Wednesday, 31 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ರೇತ-ಯೋನಿ-ರೇತೋಧಾ (೧೦)

೧೦. ರೇತ-ಯೋನಿ-ರೇತೋಧಾ-

ಪ್ರತಿಯೊಂದು ವಸ್ತುವಿನ ಉತ್ಪತ್ತಿಯಲ್ಲಿ ‘ರೇತ-ಯೋನಿ-ರೇತೋಧಾ’ ಎಂಬ ಹೆಸರಿನ ೩ ಸಾಧನಗಳು ಅಪೇಕ್ಷಿತವೆಂದು ನಂಬಲಾಗಿದೆ. ಯಾವ ದ್ರವ್ಯವು ವಸ್ತುಸ್ವರೂಪದ ಉಪಾದಾನ ಕಾರಣವಾಗುತ್ತದೆಯೋ, ಸ್ವರೂಪ ಸಮರ್ಪಕವಾಗುತ್ತದೆಯೋ, ಅದನ್ನು ‘ರೇತ’ ಎಂದು ಕರೆಯಲಾಗಿದೆ. ಯಾವ ಸ್ಥಾನದಲ್ಲಿ ಪ್ರತಿಷ್ಠಿತವಾಗಿ ಈ ರೇತೋದ್ರವ್ಯವು ವಸ್ತುಸ್ವರೂಪದಲ್ಲಿ ಪರಿಣತವಾಗುತ್ತದೆಯೋ, ಆ ಸ್ಥಾನವು ‘ಯೋನಿ’ ಎಂದು ಕರೆಯಲ್ಪಡುತ್ತದೆ. ಹಾಗೂ ಯೋನಿಯಲ್ಲಿ ರೇತವು ಪ್ರತಿಷ್ಠಿತಗೊಳಿಸುವ ನಿಮಿತ್ತಕಾರಣವಿಶೇಷವೇ ‘ರೇತೋಧಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಪ್ರಜಾಪತಿಯಿಂದ ವಿಹಿತ ಉಪರ್ಯುಕ್ತ ರೇತಃಸೃಷ್ಟಿ-ಪ್ರಕ್ರಿಯೆಯಲ್ಲಿ ಈ ಮೂರೂ ಉಪಕರಣಗಳು ವಿದ್ಯಮಾನವಾಗಿವೆ.

(೧) – ಸಾವಿತ್ರಾಗ್ನಿ ‘ಯೋನಿ’ ಆಗಿದೆ, ಭೃಗ್ವಙ್ಗಿರೋಮಯ ಪಾರಮೇಷ್ಠ್ಯರಸವು ‘ರೇತ’ ಆಗಿದೆ, ‘ಮಾತರಿಶ್ವಾ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಪಾರಮೇಷ್ಠ್ಯ ಭಾರ್ಗವ ವಾಯುವು ‘ರೇತೋಧಾ’ ಆಗಿದೆ. ಮೂರರ ಸಮನ್ವಯದಿಂದ ಮೊದಲ ‘ದೇವಸೃಷ್ಟಿ’ಯ ವಿಕಾಸವಾಗಿದೆ.

(೨) – ಪರ್ಜನ್ಯಾಗ್ನಿಯು ‘ಯೋನಿ’ ಆಗಿದೆ, ಸೌರಮಣ್ಡಲಸ್ಥ ದೇವಪ್ರಾಣಗರ್ಭಿತ ‘ಶ್ರದ್ಧಾ’ ಎಂಬ ಹೆಸರಿನ ಚಾನ್ದ್ರಸೋಮವು ‘ರೇತ’ ಆಗಿದೆ, ಆನ್ತರಿಷ್ಯ ‘ಪಾವಕ’ ಎಂಬ ಹೆಸರಿನ ವಾಯುವಿಶೇಷವು ‘ರೇತೋಧಾ’ ಆಗಿದೆ, ಮೂರರ ಸಮನ್ವಯದಿಂದ ‘ವೃಷ್ಟಿಸೃಷ್ಟಿ’ಯ ಸ್ವರೂಪವು ಸಮ್ಪನ್ನವಾಗಿದೆ.

(೩) – ಪಾರ್ಥಿವ ಉಖ್ಯಾಗ್ನಿ (ಗಾಯತ್ರಾಗ್ನಿ) ‘ಯೋನಿ’ ಆಗಿದೆ, ಆಪೋಮಯ ವೃಷ್ಟಿಸೋಮವು ‘ರೇತ’ ಆಗಿದೆ, ಪಾರ್ಥಿವ ‘ಪವಮಾನ’ ಎಂಬ ಹೆಸರಿನ ವಾಯುವಿಶೇಷವು ‘ರೇತೋಧಾ’ ಆಗಿದೆ, ಮೂರರ ಸಮನ್ವಯದಿಂದ ‘ಓಷಧಿಸೃಷ್ಟಿ’ ಆಗಿದೆ.

(೪) – ಆಲೋಮಭ್ಯಃ, ಆನಖಾಗ್ರೇಭ್ಯಃ, ವ್ಯಾಪ್ತ ಪುರುಷಶರೀರಾವಚ್ಛಿನ್ನ ವೈಶ್ವಾನರಾಗ್ನಿಯು ‘ಯೋನಿ’ ಆಗಿದೆ, ಭುಕ್ತ ಅನ್ನಸೋಮವು ‘ರೇತ’ ಆಗಿದೆ, ಅಶನಾಯಾ ಸೂತ್ರಾತ್ಮಕ ಪ್ರಾಣವಾಯುವು ‘ರೇತೋಧಾ’ ಆಗಿದೆ, ಮೂರರ ಸಮನ್ವಯದಿಂದ ‘ಶುಕ್ರಸೃಷ್ಟಿ’ ಆಗಿದೆ.

(೫) – ಸ್ತ್ರೀಯ ಗರ್ಭಾಶಯದಲ್ಲಿ ಪ್ರತಿಷ್ಠಿತ ಅಙ್ಗಿರಾಪ್ರಾಣಘನ ಶೋಣಿತಾಗ್ನಿಯು ‘ಯೋನಿ’ ಆಗಿದೆ, ಪುರುಷಶರೀರದಲ್ಲಿ ಪ್ರತಿಷ್ಠಿತ ಸೌಮ್ಯಶುಕ್ರವು ‘ರೇತ’ ಆಗಿದೆ, ನಾಭಾನೇದಿಷ್ಠ-ಬಾಲಖಿಲ್ಯಾ-ವೃಷಾಕಪಿ, ಎಂಬ ಹೆಸರಿನ ಗರ್ಭಸ್ವರೂಪ-ಸಮ್ಪಾದಕ ಪ್ರಾಣ ವಿಶೇಷಗಳ ಆಧಾರಭೂಮಿಯು ‘ಏವಯಾಮರುತ್’ ಎಂಬ ಹೆಸರಿನ ವಾಯುವಿಶೇಷವು ‘ರೇತೋಧಾ’ ಆಗಿದೆ, ಮೂರರ ಸಮನ್ವಯದಿಂದ ‘ಪ್ರಜಾಸೃಷ್ಟಿ’ಯ ಸ್ವರೂಪವು ಉತ್ಪನ್ನವಾಗಿದೆ.


ರೇತ-ಯೋನಿ-ರೇತೋಧಾ ವಿವರ್ತ್ತ ಪಂಚಕ -ಪರಿಲೇಖಃ


ಮುಂದಿನ ಲೇಖನದಲ್ಲಿ  ೧೧. ಕೌಷೀತಕಿಯ ‘ವಿಚಕ್ಷಣ’ ತತ್ತ್ವ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Monday, 29 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಕರ್ಮ್ಮಾತ್ಮದ ಮೂರು ಜನ್ಮ (೯)

೯. ಕರ್ಮ್ಮಾತ್ಮದ ಮೂರು ಜನ್ಮ –

ಅನ್ತರ್ಯ್ಯಾಮ ಸಮ್ಬನ್ಧದಿಂದ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತವಾಗುವ ಕರ್ಮ್ಮಾತ್ಮಕ್ಕೆ ಐದು ಜನ್ಮ ಉಂಟಾಗುತ್ತದೆ ಎಂದು ಹಿಂದೆಯೇ ಹೇಳಲಾಗಿದೆ. ಮಹರ್ಷಿ ಐತರೇಯರು ಮೂರು ಜನ್ಮಭಾವಗಳನ್ನೇ ಪ್ರಧಾನ ಎಂದು ಪರಿಗಣಿಸಿದ್ದಾರೆ.  ಅನ್ನದಿಂದ ಪುರುಷನ ಶುಕ್ರದಲ್ಲಿ ಪ್ರತಿಷ್ಠಿತವಾಗಿ ಶುಕ್ರದಿಂದ ಸ್ತ್ರಿಯ ಗರ್ಭಾಶಯದಲ್ಲಿ ಪ್ರತಿಷ್ಠಿತವಾಗುವುದೇ ಮೊದಲ ಜನ್ಮವುನವಮಾಸಾನನ್ತರ ಭೂಮಿಷ್ಠವಾಗುವ ಎರಡನೆಯ ಜನ್ಮವುಸ್ಥೂಲಶರೀರವಿನಷ್ಟಿಯ ನನ್ತರ ಆತಿವಾಹಿತ ಶರೀರದಿಂದ ಲೋಕಾನ್ತರದಲ್ಲಿ ಜನ್ಮ ಪಡೆಯುವುದು ಮೂರನೆಯ ಜನ್ಮವು ವ್ಯವಸ್ಥೆಯ ಅನುಸಾರ ಅನ್ನದಿಂದ ಪುರುಷಶುಕ್ರದಲ್ಲಿ ಪ್ರತಿಷ್ಠಿತವಾಗುವ ಪೂರ್ವೋಕ್ತ ಮೊದಲ ಜನ್ಮದ ಸಾಧನ-ರೂಪವಾಗಿದ್ದು ಶೋಣಿತಜನ್ಮದಲ್ಲಿ ಅನ್ತರ್ಭಾವವೆಂದು ತಿಳಿಯಬಹುದು. ಐತರೇಯರ ಅನುಸಾರ ಇದು ಮೊದಲನೆಯ ಜನ್ಮವು. ಹಾಗೆಯೇ ಪೂರ್ವಪ್ರತಿಪಾದಿತ ಸಂಸ್ಕಾರರೂಪ ನಾಲ್ಕನೆಯ ಜನ್ಮದ ಸಾಧನರೂಪವಾಗಿದ್ದು ಐದನೆಯ ಜನ್ಮದಲ್ಲಿ ಅನ್ತರ್ಭಾವವೆಂದು ತಿಳಿಯಬಹುದು, ಇದೇ ಐತರೇಯ ಸಮ್ಮತ ಮೂರನೆಯ ಜನ್ಮವಾಗಿದೆ. ಇದೇ ಜನ್ಮವಿಜ್ಞಾನವನ್ನು ಲಕ್ಷ್ಯದಲ್ಲಿರಿಸಿಕೊಂಡು ಶ್ರುತಿಯು ಹೇಳುತ್ತದೆ

೧ – “ಪುರುಷೇ ಹ ವಾ ಅಯಮಾದಿತೋ ಗರ್ಭೋ ಭವತಿ, ಯದ್ರೇತಃ | ತದೇತತ್ ಸರ್ವೇಭ್ಯೋಽಙ್ಗೇಭ್ಯಸ್ತೇಜಃ ಸಮ್ಭೂತಮಾತ್ಮನ್ಯೇವಾಽಽತ್ಮಾನಂ ಬಿಭರ್ತ್ತಿ | ತದ್ಯದಾ ಸ್ತ್ರಿಯಾಂ ಸಿಞ್ಚತಿ, ಅಥೈತಜ್ಜನಯತಿ | ತದಸ್ಯ ಪ್ರಥಮಂ ಜನ್ಮ” |

೨ – “ತತ್ ಸ್ತ್ರಿಯಾ ಆತ್ಮಭೂಥಂ ಗಚ್ಛತಿ, ಯಥಾ ಸ್ವಮಙ್ಗಂ ತಥಾ | ತಸ್ಮಾದೇನಾಂ ನ ಹಿನಸ್ತಿ | ಸಾಽಸ್ಯೈತಮಾತ್ಮಾನಮತ್ರ ಗತಂ ಭಾವಯತಿ, ಸಾ ಭಾವಯಿತ್ರೀ ಭಾವಯಿತವ್ಯಾ ಭವತಿ | ತಂ ಸ್ತ್ರೀ ಗರ್ಭಂ ಬಿಭರ್ತ್ತಿ, ಸೋಽಗ್ರ ಏವ ಕುಮಾರಂ ಜನ್ಮನೋಽಗ್ರೇಽಧಿ ಭಾವಯತಿ | ಸ ಯತ್ ಕುಮಾರಂ ಜನ್ಮನೋಽಗ್ರೇಽಧಿ ಭಾವಯತಿ, ಆತ್ಮಾನಮೇವ ತದ್ ಭಾವಯತಿ-ಏಷಾಂ ಲೋಕಾನಾಂ ಸಂತತ್ಯಾ | ಏವಂ ಸನ್ತತಾ ಹೀಮೇ ಲೋಕಾಃ | ತದಸ್ಯ ದ್ವಿತೀಯಂ ಜನ್ಮ |”

