Saturday, 25 May 2019

೨೦-ದೇವಾತ್ಮಾ ಮತ್ತು ವೇದತ್ರಯೀ


(ಧರ್ಮವೇದಃ)

(೧೯)- “ತದೇತದ್ದೇವಮಿಥುನಂ, ಯದ್ ಘರ್ಮ್ಮಃ | ಸ ಯೋ ಘರ್ಮಸ್ತಚ್ಛಿನ್ನಂ, ಯೋ ಶಫೌ ತೌ ಶಫಾ, ಯೋಷಯಮನೀ ತೇ ಶ್ರೋಣಿ-ಕಪಾಲೇ | ಯತ್ ಪಯಸ್ತದ್ರೇತಃ | ತದಿದಮಗ್ನೀ ದೇವಥೋನ್ಯಂ ಪ್ರಜನನೇ ರೇತಃ ಸಿಚ್ಯತೇ | ಅಗ್ನಿರ್ವೈ ದೇವಯೋನಿಃ | ಸೋಽಗ್ನೇರ್ದೇವಯಾನ್ಯಾ ಆಹುತಿಭಿಃ ಸಮ್ಭರತಿ | ಋಙ್ಮಯೋ, ಯಜುರ್ಮ್ಮಯಃ, ಸಾಮಮಯೋ, ವೇದಮಯೋ, ಬ್ರಹ್ಮಮಯೋಽಮೃತಮಯಃ ಸಮ್ಭೂಯ ದೇವತಾ ಅಪ್ಯೇತಿ, ಯ ಏವಂ ವೇದ, ಯಶ್ಚೈವಂ ವಿದ್ವಾನತೇನ ಯಜ್ಞಕ್ರತುನಾ ಯಜತೇ” |

- ಐತರೇಯ ಬ್ರಾಹ್ಮಣ ೪|೬|೨೨

ಭಾವಾರ್ಥ:- “ಘರ್ಮ್ಮವಾಗಿರುವ ಅದು ಈ ದೇವತೆಗಳ ಮಿಥುನಭಾವವು. (ಪ್ರವರ್ಗ್ಯಯಜ್ಞದಿಂದ ಉತ್ಪನ್ನವಾಗುವ, ಯಜ್ಞಕರ್ತ್ತಾ ಯಜಮಾನನ ಮಾನುಷಾತ್ಮದಲ್ಲಿ ಸಂಸ್ಕಾರರೂಪದಿಂದ ಪ್ರತಿಷ್ಠಿತ ಪ್ರವರ್ಗ್ಯಯಜ್ಞಾತಿಶಯರೂಪವೇ ಘರ್ಮ್ಮವು). ಇಂತಹಾ ಯಾವ ಘರ್ಮ್ಮವಿದೆಯೋ, ಅದು (ದೈವಾತ್ಮೋತ್ಪಾದಕ) ಶಿಶ್ನೇನ್ದ್ರಿಯಸ್ಥಾನೀಯವಾಗಿದೆ, (ಉದುಮ್ಬರ ಕಾಷ್ಠದಿಂದ ನಿರ್ಮ್ಮಿತ ೨ ಶಫ) ಇದಕ್ಕೆ ೨ ಶಫಗಳು (ಅಣ್ಡಕೋಶಗಳು) ಇವೆ, (ಉದುಮ್ಬರ ಕಾಷ್ಠದಿಂದ ನಿರ್ಮ್ಮಿತ, ಶಫಾಧಾರಭೂತ) ‘ಉಪಯಮನೀ’ ಎಂಬ ಹೆಸರಿನ ದರ್ವಿಯು ಶ್ರೋಣಿದ್ವಯದ ಮಧ್ಯದಲ್ಲಿ ವಾಸಿಸುವ ಕಪಾಲದ್ವಯಗಳಾಗಿವೆ. ದೇವಯೋನಿರೂಪೀ ಅಗ್ನಿಯಲ್ಲಿ ಸಮರ್ಪಿಸಲ್ಪಡುವ ಆಹುತಿಯೇ ರೇತ (ಶುಕ್ರ)ವಾಗಿದೆ. ಈ ರೀತಿ ಯಜ್ಞಕರ್ತ್ತಾ ಯಜಮಾನನು ದೇವಯೋನಿರೂಪೀ ಅಗ್ನಿಯಲ್ಲಿ ಆಹುತಿ ನೀಡುತ್ತಾ ಆಹುತಿಗಳಿಂದ ದೈವಾತ್ಮರೂಪದಿಂದ ಜನ್ಮ ಪಡೆಯುತ್ತದೆ – (ದೈವಾತ್ಮಾಕರ್ಷಣವು ಇದರ ಮಾನುಷಾತ್ಮವನ್ನು ಯಾವತ್ ಸಂಸ್ಕಾರಸ್ಥಿತಿಪರ್ಯ್ಯನ್ತ ಸ್ವರ್ಗದಲ್ಲಿ ಪ್ರತಿಷ್ಠಿತಗೊಳಿಸಿಟ್ಟಿರುತ್ತದೆ). (ಈ ಘರ್ಮ್ಮಯಾಗದಿಂದ ಈ ಯಜ್ಞಕರ್ತ್ತಾ ಯಜಮಾನನು) ಋಙ್ಮಯ, ಯಜುರ್ಮಯ, ಸಾಮಮಯ, ವೇದಮಯ (ಅಥರ್ವಮಯ), ಬ್ರಹ್ಮಮಯ (ಕ್ಷರಮಯ), ಅಮೃತಮಯ (ಅಕ್ಷರಮಯ) ಆಗುತ್ತಾ ದೇವ-ಸ್ಥಾನವನ್ನು ಪಡೆಯುತ್ತದೆ. ಯಾರು ಇದನ್ನು ತಿಳಿಯುತ್ತಾರೋ, ಅವರಿಗೂ ದೇವಗತಿಯು ಪ್ರಾಪ್ತವಾಗುತ್ತದೆ.”ತತ್ತ್ವಾತ್ಮಕ ವಿಶ್ಲೇಷಣೆ:-

ಸೂರ್ಯ್ಯದ ಪ್ರವರ್ಗ್ಯಾಂಶದಿಂದ ಪೃಥಿವಿಯು ಉಂಟಾಯಿತು. ಪೃಥಿವಿಯ ಪ್ರವರ್ಗ್ಯಾಂಶದಿಂದ ನಮ್ಮ ಸ್ವರೂಪನಿರ್ಮ್ಮಾಣವಾಯಿತು. ಈ ರೀತಿ ಪರಮ್ಪರಾನುಗತವಾಗಿ ನಾವು ಅದೇ ದಿವ್ಯವಿಭೂತಿಯ ಪ್ರವರ್ಗ್ಯಾಂಶವೆಂದು ನಂಬಲ್ಪಟ್ಟಿದ್ದೇವೆ. ಆದರೆ ಪಾರ್ಥಿವಭೂತಮಾತ್ರಾ ಪ್ರಧಾನತೆಯಿಂದ ನಮ್ಮ ಅಧ್ಯಾತ್ಮಸಂಸ್ಥಾದ ಈ ದಿವ್ಯಭಾವವು ಆವೃತವಾಗುತ್ತಿದೆ. ಹಾಗಾಗಿ ನಾವು ದಿವ್ಯಲೋಕಗಳಿಂದ ವಞ್ಚಿತರಾಗಿರುತ್ತೇವೆ. ನಮಗೆ ಆ ದಿವ್ಯ ಪ್ರವರ್ಗ್ಯಾಂಶವು ಪ್ರಾಪ್ತವಾಗಲಿ, ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ ಜನ್ಮದಿಂದಲೇ ಪ್ರಾಪ್ತ ಆ ದಿವ್ಯ ಪ್ರವರ್ಗ್ಯಾಂಶವು ಭೂತಾಕರ್ಷಣೆಯಿಂದ ವಿಮುಕ್ತವಾಗಿ, ತಮ್ಮ ದಿವ್ಯಾಕರ್ಷಣೆಯಿಂದ ಆಕರ್ಷಿತವಾಗಿ ನಮಗೆ (ಶರೀರಪರಿತ್ಯಾಗಾನನ್ತರ) ದಿವ್ಯಲೋಕಗಳ ಭೋಕ್ತಾರರನ್ನಾಗಿಸಲಿ. ಇದೇ ಪ್ರಯೋಜನೆಯ ಸಿದ್ಧಿಗಾಗಿ ವೈಜ್ಞಾನಿಕರು ಘರ್ಮ್ಮಯಾಗದ ಆವಿಷ್ಕಾರ ಮಾಡಿದರು, ಆ ಘರ್ಮ್ಮಯಾಗವು – ‘ಛಿನ್ನಶೀರ್ಷಯಾಗ’ ‘ಪ್ರವರ್ಗ್ಯಯಾಗ’ ‘ಮಹಾವೀರೋಪಾಸನಾ’ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧವಾಗಿದೆ.

ಪ್ರವರ್ಗ್ಯ ದಿವ್ಯಾಗ್ನಿಯು ಗಾಯತ್ರಾಗ್ನಿಯಾಗಿದೆ. ಇದನ್ನೇ ಪೂರ್ವದಲ್ಲಿ ಅಙ್ಗಿರಸೋಽಗ್ನಿ ಎಂದು ಕರೆಯಲಾಗಿದೆ. ‘ಏತಿ ಚ ಪ್ರೇತಿ ಚಾನ್ವಾಹ’ ಎಂಬನುಸಾರ ಈ ಗಾಯತ್ರಾಗ್ನಿಯು ದಿವ್ಯಲೋಕಗಳ ಸಮ್ಬನ್ಧ ಹೊಂದುತ್ತಿರುತ್ತದೆ. ಈ ಪ್ರವರ್ಗ್ಯಾಗ್ನಿಯು ಸ್ವಯಂ ವಿಕೃತಿರೂಪವಾಗಿದೆ, ಇದರ ಋಕ್-ಸಾಮ-ಯಜುಃ-ಅಥರ್ವ, ಎಂಬೀ ೪ ವಿವರ್ತ್ತಗಳಿವೆ. ಈ ನಾಲ್ಕೂ ವಿಕೃತಿಭಾವಗಳ ಪ್ರತಿಷ್ಠಾ ಬ್ರಹ್ಮಾತ್ಮಕ ಕ್ಷರವು, ಕ್ಷರದ ಪ್ರತಿಷ್ಠಾ ಅಮೃತಮಯ ಅಕ್ಷರವು. ಪ್ರವರ್ಗ್ಯಾಗ್ನಿಸಂಸ್ಕಾರದಿಂದ ಯಜ್ಞಕರ್ತ್ತನ ಮಾನುಷಾತ್ಮದ ವಿಕೃತಿರೂಪಾ ವೇದಚತುಷ್ಟಯಿಯ ಸಂಸ್ಕಾರಗಳಿಂದ, ತದಭಿನ್ನ ಕ್ಷರಬ್ರಹ್ಮದಿಂದ, ಹಾಗೂ ತದಭಿನ್ನ ಅಮೃತಾಕ್ಷರದಿಂದ ಯುಕ್ತವಾಗುತ್ತಾ ದಿವ್ಯಲೋಕಾನುಗಾಮೀ ಆಗುತ್ತದೆ.

ಇದೊಂದು ರಹಸ್ಯಪೂರ್ಣ ವಿಷಯವಾಗಿದೆ. ಶ್ರುತಿಯ ಮುಖೇನ ಅಥರ್ವತತ್ತ್ವವೇ ವೇದಶಬ್ದದಿಂದ ಸಮ್ಬೋಧಿತವಾಗಿದೆ. ಕಾರಣವೇನೆಂದರೆ, ಅಗ್ನಿವೇದದ ಹೆಸರು ಎಲ್ಲಿ ವೇದತ್ರಯೀ (ಋಕ್-ಯಜುಃ-ಸಾಮವೇದ) ಆಗಿದೆಯೋ, ಅಲ್ಲಿ ಸೋಮವೇದದ ಹೆಸರು ಅಥರ್ವವೇದವಾಗಿದೆ. ಜೊತೆಗೆ ಅಗ್ನಿಯಲ್ಲಿ ಎಲ್ಲಿಯವರೆಗೆ ಅಥರ್ವಲಕ್ಷಣವುಳ್ಳ ಸೋಮವೇದದ ಆಹುತಿ ಆಗುವುದಿಲ್ಲವೋ, ಅಲ್ಲಿಯವರೆಗೆ ಅಗ್ನಿವೇದದ ವಿಕಾಸವೇ ಅಸಮ್ಭವ. ಮಣ್ಡಲ-ಅರ್ಚಿ-ಅಗ್ನಿ ಭಾವಗಳು ಸೋಮಾಹುತಿಯ ಮೇಲೆಯೇ ಪ್ರತಿಷ್ಠಿತವಾಗಿವೆ. ಇದೇ ರಹಸ್ಯವನ್ನು ಸೂಚಿತಗೊಳಿಸುವುದಕ್ಕಾಗಿ ಶ್ರುತಿಯು ಎಲ್ಲಿ ಮೂರೂ ಅಗ್ನಿವೇದಗಳನ್ನು ಋಕ್-ಯಜುಃ-ಸಾಮ ಶಬ್ದಗಳಿಂದ ವ್ಯವಹೃತಗೊಳಿಸಿದೆಯೋ, ಅಲ್ಲಿ ವೇದತ್ರಯಿಯ ಪ್ರತಿಷ್ಠಾರೂಪೀ ಅಥರ್ವವೇದವನ್ನು ‘ವೇದಮಯ’ ಎಂದು ನಂಬಲಾಗಿದೆ. ಶ್ರುತಿಯ ಮುಖೇನ ಪ್ರಕೃತದಲ್ಲಿ ಹೇಳಬೇಕಿದ್ದದ್ದು ಏನೆಂದರೆ, ಸಂಸ್ಕಾರಾತ್ಮಿಕಾ ಈ ವೇದಚತುಷ್ಟಯೀ ವಿಶುದ್ಧರೂಪದಿಂದ ತತ್ತ್ವಾತ್ಮಿಕಾ ವೇದಚತುಷ್ಟಯದೊಂದಿಗೇ ಸಮ್ಬನ್ಧಿಸಿದೆ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್‍ ಜಿ

Monday, 20 May 2019

೧೯-‘ಸಾ’-’ಅಮ’ ಮತ್ತು ಸಾಮವೇದ


(ದಾಮ್ಪತ್ಯವೇದಃ)

