Saturday, 22 February 2020

ಆಧುನಿಕ ಸೃಷ್ಟಿ ಉತ್ಪತ್ತಿ ವಿಜ್ಞಾನ ಸಮೀಕ್ಷೆ (೧) - ವೈಜ್ಞಾನಿಕ ತಥ್ಯವು ಸರ್ವಥಾ ಅಸಂದಿಗ್ಧವಲ್ಲಈ ಭೂಮಿಯಲ್ಲಿ ಎಂದಿನಿಂದ ಮನುಷ್ಯರ ಜನ್ಮವಾಯಿತೋ, ಅಂದಿನಿಂದಲೇ ಅವರು ಸೃಷ್ಟಿಯ ಉತ್ಪತ್ತಿ ಹಾಗೂ ಸಂಚಾಲನ ಪ್ರಕ್ರಿಯೆಯ ವಿಷಯವನ್ನು ತಿಳಿಯುವ ಪ್ರಯತ್ನವನ್ನು ನಿರಂತವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಸಮಯಕ್ಕೂ ಭೂಮಿಯಲ್ಲಿ ಎಲ್ಲೆಲ್ಲಿ ಮನುಷ್ಯರು ವಾಸಿಸುತ್ತಿದ್ದಾರೋ, ಅವರು ಓದು-ಬರಹ ಬಲ್ಲವರಾಗಲಿ ಅನಕ್ಷರಸ್ತರಾಗಲಿ, ಎಲ್ಲರೂ ಒಂದಲ್ಲ ಒಂದು ಸ್ತರದಲ್ಲಿ ಈ ಬ್ರಹ್ಮಾಂಡದ ವಿಷಯದಲ್ಲಿ ಏನಾದರೂ ಮಾತನಾಡುತ್ತಿರುತ್ತಾರೆ. ಈ ವಿಚಾರವು ಅವರ ವಿಭಿನ್ನ ಬೌದ್ಧಿಕ ಸ್ತರಗಳ ದೃಷ್ಟಿಯಿಂದ ಭಿನ್ನ-ಭಿನ್ನವಾಗಿರುತ್ತದೆ. ಎಲ್ಲಾ ಸಂಪ್ರದಾಯಗಳು ತಮ್ಮ ಬೇರೆ-ಬೇರೆ ದರ್ಶನಗಳ ಮುಖೇನ ಈ ಸೃಷ್ಟಿಯ ಬಗ್ಗೆ ನಾನಾ ರೀತಿಯ ಕಲ್ಪನೆಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ವರ್ತಮಾನ ವಿಜ್ಞಾನವು ಹಿಂದಿನ ಅಂದಾಜು ೨೦೦-೩೦೦ ವರ್ಷಗಳಿಂದ ಈ ಸೃಷ್ಟಿಯ ಮೇಲೆ ಸಾಕಷ್ಟು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ವಿಶ್ವದ ವಿಜ್ಞಾನಿಗಳು ಹಗಲು-ರಾತ್ರಿ ಸಂಗಠಿತರಾಗಿ ಭಾರೀ ಪುರುಷಾರ್ಥ ಸಾಧನೆಯ ಪ್ರಯತ್ನದಲ್ಲಿದ್ದಾರೆ. ಆದರೆ ವರ್ತಮಾನ ವಿಜ್ಞಾನ ಜಗತ್ತಿನಲ್ಲಿಯೂ ಸೃಷ್ಟಿ ಉತ್ಪತ್ತಿಯ ಯಾವುದೇ ಒಂದು ಸರ್ವಮಾನ್ಯ ಸಿದ್ಧಾಂತ ಸ್ಥಾಪಿತವಾಗಿಲ್ಲ. 

ಬಹಳ ವಿಸ್ಮಯ ಹಾಗೂ ದುಃಖದ ವಿಷಯವೇನೆಂದರೆ ವರ್ತಮಾನದ ಯಾವ ಪ್ರೇಕ್ಷಣೆ, ಪ್ರಯೋಗ ಹಾಗೂ ಗಣಿತದ ಆಶ್ರಯಪಡೆದು ಪೂರ್ಣ ಸತ್ಯವನ್ನು ಉದ್ಘಾಟಿಸುವ ದಾವೆ ಮಾಡುವವರೂ ಕೂಡ ಹೀಗಿರಬಹುದು-ಹಾಗಿರಬಹುದು ಎಂಬ ಕಲ್ಪನೆಗಳು, ದುರಾಗ್ರಹಗಳಲ್ಲಿ ವಿಭಜಿತರಾಗಿರುವುದು ಕಂಡುಬರುತ್ತದೆ. ಕಲ್ಪನೆಗಳ ಕೋಟೆ ಬಾಗಿಲು ಮುಚ್ಚಲಿಕ್ಕಾಗಿ ವಿಶ್ವದ ವಿಭಿನ್ನ ಸಂಪ್ರದಾಯಗಳೇ ಸಾಕು. ಕನಿಷ್ಠ ಪಕ್ಷ ವಿಜ್ಞಾನವಾದರೂ ಇಂತಹಾ ಭ್ರಾಂತ ಧಾರಣೆಗಳಿಂದ ಗ್ರಸ್ತವಾಗಬಾರದು. ವೈಜ್ಞಾನಿಕ ಪ್ರಯೋಗ, ಪ್ರೇಕ್ಷಣೆ ಹಾಗೂ ಗಣಿತದ ಆಶ್ರಯ ಪಡೆಯುವ ವಿಭಿನ್ನ ಕೂಟಗಳು ಏಕೆ ಇಂದಿನವರೆಗೆ ಒಂದು ಧ್ರುವ ಸತ್ಯದ ಹುಡುಕಾಟ ಮಾಡಲಾಗಿಲ್ಲ
ಅವರಲ್ಲಿಯೂ ಏಕೆ ಬೇರೆ-ಬೇರೆ ಕವಲುಗಳಾಗಿವೆ
ಅವರಲ್ಲಿಯೂ ಏಕೆ ಸತ್ಯ ಗ್ರಹಿಕೆ ಹಾಗೂ ಅಸತ್ಯ ಪರಿತ್ಯಾಗದ ಭಾವನೆ ಇಲ್ಲ 
ಅವರಲ್ಲಿಯೂ ದುರ್ಬಲತೆ ಏಕಿದೆ ? 
ಇನ್ನೊಂದು ಮತದ ಸಬಲತೆಯನ್ನು ಸ್ವೀಕರಿಸುವ ಉದಾರತೆ ಏಕಿಲ್ಲ 
ಆಧುನಿಕ ವಿಜ್ಞಾನದ ಅನುಸಂಧಾನ ಪ್ರಕ್ರಿಯೆಯೂ ಏಕೆ ದೋಷಪೂರ್ಣವಾಗಿದೆ 
ಹೌದೆಂದರೆಅದನ್ನು ಸತ್ಯಾನ್ವೇಷೀ ಎಂದು ಹೇಗೆ ನಂಬುವುದು 
ಪ್ರಯೋಗಪ್ರೇಕ್ಷಣೆ ಹಾಗೂ ಗಣಿತೀಯ ನಿಷ್ಕರ್ಷೆಗಳನ್ನು ಅಸಂದಿಗ್ಧವೆಂದು ಹೇಗೆ ನಂಬುವುದು? 
ಇದನ್ನು ವಿಜ್ಞಾನವೆಂದೇ ಹೇಗೆ ಕರೆಯುವುದು

ಯಾವ ಪ್ರಬುದ್ಧ ಹಾಗೂ ವೈಜ್ಞಾನಿಕತೆಯ ಪಕ್ಷಧರ ಮಹಾನುಭಾವರು ನಮ್ಮಂತಹಾ ಅಧ್ಯಾತ್ಮವಾದಿಗಳು ಅಂದರೆ ಭಾರತೀಯ ಸಂಸ್ಕೃತಿಸಭ್ಯತೆ ಹಾಗೂ ವೇದಾದಿ ಶಾಸ್ತ್ರಗಳ ಮೇಲೆ ಗರ್ವಪಡುವವರಿಂದ ವೈಧಿಕ ಧರ್ಮ ಹಾಗೂ ದರ್ಶನದ ವೈಜ್ಞಾನಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆಯೋಅವರು ಇದನ್ನು ಚಿಂತನ-ಮಂಥನಕ್ಕೆ ಒಳಪಡಿಸದೆ ಅವೈಜ್ಞಾನಿಕರೂಢಿವಾದೀಮೂಡನಂಬಿಕೆ ಅಥವಾ ಅಂಧವಿಶ್ವಾಸ ಇತ್ಯಾದಿ ನಾನಾ ವಿಶೇಷಣಗಳಿಂದ ಭೂಷಿತಗೊಳಿಸುತ್ತಾರೆಯೋಅವರು ತಮ್ಮ ವಿಜ್ಞಾನದ ವೈಜ್ಞಾನಿಕತೆಯನ್ನು ತಲಸ್ಪರ್ಶೀ ವಿಧಿಯಿಂದ ತಿಳಿಯುವ ಪ್ರಯಾಸವನ್ನಾದರೂ ಮಾಡುವರೋಅವರು ವರ್ತಮಾನ ವೈಜ್ಞಾನಿಕ ಮಾನ್ಯತೆಗಳ ಮೇಲೆ ಪ್ರಶ್ನೆ ಹಾಕುವ ಇಚ್ಛೆಯನ್ನಾದರೂ ಸ್ವಾಗತಿಸುತ್ತಾರೆಯೇಅಥವಾ ಅದರ ಮೇಲೆ ಬುದ್ಧಿಯ ನೇತ್ರವನ್ನು ಮುಚ್ಚಿ ಪೂರ್ಣವಾಗಿ ನಂಬುತ್ತಾರೋಹೌದೆಂದರೆಇದರ ಹೆಸರೇಅಂಧವಿಶ್ವಾಸಇದರ ಹೆಸರೇರೂಢಿವಾದ! ಕನಿಷ್ಠಪಕ್ಷ ವಿಜ್ಞಾನದ ಕ್ಷೇತ್ರದಲ್ಲಂತೂ ಹೀಗಾಗಬಾರದು. ಈ ಕ್ಷೇತ್ರದಲ್ಲಿ ಪಕ್ಷಪಾತಹಠ ಹಾಗೂ ದುರಾಗ್ರಹಗಳು ಇರಬಾರದು. ಖೇದವೆಂದರೆ ಇಂದು ತಥಾಕಥಿತ ವಿಕಸಿತ ವಿಜ್ಞಾನದಲ್ಲಿಯೂ ಇವೆಲ್ಲವೂ ನಡೆಯುತ್ತಲೇ ಇದೆ. 

ವೈಜ್ಞಾನಿಕ ತಥ್ಯವು ಸರ್ವಥಾ ಅಸಂದಿಗ್ಧವಲ್ಲ


ಈ ವಿಷಯದಲ್ಲಿ ಮೊತ್ತಮೊದಲು ನಾವು ಪ್ರಯೋಗ, ಪ್ರೇಕ್ಷಣೆ ಹಾಗೂ ಗಣಿತದ ಅಸಂದಿಗ್ಧತೆಯ ಮೇಲೆ ವರ್ತಮಾನದ ಮಹಾನ್ ವಿಜ್ಞಾನಿಗಳ ವಿಚಾರವನ್ನೇ ಉದ್ಧೃತಗೊಳಿಸುತ್ತೇವೆ -

ಪ್ರಸಿದ್ಧ ಬ್ರಿಟೀಷ್ ಭೌತಶಾಸ್ತ್ರಜ್ಞನಾದ ಸ್ಟೀಫನ್ ಹಾಕಿಂಗ್ ಹೀಗೆನ್ನುತ್ತಾರೆ -

"ಯಾವುದೇ ಭೌತಿಕ ಸಿದ್ಧಾಂತವು ಅಸ್ಥಾಯಿಯಾಗಿರುತ್ತದೆ. ವಾಸ್ತವದಲ್ಲಿ ಒಂದು ಪರಿಕಲ್ಪನೆಯೇ ಆಗಿರುತ್ತದೆ. ಎಷ್ಟು ಬಾರಿ ನಿಮ್ಮ ಪ್ರಯೋಗಗಳಿಮ್ದ ಪರೀಕ್ಷಿಸಿದರೂ ನೀವು ಅದನ್ನು ಎಂದಿಗೂ ಸಿದ್ಧಪಡಿಸಲಾಗುವುದಿಲ್ಲ. ಆಗಾಮೀ ಯಾವುದೋ ಪ್ರಯೋಗದಲ್ಲಿ ವಿಪರೀತ ನಿಷ್ಕರ್ಷೆ ಬರದಂತೆ ನಿಮ್ಮಿಂದದನ್ನು ಸುನಿಶ್ಚಿತಗೊಳಿಸಲು ಸಾಧ್ಯವಿಲ್ಲ. ನಿಮ್ಮ ಯಾವುದೋ ಒಂದು ವಿಪರೀತ ನಿಷ್ಕರ್ಷೆಯು ನಿಮ್ಮ ಹಲವು ಭವಿಷ್ಯವಾಣಿಗಳನ್ನು ತಲೆಕೆಳಗಾಗಿಸಲು ಶಕ್ತ."

ಈ ರೀತಿಯ ವಿಚಾರಗಳು ವಿಶ್ವಪ್ರಸಿದ್ಧ ಭೌತಶಾಸ್ತ್ರಜ್ಞ ಸರ್ ಅಲ್ಬರ್ಟ್ ಐನ್‌ಸ್ಟೈನ್ ವ್ಯಕ್ತಪಡಿಸುತ್ತಾ ಬರೆಯುತ್ತಾರೆ -

"ಎಷ್ಟೇ ಪ್ರಯೋಗಗಳು ನನ್ನನು ಸರಿ ಎಂದು ಸಾಧಿಸಿದರೂ; ಒಂದು ಪ್ರಯೋಗವೇ ನನ್ನನ್ನು ತಪ್ಪೆಂದು ಸಾಧಿಸಲೂ ಸಾಧ್ಯ" (ಮೀಟಿಂಗ್ ಥ ಸ್ಟ್ರಾಂಡರ್ಡ್ಸ್ ಇನ್ ಪ್ರೈಮರಿ ಸೈನ್ಸ್ - ಲಿಮ್ ಡಿ. ನ್ಯೂಟನ್, ಪು.೨೧)

ಇದೇ ಪುಸ್ತಕದ ಲೇಖಕರು ಪುಟ ಸಂಖ್ಯೆ ೨೧ರಲ್ಲಿಯೇ ಆಂಸ್ಟ್ರಿಯಾದ ದಾರ್ಶನಿಕ ಕಾರ್ಲ್ ಪೂಪರ್ ಅವರನ್ನು ಉದ್ಧೃತಗೊಳಿಸುತ್ತಾ ಬರೆಯುತ್ತಾರೆ -

...ನಿಮ್ಮಿಂದ ಯಾವುದೇ ಸಿದ್ಧಾಂತವನ್ನು ಸಾಧಿಸುವುದಾಗಲೀ ಅಥವಾ ಪರಿಶೀಲಿಸುವುದಾಗಲಿ ಸಾಧ್ಯವಿಲ್ಲ, ನೀವದನ್ನು ಕೇವಲ ಅಲ್ಲಗಳೆಯಬಹುದು. ಆದ್ದರಿಂದ ಪರಿಶೀಲನೆಗಳು ಮತ್ತು ಪ್ರಯೋಗಗಳು ಚಿಂತನೆಯನ್ನು ಪರೀಕ್ಷಿಸುವ ಮಟ್ಟಿಗೆ ಸಹಕಾರಿಯೇ ಹೊರತು ಸತ್ಯವೆಂದು ಸಾಧಿಸಲಲ್ಲ.

ಇಲ್ಲಿಯೂ ವರ್ತಮಾನ ವಿಜ್ಞಾನದ ಅಸಂದಿಗ್ಧತೆಯ ಮೇಲೆ ಪ್ರಶ್ನೆಯ ಚಿಹ್ನೆ ಹಾಕಲಾಗಿದೆ.

