಂದಫಲಾರ್ದ್ಧವನ್ನು ತ್ಯಜಿಸಿ ಸಿದ್ಧಾಂತವನ್ನು ಅಂತಿಮ ರೂಪದಲ್ಲಿ ಹತ್ಯೆಗೈದರು. ಮಂದಫಲಾರ್ದ್ಧದ ವಿನಃ ಸೈದ್ಧಾಂತಿಕ ಗ್ರಹಕಕ್ಷೆಯ ವ್ಯಾಖ್ಯೆಯೇ ಅಸಂಭವ! ಮಂದಫಲಾರ್ದ್ಧವನ್ನು ಹೊರಗಿಡುವ ವಕಾಲತ್ತು ಮೊದಲಿಗೆ ಗ್ರಹಲಾಘವದಿಂದಲೇ ಆರಂಭವಾಯಿತು. ಗ್ರಹಲಾಘವದ ಮೂರನೇಯ ಯೋಗದಾನವೆಂದರೆ ಸೂರ್ಯಸಿದ್ಧಾಂತದ ವಿರುದ್ಧ ವಾತಾವರಣ ತಯಾರು ಮಾಡುವುದು ಮತ್ತು ಫಲಾದೇಶದ ಸ್ಥಾನದಲ್ಲಿ ಭೌತಿಕ ಗ್ರಹಪಿಂಡಗಳ ವೇಧವನ್ನು ಪ್ರಮಾಣವನ್ನಾಗಿ ಗ್ರಹಿಸುವುದು. ಗ್ರಹಲಾಘವದಿಂದ ಪ್ರಭಾವಿತನಾಗಿ ಮೂಲ ಮಕರಂದ (ಸೂರ್ಯಸಿದ್ಧಾಂತೀಯ) ಪದ್ಧತಿಯನ್ನು ವಿಕೃತಗೊಳಿಸಿದ ದಿವಾಕರ ದೈವಜ್ಞನ ನಂತರ ಸೂರ್ಯಸಿದ್ಧಾಂತದ ಮೌಲಿಕ ವಿಧಿಯಿಂದ ಪಂಚಾಂಗ ಮಾಡುವುದು ನಿಂತೇ ಹೋಯಿತು. ಇದರಿಂದ ಉಂಟಾದ ಫಲವೆಂದರೆ ಪ್ರಾಚೀನ ಸಿದ್ಧಾಂತ ಗ್ರಂಥಗಳ ಭ್ರಾಮಕ ವ್ಯಾಖ್ಯೆಗಳನ್ನು ವಿದೇಶೀ ಲೇಖಕರು ಮತ್ತವರ ದೇಶೀಯ ಅನುಚರರು ಪ್ರಕಾಶಿಸಲು ಆರಂಭಿಸಿದ್ದರಿಂದ ಅವರ ಖಂಡನೆ ಸಾಧ್ಯವಾಗಲಿಲ್ಲ. ಶತಕಗಳ ಕಾಲ ಪ್ರಾಚೀನ ಶಾಸ್ತ್ರಗಳ ಅವಹೇಳನೆಯ ದುಷ್ಪರಿಣಾಮ ಏನಾಯಿತೆಂದರೆ ಆಂಗ್ಲರು ಭಾರತೀಯ ವಿಧ್ಯೆಗಳನ್ನು ವಿಕೃತಗೊಳಿಸಿ ನಾಮಾವಶೇಷ ಮಾಡುವ ಷಡ್ಯಂತ್ರ ಆರಂಭ ಮಾಡಲಾರಂಭಿಸಲಾಗಿ ಅವರಿಗೆ ತಕ್ಕ ಪ್ರತಿಕ್ರಿಯೆ ನೀಡುವ ಸಾರ್ಮರ್ಥ್ಯವನ್ನೇ ಭಾರತವು ಕಳೆದಕೊಂಡಾಗಿತ್ತು. ರಾಜನೈತಿಕ ಸ್ವತಂತ್ರತೆ ಪ್ರಾಪ್ತಿಯಾದ ನಂತರವೂ ಶಾಸ್ತ್ರದ ಕ್ಷೇತ್ರದಲ್ಲಿ ಕಳೆದುಕೊಂಡಿದ್ದ ಬೌದ್ಧಿಕ ಸಾಮರ್ಥ್ಯ ಹಿಂತಿರುಗಲಿಲ್ಲ, ಏಕೆಂದರೆ ಯಾವ ಪ್ರಾಚೀನ ವಿಧ್ಯೆಗಳ ಲೋಪ ಉಂಟಾಗಿತ್ತೋ ಅವುಗಳ ಪುನರ್ಪ್ರಾಪ್ತಿ ಮತ್ತು ಪುನರ್ಸ್ಥಾಪನೆಯ ಪ್ರಯಾಸವು ಮಾಡಲಾಗಲಿಲ್ಲ. ಭಾರತದ ಮೇಧಾಶಕ್ತಿಯು ಮುಂದೆ ವಿಧ್ಯೆಗಳ ಶ್ರೇಷ್ಠತೆಯಲ್ಲಿ ವಿಶ್ವಾಸ ಮಾಡಲಾರಂಭಿಸಿದರು, ಕೆಲ ಬೆರಳೆಣಿಕೆಯಷ್ಟು ಜನರು ಪ್ರಾಚೀನ ವಿಧ್ಯೆಗಳನ್ನು ಉದ್ಘಾಟಿಸುತ್ತಿದ್ದಾರೆ. ಆದರೆ ರಾಜಾಶ್ರಯದ ಅಭಾವ ಮತ್ತು ಪ್ರಾಚೀನತೆಯ ಪ್ರತಿ ವಿಕಾಸವಾದಿಗಳ ಋಣಾತ್ಮಕ ಮನೋವೃತ್ತಿಯ ಕಾರಣ ಪ್ರಾಚೀನ ವಿಧ್ಯೆಗಳ ಪುನರುತ್ಥಾನ ಹೇತು ಬುದ್ಧಿವಂತಿಕೆಯಿಂದ ಸುನಿಯೋಜಿತ ಮತ್ತು ಸಂಘಟಿತ ಪ್ರಯಾಸ ಮಾಡಲಾಗಿಲ್ಲ. ಆದರೆ ಆರ್ಷ ಜ್ಞಾನವನ್ನು ಪುನರ್ಜೀವಿತಗೊಳಿಸುತ್ತಿರುವ ಸಕ್ಷಮರ ಕೊರತೆಯಿಲ್ಲದಷ್ಟು ಸಾಕ್ಷಿ ಸಿಗುತ್ತಿವೆ. ಪ್ರಸಕ್ತ ಆವಶ್ಯಕತೆಯು ಏನಿರಬೇಕೆಂದರೆ ಸಾಕ್ಷಿಗಳನ್ನು ನಿಷ್ಪಕ್ಷ ರೂಪದಲ್ಲಿ ಪರೀಶೀಲನೆ ಮಾಡಬೇಕು. ಅಂತಹಾ ಒಂದು ಸಾಕ್ಷಿಯನ್ನು ಪ್ರಸ್ತುತ ಲೇಖನದಲ್ಲಿ ಸ್ಪಷ್ಟೀಕರಿಸಲಾಗಿದೆ.ಆರ್ಷ ಮೇರುಕೇಂದ್ರವಾದ


Note: Unrealistic Picture (ಕಾಲ್ಪನಿಕ ಚಿತ್ರ)


ಪಶ್ಚಿಮದಲ್ಲಿ ಕ್ಲೌಡಿಯಸ್ ಟಾಲೆಮೀ ವರ್ಚಸ್ಸು ೧೪ನೇ ಶತಮಾನದವರೆಗೆ ಇತ್ತು. ಪಾಶ್ಚಾತ್ಯ ಲೇಖಕರು ಮತ್ತು ಅವರ ಅನೇಕ ದುಷ್ಟ ಶಿಷ್ಯರ ಮೊಂಡು ವಾದವೆಂದರೆ ಟಾಲೆಮೀ ಮತ್ತು ಅನ್ಯ ಪಾಶ್ಚಾತ್ಯ ವಿದ್ವಾಂಸರಿಂದಲೇ ಭಾರತವು ಜ್ಯೋತಿಷ ಕಲಿಯಿತು ಎಂದು. ಇಂತಹಾ ಜನರು ಇಂದಿಗೂ ಭಾರತೀಯ ಜ್ಯೋತಿಷವು ಭೂಕೇಂದ್ರಿತವಾಗಿತ್ತು ಮತ್ತು ಟಾಲೆಮೀಯ ಆಧಾರದಲ್ಲಿಯೇ ಸೂರ್ಯಸಿದ್ಧಾಂತದ ರಚನೆ ಮಾಡಲಾಗಿದೆ ಎಂಬ ಅಸತ್ಯ ಪ್ರಚಾರ ಮಾಡುತ್ತಿದ್ದಾರೆ. ಪ್ರಸ್ತುತ ಲೇಖನದಲ್ಲಿ ನೀಡಲಾಗಿರುವ ಗಣಿತೀಯ ಪ್ರಮಾಣಗಳು ಮೇಲ್ಕಂಡ ವಿಪರೀತ ಪ್ರಚಾರದ ಸತ್ಯಾಸತ್ಯತೆಯನ್ನು ಸಿದ್ಧಪಡಿಸಿ ತೋರಿಸುತ್ತವೆ. ಭಾರತೀಯ ಪೌರಾಣಿಕ-ಸೈದ್ಧಾಂತಿಕ ಜ್ಯೋತಿಷವು ಪೂರ್ಣಪ್ರಮಾಣದಲ್ಲಿ ಮೌಲಿಕವಾಗಿದೆ. ಟಾಲೆಮೀಯಂಥಾ ಪರವರ್ತೀ ಲೇಖಕರಿಗೆ ಮಾತ್ರ ಸಿದ್ಧಾಂತವು ಇದರ ಮೇಲೆಯೇ ಪ್ರತ್ಯಕ್ಷ ಹಾಗೂ ಪರೋಕ್ಷ ರೂಪದಲ್ಲಿ ಆಧಾರಿತವಾಗಿದೆಯಷ್ಟೆ.

ಪಾಶ್ಚಾತ್ಯ ಲೇಖಕರು ಮತ್ತು ಅವರ ಅನುಚರರಿಂದ ಮೇರುವಿನ ಚರ್ಚೆಯೂ ಮಾಡಲ್ಪಡುವುದಿಲ್ಲ, ಯದ್ಯಪಿ ಪುರಾಣಗಳು ಮತ್ತು ಮಹಾಕಾವ್ಯಗಳು ಹಾಗೂ ಜೈನ ಸಾಹಿತ್ಯದಲ್ಲಿ ಬ್ರಹ್ಮಾಂಡದ ಕೇಂದ್ರ ಮೇರು ಪರ್ವತದ ಮೇಲೆ ಇರುವ ವಿಚಾರವು ಪುನಃಪುನಃ ಹೇಳಲ್ಪಟ್ಟಿದೆ. ಸಾಹಿತ್ಯಕ ಸಾಕ್ಷಿಗಳನ್ನು ಕಪೋಲ ಕಲ್ಪಿತ ಎಂದು ಹಾಸ್ಯದಿಂದ ಹಾರಿಸಿಬಿಡುತ್ತಾರೆಯೇ ವಿನಃ ಪ್ರಾಚೀನ ಗಣಿತವನ್ನು ಅರ್ಥ ಮಾಡಿಕೊಳ್ಳುವ ಪ್ರಯಾಸವನ್ನೂ ಮಾಡುವುದಿಲ್ಲ.ಸೌರಪಕ್ಷದಿಂದಲೇ ದೃಕ್ಪಕ್ಷ : ಸೂರ್ಯಕ್ರಾಂತಿಸೂತ್ರದ ಪ್ರಮಾಣ

        ಸೂರ್ಯಸಿದ್ಧಾಂತದ ಅಧ್ಯಾಯ- 'ತ್ರಿಪ್ರಶ್ನಾಧಿಕಾರ'ದಲ್ಲಿ ಲಗ್ನಾನಯನ ಮತ್ತು ಸಂಬಂಧಿತ ವಿಷಯಗಳ ವರ್ಣನೆ ಇದೆ. ಲಗ್ನದ ಸೂತ್ರದ ವ್ಯಾಖ್ಯಾನವನ್ನು ಭಾಷ್ಯಕಾರರೇನೋ ಸರಿಯಾಗಿ ಮಾಡಿದ್ದರೂ, ಸೂತ್ರದ ಜ್ಯಾಮಿತೀಯ ಉಪಪತ್ತಿಯನ್ನು ಅನ್ವೇಷಿಸಲು ಹಾಗೂ ಬ್ರಹ್ಮಾಂಡದ ಪ್ರಾಚೀನ ಗಣಿತದೊಂದಿಗೆ ಅದರ ಹೋಲಿಕೆ ಮಾಡುವ ಪ್ರಯಾಸವನ್ನು ಯಾರೂ ಮಾಡಲಿಲ್ಲ. ಸೂರ್ಯಸಿದ್ಧಾಂತೀಯ ಸೂತ್ರದಿಂದ ಆಧುನಿಕ ದೃಗ್ಗಣಿತದ ಸಮರ್ಥರೂ ಕ್ರಾಂತಿ ಇತ್ಯಾದಿಗಳ ಗಣನೆ ಮಾಡುತ್ತಾರೆ, ಆದರೆ ಅವರು ಪ್ರಾಚೀನ ಸೂತ್ರದಲ್ಲಿ ಪರಮಕ್ರಾಂತಿಯ ಅಳತೆಯನ್ನು ಬದಲಿಸಿ ಬಿಟ್ಟು ಅದೇ ಆಧಾರದಲ್ಲಿ ಸೂರ್ಯಸಿದ್ಧಾಂತವನ್ನು ಅಶುದ್ಧವೆಂದು ಹೇಳುತ್ತಾರೆ. ಲಗ್ನದ ಸೂತ್ರದಲ್ಲಿ ಕ್ರಾಂತಿಯ ಆವಶ್ಯಕತೆ ಇರುವುದರಿಂದ, ಆರಂಭವನ್ನು ಕ್ರಾಂತಿಯಿಂದಲೇ ಮಾಡಬೇಕು.
      
         ಸೂರ್ಯಸಿದ್ಧಾಂತೀಯ ಪರಮಕ್ರಾಂತಿಯ ಅಳತೆಯು ೨೪ ಅಂಶವಾಗಿದೆ. ಇದರ ಜ್ಯಾ (sine) ಇದರಲ್ಲಿ ಪರಮಕ್ರಾಂತಿಯ ಅರ್ಧ ೧೨ ಇದರ ಕೋಜ್ಯಾ (cosine) ಇದರಿಂದ ಗುಣಿಸಿ ಬಂದ ಮೊತ್ತದ ಚಾಪವನ್ನು ತೆಗೆದುಕೊಂಡರೆ ಆಧುನಿಕ ದೃಕ್ಪಕ್ಷೀಯ ಪರಮಕ್ರಾಂತಿಯ ಮಧ್ಯಮಾನ ೨೩:೨೬':೩೭.೪೮೧೨" ಪ್ರಾಪ್ತಿಯಾಗುತ್ತದೆ. ಇದರಲ್ಲಿ ಅಕ್ಷವಿಚಲನ (ನ್ಯೂಟೇಶನ್) ಸಂಸ್ಕಾರ ಮಾಡುವುದರಿಂದ ಭೌತಿಕ ವಿಜ್ಞಾನದ ಸ್ಪಷ್ಟ ಪರಮಕ್ರಾಂತಿಯ ಪೂರ್ಣತಃ ಶುದ್ಧ ಅಳತೆ ದೊರಕಿ ಬಿಡುತ್ತದೆ, ಇದೊಂದು ಸ್ಥಿರಾಂಕವಾಗಿದೆ. ನ್ಯೂಟೆಶನ್ ಇದರ ಅಳತೆಯು ೧೯ ವರ್ಷದಲ್ಲಿ ಧನ +೧೭.೨೩" ಇಲ್ಲಿಂದ -೧೭.೨೩" ವಿಕಲೆಗಳ ಮಧ್ಯೆ ಚಲಾಯಮಾನ ಆಗಿರುತ್ತದೆ. ಪೂರ್ಣಾಂಕಗಳ ಮೇಲೆ ಆಧಾರಿತ ಸೂರ್ಯಸಿದ್ಧಾಂತೀಯ ವಿಧಿಯಿಂದ ದೃಕ್ಪಕ್ಷೀಯ ಅಳತೆಯು ಜ್ಞಾತ ಮಾಡಿಕೊಳ್ಳುವ ಆರ್ಷ-ಗಣಿತವನ್ನು ಜನರು ಮರೆತುಬಿಟ್ಟಿದ್ದಾರೆ. ಪರಮಕ್ರಾಂತ್ಯರ್ಧ ೧೨ಯಿಂದ ಗುಣಿತಗೊಳಿಸುವ ಕಾರಣವೇನೆಂದರೆ ಸೂರ್ಯಸಿದ್ಧಾಂತೀಯ ಭುವಲೋಕದ ಸೂರ್ಯ-ಕ್ರಾಂತಿವೃತ್ತದ ತುಲನೆಯಲ್ಲಿ ದೃಕ್ಪಕ್ಷೀಯ ಭೌತಿಕ ಕ್ರಾಂತಿವೃತ ೧೨ ತಗ್ಗಿದೆ, ಅರ್ಥಾತ್ ಅಭೌತಿಕ ಮತ್ತು ಭೌತಿಕ ಎಂಬ ಭಿನ್ನ ಪಥದಲ್ಲಿ ಸಾಗುವ ಎರಡು ಸೂರ್ಯಗಳಿವೆ. ಹೀಗಿರದಿರೆ ಪೂರ್ಣಾಂಕದ ಮೇಲೆ ಆಧಾರಿತ ಸೌರ ಸೂತ್ರದಲ್ಲಿ ೧೨ ಅಂಶದ ಕೋಜ್ಯಾದಿಂದ ಗುಣಾಕಾರ ಮಾಡಲು ದೃಕ್ಪಕ್ಷೀಯ ಕ್ರಾಂತಿಯ ನಿಷ್ಪತ್ತಿ ಸಂಭವವಿರಲಿಲ್ಲ.

