Tuesday, 27 December 2016

ಆಯುರ್ವೇದದಲ್ಲಿ ಮಾಂಸಾಹಾರ : ಖಂಡನೆ (ಭಾಗ-೧)

ಡಾ|| ಕುಮಾರಸ್ವಾಮಿಯವರ ಲೇಖನ ೧ (ಇವರ ಲೇಖನಕ್ಕಾಗಿ ಈ ಶೀರ್ಷಿಕೆಯ ಕೊಂಡಿ ಕ್ಲಿಕ್ಕಿಸಿ)

 

[ಮೇಲ್ಕಂಡ ಲೇಖನಕ್ಕೆ ನಿಜ ವೈದಿಕ ಪರಂಪರೆಯಿಂದ ಪ್ರತ್ಯುತ್ತರವು ಕೆಳಗಿನ ಲೇಖನದಲ್ಲಿದೆ]


ಆಹಾರದ ಮೂಲತತ್ವ ವಿಕಾಸದ ಇತಿಹಾಸ ವೈದಿಕ ಕಾಲ – ೨ : ಒಂದು ಪ್ರತಿಕ್ರಿಯೆ


ಮೊತ್ತ ಮೊದಲಿಗೆ ನಾವು ಭಾರತೀಯರು ತಿಳಿದಿರಬೇಕಾದ ಸತ್ಯವಿಚಾರವೆಂದರೆ ವೇದವೇ ಸಾರ್ವಕಾಲಿಕ ಹಾಗೂ ಸಾರ್ವದೇಶಿಕ ಸತ್ಯ. ನಂತರ ಬಂದ ಸಾಹಿತ್ಯಗಳೆಲ್ಲ ಪರಮಸತ್ಯವೆಂದು ಹೇಳಲು ಬರುವುದಿಲ್ಲ. ಭಾರತೀಯ ಗುರುಕುಲ ಪದ್ಧತಿಯಲ್ಲಿ ಚತುರ್ದಶ ವಿಧ್ಯೆಗಳು ಮಹತ್ತರ ಸ್ಥಾನವನ್ನು ಪಡೆದಿವೆ. ಅದರಲ್ಲಿ ವೈಧ್ಯವೂ ಒಂದು. ಸಮಗ್ರ ವೇದ ಪರಿಕಲ್ಪನೆಯಿಂದ ಆರಂಭಿಸಿ ಇಂದು ಸಿಗುವ ಚತುರ್ವೇದಗಳ ಆದ್ಯಂತದಲ್ಲೆಲ್ಲ ಈ ವೈಧ್ಯ ವಿಧ್ಯೆಯು ಹಾಸುಹೊಕ್ಕಾಗಿದೆ. ಸಕಲ ಚರಾಚರ ಸೃಷ್ಟಿಯ ಪೂರ್ವವೇ ಗರ್ಭ. ಆ ಗರ್ಭದಲ್ಲೇ ಆಹಾರ ಚಕ್ರವು ಸ್ಥಿತವಾಗಿರುತ್ತದೆ. ಗರ್ಭದಿಂದ ಪ್ರಕೃತಿಯು ಎಲ್ಲ ಜೀವ ಪ್ರಭೇದಗಳನ್ನು ಸೃಜಿಸಿತು. ಈ ಅನ್ನ ಚಕ್ರವನ್ನು ಬ್ರಹ್ಮನು ಮಿದುಳಿನಲ್ಲಿಯೇ ಸ್ಥಾಪಿಸಿದ್ದಾನೆ. ಅದನ್ನೆಲ್ಲ ಗಣಿತ ಸಮೀಕರಣಗಳಲ್ಲಿ ವೇದವು ವಿಸ್ತಾರವಾಗಿ ವಿವರಿಸುತ್ತದೆ. ಆಗಲೇ ಆಹಾರ ಚಕ್ರವು ಗಣಿತಾತ್ಮಕವಾಗಿ ನಿರ್ಣಯವಾಗಿತ್ತು. ಏಕಕಾಲದಲ್ಲಿ ೮೪ ಲಕ್ಷ ಜೀವ ಪ್ರಭೇದಗಳಲ್ಲಿ ಚೈತನ್ಯದ ಆವೇಶದ ಮುಖೇನ ಜೈವಿಕ ವ್ಯಾಪಾರ ಪ್ರಕ್ರಿಯೆ ಚಾಲನೆಗೊಂಡಿತು. ಆಗಲೂ ಆಹಾರ ಸರಪಳಿ ಎಂಬುದು ಸುವ್ಯವಸ್ಥಿತವಾಗಿದ್ದಿತು. ಈ ಪ್ರಭೇದಗಳಲ್ಲಿ ಮನುಷ್ಯನೂ ಒಬ್ಬ. ಆದರೆ ಪ್ರತ್ಯೇಕತೆಯನ್ನು ಹೊಂದಿದ್ದ ವರ್ಗ. ಈ ಎಲ್ಲಾ ವಿಚಾರಗಳನ್ನು ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರು ಪ್ರಕಟಿಸಿದ ತಿರುಕ ಸಂಹಿತಾ – ೪ ಇದರಲ್ಲಿ ನೋಡಬಹುದು:-
ಆದಿಯಲಿ ಬೊಮ್ಮನಿರಲಿಲ್ಲ ಇತ್ತು ಅಂಡವು ಆದಿಶಕ್ತಿಯ ಚಿಂತನೆಯಲೀ
ಆದಿಯಾಯಿತು ಪ್ರಕೃತಿಯ ರೂಪಿನಲಿ ತಾನಾಡುವಾ ಆಡುಂಬೊಲಕೆ ವೇದಿಕೆಯಿದೆಂದು
ಆದಿಶಕ್ತಿಯು ಭ್ರುಕುಟಿಯನು ಬಿಗಿಯಲು ಭೇಧಿಸಿತು ಅಂಡವು 
ಪಸರಿಸಿತು ಭೂಮಿಯಾಯ್ತು ಪಂಚಭೂತಗಳಾದವು |
ಹಾದಿಯಿಂದ ಭೂ, ಜಲ ತತ್ವದಲಿ ಬ್ರಹ್ಮ ಸೃಷ್ಟಿಯಾಗಲಿ ಜಲ ಅಗ್ನಿ ವಾಯು ತತ್ವದಲಿ
ಆದಿನಾರಾಯಣನ ಸೃಷ್ಟಿಸಿ ವಾಯ್ವಾಕಾರದಲಿ ಹರನ ಸೃಜಿಸುತ ತತ್ವಗಳನರಿತು
ಆದಿಯಾಗಲಿ ಸೃಷ್ಟಿಗಿಂದೆಂದು ಆದಿ ಮಾಯೆಯು ಆದೇಶಿಸಲು
ಉಪಕ್ರಮಿಸಿದರು ಮಾತೆಯ ಅನುಜ್ಞೆಗನುಗುಣವಾಗೀ || ೧೧೭ ||

ಮೊದಲು ಗಿಡ, ಮರ, ತರುಲತೆ, ಓಷಧಿಯ ಸೃಜಿಸಿದನು ಬೊಮ್ಮನು
ಅದಲು ಬದಲಾದ ಲೋಹ, ಶಿಲೆ, ರಸ, ಪಾಷಾಣ, ಮೃತ್ ಸೃಜಿಸುತ ಪಾಲನೆ
ಯೊದಗಿಸಿದ ನಾರಾಯಣನು ಈ ವಿಶಾಲ ಪ್ರಕೃತಿಯ ಭೋಗಿಸುವ
ಜೀವಿಯನು ಸೃಜಿಸೆಂದನು ಬೊಮ್ಮನಲೀ |
ವಿಧಿಯು ಸೃಜಿಸಿದ ಚತುಷ್ಪಾದಿಗಳ, ದ್ವಿಚರಿಗಳ, ಪಾದ ರಹಿತ ಸೂಕ್ಷ್ಮಾಣು ಜೀವಿಗಳ
ಉದಿಸಿದವು ಲೋಕದಲಿ ಮೇಲಾಟ, ಏರಾಟ ಹೆಚ್ಚಿತೈ ಲೋಕದಲಿ ಉರಗ ಸಂತತಿ ಬೆಳೆಯಿತು
ಒದಗಿಸಲು ಆಹಾರವದರಿಂದ ವಿಪರೀತ ಸೃಷ್ಟಿಯಾಯಿತು
ಅವುಗಳ ಮೇಲಾಟ ತಡೆಯಲು “ಅನ್ನ ಚಕ್ರವಾ” ಸೃಜಿಸಿದಾ ||೧೧೮ ||

  ಸೂಕ್ಷ್ಮಜೀವಿಯು ಹುಲ್ಲಿಗೆ, ಹುಲ್ಲು ಹುಲ್ಲೆಗೆ, ಹುಲ್ಲೆಯು ಹುಲಿಗೆಂಬಾ ಈ ಚಕ್ರದಾ
ಸೂಕ್ಷ್ಮ ಪರಿಭ್ರಮಣದಾಧಾರದಲಿ ಹಲವು ಜೀವಿಗಳು ಉದಿಸಿದವು ಚಕ್ರಗುಣಕನುವಾಗಿ
ಸೂಕ್ಷ್ಮತೆಯು ಹೆಚ್ಚಿತೈ ಒಟ್ಟು ಎಂಬತ್ತನಾಲ್ಕು ಲಕ್ಷ ಜೀವಿಗಳುದಿಸಿದವು ಲೋಕ, 
ಲೋಕವರಿಯದ ವೈಖರಿಯು ಇರಲಿಲ್ಲಾ |
ಸೂಕ್ಷ್ಮತೆಯ ಚಿಂತನೆಗೆ ಹಚ್ಚಲು ಪ್ರಕೃತಿ ಸಹಜ ಉತ್ಪಾದಕತೆಗೆ ಪೂರಕವಿರಲು ಅಸಹಜ
ಸೂಕ್ಷ್ಮತೆಯನರಿಯದ ಈ ಚರಾಚರ ಜೀವಿಗಳು ಆದಿಶಕ್ತಿಯ ಮನೋಲ್ಲಾಸಕೆಣೆಯಿಲ್ಲವೆಂದು
ಸೂಕ್ಷ್ಮದಲಿ ಚಿಂತಿಸುತ ವಿಧಿಯು ಈ ಜೀವಿಗಳು ಋಣ, ಕರ್ಮ, ಭೋಗವನಳೆದು ಇಬ್ಬಗೆಯಲಿ 
ಆರು ಚಕ್ರವ ಸೃಜಿಸಿದಾ ||೧೧೯||


  ಹರಿಯು ಪೇಳಿದ ಕೇಳು ಬೊಮ್ಮನೆ ಈ ಜೀವಿಗಳಿಗೆ ಕರ್ಮದ ಬಂಧ ಜೀವನ
ಹರಿದು ಕರ್ಮವ ತಿಂಬ ಜೀವಿಯ ಸೃಜಿಸಿದರೆ ಕರ್ಮ ಬೆಳೆಯುವುದು ಕಠಿಣತೆಯು
ಅರಿಯಲಾಗದು ವ್ಯರ್ಥ ಸೃಷ್ಟಿಯ ಮಾಡದಿರು ಈ ಕರ್ಮಗಳ ಭುಂಜಿಪ ಜೀವಿಯನು ಸೃಷ್ಟಿಸಿ  
ಕರ್ಮ ನಾಶ ಮಾಡೆಂದಾ |
ಹರಿಯಾಣತಿಯನೊಡಗೊಂಡು ಬೊಮ್ಮ ಆರುಚಕ್ರವ ನಿಲಿಸಿ ಅಸ್ಥಿಯ ಮಹಾಭೇರದರಿವಿನಿಂ
ಮಾನವನ ಸೃಜಿಸಿ “ತಲೆಯೊಳಗೆ ಸಹಸ್ರಾರದಲಿ ನಿಲ್ಲಿಸಿದ ಅನ್ನಚಕ್ರವನು”
ಹರಿಯಲೀ ಈ ಭುವಿಯ ಸಂಚಿತ ಕರ್ಮಶೇಷವೇ ಮಾನವಗೆ ಆಹಾರ ನಿತ್ಯದುತ್ಪನ್ನವೇ 
ಕರ್ಮ ತಿಳಿಯೆಂದಾ || ೧೨೦ ||

ಒಟ್ಟು ಅಜಾಂಡದಲಿ ಇರುವ ಜೀವಿಯು ತನ್ನ ಜೀವನ ಕರ್ಮ ಶೇಷವ ಅರ್ಜಿಸುತ
ಬಿಟ್ಟು ಮಾನವನಾಗಿ ಹುಟ್ಟಿಯದರನು ಭುಂಜಿಸುತ ಕಡೆಯಲಿ ಶೇಷ ತೀರಲು
ಕಟ್ಟಕಡೆಯಲಿ ಮೂಲಚೈತನ್ಯದೊಡತಿಯಲಿ ಸೇರಲಿ ಎಂದು ಸೃಜಿಸಿದ ಮಾನವನ ಬೊಮ್ಮನೂ |
ಇಟ್ಟನೈ ತಲೆಯಲಿ ಅನ್ನ ಚಕ್ರವ ಮನದೊಳು ತಿಂಬನ್ನ ನಾಲ್ಕು ಭೌತಿಕದಿ ತಿಂಬನ್ನವೊಂದು
ಕೊಟ್ಟನೈ ಸಕಲ ಪ್ರಕೃತಿಯ ಆನಂದ ಅನುಭೂತಿಗಳನನುಭವಿಸುವುದು ಇರಲಿ
ಬಿಟ್ಟಿರಿ ವಾಕ್ ಚಕ್ಷು ಘ್ರಾಣ ಶ್ರವಣಗಳನ್ನವದು ಪ್ರಕೃತಿಯದು ಉದರಕಿದೆ ಬೇರನ್ನ 
ಚಿಂತಿಸದಿರೆಂದನೂ || ೧೨೧ ||

