Thursday, 31 December 2020

ಮಾರ್ಗಶಿರಾ ಗುರುಪುಷ್ಯದ ಬಗ್ಗೆ ಮೇದಿನೀ ಜ್ಯೋತಿಷೀಯ ಜಿಜ್ಞಾಸೆ

ಪ್ರಶ್ನೆ:- ಇಂದು ರಾತ್ರಿ ಘಂಟೆ 07 - 48 (ಸ್ಥೂಲವಾಗಿ) ವರೆಗೆ ಪುನರ್ವಸು ನಕ್ಷತ್ರ ಇದೆ; ಬಳಿಕ ಪುಷ್ಯಾ -- ಇಂದು ಗುರು ಪುಷ್ಯಾರ್ಕ ಅಮೃತ ಯೋಗ ಇದೆಯೆಂದು ಕೆಲವು ಜನರು ಅಭಿಪ್ರಾಯ ಪಡುತ್ತಾರೆ: ಇದನ್ನು ನಿಸ್ಸಂದಿಗ್ಧವಾಗಿ ತಿಳಿಸಿ ಕೊಡಬಹುದೇ?

ಪೃಚ್ಛಕರು

- Kulamarva Keshavakrishna Kasaragod

ಜ್ಯೋತಿಷ್ಯಶಾಸ್ತ್ರ - ಅಧಿಕೃತ ಗ್ರೂಪ್

31/12/2020 12:40 AM 

 

ಉತ್ತರ:- ಶ್ರೀ ಸೂರ್ಯಸಿದ್ಧಾಂತ ಮತ್ತು  ಕೆಲ ಪ್ರಮುಖ ದೃಕ್ಸಿದ್ಧಾಂತದ ಅಯನಾಂಶಗಳ ಪ್ರಕಾರ 31-12-2020ರ ಅಂದಾಜು ಸಂಜೆ ಐದು ಮುಕ್ಕಾಲಿಂದ ಎಂಟು ಘಂಟೆಯೊಳಗೆ ಆರಂಭವಾಗಿ 01-01-2021 ಸಂಜೆ ಅಂದಾಜು ಐದು ಮುಕ್ಕಾಲಿಂದ ಎಂಟುವರೆಯೊಳಗೆ ಮುಗಿಯುತ್ತದೆ. ಅದನ್ನು ಕೆಳಕಂಡ ಕೋಷ್ಠಕದಲ್ಲಿ ಪ್ರದರ್ಶಿಸಲಾಗಿದೆ. ಯಾರು ಯಾವ ಗಣಿತ ಮತ್ತು ಯಾವ ಸಿದ್ಧಾಂತವನ್ನು ನಂಬುತ್ತಾರೋ ಅದರಂತೆ ನಕ್ಷತ್ರವೇಳೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.

ಸಿದ್ಧಾಂತ + ಅಯನಾಂಶ

ಪುಷ್ಯ

ಆರಂಭ

ಪುಷ್ಯ

ಮುಕ್ತಾಯ

ಶ್ರೀ ಸೂರ್ಯ ಸಿದ್ಧಾಂತ

31-12-2020 20:00:01

01-01-2021 20:24:00

ದೃಕ್ಸಿದ್ಧಾಂತ ಪುಷ್ಯಪಕ್ಷ

31-12-2020 17:42:01

01-01-2021

18:11:00

ದೃಕ್ಸಿದ್ಧಾಂತ ರಾಮನ್

31-12-2020 17:08:01

01-01-2021

17:37:00

ದೃಕ್ಸಿದ್ಧಾಂತ ಕೆ.ಪಿ.

31-12-2020 19:38:01

01-01-2021 20:04:00

ದೃಕ್ಸಿದ್ಧಾಂತ ಚಿತ್ರಪಕ್ಷ

31-12-2020 19:46:01

01-01-2021 20:13:00

ದೃಕ್ಸಿದ್ಧಾಂತ ಲಹರಿ

31-12-2020 19:48:01

01-01-2021 20:15:00

ದೃಕ್ಸಿದ್ಧಾಂತ ಸಾಯನ

29-12-2020 22:22:01

30-12-2020 23:39:00

ಗುರುಪುಷ್ಯ ಯೋಗವು ಪುಷ್ಯಾಮೃತ, ಸರ್ವಾರ್ಥಸಿದ್ಧಿ ಯೋಗ, ಅಮೃತಸಿದ್ಧಿ ಯೋಗವೂ ಆಗಿದೆ. ಪುಷ್ಯ ನಕ್ಷತ್ರದಲ್ಲಿ ಶುರು ಮಾಡಿದ ಎಲ್ಲಾ ಕಾರ್ಯಗಳು ಸಿದ್ಧಿಸುತ್ತವೆ: 