೩- “ಸೋಽಸ್ಯಾಯಮಾತ್ಮಾ ಪುಣ್ಯೇಭ್ಯಃ ಕರ್ಮೇಭ್ಯಃ ಪ್ರತಿಧೀಯತೇ | ಅಥಾಸ್ಯಾಯಮಿತರ ಆತ್ಮಾ ಕೃತಕೃತ್ಯೋ ವಯೋಗತಃ ಪ್ರೈತಿ | ಸ ಇತಃ ಪ್ರಯನ್ನೇವ ಪುನರ್ಜಾಯತೇ, ತದಸ್ಯ ತೃತೀಯಂ ಜನ್ಮ”
ತದುಕ್ತಂ ಋಷಿಣಾ – “ಗರ್ಭೇಽನು ಸನ್ನನ್ವೇಷಾಮವೇದಮಹಂ ದೇವಾನಾಂ ಜನಿಮಾನಿ ವಿಶ್ವಾ | ಶತಂ ಮಾ ಪುರ ಆಯಸೀರರಕ್ಷನ್ನಧಃ ಶ್ಯೇನೋ ಜವಸಾ ನಿರದೀಯಮ್”
                                                                                - ಐ.ಆ. ೨|೫|೧|

ಪುರುಷಸ್ಯ ಪಞ್ಚವಿಧ ಜನ್ಮಪರಿಲೇಖಃ
ಮುಂದಿನ ಲೇಖನದಲ್ಲಿ  ೧೦. ರೇತ-ಯೋನಿ-ರೇತೋಧಾ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Sunday, 28 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಕರಾರವಿನ್ದೇನ ಪದಾರವಿನ್ದಮ್ (೮)

೮. ಕರಾರವಿನ್ದೇನ ಪದಾರವಿನ್ದಮ್ -

ಪೃಥಿವಿಯ ಒಂದು ಸಾಮ್ವತ್ಸರಿಕ ಪರಿಕ್ರಮದಿಂದ ಧನಾಗ್ನಿಪ್ರಧಾನ ಪ್ರತಿಷ್ಠಾಮೂಲಕ ಇರಾಮಯ ಈ ಪಾರ್ಥಿವ ಪ್ರಾಣವು ಸರ್ವಾಙ್ಗಶರೀರದಲ್ಲಿ ಪ್ರತಿಷ್ಠಿತವಾಗುತ್ತಾ ಶಿಶುವನ್ನು ಸ್ವಪ್ರತಿಷ್ಠಾದಲ್ಲಿ ಪ್ರತಿಷ್ಠಿತಗೊಳಿಸುತ್ತದೆ. ಎಲ್ಲಿಯವರೆಗೆ (ಒಂದು ವರ್ಷ ಪರ್ಯ್ಯನ್ತ) ಈ ಪ್ರತಿಷ್ಠಾತ್ಮಕ ಪಾರ್ಥಿವ ಪ್ರಾಣವು ಶಿಶು-ಶರೀರದಲ್ಲಿ ಸರ್ವಾತ್ಮನಾ ಪ್ರತಿಷ್ಠಿತವಾಗುವುದಿಲ್ಲವೋ, ಅಲ್ಲಿಯವರೆಗೆ ಶಿಶುಶರೀರವು ಪರಾವಲಮ್ಬದ ಅಪೇಕ್ಷೆ ಹೊಂದಿರುತ್ತದೆ. ಒಂದು ವರ್ಷದ ನನ್ತರವೇ ಇದು ಸ್ವಪ್ರತಿಷ್ಠಾದಲ್ಲಿ ಪ್ರತಿಷ್ಠಿತವಾಗುತ್ತಾ ಎದ್ದುನಿಲ್ಲಲು ಸಮರ್ಥವಾಗುತ್ತದೆ. ಸರ್ವವ್ಯಾಪಕ ಈಶ್ವರದ ಚಿಚ್ಛಕ್ತಿಯ ಉಪಕ್ರಮಸ್ಥಾನವು ಪ್ರಾಣಮಯ ಸ್ವಯಮ್ಭೂ ಆಗಿದೆ, ಉಪಸಂಹಾರಸ್ಥಾನವು ಅನ್ನಾದಮಯೀ ಪೃಥಿವೀ ಆಗಿದೆ. ಭೂಪೃಷ್ಠದ ಮೇಲೆ ಉತ್ಪನ್ನವಾಗುವ ಅಸ್ಮದಾದಿ ಪಾರ್ಥಿವ ಪ್ರಜಾಗಳಿಗೆ ಇದೇ ಪಾರ್ಥಿವ ಚಿಚ್ಛಕ್ತಿಯನ್ನು ಪ್ರಾಪ್ತಗೊಳಿಸಿಕೊಳ್ಳುವ ಸೌಭಾಗ್ಯವು ಪ್ರಾಪ್ತವಾಗುತ್ತದೆ. ಮಸ್ತಕದ ಅಪೇಕ್ಷೆಯಲ್ಲಿ ಚರಣಕ್ಕೆ ವಿಶೇಷ ಮಹತ್ತ್ವ ಕೊಟ್ಟಿರುವುದು ಇದೇ ಕಾರಣಕ್ಕಾಗಿ. ‘ಪದ್ಭ್ಯಾಂ ಭೂಮಿಂ ಪ್ರತಿಷ್ಠಿತಃ’ ಇತ್ಯಾದಿ ಮನ್ತ್ರವರ್ಣನಾನುಸಾರ ಸಪ್ತವಿತರಿತಕಾಯಾತ್ಮಕ ವಿಶ್ವವ್ಯಾಪಕ ವಿರಾಟ್ ಪುರುಷನ ಪಾದಪ್ರತಿಷ್ಠಾ ಲಕ್ಷಣವಾದ ಭೂಪ್ರದೇಶಕ್ಕೆ ಪಾರ್ಥಿವ ಪ್ರಜಾದೊಂದಿಗೆ ಧನಿಷ್ಠ ಸಮ್ಬನ್ಧವಿರುತ್ತದೆ. ಪೃಥಿವಿಯು ಆ ವಿರಾಟ್ ಪುರುಷನ ಪಾದವು, ಸೂರ್ಯ್ಯನದರ ಹೃದಯವು, ಸ್ವಯಮ್ಭೂ ಅದರ ಮಸ್ತಕವು. ಯಾವ ಚಿಚ್ಛಾಕ್ತಿಯು ಶಿರಃಸ್ಥಾನೀಯ ಸ್ವಯಮ್ಭೂವಿನಲ್ಲಿ ಇರುವುದೋ, ಅದುವೇ ಹೃದಯಸ್ಥಾನೀಯ ಸೂರ್ಯ್ಯನಲ್ಲಿ, ಹಾಗೂ ಪಾದಸ್ಥಾನೀಯ ಪೃಥಿವಿಯಲ್ಲಿಯೂ ಇದೆ. ಶಿರೋಭಾಗದಿಂದ (ಸ್ವಯಮ್ಭೂ) ಆರಂಭಿಸಿ ಪಾದಭಾಗ (ಪೃಥಿವೀ) ಪರ್ಯ್ಯನ್ತ ಒಂದೇ ಚೈತನ್ಯಧಾರೆಯ ಪ್ರವಹನೆ ಇರುತ್ತದೆ. ಎರಡೂ ಪರಸ್ಪರ ‘ಪ್ರಹಿತಾಂ ಸಂಯೋಗಃ, ಪ್ರಯುತಾಂ ಸಂಯೋಗಃ’ ಎಂಬ ಲಕ್ಷಣವುಳ್ಳ ಗಾಯತ್ರಿಯ ‘ಏತಿ-ಪ್ರೇತಿ’ ಸಮ್ಬನ್ಧದಿಂದ ಸಮ್ಬದ್ಧವಾಗಿರುತ್ತದೆ. ಇದರ ಅಲ್ಲಿನ ಗಮನವು ‘ಪ್ರೇತಿ’ ಭಾವವು, ಅದರ ಇಲ್ಲಿನ ಆಗಮನವು ‘ಏತಿ’ ಭಾವವು. ಅಗ್ನಿಸಮ್ಬನ್ಧದೊಂದಿಗೆ  ಪೃಥಿವಿಯ ಪ್ರತಿಷ್ಠಾವು ದಕ್ಷಿಣಾದಿಕ್ ಎಂದು ನಂಬಲಾಗಿದೆ. ಇದೇ ಪ್ರಾಕೃತಿಕ ಚಿಚ್ಛಕ್ತಿರಹಸ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು ನಿದಾನವಿಧ್ಯೆಯ ಆಚಾರ್ಯರು ಪುರುಷೋತ್ತಮೇಶ್ವರನ ದಕ್ಷಿಣಪಾದಾಙ್ಗುಷ್ಠವನ್ನು ಆತನ  ಮುಖವಿವರದಲ್ಲಿ ಪ್ರವಿಷ್ಟವೆಂದು ನಂಬಿದ್ದಾರೆ. ಅಮೃತ-ಬ್ರಹ್ಮ-ಶುಕ್ರಾತ್ಮಕ ಬ್ರಹ್ಮಾಶ್ವತ್ಥವೃಕ್ಷದ ಟೊಂಗೆಯ ಒಂದು ಪತ್ರದ (ಭಾಗದ) ಮೇಲೆ ಪ್ರತಿಷ್ಠಿತ ಇದೇ ಪರಮ ಭಾಗವತ ತತ್ತ್ವದ ಪ್ರಾರಮ್ಭಿಕ ಸ್ಥಿತಿಯ ದಿಗ್ದರ್ಶನ ಮಾಡಿಸುತ್ತಾ ಭಾಗವತಾಚಾರ್ಯ್ಯರು ಹೀಗೆಂದಿದ್ದಾರೆ –

ಕರಾರವಿನ್ದೇನ ಪದಾರವಿನ್ದಂ ಮುಖಾರವಿನ್ದೇನ ವಿನಿವೇಶಯನ್ತಮ್ |
ವಟಸ್ಯ ಪತ್ರಸ್ಯ ಮುಖೇ ಶಯನ್ತಂ ಬಾಲಂ ಮುಕುನ್ದಂ ಮನಸಾ ಸ್ಮರಾಮಿ ||

ಪಾದಸ್ಥಾನವೇ ನಮಗೆ ಉಪಲಬ್ಧವಾಗುತ್ತದೆ, ಹಾಗಾಗಿ ಉಪಾಸನಾ ಕಾಣ್ಡದಲ್ಲಿ ಭಗವಚ್ಚರಣಾರವಿನ್ದಗಳದ್ದೇ ಮಹತ್ವವು ವಿಶೇಷ ರೂಪದಲ್ಲಿ ಗ್ರಾಹ್ಯವಾಗಿದೆ. ಪಿತಾ, ಜ್ಯೇಷ್ಠಭ್ರಾತಾ, ಮಾತಾ, ಆಚಾರ್ಯಾದಿಗಳ ಪಾದ ಸೇವೆಯೂ ಇದಕ್ಕಾಗಿಯೇ ಸರ್ವೋತ್ಕೃಷ್ಟವೆಂದು ನಂಬಲಾಗಿದೆ. ಇರಾಮಯ ಪಾರ್ಥಿವ ಬ್ರಹ್ಮವು ಪ್ರಪದಸ್ಥಾನದಿಂದಲೇ ಪ್ರವಿಷ್ಟವಾಗುತ್ತದೆ. ವಾಸ್ತವದಲ್ಲಿ ಈ ಸ್ಥಾನವು ಪವಿತ್ರತಮವಾಗಿದೆ, ಇದರ ರಹಸ್ಯವನ್ನು ಲೌಕಿಕ ಮನುಷ್ಯರು ಅರಿಯಲಾರರು. ಹೇಳಬೇಕಾಗಿರುವುದು ಏನೆಂದರೆ, ಸರ್ವವ್ಯಾಪಕ ಈಶ್ವರತತ್ತ್ವವು ಪಾಪ್ಮಗಳಿಂದ ಏಕಾನ್ತದಲ್ಲಿ ವಿರಹಿತವೂ ಹಾಗೇ ವಿಶುದ್ದ-ನಿತ್ಯಶುದ್ಧ-ಮುಕ್ತವೂ ಆಗಿದೆ. ಉತ್ಪನ್ನ ಶಿಶುವೂ ತತ್ಸಮವಾಗಿರುತ್ತದೆ, ಅದು ಪರಮಹಂಸಕಕ್ಷೆಯಲ್ಲಿ ಪ್ರತಿಷ್ಠಿತವಾಗಿರುತ್ತದೆ. ಇದರ ಅನ್ತಃಕರಣದಲ್ಲಿಯೂ ಚೈತನ್ಯ ಸಮಾನಧಾರೆಯಿಂದ ಪ್ರವಾಹಿತವಾಗುತ್ತಿರುತ್ತದೆ. ತನ್ನ-ಇದೇ ಪ್ರವಾಹವೃತ್ತಿಯಿಂದ ನವಜಾತ ಶಿಶುವು ದಕ್ಷಿಣಪಾದಾಙ್ಗುಷ್ಠವನ್ನು ಚೀಪುತ್ತಿರುತ್ತದೆ. ಯಾವ ಶಿಶುಗಳಲ್ಲಿ ಈ ವೃತ್ತಿಯು ಇರುತ್ತದೆಯೋ, ಶಕುನಶಾಸ್ತ್ರವೇತ್ತರು, ಅದನ್ನು ಭಾಗ್ಯಶಾಲೀ ಎಂದು ಕರೆಯುತ್ತಾರೆ. ತಮೋಗುಣಪ್ರಧಾನ ಶಿಶುಗಳಲ್ಲಿ ಬಹುಶಃ ಈ ಭಾವವು ಉಪಲಬ್ಧವಿರುವುದಿಲ್ಲ. ಈ ಪ್ರಾಸಙ್ಗಿಕ ವಿನೋದದ ಅನ್ತದಲ್ಲಿ ನಾವು ಹೇಳಬೇಕಾಗಿರುವುದು ಏನೆಂದರೆ, ಪಾರ್ಥಿವಾತ್ಮವು ಅನ್ತರ್ಯ್ಯಾಮ, ಬಹಿರ್ಯ್ಯಾಮ ಭೇದದಿಂದ ಎರಡು ರೀತಿಯಲ್ಲಿ ಪುರುಷನಲ್ಲಿ ಪ್ರತಿಷ್ಠಿತವಾಗಿರುತ್ತದೆ. ಒಂದು ಜೀವನಸತ್ತೆಯ, ಉತ್ಪತ್ತಿಯ ಕಾರಣ, ಇನ್ನೊಂದು ಶರೀರಪ್ರತಿಷ್ಠಾದ ಆಲಮ್ಬನವಾಗಿದೆ. ಪಶುಸಂಸ್ಥಾದಲ್ಲಿಯೂ ಎರಡೂ ಆತ್ತ್ಮವಿವರ್ತ್ತಗಳು ಪ್ರತಿಷ್ಠಿತವಾಗಿರುತ್ತವೆ. ಆದರೆ ಇದರಲ್ಲಿ ‘ಇಷೇ ತ್ತ್ವೋರ್ಜೇತ್ವಾ ವಾಯವಸ್ಥ ದೇವೋ ವಃ’ ಎಂಬುದರ ಅನುಸಾರ ವಾಯವ್ಯಪ್ರಾಣದ ಪ್ರಧಾನತೆ ಇರುತ್ತದೆ. ಹಾಗಾಗಿ ಪಶುವನ್ನು ಸ್ವಪ್ರತಿಷ್ಠಾದಲ್ಲಿ ಪ್ರತಿಷ್ಠಿತವಾಗಿಸಲು ಒಂದು ವರ್ಷ ಬೇಕಾಗುವುದಿಲ್ಲ. ಹಾಗಾಗಿ ಇವು ಉತ್ಪನ್ನವಾಗುತ್ತಲೇ ಜಿಗಿದು ಕುಣಿದಾಡಲು ಆರಮ್ಭಿಸುತ್ತವೆ. ‘ಅಥಾತೋ ರೇತಸಃ ಸೃಷ್ಟಿಃ’ ಇತ್ಯಾದಿ  ಪೂರ್ವೋಕ್ತ ಐತರೇಯ ಶ್ರುತಿಯು ಜೀವನಸತ್ತೌಪಯಿಕ ಕರ್ಮ್ಮಾತ್ಮದ ಸ್ವರೂಪವನ್ನು ತಿಳಿಸಿದೆ, ಈಗ ನಿಮ್ಮಲಿಖಿತ ಐತರೇಯ ಶ್ರುತಿಯು ಪ್ರಪದ ಸಮ್ಬನ್ಧೀ ಪ್ರತಿಷ್ಠಾತ್ಮದ ವಿಶ್ಲೇಷಣೆ ಮಾಡುತ್ತಿದೆ –

