Thursday, 24 May 2018

ಮಂಗಳಾರತಿಯನ್ನು ಎರಡು ಕೈಗಳಿಂದಲೇ ತೆಗೆದುಕೊಳ್ಳಬೇಕು ಎಂಬುದಕ್ಕೆ ಶಾಸ್ತ್ರಾಧಾರ


FAKE || ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ಸಂಶಯ: || FAKE

ಇದು ಶಿವನು ಪಾರ್ವತಿಗೆ ಹೇಳಿದ್ದಂತೆ. ಒಂದೇ ಕೈಯಲ್ಲಿ ಯಾರು ಆರತಿ ತೆಗೆದುಕೊಳ್ಳುತ್ತಾರೋ ಅವರು ಶಿವ ದ್ರೋಹಿ ಎಂದು!

ಶಿವ ಇಷ್ಟು ಕೆಳ ಮಟ್ಟದ ಹೇಳಿಕೆ ಕೊಡುತ್ತಾನೆ ಎಂದರೆ ಶ್ಲೋಕವೇ ಪ್ರಕ್ಷಿಪ್ತ.

ಅಲ್ಲಾ ರೀ ಎರಡು ಹಸ್ತದಲ್ಲಿ ಮಂಗಳಾರತಿ ತೆಗೆದುಕೊಂಡರೆ ಶಿವದ್ರೋಹೀ ಆಗುತ್ತಾನೆ ಎಂದು ಭಕ್ತವತ್ಸಲ, ಕರುಣಾಕರ, ಬೋಳರಾಮೇಶ್ವರ, ಆಶುತೋಶನಾದ ಶಿವನು ಹೇಳಲು ಸಾಧ್ಯವೇ? ಕಿಂಚಿತ್ ಕೈ ಬಳಕೆಯ ವ್ಯತ್ಯಾಸದಿಂದ ಶಿವದ್ರೋಹವಾಗಲು ಸಾಧ್ಯವೇ? ಇದು ನ್ಯಾಯಸಮ್ಮತವೇ, ನೈತಿಕತೆಯೇ, ಸತ್ಯವೇ? ರೀತಿ ಸುಳ್ಳು ಹೇಳುವುದರ ಹಿಂದೆ ಒಂದು ಷಡ್ಯಂತ್ರ ಅಡಗಿದೆ. ನಮಗೆಲ್ಲ ತಿಳಿದಿರುವಂತೆ ಸ್ಮಾರ್ತ ಪ್ರಧಾನ ಮಠಗಳಲ್ಲಿ ಎರಡೂ ಹಸ್ತಗಳಿಂದ ಗುರುಗಳೇ ಮಂಗಳಾರತಿಯನ್ನು ಮುಖಕ್ಕೆ ಬರುವಂತೆ ತೆಗೆದುಕೊಳ್ಳುತ್ತಾರೆ. ಕ್ರಮವನ್ನು ವಿರೋಧಿಸುವ ಸಲುವಾಗಿಯೇ ನಾಚಿಕೆಗೆಟ್ಟ ಕೆಲ ಪಾಖಂಡಿಗಳು ಮೇಲ್ಕಂಡ ಶ್ಲೋಕವನ್ನು ಬರೆದಿರುವುದು.

ಅಗ್ನಿಕಾರ್ಯ, ಅಗ್ನಿಮುಖ ಪ್ರಕ್ರಿಯೆಗಳು ತಿಳಿದಿದ್ದಲ್ಲಿ ಇಂತಹಾ ಪ್ರಶ್ನೆಗಳೇ ಬರುತ್ತಿರಲಿಲ್ಲ. ಹೆಸರಿಗೆ ಬ್ರಾಹ್ಮಣ ಎಂದು ಬೀಗಿದರೆ ಸಾಲದು. ಅಧ್ಯಯನ, ಸಾಧನೆಗಳೂ ಬೇಕು. ಒಂದು ವೇಳೆ ಅಗ್ನಿಕಾರ್ಯ ಎಂಬ ಪ್ರಕ್ರಿಯೆ ಇದೆ ಎಂದು ತಿಳಿದು, ಅದರಲ್ಲಿ ಅಗ್ನಿಯನ್ನು ವಟುವು ಉಪಾಸನೆ ಮಾಡಿ ತೇಜಸಾ ಮಾ ಸಮನಜ್ಮಿ ಎಂದು ಭಾರಿ ಸಮ್ಮುಖಗೊಳಿಸುವ ಪ್ರಕ್ರಿಯೆ ಇದೆ. ಅದನ್ನು ಪ್ರಾದೇಶಿಕ ಆಚರಣೆಯಲ್ಲಿ ತಲೆಗೆ, ಮುಖಕ್ಕೆ, ಹೃದಯಕ್ಕೆ ಎಂದು ವಿಭಾಗಿಸಿದ್ದಾರೆ.

ಆಶ್ವಲಾಯನರಾದರೋ ತಮ್ಮ ಗೃಹ್ಯ ಸೂತ್ರದಲ್ಲಿ (-೨೧-,) ರೀತಿ ಹೇಳಿದ್ದಾರೆ:-

ಸಮಿಧಂ ಆಧಾಯ ಅಗ್ನಿಂ ಉಪಸ್ಪೃಶ್ಯ ಮುಖಂ ನಿಮಾರ್ಷ್ಟಿ ತ್ರಿಸ್ ತೇಜಸಾ ಮಾ ಸಮನಜ್ಮಿ ಇತಿತೇಜಸಾ ಹ್ಯೇವ ಆತ್ಮಾನಂ ಸಮನಕ್ತಿ ಇತಿ ವಿಜ್ಞಾಯತೇ ||

ಅಗ್ನಿಕಾರ್ಯ ಪ್ರಕ್ರಿಯೆಯಲ್ಲಿ ಅಗ್ನಿಯ ಶಾಖವನ್ನು ಸ್ವೀಕರಿಸಲು ಎರಡೂ ಹಸ್ತದ ಬಳಕೆ ಇದೆ. ಹಾಗೇ ಕೆಲ ವಿಶಿಷ್ಟವಾದ ಅಗ್ನಿಮುಖ ಪ್ರಯೋಗದಲ್ಲೂ

ಪ್ರಾಙ್ಮುಖಾಗ್ನಿಂ ಸಮ್ಮುಖೋ ಭವ
  
ಎಂಬ ನಿರ್ವಚನಗಳಿವೆ. ವೇದೋಕ್ತ ಯಜ್ಞ ಪ್ರಕ್ರಿಯೆಗಳ ಸಾರಂಶವೇ ಪೂಜಾ ಪುನಸ್ಕಾರಗಳು. ಯಜ್ಞ ಯಾಗಾದಿಗಳಲ್ಲಿ ಬರುವ ಕೆಲ ವಿಚಾರಗಳೇ ಸ್ಥೂಲವಾಗಿ ಪೂಜಾದಿಗಳಲ್ಲೂ ಬರುವುದು. ಹಾಗಾಗಿ ಶ್ರೌತಸೂತ್ರಾಧಾರಿತವಾಗಿ ಮಂಗಳಾರತಿಯನ್ನು ಎರಡೂ ಕೈಗಳಿಂದಲೇ ತೆಗೆದುಕೊಳ್ಳಬೇಕು. ಇದು ಅಭಿವೃದ್ಧಿಯನ್ನು, ದೇವರ ಕಲಾ ಸಂಪರ್ಕವನ್ನು, ಅಗ್ನಿಯ ಕಿರಣವನ್ನು ದೇಹ ಮನಸ್ಸುಗಳ ಶ್ರೇಯೋಭಿವೃದ್ಧಿ ಬಯಸುವವರಿಗೆ ಮಾತ್ರ ಅನ್ವಯಿಸುತ್ತದೆ. ಶಾಸ್ತ್ರ ಜ್ಞಾನವಿಲ್ಲದೆ, ಶಾಸ್ತ್ರವನ್ನು ತಿದ್ದುವವರು, ವಿತಂಡ ವಾದ ಮಾಡುವವರು ಎಡಗೈ ಅಥವಾ ಬಲಗೈ ಅಥವಾ ಸ್ಪೂನಿನಲ್ಲಿ ಬೇಕಾದರೆ ಊಟವನ್ನೂ ಮಾಡಲಿ ಅಥವಾ ಮಂಗಳಾರತಿಯನ್ನೂ ತೆಗೆದುಕೊಳ್ಳಲಿ ಚಿಂತೆಯಿಲ್ಲ.

ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿರುವ ಆಶ್ವಲಾಯನರು ಹೇಳಿದ್ದನ್ನು ಬಿಟ್ಟು ಯಾರೋ ತಲೆ ಕೆಟ್ಟ ಧರ್ಮದ್ರೋಹಿಗಳು ಪ್ರಸಾರ ಮಾಡುವ ಅಧಾರ್ಮಿಕ ವಿಚಾರಗಳನ್ನು ಪುರಸ್ಕರಿಸಿಯೇ ಅಧಃಪತನಕ್ಕೆ ಇಳಿಯುವುದಲ್ಲದೆ ವೇದ ದೇವ ಋಷಿ ನಿಂದನೆಯನ್ನು ಮಾಡುತ್ತಾರೆ. ಕೊನೆಗೆ ನನಗೆ ಏಕೆ ಹೀಗಾಯಿತು? ನನಗೇಕೆ ಮದುವೆಯಾಗಲಿಲ್ಲ? ನನಗೇಕೆ ಮಕ್ಕಳಾಗಲಿಲ್ಲ? ಇದಕ್ಕೆಲ್ಲ ಬ್ರಾಹ್ಮಣ ಸಮಾಜವೇ ಕಾರಣವೆಂದು ಬಾಯಿಬಡಿದುಕೊಳ್ಳುತ್ತಾರೆ. ಮೊದಲು ತಾವು ಮಾಡುತ್ತಿರುವ ಧರ್ಮದ್ರೋಹ, ವೇದನಿಂದೆ, ಋಷಿದ್ರೋಹ, ಗುರುದ್ರೋಹಗಳನ್ನು ಬಿಡಲಿ, ನಂತರ ಬ್ರಾಹ್ಮಣ್ಯದ ಬಗ್ಗೆ ಮಾತನಾಡಲಿ!

