Thursday, 20 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ‘ಕೋ ದದರ್ಶ ಪ್ರಥಮಂ ಜಾಯಮಾನಮ್…’ (೨೯)

೨೯. ‘ಕೋ ದದರ್ಶ ಪ್ರಥಮಂ ಜಾಯಮಾನಮ್…’ (ಋಗ್ವೇದ ೧-೧೬೪-೪)


ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವನ್ತಂ ಯದನಸ್ಥಾ ಬಿಭರ್ತಿ |
ಭೂಮ್ಯಾ ಅಸುರಸೃಗಾತ್ಮಾ ಕ್ವಸ್ವಿತ್ ಕೋ ವಿದ್ವಾಂಸಮುಪಗಾತ್ ಪ್ರಷ್ಟುಮೇತತ್ ||
ಋಗ್ವೇದ ೧-೧೬೪-೪

‘ಪ್ರಜಾತನ್ತುವಿತಾನ’ದ ಆಲೋಡನ-ವಿಲೋಡನದಿಂದ ನಮಗೆ ಪ್ರತಿಯೊಬ್ಬ ಪುರುಷನ ಉತ್ತ್ಪತ್ತಿಯು ಆತನ ಪಿತನ ೨೧ ಸಹೋಭಾಗಗಳ ಋಣದಿಂದ ಉಂಟಾಗುತ್ತದೆ ಎಂಬ ನಿಷ್ಕರ್ಷೆ ಸಿಗುತ್ತದೆ. ಪುರುಷೋಪಲಕ್ಷಿತ ಔಪಪಾತಿಕ ಆತ್ಮವು ಎಂದಾದರೂ ‘ಜಾಯಮಾನ ಉಪಜಾಯಮಾನಃ’ (ಕೌಷೀತಕಿ ಬ್ರಾಹ್ಮಣೋಪನಿಷತ್ತಿನ) ಇದರ ಅನುಸಾರ ಧರಾತಲದಲ್ಲಿ ಜನ್ಮ ಪಡೆಯುತ್ತದೆಯೋ, ಅವಶ್ಯವಾಗಿ ಅದು ಪಿತನ ಶುಕ್ರಗತ ೨೧ ಕಲಾತ್ಮಕ ಸಹೋಭಾಗದ ಋಣ ಪಡೆಯಬೇಕಾಗುತ್ತದೆ. ಈಗ ಈ ಸಮ್ಬನ್ಧದಲ್ಲಿ ಉಪಸ್ಥಿತವಾಗುವ ಪ್ರಶ್ನೆ ಏನೆಂದರೆ, ಈ ಜನ್ಮಭಾವವು ಒಂದುವೇಳೆ ಸಾದಿ-ಸಾನ್ತ-ಪ್ರವಾಹವಾಗಿದ್ದರೆ, ಇದರ ಮೂಲಪುರುಷನಾರು? ‘ಪ್ರಥಮಂ ಜಾಯಮಾನಂ ಕೋ ದದರ್ಶ’ ಎಂಬುದರ ಮೇಲೆ ದೃಷ್ಟಿ ಹಾಯಿಸಿದರೆ ಅವಶ್ಯವಾಗಿ ಆ ಸಮಯದಲ್ಲಿ ನಮ್ಮ ವಿಚಾರಶಕ್ತಿಯು ಕುಣ್ಠಿತವಾಗುತ್ತದೆ. ಪಿತಾ-ಪಿತಾಮಹ-ಪ್ರಪಿತಾಮಹಾದಿ ಸಾವಿರಾರು, ಅಸಂಖ್ಯ ಪರಮ್ಪರೆಗಳನ್ನು ಮುಂದಿಟ್ಟುಕೊಂಡು ಹೋಗಬೇಕಾಗುತ್ತದೆ, ಆದರೆ ಎಲ್ಲೆಲ್ಲಿ ಹುಡುಕಿದರೂ ಪ್ರಥಮಜನ್ಮಗ್ರಹಣ ಮಾಡಿದವನ ಅಭಾವ ದೊರಕುತ್ತದೆ. ಹಾಗೂ ೨೧ನ್ನು ಬೀಜಿಯಿಂದ ಪಡೆದೇ ಪುತ್ರಾದಿಗಳ ಜನ್ಮವಾಯಿತು ಎಂಬೀ ಪರಿಸ್ಥಿತಿಯೇ ಪುನಃ ದೊರೆಯುತ್ತದೆ. ಯಾರಿಂದಲೂ ಸಾಲ ಪಡೆಯದೆ, ಸ್ವಯಂ ತನ್ನಿಂದಲೇ, ಸಾಪಿಣ್ಡ್ಯ ವಿತಾನದ ಉಪಕ್ರಮ ಮಾಡಿದಂತಹಾ ಎಲ್ಲಕ್ಕಿಂತ ಮೊದಲ ಬೀಜಿ ಯಾರು? ಋಣ ಪಡೆಯುವ ಅವಶ್ಯಕತೆಯೇ ಬೀಳದಿಹ, ಆದರೆ ಅಯೋನಿಜಭಾವದಿಂದ ಯಾವುದು ತನ್ನನ್ತಾನೇ ಉತ್ಪನ್ನವಾಗುತ್ತದೆಯೋ ಹಾಗೂ ವಂಶಪರಮ್ಪರೆಯ ವಿಧಾನವನ್ನು ಆರಮ್ಭಿಸಿದ ಎಲ್ಲಕ್ಕಿಂತ ಆದಿಯ ಔಪಪಾತಿಕ ಆತ್ಮವಾವುದು? ಸತ್ಯವಾಗಿ ಇಲ್ಲಿಯವರೆಗೆ ಈ ಒಗಟನ್ನು ಬಿಡಿಸಲಾಗಿಲ್ಲ, ಮತ್ತು ಯಾವುದೇ ಜಿಜ್ಞಾಸುವು ಈ ಪ್ರಶ್ನೆಯನ್ನು ತೆಗೆದುಕೊಂಡು ಯಾವುದೇ ವಿದ್ವಾಂಸರಲ್ಲಿ ಕೇಳಲಿಕ್ಕೂ ಹೋಗಿಲ್ಲವೇನೋ – ‘ಕ್ವಸ್ವಿತ್ ಕೋ ವಿದ್ವಾಂಸಮುಪಗಾತ್ ಪ್ರಷ್ಟುಮೇತತ್’.

‘ಸ್ಥಿತಸ್ಯ ಗತಿಶ್ಚಿನ್ತನೀಯಾ’ ನ್ಯಾಯದಿಂದ ಸೃಷ್ಟಿಮರ್ಯ್ಯಾದೆಯಲ್ಲಿ ಅನ್ತರ್ಭೂತ ತತ್ತ್ವಗಳ ಕಾರಣವೇ ಮೀಮಾಂಸ್ಯವೆಂದು ನಂಬಲಾಗಿದೆ. ಇನ್ದ್ರಿಯಾತೀತ – ವಿಶ್ವಾತೀತ – ಅಪ್ರತರ್ಕ್ಯ – ಅನಿರ್ದೇಶ್ಯ ವಿಷಯಗಳ ಮೀಮಾಂಸೆಯು ಅತಿಪ್ರಶ್ನವಾಗುತ್ತದೆ. ಮೊತ್ತಮೊದಲಿಗೆ ಜೀವಸೃಷ್ಟಿಯ ಉಪಕ್ರಮವು ಹೇಗೆ, ಎಲ್ಲಿಂದ, ಏಕೆ ಉಂಟಾಯಿತು? ಈ ಎಲ್ಲಾ ಪ್ರಶ್ನೆಗಳು ಮಾನವೀಯ ಬುದ್ಧಿಗೆ ಮೀರಿದ್ದಾಗಿವೆ. ‘ಯೋಽಸ್ಯಾಧ್ಯಕ್ಷಃ, ಪರಮೇ ವ್ಯೋಮನ್ ಸೋಽಙ್ಗಂ ವೇದ ಯದಿ ವಾ ನ ವೇದ” ಎಂಬ (ತೈತ್ತಿರೀಯಬ್ರಾಹ್ಮಣದ) ಅನುಸಾರ ಅತಿಪ್ರಶ್ನವು ಸರ್ವಥಾ ಅಚಿನ್ತ್ಯವಾಗಿದೆ. ‘ಕೋ ದದರ್ಶ..’ ಇತ್ಯಾದಿ ಮನ್ತ್ರಗಳಂತೂ ಇದೇ ಅಚಿನ್ತ್ಯಭಾವದ ಸಮರ್ಥನೆಯಾಗಿವೆ. ನಿಮ್ನ ಲಿಖಿತ ವಚನವೂ ಇದೇ ಸ್ಥಿತಿಯ ಸಮರ್ಥಕವಾಗಿದೆ –

ಅಚಿನ್ತ್ಯಾಃ ಖಲು ಯೇ ಭಾವಾ ನ ತಾಂಸ್ತರ್ಕೇಣ ಯೋಜಯೇತ್ |
ಪ್ರಕೃತಿಭ್ಯಃ ಪರಂ ಯಚ್ಚ ತದಚಿನ್ತ್ಯಸ್ಯ ಲಕ್ಷಣಮ್ ||

ಸಾಪಿಣ್ಡ್ಯಭಾವವು ಕಾರ್ಯ್ಯಾತ್ಮಕ ವಿಶ್ವಪ್ರಪಞ್ಚದಲ್ಲಿ ಅನ್ತರ್ಭೂತವಾಗಿದೆ. ಇದರ ಮೂಲಕಾರಣವು ಮೂಲಪ್ರಕೃತಿಯಾಗಿದೆ, ಇದರ ವಿಚಾರವು ಸರ್ವಥಾ ಅಚಿನ್ತ್ಯವಾಗಿದೆ. ‘ಪ್ರಥಮಂ ಜಾಯಮಾನಂ ಕೋ ದದರ್ಶ’ ಎಂಬುದಕ್ಕೆ ಉತ್ತರವೇನೆಂದರೆ – ‘ಮೂಲಕಾರಣಂ ನ ಕೋಽಪಿ ದದರ್ಶ’. ಈ ಅಚಿನ್ತ್ಯ ಮೂಲ ಬೀಜಿಯಿಂದ (ಯಾವುದನ್ನು ನಾವು ಪ್ರಥಮ ಜಾಯಮಾನ ಎಂದು ಹೇಳುತ್ತೇವೆಯೋ ಅದರಿಂದ) ಯಾವ ಸಾಪಿಣ್ಡ್ಯಭಾವದ ವಿತಾನವು ಉಪಕ್ರಾನ್ತವಾಯಿತೋ, ಕಾರ್ಯ್ಯಭೂತ ಆ ಸಾಪಿಣ್ಡ್ಯದ ಮೀಮಾಂಸೆಯು ಅವಶ್ಯಕವಾಗಿ ಚಿನ್ತ್ಯಭಾವವಾಗಿದೆ. ಇದಕ್ಕೆ ಭೂಮಿ, ಅಸು, ಅಸೃಕ್, ಆತ್ಮಾ ಎಂಬ ೪ ಶ್ರೇಣಿ-ವಿಭಾಗಗಳೆಂದು ಒಪ್ಪಲಾಗಿದೆ. ಪುರುಷವನ್ನು ‘ಆತ್ಮಾ, ಶರೀರ’ ಎಂಬೆರಡು ಮುಖ್ಯ ಭಾಗಗಳಲ್ಲಿ ವಿಭಕ್ತಗೊಳಿಸಬಹುದು. ಆತ್ಮದಿಂದ ಶುಕ್ರಮಯವಾದ ಆ ಮಹಾನಾತ್ಮವು ಅಭಿಪ್ರೇತವಾಗಿದೆ; ಇದು ಆತ್ಮದ ಆಶ್ರಯಭೂಮಿಯಾಗುತ್ತದೆ. ಪಞ್ಚಭೌತಿಕ ಸ್ಥೂಲಶರೀರವು ಈ ಆತ್ಮದ ಭೂಮಿ (ಆಯತನ) ಆಗಿದೆ. ಈ ಭೂಮಿಯ (ಶರೀರದ) ಸ್ವರೂಪ ರಕ್ಷಕವೆಂದರೆ ಅಸು (ಪ್ರಾಣ). ಪ್ರಾಣಾಗ್ನಿಯು ಎಲ್ಲಿಯವರೆಗೆ ಶರೀರ-ಭೂತಗಳಲ್ಲಿ ಅನ್ತರ್ಯ್ಯಾಮ ಸಮ್ಬನ್ದದಿಂದ ಪ್ರತಿಷ್ಠಿತವಾಗಿರುತ್ತದೆಯೋ, ಅಲ್ಲಿಯವರೆಗೆ ಶರೀರವು ಸುರಕ್ಷಿತವಾಗಿರುತ್ತದೆ.

ಪ್ರಾಣಾಗ್ನಿಯ ಸ್ವರೂಪ ರಕ್ಷಣೆಯು ಅಸೃಕ್ (ರಕ್ತ) ಎಂಬುದರ ಮೇಲೆ ಅವಲಮ್ಬಿತವಾಗಿರುತ್ತದೆ. ಹೃದಯದ ದ್ವಾರವು ಎಲ್ಲಿಯವರೆಗೆ ಸಂಚಾರವಾಗುತ್ತಿರುತ್ತದೆಯೋ ಅಲ್ಲಿಯವರೆಗೆ ಪ್ರಾಣಾಗ್ನಿಯು ಸುರಕ್ಷಿತವಾಗಿರುತ್ತದೆ. ರುಧಿರವು ಪ್ರಭೂತಮಾತ್ರಾದಲ್ಲಿ ಹೊರಟುಹೋದರೆ ಶರೀರಯಷ್ಟಿಯು ನಿಶ್ಚೇಷ್ಟವಾಗುವುದನ್ನು ಕಾಣಬಹುದು. ರುಧಿರದ ಸ್ವರೂಪರಕ್ಷಾ, ಹಾಗೆಯೇ ರುಧಿರದ ಸಞ್ಚರಣ ಪ್ರಕ್ರಿಯೆಯ ಸ್ವರೂಪರಕ್ಷಣೆಯು ಆತ್ಮದ (ಚೇತನದ) ಮೇಲೆ ಅವಲಮ್ಬಿತವಾಗಿರುತ್ತದೆ. ಈ ರೀತಿ ಭೂಮಿ – ಅಸು – ಅಸೃಕ್ – ಆತ್ಮಾ, ಎಂಬ ೪ ಪಾರಸ್ಪರಿಕ ಉಪಕಾರ್ಯ್ಯೋಪಕಾರಕ ಸಮ್ಬನ್ಧ ಉಂಟಾಗಿರುತ್ತದೆ.

ಈ ನಾಲ್ಕರಲ್ಲಿಯೂ ಭೂಮಿ (ಶರೀರ) ಮತ್ತು ಅಸೃಕ್ (ರುಧಿರ), ಇವೆರಡಂತೂ ಭೂತಪ್ರಧಾನವಾಗಿವೆ, ಸ್ಥೂಲವಾಗಿವೆ, ಹಾಗಾಗಿ ಅಸ್ಥಿಮತ್ ಆಗಿವೆ. ಅಸು (ಪ್ರಾಣ), ಆತ್ಮಾ (ಮಹಾನ್) ಇವೆರಡು ಪ್ರಾಣಪ್ರಧಾನವಾಗಿವೆ, ಸೂಕ್ಷ್ಮವಾಗಿವೆ, ಹಾಗಾಗಿ ಅನಸ್ಥಿಮತ್ ಆಗಿವೆ. ಆಶ್ಚರ್ಯವೇನೆಂದರೆ, ಮೂಳೆ ಇಲ್ಲದವನೊಬ್ಬನು ಮೂಳೆ ಉಳ್ಳವನ ಭಾರವನ್ನು ತನ್ನ ಮೇಲೆ ವಹನಗೊಳಿಸಿಕೊಂಡಿರುವುದು. ಸೂಕ್ಷ್ಮಜಗತ್ತು ಸ್ಥೂಲದ ಪ್ರತಿಷ್ಠಾ ಆಗುತ್ತಿದೆ. ಪ್ರಾಣಾತ್ಮಕ ಮಹಾನಾತ್ಮವೇ ರುಧಿರಾತ್ಮಕ ಶರೀರದ ಪ್ರತಿಷ್ಠಾ ಆಗುತ್ತಿದೆ. ಅಶರೀರ ಮಹಾನ್ ಎಂಬುದೇ ಸಾಪಿಣ್ಢ್ಯಭಾವದ ಪ್ರವರ್ತ್ತಕವಾಗುತ್ತಾ ಶರೀರಗಳಲ್ಲಿ ಪ್ರತಿಷ್ಠಾರೂಪದಿಂದ ಪ್ರತಿಷ್ಠಿತವಾಗುತ್ತಿದೆ. ನಿಮ್ನ ಲಿಖಿತ ಉಪನಿಷಚ್ಛ್ರುತಿಯೂ ಶುಕ್ರಸ್ಥಿತ ಮಹಾನಾತ್ಮದ ಇದೇ ಅಶರೀರ-ಅನಸ್ಥಾಭಾವದ ಸ್ಪಷ್ಟೀಕರಣ ಮಾಡುತ್ತಿದೆ –

ಅಶರೀರಂ ಶರೀರೇಷು, ಅನವಸ್ಥೇಷ್ವವಸ್ಥಿತಮ್ |
ಮಹಾನ್ತಂ ವಿಭುಮಾತ್ಮಾನಂ ಮತ್ತ್ವಾ ಧೀರೋ ನ ಶೋಚತಿ ||ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Wednesday, 19 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ತನ್ತುವಿತಾನ ಸಮ್ಬನ್ಧೀ-ಪ್ರಮಾಣವಾದ (೨೮)

