Tuesday, 8 October 2019

ವಿಜಯದಶಮೀ ಪರ್ವದ ಸಂಕ್ಷಿಪ್ತ ಇತಿವೃತ್ತ

ವಿಷಯ ಸೂಚಿ

೧. ’ನವರಾತ್ರಿ’ ಶಬ್ದ, ಹಾಗೂ ’ನವೋ ನವೋ ಭವತಿ ಜಾಯಮಾನಃ’ ಮಂತ್ರ

೨. ಸೂರ್ಯ-ಚಂದ್ರ ಯುಗ್ಮದಿಂದ ತ್ರೈಲೋಕ್ಯ-ಪ್ರಜೆಗಳ ಸರ್ಗಪ್ರವೃತ್ತಿ

೩. ಸಂವತ್ಸರಚಕ್ರದ ೭೨೦ ಇಷ್ಟಕಾಚಿತಿಗಳು ಹಾಗೂ ಆ ಚಿತಿಯಿಂದ ಸಂವತ್ಸರದ ಸ್ವರೂಪದ ನಿಷ್ಪತ್ತಿ

೪. ದಕ್ಷವೃತ್ತಾನುಗಾಮೀ ನವ-ನವ ರೂಪದಿಂದ ಜಾಯಮಾನ ಸೌಮ್ಯ-ಚಂದ್ರದೊಂದಿಗೆ ಅನುಪ್ರಾಣಿತ ಸಂವತ್ಸರಚಕ್ರದ ತ್ರಿನಾಡೀ-ನವವೀಥೀ-ತ್ರಿಮಾರ್ಗಾತ್ಮಕ ಭಚಕ್ರದ ಸ್ವರೂಪ-ಸಮನ್ವಯ

೫. ನಕ್ಷತ್ರಾಧಿಪತಿ-ನಿಶಾನಾಥ ಚಂದ್ರದ ತ್ರಿಖಂಡಾತ್ಮಕ-ಆಕಾಶಖಂಡಗಳಿಂದ ನವ-ಸಂಖ್ಯಾತ್ಮಕ ನವ-ನವ-ವಿವರ್ತ, ಹಾಗೂ ತದನುಬಂಧೀ-’ನವರಾತ್ರಿ’ ಶಬ್ದ

೬. ಸಂವತ್ಸರಚಕ್ರದ ೪೦ ನವರಾತ್ರಿಗಳಲ್ಲಿ ೪ ನವರಾತ್ರಿಗಳ ಪ್ರಾಮುಖ್ಯತೆ

೭. ನಾಲ್ಕು ನವರಾತ್ರಿಗಳಲ್ಲಿ, ಎರಡು ನವರಾತ್ರಿಗಳ, ಹಾಗೂ ಎರಡರಲ್ಲಿ ಶಾರದ-ನವರಾತ್ರದ ಪ್ರಧಾನತೆಯ ಸಮನ್ವಯ

೮. ನವರಾತ್ರತತ್ವದ ಸ್ವರೂಪವಿಶ್ಲೇಷಕ-ರಹಸ್ಯಪೂರ್ಣ ದುರ್ಗಾಸಪ್ತಶತೀಶಾಸ್ತ್ರ

೯. ಶಕ್ತಿಶಾಲೀ ’ರಾಷ್ಟ್ರ’ದ ’ರಾಷ್ಟ್ರತ್ವ’ದ ಸ್ವರೂಪವ್ಯಾಖ್ಯೆ

೧೦. ರಹಸ್ಯಶಾಸ್ತ್ರದ ಮುಖೇನ ’ರಾಷ್ಟ್ರಶಕ್ತಿ’ಯ ಪರೋಕ್ಷ-ಸ್ವರೂಪ ವ್ಯಾಖ್ಯೆ

೧೧. ರಾಷ್ಟ್ರದ ಬಾಹ್ಯ ಶಕ್ತಿಗಳ ಪ್ರತೀಕವಾದ ಸತ್ತಾತಂತ್ರ, ಹಾಗೂ ವಣಿಕ್-ತಂತ್ರದ ಅರ್ಥಲಿಪ್ಸಾ--ಲೋಕಲಿಪ್ಸೆಯಿಂದ ರಾಷ್ಟ್ರಶಕ್ತಿಯ ಅಂತರ್ಮುಖತೆ, ಹಾಗೂ ಪರಿಣಾಮಸ್ವರೂಪದಲ್ಲಿ ರಾಷ್ಟ್ರಕ್ಷೋಭಾತ್ಮಕ ರಾಷ್ಟ್ರವಿಪ್ಲವದ ಆವಿರ್ಭಾವ

೧೨. ಸತ್ತಾತಂತ್ರದ ಪ್ರತೀಕ ’ಸುರಥ’ ರಾಜಾ, ಹಾಗೂ ವಣಿಕ್‍ತಂತ್ರದ ಪ್ರತೀಕ ’ಸಮಾಧಿ’ ನಾಮಕ ವೈಶ್ಯ, ಇವರುಗಳ ಮಾಧ್ಯಮದಿಂದ ಈ ಎರಡೂ ವರ್ಗಗಳ ಮೋಹಶಕ್ತಿಯಿಂದ ಉತ್ಪನ್ನವಾಗುವ ಮಹಾನ್ ಕ್ಷೋಭೆಯ ಚಿರಂತನೇತಿವೃತ್ತದ ದಿಗ್ದರ್ಶನ, ಹಾಗೂ ಆ ಮಾಧ್ಯಮದಿಂದಲೇ ಶಕ್ತಿಶಾಸ್ತ್ರದ (ಸಪ್ತಶತಿಯ) ಪ್ರವೃತ್ತಿ

೧೩. ಋಷಿಪ್ರಜ್ಞೆಯ ಮುಖೇನ ಉಭಯತಂತ್ರದ ಉದ್ಬೋಧನೆ, ಹಾಗೂ ಶಕ್ತ್ಯಾರಾಧನೆಯ ಆದೇಶ

೧೪. ನಿಗಮಾಗಮಮೂಲಾ-ಆತ್ಮದೇವಭಾವಾನುಪ್ರಾಣಿತಾ-ಪರೋಕ್ಷಾ-ಸುಸೂಕ್ಷ್ಮಾ-ಶಕ್ತಿಗಳಿಂದ ವಂಚಿತ ರಾಷ್ಟ್ರಮಾನವರಿಗೆ ವ್ಯಕ್ತಿತ್ವವಿಮೋಹನಾತ್ಮಕ-ಪ್ರಕೃತಿವಿರುದ್ಧ-ಶಕ್ತಿವಿಧ್ವಂಸಕ-ಅಸದಾಚರಣೆ ಹಾಗೂ ಅವುಗಳ ಘೋರಘೋರತಮ ದುಷ್ಪರಿಣಾಮಗಳಿಂದ ರಾಷ್ಟ್ರದ ಆತ್ಯಂತಿಕ ಪತನ

೧೫. ರಾಷ್ಟ್ರದ ಚಿಂತ್ಯಾ ದುರ್ದಶೆಯ ಅಚಿಂತ್ಯ-ಪ್ರಶ್ನೆಯ ಚಿಂತಾಪೂರ್ಣ-ಸಮನ್ವಯ

೧೬. ವಿಜಯದಶಮೀಪರ್ವದ ಸಾಂಸ್ಕೃತಿಕ-ಆಯೋಜನೆಗಳು ಹಾಗೂ ಅದರ ಮೂಲಪ್ರತಿಷ್ಠಾಗಳು

೧೭. ಆಗಮಶಾಸ್ತ್ರದ ಷಡ್‍ದಿಗ್‍ಭೇದಭಿನ್ನ ಸುಪ್ರಸಿದ್ಧ ಷಡಾಮ್ನಾಯ ಹಾಗೂ ತದನುಬಂಧೀ ಶಕ್ತಿ ಸಂಗ್ರಾಹಕ ಉಪಾಯಗಳ ಸಮನ್ವಯ

೧೮. ಶಕ್ತಿ-ಉಪಾಸನೆ, ಪೂಜನಾತ್ಮಕ ನವರಾತ್ರಿ, ಹಾಗೂ ತದನುಗತ ವಿಜಯಾದಶಮೀ-ಪರ್ವ

೧೯. ಶ್ರೀಕೃಷ್ಣನ ಆದೇಶದಿಂದ ನವರಾತ್ರಿಯ ಮುಖೇನ ಶಕ್ತಿಸಂಚಯನ ಹಾಗೂ ತದ್ಬಲದ ಮೇಲೆ ಮಹಾಭಾರತಸಮರದಲ್ಲಿ ಅರ್ಜುನನಿಂದ ವಿಜಯಮಹೋತ್ಸವ-ಆಯೋಜನೆ-ಸಂಪಾದನೆ

೨೦. ಶಕ್ತ್ಯುಪಾಸನಾತ್ಮಕ-(ನವರಾತ್ರಾನುಗತ) ಸಾಂಸ್ಕೃತಿಕ-ಆಚಾರ, ಹಾಗೂ ಶಕ್ತಿಪ್ರಾಣಾತ್ಮಕ ವಿಜಯದಶಮಿ-ಅನುಗತ-ಸಾಂಸ್ಕೃತಿಕ-ಆಯೋಜನೆ

೨೧-ವಿಜಯದಶಮೀಪರ್ವಾತ್ಮಕ ಸಾಂಸ್ಕೃತಿಕ-ಆಯೋಜನೆಯ ಲೋಕವಿಧಿಯ ಸಮನ್ವಯ

೨೨-ಭಾರತರಾಷ್ಟ್ರದ ಮಹಾನ್ ಸಾಂಸ್ಕೃತಿಕ-ವಿಜಯದಶಮೀ-ಪರ್ವದ ಮಾಂಗಲಿಕ ಸಂಸ್ಮರಣೆ ಹಾಗೂ ತದನುಗತ-ಮಹಾಮಾಂಗಳಿಕ ವಿಶ್ರಾಮ
೧. ’ನವರಾತ್ರಿ’ ಶಬ್ದ, ಹಾಗೂ ’ನವೋ ನವೋ ಭವತಿ ಜಾಯಮಾನಃ’ ಮಂತ್ರ -

ನವ’ ಹಾಗೂ ರಾತ್ರಿ’ ಇವೆರಡೂ ಶಬ್ದಗಳ ಸಮನ್ವಯದಿಂದ ನವರಾತ್ರಿ’ ಶಬ್ದವು ಆವಿರ್ಭವಿಸಿದೆ. ಈ ನವ ಭಾವವೆಂದರೇನು? ಹಾಗೂ ರಾತ್ರಿಯ ಸ್ವರೂಪವೇನು? ಈ ಪ್ರಶ್ನೆಗಳ ಸಮಾಧಾನದ ಅನ್ವೇಷಣೆಯನ್ನು ನಿಗಮಾನುಬಂಧದಿಂದ ಮಾಡಿರಿ. ತದನಂತರವೇ ಇದರ ಆಗಮಾನುಬಂಧೀ ಸಮಾಧಾನವು ಗತಾರ್ಥವಾಗಲು ಸಾಧ್ಯ. ನೈಗಮಿಕ ಸಮಾಧಾನಾನ್ವೇಷಣೆಯ ಸಫಲತೆಗಾಗಿ ಸುಪ್ರಸಿದ್ಧ ಈ ನಿಗಮವಚನದತ್ತ ನಿಮ್ಮ ಧ್ಯಾನವನ್ನು ಆಕರ್ಷಿಸಲಾಗುತ್ತಿದೆ -

ನವೋ ನವೋ ಭವತಿ ಜಾಯಮಾನೋಽಹ್ನಾಂ ಕೇತುರುಷಸಾಮೇತ್ಯಗ್ರಮ್ |
ಭಾಗಂ ದೇವೇಭ್ಯೋ ವಿದಧಾತ್ಯಾಯನ್ ಪ್ರ ಚನ್ದ್ರಮಾಸ್ತಿರತೇ ದೀರ್ಘಮಾಯುಃ || ಋ. ೧೦|೮೫|೧೯

೨. ಸೂರ್ಯ-ಚಂದ್ರ ಯುಗ್ಮದಿಂದ ತ್ರೈಲೋಕ್ಯ-ಪ್ರಜೆಗಳ ಸರ್ಗಪ್ರವೃತ್ತಿ –

"ಕಲಾವೃದ್ಧಿಕ್ಷಯ-ಭಾವಗಳಿಂದ ಪ್ರತಿದಿನ ನವನವೀನ ರೂಪದಿಂದ ಉತ್ಪನ್ನವಾಗುವ (ಪ್ರತೀಯಮಾನ) ಚಂದ್ರದೇವತೆಯು ಸೌರ-ಪಾರ್ಥಿವ-ಐಂದ್ರ-ಆಗ್ನೇಯ-ಪ್ರಾಣದೇವತೆಗಳಿಗಾಗಿ ಸಲ್ಲಬೇಕಾದಷ್ಟು ಸೋಮಾಹುತಿ ನೀಡುತ್ತಾ ಪ್ರಜಾವರ್ಗಕ್ಕೆ (ಮಾನವರಿಗೆ) ಶತಾಯುರ್ಭಾವ ಪ್ರದಾನ ಮಾಡುತ್ತಿರುತ್ತದೆ" - ಇದೇ ಮಂತ್ರಾಕ್ಷರಾರ್ಥದ ನಿಷ್ಕರ್ಷೆ. ಪ್ರತಿದಿನ ಹೊಸ-ಹೊಸ ಕಲಾವೃದ್ಧಿ, ಹಾಗೂ ಕಲಾಕ್ಷಯ ಭಾವಗಳು ಎಲ್ಲಿ ನವೋನವೋ ಭವತಿ ಜಾಯಮಾನಃ’ ಎಂಬ ಒಂದು ಸಮನ್ವಯ ಹೊಂದಿರುತ್ತದೆಯೋ, ಅಲ್ಲಿ ’ನವ’ ಶಬ್ದವು ಒಂಭತ್ತು ಸಂಖ್ಯೆಯತ್ತಲೂ ಸಂಕೇತಿಸುತ್ತಿದೆ. ಹೇಗೆ? ಅನ್ವೇಷಣೆ ಮಾಡಿರಿ; ಆ ಜ್ಯೋತಿಷ್ಚಕ್ರಾತ್ಮಕ ಖಗೋಲವನ್ನು. ಅದರಲ್ಲಿಯೇ ಸತ್ಯಾಗ್ನಿಮೂರ್ತಿ ಸೂರ್ಯ, ಹಾಗೂ ಸತ್ಯಸೋಮಮೂರ್ತಿ ಚಂದ್ರಮಾ, ಎರಡೂ - ಸೂರ್ಯ್ಯಾಚನ್ದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್’ ರೂಪದಿಂದ ಯಥಾನುಪೂರ್ವೀಯಿಂದ (ವ್ಯವಸ್ಥಾಪೂರ್ವಕ-ಯಥಾಕ್ರಮ) ತ್ರೈಲೋಕ್ಯಪ್ರಜೆಗಳ ಸರ್ಜನ ಮಾಡುತ್ತಿರುತ್ತವೆ.

ಭಾರತೀಯ ಸಂಖ್ಯಾವಿಜ್ಞಾನದಲ್ಲಿ – ನವೋ ನವೋ ಭವತಿ ಜಾಯಮಾನಃ’ ಇತ್ಯಾದಿ ಮಂತ್ರಶ್ರುತಿಯ ಅನುಸಾರ ನವಭಾವಾತ್ಮಿಕಾ [ನವೀನಭಾವಾತ್ಮಿಕಾ] ನವಸಂಖ್ಯೆಗೇ (೯ಕ್ಕೇ) ಪ್ರಧಾನತೆ ಕೊಡಲಾಗಿದೆ. ಮೂಲ ಅಂಕಿಗಳು ’೯’ರ ಮೇಲೆಯೇ ಪರಿಸಮಾಪ್ತವಾಗಿವೆ. ಅರ್ಬುದ-ಖರ್ಬುದ-ನ್ಯರ್ಬುದಾದಿ ಸಮಸ್ತ ಸಂಖ್ಯಾರಾಶಿಗಳು ೯ ಸಂಖ್ಯೆಯ ವಿರಾಟ್-ಉದರದಲ್ಲಿಯೇ ಅಂತರ್ಭಾವ ಹೊಂದುತ್ತವೆ. ಹಾಗಾಗಿ ಇದನ್ನು ಅವಶ್ಯವಾಗಿಯೇ-’ಮಹಾಸಂಖ್ಯಾ’ [ವಿರಾಟ್ಸಂಖ್ಯಾ] ಎನ್ನುವುದು ಅನ್ವರ್ಥಕವಾಗುತ್ತಿದೆ. ಮೂಲದಲ್ಲಿ ಪೂರ್ಣರೂಪೀ ಶೂನ್ಯ ಬಿಂದುವಿದೆ. ಅದರಿಂದ ಕ್ರಮವಾಗಿ ೧-೨-೩-೪-೫-೬-೭-೮-೯ - ಈ ೯ ಅಂಕಿಗಳ ವಿತಾನ-ವಿಸ್ತಾರವಾಗಿದೆ. ೯ ಮುಗಿದೊಡನೆ ಶೂನ್ಯದೊಂದಿಗೆ ಪುನಃ ೧ರ ಸಂಬಂಧವಾಗುತ್ತದೆ, ಇದೇ ದಶ (೧೦). ದಸು ಉಪಕ್ಷಯೇ ಅಥವಾ ದಂಶನಾತ್ = ನಷ್ಟವಾಗುವುದು ಅಥವಾ ನಷ್ಟ ಮಾಡುವುದು. ಹಾಗೇ ದೃಶಿರ್ ಪ್ರೇಕ್ಷಣಾ = ನೋಡುವುದು. ಹಾಗಾಗಿ ದಶವು  ದಶಾ (ಸ್ಥಿತಿ), ದಿಶಾ (ದಿಕ್ಕು) ಇತ್ಯಾದಿ ಎಲ್ಲವೂ ಆಗುತ್ತಾ ಹೋಗುತ್ತದೆ. ಪುನಃ ೧೧-೧೨-೧೩-ಇತ್ಯಾದಿ ಕ್ರಮದಿಂದ ೧೯ಕ್ಕೆ ಮುಗಿಯುತ್ತದೆ. ನಂತರ ಶೂನ್ಯದೊಂದಿಗೆ ೨ರ ಸಂಬಂಧವಾಗಿ, ೨೦ ಆಗುತ್ತದೆ. ೨೯ಕ್ಕೆ ಇದು ಮುಗಿಯುತ್ತದೆ. ಇದೇ ಧಾರಾವಾಹಿಕ ಕ್ರಮದಿಂದ ೯-೯ರ ವ್ಯೂಹನದಿಂದಲೇ ಸಂಖ್ಯೆಗಳ ವಿತಾನವು ಪ್ರಕ್ರಾಂತವಾಗುತ್ತಿರುತ್ತದೆ. ಆದ್ದರಿಂದಲೇ ಕೇವಲ ೯ ಅಂಕಿಯ ಹೊರತು ಅನ್ಯ ಯಾವುದೇ ೧-೨-೩-೪ ಇತ್ಯಾದಿ ಅಂಕಿಗಳ ಸಂಕಲನಫಲವು ಸಮಾನವಾಗುವುದಿಲ್ಲ. ಉದಾ:- ೯-೧=೮, ೧+೮=೯; ೨+೭ = ೩+೬ = ೪+೫ = ೫+೪ = ೬+೩ = ೭+೨ = ೮+೧; ಹಾಗೂ ಇವುಗಳಿಂದ ’+’ ತೆಗೆದರೆ: ೨೭, ೩೬, ೪೫, ೫೪, ೬೩, ೭೨, ೮೧, ಇವೆಲ್ಲದರ ಸಂಕಲನಫಲ (ಬೀಜಾಂಕ: ೨೭: ೨+೭=೯) ಒಂಭತ್ತರಲ್ಲಿಯೇ ವಿಶ್ರಾಂತವಾಗುತ್ತದೆ. ೧೦ನೇಯದು ಅದೇ ಶೂನ್ಯರೂಪೀ ಪರಿಪೂರ್ಣಭಾವವಾಗುತ್ತದೆ. ಇದುವೇ ಮೂಲಾಧಾರ ಆಗಿರುವುದರಿಂದ ಸರ್ವಾದಿಯಲ್ಲಿ ಪ್ರತಿಷ್ಠಿತವೆಂದು ಒಪ್ಪಲಾಗುತ್ತದೆ. ಹಾಗಾಗಿ ಭಾರತೀಯ ಪರಿಭಾಷೆಯಲ್ಲಿ ಗಣನಶಿಕ್ಷಣದ ಪ್ರಕಾರ ೧ ರಿಂದ ೧೦ರ ಪರ್ಯಂತವಲ್ಲ, ಆದರೆ ಶೂನ್ಯದಿಂದ ೯ ರವರೆಗಿನ ಕ್ರಮವನ್ನೇ ಇಲ್ಲಿ ಪ್ರಧಾನವಾಗಿ ನೀಡಲಾಗಿದೆ. ಈ  ಸಂಖ್ಯಾಸಂಪತ್-ವಿಜ್ಞಾನಕ್ಕೆ ವೈಧಿಕವಿಧ್ಯೆಗಳಲ್ಲಿ ಅತ್ಯಂತ ಮಹತ್ವವಿದೆ. ಸಂಖ್ಯಾವಿಜ್ಞಾನದ ಹೊರತು ವೈಧಿಕ-ತತ್ವವಿಧ್ಯೆಗಳ ಸಮನ್ವಯವೇ ಅಸಂಭವವಾಗುತ್ತದೆ.

ಸರ್ವಾಧಾರಭೂತ-ಪೂರ್ಣರೂಪ-ಶೂನ್ಯಭಾವವೇ [ಬಿಂದುವೇ] ಮಹಾಕಾಲದ ಪ್ರತೀಕ. ಈ ಶೂನ್ಯರೂಪೀ ಪೂರ್ಣ ಮಹಾಕಾಲದ ಮಹಿಮಾಮಯ ಮಹಾನ್ ಉದರದಲ್ಲಿ ನವಾಕ್ಷರಮೂರ್ತಿ-ವಿರಾಟ್‍ಪುರುಷವು ಸಮಾವಿಷ್ಟವಾಗಿದೆ. ಇದರಲ್ಲಿ ಯಜ್ಞಪರಿಭಾಷೆಯ ದೃಷ್ಟಿಯಿಂದ ಶೂನ್ಯರೂಪೀ ಪೂರ್ಣರೂಪವನ್ನೇ ಹತ್ತನೇ [ಮೊದಲನೇ] ’ಪ್ರತಿಷ್ಠಾ’ ನಾಮಕ ’ಅಹಃ’ ಎಂದಿದೆ. ಉದಾ – ಪ್ರತಿಷ್ಠಾ ವಾ ದಶಮಮಹಃ’-’ಅನ್ತೋ ವಾ ಏಷ ಯಜ್ಞಸ್ಯ-ಯದ್ದಶಮಮಹಃ’ ಇತ್ಯಾದಿ ವಚನಗಳಿಂದ ಸ್ಪಷ್ಟವಾಗಿದೆ. ದಶಮ-ಅಹೋರೂಪ-ಶೂನ್ಯಾತ್ಮಕ-ಪೂರ್ಣರೂಪ-ಯಜ್ಞಪುರುಷವಿಶಿಷ್ಟ-ಸರ್ವವ್ಯಾಪಕ ಇದೇ ಪೂರ್ಣೇಶ್ವರದ ದಿಗ್ದರ್ಶನ ಮಾಡಿಸುತ್ತಾ ಶ್ರುತಿಯು ಹೇಳಿತು –

ಯಸ್ಮಾತ್ಪರಂ ನಾಪರಮಸ್ತಿ ಕಿಞ್ಚಿದ್ಯಸ್ಮಾನ್ನಾಣೀಯೋ ನ ಜ್ಯಾಯೋಽಸ್ತಿ ಕಶ್ಚಿತ್ |
ವೃಕ್ಷ ಇವ ಸ್ತಬ್ಧೋ ದಿವಿ ತಿಷ್ಠತ್ಯೇಕಸ್ತೇನೇದಂ ಪೂರ್ಣಂ ಪುರುಷೇಣ ಸರ್ವಮ್ ||

೧೦ ಸಂಖ್ಯೆಗಳ ’ಒಂದು’ ಸ್ವತಂತ್ರ ವಿಭಾಗವಿದೆ. ಇದೇ ಶೂನ್ಯ ೦ ಬಿಂದುವು ಹಾಗೂ ಇದೇ ಕಾಲಪುರುಷಾನುಗತ ಯಜ್ಞಪುರುಷರೂಪೀ ದಶಾವಯವ ವಿರಾಟ್‍ಪುರುಷದ ಸಂಕ್ಷಿಪ್ತ ಸ್ವರೂಪವ್ಯಾಖ್ಯೆಯಾಗಿದೆ. ಇದರ ಆಧಾರದಲ್ಲಿಯೇ ನಿಗಮವಿಧ್ಯೆ ಮತ್ತು ಆಗಮವಿಧ್ಯೆಗಳು ದಶಾವಯವಿಗಳಾಗಿವೆ. ಒಂದೇ ಅವಾರಪಾರೀಣ ಪುರುಷವು ಆರಂಭದಲ್ಲಿ ಕಾಲಪುರುಷ, ಯಜ್ಞಪುರುಷ’ ಭೇದದಿಂದ ೨ ವಿವರ್ತಭಾವಗಳಲ್ಲಿ ಪರಿಣತವಾಗುತ್ತಾ ಕೊನೆಗೆ ದಶವಿಧ-ಪುರುಷಭಾವಗಳಲ್ಲಿ ಪರಿಣತವಾಗುತ್ತಿದೆ. ಪುರುಷತತ್ವವು ಪ್ರಕೃತಿತತ್ವದೊಂದಿಗೆ ಅವಿನಾಭೂತವಾಗಿದೆ. ನಿಗಮಮೂಲಕ ಆಗಮಶಾಸ್ತ್ರವು ಸೃಷ್ಟಿವಿಧ್ಯಾತ್ಮಿಕಾ ಈ ದಶವಿಧ ಶಕ್ತಿ-ಪ್ರಕೃತಿ ವಿವರ್ತಗಳ ಸ್ವರೂಪದಿಗ್ದರ್ಶನ ಮಾಡಿಸುತ್ತಿದೆ. ಈ ಆಗಮೀಯ ಸೃಷ್ಟಿವಿಧ್ಯೆಯು ದಶಾವಯವ ರೂಪತ್ವದಿಂದ ದಶಮಹಾವಿಧ್ಯಾ’ಎಂದು ಪ್ರಸಿದ್ಧವಾಗಿದೆ.

೩. ಸಂವತ್ಸರಚಕ್ರದ ೭೨೦ ಇಷ್ಟಕಾಚಿತಿಗಳು ಹಾಗೂ ಆ ಚಿತಿಯಿಂದ ಸಂವತ್ಸರದ ಸ್ವರೂಪದ ನಿಷ್ಪತ್ತಿ -

ಇಲ್ಲಿ ಖಗೋಳದ ಅಭಿಪ್ರಾಯವೇನೆಂದರೆ ದೀರ್ಘವೃತ್ತಾತ್ಮಕ-ತ್ರಿಕೇಂದ್ರರೂಪ-ಅಖಂಡವೃತ್ತಲಕ್ಷಣವುಳ್ಳ ಆ ಸಂವತ್ಸರ ಎಂದು. ಇದರಲ್ಲಿ ೭೨೦ ಇಷ್ಟಕಾಚಿತಿಗಳು (ಇಟ್ಟಿಗೆಯ-ನಿರ್ಮಾಣಗಳು) ಸಮಾವಿಷ್ಟವಾಗಿವೆ. ಯಾವ ರೀತಿ ಅನೇಕ ಇಟ್ಟಿಗೆಗಳ ಚಯನದಿಂದ ಒಂದು ಪ್ರಾಸಾದದ ನಿರ್ಮಾಣವಾಗುತ್ತದೆಯೋ, ಹಾಗೆಯೇ ೭೨೦ ಇಷ್ಟಕಗಳ (ಇಟ್ಟಿಗೆಗಳ) ಚಿತಿಯಿಂದ ಸಂವತ್ಸರರೂಪೀ ತ್ರೈಲೋಕ್ಯಭವನವು ನಿರ್ಮಿತವಾಗಿದೆ. ಇದರಲ್ಲಿ ೩೬೦ ಸೋಮಗರ್ಭಿತ-ಅಗ್ನಿಪ್ರಧಾನ ಇಷ್ಟಕಗಳಾಗಿವೆ, ಹಾಗೂ ಉಳಿದ ೩೬೦ ಅಗ್ನಿಗರ್ಭಿತ-ಸೋಮಪ್ರಧಾನ ಇಷ್ಟಕಗಳಾಗಿವೆ. ಸೌರೀ ಆಗ್ನೇಯಿಯ ೩೬೦ ಇಷ್ಟಕಗಳ ಹೆಸರೇ ಅಹಃ’ ಎಂದು, ಚಾಂದ್ರೀ ಸೌಮ್ಯಾದ ೩೬೦ ಇಷ್ಟಕಗಳ ಹೆಸರೇ ರಾತ್ರಿ’. ಒಂದೊಂದು ಅಹಃ ತೆಗೆದುಕೊಂಡರೆ, ಅದರ ಮೇಲೆ ಒಂದೊಂದು ರಾತ್ರಿಯು ಋಜುರೂಪದಿಂದ ವಕ್ರಿತವಾಗಿದೆ. ಋಜು-ವಕ್ರಾತ್ಮಿಕಾ ಈ ಇಟ್ಟಿಗೆಗಳ ಚಿತಿಯಿಂದಲೇ ಸಂವತ್ಸರದ ಸ್ವರೂಪನಿರ್ಮಾಣವಾಗಿದೆ. ಎರಡೆರಡು ಇಟ್ಟಿಗೆಗಳನ್ನು ಸೇರಿಸಿ ಚಿತಿ’ಯ ಸ್ವರೂಪ ಸಂಪನ್ನವಾಗುತ್ತದೆ. ಫಲಿತವೇನೆಂದರೆ ೭೨೦ ಇಷ್ಟಕಗಳಲ್ಲಿ ೩೬೦ ಚಿತಿಗಳೇ ಶೇಷ ರೂಪದಲ್ಲಿ ಉಳಿದಿರುತ್ತವೆ. ಸಾವನಮಾನಾನುಸಾರ ಒಂದು ಸಂವತ್ಸರದಲ್ಲಿ ೩೬೦ ಅಹೋರಾತ್ರಯುಗ್ಮಗಳು ಇರುತ್ತದೆ. ಇದೇ ಇಷ್ಟಕಾಚಿತಿಗಳ ಅನುರೋಧದಿಂದ (ಪರಿಗಣನೆಯಿಂದ) ಸಂವತ್ಸರವೃತ್ತದಲ್ಲಿ ೩೬೦ ಅಂಶಗಳು ಸಿಗುತ್ತದೆಂದು ಒಪ್ಪಲಾಗಿದೆ. ವೃತ್ತಮಾತ್ರವೂ ಇದೇ ಚಿತಿಧರ್ಮದಿಂದ ೩೬೦ ಅಂಶಾತ್ಮಕವೇ ಆಗಿರುತ್ತದೆ. ನಂತರ ಆ ಸರ್ಷಪ (ಹಾವಿನ) ಆಕಾರವು  ಎಷ್ಟೇ ವೃತ್ತಗಳಾಗಿರಲಿ; ಅಣೋರಣೀಯಾನ್, ಹಾಗೂ ಮಹತೋಮಹೀಯಾನ್, ಪ್ರತಿಯೊಂದು ವೃತ್ತದಲ್ಲಿ ಅಹೋರಾತ್ರರೂಪಾ-ಅಗ್ನಿಸೋಮಮಯೀ ೩೬೦ ಚಿತಿಗಳು ಸಮನ್ವಿತವಾಗಿರುತ್ತವೆ.