ಸ್ಟೀಫೆನ್ ಹಾಕಿಂಗ್ ಅವರ ಸಹೋದ್ಯೋಗಿ ರೋಗರ್ ಪೆನ್ರೋಸ್ ಎಂಬುವರದ್ದೂ ಇದೇ ಮತ; ಅವರು ಬರೆಯುತ್ತಾರೆ -

"ಯಾರೇ ವಿಜ್ಞಾನಿಗಳು ವಿಜ್ಞಾನದಲ್ಲಿ ಯಾವುದೇ ಸಂಕಟವಿಲ್ಲ; ಅಂದರೆ ಅದರ ಎಲ್ಲಾ ನಿಷ್ಕರ್ಷೆಗಳು ಸತ್ಯವೇ ಆಗಿರುತ್ತವೆ ಎಂದು ಹೇಳಬಹುದು. ಒಂದುವೇಳೆ ನಿಷರ್ಷೆಯು ತಪ್ಪಿದ್ದರೆ, ಅದರ ಪ್ರಯೋಗ ಅಥವಾ ಪರೀಕ್ಷೆಯೇ ಅದನ್ನು ಅಸಿದ್ಧವಾಗಿಸುತ್ತಿತ್ತು ಹಾಗೂ ಬೇರೊಂದು ನಿಷ್ಕರ್ಷೆಯುಕ್ತ ದಿಕ್ಕನ್ನು ಪಡೆಯುತ್ತಿತ್ತು ಎಂದೂ ಅವರು ಹೇಳಬಹುದು. ಇದರ ಮೇಲೆ ನಾವು ಹೇಳುವುದೇನೆಂದರೆ ಆಧುನಿಕ ವಿಜ್ಞಾನದ ಈ ವಿಚಾರವು ಹೆಚ್ಚು ಕಠೋರ ಹಾಗೂ ಆದರ್ಶವಾದಿಯೇ ಆಗಿದೆ." (ಥ ರೋಡ್ ಟು ರಿಯಾಲಿಟಿ - ಪು.೧೦೨೦)

ವಿಜ್ಞಾನದ ಪ್ರಾಯೋಗಿಕತೆಯ ವಿಷಯದಲ್ಲಿ ಈ ಇಬ್ಬರು ವಿಜ್ಞಾನಿಗಳ ಟಿಪ್ಪಣಿಯ ತರುವಾಯ ಇದರ ಗಣಿತೀಯ ಅಧಾರದ ಮೇಲೆಯೂ ನಾವು ಅಮೇರಿಕಾದ ಪ್ರಖ್ಯಾತ ವಿಜ್ಞಾನಿ ರಿಚರ್ಡ್ ಪಿ. ಫೆನ್ಮನ್ ಅವರ ವಿಚಾರಗಳನ್ನು ಉದ್ಧೃತಗೊಳಿಸುತ್ತಾರೆ -

"ಗಣಿತೀಯ ವ್ಯಾಖ್ಯೆಗಳೂ ವಾಸ್ತವಿಕ ಪ್ರಪಂಚದಲ್ಲಿ ಕಾರ್ಯವೆಸಗುವುದಿಲ್ಲ. ಈ ವ್ಯಾಖ್ಯೆಗಳು ತರ್ಕಾನುಸಾರಿಣಿಯಾದ ಗಣಿತಕ್ಕಾಗಿ ಮಾತ್ರ ಚೆನ್ನ, ಆದರೆ ಭೌತಿಕ ಸಂಸಾರದಲ್ಲಿ ಬಹಳ ಜಟಿಲ." (ಲೆಚ್ಚರ್ಸ್ ಆನ್ ಫಿಸಿಕ್ಸ್ - ಪು.೧೪೮)

ಈ ಮೂವರೂ ವಿಜ್ಞಾನಿಗಳ ಮತಕ್ಕೆ ಸಹಮತಿ ಹೊಂದಿದವರಾಗಿ ಇನ್ನೋರ್ವ ವಿಜ್ಞಾನಿ ಜೇಮ್ಸ್ ಕ್ಲೆರ್ಕ್ ಮ್ಯಾಕ್ಸ್ವೆಲ್ ಹೇಳುತ್ತಾರೆ -

"ಪ್ರಪಂಚವು ವಾಸ್ತವದಲ್ಲಿ ಸಂಭವನೀಯತೆಗಳ ಗಣಿತ." (ಲೆಚ್ಚರ್ಸ್ ಆನ್ ಫಿಸಿಕ್ಸ್ - ಪು.೬೪)

ಫೆನ್ಮನ್ ಬಹಳ ಸ್ಪಷ್ಟ ಶಬ್ದಗಳಲ್ಲಿ ಹೀಗೆ ಸ್ವೀಕರಿಸುತ್ತಾರೆ -

"ಇಲ್ಲಿಯವರೆಗೆ ವಿಜ್ಞಾನಿಗಳು ವಿಜ್ಞಾನದ ಮೂಲ ಸಿದ್ಧಾಂತಗಳನ್ನು ತಿಳಿಯಲಾಗಿಲ್ಲ." (ಲೆಚ್ಚರ್ಸ್ ಆನ್ ಫಿಸಿಕ್ಸ್ - ಪು.೦೯)

ಈಗ ವರ್ತಮಾನ ವಿಜ್ಞಾನದ ಒಂದು ವಿಚಿತ್ರ ಲಕ್ಷಣವನ್ನೂ ನೋಡಿರಿ. ಸ್ಟೀಫನ್ ಹಾಕಿಂಗ್ ತಮ್ಮ ಅಂತರ್ಜಾಲ ತಾಣದಲ್ಲಿ ಸ್ವಯಂ ವರ್ತಮಾನ ವಿಜ್ಞಾನದ ಜೊಳ್ಳು ವಾದ ಅಥವಾ ಮಿಥ್ಯಾವಾದವನ್ನು ಒಪ್ಪಿರುವುದಲ್ಲದೆ, ಪ್ರೇಕ್ಷಣೆಗಳ ಮುಖೇನ ಮಿಥ್ಯೆ ಎಂದು ಸಿದ್ಧವಾಗುವುದು ವಿಜ್ಞಾನದ ಒಂದು ಲಕ್ಷಣ ಹಾಗೂ ವಿಶೇಷತೆಯೆಂದೂ ಘೋಷಿಸುತ್ತಿದ್ದಾರೆ. ಹೀಗೆ ಮಿಥ್ಯವೆಂದು ಸಿದ್ಧವಾಗಬಹುದಾದ ವಿಜ್ಞಾನವು ಹೇಗೆ ತಾನೇ ಸತ್ಯಪಿಪಾಸುಗಳಿಗೆ ಅಥವಾ ಸತ್ಯವ್ರತರಾದವರಿಗೆ ಪ್ರಮಾಣವಾಗಲು ಸಾಧ್ಯ? ನಾವು ವೇದ-ವಿಜ್ಞಾನಿಗಳಿಂದ ಇಂತಹಾ ವಿಜ್ಞಾನದ ಸತ್ಯತೆಯ ಪ್ರಮಾಣಪತ್ರ ಪಡೆಯುವ ಅವಶ್ಯಕತೆ ಇದೆಯೇ?

ಇಲ್ಲಿ ಇವೆಲ್ಲವನ್ನು ಉದಾಹರಿಸಿರುವ ಅಭಿಪ್ರಾಯವೇನೆಂದರೆ ಆಧುನಿಕ ಪ್ರಬುದ್ಧ ವರ್ತಮಾನ ವಿಜ್ಞಾನದ ಪ್ರವಾಹದಲ್ಲಿ ಯಾರು ಪ್ರಾಚೀನ ಜ್ಞಾನ-ವಿಜ್ಞಾನವನ್ನು ಹಾಸ್ಯ ಮಾಡುತ್ತಾರೋ, ಅವರಿಗೆ ವಿಜ್ಞಾನದ ಎಲ್ಲಾ ಸಿದ್ಧಾಂತಗಳು ಸರ್ವಥಾ ಅಸಂದಿಗ್ಧ ಹಾಗೂ ಪೂರ್ಣವಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುವುದಾಗಿದೆ. ಇಷ್ಟು ಹೇಳಿದ ನಂತರ ನಮ್ಮ ತಾತ್ಪರ್ಯವು ವಿಜ್ಞಾನದ ಪ್ರಯೋಗಗಳು, ಪ್ರೇಕ್ಷಣೆಗಳು ಹಾಗೂ ಗಣಿತೀಯ ವ್ಯಾಖ್ಯೆಗಳ ಅನಾವಶ್ಯಕತೆಯನ್ನು ಸಿದ್ಧಪಡಿಸುವುದಲ್ಲ, ಬದಲಿಗೆ ಕೇವಲ ಏನು ಹೇಳಬೇಕಿರುವುದೆಂದರೆ ವಿಜ್ಞಾನದ ನಿಷ್ಕರ್ಷೆಯೂ ಸರ್ವಾಂಶದಲ್ಲಿ ಪ್ರಾಮಾಣಿಕವಾಗಿರುವುದಿಲ್ಲ. ಹೇಗೇಗೆ ಪ್ರಯೋಗ ಕೌಶಲ್ಯದ ವಿಕಾಸ ಹಾಗೂ ಗಣಿತದ ಉಚ್ಚ-ಉಚ್ಚತರ ವಿಕಾಸಗಳಾಗುತ್ತಾ ಸಾಗುತ್ತದೆಯೋ, ಹಾಗಾಗೆ ವಿಜ್ಞಾನದ ನಿಷ್ಕರ್ಷೆಗಳು ಸಂಶೋಧಿತ ಹಾಗೂ ಪರಿವರ್ತಿತವಾಗುತ್ತಾ ಸಾಗುತ್ತವೆ. ಇವು ವಿಜ್ಞಾನದ ಗತಿಶೀಲತೆ ಹಾಗೂ ಪರಿವರ್ತನಶೀಲತೆಗಳು. ಇವುಗಳು ಒಳ್ಳೆಯ ವಿಚಾರಗಳಾಗಿದ್ದಾಗ್ಯೂ ಗೌರವಾನ್ವಿತವಲ್ಲ. ವಾಸ್ತವದಲ್ಲಿ ವರ್ತಮಾನ ವಿಜ್ಞಾನವು ನಿರಂತರ ತಪ್ಪು ಮಾಡುವ, ಮಾಡಿದ ತಪ್ಪನ್ನು ಸರಿಪಡಿಸುವ ಪ್ರಯಾಸದಲ್ಲಿಯೇ ಶ್ರಮ-ಧನಗಳನ್ನು ವ್ಯಯಿಸುತ್ತಿರುತ್ತದೆ. ಹಾಗಾಗಿ ಇದೇ ವಿಜ್ಞಾನದ ವಿಡಂಬನೆಗೆ ಆಹ್ವಾನವೀಯುತ್ತದೆ. ತನ್ನ ಇದೇ ಪರಂಪರೆಯ ಮೇಲೆ ಗತಿಮಾನ ವಿಜ್ಞಾನವು ಮಾಡುತ್ತಿರುವ ಯಾವುದೇ ಅನುಸಂಧಾನವು, ಅದರಿಂದ ಸೌಲಭ್ಯದಗಳಿಗಿಂತ ಹೆಚ್ಚು ದುಷ್ಪರಿಣಾಮಗಳನ್ನೇ ನಿರಂತರ ಸಂಗ್ರಹಿಸುತ್ತಾ ನಡೆದಿದೆ.

ಇನ್ನು ನಾವು ಸೃಷ್ಟಿ ಉತ್ಪತ್ತಿಯ ಆಧುನಿಕ ವಿಜ್ಞಾನದ ಸಿದ್ಧಾಂತಗಳ ಚರ್ಚೆ ಪ್ರಾರಂಭಿಸುತ್ತೇವೆ.

- ಹೇಮಂತ್ ಕುಮಾರ್ ಜಿ

Monday, 10 February 2020

ಏಕಂ ಸದ್ವಿಪ್ರಾ ಬಹುಧಾ ವದನ್ತಿ - ಇರುವ ಒಂದೇ ಸತ್ಯವನ್ನು ವಿಶೇಷ ಪ್ರವಾಚಕರು ಬಹುವಾಗಿ ಹೇಳುತ್ತಾರೆವೇದಗಳ ರಹಸ್ಯಾರ್ಥಗಳ ವ್ಯಾಖ್ಯಾನ ಮಾಡುವುದಕ್ಕಾಗಿ ಮಹಾಭಾರತದಲ್ಲಿ ಅಪರಿಮಿತ ಸಾಮಗ್ರಿಗಳಿವೆ. ಮಹರ್ಷಿ ವೇದವ್ಯಾಸರ ಪ್ರತಿಭೆಯಿಂದ ಯಾವ ಭಾರತರೂಪೀ ಜ್ಞಾನದೀಪವು ಪ್ರಜ್ವಲಿತವಾಯಿತೋ, ಅದರ ಅವಲೋಕನದಲ್ಲಿ ಪ್ರಾಚೀನ ಅಧ್ಯಾತ್ಮ-ವಿಜ್ಞಾನ ಹಾಗೂ ದರ್ಶನದ ತತ್ವಗಳು ಸಹಜವಾಗಿ ಸುಲಭವಾಗಿ ಸಾಕ್ಷಾತ್ಕಾರವಾಗಿವೆ. ಈ ಗ್ರಂಥ ಮಹೋದಧಿಯ ನಿರ್ಮಾತೃವಿನ ಮನದಲ್ಲಿ ವೇದಾರ್ಥ ಉಪಬೃಂಹಣದ ಭಾವನೆಯು ಸರ್ವದಾ ಜಾಗೃತವಾಗಿರುತ್ತಿತ್ತು. ಮಹಾತ್ಮಾ ದ್ವೈಪಾಯನರು ಬೇಕೆಂದೇ ಶ್ರುತಿ-ಮಹತೀ-ಸರಸ್ವತಿಯ ಸನ್ನಿವೇಶವನ್ನು ತಮ್ಮ ಊರ್ಜಾಯಮಾನ ಕಾವ್ಯ-ಪ್ರವಾಹದಲ್ಲಿ ಯಥಾವಸರ ಹಾಗೂ ಯಥಾಸ್ಥಾನ ನಾನಾ ರೂಪಗಳಲ್ಲಿ ಮಾಡಿದ್ದಾರೆ ಎಂದು ಪ್ರತೀತವಾಗುತ್ತದೆ. ಆ ಸನಾತನ ವೇದರೂಪಾಮೃತ ಮಂದಾಕಿನಿಯಿಂದ ವಿರಹಿತವಾಗಿದ್ದ ವ್ಯಾಸರಿಗೆ ಸ್ವಲ್ಪ ದೂರದ ಯಾತ್ರೆಯೂ ಶ್ರಮ-ಪ್ರದವೆಂದು ಅರಿವಾಗುತ್ತಿತ್ತು; ಆದ್ದರಿಂದ ಪಾಂಥ-ಶ್ರಮದ ಅಪನೋದನಾರ್ಥ ಅವರು ಮಹಾಭಾರತದಲ್ಲಿ ಅನೇಕ ಬ್ರಹ್ಮಸರಗಳನ್ನು ನಿರ್ಮಾಣ ಮಾಡಿರುತ್ತಾರೆ. ಅವುಗಳ ಅವಗಾಹನೆಯಿಂದ ಅಮರ ಜೀವನದೊಂದಿಗೆ ಮನುಷ್ಯರ ಅನಾದಿ ಪರಿಚಯವು ಮತ್ತೊಮ್ಮೆ ಹಸಿಯಾಗುತ್ತದೆ. ವಿರಾಟ್ ದ್ಯುಲೋಕದಲ್ಲಿ ಸೂರ್ಯನಂತೆ ಪ್ರಕಾಶಮಾನ ಬ್ರಹ್ಮ-ತತ್ವವನ್ನು ಸದಾ ಸಾಕ್ಷಾತ್ಕಾರ ಮಾಡಿಸುವಂತಹಾ ಅಪ್ರತಿಹತ ಚಕ್ಷು-ಶಕ್ತಿಯು ಜಯಭಾರತಕಾರನಿಂದ ಒಂದು ಕ್ಷಣವೂ ತಿರೋಹಿತವಾಗುತ್ತಿರಲಿಲ್ಲ. ಇದೇ ತಪಸ್ವೀ ವೈಧಿಕ ಋಷಿಗಳ ಮಹಿಮೆ. ಹಾಗಾಗಿ ಲೋಕದಲ್ಲಿ ಮಹಾಭಾರತವನ್ನು ಪಂಚಮ ವೇದವೆಂದೇ ತಿಳಿಯಲಾಗಿದೆ.

ಅನಂತದ ಮುದ್ರೆಯಿಂದ ಅಂಕಿತ, ಅನಂತಕರ್ತನ ಅನಂತಸೃಷ್ಟಿಯಲ್ಲಿ ಎಲ್ಲವೂ ಅನಂತವೇ ಆಗಿದೆ. ಭಾರತೀಯ ಅಧ್ಯಾತ್ಮವೇತ್ತರು ಯಾವುದೇ ತತ್ವ ವಿಶೇಷಕ್ಕೆ ’ಇದಮಿತ್ಥಂ’ ಎಂಬಂತೆ ಆಗ್ರಹ ಮಾಡುವುದು ಕೇವಲ ಅಜ್ಞತೆ ಎಂದೇ ತಿಳಿದಿದ್ದರು. ಯಾರ ಮನದಲ್ಲಿ ಈ ತತ್ವ ಇಷ್ಟೇ ಎಂಬ ಭಾವವು ಬಂದಿತೋ, ಇದಕ್ಕೂ ಮುಂದೆ ಇನ್ನೇನಿಲ್ಲ ಎನ್ನುವವರೇ ಅಪೂರ್ಣ, ಮೃತ್ಯು ಹಾಗೂ ಅಂಧಕಾರದ ಗರ್ತದಲ್ಲಿ ಬಿದ್ದರು - "ಮತಂ ಯಸ್ಯ ನ ವೇದ ಸಃ |" [ಕೇನ ೨|೩]

ವೈಧಿಕ ಪರಿಭಾಷೆಯಲ್ಲಿ ಪ್ರಜಾಪತಿಯ ನಿರುಕ್ತ ಮತ್ತು ಅನಿರುಕ್ತಗಳೆಂಬ ಎರಡು ರೂಪಗಳಿವೆ. ನಿರುಕ್ತ ಅಥವಾ ಶಬ್ದವು ಪರಿಮಿತ ರೂಪ ಮರ್ತ್ಯಭಾವಾಪನ್ನವಾಗಿದೆ, ಅದರಲ್ಲಿ ಪ್ರಾಣನದ ಅವಕಾಶವಿರುವುದಿಲ್ಲ. ಅನಿರುಕ್ತ ಅಥವ ಶಬ್ದಾತೀತ ರೂಪವೇ ಅಮೃತಸ್ವರೂಪ ಹಾಗೂ ಸದಾ ಅನುಪ್ರಾಣಿತವಾಗಿರುತ್ತದೆ.