(೧೮)- “ಋಕ್ ಚ ವಾ ಇದಮಗ್ರೇ ಸಾಮ ಚಾ_ಽಸ್ತಾಮ್ | ಸೈವ ನಾಮ ಋಗಾಸೀತ್, ಅಮೋ ನಾಮ ಸಾಮ | ಸಾ ವಾ ಋಕ್ ಸಾಮೋಪಾವದನ್-‘ಮಿಥುನ ಸಮ್ಭವಾವ ಪ್ರಜಾತ್ಯಾ’ ಇತಿ | ನೇತ್ಯಬ್ರವೀತ್ ಸಾಮ | ಜ್ಯಾಯಾನ್ ವಾ ಅತಾ ಮಮ ಮಹಿಮಾ ಇತಿ | ತೇ ದ್ವೇ ಭೂತ್ವೋಪಾವದತಾಮ್ | ತೇನ ಪ್ರತಿವಚನಂ ಸಮವದತ | ತಾಸ್ತಿಸ್ರೋ ಭೂತ್ತ್ವೋಪಾವದನ್ | ತಾತ್ತಿಸೃಭಿಃ ಸಮಭವತ್ | ಯತ್ ತಿಸೃಭಿಃ ಸಮಭವತ್, ತಸ್ಮಾತ್ ತಿಸೃಭಿಃ ಸ್ತುವನ್ತಿ, ತಿಸೃಭಿರುದ್ಗಾಯನ್ತಿ | ತಿಸೃಭಿರ್ಹಿ ಸಾಮ ಸಮ್ಮಿತಮ್ | ತಸ್ಮಾದೇಕಸ್ಯ ಬಹ್ವ್ಯೋ ಜಾಯಾ ಭವನ್ತಿ, ನಕಸ್ಯೈ ಬಹವಃ ಸಹ ಪತಯಃ | ಯದ್ವೈತತ್ ಸಾ ಚಾಮಶ್ಚ ಸಮಭವತ್, ತತ್ ಸಾಮಾಭವತ್, ತತ್ ಸಾಮ್ನಃ ಸಾಮತ್ತ್ವಮ್” |
- ಐತರೇಯ ಬ್ರಾಹ್ಮಣ ೧೨|೧೨|೨೩

ಭಾವಾರ್ಥ:- “(ಒಂದು ಕಾಲದಲ್ಲಿ) ಋಕ್ ಮತ್ತು ಸಾಮಗಳೆರಡೂ ಬೇರೆ ಬೇರೆಯಾಗಿದ್ದವು. ‘ಸಾಮ’ ಶಬ್ದದ ‘ಸಾ’ ಅಕ್ಷರವು ಋಕ್ ಆಗಿತ್ತು, ‘ಅಮ’ ಎಂಬ ಹೆಸರನ್ನು ಪಡೆದ ತತ್ತ್ವವು ಸಾಮವಾಗಿತ್ತು. ‘ಸಾ’ ರೂಪೀ ಋಕ್, ಸಾಮಕ್ಕೆ ಹೇಳಿತು – ನಾವಿಬ್ಬರೂ ಪ್ರಜೋತ್ಪತ್ತಿಗಾಗಿ ‘ದಾಮ್ಪತ್ಯಭಾವ’ದಲ್ಲಿ ಪರಿಣತರಾಗೋಣ. ಸಾಮವು ಉತ್ತರಿಸಿತು – ಇಲ್ಲ, ಇದು ಎಂದಿಗೂ ಸಮ್ಭವವಲ್ಲ. ನಿನ್ನ (ಋಕ್ಕಿನ) ಅಪೇಕ್ಷೆಗಿಂತ ನನ್ನ ಮಹತ್ತ್ವವು ಬಹಳ ಎತ್ತರಲ್ಲಿದೆ ಎಂದಿತು ಸಾಮ. (ಸಾಮದ ಈ ಉತ್ತರವನ್ನು ಕೇಳಿಸಿಕೊಂಡು) ಎರಡು ಋಚೆಗಳು ಸಾಮಕ್ಕೆ ದಾಮ್ಪತ್ಯಭಾವದ ಪ್ರಾರ್ಥನೆ ಸಲ್ಲಿಸಿದವು. ಸಾಮವು ಹಾಗೆಯೇ ಋಚೆಗಳ ಪ್ರಾರ್ಥನೆಯನ್ನು ಅಸ್ವೀಕೃತಗೊಳಿಸಿತು. ಕೊನೆಗೆ ಮೂರು ಋಚೆಗಳು ಸಾಮದೊಂದಿಗೆ ದಾಮ್ಪತ್ಯಭಾವದ ಪ್ರಾರ್ಥನೆ ಮಾಡಿದವು. ಸಾಮಕ್ಕೆ ಮೂರೂ ಋಚೆಗಳಿಂದ ದಾಮ್ಪತ್ಯಭಾವವು ಪ್ರಾಪ್ತವಾಯಿತು. ಈ ಕಾರಣದಿಂದಲೇ (ವೈಧಯಜ್ಞಕರ್ಮ್ಮದಲ್ಲಿ) ೩ ಋಚೆಗಳಿಂದಲೇ (ಉದ್ಗಾತೃಗಳು) ಸ್ತೋತ್ರೀಯವನ್ನು ಮಾಡುತ್ತಾರೆ, ಮೂರರಿಂದಲೇ ಸಾಮಗಾನ ಮಾಡುತ್ತಾರೆ. ಒಂದು ಸಾಮವು ೩ ಋಚೆಗಳಿಗೆ ಸಮ. ‘ಸಾ’ ಮತ್ತು ‘ಅಮೋ’ ಲಕ್ಷಣ ಋಕ್-ಸಾಮಗಳು ಬೆರೆತಾಗ, ಈ ಸಮ್ಮೇಳನದಿಂದ ಸಾಮದ ಸ್ವರೂಪವು ನಿಷ್ಪನ್ನವಾಯಿತು. ಇದೇ ಸಾಮದ ಸಾಮತ್ವವಾಗಿದೆ”.

ತತ್ತ್ವಾತ್ಮಕ ವಿಶ್ಲೇಷಣೆ:-

“ಏಕಂ ಸಾಮ ತೃಚೇ ಕ್ರಿಯತೇ ಸ್ತೋತ್ರಿಯಮ್” ಎಂಬೀ ಶ್ರೌತಸಿದ್ಧಾನ್ತದ ಅನುಸಾರ ೩ ಋಚೆಗಳಿಗೆ ೧ ಸಾಮ ಮನ್ತ್ರ ಉಂಟಾಗುತ್ತದೆ. ಯಥಾರ್ಥದಲ್ಲಿ ಇದೇನೆಂದರೆ, ಪದ್ಯಾತ್ಮಕ ಮನ್ತ್ರವು ‘ಋಕ್’ ಎಂದು ಕರೆಯಲ್ಪಡುತ್ತದೆ, ಹಾಗೂ ಗಾನಾತ್ಮಕ ಮನ್ತ್ರವು ಸಾಮವೆಂದು ಕರೆಯಲ್ಪಡುತ್ತದೆ. ಈ ಸಮ್ಬನ್ಧದಲ್ಲಿ ಏನು ಪ್ರಶ್ನೆ ಮಾಡಬಹುದೆಂದರೆ, ಯಜ್ಞಕರ್ಮ್ಮದಲ್ಲಿ ಉಂಟಾಗುವ ಸ್ತೋತ್ರಕರ್ಮ್ಮ ಹಾಗೂ ಉದ್ಗಾನ (ಸಾಮಗಾನ) ಕರ್ಮ್ಮವು ಮೂರ್ಮೂರು ಋಚೆಗಳಿಂದ ಏಕೆ ಮಾಡಲ್ಪಡುತ್ತದೆ? ಪ್ರಕೃತ ಐತರೇಯಶ್ರುತಿಯು ತತ್ತ್ವಾತ್ಮಕ ಋಕ್-ಸಾಮದ ತಾತ್ತ್ವಿಕ ಸ್ವರೂಪದ ಆಧಾರದಲ್ಲಿ ಇದೇ ಪ್ರಶ್ನೆಗೆ ಸಮಾಧಾನ ನೀಡುತ್ತಿದೆ.

ಪೃಥಿವೀ ಮಾತೆಯು, ದ್ಯುಲೋಕೋಪಲಕ್ಷಿತ ಆದಿತ್ಯಪ್ರಾಣಾತ್ಮಕ ಕಶ್ಯಪ ಪ್ರಜಾಪತಿಯು ಪಿತವು. ಮಾತಾ ಪೃಥಿವೀ ‘ಇಯಂ’ ಆಗಿದೆ, ಪಿತಾ ಕಶ್ಯಪ ‘ಅಸೌ’ ಆಗಿದೆ. ‘ಇಯಂ’ ಶಬ್ದವು ಸ್ತ್ರೀಭಾವದ ದ್ಯೋತಕವಾಗಿದೆ, ‘ಅಸೌ’ ಶಬ್ದವು ಪುರುಷ ಭಾವದ ದ್ಯೋತಕವಾಗಿದೆ. ಪೃಥಿವೀ ಋಕ್ ಆಗಿದೆ, ದ್ಯು ಸಾಮವಾಗಿದೆ. ಋಗ್-ರೂಪೀ ಪೃಥಿವಿಯು ಸ್ತ್ರೀ ಆಗಿದ್ದು, ಪತ್ನೀ ಆಗಿದೆ, ಹಾಗಾಗಿ ಇದನ್ನು ಸ್ತ್ರೀಭಾವದ್ಯೋತಕ ‘ಇಯಂ’-‘ಸಾ’-‘ಏಷಾ’ ಇತ್ಯಾದಿ ಶಬ್ದಗಳಿಂದ ವ್ಯವಹೃತಗೊಳಿಸಬಹುದು. ದ್ಯುಲೋಕೋಪಲಕ್ಷಿತ ಸಾಮಾತ್ಮಕ ಕಶ್ಯಪ, ಅಂದರೆ ಆದಿತ್ಯವು ಪುರುಷವಾಗಿದೆ, ಪತಿ ಆಗಿದೆ, ಹಾಗಾಗಿ ಇದನ್ನು ಪುರುಷ ಭಾವ ದ್ಯೋತಕ ‘ಅಸೌ-ಅಮಃ’ ‘ಏಷಃ’ ಇತ್ಯಾದಿ ಹೆಸರುಗಳಿಂದ ವ್ಯವಹೃತಗೊಳಿಸಬಹುದು. ಇವೆರಡರ (ದ್ಯಾವಾಪೃಥಿವಿಯ) ದಾಮ್ಪತ್ಯಭಾವದಿಂದಲೇ ತ್ರೈಲೋಕ್ಯಪ್ರಜೆಗಳ ಉತ್ಪತ್ತಿಯಾಗಿದೆ. ಸ್ವಯಂ ಪ್ರಜಾಪತಿಯು ಒಂದೇ ಆಗಿದೆ, ಸ್ತ್ರೀಸ್ಥಾನೀಯಾ ಮಾತಾ ಪೃಥಿವಿಯ ಅದಿತಿ, ದಿತಿ, ದನು, ಕಾಲಾ, ಇತ್ಯಾದಿ ೧೩ ಅವಾನ್ತರ ಭೇದಗಳಾಗುತ್ತವೆ.

ಸ್ತೌಮ್ಯತ್ರಿಲೋಕೀವಿಜ್ಞಾನದ ಅನುಸಾರ ‘ಪೃಥಿವೀ-ಅನ್ತರಿಕ್ಷ-ದ್ಯೌ’ ಈ ಮೂರೂ ಸ್ತೌಮ್ಯಲೋಕಗಳು ಒಂದೇ ಪೃಥಿವಿಯ ಮೂರು ರೂಪಗಳಾಗಿವೆ. ಹಾಗಾಗಿ ಋಗ್-ರೂಪಾ ಪೃಥಿವಿಯ ಮೂರು ವಿವರ್ತಗಳೆಂದು ನಂಬಲಾಗಿದೆ, ಉದಾ – “ತಿಸ್ರೋ ವಾ ಇಮಾಃ ಪೃಥಿವ್ಯಃ | ಇಯಮಹೈಕಾ, ದ್ವೇ ಅಸ್ಯಾ ಪರೇ” (ಶತಪಥ ೫|೧|೫|೨೧) ಇತ್ಯಾದಿಯಿಂದ ಪ್ರಮಾಣಿತವು. ಪೃಥಿವ್ಯನ್ತರಿಕ್ಷದ್ಯುರೂಪಾ ಈ ಮಹಾಪೃಥಿವಿಯ ಅನ್ತಿಮ-ಸೀಮಾರೂಪ, ದ್ಯುಲೋಕಾತ್ಮಕ ಪರಿಮಣ್ಡಲದ ಹೆಸರೇ ರಥನ್ತರಸಾಮವು. ಈ ಸಾಮಪುರುಷದ ಸ್ವರೂಪವು ಪೃಥಿವೀರೂಪವಾದ ಮೂರು ಋಚೆಗಳಿಂದಲೇ ಸಮ್ಪನ್ನವಾಗಿದೆ.ಋಕ್ಕೇ ಸಾಮವಾಗುತ್ತದೆ. ಪಿಣ್ಡಾವಚ್ಛಿನ್ನ ವಿಷ್ಕಮ್ಭ (ವ್ಯಾಸ, diameter) ಋಕ್ ಆಗಿದೆ, ಪಿಣ್ಡಾವಚ್ಛಿನ್ನ ಪರಿಣಾಹ (circumference) ಸಾಮವು. ಸಂನಿಕೃಷ್ಟ ತ್ರಿಗುಣಿತ ವಿಷ್ಕಮ್ಭವೇ ಒಂದು ಪರಿಣಾಹವಾಗಿದೆ (The circumference of a circle is approximately three times its diameter. If you divide the circumference by its diameter, the constant ratio is called Pi). ಋಕ್ಕೇ ಸಾಮವಾಗುವುದರಿಂದ, ಈ ರಹಸ್ಯವನ್ನು ಸೂಚಿಸುವುದಕ್ಕಾಗಿ ಶ್ರುತಿಯು ‘ಸಾಮ’ ಶಬ್ದದ ‘ಸಾ-ಅಮ’ ಈ ಎರಡು ವಿಭಾಗ ಹೇಳಿದೆ. ‘ಸಾ’ ಎಂಬುದನ್ನು ಋಕ್ ಎಂದಿದೆ ಹಾಗೂ ‘ಅಮ’ ಎಂಬುದನ್ನು ಸಾಮ ಎಂದು ನಂಬಲಾಗಿದೆ. ಜೊತೆಗೆ ೩ ಋಚೆಗಳಿಂದ (ವಿಷ್ಕಮ್ಭಗಳಿಂದ) ೧ ಸಾಮದ (ಪರಿಣಾಹ) ಸ್ವರೂಪವು ನಿಷ್ಪನ್ನವಾಗಿರುವುದರಿಂದ, ಯಜ್ಞಕರ್ಮ್ಮದಲ್ಲಿ ಪ್ರಯುಕ್ತವಾಗುವ ಶಬ್ದಾತ್ಮಕ ಸಾಮಮನ್ತ್ರವು ೩ ಋಚೆಗಳನ್ನು ಒಳಗೊಂಡಿರುತ್ತದೆ ಎಂದು ನಂಬಲಾಗಿದೆ. ಈ ವಿಷ್ಕಮ್ಭಾದಿ ಭಾವಗಳನ್ನು ಮುಂದೆ ವಿಸ್ತಾರವಾಗಿ ನಿರೂಪಿಸಲಾಗುತ್ತದೆ. ಪ್ರಕೃತದಲ್ಲಿ ನಮಗೆ ಹೇಳಬೇಕಿದ್ದೇನೆಂದರೆ, ಶ್ರುತಿಯು ಯಾವ ಋಕ್-ಸಾಮಗಳ ದಾಮ್ಪತ್ಯಭಾವವನ್ನು ಹೇಳಿರುವುದೋ, ಆ ದಾಮ್ಪತ್ಯಭಾವ ಹಾಗೂ ತದನುಬನ್ಧೀ ಋಕ್-ಸಾಮ ಶಬ್ದಾತ್ಮಕ ವೇದವಲ್ಲ, ಆದರೆ ತತ್ತ್ವಾತ್ಮಕ ವೇದದ್ದಾಗಿದೆ. ಇದರ ಚೆನ್ನಾದ ಸ್ವೀಕೃತಿಯ ಹೊರತು ಶಬ್ದಭಕ್ತಿಪರಮ್ಪರೆಯ ಮಹಾನುಭಾವರು ಎಂದಿಗೂ “ಋಚ್ಯಧೂಢಂ-ಸಾಮ ಗೀಯತೇ’-‘ತೃಚಂ ಸಾಮ’ ಇತ್ಯಾದಿ ವಚನಗಳ ಸಮನ್ವಯ ಮಾಡಲಾಗುವುದಿಲ್ಲ.

 ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ

Saturday, 18 May 2019

೧೮-ಆತ್ಮಸಮುದ್ರ ಮತ್ತು ವೇದತ್ರಯೀ


(ಆಧ್ಯಾತ್ಮಿಕವೇದಃ)

(೧೭)- “ತ್ರಯೋ ಹ ವೈ ಸಮುದ್ರಾಃ | ಅಗ್ನಿರ್ಯಜುಷಾಂ, ಮಹಾವ್ರತಂ ಸಾಮ್ನಾಂ, ಮಹದುಕ್ಥಮೃಚಾಮ್ | ಸ ಯ ಏತಾನಿ ಪರಸ್ಮೈ ಕರೋತಿ, ಏತಾನ್ ಹ ಸ ಸಮುದ್ರಾಞ್ಛೋಪಯತೇ, ತಾಞ್ಛುಪ್ಯತೋಽನ್ವಸ್ಯ ಛನ್ದಾಂಸಿ ಶುಷ್ಯನ್ತಿ, ಛನ್ದಾಂಸ್ಯನುಲೋಕಃ, ಲೋಕಮನ್ವಾತ್ಮಾ, ಆತ್ಮಾನಮನು ಪ್ರಜಾಃ ಪಶವಃ | ಸ ಹ ಶ್ವಃ ಶ್ವ ಏವ ಪಾಪೀಯಾನ್ ಭವತಿ, ಯ ಏತಾನಿ ಪರಸ್ಮೈ ಕರೋತಿ” |

“(ಮೂರು ವೇದಗಳ) ಮೂರು ಸಮುದ್ರಗಳಿವೆಯೆಂದು ನಂಬಲಾಗಿದೆ. ಅಗ್ನಿಯು ಯಜುಗಳ ಸಮುದ್ರವಾಗಿದೆ, ಮಹಾವ್ರತವು ಸಾಮದ ಸಮುದ್ರವಾಗಿದೆ, ಮಹದುಕ್ಥವು ಋಚೆಗಳ ಸಮುದ್ರವಾಗಿದೆ. ಯಾವ ಮನುಷ್ಯನು ತನ್ನ ಈ ಮೂರನ್ನು (ಆಧ್ಯಾತ್ಮಿಕ ವೇದಸಮುದ್ರಗಳನ್ನು) ಪರಾಧೀನತೆಯಿಂದ ಪರಾರ್ಥಕ್ಕಾಗಿ ಪ್ರಕಟಗೊಳಿಸುತ್ತಾನೋ, ಆತನ ಈ ಮೂರೂ ಸಮುದ್ರಗಳು ಬತ್ತಿಹೋಗುತ್ತವೆ. (ಇದೇ ಆದದ್ದು ನಮ್ಮ ಬಹುತೇಕ ಭಾರತೀಯ ವಿದ್ವಾಂಸರಿಗೆ; ದೇಶದ್ರೋಹಿ ಬ್ರಿಟೀಷರಿಗೆ ತಮ್ಮ ಜ್ಞಾನವನ್ನು ಒತ್ತೆ ಇಟ್ಟರು, ಆ ಜ್ಞಾನವೇ ಅವರಿಂದ ಬತ್ತಿಹೋಯಿತು!). ವೇದಸಮುದ್ರಗಳು ಬತ್ತಿಹೋಗುವುದರಿಂದ ಇದರ ಛನ್ದಸ್ಸುಗಳು ಬತ್ತಿಹೋಗುತ್ತವೆ, ಛನ್ದಸ್ಸುಗಳು ಬತ್ತಿಹೋಗುವುದರಿಂದ ಲೋಕಗಳು ಬತ್ತಿಹೋಗುತ್ತವೆ, ಲೋಕಗಳು ಶೋಚಿಸಲ್ಪಟ್ಟರೆ ಆತ್ಮದ ಶೋಷಣೆ, ಆತ್ಮಶುಷ್ಕತೆಯಿಂದ ಪ್ರಜಾ ಹಾಗೂ ಪಶು ಸಮ್ಪತ್ತಿಗಳು ಒಣಗಿಹೋಗುತ್ತವೆ. ಇಂತಹಾ ವ್ಯಕ್ತಿಯು ದಿನೇದಿನೇ ಅವನತಿಯತ್ತ ಅಗ್ರೇಸರನಾಗುತ್ತಾ ಹೋಗುತ್ತಾನೆ, ಆತನು ತನ್ನ ವೇದಸಮುದ್ರಗಳನ್ನು ಇನ್ನೊಬ್ಬರಿಗಾಗಿ ಅವದಾನ ಮಾಡಿಬಿಡುತ್ತಾನೆ”.

ಅಗ್ನಿ-ಮಹಾವ್ರತ-ಮಹದುಕ್ಥಗಳನ್ನು ಕ್ರಮವಾಗಿ ಯಜುಃ-ಸಾಮ-ಋಚೆಗಳ ಸಮುದ್ರವೆಂದು ಯಾವ ಆಧಾರದಲ್ಲಿ ಹೇಳಲಾಗಿದೆ?, ಇವುಗಳ ಆಧ್ಯಾತ್ಮಿಕ ಸ್ವರೂಪವೇನು?, ಇವುಗಳ ಬತ್ತುವಿಕೆಯು ಹೇಗಾಗುತ್ತದೆ?, ಇತ್ಯಾದಿ ಪ್ರಶ್ನೆಗಳ ವಿಶದ-ವೈಜ್ಞಾನಿಕ ಸಮಾಧಾನವಂತೂ ಮುಂದಿನ ಪರಿಚ್ಛೇದಗಳಲ್ಲಿ ಯಥಾವಸರ ಮಾಡಲಾಗುತ್ತದೆ. ಪ್ರಕೃತದಲ್ಲಿ ವಕ್ತವ್ಯಂಶ ಏನೆಂದರೆ, ಆಧ್ಯಾತ್ಮಿಕ ಅಗ್ನಿ, ಮಹಾವ್ರತ, ಮಹದುಕ್ಥಗಳನ್ನು ಯಜುಃ-ಸಾಮ-ಋಚೆಗಳ ಸಮುದ್ರವೆಂದು ಹೇಳುವುದು ಏಕಮಾತ್ರ ತತ್ತ್ವಾತ್ಮಿಕಾ ವೇದತ್ರಯಿಯೊಂದಿಗೇ ಸಮ್ಬನ್ಧವಿರುತ್ತದೆ. ತತ್ತ್ವವೇದವನ್ನು ಆಶ್ರಯಿಸದ ಹೊರತು ಈ ತ್ರಯೀಸಮುದ್ರಗಳ ಸಮನ್ವಯವು ಸರ್ವಥಾ ಅಸಮ್ಭವ. ಸಮುದ್ರ ಶಬ್ದವು ಅನನ್ತತೆಯ ಸೂಚಕವೇ ಆಗಿದೆ. ಶಬ್ದಾತ್ಮಕ ವೇದಗ್ರನ್ಥವು ಎಲ್ಲಿ ಸಾದಿ-ಸಾನ್ತವೋ, ಅಲ್ಲಿ ತತ್ತ್ವಾತ್ಮಕ ವೇದವು ಸಮುದ್ರಾತ್ಮಕವಾಗುತ್ತಾ ಅನನ್ತವಾಗಿದೆ. ಇದು ಮಹರ್ಷಿಗಳ ಸುತೀಕ್ಷ್ಣ ಅಭ್ರಿ-ಸ್ಥಾನೀಯ ಬುದ್ಧಿಗಳಿಂದ ಅನ್ವೇಷಣೆಗೊಂಡಿದೆ – “ಯೇ ಸಮುದ್ರಾನ್ನಿರಖನನ್ ದೇವಾಸ್ತೀಕ್ಷ್ಣಾಭಿರಭ್ರಿಭಿಃ”.


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ

Thursday, 9 May 2019

೧೭-ಕೃಷ್ಣಮೃಗ ಮತ್ತು ತ್ರಯೀವೇದ(ಯಜ್ಞಮಾತ್ರಿಕವೇದಃ)

೧೬- ಯಜ್ಞೋ ಹ ವೈ ದೇವೇಭ್ಯೋಽಪಚಕ್ರಾಮ | ಸ ಕೃಷ್ಣೋ ಭೂತ್ವಾ ಚಚಾರ | ತಸ್ಯ ದೇವಾ ಅನುವಿದ್ಯ ತ್ವಚಮೇವಾವಚ್ಛಾಯಾಜಹ್ನುಃ ||೧||

ತಸ್ಯ ಯಾನಿ ಶುಕ್ಲಾನಿ ಚ ಕೃಷ್ಣಾನಿ ಚ ಲೋಮಾನಿ, ತಾನ್ಯೃಚಾಂ ಚ ಸಾಮ್ನಾ ಚ ರೂಪಮ್ | ಯಾನಿ ಶುಕ್ಲಾನಿ, ತಾನಿ ಸಾಮ್ನಾಗ್ಂ ರೂಪಮ್ | ಯಾನಿ ಕೃಷ್ಣಾನಿ, ತಾನೃಚಾಮ್ | ಯದಿ ವೇತರಥಾ-ಯಾನ್ಯೇವ ಕೃಷ್ಣಾನಿ, ತಾನಿ ಸಾಮ್ನಾಗ್ಂ ರೂಪಮ್ | ಯಾನಿ ಶುಕ್ಲಾನಿ, ತಾನ್ಯೃಚಾಮ್ | ಯಾನ್ಯೇವ ಬಭ್ರೂಣೀವ ಹರೀಣಿ, ತಾನಿ ಯಜುಷಾಗ್ಂ ರೂಪಮ್ ||೨||

ಸೈಷಾ ತ್ರಯೀವಿಧ್ಯಾ ಯಜ್ಞಃ | ತಸ್ಯಾ ಏತಚ್ಛಿಲ್ಪಮೇಷ ವರ್ಣಃ | ತದ್ಯತ್ ಕೃಷ್ಣಾಜಿನಂ ಭವತಿ, ಯಜ್ಞಸ್ಯೈವ ಸರ್ವತ್ವಾಯ | ತಸ್ಮಾತ್ ಕೃಷ್ಣಾಜಿನಮಧಿ ದೀಕ್ಷನ್ತೇ, ಯಜ್ಞಸ್ಯೈವ ಸರ್ವತ್ವಾಯ | ತಸ್ಮಾದಧ್ಯವಹನನಮಧಿಪೇಷಣಂ ಭವತಿ, ಅಸ್ಕನ್ನಗ್ಂ ಹವಿರಸದಿತಿ | ತದ್ಯದೇವಾತ್ರ ತಣ್ಡುಲೋ ವಾ, ಪಿಷ್ಟಂ ವಾ ಸ್ಕನ್ದಾತ್, ತದ್ಯಜ್ಞೇ ಯಜ್ಞಃ ಪ್ರತಿಷ್ಠಾತ್ | ಇತಿ ತಸ್ಮಾದಧ್ಯವಹನನಮಧಿಪೇಷಣಂ ಭವತಿ ||೩||
- ಶತಪಥ ಬ್ರಾಹ್ಮಣ ೧|೧|೪|೧-೨-೩

“ಒಮ್ಮೆ ಯಜ್ಞಪುರುಷವು ದೇವತೆಗಳನ್ನು ಬಿಟ್ಟು ಹೊರಬಂದಿತು. ಅದು ಅಭೌತಿಕವಾದ ಕಪ್ಪು ಜಿಂಕೆಯ ರೂಪದಲ್ಲಿ ವಿಚರಿಸುತ್ತಿತ್ತು. ದೇವತೆಗಳು ಅದನ್ನು ಹುಡುಕಿ ತಂದು ತಮ್ಮ ಯಜ್ಞಶಾಲೆಯಲ್ಲಿ ಪುನಃಸ್ಥಾಪಿಸಿದರು. ಈ ಅಭೌತಿಕ ಕೃಷ್ಣಮೃಗಚರ್ಮ್ಮದ ಶುಕ್ಲ-ಕೃಷ್ಣ ಲೋಮಗಳು ಋಚೆಗಳು, ಹಾಗೂ ಸಾಮಗಳ ರೂಪದ್ದಾಗಿದ್ದವು. ಶುಕ್ಲವರ್ಣದ ಲೋಮಗಳು ಸಾಮ ರೂಪದ್ದಾಗಿದ್ದವು ಹಾಗೂ ಕೃಷ್ಣವರ್ಣದ ಲೋಮಗಳು ಋಚೆಗಳ ರೂಪವಾಗಿದ್ದವು. ಅಥವಾ ವಿಲೋಮವಾಗಿಯೂ ತಿಳಿಯಬಹುದು. ಅಂದರೆ ಕೃಷ್ಣವರ್ಣದ ಲೋಮಗಳು ಸಾಮ ರೂಪದ್ದಾಗಿದ್ದವು ಹಾಗೂ ಶುಕ್ಲವರ್ಣದ ಲೋಮಗಳು ಋಚೆಗಳ ರೂಪವಾಗಿದ್ದವು. ಹೊಳಪಿನ ಹರಿಣವರ್ಣದ ಲೋಮಗಳು ಯಜುಗಳ ರೂಪವಾಗಿದ್ದವು. ಅಭೌತಿಕ  ಕೃಷ್ಣಮೃಗ ಚರ್ಮ್ಮಮಯೀ, ವರ್ಣತ್ರಯಾತ್ಮಿಕಾ ಈ ವಿಧ್ಯಾತ್ರಯೀ ಅಥವಾ ವೇದತ್ರಯಿಯೇ ಯಜ್ಞವಾಗಿದೆ. ಇದೇ ವರ್ಣಗಳ ವಿಚಾರ, ಇದೇ ಶಿಲ್ಪದ ವಿಚಾರ. ಯಜ್ಞದ ಸರ್ವತ್ವಕ್ಕಾಗಿಯೇ ಕೃಷ್ಣಾಜಿನವನ್ನು ಗ್ರಹಿಸಲಾಗುತ್ತದೆ. ಇದೇ ಯಜ್ಞದ ಸರ್ವತ್ವಕ್ಕಾಗಿ ಕೃಷ್ಣಾಜಿನದ ಮೇಲೆ ಕುಳಿತು ದೀಕ್ಷೆಯನ್ನು ಪಡೆಯುತ್ತಾರೆ. ಯಜ್ಞೀಯ ಹವಿಸ್ಸು ಯಜ್ಞಸೀಮೆಯಿಂದ ಹೊರಗೆ ಬೀಳದಿರಲಿ ಎಂಬ ಅಭಿಪ್ರಾಯದಿಂದಲೇ ಕೃಷ್ಣಾಜಿನದ ಮೇಲೆಯೇ ಹವಿಸ್ಸಿನ ಕೂಟವನ್ನು ಇಡಲಾಗಿರುತ್ತದೆ, ಹಾಗೂ ಇದರ ಮೇಲೆಯೇ ಪಾತ್ರೆ ಅಥವಾ ಪತ್ರವಿಟ್ಟು ಹವಿಸ್ಸನ್ನು ಮಿಶ್ರಣ ಮಾಡುತ್ತಾರೆ. ಕುಟ್ಟನ (ಕುಟ್ಟುವ) ಹಾಗೂ ಪೇಷಣ (ಬೀಸುವ/ರುಬ್ಬುವ) ಕರ್ಮ್ಮದಿಂದ ಹವಿಸ್ಸಿನ ಯಾವ ಭಾಗವು ಹೊರಬರುತ್ತದೆಯೋ ಅದು ಯಜ್ಞಾತ್ಮಕ ತಣ್ಡುಲ, ಹಾಗೂ ಪಿಷ್ಟ ಭಾಗವು ಯಜ್ಞದಲ್ಲಿಯೇ ಪ್ರತಿಷ್ಠಿತವಾಗಿರಲಿ ಎಂಬ ಕಾರಣಕ್ಕಾಗಿಯೇ ಯಜ್ಞಾತ್ಮಕ ಕೃಷ್ಣಾಜಿನದ ಮೇಲೆಯೇ ಹವಿಸ್ಸಿನ ಕುಟ್ಟನ-ಪೇಷಣ ಮಾಡಲಾಗುತ್ತದೆ.”