“ತಂ ಪ್ರಪದಾಭ್ಯಾಂ ಪ್ರಾಪದ್ಯತ ಬ್ರಹ್ಮೇಮಂ ಪುರುಷಮ್ |
ಯತ್ ಪ್ರಪದಾಭ್ಯಾಂ ಪ್ರಾಪದ್ಯತ ಬ್ರಹ್ಮೇಮಂ ಪುರುಷಂ, ತಸ್ಮಾತ್ ಪ್ರಪದೇ |
ತಸ್ಮಾತ್ ಪ್ರಪದೇ-ಇತ್ಯಾಚಕ್ಷತೇ ಶಫಾಃ, ಇತ್ಯನ್ಯೇಶಾಂ ಪಶೂನಾಮ್ | ತದೂರ್ಧ್ವಮುದಸರ್ವತ್ | ತಾ ಊರೂ ಅಭವತಾಮ್ |
ಉರೂ ಗೃಣೀಹೀತ್ಯಬ್ರವೀತ್, ತದುದರಮಭವತ್ | ಉರ್ವೇವ ಮೇ ಕುರು, ಇತ್ಯಬ್ರವೀತ್ | ತದುದರೋಽಭವತ್ |
ಉದರಂ ಬ್ರಹ್ಮೇತಿ ಶಾರ್ಕರಾಕ್ಷ್ಯಾ ಉಪಾಸತೇ, ಹೃದಯಂ ಬ್ರಹ್ಮೇತಿ ಆರುಣೇಯಃ | ಬ್ರಹ್ಮಾ ಹ್ಯೈವ ತಾ ೩ ಇ, ಇತಿ |
ಊರ್ಧ್ವಂ ತ್ವೇವೇದಸರ್ಪತ್ | ತಚ್ಛಿರೋಽಶ್ರಯತ |

ಯಚ್ಛಿರೋಽಸ್ರಯತ, ತಚ್ಛಿರೋಽಭವತ್ |” (ಐ.ಆ. ೨|೧|೪)


ಪಾರ್ಥಿವಾತ್ಮವಿವರ್ತ್ತ ಪರಿಲೇಖಃ -ಮುಂದಿನ ಲೇಖನದಲ್ಲಿ  ಕರ್ಮ್ಮಾತ್ಮದ ಮೂರು ಜನ್ಮ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Thursday, 25 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ರೇತೋಮಯ ಕರ್ಮ್ಮಾತ್ಮಾ (೬)

೬. ರೇತೋಮಯ ಕರ್ಮ್ಮಾತ್ಮಾ -

ವಾಕ್ಕಿನ ರೇತವೇ ಕರ್ಮ್ಮವಾಗಿದೆ. ಮಾನಸರೇತೋಭೂತಾ ವಾಕ್ಕು ಕರ್ಮ್ಮಾಶ್ರಯದಿಂದಲೇ ವೀರ್ಯ್ಯವತೀ ಆಗುತ್ತದೆ. ಎಲ್ಲಿಯವರೆಗೆ ಕೇವಲ ವಾಕ್-ಪ್ರಯೋಗವು ತದನುರೂಪ ಕರ್ಮ್ಮವಿಭೂತಿಯ ಆಶ್ರಯ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಸರ್ವಥಾ ವ್ಯರ್ಥವು. ಇದೇ ಕರ್ಮ್ಮವಿಭೂತಿಯು ಇದರ ಜೀವನ್ಮುಕ್ತಿಯ ಕಾರಣವಾಗುತ್ತದೆ. ಅದಕ್ಕೆ ನಿಮ್ನಲಿಖಿತ ಉಪನಿಷಚ್ಛ್ರುತಿಯು ಪ್ರಮಾಣವಿದೆ –

“ಕುರ್ವನ್ನೇವೇಹ ಕರ್ಮ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ್ಮ ಲಿಪ್ಯತೇ ನರೇ ||” (ಈಶೋಪನಿಷದ್)

ರೇತೋಮೂಲವಾದ ಇದೇ ಪಿತೃಸೃಷ್ಟಿಯ ಬಗ್ಗೆ ಮಹರ್ಷಿ ಐತರೇಯರು (ಮಹೀದಾಸರು) ನಿಮ್ನಲಿಖಿತ ಶಬ್ದಗಳಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ –

“ಅಥಾತೋ ರೇತಸಃ ಸೃಷ್ಟಿಃ |
ಪ್ರಜಾಪತೇ ರೇತೋ ದೇವಾಃ,
ದೇವಾನಾಂ ರೇತೋ ವರ್ಷ,
ವರ್ಷಸ್ಯ ರೇತ ಓಷಧಯಃ,
ಓಷಧೀನಾಂ ರೇತೋಽನ್ನಂ,
ಅನ್ನಸ್ಯ ರೇತೋ ರೇತಃ,
ರೇತಸೋ ರೇತಃ ಪ್ರಜಾಃ |
ಪ್ರಜಾನಾಂ ರೇತೋ ಹೃದಯಂ,
ಹೃದಯಸ್ಯ ರೇತೋ ಮನಃ,
ಮನಸೋ ರೇತೋ ವಾಕ್,
ವಾಚೋ ರೇತಃ ಕರ್ಮ್ಮ |
ತದಿದಂ ಕರ್ಮ್ಮಕೃತಮಯಂ ಪುರುಷೋ ಬ್ರಹ್ಮಣೋ ಲೋಕಃ” (ಐ. ಆ. ೨|೧|೩)

ಇರಾ’ ರಸಮಯ ಕರ್ಮ್ಮಾತ್ಮಾ –

ವಿಜ್ಞಾನಾತ್ಮತತ್ತ್ವದ ವಿಕಾಸವು (ಉತ್ಪತ್ತಿಯು) ಸೌರ ಹಿರಣ್ಮಯ ತೇಜದಿಂದ ಆಗಿದೆ. ಪ್ರಭವಭೂತ ಹಿರಣ್ಮಯತೇಜದ ಸಮ್ಬನ್ಧದಿಂದಲೇ ಈ ವಿಜ್ಞಾನವು ‘ಹಿರಣ್ಮಯಪುರುಷ’ ಎಂದು ಕರೆಯಲ್ಪಟ್ಟಿದೆ. ಆಪೋಮಯ ಪರಮೇಷ್ಠೀ ಪ್ರಜಾಪತಿಯ ರೇತವು ‘ಆಪಃ’ ಆಗಿದೆ. ಇದಕ್ಕೆ “ಆಪೋ ಭೃಗ್ವಙ್ಗಿರೋರೂಪಮಾಪೋಭೃಗ್ವಙ್ಗಿರೋಮಯಮ್” ಎಂಬ ಗೋಪಥ ವಚನದ ಅನುಸಾರ ಭೃಗು-ಅಙ್ಗಿರಾ ನಾಮದ ಎರಡು ವಿವರ್ತ್ತಗಳಿವೆ. ಭೃಗುವು ಸ್ನೇಹ ತತ್ತ್ವ, ಅಙ್ಗಿರವು ತೇಜ ತತ್ತ್ವ. ತೇಜೋಭೂತ ಅಙ್ಗಿರವು ಯೋನಿ, ಸ್ನೇಹಭೂತ ಭೃಗುವು ರೇತ. ಇದರ ಆಹುತಿಯಿಂದ ಹಿರಣ್ಯಗರ್ಭ ಸೂರ್ಯ್ಯನ ಪ್ರಾದುರ್ಭಾವವಾಯಿತು. ಅದು ‘ಚಿತ್ರಂ ದೇವಾನಾಮುದಗಾತ್’ (ಯಜುಃ ಸಂ..) ಮನ್ತ್ರವರ್ಣನೆಯಿಂದ ದೇವಪ್ರಾಣಘನವಾಗಿದೆ. ‘ಕಂಸ್ವಿದ್‍ಗರ್ಭ ದಧ್ರ ಆಪಃ’ – ‘ಅಯಂ ಗಮ್ಮನ್ತ್ಸೀದ’ ಇತ್ಯಾದಿ ಅನ್ಯ ಮನ್ತ್ರಶ್ರುತಿಗಳೂ ಭೃಗ್ವಙ್ಗಿರೋಮಯ ಪರಮೇಷ್ಠೀ ಪ್ರಜಾಪತಿಯ ರೇತದಿಂದಲೇ ದೇವಘನ ಹಿರಣ್ಯಗರ್ಭದ ವಿಕಾಸವನ್ನು ಹೇಳುತ್ತಿದೆ. ಇದನ್ನು ಸಹಜಭಾಷೆಯಲ್ಲಿ ಆದಿತ್ಯಪುರುಷ ಎಂದೂ ಹೇಳಬಹುದು.

ಪ್ರಜಾಪತಿಯ (ಪರಮೇಷ್ಠಿಯ) ಭೃಗ್ವಙ್ಗಿರೋಮಯ ಅಬ್‍ಲಕ್ಷಣ ರೇತದಿಂದ ಉತ್ಪನ್ನವಾದಂತಹಾ ಆದಿತ್ಯನಾಮಕ ಹಿರಣ್ಮಯ ದೇವತೆಯೇ ತನ್ನ ಆಗ್ನೇಯ ರೇತದಿಂದ ವರ್ಷಾ-ಓಷಧಿ-ಅನ್ನ-ರೇತೋ ರೂಪದಲ್ಲಿ ಪರಿಣತವಾಗುತ್ತಾ ಪುರುಷ ಸ್ವರೂಪದಲ್ಲಿ ಆವಿರ್ಭೂತವಾಗುತ್ತದೆ. ಹಾಗಾಗಿ “ದೇವೇಭ್ಯಶ್ಚ ಜಗತ್ ಸರ್ವಂ ಚರಂ ಸ್ಥಾಣ್ವನುಪೂರ್ವಶಃ” ಎಂದು ಹೇಳುವುದು ಅನ್ವರ್ಥವಾಗುತ್ತಿದೆ.  ಆದಿತ್ಯಪುರುಷ ಹಾಗೂ ಮಾನವಪುರುಷ, ಇವರಿಬ್ಬರೂ ಈ ರೇತಃ ಸೃಷ್ಟಿವಿಜ್ಞಾನದ ಅಪೇಕ್ಷೆಯಲ್ಲಿ ಅಭಿನ್ನರಾಗಿದ್ದಾರೆ. ಹಾಗಾಗಿ ‘ಯೋಽಸಾವಾದಿತ್ಯೇ ಪುರುಷಃ ಸೋಽಹಮ್’ ಎಂದು ಹೇಳುವುದೂ ನ್ಯಾಯಸಙ್ಗತವಾಗುತ್ತಿದೆ.

