Sunday, 30 July 2017

ದೇಹಾಂತರ್ಗತ ನರ ಸಂಜ್ಞೆಗಳನ್ನು ವಿವರಿಸುವ ಸಾಮಗಾನ, ನಿರುಕ್ತ ಮತ್ತು ಭಾಷ್ಯ

ಮಾನವರಲ್ಲಿ ಅತೀ ಶ್ರೇಷ್ಠವಾದ ಗುಣ ಪ್ರವಾಹಗಳಲ್ಲಿ ಮಾನವೀಯ ಗುಣವೆಂಬುದು ಮುಖ್ಯವಾದುದು. ಇದು ೧೬ ಭಿನ್ನ ತತ್ವಗಳಲ್ಲಿ ಪ್ರವಹಿಸುತ್ತದೆ. ಹಾಗಾಗಿ ಈ ಸದ್ಗುಣವನ್ನು ಕೂಡಿಕೊಂಡವನೇ; ಅಂದರೆ ನಿರಂತರ ಸದುಣ ಪ್ರವಾಹಭರಿತನೇ ನರನೆನ್ನಿಸಿಕೊಳ್ಳುತ್ತಾನೆ. 
೧. ಸತ್ಯ
೨. ಧರ್ಮ
೩. ನ್ಯಾಯ
೪. ದಯೆ
೫. ಶಾಂತ
೬. ಉದಾರಿ (ಔದಾರ್ಯ)
೭. ಕ್ಷಮಾ
೮. ಶೀಲ
೯. ಶೃದ್ಧಾ
೧೦. ಸ್ನೇಹ
೧೧. ಭಕ್ತಿ
೧೨. ಭಾವಯ
೧೩. ಸೇವಾಹಿ
೧೪. ಜಿತೇಂದ್ರಿಯತ್ವ
೧೫. ತ್ಯಾಗ
೧೬. ಕರ್ತವ್ಯನಿಷ್ಠೆ

ಈ ೧೬ ಗುಣಗಳನ್ನು ಮೈಗೂಡಿಸಿಕೊಂಡವನೇ "ನರ"ನೆಂದು ಹೇಳಿಸಿಕೊಳ್ಳುತ್ತಾನೆ. ಈ ಗುಣಗಣಗಳು ಪ್ರವಾಹರೂಪದಲ್ಲಿ ಹರಿಯುತ್ತಾ ನಿರಂತರತೆ ಕಾಯ್ದುಕೊಂಡು ಬರುವುದರಿಂದ ಅದು ನರಪ್ರವಾಹ ಅನ್ನಿಸಿಕೊಳ್ಳುತ್ತದೆ. ಹಾಗಾಗಿ ಈ ನರ ಪ್ರವಾಹವೇ ಮನ ಪ್ರಚೋದಕ, ಮಂಹಿಷ್ಥ, ಋಷಾಹ, ಸೋಹಂ ವೃತ್ತಿ. ಇವುಗಳನ್ನು ಮೈಗೂಡಿಸಿಕೊಳ್ಳುವವನೇ ನರನೆನ್ನಿಸಿಕೊಳ್ಳುತ್ತಾನೆ. ಇರಿಂಬಿಠಿಯೆಂಬ ಕಣ್ವ ಶಿಷ್ಯರೊಬ್ಬರು ಈ ಮುಖದಲ್ಲಿ ಅಗಾಧ ಸಂಶೋಧನೆ ಮಾಡಿದ್ದಾರೆ. ಅವರ ಅಂಬೋಣವೇ ಈ ಮಂತ್ರದ ಭಾವಾರ್ಥವಾಗಿರುತ್ತದೆ. ಈ ವಿಚಾರದ ತಿಳುವಳಿಕೆಯಿಂದಾಗಿ ಮಾನವನಿಗೆ ಷಡ್ವೈರಿ ಬಾಧೆಯಿಂದ ಪರಿಹಾರ ಪಡೆಯಲು ಸಾಧ್ಯವೆಂದೂ, ಅದನ್ನು ಮೈಗೂಡಿಸಿಕೊಳ್ಳುವ ವಿಧಾನವನ್ನೂ ಈ ಮಂತ್ರದಲ್ಲಿ ವಿವರಿಸಿದ್ದಾರೆ. ಇದರ ಗಾನೋಪಾಸನೆಯಿಂದ ಹಲವು ನರರೋಗಗಳು, ಮಾನಸಿಕ ರೋಗಗಳು ಉಪಶಮನವಾಗಲು ಸಾಧ್ಯ.
- ಸಾಮವೇದ ಭಾಷ್ಯ ಸಂಹಿತಾ

Saturday, 29 July 2017

"ವೈಧಿಕ" ಶಬ್ದ ಜಿಜ್ಞಾಸೆ

ಮೂಲ ಪ್ರಾಕೃತಿಕ ಆಚರಣೆಗಳನ್ನು "ವೈಧಿಕ" ಎನ್ನುತ್ತಾರೆ. ಕಡೆಗೆ ಆ ಶಬ್ದದ ಅರ್ಥ ಗೊತ್ತಿಲ್ಲದ್ದರಿಂದ ಜಾನಪದೀಯ ಆಚರಣೆ ಎಂದು ಬಳಕೆಗೆ ತಂದರು. ಆದರೆ ಅದು ಜಾನಪದೀಯ ಆಚರಣೆಯಲ್ಲ, ಮೂಲ ಪ್ರಾಕೃತಿಕ ಆಚರಣೆಯನ್ನೇ ವೈಧಿಕ ಆಚರಣೆ ಎಂದರು. ವೇದ ಅದನ್ನು ಮಾನ್ಯ ಮಾಡಿದೆ. ಏಕೆಂದರೆ ಅಲ್ಲೆಲ್ಲೂ ವೇದ ನಿಂದ್ಯವಾದ ಆಚರಣೆಯೇ ಇಲ್ಲ. ವೇದವು ವೇದ ನಿಂದ್ಯವಲ್ಲದ, ಗೌರವಯುತವಾದ ವಿಚಾರಗಳನ್ನು ಮಾನ್ಯ ಮಾಡುತ್ತದೆ. ಅರ್ಥವಿಲ್ಲದ, ನಿರರ್ಥಕ, ಉಪಯೋಗಕ್ಕೆ ಬಾರದ ವಿಚಾರಗಳನ್ನು ಬಿಟ್ಟಿದೆ. ಎಲ್ಲಿಂದಲೋ ಬಂದು, ಏನೇನೋ ಅರ್ಥ ಕಳೆದುಕೊಂಡು ಕೊನೆಗೆ ಇನ್ನೇನೋ ಆಗಿರುವುದನ್ನೆಲ್ಲ ಮಾನ್ಯ ಮಾಡುವುದಿಲ್ಲ. ಜಾನಪದೀಯ ಆಚರಣೆಗಳು ಅರ್ಥವಿಲ್ಲದವಲ್ಲ. ಮೂಲದಲ್ಲಿ ವೇದ ಮಾನ್ಯವಾದ ವಿಚಾರಗಳನ್ನೇ ಆಚರಿಸುವುದಾಗಿತ್ತು. ಹಾಗಾಗಿ ವೇದವು ಅದನ್ನು ಒಪ್ಪಿದೆ.

        "ವೈಧಿಕ" ಎಂಬುದು ಸ್ವಯಂ ವಿಶೇಷವಾದ ಶಬ್ದ. ಮೂಲ ಪ್ರಾಕೃತಿಕ ನಿಯಮ ಎನ್ನುವ ಅರ್ಥದಲ್ಲಿ ಅದು ಬಳಕೆಯಾಗಿದೆ. ಮೂಲ ನಿಯಮ ಹೊರತುಪಡಿಸಿ ಅಲ್ಲೇನು ಕೆಲಸ ನಡೆಯುವುದಿಲ್ಲ. ಎಲ್ಲವೂ ಮೂಲ ನಿಯಮಕ್ಕೆ ಬದ್ಧವಾಗಿದೆ. ಜನಗಳಿಗೆ ತಮ್ಮ ಮೂಗಿನ ನೇರಕ್ಕೆ ಅರ್ಥವಾಗಲಿಲ್ಲ ಎಂದ ಮಾತ್ರಕ್ಕೆ ಒಂದು ಆಚರಣೆಯು ತನ್ನ ಅರ್ಥ ಕಳೆದುಕೊಂಡಿದೆ ಎನ್ನುವುದು ಮೂರ್ಖತನ.

ಉದಾ:- ಇಡೀ ಭಾರತಾದ್ಯಂತ ಶ್ರಾದ್ಧಾದಿ ಪ್ರಕ್ರಿಯೆಗಳಿಗೆ "ವೈದೀಕ" ಎಂಬ ಶಬ್ದ ಬಳಕೆಯಾಗಿದೆ. ಏಕೆಂದರೆ ಅದು ಅಷ್ಟು ಅರ್ಥಪೂರ್ಣವಾಗಿದ್ದರೂ ಯಥಾವತ್ತಾಗಿಯೇ ಇದೆ, ಬದಲಾಗಿಯೇ ಇಲ್ಲ.


ಯಾಸ್ಕರ ನಿರುಕ್ತದಲ್ಲಿ "ವೈಧಿಕ" ಶಬ್ದ ಸಿಗಲಿಲ್ಲ ಎಂದರೆ ಅದು ಎಂಥಾ ವಾದ? ಹುಣಸೇ ಮರದಲ್ಲಿ ಮಾವಿನ ಸ್ವಾದವನ್ನು ಬಯಸಿದಂತಾಯಿತು. ಯಾಸ್ಕರು ವೇದಕ್ಕೆ ಸಂಬಂಧಪಟ್ಟ ಶಬ್ದಗಳನ್ನು ಮಾತ್ರ ಸೇರಿಸಿದರೇ ಹೊರತು ಪ್ರಾಕೃತಿಕ ಶಬ್ದಗಳನ್ನು ಸೇರಿಸಲಿಲ್ಲ. ಅವರಿಗೆ ಸಂಬಂಧಪಡದ ಶಬ್ದಕ್ಕೆ ವ್ಯಾಖ್ಯಾನ ಬರೆದಿದ್ದರೆ ಅವರು ಹೋದ ದಾರಿ ಸರಿಯಿಲ್ಲ ಎಂದಾಗುತ್ತಿತ್ತು. ಪ್ರಾಕೃತ ಭಾಷೆಯ ಶಬ್ದವಲ್ಲ, ಇಲ್ಲಿ ವಿವರಿಸುತ್ತಿರುವುದು "ಪ್ರಾಕೃತಿಕ ಶಬ್ದ". ಈ ಪ್ರಾಕೃತಿಕ ಶಬ್ದಗಳೇ ಎಲ್ಲಾ ಭಾಷೆಗಳಿಗೂ ಮೂಲ. "ವೈಧಿಕ" ಶಬ್ದಕ್ಕೆ ಅದರದ್ದೇ ಆದ ಧಾತು ಮೂಲವೂ ಇದೆ. ಅದು "ಪಾರ್ಥಿವ ಕಲ್ಪ"ದಲ್ಲಿ ಸಿಗುತ್ತದೆ. ಅದರಲ್ಲಿ ಹಲವು ಪ್ರಾಕೃತಿಕ ಶಬ್ದಗಳ ಚಿಂತನೆ ಮಾಡಲಾಗಿದೆ. ಅದು ಬಿಟ್ಟರೆ ಬ್ರಹ್ಮ ಕಲ್ಪ, ವಿಷ್ಣು ಕಲ್ಪಾದಿಗಳಲ್ಲಿ ಈ ಶಬ್ದಾಡಂಬರಗಳ ಚಿಂತನೆ ಮಾಡಿಲ್ಲ. ಬರೇ ದೈವೀಕ ಚಿಂತನೆಗಳನ್ನು ಮಾಡುತ್ತಾ ಹೋದರು. ಆದರೆ ಪಾರ್ಥಿವ ಕಲ್ಪದಲ್ಲಿ ಮಾತ್ರ ಶಬ್ದಗಳ ವಿಶ್ಲೇಷಣೆ, ಮನುಷ್ಯನಿಗೆ ಮಾತು ಏಕೆ ಬೇಕು? ದೇವರು ಮನುಷ್ಯನಿಗೆ ಮಾತನ್ನು ಏಕೆ ಕೊಟ್ಟ? ಇವುಗಳೆಲ್ಲದರ ವಿಶ್ಲೇಷಣೆ ಇದೆ.

ಹಾಗಾಗಿ ಮೂಲ ಗ್ರಂಥದಲ್ಲಿ "ವೈಧಿಕ ಭೌತಶಾಸ್ತ್ರ" ಎಂದೇ ಗ್ರಂಥಶೀರ್ಷಿಕೆ ದಾಖಲಾಗಿದೆ. ಹಾಗೇ "ವೈಧಿಕ  ನ್ಯಾಯಶಾಸ್ತ್ರ" ಎಂಬುದೂ ಅರ್ಥಬದ್ಧ ಶಬ್ದ. ನ್ಯಾಯವು ಜೀವಿಗಳಿಗೆ ಬದುಕುವುದಕ್ಕೆ ಆಶ್ರಯ ಮಾಡಿಕೊಡುವುದಕ್ಕಾಗಿ ಇರುವುದು. ಜೀವಿಗಳ ಮೂಲ ಪ್ರಕೃತಿ. ಹಾಗಾಗಿ ಪ್ರಾಕೃತಿಕ ನಿಯಮಗಳಿಗೆ ಬದ್ಧವಾಗಿಯೇ ನಡೆಯುವುದರಿಂದ "ವೈಧಿಕ ನ್ಯಾಯಶಾಸ್ತ್ರ" ಎಂದೇ ಹೇಳಲಾಗುತ್ತದೆ.

ಕೆಲ ವಿದ್ವಾಂಸರು "ವಿಧಿ"ಗೆ ಸಂಬಂಧಪಟ್ಟದ್ದು ವೈಧಿಕ ಎಂದಿದ್ದಾರೆ. ಆದರೆ ಮೂಲತಃ ಪ್ರಾಕೃತಿಕ ನಿಯಮಗಳನ್ನೇ ವಿಧಿ ಎಂದು ಹೇಳಲಾಗಿದೆ. ಏಕೆಂದರೆ ಅದು ನಮ್ಮ ಹಿಡಿತಕ್ಕೆ ಸಿಕ್ಕದ್ದು. ಪ್ರಕೃತಿಯು ನಮ್ಮ ಹಿಡಿತಕ್ಕೆ ಸಿಕ್ಕದ್ದು. ಹಾಗಾಗಿ ಅದು ವಿಧಿ! ಏನು ಮಾಡಲಾಗುತ್ತದೆ, ನಮ್ಮ ವಿಧಿ ಎಂದು ಗೊಣಗುವುದನ್ನು ಕಾಣಬಹುದು. ಅಂದರೆ ಮೀರಲಾಗದ ಪ್ರಾಕೃತಿಕ ನಿಯಮ ಎಂಬ ಭಾವ. ಆ ಅರ್ಥದಲ್ಲಿಯಾದರೆ ವಿಧಿಯನ್ನು "ವೈಧಿಕ" ಶಬ್ದಕ್ಕೆ ಅನ್ವಯಿಸಿದರೆ ಸರಿ. ಆದರೆ ಆಧುನಿಕ ಕಾಲದಲ್ಲಿ ಸಾರ್ವತ್ರಿಕವಾಗಿ ಬಳಸಲ್ಪಡುತ್ತಿರುವ ವಿಧಿ ಎಂಬ ಶಬ್ದಕ್ಕೆ ಅನ್ವಯಿಸುವುದಿಲ್ಲ.

