Saturday, 30 September 2017

ವಿಜಯಾ ದಶಮೀ - ತಾತ್ವಿಕ ವಿಶ್ಲೇಷಣೆ


[] ಶಕ್ತಿಯ ೧೦ ರೂಪಗಳ ಅರ್ಥಮಾಡಿಕೊಳ್ಳುವಿಕೆಯೇ ಶಕ್ತಿ ಪೂಜೆ. ವಿಶ್ವದ ಮೂಲ ಸ್ರೋತವು ಓಂದೇ ಆಗಿದೆ. ಆದರೆ ಅದು ನಿರ್ಮಾಣಕ್ಕಾಗಿ ರೂಪಗಳಲ್ಲಿ ಹಂಚಲ್ಪಡುತ್ತದೆ. ಚೇತನ ತತ್ವವು ಪುರುಷವಾದರೆ ಪದಾರ್ಥ ರೂಪವು ಶ್ರೀ ಅಥವಾ ಶಕ್ತಿ ಆಗಿದೆ. ಶಕ್ತಿ ಮಾತೆಯಹುದು. ಅಂದರೆ ಪದಾರ್ಥಗಳ ಮಾತೃ (matter) ಎನ್ನುತ್ತಾರೆ. ಎಲ್ಲಾ ರಾಷ್ಟ್ರೀಯ ಹಬ್ಬಗಳಂತೆ ಇದೂ ಸಮಾಜದ ಸಂಘಟನೆಗಾಗಿದೆ. ಇದು ಮುಖ್ಯವಾಗಿ ಕ್ಷತ್ರೀಯರಿಗೆ ವಿಶೇಷ. ಕ್ಷತ್ರೀಯ ಎಂದರೆ ಸಮಾಜದ ಕ್ಷತಗಳಿಂದ ತ್ರಾಣಗೊಳಿಸುವವರು

ಕ್ಷತಾತ್ ಕಿಲ ತ್ರಾಯತ ಇತ್ಯುದಗ್ರಃ ಶಬ್ದಸ್ಯ ಅರ್ಥಃ ಭುವನೇಷು ರೂಢಃ | (ರಘುವಂಶ, /೫೩)

ವೇದದಲ್ಲಿ ೧೦ ಆಯಾಮದ ವಿಶ್ವದ ವರ್ಣನೆ ಸಿಗುತ್ತದೆ. ಸಿದ್ಧಾಂತದಂತೆ ದಶ, ದಶಾ, ದಿಶಾಗಳೆಲ್ಲ ಸಮಾನ ಶಬ್ದಗಳು. ೧೦ ಆಯಾಮಗಳು ವಿವಿಧ ಕೋನಗಳಲ್ಲಿ ವಿಶ್ಲೇಷಿಸಲ್ಪಟ್ಟಿವೆ

() ತನ್ಮಾತ್ರಾ = ಭೌತಿಕ ವಿಜ್ಞಾನದ ಅಳತೆಗಳ ಮೂಲ ಅವಯವಗಳು. ಇವುಗಳ ಸೀಮಿತ ಹಾಗೂ ಅನಂತ ರೂಪಗಳು - ಪ್ರಕಾರವಾಗಿವೆ.

() ಆಕಾಶದ ಆಯಾಮ, ಪದಾರ್ಥ, ಕಾಲ, ಚೇತನಾ (ಚಿತಿ), ಋಷಿ (ರಜ್ಜು ಪದಾರ್ಥಗಳ ಸಂಬಂಧ ಬೆಸುಗೆ), ವೃತ್ರ ಅಥವಾ ನಾಗ (ಗೋಲ ಆವರಣ), ರಂಧ್ರ (ಘನತ್ವದಲ್ಲಿ ಹೆಚ್ಚುಕಡಿಮೆ), ಆನಂದ ಅಥವಾ ರಸಗಳೆಂಬ ಹತ್ತು.

() ತ್ರಿಗುಣಗಳ (ಸತ್ವ, ರಜ, ತಮ) ೧೦ ಪ್ರಕಾರದ ಸಮನ್ವಯ – 

  1. ಸತ್ವ
  2. ರಜ
  3. ತಮ
  4. ಸತ್ವ+ರಜ
  5. ರಜ+ಸತ್ವ
  6. ಸತ್ವ+ತಮ
  7. ತಮ+ಸತ್ವ
  8. ರಜ+ತಮ
  9. ತಮ+ರಜ
  10. ಸತ್ವ+ರಜ+ತಮ.

