Wednesday, 9 September 2020

೨೦೨೦ರ ಆಶ್ವಯುಜ ಮಾಸ ವಿಶೇಷ -: ಅಧ್ಯಾತ್ಮ ವೃದ್ಧಿ ಪ್ರಯೋಗ :-

(ಆಗಸ್ಟ್ ೨೦೨೦ರ ಋತ್ವಿಕ್ ವಾಣಿ ಮಾಸಪತ್ರಿಕೆಯಲ್ಲಿ ಋತ್ವಿಕ್ ವಾಣಿ ಬಳಗಕ್ಕಾಗಿ ಪ್ರಕಟಿಸಿದ ಮಾಹಿತಿ)


ಈ ಆಧ್ಯಾತ್ಮಿಕತೆ ಭಾರತೀಯ ಸಾಂಸ್ಕೃತಿಕ ಸಂಪತ್ತು. ಅದು ಬರಿದಾದರೆ ಬಡತನ, ರೋಗ-ರುಜಿನ, ಭ್ರಷ್ಟತನ, ಅಜ್ಞಾನ ಬಹಳ ಕಷ್ಟ. ತುಂಬಿದರೆ ಸುಖ-ಸಮೃದ್ಧಿ, ಮಳೆ, ಬೆಳೆ, ದೇಶಹಿತ ಸಾಧಿಸಲ್ಪಡುತ್ತದೆ. ಅದನ್ನು ಸಾಧಿಸುವ ಒಂದು ಆಚರಣೆಯೇ ನವರಾತ್ರಿ ಅಥವಾ ದಶಹರ. ಪ್ರತೀ ವರ್ಷವೂ ಭಾರತೀಯ ಸಂಸ್ಕೃತಿಯಲ್ಲಿ ದಶಹರಾಚರಣೆ ಭಿನ್ನ ಭಿನ್ನ ರೀತಿಯಲ್ಲಿ ಚಾಲ್ತಿಯಲ್ಲಿದೆ. ಅದನ್ನೂ ಅದರ ಆಚರಣೆಯ ಮಹತ್ವವನ್ನು ಹಲವು ದೇಶದ ಮುತ್ಸದ್ದಿಗಳು ಗುರುತಿಸಿದ್ದಾರೆ. ಮೈಸೂರಿನ ದಸರಾ ಇದಕ್ಕೊಂದು ಉದಾಹರಣೆ. ಒಂದು ಫಲಭರಿತ ಮರ. ಅದನ್ನು ನೋಡುವ 9 ಜನ ಅದರ ಭಿನ್ನ ಚಿಂತನೆ. ಅದೇ ನವರಾತ್ರಿ. ಇಲ್ಲಿ ಕುತೂಹಲ, ತಾಳ್ಮೆ, ಸಂತೋಷ, ತ್ಯಾಗ, ನಿರ್ಲಿಪ್ತತೆ, ಮದ, ಸ್ವಾಭಾವಿಕತೆ, ಅನಿವಾರ್ಯತೆ, ಜ್ಞಾನವೆಂಬ ನವವಿಧ ವೃತ್ತಿಯಲ್ಲಿ ಚಿಂತಿಸಲಾಗಿದೆ.

 1. ಒಂದು ಮರ. ಅದು ಸ್ವಾಭಾವಿಕ ಪ್ರಕೃತಿ. ರೆಂಬೆ ಟೊಂಗೆಗಳಿಂದ, ಹೂ ಹಣ್ಣುಗಳಿಂದ ಸಮೃದ್ಧ. ಅದೇ ಜಗತ್ ಪ್ರಸೂತಿ, ಮೂಲಪ್ರಕೃತಿ.

 2. ಒಬ್ಬ ರೈತ. ತನ್ನ ಗದ್ದೆಯ ಬದುವಿನಲ್ಲಿ ಹಾಗೇ ನೆಟ್ಟ ಒಂದು ಸಣ್ಣ ಗಿಡ ಮರವಾಗಿ ನಳನಳಿಸುತ್ತಿದೆ ಎಂಬ ತೃಪ್ತಿ ಭಾವದೊಂದಿಗೆ ಸಾಫಲ್ಯತೆಯ ಪ್ರಕಟಪ್ರಪಂಚ.