ವೇದಕ್ಕೆ ಸಂಬಂಧಪಟ್ಟದ್ದು "ವೈದಿಕ" ಎಂದು ಈಗ ಆಧುನಿಕರು ಬಳಸುತ್ತಾರೆ. ಆದರೆ "ವೈದಿಕ" ಎಂಬ ಶಬ್ದವು ವೇದದಲ್ಲಿಲ್ಲ. ನಂತರ ಪ್ರಯೋಗ ಭಾಗದಲ್ಲಿ ಮಾತ್ರ ವೇದ ಆಧರಿಸಿದ "ಧೀಯತಾಂ", "ಧಾಯತಾಂ", "ಧಾತಾ" ಎಂದೆಲ್ಲ ಮಹಾಪ್ರಾಣ "ಧ" ಉಳ್ಳ ಶಬ್ದಗಳು ಬರುತ್ತದೆ. "ಮನಃ ಸಮಾಧೀಯತಾಂ", "ಧಾತಾ ಯಥಾ ಪೂರ್ವಮಕಲ್ಪಯತ್" ಇತ್ಯಾದಿ ಮಹಾಪ್ರಾಣ ಪ್ರಯೋಗಗಳೇ ಜಾಸ್ತಿ. ಅಲ್ಲೆಲ್ಲ ಅಲ್ಪಪ್ರಾಣ ಬರುವುದಿವಿಲ್ಲ. ಕೆಲವೊಂದಿಷ್ಟು ಅಕ್ಷರಗಳಿಗೆ ವೇದದ ನಿರುಕ್ತಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಅಲ್ಪಪ್ರಾಣ ಬಳಸಿದರೆ ಗ್ರಾಮ್ಯವಾಗುತ್ತದೆ. ಮಹಾಪ್ರಾಣ ಅಕ್ಷರಗಳೇ ಆಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಮ್ಯಾಕ್ಸ್ ಮುಲ್ಲರ್, ಗ್ರಿಫತ್, ಮೊನೆರ್ ವಿಲಿಯಂಸ್, ಕಿಟ್ಟೆಲ್ ಇತ್ಯಾದಿ ಆಶ್ರಯದಲ್ಲಿ ಬೆಳೆದ ಈಗಿನ ವಿದ್ವಾಂಸವಲಯಕ್ಕೆ ಮೂಲ ಪ್ರಾಕೃತಿಕ ನಿಯಮಗಳ, ಅದರ ಶಬ್ದ ಭಂಡಾರದ ಕಿಂಚಿತ್ ಪರಿಚಯವೂ ಇಲ್ಲ. ಅದಕ್ಕೆ ಶಂಕರಾಚಾರ್ಯರು "ನಹಿ ನಹಿ ರಕ್ಷತಿ ಡುಕೃಙ್ಕರಣೇ" ಎಂದೋ ಹೇಳಿಬಿಟ್ಟಿದ್ದಾರೆ. ಯಾರೋ ಒಬ್ಬ ಹುಚ್ಚ ತನಗೆ ಹೊಳೆದ ಶಬ್ದಕೋಶವನ್ನು ಬರೆದಿಟ್ಟ ಎಂದ ಮಾತ್ರಕ್ಕೆ ಅದು ಪರಿಷತ್ತು ಮಾನ್ಯವಾಗಬೇಕೆಂದಿಲ್ಲ. ಹುಚ್ಚರು ಹೇಳಿದ್ದಕ್ಕೆಲ್ಲ ಚಿಂತನೆ ಮಾಡುತ್ತಾ ಕುಳಿತರೆ ಸಮಯ ವ್ಯರ್ಥ. ಎಲ್ಲ ಕ್ರೈಸ್ತ ಮತಾನುಯಾಯಿಗಳು ನಮ್ಮ ಶಬ್ದಕೋಶ, ನಿಘಂಟು, ನಿರುಕ್ತ, ವೇದ ಭಾಷ್ಯಗಳ ಮೇಲೆ ಏಕೆ ಕೆಲಸ ಮಾಡಿದರು? ಎಂಬ ಪ್ರಶ್ನೆಗೆ ಉತ್ತರವೂ ಯಾವುದೇ ಭಾರತೀಯನಿಗೆ ಹೊಳೆಯದೆ ಇರದು!

ಇನ್ನೊಂದು ಸ್ವಲ್ಪ ವರ್ಷದ ನಂತರ ಅರ್ಧಂಬರ್ಧ ಕಲಿತ ವಿದ್ವಾಂಸರೆಲ್ಲ ಹೊರಟು ಹೋಗುತ್ತಾರೆ. ಆಗ ಏನೂ ಗೊತ್ತಿಲ್ಲದವರು ಸಂಶೋಧನೆ ಮಾಡುತ್ತಾರೆ. ಅವರು ಸರಿಯಾದ ದಾರಿಯಲ್ಲಿ ಹೋಗುತ್ತಾರೆ. ನಮಗೆ ಗೊತ್ತು ಎಂದು ತಪ್ಪು ಗ್ರಹಿಕೆಯನ್ನು ಮಾಡಿಕೊಂಡಿರುವವರು ಸಂಶೋಧನೆ ಮಾಡಲೇ ಹೋಗುವುದಿಲ್ಲ. ಏಕೆಂದರೆ ಅವರಲ್ಲಿ ಪೂರ್ವಾಗ್ರಹವಿರುತ್ತದೆ. ಯಾವುದೋ ಒಂದು ಗೊತ್ತಿದೆ ಎಂದು ತಿಳಿದವನು, ಅದನ್ನೇ ಹುಡುಕುತ್ತಿರುತ್ತಾನೆ. ಅವನು ಮೂಲವನ್ನು ಹುಡುಕುವ ಪ್ರಯತ್ನ ಮಾಡುವುದೇ ಇಲ್ಲ. ಅವನ ಕಲ್ಪನೆಗೆ ಸರಿ ಹೊಂದುವುದನ್ನು ಮಾತ್ರ ಸರಿ ಎನ್ನುತ್ತಾನೆ. ಇಲ್ಲದಿದ್ದರೆ ತಪ್ಪೆನ್ನುತ್ತಾನೆ. ಆದರೆ ಏನೂ ಗೊತ್ತಿಲ್ಲದವನು ಹುಡುಕಲು ಹೊರಟಾಗ ಸರಿಯಾದ್ದೇ ಸಿಗುತ್ತದೆ. ಗಡಿಬಿಡಿ ಬೇಡ!

-      ಕೆ. ಎಸ್. ನಿತ್ಯಾನಂದರು
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ ಚಿಕ್ಕಮಗಳೂರುTuesday, 25 July 2017

Agnir Vrutraani Saama Gaana

ಮಾನವ ರೂಪದ ಜೀವಿಯ ವಿಶಿಷ್ಠ ಬಲ ಜಂಘಾಬಲ. ಅದನ್ನು ಪ್ರಚೋದಿಸುವ ಶಕ್ತಿಯೆಂದರೆ ಅಗ್ನಿ. ಆ ಅಗ್ನಿಯ ದ್ರವಿಣೋದಾ ಗುಣವೇ ಮಾನವ ಅಭ್ಯುದಯ, ಬೌದ್ಧಿಕ ಬೆಳವಣಿಗೆ, ವಿಚಕ್ಷಣ ಮತಿತ್ವ, ತೀವ್ರಗಾಮಿ ವ್ಯಕ್ತಿತ್ವ, ಶೀಘ್ರ ಪ್ರವಹನ ಶಕ್ತಿ, ಸ್ಪಂದನಾ ಗುಣ, ಸಹನಶೀಲತೆಗಳಿಗೆ ಕಾರಣವಾಗಿರುತ್ತದೆ. ಜಾಂಘಿಕವೆಂಬ ಮನೋಂತರ್ಗತ ದೈಹೀಕ + ಜಾಗತಿಕ ಚಾಲನಾಶಕ್ತಿಯಾದ ಅಗ್ನಿ ವಿಶೇಷತೆಯನ್ನು ದ್ರವಿಣೋದಾಗ್ನಿಯೆಂದು ಗುರುತಿಸಲಾಗಿದೆ. ಅದರ ಸಾಮಗಾನ ಮತ್ತು ಭಾವರ್ಥದ ಧ್ವನಿಮುದ್ರಣವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.
Human being's special power is "Janghaa Bala". It is stimulated by "Agni". Human prosperity, intellectual growth, grasping power, dynamic personality, fast movements, spicy, patience is achieved by this Agni division called "Dravinaagni". Listen to its Saama Gaana and commentary.


Thursday, 13 July 2017

How original Bhashya is written for Sama Veda Mantras?

Words are classified mainly on the Naada Taranga. For that the following 14 divisions should be calculated:
1. Udaatta (उदात्त)
2. Anudaatta (अनुदात्त)
3. Swarita (स्वरित)
4. Sanj~naa (संज्ञा)
5. Chihna (चिह्ना)
6. Anunaasika (अनुनासिक)
7. Pluta (प्लुत)
8. Shara (शर)
9. Ksheena (क्षीण)
10. Kshaya (क्षय)
11. Prakhara (प्रखर)
12. Bhanga (भंग)
13. Bheda (भॆद)
14. Nidhana (निधन)

These 14 have to be divided among 5 sutras:
1. Akshara Bheda (अक्षर भॆद)
2. Akshara Cheda (अक्षर छॆद)
3. Akshara Taadana (अक्षर ताडन)
4. Akshara Samvahana (अक्षर संवहन)
5. Akshara Pravahana (अक्षर प्रवहन)

Based on these 5 sutras the Artha Vyaakhyaana will be perceived by the Gaana composed by the combination of Naada. This is the most difficult process. But can be achieved only with the help of Rishi-Munis. This has been done by Brahmarshi K S Nityananda Swamiji, Veda Vijnana Mandira, Chikmagalur in his great epic "Saamaveda Bhashya Samhita" in Kannada.

So please try to understand that Veda Mantras are not at all in Sanskrit. Don't pick up some sanskrit dictionary or useless Nirukta or Nighantus published under British agenda. It will lead to totally wrong interpretations. Veda should become vedya by its Naada Anusandhaana. Artha Anusandhaana is totally useless. Move towards useful path of Naadaanusandaana.

Tuesday, 11 July 2017

Gaayathra Saama

Guru Poornimeya Shubhashayagalu.
Brahmi Muhurthadalli Saama Gaana Abhyaasa:-

 

Listen to Gaayatra Saama Bhaavaartha:-Listen to Gaayatra Saama Nirukta:-


Listen to Gaayathra Saama Gaana:-ಸಾಮವೇದ ಭಾಷ್ಯ ಸಂಹಿತಾ ಗ್ರಂಥ ಲೋಕಾರ್ಪಣೆ
ದಿನಾಂಕ 29-06-2017 ರಂದು ಷಷ್ಠೀ ಗುರುವಾರ ಶುಭ ಘಳಿಗೆಯಲ್ಲಿ ಶ್ರೀಶ್ರೀಶ್ರೀ ನೃಸಿಂಹಾಶ್ರಮ ಸ್ವಾಮಿಗಳು, ಬಾಳೆಕುದ್ರು ಶ್ರೀ ಮಠ, ಹಂಗಾರಕಟ್ಟೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ತಮ್ಮ ಅಮೃತ ಹಸ್ತದಿಂದ ಶ್ರೀಯುತ ಕೆ.ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರು ಕನ್ನಡದಲ್ಲಿ ರಚಿಸಿದ ಸಾಮವೇದ ಭಾಷ್ಯ ಸಂಹಿತಾ ಎಂಬ ಬೃಹದ್ ಗ್ರಂಥವನ್ನು ಲೋಕಾರ್ಪಣೆ ಮಾಡಿ ಆಶೀರ್ವಚನಗೈದರು. 

ಸಾಮವೇದದ ಮಂತ್ರಗಳು ಹೇಗೆ ಪ್ರಪಂಚದ ಜನರ ದುರ್ನಡತೆಯನ್ನು ಸನ್ನಡತೆಯಾಗಿ ಪರಿವರ್ತಿಸಿ, ಪ್ರಪಂಚದಲ್ಲಿ ಮಳೆ ಬೆಳೆ ಸಮೃದ್ಧವಾಗುವಂತೆ ಮಾಡುತ್ತವೆ ಜೊತೆಯಲ್ಲಿ ಪರಸ್ಪರ ಸಹಕಾರ-ಒಗ್ಗಟ್ಟು, ಪ್ರೀತಿ-ವಿಶ್ವಾಸ ಅಭಿವೃದ್ಧಿ ಪಡಿಸುತ್ತವೆ ಇತ್ಯಾದಿ ಮಂತ್ರಗಳ ಉದ್ದೇಶ ಮತ್ತು ಪ್ರಯೋಗವನ್ನು ವಿವರಿಸಿದ  ಶ್ರೀಯುತ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರು ದೇವರಿಗೆ ಶತರುದ್ರೀಯ ಗಾನವನ್ನು ಹಾಡಿ ಭಗವಂತನನ್ನು ಸಂತೋಷಪಡಿಸಿದರು. 

ಶ್ರೀಯುತ ಮಂಜುನಾಥ ಶ್ರೌತಿಗಳು, ಮೈಸೂರು ಇವರು ಸಹ ಸಾಮವೇದ ಮಂತ್ರದ ಗಾನವನ್ನು ಹಾಡಿದರು. ಶ್ರೀಯುತ ಯಾಜಿ ಡಾ. ನಿರಂಜನ್ ಭಟ್, ಉಡುಪಿ ಅವರೂ ಕೂಡ ಸಾಮಗಾನವನ್ನು ಹಾಡಿ ಭಗವಂತನ ಸ್ತುತಿಗೈದರು. ವೈದ್ಯ ಬಿ. ಕುಮಾರಸ್ವಾಮಿಯವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ತಮ್ಮ ಅನುಭವಗಳನ್ನು ಹಂಚಿದರು. 

ಗ್ರಂಥದ ಬೆರಳಚ್ಚು ಮಾಡಿದ ಶ್ರೀಯುತ ಕೆ.ಎಸ್. ಕೃಷ್ಣಮೂರ್ತಿ ಅಡಿಗರವರು ಉಪಸ್ಥಿತರಿದ್ದರು. ಗ್ರಂಥಕ್ಕೆ ಬೇಕಾದ ಕನ್ನಡ ತಂತ್ರಾಂಶ ಹಾಗೂ ಮುಖಪುಟವಿನ್ಯಾಸ ಮಾಡಿದ ಶ್ರೀಯುತ ನಾಗೇಶ ಹೆಚ್.ಜಿ. ಋತ್ವಿಕ್ ವಾಣಿ ಸಂಪಾದಕರು ಇವರು ಸ್ವಾಗತಿಸಿದರು. ಶ್ರೀಯುತ ನಾಗೇಶ ಅಡಿಗರು ಈ ಸಾಮವೇದ ಭಾಷ್ಯ ಸಂಹಿತಾ ಗ್ರಂಥದ ಪ್ರಕಟಣೆಗೆ ಸಹಕರಿಸಿದ ಶ್ರೀಮತಿ ಪ್ರತಿಭಾ ಪೈ ಮತ್ತು ಅವರ ಕುಟುಂಬಕ್ಕೆ ಶುಭವನ್ನು ಹಾರೈಸಿ ವಂದನಾರ್ಪಣೆಗೈದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.


