Tuesday, 20 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪಿತೃ “ಸಹಃ” ಸ್ವರೂಪವಿಜ್ಞಾನ (೧೮)

೧೮. ಪಿತೃ “ಸಹಃ” ಸ್ವರೂಪವಿಜ್ಞಾನ

ಈಗ ಪ್ರಜಾತನ್ತುವಿತಾನಕ್ಕೆ ಸಮ್ಬನ್ಧವಿರುವಂತಹಾ ಒಂದು ವಿಶೇಷ ತತ್ತ್ವದತ್ತ ಶ್ರಾದ್ಧಕರ್ಮ್ಮಪ್ರೇಮಿಗಳ ಧ್ಯಾನವನ್ನು ಆಕರ್ಷಿತಗೊಳಿಸಲಾಗುತ್ತದೆ. ಇದರ ಆಧಾರದಲ್ಲಿಯೇ ಆರ್ಷ ಶ್ರಾದ್ಧಕರ್ಮ್ಮವು ಪ್ರಧಾನರೂಪದಲ್ಲಿ ಪ್ರತಿಷ್ಠಿತವಾಗಿದೆ. ಇದೇ ನಿರೂಪಣೀಯ ಪ್ರಧಾನ ತತ್ತ್ವವು ಋಗ್ವೇದ ಪರಿಭಾಷಾನುಸಾರ ‘ಸಹ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸರ್ವಜಗದಾಲಮ್ಬನ, ಬ್ರಹ್ಮಕರ್ಮ್ಮಮಯ, ಸದಸನ್ಮೂರ್ತ್ತಿ ಅವ್ಯಯ ಪುರುಷನ ಆನನ್ದ-ವಿಜ್ಞಾನ-ಮನಃ-ಪ್ರಾಣ-ವಾಕ್ ಎಂಬ ಹೆಸರಿನ ಐದು ಕಲೆಗಳು ಸುಪ್ರಸಿದ್ಧವಾಗಿವೆ. ಪಞ್ಚಕಲಾ ಅವ್ಯಯ ಪುರುಷನ ಕಲಾತ್ಮಕ ವಿವರ್ತ್ತಭಾವದ ಹೆಸರೇ ‘ಇದಂ ವಿಶ್ವಂ’ ಎಂಬುದು. ಪ್ರಯಾಸ ಪಟ್ಟರೂ ಐದು ಕಲೆಗಳ ಹೊರತು ಅನ್ಯ ವಸ್ತುತತ್ತ್ವಗಳು ಸರ್ವಥಾ ಅನುಪಲಬ್ಧವಾಗಿವೆ. ಐದು ಕಲೆಗಳ, ಅಂದರೆ ಪಞ್ಚಕಲೋಪೇತ ಅವ್ಯಯಪುರುಷನ ಇದೇ ಸರ್ವಾಧಾರರೂಪೀ ಸರ್ವರೂಪತೆಯ ಸ್ಪಷ್ಟೀಕರಣ ಮಾಡುತ್ತಾ, ಅವ್ಯಯಾವತಾರವನ್ನು ಭಗವದ್ಗೀತೆಯು ಹೇಳುತ್ತದೆ –

ಮತ್ತಃ ಪರತರಂ ನಾನ್ಯತ್ ಕಿಞ್ಚಿದಸ್ತಿ ಧನಞ್ಜಯ !
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ || (ಗೀ ೭|೭)

ಈ ೫ ಅವ್ಯಯಕಲೆಗಳ ಸಮನ್ವಯದಿಂದ ಈ ವಿಶ್ವ ಸಮಷ್ಟಿ ಹಾಗೂ ವ್ಯಷ್ಟಿ ಎಂಬೆರಡು ಪ್ರಕಾರದಿಂದ ಪಞ್ಚಭಾವಾತ್ಮಕವಾಗುತ್ತಿವೆ. ಉದಾ – ವ್ಯಷ್ಟಿ ಸಮರ್ಥಕ ಮಾನವ ಶರೀರವನ್ನೇ ನಿಮ್ಮ ಲಕ್ಷ್ಯ ಮಾಡಿಕೊಳ್ಳಿ. ಏಕೆಂದರೆ ಶ್ರಾದ್ಧಪ್ರಕರಣದಲ್ಲಿ ಶ್ರಾದ್ಧಕರ್ಮ್ಮಾನುಗತ ಮಾನವೋದಾಹರಣೆಯೇ ಸುಸಙ್ಗತ ಎಂದು ಒಪ್ಪಲಾಗಿದೆ. ಪುರುಷಸಂಸ್ಥಾದಲ್ಲಿ ಆನನ್ದ, ವಿಜ್ಞಾನ, ಮನಃ, ಪ್ರಾಣ, ಅನ್ನ ಎಂಬ ೫ ಕೋಶಗಳೆಂದು ನಂಬಲಾಗಿದೆ.

ಐದರಲ್ಲೂ ವಾಙ್ಮಯ ಅನ್ನಕೋಶವು ಸರ್ವಾಪೇಕ್ಷಯಾ ಬಹಿಃಸ್ತರವಾಗಿದೆ, ಆನನ್ದಮಯಕೋಶವು ಸರ್ವಾನ್ತರತಮವಾಗಿದೆ. ಆನನ್ದಮಯಕೋಶದ ಆಧಾರದಲ್ಲಿ ವಿಜ್ಞಾನಮಯ ಕೋಶ, ಇದರ ಆಧಾರದಲ್ಲಿ ಮನೋಮಯಕೋಶವು, ಇದರ ಆಧಾರದಲ್ಲಿ ಪ್ರಾಣಮಯಕೋಶವು, ಹಾಗೂ ಇದರ ಆಧಾರದಲ್ಲಿ ಅನ್ನಮಯ ಕೋಶವು  ಪ್ರತಿಷ್ಠಿತವಾಗಿವೆ. ಪ್ರತ್ಯಕ್ಷದೃಷ್ಟ ಭೌತಿಕ ಪಿಣ್ಡವೇ (ಶರೀರ) ಅನ್ನಮಯಕೋಶವಾಗಿದೆ. ಅಂದರೆ ರಸಾಸೃಙ್ ಮಾಂಸಮೇದೋಽಸ್ಥಿ ಮಜ್ಜಾಶುಕ್ರಾತ್ಮಕ ಸಪ್ತಧಾತು ಸಮಷ್ಟಿಯೇ ಅನ್ನಮಯಕೋಶವಾಗಿದೆ. ಹಾಗೂ ವಿಕಾರ ಕ್ಷರ ಭಾವಾನುಬನ್ಧದಿಂದ ಕ್ಷಣ ಕ್ಷಣ ಶೀರ್ಯ್ಯಮಾಣವಾಗುವುದರಿಂದ ಈ ಕೋಶವು ‘ಶರೀರ’ ಎಂಬ ಹೆಸರಿನಿಂದ; ಅಥವಾ ಇತರೆ ಆತ್ಮವಿವರ್ತ್ತಗಳ ಆಶ್ರಯ ಭೂಮಿಯಾಗುವುದರಿಂದ ಶರೀರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
(ಹೆಚ್ಚಿನ ವಿವರಣೆ – ೧. ಅನ್ನಮಯಕೋಶಃ (ಅನ್ನಮ್) - http://veda-vijnana.blogspot.com/2018/10/blog-post_9.html)