ಕಪ್ಪು ಜಿಂಕೆಯ ಚರ್ಮ ಹಾಗೂ ಶುಕ್ಲ-ಕೃಷ್ಣ-ಹರಿತ್ ರೂಪವು ಕ್ರಮವಾಗಿ ಸಾಮ, ಋಕ್, ಯಜುರ್ಮ್ಮಯ, ಕೃಷ್ಣಮೃಗಚರ್ಮ್ಮವು ಸಾಕ್ಷಾತ್ ವೇದತ್ರಯಿಯ ಪ್ರತಿಮೆ ಎಂಬುದೇ ಆಶ್ಚರ್ಯ್ಯ! ವೇದಶಬ್ದದಿಂದ ಶಬ್ದಾತ್ಮಕ ವೇದಗಳ ಅಭಿನಿವೇಶವನ್ನು ಇಟ್ಟುಕೊಳ್ಳುವ ಮಹಾನುಭಾವರು ಕೃಷ್ಣಾಜಿನವನ್ನು ಹೇಗೆ ವೇದತ್ರಯೀ ಎಂದು ನಂಬುತ್ತಾರೆ? ಇದೊಂದು ಜಟಿಲ ಸಮಸ್ಯೆ. ಆದರೂ ಶ್ರುತಿಯು ಸ್ಪಷ್ಟ ಶಬ್ದಗಳಲ್ಲಿ ಈ ಜಟಿಲತೆಯನ್ನು ಅವರ ಮುಂದೆ ಇಟ್ಟಿದೆ. ಹಾಗಾಗಿ ವಿವಶರಾಗಿ ಇದನ್ನು ಒಪ್ಪುವುದೇ ಶಾಸ್ತ್ರನಿಷ್ಠೆಯನ್ನು ಸುರಕ್ಷಿತವಾಗಿರಿಸುತ್ತದೆ ಎಂಬುದು ಆ ವರ್ಗದ ಅಭಿಪ್ರಾಯ. ಈಗ ಸಂಕ್ಷೇಪವಾಗಿ ಶ್ರುತಿಯ ಅಕ್ಷರಗಳ ರಹಸ್ಯಾರ್ಥವೇನೆಂದು ಚಿಂತನೆ ಮಾಡೋಣ.

ಸೌರ-ಸಮ್ವತ್ಸರಮಣ್ಡಲವು ದೇವಪ್ರಾಣಘನವಾಗಿದೆ, ಏಕೆಂದರೆ ಸೌರ ಪ್ರಾಣವನ್ನೇ ದೇವತೆ (ದೇವ) ಎಂದು ನಂಬಲಾಗಿದೆ. ಉದಾಹರಣೆಗೆ ಚಿತ್ರಂ ದೇವಾನಾಮುದಗಾತ್’ (ಶು. ಯಜುಃಸಂ ೧೩|೪೬) ಇತ್ಯಾದಿ ಮನ್ತ್ರವರ್ಣನೆಯಿಂದ ಸ್ಪಷ್ಟವಾಗುತ್ತದೆ. ಸೌರಸಮ್ವತ್ಸರಾವಚ್ಛಿನ್ನ ಸಾವಿತ್ರ ಅಗ್ನಿ, ಅಂದರೆ ಸಾಮ್ವತ್ಸರಿಕ ಅಗ್ನಿಯೇ ಪಾರಮೇಷ್ಠ್ಯ-ಸೋಮಾಹುತಿಯ ಸಮ್ಬನ್ಧದಿಂದ ‘ಯಜ್ಞ’ ಆಗಿದೆ. ಸಾವಿತ್ರಾಗ್ನಿ ಹಾಗೂ ಪಾರಮೇಷ್ಠ್ಯ ಸೋಮದ ಸಮ್ಮಿಲಿತಾವಸ್ಥಾರೂಪೀ ಈ ಸಾಮ್ವತ್ಸರಿಕ ಯಜ್ಞವು ಸೌರ-ಪ್ರಾಣದೇವತೆಗಳ ಪ್ರತಿಷ್ಠಾ ಆಗಿದೆ. ಜ್ಯೋತಿರ್ಮ್ಮಯ ಸೌರ ಪ್ರಾಣವೇ ದೇವಲಕ್ಷಣ ದೇವತೆಯಾಗಿದೆ. ಹಾಗೂ ಎಲ್ಲಿಯವರೆಗೆ ಸಾವಿತ್ರಾಗ್ನಿಯಲ್ಲಿ ಸೋಮಾಹುತಿ ಆಗುತ್ತಿರುತ್ತದೋ, ಅಲ್ಲಿಯವರೆಗೆ “ತ್ವಂ ಜ್ಯೋತಿಷಾ ವಿತಮೋ ವವರ್ಥ” – “ಅದಧಾತ್ ಸೂರ್ಯ್ಯೇ ಜ್ಯೋತಿರಿನ್ದುಃ” ಇತ್ಯಾದಿ ಋಗ್ವರ್ಣನೆಯ ಅನುಸಾರ ಸಾವಿತ್ರಾಗ್ನಿಯು ಜ್ಯೋತಿರ್ಮ್ಮಯವಾಗಿರುತ್ತದೆ. ಹಾಗಾಗಿ ನಾವು ಅವಶ್ಯವಾಗಿ ಈ ಸಾಮ್ವತ್ಸರಿಕ ಯಜ್ಞವನ್ನು ದೇವತೆಗಳ ಪ್ರತಿಷ್ಠಾ ಎಂದು ಹೇಳಬಹುದು. ಇದೇ ಆಧಾರದಲ್ಲಿ ಯಜ್ಞವನ್ನು – “ಯಜ್ಞೋ ವೋ (ದೇವಾನಾಂ) ಅನ್ನಮ್” (ಶತಪಥ ೨-೪-೨-೧) ಇತ್ಯಾದಿರೂಪದಿಂದ ದೇವತೆಗಳ ಅನ್ನ (ಜೀವನ-ಹೇತು) ಎಂದು ನಂಬಲಾಗಿದೆ. ಇದೇ ಯಜ್ಞಾಗ್ನಿಯ ಸಮರ್ಥನೆ ಮಾಡುತ್ತಾ ನಿಮ್ನಲಿಖಿತ ನಿಗಮವಚನಗಳನ್ನು ಓದುಗರ ಸಮ್ಮುಖದಲ್ಲಿ ಉಪಸ್ಥಿತಗೊಳಿಸಲಾಗುತ್ತಿದೆ –

೧-“ಸಮ್ವತ್ಸರ ಏವಾಗ್ನಿಃ” | (ಶತಪಥ ೧೦-೪-೫-೨)
೨-“ಸಾ ಯಾ ಸಾ (ಸೌರೀ) ವಾಕ್-ಆಸೀತ್, ಸೋಽಗ್ನೇರಭವತ್” | (ಜೈ.ಉ.ಬ್ರಾಂ.೨-೨-೧)
೩-“ಅಗ್ನಿರ್ವೈ ಜ್ಯೋತೀ ರಕ್ಷೋಹಾ” | (ಶತಪಥ ೭-೧-೩೪)
೪-“ಏಷ ಉ ವೈ ಯಜ್ಞೋ, ಯದಗ್ನಿಃ” | (ಶತಪಥ ೨-೧-೪-೧೯)
೫-“ಸಮ್ವತ್ಸರೋ ಯಜ್ಞಃ” | (ಶತಪಥ ೧೧-೨-೭-೧)
೬-“ಏಷ ವಾವ ಸಾವಿತ್ರಃ, ಯ ಏಷ ತಪತಿ” | (ತೈ.ಬ್ರಾಂ. ೩-೧೦-೯-೧೫)
೭-“ಯಜ್ಞೋ ವೈ ಸ್ವರಹರ್ದೇವಾಃ ಸೂರ್ಯ್ಯಃ” | (ಶತಪಥ ೧-೧-೨-೨೧)
೮-“ಸೂರ್ಯ್ಯೋಽಗ್ನೇರ್ಯೋನಿರಾಯತನಮ್” | (ತೈ ೩-೯-೧೨-೨,೩)

ವಿಜ್ಞಾನವೇತ್ತರಿಗೆ ವಿದಿತವಾಗಿರುವುದೇನೆಂದರೆ, ಪೃಥ್ವಿಯು ಇದೇ ಯಜ್ಞಾತ್ಮಕ ಸೂರ್ಯ್ಯದ ಉಪಗ್ರಹವಾಗಿದೆ. ಇದನ್ನು ಮೊದಲ ಪ್ರಕರಣದ ‘ಗ್ರಹೋಪಗ್ರಹಭಾವ’ ಪರಿಚ್ಛೇದದಲ್ಲಿ ವಿಸ್ತಾರವಾಗಿ ಹೇಳಿಯಾಗಿದೆ. ೧೫ನೇ ಶ್ರುತಿಯಲ್ಲಿ, ಜ್ಯೋತಿರ್ಮ್ಮಯ ಸೌರ-ಸಾವಿತ್ರಾಗ್ನಿ ಮಹೋಕ್ಥ-ಮಹಾವ್ರತ-ಪುರುಷ (ಬಿಮ್ಬ-ರಶ್ಮಿ-ಅಗ್ನಿ) ರೂಪದಲ್ಲಿ ಋಕ್-ಸಾಮ-ಯಜುರ್ಮ್ಮಯವಾಗಿದೆ, ಎಂದೂ ಸ್ಪಷ್ಟಪಡಿಸಿಯಾಗಿದೆ. ವೇದತ್ರಯೀರೂಪೀ ಈ ಯಜ್ಞಾಗ್ನಿಯು (ಸೌರ-ಸಾಮ್ವತ್ಸರಿಕ ಅಗ್ನಿಯು) ಮುಂದುವರೆದು ‘ಬ್ರಹ್ಮೌದನ’, ಹಾಗೂ ‘ಪ್ರವರ್ಗ್ಯ’ ಭೇದದಿಂದ ೨ ಭಾಗಗಳಲ್ಲಿ ವಿಭಕ್ತವಾಗುತ್ತಾ ಕ್ರಮವಾಗಿ ಶುಕ್ಲ-ಕೃಷ್ಣರೂಪಗಳಲ್ಲಿ ಪರಿಣತವಾಗುತ್ತದೆ. ಇದು ಸೌರ-ಸಮ್ವತ್ಸರಾಗ್ನಿಯ ಅನ್ತರ್ಯ್ಯಾಮ (ಗ್ರನ್ಥಿಬನ್ಧನ-ಚಿತಿ-) ಸಮ್ಬನ್ಧದಿಂದ ಸೂರ್ಯ್ಯಸಂಸ್ಥಾದ ಸ್ವರೂಪರಕ್ಷಕವಾಗುತ್ತಾ ಜ್ಯೋತಿ ರೂಪದಿಂದ ಪ್ರಕಾಶಿತವಾಗುತ್ತಿದೆ, ನಮ್ಮೆಲ್ಲ ಪಾರ್ಥಿವ ಪ್ರಾಣಿಗಳ ದೃಷ್ಟಿಯ ವಿಷಯವಾಗುತ್ತಿದೆ, ಪ್ರತ್ಯಕ್ಷದೃಷ್ಟ ಇದೇ ಜ್ಯೋತಿರ್ಮಯ ಯಜ್ಞಾಗ್ನಿಯು ಸೂರ್ಯ್ಯಬ್ರಹ್ಮದ (ಸ್ವರೂಪರಕ್ಷಕ) ಓದನವಾಗುತ್ತಾ (ಅನ್ನವಾಗುತ್ತಾ) ‘ಬ್ರಹ್ಮೌದನ’ವಾಗಿದೆ. ಹಾಗೂ ಸೂರ್ಯ್ಯಸಂಸ್ಥಾದಿಂದ ಬೇರೆಯಾಗಿ ಯಾವ ಸೌರ-ಯಜ್ಞಾಗ್ನಿಯು ಭೂತ-ಮರ್ತ್ಯಭಾವದಲ್ಲಿ ಪರಿಣತವಾಗಿ ಪೃಥಿವೀರೂಪದಲ್ಲಿ ಪರಿಣತವಾಗಿದೆಯೋ, ಆ ಪೃಥಗ್ ಭಾಗವೇ ‘ಪ್ರವರ್ಗ್ಯ’ , ಅಂದರೆ ಉಚ್ಛಿಷ್ಟವಾಗಿದೆ. ಪ್ರವರ್ಗ್ಯಭಾವಾಪನ್ನ ಯಜ್ಞಾಗ್ನಿಯ ಪಾರಮೇಷ್ಠ್ಯ-ಸೋಮದ ಅಜಸ್ರ (ನಿರಂತರ) ಧಾರೆಯೊಂದಿಗಿನ ಸಮ್ಬನ್ಧವು ಕಡೆದುಹೋಗುತ್ತದೆ, ಹಾಗಾಗಿ ಈ ಪ್ರವರ್ಗ್ಯಾಗ್ನಿ ಲಕ್ಷಣವುಳ್ಳ ಪೃಥಿವಿಯು ಸೋಮಾಹುತಿಯಿಂದ ಉತ್ಪನ್ನವಾಗುವ ಜ್ಯೋತಿಯಿಂದ ವಞ್ಚಿತವಾಗುತ್ತಾ ಕೃಷ್ಣವಾಗಿರುತ್ತದೆ. ಪೃಥಿವಿಯಲ್ಲಿ, ಪಾರ್ಥಿವ ಓಷಧಿ-ವನಸ್ಪತಿಗಳಲ್ಲಿ ಪ್ರತಿಷ್ಠಿತ ಪ್ರವರ್ಗ್ಯ ಯಜ್ಞಾಗ್ನಿಯೇ ‘ಗಾಯತ್ರ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಗಾಯತ್ರಾಗ್ನಿಯೇ ಪಾರ್ಥಿವ ವಿವರ್ತದ ಮೂಲ ಪ್ರತಿಷ್ಠಾ ಆಗಿದೆ. ಗಾಯತ್ರಾಗ್ನಿಯ ಸಮ್ಬನ್ಧದಿಂದಲೇ ಈ ಪೃಥಿವಿಯು ‘ಯಾ ವೈ ಸಾ ಗಾಯತ್ರೀ ಆಸೀದಿಥಂ ವೈ ಸಾ ಪೃಥಿವೀ’ (ಶತಪಥ ೬|೪|೧|೩೫) ಈ ಶ್ರೌತ ಸಿದ್ಧಾನ್ತದ ಅನುಸಾರ ‘ಗಾಯತ್ರೀ’ ಎಂದು ಕರೆಯಲ್ಪಡುತ್ತದೆ. ಸೌರ ಜ್ಯೋತಿರ್ಮ್ಮಯ ಅಗ್ನಿಯು ‘ಆದಿತ್ಯ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ, ಹಾಗೂ ಪಾರ್ಥಿವ ಕೃಷ್ಣ ಅಗ್ನಿಯು ‘ಅಙ್ಗಿರಾ’ ಎಂದು ಪ್ರಸಿದ್ಧವಾಗಿದೆ. ಸೌರ-ಆದಿತ್ಯಾಗ್ನಿಯು ಸೂರ್ಯ್ಯದಿಂದ ನಿರನ್ತರ (‘ನೌಧಸ’-ಸಾಮದ ಆಧಾರದಲ್ಲಿ) ಪೃಥಿವಿಯತ್ತ ಬರುತ್ತಿರುತ್ತದೆ, ಹಾಗೂ ಪಾರ್ಥಿವ ಅಗ್ನಿಯು ಪೃಥಿವಿಯಿಂದ ನಿರನ್ತರ (‘ಶೈತ’-ಸಾಮದ ಆಧಾರದಲ್ಲಿ) ದ್ಯುಲೋಕೋಪಲಕ್ಷಿತ ಸೂರ್ಯ್ಯದತ್ತ ಹೋಗುತ್ತಿರುತ್ತದೆ. ಇದರ ವಿಶದವಾದ ವಿಜ್ಞಾನವು ‘ಆದಿತ್ಯಾನಾಮಯನ’ ಹಾಗೂ ‘ಅಙ್ಗಿರಸಾಮಯನ’ ಎಂಬ ಯಜ್ಞ ವಿಧ್ಯೆಗಳಲ್ಲಿ ಪ್ರತಿಪಾದಿತವಾಗಿದೆ.