ಇದೇ ಸತ್ಯದ ಒಂದು ಉದ್ಭಾವ್ಯ ಪಕ್ಷವೇನೆಂದರೆ ಯಾವ ತತ್ವಕ್ಕೆ ಯಾವುದೇ ಒಂದು ನಾಮ ಅಥವಾ ರೂಪದಿಂದ ನಮಗೆ ಪರಿಚಯ ಸಿಕ್ಕಿದೆಯೋ, ಅದರ ಇನ್ನೂ ಹೆಚ್ಚು ನಾಮ ಮತ್ತು ರೂಪಗಳು ಇರಲು ಸಾಧ್ಯ. ಅಸ್ಯವಾಮೀಯ ಸೂಕ್ತದ ಮಹರ್ಷಿಯು ಇಂತೆಂದಿದ್ದಾರೆ -

"ಏಕಂ ಸದ್ವಿಪ್ರಾ ಬಹುಧಾ ವದನ್ತಿ" | [ಋ. ೧|೧೬೪|೪೬]

ಈ ವಿಶ್ವವ್ಯಾಪಿನೀ ತ್ರೈಕಾಲಿಕ ಪರಿಭಾಷೆಯನ್ನು ಆವಿಷ್ಕರಿಸಿ ಇದೇ ಮಹಾರ್ಘ ಸತ್ಯವನ್ನು ಸಂಕೇತಿಸಿದ್ದಾರೆ. ಇಂದ್ರ, ಮಿತ್ರ, ವರುಣ, ಅಗ್ನಿ, ಸುಪರ್ಣ, ಯಮ, ಮಾತರಿಶ್ವ ಇತ್ಯಾದಿಗಳೆಲ್ಲವೂ ಒಂದೇ ತತ್ವದ ಬೇರೆ ಬೇರೆ ಹೆಸರುಗಳಷ್ಟೆ -

ಇನ್ದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸಸುಪರ್ಣೋ ಗರುತ್ಮಾನ್ |
ಏಕಂ ಸದ್ವಿಪ್ರಾ ಬಹುಧಾ ವದನ್ತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ ||
- ಋ. ೧|೧೬೪|೪೬

ಹಾಗೂ ಒಂದೇ ಇಂದ್ರವು ಅನೇಕ ರೂಪಗಳಲ್ಲಿ ಪ್ರಕಟವಾಗುತ್ತಿದೆ -

"ಇನ್ದ್ರೋ ಮಾಯಾಭಿಃ ಪುರುರೂಪ ಈಯತೇ |"
- ಋ. ೬|೪೭|೧೮

ಗಣಿತದ ಉದಾಹರಣೆಯಿಂದ ಈ ವಿಚಾರವು ಸ್ಪಷ್ಟವಾಗುತ್ತದೆ. ಒಂದೇ ಬಿಂದುವು ಅನೇಕ ಆಕೃತಿಗಳಿಂದ ಭಿನ್ನ-ಭಿನ್ನ ನಾಮ-ರೂಪಗಳನ್ನು ಧರಿಸಿ ಪ್ರಕಟವಾಗುತ್ತಿದೆ. ವೃತ್ತದ ರೂಪವೇ ತ್ರಿಕೋಣ, ಚತುರ್ಭುಜ... ಸಹಸ್ರಭುಜಾದಿಗಳಾಗಿವೆ. ಬಿಂದುವು ಸ್ವಯಂ ಅಪರಿಭಾಷ್ಯ ಅಥವಾ ಅನಿರ್ದೇಶ್ಯವಾಗಿದೆ. ಇದಮಾಕಾರತಯಾ ಅದರ ವರ್ಣನೆ ಅಶಕ್ಯ. ’ನೇತಿ-ನೇತಿ’ಯೇ ಬಿಂದುವಿನ ಯಥಾರ್ಥ ಸ್ವರೂಪ.

ಬಿಂದುವಿನ ವೈಧಿಕ ಸಂಜ್ಞೆಯೇ ಹೃದಯ. ಅದೇ ಪ್ರಜಾಪತಿ, ಅದಕ್ಕಾಗಿ ಇಂತೆಂದಿದೆ -

"ಪ್ರಜಾಪತಿಶ್ಚರತಿ ಗರ್ಭೇ ಅನ್ತರಜಾಯಮಾನೋ ಬಹುಧಾ ವಿಜಾಯತೇ |
ತಸ್ಯ ಯೋನಿಂ ಪರಿಪಶ್ಯನ್ತಿ ಧೀರಾಸ್ತಸ್ಮಿನ್ ಹ ತಸ್ಯುರ್ಭುವನಾನಿ ವಿಶ್ವಾ ||
 - ಯಜುಃ ೩೧|೧೯

ಒಂದೇ ಹಲವಾಗಿ ಅಥವಾ ಅನೇಕವಾಗಿ ಪ್ರತಿಭಾಸಿತವಾಗುತ್ತಿದೆ. ಆ ಒಂದರ ಬೀಜವನ್ನು ಅಂತರ್ಚಕ್ಷು ತೆರೆದ ಧೀರರು ನೋಡುತ್ತಾರೆ. ಆ ಪ್ರಜಾಪತಿ ಪುರುಷದ ನಾನಾವಿಧಾತ್ಮಕ ವರ್ಣನೆಗಾಗಿ ವಾಣಿಯ ಅನಂತ ವಿಸ್ತಾರವಾಗಿದೆ. ಅದಕ್ಕಾಗಿ ಇಂತೆಂದಿದೆ -

"ಋಷಿಭಿರ್ಬಹುಧಾ ಗೀತಮ್ |"
- ಭ.ಗೀತಾ. ೧೩|೪೭

ಮಹಾಭಾರತಕಾರರೂ ಇದೇ ಸತ್ಯವನ್ನು ಬಹಳ ಕಡೆ ಹೇಳಿದ್ದಾರೆ -

"ಏಕಧಾ ಚ ದ್ವಿಧಾ ಚೈವ ಬಹುಧಾ ಸ ಏವ ಹಿ |
ಶತಧಾ ಸಹಸ್ರಧಾ ಚೈವ ತಥಾ ಶತಸಹಸ್ರಶಃ ||"
- ಮಹಾ. ಅನು. ೧೬೦|೪೩

ಹಾಗೂ -

"ಸ ಚ ರುದ್ರಃ ಶಿವಃ ಸೋಽಗ್ನಿಃ ಸರ್ವಃ ಸ ಸರ್ವಜಿತ್ | ಸ ವೈ ಚನ್ದ್ರಶ್ಚ ವಾಯುಶ್ಚ ಸೋಽಶ್ವಿನೌ ಸ ಚ ವಿದ್ಯುತಃ ||ಸ ಚನ್ದ್ರಮಾಃ ಸ ಚೇಶಾನಃ ಸ ಸೂರ್ಯೋ ವರುಣಶ್ಚ ಸಃ |ಸ ಕಾಲಃ ಸೋಽನ್ತಕೋ ಮೃತ್ಯುಃ ಸ ತಮೋ ರಾತ್ರ್ಯಹಾನಿ ಚ ||ಮಾಸಾರ್ದ್ಧಮಾಸಋತವಃ ಸನ್ಧ್ಯೇ ಸಮ್ವತ್ಸರಶ್ಚ ಸಃ |ಸ ಧಾತಾ ಸ ವಿಧಾತಾ ಚ ವಿಶ್ವಕರ್ಮಾ ಸ ಸರ್ವವಿತ್ ||ನಕ್ಷತ್ರಾಣಿ ಗ್ರಹಾಶ್ಚೈವ ದಿಶೋಽಥ ವಿದಿಶಸ್ತಥಾ |ವಿಶ್ವಮೂರ್ತಿರಮೇಯಾತ್ಮಾ ಭಗವಾನಮರದ್ಯುತಿಃ ||"
- ಮಹಾ. ಅನು. ೧೬೦|೩೯-೪೨

ಮಹಾಭಾರತದಲ್ಲಿ ಅಸಂಖ್ಯ ಸ್ಥಾನಗಳಲ್ಲಿ ಈ ರೀತಿಯ ವರ್ಣನೆ ಸಿಗುತ್ತವೆ. ಇವುಗಳ ಮೂಲದಲ್ಲಿ ವೇದದ ’ಏಕಂ ಸದ್ವಿಪ್ರಾ ಬಹುಧಾ ವದನ್ತಿ’ ಎಂಬುದರ ಛಾಯೆಯೇ ಕಂಡುಬರುತ್ತದೆ.

ಬ್ರಾಹ್ಮಣ, ಆರಣ್ಯಕ, ಉಪನಿಷದ್ ಹಾಗೂ ನಿರುಕ್ತ ಹಾಗೂ ಧರ್ಮಶಾಸ್ತ್ರಾದಿ ಸಾಹಿತ್ಯದ ಸಾಕ್ಷಿಯೂ ಇದಕ್ಕೆ ಅನುಕೂಲವಾಗಿಯೇ ಇದೆ. ಇದೇ ಆರ್ಷ-ಸಾಹಿತ್ಯದ ವಿಶೇಷತೆಯು; ನಾನಾ ವಿಭಿನ್ನತೆಗಳಿದ್ದರೂ ಅದರಲ್ಲಿ ಏಕತೆಯ ಅಂತರ್ಯಾಮೀ ಸೂತ್ರವನ್ನು ಎಂದಿಗೂ ಮರೆತಿಲ್ಲ. ’ಮೈತ್ರಾಯಣೀ ಆರಣ್ಯಕ’ದಲ್ಲಿ ಇದೇ ಸಿದ್ಧಾಂತದ ಬಗ್ಗೆ ಈ ರೀತಿ ವರ್ಣನೆ ಇದೆ -

"ಏಷ ತ ಆತ್ಮಾಽಪಹತಪಾಪ್ಮಾ ವಿಜರೋ ವಿಮೃತ್ಯುರ್ವಿಶೋಕೋಽವಿಚಿ-ಕಿತ್ಸೋಽವಿಪಾಶಃ ಸತ್ಯಸಂಕಲ್ಪಃ ಸತ್ಯಕಾಮಃ |
ಏಷ ಪರಮೇಶ್ವರ ಏಷ ಭೂತಾದಿಪತಿರೇಷ ಭೂತಪಾಲ ಏಷ ಸೇತುರ್ವಿಧರಣಃ |
ಏಷ ಹಿ ಖಲು ಆತ್ಮಾ ಈಶಾನಃ ಶಮ್ಭುರ್ಭವೋ ರುದ್ರಃ ಪ್ರಜಾಪತಿರ್ವಿಶ್ವಸೃಕ್
ಹಿರಣ್ಯಗರ್ಭಃ ಸತ್ಯಂ ಪ್ರಾಣೋ ಹಂಸಃ ಶಾಸ್ತ್ರಽಚ್ಯುತೋ ವಿಷ್ಣುರ್ನಾರಾಯಣಃ
|"
- ಮೈತ್ರಾ. ಆರ. ೭|

ಅಂದರೆ - ಈ ಆತ್ಮವು ಪಾಪರಹಿತ, ಜರಾರಹಿತ, ಮೃತ್ಯುರಹಿತ, ಶೋಕರಹಿತ, ಸಂಶಯರಹಿತ, ಪಾಶರಹಿತ, ಸತ್ಯಸಂಕಲ್ಪ ಹಾಗೂ ಸತ್ಯಕಾಮವಾಗಿದೆ. ಇದು ಪರಮೇಶ್ವರ, ಭೂತಾಧಿಪತಿ, ಸರ್ವರಕ್ಷಕ ಹಾಗೂ ಎಲ್ಲರ ಧಾರಣೆ ಮಾಡುವಂತಹಾ ಸೇತು. ಇದೇ ಆತ್ಮಾ, ಈಶಾನ, ಶಂಭು, ಭವ, ರುದ್ರ, ಪ್ರಜಾಪತಿ ವಿಶ್ವಸ್ರಷ್ಟಾ, ಹಿರಣ್ಯಗರ್ಭ, ಸತ್ಯ, ಪ್ರಾಣ, ಹಂಸ, ಶಾಸ್ತಾ, ಅಚ್ಯುತ, ವಿಷ್ಣು, ನಾರಾಯಣಾದಿ ಹಲವು ಹೆಸರುಗಳಿಂದ ಕರೆಯಲ್ಪಡುತ್ತದೆ.

ಅದೇ ಗ್ರಂಥದಲ್ಲಿ ಕೌತ್ಸಾಯನೀ ಸ್ತುತಿಯಿಂದ ಋಗ್ವೇದದ ಪೂರ್ವೋದ್ಧೃತ ಮಂತ್ರದ ಭಾವಾನುವಾದ ಸಿಗುತ್ತದೆ -
"ತ್ವಂ ಬ್ರಹ್ಮಾ ತ್ವಂ ಚ ವೈ ವಿಷ್ಣುಸ್ತ್ವಂ ರುದ್ರಸ್ತ್ವಂ ಪ್ರಜಾಪತಿಃ |ತ್ವಮಗ್ನಿರ್ವರುಣೋ ವಾಯುಸ್ತ್ವಮಿನ್ದ್ರಸ್ತ್ವಂ ನಿಶಾಕರಃ ||
ತ್ವಮನ್ನಸ್ತ್ವಂ ಯಮಃ ಪೃಥ್ವೀ ತ್ವಂ ವಿಶ್ವಂ ತ್ವಮಥಾಚ್ಯುತಃ |
ಸ್ವಾರ್ಥೇ ಸ್ವಾಭಾವಿಕೇಽರ್ಥೇ ಚ ಬಹುಧಾ ಸಂಸ್ಥಿತಿಸ್ತ್ವಯಿ ||"
- ಮೈತ್ರಾ. ಆರ. ೫|,

ಅಂದರೆ - ಬ್ರಹ್ಮಾ, ವಿಷ್ಣು, ರುದ್ರ, ಪ್ರಜಾಪತಿ, ಅಗ್ನಿ, ವರುಣ, ವಾಯು, ಇಂದ್ರ, ಪ್ರಾಣ, ಅನ್ನ, ಯಮ, ಇವೆಲ್ಲವೂ ಒಂದೇ ಪರಮೇಶ್ವರದ ಅನೇಕ ನಾಮಗಳಾಗಿವೆ.

ನಿರುಕ್ತದ ಪರಿಶಿಷ್ಟದಲ್ಲಿ (೧೪|೧೨) ಮಹಾನ್ ಆತ್ಮದ ಅನೇಕ ಹೆಸರುಗಳ ದರ್ಶನ ಮಾಡಿಸುತ್ತಾ ಏನು ಬರೆದಿದೆ ಎಂದರೆ ಹಂಸ ಧರ್ಮ ಯಜ್ಞ ವೇನ ಆಭು ಶಮ್ಭು ಪ್ರಭು ವಿಭು ಸೋಮ ವ್ಯೋಮ ಆಪ ಯಶಃ ಮಹಃ ಭೂತಭುವನ ಭವಿಷ್ಯತ್ ಗಹನ ಗಮ್ಭೀರ ಅನ್ನ ಹವಿ ಋತು ಸತ್ಯ ಬ್ರಹ್ಮ ಆತ್ಮ ತಪ ಸಾಗರ ಸಿನ್ಧು ಸಮುದ್ರ ವರೇಣ್ಯ ಇನ್ದು ಅಮೃತ ಇನ್ದ್ರ ಸತ್ ತತ್ ಯತ್ ಕಿಮ್ ಎಂಬಿತ್ಯಾದಿ ಅನೇಕ ಹೆಸರುಗಳು ಅದಕ್ಕಿದೆ. ಅದನ್ನು ತತ್ತ್ವತಃ ತಿಳಿಯುವುದು ಬಹಳ ಕಠಿಣ. ಇಷ್ಟು ಅಪರಿಮಿತ ಆಲೋಡನೆಯ ನಂತರವೂ ಪುರುಷ ತತ್ವವು ಅದ್ಯಾವಧಿ ಅಜ್ಞೇಯವಾಗಿದೆ. ಆದ್ದರಿಂದ ವೇದಗಳು ಅದಕ್ಕೆ ’ಸಂಪ್ರಶ್ನ’ (ಮಹಾನ್ ಪ್ರಶ್ನೆ) ಎಂಬ ಉಪಾಧಿ ನೀಡಿದೆ. ಸೃಷ್ಟಿಯ ಕೊನೆಯವರೆಗೆ ಈ ಸಂಪ್ರಶ್ನೆಯು ಇದೇ ರೀತಿ ಗಹನವಾಗಿರುತ್ತದೆ, ಇದರ ಒಂದು ಅಣುವಿನ ರಹಸ್ಯವೂ ಎಂದಿಗೂ ಯಾರಿಗೂ ಯಥಾರ್ಥವಾಗಿ ತಿಳಿಯಲಾಗುವುದಿಲ್ಲ. ಸಮಸ್ತ ವಿಜ್ಞಾನ ಇತಿಶ್ರೀ ಇದೇ ಆಗಿದೆ.