ಕ್ಷರಪರಮಾಣು ಸಂಘವನ್ನು ಒಂದು ಸೂತ್ರದಲ್ಲಿ ಬದ್ಧವಾಗಿರಿಸುವ ವಿಧರ್ತ್ತಾ ತತ್ತ್ವವೇ ಪ್ರಾಣಮಯಕೋಶವಾಗಿದೆ. ಅದು ಶರೀರಚೇಷ್ಟಾಗಳ ಮೂಲಪ್ರವರ್ತ್ತಕ ಎಂದು ನಂಬಲಾಗಿದೆ. ಪ್ರಾಣೋತ್ಕ್ರಾನ್ತಿಯಿಂದ ಅದೇ ರೀತಿಯ ಶಾರೀರಧಾತುಗಳು ಶ್ಲಥಾವಯವ ಆಗುತ್ತವೆ. ಉದಾ – ಕಾಲಾತಿಕ್ರಮದಿಂದ ಉತ್ಕ್ರಾನ್ತ ಪ್ರಾಣಾನುಗತ ಭೂತಪಿಣ್ಡವು ಜೀರ್ಣ-ಶೀರ್ಣವಾಗುತ್ತದೆ.
(ಹೆಚ್ಚಿನ ವಿವರಣೆ – ೨. ಪ್ರಾಣಮಯಕೋಶಃ (ಪ್ರಾಣಃ) - http://veda-vijnana.blogspot.com/2018/10/blog-post_11.html)

ಕ್ರಿಯಾಪ್ರವರ್ತ್ತಕ ಪ್ರಾಣದ ಕ್ರಿಯಾಧರ್ಮ್ಮದ ಮೂಲಾಲಮ್ಬದ ಕಾಮನಾಪ್ರವರ್ತ್ತಕ ತತ್ತ್ವವಿಶೇಷವೇ ಮನೋಮಯ ಕೋಶವಾಗಿದೆ.
(ಹೆಚ್ಚಿನ ವಿವರಣೆ – ೩. ಮನೋಮಯಕೋಶಃ (ಮನಃ) - http://veda-vijnana.blogspot.com/2018/10/blog-post_43.html)

ಮಾನಸ ಜಗತ್ತಿನಲ್ಲಿ ಚಿಚ್ಛಕ್ತಿಯ ಸಞ್ಚಾರ ಮಾಡುವ, ಮನೋಮಯಕೋಶವನ್ನು ಭೂತಾಸಕ್ತಿಯಿಂದ ಉಳಿಸುವಂತಹಾ ಚೇತನಾಮಯ ತತ್ತ್ವವಿಶೇಷವೇ ವಿಜ್ಞಾನಮಯಕೋಶವಾಗಿದೆ.
(ಹೆಚ್ಚಿನ ವಿವರಣೆ – ೪. ವಿಜ್ಞಾನಮಯಕೋಶಃ (ವಿಜ್ಞಾನಮ್) - http://veda-vijnana.blogspot.com/2018/10/blog-post_12.html)

ವಿಜ್ಞಾನ-ಮನಃ-ಪ್ರಾಣ-ಅನ್ನ, ಎಂಬ ನಾಲ್ಕನ್ನೂ ತಮ್ಮ ಆಕಾಶಾತ್ಮಕ ಭೂಮಾಭಾಗದಲ್ಲಿ ಪ್ರತಿಷ್ಠಿತವಾಗಿರಿಸುವ, ಸ್ವಾನುಗ್ರಹದಿಂದ ಗ್ರನ್ಥಿವಿಮೋಕದಿಂದ ಶಾಶ್ವತ ಶಾನ್ತಿ ಪ್ರದಾನ ಮಾಡುವ ‘ರಸ’ ಎಂಬ ಹೆಸರಿನ ತತ್ತ್ವ ವಿಶೇಷವೇ ಆನನ್ದಮಯಕೋಶವಾಗಿದೆ.
(ಹೆಚ್ಚಿನ ವಿವರಣೆ – ೫. ಆನನ್ದಮಯಕೋಶಃ (ಆನನ್ದಮ್) - http://veda-vijnana.blogspot.com/2018/10/blog-post_13.html)

ಈ ಐದರಲ್ಲಿ ಮಧ್ಯಸ್ಥ ಮನೋಮಯಕೋಶಕ್ಕೆ ಎರಡೂ ಕಡೆ ಸಮ್ಬನ್ಧವಿದೆ. ಇದೇ ಮನವು ವಿಜ್ಞಾನಾನುಗತವಾಗುತ್ತಾ ಆನನ್ದಸಮ್ಪತ್ತಿಯ ಅನುಗ್ರಹದಿಂದ ಮುಕ್ತಿಭಾವಪ್ರವರ್ತ್ತಕವಾಗುತ್ತದೆ, ಹಾಗೂ ಇದೇ ಮನವು ಪ್ರಾಣಾನುಗತವಾಗುತ್ತಾ ಅನ್ನಸಮ್ಪತ್ತಿಯ ಅನುಗ್ರಹದಿಂದ ಸೃಷ್ಟಿಭಾವ-ಪ್ರವರ್ತ್ತಕವಾಗುತ್ತದೆ. ಉದಾ – ‘ಮನ ಏವ ಮನುಷ್ಯಾಣಾಂ ಕಾರಣಂ-ಬನ್ಧಮೋಕ್ಷಯೋಃ’ ಇತ್ಯಾದಿ ವಚನಗಳಿಂದ ಸ್ಪಷ್ಟವಾಗಿದೆ.

ಉಕ್ತ ಐದೂ ಕೋಶಗಳಿಂದ ಕೇವಲ ‘ಅನ್ನಮಯ’ ಕೋಶದತ್ತ ವಿಶೇಷ ರೂಪದಲ್ಲಿ ಓದುಗರ ಧ್ಯಾನವನ್ನು ಆಕರ್ಷಿತಗೊಳಿಸುವ ಉದ್ದೇಶವಿಲ್ಲಿದೆ. ಅನ್ನಾಹುತಿಯಿಂದ ಉತ್ಪನ್ನವಾಗುವ ರಸಾದಿ ಶುಕ್ರಾನ್ತ ೭ ಧಾತುಗಳು, ಓಜ, ಮನ, ಎಂಬ ಮೂರೂ ವಿವರ್ತ್ತಗಳು ಅನ್ನಮಯಕೋಶದಲ್ಲಿಯೇ ಅನ್ತರ್ಭಾವವಾಗಿದೆ. ತ್ರಿಭಾವಾಪನ್ನ ಇದೇ ಅನ್ನಮಯಕೋಶವು ಪ್ರಾಣಮಯ ಅವ್ಯಯಕೋಶದ ಮೇಲೆ ಪ್ರತಿಷ್ಠಿತವಾಗಿದೆ.
> ಅನ್ನರಸಮಯ (ತದ್ಗತ ಶುದ್ಧ ಸೋಮಮಯ) ಮನವು ದಿವ್ಯ ಧಾತುವಾಗಿದೆ,
> ಅನ್ನಗತ ಪ್ರಾಣಾತ್ಮಕ ಓಜವು ಆನ್ತರಿಕ್ಷ್ಯ ಧಾತುವಾಗಿದೆ, ಹಾಗೂ
> ಅನ್ನಗತ ವಾಗಾತ್ಮಿಕಾ ಸಪ್ತಧಾತು ಸಮಷ್ಟಿಯು ಪಾರ್ಥಿವ ಧಾತುವರ್ಗವಾಗಿದೆ.