"ಗುರೌ ಪುಷ್ಯ ಸಮಾಯೋಗೇ ಸಿದ್ಧಯೋಗಃ ಪ್ರಕೀರ್ತಿತಃ"

"ಪುಷ್ಯ ಸಿದ್ಧೌ ನಕ್ಷತ್ರೇ"

"ಸಿಧ್ಯನ್ತಿ ಅಸ್ಮಿನ್ ಸರ್ವಾಣಿ ಕಾರ್ಯಾಣಿ ಸಿಧ್ಯಃ |

ಪುಷ್ಯನ್ತಿ ಅಸ್ಮಿನ್ ಸರ್ವಾಣಿ ಕಾರ್ಯಾಣಿ ಇತಿ ಪುಷ್ಯ ||"

ಪುಷ್ಯದ ದೇವತೆ ಬೃಹಸ್ಪತಿ. ತೈತ್ತಿರೀಯ ಬ್ರಾಹ್ಮಣ 3.1.1.5 ಇಲ್ಲಿ ಹೀಗಿದೆ: 

"ಬೃಹಸ್ಪತಿಃ ಪ್ರಥಮಂ ಜಾಯಮಾನಸ್ತಿಷ್ಯಂ ನಕ್ಷತ್ರಮಭಿಸಮ್ಭಭೂವ |

ಶ್ರೇಷ್ಠೋ ದೇವಾನಾಂ ಪೃತನಾಸು ಜಿಷ್ಣುಃ ದಿಶೋಽನುಸರ್ವಾ ಅಭಯಂ ನೋ ಅಸ್ತು ||"

ಮೊದಮೊದಲು ಪ್ರಕಟವಾದಾಗ ಬೃಹಸ್ಪತಿಯು ತಿಷ್ಯ (ಪುಷ್ಯ) ನಕ್ಷತ್ರದಂತೆ ಕಂಡುಬಂದರು. ಪುನರ್ವಸುವು ಧನದಾಯಕವಾದ ವಿಶೇಷ ನಕ್ಷತ್ರವಾದರೆ ಪುಷ್ಯವು ಪೋಷಣೆ ಮಾಡುವಂತಹಾ ಮಂಗಳಮಯ ನಕ್ಷತ್ರರಾಜವಾಗಿದೆ. ಗುರುಪುಷ್ಯದ ಸಮಯದಲ್ಲಿ ಪ್ರಕೃತಿಯಲ್ಲಿ ಅಮೃತೋದ್ಭವವಾಗುವ ಕಾರಣ ಅದಕ್ಕೆ ಮಹತ್ವ ಬಂದಿತು. ಅದಕ್ಕೆ ಸಂಬಂಧಿಸಿದ ಔಷಧೀಯ, ಖರೀದಿ ಇತ್ಯಾದಿ ಕಾರ್ಯಗಳನ್ನು ಜ್ಯೋತಿಷ್ಯವು ಗುರುತಿಸಿತು. ಆದರೆ ವಿವಾಹ ಮುಹೂರ್ತವಿರುವುದಿಲ್ಲ ಎಂಬ ನಂಬಿಕೆ ಇದೆ. 