        ಸಾಯನಸೂರ್ಯದ ಜ್ಯಾ (ಭುಜಜ್ಯಾ)ದಿಂದ ಪರಮಕ್ರಾಂತಿಯ ಜ್ಯಾ (ಪರಜ್ಯಾ)ವನ್ನು ಗುಣಿತ ಮಾಡಿ ಮತ್ತೆ ಫಲದ ಚಾಪವನ್ನು ತೆಗೆದುಕೊಂಡು (ಸೈಂಟಿಫಿಕ್ ಕ್ಯಲ್ಕುಲೇಟರ್ನಲ್ಲಿ ಇನ್ವರ್ಸ್ ಸೈನ್), ತಾತ್ಕಾಲಿಕ ಇಷ್ಟಸ್ಥಾನೀಯ ಸೂರ್ಯ-ಕ್ರಾಂತಿಯ ಶುದ್ಧ ಮಾನವು ಸಿಕ್ಕಿಬಿಡುತ್ತದೆ. ಸೂತ್ರದಲ್ಲಿ ಒಂದು ವೇಳೆ ದೃಕ್ಪಕ್ಷೀಯ ಪರಮಕ್ರಾಂತಿಯ ಪ್ರಯೋಗ ಮಾಡಿದರೆ ಮೊತ್ತವು ದೃಕ್ಪಕ್ಷೀಯ ಇಷ್ಟಕ್ರಾಂತಿಯು ದೊರಕುತ್ತದೆ, ಮತ್ತು ಒಂದು ವೇಳೆ ಸೌರಪಕ್ಷೀಯ ಪರಮಕ್ರಾಂತಿಯ ಪ್ರಯೋಗ ಮಾಡಿದರೆ ಮೊತ್ತವು ಸೌರಪಕ್ಷೀಯ ಇಷ್ಟಕ್ರಾಂತಿಯು ದೊರಕುತ್ತದೆ, ಎರಡೂ ಮೊತ್ತಗಳು ಪೂರ್ಣತಃ ಶುದ್ಧವಾಗಿ ದೊರಕುತ್ತವೆ. ಯಾರು ಸೌರಪಕ್ಷೀಯ ಅರ್ಥಾತ್ ಸೂರ್ಯಸಿದ್ಧಂತೀಯ ವಿಧಿಯಿಂದ ದೃಕ್ಪಕ್ಷೀಯ ಅರ್ಥಾತ್ ಭೌತಿಕ ಕ್ರಾಂತಿಸಾಧನೆಯ ಆರ್ಷ ಪ್ರಕ್ರಿಯೆಯ ಜ್ಞಾನ ಇಟ್ಟುಕೊಳ್ಳುವುದಿಲ್ಲವೋ ಅವರು ದೃಕ್ಪಕ್ಷೀಯ ಮಾನದ ಸೌರಪಕ್ಷದಿಂದ ನೇರ ಹೊಂದಾಣಿಕೆ ಮಾಡಿ ಸೌರಪಕ್ಷವನ್ನು ಅಶುದ್ಧ ಎಂದುಬಿಡುತ್ತಾರೆ. "ದೃಕ್ಪಕ್ಷೀಯ ಗಣಿತ ಭೌತಿಕ ವಿಜ್ಞಾನದ ಕ್ಷೇತ್ರವಾಗಿದ್ದರೆ, ಸೂರ್ಯಸಿದ್ಧಾಂತ ಜ್ಯೋತಿಷದ ಸೈದ್ಧಾಂತಿಕ ಆಧಾರವಾಗಿದೆ."

ಸೌರಪಕ್ಷದಿಂದ ದೃಕ್ಪಕ್ಷ : ಸಾಹಿತ್ಯಕ ಪ್ರಮಾಣ

     ದೃಕ್ಪಕ್ಷ ಎಂಬುದು ಎಂತಹಾ ಲೋಕವೆಂದರೆ ಅದರ ಜ್ಞಾನವು ಇಂದ್ರಿಯಗಳಿಂದ ಪ್ರಾಪ್ತವಾಗುತ್ತದೆ, ಆದರೆ ವೇದವು ಅದನ್ನು ಮಾಯೆಯ ಚಿನ್ನದ ಆವರಣ ಎಂದಿದೆ:

ಹಿರಣ್ಣ್ಮಯೇನಪಾತ್ರೇಣಸತ್ಯಸ್ಯಾಪಿಹಿತಮ್ಮುಖಮ್ |
ಯೋಸಾವಾದಿತ್ಯೇಪರುಷಂ ಸೋಸಾವಹಮ್ || ಓಂ ಖಂ ಬ್ರಹ್ಮ ||
     
   ಇದು ಶುಕ್ಲ ಯಜುರ್ವೇದ ಮಾಧ್ಯಂದಿನ ಶಾಖೆಯ ಅಂತಿಮ ಮಂತ್ರವಾಗಿದೆ. ಕಾರಣದಿಂದ ವಿಚಾರಧರೆಗೆ 'ವೇದಾಂತ' ಎಂಬ ಹೆಸರೂ ಬಂದಿತು. ಸೌರಪಕ್ಷದಿಂದ ತತ್ಪರ್ಯವೇನೆಂದರೆ ಯಾವ ಅಭೌತಿಕ ಭುವಲೋಕದ ಜ್ಞಾನವನ್ನು ಇಂದ್ರಿಯಗಳಿಂದ ಪ್ರಾಪ್ತಿಗೊಳಿಸಿಕೊಳ್ಳಲಿಕ್ಕೆ ಆಗುವುದಿಲ್ಲವೋ, ಯಾವುದಕ್ಕೆ ಕೇವಲ ಉಪಾಯಗಳು ಇವೆಯೋ ಅದು:
  1.      ಶಾಸ್ತ್ರ - ದಿವ್ಯ ಆರ್ಷ ಗ್ರಂಥ, ಹೇಗೆ ಜ್ಯೋತಿಷ ಕ್ಷೇತ್ರದಲ್ಲಿ ಸೂರ್ಯಸಿದ್ಧಾಂತವೋ ಹಾಗೆ.
  2.      ಆಪ್ತ ವಚನ
  3.      ತಪ

೧೯ನೇ ಶತಮಾನದಲ್ಲಿ ಏಶಿಯಾಟಿಕ್ ಸೊಸೌಟೀಯ ಅಧ್ಯಕ್ಷ ಕೋಲ್ಬ್ರುಕ್, ವಿಲ್ಕಿನ್ಸನ್, ಸ್ಪಾಂಟಿಸವುಡ್, ಬರ್ಜೆಸ್, ಇಂತಹಾ ಪಾಶ್ಚಾತ್ಯ 'ಭಾರತವಿದರು' ಊಹಾತ್ಮಕ ಆಧಾರಗಳ ಮೇಲೆ ಸೂರ್ಯಸಿದ್ಧಾಂತವು ಪ್ರಾಚೀನ ಕಾಲದಲ್ಲಿ ಭೌತಿಕ ಗ್ರಹಗಳ ಸ್ಥೂಲ ಮಾನವನ್ನು ದೃಷ್ಯಗೊಳಿಸುತ್ತಿದ್ದು ಈಗ ಔಟ್-ಆಫ್-ಡೇಟ್ ಆಗಿಬಿಟ್ಟಿದೆ ಎಂಬ ಸುಳ್ಳು ಪ್ರಚಾರ ಆರಂಭ ಮಾಡಿದರು. ಸತ್ಯವೇನೆಂದರೆ ದೃಕ್ಪಕ್ಷ ಮತ್ತು ಸೌರಪಕ್ಷದಲ್ಲಿನ ಅಂತರವು ಪ್ರಾಚೀನತಮ ಕಾಲದಿಂದಲೇ ಋಷಿಗಳಿಗೆ ಜ್ಞಾತವಾಗಿತ್ತು, ಇದಕ್ಕೆ ಒಂದು ಉದಾಹರಣೆಯು ವಿಷ್ಣುಧರ್ಮೋತ್ತರಪುರಾಣದಲ್ಲಿ ಮಹರ್ಷಿ ವೇದ ವ್ಯಾಸರ ವಚನ ಇಂತಿದೆ:

ಯಂತ್ರವೇಧಾತಿನಾ ಜ್ಞಾತಂ ಯದ್ ಬೀಜಂ ಗಣಕೈಸ್ತತಃ |
ಗ್ರಹಣಾದಿ ಪರೀಕ್ಷೇತ್ ತಿಥ್ಯಾದಿ ಕದಾಚನ ||

"ಯಂತ್ರಾದಿಗಳಿಂದ ಬೀಜಗಣನೆ ಮಾಡಿಕೊಂಡು ಗ್ರಹಣಾದಿ ದೃಶ್ಯ ಘಟನೆಗಳ ಪರೀಕ್ಷೆ ಮಾಡಿ, ಆದರೆ ತಿಥ್ಯಾದಿ ಹೇತು ಇಂತಹಾ ದೃಕ್ತುಲ್ಯ ಪರೀಕ್ಷೆ ಮಾಡಬೇಡಿ |" ಜ್ಯೋತಿಷದ ಅದೃಷ್ಟ ಫಲ ಹೇತು ಪಂಚಾಂಗೋಪಯೋಗೀ ತಿಥ್ಯಾದಿಗಳ ನಿರ್ಣಾಯಕ್ಕೆ ದೃಗ್ಗಣಿತವನ್ನು ಋಷಿಗಳು ನಿಷೇಧಿಸಿದ್ದಾರೆ. ಆದ್ದರಿಂದ ಸ್ಪಷ್ಟವಾಗುವುದೇನೆಂದರೆ ವೈದಿಕ-ಪೌರಾಣಿಕ ಕಾಲದಲ್ಲಿಯೂ ದೃಕ್ಪಕ್ಷ ಹಾಗೂ ಸೌರಪಕ್ಷದಲ್ಲಿನ ಅಂತರದ ಜ್ಞಾನವು ಋಷಿಗಳಿಗೆ ಇದ್ದಿತು, ಆದರೆ ಋಷಿಗಳು ಜ್ಯೋತಿಷದಲ್ಲಿ ಸೌರಪಕ್ಷದ ಪ್ರಯೋಗಕ್ಕೇ ಆದೇಶ ನೀಡಿದರು, ಯದ್ಯಪಿ ದೃಶ್ಯ ಜಗತ್ ಹೇತು ದೃಗ್ಗಣಿತದ ಉಪಯೋಗದ ಜ್ಞಾನವೂ ಅವರಿಗಿತ್ತು. ನಿರ್ಣಯ ಸಿಂಧುವಿನಲ್ಲಿ ಇದಕ್ಕೆ ಸ್ಪಷ್ಟ ವಚನವಿದೆ:

ಅದೃಷ್ಟಫಲಸಿಧ್ಯರ್ಥೇ ಯಥಾರ್ಕಗಣಿತಂ ಕುರು |
ಗಣಿತಂ ಯದಿ ದೃಷ್ಟಾರ್ಥ ತದೃಷ್ಟ್ಯುದ್ಭವತಸ್ಸದಾ ||

"ಅದೃಷ್ಟ ಫಲದ ಸಿದ್ಧಿ ಹೇತು ಅರ್ಕಗಣಿತ (ಸೂರ್ಯಸಿದ್ಧಾಂತ) ಪ್ರಯೋಗ ಮಾಡಿ..." | ಸ್ಪಷ್ಟವಾಗಿದ್ದೇನೆಂದರೆ ಬಾಹ್ಯ ಚಕ್ಷುವಿನಿಂದ ದೃಷ್ಟ ಭೌತಿಕ ಗ್ರಹ-ಪಿಂಡಗಳ ಜ್ಯೋತಿಷದ ಅದೃಶ್ಯ ಗ್ರಹದೇವಬಿಂಬಗಳಿಂದ ಅಂತರವಿದೆ ಎಂದು ನಂಬಿಕೆ. ಪಾರಾಶರೀಯ ಹೋರಾಶಾಸ್ತ್ರದ ಉಲ್ಲೇಖದಂತೆ "ಜ್ಯೋತಿಷದ ಗ್ರಹಗಳು ಜೀವಿಗಳ ಕರ್ಮಫಲ ನೀಡಲು ಇರುವ ಪರಮಾತ್ಮನ ಅವತಾರ" ಎಂದು. ಬಾಹ್ಯ ಚಕ್ಷುವಿನಿಂದ ದೇವ ದರ್ಶನ ಸಂಭವವಿಲ್ಲ. ಆದ್ದರಿಂದ ಅಭೌತಿಕ ಭುವಲೋಕೀಯ ಗ್ರಹಗಳನ್ನು ಭೌತಿಕ ಗ್ರಹ ಎಂದು ತಿಳಿಯುವುದು ಆರ್ಷ ಪರಂಪರೆಯ ವಿರುದ್ಧವಾಗುತ್ತದೆ.