ಪಾರ್ಥಿವ ಓಷಧಿರಸವು ‘ಇರಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಓಷಧಿಗಳಲ್ಲಿ ಇದೇ ರಸದ ಪ್ರಾಧಾನ್ಯತೆ ಇದೆ. ಈ ಪಾರ್ಥಿವ ಇರಾರಸದ ಪ್ರಾಧಾನ್ಯದಿಂದ ಅಲ್ಲಿ ಹೋಗುವ ಹಿರಣ್ಮಯ ದೇವತೆಗಳೂ ಇರಾಮಯರಾಗುತ್ತಾರೆ.  ಈ ರೀತಿ ಅದೇ ದ್ಯುಲೋಕಸ್ಥ ಹಿರಣ್ಮಯ ಪುರುಷವು ಪೃಥಿವಿಯಲ್ಲಿ ಬಂದು ತದ್ರಸದಿಂದ ಸಮ್ಪರಿಷ್ವಕ್ತವಾಗಿ (ನಿಕಟವಾಗಿ ಸ್ವೀಕರಿಸಿ) ‘ಇರಾಮಯ’ ಆಗುತ್ತಿರುತ್ತದೆ. ಇದೇ ಇರಾಮಯ ಪಾರ್ಥಿವ ಪುರುಷವು ಸುಪ್ರಸಿದ್ಧ ಕರ್ಮ್ಮಾತ್ಮಾ ಆಗಿದೆ, ಇದನ್ನು ನಾವು ದ್ಯುಲೋಕಸ್ಥ ದಿವ್ಯ ಹಿರಣ್ಮಯಪುರುಷದ ದ್ವಿತೀಯಾವತಾರ ಎಂದು ಹೇಳಬಹುದು. ಪಾರ್ಥಿವ ಸ್ತೌಮ್ಯತ್ರಿಲೋಕಿಯ ವೈಶ್ವಾನರ-ತೈಜಸ-ಪ್ರಾಜ್ಞರಸವೂ ಇರಾಮಯ ಪುರುಷದಲ್ಲಿ ಸಮನ್ವಿತವಾಗಿದೆ. ಆದ್ದರಿಂದ ಈ ತದ್ರೂಪವು (ವೈ-ತೈ-ಪ್ರಾ. ಮಯ) ಪ್ರಾಜ್ಞಮೂರ್ತ್ತಿ ಪುರುಷವು ‘ಕರ್ಮ್ಮಾತ್ಮಾ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ, ಇದನ್ನು ಪೂರ್ವದಲ್ಲಿ ‘ದೇವಸತ್ಯ’ ಎಂಬ ಹೆಸರಿನಿಂದಲೂ ವ್ಯವಹೃತಗೊಳಿಸಲಾಗಿದೆ.

ಹೇಗೆ ದ್ಯುಲೋಕರಸಪ್ರಧಾನ ವಿಜ್ಞಾನಾತ್ಮವು ತನ್ನ ವಾಸ್ತವಿಕ ಹಿರಣ್ಯತೇಜದ ಸಮ್ಬನ್ಧದಿಂದ ‘ಹಿರಣ್ಮಯಪುರುಷ’ ಎನ್ನಿಸಿಕೊಳ್ಳುತ್ತದೆ, ಹಾಗೇ ಪಾರ್ಥಿವರಸಪ್ರಧಾನ ಕರ್ಮ್ಮಾತ್ಮವೂ ಪರೋಕ್ಷಭಾಷಾ ಸಮ್ಬನ್ಧದಿಂದ ‘ಹಿರಣ್ಮಯ’ ಎಂಬ ಹೆಸರಿನಿಂದಲೇ ವ್ಯವಹೃತವಾಗಿದೆ. ಎರಡೂ ಹಿರಣ್ಮಯವಾಗಿವೆ. ಅನ್ತರವೇನೆಂದರೆ, ವಿಜ್ಞಾನಾತ್ಮವು ಹಿರಣ್ಮಯವಾಗುವುದರಿಂದ ಹಿರಣ್ಮಯ ಎನ್ನಿಸಿಕೊಂಡಿದ್ದರೆ, ಕರ್ಮ್ಮಾತ್ಮವು ಇರಾಮಯ ಆಗುವುದರಿಂದ ಹಿರಣ್ಮಯ ಆಗಿದೆ. ಇರಾಮಯ ಕರ್ಮ್ಮಾತ್ಮವನ್ನು ಹಿರಣ್ಮಯ ಎಂದು ಹೇಳುವ ಏಕಮಾತ್ರ ಅಭಿಪ್ರಾಯ ಏನೆಂದರೆ, ಕರ್ಮ್ಮಾತ್ಮವು ವಾಸ್ತವದಲ್ಲಿ ಅದೇ ದಿವ್ಯ ಹಿರಣ್ಮಯದ ಪ್ರವರ್ಗ್ಯಾಂಶವಾಗಿರುವುದು. ಕೇವಲ ಭೂತಭಾಗಾಸಕ್ತಿಯಿಂದ ಭೂತಪ್ರಧಾನವಾದ ಇರಾರಸದ ಪ್ರಾಧಾನ್ಯದಿಂದ ಇದು ಹಿರಣ್ಮಯದಿಂದ ಭಿನ್ನವಾಗಿದೆ. ಶ್ರೇಷ್ಠತಮ ಯಜ್ಞಾದಿ ಸೌರ ಕರ್ಮ್ಮಾನುಷ್ಠಾನದಿಂದ ಯಾವ ದಿನ ಈ ಕರ್ಮ್ಮಾತ್ಮವು ತನ್ನ ಪಾರ್ಥಿವ ಇರಾರಸದ ಗ್ರನ್ಥಿಗಳನ್ನು ಶಿಥಿಲಗೊಳಿಕೊಳ್ಳುತ್ತದೆಯೋ, ಆ ಸಮಯದಲ್ಲಿ ಈ ಪಾರ್ಥಿವಾಕರ್ಷಣೆಯಿಂದ ವಿಮುಕ್ತವಾಗಿ ತನ್ನ ಪ್ರಾತಿಸ್ವಿಕ (ಸ್ವಂತ) ವಿಶುದ್ಧ ಹಿರಣ್ಮಯರೂಪದಲ್ಲಿ ಪರಿಣಾತವಾಗುತ್ತದೆ. ಇದೇ ಉಭಯವಿಧ ಪುರುಷವಿಜ್ಞಾನವನ್ನು ಲಕ್ಷ್ಯದಲ್ಲಿಟ್ಟುಕೊಂಡು ಐತರೇಯರು ವೇದದ ಅಭಿಪ್ರಾಯವನ್ನು ಒತ್ತಿ ಹೇಳುತ್ತಾರೆ –

“ಸ ಇರಾಮಯಃ | ಯದ್ಧಿ-ಇರಾಮಯಃ, ತಸ್ಮಾದ್ಧಿರಣ್ಮಯಃ |

ಹಿರಣ್ಮಯೋ ವಾ ಅಮುಷ್ಮಿಂಲ್ಲೋಕೇ ಸಮ್ಭವತಿ, ಯ ಏವಂ ವೇದ |” (ಐ.ಆ. ೨|೧|೩)

ಮುಂದಿನ ಲೇಖನದಲ್ಲಿ  . ಪ್ರಪದತಿಷ್ಠ ಕರ್ಮ್ಮಾತ್ಮಾ

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪ್ರಪದಪ್ರತಿಷ್ಠ ಕರ್ಮ್ಮಾತ್ಮಾ (೭)

೭. ಪ್ರಪದಪ್ರತಿಷ್ಠ ಕರ್ಮ್ಮಾತ್ಮಾ –

ಉಕ್ತ ಲಕ್ಷಣವಾದ ಪಾರ್ಥಿವ ಇರಾಮಯ ಕರ್ಮ್ಮಾತ್ಮವು ಎರಡು ರೀತಿಯಲ್ಲಿ ನಮ್ಮ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತವಾಗುತ್ತದೆ. ಪ್ರಾತಿಸ್ವಿಕ ರೂಪದಿಂದ ಪ್ರವಿಷ್ಟವಾಗುವ ಭೂತಾತ್ಮವು (ಕರ್ಮ್ಮಾತ್ಮವು) ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ, ಹಾಗೆಯೇ ಇದು ಪ್ರತಿಯೊಂದು ಪ್ರಾಣಿಯಲ್ಲಿಯೂ ಭಿನ್ನ ಭಿನ್ನವಾಗಿರುತ್ತದೆ. ಇದೇ ಪ್ರಾಧಾನಿಕರ ಪ್ರತಿಶರೀರಭಿನ್ನ ಜೀವಾತ್ಮವಾದವಾಗಿದೆ. ಈ ಪಾರ್ಥಿವ ಭೂತಾತ್ಮವು ಔಪಪಾತಿಕ ರೂಪದಿಂದ ಶುಕ್ರಶೋಣಿತದ ದಾಮ್ಪತ್ಯಭಾವದಲ್ಲಿ ಬಂದು ಕಾಲಾನ್ತರದಲ್ಲಿ ಸ್ಥೂಲಶರೀರ ಧಾರಣೆ ಮಾಡುತ್ತಾ ಭೂಮಿಷ್ಠವಾಗುತ್ತದೆ. ಇದರಲ್ಲಿ ಸಜಾತೀಯಾಕರ್ಷಣದಿಂದ ಪುನಃ ಇರಾಮಯ ಪಾರ್ಥಿವ ರಸವು ಪ್ರವಿಷ್ಟವಾಗುತ್ತದೆ. ಈ ಆಗನ್ತುಕ ಇರಾರಸವು ಪ್ರಾಣಿಮಾತ್ರದಲ್ಲಿ ಸಮಾನವಾಗಿರುತ್ತದೆ. ಪಾರ್ಥಿವ ಇರಾಮಯ ಔಪಪಾತಿಕ ಆತ್ಮವು ಅನ್ತರ್ಯ್ಯಾಮ ಸಮ್ಬನ್ಧದಿಂದ ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಇದರ ಪ್ರಭವಸ್ಥಾನವು ಅನ್ನವಾಗಿದೆ, ಯೋನಿಸ್ಥಾನವು ಪುರುಷವಾಗಿದೆ, ಪ್ರತಿಷ್ಠಾಸ್ಥಾನವು ಶುಕ್ರವಾಗಿದೆ, ಆಶಯವು ಸರ್ವಶರೀರವಾಗಿದೆ.