ಶಾಂತಿಪರ್ವದ ನಾರಾಯಣೀಯ ಅಧ್ಯಾಯಗಳಲ್ಲಿ ಪರಮ ಪುರುಷನ ಅನೇಕ ರೂಪ ಅನೇಕ ನಾಮಗಳನ್ನು ಮತ್ತೆ-ಮತ್ತೆ ವರ್ಣಿಸಲಾಗಿದೆ -

"ಯಾನಿ ನಾಮಾನಿ ತೇ ದೇವ ಕೀರ್ತಿತಾನಿ ಮಹರ್ಷಿಭಿಃ |ವೇದೇಷು ಸಪುರಾಣೇಷು ಯಾನಿ ಗುಹ್ಯಾನಿ ಕರ್ಮಭಿಃ || ||
ತೇಷಾಂ ನಿರುಕ್ತಂ ತ್ವತ್ತೋಽಹಂ ಶ್ರೋತುಮಿಚ್ಛಾಮಿ ಕೇಶವ |
ನ ಹ್ಯನ್ಯೋ ವರ್ಣಯೇನ್ನಾಮ್ನಾಂ ನಿರುಕ್ತಂ ತ್ವಾಮೃತೇ ಪ್ರಭೋ || ||"

ಭಗವಂತ ಹೇಳುತ್ತಾನೆ -

"ಋಗ್ವೇದೇ ಸಯಜುರ್ವೇದೇ ತಥೈವಾಥರ್ವಸಾಮಸು |ಪುರಾಣೇ ಸೋಪನಿಷದೇ ತಥೈವ ಜ್ಯೋತಿಷೇಽರ್ಜುನ || ||
ಸಾಂಖ್ಯೇ ಚ ಯೋಗಶಾಸ್ತ್ರೇ ಚ ಆಯುರ್ವೇದೇ ತಥೈವ ಚ |
ಬಹೂನಿ ಮಮ ನಾಮಾನಿ ಕೀರ್ತಿತಾನಿ ಮಹರ್ಷಿಭಿಃ || ||
ನಮೋಽತಿಯಶಸೇ ತಸ್ಮೈ ದೇಹಿನಾಂ ಪರಮಾತ್ಮನೇ || ೧೧ ||
ನಾರಾಯಣಾಯ ವಿಶ್ವಾಯ ನಿರ್ಗುಣಾಯ ಗುಣಾತ್ಮನೇ || ೧೨ ||
ತಪೋ ಯಜ್ಞಶ್ಚ ಯಷ್ಟಾ ಚ ಪುರಾಣಃ ಪುರುಷೋ ವಿರಾಟ್ || ೧೫ ||"
- ಶಾಂತಿ. ಅ. ೩೪೧

ಅಂದರೆ - ಋಗ್ವೇದಾದಿ ಶಾಸ್ತ್ರಗಳಲ್ಲಿ ಆ ಪುರುಷನ ಹಲವು ಹೆಸರುಗಳು ಹೇಳಲ್ಪಟ್ಟಿವೆ. ತಪ, ಯಜ್ಞ, ಯಜಮಾನ, ಪುರಾಣ ಹಾಗೂ ವಿರಾಟ್ ಇವೆಲ್ಲ ಅದರ ಸಂಜ್ಞೆಗಳು.

ತದನಂತರ ವ್ಯಾಸರು ಈಶ್ವರದ ಅನೇಕ ವೈಧಿಕ ಹಾಗೂ ಪೌರಾಣಿಕ ಹೆಸರುಗಳು ನಿರುಕ್ತಿಗಳನ್ನು ಹೇಳಿದ್ದಾರೆ. ಪೃಶ್ನಿಗರ್ಭ ವೈಧಿಕ ಹೆಸರು, ಅದರ ಸಂಬಂಧದಲ್ಲಿ ಇಂತೆಂದಿದ್ದಾರೆ -

"ಪೃಶ್ನಿರಿತ್ಯುಚ್ಯತೇ ಚಾನ್ನಂ ವೇದಾ ಆಪೋಽಮೃತಸ್ತಥಾ |ಮಮೈತಾನಿ ಸದಾ ಗರ್ಭಃ ಪೃಶ್ನಿಗರ್ಭಸ್ತತೋ ಹ್ಯಹಮ್ ||"
- ಶಾಂತಿ. ೩೪೧|೪೫

ಇದರೊಂದಿಗೆ ಒಂದು ವೈಧಿಕ ಉಪಾಖ್ಯಾನದ ಉಲ್ಲೇಖವೂ ಮಾಡಲಾಗಿದೆ. ತ್ರಿತನೆಂಬ ಬ್ರಹ್ಮನ ಮಗನು ಭಗವಂತನ ಪೃಶ್ನಿಗರ್ಭ ಸ್ವರೂಪದ ಉಪಾಸನೆಯಿಂದ ಭವಕೂಪದಿಂದ ಪಾರಾದನು (ಶಾಂತಿ. ೩೪೧|೪೬,೪೭). ಇಲ್ಲಿಯೇ ದಾಮೋದರ ಹಾಗೂ ಕೇಶವರ ವ್ಯುತ್ಪತ್ತಿಯೂ ತಿಳಿದುಕೊಳ್ಳಲು ಯೋಗ್ಯವಾದದ್ದು -

"ದ್’ಮಾತ್ ಸಿದ್ಧಿಂ ಪರೀಪ್ಸನ್ತೋ ಮಾಂ ಜನಾಃ ಕಾಮಯನ್ತಿ ಹ |
ದಿವಞ್ಚೋರ್ವೀಞ್ಚ ಮಧ್ಯಞ್ಚ ತಸ್ಮಾದ್ದಾಮೋದರೋ ಹ್ಯಹಮ್ ||’
- ಶಾಂತಿ. ೩೪೧|೪೪

ಅಂದರೆ - (ದ್’ಮದ) ದಮದ ಮುಖೇನ  ದ್ಯು, ಪೃಥಿವೀ ಹಾಗೂ ಮಧ್ಯಲೋಕದಲ್ಲಿ ಸಿದ್ಧಿ ಪಡೆದ ಕಾರಣ ಭಗವಂತನು ದಾಮೋದರನಾಗಿದ್ದಾನೆ.

ಈ ರೀತಿಯ ನಿರುಕ್ತದ ಮೂಲದಲ್ಲಿ ಇಂದ್ರದಿಂದ ಇಂದ್ರನನ್ನು ಹೇಗೆ ಹೇಳಿತೋ ಅದೇ ಸೂತ್ರವಿದೆ. ಹಾಗೇ -

"ಪರೋಕ್ಷಪ್ರಿಯಾ ವೈ ದೇವಾ ಪ್ರತ್ಯಕ್ಷದ್ವಿಷಃ |"

ಅಂದರೆ - ದೈವೀ ಭಾವಗಳ ವ್ಯಾಖ್ಯಾನದಲ್ಲಿ ಸಂಕೇತಾಕ್ಷರಗಳ ಅವಲಂಬನೆಯೇ ಸಾಕು. ಕೇಶವನ ಸಂಬಂಧದಲ್ಲಿ ಹೀಗೆ ಹೇಳಿದೆ -

ಸೂರ್ಯಸ್ಯ ತಪತೋ ಲೋಕನಗ್ನೇಃ ಸೋಮಸ್ಯ ಚಾಪ್ಯುತ |
ಅಂಶವೋ ಯತ್ ಪ್ರಕಾಶನ್ತೇ ಮಮ ತೇ ಕೇಶಸಂಜ್ಞಿತಾ |
ಸರ್ವಜ್ಞಾಃ ಕೇಶವಂ ತಸ್ಮಾನ್ಮಾಮಾಹುರ್ದ್ವಿಜಸತ್ತಮಾಃ ||
 - ಶಾಂತಿ. ೩೪೧ | ೪೮, ೪೯

ಅಂದರೆ - ಸೂರ್ಯ, ಅಗ್ನಿ, ಸೋಮಗಳ ರಶ್ಮಿಗಳೇ ಕೇಶವು. ಇವುಗಳ ಕಾರಣದಿಂದಲೇ ಭಗವಂತನು ಕೇಶವ ಅಥವಾ ಕೇಶೀ ಎಂದು ಕರೆಯಲ್ಪಟ್ಟಿದ್ದಾನೆ. "ತ್ರಯಃ ಕೇಶಿನಃ ಋತುಥಾ ವಿಚಕ್ಷತೇ" (ಋ, |೧೬೪|೪೪) ಈ ಮಂತ್ರದಲ್ಲಿ ’ಕೇಶಿನಃ’ ಪದದ ಅರ್ಥ ಅಗ್ನಿ, ವಾಯು, ಆದಿತ್ಯ (ನಿರುಕ್ತ ೧೨|೨೭) ಎನ್ನಲಾಗಿದೆ. ಆತನು ತನ್ನ ಕೇಶಗಳನ್ನು ಅಂದರೆ ಸರ್ವತ್ರ ವ್ಯಾಪ್ತ ರಶ್ಮಿ-ಜಾಲಗಳಿಂದ ಎಲ್ಲಾ ಲೋಕಗಳ ನಿಯಂತ್ರಣ ಮಾಡುತ್ತಾನೆ. ಇವೇ ಮೂರು ಜ್ಯೋತಿಗಳಿಂದ - ಪೃಥಿವೀ, ಅಂತರಿಕ್ಷ ಹಾಗೂ ದ್ಯೌ ಎಂಬ ಮೂರು ಲೋಕಗಳು ಪ್ರಕಾಶಿತವಾಗಿರುತ್ತವೆ.

ಮಹಾಭಾರತದ ಇದೇ ನಾರಾಯಣೀಯ ಪ್ರಕರಣದಲ್ಲಿ ಒಂದು ಅತಿ ವಿಚಿತ್ರ ಮಹಾಪುರುಷ ಸ್ತೋತ್ರ ನೀಡಲಾಗಿದೆ (ಶಾಂತಿ. ೩೩೮). ಇದರ ಪಾರಾಯಣವನ್ನು ನಾರದರು ಶ್ವೇತ ದ್ವೀಪದ ಚಂದ್ರನಂತೆ ಶ್ವೇತ ವರ್ಣದ ಮನುಷ್ಯರ ಮುಂದೆ ಮಾಡಿದ್ದರು ಎಂದಿದೆ -

"ನಮಸ್ತೇ ದೇವದೇವೇಶ ನಿಷ್ಕ್ರಿಯ ಲೋಕಸಾಕ್ಷಿನ್ ಕ್ಷೇತ್ರಜ್ಞ ಪುರುಷೋತ್ತಮ ಅನನ್ತಪುರುಷ ಮಹಾಪುರುಷ ತ್ರಿಗುಣಪ್ರಧಾನ ಅಮೃತವ್ಯೋಮ ಸನಾತನ ಸದಸದ್ ವ್ಯಕ್ತಾವ್ಯಕ್ತ ಋತಧಾಮನ್ ಆದಿದೇವ ವಸುಪ್ರದ ಪ್ರಜಾಪತೇ ಸುಪ್ರಜಾಪತೇ ವನಸ್ಪತೇ ಮಹಾಪ್ರಜಾಪತೇ ಊರ್ಜ್ಜಸ್ಪತೇ ವಾಚಸ್ಪತೇ ಜಗತ್ಪತೇ ಮನಸ್ಪತೇ ದಿವಸ್ಪತೇ ಮರುತ್ಪತೇ ಸಲಿಲಪತೇ ಪೃಥಿವೀಪತೇ ದಿಕ್ಪತೇ ಪೂರ್ವನಿವಾಸ ಗುಹ್ಯ ಬ್ರಹ್ಮಪುರೋಹಿತ ಬ್ರಹ್ಮಕಾಯಿಕ ಮಹಾರಾಜಿಕ ಚಾತುರ್ಮ್ಮಹಾರಾಜಿಕ ಆಭಾಸುರ ಮಹಾಭಾಸುರ ಸಪ್ತಮಹಾಭಾಗ್ಯ ಯಾಮ್ಯ ಮಹಾಯಾಮ್ಯ ಸಂಜ್ಞಾಸಂಜ್ಞ ತುಷಿತ ಮಹಾತುಷಿತ ಪ್ರಮರ್ದನ ಪರಿನಿರ್ಮಿತ ಅಪರಿನಿರ್ಮಿತ ಅಪರಿನಿನ್ದತ ಅಪರಿಮಿತ ವಶವರ್ತಿನ್ ಅವಶವರ್ತಿನ್ ಯಜ್ಞ ಮಹಾಯಜ್ಞ ಯಜ್ಞಸಮ್ಭವ ಯಜ್ಞಯೋನೇ ಯಜ್ಞಗರ್ಭ ಯಜ್ಞಹೃದಯ ಯಜ್ಞಸ್ತುತ್ ಯಜ್ಞಭಾಗಹರ ಪಞ್ಚಯಜ್ಞ ಪಞ್ಚಕಾಲಕರ್ತೃಪತೇ ಪಞ್ಚರಾತ್ರಿಕ ವೈಕುಣ್ಠ ಅಪರಾಜಿತ ಮಾನಸಿಕ ನಾಮನಾಮಿಕ ಪರಸ್ವಾಮಿನ್ ಸುಸ್ನಾತ ಹಂಸ ಪರಮಹಂಸ ಮಹಾಹಂಸ ಪರಮಯಾಜ್ಞಿಕ ಸಾಂಖ್ಯಯೋಗ ಸಾಂಖ್ಯಮೂರ್ತೇ ಅಮೃತೇಶಯ ಹಿರಣ್ಯೇಶಯ ಕುಶೇಶಯ ಬ್ರಹ್ಮೇಶಯ ಪದ್ಮೇಶ ವಿಶ್ವೇಶ್ವರ ವಿಷ್ವಕ್ಸೇನ |"

ಇಷ್ಟು ಆರ್ಷಭಾವಾಪ್ಲುತ ಸಂಬೋಧನೆಗಳ ತರುವಾಯ ನಾರದರು ಹೇಳುತ್ತಾರೆ -

"ತ್ವಂ ಜಗದನ್ವಯಃ ತ್ವಂ ಜಗತ್ಪ್ರಕೃತಿಃ ತವಾಗ್ನಿರಾಸ್ಯಂ ವಡಾವಾಮುಖೋಽಗ್ನಿಃ ತ್ವಮಾಹುತಿಃ ಸಾರಥಿಃ ತ್ವಂ ವಷಟ್ಕಾರಃ ತ್ವಮೋಙ್ಕಾರಃ ತ್ವಂ ತಪಃ ಮನಃ ತ್ವಂ ಚನ್ದ್ರಮಾಃ ತ್ವಂ ಚಕ್ಷುರಾಜ್ಯಂ ತ್ವಂ ಸೂರ್ಯಃ ತ್ವಂ ದಿಶಾಂ ಗಜಃ ತ್ವಂ ದಿಗ್ಭಾನುಃ |"

ನಂತರ ಅದೇ ರೀತಿಯ ಸಂಬೋಧನೆಗಳಿಂದ ಭಗವಂತನ ಸ್ತುತಿ ಇದೆ -

"ಪ್ರಥಮತ್ರಿಸೌಪರ್ಣ ಪಞ್ಚಾಗ್ನೇ ತ್ರಿಣಾಚಿಕೇತ ಷಡಙ್ಗನಿಧಾನ ಪ್ರಾಗ್ಜ್ಯೋತಿಷ ಜ್ಯೇಷ್ಠಸಾಮಗ ಸಾಮಿಕವ್ರತಧರ ಅಥರ್ವಶಿರಃ ಪಞ್ಚಮಹಾಕಲ್ಪ ಬಾಲಖಿಲ್ಯ ಪ್ರಾಚೀನಗರ್ಭ ಕೌಶಿಕ ಪುರುಷ್ಟುತ ಪುರುಹೂತ ವಿಶ್ವಕೃತ ವಿಶ್ವರೂಪ ಅನನ್ತಗತೇ ಅನನ್ತಭೋಗ ಅನನ್ತ ಅನಾದಿ ಅಮಧ್ಯ ಅವ್ಯಕ್ತಮಧ್ಯ ಅವ್ಯಕ್ತನಿಧನ ವ್ರತಾವಾಸ ಸಮುದ್ರಾಧಿವಾಸ ಯಶೋವಾಸ ತಪೋವಾಸ ದಮಾವಾಸ ಲಕ್ಷ್ಮ್ಯಾವಾಸ ವಿಧ್ಯಾವಾಸ ಕೀರ್ತ್ಯಾವಾಸ ಶ್ರೀವಾಸ ಸರ್ವಾವಾಸ ವಾಸುದೇವ ಸರ್ವಚ್ಛನ್ದಕ ಯಮ ನಿಯಮ ಮಹಾನಿಯಮ ಕೃಚ್ಛ್ರ ಮಹಾಕೃಚ್ಛ್ರ ಸರ್ವಕೃಚ್ಛ್ರ ಪ್ರವಚನಗತ ಪೃಶ್ನಿಗರ್ಭಪ್ರವೃತ್ತ ಪ್ರವೃತ್ತವೇದಕ್ರಿಯ ಅಜ ಸರ್ವಗತ ಸರ್ವದರ್ಶಿನ್ ಅಗ್ರಾಹ್ಯ ಅಚಲ ಮಹಾವಿಭೂತೇ ಮಹಾತ್ಮ್ಯಶರೀರ ಪವಿತ್ರ ಮಹಾಪವಿತ್ರ ಹಿರಣ್ಮಯ ಬೃಹತ್ ಅಪ್ರತರ್ಕ್ಯ ಅವಿಜ್ಞೇಯ ವರದ ವಿಶ್ವಮೂರ್ತೇ ಮಹಾಮೂರ್ತೇ ಭಕ್ತವತ್ಸಲ ಬ್ರಹ್ಮಣ್ಯದೇವ |"

"ಭಕ್ತೋಽಹಂ ತ್ವಾಂ ದಿದೃಕ್ಷುರೇಕಾನ್ತದರ್ಶನಾಯ ನಮೋ ನಮಃ |"

ಋಗ್ವೇದದ ’ಏಕಂ ಸದ್ವಿಪ್ರಾ ಬಹುಧಾ ವದನ್ತಿ’ಯಲ್ಲಿ ಬಹುಧಾ ಎಂಬ ಶಬ್ದದ ಅನಂತ ಪ್ರಪಂಚವೇ ಈ ಪ್ರಪಂಚದ ಉತ್ತರವರ್ತೀ ಸಾಹಿತ್ಯದಲ್ಲಿ ಪಲ್ಲವಿತವಾಗಿದೆ. ವೇದವ್ಯಾಸರು ತಮ್ಮ ಆರ್ಷ ಪ್ರತಿಭೆಯಿಂದ ವೇದಾರ್ಥದ ವ್ಯಾಖ್ಯಾನವನ್ನು ಈ ನಾನಾ ನಾಮಗಳಿಂದ ಮಾಡಿದ್ದಾರೆ.