ಭಾರತೀಯ ಯೋಗದಾನವನ್ನು ಆಯಾತಿತ ಎನ್ನುವ ಕುಚೇಷ್ಟೆ

ಕ್ರಾಂತಿಯ ಯಾವ ಸೂರ್ಯಸಿದ್ಧಾಂತೀಯ ಸೂತ್ರವನ್ನು ಮೇಲೆ ತೋರಿಸಲಾಗಿದೆಯೋ, ಅದರ ಪ್ರಯೋಗವನ್ನೇ ನಿರ್ಮಲ ಚಂದ್ರ ಲಹಿಡೀಜೀ (ಲಹಿರಿ) ಮಾಡುತ್ತಿದ್ದರು (ಪ್ರಾಮಾಣ ಹೇತು Advanced Ephemeris, page 79 ನೋಡಿರಿ). ಆದರೆ ಸೂರ್ಯಸಿದ್ಧಾಂತವನ್ನು ಔಟ್-ಆಫ್-ಡೇಟ್ ಎನ್ನುವ ಮಹಾನುಭಾವರಿಗೆ ಇದನ್ನು ಸ್ವೀಕಾರ ಮಾಡಲು ಭಯವಾಗುತ್ತಿತ್ತು. ಏಕೆಂದರೆ ಸೂರ್ಯಸಿದ್ಧಾಂತೀಯ ಸೂತ್ರಗಳ ಆಧುನಿಕ ವಿಜ್ಞಾನದಲ್ಲಿ ಉಪಯೋಗ ಮಾಡುವ ಮೊದಲು ಸೂರ್ಯಸಿದ್ಧಾಂತಕ್ಕೆ ಸೂತ್ರಗಳನ್ನು ಆವಿಷ್ಕಾರ ಮಾಡಿದ ಶ್ರೇಯಸ್ಸು ಸಿಕ್ಕಿಬಿಡುತ್ತದಲ್ಲಾ ಎಂದು! ಭಯ ಕಾರಣದಿಂದ ಪಾಶ್ಚಾತ್ಯ "ಭರತವಿದರ" ಮೊಂಡುತನವೆಂದರೆ ಭಾರತೀಯರ ಸಮಸ್ತ ಜ್ಞಾನವು ಯೂರೋಪಿನಿಂದ ಕದ್ದದ್ದು, ಅದಕ್ಕಾಗಿ ಭಾರತೀಯರು ಯುನಾನಿಗಳಿಗೆ ಶ್ರೇಯಸ್ಸನ್ನೂ ನೀಡಲಿಲ್ಲವಂತೆ. ೧೯ನೇ ಶತಮಾನದ ತಥಾಕಥಿತ ಭಾರತವಿದರಿಂದ ಅಧಿಕ ಪೂರ್ವಾಗ್ರಹೀ ಇಂದಿನ ಹಲವು ವಿದ್ವಾಂಸರು ಮೇಲೆ ಹೇಳಿದ ಸುಳ್ಳು ವಿಚಾರಗಳ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂತಹಾ ವಿಚಾರಗಳಿಗೆ ಬ್ರೌನ್ ವಿಶ್ವವಿದ್ಯಾಲಯದ ಡೇವಿಡ್ ಪಿಂಗ್ರೀ ಪ್ರಸಿದ್ಧರು. ಅಮೇರಿಕಾದ ಫ್ಲೋರಿಡಾ ಸ್ಟೇಟ್ ವಿಶ್ವವಿದ್ಯಾಲಯದ ಡೇನಿಸ್ ಡ್ಯೂಕ್ ಬರೆಯುತ್ತಾರೆ: "Under the Pingree - Van der Waerden Hypothesis, the Indian texts summarize centuries old traditions inherited from the Greeks. - (D. Pingree, "History of Mathematical astronomy in India", Dictionary of Scientific Biography, 15 (1978), 533-633; ಹಾಗೂ D. pingree, "Concentric with Equant", Archives Internationales d'Histoire des Sciences, 24 (1974) 26-28.) ಆದರೆ ಡೆನಿಸ್ ಡ್ಯೂಕ್ ಎಂಬುವನು ಸಾಕ್ಷ್ಯಗಳ ಪತ್ತೆ ಮಾಡಲಾಗಿ ದೊರಕಿದ್ದೇನೆಂದರೆ ಭಾರತೀಯ ಖಗೋಲೀಯ ಮಂಡಲದ ಸ್ರೋತವು ಭಾರತೀಯವೇ ಆಗಿದೆ ಅಥವಾ ಅಜ್ಞಾತ ಗ್ರೀಕ್-ರೋಮನ್ ಪರಂಪರೆಗಳು, ಎಂಬುದಕ್ಕೆ ಸಾಕ್ಷಿ ಲಬ್ಧವಿಲ್ಲ : "Without further information we cannot say whether the model was developed in India or in some earlier, and unknown to us, Greco-Roman tradition. (- The Second Lunar Anomaly in Ancient Indian Astronomy, Dennis W. Duke, Florida State University, USA.) ಹ್ವಿಟನೀ ಅಂತಹಾ ಭಾರತ ವಿರೋಧೀ ಲೇಖಕರ ವಿರುದ್ಧ ಸೂರ್ಯ-ಸಿದ್ಧಾಂತದ ಭಾಷ್ಯಕಾರ ಬರ್ಜೆಸ್ ಎಂಬುವನು ಎಲ್ಲಿಯವರೆಗೆ ಬರೆದಿದ್ದಾನೆಂದರೆ ಗ್ರೀಸನ್ನು ಭಾರತೀಯ ವಿಧ್ಯೆಗಳ ಸ್ರೋತ ಎಂದೆನುವವರು ಮರೆತಿರುವುದೇನೆಂದರೆ ಖಗೋಲವಿಜ್ಞಾನದಲ್ಲಿ ಗ್ರೀಸಿನ ಯೋಗದಾನವು ಬಹಳ ನಂತರವಾದದ್ದು, ಮತ್ತು ಅದರ ಅಧಿಕಾಂಶ ಮೌಲಿಕ ವಿಚಾರ ಭಾರತವನ್ನು ಆಧರಿಸಿ ರೂಪಿಸಲಾಗಿದೆ: "I must think the Hindus original in regard to most of the elementary facts and principles of astronomy,... and that the Greeks borrowed from them." (ಪರಿಶಿಷ್ಟ, ಸೂರ್ಯಸಿದ್ಧಾಂತದ ಮೇಲೆ ಎವನೇಜರ್ ಬರ್ಜೆಸ್ ಭಾಷ್ಯ).

        ಯಾವ ವಿಚಾರಗಳ ಪ್ರಾಚೀನ ಪಶ್ಚಿಮದಲ್ಲಿ ಯಾವುದೇ ಪ್ರಮಾಣವಿಲ್ಲವೋ, ಅದಕ್ಕೂ ಪಿಂಗ್ರೀಯಂತಹಾ "ವಿಶೇಷಜ್ಞರು" ತಿಳಿಸುವುದೇನೆಂದರೆ ಭಾರತೀಯರು ಎಲ್ಲವನ್ನು ಗ್ರೀಸ್ನಿಂದ ಕದ್ದರು ಎಂದು. ಮತ್ತೆ ಯಾವ ವಿಚಾರಗಳ ಪ್ರಾಚೀನ ಪಶ್ಚಿಮಕ್ಕೆ ಯಾವುದೇ ಪ್ರಕಾರ ಸಂಬಂಧ ಸ್ಥಾಪಿಸಲು ಸಂಭವವಿಲ್ಲವೋ, ಅದನ್ನು ಕಪೋಲ ಕಲ್ಪನೆ ಎನ್ನಲಾಗುತ್ತದೆ. ಇಂತಹಾ ಒಂದು ಕಪೋಲ ಕಲ್ಪನೆಯೇ ಮೇರುಪರ್ವತದ್ದಾಗಿದೆ. ಇದರ ವಿಷಯದಲ್ಲಿ ವೇದವ್ಯಾಸರಂತಹಾ ಮಹರ್ಷಿಗಳು ತಥಾಕಥಿತ ರೂಪದಲ್ಲಿ ಹೇಳಿದ್ದಾರೆಯೇ? ಹುಡುಕಿ ನೋಡಿ. ಮಹರ್ಷಿಗಳ 'ಕಪೋಲ ಕಲ್ಪನೆಗಳು' ಎಂದು ತಿರಸ್ಕರಿಸಲ್ಪಟ್ಟಿರುವ ನಿಷ್ಪಕ್ಷ ಮತ್ತು ವಿಸ್ತೃತ ಗಣಿತೀಯ ವಿಶ್ಲೇಷಣೆ ಮಾಡಲು ಕಾಲಾವಕಾಶ ಇವರ್ಯಾರಿಗೂ ಇಲ್ಲ!


ಸೂರ್ಯಸಿದ್ಧಾಂತೀಯ ಲಗ್ನಾನಯನ ಸೂತ್ರದ ಗಣಿತೀಯ ಶೋಧನೆ

ಸೌರ ಲಗ್ನಸೂತ್ರದಲ್ಲಿ ಸೂರ್ಯಕಾಂತಿಯ ಆವಶ್ಯಕತೆ ಉಂಟಾಗುತ್ತದೆ. ಏಕೆಂದರೆ ನಮ್ಮ ಅಭೀಷ್ಟವು ಜ್ಯೋತಿಷವಾಗಿದೆ, ಆದ್ದರಿಂದ ದೃಗ್ಗಣಿತದ ವಿವಾದದಲ್ಲಿ ಬೀಳುವ ಬದಲು ಸೂರ್ಯಸಿದ್ಧಾಂತೀಯ ಲಗ್ನಾನಯನಸೂತ್ರದ ಶೋಧನೆ ಮಾಡೋಣ. ಮೊದಲು ವಿಭಿನ್ನ ಕ್ರಾಂತಿವೃತೀಯ ರಾಶಿಗಳ ಲಂಕೋದಯಮಾನಗಳ ಗಣನೆ ಮಾಡಲಾಗುತ್ತದೆ, ಮತ್ತೆ ಪುನಃ ಅದರಲ್ಲಿ ಇಷ್ಟಸ್ಥಾನೀಯ ಚರ-ಸಂಸ್ಕಾರ ಮಾಡಿ ವಿಭಿನ್ನ ಕ್ರಾಂತಿವೃತೀಯ ರಾಶಿಗಳ ಇಷ್ಟ ಸ್ಥಾನೀಯ ಉದಯಮಾನ ಜ್ಞಾತವಾಗುತ್ತದೆ. ಕ್ರಾಂತಿವೃತೀಯ ರಾಶಿಗಳ ವಿಷುವತೀಯ ಉದಯಮಾನಗಳನ್ನು ಲಂಕೋದಯಮಾನ ಎಂದು ಹೇಳಲಾಗುತ್ತದೆ, ಇದರ ಗಣಿತೀಯ ಮತ್ತು ಜ್ಯಾಮಿತೀಯ ವ್ಯಖ್ಯಾ ಪ್ರಸ್ತುತ ಲೇಖನದಲ್ಲಿದೆ. ಸೂರ್ಯಸಿದ್ಧಾಂತದ ಮೂರನೇ ಅಧ್ಯಾಯ 'ತ್ರಿಪ್ರಶ್ನಾಧಿಕಾರ'ದಲ್ಲಿ ಉದಯಮಾನ ಜ್ಞಾತಗೊಳಿಪ ಯಾವ ಸೂತ್ರ ನೀಡಲಾಗಿದೆಯೋ ಅದನ್ನು ನಿಮ್ನೋಕ್ತ ಸರಳ ವಿಧಾನದಿಂದ ಬರೆಯಬಹುದು:
ಲಂಕೋದಯಜ್ಯಾ = (ಭುಜಜ್ಯಾ x ಪರಕೋಜ್ಯಾ) / [ ಕೋಜ್ಯಾ (ಪರ x ಭುಜಜ್ಯಾ) ]

            ಸೂತ್ರದಲ್ಲಿ 'ಪರ' ತಾತ್ಪರ್ಯವೆಂದರೆ 'ಪರಮ ಸೂರ್ಯಕ್ರಾಂತಿ', ಇದರ ಸೌರಪಕ್ಷೀಯ ಮಾನವು ೨೪. ಭುಜಜ್ಯಾದ ಎಂದರೆ ಭುಜದ ಜ್ಯಾ, ಮತ್ತು ಭುಜದ ಅರ್ಥ ಮೇಷಾರಂಭದಿಂದ ವಿಭಿನ್ನ ರಾಶಿಗಳ ಕೋಣೀಯ ಮಾನ, ಇದನ್ನು ಚಿಹ್ನೆ ಸಹಿತ ೯೦ ಅಂಶದ ಒಳಗೆ ಪರಿವರ್ತನೆ ಮಾಡಿದರೆ ಭುಜ ಎಂದು ಕರೆಯುತ್ತಾರೆ. ಪ್ರಾಚೀನ ವಿಧಿಯಲ್ಲಿ ಭುಜದ ಆವಶ್ಯಕತೆ ಇರುತ್ತಿತ್ತು, ಆದರೆ ಸೈಂಟಿಫಿಕ್ ಕ್ಯಾಲ್ಕುಲೇಟರ್ ಪ್ರಯೋಗ ಮಾಡಲು ಭುಜ ಸಾಧಿಸುವ ಆವಶ್ಯಕತೆ ಬರುವುದಿಲ್ಲ, ೩೬೦ ಅಂಶದವರೆಗೆ ಯಾವುದೇ ಕೋಣವನ್ನು ನೇರ ಸೂತ್ರದಲ್ಲಿ ವರ್ಗಾಂತರಿಸಿ ಮೊತ್ತ ತಿಳಿಯಬಹುದು, ಇದನ್ನು ಭುಜಜ್ಯಾದ ಬದಲು ರಾಶಿಜ್ಯಾ ಎಂದು ಬರೆಯಬಹುದು. ಇದನ್ನು ನಿಮ್ನೋಕ್ತ ಸೂತ್ರದಲ್ಲಿ 'A' ಎಂದು ತೋರಿಸಲಾಗಿದೆ (ಸೂತ್ರದ ಉಪಪತ್ತಿಯು ಲೇಖನಾಂತದಲ್ಲಿದೆ):

ಲಂಕೋದಯ = ೧೦ x ನಿಮ್ನೋಕ್ತ ಸೂತ್ರದ ಫಲದ ಚಾಪ [ಭುಜಜ್ಯಾ x ಕೋಜ್ಯಾ (೨೪) ] / 
[ ಕೋಜ್ಯಾ (೨೪ x ಭುಜಜ್ಯಾ) ]
ಅಥವಾ

[(sin⁡A  x cos⁡24) / cos⁡(24 x sin⁡A )]

ಸೂತ್ರದಲ್ಲಿ 'A' ಇದರ ಮಾನ ೩೦ ಇಟ್ಟರೆ ಫಲ ೨೭೮.೩೮೨೬೪೯೬ ಪಳ ಸಿಗುತ್ತದೆ. ಇದು ಪ್ರಥಮ ರಾಶಿಯ ಪಳಾತ್ಮಕ ಲಂಕೋದಯಮಾನ ಆಗಿದೆ. ಪುನಃ ಸೂತ್ರದಲ್ಲಿ 'A' ೬೦ ಇಟ್ಟು ಪ್ರಾಪ್ತ ಫಲವು ೫೭೮.೦೩೪೨೬೦೪ ಪಳದಿಂದ ಪ್ರಥಮ ರಾಶಿಯ ಉಪರೋಕ್ತ ಉದಯಮಾನವನ್ನು ನ್ಯೂನಗೊಳಿಸಿದರೆ ದ್ವಿತೀಯ ರಾಶಿಯ ಲಂಕೋದಯಮಾನ ೨೯೯.೬೫೧೬೧೦೮ ಪಳ ದೊರಕುವುದು. ಪುನಃ ಸೂತ್ರ 'A' ಇದರ ಮಾನ ೯೦ ಇಟ್ಟು ಪ್ರಾಪ್ತ ೯೦೦ ಪಳದಿಂದ ಪ್ರಥಮ ತಥಾ ದ್ವಿತೀಯ ರಾಶಿಗಳ ಸಮ್ಮಿಲಿತ ಉದಯಮಾನ (=೫೭೮.೦೩೪೨೬೦೪ ಪಳ)ಗಳನ್ನು ನ್ಯೂನಗೊಳಿಸಿದರೆ ತೃತೀಯ ರಶಿಯ ಲಂಕೋದಯಮಾನ ೩೨೧.೯೬೫೭೩೯೬ ಪಳ ದೊರಕುವುದು. ಮೂರು ರಾಶಿಗಳ ಶುದ್ಧ ಪಳಾತ್ಮಕ ಮಾನ ನಿಮ್ನೋಕ್ತವಾಗಿದೆ:

ರಾಶಿ- = ೨೭೮.೩೮೨೬೪೯೬೧೧೨೬೧೬೬೪೫೩೯೧
ರಾಶಿ- = ೨೯೯.೬೫೧೬೧೦೮೦೦೯೯೬೭೨೬೨೩೨೮
ರಾಶಿ- = ೩೨೧.೯೬೫೭೩೯೫೮೭೭೪೧೬೦೯೨೨೮೧

ಸ್ಥೂಲ ಗಣಿತಜ್ಞರು ದಶಮಲವದ ಮೇಲೆ ಧ್ಯಾನ ನೀಡದೆ ಮೊದಲ ಎರಡು ರಾಶಿಗಳ ಲಂಕೋದಯಮಾನ ಕ್ರಮಶಃ ೨೭೮ ಹಾಗೂ ೨೯೯ ತೆಗೆದುಕೊಂಡು, ೯೦೦ರಲ್ಲಿ ನ್ಯೂನಗೊಳಿಸಲು ಮೂರನೇ ರಾಶಿಯ ಲಂಕೋದಯಮಾನವದಕ್ಕೆ ೩೨೩ ಪಳ ಸಿಕ್ಕಿತು. ದೀರ್ಘಕಾಲದಿಂದ ಇದೇ ಸ್ಥೂಲ ಲಂಕೋದಯಮಾನಗಳ ಪ್ರಯೋಗ ನಡೆಯುತ್ತಿದೆ. ಯಾವ ಜ್ಯೋತಿಷಿಗಳಿಗೆ ಷಷ್ಟ್ಯಂಶದಂತಹಾ ಉಚ್ಚ ವರ್ಗಗಳಲ್ಲಿ ರುಚಿಯಿಲ್ಲವೋ, ಅವರಿಗೆ ಇಷ್ಟು ದೋಷವು ನಗಣ್ಯ.
        
