Sunday, 30 September 2018

ಆಧ್ಯಾತ್ಮಿಕ-ಅವಸ್ಥಾತ್ರಯೀ ಮತ್ತು ಪ್ರಭವ-ಯೋನಿ-ಪ್ರತಿಷ್ಠಾ-ಆಶಯ ಕೋಷ್ಠಕಗಳುಪ್ರಭವ-ಯೋನಿ-ಪ್ರತಿಷ್ಠಾ-ಆಶಯ ಕೋಷ್ಠಕ

ಸಂ
ಪ್ರಭವ
ಉತ್ಪತ್ತಿಸ್ಥಾನಮ್
ಯೋನಿ (ಮಾರ್ಗ)
ಪ್ರವೇಶದ್ವಾರಮ್
ಪ್ರತಿಷ್ಠಾ
ಸ್ಥಿತಿಸ್ಥಾನಮ್
ಆಶಯ
ವ್ಯಾಪ್ತಿಸ್ಥಾನಮ್

ಈಶ್ವರಾತ್ಮಾ, ಶುಕ್ರ, ಯೋಗಮಾಯಾಚ
ಮಹಾನಾತ್ಮಾ
(ಮಹತಸೋಮಃ)
ಸರ್ವಾನ್ತರತಮೋ ದಹರಾಕಾಶಃ
ಶರೀರಮ್
“ಪುರುಷಾನ್ನ ಪರ ಕಿಞ್ಚಿತ್, ಸಾಕಾಷ್ಠಾ ಸಾ ಪರಾ ಗತಿಃ”
ಷೋಡಶೀಪುರುಷಃ à ಅಮೃತಾತ್ಮಾ
(ಅವ್ಯಕ್ತಾತ್ ಪುರುಷಃ ಪರಃ)
ಸ್ವಯಮ್ಭೂಃ
ಶಿರೋಗುಹಾ
ಹೃದಯಮ್
ಶರೀರಮ್
ಅವ್ಯಕ್ತಾತ್ಮಾ – (ಪ್ರಕೃತಾತ್ಮಾ) ೧ – ಅವ್ಯಕ್ತಮ್] ಬ್ರಹ್ಮಸತ್ಯಾತ್ಮಾ
[ಮಹತಃ ಪರಂ →→→→↑
ಪರಮೇಷ್ಠೀ
ಶುಕ್ರಮ್
ಹೃದಯಮ್
ಶರೀರಮ್
ಮಹಾನಾತ್ಮಾ (ಪ್ರಾಕೃತಾತ್ಮಾ) ೨ – ಮಹಾನ್] ಬ್ರಹ್ಮಸತ್ಯಾತ್ಮಾ
[ಬುದ್ಧೇರಾತ್ಮಾ (ಪರಃ) →→↑
ಸೂರ್ಯಃ
ನಾನ್ದನಮ್
ಹೃದಯಮ್
ಶರೀರಮ್
ವಿಜ್ಞಾನಾತ್ಮಾ (ಪ್ರಾಕೃತಾತ್ಮಾ) ೩ – ಬುದ್ಧಿಃ] ಬ್ರಹ್ಮಸತ್ಯಾತ್ಮಾ
[ಮನಸಸ್ತು ಪರಾ →→→→↑
ಚನ್ದ್ರಮಾಃ (ಅನ್ನಮ್)
ಸುಕ್ರಮ್
ಹೃದಯಮ್
ಶರೀರಮ್
ಪ್ರಜ್ಞಾನಾತ್ಮಾ (ಪ್ರಾಕೃತಾತ್ಮಾ) ೪ – ಮನಃ] ಬ್ರಹ್ಮಸತ್ಯಾತ್ಮಾ
[ಇನ್ದ್ರಿಯೇಭ್ಯಃ ಪರ →→→→↑


ಭಾಸ್ವರಸೋಮ
ಪ್ರಜ್ಞಾನಮ್
ಬ್ರಹ್ಮರನ್ಧ್ರಮ್
ಪಞ್ಚೇನ್ದ್ರಿಯಾಣಿ
ಪ  
ಞ್ಚ  
ದೇ  
ವಾ  
ತ್ಮ  
ಕಾ  
ನಿ  
ಇ  
ನ್ದ್ರಿ  
ಯಾ  
ಣಿ

ಇನ್ದ್ರಿಯಾಣಿ- ಪರಾಣ್ಯಾಹುಃ
[ಇಂದ್ರಿಯಾಣಿ (ಕರ್ಮ್ಮಾವಚ್ಛಿನ್ನ ಶರೀರತಃ) ಪರಾಣ್ಯಾಹುಃ] ಬ್ರಹ್ಮಸತ್ಯಾತ್ಮಾ
ಸಂಕಲ್ಪವಿಕಲ್ಪಾತ್ಮಕಮಿನ್ದ್ರಿಯಂ
ಮನಃ ೧

ದಿಕ್ಸೋಮಃ
ಪ್ರಜ್ಞಾನಮ್
ಶ್ರೋತ್ರವಿವರೇ
ಮನಃ (ಪ್ರಜ್ಞಾನಮ್)
ಶ್ರೋತ್ರೇ ೨
ಆದಿತ್ಯಃ
ಪ್ರಜ್ಞಾನಮ್
ಚಕ್ಷುವಿವರೇ
ಮನಃ (ಪ್ರಜ್ಞಾನಮ್)
ಚಕ್ಷುಷೀ ೩
ವಾಯು
ಪ್ರಜ್ಞಾನಮ್
ನಾಸಾವಿವರೇ
ಮನಃ (ಪ್ರಜ್ಞಾನಮ್)
ನಾಸಿಕೇ (ಪ್ರಾಣಃ) ೪
೧೦
ಅಗ್ನಿಃ
ಪ್ರಜ್ಞಾನಮ್
ಜಿಹ್ವಾ
ಮನಃ (ಪ್ರಜ್ಞಾನಮ್)
ವಾಕ್ ೫


ಪಞ್ಚೀಕೃತಾ ಮೃತ್
ಶುಕ್ರಶೋಣಿತೇ – ಅನ್ನಞ್ಚ
ಅಗ್ನಿಶ್ಚಿತ್ಯಃ
ಶರೀರಮ್
“ಪ  
ಞ್ಚ  
ಭೂ  
ತಾ  
ತ್ಮ  
ಕ  
-  
ಶ  
ರೀ  
ರ  
ಮ್”

ಬ್ರ-ಹ್ಮ-
ಸ-ತ್ಯ-ಮ್

ಶರೀರಂ – ಮೂಲಪ್ರತಿಷ್ಠಾ
ಅಸ್ಥಿಮಾಸಾದಯೋ ಧನಪದಾರ್ಥಾಃ ೧
ಪಾರ್ಥಿವಾಪಃ ಪಞ್ಚೀಕೃತಾಃ
ಶುಕ್ರಶೋಣಿತೇ – ಆಪಶ್ಚ
ಆಪಃ
ಶರೀರಮ್
ಅಸೃಗ್ ರಸಾದಯಸ್ತರಲಪದಾರ್ಥಾಃ ೨
ಪಞ್ಚೀಕೃತೋಽಗ್ನಿಃ ಪಾರ್ಥಿವಃ
ಶುಕ್ರಶೋಣಿತೇ – ತೇಜಶ್ಚ
ತೇಜ
ಶರೀರಮ್
ಊಷ್ಮಾ ೩
ಪಞ್ಚೀಕೃತೋ ವಾಯುಃ ಪಾರ್ಥಿವಃ
ಶುಕ್ರಶೋಣಿತೇ – ವಾಯುಶ್ಚ
ವಾಯು
ಶರೀರಮ್
ಧಮನ್ಯೋ ವಾಯುವಾಹಿನ್ಯಃ ೪
ಪಞ್ಚಕೃತ ಆಕಾಶಃ ಪಾರ್ಥಿವಃ
ಶುಕ್ರಶೋಣಿತೇ – ಶಬ್ದಶ್ಚ
ಆಕಾಶಃ
ಶರೀರಮ್
ಸುಷಿರಾಣಿ ೫


- ಹೇಮಂತ್ ಕುಮಾರ್ ಜಿ

Saturday, 29 September 2018

"ಪಿತರ" ಸ್ವರೂಪ ವಿಜ್ಞಾನದ ಪ್ರಮಾಣಗಳ ನಿರೂಪಣೆ

ಅಥ
“ಪಿತರ” ಸ್ವರೂಪವಿಜ್ಞಾನೋಪನಿಷದಿ
‘ಪ್ರಮಾಣೋಪನಿಷತ್’
ಪ್ರಥಮಾ
[೧]

ವೇದೊಽಖಿಲೋ ಧರ್ಮ್ಮಮೂಲಂ ಸ್ಮೃತಿಶೀಲೇ ಚ ತದ್ವಿದಾಮ್ |
ಆಚಾರಶ್ಚೈವ ಸಾಧೂನಾಮಾತ್ಮನಸ್ತುಷ್ಟಿರೇವ ಚ ||೧||
ಯಃ ಕಶ್ಚಿತ್ ಕಸ್ಯಚಿದ್ಧರ್ಮ್ಮೋ ಮನುನಾ ಪರಿಕೀರ್ತ್ತಿತಃ |
ಸ ಸರ್ವೋಽಭಿಹಿತೋ ವೇದೇ ಸರ್ವಜ್ಞಾನಮಯೋ ಹಿ ಸಃ ||೨||
ಸರ್ವಂ ತು ಸಮವೇಕ್ಷ್ಯೇದಂ ನಿಖಿಲಂ ಜ್ಞಾನಚಕ್ಷುಷಾ |
ಶ್ರುತಿಪ್ರಾಮಾಣ್ಯತೋ ವಿದ್ವಾನ್ ಸ್ವಧರ್ಮೇ ನಿವಿಶೇತ ವೈ ||೩||
ಶ್ರುತಿಸ್ಮೃತ್ಯುದಿತಂ ಧರ್ಮ್ಮಮನುತಿಷ್ಠನ್ ಹಿ ಮಾನವಃ |
ಇಹ ಕೀರ್ತ್ತಿಮವಾಪ್ನೋತಿ ಪ್ರೇತ್ಯಚಾನುತ್ತಮಂ ಸುಖಮ್ ||೪||
ಶ್ರುತಿಸ್ತು ವೇದೋ ವಿಜ್ಞೇಯೋ ಧರ್ಮ್ಮಶಾಸ್ತ್ರಂ ತು ವೈ ಸ್ಮೃತಿಃ |
ತೇ ಸರ್ವಾರ್ಥೇಷ್ವಮೀಮಾಂಸ್ಯೇ ತಾಭ್ಯಾಂ ಧರ್ಮ್ಮೋ ಹಿ ನಿರ್ಬಭೌ ||೫||
ಯೋಽವಮನ್ಯೇತ ತೇ ಮೂಲೇ ಹೇತುಶಾಸ್ತ್ರಾಶ್ರಯಾತ್ ದ್ವಿಜಃ |
ಸ ಸಾಧುಭಿರ್ಬಹಿಷ್ಕಾರ್ಯೋ ನಾಸ್ತಿಕೋ ವೇದನಿನ್ದಕಃ ||೬||
(ಮನು ೧ ಅ | ೬-೧೧ ಶ್ಲೋಕ)

ಭಾರತೀಯ ಪ್ರಜೆಗಳ ಶಾಸ್ತ್ರನಿಷ್ಠೆ

ಅನನ್ತ ಕಾಲದಿಂದ ಝಞ್ಝಾವಾತದ ಪ್ರಬಲ ಘಾತಗಳನ್ನು ಸಹಿಸಿಕೊಂಡು ಭಾರತೀಯರು ಯಾವ ಬಲದ ಆಧಾರದಲ್ಲಿ ಇಲ್ಲಿಯವರೆಗೂ ಸ್ಥಿರವಾಗಿ ಉಳಿದುಕೊಂಡು ಬಂದಿದ್ದಾರೆ? ಕರಾಳ ಕಾಲದ ಕುಟಿಲ ಭ್ರೂವಿಕ್ಷೇಪಗಳ ಉಪಹಾಸ ಮಾಡುತ್ತಾ – ಭಾರತೀಯ ಸಭ್ಯತೆ,  ಭಾರತೀಯ ಸಂಸ್ಕೃತಿಯು ಯಾವ ಮಹಾಶಕ್ತಿಯ ಆಧಾರದಲ್ಲಿ ಇಲ್ಲಿಯವರೆಗೂ ತನ್ನ ಸ್ವರೂಪವನ್ನು ಸುರಕ್ಷಿತವಾಗಿಟ್ಟುಕೊಂಡಿದೆ? ಎಲ್ಲಿಯ ಮೌಲಿಕ ಸಾಹಿತ್ಯವು ಸರಸ್ವತಿಯ ಅನ್ಯತಮ ಶತ್ರು, ಕಲೆಯ ನಿಕೃಷ್ಟತಮ ಘಾತಕ ನರರಾಕ್ಷಸರ ಧಾಳಿಯನ್ನು ಬಿಸಿಯಾಗಿರಿಸಲು ತಿಂಗಳುಗಳವರೆಗೆ ಇಂಧನದ ಕೆಲಸಕ್ಕೆ ಬರುತ್ತಿದ್ದಾಗ್ಯೂ, ಯಾವ ಅಮೃತ-ಸಂಜೀವಿನಿಯಿಂದ ಇಲ್ಲಿಯವರೆಗೆ ಜೀವಿತ ದಶೆಯಲ್ಲಿ ನಮಗೆ ಉಪಲಬ್ಧವಾಗುತ್ತಿದೆ? ಇತ್ಯಾದಿ ಉದ್ವೇಗಕಾರೀ ಪ್ರಶ್ನೆಗಳಿಗೆ ಉತ್ತರವೇ – ಶಾಸ್ತ್ರನಿಷ್ಠೆ ! ಆಪ್ತ ವಚನಗಳ ಮೇಲೆ ಪೂರ್ಣ ವಿಶ್ವಾಸ !! ಋಷಿಗಳ ವಾಣಿಯ ಮೇಲೆ ಅನನ್ಯ ಶ್ರದ್ಧೆ !!!