ಸಾಮದ ಮಹತ್ವ (ತಿರುಕ ಸಂಹಿತಾ - ೧೮)
ಜಗವ ಗೆಲ್ಲಲುಬಹುದು ಗಾಯತ್ರದಲಿ ಪೋಷಿಸಬಹುದು
ಜಗವ ಗೋಸಾಮದಲಿ ಜನಮಾನಸವ ಹಿಡಿತದಲಿಟ್ಟು
ಜಗದ ಜಂಜಾಟದಿಂದಲಿ ದೂರೀಕರಿಸಿ ಆತ್ಮೋನ್ನತಿಯ ಸಾಧಿಸಬಹುದು ವೃಂದದಲೀ ||
ಜಗದ್ಗುರು ಶ್ರೀಹರಿಯ ಸಾಮದ ರೂಪ ಆತ್ಮೋನ್ನತಿಯ ನೀವನು
ಜಗಕೆ ಜ್ಞಾನವನೀವ ಅನ್ನಕಾರಣ ವೇದ ಸಾಮ ಕೇಳೈ ನೀನು
ಜಗದ ಸಕಲಾತ್ಮದರಿವ ಪಡೆಯಲು ಪವಮಾನ ಕಾಂಡವನರಿಯೋ ಮಗನೇ ಕೇಳೆಂಬೇ || ೧ ||

ಜೀವ ಜೀವರ ಭೇದ ನರರೊಳಗೆ ಮಾತ್ರವಲ್ಲವು ಸಕಲ
ಜೀವಿಗಳೊಳಗೆ ಇದೆ ಆದರೇನ್ ಜಂಜಾಟವಿಲ್ಲವು ಸಾಮ
ಜೀವಿಗಳಲ್ಲಿ ಮೂಡಿಸುವುದು ಒಮ್ಮತ ಕೇಳು ನಯನ ಮೋಹಕ ಕರ್ಣಾನಂದಕರ ||
ಜೀವಲೋಕದ ಸೃಷ್ಟಿ ನಾದ ಬಿಂದುವಿನಿಂದ ನಾದವೇ
ಜೀವರಸ ಕೇಳು ನಿರಂತರತೆಗೆ ಪ್ರಕೃತಿನಾದವೇ ನಿ
ರ್ಜೀವತೆಗೆ ಜೀವ ತುಂಬುವ ವಿಧ್ಯೆ ಸಾಮದೊಳಗಿದೆ ಕೇಳು ಮಗುವೆ ನೀನೆಂಬೇ || ೨ ||

ಉತ್ತರಾರ್ಚಿಕ ಕೇಳು ಜೀವರ ಸಕಲಾಭಿಷ್ಟದಾಯಕ
ಉತ್ತರೋತ್ತರ ಕಾವ ಚೈತನ್ಯ ಸ್ವರ ವೇದದೊಳಗಣ
ಉತ್ತರಿಸಿ ತೋರುವ ಶಕ್ತಿಯೇ ನಾದಬಿಂದುವು ಸಾಮದೊಳು ಅಡಕವಾಗಿಹುದೂ ||
ತತ್ತರಿಸಿ ಸೊರಗಿದಾ ಜೀವಚರಗಳಿಗೆಲ್ಲ ಸಾಮದಲಿ
ಎತ್ತರದ ಸುಖ ಜೀವನದರ್ಥ ಬೋಧಿಸುವ ಸಾಮವು
ಉತ್ತರೋತ್ತರನೀವುದು ಅದು ರಾಥಂತರವು ಕೇಳೆಲವೊ ಮಗುವೆ ನೀನೆಂಬೇ || ೩ ||

ಇನ್ನು ಕೇಳು ಮಾಧವಿಯು ಮನದ ತೋಷಿಪ ರಾಗ
ತನ್ನೆಲ್ಲ ಕಾಮನೆಯ ನೀಗಿ ಉತ್ತರಿಪ ರಾಗವು ಮೋದವು
ಬನ್ನ ಪಡುವರ ಸಂತೈಪ ರಾಗವಿದೆ ಕೇಳು ಉತ್ಸಾಹ ತುಂಬುವುದು ಮಲ್ಹಾರವು ||
ಚೆನ್ನಾದ ರಾಗಗಳು ಬಾರ್ಹತವು ಸಕಲ ಚರಾಚರಗ
ಳೆನ್ನು ತಲೆದೂಗಿ ಕುಣಿವವು ಕೇಳಿಯಲಿ ಸಂತೋಷ
ವಿನ್ನು ಬಾಳಿನಾ ಸಾರ ಉಣ್ಣಲಿಕ್ಕುವ ಗಾನ ಮಂದಾರ ಕೇಳೈ ಮಗುವೆ ನೀನೆಂಬೇ || ೪ ||

ಮಗುವೆ ಕೇಳ್ ಒಂದು ಮೂರರ ಸಂಧಿ ಬಲ್ಲೆಯ ಅದು
ಮೊಗವೆತ್ತಿ ನಡೆವ ದಾರಿ ತೋರಿಪ ರಾಗ ಗಾಂಧಾರ ಇದರಲಿ
ನಗಧರನು ಮೋಹವನಿಟ್ಟ ಹಾಡಿದೊಡೆ ಬಂದು ಕೃಪೆಯಿಟ್ಟು ಸಲಹುವನಾಗ ||
ನಾಗಪತಿ ಹಣೆಲೆಕ್ಕ ಬಲ್ಲೆಯ ಅದರೊಳಗೆ ಮೂರು ಮತ್ತೇಳು
ಬಗೆ ಕಳೆದು ನೀ ಸಂಧಿ ಹಾಡಲು ನಾಗಶಯನನು ಕುಣಿವ
ಬಾಗೆಯರರಸ ತಾನೆದ್ದು ವೀಣೆಯ ಮೀಟುವನು ರಾಗಕೆ ಅನುಕರಿಸು ನೀನೆಂಬೇ || ೫ ||

ಕಲ್ಲಕರಗಿಸಬಹುದು ಕೊರಡು ಕೊನರುವುದು ಕೇ
ಳೆಲ್ಲವನು ಮಾಡಲು ಶಕ್ತ ಸಾಮವು ಹರಿಯಧಿದೇವತೆ
ಎಲ್ಲದರೊಳಗಿಹನಾತ ನಾದರೂಪದಿ ನಾದಮಯವೆಲ್ಲ ಲೋಕವು ಇದನರಿತುಕೊ ||
ಬಲ್ಲವರಿದ ನರಿತಿಹರು ಜಗದ ನಾಟಕವೆಲ್ಲ ನಾದದಿಂದಲೆ
ಹುಲ್ಲು ಚಿಗುರುವುದು ಜೀವಿ ಜನಿಸುವುದು ಹೆಚ್ಚೇಕೆ ಕೇಳ್
ಎಲ್ಲ ಜೀವಿಗಳ ಹುಟ್ಟಿಗೆ ಕಾರಣವೇ ನಾದ ಅದುವೆ ಸಾಮವು ಕುಣುಪವೆಂಬರದಕೇ || ೬ ||

ಕುಣಾಲದಲಿ ಕೇಳು ಕಂಪವಿದೆ ಕಂಪನದ ಕಾರಣದಿ ಅಣುಚಲನೆ
ಕಾಣೆಲವೊ ಮಗುವೆ ಅಣುಗಳ ಯೋಜಿತ ಯೋಜನೆಯೆ ಧಾತುಗಳು
ಅಣುವಿನಿಂದಲೇ ಎಲ್ಲ ವಸ್ತು ರೂಪವು ಭೌತಿಕವು ಅದಕೆ ಮೇರೆ ನೀಡುವ ಗಾನವಿದಯ್ಯಾ ||
ಕುಣಾಲಗಾನದ ಪರಿಯ ಕೇಳೈ ಮೊದಲಾರು ಹನ್ನೊಂದು ನೆಪ್ಪ
ಳೆಣಿಕೆಯ ನೆಣವು ಹನ್ನೊಂದು ಬಗೆಯಿಹುದು ಅದ ಸಂಧಿಸಿರೆ
ಕುಣಾಲವಪ್ಪುದು ಕೇಳು ಇದು ಪರಾದಿಂದುದ್ಭವಿಸಿ ಮೇಲಣ ಮಧ್ಯಮದೊಳಾವರ್ತಿಸುವುದೂ || ೭ ||

ಮೋಹನವು ಕೇಳ್ ಪ್ರೀತಿ ಜನಕವು ಬಾಂಧವ್ಯ ಬಂಧುರವು
ಬಹಳ ಜೀವಿಗಳಲ್ಲಿ ಕರುಳ ನರ ಮೀಟುವುದು ಅದರಿಂದ
ಇಹದ ವ್ಯಾಪಾರ ಸುಗಮವು ಲೋಕ ಮೋಹಿಪ ವಿಧ್ಯೆಯದರೊಳಗಡಕವಿದು ಕಾಣೂ ||
ಸಹಜ ಸ್ವಭಾವ ಮೀಂಟುವ ವಿಧ್ಯೆ ಅಸಹಜವ ಸೃಷ್ಟಿಪ
ಬಹಳ ನಾಟಕ ವಿಧ್ಯೆ ಸಕಲವನು ಒಂದುಗೂಡಿಪ ವಿಧ್ಯೆ
ಮೋಹನವು ಅರಿತುಕೊ ಮಗುವೆ ಲೋಕದ ಹಿತ ಕಾಯ್ವ ವಿಧ್ಯೆಯಿದು ಮರೆಯದಿರು ನೀನೂ || ೮ ||

ಸುರವು ಕೇಳ್ ಮಧುರ ಗಂಧವ ಮೋಹಕ ಸ್ಥಿರತೆಯೀವುದು
ಸುರರರಸು ನಿರಂತರ ಇದನು ಈಂಟುವ ನಾರದ ತುಂಬುರರು
ಸುರಗಾನ ಪ್ರವೀಣರೈ ಸುರವನರಿತವರೆಲ್ಲ ದೇವತೆಗಳಪ್ಪರೈ ನಿರಂತರ ದೇವತ್ವ ಪಡೆಯೇ ||
ವರ ಕಂಸಗಾನ ಕೇಳ್ ಬಿಂದುಮಾಧವನಿದಕೆ ದೇವತೆ ಚಂದದಿ
ವರವೀವ ಗಾಯಕಗೆ ನಿರಂತರಾನಂದ ಬ್ರಹ್ಮಾನಂದದಾಯಕವು
ಚಿರಯೌವ್ವನವನೀವ ಗುಣ ಇದಕಿದೆ ಕಂಸಗಾನವೆಂಬರು ಇದನು ಅರಿತುಕೊ ಮಗುವೆ || ೯ ||

ಲೋಕದೊಳಗಷ್ಟಸಿರಿ ಲೋಕಜನಿತವು ಕೇಳು ಬಯಸುವರು
ಲೋಕಿಗಳೆಲ್ಲ ಮೊದಲಾರೋಗ್ಯ ಭಾಗ್ಯವೆಂಬರು ಅದಕೆ ಮಾನವಗಾನ
ಲೋಕದಲಿ ಋಜೆಗಳಿಲ್ಲವು ನೀ ಮಾನವನಾಗು ಹಾಡು ಮಾನವಗಾನ ಚಿರಂತನವಾಗಿರಲೀ ||
ಬೇಕು ಬೇಕಾದ ಸಿರಿ ಪಡೆಯೆ ಹೊನ್ನಿಗೆ ಗಭೀರ ಪೌರುಷಕೆ
ಸಾಕು ನಿಷಾಧ ಮಣ್ಣಿಗೆ ಭೃಂಗ ಹೆಣ್ಣಿಗೆ ಮೋದಗಾನವು ಕೇಳು
ಬೇಕಾದ ವಸ್ತುವನೀವ ಕಣ್ವ ಕುಣುಪಗಳು ಇನ್ನೆಷ್ಟೋ ವಿಧದ ಗಾನವು ಸಾಮದೊಳಗಿಹುದು || ೧೦ ||

ತಾರ ಮಧ್ಯಮ ಮಂದ್ರಗಳು ಬೇಕು ಮೂರು ವಿಧ ಜ್ಞಾನ
ತಾರವೇ ಈವುದು ಮಧ್ಯಮವು ಪ್ರಾಪ್ತಿಯು ಮಂದ್ರಯೋಗ್ಯವು
ಕಾರಕನು ಹರಿ ಹಾಡಿ ಪಡೆಯಲು ಬೇಕು ಹೊಗಳಿ ಸ್ತುತಿಸಲು ಬೇಕು ವೃಂದಗಾನದೊಳು ನೀನೂ ||
ಶಾರದೆಯ ಪತಿ ತಾನು ಸ್ತುತಿಸಿ ಹರಿಯನು ಸ್ಥಿರತೆ ಪಡೆದನು
ಶಾರದಗಾನ ಶಕ್ತಿಯರಿತ ವೀರನಾತನು ಹಿರಣ್ಯಗರ್ಭನು
ಪಾರವಿಲ್ಲವೋ ಮಗುವೇ ಕೇಳ್ ವರ್ಣಿಸಲಾಗದು ಸಾಮಶಕ್ತಿಯ ಮುಂದೆ ಆಂಗಿರವ ಪೇಳುವೆನೂ || ೧೧ ||

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ
ವೇದ ವಿಜ್ಞಾನ ಮಂದಿರ
ಚಿಕ್ಕಮಗಳೂರು

Saturday, 8 July 2017

ಕರ್ನಾಟಕ, ಕನ್ನಡ, ಸಿರಿಭೂವಲಯದ ವಿಶ್ವವ್ಯಾಪಕತ್ವ

ಕಾವ್ಯದತಿಶಯ ಜ್ಞಾನ ಸಾಮ್ರಾಜ್ಯ
ಶ್ರೀಕರ ವಯ್ಭವ ಭದ್ರ |
ಭೂಕರವಾದ ಭೂವಲಯದ ಸಿದ್ಧಾನ್ತಕೆ
ಕಾವ್ಯದಾದಿಯೊಳ್ ನಮಿಪೆ || ಸಿರಿ -- ||

ಸಿರಿಭೂವಲಯದಲ್ಲಿ ಭೂವಲಯ ಎಂದು ಭೂಮಿಯ ಕ್ಷೇತ್ರ ವರ್ಣನೆ ಮಾಡಿದೆ. ಇದರ ಗಣಿತವನ್ನು ಗೋಚರಿಸಿದಂತೆ ವಿವರಿಸುವ ಪ್ರಯತ್ನ ಮಾಡುತ್ತೇನೆ. “ಸಕಲ ಭಾಗಾಹಾರ ಕ್ಷೇತ್ರಎಂಬ ಪಾದಪದ್ಯದ ತುಣುಕು ರೀತಿ ಗಣಿತಕ್ರಮ ನೀಡಿತು:

ಭೂಮಿಯ ಒಟ್ಟು ಮೇಲ್ಮೈ ವಿಸ್ತೀರ್ಣದ ಆಧುನಿಕ ಮಾನ = ೫೧೦. ದಶಲಕ್ಷ ಚದುರ ಕಿಲೋಮೀಟರ್. 

>
ಮೂಲದಲ್ಲಿ ಸೂತ್ರೀಕರಿಸಿದ ಸಿರಿಭೂವಲಯದ ವ್ಯಾಪ್ತಿ = ೧೬,೦೦೦ ಚಕ್ರಗಳು.

>
ಅಂದರೆ ಒಂದು ಚಕ್ರದ ವ್ಯಾಪ್ತಿಯು: ೫೧೦. ದಶಲಕ್ಷ ÷ ೧೬ ಸಾವಿರ = ೩೧೮೮೧.೨೫ ಚದುರ ಕಿಲೋಮೀಟರ್.