೪. ದಕ್ಷವೃತ್ತಾನುಗಾಮೀ ನವ-ನವ ರೂಪದಿಂದ ಜಾಯಮಾನ ಸೌಮ್ಯ-ಚಂದ್ರದೊಂದಿಗೆ ಅನುಪ್ರಾಣಿತ ಸಂವತ್ಸರಚಕ್ರದ ತ್ರಿನಾಡೀ-ನವವೀಥೀ-ತ್ರಿಮಾರ್ಗಾತ್ಮಕ ಭಚಕ್ರದ ಸ್ವರೂಪ-ಸಮನ್ವಯ-

ಈ ೩೬೦ ಇಷ್ಟಕಗಳ ಬಗ್ಗೆ ನಾವು ನಕ್ಷತ್ರಾಧಿಪತಿ-ನಿಶಾನಾಥ-ಉಡುಪತಿ-ಸೋಮಮಯ ಚಂದ್ರದ ದೃಷ್ಟಿಯಿಂದ ಚಿಂತನೆ ಮಾಡಬೇಕು. ಏಕೆಂದರೆ ನವಸಂಖ್ಯಾಸೂಚಕ ’ನವ’ ಭಾವಕ್ಕೆ ಚಂದ್ರನ ಸಂಬಂಧವಿದೆ. ಗ್ರಹ-ನಕ್ಷತ್ರಾದಿ ಸಮನ್ವಿತ ಕ್ರಾಂತಿವೃತ್ತೀಯ-ಸಂವತ್ಸರಚಕ್ರದಲ್ಲಿ ೨೭ ನಕ್ಷತ್ರಗಳ ಪ್ರಧಾನತೆ ಇದೆ. ಈ ೨೭ ನಕ್ಷತ್ರಗಳ ಜೊತೆಯಲ್ಲಿಯೂ ಮೇಷ-ವೃಷಭ-ಮಿಥುನಾದಿ ೧೨ ರಾಶಿಗಳ ಸಮನ್ವಯವಾಗುತ್ತಿದೆ. ಇದನ್ನು ಫಲಿತಾಚಾರ್ಯರು - ’ರಾಶಿಭೋಗ’ ಎಂದು ಕರೆಯುತ್ತಾರೆ. ಈ ೨೭ ನಕ್ಷತ್ರಗಳು, ೧೨ ರಾಶಿಗಳ ಪ್ರಾಕೃತಿಕ ಸಂಸ್ಥಾನಕ್ರಮದಿಂದ ಜ್ಯೋತಿಷ್ಚಕ್ರಾತ್ಮಕ-ಸಂವತ್ಸರದಲ್ಲಿ ಮೂರು ನಾಡೀಮಾರ್ಗಗಳು, ತದನುಬಂಧೀ ಮೂರು ರಾಜಮಾರ್ಗಗಳು, ಪ್ರತಿಯೊಂದು ನಾಡಿಯಲ್ಲಿ ಮೂರ್ಮೂರು ವೀಥಿಗಳು (ಗಲ್ಲಿ/ಬೀದಿ) ವ್ಯವಸ್ಥಿತವಾಗಿವೆ. ನಾಡಿತ್ರಯೀ - ಆದಿ, ಮಧ್ಯ, ಅಂತ್ಯ ನಾಡಿಗಳೆಂದು ಪ್ರಸಿದ್ಧವಾಗಿವೆ. ರಾಜಮಾರ್ಗತ್ರಯೀ ಐರಾವತಮಾರ್ಗ-ಜರದ್ಗವಮಾರ್ಗ-ವೈಶ್ವಾನರಮಾರ್ಗ ಎಂದು ಪ್ರಸಿದ್ಧವಾಗಿವೆ. ಹಾಗೂ ವೀಥಿಗಳು ವಿಭಿನ್ನ ಹೆಸರುಗಳಿಂದ ಪ್ರಸಿದ್ಧವಾಗಿವೆ. ಇದು ನಾಡೀಕೋಷ್ಠಕದಿಂದ ಸ್ಪಷ್ಟವಾಗುತ್ತದೆ. ಪ್ರತಿಯೊಂದು ವೀಥಿಯಲ್ಲಿ ೩-೩ ನಕ್ಷತ್ರಗಳು ಸಮಾವಿಷ್ಟವಾಗಿವೆ. ಮೂರ್ಮೂರು ನಕ್ಷತ್ರಗಳಿಂದ ಕೃತರೂಪಾ ಮೂರ್ಮೂರು ವೀಥಿಗಳ ಸಮಷ್ಟಿಯಿಂದ ಒಂದೊಂದು ರಾಜಮಾರ್ಗದ ಸ್ವರೂಪ ಸಂಪನ್ನವಾಗಿದೆ. ಹಾಗೂ ಮೂರೂ ರಾಜಮಾರ್ಗಗಳಲ್ಲಿ (ಪ್ರತಿಯೊಂದರಲ್ಲೂ) ೪-೪ ರಾಶಿಗಳು ಸ್ವಸ್ವ-ಚರಣಗಳ ಅತಿಮಾನ ಸಂಬಂಧದಿಂದ ಅಂತರ್ಭುಕ್ತವಾಗಿವೆ. ೩-೩-ನಾಡೀ, ೯-೯-ನಕ್ಷತ್ರ, ಹಾಗೂ ೧-೧- ರಾಜಮಾರ್ಗರೂಪದಿಂದ ಸಂವತ್ಸರಚಕ್ರದ ಮೂರು ಖಂಡಗಳಾಗುತ್ತವೆ. ಇದು ಕೋಷ್ಠಕದಲ್ಲಿ ಸ್ಪಷ್ಟವಾಗಿದೆ.೫. ನಕ್ಷತ್ರಾಧಿಪತಿ-ನಿಶಾನಾಥ ಚಂದ್ರದ ತ್ರಿಖಂಡಾತ್ಮಕ-ಆಕಾಶಖಂಡಗಳಿಂದ ನವ-ಸಂಖ್ಯಾತ್ಮಕ ನವ-ನವ-ವಿವರ್ತ, ಹಾಗೂ ತದನುಬಂಧೀ-’ನವರಾತ್ರಿ’ ಶಬ್ದ -

ಅಶ್ವಿನೀನಕ್ಷತ್ರದಿಂದ ಆರಂಭಗೊಂಡು ಆಶ್ಲೇಷಾನಕ್ಷತ್ರ ಪರ್ಯಂತ ೯ ನಕ್ಷತ್ರಗಳಲ್ಲಿ ಮೇಷ-ವೃಷಭ-ಮಿಥುನ-ಕರ್ಕ - ಈ ೪ ರಾಶಿಗಳ ನಕ್ಷತ್ರಚರಣಗಳು - ಸಂದಂಶಾತ್ಮಕ ಒಂದು ವಿಭಾಗ. ಉದಾ - ಅಶ್ಲೇಷಾನ್ತೇ ಚ ಕರ್ಕಃ’ ಎಂದು ಪ್ರಸಿದ್ಧವಾಗಿದೆ. ಹಾಗೇ ಮಘಾದಿಂದ ಆರಂಭಿಸಿ ಜ್ಯೇಷ್ಠಾನಕ್ಷತ್ರ-ಪರ್ಯಂತ ೯ ನಕ್ಷತ್ರಗಳಲ್ಲಿ ಸಿಂಹ-ಕನ್ಯಾ-ತುಲಾ-ವೃಶ್ಚಿಕ - ಈ ೪ ರಾಶಿಗಳ ಅಂತರಾಂತರೀಭಾವಾತ್ಮಕ ಸಂಬಂಧವಿದೆ. ಮೂಲಾ ನಕ್ಷತ್ರದಿಂದ ಆರಂಭಗೊಂಡು ರೇವತೀ ನಕ್ಷತ್ರಪರ್ಯಂತ ೯ ನಕ್ಷತ್ರಗಳಲ್ಲಿ ಧನು-ಮಕರ-ಕುಂಭ-ಮೀನ - ಈ ೪ ರಾಶಿಗಳು ನಾಡೀಕೋಷ್ಠಕದ ಮುಖೇನ ಸ್ಪಷ್ಟಪಡಿಸಿದಂತೆಯೇ, ಅದೇ ಸಂಬಂಧದಿಂದ ಸಮನ್ವಯವಾಗುತ್ತಿದೆ. ಇದೇ ೯ ವೀಥ್ಯಾತ್ಮಕ - ತ್ರಿಮಾರ್ಗಾತ್ಮಕ - ೨೭ ನಕ್ಷತ್ರಾತ್ಮಕ - ೧೨ ರಾಶ್ಯಾತ್ಮಕ ಆ ಚಾಂದ್ರಪರಿಭ್ರಮಣ ಮಾರ್ಗವಿದೆ. ಉದಾ - ಪುರಾಣಭಾಷೆಯಲ್ಲಿ ಇದನ್ನು ದಕ್ಷವೃತ್ತ’ ಎಂದು ಕರೆಯಲಾಗಿದೆ. ಚಾಂದ್ರನಕ್ಷತ್ರಾನುರೋಧದಿಂದ ದಕ್ಷವೃತ್ತದ ೨೭ ವಿಭಾಗವಾಗುತ್ತಿದೆ. ಉದಾ - ಸಪ್ತವಿಂಶತಿಮಿನ್ದವೇ’ ಇತ್ಯಾದಿಗಳಿಂದ ಸ್ಪಷ್ಟವಾಗಿದೆ. ದಕ್ಷಪ್ರಜಾಪತಿಯ ೬೦ ಕನ್ಯೆಯರಿಗೆ ಸಂಬಂಧಿಸಿದ ಸುಪ್ರಸಿದ್ಧ ಪೌರಾಣಿಕ-ಆಖ್ಯಾನವು ಈ ದಕ್ಷವೃತ್ತಕ್ಕೇ ಪ್ರಧಾನವಾಗಿ ಸಂಬಂಧಿಸಿದೆ.

ಪ್ರಕೃತದಲ್ಲಿ ಹೇಳಲ್ಪಟ್ಟ ನಾಕ್ಷತ್ರಿಕ-ಚಾಂದ್ರ ವಿವರ್ತದಿಂದ ನಮಗೆ ತಿಳಿಸಬೇಕಿದ್ದೇನೆಂದರೆ, ಖಗೋಳೀಯ-ನಾಕ್ಷತ್ರಿಕ-ಸಂವತ್ಸರಾಕಾಶದ ೯-೯-೯ ನಕ್ಷತ್ರಗಳ ಅನುಪಾತದಿಂದ ೪-೪-೪ ರಾಶಿಭೇದದಿಂದ ೩ ಪ್ರಧಾನ ಆಕಾಶಖಂಡಗಳು ವ್ಯವಸ್ಥಿತವಾಗಿವೆ. ಈ ಖಂಡಗಳ ಸಂಧಿಗಳೇ ಫಲಿತ ಜೌತಿಷದಲ್ಲಿ-ಖಣ್ಡಾನ್ತಯೋಗ’ ಎಂದು ಕರೆಯಲ್ಪಟ್ಟಿದೆ. ಅದು ಇಂದು ಗಂಡಾಂತಯೋಗ’ ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಪ್ರತಿರಾತ್ರಿಗೆ ಒಂದು ನಕ್ಷತ್ರ, ೯ ರಾತ್ರಿಗಳಲ್ಲಿ ೯ ನಕ್ಷತ್ರಗಳ ಭೋಗ, ಪ್ರತಿ ೯ ನಕ್ಷತ್ರಗಳಲ್ಲಿ ೪ ರಾಶಿಗಳ ಭೋಗ. ಹೀಗೆ ಸಂವತ್ಸರದಲ್ಲಿ ನಕ್ಷತ್ರಭೋಗಾನುಬಂಧದಿಂದ ಎಲ್ಲಿ ೩೬೦ ರಾತ್ರಿಗಳು ವ್ಯವಸ್ಥಿತವಾಗುತ್ತವೆಯೋ, ಅಲ್ಲಿ ಒಂಭತ್ತರ ಕ್ರಮಿಕ ಸಂಸ್ಥಾನದಿಂದ ೩೬೦ ರಾತ್ರಿಗಳಲ್ಲಿ ’೪೦’ ’ನವರಾತ್ರಿ’ ಪ್ರಾದುರ್ಭವಿಸುತ್ತವೆ (೯ x ೪೦ = ೩೬೦). ರಾಶಿಚತುಷ್ಟಯದಿಂದ ಅನುಪ್ರಾಣಿತ, ೯-೯-೯ ನಕ್ಷತ್ರಗಳಿಂದ ಸಮನ್ವಿತ ರಾತ್ರಿಭಾವದಲ್ಲಿ ೯ ರಾತ್ರಿಗಳದ್ದೇ ಒಂದೊಂದು ಸಮೂಹವಾಗುತ್ತದೆ. ಹಾಗಾಗಿ ಇದನ್ನು ’ನವರಾತ್ರಿ’ (೯ ಸಂಖ್ಯಾತ್ಮಕ ನವರಾತ್ರಿಸಮಷ್ಟಿ) ಎಂದ ಹೇಳುವುದು ಸರ್ವಥಾ ಅನ್ವರ್ಥವಾಗುತ್ತಿದೆ. ನವಾನಾಂ ರಾತ್ರೀಣಾಂ ಸಮಾಹಾರಃ’ ಎಂಬುದೇ - ನವರಾತ್ರಮ್’ ಎಂಬುದರ ಸಹಜ-ಅರ್ಥ-ಸಮನ್ವಯವು. ನವೋ ನವೋ ಭವತಿ ಜಾಯಮಾನಃ (ಚನ್ದ್ರಮಾಃ)’ ಇತ್ಯಾದಿ ಮಂತ್ರಗಳು ನವ-ನವ-ಭಾವಗಳಲ್ಲಿ ವಿಭಕ್ತ ಇಂತಹಾ ೪೦ ನವರಾತ್ರಿಗಳ ಸ್ವರೂಪಸಮರ್ಥಕವಾಗುತ್ತಾ ಸತ್ಯವಾಗಿ ರಾತ್ರ್ಯನುಗತ ’ನವ’ ಭಾವದ - ’ನವಃ-ನವಃ’ ರೂಪ ಪುನರಾವರ್ತನೆಯ ಪ್ರತಿಷ್ಠಾ ಎಂದೇ ಪ್ರಮಾಣಿತವಾಗುತ್ತಿದೆ. ಮುಂದುವರೆದು ಇದೇ ’ನವರಾತ್ರ’ ಶಬ್ದವು ಆಗಮಶಾಸ್ತ್ರದಲ್ಲಿ ದಶಮಹಾವಿಧ್ಯಾತ್ಮಿಕಾ ಮಹಾಶಕ್ತಿ ಮಹಾಮಾಯಾ ದುರ್ಗಾ ಪೂಜನಾರ್ಚನ-ಕಾಲದಲ್ಲಿ ನಿರೂಢವಾಗಿದೆ.

೬. ಸಂವತ್ಸರಚಕ್ರದ ೪೦ ನವರಾತ್ರಿಗಳಲ್ಲಿ ೪ ನವರಾತ್ರಿಗಳ ಪ್ರಾಮುಖ್ಯತೆ -

ತಥೋಪವರ್ಣಿತ ೪೦ ನವರಾತ್ರಿಗಳಲ್ಲಿ ಉತ್ತರಪರಮಕ್ರಾಂತಿ, ದಕ್ಷಿಣಪರಮಕ್ರಾಂತಿ, ಶರತ್ಸಂಪಾತ, ವಸಂತಸಂಪಾತ ಎಂಬ ೪ ಪ್ರಮುಖ ಸಂವತ್ಸರ-ಬಿಂದುಗಳಿಗೆ ಸಂಬಂಧಿಸಿದ ೪ ನವರಾತ್ರಿಗಳು ಪ್ರಧಾನವೆಂದು ನಂಬಲಾಗಿದೆ. ಉತ್ತರಪರಮಕ್ರಾಂತಿಯಲ್ಲಿ ಸೂರ್ಯನ ದಕ್ಷಿಣಾಯನವಿದೆ, ಇದೇ ಪೈತ್ರ್ಯನವರಾತ್ರ. ದಕ್ಷಿಣಪರಮಕ್ರಾಂತಿಯಲ್ಲಿ ಸೂರ್ಯನ ಉತ್ತರಾಯಣವಿದೆ, ಇದೇ ದೇವನವರಾತ್ರ. ಮಾನವಪ್ರಜಾ ಸಂಬಂಧವು ಸಂವತ್ಸರವೃತ್ತದ ಮಧ್ಯದಲ್ಲಿ ಪ್ರತಿಷ್ಠಿತ ’ಬೃಹತೀಛಂದ’ ಎಂಬ ವಿಷುವದ್‍ವೃತ್ತದಿಂದಲೇ ನಂಬಲಾಗಿದೆ. ಹಾಗಾಗಿ ಅದರಿಂದ ಬಂದಂತಹಾ ವಸಂತಸಂಪಾತ, ಹಾಗೂ ಶರತ್ಸಂಪಾತಗಳಿಗೆ ಸಂಬಂಧಿಸಿದ ಚೈತ್ರಪಕ್ಷೀಯ ವಾಸಂತಿಕ-ನವರಾತ್ರ, ಹಾಗೂ ಆಶ್ವಿನಪಕ್ಷೀಯ ಶಾರದ-ನವರಾತ್ರ, ಎರಡೂ ಮಾನವನವರಾತ್ರ ಎಂದು ನಂಬಲಾಗಿದೆ. ಈ ರೀತಿ ಮಾನವಪ್ರಜಾನುಬಂಧದಿಂದಂತೂ ೪೦ರಲ್ಲಿ ೨ ನವರಾತ್ರಗಳೇ ಪ್ರಧಾನರೂಪದಿಂದ ಉಳಿಯುತ್ತಿದೆ.

೧-ದಕ್ಷಿಣಪರಮಕ್ರಾಂತ್ಯನುಗತಂ-ಸೂರ್ಯೋತ್ತರಾಯಣಾತ್ಮಕಂ ನವರಾತ್ರಮ್ - ದೈವನವರಾತ್ರಮ್
೨-ಉತ್ತರಪರಮಕ್ರಾಂತ್ಯನುಗತಂ-ಸೂರ್ಯದಕ್ಷಿಣಾಯನಾತ್ಮಕಂ ನವರಾತ್ರಮ್ - ಪೈತ್ರ್ಯನವರಾತ್ರಮ್
೩-ವಸಂತಸಂಪಾತಾನುಗತಂ-ವಾಸಂತಿಕ ನವರಾತ್ರಮ್ - ಮಾನುಷನವರಾತ್ರಮ್
೪-ಶರತ್ಸಂಪಾತಾನುಗತಂ-ಶಾರದೀಯಂ ನವರಾತ್ರಮ್ - ಮಾನುಷನವರಾತ್ರಮ್

೭. ನಾಲ್ಕು ನವರಾತ್ರಿಗಳಲ್ಲಿ, ಎರಡು ನವರಾತ್ರಿಗಳ, ಹಾಗೂ ಎರಡರಲ್ಲಿ ಶಾರದ-ನವರಾತ್ರದ ಪ್ರಧಾನತೆಯ ಸಮನ್ವಯ-

ಪುನಃ ಇಲ್ಲಿ ಸಂಸ್ಮರಣೀಯವಾದ್ದು ಏನೆಂದರೆ, ಸೋಮಮಯ ಪರಮೇಷ್ಠಿಯೇ ಆಗಮವು, ತತ್ಪ್ರವರ್ಗ್ಯಭೂತ ಚಂದ್ರಮಾ ಕೂಡ ಸೋಮಮಯವಾಗಿದೆ. ಉಮಾಸಹಿತ ತತ್ವವೇ ’ಸೋಮ’. ಹಾಗಾಗಿ ಚಾಂದ್ರ ಸೌಮ್ಯತತ್ವವೇ ಶಕ್ತಿತತ್ವವು. ರಾತ್ರಿಯೇ ಇದರ ಪ್ರಾತಿಸ್ವಿಕ ವ್ಯಕ್ತಕಾಲವು. ಹಾಗಾಗಿ ಚಂದ್ರಮಾ-ಸೋಮ-ರಾತ್ರಿ-ಶಕ್ತಿ ಇತ್ಯದಿ ಎಲ್ಲಾ ಭಾವಗಳು ಸಮಾನರೂಪದಿಂದ ಆಗಮೀಯಾ ಪರಾಶಕ್ತಿಯ ಪರಂಪರಾನುಗತ ಹಾಗೂ ಸಾಕ್ಷಾದ್-ರೂಪದಲ್ಲಿ ಸಂಗ್ರಾಹಕವಾಗಿವೆ. ಪುರ್ವೋಕ್ತ ಎರಡೂ ಮಾನುಷ-ನವರಾತ್ರಗಳಲ್ಲಿಯೂ ಶರತ್ಸಂಪಾತಾನುಗತ ಶಾರದೀಯ-ನವರಾತ್ರವು ಸರ್ವಾಪೇಕ್ಷೆಯಲ್ಲಿ ವಿಶೇಷ ಮಹತ್ವ ಪಡೆದದ್ದು ಏಕೆಂದರೆ, ಆಶ್ವಿನ-ಕಾರ್ತಿಕಾದಿ ಮಾಸಗಳು ಶಕ್ತಿಕ್ಷಯಾತ್ಮಕವಾಗುತ್ತಾ ಯಮದ್ರಂಷ್ಟ್ರಾ’ ಎಂದು ಪ್ರಸಿದ್ಧವಾಗಿವೆ. ಹಾಗಾಗಿ ಆಗಮಾಚಾರ್ಯರು ಈ ಕಾಲವು ಶಕ್ತಿಸಂಚಯನಕ್ಕಾಗಿ ಅನಿವಾರ್ಯವೆಂದು ಹೇಳಿದ್ದಾರೆ. ಕೊನೆಯಲ್ಲಿ ೪೦ ನವರಾತ್ರಗಳಲ್ಲಿ ಶಾರದೀಯ-ನವರಾತ್ರವೇ ಶಕ್ತಿಸಂಚಯನರೂಪಾ ಉಪಾಸನೆಯ ದೃಷ್ಟಿಯಿಂದ ಎಲ್ಲಕ್ಕಿಂತ ಮುಖ್ಯವೆಂದು ಪ್ರಮಾಣಿತವಾಗುತ್ತದೆ. ಹಾಗಾಗಿ ಈ ಶಕ್ತಿಪೂಜನ ಕಾಲವನ್ನು ಮಹಾಪೂಜಾ’ ಎಂದು ಕರೆಯಲಾಗಿದೆ. ಉದಾ - ಶರತ್ಕಾಲೇ ಮಹಾಪೂಜಾ ಕ್ರಿಯತೇ ಯಾ ಚ ವಾರ್ಷಿಕೀ’ ಇತ್ಯಾದಿ ಪ್ರಸಿದ್ಧವಾಗಿದೆ. ಅತೀತದ ಪರಮಶಾಕ್ತ ಕ್ಷೇತ್ರವಾದ (ಆದರೆ ವರ್ತಮಾನದಲ್ಲಿ ಶಕ್ತಿಪ್ರತೀಕಭೂತಾ ನಾರೀಶಕ್ತಿಯ ಉಪೇಕ್ಷಾ-ಅವಮಾನ ಮಾಡುವಂತಹಾ ಶಕ್ತಿಶೂನ್ಯರೇ ಹೆಚ್ಚಾಗಿರುವ) ಬಂಗಾಳಪ್ರಾಂತ್ಯದಲ್ಲಿ ’ಪೂಜಾ’ ಮುಖೇನ ನವರಾತ್ರಿಗೆ ಪ್ರಾಮುಖ್ಯತೆ ಕೊಡುತ್ತಿದೆ.

೮. ನವರಾತ್ರತತ್ವದ ಸ್ವರೂಪವಿಶ್ಲೇಷಕ-ರಹಸ್ಯಪೂರ್ಣ ದುರ್ಗಾಸಪ್ತಶತೀಶಾಸ್ತ್ರ -

ದಶಮಹಾವಿಧ್ಯಾನಿಬಂಧನ-ನವರಾತ್ರದಿಂದ ಅನುಪ್ರಾಣಿತ ಶಕ್ತಿತತ್ವವು ಎಂತಹಾ ಆಗಮೀಯ-ಶಕ್ತಿತತ್ವವೆಂದರೆ, ಅದರ ಅನುಗ್ರಹದಿಂದಲೇ ರಾಷ್ಟ್ರವು ಸಶಕ್ತವಾಗಿ ರಾಷ್ಟ್ರವಿರೋಧೀ ಅಸುರ-ರಾಕ್ಷಸರ ಧ್ವಂಸ ಮಾಡುತ್ತಾ ವಿಜಯಲಾಭ ಪಡೆಯುವುದಕ್ಕೆ ಸಮರ್ಥವೆಂದು ಪ್ರಮಾಣಿತವಾಗುತ್ತಿರುತ್ತದೆ. ಶಕ್ತಿರಹಸ್ಯಾತ್ಮಕ ಶಕ್ತಿಪೂಜೆಯು ಸಂಪೂರ್ಣ ನಿಗಮಾಗಮೀಯ ತತ್ವ ಪ್ರತಿಪಾದನೆ ಮಾಡುವಂತಹಾ ಮಾರ್ಕಂಡೇಯಪುರಾಣಾಂತರ್ಗತ ಋಷಿದ್ರಷ್ಟ-ಋಷಿಪ್ರಯುಕ್ತ-ಋಷ್ಯುಕ್ತ-ಉಪಾಸನಾ-ಪ್ರಕಾರಾತ್ಮಕ ಆ ಗೋಪನೀಯ ಆಗಮಗ್ರಂಥವೇ ಔಪನಿಷದ-ರಹಸ್ಯದ ಪ್ರತಿಪಾದಕ ೭೦೦+ ಶ್ಲೋಕಾತ್ಮಕ ಗೀತಾಶಾಸ್ತ್ರದಂತೆಯೇ ೭೦೦+ ಶ್ಲೋಕಗಳಿಂದಲೇ ತನ್ನ ಛಂದಃಶರೀರದ ನಿರ್ಮಾಣ ಮಾಡುತ್ತಾ ಸಪ್ತಶತೀ’ ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಆತ್ಮಾ-ಬುದ್ಧಿ-ಮನಃ-ಶರೀರ ಎಂಬ ಚತುಷ್ಪರ್ವಾ ಪ್ರಮಾಣಿತ ಮಾನವರ ಆತ್ಮಬುದ್ಧಿಸ್ವರೂಪ ನೈಗಮಿಕ-ನೈಷ್ಠಿಕ-ಸ್ವರೂಪವೆಂದು ನಂಬಲಾಗಿದೆ, ಹಾಗೂ ಮನಃಶರೀರಸ್ವರೂಪವನ್ನು ಆಗಮಿಕ ಭಾವುಕ-ಸ್ವರೂಪ ಎಂದು ನಂಬಲಾಗಿದೆ. ನಿಗಮಶಾಸ್ತವು ಮಾನವರ ನೈಷ್ಠಿಕ ಸ್ವರೂಪದ ಸಂರಕ್ಷಕವಾಗಿದ್ದರೆ, ಆಗಮಶಾಸ್ತ್ರವು ಮಾನವರ ಭಾವುಕತೆಯ ಸಂರಕ್ಷಕವಾಗಿದೆ. ಇವೆರಡೂ ಮಹಾನ್ ಶಾಸ್ತ್ರಗಳ ರಹಸ್ಯಪುರ್ಣ ಎರಡು ಸಪ್ತಶತಿಗಳು ಭಾರತರಾಷ್ಟ್ರದಲ್ಲಿ ಪ್ರಸಿದ್ಧವಾಗಿವೆ. ನಿಗಮಶಾಸ್ತ್ರದ ಸಪ್ತಶತೀ ಶ್ರೀಮದ್ ಭಗವದ್ಗೀತಾ’ ಎಂದು ಪ್ರಸಿದ್ಧವಾಗಿದೆ, ಏಕೆಂದರೆ ಇದು ತನ್ನ ೭೦೦ ಶ್ಲೋಕಗಳಿಂದ ’ಸಪ್ತಶತೀ’ ಎಂದೇ ಪ್ರಮಾಣಿತವಾಗುತ್ತಿದೆ. ಹಾಗೂ ಆಗಮಶಾಸ್ತ್ರದ ಸಪ್ತಶತೀ ದುರ್ಗಾಸಪ್ತಶತೀ’ ಎಂದು ಪ್ರಸಿದ್ಧವಾಗಿದೆ. ಇವೆಲ್ಲವೂ ೭೨೦ ಸಂಖ್ಯೆಯನ್ನು ತಲುಪುವ ಗುರಿ ಹೊಂದಿವೆ. ಹಾಗಾಗಿ  ಕಾಲಾಂತರ ಮತ್ತು ಪಾಠಾಂತರಗಳಿಂದ ಶ್ಲೋಕಸಂಖ್ಯಾ ಪ್ರಮಾಣ ವ್ಯತ್ಯಾಸವಾಗಿದೆ. ಗೀತಾಸಪ್ತಶತೀ ಮಾನವರ ಆತ್ಮಬುದ್ಧಿನಿಬಂಧನ, ಮೋಕ್ಷ-ಧರ್ಮ್ಮಾತ್ಮಕ-ನೈಗಮಿಕ-ಕರ್ತವ್ಯ-ಕೌಶಲದ ನಿರೂಪಣೆ ಮಾಡಿದರೆ, ದುರ್ಗಾಸಪ್ತಶತಿಯು ಮಾನವರ ಮನಃಶರೀರನಿಬಂಧನ, ಕಾಮ-ಅರ್ಥಾತ್ಮಕ ಆಗಮಿಕ-ಕರ್ತವ್ಯ-ಕೌಶಲದ ರಹಸ್ಯೋದ್ಘಾಟನೆ ಮಾಡುತ್ತಿದೆ. ಯಾವ ರಾಷ್ಟ್ರದ ಪ್ರಜ್ಞೆಯಲ್ಲಿ ಇವೆರಡೂ ಸಪ್ತಶತೀ-ಗ್ರಂಥಗಳು ಪ್ರತಿಷ್ಠಿತವಾಗಿರುತ್ತವೆಯೋ, ಆ ರಾಷ್ಟ್ರವೇ ತನ್ನ ಸಮಸ್ಯೆಗಳ ಸಮಾಧಾನಕ್ಕಾಗಿ ಒಂದುವೇಳೆ ಇನ್ನೊಬ್ಬರ ಮೊರೆ ಹೋಗುತ್ತದೆ ಎಂದರೆ, ಆಗ ಆ ರಾಷ್ಟ್ರದ ಪ್ರಜ್ಞೆಗೆ ಇದಕ್ಕಿಂತ ಹೆಚ್ಚು ದೌರ್ಭಾಗ್ಯ ಮತ್ತೊಂದಿಲ್ಲ. ಪ್ರಕೃತದಲ್ಲಿ-ಪ್ರಕರಣಾನುಬಂಧದಿಂದ ’ದುರ್ಗಾಸಪ್ತಶತಿ’ಯ ಸಂಬಂಧದಲ್ಲಿ ಎರಡು ಪ್ರಶ್ನೆಗಳು ಪ್ರಮುಖ-ರೂಪದಲ್ಲಿ-ಜಿಜ್ಞಾಸಾರೂಪದಿಂದ, ಸಹಜರೂಪದಿಂದಲೂ ನಮ್ಮ ಸಮ್ಮುಖದಲ್ಲಿ ಸಮುಪಸ್ಥಿತವಾಗುತ್ತದೆ.