ಭೂಮಿಷ್ಠವಾದ ಅನನ್ತರ ಈ ಪಾರ್ಥಿವಪ್ರಾಣದೇವತೆಯು ಅಗ್ನಿ-ಪ್ರಧಾನತೆಯ ಕಾರಣದಿಂದ ನವಜಾತ ಶಿಶುವಿನ ದಕ್ಷಿಣ ಪ್ರಪದದಿಂದ (ದಕ್ಷಿಣ ಪಾದದ ಮೇಲ್ಭಾಗದಿಂದ) ಪ್ರವಿಷ್ಟವಾಗುತ್ತದೆ. ಪಾರ್ಥಿವ ಚೈತನ್ಯವು ಮೊತ್ತಮೊದಲು ಶಿಶುವಿನ ಪ್ರಪದಸ್ಥಾನದಲ್ಲಿಯೇ ಪ್ರವೇಶ ಮಾಡುತ್ತದೆ. ಇದರ ಪ್ರತ್ಯಕ್ಷ ಪ್ರಮಾಣವು ಏನೆಂದರೆ, ನವಜಾತ ಶಿಶುವು ಮೊತ್ತಮೊದಲು ಪಾದಾಗ್ರಭಾಗಗಳನ್ನೇ ಸಕ್ರಿಯಗೊಳಿಸಿಕೊಳ್ಳುವುದು. ಪ್ರಪದ ಸ್ಥಾನದಿಂದ ಮೇಲಕ್ಕೆ ಬರುತ್ತಾ ಉರುಸ್ಥಾನಕ್ಕೆ (ತೊಡೆಯತ್ತ) ಬರುತ್ತದೆ. ಆದ್ದರಿಂದ ಪಾದಾನನ್ತರ ಉರುದ್ವಯದಲ್ಲಿ ಗತಿಯ ಉದ್ರೇಕವಾಗುತ್ತದೆ. ಅದರಿಂದ ಹೃದಯಕ್ಕೆ ಬರುತ್ತಾ ಜಾಟರಾಗ್ನಿ-ಸಮತುಲಿತ ಉದರಕ್ಕೆ ಹೋಗುತ್ತದೆ. ಇಲ್ಲಿಂದಲೇ ಬುಭುಕ್ಷೆಯು (ಹಸಿವೆಯು) ತೀವ್ರವಾಗಲು ಆರಂಭಿಸುತ್ತದೆ. ಇದೇ ಬುಭುಕ್ಷಾವೃದ್ಧಿಯು ಆಯತನವೃದ್ಧಿಯ ಕಾರಣವಾಗುತ್ತದೆ. ಉಕ್ಥ-ಅರ್ಕ-ಅಶೀತಿ ಲಕ್ಷಣ ಅನ್ನೋರ್ಕಪ್ರಾಣಾನುಗ್ರಹಾತ್ಮಕ ಯಜ್ಞವೇ ಆಯತನವೃದ್ಧ್ಯದ ಕಾರಣವಾಗಿದೆ, ಹಾಗೂ ಈ ಯಜ್ಞದ ಮೂಲಪ್ರತಿಷ್ಠೆಯು ‘ಅಶನಾಯಾ’ (ಬುಭುಕ್ಷಾ) ಬಲವೆಂದೇ ನಂಬಲಾಗಿದೆ. ಉದರಸ್ಥಾನದ ಅನನ್ತರ ಅದೇ ಪಾರ್ಥಿವರಸಾತ್ಮಕ ಚಿತ್-ಪ್ರಾಣವು ಕಣ್ಠದೇಶಸ್ಥ ತೇಜೋನಾಡೀ ಮುಖೇನ (ಉಪನಿಷತ್ತು ಇದನ್ನು ‘ಉದಾನ’ ಎಂದೂ ವ್ಯವಹೃತಗೊಳಿಸಿದೆ) ಊರ್ಧ್ವಸ್ಥಾನಗಳಿಗೆ (ವಾಕ್-ಪ್ರಾಣ-ಚಕ್ಷುಃ-ಶ್ರೋತ್ರಾದಿಗಳಿಗೆ) ವ್ಯಾಪ್ತವಾಗುತ್ತದೆ. ಇರಾಮಯ ಹಿರಣ್ಮಯಾತ್ಮವು (ಪಾರ್ಥಿವಕರ್ಮ್ಮಾತ್ಮಾವು) ಶರೀರದೊಂದಿಗೆ ಉತ್ಪನ್ನವಾಗುತ್ತಾ ಎಲ್ಲಿ ‘ಉತ್ಪತ್ತಿಸೃಷ್ಟ’ ಇದೆಯೋ, ಅಲ್ಲಿ ಇದೇ ಇರಾಮಯ ಪಾರ್ಥಿವ ಪ್ರತಿಷ್ಠಾತತ್ತ್ವವು ಶರೀರೋತ್ಪತ್ಯನನ್ತರ ಉತ್ಪನ್ನವಾಗುತ್ತಾ ‘ಉತ್ಪನ್ನಸೃಷ್ಟ’ ಆಗಿದೆ. ಅದು ಅನ್ತರ್ಯ್ಯಾಮ ಸಮ್ಬನ್ಧದಿಂದ ಪ್ರತಿಷ್ಠಿತವಾಗಿದ್ದರೆ, ಇದು ಬಹಿರ್ಯ್ಯಾಮ ಸಮ್ಬನ್ಧದಿಂದ ಪ್ರತಿಷ್ಠಿತವಾಗಿರುತ್ತದೆ. ಇದನ್ನು ‘ವಿಭೂತಿ’ ಸಮ್ಬನ್ಧವೆಂದೂ ಹೇಳಬಹುದು. ಇದರ ಪ್ರಭವಸ್ಥಾನವು ಪಾರ್ಥಿವ ಗಾಯತ್ರ ಪ್ರಾಣವಾಗಿದೆ, ಯೋನಿಯು ದಕ್ಷಿಣ ಪ್ರಪದವಾಗಿದೆ, ಹೃದಯಲ್ಲಿ ಪ್ರತಿಷ್ಠಾ, ಆಶಯವು ಸರ್ವಾಙ್ಗಶರೀರವು. ಈ ರೀತಿ ಪಾರ್ಥಿವಪುರುಷನ ಕರ್ಮ್ಮಾತ್ಮವು, ಪ್ರತಿಷ್ಠಾತ್ಮಾ, ರೂಪದಿಂದ ನಮ್ಮ ಆಧ್ಯಾತ್ಮಿಕ ಸಂಸ್ಥಾದಲ್ಲಿ ಎರಡು ಪ್ರಕಾರದಿಂದ ಉಪಭೋಗವಾಗುತ್ತಿದೆ.

ಮುಂದಿನ ಲೇಖನದಲ್ಲಿ  ಕರಾರವಿನ್ದೇನ ಪದಾರವಿನ್ದಮ್.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Tuesday, 23 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪ್ರಜಾತನ್ತು ಪ್ರತಿಷ್ಠಾ ಲಕ್ಷಣ ಮಹಾನಾತ್ಮಾ (೪)

೪. ಪ್ರಜಾತನ್ತು ಪ್ರತಿಷ್ಠಾ ಲಕ್ಷಣ ಮಹಾನಾತ್ಮಾ

ಷಾಟ್‍ಕೌಶಿಕ ಮಹಾನಾತ್ಮವು ವಾಸ್ತವದಲ್ಲಿ ಮಹಾನ್-ಆತ್ಮಾ ಆಗಿದೆ. ವಿಜ್ಞಾನ-ಪ್ರಜ್ಞಾನ-ಭೂತಾತ್ಮಾ ಇತ್ಯಾದಿ ಇತರೆ ಖಣ್ಡಾತ್ಮಗಳು, ಸಮ್ಪೂರ್ಣ ಖಣ್ಡಾತ್ಮಗಳ ಆಧಾರಭೂಮಿಯು, ಸ್ವಯಂ ಚಿದಾತ್ಮವೂ (ಅವ್ಯಯಪ್ರಧಾನ ಷೋಡಶೀ ಪುರುಷವೂ), ಈ ಪಾರಮೇಷ್ಠ್ಯ, ಅಂದರೆ ಚಾನ್ದ್ರ ಮಹಾನ್ ಎಂಬುದರ ಗರ್ಭದಲ್ಲಿ ಪ್ರವಿಷ್ಟವಾಗಿದೆ – “ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ” (ಗೀ. ೭|೧೪). ಸತ್ತ್ವವಿಶಾಲ ಊರ್ಧ್ವಸರ್ಗ, ರಜೋವಿಶಾಲ ತಿರ್ಯಕ್‍ಸರ್ಗ, ತಮೋವಿಶಾಲ ಮೂಲಸರ್ಗ, ಪದಾರ್ಥಮಾತ್ರದ ಆಕೃತಿಗಳು, ಪ್ರಕೃತಿಗಳು, ಅಹಙ್ಕೃತಿಗಳು, ಇವೆಲ್ಲದರ ಆಧಾರಭೂಮಿಯು ಇದೇ ಮಹಾನಾತ್ಮವಾಗಿದೆ. ಅಗ್ನೀಷೋಮಾತ್ಮಿಕಾ ಯಾಜ್ಞಿಕೀ ಸೃಷ್ಟಿ, ಯೋಷಾವೃಷಾತ್ಮಿಕಾ ಮೈಥುನೀಸೃಷ್ಟಿಯ ಮೂಲಾಧಾರವಾದ, ಭೃಗುಮೂರ್ತ್ತಿ ಎಂಬುದೇ ಮಹಾನ್ ಆಗಿದೆ. ಜಗತ್ತಿನ ಉಪಾದಾನಭೂತ ಪೂರ್ವೋಕ್ತ ತ್ರಿವಿಧ ಪಿತರರೂ ಇದೇ ಸೌಮ್ಯ ಮಹಾನ್ ಎಂಬುದರ ಗರ್ಭದಲ್ಲಿ ಪ್ರವಿಷ್ಟರಾಗಿದ್ದಾರೆ. ವಸು-ರುದ್ರ-ಆದಿತ್ಯಾದಿ ೩೩ ಆಙ್ಗಿರಸ ದೇವತಾ, ೬೬ ಆಪ್ಯ ಅಸುರ, ೩೭-ವಾಯವ್ಯ ಗನ್ಧರ್ವ, ಸಮ್ಪೂರ್ಣ ಸೌಮ್ಯ ದೇವತಾ, ಸಮ್ಪೂರ್ಣ ಪಶುಪ್ರಾಣ, ಭೃಗ್ವಙ್ಗಿರೋಮೂರ್ತ್ತಿಗಳು ಇದೇ ಮಹಾನ್ ಎಂಬುದರ ಆಧಾರದಲ್ಲಿ ಜೀವಿತರಾಗಿದ್ದಾರೆ. ಆಪೋಮಯೀ ಲೋಕಸೃಷ್ಟಿಯು ಇದೇ ಆಪ್ಯ ಮಹಾನ್ ಎಂಬುದರ ಮೇಲೆ ಪ್ರತಿಷ್ಠಿತವಾಗಿದೆ. ಆಪ್ಯ ಮಹಾನ್ ಎಂಬುದರ ಇದೇ ಮಹತ್ತನ್ನು ಲಕ್ಷ್ಯದಲ್ಲಿಟ್ಟುಕೊಂಡು, ಇದನ್ನು ಇತರೆ ಖಣ್ಡಾತ್ಮಗಳ ಅಪೇಕ್ಷೆಯಲ್ಲಿ ಒಂದುವೇಳೆ ಮಹಾನ್ ಎಂದು ಕರೆದರೆ, ಅದರಲ್ಲಿ ಆಪತ್ತಿ ಏನು? ಮಹದವಚ್ಛಿನ್ನ ಪಿತರ ಪ್ರಾಣವೇ ಏಳನೇ ಪೀಳಿಗೆಯ ಪರ್ಯ್ಯನ್ತ ವಿತತವಾಗುವ ಪ್ರಜಾತನ್ತುವಿನ ಪ್ರತಿಷ್ಠಾ ಆಗಿದೆ.

ಭೂತಸಂಪೃಕ್ತ ಮಹಾನಾತ್ಮಾ –

ತಾವುಭೌ ಭೂತಸಂಪೃಕ್ತೌ ಮಹಾನ್ ಕ್ಷೇತ್ರಜ್ಞ ಏವ ಚ |
ಉಚ್ಚಾವಚೇಷು ಭೂತೇಷು ಸ್ಥಿತಂ ತಂ ವ್ಯಾಪ್ಯ ತಿಷ್ಠತಃ || ಮನುಃ ೧೨-೧೪ ||
ಉಕ್ತ ಮಾನವ ಸಿದ್ಧಾನ್ತದ ಅನುಸಾರ ಮಹಾನಾತ್ಮಾ ಹಾಗೂ ವಿಜ್ಞಾನಾತ್ಮ ಎಂಬ ಹೆಸರುಗಳಿಂದ ಪ್ರಸಿದ್ಧವಾದ ಕ್ಷೇತ್ರಜ್ಞಾತ್ಮ, ಇವೆರಡೂ ಪೃಥಿವ್ಯಾದಿ ಪಞ್ಚಮಹಾಭೂತಮಾತ್ರಾಗಳಿಂದ (ಸುಸೂಕ್ಷ್ಮ ಭೂತಮಾತ್ರಾಗಳಿಂದ) ಸಂಶ್ಲಿಷ್ಟವಾಗಿ ಅಣೋರಣೀಯಾನ್-ಮಹತೋಮಹೀಯಾನ್ ಭೇದಭಿನ್ನ ಉಚ್ಚಾವಚ ಭೂತಗಳಲ್ಲಿ (ಪ್ರಾಣಿಗಳಲ್ಲಿ) ಅವಿಭಕ್ತ ರೂಪದಲ್ಲಿ ಪ್ರತಿಷ್ಠಿತ ಆ ಚಿದಾತ್ಮವನ್ನು ನಾಲ್ಕೂ ಕಡೆ ವ್ಯಾಪ್ತಗೊಳಿಸಿ ಆಧ್ಯಾತ್ಮಿಕ ಸಂಸ್ಥಾದಲ್ಲಿ ಪ್ರತಿಷ್ಠಿತವಾಗಿರುತ್ತವೆ. ಮನುವಿನ ತಾತ್ಪರ್ಯ್ಯವೇನೆಂದರೆ, ಮಹಾನಾತ್ಮಾ ವೀಧ್ರತತ್ತ್ವವಾಗಿದೆ, ಶುಕ್ರಸಮ್ಬನ್ಧದಿಂದ ಪಞ್ಚಭೂತಗಳಿಂದ ಸಮ್ಪೃಕ್ತವಾಗಿದೆ. ಇದುವೇ ಚಿದಾತ್ಮದ ಯೋನಿ ಆಗಿದೆ. ‘ಯೋ ಬುದ್ಧೇಃ ಪರತಸ್ತು ಸಃ’ ಲಕ್ಷಣವುಳ್ಳ ಚಿದಾತ್ಮವು ಮಹಾನ್ ಎಂಬುದರ ಗರ್ಭದಲ್ಲಿ ಪ್ರತಿಷ್ಠಿತವಾಗಿರುತ್ತಾ ‘ಕ್ಷೇತ್ರಜ್ಞ’ (ಬುದ್ಧಿ-ವಿಜ್ಞಾನಾತ್ಮದ) ಅನುಗ್ರಾಹಕ ಆಗುತ್ತಿದೆ. ಏಕಮಾತ್ರ ಇದೇ ಅಭಿಪ್ರಾಯದಿಂದ ‘ಮಹಾನ್ ಕ್ಷೇತ್ರಜ್ಞ ಏವ ಚ’ ಎಂದು ಹೇಳಲ್ಪಟ್ಟಿದೆ. ಮುಖ್ಯ ಲಕ್ಷ್ಯವು ಮಹಾನಾತ್ಮವೇ ಆಗಿದೆ. ಇದರ ಉತ್ಪತ್ತಿಯು ಪ್ರಧಾನತಃ ‘ಶುಕ್ರ’ದೊಂದಿಗೆ ಸಮ್ಬನ್ಧವಿದೆ ಎಂದು ನಂಬಲಾಗಿದೆ.