೨೮. ತನ್ತುವಿತಾನ ಸಮ್ಬನ್ಧೀ-ಪ್ರಮಾಣವಾದ

ಪ್ರಜಾತನ್ತುವಿತಾನಾತ್ಮಕ, ಸಾಪ್ತಪೌರುಷಲಕ್ಷಣ ಉಕ್ತ ಸಾಪಿಣ್ಡ್ಯ-ಸ್ವರೂಪದ ಸಮ್ಬನ್ಧದಲ್ಲಿ ಪ್ರಮಾಣಾನನ್ತರವು ಅನಪೇಕ್ಷಿತವೇಕೆಂದರೆ, ಪ್ರತ್ಯಕ್ಷಪ್ರಮಾಣಭೂತ ಜ್ಯೋತಿಃಶಾಸ್ತ್ರದ ಪ್ರತ್ಯಕ್ಷ ಚನ್ದ್ರದೇವತೆಯ ಸೌಮ್ಯ-ಪ್ರಾಣದ ನಕ್ಷತ್ರಭೇದದಿಂದ ೨೮ ಭಾಗಗಳಲ್ಲಿ ವಿಭಾಜನವಾಗುತ್ತಿದೆ. ಹಾಗೂ ಅದುವೇ ಆಯಾಯ ಸಜಾತೀಯ ಸೌಮ್ಯಶುಕ್ರದಲ್ಲಿ ಪ್ರತಿಷ್ಠಿತವಾಗಿ ಪ್ರಜಾತನ್ತುವಿತಾನದ ಕಾರಣವಾಗುತ್ತಿದೆ. ಪ್ರಜಾತನ್ತುವಿತಾನಾತ್ಮಕ ಸಾಪಿಣ್ಡ್ಯಭಾವವು ಈ ವ್ಯವಸ್ಥಿತ ಕ್ರಮದಿಂದ ಸಪ್ತಪುರುಷಪರ್ಯ್ಯನ್ತ ವ್ಯಾಪ್ತವಾಗುತ್ತಿದೆ, ಇದರ ಯಥಾವತ್ ವಿಮರ್ಶೆಯ ನನ್ತರ ಬುದ್ಧಿಕ್ಷೇತ್ರದಿಂದ ಕೆಲಸ ತೆಗೆದುಕೊಳ್ಳುವ ವಿಚಾರಶೀಲರಿಗೆ ಅಣುಮಾತ್ರವೂ ಸನ್ದೇಹ ಉಂಟಾಗುವುದಿಲ್ಲ. ಅದನ್ನು ಪ್ರಮಾಣಗಳಿಂದ ಸನ್ತುಷ್ಟಗೊಳಿಸಿದರೂ  ಅಭಿನಿವಿಷ್ಟ ಪ್ರಜಾವರ್ಗದ ದೃಷ್ಟಿಯಲ್ಲಿ ಈ ಪ್ರತ್ಯಕ್ಷ-ಸ್ಥಿತಿಯ ಬಗ್ಗೆಯೂ ಯಾವುದೇ ಮಹತ್ತ್ವವಿಲ್ಲ. ಕೆಲವರು ಪ್ರತಿಯೊಂದು ವಿಷಯಕ್ಕೂ ಪ್ರಮಾಣವಿರಬೇಕು ಎಂದು ಹೇಳುತ್ತಾರೆ. ಆ ವಿಷಯವು ಬುದ್ಧಿಗಮ್ಯವಾಗಿದ್ದರೂ ಪ್ರಮಾಣ ಕೇಳುತ್ತಾರೆ. ಅದೂ ಕೂಡ ವೇದಶಾಸ್ತ್ರದ ಪ್ರಮಾಣ ಬೇಕೆನ್ನುತ್ತಾರೆ. ಹಾಗಾಗಿ ಮೂಲಸಂಹಿತಾ ಭಾಗದ ಪ್ರಮಾಣವೇ ವಸ್ತುಗತ್ಯಾ ಪ್ರಮಾಣವೆಂದು ಒಪ್ಪಲಾಗುತ್ತದೆ. ಪ್ರಮಾಣವಾದಿಗಳ ಸಂಹಿತಾ-ಭಕ್ತಿಯನ್ನು ಹೃದಯದಿಂದ ಅಭಿನಂದನೆ ಮಾಡುತ್ತಾ, ಜೊತೆಗೆ ಹೇಳಲ್ಪಡುವ ಸಂಹಿತಾ-ಪ್ರಮಾಣಗಳಿಂದ ಆ ಅಭಿನಿವಿಷ್ಟರ ಕಲ್ಪಿತ ಸಿದ್ಧಾನ್ತವು ಉಚ್ಛಿನ್ನವಾಗುತ್ತಾ ಅವರಿಗೆ ಪ್ರತೀತವಾಗಲು, ಆ ಜನರು ಈ ವಿಷಯದ ಸಂಹಿತಾ-ಪ್ರಮಾಣಗಳನ್ನೇ ಪ್ರಕ್ಷಿಪ್ತವೆಂದು ಹೇಳಲು ತಮ್ಮ ಚಿರಾಭ್ಯಸ್ತ ಅಭ್ಯಾಸವನ್ನೇ ಅನುಗಮನ ಮಾಡುತ್ತಾರೆ. ಕೇವಲ ಕರ್ತ್ತವ್ಯ ಬುದ್ಧಿಯಿಂದ ಪ್ರಜಾತನ್ತುವಿತಾನಾತ್ಮಕ ಎಲ್ಲೋ ಒಂದು ಪ್ರಮಾಣ ಉದ್ಧೃತಗೊಳಿಸುತ್ತಾರೆ. ಈ ಪ್ರಮಾಣವಾದದ ಈ ಫಲವು ಅವಶ್ಯಂಭಾವೀ ಆಗಿದೆ. ಯಾವ ಮುಗ್ಧ ಜಿಜ್ಞಾಸುಗಳು ಈ ಶಾಸ್ತ್ರತತ್ತ್ವಾನಭಿಜ್ಞ – ಆಡಮ್ಬರಪ್ರಿಯ – ಕುತರ್ಕಶ್ರೋಮಣೀ – ವೇದಭಕ್ತರ ಅಶಾಸ್ತ್ರೀಯ ವಾಗ್ಜಾಲದ ವ್ಯಾಮೋಹಕ್ಕೆ ಬಿದ್ದು ಶಾಸ್ತ್ರೀಯ ಕರ್ಮ್ಮಗಳನ್ನು ಉಪೇಕ್ಷೆ ಮಾಡುತ್ತಾರೆ. ಅವರು ಅವಶ್ಯಕವಾಗಿ ತಮ್ಮ ಪಥವನ್ನು ಪ್ರಶಸ್ತಗೊಳಿಸಿಕೊಳ್ಳಲು ಸಾಧ್ಯ. “ಜೀವಿತ ಪಿತಾ ಪಿತಾಮಹಾದಿಗಳು ಅವಶ್ಯಕವಾಗಿ ಪಿತರರು, ಇವರನ್ನು ಶ್ರದ್ಧೆಯಿಂದ ಪೂಜಿಸುವುದೂ ಶಾಸ್ತ್ರಸಮ್ಮತವಾಗಿದೆ” ಎಂಬ ನಿಷ್ಠೆಯನ್ನು ಸರ್ವಥಾ ಸುರಕ್ಷಿತವಾಗಿರಿಸುತ್ತಾ, “ಶ್ರಾದ್ಧಕರ್ಮ್ಮಫಲಭೋಕ್ತಾ ಪಿತರರು ಪ್ರೇತ ಪಿತರರೇ ಆಗಿದ್ದಾರೆ, ಪುತ್ರಾದಿಗಳಿಂದ ಪ್ರದತ್ತ ಪಿಣ್ಡ-ಪ್ರಾಣವು ಆ ಪರಲೋಕಗತ ಪ್ರೇತಾತ್ಮಗಳ ತೃಪ್ತಿಯ ಕಾರಣವಾಗುತ್ತದೆ” ಎಂಬೀ ಸಿದ್ಧಾನ್ತದ ಉಪೋದ್ಬಲಕ ಪ್ರಮಾಣವನ್ನು ‘ಪಿತೃಣಾಂ ಪಿತರೋಪನಿಷತ್’ ಎಂಬುದರಲ್ಲಿ ನೀಡಲಾಗಿದೆ. ಪ್ರಕೃತದಲ್ಲಿ ಕೇವಲ ಪ್ರಜಾತನ್ತುವಿತಾನಾತ್ಮಕ ಸಾಪಿಣ್ಡ್ಯಭಾವದೊಂದಿಗೆ ಸಮ್ಬನ್ಧವಿರುವ ಕೆಲವೊಂದು ಪ್ರಮಾಣಗಳ ಮೀಮಾಂಸೆಯನ್ನು ಇದೀಗ ಮಾಡಲಾಗುತ್ತದೆ.

ಶುಕ್ರಸ್ಥಿತ ೮೪ ಪಿತೃಸಹಗಳಲ್ಲಿ ಪೂರ್ವಪ್ರದರ್ಶಿತ ‘ಪಿತರಃ-ಸೂನವಃ’, ‘ಆತ್ಮಧೇಯಃ-ತನ್ಯಃ’ ಎಂಬ ವಿಭಾಗಗಳೊಂದಿಗೆ ಸಮ್ಬನ್ಧವಿರುವ ಋಣ-ಧನ ಭಾವಗಳ ಆಧಾರದಲ್ಲಿ ವಿಜ್ಞ ಓದುಗರಿಗೆ ಮಹಾನಾತ್ಮಗತ ‘ಪಿತೃಸಹಃಸೂತ್ರ’ವು ಒಂದು ಮಹಾಸೂತ್ರವೆಂದು ಅರ್ಥವಾಗಿದೆ ಎಂದುಕೊಳ್ಳುತ್ತೇವೆ. ಹೇಗೆ ಒಂದು ತನ್ತುವಾಯವನ್ನು (ಬಟ್ಟೆ ತಯಾರಿಸುವ ನೂಲನ್ನು) ಒಂದರ ಮೇಲೊಂದು ಸೂತ್ರ ವಿನ್ಯಾಸದಿಂದ ಕ್ರಮಬದ್ಧವಾಗಿ ಜೋಡಿಸುತ್ತಾ ಬಟ್ಟೆ ತಯಾರಾಗುತ್ತದೆಯೋ, ಅದೇ ರೀತಿ ಮಹದವಚ್ಛಿನ್ನ ಅನ್ತರ್ಯ್ಯಾಮೀ ಈ ಸಹಃಸೂತ್ರಗಳಿಂದ ಪ್ರಜಾರೂಪ ವಸ್ತ್ರದ ನಿರ್ಮ್ಮಾಣ ಮಾಡುತ್ತಿದ್ದಾರೆ. ಬಟ್ಟೆಯ ನೇಯ್ಯುವಿಕೆಯಲ್ಲಿ ಅಡ್ಡಸಾಲುಗಳು ಹಾಗೂ ಉದ್ದಸಾಲುಗಳು ಇರುತ್ತವೆ. ಅಡ್ಡ-ಉದ್ದ ಸಾಲುಗಳು ಇರುವುದರಿಂದಲೇ ವಸ್ತ್ರಕ್ಕೊಂದು ಸ್ವರೂಪ ಸಮ್ಪನ್ನವಾಗುತ್ತದೆ. ಈ ಅಡ್ಡ-ಉದ್ದ ಸಾಲುಗಳ ಉಪಕ್ರಮದಲ್ಲಿ ಒಂದು ಮೊಳೆ ಹೊಡೆದಿದ್ದು, ನೇಕಾರನು ಅಲ್ಲಿಂದ ವಿತಾನ ಪ್ರಕ್ರಿಯೆಯನ್ನು ಆರಮ್ಭಿಸುತ್ತಾನೆ. ಬೀಜಿ ಎಂಬ ಮೂಲಪುರುಷನು ಮೊಳೆ ಇದ್ದಂತೆ, ಮಹದವಚ್ಛಿನ್ನ ಅನ್ತರ್ಯ್ಯಾಮಿಯು ನೇಕಾರನು, ಪುತ್ರ-ಪೌತ್ರಾದಿಗಳಲ್ಲಿ ಋಜುಭಾವದಿಂದ ವಿತಾನವಾಗುವ ತನ್ಯ ಭಾಗವು ನೂಲಿನ ಉದ್ದಸಾಲುಗಳು, ತನ್ಯದಲ್ಲಿ ಪ್ರತಿಷ್ಠಿತವಾಗಿರುವ ಆತ್ಮಧೇಯಭಾಗವೇ ನೂಲಿನ ಅಡ್ಡಸಾಲುಗಳು. ಇದುವೇ ಪ್ರಜಾತನ್ತುವಿತಾನ-ಲಕ್ಷಣವುಳ್ಳ ವಸ್ತ್ರವು. ಇದು ಪರಾಮುಕ್ತಿಯ ಸಮ್ಬನ್ಧದಲ್ಲಿ ನಿರ್ಬಲವೆಂದು ನಂಬಲಾಗಿದೆ. ಪಿತೃಸೂತ್ರ-ರೂಪೀ ಪುತ್ರ-ಪೌತ್ರಾದಿಗಳ ಏಷಣಾ (ಬೇಡಿಕೆಯು) ಎಂದಿಗೂ ಪರಾಮುಕ್ತಿಯ ಕಾರಣವಾಗುವುದಿಲ್ಲ. ಆದ್ದರಿಂದ –

“ತಮೇವ ವಿದಿತ್ತ್ವಾತಿಮೃತ್ಯುಮೇತಿ ನಾನ್ಯಃ ಪನ್ಥಾ ವಿದ್ಯತೇ ಅಯನಾಯ |
ಯದಾ ಚರ್ಮ್ಮವದಾಕಾಶಂ ವೇಷ್ಟಯಿಷ್ಯನ್ತಿ ಮಾನವಾಃ |
ತದಾ ದೇವಮವಿಜ್ಞಾಯ ದುಃಖಸ್ಯಾನ್ತೋ ಭವಿಷ್ಯತಿ”

ಎಂಬನುಸಾರ ಸಮಾನಪ್ರತ್ಯಯಪ್ರವಾಹರೂಪ ಬುದ್ಧಿಯೋಗಾತ್ಮಕ ಜ್ಞಾನಯೋಗ (ಆತ್ಮಬೋಧ)ವೇ ಅಪೇಕ್ಷಿತವು. ಸ್ವನಾಮಧನ್ಯ ಸನ್ತ ಕಬೀರರು ಇದೇ ಭಾವನೆಯಿಂದ ಪ್ರಜಾತನ್ತುವಿತಾನರೂಪಾ ಪುತ್ರೈಷಣವನ್ನು ಮುಕ್ತಿಪಥದಲ್ಲಿ ನಿರ್ಬಲ ಸಾಧನವೆಂದು ಪರಿಗಣಿಸಿ ತಮ್ಮ ನಿಮ್ನ ಲಿಖಿತ ಭಾಷಾಸೂಕ್ತಿಯಿಂದ ಪ್ರಕಟಿಸಿದ್ದಾರೆ –

“ತಾನಾ ದಮ ಕಾ ತಾನಾ ರೇ-
ತ ತೋ ಬಡಾ ಜುಲಾಹಾ ರೇ
ದಾಸ ಕಬೀರಾ ಬುನನೆ ಲಾಗಾ ನಿಕಲಾ ಧಾಗಾ ಕಚ್ಚಾ | ತಾನಾ- |”

ಚಾನ್ದ್ರಸುಷುಮ್ನಾ ನಾಡಿಯಿಂದ ಆಗತ ಚನ್ದ್ರರಸದಿಂದ ೧೦ ತಿಂಗಳಲ್ಲಿ ನಿಷ್ಪನ್ನವಾಗುವ ಈ ಪಿತೃಪಟವು ವಿಶುದ್ಧ ಪುತ್ರೈಷಣಾದಿಂದ ಎಲ್ಲಿ ಬನ್ಧನದ ಕಾರಣವಾಗುತ್ತದೆಯೋ, ಅಲ್ಲಿ ಅದೇ ಪಟವು ನಿಷ್ಕಾಮಭಾವಾನುಗತ ಸೃಷ್ಟಿಪ್ರಕ್ರಿಯೆಯನ್ನು ಮುಖ್ಯವಾಗಿಸುತ್ತಾ ತಾನೂ ಸ್ವಸ್ವರೂಪದಿಂದ ಶುದ್ಧ ಪೂತನಾಗಿರುತ್ತದೆ, ಹಾಗೂ ವಂಶಧಾರೆಗಳಿಗೂ ನಿರ್ಮಲ-ಆಶ್ರಯದಾತನಾಗಿರುತ್ತದೆ. ಕಬೀರರ ಅನ್ಯ ಸೂಕ್ತಿಯಿಂದ ಪಿತೃಪಟದ ಇದೇ ಸ್ವರೂಪವು ನಿಮ್ನ ಲಿಖಿತ ಶಬ್ದಗಳಲ್ಲಿ ವಿಶ್ಲೇಷಣೆಯಾಗಿದೆ –

ಝೀನೀ ಝೀನೀ ಬೀನೀ ಚದರಿಯಾ-
ಕಾಹೇ ಕಾ ತಾನಾ, ಕಾಹೇ ಕೈ ಭರನೀ-
ಕೌನ್ ತಾರ್ ಸೇ ಬೀನೀ ಚದರಿಯಾ || ೧ ||
ಇಂಗಲಾ ಪಿಗಲಾ ತಾನಾ ಭರನೀ |
ಸುಷಮನ ತಾರ ಸೇ ಬೀನೀ ಚದರಿಯಾ || ೨ ||
ಅಠ್ ಕಂವಲ ದಲ ಚರಖಾ ಡೋಲೈ |
ಪಾಂಚ್ ತತ್ತ್ ಗುನ್ ತೀನೀ ಚದರಿಯಾ || ೩ ||
ಸಾಂಇ ಕೋ ಸಿಯತ್ ಮಾಸ್ ದಸ್ ಲಾಗೇ |
ಠೋಕ್ ಠೋಕ್ ಕೇ ಬೀನೀ ಚದರಿಯಾ || ೪ ||
ದಾಸ್ ಕಬೀರ್ ಜತನ್ ಸೇ ಓಢೀ |
ಜ್ಯೋಂ ಕೀ ತ್ಯೋಂ ಧರಿ ದೀನೀ ಚದರಿಯಾ || ೫ ||