೯. ಶಕ್ತಿಶಾಲೀ ’ರಾಷ್ಟ್ರ’ದ ’ರಾಷ್ಟ್ರತ್ವ’ದ ಸ್ವರೂಪವ್ಯಾಖ್ಯೆ -

ರಾಷ್ಟ್ರ ಶಕ್ತಿಶೂನ್ಯವಾಗುತ್ತದೆ’, ಎಂಬ ವಾಕ್ಯದಲ್ಲಿ ರಾಷ್ಟ್ರ ಶಬ್ದದ ಅರ್ಥವೇನು?, ಇದೇ ಮೊದಲ ಪ್ರಶ್ನೆಯು. ಹಾಗೂ ಹೇಗೆ ರಾಷ್ಟ್ರವು ಸಶಕ್ತವಾಗುತ್ತದೆ?, ಇದೇ ಎರಡನೆಯ ಪ್ರಶ್ನೆಯು. ದುರ್ಗಾಸಪ್ತಶತೀ ಎಂಬ ರಹಸ್ಯಗ್ರಂಥವು ತನ್ನ ಆಮ್ನಾಯಸಿದ್ಧ-ಪಾರಂಪರಿಕ-ಔಪಾಸನಿಕ-ಸುಗುಪ್ತ-ರಹಸ್ಯದ ಜೊತೆಯಲ್ಲಿ (ಯಾವುದಕ್ಕೆ ಶಬ್ದಾತ್ಮಕ ಪ್ರಶ್ನೆಯೇ ಅಸಂಭವವೋ, ಹಾಗೂ ಶಬ್ದಾತ್ಮಕ ಉತ್ತರವೇ ಅಸಂಭವವೋ, ಆದರೆ ಯಾವುದು ಕೇವಲ ಆಮ್ನಾಯನಿಷ್ಠ ಋಷಿಪರಂಪರೆಯಲ್ಲಿಯೇ ಸುಗುಪ್ತ-ಸುರಕ್ಷಿತವಾಗಿದೆಯೋ) ಆ ಲೋಕಾನುಬಂಧೀ ತಥೋಕ್ತ ಎರಡೂ ಲೋಕಪ್ರಶ್ನೆಗಳ ಲೋಕಮಾನವರ ಇತಿವೃತ್ತದ ಮಾಧ್ಯಮದಿಂದಲೇ ಸರ್ವಾತ್ಮನಾ ಸಮಾಧಾನ ಮಾಡುತ್ತಿದೆ.

ರಾಜತೇ-ಇತಿ ರಾಷ್ಟ್ರಮ್’ ಎಂಬುದೇ ರಾಷ್ಟ್ರದ ಸ್ವರೂಪ-ವ್ಯಾಖ್ಯೆಯಾಗಿದೆ. ಇದರ ಪ್ರಾಣಪ್ರತಿಷ್ಠೆಯು ರಾಷ್ಟ್ರದ ವಿಭ್ರಾಟ್-ತೇಜೋಮಯ ಕ್ಷಾತ್ರ-ಸತ್ತಾತಂತ್ರದ ಮೇಲೆಯೇ ಅವಲಂಬಿತವಾಗಿದೆ. ಯಾವ ರಾಷ್ಟ್ರದ ಸತ್ತಾತಂತ್ರವು ರಾಜತೇ’ ತೇಜದಿಂದ ಸಮನ್ವಿತವಾಗಿರುತ್ತದೆಯೋ, ಅದೇ ರಾಷ್ಟ್ರವು ರಾಷ್ಟ್ರ’ ಎಂದು ಕರೆಯಲ್ಪಟ್ಟಿದೆ. ಸರಿಯಾಗಿ ಅದರ ವಿಪರೀತವಾಗಿ ಯಾವ ರಾಷ್ಟ್ರದ ಸತ್ತಾತಂತ್ರವು ಆಯಾಯ ಜ್ಞಾತ-ಅಜ್ಞಾತ ಕಾರಣಗಳಿಂದ ತನ್ನ ವಿಭ್ರಾಟ್-ತೇಜೋಭಾವದಿಂದ ವಂಚಿತವಾಗುತ್ತದೆಯೋ, ಆ ರಾಷ್ಟ್ರವು ಆಕ್ರಾಂತಾ-ಆತತಾಯೀ ವರ್ಗದಿಂದ ಆಕ್ರಾಂತವಾಗಿ ವಿಪ್ಲವಾತ್ಮಕ-ತೇಜಃಶೂನ್ಯ-ಅರಾಷ್ಟ್ರವೇ ಆಗುತ್ತಿರುತ್ತದೆ. ರಾಷ್ಟ್ರದ ಶಾಸನಸತ್ತೆಯ ಮಹಾನ್ ಪೌರುಷದ ಆಧರದಲ್ಲಿಯೇ ರಾಷ್ಟ್ರದ ’ರಾಜತೇ’ ಲಕ್ಷಣವಾದ ರಾಷ್ಟ್ರತ್ವ’ವು ಸುರಕ್ಷಿತವಾಗಿರಲು ಸಾಧ್ಯ. 

೧೦. ರಹಸ್ಯಶಾಸ್ತ್ರದ ಮುಖೇನ ’ರಾಷ್ಟ್ರಶಕ್ತಿ’ಯ ಪರೋಕ್ಷ-ಸ್ವರೂಪ ವ್ಯಾಖ್ಯೆ -

ಇದೇ ಸಂಬಂಧದಲ್ಲಿ ಇನ್ನೂ ಒಂದು ಅವಾಂತರ ಪ್ರಶ್ನೆಯು ಜಾಗೃತವಾಗುತ್ತದೆ. ಯಾವ ಪ್ರಮುಖ ಕಾರಣದ ಆಗಮನದಿಂದ ರಾಷ್ಟ್ರದ ಶಾಸನದಂಡಧರ್ತಾ ಸತ್ತಾತಂತ್ರವು ಸಹಸಾ ವಿಭ್ರಾಟ್-ತೇಜದಿಂದ ವಂಚಿತವಾಗುತ್ತದೆ? ಇತರೆ ಶಬ್ದಗಳಲ್ಲಿ ಇದೇ ಜಾಗರೂಕ-ಅವಾಂತರ-ಮಹಾನ್ ಪ್ರಶ್ನೆಯನ್ನು ಈ ಶಬ್ದಗಳಲ್ಲಿಯೂ ಅಭಿನಯಗೊಳಿಸಬಹುದು - ರಾಷ್ಟ್ರೀಯ ಸತ್ತಾತಂತ್ರದಲ್ಲಿ ಸತ್ತಾತ್ಮಕ ವಿಭ್ರಾಟ್-ತೇಜವು ಅಂತರ್ಮುಖ-ಕುಂಠಿತ-ಹತಪ್ರಭವಾಗುವಂತಹಾ ಯಾವ ಮಹಾನ್ ದೋಷವು ಸಮಾವಿಷ್ಟವಾಗುತ್ತದೆ? ರಹಸ್ಯಶಾಸ್ತ್ರವು ಸ್ವಯಂ ಪರೋಕ್ಷವಿಧಿಯಿಂದ ಈ ಜಾಗರೂಕ ಅವಾಂತರ ಪ್ರಶ್ನೆಯ ಸಮಾಧಾನವನ್ನೂ ಮಾಡುತ್ತಿದೆ.

೧೧. ರಾಷ್ಟ್ರದ ಬಾಹ್ಯ ಶಕ್ತಿಗಳ ಪ್ರತೀಕವಾದ ಸತ್ತಾತಂತ್ರ, ಹಾಗೂ ವಣಿಕ್-ತಂತ್ರದ ಅರ್ಥಲಿಪ್ಸಾ--ಲೋಕಲಿಪ್ಸೆಯಿಂದ ರಾಷ್ಟ್ರಶಕ್ತಿಯ ಅಂತರ್ಮುಖತೆ, ಹಾಗೂ ಪರಿಣಾಮಸ್ವರೂಪದಲ್ಲಿ ರಾಷ್ಟ್ರಕ್ಷೋಭಾತ್ಮಕ ರಾಷ್ಟ್ರವಿಪ್ಲವದ ಆವಿರ್ಭಾವ -

ರಾಷ್ಟ್ರದ ವಿಭಿನ್ನ ಅರ್ಥಶಕ್ತಿಗಳ ಪಾತ್ರವಿವೇಕಪೂರ್ವಕ ಯಥಾಸ್ಥಾನದಲ್ಲಿ ವಿನಿಮಯ-ವ್ಯವಸ್ಥಾಪನೆ ಮಾಡುವಂತಹಾ, ಆದರೆ ಸ್ವಯಂ ಈ ಅರ್ಥಪ್ರಲೋಭನೆಗಳಿಂದ (ವಿತ್ತೈಷಣಗಳಿಂದ) ತನ್ನನ್ನು ತಾನು ಸರ್ವಥಾ ಅಸಂಸ್ಪೃಷ್ಟವಾಗಿ ಇಟ್ಟಿರುವಂತಹಾ, ಸಹಜಸಿದ್ಧ ಪ್ರಾಣೈಶ್ವರ್ಯ-ಪೌರುಷೈಶ್ವರ್ಯದಿಂದ ಸಹಜರೂಪದಲ್ಲಿ ಐಶ್ವರ್ಯಶಾಲಿಯಾಗಿರುವ ಸತ್ತಾತಂತ್ರವು ಎಂದು ದೌರ್ಭಾಗ್ಯವಶಾತ್ ರಾಷ್ಟ್ರದ ಅರ್ಥಸಂಗ್ರಹಕ-ವೈಶ್ಯವರ್ಗದ ಪದಚಿಹ್ನೆಗಳ ಅನುಗಾಮಿಯಾಗುತ್ತದೆಯೋ; ಇತರೆ ಶಬ್ದಗಳಲ್ಲಿ, ಯಾವ ಸತ್ತಾತಂತ್ರವು ಲೋಕೈಷಣಾಗರ್ಭಿತಾ ವಿತ್ತೈಷಣವನ್ನೇ ರಾಷ್ಟ್ರದ ಪ್ರಧಾನ ಬಲ ಎಂದು ನಂಬುವ-ನಂಬಿಸುವ ಮಹಾ ತಪ್ಪು ಮಾಡುತ್ತದೆಯೋ, ನಿಶ್ಚಯವಾಗಿ ಶೀಘ್ರವೇ ಅರ್ಥಾನುಗತ ಭೌತಿಕ-ತಮೋಭಾವದ ಲಿಪ್ಸಾ (ವಶಪಡಿಸಿಕೊಳ್ಳುವ ಕಾಮನೆ) - ಗೃಧ್ನುತಾ (ಅತಿಯಾಸೆ)ಗಳು ಇದರ ಸಹಜ ಶಾಸನ-ಐಶ್ವರ್ಯ-ಶೌರ್ಯರೂಪ-ವಿಭ್ರಾಟ್‍ತೇಜಗಳನ್ನು ಸರ್ವಾತ್ಮನಾ ಅಭಿಭೂತಗೊಳಿಸಿಬಿಡುತ್ತದೆ (ಸೋಲು). ಅಂತಹಾ ದಶೆಯಲ್ಲಿ ಅದು ತನ್ನ ಮೇಲೆ ತಾನೇ ನಿಯಂತ್ರಣ ಮಾಡಿಕೊಳ್ಳಲಾಗುವುದಿಲ್ಲ, ಅರ್ಥತಂತ್ರದ ಪರಮಾಚಾರ್ಯನು ಆ ವಣಿಕ್-ತಂತ್ರದ ನಿಯಂತ್ರಣ ಮಾಡಲಾಗುವುದಿಲ್ಲ. ಆ ವಣಿಕ್-ತಂತ್ರವಾದರೋ ತನ್ನ ಅರ್ಥತಂತ್ರದಲ್ಲಿ ಸರ್ವತಂತ್ರಸ್ವತಂತ್ರವಾಗಿ ಕ್ಷೋಭಯೇತಾಮಿದಂ ಜಗತ್’ ಎಂಬ ಮಾನವೀಯ-ಸಿದ್ಧಾಂತಾನುಸಾರ ಕೇವಲ ತನ್ನ ಒಂದು ರಾಷ್ಟ್ರಕ್ಕೆ ಮಾತ್ರ ಕ್ಷೋಭೆಯಲ್ಲ, ಆದರೆ ಸಂಪೂರ್ಣ ವಿಶ್ವದ ಕ್ಷೋಭೆಯ ಸಾಕ್ಷಾತ್ ಹಾಗೂ ಪರಂಪರಾಗತ ನಿಮಿತ್ತ ಪ್ರವರ್ತಕವಾಗುತ್ತದೆ. ಸತ್ತಾತಂತ್ರದ ಅರ್ಥಲಿಪ್ಸಾ ಪರಾಯಣಾತ್ಮಿಕಾ ವಣಿಗ್-ವೃತ್ತಿಯಿಂದಲೇ ರಾಷ್ಟ್ರದ ಪೌರುಷಶಕ್ತಿ, ಹಾಗೂ ಅರ್ಥಶಕ್ತಿ, ಎರಡೂ ಶಕ್ತಿಗಳು ರಾಷ್ಟ್ರಸ್ವರೂಪರಕ್ಷಣೆಯ ಸ್ಥಾನದಲ್ಲಿ (ವೈಯಕ್ತಿಕ, ಅಥವಾ ಹೆಚ್ಚೆಂದರೆ ಪಾರಿವಾರಿಕ ಸ್ವಾರ್ಥ್ಯ-ಲಿಪ್ಸಾಮಾತ್ರದಲ್ಲಿ ಕೇಂದ್ರಿತವಾಗುತ್ತಾ) ರಾಷ್ಟ್ರಧ್ವಂಸದ ಕಾರಣವೇ ಆಗುತ್ತಿರುತ್ತದೆ.

೧೨. ಸತ್ತಾತಂತ್ರದ ಪ್ರತೀಕ ’ಸುರಥ’ ರಾಜಾ, ಹಾಗೂ ವಣಿಕ್‍ತಂತ್ರದ ಪ್ರತೀಕ ’ಸಮಾಧಿ’ ನಾಮಕ ವೈಶ್ಯ, ಇವರುಗಳ ಮಾಧ್ಯಮದಿಂದ ಈ ಎರಡೂ ವರ್ಗಗಳ ಮೋಹಶಕ್ತಿಯಿಂದ ಉತ್ಪನ್ನವಾಗುವ ಮಹಾನ್ ಕ್ಷೋಭೆಯ ಚಿರಂತನೇತಿವೃತ್ತದ ದಿಗ್ದರ್ಶನ, ಹಾಗೂ ಆ ಮಾಧ್ಯಮದಿಂದಲೇ ಶಕ್ತಿಶಾಸ್ತ್ರದ (ಸಪ್ತಶತಿಯ) ಪ್ರವೃತ್ತಿ -

ಸತ್ತಾತ್ಮಕ ಕ್ಷತ್ರಿಯ ರಾಜಾ, ಹಾಗೂ ಅರ್ಥಾತ್ಮಕ ವೈಶ್ಯ, ಈ ಎರಡು ರಾಷ್ಟ್ರೀಯ-ಪ್ರತಿನಿಧಿಗಳು ಈ ರೀತಿ ಮಹಾಮೋಹಗ್ರಸ್ತರಾಗುವ ಕಾರಣದಿಂದಲೇ, ವ್ಯಕ್ತಿಪ್ರತಿಷ್ಠಾತ್ಮಕ-ಸ್ವಸ್ವರೂಪವ್ಯಾಮೋಹನಾತ್ಮಕ-ಲಿಪ್ಸಾಪೂರ್ಣ-ತಮೋಭಾವಗಳ ಕಾರಣದಿಂದಲೇ ರಾಷ್ಟ್ರವು ಅರಾಷ್ಟ್ರವಾಗುತ್ತಿರುತ್ತದೆ. ಇಂತಹಾ ಅರಾಷ್ಟ್ರರೂಪೀ ಅರಾಜಕ-ರಾಷ್ಟ್ರದ ರಾಷ್ಟ್ರೀಯ ಸಂಘಶಕ್ತಿ’ಯು ಸರ್ವಥಾ ಛಿನ್ನ-ಭಿನ್ನವಾಗುತ್ತದೆ. ವಿಜಯಸ್ವಪ್ನವು ಪಲಾಯನವಾಗುತ್ತದೆ. ಪದೇ ಪದೇ ಕುನೈಷ್ಠಿಕ-ಆತಾತಾಯೀ-ಅಸುರಧರ್ಮಾ-ಮಾನವಾಧರ್ಮಗಳ ಕುಚಕ್ರಗಳಿಂದ ಇಂತಹಾ ಶಕ್ತಿಶೂನ್ಯ ರಾಷ್ಟ್ರವು ಉತ್ಪೀಡಿತವೆಂದೇ ಪ್ರಮಾಣಿತವಾಗುತ್ತಿರುತ್ತದೆ. ಇದೇ ಲೋಕರಹಸ್ಯದ ಪರೋಕ್ಷ ಸಂಕೇತರೂಪದಿಂದ ಸ್ಪಷ್ಟೀಕರಣ ಮಾಡುವುದಕ್ಕಾಗಿಯೇ ಶಕ್ತಿಸ್ವರೂಪವಿಶ್ಲೇಷಕ ರಹಸ್ಯಶಾಸ್ತ್ರವು ಸತ್ತಾಧೀಶ ಸುರಥರಾಜಾ, ಹಾಗೂ ಅರ್ಥಾಧೀಶ ಸಮಾಧಿವೈಶ್ಯ, ಈ ಎರಡು ಮಹಾಪಾತ್ರಗಳ ಮಾಧ್ಯಮದಿಂದಲೇ ಶಕ್ತಿಸ್ರೋತಾವರೋಧಕ ಮೋಹಪಾಶಗಳ ಚಿರಂತನ ಇತಿವೃತ್ತವು ಉಪಕ್ರಾಂತಗೊಳಿಸುತ್ತಾ ಏನು ಹೇಳಿತೆಂದರೆ -

"ಸುರಥೋ ನಾಮ ರಾಜಾಭೂತ್ಸಮಸ್ತೇ ಕ್ಷಿತಿಮಂಡಲೇ" |

ಕ್ಷಿತಿಮಂಡಲಾಧೀಶ ಸುರಥ ಮಹಾನುಭಾವನು ದುಷ್ಟಾಮಾತ್ಯ-ಸಚಿವಾದಿಗಳ ಷಡ್ಯಂತ್ರಗಳಿಂದ ಸತ್ತಾಕ್ಷೇತ್ರದಿಂದ ಯಾವಾಗ ವಂಚಿತನಾಗುತ್ತಾನೆಯೋ, ಆಗ ದುಃಖಾರ್ತನಾಗಿ ಶೂನ್ಯಾರಣ್ಯದತ್ತ ಹೊರಡುತ್ತಾನೆ. ಅಲ್ಲಿಯೇ ಈತನಿಗೆ ಒಂದು ಬ್ರಾಹ್ಮಣಶ್ರೇಷ್ಠರ ನಿರಾಪದ (ಸುಭದ್ರ) ಆಶ್ರಮವು ಉಪಲಬ್ಧವಾಗುತ್ತದೆ. ಅಲ್ಲಿ ತನ್ನ ದುಃಖಗಾಥೆಯನ್ನು ವ್ಯಕ್ತಗೊಳಿಸಲು, ಜೊತೆಗೆ ಅದರ ನಿವೃತ್ತಿಯ ಉಪಾಯ ಬೋಧೆಯ ಕಾಮನೆಯೊಂದಿಗೆ ಸುರಥನು ಪ್ರಣತಭಾವದಿಂದ ಅಲ್ಲಿಗೆ ತಲುಪಿದಾಗ -

"ತತ್ರ ವಿಪ್ರಾಶ್ರಮಾಭ್ಯಾಶೇ ವೈಶ್ಯಮೇಕಂ ದದರ್ಶ ಸಃ "|

ರಾಜ್ಯಶ್ರೀಭ್ರಷ್ಟ ಸುರಥರಾಜನ-

ಸ ಶೋಕ ಇವ ಕಸ್ಮಾತ್ತ್ವಂ ದುರ್ಮ್ಮನಾ ಇವ ಲಕ್ಷ್ಯಸೇ’

ಎಂಬ ಪ್ರಶ್ನೆಗೆ ಮನೋಧರ್ಮಾ ವೈಶ್ಯಮಹಾಭಾಗನು ತನ್ನ ಕರುಣಗಾಥೆಯಿಂದ ಉಪಕ್ರಾಂತಗೊಳಿಸುವುದೇನೆಂದರೆ -

ಸಮಾಧಿರ್ನಾಮ ವೈಶ್ಯೋಽಹಮುತ್ಪನ್ನೋ ಧನಿನಾಂ ಕುಲೇ |
ಪುತ್ರದಾರೈರ್ನಿರಸ್ತಶ್ಚ ಧನಲೋಭಾದಸಾಧುಭಿಃ ||

೧೩. ಋಷಿಪ್ರಜ್ಞೆಯ ಮುಖೇನ ಉಭಯತಂತ್ರದ ಉದ್ಬೋಧನೆ, ಹಾಗೂ ಶಕ್ತ್ಯಾರಾಧನೆಯ ಆದೇಶ -

ಹೀಗೆ ಕೆಲ ಸಮಯದವರೆಗೆ ಸುರಥನು ಪ್ರಶ್ನೆ ಮಾಡುತ್ತಿರುತ್ತಾನೆ, ಸಮಾಧಿ ಮಹಾನುಭಾವನು ತನ್ನ ಮಾನಸ ಅನುಭೂತಿಗಳ ಮಾಧ್ಯಮದಿಂದ ತನ್ನ ದುಃಖೇತಿಹಾಸವನ್ನು ವ್ಯಕ್ತಗೊಳಿಸುತ್ತಿರುತ್ತಾನೆ. ಇವರಿಬ್ಬರೂ ಮಹಾನುಭಾವರು ಪರಸ್ಪರ ತಮ್ಮ ದುಃಖಗಾಥೆಗಳ ಪ್ರಶ್ನೋತ್ತರ ವಿಮರ್ಶೆಯಿಂದಲೂ ಯಾವಾಗ ಯಾವುದೇ ನಿರ್ಣಯೋಪಾಯಕ್ಕೆ ತಲುಪಲು ಅಸಮರ್ಥರಾಗುತ್ತಾರೆಯೋ, ಆಗ ಕೊನೆಗೆ ರಾಷ್ಟ್ರದ ಏಕಮಾತ್ರ ಅಶರಣ-ಶರಣಸ್ಥಾನ, ಸಂಸ್ಕೃತಿನಿಷ್ಠ-ಶಕ್ತಿರಹಸ್ಯವಿತ್-ಶಕ್ತ್ಯುಪಾಸಕ-ನಿಗಮಾಗಮಪರಾಯಣ ತಥಾಕಥಿತ ದ್ವಿಜಶ್ರೇಷ್ಠರ ಸಮ್ಮುಖದಲ್ಲಿಯೇ ಉಪಸ್ಥಿತರಾಗುತ್ತಾರೆ; ನೋಡಿ! ಮಾರ್ಕಂಡೇಯ ಉವಾಚ -

ತತಸ್ತೌ ಸಹಿತೌ ವಿಪ್ರ! ತಂ ಮುನಿಂ ಸಮುಪಸ್ಥಿತೌ |
ಸಮಾಧಿರ್ನಾಮ ವೈಶ್ಯೋಽಸೌ, ಸ ಚ ಪಾರ್ಥಿವಸತ್ತಮಃ ||

೧೪. ನಿಗಮಾಗಮಮೂಲಾ-ಆತ್ಮದೇವಭಾವಾನುಪ್ರಾಣಿತಾ-ಪರೋಕ್ಷಾ-ಸುಸೂಕ್ಷ್ಮಾ-ಶಕ್ತಿಗಳಿಂದ ವಂಚಿತ ರಾಷ್ಟ್ರಮಾನವರಿಗೆ ವ್ಯಕ್ತಿತ್ವವಿಮೋಹನಾತ್ಮಕ-ಪ್ರಕೃತಿವಿರುದ್ಧ-ಶಕ್ತಿವಿಧ್ವಂಸಕ-ಅಸದಾಚರಣೆ ಹಾಗೂ ಅವುಗಳ ಘೋರಘೋರತಮ ದುಷ್ಪರಿಣಾಮಗಳಿಂದ ರಾಷ್ಟ್ರದ ಆತ್ಯಂತಿಕ ಪತನ -

ಮುಂದೇನಾಗುತ್ತದೆ? ಏನಾಯಿತು? ಋಷಿಯು ಹೇಗೆ ಯಾವ ಉಪಾಯಗಳಿಂದ ಇವರಿಬ್ಬರಿಗೆ ದುಃಖಾರ್ಣವದಿಂದ ವಿಮುಕ್ತಗೊಳಿಸಿದರು? ಇತ್ಯಾದಿ ಪ್ರಶ್ನೆಗಳ ಸಮಾಧಾನಕ್ಕಾಗಿಯೇ ದುರ್ಗಾಸಪ್ತಶತಿಯಂತಹಾ ಶಕ್ತಿರಹಸ್ಯವಿಶ್ಲೇಷಕದಂತಹಾ ಶಾಸ್ತ್ರವು ರಾಷ್ಟ್ರದ ಆಮ್ನಾಯಪರಾಯಣ ಬ್ರಾಹ್ಮಣಪ್ರಜ್ಞೆಯಿಂದ ಆವಿರ್ಭವಿಸಿತು. ಇದರ ಅನುಗಮನದ ಹೊರತು ಸತ್ತಾತಂತ್ರಾಧೀಶನು ರಾಷ್ಟ್ರದ ಸಂರಕ್ಷಣೆ ಮಾಡಲಾಗುವುದಿಲ್ಲ, ವಿತ್ತಾಧೀಶ ವೈಶ್ಯನೂ ರಾಷ್ಟ್ರೀಯ-ಅರ್ಥಶಕ್ತಿಯ ಸಂರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಶಕ್ತ್ಯುಪಾಸನೆಯಿಂದಲೇ ಇಬ್ಬರ ಮೋಹವು ಪಲಾಯಿತವಾಗುತ್ತದೆ; ಪೂರ್ವಯುಗಗಳಲ್ಲಿ ಆಗಿದೆ ಕೂಡ. ಇಂದು ನಿರಪೇಕ್ಷವಾಗಿರುವ ಸತ್ತೆ ಹಾಗೂ ವಣಿಕ್ ಎಂಬ ಇಬ್ಬರಿಗೂ ಆ ಶಕ್ತ್ಯಾರಾಧನಾತ್ಮಕ-ಸಾಂಸ್ಕೃತಿಕ-ಅನುಷ್ಠಾನಪ್ರಕಾರಗಳು ದೌರ್ಭಾಗ್ಯವಶವಾಗಿದೆ. ಹಾಗೆಯೇ ಎರಡೂ ರಾಷ್ಟ್ರೀಯವರ್ಗಗಳು ಇಂದು ಸರ್ವಾತ್ಮನಾ ಅಶಕ್ತವೆಂದು ಪ್ರಮಾಣಿತವಾಗಿ ರಾಷ್ಟ್ರದ ಅರಾಷ್ಟ್ರಕತೆಯನ್ನೇ ಅಜ್ಞಾತರೂಪದಿಂದ ಉಪೋದ್ಬಲಕ ಮಾಡುತ್ತಾ ಸಾಗುತ್ತಿವೆ. ಸಹಜಭಾಷಾನುಸಾರ ಇಂದಿನ ಮಾನವರ ಏಕಮಾತ್ರ ಪ್ರಧಾನ ರಾಷ್ಟ್ರೀಯ-ಕರ್ತವ್ಯ ಉಳಿದಿರುವುದೇನೆಂದರೆ, ರಾಷ್ಟ್ರ-ರಾಷ್ಟ್ರೀಯತೆ-ಮಾನವ-ಮಾನವೀಯತೆ-ಸತ್ಯ-ನೈತಿಕತೆ-ಅಹಿಂಸೆ-ದಯೆ-ಸಹಾಸ್ತಿತ್ವ-ಮೈತ್ರೀ ಇತ್ಯಾದಿ ಇತ್ಯಾದಿ ಪ್ರರೋಚನಾತ್ಮಕ ಆಕರ್ಷಕ ಶಬ್ದಚ್ಛಲಗಳ ಮಾಧ್ಯಮದಿಂದ ತಮ್ಮ ಅಥವಾ ಹೆಚ್ಚೆಂದರೆ ತಮ್ಮ ಪರಿವಾರದ ಆಕಲ್ಪಾಂತಾ ಪ್ರಲಯಾಂತಾ-ಚಿಂತೆಯ ನಿವೃತ್ತಿಗಾಗಿ ಯೇನ ಕೇನ ಪ್ರಕಾರೇಣ ಅರ್ಥದ ಸಮನ್ವಯವನ್ನೇ ಮಾಡುವ ವಾಸನಾಮಾತ್ರದಲ್ಲಿಯೇ ತಲ್ಲೀನವಾಗಿರುವುದು. ಇದರ ಪುರುಷತತ್ವ-(ಅವ್ಯಯ)-ಸ್ವರೂಪವಿಶ್ಲೇಷಕ ಈಶ್ವರಾವತಾರವಾದ ವಾಸುದೇವಕೃಷ್ಣನು ಓಜಸ್ವಿನೀ ವಾಣಿಯಲ್ಲಿ ಯಾವ ರೀತಿಯಲ್ಲಿ ಉದ್ಘೋಷ ಮಾಡಿದ್ದಾನೆಂದು ಭಗವದ್ಗೀತೆಯ ೧೬ನೇ ಅಧ್ಯಾಯದ ೮-೨೦ ಪರ್ಯಂತ ಶ್ಲೋಕಗಳನ್ನು ಗಮನಿಸಬಹುದು -

ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಮ್ಭೂತಂ ಕಿಮನ್ಯತ್ಕಾಮಹೈತುಕಮ್ ॥ 16-8॥

ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಽಲ್ಪಬುದ್ಧಯಃ ।
ಪ್ರಭವನ್ತ್ಯುಗ್ರಕರ್ಮಾಣಃ ಕ್ಷಯಾಯ ಜಗತೋಽಹಿತಾಃ ॥ 16-9॥

ಕಾಮಮಾಶ್ರಿತ್ಯ ದುಷ್ಪೂರಂ ದಮ್ಭಮಾನಮದಾನ್ವಿತಾಃ ।
ಮೋಹಾದ್ಗೃಹೀತ್ವಾಸದ್ಗ್ರಾಹಾನ್ಪ್ರವರ್ತನ್ತೇಽಶುಚಿವ್ರತಾಃ ॥ 16-10॥

ಚಿನ್ತಾಮಪರಿಮೇಯಾಂ ಚ ಪ್ರಲಯಾನ್ತಾಮುಪಾಶ್ರಿತಾಃ ।
ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ ॥ 16-11॥

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ।
ಈಹನ್ತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್ ॥ 16-12॥

ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥ 16-13॥

ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ ।
ಈಶ್ವರೋಽಹಮಹಂ ಭೋಗೀ ಸಿದ್ಧೋಽಹಂ ಬಲವಾನ್ಸುಖೀ ॥ 16-14॥

ಆಢ್ಯೋಽಭಿಜನವಾನಸ್ಮಿ ಕೋಽನ್ಯೋಽಸ್ತಿ ಸದೃಶೋ ಮಯಾ ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ ॥ 16-15॥

ಅನೇಕಚಿತ್ತವಿಭ್ರಾನ್ತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತನ್ತಿ ನರಕೇಽಶುಚೌ ॥ 16-16॥

ಆತ್ಮಸಮ್ಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ।
ಯಜನ್ತೇ ನಾಮಯಜ್ಞೈಸ್ತೇ ದಮ್ಭೇನಾವಿಧಿಪೂರ್ವಕಮ್ ॥ 16-17॥

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು ಪ್ರದ್ವಿಷನ್ತೋಽಭ್ಯಸೂಯಕಾಃ ॥ 16-18॥

ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು ॥ 16-19॥

ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ ।

ಮಾಮಪ್ರಾಪ್ಯೈವ ಕೌನ್ತೇಯ ತತೋ ಯಾನ್ತ್ಯಧಮಾಂ ಗತಿಮ್ ॥ 16-20॥


೧೫. ರಾಷ್ಟ್ರದ ಚಿಂತ್ಯಾ ದುರ್ದಶೆಯ ಅಚಿಂತ್ಯ-ಪ್ರಶ್ನೆಯ ಚಿಂತಾಪೂರ್ಣ-ಸಮನ್ವಯ -

ಸುರಥನೆಂಬ ಭಾರತೀಯ ರಾಜಾ ಹಾಗೂ ಸಮಾಧಿ ಎಂಬ ಭಾರತೀಯ ವೈಶ್ಯ, ಇಬ್ಬರೂ ಹೇಗೆ ಸರ್ವಾತ್ಮನಾ-ಈಶ್ವರಪರಾಯಣರೂ, ಧರ್ಮಪಥಾನುಗಾಮಿಗಳೂ ಆಗಿದ್ದರೋ ಹಾಗೆಯೇ ಏಕಮಾತ್ರ ಭಾವುಕತಾರೂಪೀ ಮಾನಸಿಕ-ಮೋಹದ ಕಾರಣ ಸುರಥ ರಾಜಾ ಹಾಗೂ ಸಮಾಧಿ ವೈಶ್ಯ ಇಬ್ಬರೂ ತಮ್ಮ ತಮ್ಮ ತಂತ್ರಗಳಿಂದ ಪರಾಭೂತರಾದರು. ಉದಾ - ಅಮಾತ್ಯೈರ್ಬಲಿಭಿರ್ದುಷ್ಟೈಃ’ ಹಾಗೂ ಪುತ್ರದಾರೈರ್ನಿರಸ್ತಶ್ಚ’ ಇತ್ಯಾದಿ ವರ್ಣನೆಯಿಂದ ಸ್ಪಷ್ಟವಾಗಿದೆ. ಏಕಮಾತ್ರ ಭಾವುಕತಾಪೂರ್ಣ ಮೋಹದಿಂದಲೇ ಸತ್ತಾತಂತ್ರ, ಹಾಗೂ ವಣಿಕ್‍ತಂತ್ರವು ಎಂದು ಸರ್ವಾತ್ಮನಾ ಅಶಕ್ತವಾಗುತ್ತದೆಯೋ, ಆಗ ಗೀತಾಪ್ರತಿಪಾದಿತ ಇಂತಹಾ ಆಸುರಭಾವಗಳ ಆಕರ್ಷಣೆಯಿಂದ ದೌರ್ಭಾಗ್ಯವಶಾತ್ ಸತ್ತಾತಂತ್ರ ಹಾಗೂ ವಣಿಕ್‍ತಂತ್ರಗಳು ಕೇವಲ ಕಾಮಭೋಗಪರಾಯಣತೆಯಲ್ಲಿ ಆಸಕ್ತರಾಗಿ ಅರ್ಥಗೃಧ್ನು-ಲೋಕೈಷಣಾಕಾಮುಕರಾಗುತ್ತಾರೆ, ಆಗ ರಾಷ್ಟ್ರದ ದಶೆಯು ದುರ್ದಶೆಯಾಗುವುದಲ್ಲವೇ? ಪ್ರಶ್ನೆಯಂತೂ ಸರ್ವಾತ್ಮಾ ಅಚಿಂತ್ಯ-ಅಸಮಾಧೇಯಕೋಟಿಯಲ್ಲಿಯೇ ಪರಿಣತವಾಗುತ್ತದೆ.