ನಮ್ಮ ಆಧ್ಯಾತ್ಮಿಕ ಸಂಸ್ಥಾದಲ್ಲಿ ಪ್ರತಿಷ್ಠಿತ ಮಹಾನಾತ್ಮವು ಕರ್ಮ್ಮಾತ್ಮನೆಂಬ ಹೆಸರಿನಿಂದ ಪ್ರಸಿದ್ಧವಾದ ಜೀವಾತ್ಮದ ಸ್ಥೂಲಶರೀರ ನಿಬನ್ಧನ ಐಹಲೌಕಿಕ ಕರ್ಮ್ಮಭೋಗಾನನ್ತರ ಸ್ವಪ್ರಭವಸ್ಥಾನಾತ್ಮಕ ಚನ್ದ್ರಲೋಕಕ್ಕೆ ಹೋಗುತ್ತದೆ. ಹೇಗೆ ಮಹಾನಾತ್ಮವು ಪ್ರೇತಾವಸ್ಥೆಯಲ್ಲಿ ಸೂಕ್ಷ್ಮ ಭೂತಗಳಿಂದ ಸಮ್ಪರಿಷ್ವಕ್ತ ಆಗಿರುತ್ತದೆಯೋ, ಹಾಗೆಯೇ ಕರ್ಮ್ಮಭೋಕ್ತಾ ಕರ್ಮ್ಮಾತ್ಮವೂ ಈ ಪ್ರಾರಬ್ಧ ನಿಬನ್ಧನ ಸ್ಥೂಲಶರೀರದ ಪರಿತ್ಯಾಗಾನನ್ತರ ಸರ್ವತ್ರ (ಖಗೋಲ) ವ್ಯಾಪ್ತ ಸೂಕ್ಷ್ಮಭೂತಗಳಿಂದ ಸಮ್ಪರಿಷ್ವಕ್ತವಾಗಿದ್ದಾಗ್ಯೂ ಯಾಮೀಯಾತನೆಗಳನ್ನು ಭೋಗಿಸುವುದಕ್ಕಾಗಿ ಆಯಾಯ ಲೋಕ-ವಿಶೇಷಗಳತ್ತ ಗಮನ ಮಾಡುತ್ತದೆ. ‘ತದನ್ತರಪ್ರತಿಪತ್ತೌ ರಹಂತಿ, ಸಮ್ಪರಿಷ್ವಕ್ತಃ – ಪ್ರಶ್ನ ನಿರೂಪಣಾಭ್ಯಾಮ್” (ಬ್ರಹ್ಮಸೂತ್ರ ೩|೧) ಈ ಸೂತ್ರ ಸಿದ್ಧಾನ್ತದ ಅನುಸಾರ ಪೃಥಿವ್ಯಾದಿ ಭೂತಸೂಕ್ಷ್ಮಗಳಿಂದ ಸಮ್ಪನ್ನವಾದ ಸೂಕ್ಷ್ಮ ಆತಿವಾಹಿಕ ಶರೀರ ಧಾರಣೆ ಮಾಡಿಯೇ, ಅದೇ ರೀತಿ ಲೋಕಾನ್ತರೋಪಲಕ್ಷಿತ ಸ್ಥಾನಾನನ್ತರದಲ್ಲಿ ಈ ಕರ್ಮ್ಮಾತ್ಮವು ಗಮನ ಮಾಡುತ್ತದೆ. ಅದು ಹೇಗೆಂದರೆ, ‘ತೃಣಜಲೌಕಾ’ ಎಂಬ ಹೆಸರಿನ ವರ್ಷಾಋತುವಿನ ಜನ್ತುವು ಉತ್ತರ ಪ್ರದೇಶವನ್ನು ಹಿಡಿದುಕೊಂಡು, ಪೂರ್ವಪ್ರದೇಶವನ್ನು ಬಿಡುತ್ತಾ, ಸ್ಥಾನಾನ್ತರ ಮಾಡುತ್ತದೆ. ಕರ್ಮ್ಮಾತ್ಮದ ಇದೇ ಜಲೌಕಾಗತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಭಕ್ತಿಗ್ರನ್ಥವು ಇಂತೆಂದಿದೆ –
ವ್ರಜಂಸ್ತಿಷ್ಠನ್ ಪದೈಕೇನ ಯಥೈವೈಕೇನ ಗಚ್ಛತಿ |
ಯಥಾ ತೃಣಜಲೌಕೇಯಂ ದೇಹೀ ಕರ್ಮ್ಮಗತಿಂ ಗತಃ || (ಶ್ರೀಮದ್ಭಾಗವತ)


ಮುಂದಿನ ಲೇಖನದಲ್ಲಿ  ೫.ಮಹಾನಾತ್ಮದ ಆವಿರ್ಭಾವಕ

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಮಹಾನಾತ್ಮದ ಆವಿರ್ಭಾವಕ (೫)

೫. ಮಹಾನಾತ್ಮದ ಆವಿರ್ಭಾವಕ -

ಸುಸೂಕ್ಷ್ಮ ಭೂತಗಳ ಈ ಆತಿವಾಹಿಕ ಶರೀರವು ಪರಿಮಾಣದಲ್ಲಿ ಅಙ್ಗುಷ್ಠಮಾತ್ರ ಎಂದು ನಂಬಲಾಗಿದೆ. ತನ್ನ ಈ ಪೃಥಿವ್ಯಾದಿ ಭೂತಸೂಕ್ಷ್ಮಾತ್ಮಕ ಅಙ್ಗುಷ್ಠಪರಿಮಾಣಾತ್ಮಕ ಸೂಕ್ಷ್ಮಶರೀರದಿಂದ ಕರ್ಮ್ಮಾತ್ಮದ ವಾಸನಾ-ಭಾವನಾ ವಾಸಿತ-ಭಾವಿತ ಕರ್ಮ್ಮ ಜ್ಞಾನ ಜನಿತ ಶುಭಾಶುಭ ಸಂಸ್ಕಾರಗಳ ಅನುರೂಪವಾಗಿ ಶುಭಾಶುಭ ಲೋಕಾನ್ತರಗಳಲ್ಲಿ ಶುಭಾಶುಭ ಫಲ ಭೋಗಿಸುತ್ತಾ ವಿಚರಿಸುತ್ತಾ ಇರುತ್ತದೆ. ಸೂಕ್ಷ್ಮಶರೀರಾನುಬನ್ಧೀ ಈ ಪಾರಲೌಕಿಕ ಫಲಭೋಗಕಾಲವೆಂದಿಗೆ ಸಮಾಪ್ತಿಯಾಗುತ್ತದೆಯೋ, ಆಗ – ‘ಇತಿ ತು ಪಞ್ಚಮ್ಯಾಮಾಹುತಾವಾಪಃ ಪುರುಷವಚಸೋ ಭವನ್ತಿ’ (ಛಾಂ.ಉ.) ಇದರನುಸಾರ ಪುನಃ ಇಲ್ಲಿ ಇದೇ ಪೃಥಿವೀಲೋಕದಲ್ಲಿ ಸ್ಥೂಲಭೂತಾತ್ಮಕ ಸ್ಥಳದಲ್ಲಿ ಶರೀರ ಧಾರಣೆ ಮಾಡುತ್ತಾ ಅವತೀರ್ಣವಾಗುತ್ತದೆ. 

ವೈಶ್ವಾನರಮೂರ್ತ್ತಿ ಅಗ್ನಿ, ತೈಜಸಮೂರ್ತ್ತಿ ವಾಯು, ಪ್ರಾಜ್ಞಮೂರ್ತ್ತಿ ಇನ್ದ್ರ, ತ್ರಿದೇವಸಮಷ್ಟಿರೂಪ, ಹಾಗೂ ದೇವಸತ್ಯಾತ್ಮಾ ಎಂಬ ಹೆಸರಿನಿಂದ ಪ್ರಸಿದ್ಧ ಕರ್ಮ್ಮಾತ್ಮವು; ಇದನ್ನು ಗರ್ಭವಿಜ್ಞಾನವೇತ್ತ ಮಹರ್ಷಿಗಳು ಔಪಪತ್ತಿಕ ಆತ್ಮಾ ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದಾರೆಯೋ, ಇದು ಆಮುಷ್ಮಿಕ ಕರ್ಮ್ಮಭೋಗಾನನ್ತರ ದಿವ್ಯಪಿತೃಪ್ರಾಣಯುಕ್ತವು ಆನ್ತರಿಕ್ಷ್ಯ ಚಾನ್ದ್ರಪಿತೃಪ್ರಾಣರೂಪದಲ್ಲಿ ಪರಿಣತವಾಗಿಯೇ ಅನ್ನದಲ್ಲಿ ಪ್ರವಿಷ್ಟವಾಗುತ್ತದೆ. ದಿವ್ಯ ನಾನ್ದೀಮುಖ ಪಿತೃಪ್ರಾಣ, ಆನ್ತರಿಕ್ಷ್ಯಚಾನ್ದ್ರ ಋತುಪಿತೃಪ್ರಾಣ, ಪಾರ್ಥಿವ ಅನ್ನಗತ ಅಶ್ರುಮುಖ ಪಿತೃಪ್ರಾಣ, ಮೂರೂ ಪಿತೃ ಪ್ರಾಣಗಳಿಂದ ಸಂಯುಕ್ತವಾದಂತಹಾ ಔಪಪಾತಿಕ ಆತ್ಮವು ಅನ್ನದ ಮುಖೇನ ಪುರುಷಾಗ್ನಿಸಂಸ್ಥಾದಲ್ಲಿ ಮೊತ್ತಮೊದಲು ಪ್ರವಿಷ್ಟವಾಗುತ್ತದೆ. ಪುರುಷಾಗ್ನಿಯಲ್ಲಿ ಆಹುತವಾಗುವ ಅನ್ನವು ಕಾಲಾನ್ತರದಲ್ಲಿ ಶುಕ್ರರೂಪದಲ್ಲಿ ಪರಿಣತವಾಗುತ್ತದೆ. ಇದೇ ಶುಕ್ರವು ಋತುಕಾಲದಲ್ಲಿ ಯೋಷಿದ್ಗರ್ಭದಲ್ಲಿ, ಅಲ್ಲಿನ ಆರ್ತವಾಗ್ನಿಯಲ್ಲಿ (ಶೋಣಿತಾಗ್ನಿಯಲ್ಲಿ) ಆಹುತವಾಗಿ ಮಹಾನಾತ್ಮದ ಆವಿರ್ಭಾವಕವಾಗುತ್ತದೆ.

ಔಪಪಾತಿಕ ಕರ್ಮ್ಮಾತ್ಮಾ –

ಶುಕ್ರವು ಪಿತನ ಅಂಶವಾಗಿದೆ, ಶೋಣಿತವು ಮಾತೆಯ ಭಾಗವಾಗಿದೆ. ಎರಡರ ದಾಮ್ಪತ್ಯಭಾವದಿಂದಲೇ ಚಿದ್‍ಗ್ರಾಹಿಣೀ ಮಹದ್ಯೋನಿಯ ಆವಿರ್ಭಾವವಾಗುತ್ತದೆ. ಇದೇ ಮಹದ್ಯೋನಿಯಲ್ಲಿ ಪ್ರವಿಷ್ಟ ಔಪಪತ್ತಿಕ ಕರ್ಮ್ಮಾತ್ಮವು ಸ್ಥೂಲಶರೀರದಿಂದ ಜನ್ಮ ಪಡೆಯಲು ಸಮರ್ಥವಾಗುತ್ತದೆ. ಅನೇಕ ಜನ್ಮದ ಅನನ್ತರ ಈ ಸ್ಥೂಲ ಜನ್ಮಸಂಸಿದ್ಧಿಯ ಅಧಿಕಾರಿಯಾಗುತ್ತದೆ. ಈ ಔಪಪಾತಿಕ ಆತ್ಮವು ಎಲ್ಲಕ್ಕೂ ಮೊದಲು ಪುರುಷಗತ ಶುಕ್ರಾವಚ್ಛಿನ್ನ ಸೌಮ್ಯಗುಣಕ ಮಹಾನಾತ್ಮದಲ್ಲಿ ಪ್ರತಿಷ್ಠಿತವಾಗುತ್ತದೆ, ಹಾಗಾಗಿ ಇದೇ ಅದರ ಮೊದಲ ಜನ್ಮವು. 

ಭುಕ್ತ ಅನ್ನವು ರೇತವಾಗಿದೆ, ಶುಕ್ರವಾಗಿದೆ. ಪುರುಷಾಗ್ನಿಯು ಶೋಣಿತವಾಗಿದೆ. ಎರಡರ ದಾಮ್ಪತ್ಯಭಾವದಿಂದಲೇ ಪುರುಷನ ಶುಕ್ರಧಾತುವಿನಲ್ಲಿ ಆತ್ಮದ ಮೊತ್ತಮೊದಲ ಗರ್ಭಧಾರಣೆಯು ಆಗುತ್ತದೆ. ಶುಕ್ರ ಶುಕ್ರವಾಗಿದೆ, ಮಾತೃಗತ ಗರ್ಭಾಶಯಸ್ಥ ಶೋಣಿತವು ಶೋಣಿತವಾಗಿದೆ. ಈ ದ್ವಿತೀಯ ದಾಮ್ಪತ್ಯಭಾವದಿಂದ ಶುಕ್ರದ ಮುಖೇನ ಈ ಮಾತೃಗರ್ಭದಲ್ಲಿ ಜನ್ಮ ಪಡೆಯುತ್ತದೆ, ಹಾಗೂ ಇದೇ ಔಪಪಾತಿಕ ಆತ್ಮದ ದ್ವಿತೀಯ ಜನ್ಮವಾಗಿದೆ. 