ಆದರೆ ಭೂಮಿಯು ಹಿಗ್ಗುವಿಕೆ-ಕುಗ್ಗುವಿಕೆಯನ್ನು ಹೊಂದಿರುತ್ತದೆ ಎಂಬ ಪುರಾತನ ಭೌತಶಾಸ್ತ್ರೀಯ ಸತ್ಯವನ್ನು ಪರಿಗಣಿಸಿ, ದೃಷ್ಟಾಂತಕ್ಕಾಗಿ ಹಿಂದಿನ ಒಂದು ನಿರ್ಧಿಷ್ಟ ಕಾಲಘಟ್ಟದ್ದಲ್ಲಿ ನಿಂತು ಲೆಕ್ಕಿಸಿದರೆ:

>
ಭೂಮಿಯ ಒಟ್ಟು ಮೇಲ್ಮೈ ವಿಸ್ತೀರ್ಣದ ಆಧುನಿಕ ಮಾನ = ೫೨೦ ದಶಲಕ್ಷ ಚದುರ ಕಿಲೋಮೀಟರ್.

>
ಮೂಲದಲ್ಲಿ ಸೂತ್ರೀಕರಿಸಿದ ಸಿರಿಭೂವಲಯದ ವ್ಯಾಪ್ತಿ = ೧೬,೦೦೦ ಚಕ್ರಗಳು.

>
ಅಂದರೆ ಒಂದು ಚಕ್ರದ ವ್ಯಾಪ್ತಿಯು: ೫೨೦ ದಶಲಕ್ಷ ÷ ೧೬ ಸಾವಿರ = ೩೨೦೦೦ ಚದುರ ಕಿಲೋಮೀಟರ್.

> ನಮ್ಮ ಈಗಿನ ಕರ್ನಾಟಕ ರಾಜ್ಯದ ಭೂವಿಸ್ತೀರ್ಣ = ,೯೧,೭೯೧ ಚದುರ ಕಿಲೋಮೀಟರ್

> ಅಂದರೆ ಈಗಿನ ಕರ್ನಾಟಕಕ್ಕೆ ಎಷ್ಟು ಚಕ್ರಗಳು ಹೊಂದಿಕೆಯಾಗಬಹುದು ಎಂದು ಲೆಕ್ಕಿಸಿದರೆ: ೧೯೧೭೯೧ ÷ ೩೨೦೦೦ = .೯೯೩೪೬೮೭೫  ಚಕ್ರಗಳು

ಅಂದರೆ ಈಗಿನ ಕರ್ನಾಟಕದ ನಕ್ಷೆ, ಸಾಹಿತ್ಯ ಭಂಡಾರವನ್ನು ಕೇವಲ ಚಕ್ರಗಳಲ್ಲಿ ಕಟ್ಟಿರಿಸಿದ್ದಾರೆ. ಚಕ್ರಕ್ಕೊಂದು ಲಕ್ಷದಂತೆ ಉತ್ಕೀಲ ಗೈದು ವಿಸ್ತರಿಸಿದರೆ ಒಟ್ಟು ಲಕ್ಷ ಕನ್ನಡ ಪದ್ಯಗಳು ಉತ್ಪತ್ತಿಯಾಗುತ್ತವೆ ಎಂಬ ಸೂಚನೆಯು ಪದ್ಯಗಳಲ್ಲಿ ಸಿಗುವುದಕ್ಕೆ ಗಣಿತಾತ್ಮಕ ಋಜುವಾತು ಇದು.

ಕರ್ಮಾಷ್ಟಕ ವಿನಿರ್ಮುಕ್ತಂ
ಮೋಕ್ಷಲಕ್ಷ್ಮೀ ನಿಕೇತನಂ |
ಸಮ್ಯಕ್ತ್ವಾದಿ ಗುಣೋಪೇತಂ 
ಸಿದ್ಧಚಕ್ರಂ ನಮಾಮ್ಯಹಂ ||

ಎಂಬ ಅದ್ಭುತ ಶ್ಲೋಕವನ್ನು ಒಂದೆಡೆ ನೀಡಿದ್ದಾರೆ. ಕುಮುದೇಂದು ಮುನಿಗಳು ಕರ್ನಾಟಕವು ಕರ್ಮಾಷ್ಟಕ ಎಂಬ ಮೂಲದಿಂದ ಕರ್ಮಾಟ()” ಆಗಿ ನಂತರ ಕರ್ಣಾಟ()” ಎಂದಾಯಿತು ಎಂಬ ಸೂಚನೆಗಳನ್ನು ಅಲ್ಲಲ್ಲಿ ಪದ್ಯಗಳಲ್ಲಿ ನೀಡಿದ್ದಾರೆಇದನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ಇಲ್ಲದೆ  ಏನಕ್ಕೇನೋ ಮೂಲ ಪೋಣಿಸಿ ಕರ್ನಾಟಕದ ಇತಿಹಾಸವನ್ನು ತಿರುಚಿದ್ದಾರೆತಥಾಕಥಿತ ವಿದ್ವಾಂಸರುಅಂದರೆ ಎಂಟು ಕರ್ಮಗಳ ಆಟವುಳ್ಳ (ವ್ಯವಹಾವುಳ್ಳ) ದೇಶವೇ ಕರ್ಮಾಟ ದೇಶಕರ್ಮದಾಟವುಳ್ಳ ಕರ್ಮಭೂಮಿ ಎಂದು ಕರೆಯಿಸಿಕೊಳ್ಳುವ ಇಡೀ ಭರತಖಂಡವನ್ನೇ ಕರ್ಮಾಟ ಎನ್ನಲಾಗಿದೆಸೂಕ್ಷ್ಮದಲ್ಲಿ ಕರ್ಮ ವ್ಯವಹರಿಸುವ ದೇಹ. ಅದರ ವ್ಯಾಪ್ತಿಯು ಕಾಲ+ದೇಶಕ್ಕೆ ಚಕ್ರಗಳು (ಷಡಾಧಾರ). ಅಂದರೆ ಷಟ್ಚಕ್ರ ಸಾಧನೆಯಿಂದ ಅಷ್ಟಕರ್ಮ ವಿನಷ್ಟ ಮಾಡುವತ್ತ ದೇಶವೆಂಬ ಅಥವಾ ದೇಹವೆಂಬ ರಥದಲ್ಲಿನ ರಥಿಕನಾದ ಕೃಷ್ಣನೆಂಬ ಚೇತನನು ಬಹಿರಂಗ ಲಕ್ಷ್ಮಿಯ ಮೋಹ ತೊರೆದು ಅಂತರಂಗದ ಮೋಕ್ಷ ಲಕ್ಷ್ಮೀ ನಿಕೇತನದತ್ತ ಉದ್ಯುಕ್ತನಾಗಬೇಕು ಎಂಬ ಸೂಚನೆ ನೀಡುತ್ತಿದೆ.

ಹರುಷ ವರ್ಧನವಾದ ಭಾರತ ದೇಶದ
ಗುರು ಪರಂಪರೆಯಾದ ರಾಜ್ಯ ||
ಲವಣ ವಾರಿಧಿಯದು ಬಳಸುತ ಬಂದಿರೆ | 
ಸವಿಯಶ ವರ್ಧಮಾನ ಪುರ |
ಸಾವಿರ ಪುರದ ನಾಡಾದ ಸೌರಾಷ್ಟ್ರದ
ವಿಶ್ವ ಕರ್ಮಾಟ ದೇಶ || ಸಿರಿ --೨೩೦ ||

        ಇದು ಈಗಿನ ಕಾಲ+ದೇಶಕ್ಕೆ ಅನ್ವಯಿಸಿದ ಸೂತ್ರ. ಅದೇ ಕುಮುದೇಂದು ಮುನಿಗಳ ಕಾಲದಲ್ಲಿ  ವಿಶ್ವವೇ ಕರ್ಮಾಟ ದೇಶ ಎಂದು ಕರ್ನಾಟಕದ ವಿಸ್ತೀರ್ಣವು ವಿಶ್ವವ್ಯಾಪಿ ಎಂದಿದ್ದಾರೆ. ಅಂತಹಾ ಭೂವಲಯವನ್ನು ನಾಲ್ಕು ದಿಕ್ಕುಗಳಿಂದಲೂ ನೂರು ಯೋಜನ ಪ್ರಮಾಣದಲ್ಲಿ ವಿಭಜಿಸಿಕೊಂಡು ಋಷಿ-ಮುನಿ-ದೇವಾನು ದೇವತೆಗಳೆಲ್ಲ ಆಕಾಶ ಗಮನ ಮಾಡುತ್ತಾ ಸುಭಿಕ್ಷೆಯನ್ನುಂಟು ಮಾಡುತ್ತಿದ್ದಾರೆ ಎಂದು ವರ್ಣಿಸಿದೆ:
ಭೂವಲಯವನೆಲ್ಲ ನಾಲ್ಕು ದಿಶೆಗಳಲಿ
ಕಾವುತ ನೂರು ಯೋಜನದ |
ಠಾವಣ ಸುಭಿಕ್ಷತೆಯನುನ್ಟು ಮಾಡುತ
ತಾವು ಆಕಾಶದೆ ಗಮನ || ೨೬ ||

        ಪ್ರಸಕ್ತ ಲಭ್ಯವಿದೆ ಎನ್ನಲಾದ ಸಿರಿಭೂವಲಯ ಚಕ್ರಗಳ ಸಂಖ್ಯೆ ಸಾವಿರದ ನೂರು ಚಿಲ್ಲರೆ ಮಾತ್ರ, ಏಕೆ? ಅದರಲ್ಲೇ ನೀಡಿರುವ ಗಣಿತಾತ್ಮಕವಾಗಿ ಚಿಂತಿಸೋಣ:

ಟದಿ ಅಣುಭಾಗ ಬಂಧದೆ ಪ್ರದೇಶವ ಹೊಕ್ಕು
ವಿದಿಯಾದಿ ಹದಿನಾಲ್ಕ ಹೊಂದಿ |
ಅದನಲ್ಲಿ ನಿಧಿಯಾಗಿ ಶಿವಸೌಖ್ಯ ಹೊಂದಿದ
ಪದವೆ ಮಂಗಲ ಕರ್ಮಾಟಕವು || ಸಿರಿ --೨೨ ||

> ಒಟ್ಟು ಲೋಕಗಳು = ೧೪
> ಒಟ್ಟು ಚಕ್ರಗಳು = ೧೬೦೦೦
> ಪ್ರತಿ ಲೋಕಕ್ಕೆ ನಿಗಧಿತ ಚಕ್ರಗಳು: ೧೬೦೦೦ ÷ ೧೪ = ೧೧೪೨.೮೬  ೧೧೪೩

ಹಾಗಾಗಿ ಭೂಲೋಕ ವ್ಯಾಪ್ತಿಗೆ ಒಳಪಡುವ ೧೧೪೩ ಚಕ್ರಗಳನ್ನು ಉಳಿಸಿ, ಇನ್ನುಳಿದ ಚಕ್ರಗಳಲ್ಲಿರಬಹುದಾದ ಲೋಕೋತ್ತರ ಗಣಿತ ಮತ್ತದರ ಜ್ಞಾನಭಾಗವನ್ನು ಸುಪ್ತಗೊಳಿಸಿದ್ದಾರೆ. ಈಗ ಸಿಕ್ಕಿದೆ ಎನ್ನಲಾಗುವ ಒಟ್ಟು ಸಿರಿಭೂವಲಯ ಚಕ್ರಗಳ ಸಂಖ್ಯೆ ೧೨೭೦ ಹೆಚ್ಚು ಕಡಿಮೆ ಎಂಬ ಭಿನ್ನಾಭಿಪ್ರಾಯಗಳಿವೆ. ಆದರೆ ಇಲ್ಲಿಯವರೆಗೆ ಅಷ್ಟು ಚಕ್ರಗಳು ನಮಗೆ ನೋಡಲು ಸಿಕ್ಕಿಲ್ಲ. ಹಾಗಾಗಿ ಲಭ್ಯ ಚಕ್ರ ಸಂಖ್ಯಾ ನಿರ್ಧಿಷ್ಟತೆ ಇಲ್ಲ.

ವಶವಾ ಲೋಕ ಅಲೋಕ ಭೂವಲಯದ
ತ್ರಸ ನಾಳಿಯೊಳ ಹೊರಗಿರುವ |
ಯಶ ತನಿಯಾದ ಜ್ಞಾನದ ಘನವದನಾಳ್ವ
ರಸವೆ ಮನ್ಗಲದ ಪ್ರಾಭೃತವೇ || ಸಿರಿ -- ||
  
      ಅತೀತ ಕಾಲದ ಭೂಮಿಯ ಪದರಗಳ ಸ್ಪಂದನಗಳನ್ನು ಪುರಾತನ ಭೂಗೋಳಶಾಸ್ತ್ರದ ರೀತ್ಯಾ ಅವಲೋಕಿಸಿದರೆ ಅದರಲ್ಲಡಕವಾಗಿರುವ ಚಕ್ರಾವರ್ತುಲವು ಗೋಚರಿಸುತ್ತದೆ. ಉದಾಹರಣೆಗೆ ಭೂಮಿಯ ತಾಪದ ಚಕ್ರ. ಈಗ ನಾವು ಅನುಭವಿಸುತ್ತಿರುವ ಅತೀವ ಗ್ಲೋಬಲ್ ವಾರ್ಮಿಂಗ್ ಎಂಬುದು ಸ್ವಯಂಕೃತವಲ್ಲ. ನಮ್ಮ ಅಜ್ಜ, ಪಿಜ್ಜರ ಕಾಲದಲ್ಲಿಲ್ಲದಷ್ಟು ತಾಪವು ಈಗಿದೆ. ಅದಕ್ಕೆ ಮನುಷ್ಯರು ಉತ್ಪಾದಿಸುತ್ತಿರುವ ಹಸಿರುಮನೆ ಅನಿಲಗಳು ಮಾತ್ರವೇ ಕಾರಣವಲ್ಲ. ಭೂಗೋಳದಲ್ಲೇ ಅಡಕವಾಗಿರುವ ದಾಖಲೆಗಳನ್ನು ಚಕ್ರದಲ್ಲಿ (matrix) ಹಿಡಿದು ನೋಡಿದರೆ ಕಾಲಕಾಲಕ್ಕೆ ಲಹರಿಯಂತೆ ಏರಿಳಿತಗಳನ್ನು ಹೊಂದುವ ಭೂಮಿಯ ತಾಪವು ಕಾಲ ನಿಯಾಮಕವಾದದ್ದೆಂದು ತಿಳಿದುಬರುತ್ತದೆ. ಅದಕ್ಕೆ ಪೂರಕವಾಗಿ ದೇಶೀಯ ಹೊಗೆ ಇತ್ಯಾದಿ ಸೇರಲ್ಪಡುತ್ತದೆಯಷ್ಟೆ. ಇದನ್ನು ಅರ್ಥಮಾಡಿಕೊಂಡ ಈಗಿನ ಪ್ರಸಿದ್ಧ ಭೂಗೋಳ ಶಾಸ್ತ್ರಜ್ಞ ಗ್ರೆಗ್ಗ್ ಬ್ರ್ಯಾಡನ್ ತನ್ನ ವೈಜ್ಞಾನಿಕ ವಲಯವನ್ನೇ ತೊರೆದು ಆಧ್ಯಾತ್ಮಿಕತೆಯತ್ತ ಸರಿದು ಭೂಮಿ+ಮನುಷ್ಯರು+ಕಾಲ+ಚಕ್ರಾವರ್ತುಲ ಇತ್ಯಾದಿ ಕಾರ್ಯ-ಕಾರಣ-ಸಂಬಂಧದ ಅಧ್ಯಯನದಲ್ಲಿ ತೊಡಗಿದ.