 3. ಅದರಲ್ಲಿ ಆಶ್ರಯ ಪಡೆದ ಹಕ್ಕಿ ಪಕ್ಷಿಗಳು, ಅವುಗಳ ರಕ್ಷಣಾತ್ಮಕ ಭಾವ, ನಿರ್ಭಯ ಜೀವನ, ಅವುಗಳ ಚಿಲಿಪಿಲಿ ನೋಡುಗರಿಗೆ ಸಂಗೀತಲೋಕ. ಆನಂದ, ನಾದಾನಂದ ವಾತಾವರಣ.

 4. ಅದೇ ಮರದಲ್ಲೇ ತನ್ನ ಜೀವನ ಸಾರ್ಥಕತೆ ಕಂಡುಕೊಂಡ ಅಳಿಲು ಇತ್ಯಾದಿ ಸಣ್ಣ ಪ್ರಾಣಿಗಳು, ಅವುಗಳ ಕಿಚುಗುಡುವಿಕೆ, ಅದೇ ವೇದಾಂತಸಾರ, ವೇದಮಯ ಜೀವನ.

 5. ಫಲಾದಿಗಳ ಸಮೃದ್ಧತೆ :- ಗುರುತಿಸಿದ ಹಸಿವು, ಜೀವನದರ್ಥಪಾಠ.

 6. ಪುಷ್ಪಾದಿಗಳಿಂದ ಸಂಪನ್ನತೆ :- ಹಸಿವು ನೀಗಿದ ನಂತರದ ಉಲ್ಲಾಸದ ದ್ಯೋತಕ, ಬೇಕುಗಳ ಆವಿರ್ಭಾವ.

 7. ನೆರಳಿನ ಆಶ್ರಯ :- ಸೋತ ಜೀವಿಯ ಸಹಜ ಅವಲಂಬನ, ಸೋಲಿನ ಚಿಂತೆ, ಆಶ್ರಯಾನುಕಂಪ.

 8. ಒಣಗಿ ಬಿದ್ದು ಮರದ ಕೆಳಗೆ ಸಂಗ್ರಹವಾದ ಒಣ ಎಲೆಗಳು :- ಅಸಹಾಯಕತೆಯ ದ್ಯೋತಕ ವೃದ್ಧಾಪ್ಯ.

 9. ಕೊಡಲಿಧಾರಿಯಾದ ಕಟುಕ :- ಅಪಾಯದ ಮುನ್ಸೂಚನೆ, ಸಾವಿನ ಭಯ. ಇವು ನವರಾತ್ರಿಗಳು.

 10. ದಶಹರವೆಂದರೆ ಈ ಒಂಬತ್ತರ ಮೂಲತತ್ವ :- ಅದನ್ನು ಅರಿತು ಜಯಿಸುವುದೇ ವಿಜಯದಶಮಿ.