[] ಮಹಾವಿಧ್ಯಾ ೧೦ ಆಯಾಮಗಳಂತೆ ೧೦ ಮಹಾವಿಧ್ಯೆಗಳಿವೆ. ಅವು ಐದರ ಎರಡುಗಳಾಗಿವೆ

() ಕಾಲೀ ಕಪ್ಪು ಬಣ್ಣ, ತಾರಾ ಶ್ವೇತ.

() ತ್ರಿಪುರಾದ ರೂಪ – ಸುಂದರಿ (ಶಾಂತ) ಹಾಗೂ ಭೈರವೀ (ಉಗ್ರ).

() ಕಮಲಾವಿಷ್ಣುಪತ್ನೀ, ಸ್ಥಾಯೀ ಸಂಪತ್ತಿ, ಯುವತೀ, ಸುಂದರ, ರೋಹಿಣೀ ನಕ್ಷತ್ರ, ಇಂದ್ರ-ಲಕ್ಷೀ-ಕುಬೇರ. ಧೂಮಾವತೀ ವಿಧವಾ, ಚಂಚಲ-ದುಷ್ಟ, ವೃದ್ಧಾ, ಕುರೂಪ, ಜ್ಯೇಷ್ಠಾ ನಕ್ಷತ್ರ, ವರುಣ-ಅಲಕ್ಷ್ಮೀ-ಯಮ.

() ಭುವನೇಶ್ವರೀ ಭುವನ ನಿರ್ಮಾಣ ಮಾಡಿದರೆ, ಛಿನ್ನಮಸ್ತಾ ಭುವನ ಲಯ ಶಕ್ತಿ.

() ಮಾತಂಗೀ ವಾಣಿಯನ್ನು ಹೊರಡಿಸಿದರೆ ಬಗಲಾಮುಖೀ (ವಲ್ಗ = ಲಗಾಮು) ಹಿಡಿದು ನಿಲ್ಲಿಸುತ್ತದೆ.

ದಶಮಹಾವಿಧ್ಯೆಗಳ ಆಯಾಮಗಳು

() ತಾರಾಶೂನ್ಯ ಬಿಂದು, ಇದರ ದಿಶಾ ರೇಖಾ ರೂಪದಲ್ಲಿ ಪ್ರಥಮ ಆಯಾಮವಿದೆ.

() ಭೈರವೀಉಗ್ರ ರೂಪೀಸ್ತಹ ರೂಪದಲ್ಲಿ ಎರಡನೆಯ ಆಯಾಮವಿದೆ.

() ತ್ರಿಪುರಾ೩ನೇ ಆಯಾಮ.

() ಭುವನೇಶ್ವರೀಭುವನ ನಿರ್ಮಾಣ ಮುಖದ ಬ್ರಹ್ಮನಂತೆ.

() ಕಾಲೀಕಪ್ಪು ರೂಪದಲ್ಲಿ ೫ನೇ ಆಯಾಮ. ಪರಿವರ್ತನೆಯ ಭಾಸವೇ ಕಪ್ಪು ಎಂದದ್ದು.

() ಕಮಲಾ- ವಿಷ್ಣು ಚೇತನಾ ರೂಪದಲ್ಲಿ ೬ನೇ ಆಯಾಮ, ಅದರ ಪತ್ನೀ.

() ಬಗಲಾಮುಖೀವಲ್ಗಾ, ರಜ್ಜು, ಒಂದು ನಿಲ್ಲಿಸಿದರೆ ಇನ್ನೊಂದು ಜೋಡಿಸುವುದು.

() ಮಾತಂಗೀಆನೆ, ವೃತ್ರನ ಕಥೆ, ಆನೆಯನ್ನು ಹಿಡಿದು ನಿಲ್ಲಿಸುವುದು (ವಾರಣ) ಕಠಿಣ.

() ಛಿನ್ನಮಸ್ತಾಕತ್ತರಿಸಿ ರಂಧ್ರ ಉಂಟುಮಾಡುವ ಆಯಾಮ.

(೧೦) ಧೂಮಾವತೀ೧೦ನೇ ಆಯಾಮ. ಇದು ಧೂಮದಂತೆ ಅಸ್ಪಷ್ಟ.

ವಿಶ್ವದ ರಚನೆಯ ಸ್ತರಗಳ ಅನುಸಾರ ಇವುಗಳ ರೂಪವು

() ಕಾಲೀಪೂರ್ಣ ವಿಶ್ವ, ಇದರಲ್ಲಿ ೧ ಖರ್ವ ಬ್ರಹ್ಮಾಂಡಗಳು ತೇಲುತ್ತಿವೆ.