ದಿವ್ಯ ಮನ, ಆನ್ತರಿಕ್ಷ್ಯ ಓಜ, ಪಾರ್ಥಿವ ಸಪ್ತ ಧಾತು, ಎಂಬೀ ಮೂರೂ ವಿವರ್ತ್ತಗಳ ಪ್ರತಿಷ್ಠಾವು ಅನ್ನವಾಗಿದೆ. ಅನ್ನದ ಉತ್ಪತ್ತಿಯು ಚಾನ್ದ್ರಸೋಮದ ಪ್ರಧಾನ ಸಹಯೋಗದಿಂದ ಎಂದು ಈಗಾಗಲೇ ಹೇಳಲಾಗಿದೆ. ಇತರೆ ಶಬ್ದಗಳಲ್ಲಿ ವಿವರಿಸುವುದಾದರೆ ಚಾನ್ದ್ರಸೋಮವೇ ವೃಷ್ಟಿಯಿಂದ ಅನ್ನರೂಪದಲ್ಲಿ ಪರಿಣತವಾಗುತ್ತದೆ. ಸ್ವಸೋಮರಸದಿಂದ ವೃಷ್ಟಿಯ ಮುಖೇನ ಅನ್ನದ ಉಪಾದಾನವಾಗುವ ಈ ಸೋಮಮಯ ಚನ್ದ್ರನ ‘ರೇತಃ-ಯಶಃ -ಶ್ರದ್ಧಾ’ ಎಂಬ ಹೆಸರಿನ ಮೂರು ಮನೋತಾ ಎಂದು ನಂಬಲಾಗಿದೆ. ಯಾವ ತತ್ತ್ವದ ಆಧಾರದಲ್ಲಿ ಯಾವ್ಯಾವ ಸ್ವಸ್ವರೂಪದಲ್ಲಿ ಪ್ರತಿಷ್ಠಿತವಾಗಿರುತ್ತದೆಯೋ, ಯಾವ ತತ್ತ್ವದ ಹೃದ್ಯ ಮನವು ಸ್ವಸ್ವರೂಪ ರಕ್ಷೆಗಾಗಿ ಯಾವ ತತ್ತ್ವವನ್ನು ಆಶ್ರಯಿಸುತ್ತದೆಯೋ, ಆ ಆಶ್ರಯವೇ ‘ಮನಾಂಸಿ-ಓತಾನಿ’ ನಿರ್ವಚನದಿಂದ ‘ಮನೋತಾ’ ಎಂದು ಕರೆಯಲ್ಪಟ್ಟಿದೆ.

ಚನ್ದ್ರದ ಸ್ವರೂಪವು ಉಕ್ತ ಮೂರು ತತ್ತ್ವಗಳ ಆಶ್ರಯದಿಂದಲೇ ಪ್ರತಿಷ್ಠಿತವಾಗಿದೆ. ಮೂರೂ ಉತ್ಕ್ರಾನ್ತವಾಗಲು ಚನ್ದ್ರನ ಯಾವುದೇ ಸ್ವರೂಪವು ಉಳಿಯುವುದಿಲ್ಲ. ಹಾಗಾಗಿ ಇದನ್ನು ನಾವು ಅವಶ್ಯವಾಗಿಯೇ ‘ಚಾನ್ದ್ರಮನೋತಾ’ ಎಂದು ಹೇಳಬಹುದು. ಸಿದ್ಧ ವಿಷಯವೇನೆಂದರೆ, ಚಾನ್ದ್ರರಸವು ಈ ಮೂರೂ ಮನೋತಾ-ರಸಗಳಿಂದ ನಿತ್ಯ ಸಂಶ್ಲಿಷ್ಟವಾಗಿಯೇ ಅನ್ನದ ಉತ್ಪಾದಕವಾಗುತ್ತದೆ. ಫಲಿತವಾಗಿ ಉತ್ಪನ್ನ ಅನ್ನದಲ್ಲಿಯೂ ಈ ಮೂರರ ಸಮನ್ವಯವು ಸಿದ್ಧವಾಗುತ್ತದೆ. ಉತ್ಪನ್ನ ಅನ್ನದಲ್ಲಿ ಚಾನ್ದ್ರರಸಾನುಗೃಹೀತಾ ಮನೋತ್ರಯೀ ಪ್ರತಿಷ್ಠಿತವಾಗಿದೆ. ಅಲ್ಲಿ ಉತ್ಪನ್ನ ಅನ್ನದಲ್ಲಿ ಪಾರ್ಥಿವ-ಆನ್ತರಿಕ್ಷ್ಯ-ದಿವ್ಯ, ಎಂಬೀ ಮೂರೂ ಧಾತುಗಳು ಪ್ರತಿಷ್ಠಿತವಾಗಿವೆ ಎಂದು ಹೇಳಲಾಗಿದೆ, ಹಾಗೂ ಇವುಗಳನ್ನು ಕ್ರಮವಾಗಿ ಸಪ್ತಧಾತುಸಮಷ್ಟಿ, ಓಜ, ಮನ ಎಂಬ ಹೆಸರುಗಳಿಂದ ವ್ಯವಹೃತಗೊಳಿಸಲಾಗಿದೆ. ಚಾನ್ದ್ರರಸದಿಂದ ಅನ್ನದಲ್ಲಿ ಭುಕ್ತ ರೇತಃ-ಯಶಃ-ಶ್ರದ್ಧಾ ಎಂಬ ಮೂರು ಮನೋತಾ ರಸಗಳ ಕ್ರಮವಾಗಿ ಶುಕ್ರ-ಓಜ-ಮನದೊಂದಿಗೆ ಸಮ್ಬನ್ಧವಾಗುತ್ತದೆ. ರೇತೋಭಾವವು ಶುಕ್ರದ ಪ್ರತಿಷ್ಠಾ ಆಗುತ್ತದೆ, ಯಶೋಭಾವ ಓಜದ ಪ್ರತಿಷ್ಠಾ ಆಗುತ್ತದೆ, ಹಾಗೂ ಶ್ರದ್ಧಾತತ್ತ್ವವು ಮನದ ಆಲಮ್ಬನವಾಗುತ್ತದೆ. ಶ್ರದ್ಧೆಯು ಮನದಿಂದ ಉಂಟಾಗುತ್ತದೆ, ಯಶವು ಓಜಸ್ವೀಗೆ ಸಿಗುತ್ತದೆ, ರೇತಃಪ್ರಜಾತಿಯು ಶುಕ್ರದ ಮೇಲೆ ಅವಲಮ್ಬಿತವಾಗಿರುತ್ತದೆ. ಈ ರೀತಿ ಚಾನ್ದ್ರರಸದಿಂದ ಅನ್ನದಲ್ಲಿ ಭುಕ್ತ ಮನೋತಾತ್ರಯಗಳು ಈ ಕ್ರಮದಿಂದ ವಿಭಕ್ತವಾಗಿರುತ್ತದೆ –


ಉಕ್ತ ಮೂರೂ ಚಾನ್ದ್ರ ಮನೋತಗಳಲ್ಲಿ ಪ್ರಕೃತದಲ್ಲಿ ಶುಕ್ರಧಾತುವಿಗೆ ಸಮ್ಬನ್ಧವಿರುವ ‘ರೇತಃ’ ಎಂಬ ಹೆಸರಿನ ಮೊದಲ ಮನೋತವೇ ನಮ್ಮ ‘ಸಹ’ ತತ್ತ್ವದ ಪ್ರತಿಷ್ಠಾ ಆಗಿದೆ, ಇದರ ನಿರೂಪಣೆಯು ಪ್ರಕ್ರಾನ್ತವಾಗಿದೆ. ಚಾನ್ದ್ರರಸದ ಸ್ವಾಭಾವಿಕ ಆಕರ್ಷಣೆಯು ರೇತೋಮಯ ಶುಕ್ರದೊಂದಿಗೆ ನಿತ್ಯ ಸುರಕ್ಷಿತವಾಗಿರುತ್ತದೆ, ಹಾಗೂ ಇದಕ್ಕೆ ಕಾರಣವು ಏಕಮಾತ್ರ ಸಜಾತೀಯಾನುಬನ್ಧವು. ಚಾನ್ದ್ರರಸವು ವೃಷ್ಟಿರೂಪದಲ್ಲಿ ಪರಿಣತವಾಯಿತು. ವೃಷ್ಟಿಯು ಅನ್ನರೂಪದಲ್ಲಿ ಪರಿಣತವಾಯಿತು, ಭುಕ್ತಾನ್ನವು ಶುಕ್ರರೂಪದಲ್ಲಿ ಪರಿಣತವಾಯಿತು. ಈ ರೀತಿ ಪರಮ್ಪರಾನುಗತವಾಗಿ ಅನ್ನದಿಂದ ಚಾನ್ದ್ರಪಿತೃತತ್ತ್ವವು ಶುಕ್ರದಲ್ಲಿ ಪ್ರತಿಷ್ಠಿತವಾಗುತ್ತದೆ. ಇದನ್ನು ನಾವು ಪೂರ್ವದಲ್ಲಿ ‘ಭೂತಸಂಪರಿಷ್ವಕ ಮಹಾನಾತ್ಮಾ’ ಎಂದು ಹೇಳಿದ್ದೇವೆ. ಅದು ಕರ್ಮ್ಮಾತ್ಮೋತ್ಕ್ರಾನ್ತಿಯ ನಂತರ ‘ಪ್ರೇತಾತ್ಮಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಾ, ಅದೇ ಆಗಮನ ಪಥದಲ್ಲಿ ಸ್ವಪ್ರಭವದಿಂದ ಚನ್ದ್ರಲೋಕಕ್ಕೆ ಹೋಗಿ ೧೩ ಮಾಸಾನನ್ತರ ಸಾಪಿಣ್ಡ್ಯಭಾವವನ್ನು ಹೊಂದುತ್ತದೆ.