ಜೈ ಹಿಂದ್.

Monday, 21 May 2018

ಶ್ರೀ ಕೋಲಮುನಿ ಚರಿತೆ : ಬಾಲಕಾಂಡ (Text & Audio)


ಕೋಲಮುನಿ ಕಥಾ ಸಾರಾಂಶ:- ಕೋದಂಡರಾಮನೆಂಬ ರೂಢನಾಮ ಪಡೆದು ಪೂರ್ವಕಾಲದಲ್ಲಿ ಬಹಳ ಪ್ರಸಿದ್ಧವಾದ ಆಧ್ಯಾತ್ಮವಾದಿಗಳ ಕೇಂದ್ರವಾಗಿದ್ದ ನಾಗವೃಜ ಸ್ಥಳ, ಅಂದರೆ ಈಗಿನ ದಕ್ಷಿಣ ಕನ್ನಡದಲ್ಲಿರುವ ಪಾವಂಜೆ; ಇಲ್ಲಿ ಹುಟ್ಟಿ ಮಹಾನ್ ಸಾಧಕನಾಗಿ, ತನ್ನ ಜೀವನದಲ್ಲಿ ಎಲ್ಲಾ ಸಾಧನೆಯನ್ನು ಮಾಡುತ್ತಾ, ಯಶಸ್ಸನ್ನು ಗಳಿಸಿ ಯತಿಶ್ರೇಷ್ಠರಾಗಿ ಬೆಳೆದು ಅದ್ವೈತ ಸ್ಥಾಪನಾಚಾರ್ಯರಾದ ಶ್ರೀಶಂಕರ ಭಗವತ್ಪಾದರಿಗೆ ತನ್ನ ಸಾಧನಾ ಬಲದಿಂದ ಸಹಕಾರವನ್ನು ಕೊಡುತ್ತಾ ಸ್ಮಾರ್ತ ಮತಾನುಯಾಯಿಗಳಾದ ಅದ್ವೈತ ಸಿದ್ಧಾಂತದ ಪೋಷಕ ಜನಾಂಗಕ್ಕೆ ತೆರೆಯ ಮರೆಯಲ್ಲಿದ್ದು ಸೇವೆಯನ್ನು ಸಲ್ಲಿಸಿದವರು ಕೋಲಮುನಿಗಳು.

ಇವರ ಜೀವನ ಚರಿತ್ರೆಯನ್ನು ಸಮಾಜಕ್ಕೆ ಪರಿಚಯಿಸುವವರು ಶ್ರೀಕ್ಷೇತ್ರ ಪಾವಂಜೆಯ ಶ್ರೀಅಣ್ಣಪ್ಪಯ್ಯ ಯುವವೇದಿಕೆಯವರು. ಇದರಲ್ಲಿ ಯಾವುದೇ ರೀತಿಯ ಇನ್ನೊಂದು ಮತದ ಧರ್ಮದ ದೂಷಣೆ, ಖಂಡನೆ, ನಿಂದನೆ ಇತ್ಯಾದಿಗಳ ಉದ್ದೇಶವಿಲ್ಲ. ಇದರಲ್ಲಿ ಇರತಕ್ಕಂತಹಾ ಕೆಲವೊಂದು ಉತ್ತಮ ಆದರ್ಶ ವಿಷಯಗಳನ್ನು ಸಮಾಜ ಸ್ವೀಕರಿಸಿ ಸಾರ್ಥಕತೆಯನ್ನು, ಯಶಸ್ಸನ್ನೂ ಪಡೆದುಕೊಳ್ಳಬೇಕು ಮತ್ತು ನಾವೆಲ್ಲರೂ ಕೋಲಮುನಿಗಳಂತಹಾ ಶ್ರೇಷ್ಠರಾದ ಸಾಧಕರಾಗುವಂತೆ ಜ್ಞಾನಪ್ರದನಾದ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸಾಮಿಯು ನಮ್ಮೆಲ್ಲರನ್ನು ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇವೆ. ತಮ್ಮ ವಿಶೇಷ ಸಂಶೋಧನೆಯಿಂದ ಈ ಕಥಾ ಸಂಗ್ರಹವನ್ನು ಅನ್ವೇಷಿಸಿ, ಪದ್ಯ ರೂಪದಲ್ಲಿ ಸಂಗ್ರಹಿಸಿ ಕೊಟ್ಟ ಯುವ ವೇದಿಕೆಯ ಮಾರ್ಗದರ್ಶಕರಾದ ಶ್ರೀ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರಿಗೆ ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತೇವೆ.

ಕೋಲಮುನಿಗಳಿಂದ ಮತ್ತು ಅವರ ಗುರುಗಳಾದ ದಶವಿಧ್ಯಾಪ್ರವೀಣ, ಮಹಾನ್ ತಾಂತ್ರಿಕ, ಕಂಬಳನಾಗಸೂತ್ರ ಅನ್ವೇಷಕ, ಕಂಬಳ ಮುನಿಗಳೆಂದೇ ಪ್ರಖ್ಯಾತರಾದ ಶ್ರೀ ಅಣ್ಣಪ್ಪಯ್ಯ ಯತಿವರರಿಂದ ಆಶೀರ್ವಾದವನ್ನು ಬೇಡುತ್ತಾ, ಮಹಾಕಾಲನ ಅನುಗ್ರಹ ನಮಗೆಲ್ಲರಿಗೂ ಲಭಿಸಲಿ ಎಂದು ಹಾರೈಸಿ ಈ ಪುಣ್ಯ ಚರಿತೆಯನ್ನು ನಮ್ಮೆಲ್ಲರ ಪ್ರೀತಿಯ ಮಾಯಾ – ದಿವಂಗತ ಪಂಡಿತ್ ಹರಿಭಟ್ಟರ ದಿವ್ಯ ಚರಣಗಳಿಗೆ ಅರ್ಪಿಸುತ್ತೇವೆ.

|| ಲೋಕಾ ಸಮಸ್ತಾಃ ಸುಖಿನೋ ಭವಂತು ||

ಪ್ರಸ್ತುತ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಪದ್ಯಾಣ ಗಣಪತಿ ಭಟ್, 
ಮದ್ದಳೆ ಶ್ರೀ ಪದ್ಮನಾಭ ಉಪಾಧ್ಯಾಯ.


ಶ್ರೀ ಕೋಲಮುನಿ ಚರಿತೆ : ಬಾಲಕಾಂಡಆದಿಯಲಿ ವಂದಿಸುವೆ ಮೇದಿನಿಯ ಸುತನ ಸುತೆಯ ಸುತನ
ಆದಿಮೂರುತಿ ಶ್ರೀ ಕೇಶವನ ಕೃಷ್ಣನ ಆ ಗೋಪೀವರದ ಗೋಪಾಲನಾ
ಆದಿಚರಿತೆಯನರಿತು ತಿಳಿಸಿದ ಆ ಮುನೀವರ ಕೋದಂಡರಾಮನ
ಹಾದಿಯಲಿ ಘಟಿಸಿದ ಅಘಟಿತ ಘಟನಾವಳಿಯ ಸಂಘಟನೆಯಿಂದವರು
ಸಾಧಿಸಿದ ರೀತಿಯನು ಮೇದಿನಿಯ ಸುರರೆಲ್ಲಾ ಅರಿತುಕೊಳ್ಳಿರೊ ಎಂದು ಅ
ನಾದಿ ಪರಬ್ರಹ್ಮ ಮಹದೇವನೊಲುಮೆಯಿರಲೆಂದು ಪ್ರಾರ್ಥಿಸುತಾ ||೧||

ಶ್ರೀಕರಾರ್ಚಿತ ಪರಮಪಾವನ ಮೂರ್ತಿ ಸಹ್ಯ ಸಹೋದರಗೊಲಿದ
ನಿಕರ ಕಥೆಯನು ಒರೆವೆ ನಾನೀಗ ಲಾಲಿಪುದು ವಿದ್ವನ್ಮಣಿಗಳೂ
ಈ ಕಥೆಯೊಳ್ ನಾನರಿಯದಾ ವಿಷಯವಿನ್ನೆಷ್ಟೊ ಇರಲುಂಟು ಅರಿತ
ಶುಕಮುನಿಯ ಸಮಾನ ಸಜ್ಜನರೆ ಮನ್ನಿಸಿ, ಈ ಬಾಲನ ಬಾಲಿಶ ಗ
ಮಕ ಧಾಟಿಯ ಈ ಪದ ಸಂಕುಲವ ಮನ್ನಿಸಿ ತಪ್ಪಿರಲು ತಿದ್ದಿ ನೀವ್
ಭಕುತ ನಿಮ್ಮವನೆಂದು ಸ್ವೀಕರಿಸಿ ಒಪ್ಪನೆಲ್ಲವ, ತಪ್ಪುಗಳು ನನಗಿರಲೀ ||೨||