೧೬. ವಿಜಯದಶಮೀಪರ್ವದ ಸಾಂಸ್ಕೃತಿಕ-ಆಯೋಜನೆಗಳು ಹಾಗೂ ಅದರ ಮೂಲಪ್ರತಿಷ್ಠಾಗಳು -

ರಾಷ್ಟ್ರವು ಏಕೆ ಅಶಕ್ತವಾಗಿ ಅರಾಷ್ಟ್ರವಾಗುತ್ತದೆ? ಪ್ರಶ್ನಸಮಾಧಾನದ ಚೇಷ್ಟೆಯನ್ನು ಸಮಾಧಿ ಎಂಬ ವೈಶ್ಯಬಂಧುವಿಗೆ ಪ್ರಧಾನ ಸಂಬಂಧವುಳ್ಳ ಅರ್ಥೈಷಣಾಪ್ರಧಾನಾ ಲೋಕೈಷಣೆಯಿಂದ ಅನುಪ್ರಾಣಿತಾ ಮೋಹಶಕ್ತಿಯ ಮಾಧ್ಯಮದಿಂದ ಮಾಡಲಾಗುತ್ತದೆ. ಬಹಳ ದೊಡ್ಡದೊಡ್ಡ ಜ್ಞಾನನಿಷ್ಠರೂ ಈ ವಿಷ್ಣುಮಾಯಾ-ಮೋಹಶಕ್ತಿಯಿಂದ ಮೋಹಿತರಾಗಿ ಸ್ವಕೇಂದ್ರಸ್ಥ ಆ ಅವ್ಯಯಾತ್ಮಬೋಧದಿಂದ ವಂಚಿತರಾಗಿಯೇ ಇರುತ್ತಾರೆ. ಈ ಆತ್ಮಬೋಧೆಯ ಹೊರತು ಮಾನವರು ತಮ್ಮ ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ತಂತ್ರಗಳಲ್ಲಿ ಸರ್ವಥಾ ಅಶಕ್ತ-ಅಸಮರ್ಥರೆಂದೇ ಪ್ರಮಾಣಿತರಾಗುತ್ತಾರೆ. ಹೇಗೆ ರಾಷ್ಟ್ರವು ತನ್ನ ಈ ಮೋಹಶಕ್ತಿಯಿಂದ ಆತ್ಮತ್ರಾಣ ಮಾಡುವುದು? ಹೇಗೆ ಇದು ಸಶಕ್ತವಾಗುವುದು? ಸಶಕ್ತವಾಗಿ ಇದು ಹೇಗೆ ರಾಷ್ಟ್ರವಿರೋಧೀ ಪ್ರತಿದ್ವಂದ್ವಿಗಳ ಪರಾಭಾವದಿಂದ ವಿಜಯ ಲಾಭ ಪಡೆಯುವುದು? ಇತ್ಯಾದಿ.

ಪ್ರಶ್ನೆಗಳ ಏಕಮಾತ್ರ ಸಮಾಧಾನವು ಮಹಾಮಾಯಾ-ದಶಮಹಾವಿಧ್ಯಾತ್ಮಿಕಾ-ನವರಾತ್ರಸ್ವರೂಪಿಣೀ ಆಗಮೀಯಾ ಶಕ್ತಿಯ ಉಪಾಸನೆಯ ಮೇಲೆಯೇ ಅವಲಂಬಿತವಾಗಿದೆ. ಹಾಗಾಗಿ ರಾಷ್ಟ್ರಸತ್ತೆಯ ಅಧೀಶ ಶಾಸಕನೊಂದಿಗೆ ಸಂಬಂಧವುಳ್ಳ ವಿಜಯಕರ್ಮದಿಂದ ಅನುಪ್ರಾಣಿತ ವಿಜಯದಶಮೀಪರ್ವ’ ಪ್ರಸಂಗದಲ್ಲಿ ಓದುಗರು ನಿಗಮಾನುಗತಾ ಆಗಮವಿಧ್ಯೆಗೆ ಸಂಬಂಧಿಸಿದ ದಶಮಹಾವಿಧ್ಯೆಗಳ, ತದುಪಾಸನಾತ್ಮಕ ನವರಾತ್ರಿಯನ್ನೂ ಪ್ರಾಸಂಗಿಕ-ದಿಗ್ದರ್ಶನ ಮಾಡಿಕೊಳ್ಳಬೇಕು. ಈ ಪ್ರಾಸಂಗಿಕ ಸಮನ್ವಯದ ಹೊರತು ಪ್ರಕ್ರಾಂತಪರ್ವದ ಆಯೋಜನಾತ್ಮಕ ಸ್ವರೂಪವು ಎಂದಿಗೂ ಸಮನ್ವಿತವಾಗುವುದಿಲ್ಲ.

೧೭. ಆಗಮಶಾಸ್ತ್ರದ ಷಡ್‍ದಿಗ್‍ಭೇದಭಿನ್ನ ಸುಪ್ರಸಿದ್ಧ ಷಡಾಮ್ನಾಯ ಹಾಗೂ ತದನುಬಂಧೀ ಶಕ್ತಿ ಸಂಗ್ರಾಹಕ ಉಪಾಯಗಳ ಸಮನ್ವಯ -

ಆಗಮಶಕ್ತಿಯ ಉಪಾಸನೆ’ಯಂತೂ ಆಮ್ನಾಯಪರಂಪರೆಯ ಆಶ್ರಯದಿಂದಲೇ ಸಮನ್ವಿತಗೊಳಿಸಲು ಸಾಧ್ಯವಾಗುವಂತಹಾ ಆ ಆಮ್ನಾಯಪರಂಪರೆಗೇ ಸಂಬಂಧಿಸಿದ್ದಾಗಿದೆ. ವಾಣಿ ಅಥವಾ ಲಿಪಿ ಮಾಧ್ಯಮದಿಂದ ಲೋಕಧರಾತಲದಲ್ಲಿ ಈ ರಹಸ್ಯಪೂರ್ಣ ಔಪಾಸನಿಕ ತಥ್ಯದ ಸಂಸ್ಪರ್ಶವೂ ಸಂಭವವಿಲ್ಲ. ಅನೇಕ ರೀತಿಯ ಆಗಮೀಯ ಆಮ್ನಾಯಪರಂಪರೆಯಲ್ಲಿ ಶಕ್ತಿಸಂಚಯನದಲ್ಲಿ ಷಟ್-ದಿಗ್-ಭೇದದಿಂದ ೬ ರೀತಿಯ ಹೆಸರುಗಳಂತೂ ಕೆಲವರಿಗಾದರೂ ವಿದಿತವಿರಬಹುದು. ಪೂರ್ವ, ಪಶ್ಚಿಮಾ, ಉತ್ತರಾ, ದಕ್ಷಿಣಾ, ಊರ್ಧ್ವಾ, ಅಧಃ’ - ಮಾತೃ ಶಕ್ತಿಮಯೀ ಮಾತಾಪೃಥಿವೀಯ ಈ ೬ ದಿಕ್ಕುಗಳಿಂದ ಅನುಪ್ರಾಣಿತ ಶಕ್ತಿಸಂಗ್ರಾಹಕ-ಷಡ್ವಿಧ ಆಮ್ನಾಯಗಳೇ ಕ್ರಮವಾಗಿ ಪೂರ್ವಾಮ್ನಾಯ, ಪಶ್ಚಿಮಾಮ್ನಾಯ, ಉತ್ತರಾಮ್ನಾಯ, ದಕ್ಷಿಣಾಮ್ನಾಯ, ಊರ್ಧ್ವಾಮ್ನಾಯ, ಅವರಾಮ್ನಾಯ  ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದೆ. ಇವು ಚತುಃಷಷ್ಟಿ (೬೪) ತಂತ್ರಗಳಿಂದ ಆಬದ್ಧವಾಗಿದೆ. ನಿಗಮಭಾವಾತ್ಮಕ ಆಗಮಾಮ್ನಾಯವೇ ಪೂರ್ವಾಮ್ನಾಯವು. ಲೋಕಭಾವಾನುಗತ ಆಯಾಯ ವಾಙ್ಮಯ ಭಾವಗಳಿಂದ ಅನುಪ್ರಾಣಿತ-ಶಾಬರಮಂತ್ರಾತ್ಮಕ ಆಮ್ನಾಯವೇ ಪಶ್ಚಿಮಾಮ್ನಾಯವು. ಪಂಚದೇವೋಪಾಸನಾತ್ಮಕ ಆಮ್ನಾಯವೇ ದಕ್ಷಿಣಾಮ್ನಾಯವು. ಬ್ರಹ್ಮರಂಧ್ರಾನುಗತ-ಸೌಷುಮ್ಣ-ಯೋಗಮಾರ್ಗವೇ ಊರ್ಧ್ವಾಮ್ನಾಯವು. ಭೂಕೇಂದ್ರಾನುಗತ ಪಾರ್ಥಿವ ಮಲಾತ್ಮಕ-ಪೂಷಾಭಾವಾನುಗತ-ನಿತಾಂತ-ರಹಸ್ಯಪೂರ್ಣ-ಸದ್ಯಃಫಲಪ್ರದ ಅಘೋರಮಾರ್ಗವೇ (ಘೋರಘೋರಮಾರ್ಗವೇ) ಅಧರಾಮ್ನಾಯವು. ಹಾಗೂ ಯಾವ ಸೌಮ್ಯಾ, ಪಂಚಮಕಾರಾತ್ಮಿಕಾ ಉಮಾ ಹೈಮಾವತೀ ಭಗವತಿಯ ದಶಮಹಾವಿಧ್ಯಾರೂಪದಿಂದ ಇಲ್ಲಿಯವರೆಗೆ ಯಶೋಗಾನವಾಗಿದೆಯೋ, ಯಾವುದು ಉತ್ತರವಾಗಿದ್ದಾಗ್ಯೂ ವಾಮವಾಗಿದೆಯೋ, ಹಾಗೂ ಸಾಧನಾಪ್ರಕಾರಾಪೇಕ್ಷೆಯಿಂದ ವಾಮ (ದುಸ್ತರ) ಆಗಿದೆಯೋ, ಅದೇ ಉತ್ತರಾಮ್ನಾಯವು. ಇದನ್ನು ಆಗಮಶಾಸ್ತ್ರದಲ್ಲಿ ಸ್ಪಷ್ಟರೂಪದಲ್ಲಿ ’ಶಕ್ತ್ಯಾಮ್ನಾಯ’ ಎಂದೂ ಹೇಳಲಾಗಿದೆ. ಏಕಮಾತ್ರ ನಿಗಮಾಗಮನಿಷ್ಠ-ಗುಹಾನಿಹಿತ-ತಪಸ್ವೀ (ಹುಟ್ಟಿನಿಂದಲ್ಲ  ಜ್ಞಾನದಿಂದ, ಆಚಾರದಿಂದ) ಬ್ರಾಹ್ಮಣನೇ  ಈ ಉಪಾಸನೆಯಲ್ಲಿ ಪೂರ್ಣರೂಪದಿಂದ ಅಧಿಕೃತನೆಂದು ನಂಬಲಾಗಿದೆ. ಇದರ ಅನುಗ್ರಹದಿಂದ ಪ್ರಾಪ್ತ ಶಕ್ತಿಪೂಜಾಪ್ರಕಾರಗಳ ಮಾಧ್ಯಮದಿಂದಲೇ (ಆಮ್ನಾಯವಿಧಾನಪೂರ್ವಕ-ಸಾಂಸ್ಕೃತಿಕ-ಆಯೋಜನಮಾಧ್ಯಮದಿಂದಲೇ) ಕ್ಷತ್ರಿಯ ವೈಶ್ಯರೂ ಶಕ್ತಿಲಾಭ ಪಡೆಯುತ್ತಾ ರಾಷ್ಟ್ರವನ್ನು ಸಶಕ್ತವಾಗಿಸಿ ವಿಜಯ-ಶ್ರೀ ಪ್ರಾಪ್ತಗೊಳಿಸಿಕೊಡುತ್ತಾರೆ. ಅದೇ ವಿಜಯಪ್ರಕಾರ, ಶಕ್ತಿಲಾಭದ ಅದೇ ಸಾಂಸ್ಕೃತಿಕ-ಆಯೋಜನ-ಪ್ರಕಾರ ರಾಜ್ಯಭ್ರಷ್ಟ ಸುರಥನಿಗೆ, ಹಾಗೂ ಪರಿವಾರಭ್ರಷ್ಟ ಸಮಾಧಿವೈಶ್ಯನಿಗೆ ನಿಗಮಾಗಮನಿಷ್ಠ ಮಹರ್ಷಿಗಳು ಸಪ್ತಶತಿಯ ಮಾಧ್ಯಮದಿಂದ ವಿಸ್ತಾರವಾಗಿ ವ್ಯಕ್ತಪಡಿಸಿದ್ದಾರೆ. ಸತ್ಯವಾಗಿ ಸಪ್ತಶತಿಯ ಕೇವಲ ಪಾರಾಯಣ ಪಾಠವೂ ಲೋಕಮಾನವರಿಗೆ ಲೋಕವಿಜಯಲಾಭದಲ್ಲಿ ಸಫಲರನ್ನಾಗಿಸುತ್ತದೆ, ನಿಶ್ಚಯವಾಗಿ ಸಫಲಗೊಳಿಸಿಯೇ ತೀರುತ್ತದೆ. ಇದೇ ಆಧಾರದಲ್ಲಿ ಆಸ್ಥಾಶ್ರದ್ಧಾಪರಾಯಣ ಶಕ್ತಿಭಕ್ತರಲ್ಲಿ - "ಕಲೌ ದುರ್ಗಾ ಪ್ರಕೀರ್ತ್ತಿತಾ" ಎಂಬ ಸಿದ್ಧಾಂತವು ಜಾಗೃತವಾಗಿದೆ.

೧೮. ಶಕ್ತಿ-ಉಪಾಸನೆ, ಪೂಜನಾತ್ಮಕ ನವರಾತ್ರಿ, ಹಾಗೂ ತದನುಗತ ವಿಜಯಾದಶಮೀ-ಪರ್ವ -

ವಿಜಯದಶಮೀಪರ್ವದ ಮೂಲಾಧಾರ ತತ್ವವು ಶಕ್ತಿ-ಉಪಾಸನಾತ್ಮಕ, ಶಕ್ತಿಪೂಜನಾತ್ಮಕ ನವರಾತ್ರಿ’ ಎಂದೇ ನಂಬಲಾಗಿದೆ. ಹಾಗಾಗಿ ವಿಜಯದಶಮೀಪರ್ವ’ ಎಂಬ ಸಾಂಸ್ಕೃತಿಕ ಆಯೋಜನೆಯ ಅನುಷ್ಠಾನವು ವಸಂತಋತುವಿನ ನವರಾತ್ರಿಯ ಕೊನೆಯಲ್ಲಿ, ಹಾಗೂ ಶರದೃತುವಿನ ನವರಾತ್ರಿಯ ಕೊನೆಯಲ್ಲಿ ಬರುತ್ತದೆ. ಇವೆರಡೂ ಪರ್ವಗಳಲ್ಲಿ ಪ್ರಧಾನವಾಗಿ ಶಾರದ-ನವರಾತ್ರಿಯಿಂದ ಅನುಪ್ರಾಣಿತಾ ದಶಮೀ ತಿಥಿಯಿಂದ ಸಂಬದ್ಧ ವಿಜಯಾದಶಮಿಗೆ ಇದೆ. ಏಕೆಂದರೆ ಪೂರ್ವಕಥನಾನುಸಾರ ಶಕ್ತಿಸಂಗ್ರಾಹಕ ೪೦ ನವರಾತ್ರಿಗಳಲ್ಲಿ ೪, ನಾಲ್ಕರಲ್ಲಿ ೨, ಹಾಗೂ ಎರಡರಲ್ಲಿಯೂ ೧ (ಶಾರದ) ನವರಾತ್ರಿಯೇ ಪ್ರಮುಖರೂಪದಿಂದ ಶಕ್ತಿಸಂಗ್ರಹಕ್ಕೆ ಪ್ರಧಾನ ಕಾಲವಾಗಿದೆ. ಹಾಗಾಗಿಯೇ ಇದನ್ನು ಮಹಾಪೂಜಾ’ ಎಂದು ಹೇಳುವುದು ಅನ್ವರ್ಥಕವಾಗುತ್ತದೆ. ಸಂಸ್ಕೃತಿಗೆ ಸಂಬಂಧಿಸಿದ ಸಾಂಸ್ಕೃತಿಕ ಆಚಾರನಿಷ್ಠೆಗಳ ದಿಗ್ದರ್ಶನ ಮಾಡಿಸುತ್ತಾ ಮೊದಲ ಪ್ರಕರಣದಲ್ಲಿ ಅಲ್ಲಲ್ಲಿ ಸ್ಪಷ್ಟಪಡಿಸಿದ್ದೇನೆಂದರೆ, ಆಚಾರಧರ್ಮಗಳಿಗೂ ಆಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ. ಇದಂತೂ ವ್ಯಕ್ತಿಗತರೂಪದಿಂದ ಸಾಧನೆಯ ಕ್ಷೇತ್ರವಾಗಿರುತ್ತದೆ. ಶಕ್ತ್ಯುಪಾಸನಾರೂಪೀ ನವರಾತ್ರಾಚಾರವು ಅಸ್ಥಿತ್ವದ-ಭಾವಾನುಗತಾ ಕೇವಲ ಉಪಾಸನೆಗೇ ಸೀಮಿತವಾಗಿದೆ. ಅದರ ಪ್ರಯುಕ್ತ ವಿಜಯದಶಮೀಪರ್ವದಲ್ಲಿ ನವಕನ್ಯಾಪೂಜನ, ವೇದಪಾರಾಯಣ, ಇತ್ಯಾದಿ ಶಾಸ್ತ್ರೀಯ ನಿಗಮಾಗಮಾಚಾರವೇ ಅನುಷ್ಠೇಯವಾಗುತ್ತವೆ. ಇದಕ್ಕೆ ಸರ್ವಸಾಮಾನ್ಯಾ-ಬಹಿರ್ಮುಖೀ ಲೋಕಪ್ರಜೆಗಳಿಗೆ ಸಾಕ್ಷಾತ್ ರೂಪದಿಂದ ಯಾವುದೇ ಸಂಬಂಧವಿಲ್ಲ. ಆದರೆ ವಿಧಿವತ್ತಾಗಿರುವ ತಪಸ್ವೀ ಏಕಾಂತನಿಷ್ಠ ಉಪಾಸಕರ ಉಪಾಸನೆಯಿಂದ ಸಂಚಿತ ಶಕ್ತಿಯ ಉಪಯೋಗವು ರಾಷ್ಟ್ರದ ಅಭ್ಯುದಯ-ನಿಃಶ್ರೇಯಸ್ಸಿಗೇ ಉಂಟಾಗುತ್ತದೆ. ವಿಜಯಾದಶಮೀಪರ್ವದ ಸಾಂಸ್ಕೃತಿಕ-ಆಚಾರನಿಷ್ಠಾತ್ಮಕ ಈ ಔಪಪತ್ತಿಕ ಪಕ್ಷವೇ ತಥ್ಯಪೂರ್ಣ ಪಕ್ಷವೆಂದು ನಂಬಲಾಗುತ್ತದೆ; ನಂಬಲಾಗಿದೆ ಕೂಡ. ಇದರ ಹೊರತು ಬಾಹ್ಯ-ಆಯೋಜನಾತ್ಮಕ-ಸಾಂಸ್ಕೃತಿಕ ಆಯೋಜನರೂಪೀ ವಿಜಯದಶಮಿಪರ್ವಕ್ಕೆ ಏನೂ ಮಹತ್ವ ಉಳಿಯುವುದಿಲ್ಲ. ಇದೇ ಕಾರಣದಿಂದ, ವಿಗತ ೩೦೦೦ ವರ್ಷಗಳಿಂದ ನಮ್ಮ ರಾಷ್ಟ್ರದಲ್ಲಿ ಪ್ರತಿವರ್ಷ ವಿಜಯದಶಮೀಪರ್ವವನ್ನು ಆಯೋಜನರೂಪದಿಂದ ಆಚರಿಸುತ್ತಾ ಬಂದದ್ದಾಗ್ಯೂ, ಈ ಔಪಾಸನಿಕ-ಶಕ್ತಿಸಂಗ್ರಹಾತ್ಮಕ-ವೈಜ್ಞಾನಿಕ ಪಥದಿಂದ ಭ್ರಷ್ಟ ಭಾರತೀಯ ದ್ವಿಜಾತಿಗಳ ದಾಸ್ಯದಿಂದ ರಾಷ್ಟ್ರವು ಉತ್ತರೋತ್ತರ ಶಕ್ತಿಶೂನ್ಯವೆಂದೇ ಪ್ರಮಾಣಿತವಾಗುತ್ತಾ ಸಾಗುತ್ತಿದೆ. ಆಯೋಜನಾತ್ಮಕ-ಪೂಜೆ-ಕೀರ್ತನಗಳಂತೂ ಪ್ರತೀಕಮಾತ್ರವಾಗಿವೆ. ಮೂಲವೇ ವಿಸ್ಮೃತವಾಗಿರುವಾಗ, ಈ ಪ್ರತೀಕಗಳಿಂದ ಲಾಭವೇನು? ನಾವು ದುರ್ಗಾ-ದುರ್ಗಾ ಎಂದು ಕೂಗುತ್ತಲೇ ಇರುತ್ತೇವೆ ಹಾಗೂ ಅಲ್ಲಿ ಆಸುರೀಶಕ್ತಿಗಳು ನಮ್ಮ ರಾಷ್ಟ್ರದ ಶೋಷಣೆ ಮಾಡುತ್ತಲೇ ಸಾಗುತ್ತಿವೆ. ಹೀಗೇಕೆ? ಯಾವುದಕ್ಕಾಗಿ? ಇದು ಏಕೆಂದರೆ, ದೃಷ್ಟಾಂತವೇ ಸಿದ್ಧಾಂತವಾಯಿತು. ಪ್ರತೀಕಗಳೇ ಮೂಲತತ್ವಗಳ ಸ್ಥಾನ ಗ್ರಹಣ ಮಾಡಿಕೊಂಡವು. ಬಾಹ್ಯ ಪ್ರದರ್ಶನಗಳು ನಮ್ಮ ಮೂಲಸಂಸ್ಕೃತಿಯ ಮೂಲನಿಷ್ಠೆಯನ್ನೇ ವಿಸ್ಮೃತಗೊಳಿಸಿವೆ. ಮಾನಸ ಅನುರಂಜನಾತ್ಮಕ ಆಯೋಜನೆಯೇ ಇಲ್ಲಿ ದೌರ್ಭಾಗ್ಯವಶಾತ್ ಪ್ರಧಾನ ಧರ್ಮವಾಗಿಬಿಟ್ಟಿದೆ. ಎಲ್ಲಿಯವರೆಗೆ ಭಾರತೀಯ-ಪ್ರಜೆಗಳು ಈ ತಥ್ಯದ ಸಮನ್ವಯವನ್ನು ಮಾಡಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ಪ್ರತೀಕಮಾತ್ರಗಳಿಂದ ಎಂದಿಗೂ ರಾಷ್ಟ್ರವು ಶಕ್ತಿಲಾಭವನ್ನು ಪಡೆಯಲಾಗುವುದಿಲ್ಲ.

೧೯. ಶ್ರೀಕೃಷ್ಣನ ಆದೇಶದಿಂದ ನವರಾತ್ರಿಯ ಮುಖೇನ ಶಕ್ತಿಸಂಚಯನ ಹಾಗೂ ತದ್ಬಲದ ಮೇಲೆ ಮಹಾಭಾರತಸಮರದಲ್ಲಿ ಅರ್ಜುನನಿಂದ ವಿಜಯಮಹೋತ್ಸವ-ಆಯೋಜನೆ-ಸಂಪಾದನೆ -

ಕರ್ಣಾಕರ್ಣಿಪರಂಪರೆಯಿಂದ ಕೇಳಿಸಿಕೊಂಡು ಬಂದಿರುವಂತೆ, ರಾಕ್ಷಸೇಶ್ವರ ರಾವಣನನ್ನು ಸೋಲಿಸುವ ಇಚ್ಛೆಯುಳ್ಳ ಮರ್ಯಾದಾಪುರುಷೋತ್ತಮ ರಾಮನು ಯುದ್ಧಯಾತ್ರೆಯ ಮೊದಲು ಪೂರ್ವ ನವರಾತ್ರೋಪಾಸನೆಯಿಂದ ಶಕ್ತಿಸಂಚಯನ ಮಾಡಿಕೊಂಡನು. ನಂತರ ದಶಮಿಗೆ ಯುದ್ಧಯಾತ್ರೆ ಆರಂಭಿಸಿದ್ದನು. ನವರಾತ್ರಿಯ ಮುಖೇನ ಪ್ರಾಪ್ತ ವಿಜಯಶಕ್ತಿಯಿಂದಲೇ ದಶಮಿಯ ಯಾತ್ರೆಯು ವಿಜಯಪ್ರದವಾಯಿತು. ಆದ್ದರಿಂದ ಈ ತಿಥಿಯು ರಾಮಾನುಬಂಧದಿಂದ ’ವಿಜಯದಶಮಿ’ ಎಂದು ಪ್ರಸಿದ್ಧವಾಯಿತು. ಸುಪ್ರಸಿದ್ಧವಾಗಿರುವುದೇನೆಂದರೆ, ಮಹಾಭಾರತ ಯುಗಾನುಗತಾ ಯುದ್ಧಯಾತ್ರೆಯ ಪೂರ್ವದಲ್ಲಿ ಪೀತಾಂಬರಾ ಭಗವತಿಯ ಅನನ್ಯೋಪಾಸಕ ಕೃಷ್ಣನು ತನ್ನ ಪ್ರಿಯಸಖನಾದ ಅರ್ಜುನನಿಗೆ ಪೀತಾಂಬರಶಕ್ತಿಯ ಉಪಾಸನೆಗಾಗಿ ಪ್ರವೃತ್ತಗೊಳಿಸಿದನು. ಉದಾ - ದುರ್ಗಾಸ್ತೋತ್ರಮುದೀರಯ’ ಎಂಬ ಬಾಹ್ಯ ಸಂಕೇತದಿಂದ ಸ್ಪಷ್ಟವಿದೆ. ಈ ಶಕ್ತಿಸಂಚಯನದಿಂದಲೇ ಅರ್ಜುನನು ಈ ಯುದ್ಧದಲ್ಲಿ ವಿಜಯಲಾಭ ಪಡೆಯಲು ಸಾಧ್ಯವಾಯಿತು. ಋಷಿಶ್ರೇಷ್ಠರ ಮುಖೇನ ನವರಾತ್ರಾನುಷ್ಠಾನದಲ್ಲಿ ಪ್ರವೃತ್ತನಾಗಿಯೇ ನಿಜಗಾತ್ರಾಸೃಗುಕ್ಷಿತ ಸುರಥ ಹಾಗೂ ಸಮಾಧಿಗಳು ತಮ್ಮ ವಿಲುಪ್ತ ವೈಭವವನ್ನು ಪ್ರಾಪ್ತಗೊಳಿಸಿಕೊಂಡರು. ನಿಶ್ಚಿತವಾಗಿ ಅದೇ ಔಪಾಸನಿಕ-ವೈಜ್ಞಾನಿಕ-ಪಥದಿಂದ ಶಕ್ತಿಸಂಚಯನ ಮಾಡುತ್ತಾ ರಾಷ್ಟ್ರದ ಸತ್ತಾತಂತ್ರವೂ ವಿಜಯಲಾಭ ಪಡೆಯಲು ಸಾಧ್ಯನಿಶ್ಚಯವಾಗಿಯೂ ಮಾಡಿಯೇ ತೀರುತ್ತದೆ! ಏಕೆಂದರೆ ಸೌಭಾಗ್ಯದಿಂದ ಈಗ ಶಕ್ತಿ-ಅನುಗ್ರಹದಿಂದ ಅದರ ಶನೈಃ ಶನೈಃ ಸಾಂಸ್ಕೃತಿಕ ಜಾಗೃತಿಯಾಗುತ್ತಿದೆ.