ಯಾವ ರೀತಿ ಇರಾರಸಮಯ ಪಾರ್ಥಿವ ಕರ್ಮ್ಮಾತ್ಮವು ಪರಮ್ಪರಾನುಗತವಾಗಿ, ಸಾಕ್ಷಾತ್-ರೂಪದಿಂದ ಎರಡು ರೀತಿಯಿಂದ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತವಾಗುತ್ತದೆಯೋ, ಇವೆರಡೂ ರೂಪಗಳನ್ನು ಪೂರ್ವದಲ್ಲಿ ‘ಕರ್ಮ್ಮಾತ್ಮಾ, (ಪ್ರಪದದ್ವಾರಾ ಪ್ರವಿಷ್ಟ) ಪ್ರತಿಷ್ಠಾತ್ಮಾ’ ಎಂಬ ಹೆಸರಿನಿಂದ ವಿಸ್ತಾರವಾಗಿ ನಿರೂಪಣೆ ಮಾಡಲಾಗಿದೆಯೋ ಹಾಗೆಯೇ ಚಾನ್ದ್ರರೇತೋರಸಮಯ ಮಹಾನಾತ್ಮವೂ ಪರಮ್ಪರಾನುಗವಾಗಿ, ಸಾಕ್ಷಾತ್‍ರೂಪದಿಂದ, ಎರಡು ಪ್ರಕಾರದಿಂದಲೇ ಶುಕ್ರದಲ್ಲಿ ಪ್ರತಿಷ್ಠಿತವಾಗುತ್ತದೆ. ಪರಮ್ಪರಾನುಗತವಾಗಿ ಶುಕ್ರದಲ್ಲಿ ಪ್ರತಿಷ್ಠಿತವಾಗುವ ಪಿತೃಪ್ರಾಣಮೂರ್ತ್ತಿ ಮಹಾನಾತ್ಮದ ನಿರೂಪಣೆಯನ್ನು ‘ಅಥಾತೋ ರೇತಸಃ ಸೃಷ್ಟಿಃ’ ರೂಪದಲ್ಲಿ ಪೂರ್ವದಲ್ಲಿ ಮಾಡಲಾಗಿದೆ. ಅನ್ನದಿಂದ ಪರಮ್ಪರಾನುಗತ ಇದೇ ಚಾನ್ದ್ರ ಮಹಾನ್ ಎಂಬುದು ಕರ್ಮ್ಮಾನುಸಾರವಾಗಿ ಯೋನಿಯ ಪ್ರದಾತಾ ಆಗುತ್ತದೆ. ಇದೇ ಪರಮ್ಪರಾಸಿದ್ಧ ಯೋನಿಭಾವಪ್ರವರ್ತ್ತಕ ಚಾನ್ದ್ರ ಮಹಾನಾತ್ಮದ ಆಗಮನದ ರಹಸ್ಯವನ್ನು ಅನಾವರಣ ಮಾಡುತ್ತಾ ಮಹರ್ಷಿ ಕೌಷೀತಕಿಯು ಹೇಳುತ್ತಾರೆ –
“ಏತದ್ವೈ ಸ್ವರ್ಗಸ್ಯ ಲೋಕಸ್ಯ ದ್ವಾರಃ-ಯಚ್ಚನ್ದ್ರಮಃ | ತಂ ಯಃ ಪ್ರತ್ಯಾಹ-ತಮತಿಸೃಜತೇ | ಅಥ ಯ ಏನಂ ನ ಪ್ರತ್ಯಾಹ-ತಮಿಹ ವೃಷ್ಟಿರ್ಭೂತ್ತ್ವಾ ವರ್ಷತಿ | ಸ ಇಹ ಕೀಟೋ ವಾ, ಪತಙ್ಗೋ ವಾ, ಶಕುನಿರ್ವಾ, ಶಾರ್ದುಲೋ ವಾ, ಮತ್ಸೋ ವಾ, ಪರಶ್ವಾ ವಾ, ಪುರುಷೋ ವಾ, ಅನ್ಯೋ ವಾ-ಏತೇಷು ಸ್ಥಾನೇಷು ಪ್ರತ್ಯಾಜಾಯತೇ-ಯಥಾಕರ್ಮ್ಮ, ವಥಾವಿದ್ಯಮ್” – ಕೌಷೀತಕಿ ಬ್ರಾಹ್ಮಣೋಪನಿಷತ್ ೧|೨|೨

ಈಗ ನಮ್ಮ ಸಮ್ಮುಖದಲ್ಲಿ ಆ ಪಿತೃಪ್ರಾಣವು ಬರುತ್ತದೆ; ಅದು ಚಾನ್ದ್ರನಾಡಿಯಿಂದ ಸಾಕ್ಷಾತ್ ರೂಪದಿಂದ ಶುಕ್ರಕ್ಕೆ ಬಂದು ಅಲ್ಲಿಯೇ ಪ್ರತಿಷ್ಠಿತವಾಗುತ್ತದೆ, ಹಾಗೂ ‘ಸಹಃ’ ಎಂಬ ಹೆಸರಿನಿಂದ ವಿಭೂಷಿತ, ಸಾಕ್ಷಾತ್ ರೂಪದಿಂದ ಆಗತ ಪಿತೃಪ್ರಾಣವನ್ನು ನಾವೀಗ ವಿವರಿಸಲಿದ್ದೇವೆ. ಯಾವ ನಕ್ಷತ್ರದಲ್ಲಿ ಪ್ರಾಣಿಯ ಜನ್ಮವು ಆಗುತ್ತದೆಯೋ, ಜನ್ಮಾನನ್ತರ ಅದೇ ನಕ್ಷತ್ರಪ್ರಣಾಲಿಯನ್ನು ಉಪಕ್ರಮ ಮಾಡಿಕೊಂಡು ಆ ಚಾನ್ದ್ರಪಿತೃಪ್ರಾಣವು ಪ್ರಾಣಿಯ ಶುಕ್ರದಲ್ಲಿ ಸಾಕ್ಷಾತ್ ರೂಪದಿಂದ ಬರಲಾರಮ್ಬಿಸುತ್ತದೆ. ಚಾನ್ದ್ರರಸವು ವಿಶುದ್ಧರೂಪದಿಂದ ಬರದೆ, ನಾಕ್ಷತ್ರಿಕ ರಸಗಳಿಂದ ಸಮ್ಪರಿಷ್ವಕ್ತವಾಗಿಯೇ ಬರಬೇಕು. ಯಾವ ತಿಥಿಯಲ್ಲಿ ಚನ್ದ್ರನು ಯಾವ ನಕ್ಷತ್ರದಲ್ಲಿ ಯೋಗ ಹೊಂದುತ್ತಾನೆಯೋ, ಆ ತಿಥಿಯಲ್ಲಿ ಆ ಚನ್ದ್ರನು ಅದೇ ನಕ್ಷತ್ರದ ಹೆಸರಿನಿಂದ ವ್ಯವಹೃತವಾಗುತ್ತಾನೆ. ಈ ನಕ್ಷತ್ರ ವ್ಯವಹಾರಕ್ಕೆ ಕಾರಣವು ಏನೆಂದರೆ ಆ ತಿಥಿಯಲ್ಲಿ ಆ ತಿಥಿಯ ಚಾನ್ದ್ರರಸವು ತಿಥಿಯ ನಾಕ್ಷತ್ರಿಕ ರಸದಿಂದ ಸಂಶ್ಲಿಷ್ಟವಾಗಿರುವುದು. ಉದಾಹರಣೆಗೆ ಅಶ್ವಿನಿಯ ಚನ್ದ್ರವು, ಭರಣಿಯ ಚನ್ದ್ರವು, ಕೃತ್ತಿಕೆಯ ಚನ್ದ್ರವು, ಇತ್ಯಾದಿ ಲೋಕ ವ್ಯವಹಾರಗಳ ಅರ್ಥವೇನೆಂದರೆ ಅಶ್ವಿನೀ ಪ್ರಾಣಾತ್ಮಕ ಚನ್ದ್ರನು, ಭರಣೀ ಪ್ರಾಣಾತ್ಮಕ ಚನ್ದ್ರನು, ಕೃತ್ತಿಕಾ ಪ್ರಾಣಾತ್ಮಕ ಚನ್ದ್ರನು ಇತ್ಯಾದಿ. ಈ ನಾಕ್ಷತ್ರಿಕ ಸ್ಥಿತಿಯನ್ನು ಮುಂದಿಡುತ್ತಾ ನಾವು ಚಾನ್ದ್ರ ರಸಾಗಮನದ ಮೀಮಾಂಸೆ ಮಾಡೋಣ.