ಈಗ ಪ್ರತಿಜ್ಞಾತ ಪ್ರಮಾಣವಾದದ ಮೀಮಾಂಸೆ ಮಾಡೋಣ. “ಪುರುಷನ ಶುಕ್ರವು ಪಿತೃಪ್ರಾಣಮಯವಾಗಿದೆ. ಈ ಶುಕ್ರದಲ್ಲಿ ಚನ್ದ್ರನು ಋತುವಿನಿಂದ ಪಿತೃಪ್ರಾಣವನ್ನು ಪ್ರತಿಷ್ಠಾಪಿಸುತ್ತಾನೆ”. ಈ ಸಮ್ಬನ್ಧದಲ್ಲಿ ಮೊದಲು ಬ್ರಾಹ್ಮಣ ಭಾಗದ ಪ್ರಮಾಣವನ್ನು ನೋಡಿರಿ. ಈ ಪ್ರಮಾಣವು ಪೂರ್ವದಲ್ಲಿ ‘ರೇತ-ಯೋನಿ-ರೇತೋಧಾ’ ಎಂಬ ವಿಶ್ಲೇಷಣೆ ಮಾಡುವಾಗ ಉದ್ಧೃತವಾಗಿದೆ. ಆದರೆ ಅರ್ಥದೃಷ್ಟಿ-ಸಮ್ಬನ್ಧದಿಂದ ಅದನ್ನು ಇಲ್ಲಿ ಪುನಃ ಉದ್ಧೃತಗೊಳಿಸುವುದು ಆವಶ್ಯಕವೆಂದು ಪರಿಗಣಿಸಲಾಗಿದೆ –

೧-“ವಿಚಕ್ಷಣಾದ್ ಋತವೋ ರೇತ ಆಭೃತಂ ಪಞ್ಚದಶಾತ್ ಪ್ರಸೂತಾತ್ ಪಿತ್ರ್ಯವತಃ |
ತನ್ಮಾ ಪುಂಸಿ ಕರ್ತ್ಯರ್ಯ್ಯೇರಯಧ್ವಂ ಪುಂಸಾ ಕರ್ತ್ರಾ ಮಾತರಿ ಮಾ ನಿಷಿಞ್ಚಃ ||

೨-ಸ ಜಾಯಮಾನ ಉಪಜಾಯಮಾನೋ ದ್ವಾದಶ ತ್ರಯೋದಶ ಉಪಮಾಸಃ |
ದ್ವಾದಶ ತ್ರಯೋದಶೇನ ಪಿತ್ರಾ ಸಂ ತದ್ವಿದೇಹಂ ಪ್ರತಿತದ್ವಿದೇಽಹಮ್ ||

೩-ತನ್ಮ ಋತವೋ ಅಮರ್ತ್ಯವ ಆರಭಧ್ವಂ ತೇನ ಸತ್ಯೇನ |
ತಪಸಾ ಋತುರಸ್ಮಿ ಆರ್ತ್ತವೋಽತ್ಮಿ ಕೋಽಸಿ ತ್ವಮಸಿ” (ಕೌ.ಬ್ರಾ.ಉ. ೧|೨) ||

೪-“ಅಸೌ ವೈ ಸೋಮೋ ರಾಜಾ ವಿಚಕ್ಷಣಶ್ಚನ್ದ್ರಮಾಃ” (ಕೌ.ಬ್ರಾ. ೭|೧೦) |

೫-“ರೇತಃ ಸೋಮಃ” (ಕೌ.ಬ್ರಾ. ೧೩|೭) |

ಸಮ್ಪೂರ್ಣ ಪಾರ್ಥಿವ ಪದಾರ್ಥಗಳು ಚನ್ದ್ರನಿಂದ ಉತ್ಪನ್ನವಾಗಿವೆ. ‘ಸೌಷುಮ್ಣಶ್ಚಾನ್ದ್ರರಶ್ಮಿಃ’ ಎಂಬ ದಾರ್ಶನಿಕ ಸಿದ್ಧಾನ್ತಾನುಸಾರ ಸೌರಪ್ರಾಣವು ಸುಷುಮ್ಣಾ ನಾಡಿಯಿಂದ (ಸುಷುಮ್ಣಾನಾಡಿಯು ದಕ್ಷವೃತ್ತ ಎಂಬ ಹೆಸರಿನಿಂದ  ಚಾನ್ದ್ರಪರಿಭ್ರಮಣವೃತ್ತದ ಎರಡೂ ಪರಿಧಿಗಳನ್ನು ಸ್ಪರ್ಶಿಸುತ್ತಾ ಮುಂದೆ ವ್ಯಾಪ್ತವಾಗಿರುತ್ತದೆ) ಪೃಥಿವಿಯ ಮೇಲೆ ಪಾತವಾಗುತ್ತಿರುತ್ತದೆ. ಇದೇ ನಾಡಿಯಿಂದ ನಾಕ್ಷತ್ರಿಕ ಪ್ರಾಣಗಳ ಆಗಮನವಾಗುತ್ತದೆ. ಗ್ರಹ-ನಕ್ಷತ್ರ-ಸೌರ ದ್ವಾದಶ ಆದಿತ್ಯ, ಇತ್ಯಾದಿ ಆಧಿದೈವಿಕ ಪ್ರಾಣವು ಸುಷುಮ್ಣಾದಿಂದ ಪೃಥಿವಿಯ ಮೇಲೆ ಬರುವುದೇನೋ ಅವಶ್ಯ, ಆದರೆ ಮಧ್ಯಸ್ಥ ಚಾನ್ದ್ರಕಕ್ಷೆಯ ಸಮ್ಬನ್ಧದಿಂದ ಈ ಪ್ರಾಣಗಳು ಮೊದಲು ಚಾನ್ದ್ರ ಮಣ್ಡಲದಲ್ಲಿ ಭುಕ್ತವಾಗಬೇಕಾಗುತ್ತದೆ. ಇಲ್ಲಿ ಬಂದು ಚಾನ್ದ್ರರಸದಿಂದ ಸಂಶ್ಲಿಷ್ಟವಾಗಿಯೇ ಈ ಪಾರ್ಥಿವ ಪ್ರಜೆಗಳ ಉಪಾದಾನವಾಗಲು ಸಾಧ್ಯ. ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ, ಇದೇ ಸ್ಥಿತಿಯನ್ನು ಈ ಶಬ್ದಗಳಲ್ಲಿಯೂ ಅಭಿನಯ ಮಾಡಬಹುದು - ಆಗತ ವಿವಿಧ ಭಾವಾಪನ್ನ ಆಧಿದೈವಿಕ ಪ್ರಾಣಗಳ ಸಮನ್ವಯದಿಂದ ನಾನಾಭಾವದಲ್ಲಿ ಪರಿಣತ ಚಾನ್ದ್ರರಸವೇ ನಾನಾಭಾವಾಪನ್ನ ಪಾರ್ಥಿವ ಪದಾರ್ಥಗಳ ಉಪಾದಾನವಾಗುತ್ತದೆ. ಈ ವಿವಿಧ ಪ್ರಾಣ ಭೋಗ ಸಮ್ಬನ್ಧದಿಂದಲೇ ಚನ್ದ್ರನು ‘ವಿಚಕ್ಷಣ’ ಎಂಬ ಹೆಸರಿನಿಂದ ವ್ಯವಹೃತನಾಗಿದ್ದಾನೆ.

ವಿಚಕ್ಷಣ ಚನ್ದ್ರನಿಗೆ ಸ್ವಸೃಷ್ಟಿ-ಪ್ರಕ್ರಿಯೆಯ ಸಾಫಲ್ಯಕ್ಕಾಗಿ ಋತುವಿನ ಆಶ್ರಯ ಪಡೆಯಬೇಕಾಗುತ್ತದೆ. ಋತುವಿನ ಹೊರತು ಅದು ಉಪಾದಾನ ಕರ್ಮ್ಮದಲ್ಲಿ ಸರ್ವಥಾ ಅಸಮರ್ಥವಾಗಿರುತ್ತದೆ. ತತ್ತದೃತುಪ್ರಾಣದ ಸಮನ್ವಯದಿಂದಲೇ ಚನ್ದ್ರನು ತತ್ತತ್ ಪದಾರ್ಥಗಳ ಉಪಾದಾನವಾಗುತ್ತಾನೆ. ಋತುಕಾಲದಲ್ಲಿಯೇ ಚನ್ದ್ರನು ಸ್ವಸೌಮ್ಯ ರೇತದ ಆಧಾನ ಮಾಡುತ್ತಾನೆ. ಚನ್ದ್ರನಲ್ಲಿರುವ ಸೌಮ್ಯಪ್ರಾಣವು ಪಿತರವಾಗಿದೆ. ಅಲ್ಲಿನ ಸೋಮರಸವೇ ರೇತೋರೂಪದಲ್ಲಿ ಪರಿಣತವಾಗುತ್ತಾ ಪುರುಷ ಸೃಷ್ಟಿಯ ಪ್ರವರ್ತ್ತಕವಾಗುತ್ತದೆ. ಅದಕ್ಕಾಗಿ ‘ಪಿತ್ರ್ಯವತಃ’ ಎಂದು ಹೇಳುವುದು ಸರ್ವಥಾ ಅನ್ವರ್ಥವಾಗುತ್ತದೆ. ಶುಕ್ಲಪಕ್ಷದಲ್ಲಿ ಚಾನ್ದ್ರರಸವು ಇನ್ದ್ರನಿಂದ ಅಭಿಭೂತವಾಗುತ್ತದೆ, ಇದನ್ನು ಹಿಂದೆ ವಿಸ್ತಾರವಾಗಿ ವಿವರಿಸಲಾಗಿದೆ. ಆದ್ದರಿಂದ ಈ ಪಕ್ಷದ ಚಾನ್ದ್ರರಸ-ಸಮ್ಪತ್ತಿನಿಂದ ಪಾರ್ಥಿವ ಪ್ರಜೆಗಳು ವಞ್ಚಿತರಾಗಿರುತ್ತಾರೆ. ಒಂದುವೇಳೆ ಅನುಶಯ-ಉಚ್ಛಿಷ್ಟ-ರೂಪದಿಂದ ಶುಕ್ಲಪಕ್ಷದಲ್ಲಿ ಚಾನ್ದ್ರರಸದ ಆಗಮನವೆಂದು ನಂಬಿದರೆ, ಆಗಲೂ ಪಿತೃಸಹೋಭಾಗದ ಆಗಮನವಂತೂ ಈ ಪಕ್ಷದಲ್ಲಿ ಅಸಮ್ಭವ. ಪಞ್ಚದಶಕಲೋಪೇತ – ಕೃಷ್ಣಪಕ್ಷಾಧಿಷ್ಠಾತಾ - ಪಿತೃಪ್ರಾಣಯುಕ್ತ ಚಾನ್ದ್ರಸೋಮವೇ ಋತುವಿನ ಸಮನ್ವಯದಿಂದ ಅನ್ನದಲ್ಲಿ ಪ್ರತಿಷ್ಠಿತವಾಗಿ ರೇತೋರೂಪದಲ್ಲಿ ಪರಿಣತವಾಗುತ್ತಾ ಪುರುಷ-ಪ್ರಸೂತಿಯ ಕಾರಣವಾಗುತ್ತದೆ. ಏಕೆಂದರೆ ಶುಕ್ಲಪಕ್ಷದಲ್ಲಿ ಚಾನ್ದ್ರಸೋಮವು ದೇವಪ್ರಾಣ-ಪ್ರಧಾನವಾಗಿರುತ್ತದೆ. ಸ್ವಗತ ಪಿತೃಭಾಗದ ವಿಕಾಸವು ಕೃಷ್ಣಪಕ್ಷೀಯ ಚಾನ್ದ್ರಸೋಮದಿಂದಲೇ ಎಂದು ನಂಬಿಕೆ ಇದೆ. ಇದೇ ರಹಸ್ಯವನ್ನು ಸೂಚಿಸಲು – ‘ಪಞ್ಚದಶಾತ್ ಪ್ರಸೂತಾತ್ ಪಿತ್ರ್ಯವತಃ’ ಎಂದು ಹೇಳಲಾಗಿದೆ.

ಆ ಚಾನ್ದ್ರರೇತವು ರೇತಃಸೇಕ ಮಾಡುವ ವ್ಯಕ್ತಿಯಾದ ಪಿತನಲ್ಲಿ ಪ್ರತಿಷ್ಠಿತವಾಗುತ್ತದೆ. ಆ ರೇತದ ಮಾತೃಶೋಣಿತಗತ ಯೋಷಿದಗ್ನಿಯಲ್ಲಿ ಆಹುತಿಯಾಗಿ ಪ್ರಜಾರೂಪದಲ್ಲಿ ಪರಿಣತವಾಗುತ್ತದೆ. ಚಾನ್ದ್ರ ಸಮ್ವತ್ಸರವು ತ್ರಯೋದಶ ಮಾಸಾತ್ಮಕವಾಗಿದೆ. ಈ ಒಂದು ಚಾನ್ದ್ರ ಸಮ್ವತ್ಸರದಲ್ಲಿ ಗರ್ಭವು ಪೂರ್ಣಾವಯವವನ್ನು ಪಡೆಯುತ್ತದೆ. ಚಾನ್ದ್ರಭಾಗದ ದೃಷ್ಟಿಯಿಂದ ಈ ಪುರುಷವು ಪಿತೃಪ್ರಾಣಮೂರ್ತ್ತಿಯಾಗಿದೆ, ಋತುದೃಷ್ಟಿಯಿಂದ ಋತುರೂಪವಾಗಿದೆ, ಶೋಣಿತದೃಷ್ಟಿಯಿಂದ ಆರ್ತ್ತವರೂಪವಾಗಿದೆ. ಪ್ರಕೃತದಲ್ಲಿ ಶ್ರೌತ ವಚನವು ವಿಸ್ಪಷ್ಟ ಶಬ್ದಗಳಲ್ಲಿ ಇದೇ ಚಾನ್ದ್ರಸೃಷ್ಟಿಪ್ರಾಧಾನ್ಯತೆಯ ಸಮರ್ಥನೆ ಮಾಡುತ್ತಿದೆ. ‘ಚನ್ದ್ರನಿಂದ ಪಿತೃಪ್ರಾಣವು ಶುಕ್ರದಲ್ಲಿ ಸಮಾವೇಶವಾಯಿತು, ಅದೇ ಸಹೋರೂಪ ಚಾನ್ದ್ರ ಭಾಗವು ಋಣ ಧನಗಳಿಂದ ಪ್ರಜಾತನ್ತುರೂಪದಲ್ಲಿ ಪರಿಣತವಾಯಿತು’. ಈ ಸಿದ್ಧಾನ್ತದ ರಕ್ಷಣೆಗಾಗಿ ಇದಕ್ಕಿಂತ ಹೆಚ್ಚಿನ ಪ್ರಮಾಣ ಇನ್ನೇನು ಬೇಕು? ಈಗ ಆ ಸಂಹಿತಾ-ಪ್ರಮಾಣಗಳ ಮೀಮಾಂಸೆಯು ಅಪೇಕ್ಷಿತವಾಗಿದೆ. ಅದು ವಿಸ್ಪಷ್ಟ ಶಬ್ದಗಳಲ್ಲಿ ‘ಪಿತರಃ-ಸೂನವಃ-ಆತ್ಮಧೇಯಾಃ-ತನ್ಯಾಃ’ ರೂಪದಲ್ಲಿ ಬೀಜಿಯಿಂದ ಪ್ರಜಾತನ್ತುವಿತಾನದ ಸಮರ್ಥನೆ ಮಾಡುತ್ತಿವೆ. ‘ಸಾಪಿಣ್ಡ್ಯ ಸಾಪ್ತಪೌರುಷಮ್’ ಎಂಬುದರೆ ಮೌಲಿಕ ಉಪಪತ್ತಿಯ ವಿಶ್ಲೇಷಣೆಯನ್ನು ಮಾಡುತ್ತಾ ಮಹರ್ಷಿ ದೀರ್ಘತಮರು ಹೇಳುತ್ತಾರೆ –

೧- ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವನ್ತಂ ಯದನಸ್ಥಾ ಬಿಭರ್ತಿ | ಭೂಮ್ಯಾ ಅಸುರಸೃಗಾತ್ಮಾ ಕ್ವಸ್ವಿತ್ ಕೋ ವಿದ್ವಾಂಸಮುಪಗಾತ್ ಪ್ರಷ್ಟುಮೇತತ್ ||

೨- ಪಾಕಃ ಪೃಚ್ಛಾಮಿ ಮನಸಾಽವಿಜಾನನ್ ದೇವಾನಾಮೇನಾ ನಿಹಿತಾ ಪದಾನಿ |
ವತ್ಸೇ ಬಷ್ಕಾಯೇಽಧಿ ಸಪ್ತತನ್ತೂನ್ ವಿತತ್ನಿರೇ ಕವಯ ಓತವಾ ಉ ||

೩ – ಅಚಿಕಿತ್ತ್ವಾಞ್ಚಿಕಿತುಷಶ್ಚಿದತ್ರ ಕವೀನ್ ಪೃಚ್ಛಾಮಿ ವಿದ್ಮನೇ ನ ವಿದ್ವಾನ್ |
ವಿ ಯಸ್ತಸ್ತಮ್ಭ ಷಡಿಮಾ ರಜಾಂಸ್ಯಜಸ್ಯ ರೂಪೇ ಕಿಮಪಿ ಸ್ವಿದೇಕಮ್ ||
-      ಋಕ್.ಸಂ. ೧|೧೬೪|೪,೫,೬, ಮಂ |