() ತಾರಾಬ್ರಹ್ಮಾಂಡದ ತಾರಾ.

() ತ್ರಿಪುರಾ (ಷೋಡಶೀ) – ಸೂರ್ಯನ ತೇಜದಿಂದ ಯಜ್ಞವಾಗುತ್ತಿದೆ. ಇದು ೧೬ ಕಲೆಗಳ ಪುರುಷವಾದರೆ ಕ್ರಿಯೆಯು ಷೋಡಶೀ ಆಗಿದೆ.

() ಭುವನೇಶ್ವರೀಕ್ರಂದಸೀ (ಬ್ರಹ್ಮಾಂಡ) ಹಾಗೂ ರೋದಸೀ (ಸೌರ ಮಂಡಲ) ಇವುಗಳ ಮಧ್ಯದಲ್ಲಿ ಸೂರ್ಯ.

() ಛಿನ್ನಮಸ್ತಾಸೂರ್ಯನಿಂದ ಹೊರಟ ತೇಜ.

() ಭೈರವೀನಿರ್ಮಾಣದಲ್ಲಿ ತೊಡಗಿರುವ ಶಕ್ತಿ.

() ಧೂಮಾವತೀಧೂಮದಂತೆ ಹರಡಿರುವ ಶಕ್ತಿಯಾದ್ದರಿಂದ ಇದರ ಪ್ರಯೋಗವಾಗಿಲ್ಲ.

() ಬಗಲಾಮುಖೀಪೃಥ್ವಿಯಿಂದ ಶೋಷಿತ (ತಡೆಯಲ್ಪಟ್ಟ) ಶಕ್ತಿ.

() ಮಾತಂಗೀಸೂರ್ಯನ ವಿಪರೀತ ದಿಶೆಯಲ್ಲಿ ಪೃಥ್ವಿಯ ರಾತ್ರಿ ಭಾಗ.

(೧೦) ಕಮಲಾಪೃಥ್ವಿಯ ಮೇಲಿನ ಸೃಷ್ಟಿ.

ಆಧ್ಯಾತ್ಮಿಕ ರೂಪೀ ಶರೀರದ ಚಕ್ರಗಳಲ್ಲಿ ಇವುಗಳ ಸ್ಥಾನ

() ಕಾಲೀಇದು ಮೂಲಾಧಾರದಲ್ಲಿ ಮಲಗಿರುವ ಕುಂಡಲಿನೀ ಶಕ್ತಿಯಾಗಿದೆ.

() ತಾರಾಸ್ವಾಧಿಷ್ಠಾನ ಚಕ್ರದ ಸಮುದ್ರ ಹಾಗೂ ಚಂದ್ರವಾಗಿದೆ. ಪಶ್ಯಂತೀ ವಾಕ್ಕಿನ ರೂಪದಲ್ಲಿದೆ; ತಾರಾ. ಇದರ ದೇವತಾ ರಾಕಿನೀಯಾಗಿದೆ. ಇದರ ತಾರಕ ಮಂತ್ರವುರಂ’ (ರಾಮ) ಆಗಿದೆ.

() ತ್ರಿಪುರ ಸುಂದರೀಇದು ಸಹಸ್ರಾರದಲ್ಲಿ ೧೬ ಕಲೆಯುಳ್ಳ ಚಂದ್ರನಂತೆ ವಿಹರಿಸುತ್ತದೆ. ಅದು ಸುಧಾ-ಸಿಂಧು ಆಗಿದೆ. (ಭೌತಿಕ ರೂಪದಲ್ಲಿ ಮಸ್ತಿಷ್ಕದ ದ್ರವ).

() ಭುವನೇಶ್ವರೀಇದರ ಬೀಜ ಮಂತ್ರಹ್ರೀಂ’, ಹೃದಯ ಎಂದರ್ಥ. ಇದು ಹೃದಯದ ಅನಾಹತ ಚಕ್ರದ ಕೆಳಗೆ ಚಿಂತಾಮಣಿ ಪೀಠದಲ್ಲಿ ವಿರಾಜಮಾನವಾಗಿದೆ. ಇದರ ಸಕಲ ರೂಪವು ಭುವನೇಶ್ವದಲ್ಲಿದೆ. ಆದ್ದರಿಂದ ನಗರಕ್ಕೆ ಹೆಸರು ಬಂದದ್ದು.