ಶಾಂತಿಪರ್ವದಲ್ಲಿ (ಅ. ೪೭) ಭೀಷ್ಮಸ್ತವರಾಜ ಎಂಬ ಇನ್ನೊಂದು ಸ್ತೋತ್ರವಿದೆ. ಮೃತ್ಯುವಿನ ಪೂರ್ವದಲ್ಲಿ ಭೀಷ್ಮರು ಇದರ ಪಠನ ಮಾಡಿ ಸನಾತನ ಪುರುಷನನ್ನು ಧ್ಯಾನಿಸುತ್ತಾ ಗದ್ಗದರಾಗಿದ್ದರು -

"ಶುಚಿಂ ಶುಚಿಪದಂ ಹಂಸಂ ತತ್ಪದಂ ಪರಮೇಷ್ಠಿನಮ್ |ಯುಕ್ತ್ವಾ ಸರ್ವಾತ್ಮನಾತ್ಮಾನಂ ತಂ ಪ್ರಪದ್ಯೇ ಪ್ರಜಾಪತಿಮ್ || ೧೭ ||
ಅನಾದ್ಯನನ್ತಂ ಪರಂ ಬ್ರಹ್ಮ ನ ದೇವಾ ನರ್ಷಯೋ ವಿದುಃ |
ಏಕೋಽಯಂ ವೇದಭಗವಾನ್ ಧಾತಾ ನಾರಾಯಣೋ ಹರಿಃ || ೧೮ ||
ಯಸ್ಮಿನ್ ವಿಶ್ವಾನಿಭೂತಾನಿ ತಿಷ್ಠನ್ತಿ ಚ ವಿಶ್ವನ್ತಿ ಚ |
ಗುಣಭೂತಾನಿ ಭೂತೇಶೇ ಸೂತ್ರೇ ಮಣಿಗಣಾ ಇವ || ೨೧ ||
ಯಸ್ಮಿನ್ನಿತ್ಯೇ ತತೇ ತನ್ತೌ ದೃಢೇ ಸ್ರಗಿವ ತಿಷ್ಠತಿ |
ಸದಸದ್ ಗ್ರಥಿತಂ ವಿಶ್ವಂ ವಿಶಾಙ್ಗೇ ವಿಶ್ವಕರ್ಮಣಿ || ೨೨ ||
ಹರಿಂ ಸಹಸ್ರಶಿರಸಂ ಸಹಸ್ರಚರಣೇಕ್ಷಣಮ್ |
ಸಹಸ್ರಬಾಹುಮುಕುಟಂ ಸಹಸ್ರವದನೋಜ್ಜ್ವಲಮ್ ||
ಪ್ರಾಹುರ್ನಾರಾಯಣಂ ದೇವಂ ಯಂ ವಿಶ್ವಸ್ಯ ಪರಾಯಣಮ್ |
ಅಣೀಯಸಾಮಣೀಯಾಂಸಂ ಸ್ಥವಿಷ್ಠಞ್ಚ ಸ್ಥವೀಯಸಾಮ್ ||
ಗರೀಯಸಾಂ ಗರಿಷ್ಠಞ್ಚ ಶ್ರೇಷ್ಠಞ್ಚ ಶ್ರೇಯಸಾಮಪಿ |
ಯಂ ವಾಕೇಷ್ವನುವಾಕೇಷು ನಿಷತ್ಸೂಪನಿಷತ್ಸು ಚ ||
ಗೃಣನ್ತಿ ಸತ್ಯಕರ್ಮಾಣಂ ಸತ್ಯಂ ಸತ್ಯೇಷು ಸಾಮಸು ||
ಯಸ್ಮಿನ್ನಿತ್ಯಂ ತಪಸ್ತಪ್ತಂ ತದಙ್ಕೇಷ್ವನು ತಿಷ್ಠತಿ |
ಸರ್ವಾತ್ಮಾ ಸರ್ವವಿತ್ ಸರ್ವಃ ಸರ್ವಜ್ಞಃ ಸರ್ವಭಾವನಃ || ೨೭ ||
ಯಮಾಹುರ್ಜಗತಃ ಕೋಷಂ ಯಸ್ಮಿನ್ಸನ್ನಿಹಿತಾಃ ಪ್ರಜಾಃ |
ಯಸ್ಮಿನ್ ಲೋಕಾಃ ಸ್ಫುರನ್ತೀಮೇ ಜಲೇ ಶಕುನಯೋ ಯಥಾ || ೩೩ ||
ಋತಮೇವಾಕ್ಷರಂ ಬ್ರಹ್ಮ ಯತ್ತತ್ ಸದಸತೋಃ ಪರಮ್ |
ಅನಾದಿಮಧ್ಯ ಪರ್ಯನ್ತಂ ನ ದೇವಾ ನರ್ಷಯೋ ವಿದುಃ || ೩೪ ||
ಯಂ ವೈ ವಿಶ್ವಸ್ಯ ಕರ್ತಾರಂ ಜಗತಸ್ತಸ್ಥುಷಾಂ ಪತಿಮ್ |
ವದನ್ತಿ ಜಗತೋಽಧ್ಯಕ್ಷಮಕ್ಷರಂ ಪರಮಂ ಪದಮ್
|| ೩೭ ||"

ಇದರ ಅನಂತರ ಅಂದಾಜು ೫೦ ಶ್ಲೋಕಗಳಲ್ಲಿ ಭಗವಂತನ ನಾನಾ ರೂಪಗಳ ವರ್ಣನೆ ಮಾಡಲಾಗಿದೆ. ಆ ಅತಿ ಪವಿತ್ರ ವಾಗ್ಯಯಜ್ಞದ ತುಣುಕುಗಳನ್ನು ಓದುಗರ ತೃಪ್ತಿಗಾಗಿ ಇಲ್ಲಿ ನೀಡಲಾಗುತ್ತದೆ -

"ಹಿರಣ್ಯವರ್ಣಂ ಯಂ ಗರ್ಭಮದಿತಿರ್ದೈತ್ಯನಾಶನಮ್ |ಏಕಂ ದ್ವಾದಶಧಾ ಜಜ್ಞೇ ತಸ್ಮೈ ಸೂರ್ಯಾತ್ಮನೇ ನಮಃ || ೩೮ ||
ಶುಲ್ಕೇ ದೇವಾನ್ ಪಿತೄನ್ ಕೃಷ್ಣೇ ತರ್ಪಯತ್ಯಮೃತೇನ ಯಃ |
ಯಶ್ಚ ರಾಜಾ ದ್ವಿಜಾತೀನಾಂ ತಸ್ಮೈ ಸೋಮಾತ್ಮನೇ ನಮಃ || ೩೯ ||
ಮಹತಸ್ತಮಸಃ ಪಾರೇ ಪುರುಷಂ ಹ್ಯತಿತೇಜಸಮ್ |
ಯಂ ಜ್ಞಾತ್ವಾ ಮೃತ್ಯುಮತ್ಯೇತಿ ತಸ್ಮೈ ಜ್ಞೇಯಾತ್ಮನೇ ನಮಃ
|| ೪೦ ||"

ಈ ಶ್ಲೋಕದಲ್ಲಿ -

"ವೇದಾಹಮೇತಂ ಪುರುಷಂ ಮಹಾನ್ತಮಾದಿತ್ಯವರ್ಣಂ ತಮಸಃ ಪರಸ್ತಾತ್ |
ತಮೇವ ವಿದಿತ್ವಾಽತಿಮೃತ್ಯುಮೇತಿ ನಾನ್ಯಃ ಪನ್ಥಾ ವಿದ್ಯತೇಽಯನಾಯ ||"

ಈ ಮಂತ್ರದ ಅನುವಾದವೇ ಇದೆ.
"ಯಂ ಬೃಹನ್ತಂ ಬೃಹತ್ಯುಕ್ಥೇ ಯಮಗ್ನೌ ಯಂ ಮಹಾಧ್ವರೇ |ಯಂ ವಿಪ್ರಸಙ್ಘಾಃ ಗಾಯನ್ತಿ ತಸ್ಮೈ ವೇದಾತ್ಮನೇ ನಮಃ || ೪೧ ||
ಋಗ್ಯಜುಃ ಸಾಮಧಾಮಾನಂ ದಶಾರ್ದ್ಧಹವಿರಾತ್ಮಕಮ್ |
ಯಂ ಸಪ್ತತನ್ತುಂ ತನ್ವನ್ತಿ ತಸ್ಮೈ ಯಜ್ಞಾತ್ಮನೇ ನಮಃ || ೪೨ ||
ಚತುರ್ಭಿಶ್ಚ ಚತುರ್ಭಿಶ್ಚ ದ್ವಾಭ್ಯಾಂ ಪಞ್ಚಭಿರೇವ ಚ |
ಹೂಯತೇ ಚ ಪುನರ್ದ್ವಾಭ್ಯಾಂ ತಸ್ಮೈ ಹೋಮಾತ್ಮನೇ ನಮಃ || ೪೩ ||
ಯಃ ಸುಪರ್ಣೋ ಯಜುರ್ನಾಮ ಛನ್ದೋಗಾತ್ರಿಸ್ರವೃಚ್ಛಿರಾಃ |
ರಥನ್ತರಂ ಬೃಹತ್ ಸಾಮ ತಸ್ಮೈ ಸ್ತೋತ್ರಾತ್ಮನೇ ನಮಃ || ೪೪ ||
ಯಃ ಸಹಸ್ರಸಮೇ ಸತ್ರೇ ಜಜ್ಞೇ ವಿಶ್ವಸೃಜಾಮೃಷಿಃ |
ಹಿರಣ್ಯಪಕ್ಷಃ ಶಕುನಿಸ್ತಸ್ಮೈ ಹಂಸಾತ್ಮನೇ ನಮಃ
|| ೪೫ ||"

ಅಂದರೆ - ಬ್ರಹ್ಮನ ಸಾವಿರಾರು ಸಂವತ್ಸರ-ಪರ್ಯಂತ ಸೃಷ್ಟಿ ಯಜ್ಞದಲ್ಲಿ ಯಾವ ಹಿರಣ್ಯದ ಪಕ್ಷದ್ದಾದ ಸುಪರ್ಣವು ಉತ್ಪನ್ನವಾಯಿತೋ, ಆ ಹಂಸಸ್ವರೂಪಕ್ಕೆ ಪ್ರಣಾಮ ಎಂದಿದೆ.

ಈ ಹಂಸವು ಆತ್ಮಾ ಅಥವಾ ಪ್ರಾಣವಾಗಿದೆ. ಇದೇ ಸುಪರ್ಣದ ವರ್ಣನೆ ಅನೇಕ ರೀತಿಯಲ್ಲಿ ವೇದ ಮಂತ್ರಗಳಲ್ಲಿ ಬಂದಿದೆ. ಅಗ್ನಿಯೂ ಇದೇ ಸುಪರ್ಣದ ಹೆಸರಾಗಿದೆ. ಮೇಲ್ತಿಳಿಸಿದ ಮೈತ್ರೀ ಉಪನಿಷದ್ ಹಾಗೂ ನಿರುಕ್ತದ ಉದಾಹರಣೆಯ ಅನುಸಾರ ಆತ್ಮವೇ ಅಗ್ನಿ ಸುಪರ್ಣ ಹಂಸ ಪ್ರಾಣಾದಿ ಹೆಸರುಳ್ಳದ್ದಾಗಿದೆ. ತ್ರಿಗುಣಗಳಿಂದ ಪರಿವೇಷ್ಟಿತ ಈ ಶರೀರದಲ್ಲಿ ವ್ಯಾಪ್ತ ಆತ್ಮಕ್ಕೆ ಮಹಾನ್ ಆತ್ಮದೊಂದಿಗೆ ದಿವ್ಯ ಸಂಬಂಧವನ್ನು ತೋರಿಸುವುದಕ್ಕಾಗಿ ಚಿತ್ಯಾಗ್ನಿಯ ಅಭಿಷೇಕದ ನಂತರ ಅಗ್ನಿ ಯೋಜನಾ ಕ್ರಿಯೆಯ ವಿಧಾನವಿದೆ. ಶುಕ್ಲ ಯಜುರ್ವೇದದ ಆ ಪ್ರಕರಣದಲ್ಲಿ (ಅಧ್ಯಾಯ ೧೮, ಮಂತ್ರ ೫೧-೫೩) ಹಿರಣ್ಯಪಕ್ಷ ಶಕುನಿಯ ಬಹಳ ಮನೋಹರವಾದ ರೂಪಕವಿದೆ. ಆತ್ಮವು ಒಂದು ಪಕ್ಷಿ. ಜನ್ಮ ಮತ್ತು ಮೃತ್ಯು, ಅಮೃತ ಹಾಗೂ ಮೃತ, ವ್ಯಕ್ತ ಹಾಗೂ ಅವ್ಯಕ್ತ ತ್ರಿಪಾದ ಹಾಗೂ ಏಕಪಾದ, ಇವು ಅದರ ಎರಡು ಪಕ್ಷಗಳು (ರೆಕ್ಕೆಗಳು). ಶಕುನಿ ಎಂದರೆ ಪ್ರಾಣ ಪಡೆದಾಗ ಪ್ರಾಣ ಹಾಗೂ ಅಪಾನ ರೂಪೀ ಎರಡು ರೆಕ್ಕೆಗಳಾಗುತ್ತವೆ. ಸೂರ್ಯ ವಾಚೀ ಸುಪರ್ಣದ ಉದಯ ಹಾಗೂ ಅಸ್ತ ಎರಡೂ ರೆಕ್ಕೆಗಳೆಂದಿದೆ. ’ಜೈಮಿನೀಯ ಉಪನಿಷದ್’ ಬ್ರಾಹ್ಮಣದಲ್ಲಿ ಸ್ಪಷ್ಟವಾಗಿ ’ಪ್ರಾಣೋ ವೈ ಸುಪರ್ಣಃ’ ಹಾಗೂ ’ಪ್ರಾಣೋ ವೈ ಪತಂಗಃ’ (೩|೩೫|೨) ಎಂಬ ಪರಿಭಾಷೆಗಳಿವೆ. ಈ ರೀತಿ ಆತ್ಮಕ್ಕೆ ಸುಪರ್ಣ ಸಂಜ್ಞೆಯು ಬಹಳ ಪ್ರಾಚೀನವಾದದ್ದು ಹಾಗೂ ವೈಧಿಕ ಪರಿಭಾಷೆಯಲ್ಲಿ ಬಹಳ ವ್ಯಾಪಕವಾಗಿತ್ತು. ಉತ್ತರವರ್ತೀ ಸಾಹಿತ್ಯದಲ್ಲಿ ಆತ್ಮವನ್ನು ಹಂಸ ಎನ್ನಲಾಗಿದೆ. ಹಾಗಾಗಿ ಮೇಲೆ ಯಾವ ಹಂಸ ಅಥವಾ ಸುಪರ್ಣಕ್ಕೆ ನಮಸ್ಕರಿಸಲಾಗಿದೆಯೋ, ಅದಕ್ಕಾಗಿಯೇ ಶುಕ್ಲ ಯಜುರ್ವೇದ (೧೮|೫೩)ರಲ್ಲಿ ಹೇಳಿದೆ -

"ಇನ್ದುರ್ದಕ್ಷಃ ಶ್ಯೇನ ಋತಾವಾ ಹಿರಣ್ಯಪಕ್ಷಃ ಶಕುನೋ ಭುರಣ್ಯುಃ |
ಮಹಾನ್ಸಧಸ್ಯೇ ಧ್ರುವ ಆ ನಿಷತ್ತೋ ನಮಸ್ತೇ ಅಸ್ತು ಮಾ ಮಾ ಹಿಗ್ಂಸೀ ||"

ಅಂದರೆ - ಯಾರ ಸಂಜ್ಞೆಯು ಸೋಮ (ಇಂದು) ಅಥವಾ ದಕ್ಷ (ಪ್ರಾಣ) ಆಗಿದೆಯೋ, ಯಾರು ಋತದೊಂದಿಗೆ ಸತತ ಯುಕ್ತವಾಗಿರುತ್ತಾರೋ, ಸತ್ವ ಗುಣವು ಯಾರ ಪಕ್ಷವೋ (ರೆಕ್ಕೆಯೋ), ಇಂತಹಾ ಅತ್ಯಂತ ಬಲಶಾಲೀ ಒಂದು ಸುಪರ್ಣವಿದೆ; ಅದು ಈ ಶರೀರರೂಪೀ ಅಧಿಷ್ಠಾನದಲ್ಲಿ ಧ್ರುವವಾಗಿ ಕುಳಿತಿದೆ, ಇಂತಹಾ ನಿನಗೆ ನಮಸ್ಕಾರವು, ನಿನ್ನಿಂದ ನಮಗೆ ಹಿಂಸೆಯಾಗದಿರಲಿ. ನಾವು ಸದಾ ಋತದೊಂದಿಗೆ ಅನುಕೂಲವಾಗಿದ್ದುಕೊಂಡು ವರುಣನ ಪಾಶಗಳಿಗೆ ಎಂದೂ ಸಿಲುಕದಿರುವಂತಾಗಲಿ.