೪- ಮಾತಾಪಿತರಮೃತ ಆಬಭಾಜ ಧೀತ್ಯಗ್ರೇ ಮನಸಾ ಸಂ ಹಿ ಜಗ್ಮೇ |
ಸಾ ಬಿಭತ್ಸುರ್ಗರ್ಭರಸಾ ನಿವಿದ್ಧಾ ನಮಸ್ವನ್ತ ಇದುಪವಾಕಮೀಯುಃ ||
-      ಋಕ್.ಸಂ. ೧|೧೬೪|೮|

೫-ಸ್ತ್ರಿಯಃ ಸತೀಸ್ತಾÆ ಉ ಮೇ ಪುಂಸ ಆಹುಃ ಪದಕ್ಷಣ್ವಾನ್ನವಿಚೇತದನ್ಧಃ |
ಕವಿರ್ಯಃ ಪುತ್ರಃ ಸ ಈಮಾಚಿಕೇತ ಯಸ್ತಾ ವಿಜಾನಾತ್ ಸ ಪಿತುಷ್ಪಿತಾಸತ್ ||

೬- ಅವಃ ಪರೇಣ ಪರ ಏನಾವರೇಣ ಪದಾ ವತ್ಸಂ ವಿಭ್ರತೀ ಗೌರುದಸ್ಥಾತ್ |
ಸಾ ಕದ್ರೀಚೀ ಕಂತ್ಸ್ವಿದರ್ಧ ಪರಾಗಾತ್ ಕ್ವಾಚಿತ್ಸೂತೇ ನ ಹಿ ಯೂಥೇ ಅನ್ತಃ ||

೭- ಅವಃ ಪರೇಣ ಪಿತರಂ ಯೋ ಅಸ್ಯಾನುವೇದ ಪರ ಏನಾವರೇಣ |
ಕವೀಯಮಾನಃ ಕ ಇಹ ಪ್ರವೋಚದ್ದೇವಂ ಮನಃ ಕುತೋ ಅಧಿಪ್ರಜಾತಮ್ ||

೮- ಯೇ ಅರ್ವಾಞ್ಚಸ್ತಾ ಉ ಪರಾಚ ಆಹುರ್ಯೇ ಪರಾಞ್ಚನ್ತಾ ಉ ಅರ್ವಾಚ ಆಹುಃ |
ಇನ್ದ್ರಶ್ಚ ಯಾ ಚಕ್ರಥುಃ ಸೋಮ ತಾನಿ ಧುರಾ ನಯುಕ್ತಾ ರಜಸೋ ವಹನ್ತಿ ||
-      ಋಕ್.ಸಂ. ೧ |೧೬೪ |೧೬,೧೭,೧೮,೧೯, ಮಂ |

ವೇದಸಿದ್ಧ ಸಾಮಾನ್ಯ ಪರಿಭಾಷಾನುಸಾರ ‘ವಿಜ್ಞಾನ’ ಪ್ರತಿಪಾದಕ ಮನ್ತ್ರಗಳು ಆಧಿದೈವಿಕ, ಆಧ್ಯಾತ್ಮಿಕ, ಆಧಿಭೌತಿಕ, ಮೂರೂ ಪಕ್ಷಗಳಲ್ಲಿ ಅರ್ಥ ಹೊಂದುತ್ತದೆ. ಉದಾ – ಬ್ರಾಹ್ಮಣ ಗ್ರನ್ಥೋಕ್ತ ‘ಇತಿ ನು-ಅಧಿದೈವತಮ್’ – ‘ಇತಿನ್ವಧ್ಯಾತ್ಮಮ್’ – ‘ಇತಿ ನು-ಅಧಿಭೂತಮ್’ ಇತ್ಯಾದಿ ವಚನಗಳಿಂದಲೂ ಪ್ರಮಾಣಿತವಾಗಿದೆ. ಇದೇ ಸಾಮಾನ್ಯ ನಿಯಮಾನುಸಾರ ಉಕ್ತ ಮನ್ತ್ರಗಳ ಆಧಿದೈವಿಕ ಸೌರಮಣ್ಡಲ, ಆಧಿಭೌತಿಕ ಪಾರ್ಥಿವವಿವರ್ತ್ತ, ಆಧ್ಯಾತ್ಮಿಕ ಶಾರೀರ ಪ್ರಪಞ್ಚ, ಮೂರರೊಂದಿಗೆ ಸಮನ್ವಯವಾಗುತ್ತಿದೆ. ಸರ್ವಶ್ರೀ ಸಾಯಣಾಚಾರ್ಯರು ವಿಶೇಷತಃ ಆಧಿದೈವಿಕ ಅರ್ಥವನ್ನೇ ಸಮಾದರ ಮಾಡಿದ್ದಾರೆ. ಈ ಸಮಾದರವು ಯಜ್ಞೇತಿಕರ್ತ್ತವ್ಯತಾ ದೃಷ್ಟಿಯಿಂದ ಲೌಕಿಕವಾಗಿ ಒಂದು ಸೀಮಾ ಪರ್ಯ್ಯನ್ತ ಮಾನ್ಯವಾಗುತ್ತದೆ. ವೈಧ ಯಜ್ಞಕರ್ಮ್ಮವು ಪಾರ್ಥಿವ ವಿವರ್ತ್ತದ ಆಧಾರದ ಮೇಲೆ ವಿತತವಾಗಿದೆ, ಪಾರ್ಥಿವ ಯಜ್ಞವು ಆಧಿದೈವಿಕ ಸೌರಯಜ್ಞದ ಆಧಾರದ ಮೇಲೆ ವಿತತವಾಗಿದೆ. ಉದಾ – “ಯದ್ವೈ ದೇವಾ ಅಕುರ್ವಂಸ್ತತ್ಕರವಾಣಿ, ದೇವಾನನು ವಿಧಾ ವೈ ಮನುಷ್ಯಾಃ, ದೇವಾನಾಮಿದವೋ ಮಹತ್ತದಾವೃಣೀಮಹೇ, ಅವಿದಾಮ ದೇವಾನ್ ಸ್ವರ್ಜ್ಯೋತಿಃ” ಇತ್ಯಾದಿ ವಚನಗಳಿಂದ ಪ್ರಮಾಣಿತವಾಗಿದೆ. ಇದೇ ಯಜ್ಞಮೂಲವನ್ನು ಸಿದ್ಧಪಡಿಸಲಿಕ್ಕಾಗಿ ಆಚಾರ್ಯರು ಪ್ರಾಯಶ ಆಧಿದೈವಿಕ ಅರ್ಥವನ್ನೇ ಆಶ್ರಯಿಸಿದ್ದಾರೆ. ಉದಾಹರಣೆಗಾಗಿ ಉಕ್ತ ಮನ್ತ್ರ ಸಮಷ್ಟಿಯಲ್ಲಿ ಎರಡನೆಯದಾದ ‘ಪಾಕಃ ಪೃಚ್ಛಾಮಿ..’ ಇತ್ಯಾದಿ ಮನ್ತ್ರದ ಭಾಷ್ಯದ ಮೇಲೆ ದೃಷ್ಟಿ ಹಾಯಿಸಿರಿ.


“ವಿಶುದ್ಧಹೃದಯ – ದಮ್ಭಶೂನ್ಯ – ನಾನು, ತನ್ನ ಮನದಿಂದ (ಈ ಗಮ್ಭೀರತತ್ತ್ವವನ್ನು) ತಿಳಿಯದೆ (ಜಿಜ್ಞಾಸಾ ರೂಪದಿಂದ) ಪ್ರಶ್ನಿಸುವುದೇನೆಂದರೆ, ದೇವತೆಗಳ ಯಾವ ಸ್ಥಾನಗಳಿರುವವೋ, ಅವು ಅತ್ಯನ್ತ ನಿಗೂಢವಾಗಿರುವುದರಿಂದ ಸಂಶಯಾಸ್ಪದವಾಗಿವೆ. ಒಂದು ಆಯನಾತ್ಮಕ ಈ ಆದಿತ್ಯನಲ್ಲಿ ಸಪ್ತಸಂಸ್ಥ ಸೋಮತನ್ತುಗಳನ್ನು ತಿಳಿದು ಯಜಮಾನರು ಅಳುತ್ತಾರೆ. ಅಥವಾ ಸಪ್ತ ಸಂಸ್ಥಾರೂಪೀ ತಿರ್ಯ್ಯಕ್ ತನ್ತುಸನ್ತಾನಕ್ಕಾಗಿ ಏಳು ಛನ್ದಸ್ಸುಗಳನ್ನು ವಿತಾನಗೊಳಿಸುತ್ತಾರೆ.” ಭಾಷ್ಯಕಾರರ ಅಭಿಪ್ರಾಯವೇನೆಂದರೆ – “ಸೂರ್ಯ್ಯನಲ್ಲಿ ಪಾರಮೇಷ್ಠ್ಯ ಸೋಮವು ನಿರನ್ತರ ಆಹುತವಾಗುತ್ತಿರುತ್ತದೆ. ಇದೇ ಸೋಮಾಹುತಿಯಿಂದ ಪ್ರಾಕೃತಿಕ (ಆಧಿದೈವಿಕ) ಸಪ್ತಸಂಸ್ಥವು ಜ್ಯೋತಿಷ್ಟೋಮಯಜ್ಞದ ವಿತಾನವಾಗುತ್ತಿದೆ, ಇದರ ಆಧಾರದಲ್ಲಿ ಯಜ್ಞ ಕರ್ತ್ತಾ ಯಜಮಾನನು ವೈಧ ಜ್ಯೋತಿಷ್ಟೋಮ ಯಜ್ಞದ ವಿತಾನ ಮಾಡಲು ಸಮರ್ಥನಾಗುತ್ತಾನೆ. ಏಳು ಸಂಸ್ಥಾಗಳಲ್ಲಿ ವಿಭಕ್ತ ಜ್ಯೋತಿಷ್ಟೋಮವೇ ಸೌರ ದೇವತೆಗಳ ನಿಗೂಢ ಪದವಾಗಿದೆ. ಅಥವಾ ಯಾವ ಗಾಯತ್ರ್ಯಾದಿ ಏಳು ಛನ್ದ್ರಸ್ಸುಗಳ ಆಧಾರದಲ್ಲಿ ಸೌರಪ್ರಾಣದೇವತೆಯು ಯಜ್ಞವಿತಾನ ಮಾಡಲು ಸಮರ್ಥರಾಗುತ್ತಾರೆಯೋ, ಆ ಛನ್ದಸ್ಸುಗಳೇ ದೇವತೆಗಳ ನಿಗೂಢ ಪದವಾಗಿದೆ”. ಈಗ ಆ ಆಧ್ಯಾತ್ಮಿಕ ಅರ್ಥದತ್ತ ಓದುಗರ ಧ್ಯಾನವನ್ನು ಆಕರ್ಷಿತಗೊಳಿಸಲಾಗುತ್ತದೆ. ಇದರ ಸಮ್ಬನ್ಧವು ‘ಸಾಪಿಣ್ಡ್ಯ ವಿಜ್ಞಾನ’ದೊಂದಿಗಿದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Tuesday, 18 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಆತ್ಮಧನ-ಆತ್ಮಋಣ-ಸ್ವರೂಪಮೀಮಾಂಸೆ (೨೭)

೨೭. ಆತ್ಮಧನ-ಆತ್ಮಋಣ-ಸ್ವರೂಪಮೀಮಾಂಸೆ


ಆತ್ಮಧನೋಪಲಕ್ಷಿತ ೨೮ ಕಲೆಗಳ ಸಹಃಪಿಣ್ಡ, ಆತ್ಮಋಣೋಪಲಕ್ಷಿತ ೫೬ ಕಲೆಗಳ ಸಹಃಪಿಣ್ಡ, ಇವೆರಡರ ಆತ್ಮಧೇಯ, ತನ್ಯ ರೂಪದಿಂದ ಎರಡೆರಡು ಅವಸ್ಥೆಗಳು ಹೇಳಲ್ಪಟ್ಟಿವೆ. ಪೂರ್ವ ನಿರೂಪಣೆಯಿಂದ ಒಂದುವೇಳೆ ನಾಲ್ಕೂ ಅವಸ್ಥೆಗಳ ಸಮನ್ವಯವಾದರೆ, ವಿಷಯ-ದುರೂಹತೆಯ ಕಾರಣ ಇವೆಲ್ಲವನ್ನು ಸಂಕಲನದ ದೃಷ್ಟಿಯಿಂದ ಸಮನ್ವಯ ಮಾಡಲಾಗುತ್ತದೆ. ಮೊದಲು ಸ್ವೋಪಾರ್ಜಿತ, ಆತ್ಮಧನೋಪಲಕ್ಷಿತ, ೨೮ ಕಲೆಗಳ ಸಹಃಪಿಣ್ಡವನ್ನು ಗಮನಿಸೋಣ. ಇದಕ್ಕೆ ‘ಪಿತರಃ-ಸೂನವಃ’ ಭೇದದಿಂದ ಎರಡು ಅವಸ್ಥೆಗಳಿರುತ್ತವೆ. ಬೀಜಿಯಿಂದ ಮುಂದೆ ಉತ್ಪನ್ನವಾಗುವ ಪುತ್ರಾದಿ-ವೃದ್ಧಾತಿವೃದ್ಧಪ್ರಪೌತ್ರಾನ್ತ ೬ ಪೀಳಿಗೆಯ ಪರ್ಯ್ಯನ್ತ ಪ್ರತ್ಯೇಕ ಪೀಳಿಗೆಯಲ್ಲಿ ಈ ಬೀಜಿಯ ಆತ್ಮಧನದ ‘ಪಿತರಃ ಸೂನುಃ’ – ರೂಪದಿಂದ ಎರಡೆರಡು ವಿಭಾಗಗಳಾಗುತ್ತವೆ. ಯಾವ ಆತ್ಮಧನ ಯೋಷಿದಗ್ನಿಯಲ್ಲಿ ಆಹುತವಾಗದೆ ಆವಾಪ ಕರ್ತೃಗಳ ಮಹತ್ ಸಂಸ್ಥಾದಲ್ಲಿ ಅನ್ತರ್ಯ್ಯಾಮ ಸಮ್ಬನ್ಧದಿಂದ ಪ್ರತಿಷ್ಠಿತವಾಗಿರುತ್ತದೆಯೋ, ಅದು ‘ಆತ್ಮಧೇಯ’ ಎಂದು ಕರೆಯಿಸಿಕೊಳ್ಳುತ್ತದೆ. ಹಾಗೂ ಯಾವ ಆತ್ಮಧನ ಯೋಷಿದಗ್ನಿಯಲ್ಲಿ ಆಹುತವಾಗುತ್ತಾ ಹೋಗುತ್ತದೆಯೋ, ಅದು ಉತ್ತರೋತ್ತರ ಸನ್ತತವಾಗುತ್ತಾ ‘ತನ್ಯ’ ಎಂದು ಕರೆಯಲ್ಪಡುತ್ತದೆ. ಆತ್ಮಧೇಯಭಾಗವು ಧನವಾಗಿದೆ, ತನ್ಯಭಾಗವು ಋಣವಾಗಿದೆ. ಧನಭಾಗವು ‘ಪಿತರಃ’ ಆಗಿದೆ, ಋಣಭಾಗವು ‘ಸೂನವಃ’ ಆಗಿದೆ. ಋಣ-ಧನದ ಈ ಕ್ರಮಿಕ ಧಾರಾಪ್ರವಾಹದ ಕಾರಣ ಬೀಜಿಯ ಆತ್ಮಧನವು ೭ ಧನಭಾವಗಳಲ್ಲಿ ಹಾಗೂ ೬ ಋಣಭಾವಗಳಲ್ಲಿ ಪರಿಣತವಾಗುತ್ತದೆ. ಲೋಕಭಾಷಾ-ದೃಷ್ಟಿಯಲ್ಲಿ ಧನಭಾವವು ‘ಜಮೆ’, ಋಣಭಾವವು ‘ಖರ್ಚು’. ‘ಜಮೆ-ಖರ್ಚು’ ಎಂಬ ಈ ಪರಮ್ಪರೆಯು ಸತ್ಯವಾಗಿ ಪಿತೃಸೃಷ್ಟಿಯ ಒಂದು ಅಪೂರ್ವ-ಮೌಲಿಕ ರಹಸ್ಯವಾಗಿದೆ. ಇದನ್ನು ಯಥಾವತ್ ಸಮನ್ವಯಗೊಳಿಸದ ಹೊರತು ‘ಸಾಪಿಣ್ಡ್ಯ’ ರಹಸ್ಯದ ಗತಾರ್ಥ ಉಂಟಾಗುವುದಿಲ್ಲ. ಸ್ವೋಪಾರ್ಜಿತ ೨೮ ಕಲೆಗಳ ಆತ್ಮಧನದ ಈ ಋಣ-ಧನ ಭಾವಗಳ ಪರಿಲೇಖದಿಂದ ಚೆನ್ನಾಗಿ ಸ್ಪಷ್ಟೀಕರಣ ದೊರಕುತ್ತದೆ.