() ತ್ರಿಪುರಾ ಭೈರವೀಮೂಲಾಧಾರದಲ್ಲಿ ಕುಂಡಲಿನೀಯ ಜಾಗ್ರತ ರೂಪ.

() ಛಿನ್ನಮಸ್ತಾಆಜ್ಞಾ ಚಕ್ರದಲ್ಲಿ ನಾಡಿಗಳ ಸಂಗಮಇಡಾ, ಪಿಂಗಲಾ, ಸುಷುಮ್ನಾ.

() ಧೂಮಾವತೀಮೂಲಾಧಾರದ ಧೂಮ್ರ ರೂಪೀ ಸ್ವಯಂಭೂ ಲಿಂಗವನ್ನು ಆವರಿಸಿದೆ.

() ಬಗಲಾಮುಖೀಕಂಠದಲ್ಲಿ ವಾಣೀ ಹಾಗೂ ಪ್ರಾಣ ನಿಯಂತ್ರಣಜಾಲಂಧರ ಬಂಧದಿಂದ.

() ಮಾತಂಗೀಕಂಠದ ಮೇಲ್ಭಾಗದಲ್ಲಿದೆ. ಇಲ್ಲಿಂದಲೇ ವಾಣಿ ಹೊರಡುವುದು.

(೧೦) ಕಮಲಾಇದು ನಾಭಿಯ ಹತ್ತಿರ ಮಣಿಪೂರ ಚಕ್ರವಾಗಿದೆ. ಇದನ್ನು ಮಣಿ-ಪದ್ಮ ಎನ್ನುತ್ತಾರೆ.

[] ನವರಾತ್ರಿ ನವಮ ಆಯಾಮ ರಂಧ್ರ ಅಥವಾ ಕಡಿಮೆ ಆಗಿರುತ್ತದೆ. ಕಾರಣದಿಂದಲೇ ನವ ಸೃಷ್ಟಿ ಉಂಟಾಗುತ್ತದೆ. ನವ ಎಂದರೆ ಹೊಸತು ಹಾಗೂ ಓಂಬತ್ತು ಎಂಬ ಎರಡು ಅರ್ಥಗಳನ್ನು ನೀಡುತ್ತದೆ

ನವೋ ನವೋ ಭವತಿ ಜಾಯಮಾನೋಽಹ್ನಾ ಕೇತುರೂಪಂ ಮಾಮೇತ್ಯಗ್ರಮ್ | (ಋಕ್ ೧೦/೮೫/೧೯)

ಸೃಷ್ಟಿಯ ಸ್ರೋತವು ಅವ್ಯಕ್ತವಾಗಿದೆ. ಅದನ್ನು ಸೇರಿಸಿ ಸೃಷ್ಟಿಯ ೧೦ ಸ್ತರಗಳಿವೆ. ಇವುಗಳನ್ನೇ ದಶ, ದಶ-ಅಹ = ದಶಾಹ = ದಶಹರ = ದಸರ, ದಶ-ರಾತ್ರಿ ಇತ್ಯಾದಿ ಆಗುತ್ತದೆ

ಯಜ್ಞೋ ವೈ ದಶ ಹೋತಾ | (ತೈತ್ತಿರೀಯ ಬ್ರಾಹ್ಮಣ ///)
ವಿರಾಟ್ ವಾ ಏಷಾ ಸಮೃದ್ಧಾ, ಯದ್ ದಶಾಹಾನಿ | (ತಾಂಡ್ಯ ಮಹಾಬ್ರಾಹ್ಮಣ //)
ವಿರಾಟ್ ವೈ ಯಜ್ಞಃ | … ದಶಾಕ್ಷರಾ ವೈ ವಿರಾಟ್ | (ಶತಪಥ ಬ್ರಾಹ್ಮಣ ///೨೨, ///೧೮, ///೧೯)

ವಿರಾಟ್ ಒಂದು ಛಂದಸ್ಸು. ಇದರ ಪ್ರತಿ ಪಾದದಲ್ಲಿ ೧೦ ಅಕ್ಷರಗಳಿವೆ. ಪುರುಷದ (ಮನುಷ್ಯನ ಅಥವಾ ವಿಶ್ವದ) ಕರ್ತಾ ರೂಪಿಯೂ ಅಕ್ಷರವೇ ಆಗಿದೆ. ಇದು ೧೦ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ

ಅನ್ತೋ ವಾ ಏಷ ಯಜ್ಞಸ್ಯ ಯದ್ ದಶಮಮಹಃ | (ತೈತ್ತಿರೀಯ ಬ್ರಾಹ್ಮಣ ///)
ಅಥ ಯದ್ ದಶರಾತ್ರಮುಪಯನ್ತಿ | ವಿಶ್ವಾನೇವ ದೇವಾನ್ದೇವತಾಂ ಯಜನ್ತೇ | (ಶತಪಥ ಬ್ರಾಹ್ಮಣ ೧೨///೧೭)
ಪ್ರಾಣಾ ವೈ ದಶವೀರಾಃ | (ಯಜು ೧೯/೪೮, ಶತಪಥ ಬ್ರಾಹ್ಮಣ ೧೨///೨೨)

ವರ್ಷದ ೩೬೦ ದಿನಗಳನ್ನು ನವಮದಿಂದ ಭಾಗಿಸಿದರೆ ವರ್ಷಂಪೂರ್ತಿ ೪೦ ನವರಾತ್ರಿಗಳು ಸಿಗುತ್ತವೆ. ಆದ್ದಾರಿಂದ ಯಜ್ಞದ ವೇದ ಯಜುರ್ವೇದದಲ್ಲಿ ೪೦ ಅಧ್ಯಾಯಗಳಿವೆ. ಹಾಗೇ ೪೦ ಗ್ರಹಗಳಿವೆ (ಗ್ರಹಿಸುವ ಶಕ್ತಿ ಉಳ್ಳದ್ದು ಗ್ರಹ) –

ಯದ್ ಗೃಹ್ಣಾತಿ ತಸ್ಮಾದ್ ಗ್ರಹಃ | (ಶತಪಥ ಬ್ರಾಹ್ಮಣ ೧೦///)
ಷಟ್ ತ್ರಿಂಶಾಶ್ಚ ಚತುರಃ ಕಲ್ಪಯನ್ತಶ್ಛನ್ದಾಂಸಿ ದಧತ ಆದ್ವಾದಶಮ್ |
ಯಜ್ಞಂ ವಿಮಾಯ ಕವಯೋ ಮನೀಷ ಋಕ್ ಸಾಮಾಭ್ಯಾಂ ಪ್ರ ರಥಂ ವರ್ತ್ತಯನ್ತಿ | (ಋಕ್ ೧೦/೧೧೪/)

೪೦ ನವರಾತ್ರಿಗಳ ದ್ಯೋತಕವಾಗಿ ಮಹಾಭಾರತದ ಯುದ್ಧದ ನಂತರ ೪೦ ದಿನ ಶೋಕಾಚರಣೆ ಮಾಡಲಾಗಿತ್ತು. ಆತ್ರೇಯ ಸಂಹಿತೆಯಿಂದ ಕವಲೊಡೆದು ಹುಟ್ಟಿದ್ದು ಕುರಾನ್ ಆದ್ದರಿಂದ ಹಿಂದು ಧರ್ಮದ ಆಚರಣೆಯನ್ನು ಈಗಲೂ ಇಸ್ಲಾಮಿನಲ್ಲಿ ಬಳಕೆಯಲ್ಲಿಟ್ಟುಕೊಂಡಿದ್ದಾರೆ. ಈಗೆಲ್ಲ ವರ್ಷದಲ್ಲಿ ಚಂದ್ರನ ೧೩ ಪರಿಕ್ರಮಕ್ಕಾಗಿ ೧೩ದಿನದ ಶೋಕವನ್ನು ಬಳಸುತ್ತೇವೆ. ೪೦ ನವರಾತ್ರಿಗಳಲ್ಲಿ ಮುಖ್ಯವಾದವು

{} ದೈವ ನವರಾತ್ರ ಉತ್ತರಾಯಣದ ಆರಂಭದಲ್ಲಿ ಅಂದಾಜು ಡಿಸೆಂಬರ್ ೨೧-೨೨ನೇ ತಾರೀಕಿಗೆ ಇದರ ಆಚರಣೆ ಇದೆ. ಭೀಷ್ಮರು ಇದೇ ದಿನ ದೇಹ ತ್ಯಾಗ ಮಾಡಿದರು. ಅವರು ೪೮ ದಿನ ಶರ-ಶಯ್ಯೆಯಲ್ಲಿದ್ದರು - ಅಂದರೆ ಯುದ್ಧದ ದಿನಗಳು ಇನ್ನೂ ಬಾಕಿ ಇತ್ತು, ೪೦ ದಿನಗಳ ಶೋಕ, ದಿನ ರಾಜ್ಯಾಭಿಷೇಕ, ದಿನ ಉಪದೇಶ.