ಆದರೆ ಒಂದು ವೇಳೆ ಉಪರೋಕ್ತ ಗಣಿತದಲ್ಲಿ ಗುಲಗಂಜಿಯಷ್ಟೂ ದೋಷ ಮಾಡದಿರೆ, ಧ್ಯಾನಿಸದೆ ಅಸಡ್ಡೆ ಮಾಡಿರುವ ಕೆಲ ಅದ್ಭುತ ನಿಷ್ಕರ್ಷ ಸಿಗುತ್ತದೆ. ಉಕ್ತ ರಾಶಿಗಳ ಸಮ್ಮಿಲಿತ ಲಂಕೋದಯಮಾನ ಅಹೋರಾತ್ರಿಯ ಚತುರ್ಥಾಂಶ ಅಥವಾ ೯೦೦ ಪಳ ಆಗಿದೆ. ಮೊದಲ ರಾಶಿ ೩೦೦ ಪಳಕ್ಕೂ ಅತ್ಯಧಿಕ ನ್ಯೂನವಿದೆ, ೩ನೇ ರಾಶಿ ೩೦೦ ಪಳಕ್ಕೂ ಅತ್ಯಧಿಕ ಅಧಿಕವಾಗಿದೆ. ಮಧ್ಯ ರಾಶಿಯ ಮಾನವು ೩೦೦ ಪಳ ಆಗಿರಬೇಕಿತ್ತು, ಆದರೆ ಶುದ್ಧ ಗಣನೆ ಮಾಡಲು '-.೩೪೮೩೮೯೨' ಪಳದ ಅಲ್ಪ ಅಂತರ ಪ್ರಾಪ್ತವಾಗುತ್ತದೆ. ಸೂರ್ಯಸಿದ್ಧಾಂತವನ್ನು ಗಂಭೀರತೆಯಿಂದ ತೆಗೆದುಕೊಳ್ಳದಿರುವವರು ತಥಾಕಥಿತ 'ವಿಶೇಷಜ್ಞರ' ಧ್ಯಾನವು ಇಂತಹಾ ಅಲ್ಪಾಂತರಗಳ ಕಡೆಗೆ ಹರಿಯುವುದಿಲ್ಲ, ಅವರು ಸೂರ್ಯಸಿದ್ಧಾಂತೀಯ ಸೂತ್ರಗಳನ್ನು ಅಶುದ್ಧ ಎಂದೆಣಿಸಿ ಪರಿಶೀಲಿಸುವ ಪ್ರಯತ್ನವನ್ನೂ ಮಾಡವುದಿಲ್ಲ.

        ಒಂದು ವೇಳೆ ಸೂರ್ಯಸಿದ್ಧಾಂತವು ಭೂಕೇಂದ್ರಿಕ ಆಗಿದ್ದರೆ ಮಧ್ಯ ರಾಶಿಯ ಲಂಕೋದಯ ಮಾನವು ಸರಿಯಾಗಿ ೩೦೦ ಪಳ ಆಗಿರುತ್ತಿತ್ತು. ಆದರೆ ವಾಸ್ತವದಲ್ಲಿ ೩೦೦ ಪಳಗಳಿಂದ -.೩೪೮೩೮೯೧೯೯ ಪಳದ ಅಲ್ಪಾಂತರವಿದೆ. ಇದು ಮಧ್ಯರಾಶಿಯ ಮಧ್ಯಮ ಲಂಕೋದಯ ಮಾನ ೩೦೦ ಪಳದ ೮೬೧.೧೦೫೯೧೫೦೪೬೪ ನೇ ಭಾಗವಾಗಿದೆ. ಇದು ಭೂಕೇಂದ್ರದಿಂದ ರವಿಕಕ್ಷಾಕೇಂದ್ರದ ಅಂತರದ ದ್ಯೋತಕವಾಗಿದೆ. ಇದರ ಯೋಜನತ್ಮಕ ಮಾನವು ನಿಮ್ನೋಕ್ತ ವಿಧಿಯಿಂದ ತಿಳಿದುಕೊಳ್ಳಬಹುದು. ಸೂರ್ಯಸಿದ್ಧಾಂತದ ಅನುಸಾರ ರವಿಕಕ್ಷೆಯ ಮಾನವು ೪೩,೩೧,೫೦೦ ಯೋಜನ. ಒಂದು ವೇಳೆ ರವಿಕಕ್ಷೆಯು ಅತ್ಯಂತ ಜಟಿಲ ದೀರ್ಘವೃತೀಯ ಅಭಿಚಕ್ರಿಕೆ (elliptical epicycloid) ಆಗಿದ್ದರೆ, ಇದನ್ನು ಸರಾಸರಿ ದೀರ್ಘವೃತೀಯ ಮಾನ ಎಂದು ತೆಗೆದುಕೊಂಡರೆ ಪರಿಧಿ ಮತ್ತು ವ್ಯಾಸಾರ್ಧದ ಅನುಪಾತ (= ೨ x ಪೈ = ೨ x ೩.೧೪೧೫೯೨೬೫) ಇದರಿಂದ ವಿಭಕ್ತಗೊಳಿಸಿದರೆ ಸೈದ್ಧಾಂತಿಕ ಸೂರ್ಯನಿಂದ ಕಕ್ಷಾಕೇಂದ್ರದ ಸರಾಸರಿ ದೂರವನ್ನು ಪ್ರಾಪ್ತಗೊಳಿಸಿಕೊಳ್ಳಬಹುದು. ದೂರವು ಮುಖ್ಯವ್ಯಾಸಾರ್ಧ ಮತ್ತು ಗೌಣ ವ್ಯಾಸಾರ್ಧದ ಸರಾಸರಿಯಾಗಿದೆ. ಸೂರ್ಯಸಿದ್ಧಾಂತೀಯ ಪರಮಮಂದಫಲಾರ್ಧ:೧೦':೩೨" ಇದರ ಅರ್ಧ) ಜ್ಯಾ ರವಿಕಕ್ಷೆಯ ಉತ್ಕೇಂದ್ರತೆಯ ಮಾನ ನೀಡುತ್ತದೆ (.೦೧೮೯೮೪೧೬೩) ಇದು ಕಕ್ಷೆಯ ಜ್ಯಾಮಿತೀಯ ಕೇಂದ್ರದಿಂದ ಮುಖ್ಯನಾಭಿ ಮೇರುವಿನ ದೂರದ ಮುಖ್ಯ ವ್ಯಾಸಾರ್ಧದ ಪರಸ್ಪರ ಅನುಪಾತವಾಗಿದೆ. ಗೌಣವ್ಯಾಸಾರ್ಧ (=.೯೯೯೮೧೯೭೮೪೫) ಮತ್ತು ಮುಖ್ಯವ್ಯಾಸಾರ್ಧ (= ) ಇದರ ಪರಸ್ಪರ ಅಂತರದ ಅರ್ಧ ( = .೦೦೦೦೯೦೧೦೭೭೩೩೩) ಇದನ್ನು ಮುಖ್ಯವ್ಯಾಸಾರ್ಧ ಹಾಗೂ ಗೌಣವ್ಯಾಸಾರ್ಧದ ಸರಾಸರಿ ( = ೧.೯೯೯೮೧೯೭೮೪೫ / ೨ = ೪೩೩೧೫೦೦ಯೋಜನ / ೨ಪೈ ) ಇದಕ್ಕೆ ಸೇರಿಸಿದರೆ ಸೂರ್ಯಸಿದ್ಧಾಂತೀಯ ರವಿಕಕ್ಷೆಯ ಮುಖ್ಯವ್ಯಾಸಾರ್ಧದ ಯೋಜನಾತ್ಮಕ ಮಾನವು ತಿಳಿದುಬರುತ್ತದೆ. ಗಣನೆಯು ಪ್ರಕಾರವಾಗಿದೆ: ರವಿಕಕ್ಷೆಯ ಸರಾಸರಿ ವ್ಯಾಸಾರ್ಧ = ೪೩೩೧೫೦೦ / ೨ಪೈ ಯೋಜನ. ಇದಕ್ಕೆ ಮುಖ್ಯವ್ಯಾಸಾರ್ಧ (=) ಹಾಗೂ ಸರಾಸರಿ ವ್ಯಾಸಾರ್ಧ (=.೯೯೯೮೧೯೭೮೪೫ / ) ಇದರ ಪರಸ್ಪರ ಅನುಪಾತದಿಂದ ಗುಣಿಸಿದರೆ ದೀರ್ಘವೃತ್ತೀಯ ಸೂರ್ಯಸಿದ್ಧಾಂತೀಯ ರವಿಕಕ್ಷೆಯ ಮುಖ್ಯವ್ಯಾಸದ ಯೋಜನಾತ್ಮಕ ಮಾನ ೬೮೯೪೪೧.೭೬೦೦೩೬೬ ಯೋಜನ ಪ್ರಾಪ್ತವಾಗುತ್ತದೆ. ಇದನ್ನು ೮೬೧.೧೦೫೯೧೫ ರಿಂದ ವಿಭಕ್ತಗೊಳಿಸಲು ಭೂಕೇಂದ್ರದಿಂದ ರವಿಕಕ್ಷಾಕೇಂದ್ರದ ದೂರದ ಸ್ಥೂಲ ಮಾನ ನಿಃಸೃತಗೊಳ್ಳುತ್ತದೆ:

೬೮೯೪೪೧.೭೬೦೦೩೬೬ / ೮೬೧.೧೦೫೯೧೫೦೪೬೪ = ೮೦೦.೬೪೬೮೭೫೧೨ ಯೋಜನ

ಇದು ಭೂಕೇಂದ್ರದಿಂದ ರವಿಕಕ್ಷಾಕೇಂದ್ರದ ದೂರವಾಗಿದೆ. ಸೂರ್ಯಸಿದ್ಧಾಂತಾನುಸಾರ ವಿಷುವತೀಯ ಭೂವ್ಯಾಸಾರ್ಧ ೮೦೦ ಯೋಜನವಾಗಿದೆ, ಇದು ಆಧುನಿಕ ಮಾನದಲ್ಲಿ ೬೩೭೮.೧೯೭ ಕಿಲೋಮೀಟರ್ ಆಗಿದೆ, ಆದ್ದರಿಂದ .೬೪೬೮೭೫ ಯೋಜನದ ಮಾನ ೫೧೫೭.೩೭ ಮೀಟರ್ ಆಗಬೇಕು. ಇದರ ಅರ್ಥವೇನೆಂದರೆ ಭೂಕೇಂದ್ರದಿಂದ ರವಿಕಕ್ಷಾಕೇಂದ್ರದ ದೂರವು ವಿಷುವತೀಯ ಭೂವ್ಯಾಸಾರ್ಧದಿಂದ ೫೧೫೭ ಮೀಟರ್ ಅಧಿಕ ಆಗಿರಬೇಕು, ಅರ್ಥಾತ್ ವಿಷುವತ್ ಮೇಲೆ ಭೂತಲದಿಂದ ೫೧೫೭ ಮೀಟರ್ ಎತ್ತರದಲ್ಲಿ ಯಾವುದೇ ಪರ್ವತ ಶಿಖರವು ರವಿಕಕ್ಷೆಯ ಕೇಂದ್ರ ಆಗಿರಬೇಕು, ಏಕೆಂದರೆ ಲಂಕೋದಯ ವಿಷುವತಿನ ಮೇಲೆ ರಾಶ್ಯೋದಯ ಆಗುತ್ತದೆ. ವಿಷುವತಿನ ಮೇಲೆ ಸರಾಸರಿ ಇಷ್ಟು ಎತ್ತರದಲ್ಲಿ ಶಿಖರಗಳಿವೆ, ಒಂದು ಆಫ್ರಿಕಾದ ಕೇನ್ಯಾ ದೇಶದಲ್ಲಿ ಹಾಗೂ ಎರಡನೆಯದು ದಕ್ಷಿಣ ಅಮೇರಿಕಾದಲ್ಲಿ. ಅಲ್ಲಿಂದ ಸೈದ್ಧಾಂತಿಕ ರವಿಕಕ್ಷಾ 'ದೀರ್ಘವೃತೀಯ ಅಭಿಚಕ್ರಿಕಕಾರ' ಆಗಿದೆಯೇ ಹೊರತು ಶುದ್ಧ ದೀರ್ಘವೃತ್ತಾಕಾರ ಎಂದು ತಿಳಿದು ಉಪರೋಕ್ತ ಸ್ಥೂಲ ಗಣನೆ ಮಾಡಲಾಗಿದೆ, ಆದ್ದರಿಂದ -೪೧.೬೩ ಮೀಟರಿನ ದೋಷ ಸಿಕ್ಕಿದೆ. ಆಫ್ರಿಕಾದ ಕೇನ್ಯಾ ದೇಶದಲ್ಲಿ ೫೧೯೯ ಮೀಟರ್ ಎತ್ತರ ಪರ್ವತವಿದೆ. ಅದರ ತಪ್ಪಲಿನಲ್ಲಿ ಅಲ್ಲಿಯ ಸ್ಥಾನೀಯ ಆದಿವಾಸೀ ಭಾಷೆಯಲ್ಲಿ ಮೇರು ನಾಮಕ ನಗರ, ಮೇರು ನಾಮಕ ಜಾತಿ ಮತ್ತು ಮೇರು ನಾಮಕ ಭಾಷೆಯು ಇಂದಿಗೂ ವಿದ್ಯಮಾನವಿದೆ. ವಾಸ್ತವದಲ್ಲಿ ಜಾತಿಯು ಇಸಾಯಿಯಾಗಿ ಮತಾಂತರ ಮಾಡಲಾಗಿದೆ. ಅದರ ನಂತರ ಅವರಿಗೆ ಪಾದ್ರಿಗಳಿಂದ ಮೇರು ಜಾತಿಯು ಇಸ್ರೈಲಿಂದ ಕೇನ್ಯಾಕ್ಕೆ ಹೋಗಿದ್ದವು ಎಂದು ಶಿಕ್ಷಣ ನೀಡಲಾಗುತ್ತಿದೆ. ಆದರೆ ವೈಜ್ಞಾನಿಕ ಸಾಕ್ಷಿಗಳು ಹೇಳುವಂತೆ ಕೇಂದ್ರೀಯ ಆಫ್ರಿಕಾದ ಅದೇ ಪೂರ್ವ ಭಾಗದಲ್ಲಿಯೇ ಅಂದಾಜು ೪೦ ಲಕ್ಷ ವರ್ಷಗಳ ಹಿಂದೆ ಮಾನವ ಜಾತಿಯು ಪ್ರಾದುರ್ಭವಿಸಿತ್ತು. ಆದರೆ ಇದರ ವೈಜ್ಞಾನಿಕ ತಥ್ಯವನ್ನು ಪುರಾಣ ಹಾಗೂ ಜ್ಯೋತಿಷ-ಸಿದ್ಧಾಂತದ ಗ್ರಂಥಗಳಲ್ಲಿ ವರ್ಣನೆ ಸಿಗುವುದೇನೆಂದರೆ ಇಂದಿಗೆ ೩೮,೯೩,೧೧೧ ಸೌರ ವರ್ಷಗಳ ಹಿಂದೆ ಪ್ರಲಯದ ನಂತರ ವರ್ತಮಾನ ಮಹಾಯುಗ ಆರಂಭ ಆಗಿತ್ತು ಮತ್ತು ಬ್ರಹ್ಮನು ಮೇರು ಪರ್ವತದಿಂದಲೇ ಸೃಜನ ಕಾರ್ಯ ಮಾಡುತ್ತಾರೆ ಎಂದು ಹೇಳಿದ ಪುರಾಣ ಮತ್ತು ಸಿದ್ಧಾಂತಗಳನ್ನು ಮಿಥ್ಯೆಯೆಂದೆನ್ನುತ್ತಾರೆ.