ಸೂರ್ಯ್ಯದಿಂದ ಹೊರಟು ಪೃಥಿವಿಯ ಮೇಲೆ ಬರುವ ಪ್ರಾಣಾತ್ಮಕ ಆದಿತ್ಯಾಗ್ನಿಯು ಪೃಥಿವಿಗೆ ಡಿಕ್ಕಿ ಹೊಡೆದು ಪ್ರತಿಫಲನ ಪ್ರಕ್ರಿಯೆಯಿಂದ ವಾಪಸ್ ದ್ಯುಲೋಕದತ್ತ ಹೋಗುತ್ತಿದೆ. ‘ಅಸೌ ವಾ ಆದಿತ್ಯ ಏಷೋಽಶ್ವಃ’ (ಶತಪಥ ೬|೩|೧|೩೯). ಈ ರೀತಿ ಹೋಗುವ ಆದಿತ್ಯಾಗ್ನಿಯಿಂದಲೇ ಆ ಸುಪ್ರಸಿದ್ಧ ‘ಅರ್ಕಾಶ್ವಮೇಧ’ದ ಸ್ವರೂಪವು ಸಮ್ಪನ್ನವಾಗುತ್ತದೆ. ಇದನ್ನು – ‘ಉಷಾ ವಾ ಅಶ್ವಸ್ಯ ಮೇಧ್ಯಸ್ಯ ಶಿರಃ’ ಇತ್ಯಾದಿ ಉಪನಿಷಚ್ಛ್ರುತಿಗಳಲ್ಲಿ ವಿಸ್ತಾರವಾಗಿ ನಿರೂಪಣೆ ಮಾಡಲಾಗಿದೆ. ಇದರಿಂದ ಹೊರಡುವ ನಿಷ್ಕರ್ಷೆ ಏನೆಂದರೆ, ಬ್ರಹ್ಮೌದನಲಕ್ಷಣವುಳ್ಳ ಸೌರ ಆದಿತ್ಯಾಗ್ನಿಯೂ ಪೃಥಿವಿಯಿಂದ ದ್ಯುಲೋಕದತ್ತ ಹೋಗುತ್ತಿದೆ, ಹಾಗೂ ಸೌರ ಆದಿತ್ಯಾಗ್ನಿಯ ಪ್ರವರ್ಗ್ಯ ಅಗ್ನಿಯೂ ಪೃಥಿವಿಯ ಪ್ರಾತಿಸ್ವಿಕ (ಬ್ರಹ್ಮೌದನ) ಅಗ್ನಿಯಾಗುತ್ತಾ, ಅಙ್ಗಿರಾ ಎಂಬ ಹೆಸರನ್ನು ಧರಿಸುತ್ತಾ ದ್ಯೋಲೋಕದತ್ತ ಹೋಗುತ್ತಿದೆ. ಎರಡೂ ಗನ್ತಾರರಲ್ಲಿ ‘ವಯಂ ಪೂರ್ವಂ ಏಷ್ಯಾಮಃ-ವಯಂ ಪೂರ್ವಂ’ ನಾಮುಂದು ತಾಮುಂದು ಎಂಬಂತಹಾ ಪ್ರತಿಸ್ಪರ್ದ್ಧೆಯ ಲಕ್ಷಣವು ಪ್ರತಿಧ್ವನಿಸಲ್ಪಟ್ಟಿದೆ. ಹಾಗೂ ಈ ಪ್ರತಿಸ್ಪರ್ದ್ಧೆಯಲ್ಲಿ ವಿಜಯಶ್ರೀಯು ಆದಿತ್ಯಾಗ್ನಿಗೆ ದೊರಕುತ್ತದೆ. ಕಾರಣವೇನೆಂದರೆ, ಪ್ರತಿಫಲಿತ ಸೌರ ಆದಿತ್ಯಾಗ್ನಿಯು ಪ್ರಾಣಪ್ರಧಾನವಾಗುತ್ತಾ ಅಪೇಕ್ಷಾಕೃತವಾಗಿ ಸಬಲವಾಗಿರುತ್ತದೆ. ಅಲ್ಲಿ ಕೇವಲ ಪೃಥಿವೀ ಕೇನ್ದ್ರದಿಂದ ಮೇಲಕ್ಕೆ ಹೋಗುವ ಸುಪರ್ಣರೂಪೀ ಅಙ್ಗಿರವು ಭೂತಪ್ರಧಾನವಾಗುತ್ತಾ ಅಪೇಕ್ಷಾಕೃತವಾಗಿ ನಿರ್ಬಲವಾಗಿರುತ್ತದೆ. ನಿಮ್ನಲಿಖಿತ ಶ್ರುತಿಗಳು ಆದಿತ್ಯ, ಹಾಗೂ ಅಙ್ಗಿರಾಗಳ ಇದೇ ಪ್ರತಿಸ್ಪರ್ದ್ಧೆಯ ಸ್ಪಷ್ಟೀಕರಣ ಮಾಡುತ್ತಿವೆ –

೧- ಇತ ಏತ ಉದಾರುಹನ್ ದಿವಃ ಪೃಷ್ಠಾನ್ಯಾರುಹನ್ |
ಪ್ರ ಭೂರ್ಜಯೋ ಯಥಾಪಥಾ ದ್ಯಾಮಙ್ಗಿರಸಾ ಯಯುಃ ||
- ಸಾಮ ಸಂ. ಪೂ. ೧|೧೦|೨|

೨- +ಆದಿತ್ಯಾಶ್ಚ ಹ ವಾ ಅಙ್ಗಿರಸಶ್ಚ ಸ್ವರ್ಗೇ ಲೋಕೇ‍ಽಸ್ಪರ್ದ್ಧನ್ತ-ವಯಂ ಪೂರ್ವಂ ಏಷ್ಯಾಮೋ ವಯಮಿತಿ |
ತೇ ಹಾಽಽದಿತ್ಯಾಃ ಪೂರ್ವೇ ಸ್ವರ್ಗಂ ಲೋಕಂ ಜಗ್ಮುಃ, ಪಶ್ಚೇವಾಙ್ಗಿರಸಃ, ಷಷ್ಟ್ಯಾಂ ವಾ ವರ್ಷೇಷು” |
- ಐತ.ಬ್ರಾಂ. ೧೮|೩|೧೭|

+ ಆದಿತ್ಯಾಶ್ಚಾಙ್ಗಿರಸಶ್ಚ ಸುವರ್ಗೇ ಲೋಕೇಽಸ್ಪರ್ದ್ಧನ್ತ, ವಯಂ ಪೂರ್ವೇ ಸುವರ್ಗಂ ಲೋಕಮಿಯಾಮಃ, ವಯಂ ಪೂರ್ವೇ ಇತಿ | ತ ಆದಿತ್ಯಾ ಏತಂ ಪಞ್ಚಹೋತಾರಮಪಶ್ಯನ್ | ತಂ ಪುರಾ ಪ್ರಾತರನುವಾಕಾದಾಗ್ನೀಧ್ರೋಽಜುಹವುಃ | ತತೋ ವೈ ತೇ ಪೂರ್ವೇ ಸುವರ್ಗಂ ಲೋಕಮಾಯತ್ | ಯಃ ಸುವರ್ಗಕಾಮಃ ಸ್ಯಾತ್, ಸ ಪಞ್ಚಹೋತಾರಂ ಪುರಾ ಪ್ರಾತರನುವಾಕಾದಾಗ್ನೀಧ್ರೋ ಜುಹುಯಾತ್ | ಸಮ್ವತ್ಸರೋ ವೈ ಪಞ್ಚಹೋತಾ, ಸಮ್ವತ್ಸರಃ, ಸುವರ್ಗೋ ಲೋಕಃ” |
- ತೈ.ಬ್ರಾಂ. ೨|೨|೩|೫-೬|

ಶ್ರೀಸಾಯಣಾಚಾರ್ಯ್ಯರ ಮತಾನುಸಾರ “ಆದಿತ್ಯ ದೇವತೆಯಾದರೆ, ಅಙ್ಗಿರಾ ಋಷಿಯು. ಇಬ್ಬರೂ ಪೃಥಿವೀಲೋಕದಲ್ಲಿರುವ ಮನುಷ್ಯರು. ಇಬ್ಬರೂ ಸ್ವರ್ಗದತ್ತ ಹೋಗುತ್ತಾರೆ. ಇಬ್ಬರಲ್ಲಿಯೂ ಆದಿತ್ಯನಂತೂ ತತ್‍ಕ್ಷಣವೇ ಸ್ವರ್ಗಕ್ಕೆ ತಲುಪಿಬಿಡುತ್ತಾನೆ. ಅಙ್ಗಿರಾಋಷಿಗಳಲ್ಲಿ ಶಕ್ತಿ-ಅನುಸಾರ ಕೆಲವರು ೬೦ ವರ್ಷದಲ್ಲಿ ಸ್ವರ್ಗಕ್ಕೆ ತಲುಪಿದರೆ, ಕೆಲವರು ೬೦ ವರ್ಷಕ್ಕೂ ಮೊದಲೇ ತಲುಪುತ್ತಾರೆ”.

ಆದರೆ ಸಾರ್ವಕಾಲಿಕ ಸಾರ್ವದೇಶಿಕ ವೈಜ್ಞಾನಿಕತೆಯ ದೃಷ್ಟಿಯಲ್ಲಿ ಶ್ರುತಿಯ ಆದಿತ್ಯ ಮತ್ತು ಅಙ್ಗಿರಾಗಳು ಕ್ರಮವಾಗಿ ಸೌರ-ಪಾರ್ಥಿವ ಅಗ್ನಿಗಳಾಗಿವೆ. ಆದಿತ್ಯಾಗ್ನಿಯು ಪ್ರಾಣ-ಪ್ರಧಾನವಾಗುತ್ತಾ ಪಾರ್ಥಿವ ಆಕರ್ಷಣೆಯಿಂದ ಮುಕ್ತವಾಗಿದೆ, ಅಙ್ಗಿರೋಽಗ್ನಿಯು ಭೂತಪ್ರಧಾನವಾಗುತ್ತಾ ಪಾರ್ಥಿವ ಆಕರ್ಷಣೆಗೆ ಬದ್ಧವಾಗಿದೆ. ಪಾರ್ಥಿವ ಅಙ್ಗಿರೋಽಗ್ನಿಯು ಎಲ್ಲಿಯವರೆಗೆ ಪೃಥಿವಿಯ ಬ್ರಹ್ಮೌದನವಾಗಿರುತ್ತದೆಯೋ, ಅಲ್ಲಿಯವರೆಗೆ ಇದು ಪ್ರವರ್ಗ್ಯ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಇದು ಪ್ರವರ್ಗ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ಇದು ಆದಿತ್ಯಾಗ್ನಿ (ದಿವ್ಯಾಗ್ನಿ) ರೂಪದಲ್ಲಿ ಪರಿಣತವಾಗುವುದಿಲ್ಲ. ಆದಿತ್ಯಾಗ್ನಿರೂಪದಲ್ಲಿ ಪರಿಣತವಾಗದ ಹೊರತು ಇದು ದ್ಯುಲೋಕದ ಬ್ರಹ್ಮೌದನವಾಗುವುದಿಲ್ಲ. ಹಾಗೂ ಪಾರ್ಥಿವ ಅಙ್ಗಿರೋಽಗ್ನಿಯ ಪ್ರವರ್ಗ್ಯರೂಪದಲ್ಲಿ ಪರಿಣತವಾಗುವುದಕ್ಕಾಗಿ ಪಞ್ಚ ರಾಶಿಪಥದ ಬಾರ್ಹಸ್ಪತ್ಯ ಪರಿಭ್ರಮಣವು ಅಪೇಕ್ಷಿತವು.