ಅವರ ಪ್ರಕಾರ ೧೫೦೦, ೫೦೦೦, ೧೨೦೦೦, ೫೦೦೦೦ ಇತ್ಯಾದಿ ವರ್ಷಗಳ ಚಕ್ರಾವರ್ತುಲಗಳಿವೆ. ಇನ್ನು ಉಪಚಕ್ರಾವರ್ತುಲಗಳೂ ಇರುತ್ತವೆ. ಅಂದರೆ ನೀವು ಹೇಗೆ ಕಾಲಚಕ್ರವನ್ನು ವಿಭಾಗಿಸಲು ಇಚ್ಛಿಸುತ್ತೀರೋ ಹಾಗೆ ಸೂಕ್ಷ್ಮಾಂಶಗಳನ್ನು ತೆಗೆದುಕೊಳ್ಳಬಹುದು. ನಿಮಗೆ ಭೂಮಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಭೂಮಿಯನ್ನೇ ಪ್ರಶ್ನಿಸಿ ಎಂದು ವೈಧಿಕ ಭೌತಶಾಸ್ತ್ರದ ಒಂದು ವಿಚಾರದ ಉದ್ಘಾರವನ್ನು ಮಾಡಿದ್ದಾರೆ. ಆಗ ಭೂಮಿಯೇ ನಿಮಗೆ ಭೂತಕಾಲದ ಘಟನೆಗಳ ದಾಖಲೆಗಳನ್ನು ಒದಗಿಸಿಕೊಡುತ್ತದೆ. ಅದನ್ನು ವರ್ತಮಾನಕ್ಕೆ ಹೊಂದಿಸಿಕೊಂಡು ಪರಾಮರ್ಷಿಸಿದರೆ ಭವಿಷ್ಯದ ಚಿಂತನೆ ಸಾಧ್ಯಅದಕ್ಕೆ ಸಿರಿಭೂವಲಯದಲ್ಲಿ ಆಧಾರ ರೀತಿ ಸಿಗುತ್ತದೆ:

ತ್ರತರವಾದೆರಳ್ ಪಾದಪದ್ಮಗಳೊಳು
ಬರುವ ಅತೀತಾನಾಗತದ |
ವರದವಾದೋಮ್ದು ಸಮಯದ ಷಟ್ಪದ
-ದರಿಯಿರಿ ವರ್ತಮಾನವನು || ಸಿರಿ --೪೭ ||

ಹಿಂದಿನ ದಾಖಲೆಗಳನ್ನು ನೋಡಿದರೆ ಮೊದಲು ಭೂಮಿಯ ತಾಪವು ಹೆಚ್ಚುತ್ತದೆ, ನಂತರ ಅದಕ್ಕೆ ಪೂರಕವಾಗಿ ಅನಲ-ಅನಿಲ ಪರಿಣಾಮಗಳು ಉಂಟಾಗುತ್ತವೆ. ಇವೆರಡು ಘಟನೆಗಳ ಅಂತರವು ೪೦೦-೮೦೦ ವರ್ಷದಷ್ಟಿರುತ್ತದೆ.

ಆಧುನಿಕ ವಿಜ್ಞಾನದ ಕೆಲ ತಪ್ಪು ಕಲ್ಪನೆಗಳು:-

. ವಿಕಸನ ಸಿದ್ಧಾಂತವು ಮಾನವ ಜೀವನವನ್ನು ವಿವರಿಸುತ್ತದೆ – ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ.

. ನಾಗರೀಕತೆಯು ೫೦೦೦ ವರ್ಷಗಳ ಹಿಂದಷ್ಟೇ ಆರಂಭವಾಯಿತು – ಪುರಾತತ್ವ ಶಾಸ್ತ್ರಜ್ಞರು ಇದರ ಇಮ್ಮುಡಿ ವರ್ಷದಷ್ಟು ಹಿಂದಿನ ನಾಗರೀಕತೆಯನ್ನು ವೈಜ್ಞಾನಿಕವಾಗಿ ತೋರಿಸಿದ್ದಾಗ್ಯೂ. ಉದಾ:- ಟರ್ಕಿಯ ಗೋಬೇಕ್ಲಿ ಟೇಪ್ ಎಂಬ ಜಾಗದಲ್ಲಿ ಈಗಲೂ ಉತ್ಖನನ ಮಾಡುತ್ತಿದ್ದಾರೆ. ಇದು ಲಭ್ಯವಾಗಿರುವ ಪುರಾತನ ನಾಗರೀಕತೆಯ ಅವಶೇಷಗಳು ಎಂದು ದಾಖಲಾಗಿದೆ. ಇನ್ನೂ ಅದರ ಆಳಕ್ಕೆ ಉತ್ಖನನ ಆಗಬೇಕಿದೆ. ವೈಜ್ಞಾನಿಕವಾಗಿ ಅದರ ಕಾಲವು ೧೧,೩೦೦-೧೧,೫೦೦ ವರ್ಷಗಳಷ್ಟು ಹಿಂದಿನದ್ದು ಎಂದು ನಿರೂಪಿಸಲ್ಪಟ್ಟಿದೆ.

. ಮನುಷ್ಯ, ಜೀವ, ಜೀವಿಗಳೆಲ್ಲ ಬೇರೆ ಬೇರೆ; ಒಂದಕ್ಕೊಂದು ಸಂಬಂಧವಿಲ್ಲ (ಸುಳ್ಳು). ಎಲ್ಲವೂ ಪರಸ್ಪರ ಸುಸಂಬಂಧಿತವಾಗಿರುತ್ತವೆ (ಸತ್ಯ).

. ಒಂದರ ಅಭೌತಿಕ ಪರಿಣಾಮವು ಮತ್ತೊಂದರ ಮೇಲಾಗುವುದಿಲ್ಲ (ಸುಳ್ಳು). ಪ್ರಕೃತ್ಯು ಪರಿಣಾಮ ಗೋಚರ ಭಾಗದಲ್ಲೂ ಸಮವಾಗಿ ವ್ಯವಹರಿಸುತ್ತದೆ (ಸತ್ಯ)

. ನಾವೇ ವೈಜ್ಞಾನಿಕ ಔನ್ನತ್ಯದ ತುತ್ತತುದಿಯಲ್ಲಿರುವವರು (ಸುಳ್ಳು); ನಮ್ಮ ಪೂರ್ವಜರು, ಋಷಿ-ಮುನಿಗಳ ಸುಭದ್ರ ಆಧ್ಯಾತ್ಮಿಕ ಔನ್ನತ್ಯಕ್ಕೆ ಹೋಲಿಸಿದರೆ ಈಗಿನ ಸಂಶೋಧನೆಗಳು ಎಂಟರಲ್ಲೊಂದು ಕುಂಟೆಯೂ ಅಲ್ಲ (ಸತ್ಯ).

. ಸ್ಪರ್ಧೆಯೇ ಸಮಸ್ಯೆಗಳನ್ನು ಪರಿಹರಿಸಲು ಇರುವ ಕ್ರಮ (ಸುಳ್ಳು). ಆದರೆ ಪರಸ್ಪರ ಸಹಕಾರದಿಂದ ಮಾತ್ರ ಸಮಸ್ಯಾ ಪರಿಹಾರ ಸಾಧ್ಯ (ಸತ್ಯ).

ಇವೆಲ್ಲ ಸುಳ್ಳೆಂದು ಎಂದೋ ಸಾಬೀತಾಗಿದೆ. ಆದರೂ ಬೋಧನಾ ಸಾಮಗ್ರಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಇದನ್ನೇ ಬಿತ್ತರಿಸುತ್ತಿರುತ್ತವೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಇದೇ ಹಣೇಬರಹ. ಕಾರಣ; ಬಂಡವಾಳಶಾಹಿ ವಿಜ್ಞಾನ.

ವಾತಾವರಣದ ಏರುಪೇರುಗಳೂ ಒಂದು ಚಕ್ರಾವರ್ತುಲವನ್ನು ಹೊಂದಿರುತ್ತವೆ. ಅದನ್ನು ಜಲಾವರಣ, ಶಿಲಾವರಣ, ವಾತಾವರಣ, ಗ್ರಹ ಪರಿಣಾಮ ಇತ್ಯಾದಿಗಳಿಂದ ಅದರ ಚಕ್ರವನ್ನು ಕಂಡುಕೊಳ್ಳಬೇಕಾಗುತ್ತದೆ. ಇವೆಲ್ಲ ಆಧ್ಯಾತ್ಮಿಕತೆಯಲ್ಲಿ ಸಹಜ ಸುಲಭಸಾಧ್ಯ. ಇದು ಕೆಲ ವಿಜ್ಞಾನಿಗಳ ಅನುಭವಕ್ಕೂ ಬಂದಿದೆ. ಬಂದೊಡನೆ ಅವರು ಸಂಶೋಧನೆಯನ್ನು ನಿಲ್ಲಿಸಿ ಆಧ್ಯಾತ್ಮಿಕತೆಯತ್ತ ಸರಿಯುತ್ತಾರೆಯೇ ಹೊರತು ಅದನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿಲ್ಲ. ಹಾಗಾಗಿ ಆಧ್ಯಾತ್ಮಾ ಮೂಲದ ವೈಧಿಕ ಭೌತಶಾಸ್ತ್ರಕ್ಕೂ ಆಧುನಿಕ ವಿಜ್ಞಾನಕ್ಕೂ ನಡುವೆ ಅಂತರವೇರ್ಪಟ್ಟಿದೆ. ಆದರೆ ಈಗಿನ ವಿಜ್ಞಾನವು ಸರ್ ಐಸಾಕ್ ನ್ಯೂಟನ್ ಇಂದ ಬಂದ ಅಂದಾಜು ೩೦೦ ವರ್ಷದ ಹಸುಗೂಸು.

ಈಗ ಆವಾಗ ಹಿನ್ದಣ ಮುನ್ದಕೆ ಬಹಾ
-ನಾಗತ ಕಾಲವೆಲ್ಲವನು |
ಆಗಸದನ್ತವ ಸಾಗುತ ಕಾಣುವ
ಶ್ರೀಗುರುವಯ್ವರ ಜ್ಞಾನ || ಸಿರಿ -- ||
ಈಗಣ ಮುನ್ದಣಾನಾಗತ ಹಿನ್ದಣ 
ಸಾಗಿದ ಕಾಲವೆಲ್ಲರಲೀ |
ಸಾಗುತ ಕಾಣುವ ಸರ್ವಜ್ಞದೇವನ 
ಯೋಗವ ಕಾಣ್ಬ ಭೂವಲಯ || ಸಿರಿ ೧-೬-೧ ||
ಆದಿಗನಾದಿಯ ಕಾಲವೆ ನಿನ್ನೆಯು 
ಈ ದಿನ ನೀನು ಬಾಳುವುದು |
ಆದಿಯ ವಶ ರತ್ನತ್ರಯಗಳ ಸಾಧಿಪ 
-ನಾದಿ ಅನನ್ತವೆ ನಾಳೆ || ಸಿರಿ ೧-೬-೧೧೭ ||

ಈಗಿನ ಕಾಲಘಟ್ಟದ ೫೦೦೦ ವರ್ಷಗಳ ಪೂರ್ವಜರನ್ನು ಗಮನಿಸಿದರೆ ಅವರು ವಿಜ್ಞಾನವನ್ನು ಹಿಡಿದು ನೇತಾಡಲಿಲ್ಲ. ಪ್ರಕೃತಿಯ ನಾಡಿ ಮಿಡಿತವನ್ನು ಅಧ್ಯಯನ ಗೈದು, ಜೀವಿಗಳ ನಡುವಿನ ಸಂಬಂಧ, ಮನುಷ್ಯರ ರಕ್ತ ಸಂಬಂಧ, ಕೌಟುಂಬಿಕ ನೆಲೆಗಟ್ಟು, ಒಗ್ಗೂಡಿದ ಸ್ವಸ್ಥ ಸಮಾಜ ನಿರ್ಮಾಣದತ್ತಲೇ ದಾಪುಗಾಲಾಕುತ್ತ ತಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದರು. ವಿಜ್ಞಾನ ಬಂದೊಡನೆಯೇ ಅದರ ಶಬ್ದಭಂಡಾರಕ್ಕೆ ದಾಸರಾಗುತ್ತಾ, ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಒಂದು ವಿಚಾರದ ಅಸ್ಥಿತ್ವ ಎಂದು ನಂಬುತ್ತೇವೆ ಎಂಬ ನಿಲುವಿಗೆ ಬಂದರು. ಆದರೆ ಚೋದ್ಯವೆಂದರೆ ಎಷ್ಟೆಷ್ಟೋ ಘಟನಾವಳಿಗಳನ್ನು ಈಗಿನ ವಿಜ್ಞಾನಕ್ಕೆ ವಿಶ್ಲೇಷಿಸಲಾಗಲೀ, ವಿವರಿಸಲಾಗಲೀ ಸಾಧ್ಯವೇ ಆಗುತ್ತಿಲ್ಲ. ಆದರೆ ವೇದ ಗಣಿತಸೂತ್ರದಿಂದ ಇದನ್ನರಿಯಲು ಸಾಧ್ಯವಿದೆ ಎಂದು ಸಿರಿಭೂವಲಯ ಹೇಳುತ್ತದೆ:-

ಜಾತಿ ಜರಾ ಮರಣವನು ಗುಣಾಕಾರ
-ದಾತಿಥ್ಯ ಬರೆ ಭಾಗಹಾರ |
ಖ್ಯಾತಿಯ ಭಂಗದೊಳರಿವಮ್ ವಿಖ್ಯಾತ
ಪೂತವು ಪುಣ್ಯ ಭೂವಲಯ || ಸಿರಿ --೩೨ ||
ಪದಪದ್ಮದೊಳಗಂಕಾಕ್ಷರ ವಿಜ್ಞಾನ
ಅದರ ಗುಣಾಕಾರ ಮಗ್ಗಿ |
ವದಗಿ ಬಂದಾ ಧ್ಯಾನಿಯರಿವಿಗೆ ಸಿಲುಕಿಹ
ಸದವಧಿ ಜ್ಞಾನ ಭೂವಲಯ || ಸಿರಿ --೩೩ ||