ಉದರದನ್ನವು ತಾನು ಋಣ, ಕರ್ಮ, ಭವವನಾಧರಿಸಿ ಹೊಟ್ಟೆಯ ಸೇರಿ
ಸದರಗೊಳ್ಳದು ಪಚನವಾಗದು ನಾನಾ ಕರ್ಮಕನುಗುಣವಾಗಿ ಅಲೆಯುತ
ಉದರ ಸ್ನಾಯುಗಳ ಬಿಗಿತ ನೋವಿಗೆ ಕಾರಣವು ಮೊದಲನೆಯ ಕರ್ಮಬಂಧದ ನೋವದೂ |
ಉದರ ಭಾಷೆಯ ಕೇಳು ನಿನ್ನಾಸೆ ಬಿಡು ನಿನ್ನ ನಾಲಿಗೆಯ ಚಪಲವ ಬಿಡು ನಾ
ನುದರ ಕಾಣೆಲೊ ಮನುಜ ನೀನೇನೇ ತಿನ್ನು ನಿನಗದು ಸಮಾನ ಋಚಿಯಲಿ
ಆದರದಿ ನೀ ತಿಂದರೇನಹುದು ನನಗರಿಯದೆಂದು ಪೇಳುವೆ ನೀ ತಿಂದನ್ನ ಎನಗಲ್ಲವೆನ್ನುವುದೂ || ೧೨೨ ||

  ಕಾಲದೇಶವ ತಿಳಿದು ಬಾಲಬುದ್ಧಿಯ ಬಿಟ್ಟು ಚಾಲಕನು ಈ ದೇಹಕೆ ನೀನೆಂದು ಅರಿತು
ಕಾಲಕಾಲಕೆ ದೇಹ ಪೋಷಣೆ ರಕ್ಷಣೆಯ ಉದ್ದೇಶದಿಂದ ನೀ ಉದರದನ್ನವ ತಿಂದು
ಕಾಲನಾ ತುಳಿತದಿಂ ದೂರ ನಿಲ್ಲಲು ಬೇಕು ನಿನಗೀದೇಹ ಸರ್ವಾರ್ಥ ಸಾಧನವು ಬಾಳಿ ಸಾಧಿಸಬೇಕು 
ಕಾಣಯ್ಯಾ |
ಬಾಲತನದಲಿ ಚಪಲದಿಂ ನೀನು ನಿನ್ನನ್ನ ಹೊರತುಪಡಿಸಿ ತಿಂದೆಯಾದರೆ ಕೇಳು
ಕಾಲನಾದೇಶಿಸುವನು ರೋಗಾದಿಗಳಿಗೆ ಅವು ನಿನ್ನ ಪೀಡಿಸುತಿರಲು ಕಾಯ್ವರಾರೈ
ಕಾಲನೇ ಲೋಕದಧಿಪತಿ ಪ್ರಕೃತಿಯೇ ನಿನ್ನ ದೇಹವು ಅವರೀರ್ವರು ಸತಿಪತಿಗಳೆಂಬುದ
 ಮರೆಯಬೇಡಾ || ೧೨೩ ||

ವೇದವೇ ಮೊದಲ ಜ್ಞಾನ ಭಂಡಾರ. ವೇದವೇ ವೈಧ್ಯ ವಿಧ್ಯೆಯ ಮೂಲ. ಅದರಲ್ಲಿ ಕೃಷಿ ಮಾಡಿ ಬೆಳೆ ತೆಗೆದವರೇ ಋಷಿಗಳು. ಅವರ ಬೆಳೆಯನ್ನು ಸಮಾಜದಲ್ಲಿ ಬಳಸುವ ಹಂತದಲ್ಲಿ ಜನರು ಅವರವರ ರುಚಿಗ್ರಾಹಿ ಶಕ್ತಿಯಿಂದ ಆಸ್ವಾದಿಸುವ ಮತ್ತು ಜೀರ್ಣಿಸಿಕೊಳ್ಳುವ ಪ್ರಯತ್ನ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯ ಸ್ವೀಕೃತ ಶಕ್ತಿಯು ಪ್ರತ್ಯೇಕವಾಗಿಯೇ ಇರುತ್ತದೆ. ಹಾಗಾಗಿ ಋಷಿ ಪ್ರೋಕ್ತ ವೈಧ್ಯಾಗಮವು ಕಾಲಘಟ್ಟದಲ್ಲಿ ವಿಭಿನ್ನತೆಯನ್ನು ಪಡೆಯಿತು. ಎಷ್ಟೆಷ್ಟೋ ವೈಧ್ಯರು ಮೂಲ ವೈಧಿಕ ವೈಧ್ಯ ಪದ್ಧತಿಯ ಅನುಸಂಧಾನವನ್ನೂ ಆಯಾ ಕಾಲದಲ್ಲಿ ಪುನರುತ್ಥಾನ ಗೊಳಿಸುತ್ತಾರೆ. ಅಂದಾಜು ೩೫೦೦ ವರ್ಷದ ಹಿಂದೆ ದೊರೆತಿರುವ ಜ್ಯೋತಿರಾಯುರ್ವೇದ ಸಂಹಿತೆಯೇ ಈ ವೈಧ್ಯ ಪದ್ಧತಿಯ ಲಭ್ಯ ಅತೀ ಪುರಾತನ ಗ್ರಂಥ. ಅದು ವೇದಕ್ಕೆ ಬಹಳ ಹತ್ತಿರವಿದೆ. ಅದರಲ್ಲಿ ಸರಿಯಾದ ಆಹಾರ ಚಕ್ರ, ಜೀವ ಸಂಕುಲ ವ್ಯಾಪಾರ ವ್ಯವಹಾರ, ಸಾಮಾಜಿಕ ಆರೋಗ್ಯ ಕಾಯ್ದುಕೊಳ್ಳುವ ಸೂತ್ರಗಳನ್ನು ಮೂಲದಲ್ಲಿದ್ದಂತೆಯೇ ಕಾಯ್ದುಕೊಳ್ಳಲಾಗಿದೆ. ಅಂತಹಾ ಸೂತ್ರಗಳಿಂದ ಸಮಾಜದಲ್ಲಿ ರೋಗವೇ ಬರದಂತೆ ತಡೆದಿಟ್ಟ ಧೀಮಂತಿಕೆಯು ಗ್ರಂಥ ಕರ್ತೃ ಶಾರ್ಞ್ಘ್ಯಧರನಿಗೆ ಸೇರಬೇಕು. ಆದರೆ ಬಂಡವಾಳಶಾಹಿ ಮುತ್ಸದ್ದಿಗಳೂ ಆತನ ಅವಸಾನಕ್ಕೆ ಕಾರಣರಾದರು. ಪುನಃ ಅಜ್ಞಾನದ ವೈಧ್ಯ ಪದ್ಧತಿಯು ಬೆಳೆಯತೊಡಗಿತು. ಅದಕ್ಕೆ ಕಾಲಘಟ್ಟದಲ್ಲಿ ಪ್ರತಿರೋಧವು ವ್ಯಕ್ತವಾಗಿದ್ದರೂ ಪ್ರಕೃತಿಯು ಕ್ಷೀಣ ವೃತ್ತಿಯತ್ತಲೇ ಹೋಗುವ ಯುಗಧರ್ಮದ ಪ್ರಭಾವವೋ ಎಂಬಂತೆ ಕಲಿ ಎಂದರೆ ಅಜ್ಞಾನದ್ದೇ ಮೇಲುಗೈ ಆಯಿತು. ಅದಕ್ಕೆ ಪೂರಕವಾಗಿ ಭಾರತದ ಮೇಲೆ ನಡೆದ ವಿದೇಶೀ ಬಂಡುಕೋರರ ಧಾಳಿಯು ಈ ವೈಧ್ಯ ಪದ್ಧತಿಯನ್ನು ತಿರುಚಿ, ಗಿಡಮೂಲಿಕೆಗಳನ್ನು ನಾಶಗೊಳಿಸಿ, ಪಂಡಿತರನ್ನು ಮಣಿಸಿ, ಗ್ರಂಥಗಳನ್ನು ಪ್ರಕ್ಷಿಪ್ತಗೊಳಿಸಿ, ಸಮಾಜದಲ್ಲಿ ರೋಗ ಹಾಗೂ ಅದರ ಭಯ ಭಿತ್ತಿ, ವೈಧ್ಯವೆಂದರೆ ವ್ಯಾಪಾರ; ಅಲ್ಲ, ವ್ಯಭಿಚಾರಕ್ಕೂ ನೀಚವಾದ ವೃತ್ತಿ ಎಂಬಾಗುವಂತಹಾ ಕಾಲಘಟ್ಟದಲ್ಲಿ ಬಂದು ತಲುಪಿದೆ. 

ಇಂತಹಾ ಸಂದರ್ಭದಲ್ಲಿ ವೈಧ್ಯ ವಿಧ್ಯೆಯ ಸತ್ಯದ ಬೆಳಕನ್ನು ತೋರಲು ಅವೈಧ್ಯನಾಥರ ಶಿಷ್ಯರಾದ ಕೆ.ಎಸ್. ನಿತ್ಯಾನಂದಿಜ ವೈಧ್ಯಾಗಿ ನಮಗೆಲ್ಲ ವೇದೋಕ್ತ ಮೂಲ ಆಯುರ್ವೇದದ ದರ್ಶನ ಮಾಡಿಸುತ್ತ ಸಮಾಜದಲ್ಲಿ ಅದರ ಪುನರುತ್ಥಾನಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಅಪ್ತವಚನ ಹಾಗೂ ದೊರಕಿರುವ ಇತರೆ ಪುರಾತನ ವೈಧ್ಯ ಹಸ್ತಪ್ರತಿಗಳು, ನಾಣ್ಣುಡಿಗಳು, ಇತರೆ ಪಾರಂಪರಿಕ ವೈಧ್ಯರ ಸತ್ಸಂಗ, ಸಿರಿಭೂವಲಯ ಎಂಬ ಕಾಲಾತೀತ ಕಾವ್ಯದ ಆದರ್ಶದ ನೆಲೆಯಲ್ಲಿ ಪ್ರಸಕ್ತ ಲೇಖನದಲ್ಲಿ ಕಂಡುಬಂದಂತಹಾ ಕೆಲ ವ್ಯತಿರಿಕ್ತ ವಿಚಾರಗಳಿಗೆ ಪ್ರತಿಕ್ರಿಯಿಸಲಾಗಿದೆ. ಹಿಂದಿನ ಸಂಚಿಕೆಯ ಆಹಾರ ಲೇಖನದಲ್ಲಿ ಕಂಡುಬರುವ ವ್ಯತಿರೇಕ ಹೇಳಿಕೆಗಳಿಗೆ ಮುಖ್ಯ ಕಾರಣವು ಬ್ರಿಟೀಷರ ಕುತಂತ್ರವೆನ್ನುವುದರಲ್ಲಿ ಸಂಶಯವಿಲ್ಲ. ಎಂತಹಾ ಬುದ್ಧಿವಂತರಿಗೂ ಹೊಳೆಯದ ತೆರದಲ್ಲಿ ಗ್ರಂಥಗಳನ್ನು ತಿದ್ದಿ ತೀಡಿದ್ದಾರೆ. ಇನ್ನು ಚರಕ, ಸುಶ್ರುತರೇ ವೈಧ್ಯಶಾಸ್ತ್ರದ ಪಿತಾಮಹರು ಎಂಬಂತೆ ಈಗ ಪ್ರಚಲಿತವಿದೆ. ಆದರೆ ಅವರ ಗ್ರಂಥಗಳೂ ಮೂಲ ವೇದೋಕ್ತ ಪದ್ಧತಿಯನ್ನು ಬಿಟ್ಟು ಬಂಡವಾಳಶಾಹಿ ಪ್ರವೃತ್ತಿಯನ್ನು ಆಧರಿಸಿಯೇ ಮುಂದುವರೆದವು. ಎಲ್ಲೋ ಅಲ್ಲಿ ಇಲ್ಲಿ ಸ್ವಲ್ಪ ಸೂತ್ರಗಳು ಸರಿ ಇದ್ದಾಗ್ಯೂ ಇತ್ತೀಚಿನ ೨೦೦-೩೦೦ ವರ್ಷದಲ್ಲಿ ಏನಕ್ಕೇನೋ ದುರ್ವ್ಯಾಖ್ಯಾನವಾಗಿದೆ. ಅದನ್ನು ವ್ಯಾಖ್ಯಾನಿಸಿರುವ ಪಂಡಿತರಿಗೆ ದೇಹಶಾಸ್ತ್ರದ ಕಿಂಚಿತ್ತೂ ಜ್ಞಾನವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ನೂತನ ಆಯುರ್ವೇದ ಪ್ರಕಾರವಾಗಲೀ ಅದರಿಂದ ಇನ್ನೂ ನೀಚವಾಗಿ ಕವಲೊಡೆದು ಹೋದ ಆಲೋಪತಿಯಾಗಲೀ ಅಲ್ಲೆಲ್ಲ ರೋಗ ನಿಧಾನವಂತೂ ಪೂರ್ಣ ಅದ್ವಾನವಾಗಿಬಿಟ್ಟಿದೆ!