ಇಲ್ಲಿ ಗುರುವಿಗೆ ಮಹತ್ವವಿದೆ. ಏಕೆಂದರೆ ಗುರು ಹೋರೆಯಲ್ಲಿ ಸೂರ್ಯೋದಯವಾಗುವುದರಿಂದ ಸರದಿಯಂತೆ ಇಂದು ಗುರುವಾರ ಬಂದಿರುತ್ತದೆ. ಸಹ್ಯಾದ್ರಿಯ ಮಲೆನಾಡು ನಮ್ಮೂರು ಚಿಕ್ಕಮಗಳೂರಿಗೆ ಇಂದಿನ ಹೋರೆಗಳನ್ನು ನೋಡೋಣ. ಇಲ್ಲಿ ಇಂದು ಅಂದಾಜು ಸರಾಸರಿ ಸಂಜೆ ಐದು ಮುಕ್ಕಾಲು ಎಂಬ ಆರಂಭಕಾಲವನ್ನು ಗಣಿಸಿ ಸುವರ್ಣಾಕ್ಷರಗಳಲ್ಲಿ ನೀಡಿರುವಷ್ಟು 14 ಹೋರೆಗಳ ಕಾಲ, ಅಂದರೆ ನಾಳೆ ಬೆಳಗ್ಗೆ ಸೂರ್ಯೋದಯದವರೆಗೆ ಗುರುಪುಷ್ಯ ಸಿಗುತ್ತದೆ. ನನ್ನ ವೈಯಕ್ತಿಕ ಇಂಗಿತದ ಪ್ರಕಾರ ಇಂದು ರಾತ್ರಿ 8:53:01 ರಿಂದ 9:53:00 ರವರೆಗೆ ಗುರು ಹೋರೆಯಲ್ಲಿ ಗುರು-ಪುಷ್ಯದ ಗರಿಷ್ಠ ಸಮಯ.  

 

ಹೋರೆ

ಮುಕ್ತಾಯ ಕಾಲ

ಗುರು

7:53

ಕುಜ

8:53

ರವಿ

9:53

ಶುಕ್ರ

10:53

ಬುಧ

11:53

ಚಂದ್ರ

12:53

ಶನಿ

13:53

ಗುರು

14:53

ಕುಜ

15:53

ರವಿ

16:53

ಶುಕ್ರ

17:53

ಬುಧ

18:53

ಚಂದ್ರ

19:53

ಶನಿ

20:53

ಗುರು

21:53

ಕುಜ

22:53

ರವಿ

23:53

ಶುಕ್ರ

0:53

ಬುಧ

1:53

ಚಂದ್ರ

2:53

ಶನಿ

3:53

ಗುರು

4:53

ಕುಜ

5:53

ರವಿ

6:53

ಶುಕ್ರ

7:53

ಇದನ್ನು ಗಮನಿಸುವಾಗ ಇದರ ಹಿಂದೆಯೇ ಗಮನಿಸಬೇಕಾದ ಇನ್ನೊಂದು ಮುಖ್ಯವಾದ ಅಂಶವೆಂದರೆ ಸಿದ್ಧಾಂತ ವಾಕ್ಯದ ಪ್ರಕಾರ "ಮಾರ್ಗಶಿರ ಮಾಸ"ದ ಹುಣ್ಣಿಮೆಗೆ "ಮೃಗಶಿರಾ ನಕ್ಷತ್ರ" ಬರಬೇಕು. ಹಾಗೆ ಪ್ರತಿ ಮಾಸದ ಹುಣ್ಣಿಮೆಗೆ ಆಯಾಯ ಮಾಸದ ಹೆಸರಿನ ನಕ್ಷತ್ರವು ಇರಲೇಬೇಕು. ಎಲ್ಲಾ ಮಾಸಗಳಲ್ಲಿ ಇದು ಸಿಗುತ್ತಿಲ್ಲ. ಧೈವಕೃಪೆಯಿಂದ ಈ ಮಾಸದಲ್ಲಿ ಸಿಗುತ್ತಿದೆ ಎಂಬುದೇ ಖುಷಿಯ ವಿಚಾರ. ಮುಂದೆ ಬರಲಿರುವ ಹುಣ್ಣಿಮೆಯು ಪುಷ್ಯ ನಕ್ಷತ್ರದಲ್ಲಿ ಘಟಿಸಿ ಪುಷ್ಯ ಮಾಸವಾಗುವುದರಿಂದ ಕಾಲ, ದೇಶ, ಪಾತ್ರ ಅನುಸಂಧಾನದ ಮುಖೇನ ನೋಡಿದರೆ ಈ ಗುರು ಪುಷ್ಯವು ಅದಕ್ಕೆ ಸಂಯೋಜನೆಯಾಗುತ್ತದೆ. ಅದಕ್ಕೆ ಸರಿಯಾಗಿ ನಮ್ಮ ಗುರುಗಳು ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರಿನಲ್ಲಿ ರಾಜಸೂಯ ಸೋಮಯಾಗ ಸಂಯೋಜನೆಯಾಗಿರುವುದರಿಂದ ಹಿಂದೆಯೇ ಅದಕ್ಕೆ ಸಂಬಂಧಪಟ್ಟ ಮಾಸ ಗಣಿತವು ಸರಿಹೊಂದುವಂತೆ ಸಂಸ್ಕರಣೆ ಆಗಿರುವಂತೆ ಕಾಣುತ್ತದೆ. ಇದೇ ಆಧಾರದಲ್ಲಿ ಅನ್ವೇಷಿಸಿ ಸಂಸ್ಕರಣೆ ಮಾಡಿಕೊಂಡರೆ ಮುಂದಿನ ಮಾಸಗಳಿಗೂ ಸರಿಹೊಂದಿಸಲು ಸಾಧ್ಯವಾಗಬಹುದು. ಇಲ್ಲಿ ಪ್ರಕೃತಿಯ ನಡೆಯ ಆಧಾರದಲ್ಲಿ ಗಣಿತವು ರೂಪುಗೊಳ್ಳುತ್ತದೆ. ಹಾಗಾಗಿ ಪ್ರಾಕೃತಿಕ ಚರ್ಯೆಯಿಂದಲೇ ಗಣಿತ ಮಾಡಿಕೊಳ್ಳುವುದು ವೇದಗಣಿತದ ಮಾರ್ಗ.