ಇಂತಹಾ ಸಂದರ್ಭದಲ್ಲಿ ಅಧುನಿಕ ವೈಜ್ಞಾನಿಕ ಆಧ್ಯಾತ್ಮವಾದಿಗಳು ಕ್ವಾಂಟಮ್ ಫಿಸಿಕ್ಸನ್ನು ಕ್ರೈಸ್ತ ವಿಚಾರಧಾರೆಯ  ಆಧ್ಯಾತ್ಮಿಕತೆಗೆ ಸೇತುವೆಯಾಗಿ ಬಳಸಿಕೊಂಡರು. ಏಕೆಂದರೆ ಕ್ವಾಂಟಮ್ ಫಿಸಿಕ್ಸಿನಲ್ಲಿ ಸ್ವಲ್ಪ ಸ್ವತಂತ್ರತೆ ಹೆಚ್ಚಿತ್ತು. ಅದು ದೇಹ + ಪ್ರಕೃತಿ + ಕಣಗಳ ನಡುವಿನ ಶಕ್ತಿ ಕ್ಷೇತ್ರಗಳಲ್ಲಿ ಏಕಾಂತವನ್ನು ಮಂಡಿಸಿತು. “ಪ್ರಪಂಚದಲ್ಲಿ ಪ್ರತಿಯೊಂದು ಪ್ರತಿಯೊಂದಕ್ಕೂ ಸಂಬಂಧ ಹೊಂದಿದೆಎಂಬುದನ್ನು ಶುಕ್ರವಾರ ಜುಲೈ ೨೫, ೧೯೯೭ರಲ್ಲಿ ಸ್ವಿಜ್ಜೆರ್ಲ್ಯಾಂಡಿನ ಜಿನೇವಾ ವಿಶ್ವವಿದ್ಯಾಲಯದಲ್ಲಿ ನಿಕೋಲಸ್ ಜಿಸಿನ್ ಇವರ ಆಧುನಿಕ ಪ್ರಯೋಗವು ಸಾದರಪಡಿಸಿದೆ. ಅದನ್ನು ೩೪೦೦ ಪತ್ರಕರ್ತರು, ಶಿಕ್ಷಕರು, ವಿಜ್ಞಾನಿಗಳು ಹಾಗೂ ಅಭಿಯಂತಕರು ಸಾಕ್ಷೀಭೂತರಾಗಿದ್ದರು. ಅವರ ಮೂಲ ಸಿದ್ಧಾಂತವೆಂದರೆ ಆಟಮ್ ಒಂದು ಮೂಲ ಕಣವಾದಫೋಟಾನ್ಎಂಬುದನ್ನು ಛೇದಿಸಿ ಫೋಟಾನ್-, ಫೋಟಾನ್- ಎಂದು ಮಾಡಿ ಅವೆರಡನ್ನು ಒಂದು ವಿಶೇಷ ಸಂದೂಕದಲ್ಲಿರಿಸಿದರು. ಕಣಾರ್ಧಗಳ ಇಕ್ಕೆಲಗಳಲ್ಲಿ ಮೈಲಿ ಉದ್ದದ ಕೊಳವೆಗಳನ್ನು ಇರಿಸಿದರು. ಒಂದು ಫೋಟಾನ್ ಕಣಾರ್ಧದ ಮೇಲೆ ಪ್ರಯೋಗಿಸಲ್ಪಟ್ಟ ಬಲದಿಂದ ಅದು ತನ್ನೆದಿರಿನ ಕೊಳವೆಯಲ್ಲಿ ಮೈಲಿ ಕ್ರಮಿಸಿ ಗಮ್ಯವನ್ನು ಸೇರಿತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಉಳಿದರ್ಧ ಫೋಟಾನು ಕಣವೂ ಅದೇ ಅನುಭವವನ್ನು, ಪರಿಣಾಮವನ್ನೂ ಹೊಂದಿತು. ಇದನ್ನುಎಂಟ್ಯಾಂಗಲ್ಮೆಂಟ್ಎಂದು ಕರೆದರು. ಪ್ರಯೋಗದ ಸಾಧ್ಯಾಸಾಧ್ಯತೆ ಬದಿಗಿರಿಸಿ ಫಲಿತಾಂಶವನ್ನು ಗಮನಿಸೋಣ. ಕಣವೊಂದು ವಿಭಜಿಸಲು ಭೌತಿಕವಾಗಿ ಕಣಾರ್ಧ ದ್ವಯಗಳಾದವು. ಆದರೆ ಬೇರ್ಪಟ್ಟರೂ ಅವೆರಡೂ ಪರಸ್ಪರ ಶಕ್ತಿ ಸಮಾಗಮವನ್ನೂ ಹೊಂದಿಯೇ ಇದ್ದವು. ಅದನ್ನು ವೇದದಲ್ಲಿಪರಿಣಯಎಂದಿದ್ದಾರೆ.

ಆದರೆ ತನ್ನ ಕೊನೆಯ ದಿನಗಳವರೆಗೂ ಆಲ್ಬರ್ಟ್ ಐನ್ಟೈನ್ ರೀತಿಯ ಒಂದು ಕಣದ ಮೇಲಾಗುವ ಪರಿಣಾಮವು ಇನ್ನೊಂದರ ಮೇಲೆ ಪ್ರಭಾವ ಬೀರುತ್ತದೆ ಎಂಬ ಸೈದ್ಧಾಂತಿಕವಾಗಿ ಮಾತ್ರವಿದ್ದ ವಾದವನ್ನು ಸರಿ ಎಂದು ಒಪ್ಪಲು ಬಿಸಿ ತುಪ್ಪದ ಪರಿಯಲ್ಲಿ, ಉಗುಳೋಕೂ ಆಗದೆ, ನುಂಗೋಕೂ ಆಗದೆ ಒದ್ದಾಡಿದ. ಹಾಗಾಗಿ ಇದನ್ನು spooky action at a distance ಎಂದು ಕರೆದ.

ಈರ್ವರು ಸ್ನೇಹಿತರು ಒಂದೇ ವಿಶ್ವವಿದ್ಯಾಲಯದಲ್ಲಿ ಒಂದೇ ರೀತಿಯ ಗಣಿತ, ವಿಜ್ಞಾನಗಳನ್ನು ಓದಿದರೂ ಅವರ ಚಿಂತನೆಗಳು ಬೇರೆಯಾಗಿದ್ದವು. ಅವರೇ ಆಲ್ಬರ್ಟ್ ಐನ್ಸ್ಟೀನ್ ಮತ್ತು ಜಾನ್ ವ್ಹೀಲ್ಹರ್. ಐನ್ಸ್ಟೀನ್ ಪ್ರಪಂಚದ ಎಲ್ಲವೂ ಬೇರೆ ಬೇರೆ ಎಂದರೆ ಜಾನ್ ವ್ಹೀಲ್ಹರ್ ಪ್ರಪಂಚದ ಎಲ್ಲವೂ ಸುಸಂಬಂಧಿತವಾಗಿವೆ ಎಂದ. ವ್ಹೀಲ್ಹರ್ ಹೇಳಿದ್ದರುನೀವು ಅತ್ಯಂತ ಸೂಕ್ಷ್ಮ ಕಣವನ್ನು ನೋಡುವ ಸೂಕ್ಷ್ಮದರ್ಶಕವನ್ನು ಕಂಡುಹಿಡಿದರೂ ಅದಕ್ಕೂ ಸೂಕ್ಷ್ಮಕಣವು ಇರುತ್ತದೆ. ನೀವೆಂದಿಗೂ ಎಂತಹಾ ಪ್ರತಿಷ್ಠಿತ ದೂರದರ್ಶಕಗಳನ್ನು ಕಂಡುಹಿಡಿದು ವಿಶ್ವದ ಅಂತ್ಯ ಭಾಗವನ್ನು ನೋಡಲಾಗುವುದಿಲ್ಲ. ಅದು ಇನ್ನೂ ಹತ್ತು ಅಂಗುಲ ಮೀರಿರುತ್ತದೆ ಎಂಬಂತಹಾ ಪುರಾತನ ಭಾರತೀಯ ನಿಲುವನ್ನು ಪ್ರಸ್ತಾಪಿಸಿದ. ಅವರು ಹೇಳಿದ ಮತ್ತೊಂದು ವಾಕ್ಯವೆಂದರೆಏನೋ ಸೂಕ್ಷ್ಮವಾದದ್ದನ್ನು ಕಂಡುಹಿಡಿಯುತ್ತೇವೆ ಎಂದು ನೋಡುವ ದೃಷ್ಟಿಕೋನದಲ್ಲಿಯೇ ಅದನ್ನು ಸೃಷ್ಟಿಸಿಕೊಳ್ಳುತ್ತೀರಾ! ಅಂದರೆ ಅದು ವೈಧಿಕ ಭೌತಶಾಸ್ತ್ರದಲ್ಲಿ ಗಾಲವರು ಹೇಳಿರುವ ಭಾಸ ಎಂದೇ ಆಯಿತು.

ಮಾನವನ ಹೃದಯವೇ ವಿದ್ಯುತ್ + ಕಾಂತೀಯ ಕಿರಣಗಳ ವ್ಯವಹಾರವುಳ್ಳ ಭಾಗ. ನೀವು ಹೃತ್ ಪ್ರೇಷಿತವಾಗಿ ಪ್ರಪಂಚದ ಯಾವುದೇ ತತ್ವವನ್ನು ಸಂಪರ್ಕಿಸಬಹುದು. ಏಕೆಂದರೆ ಪ್ರಪಂಚವೂ ಶಬ್ದ + ಕಿರಣಗಳ ವ್ಯವಹಾರವೇ ಆಗಿದೆ. ಇದು ಕಾಲ್ಪನಿಕ ಆರಾ ಎಂದು ಸುಳ್ಳು ಸುಳ್ಳಾಗಿರುವ ಕಿರ್ಲಿಯನ್ ಫೋಟೋಗ್ರಾಫಿಯಲ್ಲ! ಇದು ವೈಜ್ಞಾನಿಕವಾಗಿ ಸಿದ್ಧಪಡಿಸಿದ ಹೃದಯದಿಂದ ಉತ್ಪನ್ನವಾಗುವ ವಿದ್ಯುತ್ಕಾಂತೀಯ ತರಂಗಗಳ ಕ್ಷೇತ್ರ ವಿಭಾಗ. ಅದನ್ನು ಕುಮುದೇಂದು ಮುನಿಯುಭಾಗಾಭಾಗ ಕ್ಷೇತ್ರಎಂದು ಸೂಚ್ಯವಾಗಿ ಹೇಳಿದ್ದಾರೆ. ೧೯೯೩ರಲ್ಲಿ ನಡೆದ ಸಂಶೋಧನೆಯಲ್ಲಿ ಮಾನವ ಡಿ.ಎನ್.ಎಯು ಹೃತ್ ಪ್ರೇಷಿತ ನವರಸ ಇತ್ಯಾದಿ  ಭಾವನೆಗಳಿಂದ ತನ್ನ ವಿನ್ಯಾಸದಲ್ಲಿ ವ್ಯತ್ಯಾಸವನ್ನು ಹೊಂದುತ್ತದೆ ಎಂದರು.

ಮಾನ, ಮಾಯವು, ಲೋಭ, ಕ್ರೋಧ ಕಷಾಯಗಳ್
ತಾನೌಪ ಹದಿನಾರು ಭಂಗಹ್ |
ತಾನಲ್ಲಿ ಬಿಟ್ಟೋಡೆ ನಿಜರೂಪದೊಳಾತ್ಮ
ಆನನ್ದ ರೂಪನಾಗುವುದಮ್ || ಸಿರಿ --೨೫ ||
ರತ್ನ ಮೂರರ ರೂಪ ಧರಿಸಿದ ಶುದ್ಧ
ನೂತನಾನ್ತರನ್ಗದ ವರಶ್ರೀ |
ಯತ್ನದಿಮ್ ಬನ್ದ ಸದ್ಧರ್ಮ ಸಾಮ್ರಾಜ್ಯದ
ನಿತ್ಯಾತ್ಮ ರೂಪವೀ ಲೋಕ || ಸಿರಿ --೨೬ ||

ಅಂದರೆ ಅರಿಷಡ್ವರ್ಗ ಇತ್ಯಾದಿ ಸಂಯೋಗ ಭಂಗ ದೋಷಗಳಿಂದ ಡಿ.ಎನ್. ಒತ್ತಡಕ್ಕೆ ಒಳಗಾಗಿ ಸಂಕುಚಿತವಾಗುತ್ತದೆ. ಅದೇ ಸುಖ, ಸಂತೋಷ, ಆನಂದ, ಮೈತ್ರಿ, ಪ್ರೀತಿ, ಇತ್ಯಾದಿಗಳಲ್ಲಿ ಡಿ.ಎನ್. ವಿಕಸನಗೊಳ್ಳುತ್ತದೆ.

೩೦೦ ವರ್ಷಗಳಿಂದ ಹೇಳಿಕೊಂಡು ಬಂದ ವಿಜ್ಞಾನವೇ ಇಂತಹಾ ಪ್ರಯೋಗಗಳನ್ನು ನಡೆಸಿ ತನ್ನ ಇಡೀ ಸಿದ್ಧಾಂತವನ್ನು ಕಲಸುಮೇಲೋಗರ ಮಾಡಿಕೊಂಡಿದೆ. ಮನುಷ್ಯ, ಜೀವ, ಜೀವಿಗಳೆಲ್ಲ ಬೇರೆ ಬೇರೆ; ಒಂದರ ಪರಿಣಾಮವು ಮತ್ತೊಂದರ ಮೇಲಾಗುವುದಿಲ್ಲ; ನಾಗರೀಕತೆ ಆರಂಭವಾಗಿ ಕೇವಲ ೫೦೦೦ ವರ್ಷ ಆಗಿದೆ; ನಾವೇ ವೈಜ್ಞಾನಿಕ ಔನ್ನತ್ಯದ ತುತ್ತತುದಿಯಲ್ಲಿರುವವರು, ಸ್ಪರ್ಧೆಯೇ ಸಮಸ್ಯೆಗಳನ್ನು ಪರಿಹರಿಸಲು ಇರುವ ಕ್ರಮ ಇತ್ಯಾದಿಗಳೆಲ್ಲ ವೈಜ್ಞಾನಿಕ ಸುಳ್ಳುಗಳೆಂದು ಎಂದೋ ಒಪ್ಪಿಯಾಗಿದೆ. ಆಧುನಿಕ ಸಂಶೋಧನೆಗಳು ಮಾನವ ಜೀವ ಚರ್ಯೆಯ ಗಣಿತವು ಆಕಸ್ಮಿಕವಲ್ಲ

ಆದರೆ ನಮ್ಮ ಪಠ್ಯಪುಸ್ತಕಗಳಲ್ಲಿ ಮಾತ್ರ ಇದನ್ನೇ ಬೋಧಿಸುತ್ತಾರೆ. ಈಗಿನ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆಯಾದ ಕರ್ನಾಟಕದ ಪರಿಷ್ಕೃತ ಪ್ರೌಢಶಾಲಾ ಪಠ್ಯಪುಸ್ತಕವನ್ನು ನೋಡಿದರೆ ಅದನ್ನು ತಿಪ್ಪೆಗುಂಡಿಗೆ ಹಾಕಲೂ ಹೇಸಿಗೆಯಾಗುತ್ತದೆ. ಅಷ್ಟು ಕಳಪೆ ಮಟ್ಟದ ಬೋಧನಾ ವಿಚಾರಗಳನ್ನು ಒಳಗೊಂಡಿದೆ. ಯಾರೋ ಬರೀತಾರೆ, ಇನ್ಯಾರೋ ಟಿ.., ಡಿ.., ತೆಗೆದುಕೊಳ್ಳುತ್ತಾರೆ, ಮತ್ಯಾರೋ ಸಹಿಯಾಕುತ್ತಾರೆ, ಮುದ್ರಣಾಲಯವು ಅತೀ ಕಡಿಮೆ ದರ್ಜೆಯ ಹಾಳೆ ಬಳಸಿ ಪಠ್ಯಪುಸ್ತಕ ಹೊರತರುತ್ತದೆ. ಶಾಲೆಗಳಲ್ಲಿ ಅದನ್ನು ಹೇರುತ್ತಾರೆ. ಆದರೆ ಅದರಲ್ಲಿರುವ ಎಷ್ಟೋ ವೈಜ್ಞಾನಿಕ ಸಿದ್ಧಾಂತಗಳು ಎಂದೋ ತಿಪ್ಪೆ ಸೇರಿಯಾಗಿದೆ ಎಂದೂ ತಿಳಿದಿಲ್ಲ; ತಿಳಿದಿದ್ದರೂ ತಿಳಿದಿಲ್ಲದಂತೆ ಕೆಲವರಿರುತ್ತಾರೆ.