ಲಂಕೋದಯ ಸಾಧನೆಯ ಉಪರೋಕ್ತ ಸೂರ್ಯಸಿದ್ಧಾಂತೀಯ ಸೂತ್ರದಲ್ಲಿ ಪರಮಕ್ರಾಂತಿಯ ಮಾನ ಶೂನ್ಯ ಇರಿಸುವುದರಿಂದಲೇ ಮಧ್ಯರಾಶಿಯ ಲಂಕೋದಯಮಾನ ೩೦೦ ಪಳ ಆಗುತ್ತದೆ, ಆದರೆ ಪರಮಕ್ರಾಂತಿಯ ಮಾನ ಶೂನ್ಯ ಅಸಂಭವ. ಉಪರೋಕ್ತ ಸೂರ್ಯಸಿದ್ಧಾಂತೀಯ ಸೂತ್ರವನ್ನು ಅಶುದ್ಧ ಎಂದು ಹೇಳುವವರು ಸೂತ್ರದಿಂದ ಭೂಕೇಂದ್ರದ ಬದಲಿಗೆ ವಿಷುವತತೀಯ ಮೇರುವಿನ ಮೇಲೆ ಕಕ್ಷಾಕೇಂದ್ರದ ಸಿದ್ಧಿಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ನೀಡಲಾಗುವುದಿಲ್ಲ. ಇದಕ್ಕೆ ಪೌರಾಣಿಕ ಮತ್ತು ಸೈದ್ಧಾಂತಿಕ ಗ್ರಂಥಗಳಲ್ಲಿ ನೀಡಲಾಗಿರುವ ವಿವರಣೆಗಳಿಂದ ತಾದಾತ್ಮ್ಯವಿದೆ ಎಂಬುದನ್ನು ಸಂಯೋಗ ಎಂದು ಹೇಳಿ ಮೂಲೆಗುಂಪಾಗಿಸುವುದು ಅನುಚಿತವಾಗಿದೆ. ಏಕೆಂದರೆ ಮೇರು ಪರ್ವತದ ಎತ್ತರದ ಮುಂದಿನ ಸೈದ್ಧಾಂತಿಕ ಸೂತ್ರಗಳು ಲೇಖನದ ಮೂಲ ಕರ್ತರಾದ ವಾರಣಾಸೀ ಸ್ಥಿತ ಬಾಲಬ್ರಹ್ಮಚಾರೀ ವಿನಯ್ ಜಾ ಗುರೂಜಿಯವರಿಗೆ ಜ್ಞಾತವಿದೆ, ಅದರಲ್ಲಿ ಎರಡನ್ನು ಪ್ರಸ್ತುತ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.ಮೇರುವಿನ ಭೌಗೋಳಿಕ ಸ್ಥಿತಿ : ಸಾಹಿತ್ಯಕ ಪ್ರಮಾಣ

ದೇವರ್ಷಿ ನಾರದರು ನೇರವಾಗಿ ಬ್ರಹ್ಮನಿಂದ ಜ್ಯೋತಿಷಶಾಸ್ತ್ರದ ಜ್ಞಾನವನ್ನು ಪಡೆದರು. ನಾರದ ಪುರಾಣದಲ್ಲಿ ಅವರು ಮೇರು ಪರ್ವತದ ಬಗ್ಗೆ ಪ್ರಸ್ತಾಪಿಸುತ್ತಾರೆ (ಪೂರ್ವಭಾಗ, ಅಧ್ಯಾಯ , ಶ್ಲೋಕ ೪೧) "ಭೂತಲೇ ಮಧ್ಯಗೋ ಮೇರುಃ ಸರ್ವದೇವಸಮಾಶ್ರಯಃ" | ಅಂದರೆ ಮೇರು "ಭೂತಲ" ಮಧ್ಯದಲ್ಲಿದೆ. ಶ್ರೀಮದ್ ಭಾಗವತ ಪುರಾಣ ಮತ್ತು ಅನ್ಯ ಪುರಾಣಗಳಲ್ಲಿಯೂ ಇದೇ ವರ್ಣನೆ ಇದೆ. ನರಪತಿಜರ್ಯದ ಲೇಖಕರು ಭೂಮಧ್ಯದಲ್ಲಿ ಮೇರು ಸ್ಥಿತವಾಗಿದೆ ಎನ್ನುವುದನ್ನು ಕೇಳುತ್ತಾರಾದರೂ ಭೂಮಧ್ಯದಲ್ಲಿ ಅವರಿಗೆ ಮೇರು ಕಾಣಸಿಗಲಿಲ್ಲ ("ದೃಶ್ಯತೇ ತು") | ನರಪತಿಜಯಚರ್ಯಾದ ಭೌಗೋಳಿಕ ವರ್ಣನೆಯಿಂದ ಸ್ಪಷ್ಟವಗುವುದೇನೆಂದರೆ ಭಾರತದ ಹೊರಗಿನ ಜ್ಞಾನ ನರಪತಿ ಕವಿಗೂ ಇರಲಿಲ್ಲ, ಆದ್ದರಿಂದ ಅವರಿಗೆ ಮೇರು ಸಿಗಲಿಲ್ಲ. ಆದರೆ ಮರು ಭೂಮಧ್ಯದಲ್ಲಿರುವ ವಿಚಾರವನ್ನು ಸ್ವೀಕರಿಸುತ್ತಾರೆ. ಸೂರ್ಯಸಿದ್ಧಾಂತದಲ್ಲ ನಿಮ್ನೋಕ್ತ ಶ್ಲೋಕವಿದೆ:

ಅನೇಕರತ್ನನಿಚಯೋ ಜಂಬೂನದಮಯೋ ಗಿರಿಃ |
ಭೂಗೋಲಮಧ್ಯಗೋ ಮೇರುರುಭಯತ್ರ ವಿನಿರ್ಗತಃ || ೩೪ ||

ಪಂಡಿತ್ ರಾಮಚಂದ್ರ ಪಾಂಡೇಯವರು ಇದಕ್ಕೆ ಸರಿಯಾದ ವ್ಯಾಖ್ಯೆ ನೀಡಿದರು: "ಅನೇಕ ರತ್ನಗಳ ಸಮೂಹದಿಂದ ಪರಿಪೂರ್ಣ ಜಂಬೂನದ (ಸ್ವರ್ಣನದೀ)ಯಿಂದ ಯುಕ್ತ ಭೂಗೋಲದ ಮಧ್ಯದಲ್ಲಿ ಹೊಕ್ಕಿರುವ ಹಾಗೂ ಪೃಥ್ವೀಯ ಎರಡೂ ಭಾಗ (ಉತ್ತರ-ದಕ್ಷಿಣ)ಗಳಲ್ಲಿ ಹೊರಚಾಚಿರುವ ಮೇರು ಪರ್ವತವಿದೆ". ಬರ್ಜೆಸ್ ಕೂಡ ಇಂತಹದ್ದೇ ಅರ್ಥ ನೀಡಿದ್ದಾನೆ. ಮಖ್ಯ ಮೇರು ಪರ್ವತ ಭೂಗೋಲಮಧ್ಯರೇಖೆಯ ಮೇಲೆ ಸ್ಥಿತ ಜಂಬೂದ್ವೀಪದ ಜಂಬೂನದ ಪ್ರದೇಶದಲ್ಲಿದೆ. ಇದು ಭೂಕೇಂದ್ರವನ್ನು ಹಾಯ್ದು ಉತ್ತರ ಹಾಗೂ ದಕ್ಷಿಣ ಧ್ರುವಗಳತ್ತ ಕೂಡ ವ್ಯಾಪಿಸಿದೆ (ಸುಮೇರು ಹಾಗೂ ಕುಮೇರು). ಈಗಲೂ ಮೌಂಟ್ ಕೇನ್ಯಾ ಪ್ರದೇಶದಲ್ಲಿ ಜಂಬೂನದೀ (ಜಾಂಬೇಜೀ) ನದೀ ಉಂಟು. ಜಂಬೂದ್ವೀಪದ ಕೇಂದ್ರೀಯ ಪ್ರದೇಶದಲ್ಲಿ ಜಂಬಿಯಾ, ಮು-ಜಂಬಿಕ ('' ಅರಬೀ ಉಪಸರ್ಗವಾಗಿದೆ), ಜಿಂಬಾಬ್ವೆ, ಜಂಬೋ ಇಲ್ಲಿಂದ ಕಾಂಗೋ ಹಾಗೂ ಜಾಂಬೂನ್ ಇಲ್ಲಿಂದ ಗೈಬೋನ್ ಆದಿ ದೇಶಗಳು ಪ್ರದೇಶದಲ್ಲಿ ಸಿಗುತ್ತವೆ. ಮೇರು ನಾಮದ ಅನೇಕ ಪರ್ವತಾದಿ ತನ್ಜಾನಿಯಾ, ಕೇನ್ಯಾ, ಈಥೀಯೋಪಿಯಾ ಹಾಗೂ ಸೂಡಾನ್ನಲ್ಲಿದೆ. ಇವುಗಳಲ್ಲಿ ಎಲ್ಲಕ್ಕಿಂತ ಮಹತ್ವಪೂರ್ಣವಾದದ್ದು ವಿಷುವತ್ ಬಿಂದುವಿನಲ್ಲಿ ಸ್ಥಿತ ಕೇನ್ಯಾ ಪರ್ವತದ ತಪ್ಪಲಿನಲ್ಲಿ ಸ್ಥಿತ ಮೇರು ನಗರ. ಇದರಿಂದ ಸಿದ್ಧವಾಗುವುದೇನೆಂದರೆ ಕೇನ್ಯಾ ಪರ್ವತವೇ ಪ್ರಾಚೀನ ಮೇರು ಹಾಗೂ ಮತ್ತೊಂದು ಮಹತ್ವಪೂರ್ಣ ಸ್ಥಳವೆಂದರೆ ದಕ್ಷಿಣ ಸೂಡನ್ನಲ್ಲಿ ಸ್ಥಿತ ಆಫ್ರಿಕಾದ ಒಂದು ವಿಕಸಿತ ಸಭ್ಯತೆಯ ರಾಜಧಾನಿಯಾಗಿದ್ದ ಪ್ರಾಗೈತಿಹಾಸಿಕ ಕಾಂಸ್ಯಯುಗೀನ ಮೇರು ನಗರ. ಇದರ ಲಿಪಿಗಳು ಇನ್ನೂ ಒದಲಿಕ್ಕೆ ಆಗಿಲ್ಲ. (ಒಬ್ಬ ಪಾಶ್ಚಾತ್ಯ ಭಾಷಾವಿದನು ಇದನ್ನು ಓದುವ ಸಾಹಸ ಮಾಡಲಾಗಲು, ಅವರ ನಂಬಿಕೆಯಂತೆ ಮಿಶ್ರ ನಾಗರಕತೆಯ ಉದ್ಗಮ ಸ್ಥಳ ಆಫ್ರಿಕಾದ ಪ್ರಾಚೀನ ಕುಷ ಪ್ರದೇಶದ ರಾಜಧಾನಿಯು  ಕುಷಾಣ ನಾಮದಿಂದ ವಿಖ್ಯಾತ ಆರ್ಯರೊಂದಿಗೆ ಸಂಬದ್ಧವಾಗಿತ್ತು. ಕುಷಾಣರ ಪ್ರಸಿದ್ಧ ಸಮ್ರಾಟನು ಕನಿಶ್ಕನಿಂದಲೇ ಶಕ ಸಂವತ್ ಸಂಬಂಧ ಅಧಿಕಾಂಶವಾಗಿ ಇತಿಹಾಸಕಾರರು ಸೇರಿಸುತ್ತಾರೆ).

        ವಾಲ್ಮೀಕಿ ರಾಮಾಯಣದಲ್ಲಿ ವರ್ಣಿಸಿರುವುದೇನೆಂದರೆ ಸೂರ್ಯನು ಜಂಬೂದ್ವೀಪ ಸ್ಥಿತ ಮೇರು ಪರ್ವತದ ಪರಿಕ್ರಮ ಮಾಡುತ್ತಾನೆ. ಅಗ್ನಿಪುರಾಣದ  ವಚನ ಇಂತಿದೆ: "ಜಂಬೂದ್ವೀಪಮಧ್ಯೇ ಮೇರುಃ". ಕೂರ್ಮಪುರಾಣದ ಕಥನವೂ ಇದೇ ಆಗಿದೆ. ಭಾಗವತಪುರಾಣದ ಶಬ್ದ ಇಂತಿದೆ (ಸ್ಕಂಧ , ಅಧ್ಯಾಯ ೨೦, ಶ್ಲೋಕ ೩೦):

"ಲೋಕಪಾಲಾನಾಮಿಂದ್ರಾದೀನಾಂ ಯದುಪರಿಷ್ಟಾತ್ ಸೂರ್ಯರಥಸ್ಯ ಮೇರುಂ ಪರಿಭ್ರಮತಃ ಸಂವತ್ಸರಾತ್ಮಕಂ ಚಕ್ರಂ ದೇವಾನಾಮ್ ಅಹೋರಾತ್ರಾಭ್ಯಾಂ ಪರಿಭ್ರಮತಿ".

            ಬ್ರಹ್ಮಾಂಡಪುರಾಣ (ವಾಯುಪ್ರೋಕ್ತ ಪೂರ್ವಭಾಗ, ದ್ವಿತೀಯ ಅನುಷಂಗ, ೨೧ನೇ ಅಧ್ಯಾಯ)ದಲ್ಲಿ ಎಲ್ಲಾ ಲೋಕಪಾಲರ ಮಧ್ಯದಲ್ಲಿ ಮೇರುವಿನ ಸ್ಥಿತಿಯನ್ನು ಪ್ರಸ್ತಾಪಿಸಲಾಗಿದೆ ಹಾಗೂ ಮೇರುವಿನ ಚತುರ್ದಿಕ್ಕುಗಳು ಸೂರ್ಯನನ್ನು ಭ್ರಮಣ ಗೈಯ್ಯುತ್ತಿವೆ ಎಂದು ಹೇಳಿದೆ. ಮೇಲ್ಕಂಡ ಅನುಷಂಗದ ೧೫ನೇ ಅಧ್ಯಾಯದಲ್ಲಿ ಇಳಾವೃತದ ಮಧ್ಯದಲ್ಲಿ ಮೇರುವಿನ ಸ್ಥಿತಿಯನ್ನು ಹೇಳಲಾಗಿದೆ. ಮಹಾಭಾರತದಲ್ಲಿಯೂ ಇಂತಹದ್ದೇ ವರ್ಣನೆ ಇದೆ. ಬ್ರಹ್ಮಾಂಡಪುರಾಣ (ಮತ್ತು ಭಾಗವತ ಪುರಾಣ)ದಲ್ಲಿ ಮೇರುವಿನ ಅಳತೆಯು ೩೨,೦೦೦ ಯೋಜನ ಎಂದು ಹೇಳಲಾಗಿದೆ; ಪೃಥ್ವೀಯ ಮಾನ ಮತ್ತು ವಿಭಿನ್ನ ದ್ವೀಪಗಳ ಮಾನವು ಸೂರ್ಯಸಿದ್ಧಾಂತೀಯ ಭೂ-ಯೋಜನಕ್ಕೆ ಮೇಳ ಹೊಂದುವುದಿಲ್ಲ. ಸೂರ್ಯಸಿದ್ಧಾಂತೀಯ ಲಗ್ನಸೂತ್ರಾನುಸಾರ ಮೇರುವಿನ ಎತ್ತರವು ಪ್ರಾಯಶಃ ಕೇನ್ಯಾ ಪರ್ವತಕ್ಕೆ ಹೋಲುತ್ತದೆ: ೫೧೯೯ ಮೀಟರ್. ಇದರ ೩೨,೦೦೦ನೇ ಭಾಗವು ೧೬.೨೫ ಸೆಂಟಿಮೀಟರ್ ಅಥವಾ . ಇಂಚು ಆಗುತ್ತದೆ. ಇದು ಹಸ್ತದ ಉದ್ದಕ್ಕೆ ಹೊಂದುತ್ತದೆ. ವಿಭಿನ್ನ ಗ್ರಂಥಗಳಲ್ಲಿ ಯೋಜನದ ಭಿನ್ನ-ಭಿನ್ನ ಮಾನಗಳನ್ನು ನೀಡಲಾಗಿದೆ, ಹಾಗಾಗಿ ಇದರ ಬಗ್ಗೆ ಸಾವಧಾನರಾಗಿರಬೇಕು.