ಪ್ರಸಕ್ತ ಕಾಲೀನ ಪಂಚಾಂಗ ಗಣಿತವು ಹಲವೆಡೆ ತಪ್ಪಿ ಹೋಗಿದೆ. ಇದಕ್ಕೆ ಪಂಚಾಂಗ ಕರ್ತರು ಉತ್ತರಿಸುವುದಿಲ್ಲ. ಉತ್ತರಿಸಿದರೂ ವಿತಂಡವಿರುತ್ತದೆಯೇ ಹೊರತು ಅವರ ಗಣಿತ ಸರಿ ಇಲ್ಲವೆಂದು ಒಪ್ಪಿಕೊಳ್ಳುವುದಿಲ್ಲ. ಯಾವಾಗಲೋ ಲೆಕ್ಕ ತಪ್ಪಿದ್ದಾರೆ ಎಂಬುದಂತೂ ಸತ್ಯ. ಅದನ್ನು ಸರಿಪಡಿಸಿಕೊಳ್ಳುವ ವಿಶಾಲ ಚಿಂತನೆ ಮತ್ತು ಸಂಶೋಧನೆ ನಡೆಯಬೇಕಿದೆ.

 

ಸಿದ್ಧಾಂತ + ಅಯನಾಂಶ

ಮೃಗಶಿರಾ

ಆರಂಭ

ಮೃಗಶಿರಾ

ಮುಕ್ತಾಯ

ಹುಣ್ಣಿಮೆ

ಆರಂಭ

ಹುಣ್ಣಿಮೆ

ಮುಕ್ತಾಯ

ಶ್ರೀ ಸೂರ್ಯ ಸಿದ್ಧಾಂತ

28-12-2020 15:50:01

29-12-2020 17:41:00

29-12-2020 7:25:01

30-12-2020 8:31:00

ದೃಕ್ಸಿದ್ಧಾಂತ ಪುಷ್ಯಪಕ್ಷ

28-12-2020 13:25:01

29-01-2020

15:21:00

29-12-2020 7:55:01

30-12-2020 8:58:00

ದೃಕ್ಸಿದ್ಧಾಂತ ರಾಮನ್

28-12-2020 12:49:01

29-12-2020

14:45:00

29-12-2020 7:55:01

30-12-2020 8:58:00

ದೃಕ್ಸಿದ್ಧಾಂತ ಕೆ.ಪಿ.