ಬೀಜಿಯ ಶುಕ್ರಾತ್ಮಕ ಮಹಾನಾತ್ಮದಲ್ಲಿರುವ ಸ್ವೋಪಾರ್ಜಿತ-ಆತ್ಮಧನರೂಪ ೨೮ ಕಲಾತ್ಮಕ ಪಿತೃಸಹಃಪಿಣ್ಡದ ‘ಪಿತರಃ-ಸೂನವಃ’ ಈ ವಿಭಾಗಗಳ ಅನನ್ತರ ಬೀಜಿಯ ಮಹಾನಾತ್ಮದಲ್ಲಿ ಪ್ರತಿಷ್ಠಿತ, ಪಿತಾ-ಪಿತಾಮಹಾದಿಗಳಿಂದ ಋಣರೂಪದಲ್ಲಿ ಆಗತ ಹಾಗೂ ಆತ್ಮಋಣರೂಪ ೫೬ ಕಲಾತ್ಮಕ ಪಿತೃಸಹಃಪಿಣ್ಡದ ಆತ್ಮಧೇಯ, ಹಾಗೂ ತನ್ಯ ಪಿಣ್ದಗಳತ್ತ ನಮ್ಮ ಧ್ಯಾನವು ಆಕರ್ಷಿತವಾಗುತ್ತದೆ. ನಿಶ್ಚಿತವಾಗಿರುವುದು ಏನೆಂದರೆ, ಪಿತಾ-ಪಿತಾಮಹಾದಿಗಳಿಂದ ಬರುವ ಋಣಾತ್ಮಿಕಾ ಎಲ್ಲ ಸಹಃಕಲೆಗಳು ಬೀಜಿಯಲ್ಲಿ ಪ್ರತಿಷ್ಠಿತವಾಗಿರಲು ಆಗುವುದಿಲ್ಲ. ಆದರೆ ಕೆಲ ಅಂಶಗಳು ಪ್ರತಿಷ್ಠಿತವಾಗಿರುತ್ತವೆ, ಶೇಷಾಂಶವು ಬೀಜಿಯ ಪುತ್ರಾದಿಗಳಲ್ಲಿ ಋಣರೂಪದಲ್ಲಿ ಮುಂದುವರೆಯುತ್ತದೆ. ೫೬ ಕಲಾತ್ಮಕ ಪಿತೃಋಣರೂಪ ಪಿತೃಸಹಃಕಲೆಗಳಲ್ಲಿ ಎಷ್ಟು ಕಲೆಗಳು ಬೀಜಿಯಲ್ಲಿ ಪ್ರತಿಷ್ಠಿತವಾಗಿ ಸ್ಥಿರವಾಗಿರುತ್ತವೆಯೋ, ಅವುಗಳನ್ನು ‘ಆತ್ಮಧೇಯಪಿಣ್ಡ’ ಎಂದು ಕರೆಯಲಾಗುತ್ತದೆ, ಹಾಗು ಎಷ್ಟು ಕಲೆಗಳು ಪುತ್ರಾದಿಗಳಲ್ಲಿ (ಸನ್ತಾನಪರಮ್ಪರೆಯಿಂದ) ಭುಕ್ತವಾಗುತ್ತವೆಯೋ, ಅವು ‘ತನ್ಯಪಿಣ್ಡ’ವೆಂದು ಕರೆಯಲ್ಪಟ್ಟಿವೆ.

ಆತ್ಮಧನವೂ ಆತ್ಮಧೇಯ, ತನ್ಯ ಭೇದದಿಂದ ಋಣ-ಧನ ಭಾವಾತ್ಮಕವಾಗಿದೆ. ಆತ್ಮಋಣವೂ ಆತ್ಮಧೇಯ, ತನ್ಯ ಭೇದದಿಂದ ಋಣ-ಧನ ಭಾವಾತ್ಮಕವಾಗಿದೆ. ಎಲ್ಲೆಡೆ ಧನಭಾವವು ಆತ್ಮಧೇಯವಾಗಿದೆ, ಋಣಭಾವವು ತನ್ಯವಾಗಿದೆ. ಆತ್ಮಧನದ ೨೮ರಲ್ಲಿ ೭ ಭಾಗವು ಆತ್ಮಧೇಯವಾಗಿದೆ, ಇದೇ ‘ಪಿತರ’ವಾಗಿದೆ, ಇದೇ ಧನವು. ಆತ್ಮಧನದ ೨೮ರಲ್ಲಿ ೨೧ ತನ್ಯವು, ಇದೇ ‘ಸೂನವಃ’ ಆಗಿದೆ, ಇದೇ ಋಣವು. ಹಾಗೆಯೇ ಆತ್ಮಋಣದ ೫೬ ಭಾಗಗಳಲ್ಲಿ ೨೧ ಆತ್ಮಧೇಯವಾಗಿವೆ, ಇದೇ ಪಿತರವು, ಇದೇ ಧನವು. ಆತ್ಮಋಣದ ೬ರಲ್ಲಿ ೩೫ ತನ್ಯವು, ಇದೇ ಸೂನವಃ, ಇದೇ ಋಣವು. ಆತ್ಮಧನದ ಧನರೂಪೀ ೭ ಆತ್ಮಧೇಯ, ಆತ್ಮಋಣದ ಧನರೂಪೀ ೨೧ ಆತ್ಮಧೇಯ, ಈ ರೀತಿ ಬೀಜಿಯಲ್ಲಿ ಒಟ್ಟು ೨೮ ಆತ್ಮಧೇಯಕಲಾ ಪ್ರತಿಷ್ಠಿತವಾಗಿರುತ್ತವೆ. ಆತ್ಮಋಣದ ಋಣರೂಪೀ ೩೫ ತನ್ಯ, ಆತ್ಮಧನದ ಋಣರೂಪೀ ೨೧ ತನ್ಯ, ಈ ರೀತಿ ಬೀಜಿಯಲ್ಲಿ ೫೬ ತನ್ಯಕಲಾ ಪ್ರತಿಷ್ಠಿತವಾಗಿರುತ್ತವೆ. ಇದು ಕೆಳಗಿನ ಪರಿಲೇಖದಿಂದ ಸ್ಪಷ್ಟವಾಗುತ್ತದೆ –


ಪ್ರತಿಯೊಬ್ಬ ಪುರುಷನಲ್ಲಿ ತನ್ನಿಂದ ಮೇಲಕ್ಕೆ ಕ್ರಮವಾಗಿ ೬ ಪೀಳಿಗೆಗಳಿಂದ ಋಣರೂಪದಿಂದ ೫೬ ಸಹೋಮಾತ್ರಾ ಪ್ರತಿಷ್ಠಿತವಾಗಿರುತ್ತವೆ, ಹಾಗೂ ಈತನು ಸ್ವಯಂ ೨೮ನ್ನು ಸ್ವತನ್ತ್ರರೂಪದಿಂದ ಉತ್ಪನ್ನ ಮಾಡಿಕೊಳ್ಳುತ್ತಾನೆ. ಫಲಿತವಾಗಿ ಒಟ್ಟು ೮೪ ಮಾತ್ರಾಗಳ ಸಂಗ್ರಹವಾಗುತ್ತದೆ. ೫೬ ಮಾತ್ರಾಗಳು ಋಣವು, ೨೮ ಮಾತ್ರಾಗಳು ಧನವು. ಧನಾತ್ಮಿಕಾ ೨೮ ಮಾತ್ರಾಗಳಲ್ಲಿ ಈತನ ಸಮೀಪ ೭ ಮಾತ್ರಾಗಳು ಉಳಿಯುತ್ತವೆ, ೨೧ ಮಾತ್ರಾಗಳು ಪುತ್ರನಿಗೆ ಸೇರುತ್ತವೆ. ೫೬ ಮಾತ್ರಾಗಳ ಋಣವನ್ನು ಈತನು ತೀರಿಸಬೇಕಾಗುತ್ತದೆ. ಇವುಗಳಲ್ಲಿ ೩೫ ಮಾತ್ರಾಗಳ ಪರಿಶೋಧವಂತೂ ಪುತ್ರೋತ್ಪತ್ತಿ ಅಥವಾ ಪುತ್ರನು ಮಾಡಬಹುದಾದಂತಹಾ ಸಾಮಾಜಿಕ ಸತ್ಕಾರ್ಯಗಳನ್ನು ಮಾಡುವುದರಿಂದ ಉಂಟಾಗುತ್ತದೆ. ಏಕೆಂದರೆ ಎಲ್ಲಿ ಪುತ್ರನಲ್ಲಿ ಈತನಿಂದ ಆತ್ಮಧನದ ೨೮ರಲ್ಲಿ ೨೧ ಭಾಗ ಹೋಗಿರುತ್ತವೆ, ಜೊತೆಗೆ ಆತ್ಮಋಣದ ೩೫ ಭಾಗವೂ ತನ್ಯಭಾವದಿಂದ ಪುತ್ರನಿಗೆ ಹೋಗುತ್ತದೆ. ಈಗ ಋಣಭಾಗದಿಂದ ಕೇವಲ ೨೧ ಕಲೆಗಳ ಶೇಷವು ಇವನ ಹತ್ತಿರ ಇರುತ್ತದೆ. ಈ ೨೧ ಋಣಭಾಗಗಳನ್ನು, ಹಾಗೂ ೭ ಧನಭಾಗಗಳನ್ನು ತೆಗೆದುಕೊಂಡು ಪುರುಷನು ಯಾವದಾಯುರ್ಭೋಗ ಪರ್ಯ್ಯನ್ತ ಜೀವನಸತ್ತೆಯ ಧಾರಣೆಯಲ್ಲಿ ಸಮರ್ಥನಾಗುತ್ತಾನೆ. ಈತನು ೨೧ ಋಣಭಾಗಗಳ ಪರಿಶೋಧ ಹಾಗೂ ತನ್ನ ೭ ಭಾಗಗಳನ್ನು ಪೂರ್ಣ (೨೮)ಗೊಳಿಸಿದಾಗ, ಬನ್ಧನಮುಕ್ತಿಯು ಸಾಧ್ಯ. ಇದೇ ‘ಪಿತೃಋಣಮುಕ್ತಿ’ಗಾಗಿ ಶ್ರಾದ್ಧಕರ್ಮ್ಮವು ವಿಹಿತವಾಗಿದೆ. ಇದುವೇ ಈತನ ಆನೃಣ್ಯವಾಗಿದೆ. ಇದು ಮುಂದಿನ ಪ್ರಕರಣದಲ್ಲಿ ವಿಸ್ತಾರವಾಗಿ ಹೇಳಲ್ಪಡುತ್ತದೆ.

ಪ್ರಕೃತದಲ್ಲಿ ಈ ‘ಸಹಃ’ ಸ್ವರೂಪ ಮೀಮಾಂಸೆಯಿಂದ ಹೇಳಬೇಕಿರುವುದೇನೆಂದರೆ, ಮೂಲಪುರುಷನಿಂದ ಆರಮ್ಭವಾಗಿ ಆತನ ಏಳನೇ ಪೀಳಿಗೆಯ ಪರ್ಯ್ಯನ್ತ ಶುಕ್ರಸ್ಥಿತ ಒಂದೇ ಪಿಣ್ಡದ ವಿತಾನವಾಗುತ್ತದೆ. ಇದೇ ಪಿಣ್ಡ-ಸಮಾನತೆಯಿಂದ ಏಳರ ಸಾಪಿಣ್ಡ್ಯ ಸಮ್ಬನ್ಧವೆಂದು ನಂಬಲಾಗಿದೆ. ಯಾವ ಸೂತ್ರದ ಮುಖೇನ ಈ ಸಮ್ಬನ್ಧವು ಏಳೂ ಪೀಳಿಗೆಯಲ್ಲಿ ಸುರಕ್ಷಿತವಾಗಿ ಉಳಿಯುತ್ತದೆಯೋ, ಆ ಸೂತ್ರವೇ ‘ಶ್ರಾದ್ಧಕರ್ಮ್ಮ’ದ ಮೂಲಪ್ರತಿಷ್ಠಾ ಆಗುತ್ತದೆ. ಈ ಏಳು ಸಪಿಣ್ಡಗಳಲ್ಲಿ ಪಿತಾ, ಪಿತಾಮಹ, ಪ್ರಪಿತಾಮಹ ಎಂಬ ೩ ಸಹೋಭಾಗಗಳು ಸಂಖ್ಯಾಧಿಕ್ಯದಿಂದ ‘ಪಿಣ್ಡಭಾಜಃ’ (ಪಿಣ್ಡಭಾಜನರು) ಎಂದು ಕರೆಯಲ್ಪಟ್ಟಿದ್ದಾರೆ, ಹಾಗೂ ವೃದ್ಧಪ್ರಪಿತಾಮಹ, ಅತಿವೃದ್ಧಪ್ರಪಿತಾಮಹ, ವೃದ್ಧಾತಿವೃದ್ಧಪ್ರಪಿತಾಮಹ ಎಂಬ ಮೂರು ವರ್ಗವು ಸಂಖ್ಯಾಲ್ಪತೆಯಿಂದ ‘ಲೇಪಭಾಜಃ’ (ಲೇಪಭಾಜನರು) ಎಂದು ಕರೆಯಲ್ಪಟ್ಟಿದ್ದಾರೆ. ೨೧ ಸಂಖ್ಯಾಯುಕ್ತ ಬೀಜಿಯು (ಪುತ್ರನು) ‘ಪಿಣ್ಡದ’ನೆಂದು ನಂಬಲಾಗಿದೆ. ಇದು ನಿಮ್ನ ಲಿಖಿತ ವಚನದಿಂದ ಪ್ರಮಾಣಿತವಾಗುತ್ತದೆ.

ಲೇಪಭಾಜಶ್ಚತುರ್ಥಾದ್ಯಾಃ ಪಿತ್ರಾದ್ಯಾಃ ಪಿಣ್ಡಭಾಗಿನಃ |
ಪಿಣ್ಡದಃ ಸಪ್ತಮಸ್ತ್ವೇಷಾಂ ಸಾಪಿಣ್ಡ್ಯಂ ಸಾಪ್ತಪೌರುಷಮ್ ||

ಶುಕ್ರಸ್ಥಿತ ಮಹಾನಾತ್ಮವು ಚತುರಶೀತಿ (೮೪) ಕಲಾ ಪಿತೃಪ್ರಾಣಾತ್ಮಕ ಸಹಃಪಿಣ್ಡದಿಂದಲೇ ಪ್ರಜಾತನ್ತುವಿತಾನದಲ್ಲಿ ಸಮರ್ಥವಾಗುತ್ತದೆ. ಯಾವ ರೀತಿ ವಸ್ತ್ರನಿರ್ಮಾಣ ಪ್ರಕ್ರಿಯೆಯಲ್ಲಿ ನೂಲುಗಳ ನೇಯುವಿಕೆಯು ಉಂಟಾಗಿರುತ್ತದೆಯೋ, ಅದೇ ರೀತಿ ಪ್ರಜಾತನ್ತುವಿತಾನವು ಇರುತ್ತದೆ. ೬ ಮೇಲಿನ ಆಗತಸೂತ್ರ, ೬ ಕೆಳಗಿನ ವಿತತಸೂತ್ರ, ಪುನಃ ಪ್ರತ್ಯೇಕವಾದ ಅವಾನ್ತರ ಶಾಖೆ-ಪ್ರಶಾಖೆಗಳು; ಎಂತಹಾ ಅದ್ಭುತವೀ ಪ್ರಜಾತನ್ತು-ವಿತಾನ! 

ಪ್ರಜಾತನ್ತುವಿತಾನವಿಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡದ್ದಲ್ಲದೆ ಅದರ ಆಧಾರದಲ್ಲಿ ಆನೃಣ್ಯಭಾವಪ್ರವರ್ತ್ತಕ ಶ್ರಾದ್ಧವೆಂಬ ಹೆಸರಿನ ವೈಜ್ಞಾನಿಕ ಪ್ರಕ್ರಿಯೆಯನ್ನು ಆವಿಷ್ಕಾರ ಮಾಡಿರುವ ಆ ಅತೀನ್ದ್ರಿಯ ತತ್ತ್ವಜ್ಞ ಮಹರ್ಷಿಗಳ ಅಲೌಕಿಕ ದೃಷ್ಟಿಯು ಹೇಗಿರಬಹುದು? 

ಆದರೆ ಇಂತಹಾ ಅತ್ಯುನ್ನತ ತಾತ್ತ್ವಿಕ ಪ್ರಕ್ರಿಯೆಯು ಇಂದು ಆ ಋಷಿಸನ್ತಾನಗಳಿಂದಲೇ ಉಪಹಾಸದ ಕ್ಷೇತ್ರವಾಗಿರುವುದು ಖೇದಕರ! ಇದಕ್ಕಿಂತ ಅಧಃಪತನವು ಇನ್ನೇನಿರಲು ಸಾಧ್ಯ?