ಬೊಪ್ಪ ಮಹದೇವನಿಪ್ಪನೈ ಗಿರಿಜೆಯೊಡನೆ ಗಿರಿಶಿಖರದ ಮೇಲೆ
ತಪ್ಪದೇ ಅರ್ಚಿಸಿರಿ ನಿಮಗೊಪ್ಪುವನು ನಿಮ್ಮ ಭಕುತಿಗೆ ಮೆಚ್ಚಿ
ಅಪ್ಪುವನು ಕಾಯುವನು ಈ ಭವದ ಸಕಲ ದುರಿತಗಳ ತರಿದು,
ತಪ್ಪನೀತನು ದೇಹಿಯೆಂದ ವರ ವತ್ಸಲನು ಪಾವಂಜೆಯಲಿ ನೆಲಸಿ
ಮುಪ್ಪನೇ ಕಾಣದ ಜ್ಞಾನ ಈವನು ಈತ ತನ್ನಯ ಸುತನ ನೆರವಿನಿಂ
ಇಪ್ಪನೈ ಕೆಳಕೆಲದಿ ಜ್ಞಾನ ಶಕ್ತಿರೂಪದೊಳ್ ನೆಲಸಿಹನು ಷಣ್ಮುಖನು ||೩||

ಮಾತೆ ದುರ್ಗಾದೇವಿ ಮತ್ತೆ ಕನ್ನಿಕೆಯಾದ ಕೃತ್ತಿಕಾದಿ ಮುನಿವರರ
ಮಾತೆಯರಿಂದ ಪೋಷಿಸಿ ಕಾರ್ತಿಕೇಯನೆಂದು ಮೆರೆದ, ಗರ್ಭಸಂ
ಜಾತನಲೈ ಈತ ಸದ್ಯೋಜಾತ ಕುಮಾರನು ಅಗ್ನಿಮುಖನು ವರಗಿರಿಜಾ
ಮಾತೆಯೊಲುಮೆಯ ಸುತನು ತಾರಕಾರಿ ಜ್ಞಾನ ಮೂರುತಿ ಈತ ಹಿಂದೆ ರಕ್ಕಸನು
ತಾತ ಬೊಮ್ಮನಲಿ ಪಡೆದ ವರವ ನೀಗಿಸಲು ಜನಿಸಿದ ಶಿವನ ಶಕ್ತಿಯ ಬಿಂದುವಾಗಿ, ಇಂದಿಗೆಪ್ಪತು ಮೇಲೆ
ಹತ್ತುವರುಷ ಕಳೆಯಿತು ಪಾವಂಜೆಯಲಿ ನೆಲಸಿ, ವಿಪ್ರ ವಾಸುದೇವನ ಹರಿಕೆ ಸಂದಿತು ಕಣಾ ||೪||

ಏನೆಂಬೆ ಪಾವಂಜೆಯ ಪುಣ್ಯಭೂಮಿಯ ಕಥೆಯ, ಮೇಲೆ ಕೈಲಾಸದಲಿ
ತಾನು ತಾನಾಗಿ ಶಿವನಿಹನು, ಕೆಲಬಲದಿ ನಂದಿನಿಯು ನದಿಯಾಗಿ
ಜಾನು ನೋಪಾದಿಯಲಿ ಸುತ್ತಿ ಬರುವಳು ಶಿಖರದಾ ತಪ್ಪಲಿಗೆ ಶಿವನ ಪಾ
ವನ ಪಾದ ತೊಳೆಯುವಂದದಲಿ, ವಾಮಭಾಗದೊಳ್ ನೆಲಸಿ ಮಾತೆ ದುರ್ಗಾದೇವಿ,
ಕಾನನದ ಕಂಪತೀಡುವಂದದಲಿ ಕೆಲದೊಳಗೆ ನೆಲಸಿಹನು ಶಿವಸುತನು,
ಆನನವಾರು ಈತಗೆ ಜ್ಞಾನರೂಪವು ಆರು ತಿಳಿಯರೊ ಈ ವೇದ ಸತ್ಯವನೂ ||೫||

ಈ ಭೂಮಿಯಲಿ ನಡೆದ ಯಾಗಯಜ್ಞಗಳೆಷ್ಟೊ ದಾನ ಧರ್ಮಗಳೆಷ್ಟೊ ಆ
ಪ್ರಭಾಕರನು ಅರಿತು ತಿಳುಹಲು ಬೇಕು, ಲೆಕ್ಕವಿಡಲು ಬೇಕು ಸಾಸಿರ ಶಿರನು, ಮ
ತ್ತೇಭ ಮುಖನ ಸಹೋದರನ ನಂಬಿದ ಭಕುತ ಜನರಿಗೆ ಇದನೊರೆವೆ ನಾನನ್ನ ಚಿ
ತ್ತ ಭಿತ್ತಿಯೊಳ್ ಕಂಡ ಸತ್ಯವ, ಈ ಪಾವನ ಪುಣ್ಯ ನಗರಿಯ ಪೊಗಳಿದಾ ಪುಣ್ಯಫಲ ನಿಮಗಿರಲಿ,
ವಿಭಾಕರನ ದಯೆಯಿರಲಿ, ತಾಯಿ ಸರಸ್ವತಿ ಕರುಣಿಸಲಿ, ನುಡಿಸಲಿ, ಸತ್ಯವಾಕ್ಯವ, ಮತ್ತೆ ಮ
ತ್ತೇಭ ಮುಖ ನಿರ್ವಿಘ್ನಗೊಳಿಸಲಿ, ಚಿತ್ತ ವೃತ್ತಿಯು ಅನುಕರಿಸಲೆಂದು ಚಿತ್ತಜನ ತಾತನನು ವಂದಿಸುತಾ ||೬||

ಮತ್ತೆ ಪೇಳುವೆ ಕೇಳಿ ಜನರೇ ಈ ವೃತ್ತಾಂತವನು ನಾ ಕಂಡುಕೊಂಡೆನು ಪುಂಡರೀಕ
ಕ್ರತುವಿನಾ ಕಾಲದಲಿ ಈ ಉದ್ದಂಡ ಮುನಿಯ ಚರಿತೆಯೊಡನಾಟ ಸಹವಾಸ
ಈತನಾರೆಂದರಿವ ಮೊದಲೇ ತಿಳಿಸಿಕೊಟ್ಟನು ತನ್ನ ಪೂರ್ವೇತಿಹಾಸ ಒಲುಮೆಯ,
ಜಾತನೀತನು ಪಾವಂಜೆಯ ಮಹದೇವ ಮೀನಾಕ್ಷಿಯರ ಸುತನೆಂದು, ಗೋತ್ರ ವಿಶ್ವಾ
ಮಿತ್ರಜನು ಕಾಣಿರೈ ಸ್ಥಳೀಕ ಬ್ರಾಹ್ಮಣತತಿಯೊಳಗೆ ಜನಿಸಿ ಕುಲವನುದ್ಧರಿಸಿದನು
ಈತನ ಚರಿತೆ ಪಾಡಲು ಜನ್ಮಪಾವನ ಏಳಿ, ಏಳೇಳು ಜನುಮದ ದುರಿತ ದಾಟುವುದೂ ||೭||

ಕಾಲನಾ ಗತಿಯಲ್ಲಿ ದಾಟಿತು ಈರೇಳು ಶತವರುಷ ಪೂರ್ವದಿ, ನಂದಿನೀತಟದೊಳಗೆ
ಬಾಲರಾಮನ ಭಕುತನೋರ್ವನು ಸಚ್ಚರಿತ ಸುಗುಣಮೂರ್ತಿಯು ಮಹದೇವನೆಂಬಾ
ಶೀಲಗುಣ ಸಂಪನ್ನ ವಿಪ್ರನು ವಾಸಿಸುತ್ತಿದ್ದ, ತನ್ನ ಮನೋರಮೆ ಸತಿ ಶಿರೋಮಣಿ ಮೀನಾಕ್ಷಿ
ಯಲಿ ಪಡೆದನು ದೇವಶಿಶುವನು ಕೋದಂಡರಾಮನೆಂಬಭಿಧಾನದಿಂದಾ ಆ ಶಿಶುವು ತನ್ನಯ
ಬಾಲಲೀಲೆಗಳಿಂದ ಮೆರೆಯುತ ನಂದಿನಿಯ ಸಹೋದರನ ತೆರದಲಿ ಆಡಿ ಬೆಳೆದನು,
ಜಾಲವಲ್ಲದು ತರಳ ಸಣ್ನವನಾದರೇನ್ ನಡೆನುಡಿಯು ಪ್ರೌಢವು ಪ್ರಬುದ್ಧವು ಬೆರಳ ತೋರುವಂತೆ ||೮||

ಈ ತರಳನ ಬಾಲಲೀಲೆಗಳನೇನೆಂಬೆ ನದಿಯಲಿ ನೆರೆ ಬರಲಿ ಬರವಿರಲಿ
ಸತತ ಸುರಿಯುತಲಿರಲಿ ಮಳೆ ತಾನು ಅಂಜದೆ ಆಡುವನು ನೀರಾಟ ಮೇಲಾಟ
ಮತ್ತೆ ನಾವೆಯೊಳಾಟ, ಊರ ನಾವೆಗಳೆಲ್ಲ ಇವನ ಆಣತಿಯಂತೆ ನೀರಲಿ ತೇಲುವವೊ ಎಂ
ಬಂತೆ ಪ್ರಾಯ ಕಿರಿದಾದರೂ ಸಹಜ ಯೌವನಿಗನಂತೆ ನಡೆನುಡಿಯ ತೋರುತಿರೆ ಬೆರಗುಗೊ
ಳ್ಳುತ ಊರಜನ ಈತ ಬಾಲರಾಮನೆಂದು ಕೊಂಡಾಡುವರು, ಹೊಗಳಿ ಹಾಡುವರು ದಿನದಿನವೂ,
ಜಾತನಿವ ಮಹದೇವ ಸೂನುವೇ, ಅರ್ಥವಾಗದು ಕಂಡರೆ ದಾಶರಥಿಯ ವಿಕ್ರಮವು ಕಾಣಿರೊ ಎಂದೂ ||೯||