೨೦. ಶಕ್ತ್ಯುಪಾಸನಾತ್ಮಕ-(ನವರಾತ್ರಾನುಗತ) ಸಾಂಸ್ಕೃತಿಕ-ಆಚಾರ, ಹಾಗೂ ಶಕ್ತಿಪ್ರಾಣಾತ್ಮಕ ವಿಜಯದಶಮಿ-ಅನುಗತ-ಸಾಂಸ್ಕೃತಿಕ-ಆಯೋಜನೆ -

ಶಕ್ತಿಸಂಚಯನಮೂಲಕ-ನವರಾತ್ರೀಯ-ಔಪಾಸನಿಕ-ವಿಜಯದಶಮೀಪರ್ವರೂಪೀ ಸಾಂಸ್ಕೃತಿಕ-ಆಚಾರದ ಸಂಬಂಧವು ಎಲ್ಲಿ ನಿಗಮಾಗಮನಿಷ್ಠ ಉಪಾಸಕ ದ್ವಿಜಾತಿಯೊಂದಿಗಿದೆಯೋ, ಪ್ರಕೃತದಲ್ಲಿ ವ್ಯಾಪ್ತ ಪ್ರಾಣಾತ್ಮಕ-ಆಸುರಭಾವಗಳ ಪರಾಭವಕ್ಕಾಗಿ, ಅಲ್ಲಿ ಶತ್ರುಪರಾಭವಮೂಲಕ-ನವರಾತ್ರಾಂತ್ಯದಲ್ಲಿ ಪ್ರತಿಷ್ಠಿತ ವಿಜಯದಶಮೀಪರ್ವರೂಪೀ ಸಾಂಸ್ಕೃತಿಕ-ಆಯೋಜನೆಯ ಪ್ರಧಾನ ಸಂಬಂಧವು ರಾಷ್ಟ್ರದ ಸತ್ತಾತಂತ್ರದೊಂದಿಗೇ ಇದೆಯೆಂದು ನಂಬಲಾಗಿದೆ. ಇದು ರಾಷ್ಟ್ರದ ಮೇಲೆ ಆಕ್ರಮಣ ಮಾಡಲು ಇಚ್ಛಾಮಾತ್ರವನ್ನು ಮಾಡುವಂತಹಾ ಅಸುರಧರ್ಮೀ-ಆತತಾಯೀ-ದುಷ್ಟರ ಪರಾಭವದಿಂದಲೇ ಅನುಪ್ರಾಣಿತವಾಗಿದೆ. ಏಕಮಾತ್ರ ಇದೇ ಭೂತವಿಜಯದ ಕಾರಣ ಈ ಪರ್ವವು ಕ್ಷತ್ರಿಯಾನುಗತವೆಂದು ನಂಬಲಾಗಿದೆ. ಆದರೆ ರಕ್ಷಾಬಂಧನಪರ್ವದಂತೆಯೇ ಇದರಲ್ಲಿಯೂ ಎಲ್ಲದರ (ಪರ್ವೋತ್ಸವಸಮ್ಮೇಳನಸಮಾರೋಹರೂಪೀ ನಾಲ್ಕರ) ಸಮನ್ವಯವು ಸ್ವತಃಸಿದ್ಧವಾಗಿದೆ. ಶಾಸನಸತ್ತಾನುಬಂಧೀ ಯುಗಧರ್ಮಾನುಬಂಧಗಳ ಭೇದದಿಂದ ಈ ಪರ್ವದಲ್ಲಿ ಅನೇಕ ಮಾನ್ಯತಾತ್ಮಕ ಭಾವಗಳು ಕಾಲಕಾಲಕ್ಕೆ ಪ್ರವಿಷ್ಟವಾಗುತ್ತಾ ಬಂದಿವೆ. ಇದು ಸಂಸ್ಕೃತಿಮೂಲದ ಅನುರೂಪವಾಗುತ್ತಾ ಲೋಕಸಂಗ್ರಹದೃಷ್ಟಿಯಿಂದ ಆಯಾಯ ಯುಗಗಳಲ್ಲಿ ಮಾನ್ಯವಾಗುತ್ತಾ ಬಂದಿತು.

೨೧-ವಿಜಯದಶಮೀಪರ್ವಾತ್ಮಕ ಸಾಂಸ್ಕೃತಿಕ-ಆಯೋಜನೆಯ ಲೋಕವಿಧಿಯ ಸಮನ್ವಯ -

ನವರಾತ್ರಪರ್ಯಂತ ಭಗವತಿಯ ಮೃಣ್ಮಯೀ ಪ್ರತಿಮೆಗಳ ಅರ್ಚನೆ-ಪೂಜೆ, ಉಪವಾಸ, ವ್ರತ, ಕನ್ಯಾ-ವಟುಕಪೂಜೆ, ಶಮೀವೃಕ್ಷಪೂಜೆ, ವಿಜಯದಶಮೀಪರ್ವದ ಸಫಲ ಅನುಷ್ಠಾತಾ ರಾಮನ ಗೌರವಸಂಸ್ಮರಣೆಯಲ್ಲಿ ರಾಮವಿಗ್ರಹಯಾತ್ರೆ, ಇತ್ಯಾದಿ ಅನೇಕ ಸಾಂಸ್ಕೃತಿಕ ಭಾವಗಳು ಈ ಪರ್ವಾತ್ಮಕ-ಸಾಂಸ್ಕೃತಿಕ-ಆಯೋಜನೆಯಲ್ಲಿ ಸಮಾವಿಷ್ಟಗೊಂಡಿವೆ. ಇಲ್ಲಿ ಶಮೀವೃಕ್ಷಪೂಜೆಯ ಬಗ್ಗೆ ಸ್ವಲ್ಪ ಹೇಳಬೇಕಿದೆ. ಇದೊಂದು ಪ್ರಸಿದ್ಧ-ಸಕಂಟಕ-ವೃಕ್ಷ. ಯಜ್ಞೀಯ ವೃಕ್ಷಗಳಲ್ಲಿ - ಶಮೀ, ವಿಕಂಕತ, ಉದುಂಬರ - ಈ ಮೂರು ಬಹಳ ಮಹತ್ವ ಪಡೆದಿವೆ. ಶಮಿಯನ್ನು ಅಗ್ನಿಗರ್ಭವೆಂದು ನಂಬಲಾಗಿದೆ. ಈ ವೃಕ್ಷದಲ್ಲಿ ವಿಷ್ಣುಶಕ್ತಿಯಾದ ಮಹಾಲಕ್ಷ್ಮಿಯ ಆವಾಸವಿದೆ ಎಂದು ನಂಬಲಾಗಿದೆ. ಹಾಗಾಗಿ ಇದನ್ನು - ’ಲಕ್ಷ್ಮೀ’ ಎಂದೂ ಕರೆಯಲಾಗಿದೆ. ಕೆಲ ಕುಲಪರಂಪರೆಯಲ್ಲಿ ಅಷ್ಟಮಿಗೆ ಮಾತೃಪೂಜನಾವಸರದಲ್ಲಿ ಈ ಶಮಿಯನ್ನೇ ಮಾತೃರೂಪದಿಂದ ಪೂಜಿಸಲಾಗುತ್ತದೆ. ಹಾಗಾಗಿ ಇದರ ಕಾಷ್ಠವು ಮಹಾನಸಕರ್ಮದಲ್ಲಿ ಅಸಂಸ್ಪೃಷ್ಟವೆಂದು ನಂಬಲಾಗಿದೆ. ನಿಗಮಭಾಷೆಯಲ್ಲಿ ಇದೇ - ’ವಿಶ್ವಜನ್ಯಾ’ ಎಂದು ಪ್ರಸಿದ್ಧವಾಗಿದೆ. ಶತ್ರುಶಮನಪೂರ್ವಕ ವಿಜಯ-ಲಕ್ಷ್ಮಿಯ ಸಂಸ್ಥಾಪನೆಯು ಇದೇ ಶಮೀಶಕ್ತಿಯಿಂದ ಅನುಪ್ರಾಣಿತವಾಗಿದೆ. ನಿಮ್ನಲಿಖಿತ ನಿಗಮವಚನವು ಇದರ ಯಶೋವರ್ಣನೆ ಮಾಡುತ್ತಿದೆ -

"ಸ ವೈ ಶಮೀಮಯೀಂ ಪ್ರಥಮಾಮಾದಧತಿ | ತ ಏತಾಂ ಶಮೀಮಪಶ್ಯನ್ | ತಯೈನಂ-ಅಗ್ನಿಂ-ಅಶಮಯನ್ | ತಾಂ ಸವಿತರ್ವರೇಣ್ಯಸ್ಯ ಚಿತ್ರಾಮಹಂ ವೃಣೇ ಸುಮತಿಂ ವಿಶ್ವಜನ್ಯಾಮ್ | ಶತಪಥ ಬ್ರಾಹ್ಮಣ ೯|||೩೭

"ಶಮೀಗರ್ಭಸ್ಯ ಯೋ ಗರ್ಭಸ್ತಸ್ಯ ಗರ್ಭಸ್ಯ ಯೋ ರಿಪುಃ |
ರಿಪುಗರ್ಭಸ್ಯ ಯೋ ಗರ್ಭಃ ಸ ಮೇ ವಿಷ್ಣುಃ ಪ್ರಸೀದತು" ||

ಇತ್ಯಾದಿ ಸೂಕ್ತಿಯಿಂದ ಉಪವರ್ಣಿತ ಪಾರಮೇಷ್ಠ್ಯ ವಿಷ್ಣುವಿನಿಂದ ಅಭಿನ್ನ ಆಗಮೀಯ-ಶಕ್ತಿಯೇ ಶಮೀವೃಕ್ಷದ ಮುಖೇನ ಸಂಕೇತಿತವಾಗಿದೆ. ಹಾಗಾಗಿ ನವರಾತ್ರಾನುಬಂಧೀ ವಿಜಯದಶಮೀಪರ್ವದಲ್ಲಿ ಕ್ಷತ್ರಿಯ-ರಾಜನ ಮುಖೇನ ಪ್ರಜಾಸಹಿತ ಉತ್ಸವಯಾತ್ರಾಪೂರ್ವಕ ನಗರಾಂತರಸ್ಥ ವನದಲ್ಲಿ ಸ್ಥಿತ ಶಮೀವೃಕ್ಷದ ಪೂಜೆಯೂ ಈ ಉತ್ಸವದ ಅಂಗವಾಗಿದೆ.

೨೨-ಭಾರತರಾಷ್ಟ್ರದ ಮಹಾನ್ ಸಾಂಸ್ಕೃತಿಕ-ವಿಜಯದಶಮೀ-ಪರ್ವದ ಮಾಂಗಲಿಕ ಸಂಸ್ಮರಣೆ ಹಾಗೂ ತದನುಗತ-ಮಹಾಮಾಂಗಳಿಕ ವಿಶ್ರಾಮ -

ಇದುವೇ ಆ ’ವಿಜಯದಶಮೀಪರ್ವ’ ಎಂಬ ಸಾಂಸ್ಕೃತಿಕ-ಆಯೋಜನೆಯ ಲೋಕವಿಧಿ. ಇದು ಪ್ರತೀಕಾತ್ಮಿಕಾ ನಿದಾನವಿಧಿಯ ಮಾಧ್ಯಮದಿಂದ ಪ್ರತಿವರ್ಷ ಪೂರ್ತಿಯಂತೂ ಮಾಡಲಾಗುತ್ತದೆ (ಮಾಡಲಾಗುತಿತ್ತು - ಸ್ವಾತಂತ್ರ್ಯ ಪೂರ್ವದಲ್ಲಿ), ಆದರೆ ಇದಕ್ಕೆ ಸಂಬಂಧಪಟ್ಟ ’ವಿಜಯಭಾವ’ವಂತೂ ವಿಗತ ೩೦೦೦ ವರ್ಷಗಳಿಂದ ಮಹಾಸರಸ್ವತೀಶಕ್ತಿಯ ಉಪಾಸಕ ಬ್ರಾಹ್ಮಣರಿಂದ, ಮಹಾಕಾಲೀ ಉಪಾಸಕ ಕ್ಷತ್ರಿಯರಿಂದ, ಹಾಗೂ ಮಹಾಲಕ್ಷ್ಮಿಯ ಉಪಾಸಕ ವೈಶ್ಯರಿಂದ ಉಪಹಾಸಾಸ್ಪದವೆಂದೇ ಪ್ರಮಾಣಿತವಾಗುತ್ತಾ ಬರುತ್ತಿದೆ. ಆದ್ದರಿಂದ ಉಪಹಾಸವು ಉತ್ತರೋತ್ತರವಾಗಿ ಜಾಗರೂಕವಾಗುತ್ತಾ ಬರುತ್ತಿದೆ, ನಿಗಮಾಗಮಮೂಲಕ-ಸಾಂಸ್ಕೃತಿಕ-ಶಕ್ತಿಪ್ರವಾಹವು ವಿಗತ ೩೦೦೦ ವರ್ಷಗಳಿಂದ ಅವರುದ್ಧವೇ ಆಗುತ್ತಿದೆ. ಈ ಅವರೋಧಕ್ಕೆ ನಾವು ಪ್ರಧಾನ ದೋಷಿಗಳೆಂದು ಯಾವ ವ್ಯಕ್ತಿಗಳಿಗೆ ಹೇಳುತ್ತೇವೆಂದರೆ, ಯಾರು ಸತ್ತಾಶ್ರಯದ ವ್ಯಾಮೋಹದಿಂದ ಆಸಕ್ತರಾಗಿ ತಮ್ಮ ಸಾಂಸ್ಕೃತಿಕ-ನಿಷ್ಠೆಯನ್ನು ಕಪರ್ದಿಕ-ಖಂಡಗಳ ವ್ಯಾಮೋಹದಲ್ಲಿಯೇ ಮಾರಾಟ ಮಾಡಿದ್ದಾರೋ ಅವರಿಗೆ! ಬ್ರಾಹ್ಮಣನಿಷ್ಠೆಯ ಪತನದಿಂದಲೇ ಸಂಸ್ಕೃತಿ, ತನ್ಮೂಲಕ ನಿಗಮಾಗಮ ಸಾಹಿತ್ಯದ ಸಶಕ್ತ-ಓಜಪೂರ್ಣ-ತಥ್ಯವಂತೂ ಅಂತರ್ಮುಖವಾಯಿತು ಹಾಗೂ ಆ ಸ್ಥಾನದಲ್ಲಿ ಶಕ್ತಿಹೀನತಾಪ್ರವರ್ತಕ ಕಲ್ಪಿತ ಅಹಿಂಸೆ-ದಯೆ-ಕರುಣೆ ಇತ್ಯಾದಿ ಪಶುಭಾವಗಳು ಜಾಗೃತವಾದವು. ರಾಷ್ಟ್ರದ ಪೌರುಷಶಕ್ತಿಗಳು, ವೀರಶಕ್ತಿಗಳು, ಸಾಹಸಶಕ್ತಿಗಳು, ಕರ್ಮಠಶಕ್ತಿಗಳು ಈ ಶೂನ್ಯವಾದದ ಜಾಲದಲ್ಲಿ ಸಿಲುಕಿಕೊಂಡು-’ಹೋದ್ರೆ ಹೋಗ್ಲಿ ಬಿಡಿ’-’ಪಾಪ ತಟ್ಟುತ್ತೆ’-ಇತ್ಯಾದಿ ಷಂಢಭಾವಗಳ ಅನುಗಾಮಿನಿಯೇ ಆಗಿಬಿಟ್ಟಿದೆ. ರಾಷ್ಟ್ರದ ಬ್ರಹ್ಮವರ್ಚಸ್ವವು ತಿರೋಹಿತವಾಯಿತು, ಕ್ಷಾತ್ರ ಭ್ರಾಜತೇಜವು ವಿಲೀನವಾಯಿತು, ವಿಡನುಗತ ಸುಮ್ನಭಾವವು ಪಲಾಯಿತವಾಯಿತು, ನಾಲ್ಕನೆಯ ವರ್ಣಾನುಗತ ದ್ಯುಮ್ನಭಾವವು ಸ್ಮೃತಿಗರ್ಭದಲ್ಲಿ ವಿಲೀನವಾಯಿತು. ಅಮರ್ಷಶೂನ್ಯ ಜಂತುಮಾತ್ರದ ಕೋಟಿಯಲ್ಲಿ ಆಗತ-ಸಮಾಗತ-ಭಾರತೀಯ ಮಾನವರ ಈ ಲೋಕ, ಈ ರಾಷ್ಟ್ರವು ಹೀಗೆ ಅರಕ್ಷಿತವಾಯಿತು. ನಾವು ಅಹಿಂಸೆ-ಅಹಿಂಸೆ-ದಯೆ-ದಯೆ ಎಂದು ಭಿಕ್ಷೆ ಬೇಡುತ್ತಿದ್ದೆವು ಹಾಗೂ ಹಿಂಸಕ-ನಿರ್ದಯಿ- ಆತತಾಯಿಗಳು ನಮ್ಮಂತಹಾ ಪೌರುಷಶೂನ್ಯರ ಸರ್ವಸ್ವವನ್ನೂ ದೋಚುತ್ತಲೇ ಬಂದರು. ಸಂಸ್ಕೃತಿ ಹೋಯಿತು, ಸಾಹಿತ್ಯ ಹೋಯಿತು, ಧರ್ಮ ಹೋಯಿತು, ಪೌರುಷ ಹೋಯಿತು, ಸಾಹಸ ಹೋಯಿತು, ಉದ್ಯಮ ಹೋಯಿತು, ಪರಾಕ್ರಮ ಹೋಯಿತು, ಬಲ-ವೀರ್ಯ-ಎಲ್ಲವೂ ಹೋದವು. ಉಳಿದದ್ದು ಕೇವಲ-ದಯನೀಯ-ದಾಸಭಾವ. ಇದೇ ಈ ರಾಷ್ಟ್ರದ ಶಕ್ತಿಪೂಜೆಯ ಸ್ವರೂಪವಾಗಿತ್ತೇ? ಇದೇ ತಥ್ಯವು ಶಕ್ತ್ಯುಪಾಸನೆಯಾಗಿತ್ತೇ? ಈ ಉತ್ಸವಪರ್ವಗಳ ಆಯೋಜನಾತ್ಮಕ ವಿಜೃಂಬಣೆಗಳ ಸುಪರಿಣಾಮ ಇದೇನಾ? ವಿವಾಹಾದಿ-ಪುತ್ರ-ಜನನಾದಿ ಉತ್ಸವಗಳಲ್ಲಿ ಸಮಾಗತ ನಟ-ವಿಟ-ಭಾಂಡ-ಷಂಢ ಇತ್ಯಾದಿಗಳಿಂದ ಪ್ರದರ್ಶಿತ ಅಜ್ಜಾ, ಅಣ್ಣಾ ಎಂಬ ಕುಣಿತಗಳ ಹೆಸರೇ ಸಾಂಸ್ಕೃತಿಕ-ಆಯೋಜನೆಯಾಗಿತ್ತೇ? ಇಂತಹಾ ಕುತೂಹಲಾತ್ಮಕ ಆಯೋಜನೆಗಳ ಬಲದಲ್ಲಿಯೇ ಭಾರತ ರಾಷ್ಟ್ರವು ತನ್ನ ವೈರಾಜ್ಯ-ಸಾರ್ವಭೌಮ-ಚಕ್ರವರ್ತಿತ್ವ-ಸಾಮ್ರಾಜ್ಯ-ರಾಜ್ಯಾದಿ ವೈಭವಗಳನ್ನು ಸುರಕ್ಷಿತವಾಗಿರಿಸಲು ಸಫಲತೆ ಪ್ರಾಪ್ತಗೊಳಿಸಿಕೊಂಡಿತ್ತೇ? ಇವೇ ಪ್ರಶ್ನೆಗಳು, ಈ ಪರ್ವೋತ್ಸವಗಳ ಯಶೋಗಾಥೆಯ ಜೊತೆಜೊತೆಯಲಿ ಪ್ರತಿಯೋರ್ವ ಪ್ರಜ್ಞಾಶೀಲರ ಆಂತರ್ಮನದಲ್ಲಿ ಮಹತೀ ವೇದನೆ ಉತ್ಪನ್ನ ಮಾಡುತ್ತಿರಬಹುದು. ಹೇಗೆ ಈ ವೇದನೆಯು ಶಾಂತವಾಗುವುದು? ಹೇಗೆ ನಮ್ಮ ರಾಷ್ಟ್ರವು ಸಶಕ್ತವಾಗುವುದು? ಹೇಗೆ ಈ ಶಕ್ತಿಪೂರ್ವಕ ವಿಜಯಲಾಭ ಪಡೆಯುತ್ತಾ ವಾಸ್ತವಿಕರೂಪದಿಂದ ವಿಜಯದಶಮೀಪರ್ವವೆಂಬ ಸಾಂಸ್ಕೃತಿಕ-ಆಯೋಜನೆಯನ್ನು ನಂಬುವುದು-ನಂಬಿಸುವುದರ ಅಧಿಕಾರ ಪಡೆಯುವುದು? ಇತ್ಯಾದಿ ಆಯಾಯ ಪ್ರಶ್ನೆಗಳಿಗೆ ತತ್ಕಾಲದಲ್ಲಿ ಏಕಮಾತ್ರ ಸಮಾಧಾನವೆಂದರೆ ಸತ್ತಾನಿರಪೇಕ್ಷತೆ ಹಾಗೂ ವಣಿಕ್-ನಿರಪೇಕ್ಷತೆ”, ಅಂದರೆ ಸರ್ವನಿರಪೇಕ್ಷತೆಯಿಂದ ಮೊತ್ತಮೊದಲು ಭಾರತೀಯ ಮೂಲಸಂಸ್ಕೃತಿಯ ಮೌಲಿಕ ಸ್ವರೂಪದ ಆವಿರ್ಭಾವವೆಂದೇ ನಂಬಲಾಗುತ್ತದೆ. ತದನಂತರ ಈ ಮೂಲಧರಾತಲದ ಮಾಧ್ಯಮದಿಂದಲೇ ಅನ್ಯ ವೇದನೆಗಳ ನಿವೃತ್ಯುಪಾಯವೂ ಹುಡುಕಲು ಸಾಧ್ಯ. ನಾನ್ಯಃ ಪನ್ಥಾ ವಿದ್ಯತೇ ಅಯನಾಯ.

ಇಲ್ಲಿಗೆ ಬುದ್ಧಿನಿಷ್ಠ-ರಾಷ್ಟ್ರವ್ಯವಸ್ಥಾಪಕ-ಕ್ಷತ್ರಿಯಾನುಗತಾ-ರಾಷ್ಟ್ರೀಯ-’ವಿಜಯದಶಮೀಪರ್ವ’ದ ಸ್ವರೂಪಮೀಮಾಂಸೆಯು ಮುಕ್ತಾಯವಾಯಿತು. 

ಒಂದೇ ಮಾತರಂ!

[ಋತ್ವಿಕ್ ವಾಣಿ, ಅಕ್ಟೋಬರ್ ೨೦೧೯ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.]

- ಹೇಮಂತ್ ಕುಮಾರ್ ಜಿ


Thursday, 3 October 2019

ತಾತ್ತ್ವಿಕವೇದ ಮತ್ತು ಪ್ರಮಾಣವಾದ ಲೇಖನ ಸರಣಿ ೩೪-೫೧೩೪. ಚತುಷ್ಪಾದ ಸಾಮ, ಹಾಗೂ ವೇದಚತುಷ್ಟಯೀ -

(ಸೂರ್ಯ್ಯವೇದಃ)

೩೬- "ಸ ಹೋವಾಚ ಪ್ರಜಾಪತಿಃ-ಅಗ್ನಿರ್ವೈ ದೇವಾ ಇದಂ ಸರ್ವಂ ವಿಶ್ವಾ ಭೂತಾನಿ | ಪ್ರಾಣ ವಾ ಇನ್ದ್ರಿಯಾಣಿ, ಪಶವೋಽನ್ನಂ ಅಮೃತಂ ಸಮ್ರಾಟ್-ಸ್ವರಾಟ್-ವಿರಾಟ್ | ತತ್ಸಾಮ್ನಃ ಪ್ರಥಮಂ ಪಾದಂ ಜಾನೀಯಾತ್ | ಋಗ್-ಯಜುಃ-ಸಾಮಾ-ಥರ್ವರೂಪಃ ಸೂರ್ಯ್ಯೋಽನ್ತರಾದಿತ್ಯೇ ಹಿರಣ್ಮಯಃ ಪುರುಷಃ | ತತ್ ಸಾಮ್ನೋ ದ್ವಿತೀಯಂ ಪಾದಂ ಜಾನೀಯಾತ್ | ಯ ಓಷಧೀನಾಂ ಪ್ರಭುಭವತಿ, ತಾರಾಧಿಪತಿಃ ಸೋಮಃ, ತತ್ ಸಾಮ್ನಸ್ತೃತೀಯಂ ಪಾದಂ ಜಾನೀಯಾತ್ | ಸ ಬ್ರಹ್ಮಾ, ಸ ಶಿವಃ, ಸ ಹರಿಃ, ಸೇನ್ದ್ರಃ, ಸೋ-ಕ್ಷರಃ ಪರಮಃ ಸ್ವರಾಟ್ | ತತ್ ಸಾಮ್ನಶ್ಚತುರ್ಥಂ ಪಾದಂ ಜಾನೀಯಾತ್ | ಯಾ ಜಾನೀತೇ, ಸೋಽಮೃತತ್ತ್ವಂ ಗಚ್ಛತಿ" |
- ನೃಸಿಂಹ ಪುರಾಣ ೧|

"ಪ್ರಜಾಪತಿ ಹೇಳಲಾರಂಭಿಸಿತು - ಅಗ್ನಿಯೇ ಸಂಪೂರ್ಣ (೩೩) ದೇವತಾ ಆಗಿದೆ, ಇದೇ ಸಂಪೂರ್ಣ (೫) ಭೂತವಾಗಿದೆ. ಪ್ರಾಣವೇ ಇಂದ್ರಿಯಗಳಾಗಿವೆ, ಪಶುವೇ ಅನ್ನವು, ಅಮೃತವೇ ಸಮ್ರಾಟ್, ಸ್ವರಾಟ್, ವಿರಾಟ್ ಆಗಿದೆ. ಇದನ್ನೇ ಸಾಮದ ಮೊದಲ ಪರ್ವವೆಂದು ತಿಳಿಯತಕ್ಕದ್ದು. ಋಕ್-ಯಜುಃ-ಸಾಮ ಅಥರ್ವರೂಪೀ ಸೂರ್ಯ. ಸೂರ್ಯ ಕೇಂದ್ರದಲ್ಲಿ ಪ್ರತಿಷ್ಠಿತ ಹಿರಣ್ಮಯ ಪುರುಷವೇ ಸಾಮದ ಎರಡನೆಯ ಪರ್ವವಾಗಿದೆ. ಯಾವುದು ಓಷಧೀಪತಿಯೋ, ನಕ್ಷತ್ರಾಧಿಪತಿಯೋ, ಅದೇ ಸೋಮವಾಗಿದೆ (ಚಂದ್ರಮಾ). ಇದನ್ನೇ ಸಾಮದ ಮೂರನೆಯ ಪರ್ವವೆಂದು ನಂಬತಕ್ಕದ್ದು. ಅದೇ ಪ್ರಜಾಪತಿಯು ಬ್ರಹ್ಮ, ಶಿವ, ವಿಷ್ಣು, ಇಂದ್ರವಾಗಿದೆ. ಅದೇ ಅಕ್ಷರಾತ್ಮಕ ಪರಮ ಸ್ವರಾಟ್ ಆಗಿದೆ. ಹಾಗೂ ಇದನ್ನೇ ಸಾಮದ ನಾಲ್ಕನೆಯ ಪರ್ವವೆಂದು ತಿಳಿಯತಕ್ಕದ್ದು. ಯಾರು ಸಾಮದ ಈ ನಾಲ್ಕೂ ಪರ್ವಗಳನ್ನು ತಿಳಿಯುತ್ತಾರೋ, ಅವರು ಅಮೃತತ್ವವನ್ನು ಪಡೆಯುತ್ತಾರೆ".

ಪ್ರಕೃತ ಶ್ರುತಿಯು ಸಪ್ತವಿತಸ್ತಿಕಾಯಾತ್ಮಕ ವಿಶ್ವಸಾಮದ ನಾಲ್ಕೂ ಪಾದಗಳ ಸ್ಪಷ್ಟೀಕರಣ ನೀಡಿದೆ. ಸಂಪೂರ್ಣ ವಿಶ್ವವನ್ನು ’ಪ್ರಜಾಪತಿ, ಅಗ್ನಿ, ಸೂರ್ಯ್ಯ, ಚನ್ದ್ರಮಾ’ ಈ ನಾಲ್ಕು ಪರ್ವಗಳಲ್ಲಿ ವಿಭಕ್ತಗೊಳಿಸಬಹುದು. ಸ್ವಯಮ್ಭೂ, ಹಾಗೂ ಪರಮೇಷ್ಠೀ ಈ ಎರಡೂ ಅವ್ಯಕ್ತಗಳ ಸಮಷ್ಟಿ ಒಂದು ಅವ್ಯಕ್ತ ಪರ್ವವಾಗಿದೆ; ಇದನ್ನೇ ಪ್ರಜಾಪತಿಪರ್ವ ಎಂದು ಹೇಳಬಹುದು. ಸೂರ್ಯ್ಯ ಒಂದು ಪರ್ವವು, ಚನ್ದ್ರಮಾ ಒಂದು ಪರ್ವವು, ಹಾಗೂ ಅಗ್ನಿಮಯೀ ಪೃಥಿವೀ, ಅಂದರೆ ಅಗ್ನಿ ಒಂದು ಪರ್ವವಾಗಿದೆ. ಮಹಾವಿಶ್ವಸೀಮಾತ್ಮಕ ಮಹಾಸಾಮದ ಇದೇ ನಾಲ್ಕು ಪಾದಗಳು, ಅಂದರೆ ನಾಲ್ಕು ಪರ್ವಗಳಾಗಿವೆ. ಈ ನಾಲ್ಕೂ ಪರ್ವಗಳ ದಿಗ್ದರ್ಶನ ಮಾಡಿಸುತ್ತಾ ಶ್ರುತಿಯು ಎರಡನೆಯ ಪಾದದ ಲಕ್ಷಣವಾದ ಸೂರ್ಯ್ಯದ ಯಾವ ನಾಲ್ಕು ವೇದಗಳಿಂದ ಯುಕ್ತವೆಂದು ಹೇಳಲಾಗಿದೆಯೋ, ಆ ನಾಲ್ಕೂ ವೇದಗಳು ವಿಶುದ್ಧ ತತ್ತ್ವವಾದಕ್ಕೇ ಸಂಬಂಧಿಸಿದ್ದಾಗಿವೆ.

೩೫-ಉದ್ಗೀಥ ಮತ್ತು ವೇದತ್ರಯೀ

(ಉದ್ಗೀಥವೇದಃ)

೩೭-’ಅಥ ಖಲೂದ್ಗೀಥಾಕ್ಷರಾಣ್ಯುಪಾಸೀತ ’ಉದ್ಗೀಥ’ ಇತಿ | ಪ್ರಾಣ ಏವ ’ಉತ್’ | ಪ್ರಾಣೇನ ಹ್ಯುತ್ತಿಷ್ಠತಿ | ವಾಕ್-’ಗೀಃ’ | ವಾಚೋ ಹ ಗಿರ ಇತ್ಯಾಚಕ್ಷತೇ | ಅನ್ನಂ ’ಥಮ್’ | ಅನ್ನೇ ಹೀದಂ ಸರ್ವಂ ಸ್ಥಿತಮ್ | ದ್ಯೌರೇವ ’ಉತ್’, ಅನ್ತರಿಕ್ಷಂ ’ಗೀಃ’, ಪೃಥಿವೀ ’ಥಮ್’ | ಸಾಮವೇದ ಏವ ’ಉತ್’, ಯಜುರ್ವೇದೋ ’ಗೀಃ’, ಋಗ್ವೇದಃ ’ಥಮ್’ | ದುಗ್ಧೇಽಸ್ಮೈ ವಾಗ್ದೋಹಂ, ಯೋ ವಾಚೋದೋಹಃ | ಅನ್ನವಾನನ್ನಾದೋ ಭವತಿ, ಯ ಏತಾನ್ಯೇವಂ ವಿದ್ವಾನುದ್ಗಾಥಾಕ್ಷರಾಣ್ಯುಪಾಸ್ತೇ ’ಉದ್ಗೀಥ’ ಇತಿ"

- ಛಾನ್ದೋಗ್ಯೋಪನಿಷತ್ ೧||

ಭಾವಾರ್ಥ:- "ನಿಶ್ಚಯವಾಗಿ (ನಿನ್ನ ಉಪಾಸಕರು) ಉದ್ಗೀಥದ ’ಉತ್-ಗೀ-ಥಮ್’ ಈ ಅಕ್ಷರಗಳ ಉಪಾಸನೆ ಮಾಡಬೇಕು. ಪ್ರಾಣವೇ ’ಉತ್’ ಆಗಿದೆ, ಏಕೆಂದರೆ ಪ್ರಾಣದಿಂದಲೇ (ಸಮ್ಪೂರ್ಣ ಭೂತಗಳ) ಉತ್ಥಾನ (ಅಭಿವ್ಯಕ್ತಿ) ಆಗುತ್ತದೆ. ವಾಕ್ ’ಗೀಃ’ ಆಗಿದೆ. (ಆದ್ದರಿಂದಲೇ) ವಾಕ್ಕನ್ನು ’ಗಿರ’ ಎನ್ನಲಾಗಿದೆ. ಅನ್ನವು ’ಥಮ್’ ಆಗಿದೆ. ಅನ್ನಾಧಾರದಿಂದಲೇ ಸಮ್ಪೂರ್ಣ ಭೂತಪ್ರಪಞ್ಚವು ಪ್ರತಿಷ್ಠಿತವಾಗಿದೆ. ಆದಿತ್ಯವೇ ’ಉತ್’, ವಾಯು ’ಗೀಃ’, ಅಗ್ನಿಯು ’ಥಮ್’ ಆಗಿದೆ. (ಆದಿತ್ಯದಿಂದ ಅಭಿನ್ನ) ಸಾಮವೇದವೇ ’ಉತ್’ ಆಗಿದೆ, (ವಾಯುವಿನಿಂದ ಅಭಿನ್ನ) ಯಜುರ್ವೇದವೇ ’ಗೀಃ’ ಆಗಿದೆ, ಹಾಗೂ (ಅಗ್ನಿಯಿಂದ ಅಭಿನ್ನ) ಋಗ್ವೇದವೇ ’ಥಮ್’ ಆಗಿದೆ. ಆತನಿಗೆ (ಉಪಾಸಕ ತತ್ತ್ವದ್ರಷ್ಟನಿಗೆ) ವಾಗ್ದೋಹದ (ವಾಗ್ರಸದ) ದೋಹನ ಮಾಡಿಬಿಡುತ್ತದೆ (ಈ ಉದ್ಗೀಥ). ಹಾಗಾಗಿ ವಾಕ್ಕಿನ ದೋಹವು (ರಸವು) ಪ್ರಸಿದ್ಧವಾಗಿದೆ". ಈ ಶ್ರುತಿಯು ಉದ್ಗೀಥಾತ್ಮಿಕಾ ಯಾವ ತ್ರಯೀವೇದವನ್ನು ಸಙ್ಕೇತಿಯುತ್ತಿದೆಯೋ, ಅದು ನಿಶ್ಚಯವಾಗಿ ತತ್ತ್ವಾತ್ಮಕವೇ ಆಗಿದೆ."