        ಮೇರು ಹೆಸರಿನ ಹಲವು ಸ್ಥಳಗಳು ಅನ್ಯ ದೇಶಗಳಲ್ಲಿಯೂ ಇವೆ. ಸೃಷ್ಟಿ ಕೇಂದ್ರದಿಂದಲೇ ಎಲ್ಲ ಮಾನವರು ಉತ್ಪನ್ನರಾಗಿ ವಿಶ್ವವೆಲ್ಲ ಹಬ್ಬಿರಲಿಕ್ಕೂ ಸಾಕು. ಕಲಿಗಾಲದಲ್ಲಿ ಇದರ ಸ್ಮೃತಿಯ ನಷ್ಟವಾಗಿದೆಯಷ್ಟೆ. ಕಲಿಯಗದಲ್ಲಿ ಜನರು ಇತಿಹಾಸ ಮರೆತು ಬಿಡುತ್ತಾರೆ ಎಂದು ವ್ಯಾಸರು ಹೇಳಿಬಿಟ್ಟಿದ್ದಾರೆ. ವಿಷುವತ್ತಿನಿಂದ ಬೇರೆಡೆ ಮೇರುವಿನ ಸ್ಥಿತಿಯು ನಂಬಲಿಕ್ಕೆ ಆಗುವುದಿಲ್ಲ ಏಕೆಂದರೆ ಪೌರಾಣಿಕ ಮತ್ತು ಸೈದ್ಧಾಂತಿಕ ಪ್ರಮಾಣಗಳು ಹೀಗೇ ಸಾರಿವೆ. ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಕ್ರಮಶಃ ಸುಮೇರ ಮತ್ತು ಕುಮೇರು ಎಂದು ಸೂರ್ಯಸಿದ್ಧಾಂತದಲ್ಲಿ ಕರೆಯಲಾಗಿದೆ. ಸುಮೇರುವನ್ನು ಹಲವು ಬಾರಿ ಮೇರುವೆಂದೇ ಬರೆಯಲಾಗುತ್ತಿತ್ತು, ಕಾರಣದಿಂದಲೇ ಉತ್ತರ ಧ್ರುವವನ್ನು ಮೇರು ಪರ್ವತ ಎಂಬ ಅಪಾರ್ಥವನ್ನ ಹಲವರು ಮಾಡಿದ್ದಾರೆ. ಆದರೆ ಉತ್ತರ ಧ್ರುವದಲ್ಲಿ ಸಾಗರವು ಅಗಾಧವಿದೆಯೇ ಹೊರತು ಪರ್ವತಗಳಲ್ಲ. ಭೌಗೋಳಿಕ ಧ್ರುವಗಳಿಂದ ಲೆಕ್ಕಿಸುವ ರೀತಿಯಲ್ಲೇ ಆಫ್ರಿಕಾದಲ್ಲಿ ಸ್ಥಿತ ವಿಷುವತೀಯ ಮೇರು ಪರ್ವತವನ್ನು ಜ್ಯೋತಿಷದ ಉತ್ತರ ಧ್ರುವ ಎಂದು ಗಣಿಸಿ ಅಕ್ಷಾಂಶ-ರೇಖಾಂಶ ಮಾಡಿಕೊಳ್ಳಬೇಕು. ಇಂತಹಾ ಮಾನಚಿತ್ರದ ಮೇಲೆ ಸಂಸಾರದ ಕುಂಡಲಿಯನ್ನು ನಕ್ಷತ್ರ ಪ್ರವೇಶದ ಕಾಲದಲ್ಲಿ ಮಾಡಿದರೆ ಸಂಸಾರದ ಸರಿಯಾದ ಫಲಾದೇಶ ಪ್ರಾಪ್ತವಾಗುತ್ತದೆ. ನರಪತಿ-ಜಯಾಚಾರ್ಯರು ಇಂತಹಾ ಚಕ್ರವನ್ನು ಪದ್ಮಚಕ್ರವೆಂಬ ಸಂಜ್ಞೆ ನೀಡಿದ್ದಾರೆ. ಇದು ಕೂರ್ಮಚಕ್ರದ ಅತ್ಯಂತ ದೊಡ್ಡ ಸ್ವರೂಪವಾಗಿದೆ. ಇದನ್ನೇ ಮೇರುಕೇಂದ್ರಿತ ಪೃಥ್ವೀಚಕ್ರ ಎಂದು ಹೇಳಲ್ಪಡಬೇಕು.

ಮೇರು ರವಿಕಕ್ಷಾಕೇಂದ್ರ ಮಾತ್ರವಲ್ಲ, ಸೃಷ್ಟಿಕೇಂದ್ರವೂ ಹೌದು

ಇಲ್ಲಯವರೆಗೆ ಪ್ರಸ್ತುತ ಲೇಖನದಲ್ಲಿ ರವಿಕಕ್ಷೆಯ ಕೇಂದ್ರದ ರೂಪದಲ್ಲಿ ಮೇರುವಿನ ಗಣಿತೀಯ ಹಾಗೂ ಪೌರಾಣಿಕ ಸಾಕ್ಷಿಗಳ ಚರ್ಚೆ ಮಾಡಲಾಗಿದೆ. ಆದರೆ ಪುರಾಣಗಳಲ್ಲಿ ಮೇರುವನ್ನು ಸಂಪೂರ್ಣ ಸೃಷ್ಟಿ ಮತ್ತು ಸಮಸ್ತ ಲೋಕಗಳ ಕೇಂದ್ರವೆಂದು, ಯಾವ ಶಿಖರದ ಮೇಲೆ ಕುಳಿತು ಬ್ರಹ್ಮ ದೇವರು ಸೃಷ್ಟಿಯ ರಚನೆಯನ್ನು ಮಾಡುತ್ತಾರೋ ಅದೇ ಮೇರುವೆಂದು ಉಲ್ಲೇಖಿಸಲಾಗಿದೆ. ಉಪರೋಕ್ತ ಬ್ರಹ್ಮಾಂಡ ಪುರಾಣದ ಅನುಷಂಗದಲ್ಲಿಯೇ ದೇವಗ್ರಹಾನುಕೀರ್ತನ ನಾಮಕ ೨೨ನೇ ಅಧ್ಯಾಯದಲ್ಲಿ ಮಹರ್ಷಿ ವೇದವ್ಯಾಸರ ನಿಮ್ನೋಕ್ತ ವಚನವಿದೆ:

ಉತ್ತಾನಪಾದಪುತ್ರೋಽಸೌ ಮೇಢೀಭೂತೋ ಧ್ರುವೋ ದಿವಿ || ೬ ||
ಸ ಹಿ ಭ್ರಮನ್ ಭ್ರಾಮಯತೇ ನಿತ್ಯಂ ಚಂದ್ರಾದಿತ್ಯೇ ಗ್ರಹೈಃ ಸಹ |

ಅಂದರೆ ಉತ್ತಾನಪಾದನ ಪುತ್ರ ಧ್ರುವನು ಮೇಢೀಭೂತನಾಗಿ ಆಕಾಶದಲ್ಲಿ ಸ್ವಯಂ ಭ್ರಮಿಸುತ್ತಾನೆ ಹಾಗೂ ಸೂರ್ಯ-ಚಂದ್ರ ಸಹಿತ ಸಮಸ್ತ ಗ್ರಹಗಳನ್ನೂ ಭ್ರಮಿಸುವಂತೆ ಮಾಡುತ್ತಾನೆ. ಧ್ರುವಚರ್ಯಾಕೀರ್ತನ ನಾಮಕ ಮುಂದಿನ ಅಧ್ಯಾಯದ ಕೊನೆಯಲ್ಲಿ ಅನೇಕ ಶ್ಲೋಕಗಳಲ್ಲಿ ಇದನ್ನು ವಿಸ್ತರಿಸುತ್ತಾ, ಗ್ರಹಗಳನ್ನು ಭ್ರಮಿಸುವಂತೆ ಮಾಡುವವನಾದ ಹಾಗೂ ಸ್ವಯಂ ಭ್ರಮಿಸುವವನಾದ ಧ್ರುವನೂ ಮೇರುವಿನ ಪ್ರದಕ್ಷಿಣೆ ಮಾಡುತ್ತಾನೆ ಎಂದು ಪ್ರಸ್ತಾಪಿಸಲಾಗಿದೆ. ಅಂದರೆ ಮೇರುವು ಸೃಷ್ಟಿಯ ಏಕಮಾತ್ರ ಸ್ಥಿರ ಬಿಂದು ಹಾಗೂ ಕೇಂದ್ರವಾಗಿದೆ.

        ಸೂರ್ಯಸಿದ್ಧಾಂತದ ಓರ್ವ ಆಧುನಿಕ ಟೀಕಾಕಾರನು ಬ್ರಹ್ಮಾಂಡಪುರಾಣದ ಉಪರೋಕ್ತ ಶ್ಲೋಕದ ಸರಿಯಾದ ಶಬ್ದಾರ್ಥವನ್ನೇನೋ ನೀಡಲಾಗ್ಯೂ ತನ್ನ ಪ್ರಕ್ಷಿಪ್ತವನ್ನೂ ಸೇರಿಸಿದ್ದಾನೆ: “ಇಲ್ಲಿ ಪೃಥ್ವಿಯೂ ತನ್ನ ಕಕ್ಷೆಯಲ್ಲಿ ಅನ್ಯ ಗ್ರಹಗಳಂತೆ ಭ್ರಮಣ ಗೈಯ್ಯುತ್ತದೆ ಎಂದೂ ಸಿದ್ಧವಾಗುತ್ತದೆ. ಇಲ್ಲಿ ಯಾವುದೂ ಸ್ಥಿರವಿಲ್ಲ, ಎಲ್ಲವೂ ಭ್ರಮಿಸುತ್ತಿವೆ”. ಈ ವಚನವು ಇನ್ಯಾವುದೇ ಪ್ರಸಕ್ತ ಪ್ರಕಟಿತ ಆರ್ಷಗ್ರಂಥದಲ್ಲಿ ಸಿಗುವುದಿಲ್ಲ. ಸೂರ್ಯಸಿದ್ಧಾಂತದಲ್ಲಿ ಪೃಥಿವೀಯನ್ನು ಕೇಂದ್ರದಲ್ಲಿರಿಸಿ ಸಮಸ್ತ ಖಗೋಳೀಯ ಪಿಂಡಗಳ ಕಕ್ಷೆಗಳ ವರ್ಣನೆ ಮಾಡಲಾಗಿದೆ. ಅಥರ್ವವೇದದ ಕಾಂಡ-೬ರಲ್ಲಿ ಎರಡು ಸೂಕ್ತಗಳಲ್ಲಿ (೪೪ : ವಿಶ್ವಾಮಿತ್ರ ಋಷಿ ಹಾಗೂ ೭೭ : ಕಬಂಧ ಋಷಿ,) ನಿಮ್ನೋಕ್ತ ಮಂತ್ರವಿದೆ:

ಅಸ್ಥಾದ್ಯೌರಸ್ಥಾತ್ಪೃಥಿವ್ಯಸ್ಥಾದ್ವಿಶ್ವಮಿದಂ ಜಗತ್ |

ಅಂದರೆ (“ಅಸ್ಥಾತ್ ದ್ಯೌಃ ಅಸ್ಥಾತ್ ಪೃಥಿವೀ ಅಸ್ಥಾತ್ ವಿಶ್ವಮ್ ಇದಂ ಜಗತ್”) ’ದ್ಯೌ, ಪೃಥಿವೀ ಹಾಗೂ ಈ ಸಮಸ್ತ ಜಗತ್ತು ಸ್ಥಿರವಾಗಿದೆ’. ಈಶೋಪನಿಷತ್ತಿನ ಪ್ರಥಮ ಮಂತ್ರದಲ್ಲಿ ಜಗತ್ತನ್ನು ಗತಿಶೀಲ ಎಂದು ಹೇಳಲಾಗಿದ್ದು, ಅದು ವ್ಯುತ್ಪತ್ತಿಯ ಅನುಸಾರ ಸರಿಯಾಗಿದೆ. ಆದರೆ ಅಥರ್ವವೇದದಲ್ಲಿ ಸ್ಥಿರ ದ್ಯಾವಾಪೃಥಿವೀಯಲ್ಲಿ ಸ್ಥಿತವಾಗಿರುವುದರಿಂದ ಜಗತ್ತನ್ನೂ ಸ್ಥಿರವೆಂದು ಸಂಬೋಧಿಸಲಾಗಿದೆ. ಇದರ ತಾತ್ಪರ್ಯ ಏನೆಂದರೆ ಜಗತ್ತಿನ ಸಮಸ್ತ ಗತಿಗಳು ಸ್ಥಿರ ದ್ಯಾವಾಪೃಥಿವೀಯ ಒಳಗೇ ಇವೆ. ಈ ಸ್ಥಿರ ದ್ಯಾವಾಪೃಥಿವೀಯ ಹೊರಗೆ ಜಗತ್ತು ಹೋಗಲು ಸಾಧ್ಯವಿಲ್ಲ, ಹೊರಗೆ ಗತಿಸಲು ಸಾಧ್ಯವಾಗುವುದಿಲ್ಲ. ಎಲ್ಲ ವೇದಗಳಲ್ಲಿ ದೌ ಹಾಗೂ ಪೃಥಿವೀಗಳನ್ನು ಏಕ ಯುಗ್ಮದ ರೂಪದಲ್ಲಿ (ದ್ಯಾವಾಪೃಥಿವೀ, ರೋದಸೀ) ಪುನಃಪುನಃ ದರ್ಶಿಸಲಾಗಿದೆ. ದ್ಯೌನಲ್ಲಿ ಗತಿಶೀಲ ಸೂರ್ಯಾದಿ ಗ್ರಹಗಳಂತೆ ಪೃಥಿವೀಯೂ ಒಂದು ಗ್ರಹವೆಂಬ ಆಧುನಿಕ ಮಾನ್ಯತೆಯು ವೇದವಿರುದ್ಧವಾಗಿದೆ. ಮೇರುವು ಭೂತಲದಲ್ಲಿ ಸ್ಥಿತವಾಗಿದೆ. ಆದ್ದರಿಂದ ಪೃಥಿವೀಯ ಆ ಮೇರು ಸ್ಥಿತ ಭಾಗವಂತೂ ಸ್ಥಿರವಾಗಿಯೇ ಇರುತ್ತದೆ. ’ಗ್ರಹ’ ಶಬ್ದದ ಆಧುನಿಕ ಪರಿಭಾಷೆಯು ಭೌತಿಕವಾದೀ ಹಾಗೂ ಕೃತ್ರಿಮವಾಗಿದೆ : ಸೂರ್ಯ ಅಥವಾ ಸೂರ್ಯತುಲ್ಯ ದೊಡ್ಡ ಪಿಂಡಗಳ ಚತುರ್ದಿಕ್ ನಿಯಮಿತ ಗತಿಯಿಂದ ಭ್ರಮಣ ಗೈಯ್ಯುವ ಸಣ್ಣ ಪಿಂಡಗಳೇ ಈಗ ಗ್ರಹಗಳೆಂಬ ಸುಳ್ಳು ನಂಬಿಯಲ್ಲಿದೆ. ಸಾಮಾನ್ಯ ಗ್ರಹಗಳ ನಿಯಮಿತ ಗತಿಯಿಂದ ಅಂತರ ಇರಿಸಿರುವ ಕಾರಣ ಪ್ಲೂಟೋಗೆ ವೈಜ್ಞಾನಿಕರಿಂದ ಗ್ರಹದ ಶ್ರೇಣಿಯೊಂದಿಗೆ ನಿಷ್ಕಾಷಿತಗೊಳಿಸಲಾಗಿದೆ. ಆದರೆ ವೈದಿಕ-ಪೌರಾಣಿಕ ಪರಂಪರೆಯಲ್ಲಿ ಗ್ರಹಕ್ಕೆ ಇಂತಹಾ ಭೌತಿಕವಾದೀ ಪರಿಭಾಷೆಯು ಅಮಾನ್ಯವಾಗಿದೆ. ಸೂರ್ಯಸಿದ್ಧಾಂತಾನುಸಾರ ೬೦ ವರ್ಷದ ಭಕಕ್ಷೆಯ (ನಕ್ಷತ್ರಗಳ ಕಕ್ಷೆಯು) ಹೊರಗಿನ ಪಿಂಡಗಳನ್ನು ಗ್ರಹವೆಂದು ಒಪ್ಪಲು ಸಾಧ್ಯವಿಲ್ಲ. ಶನಿಯ ಕಕ್ಷೆಯು ೨೯.೪೭ ವರ್ಷದ್ದಾಗಿದೆ, ಆದರೆ ಯುರೇನಸ್ಸಿನ ಕಕ್ಷೆಯು ೮೪ ವರ್ಷದ್ದಾಗಿದೆ, ಆದ್ದರಿಂದ ಶನಿಯು ಗ್ರಹವೆನಿಸಿಕೊಂಡರೆ ಯುರೇನಸ್ ಗ್ರಹವೆಂದಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಭಕಕ್ಷೆಯಿಂದ ಹೊರಗಿನ ಪಿಂಡಗಳು ಗ್ರಹಗಳಂತೆ ಫಲಿತ ಜ್ಯೋತಿಷವನ್ನು ಪ್ರಭಾವಿತಗೊಳಿಸುವ ಸಾಮಾನ್ಯ ಗುಣ ಹೊಂದಿರುವುದಿಲ್ಲ ಮತ್ತು ಇದೇ ಕಾರಣದಿಂದ ನವಗ್ರಹಗಳ ಶ್ರೇಣಿಯಿಂದ ಅವುಗನ್ನು ಹೊರಗಿರಿಸಲಾಗಿದೆ. ಯದ್ಯಪಿ ಈ ಬಾಹ್ಯ ಪಿಂಡಗಳಲ್ಲಿಯೂ ಇರುವ ಕೆಲ ವಿಶೇಷ ಗುಣಗಳು ಮೇದಿನೀ ಜ್ಯೋತಿಷದಲ್ಲಿ ಫಲದಾಯಕವಾಗಿವೆ.ಸಂಪಾತ-ಪುರಸ್ಸರಣದ ಅವಧಾರಣೆಯ ಪೌರಾಣಿಕ ವರ್ಣನೆ

