Wednesday, 24 July 2019

೨೭-ಪ್ರಾಜಾಪತ್ಯಸೃಷ್ಟಿ ಮತ್ತು ವೇದತ್ರಯೀ


(ಪ್ರಾಜಾಪತ್ಯವೇದಃ)
(೨೯)- “ಪ್ರಜಾಪತಿಸ್ತಪೋಽತಪ್ಯತ | ತಪಸ್ತಪ್ತ್ವಾ ಪ್ರಾಣಾದೇವೇಮಂ ಲೋಕಂ ಪ್ರಾಬೃಹತ್, ಅಪಾನಾದನ್ತರಿಕ್ಷಲೋಕಂ, ವ್ಯಾನಾದಮುಂ ಲೋಕಮ್ | ಏತಾಂಸ್ತ್ರೀಂಲ್ಲೋಕಾನಭ್ಯತಪ್ಯತ | ಸೋಽಗ್ನಿಮೇವಾಸ್ಮಾಲ್ಲೋಕಾದಸೃಜತ, ವಾಯುಮನ್ತರಿಕ್ಷಲೋಕಾತ್, ಆದಿತ್ಯಂ ದಿವಃ | ಏತಾನಿ ತ್ರೀಣಿ ಜ್ಯೋತೀಷ್ಯಾಭ್ಯತಪ್ಯತ | ಸೋಽಗ್ನಿರೇವರ್ಚೋಽಸೃಜತ, ವಾಯೋರ್ಯಜೂಂಷಿ, ಆದಿತ್ಯಾತ್ ಸಾಮಾನಿ” | 
- ಕೌಷೀತಕೀ ಬ್ರಾಹ್ಮಣ |೧೦|

ಪ್ರಜಾಪತಿಯು ತಪಿಸಿತು. ತಪಶ್ಚರ್ಯ್ಯೆಯ ಮುಖೇನ ತನ್ನ ಪ್ರಾಣಭಾಗದಿಂದ ಪೃಥಿವೀಲೋಕ, ಅಪಾನಭಾಗದಿಂದ ಅನ್ತರಿಕ್ಷಲೋಕ, ಹಾಗೂ ವ್ಯಾನಭಾಗದಿಂದ ದ್ಯುಲೋಕ ಉತ್ಪನ್ನ ಮಾಡಿತು. ‘ತತ್ ಸೃಷ್ಟ್ವಾ ತದೇವಾನುಪ್ರಾವಿಶತ್ಎಂಬ ಸಿದ್ಧಾನ್ತಾನುಸಾರ ಮೂರೂ ಲೋಕಗಳಲ್ಲಿ ಪ್ರವಿಷ್ಟವಾಗಿ ಪ್ರಜಾಪತಿಯು ಮೂರೂ ಲೋಕಗಳನ್ನು ತನ್ನ ತಪೋಬಲದಿಂದ ಯುಕ್ತಗೊಳಿಸಿತು. ( ಎರಡನೆಯ ತಪಕರ್ಮ್ಮದಿಂದ) ಪ್ರಜಾಪತಿಯು ಪೃಥಿವೀಲೋಕದಿಂದ ಅಗ್ನಿ, ಅನ್ತರಿಕ್ಷಲೋಕದಿಂದ ವಾಯು, ಹಾಗೂ ದ್ಯುಲೋಕದಿಂದ ಆದಿತ್ಯರನ್ನು ಉತ್ಪನ್ನಗೊಳಿಸಿತು. ಮುಂದುವರೆದು ಮೂರೂ ಜ್ಯೋತಿಗಳನ್ನು ಆಧಾರವಾಗಿಸಿಕೊಂಡು ತಪದ ಅನುಗಮನ ಮಾಡಿತು