೩೬-ದೇವಮಧು ಮತ್ತು ವೇದತ್ರಯೀ-

(ಮಧುವೇದಃ)-

೩೮- (ಕ) - ಅಸೌ ವಾ ಆದಿತ್ಯೋ ದೇವಮಧು | ತಸ್ಯ ಯೇ ಪ್ರಾಞ್ಚೋ ರಶ್ಮಯಸ್ತಾ ಏವಾಸ್ಯ ಪ್ರಾಚ್ಯೋ ಮಧುನಾಡ್ಯಃ, ಋಚ ಏವ ಮಧುಕೃತಃ, ಋಗ್ವೇದ ಏವ ಪುಷ್ಪಮ್ | ತಾ ಅಮೃತಾ ಆಪಸ್ತಾ ವಾ ಏತಾ ಋಚಃ | ಏತಮೃಗ್ವೇದಮಭ್ಯತಪನ್ | ತಸ್ಯಾಭಿತಪ್ತಸ್ಯ ಯಶಸ್ತೇಜ ಇನ್ದ್ರಿಯಂ ವೀರ್ಯ್ಯಮನ್ನಾದ್ಯಂ ರಸೋಽಜಾಯತ | ತದ್ವಾ ಏತದ್ಯದೇತದಾದಿತ್ಯಸ್ಯ ರಾಹಿತಂ ರೂಪಮ್ |

(ಖ) - ಅಥ ಯೇಽಸ್ಯ ದಕ್ಷಿಣಾ ರಶ್ಮಯಸ್ತಾ ಏವಾಸ್ಯ ದಕ್ಷಿಣಾ ಮಧುನಾಡ್ಯಃ, ಯಜೂಂಷ್ಯೇವ ಮಧುಕೃತಃ, ಯಜುರ್ವೇದ ಏವ ಪುಷ್ಪಮ್ | ತಾ ಅಮೃತಾ ಆಪಃ | ತಾನಿ ವಾ ಏತಾನಿ ಯಜೂಂಷಿ | ಏತಂ ಯಜುರ್ವೇದಮಭ್ಯತಪನ್ | ತಸ್ಯಾಭಿತಪ್ತಸ್ಯ ಯಶ.. | ತದ್ವಾ ಏತದ್ಯದೇತದಾದಿತ್ಯಸ್ಯ ಶುಕ್ಲಂ ರೂಪಮ್ |

(ಗ) - ಅಥ ಯೇಽಸ್ಯ ಪ್ರತ್ಯಞ್ಚೋ ರಶ್ಮಯಸ್ತಾ ಏವಾಸ್ಯ ಪ್ರತೀಚ್ಯೋ ಮಧುನಾಡ್ಯಃ, ಸಾಮಾನ್ಯೇವ ಮಧುಕೃತಃ, ಸಾಮವೇದ ಏವ ಪುಷ್ಪಮ್ | ತಾ ಅಮೃತಾ ಆಪಃ, ತಾಸಿ ವಾ ಏತಾನಿ ಸಾಮಾನಿ | ಏತಂ ಸಾಮವೇದಮಭ್ಯತಪನ್ | ತಸ್ಯಾಭಿ.. | ತದ್ವಾ ಏತದ್ಯದೇತದಾದಿತ್ಯಸ್ಯ ಕೃಷ್ಣಂ ರೂಪಮ್ |

- ಛಾನ್ದೋಗ್ಯೋಪನಿಷತ್ ೩|

(ಕ) "ಆ ಆದಿತ್ಯವೇ ’ದೇವಮಧು’ (ಪ್ರಾಣರೂಪೀ ಮಧುವಿನ ಕೋಶ) ಆಗಿದೆ. ಅದರ ಯಾವ ಪೂರ್ವದಿಗನುಗತಾ ರಶ್ಮಿಗಳಿವೆಯೋ, ಅವುಗಳೇ ಇದರ ಪೂರ್ವದಿಗ್ ರೂಪಾ ಮಧುನಾಡಿಗಳಾಗಿವೆ. ತದನುಗತಾ ಋಚೆಗಳೇ ಮಧುಕೃತ (ಮಧುಗ್ರಾಹಕ ಭ್ರಮರ) ಆಗಿವೆ. (ಋಚೆಗಳ ಸಮಷ್ಟಿರೂಪ) ಋಗ್ವೇದವೇ ಪುಷ್ಪವು (ಮಧುರಸಪರಿಪೂರ್ಣ ಕೋಶವು). ಆ ರಸವು ಆಪಃ (ಪಾರಮೇಷ್ಠ್ಯ ಸೌಮ್ಯ ಆಪಃ) ಎಂಬುದೇ ಆಗಿದೆ. ಇದು ಅಮೃತ ಭಾವಾಪನ್ನವಾಗಿರುವುದರಿಂದ, ಇವೇ ಋಚೆಗಳಾಗಿವೆ. ಈ (ಮಧುರೂಪೀ) ಋಗ್ವೇದವನ್ನು ಲಕ್ಷ್ಯವನ್ನಾಗಿಸಿಕೊಂಡು ತಪಸ್ಸನ್ನಾಚರಿಸಲಾಯಿತು (ಪ್ರಜಾಪತಿಯು ತಪಿಸಿತು). ಮಧುರರಸರೂಪ ಋಚೆಗಳ ಅಭಿತಪ್ತ ರೂಪದಿಂದ ಯಶ (ಪ್ರಾಣ) ರೂಪೀ ಇನ್ದ್ರಿಯ ವೀರ್ಯ್ಯಾತ್ಮಕ ಅನ್ನಾದ (ಭೋಗ್ಯ) ರಸವು ಉತ್ಪನ್ನವಾಯಿತು. ಇದು ಯಾವ ಆದಿತ್ಯದ ಹಿರಣ್ಯಸಂಕಾಶಾತ್ಮಕ ತತ್ತ್ವ ರೂಪದಿಂದ ಪ್ರತ್ಯಕ್ಷ ದೃಷ್ಟವಾಗಿದೆಯೋ, ಅದೇ ಆಗಿದೆ.

(ಖ) - "ಆ ಆದಿತ್ಯದ ಯಾವ ದಕ್ಷಿಣ ದಿಗನುಗತಾ ರಶ್ಮಿಗಳಿವೆಯೋ, ಅವುಗಳೇ ಅದರ ದಕ್ಷಿಣದಿಗ್ ರೂಪಾ ಮಧುನಾಡಿಗಳು. ಯಜುಃ ಎಂಬುದೇ ಭ್ರಮರ, ಯಜುರ್ವೇದವೇ ಪುಷ್ಪವು (ಶೇಷಪೂರ್ವವತ್). ಇದು ಪ್ರತ್ಯಕ್ಷದೃಷ್ಟ ಆದಿತ್ಯದ ಶುಕ್ಲರೂಪಿಯೇ (ಆಲೋಕರೂಪಿಯೇ)  (ಯಜುರ್ವೇದವೇ) ಆಗಿದೆ".

(ಗ) - "ಆ ಆದಿತ್ಯದ ಯಾವ ಪಶ್ಚಿಮ ದಿಗನುಗತಾ ರಶ್ಮಿಗಳಿವೆಯೋ, ಅವುಗಳೇ ಇದರ ಪಶ್ಚಿಮದಿಗ್ ರೂಪಾ ಮಧುನಾಡಿಗಳು. ಸಾಮವೇ ಭ್ರಮರ, ಸಾಮವೇದವೇ ಪುಷ್ಪವು (ಶೇಷಪೂರ್ವವತ್). ಆದಿತ್ಯದ ಮೌಲಿಕ ಕೃಷ್ಣ ರೂಪವು ಇದುವೇ (ಸಾಮವೇದವೇ) ಆಗಿದೆ". ಉದಾ -

ಆ ಕೃಷ್ಣೇನರಜಸಾ ವರ್ತ್ತಮಾನೋ ನಿವೇಶಯನ್ನಮೃತಂ ಮರ್ತ್ಯಂ ಚ |
ಹಿರಣ್ಯಯೇನ ಸವಿತಾ ರಥೇನಾ ದೇವೋ ಯಾತಿ ಭುವನಾನಿ ಪಶ್ಯವಮ್ ||
- ಯಜುಃ ಸಂ ೩೩|೪೩|

ಉಕ್ತ ಅಕ್ಷರಾರ್ಥದಿಂದ ಸಮನ್ವಿತ ಛಾನ್ದೋಗ್ಯಶ್ರುತಿಯು ಮಧು-ಭ್ರಮರ-ಮಧುನಾಡೀ ಇತ್ಯಾದಿಯ ಸ್ವರೂಪವಿಶ್ಲೇಷಣೆ ಮಾಡುತ್ತಾ ಯಾವ ತ್ರಯೀವೇದದತ್ತ ನಮ್ಮ ಧ್ಯಾನವನ್ನು ಆಕರ್ಷಿಸಿದೆಯೋ, ನಿಶ್ಚಯವಾಗಿ ಅದು ತತ್ತ್ವಾತ್ಮಕ ವೇದವೇ ಆಗಿದೆ. ಇದನ್ನು ಶಬ್ದಾತ್ಮಕ ವೇದದ ಮಾಧ್ಯಮದಿಂದ ಹೇಗೇಗೋ ಸಮನ್ವಯಗೊಳಿಸಲಾಗುವುದಿಲ್ಲ.

೩೭. ಅಮೃತ ಸ, ಮತ್ತು ವೇದತ್ರಯೀ -

(ರಸವೇದಃ)-

(೩೯)-"ತೇ ವಾ ಏತೇ ರಸಾನಾಂ ರಸಾಃ | ವೇದಾ ಹಿ ರಸಾಃ | ತೇಷಾಮೇತೇ ರಸಾಃ ತಾನಿ ವಾ ಏತಾನ್ಯಮೃತಾನಿ, ಅಮೃತಾನಾಮಮೃತಾನಿ | ವೇದಾ ಹ್ಯಮೃತಾಃ ತೇಷಾಮೇತಾನ್ಯಮೃತಾನಿ"
- ಛಾಂ.ಉಪ. ೩|

"ರೋಹಿತ-ಶುಕ್ಲ-ಕೃಷ್ಣ ವರ್ಣಾತ್ಮಕ ಆದಿತ್ಯ ಪ್ರಾಣವು ರಸಗಳ ರಸವಾಗಿದೆ. ವೇದವೇ ರಸವಾಗಿದೆ. ಅವುಗಳ ಈ ಪ್ರಾಣವು ರಸವಾಗಿದೆ. ಈ ಆದಿತ್ಯಪ್ರಾಣವು ಅಮೃತಭಾವಾಪನ್ನವಾಗಿದೆ, (ಅಮೃತರಸಾತ್ಮಕ ವೇದಗಳ ರಸವಾಗುತ್ತಾ) ಅಮೃತಗಳ ಅಮೃತವಾಗಿದೆ. ವೇದವು ನಿಶ್ಚಯವಾಗಿ ಅಮೃತವಾಗಿದೆ. ಇವುಗಳ ಈ ಪ್ರಾಣವು ಅಮೃತವಾಗಿದೆ", ಇತ್ಯಾದಿ ಶ್ರುತಿಯು ಯಾವ ಅಮೃತವೇದತ್ರಯಿಯ ಸ್ಪಷ್ಟೀಕರಣ ಮಾಡುತ್ತಿದೆ. ಅದು ತತ್ತ್ವವೇದದ ಹೊರತು ಇನ್ನೇನಾಗಿರಲು ಸಾಧ್ಯ?

೩೮. ಅಧಿದೇವತ, ಮತ್ತು ವೇದತ್ರಯೀ -

(ಅಧಿದೈವತವೇದಃ)-

(೪೦)-"ಇಯಮೇವ ಋಕ್, ಅಗ್ನಿಃ ಸಾಮ | ತದೇತಸ್ಯಾಮೃಚಿ-ಅಧ್ಯೂಢಂ ಸಾಮ | ತಸ್ಮಾದೃಚ್ಯಧ್ಯೂಢಂ ಸಾಮ ಗೀಯತೇ | ಇಯಮೇವ ’ಸಾ’, ಅಗ್ನಿಃ, ಅಮಃ, ತತ್ ಸಾಮ (೧) | ಅನ್ತರಿಕ್ಷಮೇವ-ಋಕ್, ವಾಯುಃ ಸಾಮ (೨) | ದ್ಯೌರೇವ ಋಕ್, ಆದಿತ್ಯಃ ಸಾಮ (೩) | ನಕ್ಷತ್ರಾಣ್ಯೇವ ಋಕ್, ಚನ್ದ್ರಮಾಃ ಸಾಮ (೪) | ಅಥ ಯದೇತದಾದಿತ್ಯಸ್ಯ ಶುಕ್ಲಂ ಭಾಃ, ಸೈವ ಋಕ್ | ಅಥ ಯನ್ನೀಲಂ ಪರಃ ಕೃಷ್ಣಂ, ತತ್ ಸಾಮ (೫) | ಇತ್ಯಧಿದೈವತಮ್" (ಛಾಂ.ಉಪ. ೧|೮) |

"ಈ ಪೃಥಿವಿಯೇ ಋಕ್, ಅಗ್ನಿ ಸಾಮವು. ಹಾಗಾಗಿ ಈ ಪೃಥಿವೀರೂಪಾ ಋಕ್ಕಿನಲ್ಲಿ ಸಾಮವು ಅಧ್ಯೂಢ (ಉಪರಿ ಪ್ರತಿಷ್ಠಿತ) ಆಗಿದೆ. ಆದ್ದರಿಂದ (ಶಬ್ದಾತ್ಮಕ-ಮನ್ತ್ರಾತ್ಮಕ ಕರ್ಮ್ಮಗಳಲ್ಲಿ) ಋಕ್ಕಿನ ಮೇಲೆ ಅಧ್ಯೂಢವೇ ಸಾಮದ ಗಾನ ಮಾಡಲಾಗುತ್ತದೆ (ಅಂದರೆ ಋಙ್ಮನ್ತ್ರದ ಆಧಾರದಲ್ಲಿ ಸಾಮಮತ್ರದ ಗಾನವಾಗುತ್ತದೆ. ಏಕೆಂದರೆ ತತ್ತ್ವಾತ್ಮಕ ವೇದವೇ ತತ್ತ್ವಾತ್ಮಿಕಾ ಋಕ್ಕಿನ ಮೇಲೆಯೇ ತತ್ತ್ವಾತ್ಮಕ ಸಾಮಮಣ್ಡಲದ ವಿಸ್ತಾರಾತ್ಮಕ ಗಾನವಾಗುತ್ತಿದೆ). ಈ ಪೃಥಿವಿಯೇ ’ಸಾ’ ಆಗಿದೆ, ತದ್ಗರ್ಭೀಭೂತ ಅಗ್ನಿಯು ’ಅಮಃ’ ಆಗಿದೆ, ಎರಡರ ಸಮಷ್ಟಿಯೇ ’ಸಾಮ’ ಆಗಿದೆ. ಅನ್ತರಿಕ್ಷವೇ ’ಋಕ್’ ಆಗಿದೆ, ವಾಯುವು ’ಸಾಮ’ವಾಗಿದೆ. ದ್ಯೌ ಎಂಬುದೇ ’ಋಕ್’, ಆದಿತ್ಯವು ’ಸಾಮ’ವಾಗಿದೆ. ನಕ್ಷತ್ರಗೋಲಕವೇ ’ಋಕ್’, ಚನ್ದ್ರಮಾ ’ಸಾಮ’ವು. ಇದು ಆದಿತ್ಯದ (ಸೂರ್ಯ್ಯದ) ಶುಕ್ಲ ತೇಜ (ಪ್ರಕಾಶ) ಆಗಿದೆ, ಹಾಗೂ ಪ್ರಕಾಶಮಣ್ಡಲದ ನಾಲ್ಕೂ ಕಡೆ ವ್ಯಾಪ್ತ ಪರಸ್ಥಾನೀಯ (ಪಾರಮೇಷ್ಠ್ಯ), ಯಾವುದು ನೀಲಕೃಷ್ಣಮಣ್ಡಲ (ಆಕಾಶಮಣ್ಡಲ) ಆಗಿದೆ, ಅದೇ ’ಸಾಮ’ವು. ಹಾಗೂ ಇದೇ ಅಧಿದೈವತಮಣ್ಡಲದ ಸ್ವರೂಪಪರಿಚಯವು" ಇತ್ಯಾದಿ ರೂಪದಿಂದ ಛಾನ್ದೋಗ್ಯಶ್ರುತಿಯು ಯಾವ ಋಕ್-ಸಾಮಗಳ ಸ್ವರೂಪವಿಶ್ಲೇಷಣೆ ಮಾಡಿದೆಯೋ, ಅದು ತತ್ತ್ವಾತ್ಮಕವೇ ಆಗಿರಲು ಸಾಧ್ಯ. ಶಬ್ದಾತ್ಮಕ ಋ-ಸಾಮದ ಅಕ್ಷರದ ಮೇಲೆಯೇ ಹೇಗೇಗೋ ಈ ಶ್ರುತಿಯ ಸಮನ್ವಯಗೊಳಿಸಲು ಸಾಧ್ಯವಿಲ್ಲ.

೩೯-ಅಧ್ಯಾತ್ಮ, ಮತ್ತು ವೇದತ್ರಯೀ -

(ಅಧ್ಯಾತ್ಮವೇದಃ)-

(೪೧)-"ಅಥಾಧ್ಯಾತ್ಮಂ-ವಾಗೇವ ಋಕ್, ಪ್ರಾಣಃ ಸಾಮಃ | ತದೇತದೇತಸ್ಯಾಮೃಚ್ಯಧ್ಯೂಢಗ್ಂ ಸಾಮ | ತಸ್ಮಾದೃಚ್ಯಧೂಢಗ್ಂ ಸಾಮ ಗೀಯತೇ | ವಾಗೇವ ’ಸಾ’ ಪ್ರಾಣೋಽಮಃ, ತತ್ ಸಾಮ (೧) | ಚಕ್ಷುರೇವ ಋಕ್, ಆತ್ಮಾ ಸಾಮ (೨) | ಶ್ರೋತ್ರಮೇವ ಋಕ್, ಮನಃ ಸಾಮ (೩) | ಅಥ ಯದೇತದಕ್ಷ್ಣಃ ಶುಕ್ಲಂ ಭಾಃ ಸೈವ ಋಕ್ | ಅಥ ಯನ್ನೀಲಂ ಪರಃ ಕೃಷ್ಣಂ ತತ್ ಸಾಮ | ಅಥ ಯ ಏಷೋಽನ್ತರಿಕ್ಷಿಣಿ ಪುರುಷೋ ದೃಶ್ಯತೇ, ಸೈವ ಋಕ್, ತತ್ ಸಾಮ, ತದುಕ್ಥಂ, ತದ್ಯಜುಃ, ತದ್ ಬ್ರಹ್ಮ | ತಸ್ಯೈತಸ್ಯ ತದೇವ ರೂಪಂ, ಯದಮುಷ್ಯ ರೂಪಮ್ | ಯಾವಮುಷ್ಯ ಗೇಷ್ಣೌ, ತೌ ಗೇಷ್ಣೌ | ಯನ್ನಾಮ, ತನ್ನಾಮ |"
- ಛಾಂ. ಉಪ. ೧|

"ಇದು ಅಧ್ಯಾತ್ಮವಿವರ್ತ್ತವು - ವಾಕ್ ಎಂಬುದೇ ’ಋಕ್’ ಆಗಿದೆ, ಪ್ರಾಣವು ’ಸಾಮ’ವಾಗಿದೆ. ಹಾಗಾಗಿ ಈ ವಾಗ್ರೂಪಾ ಋಕ್ಕಿನಲ್ಲಿ ಪ್ರಾಣರೂಪ ’ಸಾಮ’ವು ಅಧ್ಯೂಢವಾಗಿದೆ. ಹಾಗಾಗಿ ಋಙ್ಮನ್ತ್ರದಲ್ಲಿ ಅಧ್ಯೂಢವಾಗಿ ಸಾಮಮನ್ತ್ರದ ಗಾನವಾಗುತ್ತದೆ. ವಾಕ್ ಎಂಬುದೇ ’ಸಾ’ ಆಗಿದೆ, ಪ್ರಾಣವು ’ಅಮಃ’ ಆಗಿದೆ, ಎರಡರ ಸಮಷ್ಟಿಯು ’ಸಾಮ’ವಾಗಿದೆ. ಶ್ರೋತ್ರವೇ ’ಋಕ್’ ಆಗಿದೆ, ಮನವು (ಪ್ರಜ್ಞಾನಮನ) ’ಸಾಮ’ವಾಗಿದೆ. ಹಾಗಾಗಿ ಯಾವುದಿದೆಯೋ, ಅದು "ಯಜುಃ" ಆಗಿದೆ, ಅದು ಬ್ರಹ್ಮ (ಪ್ರತಿಷ್ಠಾ) ಆಗಿದೆ. ಇದರ ರೂಪವು ಅಧಿದೈವತದ ರೂಪವೇ ಆಗಿದೆ. ಯಾವ ಅಧಿದೈವತದ ವಿತಾನಭಾವವಿದೆಯೋ, ಅದೇ ಈ ಅಧ್ಯಾತ್ಮದ ವಿತಾನಭಾವವು. ಯಾವ ಹೆಸರು ಅಧಿದೈವತಕ್ಕಿದೆಯೋ, ಅದೇ ಹೆಸರು ಅಧ್ಯಾತ್ಮಕ್ಕಿದೆ" ಇತ್ಯಾದಿ ಶ್ರುತಿಯ ಚಾಕ್ಷುಷ ಪುರುಷಾತ್ಮಕ ಋ-ಯಜುಃ-ಸಾಮಗಳೇನು ಶಬ್ದಾತ್ಮಕ ವೇದಗಳೇ? ಅಲ್ಲ, ಅಲ್ಲವೇಅಲ್ಲ! ಕೇವಲ ಶಬ್ದವೇದದ ಮೇಲೆಯೇ ತಮ್ಮ ವೇದನಿಷ್ಠೆಯನ್ನು ಕೊನೆಗೊಳಿಸುವ ವೇದಭಕ್ತರಿಗೆ ಕಣ್ತೆರೆದು ತಾವಾಗಿಯೇ ಈ ಪ್ರಶ್ನೆಯ ಮೀಮಾಂಸೆಯನ್ನು ಮಾಡಬೇಕಿದೆ.

೪೦-ಸರ್ವೋಙ್ಕಾರ ಮತ್ತು ವೇದತ್ರಯೀ -

(ಪ್ರಣವವೇದಃ)-

(೪೨)-"ಪ್ರಜಾಪತಿರ್ಲೋಕಾನಭ್ಯತಪತ್ | ತೇಭ್ಯೋಽಭಿತಪ್ತೇಭ್ಯಸ್ತ್ರಯೀವಿಧ್ಯಾ ಸಮ್ಪ್ರಾಸ್ರವತ್ | ತಾಮಭ್ಯತಪತ | ತಸ್ಯಾ ಅಭಿತಪ್ತಾಯಾ ಏತಾನ್ಯಕ್ಷರಾಣಿ ಸಮ್ಪ್ರಾಸ್ರ್ವನ್ತ-ಭೂರ್ಭುವಃಸ್ವರಿತಿ | ತಾನ್ಯಭ್ಯತಪತ | ತೇಭ್ಯಽಭಿತಪ್ತೇಭ್ಯ ಓಙ್ಕಾರಃ ಸಮ್ಪ್ರಾಸ್ರವತ್ | ತದ್ಯಥಾ ಶಙ್ಕುನಾ ಸರ್ವಾಣಿ ಪರ್ಣಾನಿ ಸನ್ತೃಣಾನಿ, ಏವಮೋಙ್ಕಾರೇಣ ಅರ್ವಾ ವಾಕ್ ಸನ್ತೃಣಾ | ಓಙ್ಕಾರ ಏವೇದಂ ಸರ್ವಮ್"
- ಛಾಂ.ಉಪ. ೨|೨೩|೧-೨

"ಪ್ರಜಾಪತಿಯು ಮೂರು ಲೋಕಗಳನ್ನು ತಪಿಸಿತು. ಆ ಅಭಿತಪ್ತ-ಸನ್ತಪ್ತ ಮೂರೂ ಲೋಕಗಳಿಂದ ತ್ರಯೀವಿಧ್ಯಾ ಪ್ರಸ್ರುತವಾಯಿತು. ಈ ತ್ರಯೀವಿಧ್ಯೆಯನ್ನೂ ಪ್ರಜಾಪತಿಯು ತಪಿಸಿತು. ಈ ಅಭಿತಪ್ತ-ಸನ್ತಪ್ತ ತ್ರಯೀವಿಧ್ಯೆಯಿಂದ ಭೂಃ-ಭುವಃ-ಸ್ವಃ ಎಂಬ ಮೂರು ಅಕ್ಷರಗಳು ಪ್ರಸ್ರುತವಾದವು. ಪ್ರಜಾಪತಿಯು ಈ ಮೂರೂ ಅಕ್ಷರಗಳನ್ನೂ ತಪಿಸಿತು. ಈ ಅಭಿತಪ್ತ-ಸನ್ತಪ್ತ ಮೂರು ಅಕ್ಷರಗಳಿಂದ ಓಙ್ಕಾರವು ಪ್ರಸ್ರುತವಾಯಿತು. ಹೀಗೆ ಒಂದು ಶಂಕುವಿನಿಂದ ಸಮ್ಪೂರ್ಣ ಪತ್ರರಾಶಿಯು ಅವಾರಪಾರೀಣರೂಪದಿಂದ ವಿದ್ಧವಾಗುತ್ತದೆ, ಹಾಗೆಯೇ ಪತ್ರರಾಶಿಸ್ಥಾನೀಯಾ (ಕ್ಷರಭೂತಕೂಟಸ್ಥಾನೀಯಾ) ಸಮ್ಫೂರ್ಣವಾಕ್ (ವಾಙ್ಮಯ ಸಮ್ಪೂರ್ಣ ಭೂತಪ್ರಪಞ್ಚ) ಓಂಕಾರರೂಪೀ ಶಂಕುವಿನಿಂದ ಅವಾರಪರೀಣ ರೂಪದಿಂದ ವಿದ್ಧವಾಗಿದೆ. (ಆದ್ದರಿಂದಲೇ ಏನು ಹೇಳಬಹುದು ಹಾಗೂ ನಂಬಬಹುದೆಂದರೆ), "ಓಙ್ಕಾರ’ವೇ ಈ ಎಲ್ಲವೂ ಆಗಿದೆ" ಇತ್ಯಾದಿ ಶ್ರುತಿಯು ಯಾವ ಪ್ರಾಜಾಪತ್ಯ ಪ್ರಣವಾತ್ಮಕ ವೇದದ ದಿಗ್ದರ್ಶನ ಮಾಡಿಸಿದೆಯೋ, ಅದು ತತ್ತ್ವಾತ್ಮಕ ವೇದವೇ ಆಗಿದೆ.