ಪ್ರಮಾಣ ಶಬ್ದ ಮೀಮಾಂಸೆ

ಯುಕ್ತಿ ಹಾಗೂ ತರ್ಕವಾದಗಳು ಪ್ರತ್ಯಕ್ಷವಾದದ ಸಂಬಂಧವು ಇರುವನಕ ಮಾತ್ರ ಉಪಯೋಗಕ್ಕೆ ಬರುತ್ತವೆ. ಪ್ರತ್ಯಕ್ಷಾತೀತ ವಿಷಯಗಳಲ್ಲಿ ಅಶಾಸ್ತ್ರೀಯ-ನಿರರ್ಥಕ ಶುಷ್ಕ ತರ್ಕವಾದವು ಎಂದಿಗೂ ಸಫಲವಾಗುವುದಿಲ್ಲ - ’ತರ್ಕಾಪ್ರತಿಷ್ಠಾನಾತ್’. ಪರೋಕ್ಷ ತತ್ತ್ವಗಳ ಸತ್ಯಾಸತ್ಯದ ನಿರ್ಣಯವು ಪರೋಕ್ಷವನ್ನು ದ್ರಷ್ಟಿಸಿದ ಮಹರ್ಷಿಗಳ ವಚನದ ಮೇಲೆಯೇ ಅವಲಂಭಿತವಾಗಿರುತ್ತದೆ. ಅವರುಗಳು ತಮ್ಮ ಆರ್ಯದೃಷ್ಟಿಯಿಂದ  ಯಾವ ತತ್ತ್ವಗಳ ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆಯೋ, ಆ ತತ್ತ್ವಗಳನ್ನು ಶಬ್ದದಿಂದ ನಮ್ಮ ಕಿವಿಗಳಿಗೆ ತಲುಪಿಸುವವರೋ, ಅಂತಹಾ ಛಂದೋಬದ್ಧ ಅಕ್ಷರಗಳ ತರಂಗ ರೂಪವೇ ವೇದವು. ಇದೇ ನಮ್ಮ ವಿಷಯ-ಸಿದ್ಧಿಗಾಗಿ ಇತರೆ ಪ್ರಮಾಣಗಳ ಅಪೇಕ್ಷೆಯಲ್ಲಿ ಸ್ವತಃ ಪ್ರಮಾಣವಾಗಿದೆ. ಯಾವ ತತ್ತ್ವದ ಆಧಾರದಲ್ಲಿ ನಮ್ಮ ಆತ್ಮವು ಲಕ್ಷೀಭೂತ ವಿಷಯದ ಸತ್ಯತೆಯ ಕಾರಣವಾಗುತ್ತದೋ, ಅಂದರೆ ಯಾವ ತತ್ತ್ವವು ಪ್ರಮೇಯ (ವಿಷಯ) ಸಂಬಂಧಿನೀ ಪ್ರಮಾ (ಜ್ಞಾನ)ದ ಜನಕವಾಗುತ್ತದೆಯೋ, ವಿಷಯ ಸಿದ್ಧಿಯ ಹೇತುವಾಗುತ್ತದೆಯೋ, ಅದೇ ತತ್ತ್ವ ವಿಶೇಷವನ್ನು – “ಪ್ರಮಾಜನಕಂ ಪ್ರಮಾಣಂ” ಎಂಬ ನಿರ್ವಚನದ ಅನುಸಾರ ‘ಪ್ರಮಾಣ’ ಎಂಬ ಶಬ್ದದಿಂದ ವ್ಯವಹೃತವಾಗಿದೆ. ಈ ‘ಪ್ರಮಾಣ’ ತತ್ತ್ವವು

೧. ಪ್ರತ್ಯಕ್ಷ
೨. ಅನುಮಾನ
೩. ಉಪಮಾನ
೪. ಶಬ್ದ

ಎಂಬ ಭೇದಗಳಿಂದ ದರ್ಶನ ಮತಾನುಸಾರ ನಾಲ್ಕು ಭಾಗಗಳಾಗುತ್ತದೆ. ಈ ೪ ಪ್ರಮಾಣಗಳಲ್ಲಿ ಪ್ರತ್ಯಕ್ಷ ಪ್ರಮಾಣವೇ ಇನ್ನುಳಿದ ೩ ಪ್ರಮಾಣಗಳಿಗೆ ಮೂಲಾಧಾರವಾಗಿದೆ. ವಿಜ್ಞಾನ-ಪರಿಭಾಷೆಯ ಅನುಸಾರ ಈ ನಾಲ್ಕೂ ಪ್ರಮಾಣಗಳಲ್ಲಿ ಪ್ರತ್ಯಕ್ಷ-ಅನುಮಾನ, ಎಂಬ ೨ ಪ್ರಮಾಣಗಳಲ್ಲೇ ಅಂತರ್ಭಾವವಿದೆ. ದೃಷ್ಟಿಪ್ರಮಾಣವನ್ನು ಪ್ರತ್ಯಕ್ಷ ಪ್ರಮಾಣವೆಂದು ಹೇಳಲಾಗಿದೆ. ಹಾಗೇ ಯುಕ್ತಿಪ್ರಮಾಣವನ್ನು ಅನುಮಾನ ಪ್ರಮಾಣವೆಂದು ಹೇಳಲಾಗಿದೆ. ಈ ದೃಷ್ಟಿ ಹಾಗೂ ಯುಕ್ತಿ ದ್ವಯಗಳು ಶಬ್ದ ಹಾಗೂ ಅಶಬ್ದ ಭೇದದಿಂದ ೨ ಭಾಗಗಳಾಗುತ್ತವೆ. ಫಲಿತ ರೂಪದಲ್ಲಿ ಎರಡು ಪ್ರಮಾಣಗಳು ನಾಲ್ಕಾಗಿ ಪ್ರಕಟವಾಗುತ್ತವೆ. 

ಚರ್ಮಚಕ್ಷುವಿನಿಂದ  (ಕಣ್ಣಿನಿಂದ) ಯಾವುದನ್ನು ನೋಡಬಲ್ಲೆವೋ, ಅದು “ಅಶಾಬ್ದೀದೃಷ್ಟಿ” ಆಗಿದೆ. ಹಾಗೇ ಯಾವುದೇ  ಪ್ರಮಾಣವನ್ನು ಆಧಾರವಾಗಿರಿಸಿಕೊಳ್ಳದೆ ಪ್ರಯುಕ್ತವಾಗುವ ವಿಶುದ್ಧ ತರ್ಕವಾದವು ಅಶಾಬ್ದೀಯುಕ್ತಿ ಆಗಿದೆ. ಚಕ್ಷುರ್ದೃಷ್ಟಿಮೂಲಾ ಅಶಾಬ್ದೀ ದೃಷ್ಟಿಯೇ ‘ಪ್ರತ್ಯಕ್ಷ-ಪ್ರಮಾಣ’ ಆಗಿದೆ. ಹಾಗೇ ವಿಶುದ್ಧ ತರ್ಕಮೂಲ ಅಶಾಬ್ದೀಯುಕ್ತಿಯೇ ‘ಅನುಮಾನ-ಪ್ರಮಾಣ’ ಆಗಿದೆ. ಸಾಮಾನ್ಯ ಮನುಷ್ಯರ ಲೌಕಿಕ ವ್ಯವಹಾರವು ಬಹುಶಃ ಇವೆರಡೇ ಪ್ರಮಾಣಗಳ ಮೇಲೆ ಅವಲಂಬಿಸಿರುತ್ತದೆ. ಅಂದರೆ ಲೌಕಿಕ ಮನುಷ್ಯರಿಗೆ ಸಂಬಂಧಿಸಿದಂತೆ ಪ್ರತ್ಯಕ್ಷ ಎಂಬ ಶಬ್ದವು ಕಣ್ಣಿನಿಂದ ನೋಡುವುದು, ಹಾಗೂ ಅನುಮಾನ ಎಂಬ ಶಬ್ದವು ತರ್ಕವಾದವನ್ನೇ ಗ್ರಹಿಸುವುದು ಎಂದಾಗುತ್ತದೆ.   

ಶಾಬ್ದೀ ದೃಷ್ಟಿ, ಯುಕ್ತಿ-

ವಿಜ್ಞಾನ ದೃಷ್ಟಿಯಿಂದ ಯಾವುದನ್ನು ನೋಡುತ್ತೇವೆಯೋ, ಅದು ‘ಶಾಬ್ದೀದೃಷ್ಟಿ’ ಆಗಿದೆ. ಹಾಗೇ ಶಾಬ್ದೀದೃಷ್ಟಿಯ ಅನುಮಾನ ಮಾಡುವ ತರ್ಕವಾದವು ‘ಶಾಬ್ದೀಯುಕ್ತಿ’ ಆಗಿದೆ. ಅಂದರೆ ಇವುಗಳನ್ನು ‘ಶಾಸ್ತ್ರೀಯ ದೃಷ್ಟಿ’ ಹಾಗೂ ‘ಶಾಸ್ತ್ರೀಯ ಯುಕ್ತಿ’ ಎಂಬ ಹೆಸರುಗಳಿಂದಲೂ ವ್ಯವಹೃತಗೊಳಿಸಬಹುದು. ಶಾಸ್ತ್ರೀಯ ದೃಷ್ಟಿಯು ‘ಪ್ರತ್ಯಕ್ಷ ಪ್ರಮಾಣ’ ಆಗಿದೆ ಹಾಗೂ ಶಾಸ್ತ್ರೀಯ ಯುಕ್ತಿಯು ‘ಅನುಮಾನ ಪ್ರಮಾಣ’ ಆಗಿದೆ. ಪ್ರತ್ಯಕ್ಷ ಪ್ರಮಾಣಕ್ಕೆ ದೃಷ್ಟಾರ್ಥದೊಂದಿಗೆ ಸಂಬಂಧವಿದೆ. ಹಾಗೇ ಅನುಮಾನ ಪ್ರಮಾಣಕ್ಕೆ ಶ್ರುತಾರ್ಥದ ಸಂಬಂಧವಿದೆ. ಯಾವುದೇ ವಿಷಯವನ್ನು ನೋಡಿ ಹೇಳುವುದೇ ದೃಷ್ಟಿ ಹಾಗೂ ಯಾವುದೇ ವಿಷಯವನ್ನು ಕೇಳಿ ಹೇಳುವುದೇ ಶ್ರುತಿ. ದೃಷ್ಟಿಯನ್ನು ಶ್ರುತಿ ಎನ್ನುತ್ತಾರೆ ಹಾಗೂ ಶ್ರುತಿಯನ್ನು ಸ್ಮೃತಿ ಎನ್ನುತ್ತಾರೆ.

ತಾತ್ಪರ್ಯವೇನೆಂದರೆ ಯಾವ ಅಲೌಕಿಕ ಇಂದ್ರಿಯಾತೀತ ವಿಷಯಗಳನ್ನು ನಾವು ನಮ್ಮ ಚರ್ಮಚಕ್ಷುವಿನಿಂದ ಪ್ರತ್ಯಕ್ಷಗೊಳಿಸಿಕೊಳ್ಳಲು ಸರ್ವಥಾ ಅಸಮರ್ಥರಾಗಿರುತ್ತೇವೆಯೋ, ತಪಃ ಪ್ರಭಾವದಿಂದ ವಿಶುದ್ಧಾಂತಃಕರಣಮನಾ ಮಹರ್ಷಿಗಣವು ಅದೇ ಪರೋಕ್ಷ ಅರ್ಥವನ್ನು ತಮ್ಮ ವಿಜ್ಞಾನ ದೃಷ್ಟಿಯಿಂದ ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಾರೆ.  ಇದೇ ವಿಜ್ಞಾನದೃಷ್ಟಿಯು “ದಿವ್ಯದೃಷ್ಟಿ” “ದಿವ್ಯಚಕ್ಷು” “ಯೋಗಪ್ರತ್ಯಕ್ಷ” “ಆರ್ಷದೃಷ್ಟಿ” “ಆರ್ಷಚಕ್ಷು” ಇತ್ಯಾದಿ ವಿವಿಧ ಹೆಸರುಗಳಿಂದ ಪ್ರಸಿದ್ಧವಾಗಿದೆ. ಇದೇ ದೃಷ್ಟಿಯ ನಿರೂಪಣೆ ಮಾಡುತ್ತಾ ಅಭಿಯುಕ್ತರು ಹೇಳುತ್ತಾರೆ –