ಣವದನ್ಕ ಪರಿಪೂರ್ಣವಾಗಿಸಿದರಹನ್ತ
ಅವನಿಗೆ ಸಿದ್ಧತ್ವ ರೀತಿ |
ಅವತಾರದಾದಿಯೆ ಲೋಕಾಗ್ರ ಮುಕ್ತಿಯ
ನವಮಾನ್ಕ ಪ್ರಾಪ್ತಿಯೆ ಲೋಕ || ಸಿರಿ --೨೭ ||
ನರನು ಲೋಕದ ರೂಪ ಪರ್ಯಾಯ ಹೊನ್ದಲು
ಹರಿ ಹರ ಜಿನರೆಮ್ಬ ಸರ |
-ತಿರೆಯಗ್ರ ಲೋಕಾಗ್ರ ಮುಕ್ತಿಯ ಸಾಮ್ರಾಜ್ಯ
ಹರುಷದ ಲೋಕಪೂರಣವು || ಸಿರಿ --೨೮ ||

ದೇಹವೇ ಒಂದು ಗಣಿತ ಚಕ್ರದಲ್ಲಿ ನ್ಯಾಸಗೊಂಡಿರುತ್ತದೆ. ಪ್ರತಿಜೀವಕೋಶವು ಮಿದುಳಿನಿಂದ ಉಂಟಾಗುವ ರಾಸಾಯನಿಕ ಪ್ರಕ್ರಿಯೆಗಳಿಗೆ ಸ್ಪಂದಿಸುತ್ತದೆ. ಮಿದುಳಿನ ರಾಸಾಯನಿಕ ಪ್ರಕ್ರಿಯೆಗಳು ಹೃದಯದಿಂದ ಹೊರಡುವ ವಿದ್ಯುತ್ಕಾಂತೀಯ ಲಹರಿಯೊಂದಿಗೆ ಸ್ಪಂದಿಸುತ್ತದೆ. ಪ್ರತಿನಿತ್ಯವೂ ಮಿದುಳು+ಹೃದಯಗಳ ನಡುವೆ ತರಂಗ+ಕಿರಣಗಳ ವ್ಯವಹಾರ ನಡೆಯುತ್ತಿರುತ್ತದೆ. ಭಯ, ಒತ್ತಡ, ಕ್ರೋಧ ಇತ್ಯಾದಿಗಳು ವಿಕೃತ ತರಂಗಗಳನ್ನು ಜೀವಕೋಶದಿಂದ ಮಿದುಳಿಗೆ ಹಿಂತಿರುಗಿಸುತ್ತವೆ. ಅದು ಕ್ಷಣಿಕ ಭದ್ರತಾ ವ್ಯವಸ್ಥೆಯ ರೂಪದಲ್ಲಿ ಸರಿ. ಆದರೆ ಅದು ದಿನಗಟ್ಟಲೆ ನಡೆದರೆ ದೇಹ ಚಕ್ರದ ಸಂಖ್ಯೆಗಳು ಶೂನ್ಯವಾಗುತ್ತಾ ಬರುತ್ತವೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿಇನ್ಸ್ಟಿಟ್ಯೂಟ್ ಆಫ್ ಹಾರ್ಟ್ ಮ್ಯಾತ್ಎಂಬ ಸಂಸ್ಥೆಯೊಂದಿದೆ. ಅವರು ಈಗಿನ ವಿಜ್ಞಾನವು ಕಂಡುಹಿಡಿಯದ ಕೆಲವು ವಿಚಾರಗಳನ್ನು ಅಂದಾಜು ೨೦ ವರ್ಷಗಳಿಂದ ಸಂಶೋಧಿಸುತ್ತಿದ್ದಾರೆ. ವಿಜ್ಞಾನವು ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ ಎನ್ನುತ್ತದೆ. ಆದರೆ ಅದನ್ನು ಮಾಡಲು ಒಂದು ಮೆಷಿನ್ ತಯಾರಿಸಿದರೆ ಸಾಕು. ಹಾಗಾದರೆ ಮತ್ತೇನು ಕಾರ್ಯವನ್ನು ನಮ್ಮ ಹೃದಯವು ಮಾಡುತ್ತದೆ? ಒಳ್ಳೆಯ ಅನುಭವಗಳಿದ್ದಾಗ ಹೃದಯದಿಂದ ಮಿದುಳು ತಲುಪುವ ತರಂಗವು ಸೊಗಸಾಗಿ ಲಯಬದ್ಧವಾಗಿರುತ್ತದೆ. ಅದನ್ನು Heart Brain Coherence ಎನ್ನುತ್ತಾರೆ. ಅದರ ಅತೀ ಕಡಿಮೆಯುಳ್ಳ ಶುಭಪ್ರದ ಮೊತ್ತವೆಂದರೆ .೦೧ ಹರ್ಟ್ಸ್. ಕಾಕತಾಳೀಯವೆಂದರೆ ಇದೇ ಆವರ್ತನೆಯಲ್ಲಿ ಸಮುದ್ರದಲ್ಲಿರುವ ವೇಲುಗಳು ಸಂವಹನ ನಡೆಸುವುದು. ಆಗ ಮಿದುಳು ಭದ್ರತೆಯ ಕಲ್ಪನೆಯನ್ನು ಹೊಂದಿ ಒತ್ತಡಕ್ಕೆ ಸಂಬಂಧಿಸಿದ ರಾಸಾಯನಿಕ ಪ್ರಕ್ರಿಯೆಯನ್ನು ಮಾಡುವುದಿಲ್ಲ. ಅದರ ಬದಲು ಸ್ವಯಂ ಶಮನಕಾರಕ ಕಿರಣಗಳನ್ನು ಜೀವಕೋಶಗಳಿಗೆ ಕಳುಹಿಸುತ್ತದೆ ಎಂದು ಸಂಸ್ಥೆಯು ಪ್ರಾಯೋಗಿಕವಾಗಿ ದಾಖಲಿಸಿದೆ. ಇದು ಅತೀರಕ್ತದೊತ್ತಡ, ಹೃನ್ನಾಳೀಯ ಪ್ರತಿಬಂಧ, ಪಕ್ಷವಾತ, ಇತ್ಯಾದಿಯನ್ನು ತಡೆಯುತ್ತದೆ. ಅದು DHEA (Dehydroepiandrosterone) ಹಾರ್ಮೋನನ್ನು ಕ್ರಮಪಡಿಸುತ್ತದೆ. ಇದು ಮತ್ತೆಲ್ಲ ಹಾರ್ಮೋನುಗಳೊಂದಿಗೆ ವ್ಯವಹರಿಸುತ್ತದೆ. ಕೇವಲ ಪ್ರೋತ್ಸಾಹ, ಹೊಗಳಿಕೆ, ಪ್ರೀತಿ, ಸ್ನೇಹ ಇತ್ಯಾದಿ ಆನಂದಮಯ ಭಾವನೆಗಳನ್ನು ಜಾಗೃತಗೊಳಿಸುವುದರಿಂದ DHEA ಮೂರು ನಿಮಿಷದಲ್ಲಿ ೧೦೦% ಆಗುತ್ತದೆ. ಆಗ ಒಡ್ಡದಕಾರಕ ರಾಸಾಯನಿಕ ಪ್ರಕ್ರಿಯೆಯು ೨೩% ತಗ್ಗುತ್ತದೆ. ಇವು ದೇಹವು ತಾನೇ ತಾನಾಗಿ ಸರಿಯಾಗಲು ಬೇಕಾದ ಗುಣಗಳಾಗಿವೆ. ಅಲ್ಲೊಂದು ಚಕ್ರ ವಿನ್ಯಾಸವಿದೆ. ಅದನ್ನರಿತು ಬೇಕಾದ ಸಂಖ್ಯಾ ನ್ಯಾಸಗೊಳಿಸಿದರೆ ಮೈಯೊಂದು ಆಟದ ಮೈದಾನವಷ್ಟೆ.

ಆದರೆ ಎಲ್ಲ ಸಂದರ್ಭದಲ್ಲಿ ಸ್ವಯಂ ಚಿಕಿತ್ಸೆಯು ರೋಗವನ್ನು ಗುಣಪಡಿಸುವುದಿಲ್ಲ, ಏಕೆ? ಒಮ್ಮೆ ರೋಗ ಬಂದೊಡನೆ ಅದರ ವ್ಯಾಖ್ಯಾನವೇ ದೇಹದ ವಿಶೇಷ ಶಕ್ತಿಯನ್ನು ಕುಗ್ಗಿಸುತ್ತದೆ. ನನ್ನ ಕೈಯಲ್ಲಿ ರೋಗವನ್ನು ಗೆಲ್ಲಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ನಂತರವೇ ವೈಧ್ಯರನ್ನು ಕಾಣುತ್ತಾರೆ. ಅಲ್ಲೂ ತನ್ನ ದೇಹದ ಶಕ್ತಿಯ ಮೇಲೆ ನಂಬಿಕೆ ಹುಟ್ಟಿದರೆ ತಾನೇ ತಾನಾಗಿ ಸರಿ ಹೊಂದುತ್ತದೆ. ಇಲ್ಲವೇ ವೈಧ್ಯರ ಸಹಾಯದಿಂದ ಶಕ್ತಿಯು ಜಾಗೃತವಾಗಬೇಕು. ಅದು ಕುಸಿಯುತ್ತಾ ಹೋದರೆ ಯಾವ ವೈಧ್ಯರೂ ಏನೂ ಮಾಡಲಾಗುವುದಿಲ್ಲ. ಹಾಗಾಗಿ ಸಕಾರಾತ್ಮಕ ಭಾವನೆಗಳು, ನಂಬಿಕೆ ಬಹಳ ಮುಖ್ಯ. ಇದೇ ಸಿದ್ಧಾಂತದ ಪ್ರಾಯೋಗಿಕ ತಂತ್ರವನ್ನು ಟಿಬೇಟಿನಲ್ಲಿರುವ ಯಜುರ್ವೇದ ಶಾಖೆಯಿಂದ ಹುಟ್ಟಿದ ಕೆಲ ಲಾಮಗಳು ತಮ್ಮ ಆಶ್ರಮದಲ್ಲಿ ಬಳಸುವುದು. ಅಂತಹ ಕೆಲ ಮೂಲ ಲಾಮಗಳಿಗೆ ಗುರು ಸ್ಥಾನದಲ್ಲಿರುವವರು ನಮ್ಮ ಗುರುಗಳು ಎಂದು ತಿಳಿದು ಆಶ್ಚರ್ಯವಾಗುತ್ತದೆ. ಲಾಮಗಳು ಲಲಾಮ (ವಿಷ್ಣು) ಪೂಜಕರು. ಲಲಾಮ ಜೀವಿಗಳನ್ನು ಲಾಲಿಸಿ ಪೋಷಿಸುವುದು ಎಂದರ್ಥ. ಅದೇ ತಾನೇ ವಿಷ್ಣುವಿನ ಕೆಲಸ. ಹಾಗಾಗಿ ವೈಷ್ಣವೀ ಶಕ್ತಿ ಸಂಚಯನದಿಂದ ಅವರು ನೇರವಾಗಿ ಆತ್ಮಶಕ್ತಿ ಜಾಗೃತಿಯ ಮುಖೇನ ದೇಹದ ಪ್ರತಿ ಜೀವಕೋಶಗಳು ತಾವೇ ತಾವಾಗಿ ಉಪಶಮನಗೊಳ್ಳುವಂತೆ ಮಾಡುತ್ತಾರೆ ಎಂದು ನನ್ನ ಊಹೆ. ಅವರ ತಂತ್ರವನ್ನು ಅರ್ಥಮಾಡಿಕೊಳ್ಳಲು ಕನಿಷ್ಠ ೧೫ಸಾವಿರ ವಿದೇಶೀ ಕುತೂಹಲಿಗಳು ಪ್ರತಿ ವರ್ಷ ಅಲ್ಲಿಗೆ ಭೇಟಿ ಕೊಡುತ್ತಾರಂತೆ.

ವಿಶ್ವದಗ್ರಕೆ ಗಮನವನಿಟ್ಟು ಯೋಗಿ
ವಿಶ್ವೇಶ್ವರ ಸಿದ್ಧವರ ವೇ|
- ಸ್ವರೂಪರ ಧ್ಯಾನಿಸುತ ಭಾವದೊಳಿರ್ಪ
ವಿಶ್ವಜ್ಞ ಕಾವ್ಯದಗ್ರವಿದು || 
- ಸಿರಿಭೂವಲಯ --೮೫

ಎಂದು ಸಿರಿಭೂವಲಯವು ಎಂದೋ ಹೇಳಿಬಿಟ್ಟಿದೆ. ವಿಶ್ವದ ಅಗ್ರವಾದ ಮೇರುವಿನ ತುತ್ತ ತುದಿಗೆ ಅಥವಾ ಅದರ ಸ್ಥೂಲ ರೂಪವಾದ ದೇಹದ ಮೇರುದಂಡದ ಅಗ್ರದಲ್ಲಿ ಮನಶ್ಶಕ್ತಿಯನ್ನು ಕೇಂದ್ರೀಕರಿಸಿ ವೇದ ಸ್ವರೂಪವನ್ನು ಧ್ಯಾನಿಸುತ್ತಾ ಯೋಗ ಸಾಧಿಸಿದರೆ ಆತನು ವಿಶ್ವೇಶ್ವರ ರೂಪನಾಗಬಲ್ಲನು. ಅಂದರೆ ಪ್ರಪಂಚದ ಎಲ್ಲವುದರ ಸಂಪರ್ಕ ಸಾಧಿಸಲು ಸಾಧ್ಯ.
        
೧೯೪೪ರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲ್ಯಾಂಕನು ನಮ್ಮ ಸುತ್ತಲಿನ ಭೌತಿಕ ಪ್ರಪಂಚದ ಮೂಲ  ದ್ರವ್ಯದ ಬಗ್ಗೆ ನಮ್ಮ ಬುದ್ಧಿಶಕ್ತಿಯು ನಿಲುಕುವುದಕ್ಕಿಂತ ಹೊರಗೆ ಚಿತ್ತ ಹಾಗೂ ಜ್ಞಾನವುಳ್ಳ ಚಕ್ರ (Matrix) ಇದೆ. ಎಲ್ಲಾ ದ್ರವ್ಯಗಳ ಚಕ್ರವಿದೆ. ಅದನ್ನೇ ಜಾನ್ ವ್ಹೀಲ್ಹರ್ ತನ್ನ ಪ್ರಯೋಗಗಳ ಮುಖೇನ ಅನಾವರಣಗೊಳಿಸಿದ್ದು. ಅವರು ಕಂಡುಕೊಂಡದ್ದೇನೆಂದರೆ ವಿಶ್ವವು ನನ್ನನ್ನು (ಅಹಂ ತತ್ವ) ಬಿಟ್ಟು ಪರಿಪೂರ್ಣವಾಗುವುದಿಲ್ಲ. ಹಾಗಾಗಿ ಮನೋ + ಬುದ್ಧಿ + ಚಿತ್ತ + ಅಹಂ + ಜ್ಞಾನಗಳು ಪ್ರಪಂಚದಲ್ಲಿ ಯಾವುದೇ ದ್ರವ್ಯವು ವ್ಯವಹರಿಸುವಂತೆ ಮಾಡುವ ಮೂಲ ಕಣಗಳು ಎಂದು ನಮ್ಮ ಯೋಗಶಾಸ್ತ್ರಕ್ಕೇ ಹಿಂತಿರುಗಿದರು.