        ಭಾರತವು ಗ್ರಾಮಗಳಿಂದಲೇ ಉಂಟಾಗಿರುವ ರಾಷ್ಟ್ರ. ಗ್ರಾಮದ ಪರಿಕಲ್ಪನೆಯೂ ಈಗ ಉಳಿದಿಲ್ಲ ಬಿಡಿ. ಆದರೆ ಗ್ರಾಮ ಎಂದರೆ ಹೇಗಿರಬೇಕು, ಹೇಗಿತ್ತು ಎಂದು ಅಗಸ್ತ್ಯರು ತಮ್ಮ ತಂತ್ರಶಾಸ್ತ್ರದಲ್ಲಿ ಸುಸ್ಪಷ್ಟವಾಗಿ ವಿವರಿಸಿದ್ದಾರೆ. ಬ್ರಿಟೀಷರು ಬರೆದ ಇತಿಹಾಸ ಬಿಟ್ಟು ಭಾರತೀಯ ರಾಷ್ಟ್ರಭಕ್ತಿಯುಳ್ಳ ಶುದ್ಧ ಮನಸ್ಸಿನಿಂದ ನೋಡಿದರೆ ಗ್ರಾಮೀಣ ಪ್ರದೇಶದಲ್ಲಿರುವ ಜನಜೀವನ, ಆಹಾರ-ವಿಹಾರ, ಸಾಮಾಜಿಕ ಕಳಕಳಿ, ಒಗ್ಗಟ್ಟು ಹಾಗೂ ವೈಧ್ಯ ಪದ್ಧತಿಯೇ ಅತೀಶ್ರೇಷ್ಠವೆಂಬುದರಲ್ಲಿ ಸಂಶಯವೇ ಬರಲಿಕ್ಕಿಲ್ಲ. ಈ ನಿಟ್ಟಿನಲ್ಲಿ ಗ್ರಾಮ್ಯ ಎಂಬ ಶಬ್ದದ ಉತ್ಪತ್ತಿ ಇರುತ್ತದೆ. ಸಿರಿಭೂವಲಯ ಚಿಂತನೆಯಲ್ಲಿ ತಾನೇ ತಾನಾಗಿ ಬಂದಂತಹಾ ಕೆಲ ವಿಚಾರಗಳಲ್ಲಿ ಅರಣ್ಯ ಎಂಬ ಶಬ್ದದ ವ್ಯುತ್ಪತ್ತಿಯೂ ಬಂದಿತ್ತು. ಅದರ ಸ್ಥೂಲ ವಿವರಣೆ ಎಂದರೆ ರಣವಿಲ್ಲದ ಸ್ಥಳ ಎನ್ನಬಹುದು. ರಣವಿಲ್ಲದ ಅರಣ್ಯದಲ್ಲಿಯಾಗಲೀ ಗ್ರಾಮ್ಯದಲ್ಲಾಗಲೀ ಮನುಷ್ಯನಿಗೆ ಮಾಂಸಾಹಾರವಿರಲಿಲ್ಲ! ಎಲ್ಲವೂ ತಮ್ಮ ಸಹಜೀವಿಗಳು ಎಂಬ ಸಾಹಚರ್ಯವಿತ್ತೇ ಹೊರತು ತಿನ್ನುವುದಕ್ಕಾಗಿ ಪ್ರಾಣಿ-ಪಕ್ಷಿಗಳ ಮಾರಣ ಪ್ರಕ್ರಿಯೆ ಇರಲೇ ಇಲ್ಲ. ಅದನ್ನೆಲ್ಲ ಗೊತ್ತಾಗದಂತೆ ತಿರುಚಿ ಹಳ್ಳಿಗಳಲ್ಲಿ ವಾಸಿಸುವವರು ಜನಪದರು, ಅವರು ದಡ್ಡಶಿಖಾಮಣಿಗಳು, ಅನಾಗರೀಕರು, ಸಿಕ್ಕಿದ್ದನ್ನೆಲ್ಲ ಕೊಂದು ತಿನ್ನುವವರು ಎಂಬಂತೆಲ್ಲ ಚಿತ್ರಣವನ್ನು ಮೂಡಿಸಿದ್ದು ಬ್ರಿಟೀಷ್ ನಾಯಿಗಳು!!


ಈಗ ಹಿಂದಿನ ಸಂಚಿಕೆಯ ಲೇಖನದಲ್ಲಿ ಕಂಡುಬಂದಂತಹಾ ಆತ್ರೇಯರು ನೀಡಿದ್ದರು ಎಂದು ಉಲ್ಲೇಖಿಸಲ್ಪಟ್ಟ ಪಟ್ಟಿಯಲ್ಲಿ ಜೀವಹಿಂಸೆ, ಮಾಂಸಭಕ್ಷಣೆ ಇತ್ಯಾದಿಗಳು ಯಾವುದೋ ಕಾಲದಲ್ಲಿ ಗ್ರಾಮ್ಯ ಮನುಷ್ಯನ ಆಹಾರ ಆಗಿದ್ದವು ಎಂದು ಆತ್ರೇಯರು ಪಟ್ಟಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದು ಬ್ರಿಟೀಷರ ಕುಟಿಲ ಕುತ್ಸಿತ ಕೈಚಳಕ. ಆ ಮೋಸಗಾರಿಕೆಯನ್ನು ಬಯಲು ಮಾಡುವ ಕಿಂಚಿತ ಪ್ರಯತ್ನ ಮಾಡಲಾಗಿದೆ. ಅದಕ್ಕೆ ಕೆಲ ಶಬ್ದಗಳನ್ನು ದೃಷ್ಟಾಂತಕ್ಕಾಗಿ ತರ್ಕಶಾಸ್ತ್ರ ರೀತಿ ಪ್ರಸ್ತುತಪಡಿಸಿ ಖಂಡಿಸಲಾಗಿದೆ.

೧. ಏಣ = ಜಿಂಕೆ ಎಂದು ನೀಡಿ ಅದರ ಮಾಂಸ ಭಕ್ಷಣೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಲಭ್ಯ ಭಾರತೀಯ ಮೃಗಪಕ್ಷಿಶಾಸ್ತ್ರದಲ್ಲಿ ಕೆಳಕಂಡ ೧೪ ಪ್ರಭೇದದ ಜಿಂಕೆಗಳನ್ನು ಹೇಳಿದೆ:- ಮೃಗ, ಕುರಂಗ, ವಾತಾಯು, ಹರಿಣ, ವಾತಮೃಗ, ಕೃಷ್ಣಸಾರ, ರುರು, ನ್ಯಂಕು, ಸಂಬರ, ರಂಕು, ರೋಹಿತಾಕ್ಷ, ಏಣ. ಗಂಧರ್ವ. ಈ ಗಂಧರ್ವದಲ್ಲಿ ೫ ಪ್ರಭೇದವಿದೆ:- ಗಂಧರ್ವ, ಶರಭ, ರಾಮ, ಶ್ರೀಮರ, ಗವಯ. ಇಲ್ಲಿ ಪ್ರಶ್ನೆ ಏನೆಂದರೆ (ವಿದೇಶೀ ಬಂಡುಕೋರರು ತಿದ್ದಿ ಬರೆಸಿರುವ) ಆಧುನಿಕ ಆಯುರ್ವೇದ ಗ್ರಂಥದಲ್ಲಿ ಈ ವಿವಿಧ ಪ್ರಭೇದದ ಜಿಂಕೆಮಾಂಸಭಕ್ಷಣೆಯ ಮಾಹಿತಿ ಇದ್ದರೆ ಒದಗಿಸಿ ಕೊಡಬೇಕಾಗಿ ವಿನಂತಿ. ಇಲ್ಲದಿದ್ದರೆ ೧೪ ಪ್ರಭೇದದ ಜಿಂಕೆಗಳಲ್ಲಿ ಏಣವನ್ನೇ ಏಕೆ ಪ್ರಾಚೀನರು ತಿನ್ನುತ್ತಿದ್ದರು ಎಂದು ವಿವರಣೆ ಕೊಡಬೇಕಾಗುತ್ತದೆ. ಉಳಿದವುಗಳ ಸಂಶೋಧನೆ ಆಗಿಲ್ಲವೇ? ಏಣವೆಂದರೆ ಜಿಂಕೆ ಎಂದೇ ಹೇಗಾಗುತ್ತದೆ? ’ಅಣ್’ ಧಾತು ಎಂದು ಆಪ್ಟೆ ಶಬ್ದಕೋಶ ಹೇಳುತ್ತದೆ. ಏಣ ಎಂದರೆ ಜಿಂಕೆ ಹೇಗಾಗುತ್ತದೆ ಎಂದು ಶಬ್ದೋತ್ಪತ್ತಿ ನಿಯಮ ನೀಡಬೇಕಾಗಿ ಕೋರಿಕೆ. ಏಣ ಎಂದರೆ ಮಕರ ಎಂದೂ ಆಧುನಿಕ ಸಂಸ್ಕೃತ ಶಬ್ದಕೋಶ ಹೇಳುತ್ತದೆ. ಹಾಗಾದರೆ ಮಕರ = ಮೊಸಳೆಯನ್ನು ತಿನ್ನಬೇಕು ಅಥವಾ ಹಿಂದಿನವರು ತಿನ್ನುತ್ತಿದ್ದರು ಎಂದರ್ಥವೇ? ಬ್ರಾಹ್ಮಿ ಮತ್ತು ಪ್ರಾಕೃತದಲ್ಲಿ ಏಣ ಎಂದರೆ ನೇರವಾಗಿ ಜಿಂಕೆಯಲ್ಲ, ಏಣ ಪ್ರವರ್ತನೆಯನ್ನು ಜಿಂಕೆಯೂ ಹೊಂದಿರುತ್ತದೆ. ಬ್ರಾಹ್ಮಿಯಲ್ಲಿ ಇದಕ್ಕೆ ಬಹಳ ವಿಶಾಲಾರ್ಥವಿದೆ ಎಂದು ಕಂಡುಬರುತ್ತದೆ. ಅದು ವೇದದಲ್ಲೂ ಪ್ರಯೋಗವಾಗಿದೆ. ಅದನ್ನೇಕೆ ತಥಾಕಥಿತ ಆಧುನಿಕ ಆಯುರ್ವೇದ ಶಾಸ್ತ್ರರಚನಾಕಾರರು ಗಮನಿಸಿಲ್ಲ?

೨. ಲಾವ = ಮೊನಿಯರ್ ವಿಲಿಯಮ್ಸ್ ಸಂಸ್ಕೃತ ಶಬ್ದಕೋಶದಲ್ಲಿ ಲಾವ ಎಂದರೆ ತುಂಡರಿಸುವುದು, ಕತ್ತರಿಸುವುದು, ಹತ್ತಿಕ್ಕುವುದು, ಕೊಲ್ಲುವುದು, ಹೆಕ್ಕುವುದು, ಹಣ್ಣಾಗುವುದು, ಒಗ್ಗೂಡುವುದು, ಎಂಬ ವಿಶೇಷಣವುಳ್ಳ ಅರ್ಥಗಳೇ ಸಿಗುತ್ತಿವೆ ಹೊರತು ಯಾವ ಪಕ್ಷಿ ಎಂದು ತಿಳಿದು ಬರುತ್ತಿಲ್ಲ. ಅಲ್ಲಿ ’ಸ ಶತ್ರುಲಾವೌ ಮನ್ವಾನಃ’ ಎಂಬ ಉದಾಹರಣೆಯೂ ಇದೆ. ಇನ್ನು ಆಪ್ಟೆ ಶಬ್ದಕೋಶದಲ್ಲಿ ಲಾವ = “ಲೂ ಕರ್ತರಿ ಘಞ್” ಎಂಬ ವ್ಯಾಕರಣ ನಿಯಮ ನೀಡಿದ್ದಾರೆ. ಕುಶ ಸೂಚೀ ಲಾವಂ ಎಂಬ ಉದಾಹರಣೆಯೂ ನೀಡಿದ್ದಾರೆ. ದಯವಿಟ್ಟು ನಿಖರವಾಗಿ ಅದು ಯಾವ ಪಕ್ಷಿ? ಅದರ ಮಾಂಸವೇ ಏಕೆ ಶ್ರೇಷ್ಠ ಎಂದು ವೈಜ್ಞಾನಿಕವಾಗಿ ತಿಳಿಸಿಕೊಡಬೇಕು.