ಅನಾಗತಮತೀತಂಚ ವರ್ತಮಾನಮತೀಂದ್ರಿಯಮ್ |
ವಿಪ್ರಕೃಷ್ಟಂ ವ್ಯವಹಿತಂ ಸಮ್ಯಕ್ ಪಶ್ಯಂತಿ ಯೋಗಿನಃ || ೧ ||
ಆವಿರ್ಭೂತ ಪ್ರಕಾಶಾನಾಂ ಅನಭಿಪ್ಲುತ ಚೇತಸಾಮ್ |
ಅತೀತಾನಾಗತಜ್ಞಾನಂ ಪ್ರತ್ಯಕ್ಷಾನ್ನ ವಿಶಿಷ್ಯತೇ || ೨ ||
ಅತೀಂದ್ರಿಯಾನ್ ಅಸಂವೇದ್ಯಾನ್ ಪಶ್ಯಂತ್ಯಾರ್ಷೇಣ ಚಕ್ಷುಷಾ |
ಯೇ ಭಾವಾನ್ ವಚನಂ ತೇಷಾಂ ನಾನುಮಾನೇನ ಬಾಧ್ಯತೇ || ೩ ||

ಸ್ವತಃ ಪರತಃ ಪ್ರಾಮಾಣ್ಯವಾದ

ಯಾವ ತತ್ತ್ವವು ಹೇಗಿರುವುದೋ, ಅದನ್ನು ಯಥಾವತ್ ತಿಳಿಯುವುದೇ ‘ಸತ್ಯಭಾವವು’, ವಿಪರೀತವಾಗಿ ತಿಳಿಯುವುದು ‘ಅಸತ್ಯಭಾವವು’. ಇತರೆ ಶಬ್ದಗಳಲ್ಲಿ ಹೇಳುವುದಾದರೆ ಯಾವುದರ ಸತ್ತೆಯು ಇರುತ್ತದೋ, ಅದರಂತೆಯೇ (ಜ್ಞಾನವು) ಆಗುವುದು ಸತ್ಯ, ಅದೇ “ಪ್ರಮಾ” ಜ್ಞಾನವು. ಸತ್ಯಜ್ಞಾನವನ್ನೇ ‘ಪ್ರಮಾಜ್ಞಾನ’ ಎನ್ನಲಾಗಿದೆ. ಸತ್ತೆಯು ಮತ್ತೊಬ್ಬರದ್ದಾಗಿದ್ದು, ಜ್ಞಾನವು ಇನ್ಯಾರದ್ದೋ ಆಗುತ್ತಿದ್ದರೆ, ಇಲ್ಲಿ ಅಸ್ತಿ-ಭಾತಿಯ ಪಾರ್ಥಕ್ಯವು ಅಸತ್ಯಜ್ಞಾನವಾಗಿರುತ್ತದೆ. “ಯಥಾಸ್ತಿ-ತಥಾ ಪ್ರತಿಪತ್ತಿಃ” ಎಂಬುದೇ ಪ್ರಮಾ! ಯಾವ ಆಧಾರದಲ್ಲಿ “ಸತ್ಯ-ಲಕ್ಷಣ” ಎಂಬ ಪ್ರಮಾಜ್ಞಾನದ ಉದಯವಾಗುತ್ತದೋ, ಅದುವೇ ಪ್ರಮಾಜನಕವಾಗುತ್ತಾ ‘ಪ್ರಮಾಣ’ ಎಂದು ಕರೆಯಲ್ಪಡುತ್ತದೆ. ಈ ವೈಜ್ಞಾನಿಕ ಲಕ್ಷಣದ ಅನುಸಾರ ಮೊದಲಿಗೆ ಪ್ರತ್ಯಕ್ಷ-ಶಬ್ದ-ಅನುಮಾನ ಎಂಬ ೩ ಪ್ರಮಾಣಗಳಾಗುತ್ತವೆ. ಈ ಮೂರರಲ್ಲಿ ಅನುಮಾನ ಹಾಗೂ ಶಬ್ದಪ್ರಮಾಣಗಳು ಪ್ರತ್ಯಕ್ಷಪ್ರಮಾಣವನ್ನು ಮೂಲವಾಗಿಟ್ಟುಕೊಂಡು ಪ್ರಮಾಣ ಮಾಡುತ್ತವೆ, ಹಾಗಾಗಿ ಇವೆರಡನ್ನೂ ನಾವು “ಪರತಃ ಪ್ರಮಾಣ” ಎಂದು ನಂಬಲು ತಯಾರಾಗಿರುತ್ತೇವೆ. ಮತ್ತೆ ಪ್ರತ್ಯಕ್ಷಪ್ರಮಾಣವು ಯಾವುದೇ ಅನ್ಯ ಪ್ರಮಾಣದ ಅಪೇಕ್ಷೆಯಿಲ್ಲದೆ ಸ್ವತಃ ಪ್ರಮಾಣ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.

ತದ್ಯೇ ತತ್-ಸತ್ಯಂ, ಅಸೌ ಸ ಆದಿತ್ಯೋ ಯ ಏಷ ಏತಸ್ಮಿನ್ಮಂಡಲೇ ಪುರುಷಃ” || ಶತ. ೧೪|೮|೩ ||

ಚಕ್ಷುರಿಂದ್ರಿಯದಲ್ಲಿ ಪ್ರಕೃತಿಯು ಸತ್ಯ ಸತ್ತ್ವವನ್ನು ಪ್ರತಿಷ್ಠಿಸಿದೆ. ಕಾರಾಣವೇನೆಂದರೆ ಚಕ್ಷುರಿಂದ್ರಿಯದ (ಜೊತೆಗೆ ‘ವಿಜ್ಞಾನಚಕ್ಷು’ ಎಂದು ಪ್ರಸಿದ್ಧವಾದ ಬುದ್ಧಿಯನ್ನೂ) ನಿರ್ಮಾಣವು ಸತ್ಯಭಾವಾಪನ್ನ ಸೂರ್ಯ್ಯನಿಂದ ಆಗಿದೆ. ಹಾಗೂ ಪ್ರತ್ಯಕ್ಷದ ಸಂಬಂಧವು ಚಕ್ಷುವಿನಿಂದಲೇ ಆಗುತ್ತದೆ. ಹಾಗಾಗಿ ಚಕ್ಷುಷಾ ದೃಷ್ಟ ಪ್ರತ್ಯಕ್ಷ ತತ್ತ್ವವನ್ನು ನಾವು ಅವಶ್ಯವಾಗಿ ಸರ್ವಥಾ ‘ಸತ್ಯ’ ಎಂದು ಹೇಳಲು ಸಿದ್ಧರಿರುತ್ತೇವೆ. ಇದೇ ಕಾರಣಕ್ಕೆ ನಮ್ಮ ಸಮೀಪಕ್ಕೆ ಯಾವುದೇ ವಿಷಯದ ಸೂಚನೆ ನೀಡುವ ಎರಡು ಮನುಷ್ಯರು ಬಂದು ಒಬ್ಬೊಬ್ಬರಾಗಿ – “ನಾನು ಹೀಗೆ ನೋಡಿದೆ, ನಾನು ಹೀಗೆ ಕೇಳಿಸಿಕೊಂಡೆ” ಎಂದು ಹೇಳುತ್ತಾರೆ. ಯಾವ ಮನುಷ್ಯನು “ನಾನು ಹೀಗೆ ನೋಡಿದೆ” ಎಂದು ಹೇಳುತ್ತಾನೋ, ಅವನ ಮೇಲೆಯೇ ನಮಗೆ ನಂಬಿಕೆ ಬರುತ್ತದೆ. ಫಲಿತಾಂಶದಲ್ಲಿ ಚಕ್ಷುವಿನ ಸತ್ಯತ್ವ ಸಿದ್ಧಿಯಾಗುತ್ತದೆ. ಇದೇ ಸತ್ಯಭಾವದ ಸ್ಪಷ್ಟೀಕರಣವನ್ನು ನೀಡುತ್ತಾ ಶ್ರುತಿಯು ಹೇಳುತ್ತದೆ -

(೧) – “ಸತ್ಯಂ ದೀಕ್ಷಾ | ತಸ್ಮಾದ್ದೀಕ್ಷಿತೇನ ಸತ್ಯಮೇವ ವದಿತವ್ಯಮ್ | ಅಥೋ ಖಲ್ವಾಹುಃ – ಕೋಽರ್ಹತಿ ಮನುಷ್ಯಃ ಸರ್ವಂ ಸತ್ಯಂ ವದಿತುಮ್ | ಸತ್ಯಸಂಹಿತಾ ವೈ ದೇವಾಃ, ಅನೃತಸಂಹಿತಾ ವೈ ಮನುಷ್ಯಾಃ | ವಿಚಕ್ಷಣವತೀಂ ವಾಚಂ ವದೇತ್ | ಚಕ್ಷುರ್ವೈ ವಿಚಕ್ಷಣಮ್ | ವಿ ಹ್ಯೇನೇನ ಪಶ್ಯತಿ | ಏತದ್ವ ವೈ ಮನುಷ್ಯೇಷು ಸತ್ಯಂ ನಿಹಿತಂ – ಯಚ್ಚಕ್ಷುಃ | ತಸ್ಮಾದಾಚಕ್ಷಾಣಮಾಹುಃ – ಅದ್ರಾಕ್ ಇತಿ | ಸ ಯದಿ – ‘ಅದರ್ಶಮ್’ ಇತ್ಯಾಹ, ಅಥಾಸ್ಯ ಶ್ರದ್ಧಧಾತಿ | ಯದ್ಯು ಸ್ವಯಂ ಪಶ್ಯತಿ (ತದಾ) ನ ಬಹೂನಾಂ ಚನಾನ್ಯೇಷಾಂ ಶ್ರದ್ಧಧಾತಿ” || ಐತರೇಯ ಬ್ರಾಹ್ಮಣ ೨|೧|೬ ||

ಭಾವಾರ್ಥ:- ಸತ್ಯವು ದೀಕ್ಷೆಯಾಗಿದೆ. ಆದ್ದರಿಂದ (ಯಜ್ಞದಲ್ಲಿ) ದೀಕ್ಷಿತನಿಂದ (ಯಜಮಾನನಿಂದ) ಸತ್ಯವೇ ಪ್ರಯುಕ್ತವಾಗಬೇಕು (ದೀಕ್ಷಿತನಿಗೆ ‘ದೀಕ್ಷೆ’ಯ ರಕ್ಷೆಗಾಗಿ ಸತ್ಯಭಾಷಣವನ್ನೇ ಮಾಡಬೇಕು). ಈ ಸಂಬಂಧದಲ್ಲಿ ವೈಜ್ಞಾನಿಕರು ಹೇಳುತ್ತಾರೆ (ಪ್ರಶ್ನಿಸುತ್ತಾರೆ) – ‘ಯಾವ ಮನುಷ್ಯನು ಸರ್ವಾತ್ಮನಾ ಸತ್ಯ ಹೇಳಲು ಸಾಧ್ಯ? (ಅಂದರೆ ಮನುಷ್ಯನು ಸತ್ಯಭಾಷಣದಲ್ಲಿ ಅಸಮರ್ಥನಾಗಿರುವಾಗ, ಈ ಅಸಂಭವ ಅದೇಶವನ್ನು ಯಾವ ಆಧಾರದಲ್ಲಿ ನೀಡಲಾಗಿದೆ?). ದೇವತೆಗಳೇ ನಿಶ್ಚಯವಾಗಿ ಸತ್ಯಸಂಹಿತ (ಸತ್ಯಮರ್ಯಾದೆಯಿಂದ ಮರ್ಯ್ಯಾದಿತ) ಆಗಿದ್ದಾರೆ, (ಅಲ್ಲಿ) ಮನುಷ್ಯ(ನಂತೂ) ಅಸತ್ಯಸಂಹಿತ ಆಗಿದ್ದಾನೆ (ಇಂತಹಾ ದಶೆಯಲ್ಲಿ ಉಕ್ತ ಆದೇಶದ ಅರ್ಥವೇನು? ಪ್ರಶ್ನೆಯ ಸಮಾಧಾನ ಮಾಡುತ್ತಾ ಶ್ರುತಿಯು ಹೇಳುತ್ತದೆ, ಆ ದೀಕ್ಷಿತ ಯಜಮಾನನು) ವಿಚಕ್ಷಣವತೀ (ಕಣ್ಣುಗಳಿಂದ ನೋಡಲ್ಪಟ್ಟ) ವಾಣಿಯನ್ನು ನುಡಿಯಬೇಕಾದ್ದರಿಂದ ಚಕ್ಷುರಿಂದ್ರಿಯವೇ ವಿಚಕ್ಷಣವಾಗಿದೆ. ಇದರಿಂದಲೇ (ಚಕ್ಷುವಿನಿಂದಲೇ) ಮನುಷ್ಯನು ನೋಡುತ್ತಾನೆ. ಮಾನವನಲ್ಲಿ (ಪ್ರಕೃತಿಯಿಂದ) ಇದೇ ಸತ್ಯವು ಪ್ರತಿಷ್ಠಿತವಾಗಿದೆ; ಅದು ಚಕ್ಷುವೇ ಆಗಿದೆ. ಆದ್ದರಿಂದ ಕಣ್ಣುಗಳಿಂದ ನೋಡಿ ಮಾತನ್ನು ಆಡುವ ಮಾನವನ ಪ್ರತಿ ಏನು ಹೇಳಲ್ಪಡುತ್ತದೆ ಎಂದರೆ – ಇಂತಹವರು ವಾಸ್ತವದಲ್ಲಿ ಸರಿಯಾದದ್ದನ್ನೇ ನುಡಿಯುತ್ತಿದ್ದಾರೆ.’ (ಯಾವುದೇ ವಿಷಯದ ಪ್ರತಿಪಾದನೆ ಮಾಡುವ ಮಾನವನಿಗೆ ಇದು ನಿಯಮವಾಗಿದೆ). ಒಂದುವೇಳೆ ‘ನಾನು ನೋಡಿದೆ’ ಎಂದು ಹೇಳಿದರೆ (ನೋಡಿಯೇ ಈ ರೀತಿ ಹೇಳುತ್ತಿರುವುದು) ಈ ಮಾನವನ ಮೇಲೆ ಉಳಿದವರು ವಿಶ್ವಾಸವಿಡುತ್ತಾರೆ. ಒಂದುವೇಳೆ ಯಾರಾದರೂ ಮಾನವರು ಸ್ವಯಂ ಇಂತಹಾ ವಿಷಯದ ಸಾಕ್ಷಾತ್ಕಾರ ಮಾಡಿಕೊಂಡರೆ (ತನ್ನ ಈ ಪ್ರತ್ಯಕ್ಷ ಜ್ಞಾನದ ಹೋಲಿಕೆಯಲ್ಲಿ) ಅವರು ಅನ್ಯ ಅನೇಕ ಮಾನವರ (ಸ್ವದೃಷ್ಟದಿಂದ ವಿರುದ್ಧ) ಕಿವಿಯಿಂದ ಕೇಳಲ್ಪಟ್ಟ ವಿಷಯದ ಮೇಲೆ ವಿಶ್ವಾಸ ಇಡುವುದಿಲ್ಲ.