28-12-2020 15:28:01

29-12-2020 17:20:00

29-12-2020 7:55:01

30-12-2020 8:58:00

ದೃಕ್ಸಿದ್ಧಾಂತ ಚಿತ್ರಪಕ್ಷ

28-12-2020 15:37:01

29-12-2020 17:30:00

29-12-2020 7:55:01

30-12-2020 8:58:00

ದೃಕ್ಸಿದ್ಧಾಂತ ಲಹರಿ

28-12-2020 15:39:01

29-12-2020 17:32:00

29-12-2020 7:55:01

30-12-2020 8:58:00

ದೃಕ್ಸಿದ್ಧಾಂತ ಸಾಯನ

26-12-2020 15:39:01

27-12-2020 18:19:00

29-12-2020 7:55:01

30-12-2020 8:58:00

ಈಗ ಮೇರು ಕೇಂದ್ರಿತ ಭೂಕುಂಡಲಿಯನ್ನು ಹಾಕಿಕೊಂಡು ಕೆಲ ಮುಖ್ಯಾಂಶಗಳನ್ನು ಗಮನಿಸೋಣ.ರಾಶೀಶ-ದೃಷ್ಟಿ-ಸಂಬಂಧ (ಗ್ರಹರ ರಾಶೀಶರ ದೃಷ್ಟಿ):

ಮಂಗಳ ಸೂರ್ಯ:  40, ಬುಧ ರಾಹು: 41, ಗುರು ಬುಧ: 26

ದೃಷ್ಟಿಸಂಬಂಧ (ಪರಸ್ಪರ ದೃಷ್ಟಿಯು ನಿಮ್ನ ಸಂಖ್ಯೆಗಿಂತ ಹೆಚ್ಚಿದ್ದರೆ ಆಗ, ಹೆಚ್ಚೆಂದರೆ 60 ಕಲೆಗಳ ಪ್ರಮಾಣ):

> 52.5 ಚಂದ್ರ+ರಾಹು

>30 ಗುರು+ಶುಕ್ರ

>22.5 ಸೂರ್ಯ+ಚಂದ್ರ, ಸೂರ್ಯ+ಕೇತು, ಮಂಗಳ+ಶುಕ್ರ

> 15 ಚಂದ್ರ+ಬುಧ, ಬುಧ+ಕೇತು, ಶುಕ್ರ+ಶನಿ

> 7.5 ಸೂರ್ಯ+ಮಂಗಳ, ಸೂರ್ಯ+ಗುರು, ಸೂರ್ಯ+ಶನಿ, ಬುಧ+ರಾಹು, ಗುರು+ರಾಹು, ಶನಿ+ರಾಹು

> 0 ಸೂರ್ಯ+ರಾಹು, ಚಂದ್ರ+ಶುಕ್ರ, ಮಂಗಳ+ಬುಧ, ಮಂಗಳ+ರಾಹು, ಬುಧ+ಗುರು, ಬುಧ+ಶನಿ, ಶುಕ್ರ+ಕೇತು. 

ಇನ್ನು ದ್ವಾದಶ ಭಾವಗಳಿಗೆ ಗುರುವಿನ ಕಿರಣಗಳ ಪ್ರಸಾರದ ಕಲೆಗಳನ್ನು ಲೆಕ್ಕಿಸಿದರೆ: 5, 0, 0, 0, 8, 33, 55, 25, 32, 53, 53, 34 ಇಷ್ಟು ಗುರುದೃಷ್ಟಿ ಇರುತ್ತದೆ. ಮೇದಿನಿ ಚಕ್ರದಲ್ಲಿ ದ್ವಾದಶ ಭಾವಗಳು ಮೇರು ಕೇಂದ್ರದಿಂದ ಭೂಪಟದ ಯಾವ್ಯಾವ ಪ್ರಮುಖ ದೇಶಗಳ ಮೇಲೆ ಎಷ್ಟೆಷ್ಟು ದೃಷ್ಟಿ ಹಾಯಿಸುತ್ತದೆ ಎಂದು ತಿಳಿಯುತ್ತದೆ.