೪೧-ವಿಸ್ರಸ್ತಪ್ರಜಾಪತಿ ಮತ್ತು ತ್ರಯೀವೇದ -

(ಭೈಷಜ್ಯವೇದಃ)-

(೪೩)-"ಪ್ರಜಾಪತಿರ್ಲೋಕಾನಭ್ಯತಪತ್ | ತೇಷಾಂ ತಪ್ಯಮಾನಾನಾಗ್ಂ ರಸಾನ್ ಪ್ರಾವೃಹತ್ ಅಗ್ನಿಂ ಪೃಥಿವ್ಯಾ, ವಾಯುಮನ್ತರಿಕ್ಷಾತ್, ಆದಿತ್ಯಂ ದಿವಃ | ಸ ಏತಾಸ್ತಿಸ್ರೋ ದೇವತಾ ಅಭ್ಯತಪತ್ | ತಾಸಾಂ ತಪ್ಯಮಾನಾನಾಗ್ಂ ರಸಾನ್ ಪ್ರಾವೃಹತ್ ಅಗ್ನೇಃ ಋಚಃ,  ವಾಯೋರ್ಯಜೂಗ್ಂಷಿ, ಸಾಮಾನ್ಯಾದಿತ್ಯಾತ್ | ಸ ಏತಾಂ ತ್ರಯೀಂ ವಿಧ್ಯಾಮಭ್ಯತಪತ್ | ತಸ್ಯಾಸ್ತಪ್ಯಮಾನಾಯಾ ರಸಾನ್ ಪ್ರಾವೃತ್ ಭೂರಿತಿ ಋಗ್ಭ್ಯಃ,  ಭುವರಿತಿ ಯಜುರ್ಭ್ಯಃ, ಸ್ವರಿತಿ ಸಾಮಭ್ಯಃ | .... | ಏವಮೇಷಾಂ ಲೋಕಾನಾಂ, ಆಸಾಂ ದೇವತಾನಾಂ, ಆಸ್ಯಾಸ್ತ್ರಯ್ಯಾ ವಿಧ್ಯಾಯಾ ವೀರ್ಯೇಣ ಯಜ್ಞಸ್ಯ ವಿರಿಷ್ಟಸಗ್ಂ ಸಂದಧಾತಿ | ಭೇಷಜಕೃತೋ ಹ ವಾ ಏಷ ಯಜ್ಞೋ, ಯತ್ರೈವಂ ವಿದ್ವಾನ್ ಬ್ರಹ್ಮಾ ಭವತಿ" ||
- ಛಾಂ.ಉಪ. ೪-೧೭

"ಪ್ರಜಾಪತಿಯು ಮೂರೂ ಲೋಕಗಳನ್ನು ತಪಿಸಿತು. ಆ ಮೂರೂ ತಪ್ಯಮಾನ ಲೋಕಗಳ ಮೂರೂ ರಸಗಳನ್ನು ಪ್ರಜಾಪತಿಯು ಹರಿಸಿತು. ಅಂದರೆ ಅಗ್ನಿರಸವನ್ನು ಪೃಥ್ವಿಯಿಂದ, ವಾಯುರಸವನ್ನು ಅನ್ತರಿಕ್ಷದಿಂದ, ಹಾಗೂ ಆದಿತ್ಯ ರಸವನ್ನು ದ್ಯುಲೋಕದಿಂದ ಹರಿಸಿತು. ಮುಂದುವರೆದು ಪ್ರಜಾಪತಿಯು ರಸಾತ್ಮಕ ಈ ಮೂರೂ ದೇವತೆಗಳನ್ನು ತಪಿಸಿತು. ಆ ಮೂರೂ ತಾಪ್ಯಮಾನ ದೇವರಸಗಳ ಮೂರೂ ರಸಗಳನ್ನು ಪ್ರಜಾಪತಿಯು ಹರಿಸಿತು. ಅಂದರೆ ಋಗ್ ರಸವನ್ನು ಅಗ್ನಿಯಿಂದ, ಯಜುಃರಸವನ್ನು ವಾಯುವಿನಿಂದ, ಹಾಗೂ ಸಾಮರಸವನ್ನು ಆದಿತ್ಯದಿಂದ ಹರಿಸಿತು. ಮುಂದುವರೆದು ಪ್ರಜಾಪತಿಯು ಈ ರಸಸ್ಯ ರಸಾತ್ಮಿಕಾ ತ್ರಯೀವಿಧ್ಯೆಯನ್ನೂ ತಪಿಸಿತು. ಆ ಮೂರೂ ತಾಪ್ಯಮಾನ ತ್ರಯೀವಿಧ್ಯೆಗಳನ್ನು ಪ್ರಜಾಪತಿಯು ಹರಿಸಿತು. ಅಂದರೆ ಋಗ್ ರಸದಿಂದ ’ಭೂಃ’ ವ್ಯಾಹೃತಿ ರಸವನ್ನು, ಯಜುಃರಸದಿಂದ ’ಭುವಃ’ ವ್ಯಾಹೃತಿರಸವನ್ನು, ಹಾಗೂ ಸಾಮರಸದಿಂದ ’ಸ್ವಃ’ ವ್ಯಾಹೃತಿರಸವನ್ನು ಹರಿಸಿತು. ಈ ರೀತಿ ಈ ಮೂರೂ ಲೋಕಗಳ, ಮೂರೂ ದೇವತೆಗಳ ಯಜ್ಞಾತ್ಮಕ ಸ್ವರೂಪದ ದುರಿಷ್ಟವನ್ನು ತ್ರಯೀವಿಧ್ಯಾತ್ಮಕ ವೀರ್ಯ್ಯದಿಂದ ಸಂಹಿತಗೊಳಿಸುತ್ತದೆ (ಬ್ರಹ್ಮಾ ನಾಮಕ ಋತ್ವಿಕ್). ಎಲ್ಲಿ ಈ ರಸತತ್ತ್ವದ ಪರಿಜ್ಞಾತಾ ವಿದ್ವಾಂನ್ ಬ್ರಹ್ಮರು ಬ್ರಹ್ಮಕರ್ಮ್ಮದಲ್ಲಿ ನಿಯುಕ್ತರಾಗಿರುತ್ತಾರೆಯೋ, ಆ ಯಜ್ಞಕರ್ಮ್ಮದಲ್ಲಿ ಯಜಮಾನನ ಯಜ್ಞವು ಭೇಷಜಕೃತ (ನೀರೋಗ-ಪ್ರಕೃತಿಸ್ಥ) ಆಗಿರುತ್ತದೆ," ಇತ್ಯಾದಿ ಶ್ರುತಿಯಲ್ಲಿ ಪ್ರತಿಪಾದಿತಾ ರಸಾತ್ಮಿಕಾ ತ್ರಯೀವಿಧ್ಯಾ ಎಂಬುದು ಶಬ್ದಾತ್ಮಕ ವೇದವೇ? ಎಂದಿಗೂ ಅಲ್ಲ. ಇದುವೇ ಸ್ಪಷ್ಟರೂಪದಿಂದ ತತ್ತ್ವವೇದದತ್ತಲೇ ನಮ್ಮ ಧ್ಯಾನವನ್ನು ಆಕರ್ಷಿತಗೊಳಿಸುತ್ತಿದೆ.

೪೨-ವಾಙ್ಮಯ ಭೂತಾತ್ಮಾ ಮತ್ತು ತ್ರಯೀವೇದ -

(ವಾಗ್ವೇದಃ)-

೪೪-"ಸ ಐಕ್ಷತ, ಯದಿ ವಾ ಇಮಮಭಿಮಗ್ಂಸ್ಯೇ,  ಕನೀಯೋಽನ್ನಂ ಕರಿಷ್ಯ, ಇತಿ ಸ ತಯಾ ವಾಚಾ, ತೇನಾಽಽತ್ಮನಾ, ಇದಗ್ಂ ಸರ್ವಮಸೃಜತ, ಯದಿದಂ ಕಿಞ್ಚ | ಋಚೋ, ಯಜೂಗ್ಂಷಿ, ಸಾಮಾನಿ, ಛನ್ದಾಗ್ಂಸಿ, ಯಜ್ಞಾನ್, ಪ್ರಜಾಃ, ಪಶೂನ್ | ಸ ಯದ್ಯದೇವಾಸೃಜತ, ತತ್ತದತ್ತುಮಧ್ರಿಯತ ಸರ್ವಂ ವಾ ಅತ್ತೀತಿ-ತದದಿತೇರದಿತಿತ್ವಗ್ಂ ಸರ್ವಸ್ಯೈ ತಸ್ಯಾತ್ತಾ ಭವತಿ, ಸರ್ವ್ವಮಸ್ಯಾನ್ನಂ ಭವತಿ, ಯ ಏವಮೇತದದಿತೇರದಿತಿತ್ತ್ವಂ ವೇದ"
- ಬೃ.ಉಪ. ೧||

(ಅಮೃತಾಕ್ಷರಗರ್ಭಿತ ಮೃತ್ಯುಮಯ ಕ್ಷರಾತ್ಮಕ) ಪ್ರಜಾಪತಿಯು (ತನ್ನಿಂದ ಉತ್ಪನ್ನವಾದ ಶಬ್ದಾಯಮಾನ ಕುಮಾರಾಗ್ನಿಯನ್ನು ಲಕ್ಷ್ಯವಾಗಿಸಿಕೊಂಡು) ಚಿಂತಿಸಿತು - ಒಂದುವೇಳೆ ನಾನು ಇದನ್ನು (ಕುಮಾರಾಗ್ನಿಯನ್ನು) ನನ್ನ (ಮೃತ್ಯುವಿನ) ಲಕ್ಷ್ಯವನ್ನಾಗಿಸಿಕೊಂಡರೆ, ನನಗಾಗಿ ಬಹಳ ಸ್ವಲ್ಪವೇ ಅನ್ನ ಮಾಡಿಕೊಳ್ಳಬಹುದು. (ಅಪೇಕ್ಷಿತವೇನೆಂದರೆ ನನಗೆ ಅಪರಿಮಿತ ಅನ್ನದ ಅಗತ್ಯತೆ ಇರುವುದರಿಂದ, ಅದನ್ನು ಪೂರೈಸಲು ಕುಮಾರಾಗ್ನಿಮಾತ್ರದಿಂದ ಆಗುವುದಿಲ್ಲ, ಆದ್ದರಿಂದ) ಪ್ರಜಾಪತಿಯು ತನ್ನ ಆ (ಮನಃಪ್ರಾಣಗರ್ಭಿತಾ) ವಾಕ್ಕಿನಿಂದ, ಮನಃಪ್ರಾಣವಾಙ್ಮಯ ಸೃಷ್ಟಿಸಾಕ್ಷೀ ಆತ್ಮದಿಂದ (ಕುಮಾರಾಗ್ನಿಮಾಧ್ಯಮದ ಮುಖೇನ) ಈ ಎಲ್ಲವನ್ನೂ ಉತ್ಪನ್ನ ಮಾಡಿತು, ಇವುಗಳು (ಉತ್ಪನ್ನ ವೈಭವವು) ಋಕ್-ಯಜುಃ-ಸಮ-ಛನ್ದ-ಯಜ್ಞ-ಪ್ರಜಾ-ಪಶು ಎಂಬ ಹೆಸರುಗಳಿಂದ ಪ್ರಸಿದ್ಧವಾಗಿವೆ. ಈ ಅನ್ನಾದ ಪ್ರಜಾಪತಿಯು ಯಾವ್ಯಾವುದನ್ನು ಉತ್ಪನ್ನ ಮಾಡಿತೋ, ಅದದನ್ನೇ ತನ್ನ ಅನ್ನವನ್ನಾಗಿಸಿಕೊಂಡಿತು (ಮಹಿಮಾಮಣ್ಡಲದಲ್ಲಿ ಪ್ರತಿಷ್ಠಿತಗೊಳಿಸಿತು). ಈ ಪ್ರಜಾಪತಿಯು (ಅಮೃತಗರ್ಭಿತ ಮೃತ್ಯುಮಯ ಸೌರ ಸಮ್ವತ್ಸರಪ್ರಜಾಪತಿಯು ತನ್ನ ಮಹಿಮಾಮಣ್ಡಲ-ಸೌರ ಆಲೋಕಮಣ್ಡದಲ್ಲಿ ಏಕೆಂದರೆ) ಋಗಾದಿ ಪಶ್ವನ್ತ ಎಲ್ಲಕ್ಕೂ ಅನ್ನರೂಪದಿಂದ ಪ್ರತಿಷ್ಠಿತಗೊಳಿಸುತ್ತದೆ, ಹಾಗಾಗಿ ಇದೇ ’ಅದಿತಿ’ಯ (ಆಲೋಕಮಣ್ಡಲದ) ಅದಿತಿತ್ವವಾಗಿದೆ. ಯಾರು ಅದಿತಿಯು ಈ ಅದಿತಿತ್ತ್ವದ ರಹಸ್ಯವನ್ನು ತಿಳಿಯುತ್ತಾರೋ, ಅವರು ಸಮ್ಪೂರ್ಣ ತ್ರೈಲೋಕ್ಯದ ಖರೇ ಭೋಕ್ತಾ ಆಗುತ್ತಾರೆ, ಇವೆಲ್ಲವು ಅದರ ಅನ್ನವಾಗಿಬಿಡುತ್ತದೆ" ಇತ್ಯಾದಿ ಬೃಹದಾರಣ್ಯಕ ಶ್ರುತಿಯು ಮೃತ್ಯುಮಯ ಯಾವ ಪ್ರಜಾಪತಿಯಿಂದ ತ್ರಯೀವೇದದ ಅನ್ನರೂಪದಿಂದ ಉತ್ಪತ್ತಿಯನ್ನು ಹೇಳಿದೆಯೋ, ಅದು ತತ್ತ್ವಾತ್ಮಕ ವೇದವಲ್ಲದೆ, ಮತ್ತೇನು?

೪೩-ಮಹನ್ಮೂರ್ತ್ತಿರವ್ಯಯ ಮತ್ತು ತ್ರಯೀವೇದ -

(ಬ್ರಹ್ಮವೇದಃ)-

(೪೫)-"ಯಜೂದರಃ ಸಾಮಶಿರಾ ಅಸಾವೃಙ್ಮೂರ್ತ್ತಿರವ್ಯಯಃ |
ಸ ಬ್ರಹ್ಮೇತಿ ಸ ವಿಜ್ಞೇಯ ಋಷಿರ್ಬ್ರಹ್ಮಮಯೋ ಮಹಾನ್ ||
- ಕೌ.ಉಪ. ೧|

"ಯಾರ ಉದರವು ಯಜುಃ ಆಗಿದೆಯೋ, ಸಾಮವು ಯಾವುದರ ಮಸ್ತಕವೋ, ಇಂತಹಾ ಆ ಅವ್ಯಯಮೂರ್ತ್ತಿಯು (ಚಿದಾತ್ಮಾಧಿಷ್ಠಾತೃವು) ಮಹಾನ್ ಅವ್ಯಯ (ಅವ್ಯಯರೂಪ ಮಹಾನ್) ಋಙ್ಮೂರ್ತ್ತಿ (ಋಕ್-ಶರೀರೀ) ಆಗಿದೆ. ಅದೇ ಬ್ರಹ್ಮ (ಪ್ರತಿಷ್ಠಾ) ಆಗಿದೆ (ಉಪಾದಾನವಾಗಿದೆ), ಅದು ವಿಜ್ಞೇಯ (ವಿಷಯಾವಚ್ಛಿನ್ನ) ಆಗಿದೆ, ಋಷಿ (ಅವ್ಯಕ್ತಪ್ರಾಣಮೂರ್ತ್ತಿ) ಆಗಿದೆ, ಬ್ರಹ್ಮಮಯ (ಕ್ಷರಾನುಗತ) ಆಗಿದೆ, ಮಹಾನ್ ಆಗಿದೆ (ಪಾರಮೇಷ್ಠ್ಯ ತತ್ತ್ವವಾಗಿದೆ)" ಇತ್ಯಾದಿ ಕೌಷೀತಕಿ ವಚನವು ಯಾವ ಮಹಾನಾತ್ಮಬ್ರಹ್ಮವನ್ನು ವೇದಮಯವೆಂದು ಹೇಳುತ್ತಿದೆಯೋ, ಆ ವೇದಪದಾರ್ಥವು ತತ್ತ್ವಾತ್ಮಕವೆಂದೇ ನಂಬಲಾಗುತ್ತದೆ, ಇದಕ್ಕೆ ಶಬ್ದಾತ್ಮಕ ವೇದದೊಂದಿಗೆ ಯಾವುದೇ ಸಂಬಂಧವಿಲ್ಲ.

೪೪-ಅಮಿತೌಜಾ ಪರ್ಯ್ಯಙ್ಕ ಮತ್ತು ತ್ರಯೀವೇದ -

(ಪರ್ಯ್ಯಙ್ಕವೇದಃ)-

(೪೬)-"ಸ ಆಗಚ್ಛತ್ಯಮಿತೌಜಸಂ ಪರ್ಯಂಕಮ್ | ಸ ಪ್ರಾಣಃ | ತಸ್ಯ ಭೂತಂ ಚ, ಭವಿಷ್ಯಚ್ಚ ಪೂರ್ವೌ ಪಾದೌ | ಶ್ರೀಶ್ಚೇರಾ ಚಾಪರೌ | ಬೃಹದ್ರಥನ್ತರೇ ಅನೂಚ್ಯೇ | ಭದ್ರ-ಯಜ್ಞಾಯಜ್ಞೀಯೇ ಶೀರ್ಷಣ್ಯಮ್ | ಋಚಶ್ಚ ಸಾಮಾನಿ ಚ ಪ್ರಾಚೀನಾತಾನಮ್ | ಯಜೂಂಷಿ ತಿರಶ್ಚೀನಾನಿ | ಸೋಮಾಂಶವ ಉಪಸ್ತರಣಮ್ | ಉದ್ಗೀಥ ಉಪಶ್ರೀಃ | ಶ್ರೀರುಪಬರ್ಹಣಮ್ | ತಸ್ಮಿನ್ ಬ್ರಹ್ಮಾಸ್ತೇ" |
- ಕೌ.ಉಪ. ೧|

"(ಕ್ರಮಗತಿಯ ಅನುಗಮನ ಮಾಡುತ್ತಾ) ಆ ಭೂತಾತ್ಮವು ಅತ್ಯನ್ತ ತೇಜಸ್ವೀ ಪರ್ಯ್ಯಙ್ಕ (ಪಲ್ಲಂಗ) ಸ್ಥಾನಕ್ಕೆ ತಲುಪುತ್ತದೆ. ಆ ಪರ್ಯ್ಯಙ್ಕವು (ಎಲ್ಲಾ ನವಾಹಯಜ್ಞಾತ್ಮಕ ಚತುರ್ಭುಜ ಜ್ಯೋತಿರ್ಮ್ಮಣ್ಡಲವು) ಪ್ರಾಣರೂಪವಾಗಿದೆ. ಭೂತ ಹಾಗೂ ಭವಿಷ್ಯತ್, ಇವೆರಡೂ ಈ ಪರ್ಯ್ಯಙ್ಕದ ಪೂರ್ವ ದಿಗನುಬನ್ಧೀ ಪಾದಗಳಾಗಿವೆ. ಶ್ರೀ (ಗಾಯತ್ರತೇಜ), ಹಾಗೂ ಇರಾ (ಪೃಥಿವೀ), ಇವೆರಡೂ ಪಶ್ಚಿಮಾ ದಿಗನುಬನ್ಧೀ ಪಾದಗಳಾಗಿವೆ. ಬೃಹತ್ ಹಾಗೂ ರಥನ್ತರ ಎಂಬ (ಸೌರ-ಪಾರ್ಥಿವ) ಸಾಮಗಳು ಈ ಪರ್ಯ್ಯಙ್ಕದ ಅನೂಚ್ಯ (ದೀರ್ಘ-ಖಟ್ವಾಙ್ಗ-ಈಸ) ಆಗಿದೆ. ಭದ್ರ, ಹಾಗೂ ಯಜ್ಞಾಯಜ್ಞೀಯ ಎಂಬ (ಚಾನ್ದ್ರ-ಭೌಮ) ಸಾಮಗಳು ಈ ಪರ್ಯ್ಯಙ್ಕದ ಶೀರ್ಷಣ್ಯ (ಹ್ರಸ್ವ ಖಟ್ವಾಙ್ಗ-ಸೇರೂ {fastening}) ಆಗಿದೆ. ಋಕ್ ಹಾಗೂ ಸಾಮ ಈ ಪರ್ಯ್ಯಙ್ಕದ ಪೂರ್ವ-ಪಶ್ಚಿಮ ದಿಗನುಗತ ಆತಾನ (ದಾವಣ) ಆಗಿದೆ. ಯಜುಃ ಈ ಪರ್ಯಙ್ಕದ ದಕ್ಷಿಣ-ಉತ್ತರ ದಿಗನುಗತ ಆತಾನವು. ಚಾನ್ದ್ರರಶ್ಮಿಗಳು ಇದರ ಉಪಸ್ತರಣವು (ಹರಡಿರುವುದು). ಉದ್ಗೀಥವು ಇದರ ಉಪಶ್ರೀ (ಹೊದಿಕೆ). ಇಂತಹಾ ಪರ್ಯ್ಯಙ್ಕದ ಮೇಲೆ ಬ್ರಹ್ಮಾ (ಹಿರಣ್ಯಗರ್ಭ-ಪ್ರಜಾಪತಿ-ಸೌರಸಮ್ವತ್ಸರಪ್ರಜಾಪತಿಯು) ವಿರಾಜಮಾನವಾಗಿದೆ (ಪ್ರತಿಷ್ಠಿತವಾಗಿದೆ)", ಇತ್ಯಾದಿ ಶ್ರುತಿಯು ಯಾವ ಪರ್ಯ್ಯಙ್ಕದಲ್ಲಿ ಆತಾನಾತ್ಮಕ ವೇದಗಳ ಸಮ್ಬನ್ಧ ಹೇಳಿದೆಯೋ, ಅದೇನು ಶಬ್ದಾತ್ಮಕದ್ದೇ?, ಅಲ್ಲವೇ ಅಲ್ಲ!

೪೫-ದೇವಮಾನುಷಪಿತ್ರ್ಯಭಾವ ಮತ್ತು ವೇದತ್ರಯೀ -

(ತ್ರಯೀವೇದಃ)-

(೪೭)-ಋಗ್ವೇದೋ ದೇವದೇವತ್ಯೋ ಯಜುರ್ವೇದಸ್ತು ಮಾನುಷಃ |
ಸಾಮವೇದಃ ಸ್ಮೃತಃ ಪಿತ್ರ್ಯಸ್ತಸ್ಮಾತ್ತಸ್ಯಾಶುಚಿರ್ಧ್ವನಿಃ ||
- ಮನುಃ ೪|೧೨೪

"(ಮೂರೂ ವೇದಗಳಲ್ಲಿ) ಋಗ್ವೇದವು ದೇವದೇವತಾನುಬನ್ಧೀ ವೇದವಾಗಿದೆ, ಯಜುರ್ವೇದವು ಮಾನುಷಭಾವಾಪನ್ನವಾಗಿದೆ, ಹಾಗೂ ಸಾಮವೇದವು ಪಿತೃಭಾವಾಪನ್ನವಾಗಿದೆ. ಹಾಗಾಗಿ ಸಾಮವೇದದ ಧ್ವನಿಯು ಅಶುಚಿ ಎಂದು ನಂಬಲಾಗಿದೆ". ಪ್ರಕೃತ ಮನುವಚನದಲ್ಲಿ ದೇವ, ಮಾನವ, ಪಿತರ - ಈ ಮೂರೂ ಭಾವಗಳೊಂದಿಗೆ ಕ್ರಮವಾಗಿ ಋಕ್-ಯಜುಃ-ಸಾಮದ ಸಮ್ಬನ್ಧ ಹೇಳಲಾಗಿದೆ. ಈ ಸಮ್ಬನ್ಧವು ತತ್ತ್ವವೇದದೊಂದಿಗೇ ಅನುಪ್ರಾಣಿತವಾಗಿದೆ. ಅನ್ಯಥಾ ಮೂರೂ ಮನ್ತ್ರಾತ್ಮಕ ಶಬ್ದಾತ್ಮಕ ವೇದಗಳ ಈ ಮೂರೂ ಸರ್ಗಗಳಿಗೆ ಯಾವುದೇ ಸಮ್ಬನ್ಧವು ಘಟಿತವಾಗುವುದಿಲ್ಲ.

೪೬-ಪ್ರಾಜಾಪತ್ಯ ತ್ರಿವೃದ್ಭಾವ ಹಾಗೂ ತ್ರಯೀವೇದ -

(ತ್ರಿವೃದ್ವೇದಃ)-

(೪೮)-ಋಚೋ ಯಜೂಂಷಿ ಚಾನ್ಯಾನಿ ಸಾಮಾನಿ ವಿವಿಧಾನಿ ಚ |
ಏಷ ಜ್ಞೇಯಸ್ತ್ರಿವೃದ್ವೇದೋ ಯೋ ವೇದೈನಂ ಸ ವೇದವಿತ್ ||
ಆದ್ಯಂ ಯತ್ರ್ಯಕ್ಷರಂ ಬ್ರಹ್ಮ ತ್ರಯೀ ಯಸ್ಮಿನ್ ಪ್ರತಿಷ್ಠಿತಾ |
ಸ ಗುಹ್ಯೋಽನ್ಯಸ್ತ್ರಿವೃದ್ವೇದೋ ಯಸ್ತಂ ವೇದ ಸ ವೇದವಿತ್ ||
- ಮನುಃ - ೧೧|೨೬೪, ೨೬೫

"ಋಚೆಗಳು, ಯಜುಃ, ಹಾಗೂ ಬೃಹತ್-ರಥನ್ತರ-ವೈರೂಪ-ವೈರಾಜ-ಶಾಕ್ವರ ಇತ್ಯಾದಿ ವಿವಿಧ ಸಾಮಗಳಿವೆ. ಈ ಮೂರೂ (ತತ್ತ್ವಾತ್ಮಕ) ವೇದಗಳು (ಮನಃಪ್ರಾಣವಾಕ್ಕಿನ ತ್ರಿವೃದ್ಭಾವದಿಂದ) ತ್ರಿವೃತ್ (ನವಭಾವಾಪನ್ನ) ಆಗಿದೆ. ಯಾರು ಈ ತ್ರಿವೃದ್ಭಾವಾಪನ್ನ ವೇದ-ರಹಸ್ಯವನ್ನು ತಿಳಿಯುತ್ತಾರೋ, ಅವರೇ ವೇದವಿದರೆಂದು ನಂಬಲಾಗಿದೆ. ಸೃಷ್ಟಿಸಾಕ್ಷೀ ಮನಃ-ಪ್ರಾಣ-ವಾಕ್ ಭಾವಗಳ ವಾಚಕ ಅಕಾರ-ಉಕಾರ-ಮಕಾರ ಈ ಮೂರೂ ಆದ್ಯ ತ್ರ್ಯಕ್ಷರಗಳ ಸಮಷ್ಟಿ ರೂಪೀ ಯಾವ ಅಕ್ಷರಬ್ರಹ್ಮವಿದೆಯೋ, ಯಾವುದರಲ್ಲಿ ಋಕ್-ಯಜುಃ-ಸಾಮರೂಪೀ ತ್ರಯೀವಿಧ್ಯಾ ಪ್ರತಿಷ್ಠಿತವಾಗಿದೆಯೋ, ಅದೇ ಈ ಗುಹ್ಯ (ರಹಸ್ಯಾತ್ಮಕ-ತತ್ತ್ವಾತ್ಮಕ) ತ್ರಿವೃದ್ವೇದವಾಗಿದೆ. ಯಾರು ಇದನ್ನು ತಿಳಿಯುತ್ತಾರೋ, ಅವರೇ ವೇದವಿದರು.

೪೭-ಸಾವಿತ್ರಿಯ ಮೂರು ಪಾದ ಹಾಗೂ ತ್ರಯೀವೇದ -

(ಸಾವಿತ್ರವೇದಃ)-

(೪೯)-ಅಕಾರಂ ಚಾಪ್ಯುಕಾರಂ ಚ ಮಕಾರಂ ಚ ಪ್ರಜಾಪತಿಃ |
ವೇದತ್ರಯಾನ್ನಿರದುಹ್ಯದ್ ಭೂರ್ಭುವಃಸ್ವರಿತೀತಿ ಚ ||
ತ್ರಿಭ್ಯ ಏವ ತು ವೇದೇಭ್ಯಃ ಪಾದಂ ಪಾದಮದೂದುಹತ್ |
ತದಿತ್ಯೃಚೋ ಅಸ್ಯಾಃ ಸಾವಿತ್ರ್ಯಾಃ ಪರಮೇಷ್ಠೀ ಪ್ರಜಾಪತಿಃ ||

"(ಮನಃಪ್ರಾಣವಾಙ್ಮಯ ಸಮ್ವತ್ಸರ ಪ್ರಜಾಪತಿಯಿಂದ ಅಭಿನ್ನ ಭೃಗ್ವಙ್ಗಿರೋಮಯ ಪರಮೇಷ್ಠೀ) ಪ್ರಜಾಪತಿಯು ವೇದತ್ರಯದಿಂದಲೇ ಅಕಾರ-ಉಕಾರ-ಮಕಾರ ಎಂಬ ೩ ಅಕ್ಷರಗಳನ್ನು ಹಾಗೂ ಭೂಃ-ಭುವಃ-ಸ್ವಃ ಎಂಬ ೩ ವ್ಯಾಹೃತಿಗಳನ್ನು ಹಾಲ್ಕರೆವಂತೆ ಕರೆದಿದೆ (ದುಹ್). ಈ ಋಕ್-ಯಜುಃ-ಸಾಮ ಎಂಬ ಮೂರೂ ವೇದಗಳಿಂದ ಪಾದ-ಪಾದ ರೂಪದಿಂದ ಪರಮೇಷ್ಠೀ ಪ್ರಜಾಪತಿಯು ಸಾವಿತ್ರಿಯ (ಸೌರ ತೇಜದ) ಮೂರೂ ಪಾದಗಳ ದೋಹನ ಮಾಡಿಬಿಟ್ಟಿದೆ", ಇತ್ಯಾದಿ ಮಾನವೀಯ ಸಿದ್ಧಾನ್ತವು ಸೌರ ಸಾವಿತ್ರಾಗ್ನಿಮಯ ತತ್ತ್ವಾತ್ಮಕ ಸಾಮ್ವತ್ಸರಿಕ ವೇದದತ್ತಲೇ ನಮ್ಮ ಧ್ಯಾನ ಆಕರ್ಷಿತಗೊಳಿಸುತ್ತಿದೆ.

೪೮-ವಿಶ್ವಸಂಸ್ಥಾವಿಭಾಗ ಮತ್ತು ವೇದ-
(ಸಂಸ್ಥಾವೇದಃ)-

(೫೦)-ಸರ್ವೇಷಾಂ ತು ಸ ನಾಮಾನಿ ಕರ್ಮ್ಮಾಣಿ ಚ ಪೃಥಕ್ ಪೃಥಕ್ |
ವೇದಶಬ್ದೇಭ್ಯ ಏವಾದೌ ಪೃಥಕ್ ಸಂಸ್ಥಾಶ್ಚ ನಿರ್ಮ್ಮಮೇ ||
- ಮನುಃ - ೧|೨೧

ತ್ರೈಲೋಕ್ಯದಲ್ಲಿ ಪ್ರತಿಷ್ಠಿತ ಸಮಷ್ಟ್ಯಾತ್ಮಕ, ಹಾಗೂ ವ್ಯಷ್ಟಾತ್ಮಕ ಆಯಾಯ ಭೂತಭೌತಿಕ ಪದಾರ್ಥಗಳ ವಿಭಿನ್ನ ನಾಮ-ರೂಪ-ಕರ್ಮ್ಮಗಳನ್ನು ಪ್ರಜಾಪತಿಯು ಶಬ್ದತನ್ಮಾತ್ರಾರೂಪೀ ವೇದತತ್ತ್ವದಿಂದಲೇ ಬೇರೆ-ಬೇರೆ ಸಂಸ್ಥಾವಿಭಾಗಗಳಲ್ಲಿ ವ್ಯವಸ್ಥಿತಗೊಳಿಸಿದೆ" ಇತ್ಯಾದಿ ಮಾನವೀಯ ವಚನದ ’ವೇದಶಬ್ದೇಭ್ಯಃ’, ’ವೇದವಾಗ್ಭ್ಯಃ’ದ ಸೂಚಕವೇ ಆಗಿದೆ. ಉದಾ - ’ವಾಚಾರಮ್ಭಣಂ ವಿಕಾರೋ ನಾಮಧೇಯ ಮೃತ್ತಿಕೇತ್ಯೇವ ಸತ್ಯಮ್’ ಇತ್ಯಾದಿ ಶ್ರುತಿಯಿಂದ ಪ್ರಮಾಣಿತವಾಗಿದೆ. ಏಕೆಂದರೆ ವೇದವಾಕ್ ಎಂಬುದು ಶಬ್ದತನ್ಮಾತ್ರದ ಮುಖೇನವೇ ಪಞ್ಚತನ್ಮಾತ್ರಾರೂಪದಲ್ಲಿ ಪರಿಣತವಾಗುತ್ತಾ ಭೂತಸರ್ಗದ ಜನನೀ ಆಗುತ್ತದೆ. ಹಾಗಾಗಿ ಇತ್ಥಂಭೂತ ವೇದವಾಙ್ಮಯವು ವೇದಶಬ್ದದ ತತ್ತ್ವವೇದದ ಮೇಲೆಯೇ ಪರ್ಯ್ಯವಸಾನವೆಂದು ಪ್ರಮಾಣಿತವಾಗುತ್ತದೆ.

೪೯-ದೇವತ್ರಯೀ ಮತ್ತು ಯಜ್ಞಾತ್ಮಕವೇದ -

(ಯಜ್ಞಮಾತ್ರಿಕವೇದಃ)-

(೫೧)-ಅಗ್ನಿ-ವಾಯು-ರವಿಭ್ಯಸ್ತು ತ್ರಯಂಬ್ರಹ್ಮ ಸನಾತನಮ್ |
ದುದೋಹ ಯಜ್ಞಸಿದ್ಧ್ಯರ್ಥಮೃಗ್-ಯಜುಃ-ಸಾಮಲಕ್ಷಣಮ್ ||
- ಮನುಃ ೧|೨೩

"ಅಗ್ನಿ-ವಾಯು-ಆದಿತ್ಯದಿಂದಲೇ ಪ್ರಜಾಪತಿಯು ವಿಶ್ವಯಜ್ಞಸ್ವರೂಪ ಸಞ್ಚಾಲನಕ್ಕಾಗಿ ಋಕ್-ಯಜುಃ-ಸಾಮಲಕ್ಷಣವುಳ್ಳ ಸನಾತನ ತ್ರಯೀಬ್ರಹ್ಮದ ದೋಹನ ಮಾಡಿತು" ಇತ್ಯಾದಿರೂಪದಿಂದ ಸ್ಪಷ್ಟವಾಗಿಯೇ ವೇದತ್ರಯಿಯ ತತ್ತ್ವರೂಪತೆಯು ಪ್ರಮಾಣಿತವಾಗುತ್ತಿದೆ.