ವೇದಾತ್ಮಾ, ಯಜ್ಞಾತ್ಮಾ, ಹೋಮಾತ್ಮಾ, ಸ್ತೋತ್ರಾತ್ಮಾ ಇತ್ಯಾದಿ ಪುರುಷದ ಸ್ವರೂಪಗಳಿಗೂ ವೇದದ ವರ್ಣನೆಗಳೊಂದಿಗೆ ಘನಿಷ್ಠ ಸಂಬಂಧವಿದೆ. ಆದರೆ ಇಲ್ಲಿ ಮೂಲಮಾತ್ರವನ್ನು ನಿರ್ದೇಶಿಸಲಾಗಿದೆ.

ಇದರ ನಂತರ ಆ ನಿತ್ಯ ಪುರುಷದ ಅನ್ಯ ಅನೇಕ ರೂಪಗಳ ವರ್ಣನೆ ಇದೆ. ಅದರಲ್ಲಿ ಕೆಲವೊಂದು ಇಂತಿದೆ -

"ಪಾದಾಙ್ಗಂ ಸನ್ಧಿಪರ್ವಾಣಂ ಸ್ವರವ್ಯಞ್ಜನಭೂಷಣಮ್ |
ಯಮಾಹುರಕ್ಷರಂ ದಿವ್ಯಂ ತಸ್ಮೈ ವಾಗಾತ್ಮನೇ ನಮಃ || ೪೬ ||

ಶ್ಲೋಕಪಾದಗಳ ಸಮೂಹಗಳೇ ಅವಯವಗಳಾಗಿರುವ, ಪದಗಳ ಸಂಧಿಗಳೇ ಗಿಣ್ಣುಗಳಾಗಿರುವ, ಸ್ವರಾಕ್ಷರ-ವ್ಯಂಜನಗಳೇ ಅಲಂಕಾರಪ್ರಾಯವಾಗಿರುವ ದಿವ್ಯಾಕ್ಷರ ಎಂಬ ಹೆಸರಿನಿಂದ ಕರೆಯಲ್ಪಡುವ ವಾಗಾತ್ಮನಿಗೆ ನಮಸ್ಕರಿಸುತ್ತೇನೆ.

ಯಜ್ಞಾಙ್ಗೋ ಯೋ ವರಾಹೋ ವೈ ಭೂತ್ವಾ ಗಾಮುಜ್ಜಹಾರ ಹ |
ಲೋಕತ್ರಯಹಿತಾರ್ಥಾಯ ತಸ್ಮೈ ವೀರ್ಯಾತ್ಮನೇ ನಮಃ || ೪೭ ||

ಯಾರು ಮೂರುಲೋಕಗಳ ಹಿತಾರ್ಥವಾಗಿ ಯಜ್ಞಮಯ ತಾತ್ವಿಕ ವರಾಹರೂಪವನ್ನು ಧರಿಸಿ ಪೃಥ್ವಿಯನ್ನು ರಸಾತಲದಿಂದ ಮೇಲಕ್ಕೆತ್ತಿದನೋ ಆ ವೀರ್ಯಾತ್ಮನಿಗೆ ನಮಸ್ಕರಿಸುತ್ತೇನೆ. 

ಯಃ ಶೇತೇ ಯೋಗಮಾಸ್ಥಾಯ ಪರ್ಯಙ್ಕೇ ನಾಗಭೂಷಿತೇ |
ಫಣಾಸಹಸ್ರರಚಿತೇ ತಸಮಿ ನಿದ್ರಾತ್ಮನೇ ನಮಃ || ೪೮ ||

ಯಾರು ಯೋಗಮಾಯೆಯನ್ನಾಶ್ರಯಿಸಿ ಶೇಷನಾಗನ ಸಾವಿರ ಹೆಡೆಗಳಿಂದ ರಚಿತವಾದ ದಿವ್ಯಮಂಚದ ಮೇಲೆ ಪವಡಿಸಿರುವನೋ ಆ ನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ.

ಯಸ್ತನೋತಿ ಸತಾಂ ಸೇತುಮೃತೇನಾಮೃತಯೋನಿನಾ |
ಧರ್ಮಾರ್ಥವ್ಯವಹಾರಾಙ್ಗೈಸ್ತಸ್ಮೈ ಸತ್ಯಾತ್ಮನೇ ನಮಃ || ೪೯ ||

ಧರ್ಮಾರ್ಥವ್ಯವಹಾರಗಳೆಂಬ ಅಂಗಗಳಿಂದಲೂ, ಅಮೃತಯೋನಿ ಸತ್ಯದಿಂದಲೂ ಸತ್ಪುರುಷರು ಅಮರತ್ವವನ್ನು ಹೊಂದಲು ಸೇತುವೆಯನ್ನು ಕಲ್ಪಿಸಿಕೊಡುವ ಸತ್ಯಾತ್ಮನಿಗೆ ನಮಸ್ಕರಿಸುತ್ತೇನೆ.

ಯಂ ಪೃಥಗ್ಧರ್ಮಚರಣಾ ಪೃಥಗ್ಧರ್ಮಫಲೈಷಿಣಃ |
ಪೃಥಗ್ಧರ್ಮೈಃ ಸಮರ್ಚನ್ತಿ ತಸ್ಮೈ ಧರ್ಮಾತ್ಮನೇ ನಮಃ || ೫೦ ||

ಪ್ರತ್ಯೇಕ ಧರ್ಮಾಚರಣೆಗಳುಳ್ಳವರು, ಪ್ರತ್ಯೇಕ ಧರ್ಮಗಳ ಫಲವನ್ನು ಅಪೇಕ್ಷಿಸುವವರು ಯಾರನ್ನು ಪ್ರತ್ಯೇಕ ಧರ್ಮಗಳಿಂದ ಅರ್ಚಿಸುತ್ತಾರೋ ಆ ಧರ್ಮಾತ್ಮನಿಗೆ ನಮಸ್ಕರಿಸುತ್ತೇನೆ.

ಯತಃ ಸರ್ವೇ ಪ್ರಸೂಯನ್ತೇ ಹ್ಯನಙ್ಗಾತ್ಮಾಙ್ಗದೇಹಿನಃ |
ಉನ್ಮಾದಃ ಸರ್ವಭೂತಾನಾಂ ತಸ್ಮೈ ಕಾಮಾತ್ಮನೇ ನಮಃ || ೫೧ ||

ಯಾವ ಅನಂಗದೇಹಿಯಿಂದ ಎಲ್ಲರೂ ಸಂತಾನವನ್ನು ಪಡೆಯುತ್ತಾರೋ ಆ ಸರ್ವಪ್ರಾಣಿಗಳನ್ನೂ ಉನ್ಮತ್ತರನ್ನಾಗಿಸುವ ಕಾಮಾತ್ಮನಿಗೆ ನಮಸ್ಕರಿಸುತ್ತೇನೆ.

ಯಞ್ಚ ವ್ಯಕ್ತಸ್ಥಮವ್ಯಕ್ತಂ ವಿಚಿನ್ವನ್ತಿ ಮಹರ್ಷಯಃ |
ಕ್ಷೇತ್ರೇ ಕ್ಷೇತ್ರಜ್ಞಮಾಸೀನಂ ತಸ್ಮೈ ಕ್ಷೇತ್ರಾತ್ಮನೇ ನಮಃ || ೫೨ ||

ವ್ಯಕ್ತವಾದವುಗಳಲ್ಲಿ ಅವ್ಯಕ್ತನಾಗಿರುವ ಅಥವಾ ಬುದ್ಧಿಯಲ್ಲಿರುವ ಯಾವ ಕ್ಷೇತ್ರಜ್ಞನನ್ನು ಮಹರ್ಷಿಗಳು ಹುಡುಕುತ್ತಾರೆಯೋ ಆ ಕ್ಷೇತ್ರಾತ್ಮನಿಗೆ ನಮಸ್ಕರಿಸುತ್ತೇನೆ.

ಯಂ ತ್ರಿಧಾತ್ಮಾನಮಾತ್ಮಸ್ಥಂ ವೃತಂ ಷೋಡಶಭಿರ್ಗುಣೈಃ |
ಪ್ರಾಹುಃ ಸಪ್ತದಶಂ ಸಾಂಖ್ಯಾಸ್ತಸ್ಮೈ ಸಾಂಖ್ಯಾತ್ಮನೇ ನಮಃ || ೫೩ ||

ಹದಿನಾರು ಗುಣಗಳಿಂದ* ಆವೃತನಾಗಿರುವ ಹದಿನೇಳನೆಯದಾಗಿ ಆತ್ಮಾ ಎಂದು ಸಾಂಖ್ಯರು ಕರೆಯುವ ಆ ಆತ್ಮಸ್ಥ ಸಾಂಖ್ಯಾತ್ಮನಿಗೆ ನಮಸ್ಕರಿಸುತ್ತೇನೆ.

* ಹನ್ನೊಂದು ಇಂದ್ರಿಯಗಳು (ಐದು ಜ್ಞಾನೇಂದ್ರಿಯಗಳು (ಶ್ರೋತ್ರ, ತ್ವಕ್ಕು, ಜಕ್ಷುಸು, ಜಿಹ್ವಾ, ಮತ್ತು ನಾಸಿಕ); ಐದು ಕರ್ಮೇಂದ್ರಿಯಗಳು (ವಾಕ್ಕು, ಪಾಣಿ, ಪಾದ, ಪಾಯು ಮತ್ತು ಉಪಸ್ಥ); ಮತ್ತು ಮನಸ್ಸು) ಮತ್ತು ಪಂಚಭೂತಗಳು (ಪೃಥ್ವೀ, ಆಪ್, ತೇಜಸ್ಸು, ವಾಯು, ಆಕಾಶ) – ಒಟ್ಟು ಹದಿನಾರು.

ಯಂ ವಿನಿದ್ರಾ ಜಿತಶ್ವಾಸಾಃ ಸತ್ತ್ವಸ್ಥಾಃ ಸಂಯತೇನಿದ್ರಯಾಃ |
ಜ್ಯೋತಿಃ ಪಶ್ಯನ್ತಿ ಯುಞ್ಜಾನಾಸ್ತಸ್ಮೈ ಯೋಗಾತ್ಮನೇ ನಮಃ || ೫೪ ||

ನಿದ್ರೆಯಿಲ್ಲದೇ ಶ್ವಾಸಗಳನ್ನು ನಿಯಂತ್ರಿಸಿ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸತ್ತ್ವದಲ್ಲಿಯೇ ನೆಲೆಸಿಕೊಂಡು ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿದ ಯೋಗಿಗಳು ಯಾವ ಜ್ಯೋತಿಯನ್ನು ಕಾಣುತ್ತಾರೋ ಆ ಯೋಗಾತ್ಮನಿಗೆ ನಮಸ್ಕರಿಸುತ್ತೇನೆ.

ಅಪುಣ್ಯಪುಣ್ಯೋಪರಮೇ ಯಂ ಪುನರ್ಭವನಿರ್ಭಯಾಃ |
ಶಾನ್ತಾಃ ಸಂನ್ಯಾಸಿನೋ ಯಾನ್ತಿ ತಸ್ಮೈ ಮೋಕ್ಷಾತ್ಮನೇ ನಮಃ || ೫೫ ||

ಪುಣ್ಯ-ಪಾಪಗಳು ಕ್ಷಯಹೊಂದಿದ ನಂತರ ಪುನಃ ಹುಟ್ಟು-ಸಾವುಗಳ ಭಯವಿಲ್ಲದ ಶಾಂತ ಸಂನ್ಯಾಸಿಗಳು ಯಾರನ್ನು ಸೇರುತ್ತಾರೆಯೋ ಆ ಮೋಕ್ಷಾತ್ಮನಿಗೆ ನಮಸ್ಕರಿಸುತ್ತೇನೆ.

ಯೋಽಸೌ ಯುಗಸಹಸ್ರಾನ್ತೇ ಪ್ರದೀಪ್ತಾರ್ಚಿರ್ವಿಭಾವಸುಃ |
ಸಂಭಕ್ಷಯತಿ ಭೂತಾನಿ ತಸ್ಮೈ ಘೋರಾತ್ಮನೇ ನಮಃ || ೫೬ ||

ಸಹಸ್ರಯುಗಗಳ ಅಂತ್ಯದಲ್ಲಿ ಧಗಧಗಿಸುವ ಜ್ವಾಲೆಗಳೊಂದಿಗೆ ಪ್ರಳಯಾಗ್ನಿಯ ರೂಪವನ್ನು ಹೊಂದಿ ಎಲ್ಲವನ್ನೂ ಭಕ್ಷಿಸುವ ಘೋರಾತ್ಮನಿಗೆ ನಮಸ್ಕರಿಸುತ್ತೇನೆ.

ಸಂಭಕ್ಷಯತಿ ಸರ್ವಭೂತಾನಿ ಕೃತ್ತ್ವಾ ಚೈಕಾರ್ಣವಂ ಜಗತ್ |
ಬಾಲಃ ಸ್ವಪಿತಿ ಯಶ್ಚೈಕಸ್ತಸ್ಮೈ ಮಾಯಾತ್ಮನೇ ನಮಃ || ೫೭ ||

ಇರುವ ಎಲ್ಲವನ್ನೂ ಭಕ್ಷಿಸಿ ಜಗತ್ತನ್ನು ಜಲಮಯವನ್ನಾಗಿಸಿ ಅದರ ಮೇಲೆ ಬಾಲಕನಾಗಿ ಮಲಗುವ ಆ ಮಾಯಾತ್ಮನಿಗೆ ನಮಸ್ಕರಿಸುತ್ತೇನೆ.

ಅಜಸ್ರ ನಾಭೌ ಸಮ್ಭೃತಂ ಯಸ್ಮಿನ್ ವಿಶ್ವಂ ಪ್ರತಿಷ್ಠಿತಮ್ |
ಪುಷ್ಕರೇ ಪುಷ್ಕರಾಕ್ಷಸ್ಯ ತಸ್ಮೈ ಪದ್ಮಾತ್ಮನೇ ನಮಃ || ೫೮ ||

ಹುಟ್ಟೇ ಇಲ್ಲದ ಮತ್ತು ಇಲ್ಲದಿರುವಂತಾಗದ ಯಾರ ಮೇಲೆ ಈ ವಿಶ್ವವು ಪ್ರತಿಷ್ಠಿತವಾಗಿದೆಯೋ ಆ ಪುಷ್ಕರ ಪುಷ್ಕರಾಕ್ಷ ಪದ್ಮಾತ್ಮನಿಗೆ ನಮಸ್ಕರಿಸುತ್ತೇನೆ.

ಸಹಸ್ರಶಿರಸೇ ಚೈವ ಪುರುಷಾಯಾಮಿತಾತ್ಮನೇ |
ಚತುಃಸಮುದ್ರಪರ್ಯಾಯಯೋಗನಿದ್ರಾತ್ಮನೇ ನಮಃ || ೫೯ ||

ನಾಲ್ಕು ಸಮುದ್ರಗಳನ್ನೂ ಒಂದುಗೂಡಿಸಿ ಹಾಸಿಗೆಯನ್ನಾಗಿಸಿಕೊಂಡು ಅದರ ಮೇಲೆ ಮಲಗುವ ಆ ಸಹಸ್ರಶಿರಸ್, ಪುರುಷ, ಅಮಿತಾತ್ಮ, ಯೋಗನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ.

ಯಸ್ಯ ಕೇಶೇಷು ಜೀಮೂತಾ ನದ್ಯಃ ಸರ್ವಾಙ್ಗಸನ್ಧಿಷು |
ಕುಕ್ಷೌ ಸಮುದ್ರಾಶ್ಚತ್ವಾರಸ್ತಸ್ಮೈ ತೋಯಾತ್ಮನೇ ನಮಃ || ೬೦ ||

ಯಾರ ಕೇಶರಾಶಿಗಳಲ್ಲಿ ಮೇಘಗಳಿವೆಯೋ, ಯಾರ ಸರ್ವಾಂಗಸಂಧಿಗಳಲ್ಲಿ ನದಿಗಳಿವೆಯೋ, ಮತ್ತು ಯಾರ ಹೊಟ್ಟೆಯಲ್ಲಿ ನಾಲ್ಕೂ ಸಮುದ್ರಗಳಿವೆಯೋ ಆ ತೋಯಾತ್ಮನಿಗೆ ನಮಸ್ಕರಿಸುತ್ತೇನೆ.

ಯಸ್ಮಾತ್ಸರ್ವೇ ಪ್ರಸೂಯನ್ತೇ ಸರ್ಗಪ್ರಲಯವಿಕ್ರಿಯಾಃ
ಯಸ್ಮಿಂಶ್ಚೈವ ಪ್ರಲೀಯನ್ತೇ ತಸ್ಮೈ ಹೇತ್ವಾತ್ಮನೇ ನಮಃ || ೬೧ ||

ಸೃಷ್ಟಿ-ಪ್ರಳಯ ರೂಪದ ಸಮಸ್ತ ವಿಕಾರಗಳೂ ಯಾರಿಂದ ಹುಟ್ಟುತ್ತವೆಯೋ, ಮತ್ತು ಅಂತ್ಯದಲ್ಲಿ ಯಾರಲ್ಲಿ ಲೀನಗೊಳ್ಳುತ್ತವೆಯೋ ಆ ಹೇತ್ವಾತ್ಮ(ಎಲ್ಲಕ್ಕೂ ಕಾರಣನಾದವ) ನಿಗೆ ನಮಸ್ಕರಿಸುತ್ತೇನೆ.