ಆಫ್ರಿಕಾ ದೇಶಗಳ ಒಕ್ಕೂಟಕ್ಕೆ ಪ್ರಧಾನವಾಗಿ ಲಗ್ನ ಮತ್ತು ವ್ಯಯ ಭಾವಗಳಿದ್ದು 5 ಮತ್ತು 34 ಕಲೆಗಳಷ್ಟು ಗುರುದೃಷ್ಟಿ ಸಿಗುತ್ತದೆ. ಅದನ್ನು ಬರೆಯುತ್ತಾ ಹೋದರೆ ಲೇಖನ ವಿಸ್ತಾರವಾಗುತ್ತದೆಯಷ್ಟೆ. ಭಾರತಕ್ಕೆ ಒಳ್ಳೆಯ ಗುರು ದೃಷ್ಟಿ ಇದೆ. ಹಾಗೇ ಚೀನಾ ಮತ್ತು ರಷ್ಯಾಗೂ ಇದೆ. ಇಲ್ಲಿ ಈ ಕಾಲದಲ್ಲಿ ಪ್ರಕೃತಿಯಲ್ಲಾಗುವ ಅಮೃತೋದ್ಭವವನ್ನು ಗುರುತಿಸಿ ತತ್ಸಂಬಂಧಿ ಮೂಲಿಕೆಗಳನ್ನು ಸಂಗ್ರಹಿಸಿ ಹಣ-ವಂಚನೆ ಬದಿಗಿಟ್ಟು ಸದುದ್ದೇಶದಿಂದ ಚಿಂತಿಸಿದರೆ ಕೋರೋನಾ ಏನು ಅದರಜ್ಜನಂತಹಾ ಖಾಯಿಲೆಗೂ ಔಷಧ ತಯಾರಿಸಬಹುದು. ಅದಕ್ಕೆ ಭಾರತದ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ, ಇರಾನ್, ಟರ್ಕಿ, ರೋಮಾನಿಯಾ, ಬಲ್ಗೇರಿಯಾ, ಆಸ್ಟಿಯಾ, ಗ್ರೀಸ್, ಇಟಲಿ, ಫ್ರಾನ್ಸ್, ಬೆಲ್ಜಿಯಂ, ನೆಥರ್ಲಾಂಡ್ಸ್, ಜರ್ಮನಿ, ಪೊಲಾಂಡ್, ಯೂ.ಕೆ, ಕೆನಡಾ, ಯೂ.ಎಸ್, ಮೆಕ್ಸಿಕೋ ಇಂತಹಾ ಏಕಾದಶ ಭಾವಸ್ಥ ಪ್ರದೇಶಗಳಿಗೆ ಸ್ವಲ್ಪ ಹೆಚ್ಚು (53) ಅವಕಾಶವಿದೆ. ಆದರೆ ಆಸ್ಟ್ರೇಲಿಯಾ, ಇಂಡೋನೇಷಿಯಾ ಮತ್ತು ಅಲ್ಲಿಯೇ ಸಮೀಪಸ್ಥ ಮಾಲಿ-ಸುಮಾಲಿ ಇತ್ಯಾದಿ ದ್ವೀಪಗಳಲ್ಲಿ ಗರಿಷ್ಠ ಅಮೃತೋದ್ಭವ (55) ತೋರಿಸುತ್ತಿದೆ.

ಗುರುವು ಮಕರದಲ್ಲಿರುವುದರಿಂದ ಸಂಪೂರ್ಣವಾಗಿ ವರುಣಲೋಕದಿಂದಲೇ ಯಾಗಗಳ ಮುಖೇನ ನಿರ್ದೇಶಿಸಲ್ಪಟ್ಟು ಗುರುದೃಷ್ಟಿಯು ವ್ಯವಹರಿಸುತ್ತದೆಯೇ ಹೊರತು ಗುರುಗ್ರಹಕ್ಕೆ ಸ್ವತಂತ್ರತೆ ಈಗ ಇರುವುದಿಲ್ಲ. ಆರಂಭಿಕ ಶುಕ್ರ ಹೋರೆಯಲ್ಲಿ 30 ಕಲೆಗಳಷ್ಟು ಪ್ರಮಾಣ ಮಾತ್ರ ಅಮೃತೋದ್ಭವವಾಗುತ್ತಿದ್ದು ಅದು ಗುರು ಹೋರೆಗೆ ಬರುವ ಹೊತ್ತಿಗೆ ಗರಿಷ್ಠ 55 ಕಲೆಗಳಷ್ಟು ರಶ್ಮಿಗಳ ಪೂರಕತೆಯು ರಾಹುಗ್ರಸ್ಥ ಚಂದ್ರನಿಗೆ 52.5ಯಷ್ಟು ರಶ್ಮಿಬಲವಿದ್ದು ಅಲ್ಲಿ ಕಂಠಾದಿ ಶಿರೋಗತ ಅಂಗಗಳ ಮೇಲೆ ಪೂರಕವಾದ ಪ್ರದೇಶ ಮತ್ತು ಪೂರಕವಾದ ಜಾತಕ + ದಶಾ-ಭುಕ್ತಿ-ಅಂತರಾ-ಸೂಕ್ಷ್ಮ ಉಳ್ಳವರಿಗೆ ಸಹಜವಾಗಿಯೇ ಪ್ರಾಕೃತಿಕ ಅಮೃತಸಿಂಚನವಾಗುತ್ತದೆ. ಅಂಥಹವರಿಗೆ ಯಾವುದೇ ಕೊರೋನಾದಂತಹಾ ಮೋಸ ಜನಿತ ಕೃತಕ ಖಾಯಿಲೆಗಳು ಬಾಧಿಸುವುದಿಲ್ಲ. 