(೨) – ಸತ್ಯಂ ವೈ ಚಕ್ಷುಃ | ಸತ್ಯಂ ಹಿ ವೈ ಚಕ್ಷುಃ – ತಸ್ಮಾದ್ಯದಿದಾನೀಂ ದ್ವೌ ವಿವದ-ಮಾನಾವೇಯಾತಾಂ – ‘ಅಹಮದರ್ಶಮ್, ಅಹಮಶ್ರೌಷಮ್’ ಇತಿ, ಯ ಏವ ಬ್ರೂ ಯಾತ್ – ‘ಅಹಮದರ್ಶಮ್’ ಇತಿ, ತಸ್ಮಾ (ತಸ್ಮೈ) ಏವ ಶ್ರದ್ಧಧ್ಯಾಮ್” || ಶತಪಥ ಬ್ರಾಹ್ಮಣ ೧|೩|೧|೨೭ ||

ಭಾವಾರ್ಥ:- ಸತ್ಯವು ನಿಶ್ಚಯದಿಂದ ಚಕ್ಷುವಾಗಿದೆ. ಸತ್ಯವು ನಿಶ್ಚಯವಾಗಿಯೇ ಚಕ್ಷುವಾಗಿದೆ. ಇದೇ ಕಾರಣದಿಂದ, ‘ನಾನು ಹೀಗೆ ನೋಡಿದೆ’ ‘ನಾನು ಹೀಗೆ ಕೇಳಿದೆ’ ಈ ರೀತಿ ಪರಸ್ಪರ ವಿವಾದ ಮಾಡುತ್ತಾ ಉಪಸ್ಥಿತ ಮಾನವರಲ್ಲಿ ಯಾವ ಮಾನವರು – ‘ನಾನು ಹೀಗೆ ನೋಡಿದೆ’ ಎಂದು ಹೇಳುತ್ತಾರೋ, ಅವರ ಮೇಲೆಯೇ ಜನರು ವಿಶ್ವಾಸ ಇಡುತ್ತಾರೆ.

ಪ್ರತ್ಯಕ್ಷ ಪ್ರಮಾಣದ ಎರಡು ವಿವರ್ತ್ತಗಳು -

ಪ್ರತ್ಯಕ್ಷ-ಪ್ರಮಾಣರೂಪೀ ಈ ದೃಷ್ಟಿಯು ಚರ್ಮ್ಮ-ವಿಜ್ಞಾನ ಭೇದದಿಂದ ಎರಡು ಭಾಗಗಳಾಗಿವೆ. ಚರ್ಮ್ಮಚಕ್ಷುವು ಸರ್ವಸಾಧಾರವಾದದ್ದು, ವಿಜ್ಞಾನಚಕ್ಷುವು ಯೋಗಸಾಧ್ಯವಾದ್ದರಿಂದ 'ಯೋಗಜ'ವಾಗಿದೆ. ಈ ದೃಷ್ಟಿಯು ತಪಸ್ವೀ ಮಹರ್ಷಿಗಳಲ್ಲಿ ತಪಃಪ್ರಭಾವದಿಂದ ಉದಯಿಸುತ್ತದೆ, ಹಾಗಾಗಿ ಇದನ್ನು “ಆರ್ಷದೃಷ್ಟಿ” ಎನ್ನುತ್ತಾರೆ, ಇದನ್ನು ಹಿಂದೆಯೇ ವಿವರಿಸಿ ಆಗಿದೆ. ಸಾಧಾರಣ ಲೌಕಿಕ ವಿಷಯಗಳ ಸಂಬಂಧದಲ್ಲಿ ಚರ್ಮ್ಮಚಕ್ಷುವಿನ ಸಂಬಂಧೀ ಪ್ರತ್ಯಕ್ಷಪ್ರಮಾಣಕ್ಕೆ ಅಧಿಕ ಮಹತ್ವವಿದೆ. ಆದರೆ ಪಾರಲೌಕಿಕ ವಿಷಯಗಳ ಸಂಬಂಧದಲ್ಲಿಯೂ ಇದೇ ದೃಷ್ಟಿಯು ಪ್ರಧಾನವೆಂದು ಯಾರು ನಂಬುತ್ತಾರೋ ಅವರು ಮೂಢರು. ಚರ್ಮಚಕ್ಷುವು ಇವುಗಳ ಸಾಕ್ಷಾತ್ಕಾರ ಮಾಡಿಕೊಳ್ಳಲು ಅಸಮರ್ಥವಾಗಿರುವ ಕಾರಣ ಆ ವಿಷಯಗಳ ಸತ್ಯತೆಯಲ್ಲಿ ಸಂದೇಹ ಮಾಡುತ್ತಾರೆ. ಇಂತಹಾ ಲೌಕಿಕ ವಿಶುದ್ಧ ಚಾಕ್ಷುಷ ಪ್ರತ್ಯಕ್ಷವಾದಿಗಳೇ ನಾಸ್ತಿಕ-ಚಾರ್ವಾಕರೆಂದು ಕರೆಯಲ್ಪಟ್ಟಿದ್ದಾರೆ – “ಪ್ರತ್ಯಕ್ಷಮೇವೇತಿ ಚಾರ್ವಾಕಾಃ”. ಅಲ್ಲಿ ಬುದ್ಧಿವಂತ ಮನುಷ್ಯರು ಲೌಕಿಕ ವಿಷಯಗಳ ಸಂಬಂಧದಲ್ಲಿ ಎಲ್ಲಿ ಚರ್ಮ್ಮಚಕ್ಷು-ಸಂಬಂಧೀ ಪ್ರತ್ಯಕ್ಷದ ಆದರ ಮಾಡುತ್ತಾರೋ, ಅಲ್ಲಿ ಪಾರಲೌಕಿಕ ಅತೀನ್ದ್ರಿಯ ವಿಷಯಗಳ ಸಂಬಂಧದಲ್ಲಿ ಆರ್ಷಚಕ್ಷುಷ್ಮನ್ತ ಮಹರ್ಷಿಗಳ ಆರ್ಷಪ್ರತ್ಯಕ್ಷವನ್ನೇ ಎತ್ತಿಹಿಡಿಯುತ್ತಾರೆ. ಎರಡೂ ಪ್ರತ್ಯಕ್ಷಗಳಾದ ಲೌಕಿಕ-ವೈದಿಕಗಳು ಭೇದದಿಂದ ಸುವ್ಯವಸ್ಥಿತವಾಗಿವೆ. ಇದೇ ರಹಸ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು “ಇನ್ದ್ರಿಯಾರ್ಥ ಸನ್ನಿಕರ್ಷೋತ್ಪನ್ನಂ ಜ್ಞಾನಮವ್ಯಪದೇಶ್ಯಮವ್ಯಭಿಚಾರಿ ವ್ಯವಸಾಯಾತ್ಮಕಂ ಪ್ರತ್ಯಕ್ಷಮ್” (ನ್ಯಾಯ ಸೂತ್ರ ೧|೧೪) ಎಂದಿದೆ. ಪ್ರತ್ಯಕ್ಷದ ಈ ಲಕ್ಷಣವನ್ನು ಮಂಡಿಸುತ್ತಾ ಆಚಾರ್ಯರು ತನ್ಮೂಲಕ ಶಬ್ದಪ್ರಮಾಣದ ದಿಗ್ದರ್ಶನ ಮಾಡಿಸುತ್ತಾರೆ – “ಆಪ್ತೋಪದೇಶಃ ಶಬ್ದಃ, ಸ ದ್ವಿವಿಧಃ, ದೃಷ್ಟಾಽದೃಷ್ಟಾರ್ಥತ್ತ್ವಾತ್”  (೧|೧|೭-೮) ಎಂಬೀ ಸಿದ್ಧಾಂತವನ್ನು ಸ್ಥಾಪಿಸುತ್ತಾರೆ. ಉಕ್ತ ಎರಡೂ ಪ್ರತ್ಯಕ್ಷಗಳ ಸಂಬಂಧದಲ್ಲಿ ಸೂತ್ರಕಾರರ ಅಭಿಮತವನ್ನು ಉಲ್ಲೇಖಿಸುತ್ತ ಭಾಷ್ಯಕಾರರು ಹೇಳುತ್ತಾರೆ –

“ಆಪ್ತಃ ಖಲು ಸಾಕ್ಷಾತ್ಕೃತಧರ್ಮ್ಮಾ, ಯಥಾದೃಷ್ಟಸ್ಯಾರ್ಥಸ್ಯ ಚಿಖ್ಯಾಪಯಿಷಯಾ ಪ್ರಯುಕ್ತ ಉಪದೇಷ್ಟಾ | ಸಾಕ್ಷಾತ್ಕರಣಮರ್ಥೇಸ್ಯಾಪ್ತಿಃ, ತಯಾ ಪ್ರವರ್ತ್ತತೇ ಇತ್ಯಾಪ್ತಃ | ಋಷ್ಯಾರ್ಯ್ಯಮ್ಲೇಚ್ಛಾನಾಂ ಸಮಾನಂ ಲಕ್ಷಣಮ್ | ತಥಾ ಚ ಸರ್ವೇಷಾಂ ವ್ಯವಹಾರಾಃ ಪ್ರವರ್ತ್ತನ್ತೇ | ಏವಮೇಭಿಃ ಪ್ರಮಾಣೈರ್ದೇವಮನುಷ್ಯತಿರಶ್ಚಾಂ ವ್ಯವಹಾರಾಃ ಪ್ರಕಲ್ಪನ್ತೇ ನಾತೋಽನ್ಯಥಾ – ಇತಿ | ++ ಯಸ್ಯೇಹ ದೃಶ್ಯತೇಽರ್ಥಃ, ಸ ದೃಷ್ಟಾರ್ಥಃ | ಯಸ್ಯಾಮುತ್ರ ಪ್ರತೀಯತೇ, ಸೋಽದೃಷ್ಟಾರ್ಥಃ | ಏವಮೃಷಿಲೌಕಿಕವಾಕ್ಯಾನಾಂ ವಿಭಾಗ ಇತಿ | ಕಿಮರ್ಥಂ ಪುನರಿದಮುಚ್ಯತೇ? ಸ ನ ಮನ್ಯೇತ-ದೃಷ್ಟಾರ್ಥ ಏವಾಪ್ತೋಪದೇಶಃ ಪ್ರಮಾಣಮ್-ಅರ್ಥಸ್ಯಾವಧಾರಣಾತ್-ಇತಿ | ಅದೃಷ್ಟಾರ್ಥೋಽಪಿ ಪ್ರಮಾಣ-ಅರ್ಥಸ್ಯಾನುಮಾನಾತ್-ಇತಿ” |
(ವಾತ್ಸ್ಯಾಯನಭಾಷ್ಯ ೧|೧|೭-೮)