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Tuesday, 11 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ನಿವಾಪ-ಪಿತೃ-ತನ್ಯ-ಪಿಣ್ಡತ್ರಯೀ ಮೀಮಾಂಸೆ (೨೬)

೨೬. ನಿವಾಪ-ಪಿತೃ-ತನ್ಯ-ಪಿಣ್ಡತ್ರಯೀ ಮೀಮಾಂಸೆ

ಬೀಜೀಪುರುಷನಲ್ಲಿ ತನ್ನ ಸ್ವಾರ್ಜಿತ ಸಮ್ಪತ್ತಿಯು ೨೮ ಕಲಾತ್ಮಕವಾದದ್ದೆಂದು ಹಿಂದಿನ ಲೇಖನಗಳಲ್ಲಿ ವಿವರಿಸಲಾಗಿದೆ. ಈಗ ಇದರ ಸಮ್ಬನ್ಧದಲ್ಲಿ ವಿಶೇಷವಾದ ಹೆಚ್ಚಿನ ವಿಷಯವನ್ನು ತಿಳಿಯೋಣ. ಈ ಬೀಜಪಿಣ್ಡದ ನಿವಾಪಪಿಣ್ಡ, ಪಿತೃನಿವಾಪಪಿಣ್ಡ, ತನ್ಯಪಿಣ್ಡ” ಭೇದದಿಂದ ೩ ಅವಸ್ಥೆಗಳಾಗುತ್ತವೆ. ಈ ಮೂರ್ಮೂರರ ಕ್ರಮವು ಬೀಜಿಯಿಂದ ಆರಂಭವಾಗಿ ಅತಿವೃದ್ಧಪ್ರಪೌತ್ರ ಎಂಬ ಹೆಸರಿನ ಆರನೇ ಪೀಳಿಗೆಯ ಪರ್ಯ್ಯನ್ತ ಸಮಾನರೂಪದಿಂದ ಭುಕ್ತವಾಗುತ್ತದೆ. ಸರ್ವಪ್ರಥಮ ಬೀಜಿಯ ವಿಚಾರ ಮಾಡೋಣ. ನಕ್ಷತ್ರಾವಚ್ಛಿನ್ನ ಚಾನ್ದ್ರರಸದಿಂದ ಆಗತ, ಹಾಗೂ ಶುಕ್ರದಲ್ಲಿ ಪ್ರತಿಷ್ಠಿತ ೨೮ ಕಲಾತ್ಮಕ ಸ್ವಾರ್ಜಿತ ಸಹಃಪಿಣ್ಡವು ‘ನಿವಾಪ-ಪಿಣ್ಡ’ ಆಗಿದ್ದು, ಮೂಲಧನವಾಗಿದೆ. ಇದರಲ್ಲಿ ಪುತ್ರಜನನಕ್ಕೆ ಉಪಯುಕ್ತವಾಗುವ ೨೧ ಮಾತ್ರೆಗಳಿವೆ, ಇದನ್ನೇ ಸೂನು ಎಂದು ಹೇಳಲಾಗಿದೆ. ಸೂನು ಹಾಗೂ ತನಯ ಇವೆರಡೂ ಭಿನ್ನ ಭಿನ್ನ ವಸ್ತುತತ್ತ್ವಗಳಾಗಿವೆ, ಆದ್ದರಿಂದ ಎರಡನ್ನೂ ಪರ್ಯ್ಯಾಯವೆಂದು ನಂಬುವುದು ಭ್ರಾನ್ತಿ. ಸೂನುವು ಮುಂದಿನ ಸನ್ತತಿಯ ಅಪೇಕ್ಷೆಯಿಂದ ನಿವಾಪಪಿಣ್ಡವಾಗುತ್ತದೆ. ಇದು ಸರ್ವಾತ್ಮನವಾಗಿ ವಿತತವಾಗುವುದಿಲ್ಲ, ಆದರೆ ಇದರ ಏಕಾಂಶವೇ (೧೫ ಭಾಗವೇ) ತನಯ ರೂಪದಲ್ಲಿ ಪರಿಣತವಾಗುತ್ತದೆ. ಅಸ್ತು, ಎಂದು ಹೇಳಬೇಕಾದ್ದು ಏನೆಂದರೆ, ೨೮ ಕಲಾ ಪಿತೃಸಹಃಪಿಣ್ಡವು ‘ನಿವಾಪಪಿಣ್ಡ’ವಾಗಿದೆ, ೨೧ ಕಲಾ ಪಿತೃಸಹಃಪಿಣ್ಡವು ‘ತನ್ಯಪಿಣ್ಡ’ವಾಗಿದೆ ಹಾಗೂ ಕಲಾ ಪಿತೃಸಹಃಪಿಣ್ಡವು ‘ಪಿತೃನಿವಾಪಪಿಣ್ಡ’ ವಾಗಿದೆ. ಮೂಲ ಧನಲಕ್ಷಣ ಅಷ್ಟಾವಿಂಶತಿ ಲಕ್ಷಣ ನಿವಾಪಪಿಣ್ಡದಲ್ಲಿ ಬೀಜಿಯಲ್ಲಿಯೇ ಉಳಿಯುವ ಸಪ್ತಕಲ ಪಿಣ್ಡವು ‘ಪಿತೃನಿವಾಪ’ ಹಾಗೂ ಪುತ್ರನಲ್ಲಿ ಆಹುತವಾಗುವ ಏಕವಿಂಶತಿಕಲ ಪಿಣ್ಡವು ‘ತನ್ಯಪಿಣ್ಡ’ ಎಂದು ಹೆಸರು ಪಡೆದಿದೆ. ಈ ರೀತಿ ’೨೮-೭-೨೧’ ಕ್ರಮದಿಂದ ಸ್ವಾರ್ಜಿತ ಸಹಃಪಿಣ್ಡದ ೩ ಅವಸ್ಥೆಗಳಾಗುತ್ತವೆ. ಈ ಮೂರು ವಿಭಾಗವೇ ಪುತ್ರನಲ್ಲಿ ತಿಳಿಯಬೇಕು.

ಅಂದರೆ ಪುತ್ರನಲ್ಲಿ ’೨೧-೬-೧೫’ ಎಂಬ ಕ್ರಮವಿರುತ್ತದೆ.ಪೌತ್ರನಲ್ಲಿ ’೧೫-೫-೧೦’ ಎಂಬ ಕ್ರಮವಿರುತ್ತದೆ.ಪ್ರಪೌತ್ರನಲ್ಲಿ ’೧೦-೪-೬’ ಎಂಬ ಕ್ರಮವಿರುತ್ತದೆ.ವೃದ್ಧಪ್ರಪೌತ್ರನಲ್ಲಿ ‘೬-೩-೩’ ಎಂಬ ಕ್ರಮವಿರುತ್ತದೆ.ಅತಿವೃದ್ಧಪ್ರಪೌತ್ರನಲ್ಲಿ ‘೩-೨-೧’ ಎಂಬ ಕ್ರಮವಿರುತ್ತದೆ.ವೃದ್ಧಾತಿವೃದ್ಧಪ್ರಪೌತ್ರನಲ್ಲಿ ಕೇವಲ ೧ ಸಹದ ನಿವಾಪಪಿಣ್ಡ ಇರುತ್ತದೆ.

ವಿತಾನ ಮಾತ್ರಾದ ಅಭಾವದಿಂದ ಇಲ್ಲಿ ಪಿತೃನಿವಾಪಪಿಣ್ಡ ಹಾಗೂ ತನ್ಯಪಿಣ್ಡ  ಇವೆರಡರ ಅಭಾವವಿದೆ. ನಿಮ್ನಲಿಖಿತ ಪರಿಲೇಖದಿಂದ ಈ ಕ್ರಮವು ಚೆನ್ನಾಗಿ ಸ್ಪಷ್ಟವಾಗುತ್ತದೆ –

ನಿವಾಪ-ಪಿತೃನಿವಾಪ-ತನ್ಯ-ಪಿಣ್ಡಪರಿಲೇಖಃ


ಶುಕ್ರದಲ್ಲಿ ಪ್ರತಿಷ್ಠಿತ ಮಹಾನಾತ್ಮದಲ್ಲಿ ಪೂರ್ವಪ್ರದರ್ಶಿತ ೫೬ ಕಲೆಗಳ ಆವಾಪಪಿಣ್ಡ ಹಾಗೂ ೨೮ ಕಲೆಗಳ ಬೀಜಪಿಣ್ಡದ ಸಮನ್ವಯದಿಂದ ೮೪ ಪಿತೃಸಹಗಳ ಸತ್ತೆಯು ಸಿದ್ಧವಾಗುತ್ತದೆ. ಈ ೮೪ ಕಲೆಗಳಲ್ಲಿ ೨೮ ಕಲೆಗಳು ಬೀಜೀ ಮೂಲ ಪುರುಷನ ಸ್ವೋಪಾರ್ಜಿತ ಧನವಾಗಿದೆ, ಹಾಗೂ ೫೬ ಕಲೆಗಳು ಪಿತಾ-ಪಿತಾಮಹಾದಿಗಳಿಂದ ಪ್ರಾಪ್ತ ಆಗನ್ತುಕ ಋಣವಾಗಿದೆ. ಋಣಾತ್ಮಕ ೫೬ ಕಲಾತ್ಮಕ ಈ ಆವಾಪಪಿಣ್ಡವು ಧನಾತ್ಮಕ ೨೮ ಕಲಾತ್ಮಕ ಬೀಜಪಿಣ್ಡದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಬೀಜಪಿಣ್ಡದಲ್ಲಿ ಪ್ರತಿಷ್ಠಿತ ಇದೇ ಪಿತೃಧನವು (ಪಿತೃಋಣವು) ಬೀಜಿಯ ಜೀವನದ ಸತ್ತೆಯ ಕಾರಣವಾಗುತ್ತದೆ. ಯಾವ ರೀತಿ ೨೮ ಕಲಾತ್ಮಕ ಸ್ವೋಪಾರ್ಜಿತ ಆತ್ಮನ ಪಿತೃಸಹಃಪಿಣ್ಡವು ಬೀಜಿಯ ಪುತ್ರ-ಪೌತ್ರ-ಪ್ರಪೌತ್ರಾದಿ ಸನ್ತಾನಭಾವಗಳಲ್ಲಿ ಏಳನೇ ಪೀಳಿಗೆಯ ಪರ್ಯ್ಯನ್ತ (ವೃದ್ಧಾತಿವೃದ್ಧಪ್ರಪೌತ್ರಪರ್ಯ್ಯನ್ತ) ೭-೨೧, ೬-೧೫, ೫-೧೫, ೪-೫, ೩-೩, ೨-೧, ಈ ಕ್ರಮದಿಂದ ‘ಪಿತರ-ಸೂನು’ ಭೇದದಿಂದ ಎರಡೆರಡು ಭಾಗಗಳಲ್ಲಿ ವಿಭಕ್ತವಾಗಿರುತ್ತದೆಯೋ, ಹಾಗೆಯೇ ಉಪರ್ಯ್ಯುಕ್ತ ೫೬ ಕಲಾತ್ಮಕ ಆಗನ್ತುಕ ಪಿತೃಋಣವೂ (ಪಿತ್ಧನರೂಪ ಪಿತೃಸಹಃಪಿಣ್ಡವೂ) ಆತ್ಮಧೇಯ, ತನ್ಯ, ರೂಪದಿಂದ ಎರಡು ಭಾಗಗಳಲ್ಲಿ ವಿಭಕ್ತವಾಗುತ್ತದೆ. ಪಿತೃಋಣದ ಯಾವ ಅಂಶವು ಬೀಜಿಯ ಆತ್ಮದಲ್ಲಿ (೨೮ ಕಲೆಗಳ ಮಹಾನಾತ್ಮದಲ್ಲಿ) ಜೀವನಸತ್ತೆಯ ಅರ್ಥ ಪ್ರತಿಷ್ಠಿತವಾಗಿರುತ್ತದೆಯೋ, ಅದಂತೂ ‘ಆತ್ಮಧೇಯ’ ಪಿತೃಸಹಃ ಎಂದು ಕರೆಯಲ್ಪಡುತ್ತದೆ. ಹಾಗೂ ಯಾವ ಪಿತೃಋಣವು ತನ್ನ ಕಲೆಗಳೊಂದಿಗೆ ಪುತ್ರ-ಪೌತ್ರಾದಿ ಸ್ವರೂಪ ನಿರ್ಮ್ಮಾಣದಲ್ಲಿ ಉಪಯುಕ್ತವಾಗುತ್ತದೆಯೋ, ಅದು ‘ತನ್ಯ’ ಎಂದು ಕರೆಯಲ್ಪಡುತ್ತದೆ. ಏಳನೇ ಪೀಳಿಗೆಯ (ವೃದ್ದಾತಿವೃದ್ಧಪ್ರಪಿತಾಮಹನ) ೧ ಸಂಖ್ಯೆಯ ಪಿತೃಸಹವು ಕೇವಲ ಆತ್ಮಧೇಯರೂಪದಿಂದಲೇ ಪ್ರತಿಷ್ಠಿತವಾಗಿರುತ್ತದೆ. ವಿತಾನಮಾತ್ರಾದ ಅಭಾವದಿಂದ ಇದು ಮುಂದಕ್ಕೆ ವಿತಾನವಾಗುವುದಿಲ್ಲ, ಹಾಗಾಗಿ ಇದು ತನ್ಯರೂಪದಲ್ಲಿ ಪರಿಣತವಾಗದೆ ಕೇವಲ ಆತ್ಮಧೇಯ ರೂಪದಲ್ಲಿ ಬೀಜಿಯಲ್ಲಿಯೇ ಸ್ಥಿತವಾಗಿರುತ್ತದೆ.

ಪಿತೃಋಣಾತ್ಮಕ ಪಿತೃಸಹಃ ಕಲೆಗಳ ಯಾವ ಭಾಗವು ಬೀಜಿಯಲ್ಲಿ ಪ್ರತಿಷ್ಠಿತವಾಗಿದ್ದೂ ಆತ್ಮಧೇಯವಾಗುತ್ತದೆಯೋ, ಅದು ಬೀಜಿಯ ಮಹಾನಾತ್ಮದೊಂದಿಗೆ ಅನ್ತರ್ಯ್ಯಾಮ ಸಮ್ಬನ್ಧವನ್ನು ಹೊಂದಿರುತ್ತದೆ. ಇದೇ ಅನ್ತರ್ಯ್ಯಾಮ ಸಮ್ಬನ್ಧದಿಂದ ಈ ಬೀಜಿಯು (ಮಹದಾತ್ಮವತ್) ಉಕ್ಥವಾಗುತ್ತದೆ. ಜೀವನಸತ್ತೋಪಾಯಿಕ ಚಾನ್ದ್ರರಸವನ್ನು ಗ್ರಹಿಸುವ ಕೆಲಸವು ಉಕ್ಥ ಭಾವಾಪನ್ನ ಆತ್ಮಧೇಯವಾದ ಇದೇ ಪಿತೃಸಹದ್ದಾಗಿದೆ. ಏಕೆಂದರೆ ಈ ಆತ್ಮಧೇಯವು ಆಗತ ಪಿತೃಸಹಃ ಪಿತೃಧನವಾಗಿದೆ, ಹಾಗಾಗಿ ಇದರ ಪ್ರತ್ಯರ್ಪಣವು ಆವಶ್ಯಕವಾಗುತ್ತದೆ. ಒಂದುವೇಳೆ, ಈ ಆತ್ಮಧೇಯ ಕಲೆಗಳ ಸಂಕಲನ ಮಾಡಿದರೆ, ೨೧ ಸಂಖ್ಯೆಗಳಾಗುತ್ತವೆ. ಈ ೨೧ರ ಋಣಭಾರವು ಸ್ವಯಂ ಬೀಜಿಯ ಮೇಲೆ ಅವಲಮ್ಬಿತವಾಗಿರುತ್ತದೆ. 
ವೃದ್ಧಾತಿವೃದ್ಧಪ್ರಪಿತಾಮಹನ ೧ ಕಲೆ,
ಅತಿವೃದ್ಧಪ್ರಪಿತಾಮಹನ ೨ ಕಲೆಗಳು,
ವೃದ್ಧಪ್ರಪಿತಾಮಹನ ೩ ಕಲೆಗಳು,
ಪ್ರಪಿತಾಮಹನ ೪ ಕಲೆಗಳು,
ಪಿತಾಮಹನ ೫ ಕಲೆಗಳು,
ಪಿತನ ೬ ಕಲೆಗಳು, 

ಈ ರೀತಿ ‘೧-೨-೩-೪-೫-೬’ ಕ್ರಮದಿಂದ ೨೧ ಕಲೆಗಳು ಇದರ ಆತ್ಮಧನವಾಗುತ್ತದೆ. ಪಿತೃಧನದ ಒಟ್ಟು ಮೊತ್ತ ೫೬ ಎಂದು ಹೇಳುತ್ತಾರೆ. ೫೬ರಲ್ಲಿ ೨೧ ಅಂತೂ ಈ ಕ್ರಮದಿಂದ ಆತ್ಮಧೇಯವಾಗಿವೆ. ಶೇಷ ೩೫ ಕಲೆಗಳು ತನ್ಯರೂಪದಲ್ಲಿ ಪರಿಣತವಾಗುತ್ತವೆ. ಇದನ್ನು ಅನುಪದದಲ್ಲಿ ಸ್ಪಷ್ಟಪಡಿಸಲಾಗುತ್ತದೆ. ಸ್ವೋಪಾರ್ಜಿತ ೨೮ ಕಲೆಗಳಿಂದ ೨೧ ಕಲೆಗಳು ತನ್ಯರೂಪದಲ್ಲಿ ಪುತ್ರ-ಪೌತ್ರಾದಿಗಳಿಗೆ ಋಣ ರೂಪದಲ್ಲಿ ಕೊಡಲ್ಪಡುತ್ತದೆ, ಶೇಷ ೭ ಕಲೆಗಳು ಈ ಬೀಜಿಯಲ್ಲಿಯೇ ಆತ್ಮಧೇಯ ರೂಪದಲ್ಲಿ ಪ್ರತಿಷ್ಠಿತವಾಗಿರುತ್ತವೆ. ಈ ರೀತಿ ಪಿತೃಋಣದ ೫೬ರಲ್ಲಿ ೨೧ ಕಲೆಗಳ ಹಾಗೂ ಸ್ವಾತ್ಮಧನದ ೨೮ರಲ್ಲಿ ೭ ಕಲೆಗಳ ಸಮನ್ವಯದಿಂದ ೨೮ ಕಲೆಗಳಾಗುತ್ತವೆ. ಈ ೨೮ ಕಲೆಗಳು ಆತ್ಮಧೇಯ ಭಾಗದಲ್ಲಿ ಪ್ರತ್ಯೇಕ ಪುರುಷನಲ್ಲಿ ನಿತ್ಯ ಪ್ರತಿಷ್ಠಿತವಾಗಿರುತ್ತವೆ. ಇದೇ ಆಧಾರದಲ್ಲಿ ಪೂರ್ವದಲ್ಲಿ ಮಾಸಿಕ ಪಿಣ್ಡದ ಸ್ವರೂಪವನ್ನು ಹೇಳುತ್ತಾ ಪುರುಷನ ಮಹಾನಾತ್ಮವು ಸದಾ ೨೮ ಕಲಾ ಪಿತೃಸಹಃಪಿಣ್ಡ ಯುಕ್ತವಾಗಿರುತ್ತದೆ ಎಂದು ಹೇಳಲಾಗಿದೆ. ಈ ಸಮ್ಬನ್ಧದಲ್ಲಿ ಮಹಾನಾತ್ಮದಲ್ಲಿ ಪ್ರತಿಷ್ಠಿತ ೨೮ ಕಲಾ ಸಹಃಪಿಣ್ಡದಿಂದ ೨೧ ಕಲೆಗಳಂತೂ ಋಣಾತ್ಮಕ ಧನವಾಗಿವೆ, ಹಾಗೂ ೭ ಕಲೆಗಳು ಸ್ವೋಪಾರ್ಜಿತ ಧನವಾಗಿವೆ ಎಂದು ನೆನಪಿಟ್ಟುಕೊಳ್ಳುವುದು ಉತ್ತಮ. ಇದು ಮುಂದಿನ ಪರಿಲೇಖದಿಂದ ಸ್ಪಷ್ಟವಾಗುತ್ತದೆ –