ಒಬ್ಬ ಮಾನವ ತಾನು ಹುಟ್ಟಿನಿಂದ ಶಿಶು. ಬರೆ ಒಂದು ಸಣ್ಣಗಿಡ. ರೈತನೊಬ್ಬನ ಸಹೃದಯತೆಗೆ ಸಿಕ್ಕಿ ಅವನ ಹೊಲದ ಬದುವಿನಲ್ಲಿ ಆಶ್ರಯ ಪಡೆಯುತ್ತದೆ. ಸುತ್ತಿನ ಪರಿಸರ ಪೂರೈಕೆಯಿಂದ ಬೆಳೆದು ಪ್ರೌಢವಾಗುತ್ತದೆ. ನಂತರ ಅವನಿಗೆ ಸಹಜಾವಲಂಬನೆಯೆಂಬ ಹಕ್ಕಿ ಪಕ್ಷಿಗಳ ಒಡನಾಟ ಕವಿಯಾದರೂ ಆಗಬಹುದು ಅಥವಾ ಅಳಿಲು ಅಣಚಿಗಳ ಒಡನಾಟದಿಂದ ಆಧ್ಯಾತ್ಮಿಕ ಚಿಂತಕನಾಗಬಹುದು. ಒಟ್ಟಾರೆ ಪ್ರೌಢತ್ವ, ಶಕ್ತಿ, ಯೌವನ, ಬಲ, ಜ್ಞಾನಗಳೆಂಬ ಫಲ ಸಮೃದ್ಧವಾದಾಗ ಸುತ್ತಿನ ಹಸಿವು ಹುಡುಕಿ ಬರುತ್ತದೆ. ಹಸಿವು ಪೂರೈಕೆಯಾದ ಮೇಲೆಯೇ ಪುಷ್ಪಾದಿಗಳ ಅಲಂಕಾರ, ವೈಭವೋಪೇತ ಜೀವನ ಸಾಕ್ಷಾತ್ಕಾರ ಬದುಕಿನ ಮೆರೆವು ನಿರಂತರ ಸವೆಸುತ್ತಾ ಸೋತಾಗ ಕೊನೆಯಲ್ಲಿ ಆಶ್ರಯಾಕಾಂಕ್ಷಿಯಾದ ನಿರ್ಬಲ ಜೀವನ, ಅನುಕಂಪದ ಹಾರೈಕೆ ಒದಗಿ ಬರದೆ ಹಪಹಪಿಸುತ್ತಾ ವೃದ್ಧಾಪ್ಯಕ್ಕಾಗಿ ಅಳುತ್ತಾ ಮರ ಕಡಿಯುವ ಕಟುಕನಿಗೆ ಮರ ಹೆದರುವಂತೆ ಮೃತ್ಯುವಿಗಾಗಿ ಹೆದರುತ್ತಾ ಸಾಯುತ್ತದೆ. ಇದೇ ಜೀವನ ರಹಸ್ಯ. ಇದನ್ನು ಜಯಿಸಲು ಸಹಜ ಸ್ವಭಾವ ಮೂಲದ  ಪ್ರಕೃತಿಯನ್ನು ಒಲಿಸಿ ಜಯಿಸಿಕೊಳ್ಳುವುದು ಅದೇ ನವರಾತ್ರಿ ಆಚರಣೆ. ಗೆದ್ದರೆ ವಿಜಯದಶಮಿ” “ಮರಣವೇ ಮಹಾನವಮಿ” “ಹೋರಾಟ ಅನಿವಾರ್ಯ ಇದು ಪ್ರಪಂಚ ತಾನು ಕಂಡು ಅನುಭವಿಸಿದ ಸತ್ಯದೊರತೆ. ಅದರ ಹಿನ್ನೆಲೆಯಲ್ಲಿ ಈ ಆಚರಣೆ ಬಳಕೆಗೆ ಬಂತು.

ಈ ವಿಚಾರದ ಗಹನತೆಯಲ್ಲಿ ಜಗತ್ ಸೃಷ್ಟಿಯಲ್ಲಿ ಅಡಕವಾದ ಮೂಲಮೃತ್ ಸ್ವರೂಪದ ಉದ್ದೇಶವಡಗಿದೆ. ಅದರ ಉದ್ಘಾಟನೆಪೂರ್ವಕ ಅರಿತು ಪ್ರಕೃತಿ ಆರಾಧಿಸಿ ಕಾರಣೀಭೂತ ಚೈತನ್ಯವನ್ನು ಅನುಭವಿಸಿದರೆ ವಿಜಯದಶಮಿ ಕಾಣುತ್ತದೆ. ಪ್ರಕೃತಿಯನ್ನೇ ಅನುಭವಿಸಿದರೆ ಮಹಾನವಮಿ ಪ್ರಾಪ್ತಿ ಇದೇ ಸತ್ಯ.