ಭಾಷ್ಯಕಾರರ ಅಭಿಪ್ರಾಯವೇನೆಂದರೆ ಯಾವ ವ್ಯಕ್ತಿಯು ತನ್ನ ಚರ್ಮ್ಮಚಕ್ಷುವಿನಿಂದ ಲೌಕಿಕ ವಿಷಯದ ಸಾಕ್ಷಾತ್ಕಾರ ಮಾಡಿಕೊಂಡು, ಹೇಗೆ ತಾನು ಸ್ವಯಂ ನೋಡಿದನೋ, ಹಾಗೆ ಅದೇ ರೀತಿಯಲ್ಲಿ ಹೇಳಲು ಇಚ್ಛೆ ಉಳ್ಳವನಾಗಿ ಆತನು “ಆಪ್ತ”ನೆಂದು ಕರೆಯಲ್ಪಡುತ್ತಾನೆ. ಬೇಕಾದರೆ ಚರ್ಮ್ಮಚಕ್ಷುವಿನಿಂದಲೇ ಲೌಕಿಕ ವಿಷಯದತ್ತ ತಲುಪಿರಲಿ, ಅಥವಾ ಆರ್ಷಚಕ್ಷುವಿನಿಂದ ಅಲೌಕಿಕ ವಿಷಯದತ್ತ ತಲುಪಿರಲಿ. ಉಭಯ ವಿಷಯಗಳ ಸಾಕ್ಷಾತ್ಕಾರವೇ ಆಪ್ತಿ, ಅಂದರೆ ಸರಿಯಾದ ಗುರಿಯನ್ನು ತಲುಪುವುದೇ ಆಪ್ತಿ ಎನ್ನಿಸಿಕೊಳ್ಳುತ್ತದೆ. ಆ ಉಪದೇಷ್ಟನು ಈ ಆಪ್ತಿಭಾವವನ್ನು ತೆಗೆದುಕೊಂಡೇ ನಮಗೆ ಉಪದೇಶ ನೀಡಲು ಪ್ರವೃತ್ತನಾಗುತ್ತಾನೆ, ಹಾಗಾಗಿ ಅದು “ಆಪ್ತ” ಎಂದು ಕರೆಯಲ್ಪಡುತ್ತದೆ. ತಮ್ಮ-ತಮ್ಮ ಪ್ರತ್ಯಕ್ಷ-ಪರೋಕ್ಷ ವಿಷಯಗಳ ಪ್ರಾಪ್ತಿಯ ಸಂಬಂಧದಿಂದ ಋಷಿ-ಆರ್ಯ್ಯ-ಮ್ಲೇಚ್ಛ, ಎಲ್ಲರೂ ಸ್ವ ಸ್ವ ಸ್ಥಾನದಲ್ಲಿ ಆಪ್ತರು. ಇವೇ ಆಪ್ತರ ಉಪದೇಶದಿಂದ ಲೌಕಿಕ-ವೈದಿಕ ಎಲ್ಲಾ ವ್ಯವಹಾರಗಳು ಸಂಚಲನವಾಗುತ್ತಿರುತ್ತವೆ.

ಶಬ್ದಪ್ರಾಮಾಣ್ಯವಾದ -

ಇವೇ ಎರಡು ಆಪ್ತಿಗಳ ಇನ್ನೂ ಹೆಚ್ಚು ಸ್ಪಷ್ಟೀಕರಣ ನೀಡುತ್ತಾ ಮುಂದುವರೆದು ಭಾಷ್ಯಕಾರರು ಹೇಳುತ್ತಾರೆ – ಯಾವ ಆಪ್ತವಾಕ್ಯದ ಪ್ರತಿಪಾದ್ಯ ವಿಷಯವು ಚರ್ಮ್ಮಚಕ್ಷುವಿನಿಂದ ನೋಡಲು ಸಾಧ್ಯವೋ, ಆ ವಾಕ್ಯವು ಈ ಚರ್ಮ್ಮಚಕ್ಷುವಿನಿಂದ ದೃಷ್ಟ ಅರ್ಥದ ಸಾಧಕವಾಗುತ್ತಾ “ದೃಷ್ಟಾರ್ಥ” ಎಂದಾಗುತ್ತದೆ. ಹಾಗೇ ಯಾವ ವಾಕ್ಯದ ಅರ್ಥದ ಸಂಬಂಧವು ಇಲ್ಲಾಗದೆ ಪರಲೋಕದಲ್ಲಾಗುತ್ತದೋ, ಆ ವಾಕ್ಯವು “ಅದೃಷ್ಟಾರ್ಥ” ಎಂದಾಗುತ್ತದೆ. ಈ ರೀತಿ ಅದೃಷ್ಟಾರ್ಥ-ಸಂಬಂಧೀ ಋಷಿವಾಕ್ಯಗಳ, ಹಾಗೂ ದೃಷ್ಟಾರ್ಥಸಂಬಂಧೀ ಲೌಕಿಕ ವಾಕ್ಯಗಳ ವಿಭಾಗ ಮಾಡಿಕೊಳ್ಳಬೇಕು. “ಆಪ್ತೋಪದೇಶಃ ಶಬ್ದಃ” ಎಂದು ಮಾತ್ರ ಹೇಳುವುದರಿಂದ ದೃಷ್ಟಾರ್ಥದ ಪ್ರಾಮಾಣಿಕತೆಯು ಸಿದ್ಧವಾಗುತ್ತದೆ, ಕಾರಣವೇನೆಂದರೆ ಅಲ್ಲಿ ಉಪದಿಷ್ಟ ಅರ್ಥವು ಕಣ್ಣಿನ ಮುಂದೆ ಇರುತ್ತದೆ, ಫಲಿತಾಂಶವಾಗಿ ಅದರ ಮೇಲೆ ವಿಶ್ವಾಸ ಮೂಡುವುದು ಸುಗಮವಾಗಿರುತ್ತದೆ. ಆದರೆ ಆಗ ಅದೃಷ್ಟಾರ್ಥವು ಪ್ರಮಾಣವಲ್ಲವೆಂದು ನಂಬುತ್ತಾರೆ. ಅಪೇಕ್ಷಿತವಾದ ಇದಕ್ಕೂ ಪ್ರಾಮಾಣಿಕತೆ ಇದೆ. ಕಾರಣವೇನೆಂದರೆ, ಈ ಅರ್ಥವು ಪ್ರತ್ಯಕ್ಷಾಧಾರದ ಮೇಲೆ ಪ್ರತಿಷ್ಠಿತವಾಗುತ್ತಾ ಅನುಮಾನ ಮೂಲದ್ದಾಗಿದೆ.

ಪರೀಕ್ಷಕ ಮಹರ್ಷಿಗಳು ತಮ್ಮ ಆರ್ಷದೃಷ್ಟಿಯಿಂದ ಮೊದಲು ಸ್ವಯಂ ಆ ವಿಷಯದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ, ಅನಂತರ ತಮ್ಮ ದೃಷ್ಟ ಅರ್ಥವನ್ನು (ಪ್ರತ್ಯಕ್ಷೀಕೃತ ವಿಷಯವನ್ನು) ಶಬ್ದೋಪದೇಶದಿಂದ ನಮಗಾಗಿ ಪ್ರಯುಕ್ತಗೊಳಿಸುತ್ತಾರೆ. ತಮ್ಮಿಂದ ನೋಡಲ್ಪಟ್ಟ ಪ್ರತ್ಯಕ್ಷಾರ್ಥವನ್ನು ಅವರು ತಮ್ಮ ಮುಖದಿಂದಲೇ ಶಬ್ದದಿಂದ (ಸ್ವಪ್ರತ್ಯಕ್ಷಾನುಭವವನ್ನು ಶಬ್ದರೂಪದಲ್ಲಿ ಪರಿಣತಗೊಳಿಸಿ) ಪ್ರಕಟಪಡಿಸುತ್ತಾರೆ. ದ್ರಷ್ಟಾ ಪರೀಕ್ಷಕನ ಈ ಶಬ್ದವು, ದೃಷ್ಟಿಯ ಅನುರಣೆ ಇಡುತ್ತಾ ನಮಗಾಗಿ “ಶ್ರುತಿ” ಎಂದಾಗುತ್ತದೆ. ಅದರಿಂದ ನಾವೇನು ಪ್ರತ್ಯಕ್ಷ ಮಾಡಿಕೊಂಡಿದ್ದೆವೋ ಅದನ್ನೇ ಕೇಳಿಸಿಕೊಳ್ಳುತ್ತೇವೆ. ಅಂದರೆ ಶಬ್ದಗಳಲ್ಲಿ ಅದಕ್ಕಾಗಿ ಯಾವ ದೃಷ್ಟಿ ಇದೆಯೋ, ಅದೇ ನಮಗೆ ಶಬ್ದರೂಪಮಯೀ ಶ್ರುತಿ ಆಗಿದೆ. ಇದೇ ಉಪದೇಶ-ಪರಂಪರೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಅಭಿಯುಕ್ತರು ಹೇಳುತ್ತಾರೆ –

“ಸಾಕ್ಷಾತ್ಕೃತ ಧರ್ಮ್ಮಾಣ ಋಷಯೋ ಬಭೂವುಃ | ತೇ ಅಸಾಕ್ಷಾತ್ಕೃತಧರ್ಮ್ಮಭ್ಯೋಽವರೇಭ್ಯ ಉಪದೇಶೇನ ಮನ್ತ್ರಾನ್ ಸಮ್ಪ್ರಾದುಃ – ‘ದೈವೀಂವಾಚಮುದ್ಯಾಸಮಿತಿ” || ಯಾಸ್ಕನಿರುಕ್ತ ೧೨೦|೨  ||

ದ್ರಷ್ಟನ ಮುಖದಿಂದ ಹೊರಟ ಶಬ್ದವು ದ್ರಷ್ಟನ ದೃಷ್ಟಿಯನ್ನೇ (ಪ್ರತ್ಯಕ್ಷ ದ್ರಷ್ಟ ಅರ್ಥವನ್ನೇ) ತನ್ನ ವಿಷಯ ಮಾಡಿಕೊಳ್ಳುತ್ತದೆ. ಅಲ್ಲಿ ಶಬ್ದ ಹಾಗೂ ಅರ್ಥದ ತಾದಾತ್ಮ್ಯವಿರುತ್ತದೆ ಎಂದು ನಂಬಲಾಗಿದೆ. ಇದೇ ಆಧಾರದಲ್ಲಿ ನಾವು ಈ ದೃಷ್ಟಿಯನ್ನು (ಪ್ರತ್ಯಕ್ಷವನ್ನು) ಶ್ರುತಿ ಎಂದು ಹೇಳುತ್ತೇವೆ. ಪ್ರಕಾರಾನ್ತರದಿಂದ ಹೀಗೆ ತಿಳಿಯಬಹುದು - ಒಂದುವೇಳೆ “ಈ ಶಬ್ದವು ದ್ರಷ್ಟನಿಂದ ಹೇಳಲ್ಪಟ್ಟದ್ದು” ಎಂದು ನಮಗೇನಾದರೂ ದೃಢವಾದರೆ ಈ ಪ್ರತ್ಯಭಿಜ್ಞೆಯ ಅವ್ಯವಹಿತೋತ್ತರ ಕಾಲದಲ್ಲಿಯೇ ಈ ಶಬ್ದದ ಮೇಲೆ ನಮಗೆ ವಿಶ್ವಾಸ ಆಗುತ್ತದೆ. ಆ ಸಮಯದಲ್ಲಿ ನಮಗೆ ಅನ್ಯ ಪ್ರಮಾಣಗಳ ಆವಶ್ಯಕತೆ ಇರುವುದಿಲ್ಲ. ಆಗ ದ್ರಷ್ಟನ ಈ ಶಬ್ದದಿಂದಲೇ ಯಾವುದೇ ವಿಪ್ರತಿಪತ್ತಿ ಇಲ್ಲದೆ ಪ್ರತಿಪಾದ್ಯ ಅರ್ಥವನ್ನು ಪ್ರತ್ಯಕ್ಷವತ್ ಕೇಳಿಸಿಕೊಳ್ಳುತ್ತೇವೆ.