ಪಿತೃಋಣ-ಆತ್ಮಧನ ಪರಿಲೇಖಃ

ಇಲ್ಲಿಯವರೆಗೆ ಆತ್ಮಧೇಯ ಕಲೆಗಳ ವ್ಯವಸ್ಥೆಯನ್ನು ನೋಡಿದೆವು. ಇನ್ನು ತನ್ಯ-ಕಲೆಗಳ ಮೀಮಾಂಸೆ ಮಾಡೋಣ. ಬೀಜಿಗೆ ತನ್ನ ಧನವು ೨೮ ಕಲಾತ್ಮಕವಾಗಿರುತ್ತದೆ. ಆದರೆ ತನ್ನ ಕ್ಷೇತ್ರದಲ್ಲಿ (ಮಹಾನಾತ್ಮದಲ್ಲಿ) ಆತ್ಮಧೇಯರೂಪದಿಂದ ೭ ಕಲೆಗಳೇ ಶೇಷವಾಗಿರುತ್ತವೆ. ಶೇಷ ೨೧ ಕಲೆಗಳು ತನಯೋತ್ಪತ್ತಿಯಲ್ಲಿ ಋಣರೂಪದಿಂದ ಭುಕ್ತವಾಗುತ್ತವೆ. ಆದ್ದರಿಂದ ಈ ೨೧ ಕಲಾ ಸಮಷ್ಟಿಯನ್ನು ‘ತನ್ಯ’ ಎಂದು ಕರೆಯಲಾಗಿದೆ. ಪರಮ್ಪರಾಗತ ೫೬ ಮಾತ್ರಾಗಳಿಂದ ೨೧ರ ಭೋಗವು ಸ್ವಯಂ ಇದೇ ಬೀಜಿಯಲ್ಲಿ ಆಗುತ್ತದೆ, ಶೇಷ ೩೫ ಕಲೆಗಳು ಬೀಜಿಯ ಪುತ್ರಾದಿ-ಪ್ರಜನನದಲ್ಲಿ ಭುಕ್ತವಾಗುತ್ತವೆ. ಯಾವ ಋಣಕಲೆಗಳು ಪ್ರಜನನಕ್ಕೆ ಋಣರೂಪದಿಂದ ಭುಕ್ತವಾಗುವವೋ, ಅವುಗಳನ್ನು ತನ್ಯ ಎಂದು ಕರೆಯಲಾಗುತ್ತದೆ, ಹಾಗೂ ಅವುಗಳ ವ್ಯವಸ್ಥೆಯ ಸಮನ್ವಯವನ್ನು ಈಗ ಮಾಡಲಾಗುತ್ತದೆ.

ಬೀಜಿಗೆ ತನ್ನ ಪಿತನಿಂದ ಋಣ ರೂಪದಲ್ಲಿ ೨೧ ಮಾತ್ರಾಗಳು ಸಿಕ್ಕಿರುತ್ತದೆ. ಇವುಗಳಲ್ಲಿ ೬ ಮಾತ್ರಾಗಳು ಇವನಲ್ಲಿ ಆತ್ಮಧೇಯ ರೂಪದಲ್ಲಿ ಪ್ರತಿಷ್ಠಿತವಾಗಿರುತ್ತವೆ, ಶೇಷ ೧೫ ಮಾತ್ರಾಗಳು ಬೀಜಿಯು ತನ್ನ ಪುತ್ರನಿಗೆ ಋಣರೂಪದಲ್ಲಿ ಪ್ರದಾನ ಮಾಡುತ್ತಾನೆ. ಋಣದ ಋಣರೂಪ ಇದೇ ಪಞ್ಚದಶಕಲ ಭಾಗವನ್ನು ತನ್ಯ ಎಂದು ಕರೆಯಲಾಗುತ್ತದೆ.

* ಪಿತಾಮಹನಿಂದ ಬೀಜಿಗೆ ೧೫ ಮಾತ್ರಾಗಳು ಸಿಕ್ಕಿರುತ್ತದೆ. ಇವುಗಳಿಂದ ೫ ಮಾತ್ರಾಗಳು ಆತ್ಮಧೇಯರೂಪದಿಂದ ಇವನಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ, ಶೇಷ ೧೦ ಮಾತ್ರಾಗಳು ಬೀಜಿಯು ತನ್ನ ಪುತ್ರನಿಗೆ ಕೊಟ್ಟುಬಿಡುತ್ತಾನೆ, ಇದೇ ತನ್ಯ ಭಾಗವಾಗಿದೆ. 

* ಪ್ರಪಿತಾಮಹನಿಂದ ಬೀಜಿಗೆ ೧೦ ಮಾತ್ರಾಗಳು ಸಿಕ್ಕಿರುತ್ತವೆ. ಇವುಗಳಲ್ಲಿ ೪ ಮಾತ್ರಾಗಳು ಆತ್ಮಧೇಯರೂಪದಿಂದ ಇವನಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ, ಶೇಷ ೬ ಮಾತ್ರಾಗಳು ಬೀಜಿಯು ತನ್ನ ಪುತ್ರನಿಗೆ ಕೊಟ್ಟುಬಿಡುತ್ತಾನೆ. ಇದೇ ತನ್ಯ ಭಾಗವಾಗಿದೆ.

* ವೃದ್ಧಪ್ರಪಿತಾಮಹನಿಂದ ಬೀಜಿಗೆ ೬ ಮಾತ್ರಾಗಳು ಸಿಕ್ಕಿರುತ್ತವೆ. ಇವುಗಳಲ್ಲಿ ೩ ಮಾತ್ರಾಗಳು ಆತ್ಮಧೇಯರೂಪದಿಂದ ಇವನಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ, ಶೇಷ ೩ ಮಾತ್ರಾಗಳು ಬೀಜಿಯು ತನ್ನ ಪುತ್ರನಿಗೆ ಕೊಟ್ಟುಬಿಡುತ್ತಾನೆ. ಇದೇ ತನ್ಯ ಭಾಗವಾಗಿದೆ.

* ಅತಿವೃದ್ಧಪ್ರಪಿತಾಮಹನಿಂದ ಬೀಜಿಗೆ ೩ ಮಾತ್ರಾಗಳು ಸಿಕ್ಕಿರುತ್ತವೆ. ಇವುಗಳಲ್ಲಿ ೨ ಮಾತ್ರಾಗಳು ಆತ್ಮಧೇಯರೂಪದಿಂದ ಇವನಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ, ಶೇಷ ೧ ಮಾತ್ರಾವು ಬೀಜಿಯು ತನ್ನ ಪುತ್ರನಿಗೆ ಕೊಟ್ಟುಬಿಡುತ್ತಾನೆ.
* ವೃದ್ಧಾತಿವೃದ್ಧಪ್ರಪಿತಾಮಹನಿಂದ ಬೀಜಿಗೆ ೧ ಮಾತ್ರಾವು ಸಿಕ್ಕಿರುತ್ತವೆ. ಇದರ ಸಮರ್ಪಣೆಯು ಅಸಮ್ಭವ. ಆದ್ದರಿಂದ ಇದು ತನ್ಯವಾಗದೆ ಕೇವಲ ಬೀಜಿಯಲ್ಲಿಯೇ ಪ್ರತಿಷ್ಠಿತವಾಗಿರುತ್ತಾ ಆತ್ಮಧೇಯವೇ ಆಗಿ ಉಳಿದಿರುತ್ತದೆ.

ಈ ರೀತಿ “೨೧-೧೫-೧೦-೬-೩-೧” ಆಗಿ ಪ್ರಾಪ್ತವಾಗುವ ಈ ೫೬ ಕಲೆಗಳಲ್ಲಿ ಕ್ರಮವಾಗಿ ೬-೫-೪-೩-೨-೧ ಈ ೨೧ ಕಲೆಗಳು ಆತ್ಮಧೇಯ ರೂಪದಲ್ಲಿ ಬೀಜಿಯಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ. ಹಾಗೂ ’೧೫-೧೦-೬-೩-೧’ ಎಂಬ ೩೫ ಕಲೆಗಳು ಬೀಜಿಯ ಪುತ್ರನಲ್ಲಿ ಸನ್ತತವಾಗುತ್ತಾ ತನ್ಯ ರೂಪದಲ್ಲಿ ಪರಿಣತವಾಗುತ್ತವೆ.

* ಋಣರೂಪದಿಂದ ಆಗತ ೫೬ರಲ್ಲಿ ೨೧ ಕಲೆಗಳು ಆತ್ಮಧೇಯವಾಗಿವೆ, ೩೫ ಕಲೆಗಳು ತನ್ಯವಾಗಿವೆ; ಇದೇ ನಿಷ್ಕರ್ಷೆಯು.

* ಹಾಗೂ ಸ್ವೋಪಾರ್ಜಿತ ೨೮ರಲ್ಲಿ ೭ ಕಲೆಗಳು ಆತ್ಮಧೇಯವಾಗಿವೆ, ೨೧ ಕಲೆಗಳು ತನ್ಯವಾಗಿವೆ; ಇದೇ ತಾತ್ಪರ್ಯ್ಯವು.

* ಋಣಾತ್ಮಕ ೨೧ ಆತ್ಮಧೇಯ, ಸ್ವೋಪಾರ್ಜಿತ ೭ ಆತ್ಮಧೇಯ, ಎರಡರ ಸಂಕಲನದಿಂದ ೨೮ ಆತ್ಮಧೇಯ ಪಿಣ್ಡಗಳಾಗುತ್ತವೆ, ಇವು ಸದಾ ಮಹಾನಾತ್ಮದಲ್ಲಿ ಪ್ರತಿಷ್ಠಿತವಾಗಿರುವ ಧನವಾಗಿವೆ.

* ಋಣಾತ್ಮಕ ೩೫ ತನ್ಯ, ಸ್ವೋಪಾರ್ಜಿತ ೨೧ ತನ್ಯ, ಇವೆರಡರ ಸಂಕಲನದಿಂದ ೫೬ ಕಲಾ ತನ್ಯಪಿಣ್ಡವಾಗುತ್ತದೆ. ಇದು ಶುಕ್ರದಲ್ಲಿ ಪ್ರತಿಷ್ಠಿತವಾಗಿರುವ ಋಣವಾಗಿದೆ.

ಇವೆಲ್ಲವೂ ಮುಂದಿನ ಅನುಪದಲ್ಲಿ ಹೇಳಲ್ಪಡುವ ಋಣ-ಧನ ಮೀಮಾಂಸೆಯಿಂದ ಸ್ಪಷ್ಟವಾಗಲಿದೆ.

ಆಗತ ಷಡ್ ಋಣ ಪರಿಲೇಖಃ


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Sunday, 9 December 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪಿತೃಸೋಮಯಜ್ಞದಿಂದ ಋಣಪ್ರವೃತ್ತಿ (೨೩)

೨೩. ಪಿತೃಸೋಮಯಜ್ಞದಿಂದ ಋಣಪ್ರವೃತ್ತಿ

“ಸ್ವ ಜನ್ಮದಾತಾ ಪಿತನಿಗೆ, ಚನ್ದ್ರಲೋಕಸ್ಥ ಪಿತಾಮಹಾದಿಗಳಿಗೆ, ಹಾಗೂ ಸ್ವಯಂ ತನಗೆ ತಾನೂ ಅಪತ್ಯಭಾವದಲ್ಲಿ ಸುರಕ್ಷಿತವಾಗಿರಿಸುವ ಪಿತೃಸಹವು ಸನ್ತಾನಧಾರೆಯಲ್ಲಿ ತನ್ತುರೂಪದಿಂದ ಪ್ರವಾಹಿತವಾಗಿರುತ್ತದೆ” ಎಂದು ಹೇಳಲ್ಪಟ್ಟಿದೆ.

ಈಗ ಈ ಸಮ್ಬನ್ಧದಲ್ಲಿ ಮೂಲಪುರುಷನಿಂದ (ಬೀಜೀ ಪಿತನಿಂದ) ಆರಮ್ಭವಾಗಿ ಆತನ ಏಳನೇ ಪೀಳಿಗೆಯ ಪರ್ಯ್ಯನ್ತ ವಿತತವಾಗಿರುವ ಸನ್ತಾನ ಪರಮ್ಪರೆಯಲ್ಲಿ ಮೂಲಪುರುಷನ ಶುಕ್ರದಲ್ಲಿ ಪ್ರತಿಷ್ಠಿತ ೨೮ ಕಲೆಗಳು ಪಿತೃಸಹೋರೂಪೀ ಪಿತೃಧನವು ಯಾವ ಕ್ರಮದಿಂದ ವಿಭಕ್ತವಾಗಿ ಋಣ ರೂಪದಲ್ಲಿ ಆಹುತವಾಗುತ್ತದೆ? ಚಾನ್ದ್ರರಸದಿಂದ ಅನ್ನದ ಮುಖೇನ ಉತ್ಪನ್ನವಾಗುವ ಶುಕ್ರದಲ್ಲಿ ನಕ್ಷತ್ರಸಮ್ಬನ್ಧದಿಂದ ಚಾನ್ದ್ರನಾಡಿಯ ಮುಖೇನ ಸಾಕ್ಷಾತ್ ರೂಪದಿಂದ ಪ್ರತಿಷ್ಠಿತ ೨೮ ಕಲೆಗಳು ಪಿತೃಸಹಃ-ಪಿಣ್ಡವೇ ಮೂಲಧನವಾಗಿದೆ, ಇದು ಪೂರ್ವನಿರೂಪಣೆಯಿಂದ ಗತಾರ್ಥವಾಗಿದೆ. ಇದೇ ಪಿತೃಪಿಣ್ಡವು ಸ್ತ್ರೀಯ ಯೋಷಾಪ್ರಾಣಪ್ರಧಾನ ಶೋಣಿತಾಗ್ನಿಯಲ್ಲಿ ಆಹುತವಾಗುವ ಶುಕ್ರದ ಜೊತೆಜೊತೆಗೆ ಆಹುತವಾಗುತ್ತದೆ. ಇದು ಸೋಮಮಯ ಶುಕ್ರ, ಅಂದರೆ ಶುಕ್ರಮಯ ಸೋಮವಾಗಿದ್ದು ಪಿತರಪ್ರಾಣಪ್ರಧಾನವಾಗಿದೆ, ಹಾಗಾಗಿ ಈ ಅಗ್ನಿಷೋಮೀಯ ಸೋಮಯಜ್ಞವನ್ನು ಸೌಮ್ಯಪಿತೃಪ್ರಾಣದ ಪ್ರಧಾನತೆಯಿಂದ ‘ಪಿತೃಸೋಮಯಜ್ಞ’ ಎನ್ನಲಾಗಿದೆ. ಇದೇ ಸೋಮಷ್ಟೋಮ – (ಪಿತೃಸೋಮ) – ಯಜ್ಞವಾಗಿದ್ದು ಪ್ರಜಾಸೃಷ್ಟಿಯ ಮೂಲಪ್ರತಿಕವೆಂದು ನಂಬಲಾಗಿದೆ.

ಶುಕ್ರದ ಆಹುತಿ ಆಗುತ್ತದೆ, ಶುಕ್ರದ ಜೊತೆಜೊತೆಗೆ ತದ್ಗತ ಪಿತೃಸಹವೂ ಆಹುತವಾಗುತ್ತದೆ. ಈ ಸಮ್ಬನ್ಧದಲ್ಲಿ ಪ್ರಶ್ನೆ ಏನೆಂದರೆ, ದಾಮ್ಪತ್ಯಕಾಲದಲ್ಲಿ ಸಮ್ಪೂರ್ಣ ಶರೀರದ ಶುಕ್ರವು ಆಹುತವಾಗುತ್ತದೆಯೇ? ಹಾಗೂ ತದ್ಗತ ಪಿತೃಸಹದ ೨೮ ಕಲೆಗಳೂ ಆಹುತವಾಗುತ್ತವೆಯೇ? ಈ ಪ್ರಶ್ನೆಗಳಿಗೆ ಉತ್ತರವು ‘ಸರ್ವಥಾ ಇಲ್ಲ’ ಎಂದು. ಜೀವನಧಾರಣೋಪಾಯಿಕ ಸಮ್ಪೂರ್ಣ ಶುಕ್ರಮಾತ್ರಾ, ಹಾಗೂ ತದ್ಗತ ಪಿತ್ರ್ಯಸಹದ ೨೮ ಕಲೆಗಳು ಒಂದೇ ಕಾಲದಲ್ಲಿ ಏನಾದರೂ ಆಹುತವಾದರೆ, ಆ ಕ್ಷಣವೇ ಜೀವನಲೀಲೆಯು ಸಮಾಪ್ತವಾಗುತ್ತದೆ. ಇಂತಹಾ ದಶೆಯಲ್ಲಿ, ಒಂದು ಸಮಯದಲ್ಲಿ ಸಮ್ಪೂರ್ಣ ಶುಕ್ರವು, ಹಾಗೂ ತದವಿನಾಭೂತ ಪಿತೃಸಹಃಪಿಣ್ಡವು ಆಹುತವಾಗುವುದಿಲ್ಲ, ಆದರೆ ಅಂಶ ಮಾತ್ರವೇ, ಈ ಸಹೋಮಾತ್ರಾಗಳ ಆಹುತಿಯಾಗುತ್ತದೆ ಎಂದು ಒಪ್ಪಬೇಕಾಗುತ್ತದೆ. ಇದು ಅಂಶಾಹುತಿ ‘ಪ್ರವರ್ಗ್ಯಾಹುತಿ’-‘ಉಚ್ಛಿಷ್ಟಯಜ್ಞ’ ಇತ್ಯಾದಿ ಹೆಸರುಗಳಿಂದ ವ್ಯವಹೃತವಾಗಿದೆ.