ಇಂದು ಭೂಪಿಣ್ಡದ ಮೇಲೆ ಖಗೋಲೀಯ ಅಶ್ವಿನೀ ನಕ್ಷತ್ರದ ಭೋಗವಾಗುತ್ತಿದೆ ಎಂದು ಕಲ್ಪನೆ ಮಾಡಿಕೊಳ್ಳಿ. ಹಾಗೂ ತತ್ಸಮ್ಬನ್ಧದಿಂದ ಚನ್ದ್ರನೂ ತದ್ರಸ ಪ್ರಧಾನವಾಗುತ್ತಾ ‘ಅಶ್ವಿನಿಯ ಚನ್ದ್ರ’ ಎಂದು ಕರೆಯಲ್ಪಡುತ್ತಾನೆ. ಈ ಪ್ರಾಕೃತಿಕ ಸ್ಥಿತಿಯಲ್ಲಿ ಚಾನ್ದ್ರನಾಡಿಯಿಂದ ಸಮಾನಾಕರ್ಷಣೆಯ ಆಧಾರದಲ್ಲಿ ಶುಕ್ರದಲ್ಲಿ ಯಾವ ಚಾನ್ದ್ರರಸ ಬರುತ್ತದೆಯೋ, ಅದೂ ಅಶ್ವಿನೀ ನಕ್ಷತ್ರ ಪ್ರಾಣಪ್ರಧಾನವೆಂದೇ ನಂಬಲಾಗಿದೆ. ಅಶ್ವಿನೀ ಪ್ರಾಣಸಮ್ಪೃಕ್ತ ಚಾನ್ದ್ರರಸವು ಅವಶ್ಯಕವಾಗಿ ಬರುತ್ತದೆ; ಆದರೆ ದಿನದಲ್ಲಲ್ಲ, ರಾತ್ರಿಯಲ್ಲಿ. ‘ಏಷ ವೈ ಸೋಮೋ ರಾಜಾ ದೇವಾನಾಮನ್ನ ಯಚ್ಚನ್ದ್ರಮಾಃ’ (ಶತ ೧|೬|೪|೫). ಈ ಶ್ರೌತಸಿದ್ಧಾನ್ತದ ಅನುಸಾರ ಚಾನ್ದ್ರರಸವು ಇನ್ದ್ರಾಗ್ನಿಮಯ ಸೌರಪ್ರಾಣದೇವತೆಗಳ ಅನ್ನವಾಗಿದೆ. ಸೂರ್ಯ್ಯೋದಯದಿಂದ ಸೂರ್ಯ್ಯಾಸ್ತದ ಪರ್ಯ್ಯನ್ತ ಎಷ್ಟು ಚಾನ್ದ್ರರಸ ಮಾತ್ರಾವು ಪ್ರವರ್ಗ್ಯರೂಪದಿಂದ ಭೂಪಿಣ್ಡದತ್ತ ಬರುತ್ತದೆಯೋ, ಅಷ್ಟನ್ನು ಸೂರ್ಯ್ಯರಶ್ಮಿಗತ ಪ್ರಾಣದೇವತೆಯು ತನ್ನ ಉದರದಲ್ಲಿ ಪ್ರತಿಷ್ಠಿತಗೊಳಿಸಿಕೊಳ್ಳುತ್ತದೆ. ಅದು ಸೌರಪ್ರಾಣ ರಶ್ಮಿಗಳಿಂದ ಪಾರ್ಥಿವ ದ್ರುತ ರಸಗಳವರೆಗೆ ಆದಾನ ಮಾಡುತ್ತದೆ, ಅವು ಆನ್ತರಿಷ್ಯ ಸ್ವಾನ್ನಭೂತ ಚಾನ್ದ್ರರಸವನ್ನು ಹೇಗೆ ತಾನೇ ಬಿಡಲು ಸಾಧ್ಯ? ಈ ರಸಾದಾನದಿಂದಲೇ ಪ್ರಾಣದೇವತೆಯು ‘ಆದದಾನಾ’ ಆಗುತ್ತಾ ‘ಆದಿತ್ಯ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೌರಸಾವಿತ್ರಾಗ್ನಿ ಮತ್ತು ಸೌರಮಘವೇನ್ದ್ರ, ಎರಡೂ ಚಾನ್ದ್ರಸೋಮಾನ್ನಕ್ಕಾಗಿ ‘ಅನ್ನಾದ’ ಆಗಿವೆ. ಈ ಪ್ರಬಲ ಅನ್ನಾದಗಳ ಸತ್ತೆಯಿಂದ ಆಕ್ರಾನ್ತ ಅಹಃಕಾಲವೇ ಸೋಮಾಗಮನದ ನಿರೋಧಕವಾಗಿರುತ್ತದೆ. ರಾತ್ರಿಯಲ್ಲಿ ಸೂರ್ಯ್ಯಾಸ್ತದಿಂದ ಸೂರ್ಯ್ಯೋದಯಕ್ಕೂ ಮೊದಮೊದಲು ಎರಡೂ ಅನ್ನಾದಗಳು ಸುಪ್ತವಾಗಿರುತ್ತವೆ. ಆದ್ದರಿಂದ ಪಾರ್ಥಿವ ಪ್ರಜೆಗಳಲ್ಲಿ ರಾತ್ರಿಯಲ್ಲಿಯೇ ಚಾನ್ದ್ರ ರಸವು ಬರಲಾರಮ್ಭಿಸುತ್ತದೆ. ಸೋಮದಾತ್ರೀ ರಾತ್ರಿಯು ಇದೇ ಸೋಮಭಾವದ ಸಮ್ಬನ್ಧದಿಂದ ‘ಸೌಮ್ಯಾ’ ಎಂದು ಕರೆಯಲ್ಪಟ್ಟಿದೆ.