        ಆಧುನಿಕ ತಿದ್ದಿ ತೀಡಿರುವ ಶಬ್ದಕೋಶಗಳಲ್ಲಿ ಸರಿಯಾದ ಮಾಹಿತಿ ಸಿಕ್ಕದಿದ್ದರೂ ಪ್ರಾಚೀನ ಮೃಗಪಕ್ಷಿಶಾಸ್ತ್ರದಲ್ಲಿ ಪ್ಲವ, ತಿತ್ತಿರಿ, ಕುಕ್ಕುಭ, ಲವ, ಕೋಯಷ್ಠಿ, ಹರಿತ, ಇತ್ಯಾದಿ ಹಲವು ಪ್ರಭೇದಗಳೂ, ಅವುಗಳೊಳಗೆ ಪ್ರಾದೇಶಿಕವಾಗಿ ಇನ್ನೂ ಹಲವಾರು ಉಪಪ್ರಭೇದಗಳಿವೆ ಎಂದು ವಿವರಿಸುತ್ತದೆ. ಹಾಗಾದರೆ ಅವುಗಳನ್ನೆಲ್ಲ ಏಕೆ ಪ್ರಾಚೀನರು ತಿನ್ನುತ್ತಿರಲಿಲ್ಲ? ಲಾವ ಮಾತ್ರವಾದರೆ ಲಾವದಲ್ಲೂ ಹಲವು ಪ್ರಭೇದಗಳಿರಬೇಕಲ್ಲವೇ? ಅವುಗಳಲ್ಲಿ ಯಾವುದು? ಇನ್ನೂ ಹಲವಾರು ಪ್ರಶ್ನೆಗಳು ಉದ್ಭವಿಸುತ್ತದೆ.

ಹಿಂದುಗಳಲ್ಲಿ ಮಾಂಸ ಭಕ್ಷಣೆಗೆ ಆಧಾರ ಸೃಷ್ಟಿಸುವ ನೆಪದಲ್ಲಿ ಬ್ರಿಟೀಷರು ಅಲ್ಲಲ್ಲಿ ಸಿಗುವ ಪ್ರಸಿದ್ಧ ಪ್ರಾಣಿ-ಪಕ್ಷಿಗಳ ಸುಲಭ ಶಬ್ದಗಳನ್ನು ಹೆಕ್ಕಿ ಅರ್ಥ ತಿರುಚಿದ್ದಾರೆ. ಪ್ರಸಿದ್ಧ ಆಯುರ್ವೇದ ಶಾಸ್ತ್ರಗ್ರಂಥ ಎಂದು ಬಿರುದಾಂಕಿತವಾಗಿದ್ದು ಅದು ಜಿಂಕೆಯ ಮಾಂಸವನ್ನೇ ಹೇಳಬೇಕಿದ್ದರೆ ಏಕೆ ಈ ೧೪ ಪ್ರಭೇದಗಳ ಜಿಂಕೆಯ ಮಾಂಸಗಳನ್ನು ಅವುಗಳ ದ್ರವ್ಯ ಗುಣ ವಿಶ್ಲೇಷಣೆಯನ್ನು ಮಾಡಿಲ್ಲ? ಬರೇ ಏಣ ಎಂಬ ಜಿಂಕೆ ಪ್ರಭೇದದ ಮಾಂಸವೇ ಶ್ರೇಷ್ಠವೇ? ಶ್ರೇಷ್ಠವಾದರೆ ಹೇಗೆ? ಯಾರಿಗೆ? ಯಾವ ಕಾಲಕ್ಕೆ? ಯಾವ ಉದ್ದೇಶಕ್ಕೆ? ಈ ಮಾಂಸಾಹಾರವನ್ನು ಪ್ರಸ್ಥಾಪಿಸುವ ಆಯುರ್ವೇದ ಗ್ರಂಥಗಳು ಮನುಷ್ಯರಿಗೆ ಹೇಳಿದ್ದೋ? ಅಥವಾ ರಾಕ್ಷಸಾಯುರ್ವೇದವೇ?

೩. ಗೋಧಾ = ಬಿಲದಲ್ಲಿ ವಾಸಿಸುವ ಪ್ರಾಣಿಗಳು ಎಂದು ಬರೆಯಲಾಗಿದೆ. ಆದರೆ ಸಂಸ್ಕೃತ ಶಬ್ದಕೋಶಗಳಲ್ಲಿ ಸ್ವರಮೇಳ, ತಂತು, ಒಂದು ರೀತಿಯ ಉಡ, ಎಡ ತೋಳಿಗೆ ಬಿಲ್ಲಿನ ಹಗ್ಗದಿಂದ ಹಿಮ್ಮುಖ ಹೊಡೆತದ ರಕ್ಷಣಾ ಕವಚ (ಗುಧ್ಯತೇ, ವೇಷ್ಟ್ಯತೇ ಬಾಹುರನಯಾ ಕರಣೇ ಘಞ್), ಮಾಂಸಖಂಡಗಳು ಎಂಬ ಅರ್ಥವಿದೆ ಹೊರತು ಬಿಲದಲ್ಲಿ ವಾಸಿಸುವ ಪ್ರಾಣಿವರ್ಗಕ್ಕೆ ಗೋಧಾ ಎಂಬ ಗುಂಪು ಸೂಚಕ ಪದವಿಲ್ಲ. ಇನ್ನು ಕೃಷ್ಣಗೋಧಾ ಒಂದು ವಿಷಾಕ್ತ ಕೀಟ, ಗೃಹಗೋಧಾ ಎಂದರೆ ಗೋಡೆಪಲ್ಲಿ, ತೃಣ ಗೋಧಾ = ಗೋಸುಂಬೆ ಜಾತಿಯ ಸರಿಸೃಪ ಎಂಬ ವಿಭಿನ್ನ ಪ್ರಯೋಗಗಳು ಆಧುನಿಕ ಸಂಸ್ಕೃತದಲ್ಲಿ ಸಿಗುತ್ತದೆಯೇ ಹೊರತು ಬಿಲದಲ್ಲಿ ವಾಸಿಸುವ ಪ್ರಾಣಿಯ ಗುಂಪು ಸೂಚಕ ಶಬ್ದವಲ್ಲ. ಗೋಧಾ ಎಂದರೆ ಗೋವನ್ನು ವಧಿಸುವವರು ಎಂದೂ ಅರ್ಥ ಮಾಡಬಹುದು. ಆದರೆ ಅದಲ್ಲ. ಸಾಧ್ಯವಾದರೆ ಬ್ರಾಹ್ಮಿಯಲ್ಲಿ ಅದರ ಮೂಲವನ್ನು ವೇದದಲ್ಲಿ ತಿಳಿಯುವ ಪ್ರಯತ್ನ ಮಾಡೋಣ. ಋಗ್ವೇದದಲ್ಲಿ ಐಂದ್ರೋ ವಸುಕ್ರ ಋಷಿಗಳು–

ತೇಭ್ಯೋ ಗೋಧಾ ಅಯಥಂ ಕರ್ಷದೇತತದ್ಯೇ ಬ್ರಹ್ಮಣಃ ಪ್ರತಿಪೀಯಂತ್ಯನ್ನೈಃ | 
ಸಿಮ ಉಕ್ಷ್ಣೋಽವಸೃಷ್ಟಾಂ ಅದಂತಿ ಸ್ವಯಂ ಬಲಾನಿ ತನ್ವಃ ಶೃಣಾನಾಃ || (ಋ. ೧೦-೨೮-೧೧)

ಇನ್ನು ಪ್ರಿಯಮೇಧ ಋಷಿಗಳು –

ಅವ ಸ್ವರಾತಿ ಗರ್ಗರೋ ಗೋಧಾ ಪರಿ ಸನಿಷ್ವಣತ್ |
ಪಿಂಗಾ ಪರಿ ಚನಿಷ್ಕದದಿಂದ್ರಾಯ ಬ್ರಹ್ಮೋದ್ಯತಮ್ ||

ಅಂದರೆ ಮೇಧೋವೃದ್ಧಿ ಮಾಡುವ ಬಲವನ್ನು ಸಂಯೋಜಿಸುವ ಸೂತ್ರವನ್ನು ಹೇಳಿದ್ದಾರೆ. ಅದಕ್ಕೆ ಹೇಗೆ ವಾತಾವರಣದಲ್ಲಿನ ಒಂದು ವಿಶೇಷ ಅಂಶವನ್ನು ಘನ + ದ್ರವದಲ್ಲಿ ಸಂಯೋಜಿಸಬಹುದು ಎಂದು ಆಳವಾದ ತರಂಗ ವಿಜ್ಞಾನ ಸಹಿತ ವಿವರಿಸುತ್ತಾ ಹೋಗುತ್ತಾರೆ.

೪.ರೋಹಿತ = ಒಂದು ಬಗೆಯ ಮೀನು ಎಂದು ಬರೆಯಲಾಗಿದೆ. ಆದರೆ ಸಂಸ್ಕೃತ ಶಬ್ದಕೋಶದಲ್ಲಿ ಅದು ಒಂದು ಜಿಂಕೆಯ ಪ್ರಕಾರ, ರಕ್ತ, ಕೆಂಪು ಆಭರಣ ಎಂಬೆಲ್ಲ ಅರ್ಥಗಳೂ ಇರುವಾಗ ಕೆಂಪು ಮೀನನ್ನು ಮಾತ್ರ ಏಕೆ ಹೇಳಿದರು? ಬಹುಷಃ ಗ್ರಂಥದಲ್ಲಿ ಏನೂ ವಿಶೇಷತೆ ಕಂಡುಬರಲಿಕ್ಕಿಲ್ಲ. ಅದಕ್ಕೆ ಏನಾದರೂ ವಿಶೇಷತೆ ಇದೆಯೇ ಎಂದು ನನ್ನ ಮಿತ್ರನೋರ್ವನಲ್ಲಿ ಕೇಳಿದೆ. ಅದಕ್ಕೆ ರಾಣಿ ಮೀನು ಎಂಬುದಿದೆ ಅದು ತಿಳಿಗೆಂಪು ವರ್ಣ ಹೊಂದಿರುತ್ತದೆ. ಆದರೆ ಅದನ್ನು ಕೆಲವರು ತಿನ್ನುತ್ತಾರೆ, ಕೆಲವರು ತಿನ್ನುವುದಿಲ್ಲ ಎಂದರು. ಅದಕ್ಕೊಂದು ಕಥೆಯನ್ನು ಹೇಳಿದರು. ಹಿಂದೆ ಯಾರೋ ದಾಳಿಕೋರರು ಈ ರಾಣಿ ಮೀನನ್ನು ಅಟ್ಟಿಸಿಕೊಂಡು ಬರುವಾಗ ಅದು ಮತ್ಸ್ಯಕನ್ಯೆಯ ರೂಪತಾಳಿ ಅವರನ್ನು ಹೆದರಿಸಿ ಓಡಿಸಿತು ಎಂದರು. ಹಾಗಾಗಿ ಅದಕ್ಕೆ ಧೈವತ್ವ ಆರೋಪವಾಗಿದೆ. ಅದನ್ನು ತಿನ್ನುವುದಿಲ್ಲ ಎಂದರು. ಆದರೆ ಆ ಮೀನು ಅಂತಹಾ ಶ್ರೇಷ್ಠ, ಪ್ರಸಿದ್ಧ ಎಂಬುದಲ್ಲ. ಸಂತೆಯೊಳಗೊಂದು ಬೊಂತೆ ಎಂಬಂತೆ ಇರುತ್ತದೆ. ಆದರೆ ಈಗ ಹಲವರು ಅದನ್ನೂ ತಿನ್ನುತ್ತಾರಂತೆ. ಇನ್ನು ಉಳಿಕೆ ಕೆಂಪು ಮೀನುಗಳನ್ನು ಅಲಂಕಾರಿಕ ಮೀನುಗಳೆಂದು ಸಾಕುತ್ತಾರೇ ಹೊರತು ತಿನ್ನುವುದಿಲ್ಲವಂತೆ. ಹೀಗಿರುವಾಗ ರೋಹಿತ ಎಂಬ ಮೀನು ಯಾವುದದು? ಅದೇಕೆ ಶ್ರೇಷ್ಠ? ಹೇಗೆ ಶ್ರೇಷ್ಠ? ಶ್ರೇಷ್ಠವಾದರೂ ಅದನ್ನೇಕೆ ತಿನ್ನಬೇಕು? ನಿಜವಾಗಿಯೂ ಯಾವ ಭಾರತೀಯ ವೇದಾದರ್ಷವುಳ್ಳ ಆತ್ರೇಯರು ಈ ರೀತಿ ತೀರಾ ಬಾಲಿಶ ಪಟ್ಟಿ ಮಾಡಿರಲು ಸಾಧ್ಯ? ಸ್ವಲ್ಪ ಚಿಂತಿಸಿ.
        