ಒಂದು ಚಾನ್ದ್ರಸಮ್ವತ್ಸರದ ಅನನ್ತರ ಏವಯಾಮರುತ್ ನಾಮಕ ಗರ್ಭವಾಯುವಿನ ಪ್ರತ್ಯಾಘಾತದಿಂದ ಸ್ವಸ್ಥಾನದಿಂದ ಚ್ಯುತವಾಗುತ್ತಾ ಈ ಮಾತಾಪೃಥಿವಿಯ ಗರ್ಭಕ್ಕೆ ಬರುತ್ತದೆ, ಹಾಗೂ ಇದೇ ಅದರ ತೃತೀಯ ಜನ್ಮವು. 

ದೋಷಮಾರ್ಜಕ-ಹೀನಾಙ್ಗಪೂರಕ-ಅತಿಶಯಾಧಾಯಕ ಭೇದದಿಂದ ತ್ರಿಧರ್ಮ್ಮಾವಚ್ಛಿನ್ನ ಷೋಡಶ (೧೬) ಸ್ಮಾರ್ತ ಸಂಸ್ಕಾರಗಳಿಂದ, ಹಾಗೂ ದ್ವಾತ್ರಿಂಶತ್ (೩೨) ಶ್ರೌತಸಂಸ್ಕಾರಗಳಿಂದ, ಈ ರೀತಿ ಅಷ್ಟಾಚತ್ತ್ವಾರಿಂಶತ್ (೪೮) ಶ್ರೌತ-ಸ್ಮಾರ್ತ-ಸಂಸ್ಕಾರಗಳಿಂದ ಸುಸಂಸ್ಕೃತ-ಶುದ್ಧ-ಪೂತ-ಅತಿಶಯಯುಕ್ತ-ಪೂರ್ಣಲಕ್ಷಣ ದೇಹಿಯು ಬ್ರಹ್ಮಭಾವದಲ್ಲಿ ಪರಿಣತವಾಗುತ್ತದೆ, ಹಾಗೂ ಇದೇ ಇದರ ಚತುರ್ಥಜನ್ಮವಾಗಿದೆ. ಇದೇ ಜೀವದ ಪರಮಪುರುಷಾರ್ಥವಾಗಿದೆ. ಇದೇ ಇದರ ಜನ್ಮಸಾಫಲ್ಯವಾಗಿದೆ.

ಈ ಶುಭಸಂಸ್ಕಾರಾತ್ಮಕ ಶುಭ ಕರ್ಮಗಲ ಪ್ರಭಾವದಿಂದ ಸ್ಥೂಲಶರೀರದ ತ್ಯಾಗಾನನ್ತರ ಈ ಔಪಪಾತಿಕ ಆತ್ಮವು ‘ಪ್ರೇತ’ ಭಾವದಲ್ಲಿ ಪರಿಣತವಾಗಿ ಪರಲೋಕದಲ್ಲಿ ದಿವ್ಯಯೋನಿಯಲ್ಲಿ ಜನ್ಮ ಪಡೆಯುತ್ತದೆ, ಅಶುಭಕರ್ಮ್ಮೋದರ್ಕದಿಂದ ಹೀನ ಪಿಶಾಚಾದಿ ಯೋನಿಯಲ್ಲಿ ಜನ್ಮ ಪಡೆಯುತ್ತದೆ, ಹಾಗೂ ಇದೇ ಈ ಪಾಙ್ಕ್ತ ಯಜ್ಞಾತ್ಮದ ಐದನೆಯ ಜನ್ಮವಾಗಿದೆ.

“ಪಿತೃಭ್ಯೋ ದೇವದಾನವಾಃ” (ಮನುಃ ೩|೨೦೧) - ಈ ಮಾನವ ಸಿದ್ಧಾನ್ತದ ಅನುಸಾರ ಪರಮೇಷ್ಠೀ ಪಿತಾ ಪ್ರಜಾಪತಿಯ ರೇತದಿಂದ ದೇವಸೃಷ್ಟಿಯಾಗುತ್ತದೆ. ‘ಆದಿತ್ಯಾಜ್ಜಾಯತೇ ವೃಷ್ಟಿಃ’ (ಮನುಃ ೩|೭೬) – ಇದರನುಸಾರ ಪ್ರಜಾಪತಿಯ ರೇತದಿಂದ ಉತ್ಪನ್ನ ಪ್ರಾಣದೇವತೆಗಳಿಂದ ಪರ್ಜನ್ಯಾಗ್ನಿಯಲ್ಲಿ ‘ಶ್ರದ್ಧಾ’ ಎಂಬ ಹೆಸರಿನ ಚಾನ್ದ್ರಸೋಮದ ಆಹುತಿಯಾಗುತ್ತದೆ. ಈ ಆಹುತಿಯಿಂದ ‘ವರ್ಷಾ’ದ ಜನ್ಮವಾಗುತ್ತದೆ. ವರ್ಷಾತ್ಮಕ ರೇತದ ಪಾರ್ಥಿವ ಅಗ್ನಿಯಲ್ಲಿ ಆಹುತಿಯಾಗುವುದರಿಂದ ಓಷಧಿಗಳು ಉತ್ಪನ್ನವಾಗುತ್ತವೆ. ಓಷಧಿರೂಪೀ ರೇತವು ಪುರುಷಾಗ್ನಿಯಲ್ಲಿ ಆಹುತಿಯಾಗುವುದರಿಂದ ರೇತ (ಶುಕ್ರ) ಉತ್ಪನ್ನವಾಗುತ್ತದೆ. ರೇತೋಲಕ್ಷಣ ರೇತದ ಯೋಷಿದಗ್ನಿಯಲ್ಲಿ ಆಹುತಿಯಾಗುವುದರಿಂದ ಪ್ರಜೋತ್ಪತ್ತಿಯಾಗುತ್ತದೆ. ಈ ರೀತಿ ಆ ಪಾರಮೇಷ್ಠ್ಯ ದಿವ್ಯ ಪಿತೃತತ್ತ್ವವೇ ಕ್ರಮವಾಗಿ ದೇವ, ವರ್ಷಾ, ಅನ್ನ, ರೇತೋ ಭಾವಗಳಲ್ಲಿ ಪರಿಣತವಾಗುತ್ತಾ ಅನ್ತತೋಗತ್ವಾ ಪ್ರಜಾರೂಪದಲ್ಲಿ ಪರಿಣತವಾಗುತ್ತದೆ. ಪ್ರಜಾ ಎಂಬುದರ ರೇತವು (ಮೂಲಪ್ರತಿಷ್ಠಾ) ಹೃದಯವಾಗಿದೆ, ಹೃದಯದ ರೇತವು ‘ಮನ’ವಾಗಿದೆ, ಮನದ ರೇತವು ‘ವಾಕ್’ ಆಗಿದೆ, ಏಕೆಂದರೆ ವಾಕ್ಕೇ ಮನದ ಮಾನಸಭಾವಗಳನ್ನು ಪ್ರಕಟಗೊಳಿಸುವ ಅನ್ಯತಮ ದ್ವಾರವಾಗಿದೆ. ವಾಗಾಶ್ರಯದ ಹೊರತು ಮಾನಸಜಗತ್ತು ಸರ್ವಥಾ ಶಿಥಿಲವಾಗಿರುತ್ತದೆ. ಇದು ನಿಮ್ನ ಲಿಖಿತ ಬ್ರಾಹ್ಮಣಶ್ರುತಿಯಿಂದ ಪ್ರಮಾಣಿತವಾಗಿದೆ –

“ವಾಗೇವಽರ್ಚಶ್ಚ ಸಾಮಾಸಿ ಚ, ಮನ ಏವ ಯಜೂಂಷಿ |
ಸಾ ಯತ್ರೇಯಂ ವಾಗಾಸೀತ್, ಸರ್ವಮೇವ ತತ್ರಾಕ್ರಿಯತ, ಸರ್ವಂ ಪ್ರಾಜ್ಞಾಯತ |
ಅಥ ಯತ್ರ ಮನ ಆಸೀತ್, ನೈವ ತತ್ರ ಕಿಞ್ಚನಾಕ್ರಿಯತ, ನ ಪ್ರಾಜ್ಞಾಯತ |

ನೋ ಹಿ ಮನಸಾ ಧ್ಯಾಯತಃ ಕಶ್ಚನಾಜಾನಾತಿ “ | (ಶತ ೪|೬|೭|೫)

ಮುಂದಿನ ಲೇಖನದಲ್ಲಿ  ೬. ರೇತೋಮಯ ಕರ್ಮ್ಮಾತ್ಮಾ

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Tuesday, 16 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಮಹಾನಾತ್ಮಾನುಗತ ಪಿತೃತತ್ತ್ವ (೩)

೩. ಮಹಾನಾತ್ಮಾನುಗತ ಪಿತೃತತ್ತ್ವ –

ಆತ್ಮವಿಜ್ಞಾನೋಪನಿಷದನ್ತರ್ಗತ ಮಹದಾತ್ಮವಿಜ್ಞಾನೋಪನಿಷತ್ತಿನ ಪ್ರತಿಪಾದನೆ ಮಾಡುತ್ತಾ ಸಿದ್ಧವಾಗಿರುವುದೇನೆಂದರೆ ಪುರುಷಾತ್ಮಾ-ಅವ್ಯಕ್ತಾತ್ಮಾ-ಯಜ್ಞಾತ್ಮಾ-ಪ್ರಜ್ಞಾನಾತ್ಮಾ-ವಿಜ್ಞಾನಾತ್ಮಾ-ಕರ್ಮ್ಮಾತ್ಮಾ-ಹಂಸಾತ್ಮಾ ಈ ಎಲ್ಲಾ ಖಣ್ಡಾತ್ಮಗಳಲ್ಲಿಯೂ ಶ್ರಾದ್ಧಕರ್ಮ್ಮದ ಸಮ್ಬನ್ಧದಲ್ಲಿ ಏಕಮಾತ್ರ ಚನ್ದ್ರ ಮಹಾನಾತ್ಮಾದೊಂದಿಗಿದೆ. ಮಹಾನಾತ್ಮದ ಆರಮ್ಭಿಕ (ಉಪಾದಾನವು) ಚನ್ದ್ರನಾಗಿದೆ. ಇಲ್ಲಿ ಅಧ್ಯಾತ್ಮ ಸಂಸ್ಥಾದಲ್ಲಿ ಶುಕ್ರ ಎಂಬ ಹೆಸರಿನಿಂದ ಪ್ರಸಿದ್ಧ ಏಳನೇ ಧಾತುವೇ ಚಾನ್ದ್ರ. ಚಾನ್ದ್ರ ಶುಕ್ರದಲ್ಲಿ ಚಾನ್ದ್ರ ಮಹಾನಾತ್ಮವು ಪ್ರತಿಷ್ಠಿತವಾಗಿರುವುದೇ ಈ ಸಜಾತೀಯತೆಯ ಕಾರಣವು. ಈ ಚಾನ್ದ್ರ ಮಹತ್‍ಸೌಮ್ಯಪ್ರಾಣವೇ “ಪಿತರ” ಎಂಬ ಹೆಸರಿನಿಂದ ಸಮ್ಬೋಧಿಸಲ್ಪಟ್ಟಿದೆ. ‘ವಿಧೂರ್ಧ್ವಭಾಗೇ ಪಿತರೋ ವಸನ್ತಿ” ಎಂಬುದು ಆಪ್ತ ಸಿದ್ಧಾನ್ತ. ಸೌಮ್ಯ ಪಿತರವು ಪ್ರೇತ-ಪಾರ್ವಣ-ನಾನ್ದೀಮುಖ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದೆ.