ಈಗ ರಾತ್ರಿಯಲ್ಲಿ ಚಾನ್ದ್ರರಸದ ಆಗಮನ ಆರಮ್ಭವಾಗುತ್ತದೆ. ಸಾಯಂಕಾಲದಿಂದ ಆರಮ್ಭವಾದ ಆಗಮನವು, ಮರುದಿನ ಸೂರ್ಯ್ಯೋದಯಕ್ಕೆ ಮೊದಮೊದಲು ಆಗಮನ ಪ್ರಕ್ರಾನ್ತವಾಗಿದ್ದು, ಸೂರ್ಯ್ಯೋದಯದ ನಂತರ ಆಗಮನದ ಬಾಗಿಲು ಮುಚ್ಚಿತು. ಈ ಅಶ್ವಿನೀ ನಕ್ಷತ್ರ ಪ್ರಾಣಾತ್ಮಕ ಚನ್ದ್ರನ ಯಾವ ರಸವು ರಾತ್ರಿಯೆಲ್ಲಾ ಬಂದಿದೆಯೋ, ಅದು ಶುಕ್ರದಲ್ಲಿ ಪ್ರತಿಷ್ಠಿತವಾಗುತ್ತದೆ. ದಿನವೆಲ್ಲಾ ಸಾವಿತ್ರಾಗ್ನಿಯು ಶುಕ್ರಸ್ಥ ಚಾನ್ದ್ರರಸದ ಪರಿಪಾಕ ಮಾಡಿತು. ಪ್ರಾತಃ ಸೂರ್ಯ್ಯೋದಯದಿಂದ ಯಾವ ಪಾಕ ಕ್ರಿಯೆಯು ಆರಮ್ಭವಾಯಿತೋ, ಅದು ಸಾಯಂ ಸೂರ್ಯ್ಯಾಸ್ತ ಪರ್ಯ್ಯನ್ತ ಆ ಚಾನ್ದ್ರರಸವನ್ನು ಘನತೆಯಲ್ಲಿ ಪರಿಣತಗೊಳಿಸಿತು. ಇದೇ ಘನತ್ವ್ವವನ್ನು ಲಕ್ಷ್ಯದಲ್ಲಿಟ್ಟುಕೊಂಡು ಋಷಿಗಳು ಶುಕ್ರಸ್ಥ ಈ ಚಾನ್ದ್ರರಸವನ್ನು ‘ಪಿಣ್ಡ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದಾರೆ. ಎರಡನೇ ದಿನ ಭರಣೀ ನಕ್ಷತ್ರದ ಪ್ರವೇಶವಾಗುತ್ತದೆ, ಫಲಿತವಾಗಿ ಚಾನ್ದ್ರರಸವು ಭರಣೀರಸದಿಂದ ಸಂಶ್ಲಿಷ್ಟವಾಗುತ್ತದೆ. ರಾತ್ರಿಯಲ್ಲಿ ಪರಿಪಾಕವಾಗುತ್ತದೆ, ಹಾಗೇ ಸ್ವತನ್ತ್ರ ಪಿಣ್ದವಾಗುತ್ತದೆ. ಮೊದಲ ರಾತ್ರಿಯಲ್ಲಿ ಆಗತ ಚಾನ್ದ್ರರಸವು ದಿನದ ಬಿಸಿಯಿಂದ ಘನವಾಗಿರುತ್ತದೆ,  ಹಾಗಾಗಿ ಎರಡನೇ ರಾತ್ರಿಯಲ್ಲಿ ಆಗತ ಚಾನ್ದ್ರರಸವು ಈ ಮೊದಲ ಪಿಣ್ಡದೊಂದಿಗೆ ಸೇರದೆ ಒಂದು ಸ್ವತನ್ತ್ರ ಪಿಣ್ಡ ರೂಪದಲ್ಲಿಯೇ ಪರಿಣತವಾಗುತ್ತದೆ. ಅಶ್ವಿನ್ಯಾದಿ ನಕ್ಷತ್ರಗಳು ೨೮ ಎಂದು ನಂಬಲಾಗಿದೆ. ನಕ್ಷತ್ರ ಭೇದದಿಂದ ೨೮ ದಿನದಲ್ಲಿ ಚಾನ್ದ್ರಮಾಸದಲ್ಲಿ ೨೮ ಚಾನ್ದ್ರರಾತ್ರಿಗಳಲ್ಲಿ ೨೮ ಬಾರಿ ಚಾನ್ದ್ರರಸದ ಆಗಮನವಾಗುತ್ತದೆ, ಹಾಗೂ ಶುಕ್ರದಲ್ಲಿ ಈ ೨೮ ಚಾನ್ದ್ರರಸಗಳೇ ೨೮ ಪಿಣ್ಡಗಳಾಗುತ್ತವೆ.

ಯಾವ ಚಾನ್ದ್ರ ಸೌಮ್ಯರಸವು ಒಂದು ರಾತ್ರಿಯಲ್ಲಿ ಶುಕ್ರದಲ್ಲಿ ಸೇರುತ್ತದೆಯೋ, ಅದನ್ನು ನಾವು ಸ್ವಲ್ಪ ಸಮಯಕ್ಕೆ ಪಿಣ್ಡವಲ್ಲವೆಂದು ಹೇಳಿ ‘ತನ್ದುಲ’ (ತಂಡುಲ) ಎಂದು ಹೇಳೋಣ. ಯಾವ ರೀತಿ ಅನೇಕ ತನ್ದುಲಗಳ ಸಮಷ್ಟಿಯಿಂದ ಒಂದು ಪಿಣ್ಡವಾಗುತ್ತದೆಯೋ, ಅದೇ ರೀತಿ ೨೮ ನಾಕ್ಷತ್ರಿಕ ಚಾನ್ದ್ರರಾತ್ರಿಗಳ ತನ್ದುಲ ಸ್ಥಾನೀಯ ೨೮ ಘನರಸಗಳ ಸಮಷ್ಟಿಯಿಂದ ಒಂದು ಸ್ಥೂಲಪಿಣ್ಡದ ಸ್ವರೂಪವು ನಿಷ್ಪನ್ನವಾಗುತ್ತದೆ. ಚಾನ್ದ್ರಮಾಸದ ಸಮ್ಬನ್ಧದಿಂದ ೨೮ ಕಲೆಗಳ ಇದೇ ಶುಕ್ರಪಿಣ್ಡವು ‘ಮಾಸಿಕಪಿಣ್ಡ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ. ಅಷ್ಟಾವಿಂಶತಿ ಕಲೆಗಳ ಒಂದು ಮಾಸಿಕ ಪಿಣ್ಡವು ಒಂದು ಚಾನ್ದ್ರಮಾಸದ ಘನವಾಗಿದೆ. ಚಾನ್ದ್ರ ಸಮ್ವತ್ಸರದಲ್ಲಿ ಇಂತಹಾ ೧೩ ಮಾಸಗಳಿವೆ. ಫಲತಃ ತ್ರಯೋದಶ ಮಾಸಾತ್ಮಕ ಒಂದು ಚಾನ್ದ್ರ ಸಮ್ವತ್ಸರದಲ್ಲಿ ಶುಕ್ರದಲ್ಲಿ ೧೩ ಮಾಸಿಕ ಪಿಣ್ಡಗಳು ಪ್ರತಿಷ್ಠಿತವಾಗುತ್ತವೆ. ಈ ೧೩ ಮಾಸಿಕ ಪಿಣ್ಡಗಳ ಹೊರತುಪಡಿಸಿ ಉತ್ತರಾಯಣ ಮತ್ತು ದಕ್ಷಿಣಾಯನ ಭೇದದಿಂದ ಎರಡು ಚಾನ್ದ್ರಪಿಣ್ಡಗಳು ಉತ್ಪನ್ನವಾಗುತ್ತವೆ ಹಾಗೂ ಒಂದು ಪೂರ್ತಿ ಸಮ್ವತ್ಸರದಲ್ಲಿ ಒಂದು ಪಿಣ್ಡ ಸಮಷ್ಟಿ ರೂಪವು ಉತ್ಪನ್ನವಾಗುತ್ತದೆ. ವಸ್ತುತಸ್ತು ಪಿಣ್ಡವು ಕೇವಲ ೧೩ ಮಾತ್ರವಿದೆ. ಮಾಸ ಭೇದದಿಂದ ಎಲ್ಲಿ ಈ ೧೩ ಇವೆಯೋ, ಅಲ್ಲಿ ಅಯನ ಭೇದದಿಂದ ಹದಿಮೂರನ್ನು ಎರಡು ಭಾಗಗಳಲ್ಲಿ ವಿಭಕ್ತಗೊಳಿಸಲಾಗುತ್ತದೆ, ಹಾಗೂ ಪೂರ್ಣ ಸಮ್ವತ್ಸರದ ದೃಷ್ಟಿಯಿಂದ ಒಂದೇ ಭಾಗದಲ್ಲಿ ನೋಡಬಹುದು. ಮಾಸಿಕ, ಆಯನಿಕ, ಸಾಮ್ವತ್ಸರಿಕ ಈ ಮೂರೂ ಅವಸ್ಥೆಗಳು ಶ್ರಾದ್ಧಕರ್ಮ್ಮದಲ್ಲಿ ಗೃಹೀತವಾಗಿವೆ. ಹಾಗಾಗಿ ೧೩-ಮಾಸಿಕ, ೨-ಆಯನಿಕ, ೧-ಸಾಮ್ವತ್ಸರಿಕ, ಎಂಬೀ ದೃಷ್ಟಿಯಿಂದ ‘ಷೋಡಶಶ್ರಾದ್ಧ’ ವಿಹಿತವಾಗಿದೆ. ಇದನ್ನು ಇನ್ನೂ ವಿಸ್ತರಿಸಬಹುದು. ಒಂದುವೇಳೆ ಇನ್ನೂ ಸೂಕ್ಷ್ಮ ದೃಷ್ಟಿಯಿಂದ ವಿಚಾರ ಮಾಡಿದರೆ, ಕೇವಲ ೨೮ ಕಲೆಗಳು ಒಂದು ಮಾಸಿಕ ಪಿಣ್ಡದ ಮೇಲೆಯೇ ಉಕ್ತ ೧೬ ಪಿಣ್ಡಗಳ ಪರ್ಯ್ಯವಸಾನ ಎಂದು ಒಪ್ಪಬೇಕಾಗುತ್ತದೆ. ಮಾಸಿಕ ಪಿಣ್ಡವೇ ಮೂಲಧನವು. ಇದು ಋಣಭಾವದಲ್ಲಿ ಪರಿಣತವಾಗುತ್ತಾ, ಪೂರ್ತ್ತಿಯಾಗಿ ಪುನಃ ಧನಭಾವದ ಆಗಮನವಾಗುತ್ತದೆ. ಈ ಧಾರಾವಾಹಕ ಆದಾನ-ವಿಸರ್ಗ ಕ್ರಮದಿಂದ ೨೮ರ ಪರಿವರ್ತ್ತನೆ ಆಗುತ್ತಿರುತ್ತದೆ. ೨೮ ಕಲಾ ಪಿಣ್ಡವು ಸದಾ ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ ಹಾಗೂ ಇದುವೇ ‘ಬೀಜೀ’ ನಾಮಕ ಮೂಲಧನವಾಗಿರುತ್ತದೆ. ಇದರ ವಿವರಣೆಯು ಅನುಪದದಲ್ಲಿ ಸ್ಪಷ್ಟವಾಗಲಿದೆ.