        ಇಂತಹಾ ಗೊಂದಲಮಯ ವಿಚಾರಗಳನ್ನು ಡಾ|| ಕುಮಾರಸ್ವಾಮಿಯವರು ಹಿಂದೆ ಚರ್ಚಿಸುವಾಗ ಸ್ವಾಮೀಜಿಯವರು ನಿಖರವಾಗಿ ಉತ್ತರ ನೀಡಿಯಾಗಿದೆ. ಶ್ರೀಸೂಕ್ತದಲ್ಲಿಯೇ “ಪಶೂನಾಂ ರೂಪಮನ್ನಸ್ಯ” ವಿವರ ೨೬-೦೬-೨೦೧೦ರಲ್ಲೇ ನೀಡಿದ್ದಾರೆ. ಪಶುಗಳಿಗೆ ಅನ್ನಕ್ಕೆ ವಿವೇಚನೆ ಇಲ್ಲ, ಲಭ್ಯಾನ್ನ. ಮನುಷ್ಯನಿಗೆ ಅನ್ನಕ್ಕೆ ವಿವೇಚನೆ ಇದೆ. ಸೂಕ್ತಾಸೂಕ್ತತೆಗಳನ್ನು ವಿವೇಚಿಸಿ ತಿನ್ನಬೇಕು. ಪ್ರಾಣಿಗಳಿಗೆ ಯಾವುದು ಸಿಕ್ಕಿತೋ ಅದೇ ಅನ್ನ. ಆದರೆ ಮನುಷ್ಯನು ಹಾಗೆಲ್ಲ ಸಿಕ್ಕಿದ್ದೆಲ್ಲ ತಿನ್ನುವ ಹಾಗಿಲ್ಲ. ಲಭ್ಯಾಲಭ್ಯತೆ ಚಿಂತನೆ ಇಲ್ಲದೆ, ಅವಿವೇಕತನದಿಂದ ಸಿಕ್ಕಿದ್ದೆಲ್ಲ ತಿನ್ನುವದಕ್ಕೆ ಪಾಶವೀ ಪ್ರವೃತ್ತಿ ಎಂದೇ ಹೇಳಿದೆ. ಅಂದರೆ ಮನುಷ್ಯನಲ್ಲೇ ಪಾಶವೀ ಪ್ರವೃತ್ತಿಯನ್ನು ಆರೋಪಿಸುತ್ತಾರೆ. ಮನುಷ್ಯನು ತನ್ನ ಜೀವನಕ್ಕೆ ನಿರ್ಧಿಷ್ಟ ಗುರಿ, ನಿರ್ಧಿಷ್ಟ ಮಾರ್ಗ, ನಿರ್ಧಿಷ್ಟ ವ್ಯವಸ್ಥೆಯನ್ನು ಮೊದಲೇ ಹಾಕಿಕೊಳ್ಳಬೇಕು. ನಂತರ ಅದನ್ನು ಪೂರೈಸಿಕೊಳ್ಳುವತ್ತ ಪ್ರಯತ್ನ ಮಾಡಬೇಕು. ಅದು ಪೂರೈಸಿದ ತಕ್ಷಣ ಮತ್ತೆ ಅವನು ಸಂಪೂರ್ಣ ನಿವೃತ್ತನಾಗಬೇಕು. ಈಗ ಹಾಗಲ್ಲ, ಗುರಿಗೊಂದು ಮಿತಿಯೇ ಇಲ್ಲ. ಒಂದರ ಹಿಂದೊಂದು ಕುರಿ ಮಂದೆಯಂತೆ ಗುರಿ ಮುಂದುಮುಂದಕೆ ಸಾಗುತಲೇ ಇರುತ್ತದೆ. ಅದಕ್ಕೆ ಕುರಿಗಳು ಸಾರ್, ಕುರಿಗಳು ಎಂದು ಪ್ರಸಿದ್ಧ ಕವನವೇ ಇದೆ.

        ಇನ್ನು ಆತ್ರೇಯರ ವಿಚಾರ ಬರೆಯಲಾಗಿದೆ. ಅದರ ಬಗ್ಗೆಯೂ ಸ್ವಾಮೀಜಿಯವರು ಹಿಂದೆಯೇ ವಿವರಿಸಿದ್ದಾರೆ. ದತ್ತಾತ್ರೇಯರಿಂದ ಆರಂಭಿಸಿ ಅಲ್ಲಿಂದ ತುಂಬಾ ಜನ ಆತ್ರೇಯ ಗುಂಪಿಗೆ ಬಂದು ಸೇರಿಕೊಳ್ಳುತ್ತಾರೆ. ಅಂದಾಜು ಮೂರು ಲಕ್ಷ ಕೋಟಿ ಆತ್ರೇಯರ ಹೆಸರು ಸಿಗುತ್ತದೆ!!! ಅವರ ನಾಮಾವಳಿಗಳ ಶ್ಲೋಕವೇ ಇದೆ. ಎಲ್ಲಾ ನಾಮಪದವುಳ್ಳ ಅದನ್ನು ಹೇಳುವುದಕ್ಕೆ ಒಂದು ತಿಂಗಳು ಬೇಕಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ. ಅಷ್ಟು ಜನ ಆತ್ರೇಯರು ನಮ್ಮ ವೇದ-ತಂತ್ರಭಾಗದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಿಯೂ ಒಂದು ಸಣ್ಣ ಅಂಶವನ್ನು ಸೇರಿಸಿ ಪರಿಷ್ಕರಿಸಲು ಸಾಧ್ಯವೇ ಆಗದಂತೆ ವೇದವನ್ನು ಒಂದು ವ್ಯವಸ್ಥೆಗೆ ತಂದದ್ದು ದತ್ತಾತ್ರೇಯರೇ. ಅದೇ ಮೊದಲ ಪರಿಷ್ಕರಣೆ. ಅದು ಸಮಗ್ರ ವೇದವಾಗಿತ್ತು. ಅದು ಕಷ್ಟವಾಗುತ್ತದೆ ಎಂದು ಪರಾಶರ ವ್ಯಾಸರು ೪ ವಿಭಾಗ ಮಾಡಿದರು. ಹಾಗೇ ದತ್ತಾತ್ರೇಯರು ವೇದದ ಅಂಗೀಕಾರ ಇರುವ ಭಾಗವನ್ನೇ ತೆಗೆದುಕೊಂಡು ತಂತ್ರಶಾಸ್ತ್ರವಾಗಿ ಪ್ರತ್ಯೇಕವಾಗಿ ರೂಪಿಸಿದರು. ತಂತ್ರ ಮತ್ತು ವೇದ ಒಬ್ಬನಿಗೇ ಕೊಟ್ಟರೆ ರಾವಣ, ಬಾಣಾಸುರ, ದೂಷಣ, ತ್ರಿಶಿರ ಇತ್ಯಾದಿ ಬ್ರಾಹ್ಮಣರಾದರೂ ರಾಕ್ಷಸರಾಗಬಹುದು ಎಂದು ವಿಭಜಿಸಿ ಇಟ್ಟರು. ಇವುಗಳನ್ನು ಬಳಸುವುದಕ್ಕೆ ಆಧ್ಯಾತ್ಮಿಕತೆಯ, ಪಾಪ-ಪುಣ್ಯದ ಭೀತಿ ಇರಬೇಕೆಂದು ವಿವೇಚಿಸಿ ತತ್ವಶಾಸ್ತ್ರವನ್ನೂ ರೂಪಿಸುತ್ತಾರೆ. ಈ ರೀತಿ ವೇದ-ತಂತ್ರ-ತತ್ವ ಎಂಬ ೩ ಸಮುಚ್ಛಯಗಳನ್ನು ಪ್ರಪ್ರಥಮವಾಗಿ ವಿಧ್ಯಾರ್ಪಣೆ ಮಾಡಿದವರು ದತ್ತಾತ್ರೇಯರು.
      
       ನಂತರ ಆತ್ರೇಯ ಸಂಪ್ರದಾಯವೇ ನಾಥ ಸಂಪ್ರದಾಯ ಎಂದು ಕರೆಯಲ್ಪಟ್ಟಿತು. ಅದರಿಂದ ಸಾವಿರಾರು ಪಂಥಗಳು ಕವಲೊಡೆದು ಹೋದವು. ಅದರಿಂದಲೇ ಜೈನ ಪಂಥವೂ, ಕಾಪಾಲಿಕ, ಗಾಣಪತ್ಯ, ಶಾಕ್ತ, ಸೌರ, ಅಘೋರ, ಇತ್ಯಾದಿ ಉಪಾಸಕರು ಕವಲೊಡೆದು ಹೋದರು. ಅದರ ಅನುಯಾಯಿಗಳು ಮೂಲ ಉದ್ದೇಶ ಅರಿಯದೆ ವಿಕೃತಾನುಷ್ಠಾನಗಳನ್ನೂ ಬಳಕೆಗೆ ತಂದರು. ಆತ್ರೇಯ ಸಂಹಿತೆಯ ವಿಚಾರಗಳನ್ನು ತೆಗೆದುಕೊಂಡೇ ಖುರಾನನ್ನು ರಚಿಸಿದರು. ಅದರಲ್ಲಿ ಶಸ್ತ್ರ ಅಸ್ತ್ರ ವಿಧ್ಯೆಗಳು ಸೇರಿವೆ. ಅದರ ಪರಿಣಾಮ ಈಗ ಏನಾಗಿದೆ ಎಂಬುದು ಲೋಕಕ್ಕೇ ತಿಳಿದ ವಿಷಯ. ಹಾಗೆ ಮೂಲ ಸಿದ್ಧಾಂತದ ಬದ್ಧತೆ ಇಲ್ಲದೆ ಆತ್ರೇಯರು ವಿಭಾಗವಾಗಿ ಹೋಗಿ ಏನೇನೋ ಗ್ರಂಥಗಳು, ಏನೇನೋ ಆಚರಣೆಗಳು ಬಳಕೆಗೆ ಬಂದವು.
       
ಪುರಾತನ ಆಯುರ್ವೇದ ಶ್ಲೋಕಗಳಲ್ಲಿ ಸ್ವಲ್ಪವೂ ವೇದ ವಿರುದ್ಧವಾದ ವಿಚಾರಗಳನ್ನು ಹೇಳಿಲ್ಲ. ಕಾಲಘಟ್ಟದಲ್ಲಿ ಸೇರಿದ ಪ್ರಕ್ಷಿಪ್ತಗಳಿಂದ ಪ್ರಸಕ್ತ ಲಭ್ಯ ಆಯುರ್ವೇದದ ಆತ್ರೇಯ ಸಂಹಿತೆಯೂ ಪ್ರಕ್ಷಿಪ್ತಗಳನ್ನೊಳಗೊಂಡಿದೆ. ಇನ್ನು ವೈದಿಕ ದೇಹಶಾಸ್ತ್ರದ ಕಿಂಚಿತ್ತೂ ಜ್ಞಾನವಿಲ್ಲದೆ ಈಗ್ಗೇ ೪೦೦-೫೦೦ ವರ್ಷದಲ್ಲಿ ಚರಕ ಸಂಹಿತೆಗೆ ಏನಕ್ಕೇನೋ ವ್ಯಾಖ್ಯಾನ ಬರೆದಿದ್ದಾರೆ. ತಂತ್ರಶಾಸ್ತ್ರದ ಭಾಗವಾದ ಶಲ್ಯತಂತ್ರವನ್ನು ಸಾರ್ವಜನಿಕ ಬಳಕೆಗೆ ತಂದವನು ಚರಕ. ಅದನ್ನೇ ಬಳಸಿಕೊಂಡು ಈಗಿನ ಆಪರೇಶನ್ ಪದ್ಧತಿ ಬೆಳೆದು ವಿಕೃತವಾಗಿ ರಾರಾಜಿಸುತ್ತಿದೆ. ಆಪರೇಶನ್ ಮಾಡುವುದೇ ದೊಡ್ಡ ಸಾಧನೆ ಎಂಬಂತೆ ಆಯುರ್ವೇದ ತಜ್ಞರೂ, ಆಲೋಪತಿಗಳೂ ಬಿಂಬಿಸುತ್ತಿದ್ದಾರೆ. ಆದರೆ ಅದು ಜನರನ್ನು ಭಯಗ್ರಸ್ಥರನ್ನಾಗಿಸಿ ಸುಲಿಗೆ ಮಾಡುವ ಸುಲಭ ದಂಧೆಯಾಗಿದೆ.