ನಮ್ಮ ಖಗೋಳ ಶಕ್ತಿ ಸೂರ್ಯ+ಚಂದ್ರ, ಅದನ್ನನುಸರಿಸಿ ವಿಚಲಿತ ಕೇಂದ್ರೀಕೃತ ಶನಿ, ಗುರು, ಬುಧ, ಕುಜ, ಶುಕ್ರ ಈ ಪಂಚೀಕೃತ ಶಕ್ತಿಯ ಮುಖೇನ ಚೈತನ್ಯ ವ್ಯವಹರಿಸುತ್ತದೆ. ಅದೇ ಲೋಕ. ಸೂರ್ಯ 5 ಚಂದ್ರ 5 =10. ಅದೇ ದಶಹರ. ಈ ಎರಡು ಪಂಚೀಕೃತ ವ್ಯವಸ್ಥೆಯೇ ಹಗಲು+ರಾತ್ರಿ, ಹುಟ್ಟು+ಸಾವು. ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದೇ ಜೀವನ. ಅದೇ ದಶಹರ.

ಮಾಯಾ-1 

ಕಾಳಿ-1 

ದುರ್ಗಾ-1 

ಅಂಬಾ-1 

ಬ್ರಾಹ್ಮೀ-1 

ಮಾಹೇಶ್ವರೀ-1 

ಕೌಮಾರೀ-1 

ಸಿದ್ಧಿದಾತ್ರೀ-1 

ಇಂದ್ರಾಣೀ-1 

ರಾಜರಾಜೇಶ್ವರೀ-1 =10. ಈ 10 ಮೂಲಪ್ರಕೃತಿಯಲ್ಲಿ ಯಾವುದಾದರೂ ಒಂಬತ್ತು ಮಾತ್ರಾ ಅನುಷ್ಠಿಸಲ್ಪಡುವುದು. ಹತ್ತನೆಯದೇ ವಿಜಯ. ಅದಕ್ಕೆ ಬೇಕಾದ ಈ ಋತುಚಕ್ರದಲ್ಲಿ ಆಶ್ವೀಜಮಾಸ 8½ ದಿನ ಮಾತ್ರಾ ಹೆಚ್ಚಾಗಿ ಸಿಗುವುದು. ಬಹಳ ಅಪರೂಪದಲ್ಲಿ ಒಂಬತ್ತು ದಿನ ಪ್ರಾಪ್ತವಾಗುತ್ತದೆ. ಅದರಲ್ಲಿ ಸೂರ್ಯ+ಚಂದ್ರರ ಕಲಾ ನಿರೂಪಣೆ ಅರ್ಥಮಾಡಿಕೊಂಡು ಆರಾಧಿಸಿದಲ್ಲಿ ಪೂರ್ಣ ಫಲದಾಯಕ. ಅದರ ಸೂತ್ರ ಹೀಗಿದೆ – 

1. ಸೂರ್ಯ=3, 

2. ಚಂದ್ರ=5, 

3. ಸೂರ್ಯ=7, 

4. ಚಂದ್ರ=9, 

5. ಸೂರ್ಯ=11, 

6. ಚಂದ್ರ=13, 

7. ಸೂರ್ಯ=15, 

8. ಚಂದ್ರ=17, 

9. ಸೂರ್ಯ=19= ಏಕನ್ಯೂನ ವಿಂಶತಿ. 

ಒಟ್ಟು ಮೊತ್ತವನ್ನು ಗ್ರಹ ಸಂಖ್ಯೆಯಲ್ಲಿ ಭಾಗಿಸಿ 1-2-3-4-5-4-3-2-1 ರಂತೆ ಸಂಯೋಜಿಸಿದರೆ ನಿಮ್ಮ ರಥವಾಗುವ ಮಾರ್ಗ ಅಥವಾ ಆರಾಧನಾ ಸೂಚಿ ಪ್ರಾಪ್ತವಾಗುತ್ತದೆ. ಇದಕ್ಕೆ ಮೇಲೆ ಸೂಚಿಸಿದ ಮಾಯೆಯುಕ್ತವಾದ 9 ದೇವತೆಗಳನ್ನು ಖಗೋಳ ಚೈತನ್ಯವಾಗಿ ಫಲಪ್ರದರಾಗಬಹುದೆಂಬುದು ಸೂತ್ರ.