ಮೂಲ-ತೂಲ-ಧನಭಾವ ಪರಿಲೇಖಃನಕ್ಷತ್ರ ಪ್ರಾಣ ಸಂಯುಕ್ತ ಯಾವ ಚಾನ್ದ್ರರಸವು ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆಯೋ, ಅದು ‘ಸಹಃ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಶುಕ್ರಸ್ಥ ಇದೇ ಸಹಃಪಿಣ್ಡದ ಪ್ರಭಾವದಿಂದ ಶರೀರದಲ್ಲಿ ‘ಸಾಹಸ’ ವೃತ್ತಿಯ ಉದಯವಾಗುತ್ತದೆ. ಈ ಸಹಃಪಿಣ್ಡವು ಪಿತೃಪ್ರಾಣಮಯವಾಗುತ್ತಾ ತತ್‍ಪ್ರಧಾನವಾಗಿದೆ. ಯಾವ ವ್ಯಕ್ತಿಯ ಅಧ್ಯಾತ್ಮ ಸಂಸ್ಥಾದಲ್ಲಿ ಈ ಸಹೋಮೂರ್ತ್ತಿ ಪಿತರಪ್ರಾಣವು ವಿಕಸಿತವಾಗಿರುತ್ತದೆಯೋ, ಅವರ ಶರೀರದಲ್ಲಿ ಒಂದು ರೀತಿಯ ಸ್ಫೂರ್ತ್ತಿ ಇರುತ್ತದೆ. ಇಂತಹಾ ವ್ಯಕ್ತಿಯನ್ನು ಆಲಸ್ಯವು ಸರ್ವಥಾ ಪ್ರಣಮ್ಯ ಎಂದು ನಂಬಲಾಗಿದೆ. ಇಂತಹಾ ಸಾಹಸೀ ದುಸ್ತರ ಕರ್ಮ್ಮ-ಪ್ರವೃತ್ತಿಯಲ್ಲಿಯೂ ಸಂಕೋಚ ಇರುವುದಿಲ್ಲ. ಸರಿಯಾಗಿ ಇದರ ವಿಪರೀತವಾದ ಯಾವ ವ್ಯಕ್ತಿಯ ಈ ಸಹೋಭಾಗವು ಶಿಥಿಲವಾಗಿರುತ್ತದೆಯೋ, ಅಂದರೆ ಮೂರ್ಚ್ಛಿತವಾಗಿರುತ್ತದೆಯೋ, ಆಲಸ್ಯವು ಸಾಹಸ ಪೂರ್ವಕ ಇವರ ಅತಿಥ್ಯವನ್ನು ಸ್ವೀಕಾರ ಮಾಡುತ್ತದೆ. ಮುಖದ ಮೇಲೆ ಮಕ್ಷಿಕಾಸಂಘದ ಸಾಮ್ರಾಜ್ಯಸಹಿತ ಶರೀರವು ಬಿದ್ದಿರುತ್ತದೆ, ಯಾವುದೇ ಕೆಲಸದಲ್ಲಿ ಮನೋಯೋಗವಿರುವುದಿಲ್ಲ. ಉತ್ಸಾಹವು ಏಕಾನ್ತತಃ ವಿಲೀನ ರಹಿತವಾಗಿದ್ದು ಸರ್ವತ್ರ ನಿರಾಶೆಯೇ ಸಮ್ಮುಖವಾಗಿರುತ್ತದೆ. ಶುಕ್ರಸ್ಥ ಪಿತರಪ್ರಾಣ, ಅಂದರೆ ಕೇವಲ ಪಿತೃಪ್ರಾಣ (ಜನ್ಮದಾತನ ಋಣರೂಪ ಪಿತ್ರ್ಯಂಶ) ಮಾತ್ರ ಮೂರ್ಛಿತವಾಗಿರುವುದಿಲ್ಲ, ಪಿತಾಮಹಾದಿಗಳ ಭಾಗವೂ ಮೂರ್ಚ್ಛಿತವಾಗಿರುತ್ತದೆ. ಶುಕ್ರ ಪ್ರತಿಷ್ಠಿತ ೬ ಪೀಳಿಗೆಗಳ ಪ್ರವರ್ಗ್ಯ ಭಾಗವು ಶಿಥಿಲವಾಗಿರುತ್ತದೆ. ಇಂತಹಾ ವ್ಯಕ್ತಿಯ ಇದೇ ಸ್ಥಿತಿಯ ಕಾರಣಕ್ಕಾಗಿ ಪ್ರಾನ್ತೀಯ ನುಡಿಗಟ್ಟು ಪ್ರಚಲಿತವಿದೆ – “ಇಂತಹಾ ವ್ಯಕ್ತಿಯು ಇಂತಹಾ ಕರ್ಮ್ಮದಲ್ಲಿ ಏಕೆ ನಿಮಗ್ನನಾಗಿರುತ್ತಾನೆ? ಇವನಿಗೆ ಹತಪ್ರಭ-ಹತಶ್ರೀ ಮುಖ ಎಂದು ಕರೆಯುತ್ತಾರೆ, ಅವನು ಇಂತಹಾ ಕರ್ಮ್ಮ ಮಾಡಲು ಸಾಧ್ಯವಿಲ್ಲ, ಹಾಗಾಗಿ ಅಪ್ಪ-ಅಜ್ಜರು ಸಾಯುತ್ತಿದ್ದಾರೆ”. ಸತ್ಯವಾಗಿ ಇವನ ತಂದೆ-ಅಜ್ಜರು (ಪಿತರಪ್ರಾಣಸಂಘವು) ಮೂರ್ಚ್ಛಿತರಾಗಿರುತ್ತಾರೆ.