ಹೀಗಿರಬೇಕಾದರೆ ಕಾಲವು ವ್ಯವಹರಿಸುವ ಚಕ್ರದಲ್ಲಿ ಕ್ಷಣ ಕ್ಷಣವನ್ನೂ ನಮಗೆ ಬೇಕಾದಂತೆ ನಾವು ಬದಲಾಯಿಸಿಕೊಳ್ಳಲು ಸಾಧ್ಯವೇ? ಸಾಧ್ಯ ಎನ್ನುತ್ತದೆ ಕನ್ನಡದ ಮಹಾನ್ ಸರ್ವಶಾಸ್ತ್ರಮಯೀ ಗ್ರಂಥವಾದ ಸಿರಿಭೂವಲಯದ ತಂತ್ರಶಾಸ್ತ್ರದ ಭಾಗ. ಉದಾಹರಾಣೆಗೆ ಮುಳ್ಳಯ್ಯನಗಿರಿಯಂತಹಾ ಬೃಹದಾಕಾರದ ಗಿರಿಯನ್ನು ನಮ್ಮ ಮನಶ್ಶಕ್ತಿಯಿಂದ ಸ್ಥಾನಪಲ್ಲಟಗೊಳಿಸಲು ಸಾಧ್ಯ. ಅದಕ್ಕೆ ಬಾಯಿಯಿಂದ ನೀವುಹೇ! ಗಿರಿಯೇ ಅತ್ತ ಸರಿಎಂದರೆ ಅದು ಸರಿಯುವುದಿಲ್ಲ, ಏಕೆ? ನಿಮ್ಮ ವೈಖರಿಯು ಕ್ಷೀಣ ತರಂಗ ಪ್ರವೃತ್ತಿ ಉಳ್ಳದ್ದು. ಅಲ್ಲಿ ನಿಮ್ಮ ಹೃದಯ+ಮಿದುಳುಗಳಲ್ಲಿ ನೀವು ಇದು ಆಗದ ಕೆಲಸ ಎಂದು ಎಂದೋ ದಾಖಲಿಸಿರುತ್ತೀರ, ಹಾಗಾಗಿ ಅವುಗಳು ನಿಮಗೆ ಸಹಕರಿಸುವುದಿಲ್ಲ. ಭೂಮ್ಯಂತರ್ಗತ ಕಾಂತೀಯ ತರಂಗಗಳು ಸಕಲ ಚರಾಚರಗಳ ಸಂಪರ್ಕ ಹೊಂದಿರುತ್ತವೆ.


ಉದಾಹರಣೆಗೆ ರೇಖಾನಕ್ಷೆ ನೋಡಿರಿ. ಇದರಲ್ಲಿ ಭೂಕಾಂತೀಯ ಕ್ಷೇತ್ರದ ಮಾಪನವಿದೆ. ಸೆಪ್ಟೆಂಬರ್ ೧೧, ೨೦೦೧ರಲ್ಲಿ ಪೌರಸ್ತ್ಯ ಪ್ರಮಾಣಿತ ಸಮಯ ಬೆಳಗ್ಗೆ ಗಂಟೆಗೆ ಅತೀವ ಏರಿಕೆ ಉಂಟಾಗಿತ್ತು. ದಿನಾಂಕವನ್ನು ಜ್ಞಾಪಿಸಿಕೊಳ್ಳಿ. ಅಂದು ಬೆಳಗ್ಗೆ ಅಂದಾಜು  :೪೫ಕ್ಕೆ ಮೊದಲನೇ ವಿಮಾನವು ವಿಶ್ವ ವಾಣಿಜ್ಯ ಸಂಸ್ಥೆಯ ಬಹುಮಹಡಿ ಕಟ್ಟಡದ ಮೇಲೆ ಅಪ್ಪಳಿಸಿತ್ತು. ವಿಷಯವು ಬೇರೆ ಬೇರೆ ಸಂಪರ್ಕ ಮಾಧ್ಯಮಗಳಿಂದ ಪ್ರಪಂಚಾದ್ಯಂತ ಹರಡಲು ಸರಾಸರಿ ೧೫ ನಿಮಿಷ ತೆಗೆದುಕೊಂಡಿತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಗಂಟೆಗೆ ಅರ್ಬುದಾತೀತ ಸಂಖ್ಯಾ ಜನರಿಗೆ ದುರ್ಘಟನೆಯ ವಿವರ ತಿಳಿದು ಅವರ ಹೃದಯದಲ್ಲಿ ಉಂಟಾದ ಭಾವನಾ ಲಹರಿಯ ಸ್ಪಂದನೆಯ ಏರಿಕೆಯು ಒಟ್ಟಾಗಿ ಭೂಮಿಯ ಕಾಂತ ಕ್ಷೇತ್ರವನ್ನೇ ಏರಿಸಿ ಎಲ್ಲ ಜೀವಿಗಳ ಸಂಪರ್ಕ, ಸಂರಕ್ಷಣೆಗಾಗಿ ಹಾತೊರೆಯಿತು ಎಂದು ಸಂಶೋಧನೆ ಮಾಡಿರುವ ವಿಜ್ಞಾನಿಗಳು ನಂಬುತ್ತಿದ್ದಾರೆ.

ಆದರೆ ರೇಖಾನಕ್ಷೆಯೇ ಪರಿಪೂರ್ಣ ಸತ್ಯವಲ್ಲ. ಏಕೆಂದರೆ ಇಲ್ಲಿ ಹತ್ತು ದಿನಗಳ ಭೂಕಾಂತೀಯ ವ್ಯತ್ಯಯ ಮಾತ್ರ ಪರಿಗಣಿಸಿದ್ದಾರೆ. ಉಚಿತವಾಗಿ ದೊರಕುವ ಉಪಗ್ರಹದ ಮಾಹಿತಿಯನ್ನು ಗಮನಿಸಿದರೆ ಇನ್ನಿತರೆ ಸಂದರ್ಭಗಳಲ್ಲಿ ಗ್ರಾಫಿನ ಶೃಂಗೋನ್ನತಿಯನ್ನು ಕಾಣಬಹುದು. ಆದರೆ ಸಂದರ್ಭದ ಸಮೂಹ ಘಟನಾವಳಿಗಳ ಮಾಹಿತಿ ಅನ್ವೇಷಿಸಬೇಕಾಗುತ್ತದೆಪ್ರಪಂಚದಲ್ಲಿ ಬ್ರಹ್ಮ ಒಂದು ಬಿಟ್ಟರೆ ಉಳಿದದ್ದೆಲ್ಲ ಪೂರ್ಣಸತ್ಯವಲ್ಲ. ಅರ್ಧಸತ್ಯ + ಅರ್ಧಮಿಥ್ಯ ಎಂಬ ದ್ವಂದ್ವಾತ್ಮಕವಾಗಿ ಪ್ರಕಟಗೊಳ್ಳುತ್ತದೆ ಎಂಬ ಸಿರಿಭೂವಲಯವಾದಕ್ಕೆ ಇದೇ ಪುಷ್ಠಿಕೇವಲ ಭೌತಿಕ ಪರಿಣಾಮಗಳನ್ನು ಚಿಂತಿಸಿದರೆ ಮಾಹಿತಿ ಲಭ್ಯವಾಗದಿರಬಹುದು. ಆದರೆ ಸಿರಿಭೂವಲಯ ಚಕ್ರಗಳನ್ನು ಬಳಸಿ ಮಾಹಿತಿ ಕಲೆಯಾಕಬಹುದು, ಹಾಗೂ ಅದರ ತಾಂತ್ರಿಕತೆಯಿಂದ ಉತ್ಪಾತಗಳನ್ನೂ ತಡೆಯಬಹುದು ಎಂದು ನನ್ನ ಅಭಿಪ್ರಾಯ. ಉದಾಹರಣೆಗೆ:-

ದಿಶೆಯೊಳೊಂಬತ್ತರ ವಶಗೊಂಡ ಸೂತ್ರಾಂಕ
-ದಸಮಾನ ಪಾಹುಡ ಕಾವ್ಯ |
ವಶವಾದ ನಮ್ಮಾತ್ಮ ಸ್ವಸಮಯವೆನ್ನುವ
ಕುಸಮಯ ನಾಶಕ ಕಾವ್ಯ || ಸಿರಿ --೮೨ ||

ಇದಕ್ಕೆ ಕೇವಲ ಏಕಖಣ್ಡಾತ್ಮಕವಾಗಿ ಉಳಿದಿರುವ ಸಿರಿಭೂವಲಯ ಸಾಕಾಗುವುದಿಲ್ಲ. ಏಕೆಂದರೆ ಪ್ರಾಕೃತಿಕ ಘಟನಾವಳಿಗಳು ಅಲೌಕಿಕ ಕೊಂಡಿಯನ್ನು ಹೊಂದಿರುತ್ತವೆ. ಭೂಪ್ರದೇಶ ವ್ಯಾಪ್ತಿಯಲ್ಲಿ ಘಟಿಸುವ ಘಟನೆಯು ಅದೇ ಪ್ರದೇಶದಲ್ಲಿ ಉನ್ನತ ಆಯಾಮದಲ್ಲಿರುವ ಇತರೆ ಲೋಕಗಳ ವ್ಯವಹಾರ ಪ್ರೇಷಿತವಾಗಿರುತ್ತದೆ ಎಂದು ಕಂಡುಬರುತ್ತದೆ. ಅದನ್ನು ಪ್ರಸ್ಥಾಪಿಸುವುದೇ ಸಿರಿಭೂವಲಯದಿಂದಾದ ಷಟ್ಖಂಡಾಗಮದ ಲೋಕೋತ್ತರ ಗಣಿತ.

ಸರ್ವಾರ್ಥಸಿದ್ಧಿ ಸಂಪದ ನಿರ್ಮಲಕಾವ್ಯ
ಧರ್ಮವಲೌಕಿಕ ಗಣಿತ |
ನಿರ್ಮಮ ಬುದ್ಧಿಯನವಲಂಬಿಸಿರುವರ |
ಧರ್ಮಾನುಯೋಗದ ವಸ್ತು || ಸಿರಿ --೮೩ ||

ವಿಶ್ವದ ಯಾವುದೇ ಲೋಕದಲ್ಲಿ ಯಾವುದೇ ಪ್ರದೇಶದಲ್ಲಿರುವ ಗಣಿತ+ವಿಜ್ಞಾನ ಕೋವಿದರಿಗೆ ಸಿರಿಭೂವಲಯದ ಒಂದು ಗಣಿತ ಸಮೀಕರಣವನ್ನು ಬಿಡಿಸಬಲ್ಲಿರಾ ಎಂಬ ಸವಾಲಿನೊಂದಿಗೆ ಲೇಖನವನ್ನು ಮುಗಿಸುತ್ತೇನೆ.

ಹಕವು ದ್ವಿಸಮ್ಯೋಗದೊಳಗೆ ಇಪ್ಪತ್ತೆನ್ಟು
ಪ್ರಕಟದೊಳ್ ಅರವತ್ತಮ್ ಕೂಡೆ |
ಸಕಲಾನ್ಕದೊಳು ಬಿಟ್ಟ ಸೊನ್ನೆಯೆ ಎನ್ಟೆನ್ಟು
ಸಕಲಾಗಮ ಏಳು ಭನ್ಗ || ಸಿರಿ -- ||

ಹಕದನ್ಕದೊಳು ಬನ್ದ ಏಳರ ಭಾಜಿತಮ್
ಸಕಲವು ಗುಣಿತವೋ ಎಮ್ಬ |
ಸಕಲ ಶಬ್ದಾಗಮ ಏಳು ಭನ್ಗಗಳಿಹ
ಪ್ರಕಟಿತ ತತ್ವ ಭೂವಲಯ || ಸಿರಿ -- ||

ಣವದನ್ಕವದನೇಳರಿನ್ದಲಿ ಭಾಗಿಸೆ
ನವ ಸೊನ್ನೆಯು ಹುಟ್ಟಿಬಹುದ |
ಅವಧರಿಸಲು ಬಿಡಿ ಅಂಕಗಳ್ ಎಷ್ಟೆಮ್ಬ
ಸವಿಶನ್ಕೆಗಿನ್ತು ಉತ್ತರವು || -- ||

ಣವಪದದನ್ದದ ಕರಣಸೂತ್ರವ ಕೊಳ್ವ
ಅವಯವದೊಳಗಿಹ ಘಣಿತ |
ನವ ಮತ್ತು ನಾಲ್ಕು ಸೊನ್ನೆಗಳೆರಳ್ ಮೂರ್ನಾಲ್ಕು
ಸವಿ ಆರಾರೆರಡೋಮ್ಬತ್ ಆರು || ||

ಜುಣಿ ಎಣ್ಟು ನಾಲ್ಕೋಮ್ಬತ್ ಸೊನ್ನೆ ಸೊನ್ನೆಯೊಮ್ಬತ್ತು |
ಘನವೇ ನೌ ಓಮ್ಬತ್ತೆರಡಯ್ದು ||
ಜಿನ ಓಮ್ದು ಮೂರೋಮ್ಬತ್ಮೂರು ಬನ್ದನ್ಕದ
ಘನದೆ ಮುನ್ದಕೆ ಬರುವನ್ಕ || ||

ದೊಡ್ಡ ಓಮ್ಬತ್ನಾಲ್ಕಯ್ದು ಮೂರೆನ್ಟೇಳು
ಒಡ್ಡಿದ ನಾಲ್ಕೆನ್ಟೌಘ |
ಗುಡ್ಡೆಯಾರ್ಮೂರೇಳು ಸೊನ್ನೆ ಎನ್ಟೆರಡಯ್ದು
ಅಡ್ಡ ನಾಲ್ಕೆನ್ಟೈದು ನಾಲ್ಕು || ೧೦ ||

ಸಮ ಸೊನ್ನೆ ಏಳು ಓಮ್ಬತ್ ಎರಡೋಮ್ದು
ಗಮನಾಲ್ಕು ಮೂರೇಳು ಬರ್ಪಾ |
ಕ್ರಮದೆನ್ಟು ಓಮ್ದೋಮ್ಬತ್ಮೂರು ಐದೋಮ್ಬತ್ತು
ವಿಮಲ ಐದೆರಡಾರು ಏಳು || ೧೧ ||

ಮರಳಿ ಎರಡು ಮೂರು ಎರಡಾರಯ್ದೋಮ್ಬತ್ತು
ಸರದೆ ಮೂರೆನ್ಟೆಮ್ಬರಶಿ |
ಅರುಹರ ಓಮ್ಬತ್ ಓಮ್ದೆನ್ಟು ಎನ್ಟೆನ್ಟು
ಸರಿಯೋಮ್ದು ಬರಲು ಬನ್ದನ್ಕ || ೧೨ ||

ಪದ್ಯಗಳನ್ನು ಉತ್ಕೀಲನ ಮಾಡಿದರೆ ಬರುವ ಬೃಹದಂಕಿಯ ಸಂಖ್ಯೆ:

1888198395623276259539187341297045845280736847835493931529900948692664320000000000000

ಸಂಖ್ಯೆಯನ್ನು ತಾವೇ ಶ್ರೇಷ್ಠ ಎಂದು ಬಿಂಬಿಸಿರುವ ತಥಾಕಥಿತ ಆಧುನಿಕ ವಿಜ್ಞಾನಿ ಅಥವಾ ಗಣಿತಜ್ಞರಾಗಲೀ, ಇನ್ಯಾರೇ ವಿದ್ವಾಂಸ ಅಥವಾ ಸಾಮಾನ್ಯರೇ ಆಗಲೀ ವಿವರಿಸಿದರೆ ಅವರ ಪಾಂಡಿತ್ಯ ಘನವಾದದ್ದು. ಪ್ರೌಢ ಮೂಢರೀರ್ವರಿಗೊಂದೇ ಎಂದು ಮುನಿ ಹೇಳಿದ್ದಾರೆ. ಹಾಗಾಗಿ ಇಲ್ಲಿ ಪಂಡಿತ-ಪಾಮರ ಎಂಬ ಭೇದವಿಲ್ಲ. ಜ್ಞಾನಾಸಾಮ್ರಾಜ್ಯ ಪ್ರವೇಶಕ್ಕೆ ಎಲ್ಲರೂ ಅಧಿಕಾರಿಗಳೇ.

ಇಂತು,
ವಿಜ್ಞಾಸು