{} ಪಿತರ ನವರಾತ್ರ ದಕ್ಷಿಣಾಯನದ ಆರಂಭ ಅಂದಾಜು ಜೂನ್ ೨೨-೨೩.

{} ವಾಸಂತಿಕ ನವರಾತ್ರ ಉತ್ತರಾಯಣದಲ್ಲಿ ಸೂರ್ಯನು ವಿಷುವ ರೇಖೆಯಲ್ಲಿದ್ದಾಗ.

{} ಶಾರದೀಯ ನವರಾತ್ರ ದಕ್ಷಿಣಾಯನ ಮಾರ್ಗದಲ್ಲಿ ಸೂರ್ಯನು ವಿಷುವ ರೇಖೆಯಲ್ಲಿದ್ದಾಗ.

ವಾಸಂತಿಕ ಹಾಗೂ ಶರನ್ನವರಾತ್ರಿಗಳನ್ನು ಮಾನುಷ ನವರಾತ್ರಿ ಎನ್ನುತ್ತಾರೆ. ಎಲ್ಲಾ ನವರಾತ್ರಿಗಳು ಆಯಾಯ ಸಮಯದ ಚಾಂದ್ರಮಾಸದ ಶುಕ್ಲಪಕ್ಷದಲ್ಲಿ ಉಂಟಾಗುತ್ತವೆಪೌಷ, ಆಷಾಢ, ಚೈತ್ರ, ಆಶ್ವಿನ. ಆಶ್ವಯುಜ ಮಾಸದ ನವರಾತ್ರಿಯು ಶ್ರೇಷ್ಠ ಕಾಲ, ಏಕೆಂದರೆ ಇದು ದೇವತೆಗಳ ಅರ್ಧ-ರಾತ್ರಿ ಭಾಗ.  ರಾತ್ರಿಯು ಶಾಂತಿಯಲ್ಲೇ ಸೃಷ್ಟಿಯಾಗುವುದು. ಮನುಷ್ಯರಿಗೂ ಭೋಜನ ಹಾಗೂ ಕರ್ಮಗಳು ದಿನ ಭಾಗದಲ್ಲಿ ಇರುತ್ತದೆ. ಆದರೆ ಶರೀರದ ವಿಕಾಸವು ರಾತ್ರಿ ನಿದ್ರಿಸುವ ಸಮಯದಲ್ಲಿ ಆಗುತ್ತದೆ.
       
ಶರತ್ಕಾಲೇ ಮಹಾಪೂಜಾ ಕ್ರಿಯತೇ ಯಾ ವಾರ್ಷಿಕೀ | (ದುರ್ಗಾ ಸಪ್ತಶತೀ ೧೨/೧೨)

ಆಶ್ವಯುಜ ಶುಕ್ಲ ಪಾಡ್ಯಕ್ಕೆ (೧ನೇ ತಿಥಿ) ಒಂದು ದಿನ ಮುಂಚೆ ಆಶ್ವಿನ ಅಮಾವಾಸ್ಯೆಗೆ ಮಹಾಲಯ ಆಗಿರುತ್ತದೆ. ಇದು ವಿಶ್ವದ ಅವ್ಯಕ್ತ ಸ್ವರೂಪದ ಪ್ರತೀಕ ಹಾಗೂ ದಿನ ಪಿತೃ ಪೂಜೆ ಆಗಿರುತ್ತದೆ. ತದನಂತರ ನವರಾತ್ರಿಯ ದಿನಗಳು  ಸೃಷ್ಟಿಯ ಸರ್ಗಗಳ ಪ್ರತೀಕವಾಗಿವೆ. ೭ನೇ ದಿನ ಚಂದ್ರನು ಮೂಲಾ ನಕ್ಷತ್ರದಲ್ಲಿ ಇರುತ್ತಾನೆ. ಇದು ಬ್ರಹ್ಮಾಂಡದ (galaxy) ಕೇಂದ್ರವಾಗಿದೆ ಹಾಗೂ ದಿನವೇ ಮಹಾಸರಸ್ವತೀ ಪೂಜೆಯೂ ಮಾಡುತ್ತಾರೆ. ಮುಂದಿನ ನಕ್ಷತ್ರ ಆಷಾಢದ ಭಾಗಗಳುಪೂರ್ವ, ಉತ್ತರ. ದಿನಗಳಲ್ಲಿ ಮಹಾಲಕ್ಷ್ಮೀ, ಮಹಾಕಾಲೀ ಪೂಜೆ ಮಾಡುತ್ತಾರೆ. ಇನ್ನು ಪ್ರಾದೇಶಿಕವಾಗಿ ವ್ಯತ್ಯಾಸಗಳೂ ಇವೆ.