೧೨ ಸಮ್ವತ್ಸರಗಳಲ್ಲಿ ಬೃಹಸ್ಪತಿಯು ಒಮ್ಮೆ ರಾಶಿಚಕ್ರವನ್ನು ದಾಟುತ್ತದೆ. ಈ ರೀತಿ ೫ ಸಲ ಎಂದರೆ ೧೨ x ೫ = ೬೦ಕ್ಕೆ ಒಂದು ಸಮ್ವತ್ಸರ ಚಕ್ರವನ್ನು ಕ್ರಮಿಸುತ್ತದೆ. ಇದನ್ನೇ ‘ಪಞ್ಚಹೋತಾ’ (ತೈ.ಬ್ರಾಂ. ೨|೨|೩|೫,೬) ಎಂಬಲ್ಲಿ ಸ್ಪಷ್ಟಪಡಿಸಲಾದೆ. ಷಷ್ಟಿಸಮ್ವತ್ಸರಾತ್ಮಕ (೬೦) ಈ ಒಂದು ಮಹಾಸಮ್ವತ್ಸರ ಚಕ್ರದಲ್ಲಿಯೇ (ಪೃಥಿವಿಯ ೫ ಪರಿಕ್ರಮಗಳ ಅನನ್ತರ) ಪಾರ್ಥಿವ ಅಙ್ಗಿರೋಽಗ್ನಿಯು ಪೃಥಿವಿಯಿಂದ ಬೇರೆಯಾಗಿ ಆದಿತ್ಯರೂಪದಲ್ಲಿ ಪರಿಣತವಾಗುತ್ತಾ ದ್ಯುಲೋಕದಲ್ಲಿ ಗಮನ ಮಾಡುತ್ತದೆ. ಆದಿತ್ಯಾಗ್ನಿಯೇ ಸ್ವರ್ಗದ ಅನ್ಯತಮ ಅಧಿಕಾರಿ ಎಂದು ನಂಬಲಾಗಿದೆ, ಹೇಗೆಂದರೆ – “ತಂ (ಸಾವಿತ್ರಾಗ್ನಿವಿಧಮಾದಿತ್ಯಾಗ್ನಿ) ಸ (ಭರದ್ವಾಜಃ) ವಿದಿತ್ತ್ವಾ ಅಮೃತೋ ಭೂತ್ತ್ವಾ ಸ್ವರ್ಗಂ ಲೋಕಮಿಯಾಯ, ಆದಿತ್ಯಸ್ಯ ಸಾಯುಜ್ಯಮ್” (ತೈ.ಬ್ರಾಂ. ೩|೧೦|೧೧|೫) ಇತ್ಯಾದಿ ಬ್ರಾಹ್ಮಣ-ಶ್ರುತಿಯಿಂದ ಸ್ಪಷ್ಟವಾಗಿದೆ.

೧-ತ್ರಿ ರ್ಹ ವಾ ಏಷ (ಮಘವಾ-ಇನ್ದ್ರಃ-ಆದಿತ್ಯಃ-ಸೌರಪ್ರಾಣಃ) ಏತಸ್ಯಾ ಮುಹೂರ್ತ್ತಸ್ಯೇಮಾಂ ಪೃಥಿವೀಂ ಸಮನ್ತಃ ಪರ್ಯ್ಯೇತಿ” 
(ಜೈ.ಬ್ರಾಂ.ಉಪ.೧|೪೪|೯)

೨-ರೂಪಂ ರೂಪಂ ಮಘವಾ ಬೋಭವೀತಿ ಮಾಯಾಃ ಕೃಣ್ವಾನಸ್ತಂನ್ವಂ ಪರಿ ಸ್ವಾಮ್ |
ತ್ರಿರ್ಯದ್ದಿವಃ ಪರಿಮುಹೂರ್ತ್ತಮಾಗಾತ್ ಸ್ವೈರ್ಮ್ಮನ್ತ್ರೈರನೃತುವಾ ಋತಾವಾ ||
- ಋಕ್. ಸಂ. ೩|೫೩|೮|

ಪ್ರಸಙ್ಗೋಪಾತ್ತವಾಗಿ ಸ್ಮರಣೆಯಲ್ಲಿಡಬೇಕಾದ್ದು ಏನೆಂದರೆ, ಯಾವ ರೀತಿ ಪಾರ್ಥಿವ ಅಙ್ಗಿರೋಽಗ್ನಿಯನ್ನು ಆದಿತ್ಯರೂಪದಲ್ಲಿ ಪರಿಣತಗೊಳಿಸುವುದಕ್ಕಾಗಿ ಬೃಹಸ್ಪತಿಯು ರಾಶಿಚಕ್ರ ಕ್ರಮಿಸುವಂತಹಾ ೫ ಸಮ್ವತ್ಸರಗಳು (೬೦ ವರ್ಷಗಳು) ಅಪೇಕ್ಷಿತವೋ, ಹಾಗೆಯೇ ಸೌರ ಆದಿತ್ಯಾಗ್ನಿಯನ್ನು ಸೂರ್ಯ್ಯಮಣ್ಡಲದಿಂದ ಪ್ರವೃಕ್ತಗೊಳಿಸಿ ಪೃಥಿವಿಯ ಪ್ರಾತಿಸ್ವಿಕ ವಸ್ತುವನ್ನಾಗಿಸುವುದಕ್ಕೆ (ಬ್ರಹ್ಮೌದನಲಕ್ಷಣವುಳ್ಳ ಪಾರ್ಥಿವ ಅಙ್ಗಿರೋಽಗ್ನಿಯಾಗಿಸಲು) ಕೇವಲ ಒಂದು ಸಮ್ವತ್ಸರ ಸಾಕಾಗುತ್ತದೆ. ಒಂದು ಸಮ್ವತ್ಸರಾನನ್ತರ ಪ್ರವೃಕ್ತ ಆದಿತ್ಯಾಗ್ನಿಯು ಮೊದಲು ‘ಕುಮಾರಾಗ್ನಿ’ ರೂಪದಲ್ಲಿ ಪರಿಣತವಾಗುತ್ತದೆ, ಕುಮಾರಾಗ್ನಿಯು ಅವಾನ್ತರದಲ್ಲಿ ೮ ವಿವರ್ತ್ತಗಳಾಗುತ್ತದೆ. ಅಷ್ಟವಿಧ ಇದೇ ಕುಮಾರಾಗ್ನಿಯನ್ನು ಚಯನವಿತ್ ‘ಚಿತ್ರಾಗ್ನಿ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಲಾಗಿದೆ. ಈ ಚಿತ್ರಾಗ್ನಿಯೇ ಪಾರ್ಥಿವ ಅಙ್ಗಿರೋಽಗ್ನಿಯಾಗಿದೆ. ಇದುವೇ ಪಾರ್ಥಿವ-ಭೂತಮಾತ್ರಾದ ಸಮ್ಬನ್ಧ-ತಾರತಮ್ಯದಿಂದ ಮುಂದುವರೆದು ‘ಪುರುಷ-ಅಶ್ವ-ಗೋ-ಅವಿ-ಅಜ’ ಭೇದಭಿನ್ನ ಪಞ್ಚವಿಧ, ಭೂತಪ್ರಧಾನ ‘ಪಾಶುಕಾಗ್ನಿ’ಯು ಉತ್ಪನ್ನವಾಗುತ್ತದೆ. ಸರ್ವಸಾಧಾರಣವಾಗಿ ಯಾವುದನ್ನು ಅಗ್ನಿ ಎಂದು ಕರೆಯುತ್ತಾರೋ, ಅದು ಪಾಶುಕ ಅಗ್ನಿಯೇ ಆಗಿದೆ. ಇದರ ತಂದೆಯು ಅಙ್ಗಿರೋಽಗ್ನಿಯಾಗಿದೆ, ಅದುವೇ ಸೌರ-ಮಣ್ಡಲದಿಂದ ಬೇರ್ಪಟ್ಟು ತನ್ನ ಜ್ಯೋತಿರ್ಮ್ಮಯ ಶುಕ್ಲಭಾವವನ್ನು ಕಳೆದುಕೊಳ್ಳುತ್ತಾ ತಮೋಮಯ ಕೃಷ್ಣಭಾವದಲ್ಲಿ ಪರಿಣತವಾಗುತ್ತಿದೆ. ದೇವಮಣ್ಡಲದಲ್ಲಿ ಪ್ರತಿಷ್ಠಿತವಾಗಿರುವ, ಕಾಲಾನ್ತರದ್ಲಲ್ಲಿ ಅಲ್ಲಿಂದ ಪ್ರವೃಕ್ತವಾಗಿ ಪಾರ್ಥಿವರೂಪದಲ್ಲಿ ಪರಿಣತವಾಗುವ, ಜ್ಯೋತಿರೂಪದಿಂದ ತಮೋರೂಪದಲ್ಲಿ ಬರುವಂತಹಾ ಇದೇ ಪಾರ್ಥಿವ-ಯಜ್ಞಾಗ್ನಿಯನ್ನು ಲಕ್ಷ್ಯದಲ್ಲಿರಿಸಿಕೊಂಡು ಶ್ರುತಿಯು ಹೇಳಿರುವುದೇನೆಂದರೆ – “ಯಜ್ಞೋ ವೈ ದೇವೇಭ್ಯೋಽಪಚಕ್ರಾಮ, ಸ ಕೃಷ್ಣೋ ಭೂತ್ತ್ವಾ ಚಚಾರ” |

ಹೇಗೆ ಸೌರಸಾವಿತ್ರಾಗ್ನಿಯು ಪ್ರತ್ಯಕ್ಷದಲ್ಲಿ ತಪಿಸುತ್ತಾ ದೃಷ್ಟಿಯ ವಿಷಯವಾಗುತ್ತದೆಯೋ, ಹಾಗೇ ಪಾರ್ಥಿವ ಗಾಯತ್ರಾಗ್ನಿಯು  ಸಾಧನವಿಶೇಷಗಳಿಂದ ಪ್ರಜ್ವಲಿತವಾಗುವಲ್ಲಿಯವರೆಗೆ ನಮಗದು ಕಾಣುವುದಿಲ್ಲ. ಸೌದೆಯಲ್ಲಿ ಅಗ್ನಿಯು ಸುಪ್ತವಾಗಿರುತ್ತದೆ, ಸೌದೆಯನ್ನು ಪ್ರಜ್ವಲಿಸಿದರೆ, ಅಗ್ನಿಯು (ಭೂತಾಗ್ನಿ-ಅಙ್ಗಿರೋಽಗ್ನಿಯು) ಪ್ರಕಟವಾಯಿತು. ತತ್‍ಕ್ಷಣ ಅದು ಸ್ವರ್ಲೋಕ (ದ್ಯುಲೋಕ)ದತ್ತ ಗಮನ ಆರಮ್ಭಿಸಿತು.

ಶೇಷೇ ವನೇಷು ಮಾತ್ರೋಃ ಸನ್ತ್ವಾ ಮರ್ತ್ತಾಸ ಇನ್ಧತೇ |
ಅತನ್ದ್ರಾ ಹವ್ಯಾ ವಹಸಿ ಹವಿಷ್ಕೃತ ಆದಿದ್ದೇವೇಷು ರಾಜಸಿ ||
(ಋಕ್ಸಂ ೮|೬೦|೧೫)

ಯತ್ ಕೃಷ್ಣೋ ರೂಪಂ ಕೃತ್ತ್ವಾ ಪ್ರಾವಿಶಸ್ತ್ವಂ ವನಸ್ಪತೀನ್ |
ತತಸ್ತ್ವಾಮೇಕವಿಂಶತಿಧಾ ಸಮ್ಭರಾಮಿ ಸುಸಂಭೃತಾ ||
(ತೈ.ಬ್ರಾಂ. ೩)

ಪಾರ್ಥಿವಾಗ್ನಿಯು ಸುಪ್ತವಾಗಿರುವುದರಿಂದ, ಇದನ್ನು ಅವಶ್ಯವಾಗಿ ‘ಕೃಷ್ಣ’ ಎಂದು ಕರೆಯಬಹುದು. ಯಾಜ್ಞಿಕರು ಮನ್ಥನಪ್ರಕ್ರಿಯೆಯ ಮುಖೇನ ಇದನ್ನು ಹುಡುಕುತ್ತಾರೆ, ಹಾಗಾಗಿ ಇದು ಮೃಗ್ಯಮಾಣ (ಹುಡುಕಲ್ಪಡುವ) ಅಗ್ನಿಯು ಅವಶ್ಯವಾಗಿ ‘ಮೃಗ’ ಎಂದು ಕರೆಯಲ್ಪಡುತ್ತದೆ. ಇಲ್ಲಿ ಹರಿಣದ ಹೆಸರು ಮೃಗವೆಂದಲ್ಲ, ಆದರೆ ಪಾರ್ಥಿವ ಕೃಷ್ಣ ಅಗ್ನಿಯ ಹೆಸರು (ಮೃಗ್ಯಮಾಣವಾಗುವುದರಿಂದ) ಮೃಗ ಎಂದಾಗಿದೆ. ಮೃಗ ಶಬ್ದದ ಮುಖ್ಯ ವಾಚ್ಯವು ಆ ಪಾರ್ಥಿವ ಅಗ್ನಿ, ಅದು ವೇದಾತ್ಮಕ ಮೃಗ್ಯಾಗ್ನಿ, ಅಂದರೆ ಯಜ್ಞಾತ್ಮಕ ಸೌರ ಆದಿತ್ಯಾಗ್ನಿಯ ಪ್ರವರ್ಗ್ಯ ಭಾಗವಾಗುವುದರಿಂದ ಸ್ವಯಂ ವೇದಾತ್ಮಕ, ಹಾಗೂ ಯಜ್ಞಾತ್ಮಕವೆಂದೇ ನಂಬಲಾಗಿದೆ. ಬ್ರಹ್ಮಾಗ್ನಿ (ವೇದಾಗ್ನಿ)-ಮಯೀ ಪೃಥಿವಿಯು ಮೃಗವಾಗಿದೆ, ಇದರ ಬಾಹ್ಯಪೃಷ್ಟವು ಮೃಗಚರ್ಮ್ಮವಾಗಿದೆ, ಇದರ ಆಧಾರದಲ್ಲಿ ಪಾರ್ಥಿವ ಭೂತಯಜ್ಞವು ಪ್ರತಿಷ್ಠಿತವಾಗಿದೆ. ಕೃಷ್ಣಾಜಿನದ ಇದೇ ತಾತ್ತ್ವಿಕ ಸ್ವರೂಪವನ್ನು ಲಕ್ಷ್ಯದಲ್ಲಿಟ್ಟುಕೊಂಡು ಶ್ರುತಿಯು ಹೇಳುತ್ತದೆ –

೧-“ಬ್ರಹ್ಮ ವೈ ಕೃಷ್ಣಾಜಿನಮ್” (ಕೌಷೀತಕಿ ಬ್ರಾಂ. ೪|೧೧|)    
೨-“ಬ್ರಹ್ಮಣೋ ವಾ ಏತದ್ರೂಪಂ, ಯತ್ ಕೃಷ್ಣಾಜಿನಮ್” (ತೈ.ಬ್ರಾಂ. ೨|೭|೧|೪)
೩-“ಬ್ರಹ್ಮಣೋ ವಾ ಏತದ್ ಋಕ್ಸಾಮಯೋರೂಪಂ, ಯತ್ ಕೃಷ್ಣಾಜಿನಮ್” (ತೈ.ಬ್ರಾ. ೨|೭|೩|೩)
೪-“ತಸ್ಯ (ಅಗ್ನೇಃ) ಏಷ ಸ್ವೋ ಲೋಕೋ, ಯತ್ ಕೃಷ್ಣಜಿನಮ್” (ಶತಪಥ ೬|೪|೨|೬)
೫-“ಇಯಂ (ಪೃಥಿವೀ) ವೈ ಕೃಷ್ಣಾಜಿನಮ್” (ಶತಪಥ ೬|೪|೧|೯)
೬-“ಯಜ್ಞೋ ವೈ ಕೃಷ್ಣಜಿನಮ್” (ಶತಪಥ ೬|೪|೧|೬)
೭-“ಯಜ್ಞೋ ಹಿ ಕೃಷ್ಣಃ (ಮೃಗಃ), ಸ ಯಃ ಯಜ್ಞಸ್ತತ್ ಕೃಷ್ಣಜಿನಮ್” (ಶತಪಥ ೩|೨|೧|೨೮)