ಇಲ್ಲಿ ಮಕರ ಸಂಕ್ರಾಂತಿ ವೃತ್ತದಿಂದ ಉತ್ತರಾಗಾಮಿಯಾದ ಸೂರ್ಯ ಕರ್ಕವೃತ್ತವನ್ನು ಸೇರಿ ತಿರುಗಿ ದಕ್ಷಿಣಾಪಥ ಸಂಚಾರದಲ್ಲಿರುವಾಗ ಖಗೋಲಾಧಾರಿತ ಚೈತನ್ಯ ಶಕ್ತಿಯ ಆರಾಧನೆ ಬಹಳ ವಿಶೇಷ. ಹಾಗಾಗಿಯೇ ಎಲ್ಲಾ ವೃತ, ನಿಯಮ, ಹಬ್ಬ, ಹರಿದಿನಗಳೂ ದಕ್ಷಿಣಾಯನದಲ್ಲಿಯೇ ನಡೆಯುತ್ತವೆ. ಉತ್ತರಾಯಣದಲ್ಲಿ ಸ್ಥಾಪಿತ ದೇವತಾ ಉತ್ಸವ, ಇನ್ನಿತರೆ ಮಾನವ ಜನ್ಮ ಸಂಸ್ಕಾರಗಳು ನಡೆಯುತ್ತವೆ. ಹಾಗಾಗಿ ಈ ಆಶ್ವೀಜಮಾಸವೆಂಬುದು ಭೂಮಧ್ಯರೇಖೆಯ ನೇರಕ್ಕೆ ಸೂರ್ಯ ಬಂದಾಗ ನವರಾತ್ರಿ ಆಚರಣೆ ಇರುತ್ತದೆ. ಇಲ್ಲಿ ಸೂರ್ಯ+ಅಗ್ನಿ+ಚಂದ್ರಕಲೆಗಳು ಏಕೀಭವಿಸುತ್ತವೆ. ಸಮಯ ಮಾತ್ರ ಒಂಬತ್ತು ದಿನವೂ ಪೂರ್ಣ ಸಿಗುವುದಿಲ್ಲ. ಆದರೆ ಈ ವರ್ಷ ವಿಶೇಷವಾಗಿ 42 ದಿನ ಪರ್ಯಂತ ಒದಗಿ ಬಂದಿರುತ್ತದೆ. ಆಶ್ವಯುಜಮಾಸ ಅಧಿಕವಾದ್ದರಿಂದ ಈ ಅವಕಾಶ ಒದಗಿ ಬಂದಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಿರೆಂದು ಬಿನ್ನಹ.

ಓಂ ಧೂಮ್ರಾರ್ಚಿ ರೂಷ್ಮಾ ಜ್ವಲಿನೀ ಜ್ವಾಲಿನೀ ವಿಷ್ಫುಲಿಂಗಿನೀ ।

ಸುಶ್ರೀಃ ಸುರೂಪಾ ಕಪಿಲಾ ಹವ್ಯಕವ್ಯವಹೇತಿ ಚ ॥ -10 ಕಲೆಗಳು

 1. ಧೂಮ್ರಾರ್ಚಿ
 2. ರೂಷ್ಮಾ
 3. ಜ್ವಲಿನೀ
 4. ಜ್ವಾಲಿನೀ
 5. ವಿಷ್ಫುಲಿಂಗಿನೀ
 6. ಸುಶ್ರೀಃ
 7. ಸುರೂಪಾ
 8. ಕಪಿಲಾ
 9. ಹವ್ಯವಾಹ
 10. ಕವ್ಯವಾಹ 
   