( ಮೂರನೆಯ ತಪಃ ಕರ್ಮ್ಮದಿಂದ) ಪ್ರಜಾಪತಿಯು ಅಗ್ನಿಯಿಂದ ಋಚೆಗಳನ್ನು ಉತ್ಪನ್ನ ಮಾಡಿತು, ವಾಯುವಿನಿಂದ ಯಜುವನ್ನು ಉತ್ಪನ್ನ ಮಾಡಿತು, ಹಾಗೂ ಆದಿತ್ಯದಿಂದ ಸಾಮವನ್ನು ಉತ್ಪನ್ನ ಮಾಡಿತು”. ಪ್ರಾಣ, ಪೃಥಿವೀ, ಅಗ್ನಿ, ಋಕ್, ಇವು ನಾಲ್ಕೂ ಸಮಾನ ಧರ್ಮ್ಮಗಳಾಗಿವೆ. ಅಪಾನ, ಅನ್ತರಿಕ್ಷ, ವಾಯು, ಯಜುಃ, ಇವು ನಾಲ್ಕೂ ಸಮಾನ ಧರ್ಮಗಳಾಗಿವೆ. ಹಾಗೂ ವ್ಯಾನ, ದ್ಯೌ, ಆದಿತ್ಯ, ಸಾಮ, ಇವು ನಾಲ್ಕೂ ಸಮಾನ ಧರ್ಮಗಳಾಗಿವೆ. ಇದೇ ಪ್ರಾಜಾಪತ್ಯಸೃಷ್ಟಿಯ ಸಂಕ್ಷಿಪ್ತ ಇತಿವೃತ್ತವಾಗಿದ್ದು, ವಿಶುದ್ಧ ತತ್ತ್ವ ವಾದದ ಮೇಲೆಯೇ ಪರ್ಯ್ಯವಸಾನವಾಗಿದೆ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Monday, 22 July 2019

೨೬-ಭೃಗ್ವಙ್ಗಿರಾ ಮತ್ತು ವೇದತ್ರಯೀ

(ಭೃಗ್ವಙ್ಗಿರೋವೇದಃ)(೨೮)- “ಆಪೋ ಭೃಗ್ವಙ್ಗಿರೋರೂಪಮಾಪೋ ಭೃಗ್ವಙ್ಗಿರೋಮಯಮ್ | ಸರ್ವಮಾಪೋಮಯಂ ಭೂತಂ ಸರ್ವಂ ಭೃಗ್ವಙ್ಗಿರೋಮಯಮ್ | ಅನ್ತರೈತೇ ತ್ರಯೋ ವೇದಾ ಭೃಗೂನಙ್ಗಿರಸೋಽನುಗಾಃ” |
- ಗೋ.ಬ್ರಾಂ.ಪೂ. |೩೯|

ಪಾರಮೇಷ್ಠ್ಯ ಅಪ್ ತತ್ತ್ವ (ತನ್ನ ಸ್ನೇಹಗುಣದಿಂದ) ಭೃಗುರೂಪವಾಗಿದೆ, ಹಾಗೂ (ತೇಜೋಗುಣದಿಂದ) ಅಙ್ಗಿರೋಮಯವಾಗಿದೆ. ಆಪವು ಭೃಗ್ವಙ್ಗಿರೋಮಯವಾಗಿದೆ. ಸಮ್ಪೂರ್ಣ ಭೂತಪ್ರಪಞ್ಚವು ಆಪೋಮಯವಾಗಿರುವ ಕಾರಣ, ಎಲ್ಲವೂ ಭೃಗ್ವಙ್ಗಿರೋಮಯವಾಗಿವೆ. ಭೃಗ್ವಙ್ಗಿರೋಮಯ ಆಪಃಸಮುದ್ರದ (ಪಾರಮೇಷ್ಠ್ಯ ಸಮುದ್ರದ) ಗರ್ಭದಲ್ಲಿ ಮೂರೂ ವೇದಗಳು (ಅಗ್ನಿಮಯ ಋಗ್ವೇದ, ವಾಯುಮಯ ಯಜುಃ, ಹಾಗೂ ಆದಿತ್ಯಮಯ ಸಾಮವೇದ) ಪ್ರತಿಷ್ಠಿತವಾಗಿವೆ. ಹಾಗೂ ಮೂರೂ ವೇದ ಭೃಗ್ವಙ್ಗಿರಾದ ಅನುಯಾಯಿಗಳಾಗಿಯೇ ಇರುತ್ತವೆ”.