ಪೃಥಿವೀಪೃಷ್ಠದಲ್ಲಿ ಉತ್ಪನ್ನವಾಗುವ ಎಲ್ಲಾ ಪ್ರಾಣಿಗಳ ಮೂಲ ಉಪಾದಾನವಾದ ಸೂರ್ಯಮಾಣವು ಇದೇ ಪಾರ್ಥಿವ ಕೃಷ್ಣಮೃಗಗಳ್ (ಪಾರ್ಥಿವ ಅಗ್ನಿ) ಆಗುತ್ತಿವೆ. ಆದರೆ ಕೆಲವೊಂದು ವಸ್ತುಗಳಲ್ಲಿ ಇದು ವಿಶೇಷವಾಗಿ ಇರುತ್ತದೆ. ಯಾವ ವಸ್ತುಗಳಲ್ಲಿ ಇದರ ಪ್ರಧಾನತೆ ಇದೆಯೋ, ಅವು ಅಗ್ನಿಯ ಪ್ರಾತಿಸ್ವಿಕ ಪ್ರತಿಮೆ ಎಂದು ನಂಬಲ್ಪಟ್ಟಿವೆ, ಹಾಗೂ ಪೃಥ್ವಿಯ ಯಾವ ಪ್ರದೇಶದಲ್ಲಿ, ಯಾವ ಭೂಖಣ್ಡದಲ್ಲಿ ಸ್ವಭಾವತಃ ಈ ಅಗ್ನಿಪ್ರಧಾನ ವಸ್ತುಗಳ ವಿಕಾಸವಿದೆಯೋ, ಆ ಪಾರ್ಥಿವ ಖಣ್ಡವು (ಅಗ್ನಿಪ್ರಧಾನವಾಗುವುದರಿಂದ) ಯಜ್ಞೀಯ ಪ್ರದೇಶ ಎಂದು ನಂಬಲ್ಪಟ್ಟಿದೆ. ಆಖು (ಇಲಿ), ಅಶ್ವತ್ಥ (ಪಿಪ್ಪಲ), ರಕ್ತ ಅಶ್ವ (ಕೆಂಪುಕುದುರೆ), ಕೃಷ್ಣಮೃಗ (ಕಪ್ಪು ಜಿಂಕೆ), ಈ ಪದಾರ್ಥಗಳು ಅಗ್ನಿಪ್ರಧಾನವೆಂದು ನಂಬಲ್ಪಟ್ಟಿವೆ. ಸೌರ-ದೇವಮಣ್ಡಲದಿಂದ ಪ್ರವರ್ಗ್ಯರೂಪದಿಂದ ಪಲಾಯಿತ ಪಾರ್ಥಿವಾಗ್ನಿಯ, ಅಗ್ನಿರೂಪೀ ಯಜ್ಞವನ್ನು ಇವುಗಳಲ್ಲಿ ಪ್ರಧಾನವಾಗಿ ಒಪ್ಪಲಾಗಿದೆ. ಆಖು, ಅಶ್ವತ್ಥ, ಅಶ್ವ, ಮೃಗ ಎಂಬೀ ನಾಲ್ಕೇ ಯಜ್ಞಾಗ್ನಿಯ ಹೆಸರುಗಳಾಗಿವೆ. ಯಾವ ಪದಾರ್ಥಗಳಲ್ಲಿ, ಯಾವ ಪ್ರಾಣಿಗಳಲ್ಲಿ ಈ ಯಜ್ಞಾಗ್ನಿಯ ಪ್ರಧಾನತೆಯು ಇರುತ್ತದೆಯೋ, ಅವೂ ಕೂಡ ಮುಂದುವರೆದು ಇದೇ ಹೆಸರುಗಳಿಂದ ಪ್ರಸಿದ್ಧವಾಗಿವೆ. ನಿಮ್ನಲಿಖಿತ ಶ್ರುತಿಗಳು ಅಗ್ನಿಯ ಇದೇ ಪ್ರಾತಿಸ್ವಿಕ (ಸ್ವಂತ) ಪ್ರವರ್ಗ್ಯರೂಪಗಳ ಸಮರ್ಥನೆ ಮಾಡುತ್ತಿವೆ –

೧-“ಅಗ್ನಿರ್ದೇವೇಭ್ಯೋ ನಿಲಾಯತ, ಆಖೂರೂಪಂ ಕೃತ್ವಾ |
ಸ ಪೃಥಿವೀಂ ಪ್ರಾವಿಶತ್” |
(ತೈ.ಬ್ರಾಂ. ೧|೧|೩|೩)

೨-“ಅಗ್ನಿರ್ದೇವೇಭ್ಯೋ ನಿಲಾಯತ, ಅಶ್ವೋರೂಪಂ ಕೃತ್ವಾ |
ಸೋಽಶ್ವತ್ಥೇ ಸಮ್ವತ್ಸರಮತಿಷ್ಠತ್” |
(ತೈ.ಬ್ರಾಂ. ೧|೧|೩|೯)

೩-“ರೋಹಿತೋ ಹಾಗ್ನೇರಶ್ವಃ
(ಶತಪಥ ೬|೬|೩|೪)

ಅಗ್ನಿಯ ಉಕ್ತ ನಾಲ್ಕೂ ಪ್ರವರ್ಗ್ಯ-ರೂಪಗಳಲ್ಲಿ ಮೃಗಪಶುವನ್ನೇ ಅಗ್ನಿಯ ನೇದಿಷ್ಠ ಪ್ರತಿಮೆ ಎಂದು ನಂಬಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅಗ್ನಿಯು ಸ್ವಯಂ ತ್ರಯೀಮೂರ್ತ್ತಿಯಾಗಿದೆ, ಬ್ರಹ್ಮ (ವೇದ) ರೂಪವಾಗಿದೆ. ಅಲ್ಲಿ ಆಖೂ, ಅಶ್ವತ್ಥ, ರಕ್ತಾಶ್ವ, ಕೃಷ್ಣಮೃಗ, ಈ ನಾಲ್ಕರಿಂದ ಮೃಗಪಶುವಿನಲ್ಲಿ ಅಗ್ನಿಯ ಜೊತೆಜೊತೆಗೆ ಶುಕ್ಲ-ಕೃಷ್ಣ-ಬಭ್ರೂ ರೂಪದಿಂದ ವೇದತ್ರಯಿಯ ವರ್ಣಗಳ ವಿಕಾಸವೂ ಆಗಿದೆ. ಇದೇ ಕಾರಣದಿಂದ, ಪೂರ್ವದಲ್ಲಿ ಯಾವ ೭ ಶ್ರುತಿಗಳ ಉಲ್ಲೇಖ ಮಾಡಿದ್ದೇವೆಯೋ, ಅದರಲ್ಲಿ ಸರ್ವತ್ರ ‘ಕೃಷ್ಣಜಿನ’ ಶಬ್ದವೇ ಪ್ರಯುಕ್ತವಾಗಿದೆ, ಹಾಗೂ ಅದನ್ನು ಬ್ರಹ್ಮ-ಯಜ್ಞ ರೂಪವೆಂದು ಹೇಳಲಾಗಿದೆ. ಯಾವ ಭೂಪ್ರದೇಶದಲ್ಲಿ ವೇದತ್ರಯಿಯ ಪ್ರತಿಮಾರೂಪೀ ಈ ಕೃಷ್ಣಮೃಗವು ಸ್ವಚ್ಛನ್ದವಾಗಿ ವಿಚರಣ ಮಾಡುತ್ತದೆಯೋ, ಆ ಭೂಪ್ರದೇಶವೇ ಪ್ರಕೃತ್ಯಾ ಯಜ್ಞೀಯ ಪ್ರದೇಶ ಎಂದು ಕರೆಯಲ್ಪಡುತ್ತದೆ. ಅದೇ ವೇದಪ್ರದೇಶವೆಂದು ನಂಬಲಾಗುತ್ತದೆ, ಅದೇ ವೇದಧರ್ಮ್ಮದ ಉದ್ಗಮವಾಗುತ್ತದೆ, ಈ ವೇದಧರ್ಮ್ಮವೇ ‘ಸನಾತನಧರ್ಮ್ಮ’ ಎಂದು ಪ್ರಸಿದ್ಧವಾಗಿದೆ. ಇದರ ಪ್ರಚಾರ-ಪ್ರಸಾರದ ಶ್ರೇಯಸ್ಸು ಏಕಮಾತ್ರ ಭಾರತವರ್ಷಕ್ಕೆ ಸಿಕ್ಕಿದೆ. ಭಾರತವರ್ಷದ ಇದೇ ವೈದಿಕತೆಯ ಸ್ಪಷ್ಟೀಕರಣ ಮಾಡುತ್ತಾ ಮನು ಹೇಳುತ್ತಾರೆ –

ಕೃಷ್ಣಸಾರಸ್ತು ಚರತಿ ಮೃಗೋ ಯತ್ರ ಸ್ವಭಾವತಃ |
ಸ ಜ್ಞೇಯೋ ಯಜ್ಞಿಯೋ ದೇಶೇ ಮ್ಲೇಚ್ಛದೇಶಸ್ತ್ವತಃ ಪರಃ ||
- ಮನುಃ ೨|೨೩

ಕೃಷ್ಣಮೃಗ-ಚರ್ಮ್ಮವು ಅಗ್ನಿಯ ಪ್ರತಿಮೆಯಾಗಿದೆ ಎಂದು ಪೂರ್ವ ನಿರೂಪಣೆಯಿಂದ ಚೆನ್ನಾಗಿ ಸಿದ್ಧವಾಗುತ್ತದೆ. ಈಗ ನೋಡಬೇಕಾಗಿರುವುದು ಏನೆಂದರೆ, ಇದು ಹೇಗೆ ತ್ರಯೀಮೂರ್ತ್ತಿಯಾಗಿದೆ?, ಹಾಗೂ ಯಾವ ಆಧಾರದಲ್ಲಿ ಇದನ್ನು ಯಜ್ಞಸ್ವರೂಪವೆಂದು ನಂಬಲಾಗಿದೆ? ಸೌರವೇದವನ್ನು ‘ಗಾಯತ್ರೀಮಾತ್ರಿಕ’ ವೇದವೆಂದು ಕರೆಯಲಾಗಿದೆ, ಇದನ್ನು ೧೪-೧೫ ಶ್ರುತಿಗಳಲ್ಲಿ ದಿಗ್ದರ್ಶನ ಮಾಡಿಸಿಯಾಗಿದೆ. ಸೂರ್ಯ್ಯಬಿಮ್ಬವು ಮಹೋಕ್ಥವಾಗುತ್ತಾ ಋಕ್ ಆಗಿದೆ, ಸೌರಜ್ಯೋತಿರ್ಮ್ಮಣ್ಡಲವು (ರಶ್ಮಿಮಣ್ಡಲ) ಮಹಾವ್ರತವಾಗುತ್ತಾ ಸಾಮವಾಗಿದೆ, ಹಾಗೂ ಈ ಎರಡೂ ವಯೋನಾಧಗಳಿಂದ ಸೀಮಿತ ಸನ್ಧಿಗತ ಸೌರ ಅಗ್ನಿಯು (ಸಾವಿತ್ರಾಗ್ನಿಯು) ಯಜುಃ ಆಗಿದೆ. ಋಗ್ ರೂಪೀ ಸೂರ್ಯ್ಯಬಿಮ್ಬವು ಸ್ವಸ್ವರೂಪದಿಂದ ಕೃಷ್ಣವರ್ಣವಾಗಿದೆ, ಸಾಮರೂಪೀ ಸೂರ್ಯ್ಯಮಣ್ಡಲವು ಸ್ವಸ್ವರೂಪದಿಂದ ಶುಕ್ಲವರ್ಣವಾಗಿದೆ, ಸಾನ್ಧ್ಯ ಅಗ್ನಿರೂಪೀ ಯಜುವು ಬಭ್ರೂರೂಪವಾಗಿದೆ. ಇದೇ ಆಧಾರದಲ್ಲಿ ನಾವು ಏನು ಹೇಳಬಹುದೆಂದರೆ, ಋಚೆಗಳು ಕೃಷ್ಣವರ್ಣಮಯೀ ಆಗಿವೆ, ಸಾಮವು ಶುಕ್ಲವರ್ಣಮಯೀ ಆಗಿದೆ, ಹಾಗೂ ಯಜುವು ‘ಬಭ್ರೂಣೀವ ಹರೀಣಿ’ ಆಗಿದೆ. ಇದುವೇ ಪ್ರಾಕೃತಿಕ ಸ್ಥಿತಿಯಾಗಿದೆ. ಈಗ ದೃಶ್ಯ-ಸ್ಥಿತಿಯ ಅನುಸಾರ ವೇದವರ್ಣಗಳ ಮೀಮಾಂಸೆ ಮಾಡೋಣ. ಸ್ಥಿತಿಯ ಅನುಸಾರ ಎಲ್ಲಿ ಋಕ್ ಕೃಷ್ಣ, ಹಾಗೂ ಸಾಮ ಶುಕ್ಲ ಎಂದು ನಂಬಲಾಗುತ್ತದೆಯೋ, ಅಲ್ಲಿ ದೃಷ್ಟಿಯ ಅನುಸಾರ ಋಕ್ ಶುಕ್ಲ, ಹಾಗೂ ಸಾಮ ಕೃಷ್ಣ ಎಂದು ನಂಬಲಾಗುತ್ತದೆ. ಜ್ಯೋತಿರ್ಮ್ಮಣ್ಡಲಲಕ್ಷಣ, ತತ್ಕಾರಣ ಶುಕ್ಲವರ್ಣೋಪೇತ ಸಾಮವು ನಮ್ಮ ದೃಷ್ಟಿಯ ವಿಷಯವಾಗುವುದಿಲ್ಲ. ಸಾಮಮಣ್ಡಲಗರ್ಭದಲ್ಲಿ ಪ್ರತಿಷ್ಠಿತ ಸೂರ್ಯ್ಯಬಿಮ್ಬವು ದೃಷ್ಟಿಯ ವಿಷಯವಾಗುತ್ತದೆ. ಋಗ್ ರೂಪೀ ಸೂರ್ಯ್ಯಬಿಮ್ಬವು ನಮ್ಮ ದೃಷ್ಟಿಯ ವಿಷಯವಾಗುತ್ತದೆ. (ದೃಷ್ಟಿಯ ಅಪೇಕ್ಷೆಯಲ್ಲಿ) ಎಲ್ಲಿ ಶುಕ್ಲವೆಂದು ನಂಬಲಾಗುತ್ತದೆಯೋ, ಅಲ್ಲಿ ಸಾಮರೂಪೀ ಸೂರ್ಯ್ಯಮಣ್ಡಲವು ದೃಷ್ಟಿಯಿಂದ ಅತೀತವಾಗುತ್ತಾ (ದೃಷ್ಟಿಯ ಅಪೇಕ್ಷೆಯಲ್ಲಿ) ಕೃಷ್ಣವೆಂದೇ ಕರೆಯಲ್ಪಡುತ್ತದೆ. ಇದೇ ಆಧಾರದಲ್ಲಿ ಸ್ಥಿತಿಭಾವವನ್ನು ಪ್ರಧಾನವೆಂದು ನಂಬಿ, ಎಲ್ಲಿ ಶ್ರುತಿಯು- “ತಾನಿ ಶುಕ್ಲಾನಿ, ತಾನಿ ಸಾಮ್ನಾಂ ರೂಪಂ, ಯಾನಿ ಕೃಷ್ಣಾನಿ, ತಾನಿ-ಋಚಾಮ್” ಎಂದು ಹೇಳಿದೆಯೋ, ಅಲ್ಲಿ ದೃಷ್ಟಿಭಾವಕ್ಕೆ ಪ್ರಧಾನತೆಯನ್ನು ನೀಡುತ್ತಾ – “ಯದಿ ವೇತರಥಾ | ಯಾನ್ಯೇವ ಕೃಷ್ಣಾನಿ, ತಾನಿ ಸಾಮ್ನಾಂ ರೂಪಂ, ಯಾನ್ಯೇವ ಶುಕ್ಲಾನಿ ತಾನ್ಯೃಚಾಮ್” ಇದನ್ನು ಹೇಳಲು ಯಾವುದೇ ಆಪತ್ತಿ ಇಲ್ಲ. ಕೃಷ್ಣಮೃಗಚರ್ಮ್ಮದಲ್ಲಿ ಈ ಮೂರೂ ವೇದವರ್ಣಗಳ ಪ್ರಾಜಾಪತ್ಯ ಶಿಲ್ಪರೂಪದಿಂದ ಯಥಾವತ್ ಸನ್ನಿವೇಶವಾಗಿದೆ. ಸೃಷ್ಟಿಕರ್ತ್ತಾ ಪ್ರಜಾಪತಿಯನ್ನು ಇದರ ಚರ್ಮ್ಮದಲ್ಲಿ ದೊಡ್ಡ ಶಿಲ್ಪದೊಂದಿಗೆ ಮೂರೂ ವೇದವರ್ಣಗಳ ಸಮನ್ವಯ ಮಾಡಲಾಗಿದೆ. ಹಾಗೂ ಇದೇ ವರ್ಣತ್ರಯಿಯ ಆಧಾರದಲ್ಲಿ ಈ ಕೃಷ್ಣಮೃಗ-ಚರ್ಮ್ಮವನ್ನು ಅವಶ್ಯವಾಗಿಯೇ ವೇದತ್ರಯಿಯ ಪ್ರತಿಮೆ ಎಂದು ನಂಬಬಹುದು.