ಈ ರೀತಿಯಾಗುತ್ತದೆ ಎಂದು ನಾಥ ಸಂಪ್ರದಾಯದಿಂದಲೇ ಬಂದಂತಹಾ ಸಿರಿಭೂವಲಯದ ಕುಮುದೇಂದು ಮುನಿಯ ಗಣಿತವು ಮೊದಲೇ ಎಚ್ಚರಿಸಿದೆ. ಋಗ್ವೇದವೇ ಸಕಲಕ್ಕೂ ಮೂಲ ಎಂದು, ಈಗ ಜೈನವೆಂದು ಗುರುತಿಸಲ್ಪಡುವ, ಹಿಂದೆ ಯಾಪನೀಯ ಬ್ರಾಹ್ಮಣ ಪಂಥಕ್ಕೆ ಸೇರಿದ, ಕುಮುದೇಂದು ಮುನಿಯು ಘೋಷದಿಂದಲೇ ತನ್ನ ಕಾಲಾತೀತ ಕಾವ್ಯ ಗ್ರಂಥವನ್ನು ಮಂಡಿಸಿದ್ದಾರೆ. ಗುರುವಚನ ಹಾಗೂ ನನ್ನ ಅಧ್ಯಯನ ಮಿತಿಯಲ್ಲಿ ಕುಮುದೇಂದು ಮುನಿಯು ಮಹಾಭಾರತ ಕಾಲದಿಂದ ಇತ್ತೀಚೆಗೆ ೧೨೦೦ ವರ್ಷದವರೆಗೂ ವ್ಯವಹರಿಸಿದ್ದು ಕಂಡುಬರುತ್ತದೆ. ಅಂದರೆ ಇವರು ಆಯುರ್ವೇದದ ಕೆಲ ಮುಖ್ಯ ಸಂಶೋಧಕರಾದ ಶಾಂರ್ಞ್ಘ್ಯಧರ, ಸುಶ್ರುತ, ಚರಕ ಇವರನ್ನೆಲ್ಲಾ ಭೌತಿಕವಾಗಿಯಾಗಲೀ, ಜ್ಞಾನಚಕ್ಷುವಿನಿಂದಾಗಲೀ ನೋಡಿಯೇ ಇರುತ್ತಾರೆ. ಅದಕ್ಕೆ ಆಧಾರವೆಂಬಂತೆ ಪುರಾತನ ವೈಧಿಕ ಆಯುರ್ವೇದದ ಸಂಶೋಧಕರಾಗಿದ್ದ ಶಾಂರ್ಞ್ಘ್ಯಧರರ ಅವಸಾನಕ್ಕೆ ಸುಶ್ರುತ ಮತ್ತವರ ಹಿಂಬಾಲಕರೇ ಕಾರಣವೆಂದು ಸಿರಿಭೂವಲಯದಲ್ಲಿ ದಾಖಲಿಸಿದ್ದಾರೆ ಎಂದು ಸ್ವಾಮೀಜಿಯವರು ಹೇಳಿದ್ದಾರೆ. ಅದಕ್ಕೆ ದೃಷ್ಟಾಂತವೆಂಬಂತೆ ಕೆಳಕಂಡ ಪದ್ಯಗಳು ಸಿರಿಭೂವಲಯದಲ್ಲಿ ಕಂಡುಬರುತ್ತದೆ:-

ಕಲಿತ ಜೀವರ ಕಾಯ್ವ ಕಲಿಯದವರ ಕೊಲ್ವ | ಬಲವಂತ ಚರಕನ ಮತಮಮ್ ||
ಗೆಲುತಲಹಿಂಸಾಯುರ್ವೇದವ ರಕ್ಷಿಪ | ಬಲವೆ ಪ್ರಾಣಾವಾಯವದಿ || ೧೧೯ ||

ಅಂದರೆ ಯಾರು ಈ ಚರಕನ ಆಯುರ್ವೇದವನ್ನು ಕಲಿತು ಅದನ್ನು ಬಳಸುತ್ತಾರೋ ಅವರಿಗೆ ಮಣೆ. ಅದನ್ನು ಕಲಿಯದವರನ್ನು ಅಥವಾ ಬಳಸದವರನ್ನು ಬಲವಂತವಾಗಿ ಬಳಸುವಂತೆ ಗೂಂಡಾಗಿರಿ ಮಾಡುತ್ತಿದ್ದರು. ಸಜ್ಜನರನ್ನು ರೋಗಿಗಳಾಗಿಸಿ ಚಟ್ಟಕ್ಕೇರಿಸುವವರ ಮಟ್ಟ ಹಾಕಿ ಅಹಿಂಸಾತ್ಮಕವಾದ ಶಾಂರ್ಞ್ಘ್ಯಧರರ ಪುರಾತನ ವೈಧಿಕ ಆಯುರ್ವೇದವನ್ನು ರಕ್ಷಿಸುವ ಹೋರಾಟವೂ ನಡೆಯಿತು. ಆದರೆ ಹಿಂಸೆಯನ್ನು ಪಾಲಿಪ ಸುಶ್ರುತ ನಂತರ ಚರಕ, ಅವರ ಹಿಂಬಾಲಕರ ಸಂಖ್ಯಾ ಬಲ ಜಾಸ್ತಿಯಾಯಿತು. ಪುರಾತನತೆಯು ಮರೆಮಾಚಲ್ಪಟ್ಟಿತು.

ಖ್ಯಾತಿ ಪೂಜಾ ಲಾಭದಾಶೆಯಿಂ ಚರಕಾದಿ | ನೂತನ ಗ್ರಂಥ ಕರ್ತಾರರ್ ||
ಪ್ರೀತಿಯಿಂ ಹಿಂಸೆಯ ಪೊರೆಯಲು ರಸವಿಧ್ಯೆ | ಯಾತಕೆ ಸಿದ್ಧಿಯಾಗುವನಮ್ || ೧೨೦ ||

ಸುಶ್ರುತ, ಚರಕಾದಿಗಳು ಏಕೆ ಈ ರೀತಿ ಹಿಂಸಾತ್ಮಕ ಆಯುರ್ವೇದವನ್ನು ಬಲವಂತವಾಗಿ ಬಳಕೆಗೆ ತಂದರು? ಅವರು ಖ್ಯಾತಿ, ಪ್ರತಿಷ್ಠೆ, ಸಮ್ಮಾನ, ಲಾಭ, ದುರಾಸೆಗಳಿಗೆ ಈಡಾಗಿದ್ದರು. ಚರಕಾದಿಗಳನ್ನು “ನೂತನ ಗ್ರಂಥ ಕರ್ತಾರರ್” – ಅಂದರೆ ಹೊಸ ಗ್ರಂಥವನ್ನು ರಚನೆ ಮಾಡಿದವರು ಎಂದು ಉಲ್ಲೇಖಿಸಲಾಗಿದೆ. ಅವರು ಸೊಗಸಾಗಿ ಹಿಂಸೆಯನ್ನೇ ಪೊರೆಯುತ್ತಾ ಬಂದರು. ಇಂತಹವರಿಗೆ ವೇದ ಮೂಲದ, ವೈಧಿಕ ಭೌತಶಾಸ್ತ್ರಾಧಾರಿತ ರಸವಿಧ್ಯೆಯು ಹೇಗೆ ತಾನೆ ಸಿದ್ಧಿಯಾಗಲು ಸಾಧ್ಯ? ಎಂದು ಕುಮುದೇಂದು ಮುನಿಯು ಪ್ರಶ್ನಿಸುತ್ತಾರೆ.

ದಾನವ ಮಾಡಲು ಕೈಯೊಳಿರಬೇಕಲ್ಲವೆ ವೈದ್ಯ | ದಾನಕನಾದಿ ಸಿದ್ಧಾಂಕ ||
ಆ ನವ್ಯ ಪುನರುಕ್ತಾಕ್ಷರವರಿಯದ | -ನೇನೀವ ಚರಕ ಮಹರ್ಷಿ || ೧೧೦ ||

ದುಡಿದು ದಾನವ ಮಾಡು ಎಂಬುದು ಹಿಂದೂ ಧರ್ಮಶಾಸ್ತ್ರದ ಅಂಬೊಣ. “ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ | ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಷನಃ” – ಅಂದರೆ ಹಸ್ತ ಸಿದ್ಧಿಯೇ ವೈಧ್ಯನಿಗೆ ಮುಖ್ಯಸಾಧನೆ. ಅಂತಹಾ ಕೈಗುಣವನ್ನು ಹೊಂದದೆ ಚಿಕಿತ್ಸೆ ಕೊಡುತ್ತೇನೆ ಎಂದು ಹೊರಟ ಚರಕಾದಿ ಮಹರ್ಷಿಯು ಏನು ತಾನೆ ಆರೋಗ್ಯ ರಕ್ಷಣೆ ಗೈಯಲು ಸಾಧ್ಯ? ಶಾಂರ್ಞ್ಘ್ಯಧರರು ಎಷ್ಟೋ ಲಕ್ಷ ವರ್ಷದ ಪುರಾತನ ವೈಧಿಕ ಆಯುರ್ವೇದವನ್ನು ಜ್ಯೋತಿರಾಯುರ್ವೇದದ ಮುಖೇನ ಸಮಾಜದಲ್ಲಿ ಬಳಕೆಗೆ ತಂದಿದ್ದರು. ಅದು ಸಾಮಾಜಿಕ ಆರೋಗ್ಯವನ್ನೇ ಕಾಯುತ್ತಿತ್ತು. ಇನ್ನು ಖಾಯಿಲೇ ಬರದಂತೆ ಜೀವನ ನಡೆಸುವ ವಿಧಾನವನ್ನು ಜನರಲ್ಲಿ ಬಳಕೆಗೆ ತಂದಿತ್ತು. ಅದನ್ನು ಮೀರಿ ಖಾಯಿಲೆ ಬಂದರೆ ಮಾತ್ರ ಮಂತ್ರ, ಮಣಿ, ಏಕಮೂಲಿಕಾ ಪ್ರಯೋಗ ಇರುತ್ತಿತ್ತು. ಅದಕ್ಕೂ ಬಗ್ಗದಂತಹಾ ಖಾಯಿಲೆಯಾದರೆ ಮಾತ್ರ ಮುಂದಿನ ಬಹುಮೂಲಿಕಾ ಪ್ರಯೋಗಗಳು. ಇವರಲ್ಲಿ ರೋಗಿಗಳು ಹೆಚ್ಚಾಗಲಿ, ಅದರಿಂದ ನಮ್ಮಲ್ಲಿ ಸಂಪತ್ತು ಹೆಚ್ಚಾಗಲಿ ಎಂಬಂತಹಾ ಮೋಸ ಮಾಡುವ ಕಿಂಚಿತ್ ಯೋಚನೆಯೂ ಇರಲಿಲ್ಲ. ಹಾಗಾಗಿ ವೈಧ್ಯೋ ನಾರಾಯಣೋ ಹರಿಃ ಎನ್ನುತ್ತಿದ್ದರು. ಇಂತಹಾ ಪುರಾತನ ಆಯುರ್ವೇದವನ್ನು ಪುನರುಕ್ತಿಗೊಳಿಸಿ ನವ್ಯ ಜ್ಯೋತಿರಾಯುರ್ವೇದವನ್ನು ಮಂಡಿಸಿದ ಶಾಂರ್ಞ್ಘ್ಯಧರರ ಮತವನ್ನು ಮೆಟ್ಟಿದ ಚರಕಾದಿಗಳಿಗೆ “ಅಯಂ ಮೇ ಹಸ್ತೋ ಭಗವಾನ್” ಎಂಬ ಚಿಕಿತ್ಸಾ ಶಕ್ತಿಯು ಸಿದ್ಧಿಸುವುದಿಲ್ಲ ಎಂದು ಅಂದು ತಾನು ಕಂಡ ಸತ್ಯವನ್ನು, ಅದರ ಮುಂದಿನ ಪರಿಣಾಮವನ್ನು ಕುಮುದೇಂದು ಮುನಿಗಳು ನಿಷ್ಪಕ್ಷಪಾತವಾಗಿ ಭವಿಷ್ಯಾವಧಾನ ಮಾಡಿದ್ದಾರೆ.

ವಶಗೊಳಿಸಿದ ಶ್ರೀಸಮಂತ ಭದ್ರಾಚಾರ್ಯ | ಋಷಿಯು ಪ್ರಾಣಾವಾಯದಿಂದ ||
ಹೊಸೆದ ಕಾವ್ಯವು ಚರಕಾದಿಗಳರಿಯದ | ಅಸದೃಷ ವೈದಾಗಮಕರು || ೧೧೬ ||

ಹಾಗೇ ಶಾಂರ್ಞ್ಘ್ಯಧರರ ಈ ಸಿದ್ಧಾಂತವನ್ನು ಅರ್ಥ ಮಾಡಿಕೊಂಡ ಶ್ರೀ ಸಮಂತ ಭದ್ರಾಚಾರ್ಯ ಋಷಿಗಳು ಯಜುರ್ವೇದದ ಪ್ರಾಣಾವಾಯದಿಂದ ಅದನ್ನು ಪುನಃ ಉದ್ಘಾಟಿಸಿದರು. ಇದನ್ನೂ ಚರಕಾದಿಗಳು ಅರಿತುಕೊಳ್ಳಲಾಗಲಿಲ್ಲ. ಹಾಗಾಗಿ ಅವರು ವೈಧ್ಯಾಗಮವನ್ನೇ ತಿಳಿದಿಲ್ಲ ಎನ್ನಬಹುದು.

ಲಲಿತಾಯುರ್ವೇದವೆಲ್ಲವು ಹುಟ್ಟಿತಿಲ್ಲಿಂದ | ಇಳೆಯವರೆಲ್ಲವಿಲ್ಲಿಂದ ||
ಬಳಸುತ ಜೀವ ಹಿಂಸೆಯ ಸೇರಿಸಿ ತಂದ | ಖಳರ ಕಾವ್ಯಕೆ ಧಿಹ್ಕಾರ || ೧೧೭ ||

ಸುಲಲಿತವಾದ ಸರಳವಾದ ಆಯುರ್ವೇದವು ವೇದ ಮೂಲದಿಂದಲೇ ಹುಟ್ಟಿದ್ದು. ಅದನ್ನು ಅಧ್ಯಯನ ಗೈದು, ಬಳಸಿ, ಶಾಸ್ತ್ರ ರಚಿಸಿದವರೆಲ್ಲ ಇದರಿಂದಲೇ ಮುಂದುವರೆದರು. ಅದು ಸಂಪೂರ್ಣ ಅಹಿಂಸಾತ್ಮಕವಾಗಿತ್ತು. ಆದರೆ ಅಂತಹಾ ಮೂಲ ಆಯುರ್ವೇದವನ್ನು ಬದಿಗೊತ್ತಿ ಜೀವ ಹಿಂಸೆಯನ್ನೇ ಪ್ರಧಾನವಾಗಿ ತಂದಂತಹಾ ಖಳರ ಗ್ರಂಥಗಳಿಗೆ ಸಾವಿರಾರು ವರ್ಷ ಹಿಂದೆಯೇ ಧಿಕ್ಕಾರ ಹಾಕಿದ್ದಾರೆ.