ಸೂರ್ಯ್ಯವೇದವೇ ಭೃಗ್ವಙ್ಗಿರೋವೇದವಾಗಿದೆ. ತ್ರಯೀವೇದಘನ ಸೂರ್ಯ್ಯವು ಭೃಗ್ವಙ್ಗಿರೋಮಯ ಪಾರಮೇಷ್ಠ್ಯ ಅಪ್ಸಮುದ್ರದ ಗರ್ಭದಲ್ಲಿಯೇ ಪ್ರತಿಷ್ಠಿತವಾಗಿರುತ್ತದೆ, ಉದಾ – “ಅಪಾಂ ಗಮ್ಭನ್ ಸೀದ” (ಯಜುಃಸಂ ೧೩|೩೦|) – “ಕಂಸ್ವಿದ್ಗರ್ಭ ಪ್ರಥಮಂ ದಧ್ರ ಆಪಃ” (ಋಕ್ಸಂ ೧೦|೮೨||) ಇತ್ಯಾದಿ ಶ್ರುತಿಗಳಿಂದ ಸ್ಪಷ್ಟವಾಗಿದೆ. ಆಪೋಮಯ ಭೃಗ್ವಙ್ಗಿರೋವೇದವೇ ಅಥರ್ವವೇದವಾಗಿದೆ. ತದ್ಗರ್ಭೀಭೂತ ಋಗಾದಿಯೇ ತ್ರಯೀವೇದವು. ಹಾಗೂ ವೇದಚತುಷ್ಟಯಿಯು ವಿಶುದ್ಧ ತಾತ್ವಿಕವೇದಕ್ಕೇ ಸಮ್ಬನ್ಧಿಸಿದ್ದಾಗಿದೆಯೇ ಹೊರತು ಇದನ್ನು ಕೇವಲ ಶಬ್ದವೇದದ ಆಧಾರದಲ್ಲಿ ಪ್ರಯತ್ನಸಹಸ್ರಗಳಿಂದಲೂ ಸಮನ್ವಯ ಮಾಡಲಾಗುವುದಿಲ್ಲ. 


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Sunday, 14 July 2019

೨೫ - ಲೋಕಚತುಷ್ಟಯೀ ಮತ್ತು ವೇದಚತುಷ್ಟಯೀ


(ಸ್ತೌಮ್ಯವೇದಃ)

(೨೭)- “ಋಚಾಮಗ್ನಿರ್ದೈವತಂ ಪೃಥಿವೀಸ್ಥಾನಮ್ | ಯಜುಷಾಂ ವಾಯುರ್ದೈವತಂ ಅನ್ತರಿಕ್ಷಸ್ಥಾನಮ್ | ಸಾಮ್ನಾಮಾದಿತ್ಯದೈವತಂ ದ್ಯೌಃಸ್ಥಾನಮ್ | ಅಥರ್ವ್ವಣಾಂ ಚನ್ದ್ರಮಾದೈವತಮಾಪಃ ಸ್ಥಾನಮ್” | (ಗೋ.ಬ್ರಾಂ.)