ಇನ್ನೂ ವಿಸ್ತಾರವಾಗಿ ಅಗಾಧವಾಗಿ ವಿಶ್ಲೇಷಣೆ ಸಾಧ್ಯವಿದೆ. ಆದರೆ ಸಮಯಾಭಾವದಿಂದ ಇಷ್ಟಕ್ಕೇ ಸಮಾಪ್ತಿ ಮಾಡಲಾಗಿದೆ. ಇದೊಂದು ಪ್ರಯೋಗಾತ್ಮಕ ವಿಶ್ಲೇಷಣೆಯೇ ಹೊರತು ಇದಮಿತ್ಥಂ ದೃಢೀಕರಿಸಲ್ಪಟ್ಟದ್ದಲ್ಲ. ಆದರೆ ತತ್ಸಂಬಂಧಿ ಮೇದಿನಿ ಕುಂಡಲಿಯ ದೇವತಾ ಮತ್ತು ಉಪಾಸನಾ ದೇವತಾ ಬಲದ ಪೂರಕತೆ ಇದೆ. ಜ್ಯೋತಿಷ ಪಾಠ ಮಾಡಿದ ಹಲವು ಗುರುವರ್ಯರಿಗೆ ಈ ಸಮಯದಲ್ಲಿ ಶಿರಸಾ ವಂದಿಸುತ್ತೇನೆ. ಈ ಲೇಖನ ಬರೆಯಲು ಪ್ರಶ್ನೆ ಕೇಳಿ ಸ್ಪೂರ್ತಿಯಾದ ಕಾಸರಗೋಡಿನ ಶ್ರೀಯುತ ಕೇಶವಕೃಷ್ಣರಿಗೆ ಧನ್ಯವಾದಗಳು. ಈ ಸಂಶೋಧನಾ ಲೇಖನವನ್ನು ಗುರು ಹೋರೆ ಮುಗಿಯುವುದರೊಳಗೆ ಬರೆದು ಪ್ರಕಟಿಸಿರುತ್ತೇನೆ. ಎಲ್ಲರಿಗೂ ಗುರು ಕೃಪೆಯಾಗಲಿ ಎಂದು ಹಾರೈಸುತ್ತೇನೆ.

ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ

https://www.vedavidhya.com


ಪ್ರಶ್ನೆ 2:- ಅಮೃತ ಸಿದ್ಧಿ ಯೋಗಗಳು  (ವಾರ ನಕ್ಷತ್ರ ಯುತಿ)

ಆದಿತ್ಯವಾರ ಹಸ್ತಾ, ಸೋಮವಾರ ಶ್ರವಣಾ, ಮಂಗಳವಾರ ಅಶ್ವಿನೀ, ಬುಧವಾರ ಅನುರಾಧಾ, ಗುರುವಾರ ಪುಷ್ಯಾ, ಶುಕ್ರವಾರ ರೇವತೀ ಮತ್ತೆ ಶನಿವಾರ ರೋಹಿಣೀ - ಹೀಗೆ ವಾರ ನಕ್ಷತ್ರ ಯುತಿ ಇದ್ದರೆ ಈ ಏಳೂ ಅಮೃತ ಫಲ ನೀಡುವ ಸಿದ್ಧಿ ಯೋಗಗಳು. ಇದು ತಪ್ಪು ಎಂದಾದರೆ, ಹೆಚ್ಚಿನ ಅರಿವು / ಮಾಹಿತಿ / ಅಧ್ಯಯನ ಉಳ್ಳವರು ಇದನ್ನು ತಿದ್ದಿ ಇಲ್ಲಿ ಹಂಚಿ ಕೊಳ್ಳೋಣವೇ?