೫೦-ಸರ್ವಸೂತಿ ಮತ್ತು ತ್ರಯೀವೇದ -

(ಸರ್ವವೇದಃ)-

(೫೨)-ಚಾತುರ್ವರ್ಣ್ಯಂ ತ್ರಯೋ ಲೋಕಾಶ್ಚತ್ತ್ವಾರಶ್ಚಾಶ್ರಮಾಃ ಪೃಥಕ್ |
ಭೂತಃ ಭವದ್ ಭವಿಷ್ಯಂ ಚ ಸರ್ವ್ವಂ ವೇದಾತ್ ಪ್ರಸಿದ್ಧ್ಯತಿ ||
ಶಬ್ದಃ ಸ್ಪರ್ಶಶ್ಚ ರೂಪಞ್ಚ ರಸೋ ಗನ್ಧಶ್ಚ ಪಞ್ಚಮಃ |
ವೇದಾದೇವ ಪ್ರಸೂಯನ್ತೇ ಪ್ರಸೂತಿಗುಣಕರ್ಮ್ಮತಃ ||
- ಮನುಃ ೧೨|೯೭,೯೮

"ನಿತ್ಯಸಿದ್ಧ ಬ್ರಹ್ಮ-ಕ್ಷತ್ರ-ವಿಟ್-ಪೌಷ್ಣರೂಪೀ ಸರ್ವಪದಾರ್ಥವ್ಯಾಪ್ತ ಚಾತುರ್ವರ್ಣ್ಯ, ಪೃಥಿವೀ-ಅನ್ತರಿಕ್ಷ-ದ್ಯೌ ಎಂಬ ಮೂರೂ ಲೋಕಗಳು, ಕ್ರತ್ವರ್ಥಜ್ಞಾನಾತ್ಮಕ ಬ್ರಹ್ಮಚರ್ಯ್ಯಾಶ್ರಮ, ಪುರುಷಾರ್ಥಕರ್ಮ್ಮಾತ್ಮಕ ಗೃಹಸ್ಥಾಶ್ರಮ, ಕ್ರತ್ತ್ವರ್ಥಕರ್ಮ್ಮಾತ್ಮಕ ವಾನಪ್ರಸ್ಥಾಶ್ರಮ, ಪುರುಷಾರ್ಥಜ್ಞಾನಾತ್ಮಕ ಸಂನ್ಯಾಸಾಶ್ರಮ, ಈ ನಾಲ್ಕೂ ಪ್ರಾಕೃತಿಕ ಮಾನವಾಶ್ರಮ, ಭೂತ-ಭವತ್-ಭವಿಷ್ಯತ್ ಎಲ್ಲವೂ ವೇದದಿಂದಲೇ ಸಂಸಿದ್ಧವಾಗಿವೆ. ಶಬ್ದ-ಸ್ಪರ್ಶ-ರೂಪ-ರಸ-ಗನ್ಧ - ಈ ಐದು ತನ್ಮಾತ್ರೆಗಳು (ವಿಕಾರಕ್ಷರಭೂತ-ಗುಣಭೂತ) ಪ್ರಕೃತ್ಯನುಬನ್ಧನೀ ಪ್ರಸೂತಿಯ ಗುಣ-ಕರ್ಮ್ಮ-ಭೇದದಿಂದ ವೇದದಿಂದಲೇ ಉತ್ಪನ್ನವಾಗಿವೆ" ಇತ್ಯಾದಿ ಮನುವಚನಗಳು ವಿಸ್ಪಷ್ಟ ರೂಪದಿಂದ ತತ್ತ್ವಾತ್ಮಕ ವೇದದ ಸಮರ್ಥನೆ ಮಾಡುತ್ತಿವೆ.

೫೧-ಸಮ್ವತ್ಸರ ಪ್ರಜಾಪತಿ ಮತ್ತು ತ್ರಯೀವೇದ -

(ಗಾಯತ್ರೀಮಾತ್ರಿಕವೇದಃ)-೫೩-

೧-ತಸ್ಮಾದಣ್ಡಾದ್ವಿನಿರ್ಭಿನ್ನಾದ್ ಬ್ರಹ್ಮಣೋಽವ್ಯಕ್ತಜನ್ಮನಃ |
ಋಚೋ ಬಭೂವುಃ ಪ್ರಥಮಂ ಪ್ರಥಮಾದ್ವದನಾನ್ಮುನೇ ! ||
೨-ಜವಾಪುಷ್ಪನಿಭಾಃ ಸದ್ಯಸ್ತೇಜೋರೂಪಾ ಹ್ಯಸವೃತಾಃ |
ಪೃಥಕ್ ಪೃಥಗ್ ವಿಭಿನ್ನಾಶ್ಚ ರಜೋರೂಪಾ ಮಹಾತ್ಮನಃ ||
೩-ಯಜೂಂಷಿ ದಕ್ಷಿಣಾದ್ ವಕ್ತ್ರಾದನಿಬದ್ಧಾನಿ ಕಾನಿಚಿತ್ |
ಯಾದೃಗ್ವರ್ಣೇ ತಥಾ ವರ್ಣಾನ್ಯಸಂಹತಿಚರಾಣಿ ವೈ ||
೪-ಪಶ್ಚಿಮಂ ಯದ್ವಿಭೋರ್ವಕ್ತ್ರಂ ಬ್ರಹ್ಮಣಃ ಪರಮೇಷ್ಠಿನಃ |
ಆವಿರ್ಭೂತಾನಿ ಸಾಮಾನಿ ತತಃ ಕುನ್ದಮಿತಾನ್ಯಥಾ ||
೫-ಅಥರ್ವ್ವಾಣಾಮಶೇಷೇಣ ಭೃಙ್ಗಾಞ್ಜನಚಯಪ್ರಭಮ್ |
ಘೋರಾಘೋರಸ್ವರೂಪಂ ತದಾಭಿಚಾರಿಕಶಾನ್ತಿಮತ್ ||
೬-ಉತ್ತರಾತ್ ಪ್ರಕಟೀಭೂತಂ ವದನಾತ್ತತ್ತು ವೇಧಸಃ |
ಮುಖಂ ಸತ್ತ್ವತಮಃ ಪ್ರಾಯಂ ಸೌಮ್ಯಾಸೌಮ್ಯಸ್ವರೂಪವತ್ ||
೭-ಋಚೋ ರಜೋಗುಣಃ, ಸತ್ತ್ವಂ ಯಜುಷಾಞ್ಚ ಗುಣೋ ಮುನೇ !
ತಮೋಗುಣಾನಿ ಸಾಮಾನಿ ತಮಃಸತ್ತ್ವಮಥರ್ವ್ವಸು ||
೮-ಏತಾನಿ ಜ್ವಲಮಾನಾನಿ ತೇಜಸಾಪ್ರಮಿತೇನ ವೈ |
ಪೃಥಗ್ ಪೃಥಗವಸ್ಥಾನಂ ಭಾಞ್ಜಿ ಪೂರ್ವ್ವಮಿವಾಭವತ್ ||
೯-ತತಸ್ತದಾದ್ಯಂ ಯತ್ತೇಜ ಓಮಿತ್ಯುಕ್ತ್ವಾಭಿಶಸ್ಯತೇ |
ತಸ್ಯಾನುಭಾವಾದೃಕ್ತೇಜಸ್ತಮಾಂಸ್ಯಾವೃತ್ಯ ಸಂಸ್ಥಿತಮ್ ||
೧೦-ಯಥಾ ಯಜುರ್ಮ್ಮಯಂ ತೇಜೋ ಯಚ್ಚ ಸಾಮ್ನಾಂ ಮಹಾಮುನೇ !
ಏಕತ್ತ್ವಮುಪಯಾತಾನಿ ಪರತೇಜಸಿ ಸಂಶ್ರಯಾತ್ ||
೧೧-ಶಾನ್ತಿಕಂ ಪೌಷ್ಟಿಕಞ್ಚೈವ ತಥಾ ಚೈವಾಭಿಚಾರಿಕಮ್ |
ಋಗಾದಿಷು ಲಯಂ ಬ್ರಹ್ಮಂಸ್ತ್ರಿತಯಂ ತ್ರಿಷ್ವಥಾಗಮತ್ ||

೧೨-ತತೋ ವಿಶ್ವಮಿದಂ ಸದ್ಯಸ್ತಮೋನಾಶಾತ್ ಸುನಿರ್ಮ್ಮಲಮ್ |
ಬಭಾವತೀವ ವಿಪ್ರರ್ಷೇ! *ತಿರಶ್ಚಾರ್ಧ್ವಮಘನ್ತಥಾ ||
(ತಿರಶ್ಚೀನೋ ವಿತತೋ ರಶ್ಮಿರೇಪಾಮಧಃ ಸ್ವಿದಾಸೀದುಪರಿ ಸ್ವಿದಾಸೀತ್ |
ರೇತೋಧಾ ಆಸನ್ ಮಹಿಮಾನ ಆಸನ್ತ್ಸ್ವಧಾ ಅವಸ್ತಾತ್ ಪ್ರಯತಿಃ ಪರಸ್ತಾತ್ || (ಋ. ೧೦-೧೨೯-೫ - ನಾಸದೀಯಸೂಕ್ತ)

೧೩-ತತಸ್ತನ್ಮಣ್ಡಲೀಭೂತಂ ಛಾನ್ದಸಂ ತೇಜ ಉತ್ತಮಮ್ |
ಪರೇಣ ತೇಜಸಾ ಬ್ರಹ್ಮನ್! ಏಕತ್ತ್ವಮುಪಗಮ್ಯ ತತ್ ||
೧೪-ಆದಿತ್ಯಸಂಜ್ಞಾಮಗಮದಾದಾವೇವ ಯತೋಽಭವತ್ |
ವಿಶ್ವಮ್ಯಾಸ್ಯ ಮಹಾಭಾಗ! ಕಾರಣಞ್ಚಾವ್ಯಯಾತ್ಮಕಮ್ ||

೧೫-ಪ್ರಾತರ್ಮ್ಮಧ್ಯನ್ದಿನೇ ಚೈವ ತಥಾ ಚೈವಾಪರಾಹ್ಣಿಕೇ |
*ತ್ರಯೋ ತಪತಿ ಸಾ ಕಾಲೇ ಋಗ್ಯಜುಃಸಾಮಸಂಜ್ಞಿತಾ ||
(ಸೈಷಾ ತ್ರಯ್ಯೇವ ವಿಧ್ಯಾ ತಪತಿ (ಸೂರ್ಯ್ಯಃ)" (ಶತಪಥ ೧೦|||೨)

೧೬-*ಋಚಸ್ತಪನ್ತಿ ಪೂರ್ವಾಹ್ಣೇ ಮಧ್ಯಾಹ್ನೇ ಚ ಯಜೂಂಷಿ ವೈ |
ಸಾಮಾನಿ ಚಾಪರಾಹ್ಣೇ ತು ತಪನ್ತಿ ಮುನಿಸತ್ತಮ ! ||
(ಋಗ್ಭಿಃ ಪೂರ್ವಾಹ್ಣೇ ದಿವಿ ದೇವ ಈಯತೇ, ಯಜುರ್ವೇದೇ ತಿಷ್ಠತಿಃ ಮಧ್ಯೇಽಹ್ನಃ |
ಸಾಮವೇದೇನಾಸ್ತಮಯೇ ಮಹೀಯತೇ, ವೈದೇರಶೇಷಸ್ತ್ರಿಭಿರೇತಿ ಸೂರ್ಯ್ಯಃ || (ತೈ.ಬ್ರಾಂ. ೩|)

೧೭-ಶಾನ್ತಿಕಂ ಋಕ್ಷು ಪೂರ್ವಾಹ್ಣೇ ಯಜುಃ ಸ್ವನೃಚಪೌಷ್ಟಿಕಮ್ |
ಅಪರಾಹ್ಣೇ ಸ್ಥಿತಂ ನಿತ್ಯಂ ಸಾಮಸ್ವೇವಾಭಿಚಾರಿಕಮ್ ||
೧೮-ಸೃಷ್ಟೌ ಋಙ್ಮಯೋ ಬ್ರಹ್ಮಾ, ಸ್ಥಿತೌ ವಿಷ್ಣುರ್ಯ್ಯಜುರ್ಮ್ಮಯಃ |
ರುದ್ರಃ ಸಾಮಮಯೋಽನ್ತೇ ಚ ತಸ್ಮಾತ್ತಸ್ಯಾಽಽಶುಚಿರ್ಧ್ವನಿಃ ||
೧೯-"ತದೇವಂ ಭಗವಾನ್ ಭಾಸ್ವಾನ್ ವೇದಾತ್ಮಾ ವೇದಸಂಸ್ಥಿತಃ |
ವೇದವಿಧ್ಯಾತ್ಮಕಶ್ಚೈವ ಪರಃ ಪುರುಷ ಉಚ್ಯತೇ ||"
೨೦-ಸ್ವರ್ಗಸ್ಥಿತ್ಯನ್ತಹೇತುಃ ಸ ರಜಃಸತ್ತ್ವಾದಿಕೈರ್ಗುಣೈಃ |
ಆದಿತ್ಯ ಬ್ರಹ್ಮವಿಷ್ಣ್ವಾದಿಸಂಜ್ಞಾಮಭ್ಯೇತಿ ಶಾಶ್ವತಃ ||
೨೧-ವೇದೈಃ ಸ ವೇದ್ಯಃ ಸ ತು ವೇದಮೂರ್ತ್ತಿಂ-
ರಮೂರ್ತ್ತಿರಾದ್ಯೋಽಭಿಲವಿಶ್ವಮೂರ್ತ್ತಿಃ |
ವಿಶ್ವಾಶ್ರಯಂ ಜ್ಯಾತಿರವೇದ್ಯವರ್ತ್ಮಾ -
ಧರ್ಮ್ಮಾವದಾತಃ ಪರಮಃ ಪರೇಭ್ಯಃ ||

(ಮಾರ್ಕಣ್ಡೇಯಪುರಾಣ, ಸೂರ್ಯ್ಯಮಾಹಾತ್ಮ್ಯಾನ್ತರ್ಗತ, ಸೂರ್ಯ್ಯೋತ್ಪತ್ತಿ-ಅಧ್ಯಾಯ)
 "ಹೇ ಮುನಿಯೇ! ಆ ಹಿರಣ್ಮಯಾಣ್ಡರೂಪೀ ಅವ್ಯಕ್ತಜನ್ಮಾ ಬ್ರಹ್ಮಮುಖದಿಂದ ಮೊತ್ತಮೊದಲು ಋಚೆಗಳೇ ಪ್ರಾದುರ್ಭವಿಸಿದವು (೧). ಆ ಋಚೆಗಳು ಜಪಾಪುಷ್ಪದಂತೆ ಕಾನ್ತಿಯುಳ್ಳದ್ದಾಗಿದ್ದವು, ತತ್ಕಾಲ ಪ್ರಕಟ ತೇಜೋಮಯೀ ಆಗಿದ್ದವು, ರಜೋಗುಣಮಯೀ ಆಗಿದ್ದವು, ಒಂದಕ್ಕಿಂತೊಂದು ಸ್ವರೂಪ ಬೇರೆ ಬೇರೆಯಾಗಿತ್ತು (೨). ಬ್ರಹ್ಮ ಪ್ರಜಾಪತಿಯ ದಕ್ಷಿಣ ಮುಖದಿಂದ ಪರಸ್ಪರ ಅಸಮ್ಬದ್ಧ ಋತಭಾವಾತ್ಮಕ ವಿತಾನಗಳೇ ಯಜುಃ ಉತ್ಪನ್ನ ಮಾಡಿತು. ಎಲ್ಲಾ ಯಜುಃ ಸ್ವ-ಸ್ವ ವರ್ಣಸ್ವರೂಪದಿಂದ ಅಸಂಹಿತ-ಅಸಮ್ಬದ್ಧ-ಋತಭಾವಾಪನ್ನವಾಗಿಯೇ ಉತ್ಪನ್ನವಾದವು (೩). ಬ್ರಹ್ಮಪರಮೇಷ್ಠೀ ಪ್ರಜಾಪತಿಯ ಯಾವ ಪಶ್ಚಿಮ ಮುಖವಿತ್ತೋ, ಅದರಿಂದ ಕುನ್ದಪುಷ್ಪಸಮ ಕಾನ್ತಿಯುಕ್ತ ಸಮ ಉತ್ಪನ್ನವಾಯಿತು (೪). ಬ್ರಹ್ಮಪ್ರಜಾಪತಿಯ ಉತ್ತರಮುಖದಿಂದ ಘೋರಾಙ್ಗಿರಾ, ಅಥರ್ವಾಙ್ಗಿರಾ ರೂಪದಿಂದ ದ್ವಿಧಾ ವಿಭಕ್ತ ಅಥರ್ವ ಉತ್ಪನ್ನವಾಯಿತು, (ಅಥರ್ವಾಙ್ಗಿರಾರೂಪೀ ಮಣಿಮನ್ತ್ರೌಷಧೀರೂಪೀ ಶಾನ್ತಿಕರ್ಮ್ಮದ ಆಧಾರವಾಗುತ್ತಾ, ಅಲ್ಲಿ ಘೋರಾಙ್ಗಿರಾರೂಪೀ ಅಭಿಚಾರಪ್ರಯೋಗದಲ್ಲಿ ಉಪಯುಕ್ತವಾಗುತ್ತದೆ). ಈ ಉತ್ತರಮುಖವು ಸತ್ತ್ವತಮೋಗುಣಾತ್ಮಕವೆಂದೇ ನಂಬಲಾಗಿದೆ. ಅಥರ್ವಾಙ್ಗಿರೋಮಯ ಅಥರ್ವವು ಸತ್ತ್ವ ಗುಣಾತ್ಮಕವಾಗಿದೆ, ಹಾಗೂ ಘೋರಾಙ್ಗಿರೋಮಯ ಅಥರ್ವ ತಮೋಗುಣಾತ್ಮಕವಾಗಿದೆ (೫-೬). ಹೇ ಮುನಿಯೇ! ಋಚೆಗಳು ರಜೋಗುಣಾತ್ಮಿಕವಾಗಿವೆ, ಯಜುಃ-ಸತ್ತ್ವಗುಣಾತ್ಮಕವಾಗಿದೆ, ಸಾಮವು ತಮೋಗುಣಾತ್ಮಕವಾಗಿದೆ, ಹಾಗೂ ಅಥರ್ವವು ಸತ್ತ್ವತಮೋಗುಣ ಪ್ರತಿಷ್ಠಿತವಾಗಿದೆ (೭). ಈ ನಾಲ್ಕೂ ವೇದಗಳು ತಮ್ಮ ಅಪ್ರತಿಮ ತೇಜದಿಂದ ಪ್ರಜ್ವಲಿತವಾಗಿರುತ್ತಾ ಬೇರೆ ಬೇರೆ ರೂಪದಿಂದ ವಿಭಕ್ತ-ವ್ಯವಸ್ಥಿತವಾಗುತ್ತಿವೆ (೮). ಈ ನಾಲ್ಕೂ (ತತ್ತ್ವಾತ್ಮಕ) ವೇದಗಳು ತಮ್ಮ ಆದಿಭೂತ ಓಂಕಾರಾತ್ಮಕ ತೇಜದಿಂದಲೇ ಅಭಿಸ್ತುತವಾಗಿವೆ; ಪ್ರವೃಕ್ತವಾಗಿವೆ. ಅಂದರೆ ಮನಃಪ್ರಾಣವಾಙ್ಮಯ ಓಙ್ಕಾರಾತ್ಮಕ ಬ್ರಹ್ಮಪ್ರಜಾಪತಿಯೇ ಇವುಗಳ ಪ್ರವೃತ್ತಿಯ ಮೂಲಾಧಾರವಾಗಿದೆ (೯). ಹೇ ಮಹಾಮುನಿಯೇ! ಯಜುರ್ಮ್ಮಯ ತೇಜ, ಸಾಮಗಳ ತೇಜ, (ಹಾಗೂ ಋಕ್-ಅಥರ್ವಗಳ ತೇಜ) ಓಙ್ಕಾರಾತ್ಮಕ ಪರತೇಜದಲ್ಲಿಯೇ ಪ್ರತಿಷ್ಠಿತವಾಗಿದೆ (೧೦). ಶಾನ್ತಿಕ-ಪೌಷ್ಟಿಕ, ಹಾಗೂ ಆಭಿಚಾರಿಕ, ಸಮ್ಪೂರ್ಣ ಭಾವಗಳು ಇದೇ ವೇದಗಳಲ್ಲಿ ವಿಲೀನವಾಗಿದೆ. ಅಂದರೆ ಎಲ್ಲವೂ ಇದೇ ವೇದಗಳ ಮೇಲೆ ಅವಲಮ್ಬಿತವಾಗಿದೆ. ತಮೋಲಕ್ಷಣ ಅನ್ಧಕಾರದ ವಿನಷ್ಟವಾಗುವುದರಿಂದ ಸೌರ ವೇದಮೂರ್ತ್ತಿ ಆದಿತ್ಯದ ರಶ್ಮಿಗಳು ಸಹಸ್ರಧಾ ಮಹಿಮಾನಃಸಹಸ್ರರೂಪದಿಂದ ಸಮ್ಪೂರ್ಣ ವಿಶ್ವದಲ್ಲಿ ವ್ಯಾಪ್ತವಾಗುತ್ತವೆ. ಇದು ಹಿರಣ್ಮಯ ವೇದಮೂರ್ತ್ತಿಯ ಆದಿತ್ಯಪುರುಷವು ಎಲ್ಲದರ ಅವ್ಯಯಾತ್ಮಕ ಕಾರಣವಾಗಿದೆ (೧೧-೧೨-೧೩-೧೪-೧೫).

ಪ್ರಾತಃ-ಮಧ್ಯಾಹ್ನ-ಸಾಯಂ, ಮೂರೂ ಕಾಲಗಳಲ್ಲಿ ಹಿರಣ್ಮಯಾಣ್ಡರೂಪ ಸೌರ ಆದಿತ್ಯ ಪ್ರಜಾಪತಿಯ ಗಾಯತ್ರೀಮಾತ್ರಿಕ ಲಕ್ಷಣ ಮೂರೂ ವೇದಗಳು ತಪಿಸುತ್ತಿವೆ. ತ್ರಯೀವೇದರೂಪದಿಂದಲೇ ಸೂರ್ಯ್ಯನಾರಾಯಣವು ತಪಿಸುತ್ತಿದೆ. ಪೂರ್ವಾಹ್ಣಕಾಲದಲ್ಲಿ ಇದರ ಋಚೆಗಳು ತಪಿಸುತ್ತವೆ, ಮಧ್ಯಾಹ್ನದಲ್ಲಿ ಯಜುಃ ತಪಿಸುತ್ತವೆ, ಹಾಗೂ ಅಪರಾಹ್ಣದಲ್ಲಿ ಸಾಮಗಳು ತಪಿಸುತ್ತವೆ. ಪೂರ್ವಾಹ್ಣದಲ್ಲಿ ಋಚೆಗಳ ಆಧಾರದಲ್ಲಿ ಶಾನ್ತಿಕರ್ಮ್ಮವಾಗುತ್ತದೆ, ಮಧ್ಯಾಹ್ನದಲ್ಲಿ ಯಜುಗಳ ಆಧಾರದಲ್ಲಿ ಪೌಷ್ಟಿಕ ಕರ್ಮ್ಮವಾಗುತ್ತದೆ, ಹಾಗೂ ಅಪರಾಹ್ಣದಲ್ಲಿ ಸಾಮಗಳ ಆಧಾರದಲ್ಲಿ ಆಭಿಚಾರಿಕ ಕರ್ಮ್ಮವಾಗುತ್ತದೆ. ಸರ್ಜ್ಜನಕಾಲದಲ್ಲಿ ಬ್ರಹ್ಮಾ ಋಙ್ಮಯವಾಗುತ್ತದೆ, ಸ್ಥಿತಿ (ಪಾಲನ) ಕಾಲದಲ್ಲಿ ವಿಷ್ಣು ಯಜುರ್ಮ್ಮಯವಾಗುತ್ತದೆ, ಹಾಗೂ ಲಯಕಾಲದಲ್ಲಿ (ಸಂಹಾರಕಾಲದಲ್ಲಿ) ರುದ್ರ ಸಾಮಯ (ಅವಸಾನಮಯ) ಆಗುತ್ತದೆ. ಈ ರೀತಿ ಭಗವಾನ್ ಸೂರ್ಯ್ಯನಾರಾಯಣವು ವೇದಾತ್ಮಾ ಆಗಿದೆ, ವೇದಸಂಸ್ಥಿತ (ವೇದದಲ್ಲಿಯೇ ಪ್ರತಿಷ್ಠಿತ) ಆಗಿದೆ, ವೇದವಿಧ್ಯಾತ್ಮವಾಗಿದೆ, ಪರಪುರುಷಾತ್ಮಕವಾಗಿದೆ. ಇತ್ಥಂಭೂತ ವೇದಮೂರ್ತ್ತಿ ಭಗವಾನ್ ಭಾಸ್ವಾನ್ ಸತ್ತ್ವ-ರಜಃ-ತಮೋಗುಣಾತ್ಮಕ ಬ್ರಹ್ಮ-ವಿಷ್ಣು-ರುದ್ರ ರೂಪದಿಂದ ಸಮ್ಪೂರ್ಣ ವಿಶ್ವದ ಉತ್ಪಾದಕ-ಪಾಲಕ-ಸಂಹಾರಕ ಆಗಿವೆ. ಆ ಭಾಸ್ವಾನ್ ವೇದಗಳಿಂದ ವೇದ್ಯವಾಗಿದೆ, ಏಕೆಂದರೆ ಅದು ಸ್ವಯಂ ವೇದಮೂರ್ತ್ತಿ ಆಗಿದೆ, ವಿಶ್ವದ ಉತ್ಪಾದಕ-ಪಾಲಕ-ಸಂಹಾರಕವಾಗಿದೆ. ಆ ಭಾಸ್ವಾನ್ ವೇದಗಳಿಂದ ವೇದ್ಯವಾಗಿದೆ, ಏಕೆಂದರೆ ಅವು ಸ್ವಯಂ ವೇದಮೂರ್ತ್ತಿ ಆಗಿದೆ, ವಿಶ್ವದ ಆಶ್ರಯವಾಗಿದೆ, ಜ್ಯೋತಿರ್ಮ್ಮಯವಾಗಿದೆ, ಸ್ವಪ್ರಾಣರೂಪದಿಂದ ಅವಿಜ್ಞೇಯವಾಗಿದೆ, ಸಮ್ಪೂರ್ಣ ಪರಭಾವಗಳಿಂದಲೂ ಪರವಾಗಿದೆ, ಧರ್ಮ್ಮಸ್ವರೂಪವಾಗಿದೆ (೧೬-೨೧) - ಇತ್ಯಾದಿ ಪುರಾಣವಚನಗಳು ಭಗವಾನ್ ಸೂರ್ಯ್ಯನಾರಾಯಣದ ಸ್ವರೂಪ ವರ್ಣನೆಯ ಮಾಧ್ಯಮದಿಂದ ಯಾವ ವೇದದ ಸ್ವರೂಪ ಪ್ರತಿಪಾದನೆ ಮಾಡುತ್ತಿದೆಯೋ, ಆ ವೇದವು ವಿಸ್ಪಷ್ಟ ರೂಪದಿಂದ ತನ್ನ ತತ್ತ್ವರೂಪತೆಯ ನಿನಾದ ಮಾಡುತ್ತಿದೆ. ಸೂರ್ಯ್ಯನಾರಾಯಣವು ವೇದಾತ್ಮಕವಾಗಿದೆಯೇ ಹೊರತು ಸೂರ್ಯ್ಯವು ವೇದಗ್ರನ್ಥಾತ್ಮಕವಾಗಿದೆ ಎಂಬ ಅರ್ಥವನ್ನು ಯಾರು ಮಾಡುತ್ತಾರೆ? ಆದ್ದರಿಂದಲೇ ತತ್ತ್ವಾತ್ಮಕ ವೇದವು ಬೇರೆಯೇ ತತ್ತ್ವವು ಹಾಗೂ ತತ್ ಪ್ರತಿಪಾದಕ ಶಬ್ದಾತ್ಮಕ ವೇದವು ಬೇರೆಯೇ ತತ್ತ್ವವೆಂದು ದೃಢೀಕರಿಸಬೇಕಾಗುತ್ತದೆ.

ಸಂಹಿತಾ, ಬ್ರಾಹ್ಮಣ, ಆರಣ್ಯಕ ಹಾಗೂ ಉಪನಿಷಲ್ಲಕ್ಷಣ ಶ್ರುತಿಶಾಸ್ತ್ರದಿಂದ ಹಾಗೂ ಸ್ಮೃತಿಶಾಸ್ತ್ರ ಮತ್ತು ಪುರಾಣಶಾಸ್ತ್ರಕ್ಕೆ ಸಮ್ಬನ್ಧಿಸಿದ ಯಾವ ಪ್ರಮಾಣಗಳನ್ನು ಪ್ರಕೃತ ಪರಿಚ್ಛೇದದಲ್ಲಿ ಉದ್ಧೃತವಾಗಿದೆಯೋ, ಅವುಗಳ ಸಮ್ಯಗವಲೋಕನದಿಂದ ಶಬ್ದಾತ್ಮಕ ವೇದಗಳು, ಅಂದರೆ ವೇದಗ್ರನ್ಥಗಳಿಂದ ಹೊರತಾದ ಯಾವುದೋ ತತ್ತ್ವರೂಪೀ ವೇದಪದಾರ್ಥವೂ ಇದೆ, ಇದರಿಂದಲೇ ಯಜ್ಞದ ಮುಖೇನ ಸಮ್ಪೂರ್ಣ ವಿಶ್ವ, ವಿಶ್ವಪ್ರಜಾ ಹಾಗೂ ಪ್ರಜಾಸಮ್ಪತ್ತಿನ ವಿಕಾಸವಾಗಿದೆ ಎಂದು ಓದುಗರು ಅವಶ್ಯವಾಗಿ ನಿಶ್ಚಯಕ್ಕೆ ತಲುಪಲೇಬೇಕಾಗುತ್ತದೆ. ಸರ್ವಾಧಿಷ್ಠಾತಾ ಪ್ರಜಾಪತಿಯು ತನ್ನ ಇದೇ ತತ್ತ್ವಾತ್ಮಕ, ನಿತ್ಯ, ಅಪೌರುಷೇಯ, ಪ್ರಾಜಾಪತ್ಯವೇದದ ಆಧಾರದಲ್ಲಿ ಮೊದಲು ಯಜ್ಞದ ವಿತಾನ ಮಾಡುತ್ತದೆ. ಅನಂತರ ಯಜ್ಞದ ಮುಖೇನ ಪ್ರಜೋತ್ಪತ್ತಿ ಮಾಡುತ್ತಾ ತನ್ನ ’ಪ್ರಜಾಪತಿ’ ಹೆಸರನ್ನು ಅನ್ವರ್ಥಗೊಳಿಸುತ್ತಾರೆ. ವೇದಮೂರ್ತ್ತಿ ಪ್ರಜಾಪತಿಯ ಸ್ವರೂಪವೇನು? ಇವರ ಪ್ರಾಜಾಪತ್ಯವೇದದ ಸ್ವರೂಪವೇನು? ಹಾಗೂ ಈ ಪ್ರಾಜಾಪತ್ಯವೇದದ ಆಧಾರದಲ್ಲಿ ವಿತತವಾಗುವ ಯಜ್ಞದ ಸ್ವರೂಪವೇನು? ಇತ್ಯಾದಿ ಪ್ರಶ್ನೆಗಳ ಸಮಾಧಾನಕ್ಕಾಗಿಯೇ ಕೆಲ ಸಮಯದ ನಂತರ ’ಪ್ರಾಜಾಪತ್ಯವೇದಮಹಿಮೆ’ ಎಂಬ ಸ್ತಮ್ಭವನ್ನು ವೇದಪ್ರೇಮಿಗಳ ಸಮ್ಮುಖದಲ್ಲಿ ಉಪಸ್ಥಿತಗೊಳಿಸುತ್ತೇವೆ.

ಇಲ್ಲಿಗೆ "ತಾತ್ತ್ವಿಕವೇದ ಮತ್ತು ಪ್ರಮಾಣವಾದ" ಎಂಬ ಸ್ತಮ್ಭವು ಮುಗಿಯಿತು.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ಜಿ