ಭರ್ಗಃ, ಮಹಃ, ಯಶಃ, ಓಜಃ, ಊರ್ಕ್, ವರ್ಚಸ್, ಸಹಃ, ಇತ್ಯಾದಿ ಭೇದದಿಂದ ಬಲತತ್ತ್ವವು ಅನೇಕ ಶ್ರೇಣಿಯಲ್ಲಿ ವಿಭಕ್ತವೆಂದು ಒಪ್ಪಲಾಗಿದೆ. ಈ ಎಲ್ಲಾ ಬಲಗಳಲ್ಲಿ ಪ್ರಕೃತದಲ್ಲಿ ಚಾನ್ದ್ರಪ್ರಭವ ‘ಸಹೋಬಲ’ ನಾಮಕ ಬಲವಿಶೇಷದ ವ್ಯವಹಾರವೇ ಇರುವುದು. ಸೂರ್ಯ್ಯ-ಚನ್ದ್ರ-ಪೃಥಿವೀ,  ಈ ಮೂರೂ ಪ್ರಧಾನವಾಗಿ ಪ್ರಜಾಸೃಷ್ಟಿಯ ಆರಮ್ಭಕವೆಂದು ಒಪ್ಪಲಾಗಿದೆ. ಇವು ನಿರ್ಮ್ಮಾತಾ ಪ್ರವರ್ಗ್ಯ ಭಾಗದಿಂದಲೇ ತಮ್ಮ ನಿರ್ಮ್ಮಾಣ ಕರ್ಮ್ಮದಲ್ಲಿ ಸಮರ್ಥರಾಗುತ್ತವೆ, ಉದಾ – ‘ಉಚ್ಛಿಷ್ಟಾಜ್ಜಜ್ಞಿರೇ’ (ಅಥರ್ವ ಸಂಹಿತಾ) ಇತ್ಯಾದಿ ಅಥರ್ವ ಸಿದ್ಧಾನ್ತದಿಂದ ಪ್ರಮಾಣಿತವಾಗಿದೆ. ಇದರ ಈ ಪ್ರವರ್ಗ್ಯ ಭಾಗವು ಅನ್ತಃ ಬಹಿರ್ಯ್ಯಾಮ, ಭೇದದಿಂದ ಎರಡು ಪ್ರಕಾರದಲ್ಲಿ ಸ್ವಸರ್ಗಗಳಲ್ಲಿ ಪ್ರವಿಷ್ಟವಾಗುತ್ತದೆ. ಪೃಥಿವಿಯನ್ನು ಗಣಿಸೋಣ. ಇರಾಮಯ ರಸದ ಅನ್ತರ್ಯ್ಯಾಮ ರೂಪವು ‘ಕರ್ಮ್ಮಾತ್ಮಾ’ ಆಗಿದೆ, ಇದು ಅನ್ನದಿಂದ ಪರಮ್ಪರಯಾ ಔಪಪಾತಿಕ ರೂಪದಿಂದ ಉಂಟಾಗಿದೆ. ಹಾಗೇ ಪ್ರಪದದಿಂದ ಪ್ರವಿಷ್ಟವಾಗುವ ಪಾರ್ಥಿವ ಇರಾಮಯ ರಸವು ಸಾಕ್ಷಾತ್ ರೂಪದಿಂದ ಬರುತ್ತಾ ಬಹಿರ್ಯ್ಯಾಮದಿಂದ ಪ್ರತಿಷ್ಠಿತವಾಗುತ್ತದೆ; ಇದು ‘ಪ್ರತಿಷ್ಠಾತ್ಮಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೌರತತ್ತ್ವವು ಅನ್ತರ್ಯ್ಯಾಮ ಸಮ್ಬನ್ಧದಿಂದ ಪ್ರವಿಷ್ಟವಾಗಿ ಆಧ್ಯಾತ್ಮಿಕ ಪ್ರಾಣದೇವತೆ, ಬುದ್ಧಿರೂಪದಲ್ಲಿ ಪರಿಣತವಾಗುತ್ತದೆ, ಈ ಬುದ್ಧಿಯನ್ನು ನಾವು ‘ಕ್ಷೇತ್ರಜ್ಞ’ (ವಿಜ್ಞಾನಾತ್ಮಾ) ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದೇವೆ. ಬಹಿರ್ಯ್ಯಾಮ ಸಮ್ಬನ್ಧದಿಂದ ಪ್ರವಿಷ್ಟ ಅದೇ ಸೌಮ್ಯ ಕರ್ಮ್ಮಬಲಪ್ರದಾನ ಮಾಡುತ್ತದೆ, ಚರ್ಮ್ಮಗತ ದೋಷಾಣುಗಳ ಸಂಹಾರ ಮಾಡುತ್ತದೆ, ಇದನ್ನು ನಾವು ‘ಜ್ಯೋತಿ’ ಎಂದು ಕರೆಯುತ್ತೇವೆ. ಹಾಗೆಯೇ ಚಾನ್ದ್ರರಸ ಅನ್ತರ್ಯ್ಯಾಮ ಸಮ್ಬನ್ದದಿಂದ ಅನ್ನದ ಮುಖೇನ ಅಧ್ಯಾತ್ಮದಲ್ಲಿ ಪ್ರವಿಷ್ಟವಾಗುತ್ತಲಿರುವುದು ಮನದ ನಿರ್ಮ್ಮಾಪಕವಾಗುತ್ತದೆ, ಸ್ವ ಪಿತೃಭಾಗದಿಂದ ಶುಕ್ರಸ್ಥ ‘ಮಹಾನಾತ್ಮ’ದ ಸ್ವರೂಪ ಸಮ್ಪಾದಕವಾಗುತ್ತಾ ಬಹಿರ್ಯ್ಯಾಮ ಸಮ್ಬನ್ಧದಿಂದ ಆಗತ ಅದೇ ಚಾನ್ದ್ರರಸವು ಸಾಕ್ಷಾತ್‍ರೂಪದಲ್ಲಿ ಮನೋಜಗತ್ತಿನ ಆಹ್ಲಾದದ ಕಾರಣವಾಗುತ್ತದೆ. ಹಾಗೂ ಶುಕ್ರಸ್ಥಿತ ಮಹಾನಾತ್ಮದಲ್ಲಿ ಸ್ವಪಿತೃಪ್ರಾಣ ಪ್ರದಾನದಿಂದ ಅಷ್ಟಾವಿಂಶತಿಕಲಾ ಸಹಪಿಣ್ಡವು ಉತ್ಪನ್ನವಾಗುತ್ತದೆ. ಈ ರೀತಿ ಪರಮ್ಪರೆಯಿಂದ ಅನ್ತರ್ಯ್ಯಾಮ ಸಮ್ಬನ್ಧದಿಂದ, ಸಾಕ್ಷಾತ್ ರೂಪದಲ್ಲಿ ಬಹಿರ್ಯ್ಯಾಮ ಸಮ್ಬನ್ಧದಿಂದ ಮೂರೂ ಎರಡೆರಡು ಭಾಗಗಳಲ್ಲಿ ನಮ್ಮ ಅಧ್ಯಾತ್ಮಸಂಸ್ತಾದಲ್ಲಿ ಪ್ರವಿಷ್ಟವಾಗಿರುತ್ತವೆ. ಇದನ್ನು ಕೆಳಗಿನ ಪರಿಲೇಖವು ಸ್ಪಷ್ಟ ಪಡಿಸುತ್ತದೆ –

ಕ್ಷೇತ್ರಜ್ಞ-ಮಹಾನ್-ಕರ್ಮ್ಮಾತ್ಮ ಪರಿಲೇಖಃಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

No comments:

Post a comment