ಶುಕ್ರಗತ ಮಹಾನಾತ್ಮವು ಪಿತರಪ್ರಾಣಮೂರ್ತ್ತಿಯಾಗಿದೆ. ಈ ಪಿತರಪ್ರಾಣವು ಪೃಥಿವೀ-ಅನ್ತರಿಕ್ಷ-ದ್ಯೌ ಭೇದದಿಂದ ಮೂರು ಭಾಗಗಳಲ್ಲಿ ವಿಭಕ್ತವಾಗಿದೆ. ಪಾರ್ಥಿವ ಪಿತರರು ಅಗ್ನಿಪ್ರಧಾನರಾಗಿದ್ದಾರೆ. “ಅಗ್ನಿರ್ಭೂಸ್ಥಾನಃ” (ಯಾ.ನಿ.ದೈ.ಕಾ. ೫|೧) ಎಂಬುದು ಸರ್ವವಿದಿತ ಸಿದ್ಧಾನ್ತವಾಗಿದೆ. ಆನ್ತರಿಕ್ಷ್ಯ ಪಿತರರು ಯಮಾಖ್ಯ ವಾಯುಪ್ರಧಾನರಾಗಿದ್ದಾರೆ. “ವಾಯುರ್ವೇನ್ದ್ರೋ ವಾಽನ್ತರಿಕ್ಷಸ್ಥಾನಃ” (ಯಾ.ನಿ.) ಎಂಬುದು ಪ್ರಸಿದ್ಧವಾಗಿದೆ. ದಿವ್ಯಪಿತರರು ಆದಿತ್ಯಪ್ರಧಾನರಾಗಿದ್ದಾರೆ. “ಸೂರ್ಯ್ಯೋ ದ್ಯುಸ್ಥಾನಃ” (ಯಾ.ನಿ.) ಎಂಬುದೂ ಪ್ರಸಿದ್ಧವಾಗಿದೆ. ಅಗ್ನಿ-ಯಮ-ಆದಿತ್ಯ, ಇವು ಮೂರೂ ಅಗ್ನಿಗಳೇ ಆಗಿವೆ. ಈ ಮೂರರೊಂದಿಗೆ ಕ್ರಮವಾಗಿ ದಿಕ್‍ಸೋಮ, ಚಾನ್ದ್ರಸೋಮಮಯ ಗನ್ಧರ್ವಸೋಮ, ಅಂದರೆ ಗನ್ಧರ್ವಸೋಮಮಯ ಚಾನ್ದ್ರಸೋಮ, ಬ್ರಹ್ಮಣಸ್ಪತಿ ಎಂದು ಪ್ರಸಿದ್ಧವಾದ ಪ್ರಾಣಾತ್ಮಕ ಪವಿತ್ರಸೋಮದ ಸಮ್ಬನ್ಧವಿದೆ. ಅಗ್ನಿ-ಸೋಮ, ಯಮ-ಸೋಮ, ಆದಿತ್ಯ-ಸೋಮ, ತ್ರೈಲೋಕ್ಯದ ಈ ಮೂರು ವಿವರ್ತ್ತಗಳಲಿ ಒಂದುವೇಳೆ ಅಗ್ನಿ-ಸೋಮ ಎರಡರ ಸತ್ತೆ ಇದ್ದರೆ, ಹಾಗೆಯೇ ಸ್ವಸ್ಥಾನದ ಪ್ರಧಾನತೆಯಿಂದ ದಿವ್ಯಲೋಕಸ್ಥ ಪವಿತ್ರಸೋಮವು ಆದಿತ್ಯಾಗ್ನಿಯ ಅಧಿಷ್ಠಾತೃವಾಗುತ್ತದೆ; ಸೋಮದ ಪ್ರಧಾನತೆ ಇರುತ್ತದೆ. ಅಷ್ಟಲ್ಲದೆ ಅಗ್ನಿಸೋಮಗಳೆರಡೂ ಇರುವುದರಿಂದ ಈ ನಾನ್ದೀಮುಖ ಎಂಬ ಹೆಸರಿನ ದಿವ್ಯಪಿತರರಿಗೂ “ಸೌಮ್ಯ” ಎಂದೇ ಕರೆಯಲ್ಪಡುತ್ತದೆ. ಇದೇ ರೀತಿ ವಾಯುಪ್ರಧಾನ ಅನ್ತರಿಕ್ಷದಲ್ಲಿ ಯಮ ವಾಯುವಿನ ಪ್ರಧಾನತೆ ಹಾಗೂ ಗನ್ಧರ್ವಸೋಮದ ಗೌಣತೆಯೂ ಸ್ವತಃ ಸಿದ್ಧವಾಗಿದೆ. ಆದ್ದರಿಂದ ಈ ಪಾರ್ವಣ ಎಂಬ ಹೆಸರಿನ ಆನ್ತರಿಕ್ಷ್ಯ ಪಿತರರನ್ನು “ಯಾಮ್ಯ” ಎನ್ನುವುದು ನ್ಯಾಯಸಙ್ಗತವಾಗಿದೆ. ಹಾಗೆಯೇ ಪೃಥಿವಿಯಲ್ಲ್ ಅಗ್ನಿಯ ಪ್ರಧಾನತೆ ಇದೆ. ಫಲಿತವಾಗಿ ಪಾರ್ಥಿವ ಅಶ್ರುಮುಖ ಪಿತರರಿಗೆ “ಆಗ್ನೇಯ” ಎನ್ನುವುದರಲ್ಲಿ ಯಾವುದೇ ಆಪತ್ತಿ ಇರಲು ಸಾಧ್ಯವಿಲ್ಲ.

ಪೂರ್ವೋಕ್ತ ಮಹಾನಾತ್ಮದಲ್ಲಿ ಸೌಮ್ಯ-ಯಾಮ್ಯ-ಆಗ್ನೇಯ, ಎಂಬ ಮೂರು ಪಿತರರು ಪ್ರತಿಷ್ಠಿತರಾಗಿರುತ್ತಾರೆ. ಈ ಮೂರು ಪಿತರರ ಕಾರಣದಿಂದಲೇ ಮಹಾನಾತ್ಮದಲ್ಲಿ ಸತ್ತ್ವ-ರಜ-ತಮ, ಎಂಬ ಮೂರು ಗುಣ, ಹಾಗೂ ಅಹಙ್ಕೃತಿ-ಪ್ರಕೃತಿ-ಆಕೃತಿ, ಎಂಬ ಮೂರು ಭಾವಗಳು ಉತ್ಪನ್ನವಾಗುತ್ತವೆ. ದಿವ್ಯಸೋಮವು ಶುದ್ಧ ಸತ್ತ್ವಮೂರ್ತ್ತಿಯಾಗಿದೆ. ಅದಕ್ಕೆ ಸಮ್ಬನ್ಧಿಸಿದ ಸತ್ತ್ವಪ್ರಧಾನ ನಾನ್ದೀಮುಖ ಪಿತರಪ್ರಾಣವು ಮಹಾನ್ ಎಂಬುದರಲ್ಲಿ ಸತ್ತ್ವಗುಣದ ವಿಕಾಸ ಮಾಡುತ್ತದೆ. ಆನ್ತರಿಕ್ಷ್ಯ ಸೋಮವು ವಾಯುಮಯ ಆಗಿರುವುದರಿಂದ ಕ್ರಿಯಾಮೂರ್ತ್ತಿ ಆಗುತ್ತಾ ರಜೋಮೂರ್ತ್ತಿ ಆಗಿದೆ. ಅದಕ್ಕೆ ಸಮ್ಬನ್ಧಿಸಿದ ರಜಃ ಪ್ರಧಾನ ಪಾರ್ವಣ ಪಿತರರು ಮಹಾನ್ ಎಂಬುದರಲ್ಲಿ ರಜೋಗುಣದ ಉತ್ತೇಜಕರಾಗಿರುತ್ತಾರೆ. ಪಾರ್ಥಿವಸೋಮವು ಅಗ್ನಿಮಯ ಆಗಿರುವುದರಿಂದ ಅರ್ಥಮೂರ್ತ್ತಿ (ಆವರಣಮೂರ್ತ್ತಿ) ಆಗುತ್ತಾ ತಮೋಮೂರ್ತ್ತಿ ಆಗಿದೆ. ತತ್ಸಮ್ಬನ್ಧೀ ತಮಃಪ್ರಧಾನ ಅಶ್ರುಮುಖ ಪಿತರರು ಮಹಾನ್ ಎಂಬುದರಲ್ಲಿ ತಮೋಗುಣದ ಸಞ್ಚಾರ ಮಾಡಿಸುತ್ತಾರೆ.

ಪಾರ್ಥಿವಾಗ್ನಿಯು ತ್ವಷ್ಟಾಪ್ರಾಣದೊಂದಿಗಿನ ಸಮ್ಬನ್ಧದಿಂದ ಅಪೇನ್ದ್ರಸೋಮಾಹುತಿಯಿಂದ ಇನ್ದ್ರತತ್ತ್ವವನ್ನು ಖಣ್ಡಖಣ್ಡವಾಗಿ ಪರಿಣತಗೊಳಿಸಿ ಆಕಾರರೂಪದ ಅಧಿಷ್ಠಾತೃವಾಗುತ್ತದೆ (ಶತಪಥ ೧೨|೭|೧|೧೪ ಸೌತ್ರಾಮಣೀಯಾಗ). ಈ ಪಾರ್ಥಿವಾಗ್ನಿಯ ಸಮ್ಬನ್ಧದಿಂದಲೇ ಮಹದವಚ್ಛಿನ್ನ ಶುಕ್ರಸ್ಥಿತ ಪಾರ್ಥಿವ ಅರ್ಥಮೂರ್ತ್ತಿಯಾದ ಅಗ್ನಿಪ್ರಧಾನ ಪಿತರಪ್ರಾಣವು ಆಯಾಯ ಪ್ರಾಣಿಗಳ ಆಕಾರಗಳ ಅಧಿಷ್ಠಾತೃವಾಗುತ್ತದೆ. ಆನ್ತರಿಕ್ಷ್ಯ ಯಮವಾಯುವು ಚಾನ್ದ್ರಸೋಮದ ಸಮ್ಬನ್ಧದಿಂದ (ಯಾವುದು ಚಾನ್ದ್ರಸೋಮ ಇನ್ದ್ರಿಯಪ್ರವರ್ತಕ ಪ್ರಜ್ಞಾಮಯ ಪ್ರಾಣೇನ್ದ್ರಮೂರ್ತ್ತಿಯಾಗಿದೆಯೋ ಅದು) ಪ್ರಕೃತಿಭಾವದ (ಇನ್ದ್ರಿಯಸ್ವಭಾವ-ಇನ್ದ್ರಿಯಸಾಮರ್ಥ್ಯದ) ಪ್ರೇರಕವಾಗುತ್ತದೆ. ಈ ಆನ್ತರಿಕ್ಷ್ಯ ರಜೋಮೂರ್ತ್ತಿಯು ಚಾನ್ದ್ರಸೋಮಮಯ ಯಮನ ಸಮ್ಬನ್ಧದಿಂದ, ಅಂದರೆ ಚನ್ದ್ರನ ಸಮ್ಬನ್ಧದಿಂದಲೇ ಶುಕ್ರಸ್ಥ ಮಹದವಚ್ಛಿನ್ನ ಆನ್ನ್ತರಿಕ್ಷ್ಯ ಕ್ರಿಯಾಮೂರ್ತ್ತಿಯಾದ ವಾಯುಪ್ರಧಾನ ಪಿತರಪ್ರಾಣವು ಆಯಾಯ ಪ್ರಕೃತಿಗಳ ಅಧಿಷ್ಠಾತೃವಾಗುತ್ತದೆ. ದಿವ್ಯಲೋಕಸ್ಥ ಆದಿತ್ಯವು ವಿಶುದ್ಧ, ಹಾಗೇ ವಿಧ್ರ ಚಿನ್ಮಯ (ಆತ್ಮಮಯ) ಪವಿತ್ರಸೋಮದ ಸಮ್ಬನ್ಧದಿಂದ ಅಹಂ ಭಾವದ ಪ್ರವರ್ತ್ತಕವಾಗುತ್ತದೆ. ಉದಾ – “ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ” ಇತ್ಯಾದಿ ಮನ್ತ್ರವರ್ಣನೆಗಳಲ್ಲಿ ಸ್ಪಷ್ಟವಾಗಿದೆ. ಈ ಅಹಂ ಭಾವವು ಎಲ್ಲಿಯವರೆಗೆ ಸ್ವಸ್ವರೂಪದಿಂದ ಪ್ರಬುದ್ಧವಾಗಿರುತ್ತದೆಯೋ, ಅಲ್ಲಿಯವರೆಗೆ ಆಯಾಯ ಪ್ರಾಣಿಗಳ ಜೀವನ ಸತ್ತೆಯು ಇರುತ್ತದೆ. ಘೋರತಮ ಸುಷುಪ್ತಿಕಾಲದಲ್ಲಿಯೂ ಅಹಂಭಾವವು ವಿಕಸಿತವಾಗಿರುತ್ತದೆ. ಸದಾ ಜಾಗ್ರತ ಮಹತ್‍ಸ್ವರೂಪದ ಇದೇ ಅಹಂ ಭಾವದ ಅನುಗ್ರಹದಿಂದ ಸುಷುಪ್ತಿಕಾಲದ ಸಮಾಪ್ತಿಯಾದಾಗ ನಮ್ಮ ಮುಖದಿಂದ – “ಸುಖಮಹಮಸ್ವಾಪ್ಸೀಃ” ಎಂಬ ಅಕ್ಷರಗಳು ಹೊರಡುತ್ತವೆ.

ಈ ರೀತಿ ಅಗ್ನಿ-ಯಮ-ಆದಿತ್ಯ, ಎಂಬ ೩ ಪಿತೃಕಲೆಗಳಿಂದ ಕ್ರಮವಾಗಿ ಮಹಾನ್ ಎಂಬುದರಲ್ಲಿ ಆಕೃತಿ-ಪ್ರಕೃತಿ-ಅಹಙ್ಕೃತಿ ಭಾವಗಳ ಉದಯವಾಗುತ್ತದೆ ಹಾಗೂ ದಿಕ್‍ಸೋಮ-ಚಾನ್ದ್ರಸೋಮ-ಪವಿತ್ರಸೋಮ ಎಂಬೀ ೩ ಪಿತೃಕಲೆಗಳಿಂದ ಕ್ರಮವಾಗಿ ತಮ-ರಜ-ಸತ್ತ್ವ ಎಂಬ ೩ ಗುಣಗಳ ಉದಯವಾಗುತ್ತದೆ. ಮಹಾನಾತ್ಮವೇ ಅಧ್ಯಾತ್ಮಸಂಸ್ಥಾದ ಮೂಲಾಧಾರವಾಗಿದೆ; ಇದು ಷಡ್‍ಭಾವಾಪನ್ನವಾಗಿದೆ. ಇದೇ ಆಧಾರದಲ್ಲಿ – ಷಾಟ್ಕೌಶಿಕಮಿದಂ ಸರ್ವಮ್ ಎಂಬ ಸೂಕ್ತಿಯು ಪ್ರಚಲಿತವಾಗಿದೆ.

ಷಾಟ್‍ಕೌಶಿಕ ಮಹಾನಾತ್ಮ ಪರಿಲೇಖಃ


ಮಹಾನಾತ್ಮಾ-ಸೌಮ್ಯಃ, ಶುಕ್ರಸ್ಥಃ ಪಿತರಪ್ರಾಣಾಧಿಷ್ಠಾತಾ


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