ಉಪರೋಕ್ತ ಬ್ರಹ್ಮಾಂಡ ಪುರಾಣದಿಂದ ಯಾವ ಉದ್ಧೃತ ಶ್ಲೋಕವಿದೆಯೋ ಆದು ಆಧುನಿಕ ಭೌತಿಕವಿಜ್ಞಾನದ ಸಂಪಾತ-ಪುರಸ್ಸರಣದ (Precession of equinoxes) ಅವಧಾರಣೆಯ ಪೌರಾಣಿಕ ವರ್ಣನೆಯ ಪ್ರಮಾಣವಾಗಿದೆ. ಸೂರ್ಯಸಿದ್ಧಾಂತಾನುಸಾರ ೨೪೦೦೦ ಹಾಗೂ ಭೌತಿಕ ವಿಜ್ಞಾನಾನುಸಾರ ೨೫೭೭೧.೪ ವರ್ಷಗಳಲ್ಲಿ ಧ್ರುವನು ಒಂದು ಭಗಣವನ್ನು (೩೬೦ ಅಂಶ) ಭ್ರಮಿಸುತ್ತಾನೆ ಎಂಬೀ ತಥ್ಯವನ್ನೇ ವ್ಯಾಸರು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ. ಸಿದ್ಧಾಂತಶಿರೋಮಣಿಯಲ್ಲಿ “ಆಗಮ”ದಿಂದ ಪ್ರಾಪ್ತ ಸೂರ್ಯಸಿದ್ಧಾನುಸಾರದ “ಅನುಪಲಬ್ಧ” ಸೂತ್ರದಿಂದ ಭಾಸ್ಕರಾಚಾರ್ಯರು ಯಾವ ಗಣನೆ ಮಾಡಿದರೋ ಅದು ೨೫೪೬೧.೩೪ ವರ್ಷಗಳ ಸಂಪಾತ-ಪುರಸ್ಸರಣ ಚಕ್ರವನ್ನು ತೋರಿಸುತ್ತದೆ. ಇದರ ಆಧಾರದಲ್ಲಿ ಭಾಸ್ಕರಾಚಾರ್ಯರು ದೃಕ್ಪಕ್ಷೀಯ ಕ್ರಾಂತ್ಯಾದಿ ಸಾಧನೆಗಳ ಆದೇಶ ಮಾಡಿದ್ದಾರೆ. ಇದರಲ್ಲಿ ಮಹಾಯುಗೀನ ಹಾಗೂ ಮನ್ವಂತರೀಯ ಶೋಧನೆಯಿಂದ ಆಧುನಿಕ ವೇಧಮಾನ ೨೫೭೭೧.೪ ವರ್ಷದ ಅಯನಾಂಶ ಚಕ್ರದ ನಿಷ್ಪತ್ತಿಯಾಗುತ್ತದೆ. ಇದರ ಚರ್ಚೆಯು ಸಿದ್ಧಾಂತ ಶಿರೋಮಣಿಯಲ್ಲಿಲ್ಲ. ಸಿದ್ಧಾಂತ ಶಿರೋಮಣಿಯಲ್ಲಿ ಏನಿದೆಯೋ ಅದೂ ಕೂಡ ಲಿಖಿತ ಸಾಕ್ಷಿಗಳ ಆಧಾರದಲ್ಲಿ ಪ್ರಾಚೀನ ಕಾಲದಲ್ಲಿ ಸಂಪಾತ-ಪುರಸ್ಸರಣ ಚಕ್ರದ ಸರ್ವಾಧಿಕ ಶುದ್ಧ ಮಾಪನವಾಗಿದೆ. ಆದರೆ ಒಬ್ಬ ಭಾರತೀಯ ಅಥವಾ ಪಾಶ್ಚಾತ್ಯ ಲೇಖಕನಾಗಲೀ ಇದರ ಚರ್ಚೆ ಮಾಡುವುದಿಲ್ಲ; ಎಲ್ಲ ಲೇಖಕರೂ ನ್ಯೂಟನ್ನಿಗಿಂತ ಮೊದಲು ಕ್ರಾಂತಿವೃತ್ತ ಹಾಗೂ ನಾಡೀ ವೃತ್ತಗಳ ಪರಸ್ಪರ ಸಂಪಾತ ಬಿಂದುವಿನ ಪುರಸ್ಸರಣ-ಚಕ್ರದ ಮೇಲೆ ಕೇವಲ ಹಿಪ್ಪಾರ್ಕಸ್ಸನ್ನು ಉದ್ಧೃತಗೊಳಿಸುತ್ತಾರೆ. ಅವನ ಪ್ರಕಾರ ಸಂಪಾತಚಕ್ರವು ೩೬೦೦೦ ವರ್ಷಗಳಾಗಿರುವುದರಿಂದ ಅತ್ಯಂತ ಅಶುದ್ಧವಾಗಿದೆ. ಇದರ ಗಣಿತೀಯ ಮೀಮಾಂಸೆಯನ್ನು ಅನ್ಯ ಲೇಖನದಲ್ಲಿ ಮಾಡಬೇಕಾಗುತ್ತದೆ. ಇಲ್ಲಿ ಈ ಪ್ರಸಂಗದ ಚರ್ಚೆಯು ಕೇವಲ ಪೌರಾಣಿಕ ಕಾಲದಲ್ಲಿಯೂ ಧ್ರುವನ ಭ್ರಮಣದ ಜ್ಞಾನವು ಋಷಿಗಳಿಗತ್ತು ಎಂಬುದನ್ನು ದರ್ಶನ ಮಾಡಿಸಲಿಕ್ಕೆ ಪ್ರಸ್ತಾಪಿಸಲಾಗಿದೆ. ಸಮಸ್ತ ಪೂರ್ವಜರು ಜ್ಞಾನದ ಕ್ಷೇತ್ರದಲ್ಲಿ ಅವಿಕಸಿತ ಹಾಗೂ ಅಸಭ್ಯರಾಗಿದ್ದರು ಎಂದು ಸಿದ್ಧಪಡಿಸಿ ತೋರಿಸುವುದರಲ್ಲಿ ಆಧುನಿಕ ವಿಕಾಸವಾದಿಗಳಿಗೆ ಏನೋ ಮಜ ಎನ್ನಿಸುತ್ತದೆ. ಆದರೆ ಪ್ರಾಚೀನ ಗ್ರಂಥಗಳಲ್ಲಿ ಯಾವ ಜ್ಞಾನವಿದೆಯೋ ಅದರ ಮೇಲೆ ಅವರ ದೃಷ್ಟಿ ಬೀಳುವುದೇ ಇಲ್ಲ. ಸೂರ್ಯಸಿದ್ಧಾಂತದ ಲಗ್ನಸೂತ್ರವು ದೀರ್ಘಕಾಲದಿಂದ ಜ್ಯೋತಿಷಿಗಳಿಂದ ಲಂಕೋದಯಮಾನ ತಿಳಿಯಲು ಪ್ರಯುಕ್ತವಾಗುತ್ತಾ ಬಂದಿದೆ. ಆದರೆ ಈ ಸೂತ್ರದಲ್ಲಿ ಸೃಷ್ಟಿಯ ಮೇರುಕೇಂದ್ರಿತವಾಗಿರುವ ರಹಸ್ಯ ಹಾಗೂ ಗಣಿತೀಯ ಪ್ರಮಾಣವು ಅಡಕವಾಗಿದೆ. ಇದರ ಮೇಲೆ ಯಾರೂ ಧ್ಯಾನಿಸುತ್ತಿಲ್ಲ. ಏಕೆಂದರೆ ಸೂಕ್ಷ್ಮ ಗಣನೆಯ ಪರಿಪಾಟವನ್ನು ದೀರ್ಘಕಾಲದಿಂದ ಜ್ಯೋತಿಷಿಗಳು ಬದಿಗಿರಿಸಿದ್ದಾರೆ ಹಾಗೂ ಆಧುನಿಕ ಗಣಿತಜ್ಞರಿಗೆ ಸೂರ್ಯಸಿದ್ಧಾಂತದ ವಿಷಯದಲ್ಲಿರುವ ಪೂರ್ವಾಗ್ರಹವು ಅವರಿಗೆ ಸೂರ್ಯಸಿದ್ಧಾಂತೀಯ ಸೂಕ್ಷ್ಮಗಣಿತವನ್ನು ತಿಳಿಯಲು ಬಿಡುವುದಿಲ್ಲ.

ಮೇರುವಿನ ಎತ್ತರಕ್ಕೆ ಎರಡನೆಯ ಸೌರಸೂತ್ರ

ಮೂರು ಪ್ರಾರಂಭಿಕ ರಾಶಿಗಳ ಯಾವ ಲಂಕೋದಯಮಾನವನ್ನು ಸೂರ್ಯಸಿದ್ಧಾಂತೀಯ ಸೂತ್ರದಿಂದ ಮೇಲೆ ನಿಃಸೃತಗೊಳಿಸಲಾಗಿತ್ತೋ, ಈಗ ಅವುಗಳ ಗಣಿತೀಯ ಮತ್ತು ಜ್ಯಾಮಿತೀಯ ಮೀಮಾಂಸೆ ಮಾಡೋಣ. ಇದರಿಂದ ಅಂತರಿಕ್ಷದಲ್ಲಿ ಅವುಗಳು ಯಾವ ಆಕೃತಿ ಉಂಟುಮಾಡುತ್ತವೆ ಎಂದು ಸ್ಪಷ್ಟಪಡಿಸಿಕೊಳ್ಳಬಹುದು. ಹಿಂದೆ ನಾವು ನೋಡಿದಂತೆ ಲಂಕೋದಯಮಾನದ ಸೂರ್ಯಸಿದ್ಧಾಂತೀಯ ಸೂತ್ರವು ಭೂಕೇಂದ್ರಿತವಾಗಿರದೆ ಮೇರುಕೇಂದ್ರಿತವಾಗಿದೆ. ಇದಕ್ಕೆ ಕಾರಣವೆಂದರೆ ಮಧ್ಯರಾಶಿಯ ಲಂಕೋದಯಮಾನವು ಭೂಕೇಂದ್ರದಿಂದ ವಿಷುವತೀಯ ಭೂವ್ಯಾಸಾರ್ಧ ಹಾಗೂ ಸರಾಸರಿ ೫೧೫೭ ಮೀಟರ್ ದೂರದಲ್ಲಿ ಕೇಂದ್ರದ ಸ್ಥಿತಿಯನ್ನು ದರ್ಶನ ಮಾಡಿಸುತ್ತದೆ. ಆದರೆ ಮೇರು ಪರ್ವತದ (ಮೌಂಟ್ ಕೇನ್ಯಾ) ವಾಸ್ತವಿಕ ಎತ್ತರ ೫೧೯೯ ಮೀಟರ್ ಆಗಿದೆ. ಇದರ ಸೂರ್ಯಸಿದ್ಧಾಂತೀಯ ಯೋಜನಾತ್ಮಕ ಮಾನವು ೦.೬೫೨೦೯೬೫೧ ಯೋಜನವಾಗಿದೆ. ಆದ್ದರಿಂದ ಭೂಕೇಂದ್ರದಿಂದ ಮೇರು ಶಿಖರದ ದೂರವು ೮೦೦.೬೫೨೦೯೬೫೧ ಯೋಜನವಾಗಿದೆ. ಇದು ರವಿಕಕ್ಷೆಯ ಮುಖ್ಯ ವ್ಯಾಸಾರ್ಧದ ೮೬೧.೧೦೦೨೯೯೪೨೦೭೩೪೭೩ನೇ ಭಾಗವಾಗಿದೆ. ಇದನ್ನು ೩೦೦ ಪಳದ ಸರಾಸರಿ ಮಾನದಲ್ಲಿ ಭಾಗಿಸಲು ಯಾವ ಅಲ್ಪಾಂತರ ದೊರಕುತ್ತದೋ ಅದನ್ನು ೩೦೦ ಪಳದಿಂದ ನ್ಯೂನಗೊಳಿಸಿದರೆ ೨೯೯.೬೫೧೬೦೮೫೨೮೯೯೨೭೨ ಪಳ ಸಿಗುತ್ತದೆ. ವಿಷುವತ್ ಅಥವಾ ಲಂಕೆಯ ಮೇಲೆ ಈ ಕ್ರಾಂತಿವೃತ್ತದ ಯಾವ ಭಾಗದ ಉದಯಮಾನವಾಗಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪೂರ್ಣ ರಾಶಿಯ ಲಂಕೋದಯಮಾನವು ಸರಿ ಲೆಕ್ಕ ಮಾಡಲು ಸಹಾಯಕವಲ್ಲ, ಏಕೆಂದರೆ ರಾಶಿಯ ಆರಂಭಿಕ ಮತ್ತು ಅಂತಿಮ ಭಾಗಗಳ ಉದಯಮಾನಗಳಲ್ಲಿ ತುಂಬ ಅಂತರವಿದೆ. ಆದ್ದರಿಂದ ೩೦ ರಾಶಿಯ ಸ್ಥಾನದಲ್ಲಿ ೦.೦೦೧ ಲಂಕೋದಯಮಾನ ಜ್ಞಾತಪಡಿಸಿಕೊಂಡು ೩೦೦೦೦ದಿಂದ ಗುಣಿಸಲು ಕ್ರಾಂತಿವೃತ್ತದ ವಿಶೇಷ ಬಿಂದುವಿನ ಮೇಲೆ ಲಂಕೋದಯದ ಅಧಿಕ ಶುದ್ಧ ಮಾನವನ್ನು ತಿಳಿದುಕೊಳ್ಳಬಹುದು. ೩೦೦೦೦ದಿಂದ ಗುಣಿಸುವ ಕಾರಣವೇನೆಂದರೆ ರಾಶಿಯ ಉದಯಮಾನದೊಂದಿಗೆ ಹೋಲಿಕೆಯ ಸುವಿಧತೆ. ಮಧ್ಯರಾಶಿಯ ಮಧ್ಯದಲ್ಲಿ, ಅರ್ಥಾತ್ ೪೫ ಹತ್ತಿರ ಅಭೀಷ್ಟ ಮಾನ ಇರಬೇಕು, ಆದರೆ ಅದಕ್ಕಿಂತ ಸ್ವಲ್ಪ ಹೆಚ್ಚಿಸಲು ೨೯೯.೬೫೧೬೦೮೫೨೮ / ೩೦೦೦೦ ಪಳದ ಲಂಕೋದಯಮಾನ ಪ್ರಾಪ್ತವಾಗುತ್ತದೆ.