ಋಕ್-ಅಗ್ನಿಮಯವಾಗಿದೆ, ಇದೇ ಗಾರ್ಹಪತ್ಯಾಗ್ನಿಯ (ಪಾರ್ಥಿವ ಅಗ್ನಿಯ) ಪ್ರತಿಷ್ಠಾ ಆಗಿದೆ. ಯಜುವು ವಾಯುಮಯವಾಗಿದೆ, ಇದೇ ಧಿಷ್ಣವಾಗ್ನಿಯ (ಆನ್ತರಿಕ್ಷ್ಯಾಗ್ನಿಯ) ಪ್ರತಿಷ್ಠಾ ಆಗಿದೆ. ಸಾಮ ಆದಿತ್ಯಮಯವಾಗಿದೆ, ಹಾಗೂ ಇದೇ ಆಹವನೀಯಾಗ್ನಿಯ (ದಿವ್ಯಾಗ್ನಿಯ) ಪ್ರತಿಷ್ಠಾ ಆಗಿದೆ. ಈ ಮೂರೂ ಅಗ್ನಿಗಳ ಸಮಷ್ಟಿಯೇ ‘ವಿತಾನಯಜ್ಞ’ ಆಗಿದೆ. ವೇದತ್ರಯಿಯ ಆಧಾರದಲ್ಲಿ ಈ ಯಜ್ಞಾಗ್ನಿಯ ವಿತಾನ (ವ್ಯಾಪ್ತಿ) ಆಗುತ್ತದೆ. ಹಾಗಾಗಿ ನಾವು ಅವಶ್ಯವಾಗಿ ವೇದತ್ರಯಿಯನ್ನು ಯಜ್ಞಾತ್ಮಿಕಾ ಎಂದು ಹೇಳಬಹುದು. ಕೃಷ್ಣಮೃಗವು ವೇದತ್ರಯೀ ರೂಪವಾಗಿರುವ ಕಾರಣ, ಇದನ್ನೂ ಸಾದೃಶ್ಯಭಾವದ ಅಪೇಕ್ಷೆಯಿಂದ ಅವಶ್ಯವಾಗಿಯೇ ಯಜ್ಞಾತ್ಮಕವೆಂದು ನಂಬಬಹುದಾಗಿದೆ. ಆಹುತಿಗಾಗಿ ತಣ್ಡುಲಗಳನ್ನು ಕುಟ್ಟಿ-ರುಬ್ಬಿ ಯಾವ ಪುರೋಡಾಶವನ್ನು ಮಾಡಲಾಗುತ್ತದೆಯೋ, ಅದೂ ಯಜ್ಞಸಾಧಕವಾಗುವುದರಿಂದ ಯಜ್ಞರೂಪವೆಂದೇ ನಂಬಲಾಗಿದೆ. ಯಾಜ್ಞಿಕ ವಿದ್ವಾಂಸರ ಸಿದ್ಧಾನ್ತವೇನೆಂದರೆ, ಒಂದುವೇಳೆ ಯಜ್ಞದ ಯಾವುದೇ ಯಜ್ಞೀಯ ಪದಾರ್ಥವು ಯಜ್ಞಭೂಮಿಯಿಂದ, ಯಜ್ಞ-ಸೀಮೆಯಿಂದ ಇತರೆ ಅಯಜ್ಞೀಯ ಸ್ಥಾನದಲ್ಲಿ ಹೋಗಿ ಬಿದ್ದರೆ, ಆಗ ಅದು ಸಪತ್ನಗಳ ಭಾಗವಾಗುತ್ತಾ ಯಜ್ಞಕರ್ತ್ತಾ ಯಜಮಾನನ ಶತ್ರುಗಳ ವೃದ್ಧಿಯ ಕಾರಣವಾಗುತ್ತದೆ. ಇದೇ ವಿಪ್ರತಿಪತ್ತಿಯ ನಿರಾಕರಣೆಗಾಗಿ ಈ ದರ್ಶೇಷ್ಟಿಯಲ್ಲಿ ಕೃಷ್ಣಾಜಿನವು ಗೃಹೀತವಾಗಿದೆ. ಇದು ಏಕೆಂದರೆ ಕೃಷ್ಣಾಜಿನವು ಸ್ವಯಂ ಯಜ್ಞರೂಪವಾಗಿದೆ. ಹಾಗಾಗಿ ಕುಟ್ಟುವುದು-ರುಬ್ಬುವುದರ ಸಮಯದಲ್ಲಿ ಯಾವ ಭಾಗವು ಹಾರಿ ಇದರ ಮೇಲೆ ಬೀಳುತ್ತದೆಯೋ, ಅದು ಯಜ್ಞ ಪ್ರತಿಷ್ಠಾದಲ್ಲಿಯೇ ಪ್ರತಿಷ್ಠಿತವೆಂದು ನಂಬಲ್ಪಡುತ್ತದೆ.

ಉಕ್ತ ‘ಕೃಷ್ಣಾಜಿನಶ್ರುತಿಸಮನ್ವಯ’ದಿಂದ ಪ್ರಕೃತದಲ್ಲಿ ನಮಗೆ ಕೇವಲ ಏನು ಹೇಳಬೇಕಾಗಿತ್ತು ಎಂದರೆ, ಕೃಷ್ಣಾಜಿನದ ವರ್ಣಗಳನ್ನು ವೇದಾತ್ಮಕ, ಹಾಗೂ ಶಬ್ದಾತ್ಮಕ ವೇದದ ಭಕ್ತಿಯ ಜೊತೆಜೊತೆಗೆ ತತ್ತ್ವಾತ್ಮಕ ವೇದವನ್ನೂ ತಮ್ಮ ಉಪಾಸ್ಯವನ್ನಾಗಿಸಿಕೊಂಡಾಗ ಮಾತ್ರ ಯಜ್ಞಾತ್ಮಕವೆಂದು ಹೇಳುವುದು  ಸುಸಙ್ಗತವಾಗಲು ಸಾಧ್ಯ. ತತ್ತ್ವಾತ್ಮಿಕಾ ವೇದಸತ್ತೆಯನ್ನು ಸ್ವೀಕರಿಸಿದ ಹೊರತು ಯಾವ ರೀತಿಯಲ್ಲಿಯೂ ಪ್ರಕೃತ ಶ್ರುತಿಯ ಸಮನ್ವಯವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ

Saturday, 4 May 2019

೧೬-ಸೂರ್ಯ್ಯಸಂಸ್ಥಾ ಮತ್ತು ತ್ರಯೀವೇದ

(ಗಾಯತ್ರೀಮಾತ್ರಿಕವೇದಃ)

೧೫- ಯದೇತನ್ಮಣ್ಡಲಂ ತಪತಿ-ತನ್ಮಹದುಕ್ಥಂ, ತಾ ಋಚಃ, ಸ ಋಚಾಂ ಲೋಕಃ | 
ಅಥ ಯದೇತದರ್ಚಿರ್ದೀಪ್ಯತೇ-ತನ್ಮಹಾವ್ರತಂ, ತಾನಿ ಸಾಮಾನಿ, ಸ ಸಾಮ್ನಾಂ ಲೋಕಃ | 
ಅಥ ಯ ಏವ ಏತಸ್ಮಿನ್ ಮಣ್ಡಲೇ ಪುರುಷಃ-ಸೋಽಗ್ನಿಃ, ತಾನಿ ಯಜೂಂಷಿ, ಸ ಯಜುಷಾಂ ಲೋಕಃ | 
ಸೈಷಾ ತ್ರಯ್ಯೇವ ವಿಧ್ಯಾ ತಪತಿ | 
ತದ್ಧೈತದಪ್ಯವಿದ್ವಾಂಸ ಆಹುಃ-ತ್ರಯೀ ವಾಽಏಷಾ ವಿಧ್ಯಾ ತಪತೀತಿ | 
ವಾಗ್ಘೈವ ತತ್ ಪಶ್ಯನ್ತೀ ವದತಿ ||
- ಶತಪಥ ೧೦|೫|೨|೧-೨


“ಇಲ್ಲಿ ಯಾವ ಮಣ್ಡಲ (ಸೂರ್ಯ್ಯಬಿಮ್ಬ) ತಪಿಸುತ್ತಿದೆಯೋ, ಅದು ಮಹದುಕ್ಥವಾಗಿದೆ, ಅವು ಋಚೆಗಳಾಗಿವೆ, ಅದುವೇ ಋಚೆಗಳ ಲೋಕವಾಗಿದೆ. ಇಲ್ಲಿ ಯಾವ ರಶ್ಮಿಮಣ್ಡಲವು ಪ್ರದೀಪ್ತವಾಗುತ್ತಿರುವುದೋ, ಅದು ಮಹಾವ್ರತವಾಗಿದೆ, ಅವು ಸಾಮವಾಗಿವೆ, ಅದುವೇ ಸಾಮಗಳ ಲೋಕವಾಗಿದೆ. ಈ ಮಣ್ಡಲದಲ್ಲಿ ಯಾವ ಪುರುಷ (ಅಗ್ನಿರೂಪೀ ವಸ್ತುತತ್ತ್ವ) ಇರುವುದೋ, ಅದು ಅಗ್ನಿಯಾಗಿದೆ, ಅವು ಯಜು ಆಗಿವೆ, ಅದುವೇ ಯಜುಗಳ ಲೋಕವಾಗಿದೆ. ಅಲ್ಲಿ ಈ ತ್ರಯೀವಿಧ್ಯೆಯೇ ತಪಿಸುತ್ತಿದೆ. ಆ (ವೈಧಿಕ ಯುಗದಲ್ಲಿ) ಸಾಮಾನ್ಯ ಮನುಷ್ಯರೂ ಹೇಳುತ್ತಿದ್ದುದೇನೆಂದರೆ, ‘ನೋಡಿ ಸೂರ್ಯ್ಯವು ಹೇಗೆ ತಪಿಸುತ್ತಿದೆ, ತ್ರಯೀವಿಧ್ಯಾ ತಪಿಸುತ್ತಿದೆ’ಪ್ರಕೃತ ಶ್ರುತಿಯ “ತದ್ಧೈತದಪ್ಯವಿದ್ವಾಂಸ ಆಹುಃ” ವಾಕ್ಯವು ಬಹಳ ಚಮತ್ಕಾರಪೂರ್ಣವಾಗಿದೆ. ವರ್ತ್ತಮಾನ ಮೂರ್ನಾಲ್ಕು ಶತಾಬ್ದಿಯ ವಿದ್ವಾಂಸರು ಸೂರ್ಯ್ಯಪಿಣ್ಡದ ಋಗ್ವೇದತ್ತ್ವ, ಸೌರರಶ್ಮಿಮಣ್ಡಲದ ಸಾಮವೇದತ್ತ್ವ, ಹಾಗೂ ಸೌರಸಾವಿತ್ರಾಗ್ನಿಯ ಯಜುರ್ವೇದತ್ತ್ವವನ್ನು ಸ್ವೀಕರಿಸಲು ವಿಚಿಕಿತ್ಸೆ ಹೊಂದಿದ್ದರೂ, ಅತೀತ ಭಾರತದ ಆ ವೈಜ್ಞಾನಿಕ ಯುಗದಲ್ಲಿ ಸರ್ವಸಾಧಾರಣವಾಗಿಯೂ ಪಾರಸ್ಪರಿಕ ವ್ಯವಹಾರಗಳಲ್ಲಿ ಸೂರ್ಯ್ಯದ ತ್ರಯೀವಿಧ್ಯಾಭಾವದ ಯಶೋಗಾನವನ್ನು ಮಾಡುತ್ತಿದ್ದರು. ಸೂರ್ಯ್ಯವು ತ್ರಯೀವಿಧ್ಯಾಘನ ಹೇಗಾಗಿದೆ?, ಇದಕ್ಕಾಗಿ ಪ್ರಮಾಣದ ಆವಶ್ಯಕತೆ ಇಲ್ಲ. ‘ಪಶ್ಯನ್ತೀ’ ಎಂದು ಪ್ರಸಿದ್ಧವಾದ ಸ್ವಯಂ ಸೌರೀ ವಾಕ್ಕೇ ತನ್ನ ವೇದಸ್ವರೂಪದ ಪ್ರತ್ಯಕ್ಷವತ್ ಅಭಿನಯ ಮಾಡುತ್ತಿದೆ. ಪ್ರತ್ಯಕ್ಷದೃಷ್ಟ ಇದೇ ವೇದವಾಕ್ಕನ್ನು ನೋಡಿ ಸಾಮಾನ್ಯನೂ ಸೂರ್ಯ್ಯವೇದದ ಸಾಕ್ಷಾತ್ಕಾರ ಮಾಡಿಕೊಂಡಿದ್ದಾನೆ, ಇದೇ ತಾತ್ಪರ್ಯ್ಯವನ್ನು ವ್ಯಕ್ತಪಡಿಸಲು “ವಾಗ್ಘೈವ ತತ್ ಪಶ್ಯನ್ತೀ ವದತಿ” ಎಂದು ಹೇಳಲಾಗಿದೆ.


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.