ಸಂದಿತೈ ವರುಷ ಆರು ಮತ್ತೊಂದಾಗಿ ಮಾಸ ಮೂರನು ಕಳೆಯೆ ಅನಿತರೊಳು ಗರ್ಭಾಷ್ಟಮ
ವೆಂದು ತಿಳಿಯುತ ಮಾಡಿದನು ಉಪನಯನ ವ್ರತವನು ಉಪನಿಷತ್ಕ್ರಮಣ ಸಹಿತಾ,
ಅಂದಂದಿಗೇ ಭಿಕ್ಷಾಟನೆಯೆತ್ತಿ ಜೀವಿಸಬೇಕು ನೀನಿನ್ನು, ಮಗನೆಂದು ತೋರಲಾರೆನು ಕರುಣೆ ನಡೆಯೆಂದು,
ಚಂದದಿಂ ವಿಧ್ಯಾರ್ಜನೆಯ ಮಾಡದಿರೆ ನೀನೆನಗೆ ಮಗನೇ ನೀನೆನ್ನ ಕೊಂದಂತೆ ತಿಳಿ ನಡೆ
ಯೆಂದು ನಿರ್ಭಾವದಿಂ ಕಳಿಸಿಕೊಟ್ಟನು ಗುರುಕುಲಕೆ, ತರಳರಾಮನು ಬಿಡದೆ ಕಲಿತನು
ಬಂಧುವಿಧ್ಯೆಯ ನಾದಿಯಲಿ ನಂತರ ವೇದೋಪನಿಷದ ಶಾಸ್ತ್ರಸಾರಂಗಳಾದಿಯಾಗಿ ||೧೦||

ಸತತ ವಿಧ್ಯಾಭ್ಯಾಸ ನಿರತ ಗೋಪಾಲನೆಯ ಮಾಡುತ ಕರದಿ ಧರಿಸಿದ ದಂಡ
ವಿತ್ತಿತೈ ಈತನಿಗೆ ಕೋಲವಟುವೆಂದೆಂಬ ರೂಢನಾಮವನೂ ಗುರುಕರುಣದಿಂದಲಿ
ಎತ್ತಿ ಕೊಂಡಾಡಿದನು ಮತ್ತೆ ಪೂಸಿದ ಶಿರವ, ಅಲ್ಲಿಗೇ ವಿಶೇಷಜ್ಞಾನ ತುಂಬುತ ಮಗನೇ ನೀ
ನೆತ್ತ ಹೋದರೂ ಮುಂದೆ ಕೋಲಮುನಿಯೆಂಬ ಖ್ಯಾತಿಯು ನಿನಗೆ, ಬಿಡದಿರು ಕೋದಂಡ ಕಣಾ,
ಮತ್ತೆ ನೀ ಜನಮನಕೆ ಖ್ಯಾತನಾಗುತ ಸುಪ್ರೀತನಾಗೆಲೊ ಹೋಗು ಹೋಗೆಂದೆನುತ
ಮುತ್ತಿಟ್ಟು ಕಳುಹಿದನಾತನನು ಗುರುವರನು ಮತ್ತೆ ಲೋಕವ ಸುತ್ತಲೆಂದೆಳಸೀ ||೧೧||

ಹಲವು ದೇಶಗಳ ಸುತ್ತುತ ಅನವರತ ಅಧ್ಯಯನ ಮಾಡುತ ಅಲ್ಲಲ್ಲಿ ಸಿಕ್ಕಿದ
ಕೆಲವು ಗಣ್ಯರ ಋಷಿಮುನಿಗಳ ಪಾದಸೇವೆಯ ವರ ಭಕುತಿಯೊಳು ಮಾಡಿ,
ಒಲವು ಗಳಿಸಿ ವಿಶೇಷಜ್ಞಾನವ ಪಡೆದು ಪರಮ ಪಾವನ ಪುಣ್ಯಕ್ಷೇತ್ರಗಳ ತಿರುಗಿ
ಜಲವು ಪುನೀತಗೊಳಿಸುವ ತೆರದಿ ಈ ಕೋಲಮುನೀವರ ನಡೆದು ತಂದನು ತನ್ನ
ಒಲವಿನಾ ತಾಯ್ತಂದೆಯರನರಸೀ, ಬರುವ ಕಾಣುತ ಮಗನ ಅಪ್ಪಿ ಮುದ್ದಾಡಲೋ,
ಜಲದಿ ಪಾದವ ತೊಳೆಯಲೊ, ಎಂಬ ತೊಳಲಾಟದಲಿರಲು ಬಂದು ವಂದಿಸಿದ ತಂದೆಯನೂ ||೧೨||

(ಸಶೇಷ..)
ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು
ಪೂರ್ವೋತ್ತರೀಯ ಮೀಮಾಂಸಕರು
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

Sunday, 20 May 2018

#ಜ್ಯೋತಿಷಿಗಳೋ #ಪ್ರಮಾಣ #ವಚನಸ್ವೀಕಾರ #ಮುಹೂರ್ತವೋ #ನಂಬಿಕೆಯೋ #ಮೂಢನಂಬಿಕೆಯೋ #ಕಲಿಯುಗವೋ ... 🤔

ಏನಕೇನ ಪ್ರಕಾರೇಣ ಹಣ ಮತ್ತು ಹೆಸರು ಮಾಡುವುದಕ್ಕಾಗಿಯೇ ಇರುವುದೋ ಎಂಬ ತೆರದಿ ಬೆಳೆದುಕೊಂಡು ಬರುತ್ತಿರುವ ಈ ಕಲಿಗಾಲದ ಅರ್ಧಂಬರ್ಧ ಫಲ ಜ್ಯೋತಿಷ್ಯವನ್ನು ಕಲಿತ ದಡ್ಡ ಶಿಖಾಮಣಿಗಳು ಶ್ರೀಯುತ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತ ಸರಿಯಿರಲಿಲ್ಲ. ಹಾಗಾಗಿ ಅವರ ಅಧಿಕಾರ ಪಥನವಾಯಿತು ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಅದೇ ಪ್ರಖ್ಯಾತ ಜ್ಯೋತಿಷಿಗಳು ಹಿಂದೆ ತಾವೇ ಬಿ.ಜೆ.ಪಿ. ಸರ್ಕಾರ ಆಡಳಿತಕ್ಕೆ ಬರುವುದಿಲ್ಲ, ಮಿಶ್ರ ಸರ್ಕಾರ ಬರುತ್ತದೆ ಎಂದು ಭವಿಷ್ಯಾವಧಾನ ಕೂಡ ಮಾಡಿದ್ದೇವೆ ಎಂದು ಘೋಷಿಸಿಕೊಂಡಿರುತ್ತಾರೆ. ಇಲ್ಲಿ ಎರಡು ಪರಸ್ಪರ ವಿರುದ್ಧ ಹೇಳಿಕೆಗಳಿವೆ. ಅವರ ಮಾತಿನಂತೆ ಬಿ.ಜೆ.ಪಿ. ಆಡಳಿತಕ್ಕೆ ಬರುವುದಿಲ್ಲ ಎನ್ನುವುದು ಸುಳ್ಳಾಯಿತು. ಒಂದು ದಿನವಾಗಲೀ, ಒಂದು ಘಂಟೆಯಾಗಲೀ, ಒಂದು ನಿಮಿಷವಾಗಲಿ, ಒಂದೇ ಸೆಕೆಂಡ್ ಆಗಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ. ಭಾರತದ ಎಲ್ಲಾ ಜ್ಯೋತಿಷಿಗಳು "ಒಮ್ಮತದಿಂದ" ಹೇಳಬಹುದಾದ ಯಾವುದಾದರೂ ಶುಭ ಮುಹೂರ್ತ ಎಂಬುದಿದೆಯೇ? ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಅವರವರ ಲೆಕ್ಕ ಅವರವರಿಗೆ ಚೆಂದ ಅಷ್ಟೆ.

ಉದಾಹರಣೆಗೆ:- ಯಡಿಯೂರಪ್ಪನವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದಾಗ ಮೃಗಶಿರಾ ನಕ್ಷತ್ರ ಇತ್ತಂತೆ. ಹಾಗಾಗಿ ಅದು ಮೃತ್ಯುಯೋಗವಂತೆ. ಹಾಗಾಗಿ ಅವರ ಸರ್ಕಾರ ಬಿತ್ತಂತೆ. ಆದರೆ ದೃಕ್ಸಿದ್ಧಾಂತದ ಪ್ರಕಾರ ಅಯನಾಂಶದ ಬದಲಾವಣೆಯಿಂದ ಆಗ ರೋಹಿಣೀ ನಕ್ಷತ್ರ ಇತ್ತು ಎಂದು ಸಾಧಿಸಿ ತೋರಿಸಬಹುದು. ಪ್ರಮಾಣ ವಚನವು ಹಿಂದೆಲ್ಲ ಸೂರ್ಯ ಚಂದ್ರರ ಸಾಕ್ಷಿಯಾಗಿ ಮೇಲೆ ನೋಡಿ ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಅದು ಪ್ರತ್ಯಕ್ಷ ದೃಗ್ಗೋಚರ ಸೂರ್ಯ ಚಂದ್ರರನ್ನು ಪ್ರತಿನಿಧಸುತ್ತದೆ ಎಂದಾಯಿತು. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಸಮಯದಲ್ಲಿ ದೃಗ್ಗೋಚರ ಸಾಯನ ಚಂದ್ರನು ರೋಹಿಣಿಯಲ್ಲಿದ್ದನು ಎಂದು ಆಧುನಿಕ ಖಗೋಲ ಗಣಿತದ ಆಧಾರದಿಂದ ಯಾರಾದರೂ ಸಾಧಿಸಿ ತೋರಿಸಿದರೆ ಏನು ಮಾಡುತ್ತೀರಿ? ಪಲಾಯನವಷ್ಟೆ.