ಓಂ ತಪಿನೀ ತಾಪಿನೀ ಧೂಮ್ರಾ ಮರೀಚಿರ್ಜ್ವಾಲಿನೀ ಋಚಿಃ×吕ÔåÄåêÆ ¼ðëâðÁµåê ƒÁµå’ð” |  

ಸುಷುಮ್ನಾ ಭೋಗದಾ ವಿಶ್ವಾ ಬೋಧಿನೀ ಧಾರಿಣೀ ಕ್ಷಮಾ ॥ -12 ಕಲೆಗಳು


 1. ತಪಿನೀ
 2. ತಾಪಿನೀ
 3. ಧೂಮ್ರಾ
 4. ಮರೀಚಿಃ
 5. ಜ್ವಾಲಿನೀ
 6. ಋಚಿಃ
 7. ಸುಷುಮ್ನಾ
 8. ಭೋಗದಾ
 9. ವಿಶ್ವಾ
 10. ಬೋಧಿನೀ
 11. ಧಾರಿಣೀ
 12. ಕ್ಷಮಾ


ಓಂ ಅಮೃತಾ ಮಾನದಾ ಪೂಷಾ ತುಷ್ಟಿಃ ಪುಷ್ಟಿಃ ರತಿರ್ಧೃತಿಃ ।

ಶಶಿನೀ ಚಂದ್ರಿಕಾಕಾಂತಿರ್ಜ್ಯೋತ್ಸ್ನಾ ಶ್ರೀಃ ಪ್ರೀತಿರಂಗದಾ ।

ಪೂರ್ಣಾ ಪೂರ್ಣಾಮೃತಾ ಭದ್ರದಾಯಿನ್ಯಃ ಸುಸ್ವರಾಃ ಕಲಾಃ ॥ -16 ಕಲೆಗಳು


 1. ಅಮೃತಾ
 2. ಮಾನದಾ
 3. ಪೂಷಾ
 4. ತುಷ್ಟಿಃ
 5. ಪುಷ್ಟಿಃ
 6. ರತಿಃ
 7. ಧೃತಿಃ
 8. ಶಶಿನೀ
 9. ಚಂದ್ರಿಕಾಕಾಂತಿಃ
 10. ಜ್ಯೋತ್ಸ್ನಾ
 11. ಶ್ರೀಃ
 12. ಪ್ರೀತಿರಂಗದಾ
 13. ಪೂರ್ಣಾ
 14. ಪೂರ್ಣಾಮೃತಾ
 15. ಭದ್ರದಾಯಿನ್ಯಃ
 16. ಸುಸ್ವರಾಃ

ಒಟ್ಟು 10+12+16 = 38 +ಧೈವ +ಚೈತನ್ಯ = 40+ ಜೀವ+ಆತ್ಮ =42 ಕಲೆಗಳು.

ಈ ರೀತಿಯಲ್ಲಿ 42 ಕಲೆಗಳು ಆರಾಧನಾತ್ಪೂರ್ವಕ ಸಾಧಿಸಿಕೊಳ್ಳುವ ಸಕಾಲವಿದಾಗಿರುತ್ತದೆ. ತನ್ಮೂಲಕ ವಿದೇಶೀ ಮಾಯಾಯುಕ್ತ ಮೋಸದ ಜೀವನದಿಂದ ಹೊರಬಂದು ಉತ್ತಮ ಸಾಂಸ್ಕೃತಿಕ ಜೀವನ ಪ್ರಾಪ್ತಿ. ಇದು ಸತ್ಯ ಸತ್ಯ ಸತ್ಯ.  


ಆಶ್ವಯುಜ ಮಾಸ ವಿಶೇಷ ಪೂಜಾವಿಧಿ :-

ಮಾಯಾ ಕಾಳೀ ಆರ್ಯಾದುರ್ಗಾ ಅಂಬಾ ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ಸಿದ್ಧಿದಾತ್ರೀ ಇಂದ್ರಾಣೀ ರಾಜರಾಜೇಶ್ವರೀ ದಶವಿಧಾಃ


ಪ್ರತೀದಿನ 1 ನೇ ಮಂಡಲದ 1-2-3 ಮತ್ತು 13 ನೇ ಸೂಕ್ತಗಳು. ಮೊದಲ ದಿನ –ನಂತರ 16 ಮಾತೃಕಾ ಮಂತ್ರಗಳಿಂದ ಹೋಮ. ಕೊನೆಯಲ್ಲಿ 22 ನೆಯ ಸೂಕ್ತ. 2ನೆಯ ದಿನದಿಂದ ಹಿಂದೆ ಹೇಳಿದ ಸೂಕ್ತಗಳ ನಂತರ ಮುಂದಿನ ಸೂಕ್ತ ಸಂಖ್ಯೆಯಂತೆ ತೆಗೆದುಕೊಳ್ಳಬೇಕು.