ಆದ್ದರಿಂದ ದ್ರಷ್ಟನ ಈ ಶಬ್ದವು “ಶ್ರುತಿ” ಎಂಬ ನಾಮಧೇಯದಿಂದ ವ್ಯವಹೃತವಾಗುತ್ತದೆ. ಈ ಶ್ರುತಿಯು ಪ್ರತ್ಯಕ್ಷ ಸ್ಥಾನೀಯವಾಗಿದ್ದು, ಇತರೆ ಅಪೇಕ್ಷೆ ಇಟ್ಟುಕೊಳ್ಳುವುದಿಲ್ಲ, ಹಾಗಾಗಿ ಮೀಮಾಂಸವು ಇದಕ್ಕೆ “ನಿರಪೇಕ್ಷೋರವಃ ಶ್ರುತಿಃ” ಎಂಬ ಲಕ್ಷಣವನ್ನು ನೀಡಿದೆ. ಹಾಗಾಗಿ ನಿಷ್ಕರ್ಷ ಏನೆಂದರೆ, ನಾವು ಯಾವ ಶಬ್ದವನ್ನು ದ್ರಷ್ಟನ ಮುಖದಿಂದ ಕೇಳಿಸಿಕೊಳ್ಳುತ್ತೇವೆಯೋ, ಅದು ನಮ್ಮಿಂದ ಶ್ರುತವಾದ ಕಾರಣದಿಂದ “ಶ್ರುತಿ” ಎಂದು ಕರೆಯಲ್ಪಟ್ಟದ್ದಾಗ್ಯೂ ಸ್ವಯಂ ದ್ರಷ್ಟನ ಅಪೇಕ್ಷೆಯಿಂದ (ಶಬ್ದಾರ್ಥಭೇದವ್ಯವಸ್ಥೆಯಿಂದ) ಸಾಕ್ಷಾತ್ ದೃಷ್ಟಿ (ಪ್ರತ್ಯಕ್ಷ) ಎಂದಾಗುತ್ತ, ಜೊತೆಯಲ್ಲಿ ನಮ್ಮ ಆತ್ಮದಲ್ಲಿ ಪ್ರತ್ಯಕ್ಷವತ್ ವಿಶ್ವಾಸೋತ್ಪತ್ತಿಯ ಕಾರಣವಾಗುತ್ತಾ ವ್ಯವಹಾರಕ್ಕಾಗಿ ಶಬ್ದಪ್ರಮಾಣವೆಂದು ಕರೆಯಲ್ಪಟ್ಟದ್ದಾಗ್ಯೂ ವಸ್ತುತಃ “ಪ್ರತ್ಯಕ್ಷಪ್ರಮಾಣ”ವೇ ಆಗಿದೆ. ದ್ರಷ್ಟನ ಪ್ರತ್ಯಕ್ಷ ಅನುಭವವೇ ಅದರ ವಾಕ್ಯವಾಗಿದೆ. ಫಲಿತ ರೂಪದಲ್ಲಿ ಪ್ರತ್ಯಕ್ಷ ಅರ್ಥ, ಹಾಗೂ ತದಭಿನ್ನ ಶಬ್ದಗಳೆರಡೂ ಒಂದೇ ವಸ್ತು ಎಂದಾಗುತ್ತದೆ. “ಶ್ರುತಿ” ಎಂದರೆ ವೇದವೇ ಆಗಿದೆ. ಇದೇ ಶಾಬ್ದೀದೃಷ್ಟಿಯು ಅಂದರೆ ಶಬ್ದ ಪ್ರಮಾಣವು ನಮಗೆ ಪ್ರತ್ಯಕ್ಷ ಪ್ರಮಣವಾಗುತ್ತಾ, ಇತರೆ ಪ್ರಮಾಣಗಳ ಅಪೇಕ್ಷೆ ಇಲ್ಲದಂತಹಾ ಸ್ವತಃ-ಪ್ರಮಾಣವಾಗಿದೆ. ವೇದದ ಸ್ವತಃಪ್ರಾಮಾಣಿಕತೆಯಲ್ಲಿ ನಿಜವಾದ ಭಾರತೀಯರಿಗೆ ಎಂದೂ ಯಾವುದೇ ಸಂದೇಹವಾಗಿಲ್ಲ, ಆಗುವುದೂ ಇಲ್ಲ. ಯಾವ ರೀತಿ ಘಟಪ್ರತ್ಯಕ್ಷದಿಂದ ನಾವು ಘಟಪದಾರ್ಥದ ಮೇಲೆ ಯಾವುದೇ ಸಂದೇಹವಿಲ್ಲದೆ ವಿಶ್ವಾಸ ಇಡುತ್ತೇವೆಯೋ, ಹಾಗೆಯೇ ವೇದದ ಶಬ್ದ-ಶ್ರವಣ ಮಾತ್ರದಿಂದ ತಚ್ಛಬ್ದವಾಚ್ಯ ಅರ್ಥದ ಮೇಲೆ ನಾವು ಪ್ರತ್ಯಕ್ಷವತ್ ವಿಶ್ವಾಸ ಇಡುತ್ತೇವೆ. ಯಾರಾದರೂ ಶ್ರೌತದ ಅರ್ಥವನ್ನು ಕೇಳಿಸಿಕೊಂಡರು ಎಂದು ತಿಳಿಯೋಣ, ಅದನ್ನು ಕೇಳಿಸಿಕೊಂಡ ಶ್ರೋತೃವು ನಮಗೆ ಹೇಳಿದನು ಎಂದುಕೊಳ್ಳೋಣ, ಇಂತಹಾ ದಶೆಯಲ್ಲಿ ಈ ಶ್ರೋತೃವಿನ ವಾಕ್ಯವನ್ನು ನಾವು ಶ್ರುತಿ ಎಂದು ಹೇಳದೆ “ಸ್ಮೃತಿ” ಎಂದು ಹೇಳುತ್ತೇವೆ. ಸ್ಮೃತಿರೂಪೀ ಶಬ್ದವು ಶ್ರುತದ ಅರ್ಥವನ್ನು ಹೇಳುತ್ತದೆಯೇ ಹೊರತು ಅರ್ಥದೃಷ್ಟಿಯ ಪ್ರತಿಪಾದನೆಯನ್ನು ಮಾಡುವುದಿಲ್ಲ. ಈ ಶಬ್ದದಿಂದ ಅರ್ಥದೃಷ್ಟಿಯ ಅನುಮಾನ ಮಾತ್ರ ಮಾಡಬಹುದು. ಹಾಗಾಗಿ ಸ್ಮೃತಿಪ್ರಮಾಣವನ್ನು ಪ್ರತ್ಯಕ್ಷ ಪ್ರಮಾಣ ಎನ್ನದೆ ನಾವು ಅನುಮಾನಪ್ರಮಾಣ ಎಂದು ಹೇಳುತ್ತೇವೆ. ನೋಡುವವರಿಂದ ಕೇಳಿಸಿಕೊಂಡ ಶಬ್ದವು ಶ್ರುತಿಯಾದರೆ, ಕೇಳಿಸಿಕೊಳ್ಳುವವರಿಂದ ನೋಡಲ್ಪಟ್ಟ ಶಬ್ದವು ಸ್ಮೃತಿಯಾಗಿದೆ. ಕೇಳಿಸಿಕೊಳ್ಳುವವನು ಒಂದುವೇಳೆ ನೋಡುವವನಿಂದ ಹೇಳಲ್ಪಟ್ಟ ಶಬ್ದದ ಆಧಾರದಲ್ಲಿ ಮಾತನಾಡಿದರೆ, ಆಗ ಪರಂಪರೆಯಲ್ಲಿ ಇದರಲ್ಲೂ ಪ್ರಾಮಾಣಿಕತೆಯು ಉಂಟಾಗುತ್ತದೆ. ಒಂದುವೇಳೆ ಆತನು ದ್ರಷ್ಟನ ಶಬ್ದದ ವಿರುದ್ಧವಾಗಿ ಏನಾದರೂ ಹೇಳಿದರೆ, ಆಗ ಆತನ ಈ ಅನುಮಾನ ಪ್ರಮಾಣವು ಪ್ರತ್ಯಕ್ಷರೂಪೀ ಶ್ರೌತ ಪ್ರಮಾಣದಿಂದ ಚ್ಯುತವಾಗಿ ಅಪ್ರಮಾಣವಾಗುತ್ತದೆ. “ವಿರೋಧೇತ್ವನಪೇಕ್ಷಂಸ್ಯಾದಸತಿಹ್ಯನುಮಾನಮ್” (ಜೈಮಿನಿ ದರ್ಶನ) ಇದರ ಅನುಸಾರ ಶ್ರುತಿವಿರುದ್ಧವಾದ ಸ್ಮೃತಿಶಬ್ದವು ಅಶಬ್ದವಾಗುತ್ತಾ ಶಬ್ದಪ್ರಮಾಣದ ಕೋಟಿಯಿಂದ ಬಹಿರ್ಭೂತವಾಗುತ್ತದೆ. ಇದೇ ಅಭಿಪ್ರಾಯದಲ್ಲಿ ಮನುವು ಹೇಳುತ್ತಾನೆ –

ಯೋ ವೇದವಾಹ್ಯಾ ಸ್ಮೃತಯೋಯಾಶ್ಚ ಕಾಶ್ಚ ಕುದೃಷ್ಟಯಃ |
ಸರ್ವಾಸ್ತಾನಿಷ್ಫಲಾ ಪ್ರೇತ್ಯ ತಮೋನಿಷ್ಠಾ ಹಿ ತಾಃ ಸ್ಮೃತಾಃ || ಮನು ೧೨|೯೫ ||

ಪ್ರಮಾಣಚತುಷ್ಟಯೀ -

ಈ ರೀತಿ ಪೂರ್ವ ಸಂದರ್ಭದಿಂದ, ಪ್ರತ್ಯಕ್ಷ-ಅನುಮಾನ-ಶಬ್ದ ಎಂಬ ಪೂರ್ವೋಕ್ತ ಈ ಮೂರು ಪ್ರಮಾಣಗಳಲ್ಲಿ ಮೂರನೆಯದಾದ ಶಬ್ದಪ್ರಮಾಣವು, ಕೇವಲ ಅದರದ್ದೇ ಪ್ರತ್ಯಕ್ಷ ಹಾಗೂ ಅನುಮಾನ ಎಂಬ ಭೇದದಿಂದ ಎರಡಾಗುತ್ತದೆ ಎಂದು ಸಿದ್ಧವಾಗುತ್ತದೆ. ‘ಶುತಿ’ ನಾಮಕ ಶಬ್ದವು ದ್ರಷ್ಟನ ದೃಷ್ಟಿಯಿಂದ ಅಭಿನ್ನವಾಗಿದ್ದಾಗ್ಯೂ ‘ಪ್ರತ್ಯಕ್ಷಪ್ರಮಾಣ’ವಾಗಿದೆ. ಹಾಗೇ ಸ್ಮೃತಿರೂಪೀ ಶಬ್ದವು ಶಬ್ದಶ್ರುತಿಯನ್ನು ಮೂಲವಾಗಿಸಿಕೊಳ್ಳುತ್ತಾ, ಪರತಃ ಪ್ರಮಾಣ ಕೋಟಿಯಲ್ಲಿ ಪ್ರವಿಷ್ಟವಾಗುತ್ತಾ ‘ಅನುಮಾನಪ್ರಮಾಣ’ವಾಗಿದೆ. “ಅಪಿ ಸಂರಾಧನೇ ಪ್ರತ್ಯಕ್ಷಾನುಮಾನಾಭ್ಯಾಮ್” (ಬ್ರಹ್ಮಸೂತ್ರ ೩|೨|೨೪) ಇತ್ಯಾದಿ-ಸೂತ್ರ-ವ್ಯಾಖ್ಯಾನಾವಸರದಲ್ಲಿ ಭಗವತ್ಪಾದ ಶಂಕರಾಚಾರ್ಯರು “ಪ್ರತ್ಯಕ್ಷಾನುಮಾನಾಭ್ಯಾಮ್” ಎಂಬುದಕ್ಕೆ “ಶ್ರುತಿಸ್ಮೃತಿಭ್ಯಾಮ್” ಎಂದೇ ಅರ್ಥ ಮಾಡಿದ್ದಾರೆ. ಶ್ರುತಿಯು ಶಾಬ್ದೀದೃಷ್ಟಿಯಾಗಿದೆ, ಸ್ಮೃತಿಯು ಶಾಬ್ದೀತರ್ಕಯುಕ್ತಿ ಆಗಿದೆ. ಇದನ್ನು ಈ ಪ್ರಕರಣ ಆರಂಭದಲ್ಲಿಯೇ ಹೇಳಲಾಗಿದೆ.

ಇದು ಪ್ರತ್ಯಕ್ಷ-ಅನುಮಾನ-ಶಬ್ದ ಎಂಬ ಭೇದ-ಭಿನ್ನತೆಯಿಂದ ಮೂರೂ ಪ್ರಮಾಣಗಳಲ್ಲಿ ಕೇವಲ ಶಬ್ದ ಪ್ರಮಾಣದ ಪರಿಚಯದ ದಿಗ್ದರ್ಶನವು. ಈಗ ಪ್ರತ್ಯಕ್ಷ, ಅನುಮಾನ, ಎಂಬೀ ಎರಡು ಪ್ರಮಾಣಗಳು ಉಳಿದಿವೆ. ಶಬ್ದವಿಲ್ಲದೆ ಚರ್ಮ್ಮಚಕ್ಷುವಿನೊಂದಿಗೆ ಸಂಬಂಧವುಳ್ಳ ಲೌಕಿಕ ಪ್ರತ್ಯಕ್ಷವನ್ನೇ ಪ್ರತ್ಯಕ್ಷವೆಂದು; ಶಬ್ದವಿಲ್ಲದೆ (ಪ್ರತ್ಯಕ್ಷಮೂಲಕ) ವಿಶುದ್ಧ ತರ್ಕವಾದವು ಅನುಮಾನ ಎನ್ನಿಸಿಕೊಳ್ಳುತ್ತದೆ. ಚಾಕ್ಷುಷ-ಜ್ಞಾನರೂಪೀ ದೃಷ್ಟಿಯು ಅಶಾಬ್ದೀ ದೃಷ್ಟಿಯೇ ಆಗಿದ್ದು ಲೌಕಿಕ-ಪ್ರತ್ಯಕ್ಷಪ್ರಮಾಣವಾಗಿದೆ, ಅಶಾಬ್ದೀ ಯುಕ್ತಿಯೇ ಲೌಕಿಕ -ಅನುಮಾನಪ್ರಮಾಣವಾಗಿದೆ. ಈ ರೀತಿ ಶಬ್ದಪ್ರಮಾಣದ ಎರಡು ವಿಧಗಳಿಂದ ಮೂರು ಸ್ಥಾನವಿರುವಲ್ಲಿ ನಾಲ್ಕು ಪ್ರಮಾಣಗಳಾಗುತ್ತವೆ. ಶ್ರೋತುರ್ವಾಕ್ಯಂ ಸ್ಮೃತಿಃ – ಅಂದರೆ ಸ್ಮೃತಿಯು ಸ್ವಯಂ ಶಾಸ್ತ್ರೀಯ ತರ್ಕಮೂಲದ್ದು. ಅಲ್ಲಿ ಧರ್ಮ್ಮವು ಸ್ಮೃತಿಮೂಲದ್ದಾಗಿರುತ್ತದೆ. ಹಾಗೇ ಧರ್ಮ್ಮನಿರ್ಣಯದಲ್ಲಿ ಈ ಶಾಸ್ತ್ರೀಯ ತರ್ಕವನ್ನೇ ಪ್ರಧಾನವಾಗಿ ಒಪ್ಪಲಾಗಿದೆ. ಅದಕ್ಕೆ ಸ್ಮೃತಿ ವಾಕ್ಯವೇ ಇದೆ –