ಹೋಗಲಿ ಬಿಡಿ. ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ದಿನ ಚಂದ್ರನು ಮೃತ್ಯು ಭಾಗಕ್ಕೆ ಬಹಳ ಹತ್ತಿರವಿದ್ದನು, ಆ ದಿನ ಭರಣಿ ನಕ್ಷತ್ರ ಇದ್ದಿತು. ಅದು ಪ್ರಮಾಣ ವಚನ ಸ್ವೀಕಾರಕ್ಕೆ ಉಗ್ರವೂ, ಕ್ರೂರವೂ ಎಂದು ಹೇಳಿದ ಜ್ಯೋತಿಷಿಗಳ ಲೆಕ್ಕ ಇನ್ನೂ ಅಂತರ್ಜಾಲದಲ್ಲಿ ರಾರಾಜಿಸುತ್ತಿದೆ. ಒಟ್ಟಾರೆ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ದಿನ ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಗ್ರಹಗತಿ, ಗ್ರಹಯುತಿ, ದಶಾ, ಮಾಸ, ಸಂವತ್ಸರ ಇತ್ಯಾದಿ ಎಲ್ಲವೂ ಕೆಟ್ಟದ್ದೆನ್ನುವ ಮಟ್ಟಿಗೆ ವಿಶ್ಲೇಷಿಸಿರುವ ಜ್ಯೋತಿಷಿಗಳಿದ್ದಾರೆ. ಆದರೆ ಮೋದಿಯವರು ಬಂದ ನಂತರ ದೇಶ ಹೇಗೆ ಬೆಳೆದಿದೆ ಎಂಬುದು ಆಬಾಲವೃದ್ಧರಿಗೆಲ್ಲ ತಿಳಿದ ವಿಷಯ. ಜ್ಯೋತಿಷಿಗಳು ಹೇಳಿರುವುದು ಒಂದು ಮುಖದಲ್ಲಿ ಸತ್ಯ. ಏಕೆಂದರೆ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವು ದುಷ್ಟ ಮಾನವರಿಗೆ ಮಾತ್ರ ಕೆಟ್ಟದ್ದಾಗಿ ಪರಿಣಮಿಸಿದೆ.

ಅಲ್ಲಾ ಜ್ಯೋತಿಷಿಗಳೇ ರಾಜಕಾರಣಿಯು ಹುಟ್ಟಿದ ಜಾತಕ, ದಶಾ-ಭುಕ್ತಿ, ವಿವಿಧ ಅಂಶ ಕುಂಡಲಿಗಳು, ಪ್ರಮಾಣ ವಚನ ಸ್ವೀಕಾರದ ಮುಹೂರ್ತ ಕುಂಡಲಿ, ಆ ದಿನದ ಪಂಚಾಂಗ ಇವೆಲ್ಲವನ್ನು ಗಣಿಸಿದರೂ ಆ ರಾಜಕಾರಣಿಯು ಜನಪ್ರತಿನಿಧಿ ಎಂಬ ಮೂಲಭೌತಿಕ ಸಿದ್ಧಾಂತ ನಿಮ್ಮ ಜಡ್ಡು ಹಿಡಿದಿರುವ ತಲೆಗೆ ಹೋಗಲಿಲ್ಲವಲ್ಲ ಎಂಬುದೇ ಖೇದ. ಜನಪ್ರತಿನಿಧಿಯು ಜನರನ್ನು ಪ್ರತಿನಿಧಿಸುತ್ತಾನೆ. ಅಂದರೆ ನಿಮ್ಮ ಪ್ರಕಾರ ಅವನನ್ನು ಆರಿಸಿದ, ಆರಿಸದ ಎಲ್ಲಾ ಮತದಾರರ ಕುಂಡಲಿಯು ಈತನ ಮೇಲೆ ಪರಿಣಾಮ ಮಾಡಬೇಕಲ್ಲವೇ? ಹಾಗಿರುವಾಗ ಜನರನ್ನು ಬಿಟ್ಟು ಬರೇ ರಾಜಕೀಯ ಪುಡಾರಿಯು ಹುಟ್ಟಿದ ದಿನವನ್ನೋ, ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವನ್ನೋ ಹಿಡಿದುಕೊಂಡು ಬಡಬಡಾಯಿಸುವುದು ಎಷ್ಟರ ಮಟ್ಟಿಗೆ ಸರಿ? ನಿಮಗೆ ಅನ್ನ ಕೊಡುವ ಜ್ಯೋತಿಷ್ಯವನ್ನು ನೀವೇ ನಿರ್ನಾಮ ಮಾಡುತ್ತೀರಾ? ಆತ್ಮಾವಲೋಕನ ಮಾಡಿಕೊಳ್ಳಿರಿ.

ದೈವಿಕ ರಹಸ್ಯವರಿಯದಾ ಜಿಜ್ಞಾಸು |
ಉದ್ದೇಶವರಿಯದಾ ಪುರೋಹಿತ |
ಕಣ್ಣಿಲ್ಲದಾ ಜ್ಯೋತಿಷಿಯು |
ಜೀವ ಲೋಕದ ನರಳಾಟದಲಿ |
ತಾಳ ಹಾಕುತ ಕುಣಿದು ಕುಪ್ಪಳಿಸುತಿರೆ |
ಜೀವ ಸಾಮಾನ್ಯ ವ್ಯವಸ್ಥೆಯ ಮೇಲನೆತ್ತುವರೆ |
ಯಾವ ಸಿದ್ಧಾಂತ ಸಾಧ್ಯವೋ |
ಜೀವ ಜಗತ್ತಿನ ಶ್ರೇಷ್ಠ ಜೀವಿಗಳೇ ನೀವು |
ಮೊದಲು ಮಾನವರಾಗಿರಿ, ನಂತರದಿ ಸಾಧಿಸಿರಿ || 
ಎಂದರು ಯತಿವರೇಣ್ಯ ಧರ್ಮ ನ್ಯಾಯ ದೇವತೆ ಅಣ್ಣಪ್ಪ ಸ್ವಾಮಿ (ಅಣ್ಣಪ್ಪಯ್ಯ ಚರಿತ್ರೆ ಪುಸ್ತಕದ ಪದ್ಯ)

Tuesday, 15 May 2018

ತಿಲೋಯಪಣತ್ತಿ ಗಣಿತ ಗ್ರಂಥದಲ್ಲಿ ಲೋಕಾಕಾಶ ಪರಿಭಾಷೆ - ೧ತಿಲೋಯಪಣತ್ತಿ ಎಂದರೆ ತ್ರಿಲೋಕಪ್ರಜ್ಞಪ್ತಿ. ಇದು ಯತಿ ವೃಷಭರಿಂದ ಪ್ರಾಕೃತ ಭಾಷೆಯಲ್ಲಿ ರಚಿತವಾದ ಲೋಕೋತ್ತರ ಖಗೋಳ ಗಣಿತದ ಗ್ರಂಥ. ಇದು ತ್ರಿಲೋಕಗಳ ವಿಚಾರಗಳನ್ನು ಗಣಿತಾತ್ಮಕವಾಗಿ ಪ್ರತಿಪಾದಿಸುತ್ತದೆ. ಪ್ರಸಕ್ತ ಲೇಖನದಲ್ಲಿ ಲೋಕೋತ್ತರ ಗಣಿತಕ್ಕೆ ಬೇಕಾದ ಪರಿಭಾಷೆಯನ್ನು, ಕೆಲ ಲೆಕ್ಕಗಳನ್ನೂ ನೋಡೋಣ.

ಅನಂತಾನಂತ ಅಲೋಕಾಕಾಶದ ಬಹುಮಧ್ಯಭಾಗದಲ್ಲಿ ಸ್ಥಿತ, ಜೀವಾದಿ ಐದು ದ್ರವ್ಯಗಳಿಂದ ವ್ಯಾಪ್ತ ಹಾಗೂ ಜಗಶ್ರೇಣಿಯ ಘನಪ್ರಮಾಣವೇ ಈ ಲೋಕಾಕಾಶವಾಗಿದೆ.

ಜೀವ, ಪುದ್ಗಲ, ಧರ್ಮ, ಅಧರ್ಮ ಮತ್ತು ಕಾಲ ಎಂಬೀ ಐದೂ ದ್ರವ್ಯಗಳು ಸಂಪೂರ್ಣ ಲೋಕಾಕಾಶವನ್ನು ವ್ಯಾಪಿಸಿ ಸ್ಥಿತವಾಗಿವೆ.