ಯಮಕೆಯೊಳಗೇನಿಹುದಯ್ಯ | ಮೈಯ್ಯ ರಕ್ಷಿಪುದೆಂದು ||
ಮೈಯ್ಯನೆ ಕೊಲ್ಲುವ | ಅಯ್ಯನ ವೈದ್ಯಶಾಸ್ತ್ರದೊಳು || ೧೪೪ ||

ಯಮಕೆ = ಮೂಳೆ ಎಂಬುದು ಪ್ರಾಕೃತ ಕನ್ನಡ ಶಬ್ದ. ಅದರಲ್ಲೇನಿದೆ ಮೂಳೆ? ಎಂಬ ನಾಣ್ನುಡಿ ಇದೆ. ಕಾಯ ರಕ್ಷಣೆ ಮಾಡುತ್ತೇವೆ ಎಂದು ಬಣ್ಣದ ನುಡಿಗಳನ್ನು ಹೇಳಿದರೆ ಸಾಲದು. ರಕ್ಷಿಸಿ ತೋರಿಸಬೇಕು. ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ ಎಂಬಂತೆ ರಕ್ಷಿಸುತ್ತೇವೆಂದು ಭಕ್ಷಿಸುವ ಅಯ್ಯನ ವೈದ್ಯಶಾಸ್ತ್ರದಲ್ಲಿ ಏನಿದೆ ಮೂಳೆ? ಎನ್ನುತ್ತಾರೆ. ಇನ್ನೊಂದು ರೀತಿ ನೋಡಿದರೆ ಯಮಕೆಗೆ ಸಂಬಂಧಿಸಿದ್ದೆಂದರೆ ಶಲ್ಯ ತಂತ್ರ. ಅದರ ವಿಪರೀತ ಬಳಕೆಯೇ ಇಂದಿನ ದೇಹ ಕೊಯ್ದು ಜೀವ ತೆಗೆಯುವ ವೈದ್ಯಪದ್ಧತಿ. ಅಯ್ಯ ಎಂದರೆ ಸುಶ್ರುತ ಮತ್ತು ಚರಕಾದಿ ಬ್ರಾಹ್ಮಣ ಕುಲದವರೇ ಆಗಿದ್ದಾರೆ ಎನ್ನುತ್ತಾರೆ ಸಿರಿಭೂವಲಯದ ಸಂಶೋಧಕರಾದ ಸುಧಾರ್ಥಿಯವರು. ಇನ್ನು ಮುಂದಿನ ವಿಚಾರ ನೋಡೋಣ.

ಋಷಯಃ ಖಲು ಕದಾಚಿತ್ ...... (ಚರಕ ಸಂಹಿತೆ)

        ಇನ್ನು ಋಷಿಗಳ ಬಗ್ಗೆ ಎಷ್ಟು ಬಾಲಿಶವಾಗಿ ಬ್ರಿಟೀಷ್ ಪ್ರಕ್ಷೇಪಿತ ಆತ್ರೇಯ ಸಂಹಿತಾ ವ್ಯಾಖ್ಯಾನವಿದೆ ಎಂದು ಕಾಣಬಹುದು. ಋಷಿಗಳು ಮಾನವ ಹಾಗೂ ದೇವತೆಗಳಿಗಿಂತಲೂ ಜ್ಞಾನವೃದ್ಧರು. ಅವರು ವಾತ-ಜೂತ ಅಂದರೆ ಗಾಳಿ-ಕಿರಣಗಳನ್ನೇ ಆಶ್ರಯಿಸಿ ದಿವ್ಯ ದೇಹ ಉಳ್ಳವರಾಗಿರುತ್ತಾರೆ. ಆಹಾರ ಸ್ವೀಕರಿಸುವುದು ಕೇವಲ ಪ್ರಾಪಂಚಿಕ ನಾಟಕವಷ್ಟೆ. ಅದಕ್ಕೆ ದೃಷ್ಟಾಂತವಾಗಿ ನಮ್ಮ ಕರ್ನಾಟಕದವರೇ ಆಗಿದ ಸಾಗರದ ಹತ್ತಿರದ ವರದಾಶ್ರಮದ ಶ್ರೀಧರ ಸ್ವಾಮಿಗಳ ಆಹಾರ ಪದ್ಧತಿಯೇ ಸಾಕ್ಷಿ. ಒಂದು ಅಂಗೈ ಬರುವಷ್ಟು ಮಾತ್ರ ಸ್ವೀಕರಿಸುತ್ತಿದ್ದರು.

ಗ್ರಾಮ್ಯಾಹಾರ ಎಂಬ ಶಬ್ದವೇ ಅಪಭ್ರಂಶವಾಗಿದೆ ಎಂದು ಹಿಂದೆಯೇ ತಿಳಿಸಲಾಗಿದೆ. ಒಂದು ವೇಳೆ ಋಷಿಗಳಿಗೇ ಗ್ರಾಮ್ಯಾಹಾರ; ಅಂದರೆ ಕೆಟ್ಟ ಆಹಾರ ಎಂದುಕೊಂಡರೂ, ಅದನ್ನು ತಿಂದು ಆಲಸ್ಯ ಬರುತ್ತದೆ ಎಂದರೆ ಹುಲು ಮಾನವರಾದ ನಮ್ಮ ನಿಮ್ಮೆಲ್ಲರ ಗತಿ ಏನು? ಈಗಿನ ಕಾಲಕ್ಕೆ ಸರ್ಕಾರೀ ರೇಷನ್ ಎಂಬ ಭ್ರಷ್ಟ ಆಹಾರ ವಿತರಣಾ ವ್ಯವಸ್ಥೆಯಿಂದ ರೋಗೋತ್ಪನ್ನವಾಗಬಹುದೇನೋ ಹೊರತು ಗ್ರಾಮ್ಯಾಹಾರ ದಿಂದಲ್ಲ. ಇಲ್ಲಿ ಪೌರಾಣಿಕವಾಗಿ ಒಂದು ದೃಷ್ಟಾಂತವನ್ನು ನೋಡೋಣ. ವಾತಾಪಿ ಎಂಬ ರಾಕ್ಷಸನು ಊಟದಲ್ಲಿ ಸೇರಿಕೊಂಡು ತಿಂದವರ ಹೊಟ್ಟೆ ಬಗೆದು ಅವರನ್ನು ಸಾಯಿಸುತಿದ್ದ ಎಂದು ಕಥೆ ಬರುತ್ತದೆ. ಒಮ್ಮೆ ಅಗಸ್ತ್ಯರಿಗೆ ಆ ರೀತಿ ಮಾಡಲು ಹೋಗಿ ಅವರ ಹೊಟ್ಟೆ ಸೇರಿದನು. ಅಗಸ್ತ್ಯರು ವಾತಾಪೀ ಜೀರ್ಣೋಭವ ಎಂದು ಅವನನ್ನೇ ಜೀರ್ಣಿಸಿಬಿಟ್ಟರು ಎಂದು ವ್ಯಾಖ್ಯಾನ ಸಿಗುತ್ತದೆ. ದ್ರಾವಿಡ ಸೊಗಡನ್ನು, ಆರ್ಯ ಸಂಸ್ಕೃತಿಯನ್ನೇ ಅರಿಯದ ಮೂರ್ಖ ವಿದೇಶೀ ಬಂಡುಕೋರರು ಅಗಸ್ತ್ಯರು ಈ ರೀತಿ ಮಾಂಸಭಕ್ಷಣೆ ಮಾಡಿದರು ಎಂದೂ ವ್ಯಾಖ್ಯಾನಿಸಿರಬಹುದು. ಆದರೆ ಅದು ಶುದ್ಧ ಸುಳ್ಳು. ಇದನ್ನು ಋಗ್ವೇದದಲ್ಲೇ ಗಮನಿಸಿದರೆ ಅಗಸ್ತ್ಯರು ವಾತಾಪಿ ಪೀವ ಇದ್ಭವ ಎಂದಿದ್ದಾರೆ. ಅಂದರೆ ಅಸಹಜ ವಾತಕ್ಕೆ ಚಿಕಿತ್ಸಾ ವಿಧಿಯನ್ನು ಹೇಳಿದರು.

ರಾಮಾಯಣದಲ್ಲಿ ಶಬರಿಯು ರಾಮನಿಗೆ ಹಣ್ಣನ್ನು ಕೊಟ್ಟಳು. ಅರಣ್ಯ ಅಥವಾ ಗ್ರಾಮ್ಯ ಜನಪದದಲ್ಲಿ ತೋಚಿದಂತೆ ತಿಂದು ಉಂಡು ಮನಸೋ ಇಚ್ಛೆ ಜೀವನ ನಡೆಸುತಿದ್ದರೆ, ಅಭಕ್ಷಭಕ್ಷಣೆ ನೀಡಬೇಕಿತ್ತಲ್ಲವೇ? ಖಂಡ-ಪರಷು ಎಂಬ ಅತೀ ಪುರಾತನ ಸಾಧಕರು ಹುಟ್ಟಿನಿಂದ ಭೇಡರಾಗಿದ್ದರು. ವೇದ-ತಂತ್ರದಲ್ಲಿ ಪ್ರಾವೀಣ್ಯರಾಗಿದ್ದರು. ಕಾಡು-ನಾಡಿನ ರಕ್ಷಣೆಗಾಗಿ ಭೇಟೆಯು ಅವರ ಕುಲವೃತ್ತಿ ಹೊರತು ಆಹಾರ ಪದ್ಧತಿ ಎನ್ನಲಿಲ್ಲ. ತಮ್ಮಲ್ಲಿಗೆ ಬಂದ ಬ್ರಾಹ್ಮಣರಿಗೆ ಜೇನುತುಪ್ಪ, ಹಣ್ಣು-ಹಂಪಲುಗಳನ್ನು ನೀಡಿ ಸತ್ಕರಿಸಿದ ಕಥೆ ಸಿಗುತ್ತದೆ. ನಂತರ ಶಿಭಿ ಚಕ್ರವರ್ತಿಯ ಪ್ರಕರಣದಲ್ಲಿ ಒಂದು ಕಪೋತದ ಜೀವ ರಕ್ಷಣೆಗಾಗಿ ತನ್ನ ದೇಹದ ಮಾಂಸವನ್ನೇ ತೂಕಕ್ಕೆ ಹಾಕಿದ ದಯಾನಂದರ ರಾಷ್ಟ್ರವಿದು. 

ಯಜುರ್ವೇದದಲ್ಲಿನ ಆಯುರ್ವೇದವು ೇಳುತ್ತೆ -  ತಿನ್ನುವುದೆಲ್ಲ ಗೊಬ್ಬರ; ಅದರಲ್ಲಿ ಎಲ್ಲೋ ಒಂದಂಶ ಮಾತ್ರ ಸತ್ವವಿರುತ್ತದೆ; ಅಂತಹಾ ಸತ್ವಗ್ರಾಹಿಗಳಾಗಬೇಕು. ಬದುಕುವುದಕ್ಕೆ ಆಹಾರವು ಅಗತ್ಯವೇ ಇಲ್ಲ. ದೇಹದಲ್ಲಿರುವ ಪಂಚಾಗ್ನಿಗಳಿಗೆ ೫ ಅನ್ನದ ಕಾಳು + ಆತ್ಮನಿಗೆ ಒಂದು ಅನ್ನದ ಕಾಳು ಆಹುತಿ ರೂಪದಲ್ಲಿ ಸ್ವೀಕರಿಸುವುದೇ ನಿತ್ಯ ಆಹಾರವೆಂಬ ಯಜ್ಞ. ರೈತನು ಭಕ್ತಿಯಿಂದ ಅಕ್ಕಿ ಬೆಳೆದು, ವೈಶ್ಯನು ಆ ಶಾಲಿಯನ್ನು ವಿತರಿಸಿ ಸಂಪತ್ ವೃದ್ಧಿಗೊಳಿಸಿ, ಕ್ಷತ್ರಿಯನದನು ಭುಂಜಿಸಿ ಬಲವೃದ್ಧಿ, ಬ್ರಾಹ್ಮಣನು ಭಗವಂತನ ಭಿಕ್ಷೆಯಿದೆಂದು ಅನ್ನದಿಂದ ಸದ್ಬುದ್ಧಿಗಳಿಸಿ ತನ್ಮುಖೇನ ಸಾಮಾಜಿಕ ಸಾಮರಸ್ಯವಿರಲಿ ಎಂಬ ಕಾರಣಕ್ಕೆ ಎಲ್ಲರೂ ಎಲೆ ತುಂಬ ವಿವಿಧ ಭಕ್ಷ್ಯ-ಭೋಜ್ಯಗಳನ್ನು ತಿನ್ನುವ ಒಡಂಬಡಿಕೆ ಬಂದಿದೆಯಷ್ಟೆ. ಈಗಲೂ ಆಹಾರವಿಲ್ಲದೆ ಎಷ್ಟೋ ಜನರಿದ್ದಾರೆ. ಅವರ್ಯಾರೂ ಆಹಾರವಿಲ್ಲದೆ ಸಾಯಲಿಲ್ಲ. ವೇದವೇ ಆಹಾರವು ದೇಹಕ್ಕೆ ಅಗತ್ಯವೇ ಅಲ್ಲ ಎಂದಿರುವಾಗ, ಮಂತ್ರ ದ್ರಷ್ಟಾರನಾದ ವಿಶ್ವಾಮಿತ್ರನು ಬರಗಾಲ ಬಂದಾಗ ನಾಯಿ ಮಾಂಸ ತಿಂದನೆಂಬ ಕಟ್ಟು ಕಥೆಗೆ ಹುರುಳೆಲ್ಲಿದೆ?