        ದುರ್ಗಾ ಪೂಜೆಯಲ್ಲಿ ದುರ್ಗಾ-ಸಪ್ತಶತಿಯ ಪಾರಾಯಣವಾಗುತ್ತದೆ. ಇದು ಮಾರ್ಕಂಡೇಯ ಪುರಾಣದ ಅಂಶವಾಗಿದೆ. ಮಾರ್ಕಂಡೇಯರು ವೇದದ ರಹಸ್ಯವನ್ನು ಪೌರಾಣಿಕ ಶ್ಲೋಕಗಳ ರೂಪದಲ್ಲಿ ಬಟ್ಟಿ ಇಳಿಸಿದ ಮಹಾನ್ ಶಕ್ತಿಶಾಲಿ ಬೀಜಾಕ್ಷರಗಳನ್ನು ಉತ್ಪನ್ನ ಮಾಡುವ ಸಾಧನವೇ ಸಪ್ತಶತಿ. ಇದರಿಂದಲೇ ಹಲವು ಯಂತ್ರ-ರಚನಾ ಹಾಗೂ ತಂತ್ರ ಪ್ರಯೋಗಗಳು ಯಥೇಚ್ಛವಾಗಿ ಬೆಳೆದವು.

[] ದುರ್ಬಲತೆಗಳು

() ರಾಜಾ ಸುರಥನು ಶತ್ರುವಿನ (ಮಂತ್ರಿಯ) ರಾಜನೈತಿಕ ಷಡ್ಯಂತ್ರದಿಂದ ರಾಜ್ಯವನ್ನು ಕಳೆದುಕೊಂಡನು.

() ಸಮಾಧಿ ಎಂಬ ವೈಶ್ಯನು ಪರಿವಾರದ ಷಡ್ಯಂತ್ರದಿಂದ ಸಂಪತ್ತನ್ನು ಕಳೆದುಕೊಂಡನು. ದುರ್ಗಾ ಸಪ್ತಶತೀ

ಅಮಾತ್ಯೈರ್ಬಲಿಭಿರ್ದುಷ್ಟೈರ್ದುಬಲಸ್ಯ ದುರಾತ್ಮಭಿಃ
ಕೋಶೋ ಬಲಂ ಚಾಪಹೃತಂ ತತ್ರಾಪಿ ಸ್ವಪುರೇ ತತಃ || ||
ಪುತ್ರದಾರೈರ್ನಿರಸ್ತಶ್ಚ ಧನಲೋಭಾದಸಾಧುಭಿಃ
ವಿನೀನಶ್ಚ ಧನೈರ್ದಾರೈಃ ಪುತ್ರೈರಾದಾಯ ಮೇ ಧನಮ್ ||೨೨||

ಸಮಸ್ಯೆಗಳೊಂದಿಗೆ ಸುಮೇಧಾ ಋಷಿಯ ಹತ್ತಿರ ಹೋದರು. ಸುಮೇಧರು ಮಿಥಿಲಾ ದೇಶದ ಧನುಷ್-ಯಜ್ಞದ ನಂತರ ಮಹೇಂದ್ರ ಪರ್ವತದಲ್ಲಿ ಪರಷುರಾಮನಿಗೂ ದೀಕ್ಷೆ ನೀಡಿದ್ದರು. ಅವರ ಉಪದೇಶವು ವಿಶಾಲ ಖಣ್ಡಗಳಲ್ಲಿ ತ್ರಿಪುರಾ-ರಹಸ್ಯ ಎಂದಾಯಿತು.  (ಈಗ ಪ್ರಕಟವಿರುವ ತ್ರಿಪುರಾ ರಹಸ್ಯಯವು  ಮೂಲವಲ್ಲ, ಪ್ರಕ್ಷಿಪ್ತ). ಸುಮೇಧಾ ಋಷಿಗಳನ್ನೇ ಬೌದ್ಧ ಗ್ರಂಥಗಳಲ್ಲಿ ಸುಮೇಧಾ ಬುದ್ಧನೆಂದು ಕರೆಯಲಾಗಿದೆ. ಇದರ ಸ್ಥಾನವು ಓಡಿಶಾದಲ್ಲಿ ಬೌಧ ಜಿಲ್ಲೆಯಲ್ಲಿದೆ. ೧೦ ಮಹಾವಿಧ್ಯೆಗಳನ್ನು ಬೌದ್ಧರು ೧೦ ಪ್ರಜ್ಞಾ-ಪಾರಮಿತಾ ಎನ್ನುತ್ತಾರೆ.