        ಕಂಪ್ಯೂಟರ್ ಪ್ರೋಗ್ರಾಮಿನ ಸಹಾಯದಿಂದ ಲೆಕ್ಕ ಹಾಕಲು ೪೫.೦೭೮೭೨೧ ಎಂಬ ಬಿಂದು ಸಿಗುತ್ತದೆ. ಆ ಬಿಂದುವಿನ ಲಂಕೋದಯಮಾನವು ಮೇರು ಪರ್ವತದ ವಾಸ್ತವಿಕ ಎತ್ತರದ ಮೇಲೆ ಆಧಾರಿತ ೨೯೯.೬೫೧೬೦೮೫೨೮ / ೩೦೦೦೦ ಪಳದ ಮಾನವು ೦.೦೦೧ಯ ಖಂಡ ಹೇತು ನೀಡುತ್ತದೆ. ಮಧ್ಯಮಾನ ೪೫ಯಿಂದ ೦.೦೭೮೭೨೧ ಅಂಶದ ಅತಿರಿಕ್ತ ಮಾನದ ಅರ್ಥವೇನು? ಯಾವುದೇ ವೃತ್ತವನ್ನು ತಗ್ಗಿಸಿದರೆ ದೀರ್ಘವೃತ್ತ ಉಂಟಾಗುತ್ತದೆ. ಇದರ ಮುಖ್ಯ ಹಾಗೂ ಗೌಣ ವ್ಯಾಸಗಳ ಅನುಪಾತವು ತಗ್ಗಿಸಿದ ಕೋಣದ ಕೋಜ್ಯಾ ಆಗಿರುತ್ತದೆ. ೦.೦೭೮೭೨೧ ಅಂಶದ ಕೋಜ್ಯಾ ರವಿಕಕ್ಷೆಯಲ್ಲಿ ಈ ಇಳಿಕೆಯ ಕಾರಣದಿಂದ ಉಂಟಾದ ದೀರ್ಘವೃತ್ತದ ಮುಖ್ಯ ಹಾಗೂ ಗೌಣ ವ್ಯಾಸಗಳ ಅನುಪಾತ ನೀಡುತ್ತದೆ. ಇದರ ಪರಸ್ಪರ ಅನುಪಾತಾತ್ಮಕ ಅಂತರವನ್ನು ರವಿಕಕ್ಷಾವ್ಯಾಸಾರ್ಧದಿಂದ ಗುಣಿಸಲು ಮುಖ್ಯ ಹಾಗೂ ಗೌಣ ವ್ಯಾಸಗಳ ಅಂತರವು ೫.೧೮೮ ಕಿಲೋಮೀಟರ್ ಆಗುತ್ತದೆ. ಇದು ಮೇರು ಪರ್ವತದ ಎತ್ತರಕ್ಕಿಂತ ಕೇವಲ ೧೧ ಮೀಟರ್ ಕಡಿಮೆಯಷ್ಟೆ (ಈ ತ್ರುಟಿಯು ೧೬ ಅಂಕಗಳವರೆಗೆ ಗಣನೆಯ ಸೀಮಿತತೆಯ ಕಾರಣದಿಂದಾಗಿದೆ).

        ಈ ರೀತಿ ಸಂಪೂರ್ಣ ರಾಶಿಯ ಸ್ಥಾನದಲ್ಲಿ ಕಿರು ಖಂಡಗಳ ಪರಿಶೀಲನೆ ಮಾಡುವುದರಿಂದ ನಮಗೆ ಸೂರ್ಯಸಿದ್ಧಾಂತೀಯ ಲಂಕೋದಯ ಸೂತ್ರದಿಂದ ಮೇರು ಪರ್ವತದ ವಾಸ್ತವಿಕ ಎತ್ತರವು ದೊರಕುತ್ತದೆ. ಈ ಪ್ರೋಗ್ರಾಮಿನ ವಿಜುಯಲ್ ಬೇಸಿಕ್ ಕೋಡ್ ಕೆಳಗೆ ನೀಡಲಾಗಿದೆ. ಕೋಡಿನಲ್ಲಿ dM ಎಂಬುದರ ಅಳತೆಯನ್ನು ೦.೦೦೧ಗಿಂತ ಹೆಚ್ಚಿಸಿದರೆ ಫಲದಲ್ಲಿ ಸ್ಥೂಲತಾ ಜನಿತ ದೋಷ ಬಂದುಬಿಡುತ್ತದೆ. ಅದೇ ತಗ್ಗಿಸಿದರೆ ೧೬ ಅಂಕೆಗಳ ಗಣನಾ-ಕ್ಷಮತೆಗಿಂತ ಅಧಿಕ ಸಕ್ಷಮ ಕಂಪ್ಯೂಟರ್ ಪ್ರೋಗ್ರಾಮ್ ಬೇಕಾಗುತ್ತದೆ; ಫಲದ ಶುದ್ಧತೆಯು ಎಷ್ಟಿದೆ ಎಂಬುದರ ಪರಿಶೋಧನೆಯು ಈ ಪ್ರೋಗ್ರಾಮಿನ “Difference” ಇದರಿಂದ ತಿಳಿಯಬಹುದು. ಈ ಪ್ರೋಗ್ರಾಮಿನಲ್ಲಿ ೨೨೦೭೪೧ ಸಾರಿ (=dk) ಗಣನೆ ಮಾಡಿದ ನಂತರವಷ್ಟೆ ಸರಿಯಾದ ಉತ್ತರ ದೊರಕುತ್ತದೆ. ಪುರಾತನ ಕಾಲದಲ್ಲಿ ಕಂಪ್ಯೂಟರ್ ಇಲ್ಲದೆ ಈ ರೀತಿಯ ಗಣಿತ ಮಾಡಲು ಮರ್ತ್ಯ ಮಾನವನಿಗೆ ಸಂಭವವಿರಲಿಲ್ಲ. ಮೇರುಕೇಂದ್ರಿತ ಗಣಿತದ ಮೇಲೆ ಆಧಾರಿತ ಪೌರಾಣಿಕ-ಸೈದ್ಧಾಂತಿಕ ಗಣಿತವನ್ನು ನಿರ್ಮಿಸಿದವರು ನಿಸ್ಸಂದೇಹವಾಗಿ ಸಾಧಾರಣ ಮಾನವ ಆಗಿರಲು ಸಾಧ್ಯವೇ ಇಲ್ಲ!

        ರವಿಕಕ್ಷಾವ್ಯಾಸಾರ್ಧದ ಸೂರ್ಯಸಿದ್ಧಾಂತೀಯ ಮಾನವನ್ನು ತೆಗೆದುಕೊಳ್ಳುವುದರಿಂದಲೇ ಸೂತ್ರವು ಸರಿಯಾಗಿ ಕಾರ್ಯವೆಸಗುತ್ತದೆ. ಇದು ದೃಕ್ಪಕ್ಷೀಯ ರವಿಕಕ್ಷಾವ್ಯಾಸಾರ್ಧಕ್ಕಿಂತ ೨೭.೨ ಪಟ್ಟು ಕಡಿಮೆಯಿದೆ. ಇದರ ಅರ್ಥವೇನೆಂದರೆ ಸೂರ್ಯಸಿದ್ಧಾಂತೀಯ ರವಿಕಕ್ಷೆ ಹಾಗೂ ದೃಕ್ಪಕ್ಷೀಯ ರವಿಕಕ್ಷೆಗಳು ಪರಸ್ಪರ ಭಿನ್ನವಾಗಿವೆ. ದೃಕ್ಪಕ್ಷೀಯ ಸೂರ್ಯನು ಭೂಲೋಕದ ಭೌತಿಕ ಪಿಂಡವಾಗಿದ್ದರೆ ಸೂರ್ಯಸಿದ್ಧಾಂತೀಯ ಸೂರ್ಯನು ಜ್ಯೋತಿಷದ ಫಲ ನೀಡುವ ಭುವಲೋಕದ ದಿವ್ಯ ಬಿಂಬವಾಗಿದೆ. ವಾಸ್ತವಿಕ ಸೂರ್ಯದೇವರು ಸ್ವಲೋಕದಲ್ಲಿದ್ದಾರೆ. ಸೌರಪುರಾಣದಲ್ಲಿ ಸೂರ್ಯನನ್ನು ತ್ರಿಮಾರ್ಗೀ ಎಂದು ಸಂಬೋಧಿಸಲಾಗಿದೆ: ಮೂರು ಲೋಕಗಳಲ್ಲಿ ಮೂರು ಮಾರ್ಗಗಳಲ್ಲಿ ಚಲಿಸುವ ಮೂರು ಸೂರ್ಯರು ಒಂದೇ ಸೂರ್ಯದೇವನ ವಿಭಿನ್ನ ರೂಪಗಳಾಗಿವೆ.

        ನಿಷ್ಕರ್ಷೆ ಏನೆಂದರೆ ಸೂರ್ಯಸಿದ್ಧಾಂತೀಯ ಲಂಕೋದಯಸೂತ್ರವು ಮೇರುಕೇಂದ್ರಿತವಾಗಿದೆ. ಮೇರುಪರ್ವತದ ಎತ್ತರ ಹಾಗೂ ವಿಷುವತೀಯ ಭೂವ್ಯಾಸಾರ್ಧಗಳನ್ನು ಬಿಡಲು ಸೂತ್ರ ಅಶುದ್ಧವಾಗುತ್ತದೆ. ಸಹಸ್ರಾರು ವರ್ಷಗಳಿಂದ ಇಂದಿನವರೆಗೆ ಭಾರತೀಯ ಶುದ್ಧ ಜ್ಯೋತಿಷಿಗಳು ಈ ಮೇರುಕೇಂದ್ರಿತ ಸೂತ್ರದ ಪ್ರಯೋಗವನ್ನು ಲಗ್ನಾನಯನದಲ್ಲಿ ಮಾಡುತ್ತಾ ಬಂದಿದ್ದಾರೆ. ಆದರೆ ಈ ಸೂತ್ರದಲ್ಲಿ ಅಡಗಿರುವ ಮೇರುವಿನ ಗೂಢ ಗಣಿತದ ರಹಸ್ಯದ ಮೇಲೆ ಯಾರೂ ಧ್ಯಾನಿಸುತ್ತಿಲ್ಲ. ಸೂರ್ಯಸಿದ್ಧಾಂತದ ಅಂತಿಮ ಶ್ಲೋಕ ಇಂತಿದೆ:

ಸಃ ತೇಭ್ಯಃ ಪ್ರದದೌ ಪ್ರೀತೋ ಗ್ರಹಾಣಾಮ್ ಚರಿತಮ್ ಮಹತ್ |
ಅತ್ಯದ್ಭುತತಮ್ ಲೋಕೇ ರಹಸ್ಯಮ್ ಬ್ರಹ್ಮಸಮ್ಮಿತಮ್ || ೨೭ ||

ಋಷಿಗಳಿಂದ ಯಾವ ಗ್ರಹಚರಿತಶಾಸ್ತ್ರವನ್ನು ಲೋಕದಲ್ಲಿ ಅದ್ಭುತ ಬ್ರಹ್ಮಜ್ಞಾನರೂಪೀ ರಹಸ್ಯವೆಂದು ನಂಬಲಾಗಿದೆ. ಅದನ್ನು ಗೋಮಾಂಸಭಕ್ಷಕರಿಂದ ದೂರ್ಬಿನ್, ಟೆಲಿಸ್ಕೋಪ್ ಇತ್ಯಾದಿ ಮಾಧ್ಯಮಗಳಿಂದ ಪ್ರಾಪ್ತಗೊಳಿಸಿಕೊಳ್ಳುವುದು ಅಸಂಭವ!

ಮೇರುಗಣಿತವು ದುರ್ಲಭ, ದಿವ್ಯ ಹಾಗೂ ಅನಂತವಾಗಿದೆ. ಇದರ ಕೆಲ ಗಣಿತೀಯ ಪ್ರಮೇಯಗಳ ವರ್ಣನೆಯನ್ನು ೨೦೦೫ನೇ ಇಸವಿಯಲ್ಲಿ ಪ್ರಕಾಶಿತ ಗ್ರಂಥ ’ಸೂರ್ಯಸಿದ್ಧಾಂತ: ದೃಕ್ಪಕ್ಷ ತಥಾ ಸೌರಪಕ್ಷ ಕೀ ಗಣಿತೀಯ ವಿವೇಚನಾ’ ನಾಮಕ ಗ್ರಂಥದಲ್ಲಿ ಮಾಡಲಾಗಿತ್ತು. ಇದರ ವಿಸ್ತಾರ ವರ್ಣನೆಯನ್ನು ಆಗಾಮೀ ಲೇಖನಗಳಲ್ಲಿ ಹಾಗೂ ಸೂರ್ಯಸಿದ್ಧಾಂತದ ಮೇಲೆ ಬರೆಯಲ್ಪಡುತ್ತಿರುವ ಭಾಷ್ಯದಲ್ಲಿ ನೀಡಲಾಗುತ್ತದೆ.
 *********************************************


ವಿಜುಯಲ್ ಬೇಸಿಕ್ VB6 ಕೋಡ್:

ಒಂದು ಫಾರ್ಮ್ ಮಾಡಿಕೊಂಡು ಅದರಲ್ಲಿ ಕಮಾಂಡ್ ಬಟನ್ ಇರಿಸಿ. ಅದರ ಕ್ಲಿಕ್ಕಿಗೆ ನಿಮ್ನೋಕ್ತ ಕೋಡ್ ತುಂಬಿರಿ:
DefDbl D
Private Sub Command1_Click()
 dBhuj = 45.078
 Q = CDec("57.295779513082320876798154814105")
 dM = 0.001
Repeat:
 dLankod = Sin(dBhuj / Q) * Cos(24# / Q) /
           Cos((24# * Sin(dBhuj / Q)) / Q)
 dLankoday = 10# * Q * Atn(dLankod /
             Sqr(-dLankod * dLankod + 1#))
 dLankod2= Sin((dBhuj + dM)/Q) * Cos(24#/Q) /
           Cos((24# * Sin((dBhuj + dM)/Q)) / Q)
 dLankoday2 = 10# * Q * Atn(dLankod2 /
              Sqr(-dLankod2 * dLankod2 + 1#))
 Diff = (dLankoday2 - dLankoday) * 30# / dM
 Difference = CDec("299.65160852899271887423655116163") - Diff
 If Difference < 0.0000000001 Then GoTo Skip
 dBhuj = dBhuj + 0.000000001
 dK = dK + 1
 GoTo Repeat
Skip:
 dHtMeru = 5496744.207 * (1# - Cos((dBhuj - 45#) / Q))
 Debug.Print Diff; dBhuj; dHtMeru; dK; Difference; dM
End Sub


ಮೂಲ ಲೇಖಕರು
-      ವಿನಯ್  ಜಾ ಗುರೂಜಿವಾರಣಾಸಿ

ಅಧ್ಯಯನ ಮತ್ತು ಕನ್ನಡಕ್ಕೆ ತರ್ಜುಮೆ
-      ಹೇಮಂತ್ ಕುಮಾರ್ ಜಿ.

ಮೂಲ ಹಿಂದೀ ಲೇಖನ:-