ಪ್ರಾಕೃತಿಕ ಉಚ್ಛಿಷ್ಟಯಜ್ಞವೂ ಇದೇ ಅಂಶದಾನದ ಸಮರ್ಥನೆ ಮಾಡುತ್ತಿದೆ. ಸೌರಪ್ರಾಣವು ವನಸ್ಪತಿಗಳಲ್ಲಿ ಆಹುತವಾಗುತ್ತದೆ, ಆದರೆ ಅಂಶರೂಪದಿಂದ, ಪ್ರವರ್ಗ್ಯರೂಪದಿಂದ ಆಹುತವಾಗುತ್ತದೆ. ಸಮ್ಪೂರ್ಣ ಮಾತ್ರೋಚ್ಛೇದವಾಗಿದ್ದರೆ ಇಂದು ಬ್ರಹ್ಮಾಣ್ಡದಲ್ಲಿ ಸೂರ್ಯ್ಯಸತ್ತೆಯೇ ಉಪಲಬ್ಧವಾಗುತ್ತಿರಲಿಲ್ಲ. ಹಾಗೂ ನಕ್ಷತ್ರ, ಗ್ರಹ, ಚನ್ದ್ರ, ವಾಯು, ಇನ್ದ್ರ, ವರುಣ, ಮರುತ್ತ್ವಾನ್, ವಸು, ರುದ್ರ, ಪೃಥಿವೀ, ಇತ್ಯಾದಿ ಇತ್ಯಾದಿ ಎಲ್ಲಾ ಪ್ರಾಕೃತಿಕ ಪ್ರಜಾಪತಿ (ಸ್ರಷ್ಟಾ) ಪ್ರಜಾತಿ – (ಸರ್ಗ) – ಕಾಮನೆಯಿಂದ ಸ್ವಾಂಶದಾನದಿಂದಲೇ ಅವರವರ ಸರ್ಗದ ಪ್ರಭವವಾಗುತ್ತಿವೆ. ಈ ಆಂಶಿಕ ನಿಯಮಿತ ಮಾತ್ರಾ ಪ್ರದಾನಕ್ಕಾಗಿಯೇ ಬ್ರಾಹ್ಮಣಗ್ರನ್ಥಗಳಲ್ಲಿ ‘ವಿಸ್ರಸ್ತಿ’ ಎಂಬ ಶಬ್ದವು ಪ್ರಯುಕ್ತವಾಗಿದೆ. ಸೃಷ್ಟಿಕಾಮುಕ ಪ್ರಜಾಪತಿಯು ಸರ್ವಾತ್ಮನಾ ಆಹುತವಾಗುವುದಿಲ್ಲ, ಆದರೆ ಅಂಶರೂಪದಿಂದಲೇ ಪ್ರಜಾಪತಿಯ ವಿಸ್ರಸನವಾಗುತ್ತದೆ. ಒಂದು ಪ್ರಯೋಗ ಮಾಡೋಣ. ಧರಾತಲದಲ್ಲಿ ಬಿದ್ದ ಜಲದ ಬಿನ್ದುವನ್ನು ದೂರ ಸರಿಸಿರಿ. ಅವಶ್ಯವಾಗಿಯೇ ಅನುಶಯರೂಪದಿಂದ ಅಪ್‍ಭಾಗವು ಸ್ವಸ್ಥಾನದಲ್ಲಿಯೇ ಇರುತ್ತದೆ. ಇದೇ ಆಂಶಿಕಪ್ರದಾನ ವಿಸ್ರಸ್ತಿ, ಅಂದರೆ ವಿಸ್ರಸನವಾಗಿದೆ. ಇದಕ್ಕೆ ಲೋಕಭಾಷೆಯಲ್ಲಿ ‘ಸ್ಖಲನ’ ಎಂಬ ಶಬ್ದವು ಪ್ರಯುಕ್ತವಾಗಿದೆ. ಅದೇ ರೀತಿಯ ವ್ಯವಸ್ಥೆಯು ಶುಕ್ರಾಹುತಿಯ ಸಮ್ಬನ್ಧದಲ್ಲಿ ತಿಳಿಯಬೇಕು. ಶುಕ್ರದ ಸರ್ವಾತ್ಮನಾ ಉಚ್ಛೇದವಾಗುವುದಿಲ್ಲ, ಆದರೆ ಆಂಶಿಕರೂಪದಿಂದ ವಿಸ್ರಸನವಾಗುತ್ತದೆ. ಆದ್ದರಿಂದ ಶುಕ್ರವಿನಿರ್ಗಮ-ಪ್ರಕ್ರಿಯೆಯು ‘ರೇತಃಸ್ಖಲನ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ.

ವಿಚಾರವು ಪುರುಷಸೃಷ್ಟಿಯ ಪ್ರಕ್ರಾನ್ತವಾಗಿದೆ, ಇದರ ಸಮ್ಬನ್ಧದಲ್ಲಿ ‘ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಸ್ಯೇಹಾಭವತ್ಪುನಃ’ (ಯಜುಃ ಸಂಹಿತಾ) ಎಂಬ ನಿಯಮವು ವ್ಯವಸ್ಥಿತವಾಗಿದೆ. “ಮೂರು ಭಾಗಗಳ ಆಹುತಿ, ಹಾಗೂ ಒಂದು ಭಾಗದ ‘ಇಹ’ದಿಂದ ಗೃಹೀತ ಆಹುತಿಪ್ರದಾತಾದಲ್ಲಿ ಪ್ರತಿಷ್ಠಾ” ಎಂಬುದೇ ಇದರ ನಿಷ್ಕರ್ಷೆಯಾಗಿದೆ. ೨೮ ಕಲಾತ್ಮಕ ಪಿತೃಸಹದ ಮೂರು ಭಾಗಗಳಂತೂ ಶೋಣಿತಾಗ್ನಿಯಲ್ಲಿ ಆಹುತವಾಗುತ್ತದೆ, ಹಾಗೂ ಒಂದು ಭಾಗವು ಸ್ವಯಂ ಆಹುತಿಯನ್ನಾಗಿ ಕೊಡುವ ಪಿತನಲ್ಲಿ ಪ್ರತಿಷ್ಠಾರೂಪದಿಂದ ಪ್ರತಿಷ್ಠಿತವಾಗಿರುತ್ತದೆ. ಇದೇ ೩-೧ರ ಕ್ರಮವು ಮುಂದಿನ ಆಹುತಿ-ಕ್ರಮದಲ್ಲಿ ಹೋಗುತ್ತದೆ. ಆಹುತವಾಗುವ ಭಾಗವು ‘ಸೂಯತೇ’ – ‘ಸುತೋ ಭವತಿ’ – (ಅಹುತೋ ಭವತಿ) – ‘ಅಭಿಷುತೋ ಭವತಿ’ ಎಂಬಂತಹಾ ನಿರ್ವಚನಗಳಿಂದ ‘ಸುತಃ’ ಎಂದು ಕರೆಯಲ್ಪಡುತ್ತದೆ, ಹಾಗೂ ಶೇಷ ಅನಾಹುತಭಾಗವು ‘ಅಸುತಃ’ (ಅನಾಹುತಃ-ಶೇಷಃ) ಎಂದು ಕರೆಯಲ್ಪಡುತ್ತದೆ.ಭಾಗತ್ರಯರೂಪದಿಂದ ಯಾವ ಪಿತೃಧನವು ಪ್ರಜೋತ್ಪತ್ತಿಗಾಗಿ ಯೋಷಾಗ್ನಿಯಲ್ಲಿ ಹುತವಾಗುತ್ತದೆಯೋ, ಅದಂತೂ ಸನ್ತಾನ (ಸನ್ತನನ-ವಿಸ್ತಾರ) ಭಾವದಲ್ಲಿ ಪರಿಣತವಾಗುತ್ತಾ ಸಪ್ತಸಂಸ್ಥ ಪಿತೃಸ್ತೋಮ-ಯಜ್ಞದ ಪ್ರವರ್ತ್ತಕವಾಗುತ್ತದೆ, ಹಾಗೂ ಯಾವ ಒಂದು ಭಾಗವು ಆಹುತ ಆಗುವುದಿಲ್ಲ, ಆ ಅಸುತಭಾಗವು ಸ್ವಯಂ ಆಹುತಿಪ್ರದಾತಾನಲ್ಲಿಯೇ ಪ್ರತಿಷ್ಠಿತವಾಗಿರುತ್ತದೆ. ೨೮ ಕಲಾತ್ಮಕ ಆತ್ಮಪಿಣ್ಡದ ಸಪ್ತಕಲಾಭಾಗದ ಒಂದು ಚತುರ್ಥಾಂಶವು ಆತ್ಮಪ್ರತಿಷ್ಠಾದ ಕಾರಣವಾಗುತ್ತದೆ, ಇದೇ ‘ಆತ್ಮಧಾರಣಾಃ ಪಿತರಃ’ ಆಗಿದೆ. ಬೀಜ ಬಿತ್ತುವ (ಆವಾಪ) ಪಿತರದಲ್ಲಿಯೇ ಈ ಸಪ್ತಕಲಾ ಪಿತೃಸಹವು ಪ್ರತಿಷ್ಠಿತವಾಗಿರುತ್ತದೆ. ಇತರೆ ಶಬ್ದಗಳಲ್ಲಿ ಬೀಜಿಯಲ್ಲಿ ಈ ೭ ಪಿತೃಪ್ರಾಣಗಳ ವಿಶುದ್ಧ ಪಿತೃಪ್ರಾಣರೂಪದಿಂದ ಅವಸ್ಥಾನವಾಗಿದೆ, ಹಾಗಾಗಿ ಈ ಅಸುತ ಪಿತೃಪ್ರಾಣಸಮಷ್ಟಿಯನ್ನೇ ಅವಶ್ಯವಾಗಿ ‘ಪಿತರಃ’ ಸಂಜ್ಞೆಯಿಂದ ವ್ಯವಹೃತಗೊಳಿಸಲು ಸಾಧ್ಯ. ಎರಡನೆಯ ಭಾಗತ್ರಯಾತ್ಮಕ ಪಿತೃಭಾಗವು ಏಕೆಂದರೆ ಜಾಯಾಗ್ನಿಯಲ್ಲಿ ಅಭಿಷುತವಾಗುತ್ತದೆ, ಹಾಗಾಗಿ ಇದನ್ನು ‘ಸೂನುಃ’ ಎಂಬ ಶಬ್ದದಿಂದ ವ್ಯವಹೃತಗೊಳಿಸುವುದು ನ್ಯಾಯಸಙ್ಗತವಾಗುತ್ತದೆ.

ಆವಾಪಕರ್ತ್ತನ (ಶುಕ್ರಾತ್ಮಕ ಬೀಜದ ಆಹುತಿ ಕೊಡುವವನ) ಶುಕ್ರದಲ್ಲಿ ೨೮ ಪಿತೃಸಹವು ಪ್ರತಿಷ್ಟಿತವೆಂದು ಹೇಳಲ್ಪಟ್ಟಿದೆ. ಇದರಲ್ಲಿ ೭ ಇಲ್ಲಿ ಸ್ವಪ್ರತಿಷ್ಠಾಗಾಗಿ ಪ್ರತಿಷ್ಠಿತವಾಗಿ ಉಳಿಯುತ್ತವೆ, ಶೇಷ ೨೧ ಅಂಶಗಳು ಯೋಷಿದಗ್ನಿಯಲ್ಲಿ ಸುತವಾಗುತ್ತವೆ. ಸಪ್ತಪಿತೃಪ್ರಾಣ ಧನಭಾಗವಾಗಿದೆ, ೨೧ ಪಿತೃಪ್ರಾಣ ಋಣಭಾಗವಾಗಿವೆ. ಧನಭಾಗವು ಅಸುತವಾಗಿದೆ, ಇದೇ ‘ಪಿತರ’ವಾಗಿದೆ. ಋಣಭಾಗವು ಸುತವಾಗಿದೆ, ಇದೇ ‘ಸೂನು’ ಆಗಿದೆ. ದಮ್ಪತೀ-ಸಮ್ಬನ್ಧದಿಂದ ಎಂದಿಗೆ ಪುತ್ರ ಉತ್ಪನ್ನವಾಗುತ್ತದೆಯೋ, ೨೧ ಪಿತೃಸಹಗಳ ಋಣವನ್ನು ಹೊತ್ತುಕೊಂಡೇ ಉತ್ಪನ್ನವಾಗುತ್ತದೆ. ಉತ್ಪತ್ತಿಯ ಅನಂತರ ಈ ಉತ್ಪನ್ನ ಪುತ್ರನಲ್ಲಿ ತನ್ನ ಸ್ವತನ್ತ್ರ ಇನ್ನೂ ೨೮ ಹೆಚ್ಚು ಅಂಶಗಳು ಉತ್ಪನ್ನವಾಗುತ್ತವೆ ಎಂಬುದು ಕಥಾನ್ತರವು. ಆದರೆ ಪುತ್ರನ ಈ ಔಪಪಾತಿಕ ಆತ್ಮಕ್ಕೆ ತನ್ನ ಭೌಮಜನ್ಮಸತ್ತೆಗಾಗಿ, ಭೂಪೃಷ್ಠದ ಮೇಲೆ ಶರೀರ ಧಾರಣೆ ಮಾಡುವ ಸಲುವಾಗಿ ತನ್ನ ಪಿತನಿಂದ ಶುಕ್ರದ ಮುಖೇನ ೨೧ ಅಂಶಗಳನ್ನು ಪಡೆಯುವುದು ಪರಮಾವಶ್ಯಕವಾಗುತ್ತದೆ. ಈ ಋಣ-ಪ್ರದಾನತೆಯ ಹೊರತು ಇದರ ಪ್ರಭವವೇ ಅಸಮ್ಭವವಾಗುತ್ತದೆ. ಹಾಗಾಗಿ ಪುತ್ರರೂಪದಲ್ಲಿ ಉಪಯುಕ್ತ ಪಿತನ ಈ ೨೧ ಭಾಗಸಂಘಾತವನ್ನು ಶಾಸ್ತ್ರಕಾರರು ‘ಪಿತೃ-ಋಣ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಿದ್ದಾರೆ. ೬ ಧಾರೆಯಲ್ಲಿ ವಿತತ ಈ ೨೧ ಮಾತ್ರಾಗಳನ್ನು ಚನ್ದ್ರಲೋಕಸ್ಥ ಪಿತನ ೭ ಅಂಶಗಳೊಂದಿಗೆ ಸಪಿಣ್ಡೀಕರಣದಿಂದ ಎಲ್ಲಿಯವರೆಗೆ ಈ (ಪುತ್ರ) ಆತನ (ಪಿತನ) ಪೂರ್ತಿ (೨೧) ಮಾತ್ರಾಗಳನ್ನು ಹಿಂತಿರುಗಿಸಿ ಅದನ್ನು ಪೂರ್ಣ (೨೮ ಕಲೆಗಳನ್ನಾಗಿ) ಮಾಡುವುದಿಲ್ಲವೋ, ಅಲ್ಲಿಯವರೆಗೆ ಇದು ಋಣಿಯಾಗಿರುತ್ತದೆ. ಹಾಗೂ ಅಲ್ಲಿಯವರೆಗೆ ಈ ಬನ್ಧನವಿಮೋಕವಾಗುವುದಿಲ್ಲ. ಈ ಪಿತೃಋಣಮುಕ್ತಿಯ ಅನೇಕ ಪ್ರಕಾರಗಳಲ್ಲಿ ‘ಸನ್ತಾನೋತ್ಪತ್ತಿ’ ಒಂದು ಮುಖ್ಯ ಸಾಧನೆ ಎಂದು ನಂಬಲಾಗಿದೆ. ಈ ಪಿತೃಋಣದ ಅತಿರಿಕ್ತ ಪಿತನ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತ ಋಷಿಮಾತ್ರಾ, ದೇವಮಾತ್ರಾ, ಇವುಗಳೂ ಋಣರೂಪದಲ್ಲಿ ಇದರಲ್ಲಿ ಆಗಮಿಸುತ್ತವೆ. ಆ ಎರಡು ಋಣಗಳೇ ಋಷಿಋಣ ಹಾಗೂ ದೇವಋಣ ಎಂದು ಪ್ರಸಿದ್ಧವಾಗಿವೆ. ಈ ಮೂರು ಋಣಗಳ ಮೋಚನವು ಹೇಗೆ ಸಮ್ಭವ? ಈ ಪ್ರಶ್ನೆಯ ಮೀಮಾಂಸೆಯನ್ನು ಮುಂದೆ ಮಾಡಲಾಗುತ್ತದೆ. ಪ್ರಕೃತದಲ್ಲಿ ಈ ಋಣ-ಧನ ಭಾವದಿಂದ ತಿಳಿಸಬೇಕಾದದ್ದು ಏನೆಂದರೆ, ಪಿತನಿಂದ ಪುತ್ರನಲ್ಲಿ ಉಪಾದಾನ ರೂಪದಲ್ಲಿ ಪ್ರಾಪ್ತ ೨೧ ಸಹಃವೇ ‘ಪಿತೃಋಣ’ವು. ಇದು ಮುಂದಕ್ಕೆ ಯಾವ ಕ್ರಮದಿಂದ ವಿತಾನವಾಗುತ್ತದೆ, ಎಂಬುದೇ ವಿಜಿಜ್ಞಾಸೆಯಾಗಿದೆ. ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.