ತಮ್ಮ ದುರ್ಬಲತೆಯನ್ನು ದೂರೀಕರಿಸಲು ಆಂತರಿಕ ಹಾಗೂ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡಬೇಕಾಗುತ್ತದೆ. ಇದಕ್ಕಾಗಿ ಸಮಾಜದಲ್ಲಿ ಏಕತೆ ಇರಬೇಕು. ವಿಶ್ವ ಹಾಗೂ ಏಕತ್ವದ ಪ್ರತೀಕ ದುರ್ಗಾ. ದೇವೀ ಹಾಗೂ ಅವರ ಆಯುಧಗಳ ನಿರ್ಮಾಣವು ದೇವತೆಗಳ ಸಮ್ಮಿಲಿತ ಶಕ್ತಿಯಿಂದಾಯಿತು. ಯುದ್ಧದಲ್ಲಿ ಶುಂಭನುನೀನು ಇನ್ನೊಬ್ಬರ ಸಹಾಯದಿಂದ ಏಕೆ ಹೋರಾಡುತ್ತಿರುವೆ? ಎಂದು ಆಕ್ಷೇಪಿಸಿದಾಗ ದೇವಿಯುಅವರನ್ನು ಹೊರತುಪಡಿಸಿ ಇನ್ಯಾರೂ ಇಲ್ಲ ಎಂದಳು. ಹಾಗೂ ಎಲ್ಲಾ ಶಕ್ತಿಗಳೂ ಪುನಃ ದೇವತೆಗಳ ಶರೀರವನ್ನೇ ಸೇರಿದವು. ಸಪ್ತಶತೀ ಅಧ್ಯಾಯ -

ಅನ್ಯೇಷಾಂ ಚೈವ ದೇವಾನಾಂ ಶಕ್ರಾದೀನಾಂ ಶರೀರತಃ
ನಿರ್ಗತಂ ಸುಮಹತ್ತೇಜಸ್ತಚ್ಚೈಕ್ಯಂ ಸಮಗಚ್ಛತ || ೧೧ ||
ಅತೀವ ತೇಜಸಃ ಕೂಟಂ ಜ್ವಲಂತಮಿವ ಪರ್ವತಮ್
ದದೃಶುಸ್ತೇ ಸುರಾಸ್ತತ್ರ ಜ್ವಾಲಾವ್ಯಾಪ್ತ ದಿಗನ್ತರಮ್ || ೧೨ ||
ಅತುಲಂ ತತ್ರ ತತ್ತೇಜಃ ಸರ್ವದೇವಶರೀರಜಮ್
ಏಕಸ್ಥಂ ತದಭೂನ್ನಾರೀ ವ್ಯಾಪ್ತಲೋಕತ್ರಯಂ ತ್ರಿಷಾ || ೧೩ ||
ಬಲಾವಲೇಪಾದ್ದುಷ್ಟೇ ತ್ವಂ ಮಾ ದುರ್ಗೇ ಗರ್ವಮಾವಹ |
ಅನ್ಯಾಸಾಂ ಬಲಮಾಶ್ರಿತ್ಯ ಯುದ್ಧ್ಯಸೇ ಚಾತಿಮಾನಿನೀ || || ದೇವ್ಯುವಾಚ || ||
ಏಕೈವಾಹಂ ಜಗತ್ಯತ್ರ ದ್ವಿತೀಯಾ ಕಾ ಮಮಾಪರಾ |
ಪಶ್ಯೈತಾ ದುಷ್ಟ ಮಯ್ಯೇವ ವಿಶನ್ತ್ಯೋ ಮದ್ವಿಭೂತಯಃ || || (ಅಧ್ಯಾಯ ೧೦)

ಮೂಲ:- ಶ್ರೀ ಅರುಣ್ ಕುಮಾರ್ ಉಪಾಧ್ಯಾಯ, ಒಡಿಶಾ
ಅನುವಾದ:- ಹೇಮಂತ್ ಕುಮಾರ್ ಜಿ.