ಆರ್ಷಂ ಧರ್ಮ್ಮೋಪದೇಶಂ ಚ ವೇದಶಾಸ್ತ್ರಾವಿರೋಧಿನಾ |
ಯಸ್ತರ್ಕೇಣಾನುಸಂಧತ್ತೇ ಸ ಧರ್ಮ್ಮಂ ವೇದ ನೇತರಃ || (ಮನುಃ)

ವೃದ್ಧವ್ಯವಹಾರದ ಪ್ರಾಮಾಣಿಕತೆ

ಚಾಕ್ಷುಷದೃಷ್ಟಿಯಿಂದ ದೃಷ್ಟ ಭೌತಿಕ ವಿಶ್ವದ ಸಂಚಲನೆಯು ಯಾವುದೋ ಅದೃಶ್ಯ ಶಕ್ತಿಯ ಆಧಾರದ ಮೇಲೆಯೀ ಇದೆ; ಈ ವಿಷಯವು ನಿರ್ವಿವಾದ. ಇದೇ ಅದೃಶ್ಯ ಶಕ್ತಿ, ಅಂದರೆ ಶಕ್ತಿಮಾನ್ ಪುರುಷನು “ಅನ್ತರ್ಯ್ಯಾಮೀ” ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಅನ್ತರ್ಯ್ಯಾಮೀ ಶಾಸ್ತಾ ಪುರುಷನ ಆ ಅದೃಶ್ಯ ಲೋಕವೇ ‘ಪರಲೋಕ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಪರಲೋಕವೇ ಇಹಲೋಕದ ಪ್ರತಿಷ್ಠೆಯಾಗಿದೆ. ಯಾವ ಮಹಾಪುರುಷರು ಶ್ರುತಿ ಸ್ಮೃತಿಗಳಿಂದ ಈ ಅದೃಶ್ಯ ಜಗತ್ತಿನ ಸ್ವರೂಪವನ್ನು ನಮ್ಮ ಮುಂದೆ ಇರಿಸುವ ಅನುಗ್ರಹ ಮಾಡಿರುವರೋ, ಅದನ್ನು ಅಭಿನಿವೇಶದಲ್ಲಿ ಓದಿಕೊಂಡು ನಾವು ಅಪೇಕ್ಷಾವೃತ್ತಿಯಲ್ಲಿರಿಸಿದರೆ, ನಮಗೆ ಅದಕ್ಕಿಂತ ದೊಡ್ಡದಾದ ಅಹಿತವು ಇನ್ನೇನಿರಲು ಸಾಧ್ಯ? ಅವಶ್ಯವಾಗಿ ಆತ್ಮ-ಪರಮಾತ್ಮ-ಪರಲೋಕ-ಆತ್ಮಗತಿ-ಶ್ರಾದ್ಧಕರ್ಮ್ಮ- ಇತ್ಯಾದಿ ಇನ್ದ್ರಿಯಾತೀತ ವಿಷಯಗಳ ಸಂಬಂಧದಲ್ಲಿ ನಮಗೆ ಶ್ರುತಿ ಸ್ಮೃತಿಯ ಅನುಗಮನ ಮಾಡಬೇಕು. ಸ್ವಲ್ಪ ಸಮಯ ನಾವು ಪಾರಲೌಕಿಕ ವಿಷಯಗಳನ್ನು ಬಿಡೋಣ. ಲೌಕಿಕ ಶಬ್ದ ಪ್ರಮಾಣರೂಪೀ ಪ್ರತ್ಯಕ್ಷದ ಹೊರತು ಹಾಗೂ ಯುಕ್ತಿರೂಪೀ ಅನುಮಾನ ಪ್ರಮಾಣದ ಲೌಕಿಕ ವ್ಯವಹಾರಗಳ ಸಂಚಲನವಾಗುವುದಿಲ್ಲ. ನೀವು ಸಂತೆಗೆ ಹೋಗಿ, ಕೇವಲ ವೃದ್ಧವ್ಯವಹಾರದ ಆಧಾರದಲ್ಲಿ ಆಯಾಯ ಅಭಿಲಷಿತ ವಸ್ತುಗಳನ್ನು ಕ್ರಯ ಮಾಡುತ್ತೀರಿ. ನಾವು ನಿಮಗೆ ಕೇಳುವುದೇನೆಂದರೆ, ನೀವು ಎಂದಿಗಾದರೂ ಜೋಳ-ಸಾಮೆ-ಗೋದಿ-ಉದ್ದು-ಘೃತ-ಅಕ್ಕಿ- ಇತ್ಯಾದಿ ಅನ್ನಗಳ ಪೂರ್ಣ ಪರೀಕ್ಷೆ ಮಾಡಿಯೇ ಇದು ಇಂತಹದ್ದೆಂದು ನಿಶ್ಚಯ ಮಾಡುತ್ತೀರೋ? ಒಂದುವೇಳೆ ಪರೀಕ್ಷೆ ಮಾಡಿಲ್ಲವೆಂದರೆ, ನೀವು (ಪರೀಕ್ಷೆ ಮಾಡದೆ) ಇದು ಅಕ್ಕಿ, ಇದು ಜೋಳ, ಇದು ರಾಗಿ, ಇತ್ಯಾದಿಯಾಗಿ ವಿಶ್ವಾಸವನ್ನು ಯಾವ ಆಧಾರದಲ್ಲಿ ಮಾಡುತ್ತೀರಿ? ಜೊತೆಯಲ್ಲಿ ಇಂತಹಾ ಅನ್ನದಲ್ಲಿ ಇಂತಹಾ ಗುಣವಿದೆ, ಇಂತಹದ್ದರಲ್ಲಿ ಇಂತಹಾ ಗುಣವಿದೆ – ಎಂದು ವಿಶ್ವಾಸ ಹೇಗೆ ಮಾಡುತ್ತೀರಿ? ಓರ್ವ ವೈಧ್ಯನು ನಿಮಗೆ ಶುಂಠಿ, ಕಾಳುಮೆಣಸು, ಹಿಪ್ಪಲಿಯ ಕ್ವಾಥದ ಔಷಧಪತ್ರ ಬರೆದು ಕೊಡುತ್ತಾರೆ. ಅಥವಾ ಈಗಿನ ಡಾಕ್ಟರು ನಿಮಗೆ ಅರ್ಥವೇ ಆಗದ ಭಾಷೆಯ, ಗೊತ್ತೇ ಇಲ್ಲದ ರಾಸಾಯನಿಕವುಳ್ಳ ಮಾತ್ರೆಗಳಗಳನ್ನು ಬರೆದು ಕೊಡುತ್ತಾರೆ. ನೀವು ಒಂದು ಔಷಧಾಲಯಕ್ಕೆ (ಪನ್ಸಾರೀ) ಹೋಗುತ್ತೀರಿ. ನೀವು ನಿಮ್ಮ ಸಾಮಾನ್ಯ ಜ್ಞಾನದಿಂದ ಔಷಧ ವ್ಯಾಪಾರಿಯು ಅಯೋಗ್ಯನೆಂದು ತಿಳಿಯುತ್ತೀರ ಎಂದುಕೊಳ್ಳಿ, ಆದರೂ ಕೇವಲ ಒಂದು ರೀತಿಯ ಅಂಧವಿಶ್ವಾಸದಿಂದಲೇ ಆತನಿಂದ ಕೊಡಲ್ಪಟ್ಟ ವಸ್ತುಗಳನ್ನು ಶುಂಠಿ-ಮೆಣಸು ಅಥವಾ ಅಸಿಟಮಿನೋಫಿನ್-ಫೀನೈಲ್ಫ್ರಿನ್-ಡಿಫಿನೈಡ್ರಮಿನ್ (ಶೀತ ಮಾತ್ರೆಯ ಸಂಕೀರ್ಣ) ಇತ್ಯಾದಿ ಎಂದು ನಂಬಿ ನೀವು ಸಂತುಷ್ಟರಾಗುತ್ತೀರಿ. ಆಯಾ ವಿಷಯದಲ್ಲಿ ಪರಿಣತಿ ಹೊಂದಿರದ ನೀವು ಎಂದಿಗಾದರೂ ಈ ಔಷಧಿಗಳನ್ನು ಪರೀಕ್ಷಿದಿದ್ದೀರಾ? ಇಲ್ಲವೆಂದರೆ, ಅದನ್ನು ಹೇಗೆ ನಂಬಿದಿರಿ? ಈ ಎಲ್ಲಾ ಪ್ರಶ್ನೆಗಳ ಸಮಾಧಾನಕ್ಕಾಗಿ ಪ್ರತ್ಯಕ್ಷಕರ್ತ್ತಾ ಆಚಾರ್ಯರ ಶಬ್ದೋಪದೇಶದ ಹೊರತು ನಿಮ್ಮ ಹತ್ತಿರ ಇನ್ಯಾವುದೇ ಸಮಾಧಾನ ಇರುವುದಿಲ್ಲ. ವೃದ್ಧವ್ಯವಹಾರವೆಂದರೆ, ಪ್ರತ್ಯಕ್ಷಕರ್ತ್ತರಾದ ವೃದ್ಧರ ಶಬ್ದಾದೇಶವೇ ನಿಮ್ಮ ನಂಬಿಕೆಗೆ ಪರ್ಯಾಪ್ತವು.

ಒಂದುವೇಳೆ ದುರ್ಭಾಗ್ಯವಶ ನೀವು – “ನಾನು ಪರೀಕ್ಷಿಸದೆ, ಪ್ರತ್ಯಕ್ಷಗೊಳಿಸಿಕೊಳ್ಳದೆ ನಂಬುವುದಿಲ್ಲ” ಎಂಬ ದುರಾಗ್ರಹಕ್ಕೆ ಬಿದ್ದರೆ ಉನ್ನತಿಯ ಕಥೆ ಹಾಗಿರಲಿ ಎಂದಿಗೂ ಜೀವನವು ಸಂಕಟದಲ್ಲಿಯೇ ಬಿದ್ದಿರುತ್ತದೆ. ಬಾಧ್ಯರಾಗಿ ನಿಮಗೆ ಶಬ್ದಪ್ರಮಾಣದ ಆಶ್ರಯ ಪಡೆಯಬೇಕಾಗುತ್ತದೆ. ಯಾವ ರೀತಿ ಲೌಕಿಕ ದೃಷ್ಟಾರ್ಥ ವಿಷಯಗಳ ಸಂಬಂಧದಲ್ಲಿ ನೀವು ಸ್ವಯಂ ಪ್ರತ್ಯಕ್ಷಗೊಳಿಸಿಕೊಳ್ಳದೆಯೋ ಪ್ರತ್ಯಕ್ಷಕರ್ತ್ತಾ ವೃದ್ಧರ ಶಬ್ದಾದೇಶದ ಮೇಲೆ ವಿಶ್ವಾಸವಿಟ್ಟು ಆಯಾಯ ಲೌಕಿಕ ವ್ಯವಹಾರಗಳಲ್ಲಿ ಪ್ರವೃತ್ತರಾಗುತ್ತೀರೋ, ಅದರಂತೆಯೇ ನಿಮಗೆ ಅಲೌಕಿಕ ಅದ್ರುಷ್ಟಾರ್ಥ ವಿಷಯಗಳ ಸಂಬಂಧದಲ್ಲಿ ಸ್ವಯಂ ಅವುಗಳ ಪ್ರತ್ಯಕ್ಷ ಮಾಡಿಕೊಳ್ಳಲಾಗದಿದ್ದರೂ ಪ್ರತ್ಯಕ್ಷಕರ್ತ್ತಾ ಋಷಿಗಳ ಶಬ್ದಾದೇಶರೂಪೀ ಶ್ರುತಿ-ಸ್ಮೃತಿ ಶಾಸ್ತ್ರ ಪ್ರಾಮಾಣ್ಯದ ಮೇಲೆ ಎಂದಿಗೂ ಅವಿಶ್ವಾಸ ಮಾಡಬಾರದು. ಒಂದುವೇಳೆ ನೀವು – “ನಮಗೆ ಬೇಕಾದರೆ ದೃಷ್ಟರ್ಥಗಳ ಪ್ರತ್ಯಕ್ಷ ಮಾಡಿಕೊಳ್ಳುತ್ತೇವೆ” ಎಂದು ನುಡಿದರೆ, ಆಗ ನಾವು ಹೇಳುತ್ತೇವೆ – “ಇದು ನಮಗೆ ಇಷ್ಟಾಪತ್ತಿಯಾದದ್ದು”. ಪ್ರಯಾಸ ಪಟ್ಟರೆ ನೀವು ಏನನ್ನೂ ಮಾಡಲು ಸಾಧ್ಯವಲ್ಲವೇ? ಒಂದುವೇಳೆ ವಿಶ್ವವಿಧ್ಯಾಲಯಗಳಲ್ಲಿ ಅಧ್ಯಯನದ ಪರಿಶ್ರಮದಿಂದ ನೀವು ಔಷಧಿಗಳ ಪರೀಕ್ಷೆ ಮಾಡುತ್ತೀರೆಂದರೆ – ಸತ್ಯಭಾಷಣ, ಬ್ರಹ್ಮಚರ್ಯ-ಅಹಿಂಸಾ-ವೇದಾನುಪಾಲನ-ಶ್ರದ್ಧಾ-ಉಪನಿಷತ್- ಇತ್ಯಾದಿ ಉಪಾಯಗಳಿಂದ ಚಿರಕಾಲದ ತಪಶ್ಚರ್ಯೆಯಿಂದ ಉತ್ಪನ್ನ ಯೋಗಜದ್ರುಷ್ಟಿಯಿಂದ ನೀವು ಆ ಅಲೌಕಿಕ ಅದ್ರುಷ್ಟಾರ್ಥಗಳನ್ನೂ ಪ್ರತ್ಯಕ್ಷಗೊಳಿಸಿಕೊಳ್ಳಬಹುದು. ಎರಡೂ ಜಾಗದಲ್ಲಿ ಸಮಾನ ಪ್ರಶ್ನೆ ಇದೆ, ಸಮಾನ ಸಮಾಧಾನವಿದೆ. ಆದರೆ ದುರಾಗ್ರಹವೆಂಬ ಏಕಮಾತ್ರ ರೋಗಕ್ಕೆ ಚಿಕಿತ್ಸೆಯು ಇಹಲೋಕದಲ್ಲಾಗಲೀ ಪರಲೋಕದಲ್ಲಾಗಲ್ಲಿ ಇಲ್ಲವೇ ಇಲ್ಲ – “ನತು ಪ್ರತಿನಿವಿಷ್ಟ ಮೂರ್ಖಜನ ಚಿತ್ತಮಾರಾಧಯೇತ್” |