ಯೋ ನಿಷಣ್ಣೋಽಭವದ್ರಾತ್ರೌ ದಿವಾ ಭವತಿ ವಿಷ್ಠಿತಃ
ಇಷ್ಟಾನಿಷ್ಟಸ್ಯ ಚ ದ್ರಷ್ಟಾ ತಸ್ಮೈ ದ್ರಷ್ಟಾತ್ಮನೇ ನಮಃ || ೬೨ || 

ಯಾರು ರಾತ್ರಿಯಲ್ಲಿ ಪ್ರಾಣಿಗಳೆಲ್ಲವೂ ಮಲಗಿ ನಿದ್ರಿಸುತ್ತಿರುವಾಗ ಎಲ್ಲರ ಹೃದಯಗಳಲ್ಲಿಯೂ ಇರುವ ತಾನು ಮಾತ್ರ ಜಾಗ್ರತನಾಗಿಯೇ ಇರುವನೋ, ಯಾರು ಹಗಲಿನಲ್ಲಿ ಪ್ರಾಣಿಗಳ ಕರ್ಮಗಳಿಗೆ ಸಾಕ್ಷಿಯಾಗಿರುವನೋ ಮತ್ತು ಯಾರು ಸದಾಕಾಲ ಪ್ರಾಣಿಗಳ ಇಷ್ಟಾನಿಷ್ಟಗಳನ್ನು ಗಮನಿಸುತ್ತಿರುವನೋ ಆ ದ್ರಷ್ಟಾತ್ಮನಿಗೆ ನಮಸ್ಕರಿಸುತ್ತೇನೆ. 

ಅಕುಣ್ಠಂ ಸರ್ವಕಾರ್ಯೇಷು ಧರ್ಮಕಾರ್ಯಾರ್ಥಮುದ್ಯತಮ್
ವೈಕುಣ್ಠಸ್ಯ ಚ ತದ್ರೂಪಸ್ತಸ್ಮೈ ಕಾರ್ಯಾತ್ಮನೇ ನಮಃ || ೬೩ || 

ಅಡಗಡೆಗಳಿಲ್ಲದೇ ಸರ್ವಕಾರ್ಯಗಳನ್ನು ಮಾಡುವ, ಧರ್ಮಾರ್ಥಕಾರ್ಯಗಳಲ್ಲಿಯೇ ತೊಡಗಿರುವ, ಮತ್ತು ವೈಕುಂಠರೂಪನಾಗಿರುವ ಕಾರ್ಯಾತ್ಮನಿಗೆ ನಮಸ್ಕರಿಸುತ್ತೇನೆ. 

ತ್ರಿಃ ಸಪ್ತಕೃತ್ವೋ ಯಃ ಕ್ಷತ್ರಂ ಧರ್ಮವ್ಯುತ್ಕ್ರಾಂತಗೌರವಮ್ |
ಕ್ರುದ್ಧೋ ನಿಜಘ್ನೇ ಸಮರೇ ತಸ್ಮೈ ಕ್ರೌ(ಶೌ)ರ್ಯಾತ್ಮನೇ ನಮಃ || ೬೪ || 

ಕ್ರುದ್ಧನಾಗಿ ಯಾರು ಧರ್ಮಗೌರವವನ್ನು ಉಲ್ಲಂಘಿಸಿದ ಕ್ಷತ್ರಿಯ ಸಮೂಹವನ್ನು ಇಪ್ಪತ್ತೊಂದು ಬಾರಿ ಸಂಹರಿಸಿದನೋ ಆ ಕ್ರೌ(ಶೌ)ರ್ಯಾತ್ಮನಿಗೆ ನಮಸ್ಕರಿಸುತ್ತೇನೆ. 

ವಿಭಜ್ಯ ಪಞ್ಚಧಾತ್ಮನಂ ವಾಯುರ್ಭೂತ್ವಾ ಶರೀರಗಃ |
ಯಶ್ಚೇಷ್ಟಯತಿ ಭೂತಾನಿ ತಸ್ಮೈ ವಾಯ್ವಾತ್ಮನೇ ನಮಃ || ೬೫ || 

ಯಾರ ವಾಯುಸ್ವರೂಪವನ್ನ ತಾಳಿ ಎಲ್ಲ ಪ್ರಾಣಿಗಳ ಶರೀರಗಳನ್ನೂ ಪ್ರವೇಶಿಸಿ ತನ್ನನ್ನು ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನಗಳೆಂದು ಐದು ಪ್ರಕಾರವಾಗಿ ವಿಭಾಗಿಸಿಕೊಂಡು ಕ್ರಿಯಾಶೀಲರನ್ನಾಗಿ ಮಾಡುತ್ತಾನೋ ಆ ವಾಯ್ವಾತ್ಮನಿಗೆ ನಮಸ್ಕರಿಸುತ್ತೇನೆ.

ಯುಗೇಷ್ವಾವರ್ತತೇ ಯೋಗೈರ್ಮಾಸರ್ತ್ವಯನಹಾಯನೈಃ |
ಸರ್ಗಪ್ರಲಯಯೋಃ ಕರ್ತಾ ತಸ್ಮೈ ಕಾಲಾತ್ಮನೇ ನಮಃ || ೬೬ ||

ಯಾರು ಯುಗಯುಗದಲ್ಲಿಯೂ ಯೋಗಮಾಯೆಯಿಂದ ಅವತರಿಸುವನೋ, ಮಾಸ-ಋತು-ಆಯನ-ಸಂವತ್ಸರಗಳು ಉರುಳಿದಂತೆ ಸೃಷ್ಟಿ-ಲಯಗಳನ್ನ ನಡೆಸುತ್ತಾನೋ ಆ ಕಾಲಾತ್ಮನಿಗೆ ನಮಸ್ಕರಿಸುತ್ತೇನೆ.

ಬ್ರಹ್ಮ ವಕ್ತ್ರಂ ಭುಜೌ ಕ್ಷತ್ರಂ ಕೃತ್ಸ್ನಮೂರೂದರಂ ವಿಶಃ |
ಪಾದೌ ಯಸ್ಯಾಶ್ರಿತಾಃ ಶೂದ್ರಾಸ್ತಸ್ಮೈ ವರ್ಣಾತ್ಮನೇ ನಮಃ || ೬೭ ||

ಯಾರಿಗೆ ಬ್ರಾಹ್ಮಣನೇ ಮುಖನಾಗಿರುವನೋ, ಸಮಸ್ತ ಕ್ಷತ್ರಿಯರೂ ಭುಜಗಳಾಗಿರುವರೋ, ವೈಶ್ಯರು ಹೊಟ್ಟೆ-ತೊಡೆಗಳಾಗಿರುವರೋ ಮತ್ತು ಯಾರ ಪಾದಗಳಲ್ಲಿ ಶೂದ್ರರು ಆಶ್ರಿತರಾಗಿರುವರೋ ಆ ವರ್ಣಾತ್ಮನಿಗೆ ನಮಸ್ಕರಿಸುತ್ತೇನೆ.

ಯಸ್ಯಾಗ್ನಿರಾಸ್ಯಂ ದ್ಯೌರ್ಮೂರ್ಧಾ ಖಂ ನಾಭಿಶ್ಚರಣೌ ಕ್ಷಿತಿಃ |
ಸೂರ್ಯಶ್ಚಕ್ಷುರ್ದಿಶಃ ಶ್ರೋತ್ರೇ ತಸ್ಮೈ ಲೋಕಾತ್ಮನೇ ನಮಃ || ೬೮ ||

ಯಾರಿಗೆ ಅಗ್ನಿಯು ಮುಖನಾಗಿರುವನೋ, ಸ್ವರ್ಗವು ತಲೆಯಾಗಿರುವುದೋ, ಆಕಾಶವು ನಾಭಿಯಾಗಿರುವುದೋ, ಭೂಮಿಯು ಪಾದಗಳಾಗಿರುವುದೋ, ಸೂರ್ಯನೇ ಕಣ್ಣಾಗಿರುವನೋ, ಮತ್ತು ದಿಕ್ಕುಗಳೇ ಕಿವಿಗಳಾಗಿರುವವೋ ಆ ಲೋಕಾತ್ಮನಿಗೆ ನಮಸ್ಕರಿಸುತ್ತೇನೆ. 

ಪರಃ ಕಾಲಾತ್ ಪರೋ ಯಜ್ಞಾತ್ ಪರಾತ್ ಪರತರಶ್ಚ ಯಃ |
ಅನಾದಿರಾದಿರ್ವಿಶ್ವಸ್ಯ ತಸ್ಮೈ ವಿಶ್ವಾತ್ಮನೇ ನಮಃ || ೬೯ ||

ಯಾರು ಕಾಲಾತೀತನಾಗಿ, ಯಜ್ಞಾತೀತನಾಗಿ, ಪರಕ್ಕಿಂತಲೂ ಅತ್ಯಂತ ಶ್ರೇಷ್ಠನಾಗಿ, ಆದ್ಯಂತರಹಿತನಾಗಿ, ವಿಶ್ವಕ್ಕೇ ಆದಿಭೂತನಾಗಿರುವನೋ ಆ ವಿಶ್ವಾತ್ಮನಿಗೆ ನಮಸ್ಕರಿಸುತ್ತೇನೆ.

ವಿಷಯೇ ವರ್ತಮಾನಾನಾಂ ಯನ್ತಂ ವೈಶೇಷಿಕೈರ್ಗುಣೈಃ |
ಪ್ರಾಹುರ್ವಿಷಯಗೋಪ್ತಾರಂ ತಸ್ಮೈ ಗೋಪಾತ್ಮನೇ ನಮಃ || ೭೦ ||

ವೈಶೇಷಿಕ ಗುಣಗಳಿಂದ ಆಕರ್ಷಿತರಾಗಿ ವಿಷಯಸುಖಗಳಲ್ಲಿಯೇ ಇರುವವರನ್ನು ವಿಷಯಗಳಿಂದ ರಕ್ಷಿಸುವವನೆಂದು ಯಾರನ್ನು ಕರೆಯುತ್ತಾರೋ ಆ ಗೋಪಾತ್ಮನಿಗೆ ನಮಸ್ಕರಿಸುತ್ತೇನೆ.

ಅನ್ನಪಾನೇನ್ಧನಮಯೋ ರಸಪ್ರಾಣವಿವರ್ಧನಃ |
ಯೋ ಧಾರಯತಿ ಭೂತಾನಿ ತಸ್ಮೈ ಪ್ರಾಣಾತ್ಮನೇ ನಮಃ || ೭೧ ||

ಅನ್ನ-ಪಾನಗಳೆಂಬ ಇಂಧನರೂಪನಾಗಿ ರಸ-ಪ್ರಾಣಗಳನ್ನು ವೃದ್ಧಿಪಡಿಸುತ್ತಾ ಯಾರು ಪ್ರಾಣಿಗಳನ್ನು ಧರಿಸಿರುವನೋ ಆ ಪ್ರಾಣಾತ್ಮನಿಗೆ ನಮಸ್ಕರಿಸುತ್ತೇನೆ.

ಪ್ರಾಣಾನಾಂ ಧಾರಣಾರ್ಥಾಯ ಯೋಽನ್ನಂ ಭುಙ್ಕ್ತೇ ಚತುರ್ವಿಧಮ್
ಅನ್ತರ್ಭೂತಃ ಪಚತ್ಯಗ್ನಿಸ್ತಸ್ಮೈ ಪಾಕಾತ್ಮನೇ ನಮಃ || ೭೨ || 

ಪ್ರಾಣಗಳನ್ನು ಧರಿಸಿರಲು ಚತುರ್ವಿಧ ಆಹಾರವನ್ನು ಸೇವಿಸುವ ಮತ್ತು ತಾನೇ ಪ್ರಾಣಿಗಳಲ್ಲಿ ಜಠರಾಗ್ನಿಯಾಗಿ ಆಹಾರವನ್ನು ಪಚನಮಾಡುವ ಆ ಪಾಕಾತ್ಮನಿಗೆ ನಮಸ್ಕರಿಸುತ್ತೇನೆ.

ಪಿಙ್ಗೇಕ್ಷಣಸಟಂ ಯಸ್ಯ ರೂಪಂ ದಂಷ್ಟ್ರಾನಖಾಯುಧಂ
ದಾನವೇನ್ದ್ರಾನ್ತಕರಣಂ ತಸ್ಮೈ ದೃಪ್ತಾತ್ಮನೇ ನಮಃ || ೭೩ || 

ಯಾರ ಕಣ್ಣು-ಕೇಸರಗಳು ಹಳದೀ ಬಣ್ಣದ್ದಾಗಿತ್ತೋ, ಯಾರ ಆಯುಧಗಳು ಕೋರೆದಾಡೆ-ಉಗುರುಗಳಾಗಿದ್ದವೋ ಮತ್ತು ಯಾರು ದಾನವೇಂದ್ರ ಹಿರಣ್ಯಕಶಿಪುವನ್ನು ಅಂತ್ಯಗೊಳಿಸಿದನೋ ಆ ದೃಪ್ತಾತ್ಮನಿಗೆ ನಮಸ್ಕರಿಸುತ್ತೇನೆ. 

ರಸಾತಲಗತಃ ಶ್ರೀಮಾನನನ್ತೋ ಭಗವಾನ್ ವಿಭುಃ
ಜಗದ್ಧಾರಯತೇ ಕೃತ್ಸಂ ತಸ್ಮೈ ವೀರ್ಯಾತ್ಮನೇ ನಮಃ || ೭೫ ||

ರಸಾತಲಕ್ಕೆ ಹೋಗಿ ಇಡೀ ಜಗತ್ತನ್ನೂ ಹೊತ್ತಿರುವ ಶ್ರೀಮಾನ್ ಅನಂತ, ಭಗವಾನ್, ವಿಭು ವೀರ್ಯಾತ್ಮನಿಗೆ ನಮಸ್ಕರಿಸುತ್ತೇನೆ.

ಯೋ ಮೋಹಯತಿ ಭೂತಾನಿ ಸ್ನೇಹಪಾಶಾನುಬನ್ಧನೈಃ |
ಸರ್ಗಸ್ಯ ರಕ್ಷಣಾರ್ಥಾಯ ತಸ್ಮೈ ಮೋಹಾತ್ಮನೇ ನಮಃ || ೭೬ ||

ಯಾರು ಸೃಷ್ಟಿಪರಂಪರೆಯ ರಕ್ಷಣಾರ್ಥವಾಗಿ ಎಲ್ಲ ಪ್ರಾಣಿಗಳನ್ನೂ ಸ್ನೇಹಪಾಶಗಳ ಬಂಧನಗಳಿಂದ ವಿಮೋಹಗೊಳಿಸುತ್ತಾನೆಯೋ ಆ ಮೋಹಾತ್ಮನಿಗೆ ನಮಸ್ಕರಿಸುತ್ತೇನೆ.

ಆತ್ಮ-ಜ್ಞಾನಮಿದಂ ಜ್ಞಾನಂ ಜ್ಞಾತ್ವಾ ಪಞ್ಚಸ್ವವಸ್ಥಿತಮ್ |
ಯಂ ಜ್ಞಾನೇನಾಭಿಗಚ್ಚನ್ತಿ ತಸ್ಮೈ ಜ್ಞಾನಾತ್ಮನೇ ನಮಃ || ೭೭ ||

ಈ ಆತ್ಮಜ್ಞಾನವು ಅನ್ನಮಯ-ಪ್ರಾಣಮಯ-ಮನೋಮಯ-ವಿಜ್ಞಾನಮಯ-ಆನಂದಮಯಗಳೆಂಬ ಐದು ಕೋಶಗಳಲ್ಲಿರುವುದೆನ್ನುವುದನ್ನು ತಿಳಿದು ಜ್ಞಾನಯೋಗದ ಮೂಲಕ ಯೋಗಿಗಳು ಯಾರನ್ನುಸಾಕ್ಷಾತ್ಕರಿಸಿಕೊಳ್ಳುವರೋ ಆ ಜ್ಞಾನಾತ್ಮನಿಗೆ ನಮಸ್ಕರಿಸುತ್ತೇನೆ.

ಅಪ್ರಮೇಯಶರೀರಾಯ ಸರ್ವತೋ ಬುದ್ಧಿಚಕ್ಷುಷೇ |
ಅನನ್ತಪರಿಮೇಯಾಯ ತಸ್ಮೈ ದಿವ್ಯಾತ್ಮನೇ ನಮಃ || ೭೮ ||

ಯಾರು ಅಳತೆಗೆ ವಿಷಯವಾಗದೇ ಇರುವ ಶರೀರವನ್ನು ಹೊಂದಿರುವನೋ, ಯಾರ ಬುದ್ಧಿರೂಪೀ ಕಣ್ಣುಗಳು ಸರ್ವತ್ರ ವ್ಯಾಪಿಸಿರುವವೋ, ಯಾರಲ್ಲಿ ಅನಂತ ವಿಷಯಗಳ ಸಮಾವೇಶವಿರುವುದೋ, ಯಾರ ತುದಿಯನ್ನು ಕಾಣಲು ಸಾಧ್ಯವಿಲ್ಲವೋ ಆ ದಿವ್ಯಾತ್ಮನಿಗೆ (ಚಿಂತ್ಯಾತ್ಮನಿಗೆ) ನಮಸ್ಕರಿಸುತ್ತೇನೆ.

ಸರ್ವಭೂತಾತ್ಮಭೂತಾಯ ಭೂತಾದಿ ನಿಧನಾಯ ಚ |
ಅಕ್ರೋಧದ್ರೋಹಮೋಹಾಯ ತಸ್ಮೈ ಶಾನ್ತಾತ್ಮನೇ ನಮಃ || ೭೯ ||"

ಪ್ರಾಣಿಗಳಲ್ಲಿ ಪಂಚಭೂತಾತ್ಮನಾಗಿರುವ, ಪ್ರಾಣಿಗಳ ಹುಟ್ಟು-ಸಾವುಗಳಿಗೆ ಕಾರಣನಾಗಿರುವ, ಯಾರಲ್ಲಿ ಕ್ರೋಧ-ದ್ರೋಹ-ಮೋಹಗಳಿಲ್ಲವೋ ಆ ಶಾಂತಾತ್ಮನಿಗೆ ನಮಸ್ಕರಿಸುತ್ತೇನೆ.