ಇಲ್ಲಿಂದ ಮುಂದೆ ಲೋಕದ ನಿರ್ಣಯಕ್ಕಾಗಿ ಶ್ರೇಣಿಯ ಘನಪ್ರಮಾಣಾದಿ ಪಾರಿಭಾಷಿಕಗಳನ್ನು ಅಂದರೆ ಪಲ್ಯೋಪಮಾದಿ ಸ್ವರೂಪವನ್ನು ನೋಡೋಣ.

೧. ಪಲ್ಯೋಪಮ
೨. ಸಾಗರೋಪಮ
೩. ಸೂಚ್ಯಂಗುಲ
೪. ಪ್ರತರಾಂಗುಲ
೫. ಘನಾಂಗುಲ
೬. ಜಗಶ್ರೇಣಿ
೭. ಲೋಕಪ್ರತರ
೮. ಲೋಕ

ಈ ೮ ಉಪಮಾಪ್ರಮಾಣದ ಭೇದಗಳು. ಇವಲ್ಲದೆ ಪಲ್ಯದ ಭೇದಗಳು ೩ ಇವೆ. ಇವುಗಳ ಹೆಸರು ಮತ್ತು ಇವು ಏನನ್ನು ಪ್ರಮಾಣೀಕರಿಸುತ್ತವೆ ಎಂದು ನೋಡೋಣ:

೧. ವ್ಯವಹಾರ ಪಲ್ಯ : ಸಂಖ್ಯಾ ಪ್ರಾಮಾಣ್ಯ
೨. ಉದ್ಧಾರ ಪಲ್ಯ : ದ್ವೀಪ, ಸಮುದ್ರಾದಿಗಳ ಪ್ರಾಮಾಣ್ಯ
೩. ಅದ್ಧಾ ಪಲ್ಯ : ಕರ್ಮಗಳ ಸ್ಥಿತಿಯ ಪ್ರಮಾಣ್ಯ

ಸರ್ವಾಂಶ ಪೂರ್ಣವಾದದ್ದು = ಸ್ಕಂಧ
ಸ್ಕಂಧಾರ್ಧ = ದೇಶ
ದೇಶಾರ್ಧ = ಪ್ರದೇಶ
ಸ್ಕಂಧದ ಅವಿಭಾಜ್ಯ ಅಂಶ = ಪರಮಾಣು

> ಅತ್ಯಂತ ತೀಕ್ಷ್ಣ ಶಸ್ತ್ರದಿಂದಲೂ ಛೇದಿಸಲು ಅಥವಾ ಭೇದಿಸಲು ಅಸಾಧ್ಯವಾದದ್ದು, ಜಲ ಮತ್ತು ಅಗ್ನಿಯಿಂದಲೂ ನಾಶವಾಗದ್ದು = ಪರಮಾಣು

> ಪಂಚರಸಗಳಲ್ಲಿ ೧ + ಪಂಚವರ್ಣಗಳಲ್ಲಿ ೧ + ದ್ವಿಗಂಧಗಳಲ್ಲಿ ೧ + { ಸ್ನಿಗ್ಧ ರೂಕ್ಷಗಳಲ್ಲಿ ೧ + ಶೀತೋಷ್ಣಗಳಲ್ಲಿ ೧ = ೨ ಸ್ಪರ್ಷಗಳು} = ಒಟ್ಟು ೫ ಗುಣಗಳು ಉಳ್ಳದ್ದು ಹಾಗೂ ಸ್ವಯಂ ಶಬ್ದರೂಪವಾಗಿರದೆ ಶಬ್ದದ ಕಾರಣವಾಗಿದ್ದು ಸ್ಕಂಧದ ಅಂತರ್ಗತವಾಗಿರುತ್ತದೆ. ಇಂತಹಾ ದ್ರವ್ಯವು ಪರಮಾಣು.

> ಯಾವ ದ್ವವ್ಯವು ಆದ್ಯಂತಮಧ್ಯ ವಿಹೀನವೋ, ಪ್ರದೇಶ ರಹಿತವೋ; ಅಂದರೆ ಏಕ ಪ್ರದೇಶೀ ಆಗಿರುತ್ತದೆಯೋ, ಇಂದ್ರಿಯಗಳಿಂದ ಗ್ರಹಿಸಲಶಕ್ಯವೋ ಹಾಗೂ ವಿಭಾಗ ರಹಿತವಾಗಿರುತ್ತದೋ, ಅದು ಪರಮಾಣು.

> ಸ್ಕಂಧಗಳಂತೆ ಪರಮಾಣುವೂ ಪೂರಣ (ಮುದುಡು) ಹಾಗೂ ಗಲನ (ಅರಳು) ಆಗುತ್ತದೆ. ಪೂರಣಗಲನ ಕ್ರಿಯೆಗಳು ಇರುವುದರಿಂದ ಇದು ಪುದ್ಗಲದ ಅಂತರ್ಗತವಾಗಿದೆ ಎಂದು ದೃಷ್ಟಿವಾದ ಅಂಗದಲ್ಲಿ ನಿರ್ಧಿಷ್ಟವಾಗಿದೆ.

> ಪರಮಾಣುವು ಸ್ಕಂಧದಂತೆ ಎಲ್ಲಾ ಕಾಲದಲ್ಲೂ ವರ್ಣ, ರಸ, ಗಂಧ ಹಾಗೂ ಸ್ಪರ್ಶ, ಈ ಗುಣಗಳಲ್ಲಿ ಪೂರಣಗಲನವನ್ನು ಮಾಡುತ್ತವೆ. ಆದ್ದರಿಂದ ಅವು ಪುದ್ಗಲವೇ ಆಗಿವೆ.

> ಯಾವುದು ನಯ ವಿಶೇಷದ ಅಪೇಕ್ಷೆಯಿಂದ ಸ್ವಲ್ಪ ಮೂರ್ತ ಹಾಗೂ ಸ್ವಲ್ಪ ಅಮೂರ್ತವಾಗಿದೆಯೋ, ನಾಲ್ಕು ಧಾತುರೂಪ ಸ್ಕಂಧದ ಕಾರಣವಾಗಿದೆಯೋ, ಹಾಗೂ ಪರಿಣಾಮಕಾರಿಯಾಗಿವೆಯೋ, ಅದನ್ನು ಪರಮಾಣು ಎಂದು ತಿಳಿಯಬೇಕು.

ನಾನಾ ಪ್ರಕಾರದ ಅನಂತಾನಂತ ಪರಮಾಣು ದ್ರವ್ಯಗಳಿಂದ “ಅವಸನ್ನಾಸನ್ನ” ಎಂಬ ಹೆಸರಿನಿಂದ ಪ್ರಸಿದ್ಧವಾದ ಒಂದು ಸ್ಕಂಧವು ಉತ್ಪನ್ನವಾಗುತ್ತದೆ.

೮ ಅವಸನ್ನಾಸನ್ನ = ಸನ್ನಾಸನ್ನ ಸ್ಕಂಧ
೮ ಸನ್ನಾಸನ್ನ = ತ್ರುಟಿರೇಣು
೮ ತ್ರುಟಿರೇಣು = ತ್ರಸರೇಣು
೮ ತ್ರಸರೇಣು = ರಥರೇಣು
೮ ರಥರೇಣು = ಉತ್ತಮ ಭೋಗ ಭೂಮಿಯ ಬಾಲಾಗ್ರ
೮ ಉ.ಭೋ.ಭೂ ಬಾಲಾಗ್ರ = ಮಧ್ಯಮ ಭೋಗ ಭೂಮಿಯ ಬಾಲಾಗ್ರ
೮ ಮ.ಭೋ.ಭೂ ಬಾಲಾಗ್ರ = ಜಘನ್ಯ ಭೋಗ ಭೂಮಿಯ ಬಾಲಾಗ್ರ
೮ ಜ.ಭೋ.ಭೂ ಬಾಲಾಗ್ರ = ಕರ್ಮ ಭೂಮಿಯ ಬಾಲಾಗ್ರ
೮ ಕ.ಭೂ ಬಾಲಾಗ್ರ = ಲೋಕ
೮ ಲೋಕ = ಜೂವಂ
೮ ಜೂವಂ = ಜವಂ
೮ ಜವಂ = ಅಂಗುಲ (ಉತ್ಸೇಧ)

ಇವು ಉತ್ತರೋತ್ತರ ಸ್ಕಂಧಗಳೆನ್ನಲಾಗಿದೆ. ಅಂಗುಲವು ೩ ರೀತಿ.

ಅಂಗುಲ:-

೧. ಉತ್ಸೇಧಾಂಗುಲ:- ಮೇಲಿನ ಪರಿಭಾಷೆಯಲ್ಲಿ ಸಿದ್ಧಪಡಿಸಿ ತೋರಿಸಿದ್ದೇ ಉತ್ಸೇಧ ಸೂಚ್ಯಂಗುಲ. ಇದರಿಂದ ದೇವ, ಮನುಷ್ಯ, ತಿರ್ಯಂಚ ಹಾಗೂ ನಾರಕಿಗಳ ಶರೀರದ ಎತ್ತರ ಪ್ರಮಾಣ ಹಾಗೂ ನಾಲ್ಕೂ ಪ್ರಕಾರದ ದೇವತೆಗಳ ನಿವಾಸಸ್ಥಾನ ಅಥವಾ ನಗರಾಧಿಗಳ ಪ್ರಮಾಣವು ತಿಳಿದುಬರುತ್ತದೆ.