ಕ್ರ.ಸಂ

ದಿನಾಂಕ

ತಿಥಿ-ವಾರ-ನಕ್ಷತ್ರ

ದೇವತೆ

ಆರಾಧನಾ ಸೂಚಿ

ಮಂತ್ರಸೂಚಿ

ಋಗ್ವೇದ ಮಂಡಲ -1

 

01

18-09-2020

ಆಶ್ವೀಜ ಅಧಿಕ ಶು.೧-ಉತ್ತರಾ

ಮಾಯಾ-1

ಜಗತ್ಪ್ರಸೂತಿ-1

1-2-3, 13+ಮಾತೃಕಾನಾಮ+22 ಸೂ.

ವ್ಯಾಪಕ

02

19-09-2020

ಆಶ್ವೀಜ ಅಧಿಕ ಶು.೨-ಹಸ್ತಾ -1

ಕಾಳಿ

ಕಾಳಿಕಾ

1-2-3, 13+ಮಾತೃಕಾನಾಮ+23 ಸೂ.

ತಾಯಿ

03

20-09-2020

ಆಶ್ವೀಜ ಅಧಿಕ ಶು.೩-ಸ್ವಾತಿ

ದುರ್ಗಾ

ದುರ್ಗಾ

1-2-3, 13+ಮಾತೃಕಾನಾಮ+24 ಸೂ.

ರಕ್ಷಣೆ

04

21-09-2020

ಆಶ್ವೀಜ ಅಧಿಕ ಶು. ೪-ವಿಶಾಖ

ಅಂಬಾ

ಅಂಬಾ

1-2-3, 13+ಮಾತೃಕಾನಾಮ+25 ಸೂ.

ಜ್ಞಾನ

05

22-09-2020

ಆಶ್ವೀಜ ಅಧಿಕ ಶು.೬-ಅನುರಾಧ

ಬ್ರಾಹ್ಮೀ

ಬ್ರಾಹ್ಮೀ

1-2-3, 13+ಮಾತೃಕಾನಾಮ+28 ಸೂ.

ಪರಿಕರ

06

23-09-2020

ಆಶ್ವೀಜ ಅಧಿಕ ಶು. ೭-ಜ್ಯೇಷ್ಠ

ಮಾಹೇಶ್ವರೀ

ಮಾಹೇಶ್ವರೀ

1-2-3, 13+ಮಾತೃಕಾನಾಮ+30 ಸೂ.

ವೃತ್ತಿ

07

24-09-2020

ಆಶ್ವೀಜ ಅಧಿಕ ಶು.೮-ಮೂಲ

ಕೌಮಾರೀ

ಕೌಮಾರೀ

1-2-3, 13+ಮಾತೃಕಾನಾಮ+31 ಸೂ.

ಜೀವನ

08

25-09-2020

ಆಶ್ವೀಜ ಅಧಿಕ ಶು.೯-ಪೂಷಾ

ಸಿದ್ಧಿದಾತ್ರೀ

ಸಿದ್ಧಿದಾತ್ರೀ

1-2-3, 13+ಮಾತೃಕಾನಾಮ+32 ಸೂ.

ಪೂರ್ಣತೆ

09

26-09-2020

ಆಶ್ವೀಜ ಅಧಿಕ ಶು.೧೦-ಉಷಾ

ಇಂದ್ರಾಣೀ

ಇಂದ್ರಾಣೀ

1-2-3, 13+ಮಾತೃಕಾನಾಮ+34 ಸೂ.