ರಸ ವಿಧ್ಯೆಗಳು ಮುಂದಿನ ಹಂತದಲ್ಲಿ ಬರುತ್ತದೆ. ಮೂಲದಲ್ಲಿ ನೋಡಿದರೆ ಸಾತ್ವಿಕ ಜೀವನ ಶೈಲಿ, ಸಾತ್ವಿಕ ಆಹಾರ ವಿಧಾನವೇ ಕಂಡುಬರುತ್ತದೆ. ನಿತ್ಯ ವೈಶ್ವದೇವ, ಭೂತಯಜ್ಞ ಮಾಡಿಕೊಂಡು ದೇಹದಲ್ಲಿರುವ ಪಂಚಾಗ್ನಿಗೆ ಆಹುತಿ ರೂಪದಲ್ಲಿ ಆಹಾರ ನೀಡಿಯೇ ಶರೀರ-ಮಾನಸಿಕ ಸಿದ್ಧಿ ಪಡೆಯುತ್ತಿದ್ದರು. ಅದಕ್ಕೆ ಚರಕ-ಚಿಕಿತ್ಸಾ ಅ.೧ ಅಲ್ಲಿ ನ ಹಿ ಕಿಂಚಿತ್ ರಸಾಯನಮ್ ಎಂದರೆ ಕೇವಲ ರಸಾಯನದಿಂದ ಮಾತ್ರ ಈ ಸಿದ್ಧಿಗಳನ್ನು ಪಡೆಯಲು ಸಾಧ್ಯವಿಲ್ಲ ಎಂದೇಕೆ ಅರ್ಥೈಸುವುದಿಲ್ಲ? ರಸಾಯನ + ಕಾಲಯುಕ್ತೇನ ಎಂದು ಶ್ಲೋಕದಲ್ಲಿ ಹೇಳಿದೆ. ಅಂದರೆ ಅದು ಇಷ್ಟಿ ಇತ್ಯಾದಿ ಯಜ್ಞ ಸೂಚಕ. ಆಳದಲ್ಲಿ ದೇಹಗತ ಪಂಚಾಗ್ನಿಗೇ ಸಂಪರ್ಕ ಸೂಚಿಸುತ್ತಿದೆ.

ಉಪಯೋಗಕ್ಕೆ ಬಾರದ ಇಲಾಖೆ ಎಂದರೆ ಪ್ರಾಚ್ಯವಸ್ತು ವಿಭಾಗ. ಭೂಮಿ ಉತ್ಖನನ ಮಾಡಿದಾ ಕ್ಷಣ ಮಣ್ಣಿನ ಪಾತ್ರೆ ಸಿಕ್ಕಿತೆಂದರೆ ನಮ್ಮ ಪೂರ್ವಿಕರಿಗೆ ಇತರೆ ಲೋಹಗಳನ್ನು ಬಳಸಲು ಗೊತ್ತಿರಲಿಲ್ಲ ಎಂದು ನಿರ್ಣಯ ಮಾಡಿಬಿಟ್ಟಿದ್ದಾರೆ. ವಿಪರ್ಯಾಸವೆಂದರೆ ಎಲ್ಲಾ ಲೋಹಗಳ ಬಳಕೆಯನ್ನು ಹೇಳಿಕೊಟ್ಟಿದ್ದೇ ವೇದ. ಅದನ್ನು ತಂತ್ರಶಾಸ್ತ್ರದಲ್ಲಿ ವಿಸ್ತೃತಗೊಳಿಸಲಾಗಿದೆ. ಲೋಹಾರ್ ಎಂಬ ವಂಶವೂ ಭಾರತದಲ್ಲಿ ಪ್ರಸಿದ್ಧ. ಅವಶೇಷಗಳ ಕಾಲನಿರ್ಣಯ ಮಾಡುವ ಕಾರ್ಬನ್ ಡೇಟಿಂಗ್ ಎಂಬ ಪದ್ಧತಿಯೇ ದೋಷಪೂರಿತವಾಗಿದೆ. ಅದಕ್ಕೆ ತಿಪ್ಪೆ ಸಾರಿಸಲು ಇನ್ನಿತರೆ ವಿಕಿರಣಪಟುತ್ವ ಹೊಂದಿದ ಧಾತುಗಳಿಂದ ಕಾಲನಿರ್ಣಯ ಮಾಡುತ್ತೇವೆಂದು ಅದರಲ್ಲೂ ಸೋತಿದ್ದಾರೆ. ಸರಿಯಾದ ಮನುಷ್ಯನ ಉಗಮ ವಿಕಾಸದ ಬಗ್ಗೆ ಕಲ್ಪನೆಯೇ ಇಲ್ಲದ ವಿದೇಶೀ ಮೂಲದ ಪ್ರಾಚ್ಯವಸ್ತು ಅಧ್ಯಯನವು ಕೂಡ ಮೋಸ, ಬಂಡವಾಳಶಾಹಿ ಪ್ರವೃತ್ತಿಯಲ್ಲಿ ತೊಡಗಿದೆ ಎಂದು Forbidden Archaeology ಎಂಬ ಪುಸ್ತಕದಲ್ಲಿ ವಿದೇಶೀ ಮೂಲದ ಲೇಖಕರೇ ಘೋಷಿಸಿದ್ದಾರೆ.

ಈ ಪ್ರತಿಕ್ರಿಯಾತ್ಮಕ ಲೇಖನಕ್ಕೆ ಉಪಸಂಹಾರ - ವೇದದಲ್ಲಿ ಎಲ್ಲೂ ಮಾನವನಿಗೆ ಮಾಂಸಾಹಾರ ಹೇಳಲೇ ಇಲ್ಲ. ಹೀಗಿರುವಾಗ ಭಾರತೀಯತೆಯನ್ನು, ವೇದವನ್ನು ಆಶ್ರಯಿಸಿದ ಇನ್ನಿತರೆ ಶಾಸ್ತ್ರಗಳಲ್ಲಿ ವೇದವಿರುದ್ಧವಾದದ್ದನ್ನು ಹೇಳಿದೆ ಎಂದರೆ ಅದು ಶುದ್ಧ ಸುಳ್ಳು. ವೇದವೊಂದೇ ಸಾರ್ವಕಾಲಿಕ ಸಾರ್ವದೇಶಿಕ ಸತ್ಯ!!!

ಇಂತು,
ಿಜ್ಾಸ
******************************************************************************************************************************************

Friday, 16 December 2016

ಲೀಲಾವತಿ ಗಣಿತ : ಪಾರ್ಥ-ಶರ ಲೆಕ್ಕ (ವರ್ಗ ಸಮೀಕರಣ)
ಶ್ಲೋಕ:- 
ಪಾರ್ಥಃ ಕರ್ಣವಧಾಯ ಮಾರ್ಗಣಗಣಂ ಕೃದ್ಧೋ ರಣೇ ಸಂದಧೇ 
ತಸ್ಯಾರ್ಧೇನ ನಿವಾರ್ಯ ತಚ್ಛರಗಣಂ ಮೂಲೈಶ್ಚತುರ್ಭಿರ್ಹಯಾನ್ | 
ಶಲ್ಯಂ ಷಡ್ಭಿರ್ ಅಥೇಷುಭಿಸ್ತ್ರಿಭಿರಪಿಚ್ಛತ್ರಂ ಧ್ವಜಂ ಕಾರ್ಮುಕಂ
ಚಿಚ್ಛೇದಾಸ್ಯ ಶಿರಃ ಶರೇಣ ಕತಿ ತೇ ಯಾನರ್ಜುನಃ ಸಂದಧೇ ||

ಭಾವಾರ್ಥ:- ಪಾರ್ಥನು ಯುದ್ಧಭೂಮಿಯಲ್ಲಿ ಯಾರ್ಯಾರನ್ನು ಹೇಗೇಗೆ ಛೇದಿಸಲು ಎಷ್ಟು ಬಾಣಗಳು ಬೇಕಾಗುತ್ತದೆ ಎಂದು ನ್ಯಾಸಗೊಳಿಸಿ ಪಾರ್ಥನಲ್ಲಿದ್ದ ಶರ ಸಂಖ್ಯೆಯನ್ನು ಪ್ರಶ್ನಿಸುವುದರ ಮುಖೇನ ವರ್ಗ ಸಮೀಕರಣವನ್ನು (Quadratic Equation) ಕಲಿಸಿಕೊಡುವ ಒಂದು ಉದಾಹರಣೆಯನ್ನು ಭಾಸ್ಕರಾಚಾರ್ಯರ ಲೀಲಾವತಿ ಗಣಿತದಿಂದ ಆಯ್ದುಕೊಳ್ಳಲಾಗಿದೆ. ಪಾರ್ಥನು ಕರ್ಣನನ್ನು ವಧಿಸಲು ಒಂದಿಷ್ಟು ಬಾಣಗಳನ್ನು ತೆಗೆದುಕೊಂಡು, ಅವುಗಳ ಅರ್ಧದಿಂದ ಕರ್ಣನ ಬಾಣಗಳನ್ನೆಲ್ಲ ನಿವಾರಿಸಿದನು. ಅವುಗಳ ವರ್ಗಮೂಲದ ನಾಲ್ಕುಪಟ್ಟು ಬಾಣಗಳಿಂದ ಕರ್ಣನ ಕುದುರೆಗಳನ್ನು ನಿವಾರಿಸಿದನು. ಕರ್ಣನ ಸಾರಥಿಯಾಗಿದ್ದ ಶಲ್ಯನನ್ನು ಆರು ಬಾಣಗಳಿಂದ ಮರ್ದಿಸಿದ. ಮೂರು ಬಾಣಗಳಿಂದ ಕ್ರಮವಾಗಿ ಛತ್ರ, ಧ್ವಜ, ಬಿಲ್ಲುಗಳನ್ನು ಕೆಡುಹಿದ. ಉಳಿದೊಂದು ಬಾಣದಿಂದ ಕರ್ಣನ ಶಿರಚ್ಛೇದ ಮಾಡಿದ .ಹಾಗಾದರೆ ಅರ್ಜುನನ ಹತ್ತಿರ ಇದ್ದ ಬಾಣಗಳೆಷ್ಟು?

ನ್ಯಾಸ:- ಒಟ್ಟು ಸಂಖ್ಯೆಯ ವರ್ಗಮೂಲ ಬರುವುದರಿಂದ ಬಾಣಗಳ ಒಟ್ಟು ಸಂಖ್ಯೆಯನ್ನು ಬಾ ಎನ್ನೋಣ.
ಕರ್ಣನ ಬಾಣಗಳನ್ನು ಮಡುಹಿದ ಬಾಣಗಳು: ಬಾ /
ಹಯನಾಶಕ್ಕೆ ಬಳಸಿದ ಶರಗಳು: ೪ಬಾ
ಶಲ್ಯನವಸಾನಕ್ಕೆ ಶರಗಳು: ೬
ಛತ್ರಾದಿ ಕೆಡುಹಲು ಶರಗಳು: ೩
ಕರ್ಣನ ಶಿರಚ್ಛೇದಕ್ಕೆ ಶರ: ೧

ವರ್ಗ ಸಮೀಕರಣ ಇಂತಾಗುತ್ತದೆ:-
(ಬಾ / ೨) + ೪ಬಾ + (೬+೩+೧) = ಬಾ
ಸರಳೀಕರಿಸಿ ಬರೆದುಕೊಂಡಾರೆ: ಬಾ – ೮ಬಾ – ೨೦ = ೦

ಇದನ್ನು ಅಪವರ್ತಿಸೋಣ:-
      -----         -೧೦
-೨೦
      -----           
_______________________
     -೮
_______________________

ಬಾ ( ಬಾ – ೧೦ ) + ೨ ( ಬಾ – ೧೦ ) = ೦
( ಬಾ + ೨ ) ( ಬಾ – ೧೦ ) = ೦

ಬಾ = -೨ ಅಥವಾ ೧೦ ಬಾಣಗಳು
ಈಗ ಬಾ = (-೨) = ೪ ಅಥವಾ (೧೦) = ೧೦೦

ನ್ಯಾಸದಿಂದ ತಿಳಿದು ಬರುವುದೇನೆಂದರೆ ಶಲ್ಯನವಸಾನಕ್ಕೆ ಶರಗಳು: ೬ + ಛತ್ರಾದಿ ಕೆಡುಹಲು ಶರಗಳು: ೩ + ಕರ್ಣನ ಶಿರಚ್ಛೇದಕ್ಕೆ ಶರ: ೧ = ೧೦.

ಆದ್ದರಿಂದ ಬಾ = ೪ ಆಗಲು ಸಾಧ್ಯವಿಲ್ಲ. ಹಾಗಾಗಿ ಪಾರ್ಥನು ಈ ಯುದ್ಧ ಪ್ರಸಂಗದಲ್ಲಿ ೧೦೦ ಬಾಣಗಳನ್ನು ಬಳಸಿದ.