೨. ಪ್ರಮಾಣಾಂಗುಲ:- ೫೦೦ ಉತ್ಸೇಧಾಂಗುಲ ಪ್ರಮಾಣ ಅವಸರ್ಪಿಣಿ ಕಾಲದ ಪ್ರಥಮ ಭರತ ಚಕ್ರವರ್ತಿಗೆ ಒಂದು ಪ್ರಮಾಣಾಂಗುಲವಾಗುತ್ತದೆ. ದ್ವೀಪ, ಸಮುದ್ರ, ಕುಲಾಚಲ, ವೇದೀ, ನದೀ, ಕುಂಡ ಅಥವಾ ಸರೋವರ ಜಗತೀ ಹಾಗೂ ಭರತಾದಿ ಕ್ಷೇತ್ರಗಳು ಪ್ರಮಾಣಾಂಗುಲದಲ್ಲಿರುತ್ತವೆ.

೩. ಆತ್ಮಾಂಗುಲ:- ಯಾವ್ಯಾವ ಕಾಲದಲ್ಲಿ ಭರತ ಮತ್ತು ಐರಾವತ ಕ್ಷೇತ್ರಗಳಲ್ಲಿ ಯಾವ್ಯಾವ ಮನುಷ್ಯರು ಇರುತ್ತಾರೋ, ಆಯಾಯ ಕಾಲದಲ್ಲಿ ಅದೇ ಮನುಷ್ಯರ ಅಂಗುಲದ ಹೆಸರೇ ಆತ್ಮಾಂಗುಲ. ಝಾರೀ, ಕಲಶ, ದರ್ಪಣ, ವೇಣು, ಭೇರೀ,  ಯುಗ, ಶಯ್ಯಾ, ಶಕಟ, ಹಲ, ಮುಸಲ, ಶಕ್ತಿ, ತೋಮರ, ಸಿಂಹಾಸನ, ಬಾಣ, ನಾಲಿ, ಅಕ್ಷ, ಚಾಮರ, ದುಂದುಭಿ, ಪೀಠ, ಛತ್ರ, ಮನುಷ್ಯರ ನಿವಾಸ ಸ್ಥಾನ ಅಥವಾ ನಗರ ಹಾಗೂ ಉದ್ಯಾನಾದಿಗಳ ಸಂಖ್ಯೆಯು ಆತ್ಮಾಂಗುಲದಿಂದ ತಿಳಿಯಬೇಕು.

೬ ಅಂಗುಲಗಳು = ಪಾದ
೨ ಪಾದಗಳು = ವಿತಸ್ತಿ
೨ ವಿತಸ್ತಿಗಳು = ಹಸ್ತ
೨ ಹಸ್ತಗಳು = ರಿಕ್ಕೂ
೨ ರಿಕ್ಕುಗಳು = ದಂಡ
೧ ದಂಡ = ೪ ಹಸ್ತ = ಧನುಷ್, ಮುಸಲ ಹಾಗೂ ನಾಲೀ
೨೦೦೦ ದಂಡ (ಧನುಸ್) = ಕ್ರೋಶ
೪ ಕ್ರೋಶ = ಯೋಜನ

> ೧ ಯೋಜನ ವಿಸ್ತಾರ ಗೋಳ ಗುಂಡಿಯೇ ನಿಪುಣ ಗಣಿತಜ್ಞನಿಗೆ ಘನಫಲವಾಗಿ ದೊರೆಯಬೇಕು.

> ಸಮಾನ ಗೋಳಕ್ಷೇತ್ರದ ವ್ಯಾಸದ ವರ್ಗವನ್ನು ೧೦ ರಿಂದ ಗುಣಿಸಿ ಬಂದ ಗುಣನಫಲದ ವರ್ಗಮೂಲವನ್ನು ತೆಗೆದುಕೊಂಡಾಗ ಪರಿಧಿಯ ಪ್ರಮಾಣವು ಸಿಗುತ್ತದೆ. ಹಾಗೇ ವಿಸ್ಥಾರದ (ವ್ಯಾಸದ) ೪ನೇ ಭಾಗದಿಂದ ಪರಿಧಿಯನ್ನು ಗುಣಿಸಿದರೆ ಅದರ ಕ್ಷೇತ್ರಫಲವು ದೊರೆಯುತ್ತದೆ.

> ಹಾಗೇ ೧೯ ಯೋಜನೆಗಳನ್ನು ೨೪ ರಿಂದ ವಿಭಜಿಸಿದರೆ ೩ ರೀತಿಯ ಪಲ್ಯಗಳಲ್ಲಿ ಪ್ರತಿಯೊಂದರ ಘನ ಕ್ಷೇತ್ರಫಲವಾಗುತ್ತದೆ.

ಉದಾಹರಣೆ:- ೧ ಯೋಜನ ವ್ಯಾಸವುಳ್ಳ ಗೋಲ ಕ್ಷೇತ್ರದ ಘನಫಲ –

(1^2) * 10 = 10;
ವರ್ಗಮೂಲ(10) = 19/6 ಪರಿಧಿ;
(19/6)*(1/4) = 19/24 ಕ್ಷೇತ್ರಫಲ;
(19/24)*1 = 19/24 ಘನಫಲ.

ಉತ್ತಮ ಭೋಗಭೂಮಿಯಲ್ಲಿ ೧ ದಿನದಿಂದ ಆರಂಭಿಸಿ ೭ ದಿನದವರೆಗಿನ ಕುರಿಯ ಕೋಟ್ಯಂತರ ರೋಮಗಳನ್ನು ಅವಿಭಾಜ್ಯ ಖಂಡವಾಗಿಸಿ, ಆ ಖಂಡಿತ ರೋಮಾಗ್ರಗಳಿಂದ ಆ ಒಂದು ಯೋಜನ ವಿಸ್ತಾರವುಳ್ಳ ಪ್ರಥಮ ಪಲ್ಯವನ್ನು (ಗುಂಡಿಯನ್ನು) ಪೃಥ್ವಿಯ ಸಮತಲಕ್ಕೆ ಸಘನವಾಗಿ ತುಂಬಬೇಕು.

> ಮೇಲೆ ಯಾವ ೧೯/೨೪ ಪ್ರಮಾಣದ ಘನಫಲ ಬಂದಿರುವುದೋ ಅದರ ದಂಡ ಮಾಡಿ ಪ್ರಮಾಣಾಂಗುಲ ಮಾಡಬೇಕು. ಪುನಃ ಪ್ರಮಾಣಾಂಗುಲಗಳನ್ನು ಉತ್ಸೇಧಾಂಗುಲವನ್ನಾಗಿ ಮಾಡಬೇಕು. ಪುನಃ ಜೂವಂ, ಜವಂ, ಲೋಕ, ಕರ್ಮಭೂಮಿಯ ಬಾಲಾಗ್ರ, ಜಘನ್ಯ ಭೋಗಭೂಮಿಯ ಬಾಲಾಗ್ರ, ಮಧ್ಯಮಭೋಗಭೂಮಿಯ ಬಾಲಾಗ್ರ, ಉತ್ತಮಭೋಗಭೂಮಿಯ ಬಾಲಾಗ್ರ, ಇದಕ್ಕಾಗಿ ಪ್ರತಿಯೊಂದನ್ನು ೮ರ ಘನದಿಂದ ಗುಣಿಸಲಾಗಿ ವ್ಯವಹಾರಪಲ್ಯದ ರೋಮಗಳ ಸಂಖ್ಯೆ ಸಿಗುತ್ತದೆ. ಇದನ್ನು ಈ ರೀತಿ ತೋರಿಸಿದ್ದಾರೆ:-

ಽ೦ | ೯೬ | ೫೦೦ | ೮ | ೮ | ೮ | ೮ | ೮ | ೮ | ೮ | ೮ |
ಽ೦ | ೯೬ | ೫೦೦ | ೮ | ೮ | ೮ | ೮ | ೮ | ೮ | ೮ | ೮ |
ಽ೦ | ೯೬ | ೫೦೦ | ೮ | ೮ | ೮ | ೮ | ೮ | ೮ | ೮ | ೮ |

ಆಧುನಿಕ ವಿಧಾನದಲ್ಲಿ ಇದನ್ನು ಕೆಳಕಂಡಂತೆ ಬಿಡಿಸಬಹುದು:-

(19/24) * (4^3) * (2000^3) * (4^3) * (24^3) * (500^3) * (8^(7*3))
= 413,452,630,308,203,177,749,512,192,000,000,000,000,000,000

೧೬ ಸೊನ್ನೆಗಳು, ೨, ೯, ೧, ೨, ೧, ೫, ೯, ೪, ೭, ೭, ೭, ೧, ೩, ೦, ೨, ೮, ೦, ೩, ೦, ೩, ೬, ೨, ೫, ೪, ೩, ೧ ಹಾಗೂ ೪. ಇವು ಕ್ರಮವಾಗಿ ಪಲ್ಯದ ಅಂಕಗಳು.

> ನೂರ್ನೂರು ವರ್ಷಗಳಲ್ಲಿ ಒಂದೊಂದು ರೋಮ-ಖಂಡವನ್ನು ತೆಗೆಯುತ್ತಾ ಬಂದರೆ ಎಷ್ಟು ಸಮಯದಲ್ಲಿ ಆ ಗುಂಡಿಯು ಖಾಲಿಯಾಗುತ್ತದೋ, ಅಷ್ಟು ಕಾಲವನ್ನು ವ್ಯವಹಾರ ಪಲ್ಯೋಪಮ ಎನ್ನಲಾಗಿದೆ. ಆ ವ್ಯವಹಾರಪಲ್ಯವು ಉದ್ಧಾರಪಲ್ಯದ ನಿಮಿತ್ತವಾಗಿದೆ.