ಶ್ರಾದ್ಧಕರ್ಮ್ಮಾನುಗತ ಪ್ರಾಮಾಣ್ಯವಾದ-

ಶ್ರಾದ್ಧ-ಕರ್ಮ್ಮಕ್ಕೆ ಆತ್ಮದ ಸಂಬಂಧವಿದೆ, ಪಿತರ-ಪ್ರಾಣದ ಸಂಬಂಧವಿದೆ, ಶ್ರದ್ಧಾಸೂತ್ರದ ಸಂಬಂಧವಿದೆ, ಪರಲೋಕದ ಸಂಬಂಧವಿದೆ. ಇವೆಲ್ಲವೂ ಅದೃಷ್ಟಾರ್ಥಗಳು. ಫಲಿತಾಂಶವೇನೆಂದರೆ ಇವುಗಳ ಸಂಬಂಧದಲ್ಲಿ ಶಬ್ದ ಪ್ರಮಾಣವು ಸರ್ವಥಾ ಆವಶ್ಯಕವಾಗುತ್ತದೆ. ಕೇವಲ ತರ್ಕವಾದದ ಮೇಲೆ, ಅಥವಾ (ಕೆಲ ಮಹಾನುಭಾವರ ದೃಷ್ಟಿಯಲ್ಲಿ ಕಲ್ಪನಾಪ್ರಧಾನ, ಹಾಗೇ ಪ್ರಮಾಣಕೋಟಿಯಿಂದ ಬಹಿಷ್ಕೃತ) ಪುರಾಣ ತಂತ್ರ-ನಿಬಂಧ ಇತ್ಯಾದಿ ಕಲ್ಪಿತ ಪ್ರಮಾಣಗಳ ಆಧಾರದಲ್ಲಿ ಶ್ರಾದ್ಧಕರ್ಮ್ಮವನ್ನು ವಿಶ್ವಸ್ತ ಕರ್ಮ್ಮವೆಂದು ನಂಬಲಾಗುವುದಿಲ್ಲ.  ಇದರ ಪ್ರಾಮಾಣಿಕತೆಗಾಗಿ ಶ್ರುತಿಸ್ಮೃತಿ ಪ್ರಮಾಣ, ಅದರಲ್ಲೂ ಪ್ರಧಾನವಾಗಿ ಶ್ರುತಿ-ಪ್ರಮಾಣ, ಅದರಲ್ಲೂ ವಿಶೇಷವಾಗಿ ಶ್ರುತಿಯ ಸಂಹಿತಾ ಭಾಗದ ಪ್ರಮಾಣವು ಅಪೇಕ್ಷಿತವಾಗಿದೆ. ‘ಶಬ್ದ ಪ್ರಮಾಣಕಾ ವಯಂ ಯದಸ್ಮಾಕಂ ಶಬ್ದ ಆಹ, ತದಸ್ಮಾಕಂ ಪ್ರಮಾಣಂ”. ಈಗ ಶ್ರುತಿ-ಸ್ಮೃತಿಗಳಲ್ಲಿ, ವಿಶೇಷತಃ ಶ್ರುತಿಯಲ್ಲಿ ಶ್ರಾದ್ಧಕರ್ಮ್ಮವನ್ನು ಶಾಸ್ತ್ರೀಯ ಕರ್ಮ್ಮವೆಂದು ಸಿದ್ಧಪಡಿಸುವ ದೃಢ-ದೃಢತರ-ದೃಢತಮ ಪ್ರಮಾಣವು ಉಪಲಬ್ಧವಿದೆಯೋ ಇಲ್ಲವೋ ಎಂದು ನೋಡೋಣ.

ಆತ್ಮವಿಜ್ಞಾನೋಪನಿಷತ್ತಿನ ಅಧ್ಯಾತ್ಮಸಂಸ್ಥಾದಲ್ಲಿ ಪುರುಷ-ಅವ್ಯಕ್ತ-ಯಜ್ಞ ಇತ್ಯಾದಿ ಭೇದಗಳಿಂದ ಆತ್ಮವಿವರ್ತ್ತವನ್ನು ಅನೇಕ ಭಾಗಗಳಲ್ಲಿ ವಿವರಿಸಲಾಗಿದೆ. ಈ ಎಲ್ಲಾ ಖಣ್ಡಾತ್ಮಗಳಲ್ಲಿ ಶ್ರಾದ್ಧಕರ್ಮ್ಮದ ಸಂಬಂಧವು ಏಕಮಾತ್ರ ಪ್ರಜ್ಞಾನಾತ್ಮಗರ್ಭಿತ ಮಹಾನಾತ್ಮಾ (ದೈವಿಕಾಂಶ) ಎಂಬುದರೊಂದಿಗೆ ಬೆಸೆದಿದೆ. ಈ ಚಾಂದ್ರ ಮಹಾನಾತ್ಮವು ಪಿತೃಪ್ರಾಣಮಯವಾಗಿದೆ. ಶ್ರಾದ್ಧದಿಂದ ಮಹಾನಾತ್ಮದಲ್ಲಿ ಪ್ರತಿಷ್ಠಿತ ಪ್ರೇತ ಪಿತರರಿಗೆ ‘ಸ್ವಧಾ’ ದ್ರವ್ಯದಿಂದ ತೃಪ್ತಿಗೊಳಿಸಲಾಗುತ್ತದೆ. ಸ್ವಧಾನ್ನದಿಂದ ತೃಪ್ತ ಪಿತರರು ಸ್ವವಂಶದಲ್ಲಿ ಪ್ರಜಾತಂತುವನ್ನು ಸಮ್ಯಕ್ರೂಪದಿಂದ (ಸಂತಾನ ರೂಪದಿಂದ) ನಿರಂತರಗೊಳಿಸುತ್ತಾರೆ, ಇದೇ ಈ ಕರ್ಮ್ಮದ ಪ್ರಧಾನ ಫಲವಾಗಿದೆ. ಆತ್ಮಸ್ವರೂಪದ ನಿರೂಪಣೆಯ ನಂತರ ನಮ್ಮ ಅವಶ್ಯಕ ಕರ್ತ್ತವ್ಯವೆಂದರೆ ಪಿತರಪ್ರಾಣದ ವೈಜ್ಞಾನಿಕ ಸ್ವರೂಪವನ್ನು ಓದುಗರ ಸಮ್ಮುಖದಲ್ಲಿ ಇಡುವುದು.

ಹೇಗೆ ಶೃತಿಗಳಲ್ಲಿಆತ್ಮಶಬ್ದವು ಜಟಿಲವಾಗಿದೆಯೋ, ಹಾಗೇಪಿತರಶಬ್ದವೂ ಸರ್ವಥಾ ಮೀಮಾಂಸ್ಯವಾಗಿದೆ. ವಿಚಾರ ಸಾಗರದ ಅಂತಸ್ತಲಕ್ಕೆ ತಲುಪಿದ ಶ್ರೌತತತ್ವವೇತ್ತಾರ ವಿದ್ವಾಂಸರು ಒಂದುವೇಳೆ ಮಂತ್ರಬ್ರಾಹ್ಮಣಾತ್ಮಕ ವೇದದ ಪಿತರ ಶಬ್ದದ ಮೇಲೆ ದೃಷ್ಟಿ ಹಾಯಿಸಿದರೆ ಪಿತರ ಶಬ್ದವು ವಾಸ್ತವದಲ್ಲಿ ಯಾವುದೇ ಗುಹಾನಿಹಿತ ರಹಸ್ಯದೊಂದಿಗೆ ಸಂಬಂಧಿಸಿದೆ ಎಂದು ಒಪ್ಪಲು ಯಾವುದೇ ಆಪತ್ತಿ ಇರುವುದಿಲ್ಲ. ಶೃತಿಯಲ್ಲಿ ಪಿತರ ಶಬ್ದವು ಕನಿಷ್ಠ ೩೦ ರೀತಿಯಲ್ಲಿ ಅನೇಕ ಭಾವಗಳಲ್ಲಿ ಪ್ರಯುಕ್ತವಾಗಿದೆ:

. ಅಗ್ನಿ
. ಸೋಮ
. ಋತು

. ಸಂವತ್ಸರ
. ವಿಟ್
. ಮಾಸ

. ಔಷಧಿ
. ಯಮ
. ಅಪರಾಹ್ನ

೧೦. ಕೂಪ
೧೧. ನೀವಿ
೧೨. ಮಘಾ

೧೩. ಮನ
೧೪. ಹ್ಲೀಕ
೧೫. ಊಷ್ಮಾ

೧೬. ಊಮ
೧೭. ಊರ್ವ
೧೮. ಕಾವ್ಯ

೧೯. ದೇವ
೨೦. ಪ್ರಾಣ
೨೧. ರಾತ್ರಿ

೨೨. ಅವಾಂತರ ದಿಶಾಃ
೨೩. ತಿರ
೨೪. ಸುಪ್ತಭಾವ

೨೫. ಅಗ್ನಿಯಿಂದ ಭುಂಜಿಸಲ್ಪಡುವ ತತ್ವ
೨೬. ಮರ್ತ್ಯ ತತ್ವ
೨೭. ಪ್ರಜಾಪತಿ

೨೮. ಗೃಹಪತಿ
೨೯. ವಾಕ್ ಮನದ ಸಮುಚ್ಚಯ
೩೦. ಅನ್ನ

ಜೀವಿತ ಪಿತಾ ಪಿತಾಮಹಾದಿಗಳೂ ಪಿತರ ಎಂದು ಕರೆಯಲ್ಪಡುತ್ತಾರೆ. ಏಕೆಂದರೆ ಪುತ್ರಾಸೋ ಯತ್ರ ಪಿತರೋ ಭವಂತಿ ಎಂಬಲ್ಲಿ ಪಿತಾ ಶಬ್ದವು ಜೀವಿತ (ಶರೀರ) ಭಾವದ ಅನುಗ್ರಾಹಕವಾಗಿದೆ. ಇವೆಲ್ಲವನ್ನು ಒಪ್ಪಿದ ನಂತರವೂ ಸರ್ವಥಾ ನಿಃಸಂದಿಗ್ಧ ವಿಷಯವೇನೆಂದರೆ ಯಾವ ಪಿತರರನ್ನು ಶ್ರಾದ್ಧ ವಿಧಾನವಿದೆಯೋ ಅವರು ಪ್ರೇತ-ಪಿತರರು. ಇದನ್ನು ಮುಂದಿನ ಪ್ರಕರಣಗಳಲ್ಲಿ ಸ್ಪಷ್ಟ ಪಡಿಸಲಾಗುತ್ತದೆ. ಪ್ರಥಮ ಸಂಹಿತಾ ಭಾಗದಲ್ಲಿ ಉಪಾತ್ತ ಪಿತರ-ತತ್ವದ ಸಾಕ್ಷಾತ್ಕಾರ ಮಾಡಿಕೊಳ್ಳಿ. ಜೊತೆಯಲ್ಲಿ ಮೀಮಾಂಸಾ-ಸಮ್ಮತ ಅರ್ಥಸಂತಿ-ವಿಷಯಕ ನಿಯಮಾನುಸಾರ ಯಾವುದೇ ಪಕ್ಷಪಾತವಿಲ್ಲದೆ ಪಿತೃಗಳ ಅರ್ಥವೇನು ಎಂದು ವಿಚಾರ ಮಾಡಿರಿ.

ಈ ಲೇಖನದ ಮುಂದಿನ ಭಾಗವಾದ ವೇದಸಂಹಿತೋಕ್ತಪ್ರಾಮಾಣ್ಯವಾದವು ಕೆಳಕಂಡ ಕೊಂಡಿಯಲ್ಲಿ ಲಭ್ಯವಿದೆ:- 


- ಹೇಮಂತ್ ಕುಮಾರ್ ಜಿ