- ಕುಳಮರ್ವ ಕೇಶವಕೃಷ್ಣ ಕಾಸರಗೋಡು ೩೦೧೨'೨೦

 

ಉತ್ತರ:- ಮೊದಲು ಅಮೃತ ಜಿಜ್ಞಾಸೆ ಮಾಡಿಕೊಳ್ಳಬೇಕು. ಅಂದರೆ  ಅಮೃತ ಎಂದರೇನು ಎಂದು ವೇದೋಕ್ತವಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳಬೇಕು. ಈ ಕೆಲವೇ ವಾರ+ನಕ್ಷತ್ರ ಸಂಧಿಯಲ್ಲಿಯೇ ಅಮೃತ ಸಿದ್ಧಿ ಯಾಕೆ ಹೇಳಿದ್ದಾರೆ ಎಂದು ಆಳವಾಗಿ ವೈಧಿಕ ಭೌತಶಸ್ತ್ರದಲ್ಲಿ ಚಿಂತಿಸಬೇಕು. ಯೋಗಗಳು ಅಥವಾ ಯಾವುದೇ ಜ್ಯೋತಿಷ ಸೂತ್ರಗಳು ಕಾಲ, ದೇಶ, ಪಾತ್ರ ಆಧಾರಿತವಾಗಿ ಅನ್ವಯವಾಗುತ್ತವೆ, ಹೊರತು ನೆರವಾಗಿಯಲ್ಲ. ನೇರವಾಗಿ ಎಂದಾಗಿದ್ದರೆ ಅಮೃತ ಸಿದ್ಧಿ ಯೋಗದಲ್ಲಿ ಯಾರೂ ಸಾಯುತ್ತಲೇ ಇರಲಿಲ್ಲ. ಇದು ಸತತ ಆಳವಾಗಿ ಪ್ರಾಕೃತಿಕ  ಅಧ್ಯಯನ ಮಾಡುತ್ತಾ ಅನುಭವಕ್ಕೆ ತಂದುಕೊಳ್ಳಬೇಕಾದ ವಿಚಾರಗಳು. ಉದಾಹರಣೆಗೆ ಗುರುವಾರ ಪುಷ್ಯ ನಕ್ಷತ್ರ ಯಾವಾಗ ಆರಂಭವಾಗುತ್ತದೆ? ಆ ಸಮಯದಲ್ಲಿ ಪ್ರಕೃತಿಯ ಮೇಲೆ ಅಥವಾ ಪ್ರಕೃತಿಯಲ್ಲಿ ಏನು ಘಟನೆಗಳು ಘಟಿಸುತ್ತವೆ ಅದನ್ನು ಪ್ರಾಕೃತಿಕ ಸಹಜತೆಯ ಮುಖೇನ  ಗುರುತಿಸಿಕೊಳ್ಳಬೇಕು. ಹೀಗೆ ಸತತ ಅಭ್ಯಾಸ ಮಾಡುತ್ತಾ ಬಂದಾಗ ಅಮೃತಸಿದ್ಧಿಯೋಗ ಯಾವಾಗ ಘಟಿಸುತ್ತದೆ ಎಂದು ಪ್ರಕೃತಿಯನ್ನು ನೋಡಿಯೇ ನೇರವಾಗಿ ಗುರುತಿಸಬಹುದು. ಹೇಗೆ ಅದನ್ನು ಪ್ರಕೃತಿ ಸಹಜವಾಗಿ ಬಳಸಿಕೊಳ್ಳಬಹುದು ಎಂಬುದು ತಿಳಿದುಬರುತ್ತದೆ. ಏಕೆಂದರೆ ಗ್ರಹದ ಕಿರಣ ಪರಿಣಾಮಗಳಾವುದು  ಪ್ರಕೃತಿಯ ಮೇಲೆ. ಅನುಭವಿ ಜ್ಞಾನಿಗಳ ಸಂಪರ್ಕದಲ್ಲಿ ಕೇಳಿ ತಿಳಿದುಕೊಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಚಿಂತಕರು ಇನ್ನೂ ಹೆಚ್ಚಿನದನ್ನು ಸೇರಿಸಬಹುದು.

ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ

https://www.vedavidhya.com