> ವ್ಯವಹಾರಪಲ್ಯದ ರೋಮರಾಶಿಯಿಂದ ಪ್ರತಿಯೊಂದು ರೋಮಖಂಡವನ್ನು ಅಸಂಖ್ಯಾತ ಕೋಟಿ ವರ್ಷಗಳ ಎಷ್ಟು ಸಮಯವಾಗುತ್ತದೋ ಅಷ್ಟು ಖಂಡ ಮಾಡಿಕೊಂಡು, ಅದರಿಂದ ಇನ್ನೊಂದು ಪಲ್ಯವನ್ನು ತುಂಬಿ ಪುನಃ ಒಂದೊಂದು ಸಮಯದಲ್ಲಿ ಒಂದೊಂದು ರೋಮಖಂಡವನ್ನು ತೆಗೆಯಿರಿ. ಈ ರೀತಿ ಎಷ್ಟು ಸಮಯದಲ್ಲಿ ಆ ಎರಡನೇ ಪಲ್ಯವು ಖಾಲಿಯಾಗುತ್ತದೋ, ಅಷ್ಟು ಕಾಲವನ್ನು ಉದ್ಧಾರಪಲ್ಯೋಪಮ ಎಂದು ತಿಳಿಯಬೇಕು.

> ಈ ಉದ್ಧಾರಪಲ್ಯದಿಂದ ದ್ವೀಪ ಹಾಗೂ ಸಮುದ್ರಗಳ ಪ್ರಮಾಣ ಕಂಡುಹಿಡಿಯಲಾಗುತ್ತದೆ. ಉದ್ಧಾರಪಲ್ಯದ ರೋಮರಾಶಿಯಿಂದ ಪ್ರತಿಯೊಂದು ರೋಮಖಂಡದ ಅಸಂಖ್ಯಾತ ವರ್ಷಗಳ ಸಮಯಪ್ರಮಾಣ ಖಂಡ ಮಾಡಿಕೊಂಡು ಮೂರನೇ ಗುಂಡಿಯು ತುಂಬಿದ ಮೇಲೆ ಹಾಗೇ ಮೊದಲಿನಂತೆಯೇ ಒಂದೊಂದು ಸಮಯದಲ್ಲಿ ಒಂದೊಂದು ರೋಮಖಂಡವನ್ನು ತೆಗೆಯಲಾಗಿ ಎಷ್ಟು ಸಮಯದಲ್ಲಿ ಆ ಗುಂಡಿಯು ಖಾಲಿಯಾಗುತ್ತದೋ ಅಷ್ಟು ಕಾಲವನ್ನು ಅದ್ಧಾಪಲ್ಯೋಪಮ ಎನ್ನಲಾಗಿದೆ. ಈ ಅದ್ಧಾಪಲ್ಯದಿಂದ ನಾರಕೀ, ತಿರ್ಯಂಚ, ಮನುಷ್ಯ ಮತ್ತು ದೇವತೆಗಳ ಆಯು ಹಾಗೂ ಕರ್ಮಗಳ ಸ್ಥಿತಿಯ ಪ್ರಮಾಣ ತಿಳಿಯಬೇಕು.

> ಈ ದಶಕೋಡಾಕೋಡಿ (ಹತ್ತು ಕೋಟ್ಯಾನುಕೋಟಿ) ಪಲ್ಯಗಳ ಎಷ್ಟು ಪ್ರಮಾಣವಾಗುತ್ತದೋ ಅಷ್ಟೇ ಸ್ವಲ್ಪ ಸ್ವಲ್ಪವೇ ಒಂದು ಸಾಗರೋಪಮದ ಪ್ರಮಾಣವಾಗುತ್ತದೆ. ಅಂದರೆ ಹತ್ತು ಕೋಟ್ಯಾನುಕೋಟಿ ವ್ಯವಹಾರ ಪಲ್ಯಗಳಿಗೆ ಒಂದು ವ್ಯವಹಾರಸಾಗರೋಪಮ, ಹತ್ತು ಕೋಟ್ಯಾನುಕೋಟಿ ಉದ್ಧಾರ ಪಲ್ಯಗಳಿಗೆ ಒಂದು ಅದ್ಧಾಸಾಗರೋಪಮ ಆಗುತ್ತದೆ.

> ಅದ್ಧಾಪಲ್ಯದ ಎಷ್ಟು ಅರ್ಧಚ್ಛೇದಗಳಾಗುತ್ತವೆಯೋ, ಅಷ್ಟು ಜಾಗದಲ್ಲಿ ಪಲ್ಯವಿಟ್ಟು ಪರಸ್ಪರ ಗುಣಿಸಲು ಉತ್ಪನ್ನವಾಗುವ ರಾಶಿಯನ್ನು ಸೂಚ್ಯಂಗುಲ ಎಂದು ಹಾಗೂ ಅದ್ಧಾಪಲ್ಯದ ಅರ್ಧಚ್ಛೇದ ರಾಶಿಯ ಅಸಂಖ್ಯಾತದ ಭಾಗಪ್ರಮಾಣ ಘನಾಂಗುಲವನ್ನಿಟ್ಟು ಅವುಗಳನ್ನು ಪರಸ್ಪರ ಗುಣಿಸಲು ಉತ್ಪನ್ನವಾಗುವ ರಾಶಿಯನ್ನು ಜಗಶ್ರೇಣಿ ಎನ್ನಲಾಗಿದೆ. ಅದನ್ನು ಈ ರೀತಿ ತೋರಿಸಿದ್ದಾರೆ:- 

ಜಗಶ್ರೇ. – ಸೂ.ಅಂ. ೨ಮೇಲ್ಕಂಡ ಸೂಚ್ಯಂಗುಲದ ವರ್ಗದಿಂದ ಪ್ರತರಾಂಗುಲ ಹಾಗೂ ಜಗಶ್ರೇಣಿಯ ವರ್ಗದಿಂದ ಜಗಪ್ರತರ ಉಂಟಾಗುತ್ತದೆ. ಇದೇ ರೀತಿ ಸೂಚ್ಯಂಗುಲದ ಘನದಿಂದ ಘನಾಂಗುಲ ಹಾಗೂ ಜಗಶ್ರೇಣಿಯ ಘನದಿಂದ ಲೋಕದ ಪ್ರಮಾಣ ಸಿಗುತ್ತದೆ. ಜಗಶ್ರೇಣಿಯ ೭ನೇ ಭಾಗವನ್ನು ರಜ್ಜು ಪ್ರಮಾಣ ಎನ್ನಲಾಗಿದೆ. ಅದನ್ನು ಈ ರೀತಿ ತೋರಿಸಿದ್ದಾರೆ:-

ಪ್ರ.ಅಂ. ೪; ಜ.ಪ್ರ. ꠴; ಘ.ಅಂ. ೬; ಘ.ಲೋ. ꠵

|| ಲೋಕಾಕಾಶ ಪರಿಭಾಷೆಯು ಮುಗಿಯಿತು ||


- ಹೇಮಂತ್ ಕುಮಾರ್ ಜಿ.

Monday, 14 May 2018

Thoughts on Sagotra Marriage


The definition गवां गो (cow) and त्राहि (shed) equating to cow shed are created by ignorance. Actually, it is गायन्ति गो, तत् त्रायतेति गोत्रं. Means the code which helps to cross the ‘Jeevana Raaga’ is Gotra. Nowhere blood group is related to Gotra. Gotra is an ancient medical record of a person which is useful in studies in Gurukula and medical treatment. Based on the Gotra, the teaching topics was decided in Gurukula. Gotra Pravara gives the full medical history of the person through his several lives and also his ancestorial details. This can be identified by highly evolved sage (ऋषि) who can identify this and provide proper treatment from Ayurveda derived directly from Vedas. A, O, B, AB, +ve, -ve blood group nowhere corresponds to Gotra. Siblings may share different blood group, that doesn’t mean they are not blood relatives! This blood group named classification itself doesn’t apply to Vedic Deha Shaastra. Here we have 12 Pitru Vargaas. E.g., Person, father, grandfather, great-grandfather and their wives. Father and forefathers of wives and their family. Like this, it grows approximately up to 18632 types. All these are called Pitru Varga. All these are attached emotionally. For your information, this fake DNA theory of modern science doesn’t correspond to Gotras. They haven’t found out the reality of Genes still. Only ATGC and their permutations and combinations. But our Gotra system is much more advanced with 7 traits and even extending up to 9.

Till 400-650 AD in Madhya Pradesh, the daughters were married only to maternal brother-in-law. For the sake of safety, all the daughters were also married to a single maternal brother-in-law. They had 15-20 children and none of them were born handicapped or with any mentally challenged state. 

So why marriage in Sagotra is prohibited? It is not a prohibition, it’s just a suggestion. Only for the sake of growth of knowledge by mixing up different Gotras, this system came after the case of Ravana in Treta Yuga. If only one kind of thought process gets accumulated in one group of people having one gotra, they will not get the other knowledge. So when marriage is done in different Gotras, different knowledge will spread among different groups. So now there is no Gurukula based education system based on Gotras. And no modern scholar can understand the medical records based on Gotras. So it became just a matter of pride and a great enemy for breaking the marriages. No health issues or religious issues will occur if Sagotra marriage is done. It is evident from several people from different castes and even among Brahmins getting married in same Gotra and leading the happy life. The ancient system should be studied with respect to Vedas under a sage to get a deeper understanding. Most books expect Vedas are adulterated in Kaliyuga. So we should be careful while interpretation.

- Talks of Brahma Rishi K S Nityananda
   Veda Vijnana Mandira, Chikmagalur