ಚಿತ್ಯ ಭೂಪಿಣ್ಡದಿಂದ ಸಮ್ಬದ್ಧ ಚಿತೇನಿಧೇಯಾ ಮಹಾಪೃಥಿವಿಯ ತ್ರಿವೃತ್, ಪಞ್ಚದಶ, ಏಕವಿಂಶ, ತ್ರಯಸ್ತ್ರಿಂಶ, ಸ್ತೋಮಭೇದದಿಂದ ನಾಲ್ಕು ಪ್ರಧಾನ ಲೋಕಗಳೆಂದು ನಂಬಲಾಗಿದೆ. ನಾಲ್ಕೂ ಸ್ತೋಮ-ಲೋಕಗಳು ಕ್ರಮವಾಗಿ ಪೃಥಿವೀ, ಅನ್ತರಿಕ್ಷ, ದ್ಯೌ, ಆಪಃ, ಎಂಬ ಹೆಸರುಗಳಿಂದ ಪ್ರಸಿದ್ಧವಾಗಿವೆ. ನಾಲ್ಕು ಲೋಕಗಳಿಗೆ ಕ್ರಮವಾಗಿ ಅಗ್ನಿ, ವಾಯು, ಆದಿತ್ಯ, ಚನ್ದ್ರಮಾ, ಎಂಬೀ ನಾಲ್ಕು ದೇವತೆಗಳು ಅಧಿಷ್ಠಾತೃಗಳೆಂದು ನಂಬಲಾಗಿದೆ. ಇದೇ ನಾಲ್ಕರೊಂದಿಗೆ ಕ್ರಮವಾಗಿ ಋಕ್, ಯಜುಃ, ಸಾಮ, ಅಥರ್ವ, ಎಂಬ ನಾಲ್ಕು ವೇದಗಳ ಸಮ್ಬನ್ಧವಿದೆ. ನಾಲ್ಕರಲ್ಲಿಋಕ್-ಸಾಮ-ಯಜುರ್ವೇದಇವು ಅಗ್ನಿವೇದಗಳು, ನಾಲ್ಕನೆಯದಾದ ಅಥರ್ವವೇದವು ಸೋಮವೇದವಾಗಿದೆ. ಪೃಥಿವೀಯ ತ್ರಿವೃತ್ () ಸ್ತೋಮಪರ್ಯ್ಯನ್ತ ಅಗ್ನಿದೇವತಾಮಯ ಋಗ್ವೇದವು ಪ್ರತಿಷ್ಠಿತವಾಗಿದೆ, ಪಞ್ಚದಶ (೧೫) ಸ್ತೋಮಪರ್ಯ್ಯನ್ತ ವಾಯುದೇವತಾಮಯ ಯಜುರ್ವೇದವು ಪ್ರತಿಷ್ಠಿತವಾಗಿದೆ, ಏಕವಿಂಶ (೨೧) ಸ್ತೋಮಪರ್ಯನ್ತ ಆದಿತ್ಯದೇವತಾಮಯ ಸಾಮವೇದವು ಪ್ರತಿಷ್ಠಿತವಾಗಿದೆ. ಹಾಗೂ ತ್ರಯಸ್ತ್ರಿಂಶ (೩೩) ಸ್ತೋಮಪರ್ಯ್ಯನ್ತ ಸೋಮದೇವತಾಮಯ ಅಥರ್ವವೇದವು ಪ್ರತಿಷ್ಠಿತವಾಗಿದೆ. ಇದೇ ಪಾರ್ಥಿವ-ವೇದಚತುಷ್ಟಯಿಯನ್ನು ವಿಜ್ಞಾನಭಾಷೆಯಲ್ಲಿ ಯಜ್ಞಮಾತ್ರಿಕವೇದ ಎಂದು ಕರೆಯಲಾಗುತ್ತದೆ. ಪ್ರಕೃತ ಗೋಪಥಶ್ರುತಿಯು ತತ್ತ್ವಾತ್ಮಿಕಾವಾದಂತಹಾ ಇದೇ ವೇದಚತುಷ್ಟಯಿಯ ವಿಸ್ಪಷ್ಟ ಶಬ್ದಗಳಿಂದ ಸ್ಪಷ್ಟೀಕರಣ ನೀಡುತ್ತಿದೆ. ಇದಕ್ಕೆ ಶಬ್ದಾತ್ಮಕ ವೇದದೊಂದಗೆ ಯಾವುದೇ ಸಮ್ಬನ್ಧವಿಲ್ಲ.


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ಜಿ