ಇದೇ ಪ್ರದೀಪ್ತ ಪ್ರಕರಣದ ಎರಡು ಶ್ಲೋಕಗಳು ಅತ್ಯಂತ ಭವ್ಯವಾಗಿವೆ -

ಯಂ ನ ದೇವಾ ನ ಗನ್ಧರ್ವಾ ನ ದೈತ್ಯಾ ನ ಚ ದಾನವಾಃ
ತತ್ತ್ವತೋ ಹಿ ವಿಜಾನನ್ತಿ ತಸ್ಮೈ ಸೂಕ್ಷಾತ್ಮನೇ ನಮಃ || ೭೪ || 

ಯಾರನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ದೈತ್ಯರಾಗಲೀ, ದಾನವರಾಗಲೀ ತತ್ತ್ವತಃ ಅರಿಯಲಾರರೋ ಆ ಸೂಕ್ಷ್ಮಾತ್ಮನಿಗೆ ನಮಸ್ಕರಿಸುತ್ತೇನೆ.

ಯಸ್ಮಿನ್ಸರ್ವಂ ಯತಃ ಸರ್ವಂ ಯಃ ಸರ್ವಂ ಸರ್ವತಶ್ಚ ಯಃ |
ಯಶ್ಚ ಸರ್ವಮಯೋ ನಿತ್ಯಂ ತಸ್ಮೈ ಸರ್ವಾತ್ಮನೇ ನಮಃ || ೮೩ ||

ಯಾರಲ್ಲಿ ಸರ್ವವೂ ಇರುವವೋ, ಯಾರಿಂದ ಈ ಎಲ್ಲವೂ ಸೃಷ್ಟಿಸಲ್ಪಟ್ಟಿರುವವೋ, ಯಾರು ಎಲ್ಲದರಲ್ಲಿಯೂ ಇರುವನೋ, ಯಾರು ಎಲ್ಲ ಕಡೆಗಳಲ್ಲಿಯೂ ಇರುವನೋ ಆ ಸರ್ವಮಯ ಸರ್ವಾತ್ಮನಿಗೆ ನಮಸ್ಕರಿಸುತ್ತೇನೆ.

ಸೂಕ್ಷ್ಮಾತ್ಮಾ ಅಣುವಿಗಿಂತಲೂ ಅಣೀಯಾನ್ ಆಗಿದೆ, ಅದೇ ಸರ್ವಾತ್ಮಾ ಪ್ರಜಾಪತಿಯು, ಅದರ ಉಪಾಸನೆಗಾಗಿಯೇ ಸಮಸ್ತ ಜ್ಞಾನ, ವಿಜ್ಞಾನ, ದರ್ಶನ, ಅಧ್ಯಾತ್ಮ ಹಾಗೂ ಕಾವ್ಯ-ಸಾಹಿತ್ಯಗಳ ಸಾವಿರಾರು ರಶ್ಮಿಸೂತ್ರಗಳು ವಿತತವಾಗಿವೆ. ಶುಕ್ಲ ಯಜುರ್ವೇದದಲ್ಲಿ (ಅ. ೩೨) ಹೀಗೆ ಹೇಳಿದೆ -

"ತದೇವಾಗ್ನಿಸ್ತದಾದಿತ್ಯಸ್ತದ್ವಾಯುಸ್ತದು ಚನ್ದ್ರಮಾಃ |ತದೇವ ಶುಕ್ರಂ ತದ್ ಬ್ರಹ್ಮ ತಾ ಆಪಃ ಸ ಪ್ರಜಾಪತಿಃ || ||
ಸರ್ವೇ ನಿಮೇಷಾ ಜಜ್ಞಿರೇ ವಿದ್ಯುತಃ ಪುರುಷಾದಧಿ |
ನೈನಮೂರ್ಧ್ವಂ ನ ತಿರ್ಯಞ್ಚಂ ನ ಮಧ್ಯೇ ಪರಿ ಜಗ್ರಭತ್ || ||
ನ ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹದ್ಯಶಃ |
ಹಿರಣ್ಯಗರ್ಭ ಇತ್ಯೇಷ ಮಾ ಮಾ ಹಿಂಸೀದಿತ್ಯೇಷಾಯಸ್ಮಾನ್ನ ಜಾತ ಇತ್ಯೇಷಃ || ||
ಏಷೋ ಹ ದೇವಃ ಪ್ರದಿಶೋಽನು ಸರ್ವಾಃಪೂರ್ವೋ ಹ ಜಾತಃ ಸ ಉ ಗರ್ಭೇ ಅನ್ತಃ |
ಸ ಏವ ಜಾತಃ ಸ ಜನಿಷ್ಯಮಾಣಃಪ್ರತ್ಯಙ್ ಜನಾಸ್ತಿಷ್ಠತಿ ಸರ್ವತೋಮುಖಃ
|| ||"

ಈ ಪ್ರಕರಣವನ್ನು ತದೇವ ಉಪನಿಷದ್ ಎನ್ನಲಾಗಿದೆ. ಇದರಲ್ಲಿ ಎಲ್ಲಾ ಶ್ರುತಿಗಳ ರಹಸ್ಯ ನೀಡಲಾಗಿದೆ. ಅದೇ ಅಗ್ನಿ, ಅದೇ ಆದಿತ್ಯ, ಅದೇ ಚಂದ್ರಮಾ, ಅದೇ ಶುಕ್ರ, ಅದೇ ಬ್ರಹ್ಮ ಹಾಗೂ ಅದೇ ಪರಮೇಷ್ಠೀ ಪ್ರಜಾಪತಿ. ಮೇಲೆ, ಕೆಳಗೆ, ಮಧ್ಯದಲ್ಲಿ ಯಾರೂ ಅದನ್ನು ಬುದ್ಧಿಯ ಬಂಧನಕ್ಕೆ ತರಲಾಗಲಿಲ್ಲ. ಅದೇ ವಿದ್ಯೋತಮಾನ ಪುರುಷದಿಂದ ಕಾಲ ಹಾಗೂ ನಿಮೇಷ ಹೊರಟಿವೆ. ಅದೇ ದೇವವು ಎಲ್ಲಾ ದಿಕ್ಕು-ಉಪದಿಕ್ಕುಗಳಲ್ಲಿ ವ್ಯಾಪ್ತವಾಗಿದೆ. ಅದೇ ಮೊದಲು ಉತ್ಪನ್ನವಾಯಿತು, ಅದೇ ಮುಂದೆ ಉತ್ಪನ್ನವಾಗುತ್ತದೆ, ಪ್ರತಿಯೊಬ್ಬ ಮನುಷ್ಯನಲ್ಲಿ ವಿಶ್ವತೋಮುಖ ಸ್ವರೂಪದಿಂದ ಅದೇ ವ್ಯಾಪ್ತವಾಗಿದೆ.

ಇದರ ಮಹಿಮೆಯನ್ನು ಮಹಾಭಾರತದ ಅನುಶಾಸನ-ಪರ್ವದ (ಅ. ೧೫೮) ನಿಮ್ನ ಶ್ಲೋಕಗಳಲ್ಲಿ ವರ್ಣಿಸಿದೆ -

"ಸ ವತ್ಸರಃ ಸ ಋತುಃ ಸೋಽರ್ಧಮಾಸಃ,ಸೋಽಹೋರಾತ್ರಃ ಸ ಕಲಾ ವೈ ಸ ಕಾಷ್ಠಾಃ |
ಮಾತ್ರಾ ಮುಹೂರ್ತಾಶ್ಚ ಲವಾಃ ಕ್ಷಣಾಶ್ಚ, ವಿಶ್ವಕ್ಸೇನಃ ಸರ್ವಮೇತತ್ ಪ್ರತೀಹಿ ||
ವಾಯುರ್ಭೂತ್ವಾ ವಿಕ್ಷಿಪತೇ ಚ ವಿಶ್ವಮಗ್ನಿರ್ಭೂತ್ವಾ ದಹತೇ ವಿಶ್ವರೂಪಃ |
ಆಪೋ ಭೂತ್ವಾ ಮಜ್ಜಯತೇ ಚ ಸರ್ವಂ ಬ್ರಹ್ಮಾ ಭೂತ್ವಾ ಸೃಜತೇ ಸರ್ವಸಙ್ಘಾನ್ ||
ಜ್ಯೋತಿರ್ಭೂತಃ ಪರಮೋಽಸೌ ಪುರಸ್ತಾತ್ ಪ್ರಕಾಶತೇ ಯತ್ಪ್ರಭಯಾ ವಿಶ್ವರೂಪಃ |
ಅಪಃ ಸೃಷ್ಟ್ವಾ ಸರ್ವಭೂತಾತ್ಮಯೋನಿಃ ಪುರಾಕರೋತ್ ಸರ್ವಮೇವಾಥ ವಿಶ್ವಮ್ ||
ಸ ಪಞ್ಚಧಾ ಪಞ್ಚಜನೋಪಪನ್ನಂ ಸಞ್ಚೋದಯನ್ ವಿಶ್ವಮಿದಂ ಸಿಸೃಕ್ಷುಃ |
ಸತಶ್ವಕಾರಾವನಿಮಾರುತೌ ಚ ಖಂ ಜ್ಯೋತಿರಾಪಶ್ಚ ತಥೈವ ಪಾರ್ಥ ||
ತಮಧ್ವರೇ ಶಂಸಿತಾರಸ್ಸ್ತುವನ್ತಿ ರಥನ್ತರೇ ಸಾಮಗಾಶ್ಚ ಸ್ತುವನ್ತಿ |
ತಂ ಬ್ರಾಹ್ಮಣಾ ಬ್ರಹ್ಮಮನ್ತ್ರೈಃ ಸ್ತುವನ್ತಿ ತಸ್ಮೈ ಹವಿರಧ್ವರ್ಯವಃ ಕಲ್ಪಯನ್ತಿ ||
ತಂ ಘೋಷಾರ್ಥೇ ಗೀರ್ಭಿರಿನ್ದ್ರಾಃ ಸ್ತುವನ್ತಿ ಸ ಚಾಪೀಶೋ ಭಾರತೈಕಃ ಪಶೂನಾಮ್ |
ಸ ಪೌರಾಣೀಂ ಬ್ರಹ್ಮಗುಹಾಂ ಪ್ರವಿಷ್ಟೋ ಮಹೀಸತ್ರಂ ಭಾರತಾಗ್ರೇ ದದರ್ಶ ||
ತಸ್ಯಾನ್ತರಿಕ್ಷಂ ಪೃಥಿವೀ ದಿವಞ್ಚ ಸರ್ವಂ ವಶೋ ತಿಷ್ಠತಿ ಶಾಶ್ವತಸ್ಯ |
ಸ ಕುಮ್ಭರೇತಃ ಸಸೃಜೇ ಸುರಾಣಾಂ ಯತ್ರೋತ್ಪನ್ನಮೃಷಿಮಾಹುರ್ವಸಿಷ್ಠಮ್ ||
ಸ ಮಾತರಿಶ್ವಾ ವಿಭುರಶ್ವವಾಜೀ ಸ ರಶ್ಮಿವಾನ್ ಸವಿತಃ ಚಾದಿದೇವಃ |
ತೇನಾಸುರಾ ವಿಜಿತಾಃ ಸರ್ವ ಏವ ತದ್ವಿಕ್ರಾನ್ತೈರ್ವಿಜಿತಾನೀಹ ತ್ರೀಣಿ ||
ಸ ದೇವಾನಾಂ ಮಾನುಷಾಣಾಂ ಪಿತೃಣಾಂ ತಮೇವಾಹುರ್ಯಜ್ಞವಿದಾಂ ವಿತಾನಮ್ |
ಸ ಏವ ಕಾಲಂ ವಿಭಜನ್ನುದೇತಿ ತಸ್ಯೋತ್ತರಂ ದಕ್ಷಿಣಞ್ಚಾಯನೇ ದ್ವೇ ||
ತಸ್ಯೈವೋದರ್ಧ್ವಂ ತಿರ್ಯಗಧಶ್ಚರನ್ತಿ ಗಭಸ್ತಯೋ ಮೇದಿನೀಂ ಭಾಸಯನ್ತಃ |
ತಂ ಬ್ರಾಹ್ಮಣಾ ವೇದವಿದೋ ಜುಷನ್ತಿ ತಸ್ಯಾದಿತ್ಯೋ ಭಾಮುಪಯುಜ್ಯ ಭಾತಿ ||
ಸ ಮಾಸಿ ಮಾಸ್ಯಧ್ವರಕೃದ್ವಿಧತ್ತೇ ತಮಧ್ವರೇ ವೇದವಿದಃ ಪಠನ್ತಿ |
ಸ ಏವೋಕ್ತಶ್ಚಕ್ರಮಿದಂ ತ್ರಿನಾಭಿ ಸಪ್ತಾಶ್ವಯುಕ್ತಂ ವಹತೇ ವೈ ತ್ರಿಧಾಮ ||
ಸ ಬನ್ಧುರಸ್ತಸ್ಯ ರಥಸ್ತ್ರಿಚಕ್ರಸ್ತ್ರಿವೃಚ್ಛಿರಾಶ್ಚತುರಶ್ವಸ್ತ್ರಿನಾಭಿಃ |
ಸ ಮಹೇನ್ದ್ರಃ ಸ್ತೂಯತೇ ವೈ ಮಹಾಧ್ವರೇ ವಿಪ್ರೈರೇಕ ಋಕ್ಸಹಸ್ರೈಃ ಪುರಾಣೈಃ ||
ತಮೈವಾಹುರ್ ಋಷಿಮೇಕಂ ಪುರಾಣಂ ಸ ವಿಶ್ವಕೃದ್ವಿದಧಾತ್ಯಾತ್ಮಭಾವಾತ್
||"

ಈ ಮಹಾಗಂಭೀರ ಸೂಕ್ತಗಳ ಮುಖೇನ ಭಗವಂತನ ಅನಾದಿ-ಅನಂತ ಚರಿತೆಗಳ ಗಾನ ಮಾಡಲಾಗಿದೆ. ಮಹಾಭಾರತದ ಓತಪ್ರೋತ ಪ್ರವಾಹಗಳಲ್ಲಿ ಇಂತಹಾ ಎಷ್ಟೋ ಸನ್ನಿವೇಶವು ಕಂಡುಬರುತ್ತದೆ. ಅವುಗಳ ಸಂಕಲನವು ಬಹಳ ಲಾಭದಾಯಕವೆಂದು ಸಿದ್ಧವಾಗಬಹುದು. ನೂರು ಸಾವಿರ ಶಾಖಾ ರೂಪಗಳಲ್ಲಿ ವಿತತ ಪುರಾಣವೆಂಬ ನ್ಯಗ್ರೋಧದ ಕೆಳಗೆ ಅಖಂಡ ಸಮಾಧಿಯಲ್ಲಿ ವಿರಾಜಮಾನರಾಗಿರುವ ಮಹರ್ಷಿ ವೇದವ್ಯಾಸರು ಧ್ಯಾನಪೂರ್ವಕ ಅಪರಿಮೇಯ ಹಾಗೂ ಅಚಿಂತ್ಯ ತತ್ವಗಳನ್ನು ಸ್ವಯಂ ಸಾಕ್ಷಾತ್ಕರಿಸಿಕೊಂಡಿದ್ದು ತಮ್ಮ ಅಲೌಕಿಕ ಕಾವ್ಯ-ಪ್ರತಿಭೆಯ ಮುಖೇನ ಸರ್ವ ಜನ ಹಿತಕ್ಕಾಗಿ ಮಹಾಭಾರತದಲ್ಲಿ ನಿಬದ್ಧಗೊಳಿಸಿದರು. ಅವರ ಭಗೀರಥ-ತಪದಿಂದ ಸರಸ ಜ್ಞಾನ-ಗಂಗೆಯು ಪ್ರವಹಿಸಿತು, ಅದರ ನಿರ್ಮಲ ಧಾರೆಯಲ್ಲಿ ಅವಗಾಹನ ಮಾಡಿ ಇಂದೂ ಅನೇಕ ಜನ ಕೃತಕೃತ್ಯರಾಗುತ್ತಿದ್ದಾರೆ. ಹಾಗಾಗಿ ಎಲ್ಲಿಯವರೆಗೆ ಭೂಮಂಡಲದಲ್ಲಿ ಚಂದ್ರ ಹಾಗೂ ಸೂರ್ಯ ಪ್ರಕಾಶವಿರುತ್ತದೆಯೋ, ಅಲ್ಲಿಯವರೆಗೆ ಅಗ್ನೀಷೋಮ ಅಂದರೆ ಅಹೋರಾತ್ರದ ಚಕ್ರವು ಪರ್ಯಾವರ್ತಿತವಾಗುತ್ತಿರುತ್ತದೋ, ಅಲ್ಲಿಯವರೆಗೆ ಭಗವಂತನ ಅನಂತ ಮಹಿಮೆಯನ್ನು ವಿಖ್ಯಾತಗೊಳಿಸುವ ಈ ಜಯ ಎಂಬ ಹೆಸರಿನ ಇತಿಹಾಸವು ಲೋಕದಲ್ಲಿ ಅಮರವಾಗಿರುತ್ತದೆ.

- ಹೇಮಂತ್ ಕುಮಾರ್ ಜಿ.