ಬಲವೃದ್ಧಿ

10

27-09-2020

ಆಶ್ವೀಜ ಅಧಿಕ ಶು.೧೧-ಶ್ರವಣ

ರಾಜರಾಜೇಶ್ವರೀ

ರಾಜರಾಜೇಶ್ವರೀ

1-2-3, 13+ಮಾತೃಕಾನಾಮ+35 ಸೂ.

ವಿಜಯ

11

28-09-2020

ಆಶ್ವೀಜ ಅಧಿಕ ಶು.೧೨-ಧನಿಷ್ಠ

ಮಾಯಾ-2

ಜಗತ್ಪ್ರಸೂತಿ -2

1-2-3, 13+ಮಾತೃಕಾನಾಮ+36 ಸೂ.

ಪ್ರಾಪ್ತಿ

12

29-09-2020

ಆಶ್ವೀಜ ಅಧಿಕ ಶು.೧೩-ಶತಭಿಷ

ಕಾಳಿ

ಕಾಳಿಕಾ

1-2-3, 13+ಮಾತೃಕಾನಾಮ+38 ಸೂ.

ಪ್ರಯತ್ನ

13

30-09-2020

ಆಶ್ವೀಜ ಅಧಿಕ ಶು.೧೪-ಪೂಭಾ

ದುರ್ಗಾ

ದುರ್ಗಾ

1-2-3, 13+ಮಾತೃಕಾನಾಮ+40 ಸೂ.

ತಾಟಸ್ಥ್ಯ

14

01-10-2020

ಆಶ್ವೀಜ ಅಧಿಕ ಶು.೧೫-ಉಭಾ-15

ಅಂಬಾ

ಅಂಬಾ

1-2-3, 13+ಮಾತೃಕಾನಾಮ+41 ಸೂ.

ಆಕಾಂಕ್ಷೆ

15

02-10-2020

ಆಶ್ವೀಜ ಅಧಿಕ ಕೃ.೧-ರೇವತಿ

ಬ್ರಾಹ್ಮೀ

ಬ್ರಾಹ್ಮೀ

1-2-3, 13+ಮಾತೃಕಾನಾಮ+42 ಸೂ.

ನಿರ್ಲಿಪ್ತ

16

03-10-2020

ಆಶ್ವೀಜ ಅಧಿಕ ಕೃ.೨-ರೇವತಿ+1

ಮಾಹೇಶ್ವರೀ

ಮಾಹೇಶ್ವರೀ

1-2-3, 13+ಮಾತೃಕಾನಾಮ+43 ಸೂ.

ವಚನ

17

04-10-2020

ಆಶ್ವೀಜ ಅಧಿಕ ಕೃ.೩-ಅಶ್ವಿನಿ

ಕೌಮಾರೀ

ಕೌಮಾರೀ

1-2-3, 13+ಮಾತೃಕಾನಾಮ+44 ಸೂ.

ಶೀಲ

18

05-10-2020

ಆಶ್ವೀಜ ಅಧಿಕ ಕೃ.೩-ಭರಣಿ

ಸಿದ್ಧಿದಾತ್ರೀ

ಸಿದ್ಧಿದಾತ್ರೀ

1-2-3, 13+ಮಾತೃಕಾನಾಮ+45 ಸೂ.

ಸೌಖ್ಯ

19

06-10-2020

ಆಶ್ವೀಜ ಅಧಿಕ ಕೃ.೪-ಕೃತ್ತಿಕಾ

ಇಂದ್ರಾಣೀ

ಇಂದ್ರಾಣೀ

1-2-3, 13+ಮಾತೃಕಾನಾಮ+47 ಸೂ.

ಗುಣ

20

07-10-2020

ಆಶ್ವೀಜ ಅಧಿಕ ಕೃ.೫-ರೋಹಿಣಿ

ರಾಜರಾಜೇಶ್ವರೀ

ರಾಜರಾಜೇಶ್ವರೀ

1-2-3, 13+ಮಾತೃಕಾನಾಮ+50 ಸೂ.

ಧೈರ್ಯ

21

08-10-2020

ಆಶ್ವೀಜ ಅಧಿಕ ಕೃ.೬-ಮೃಗಶಿರಾ

ಮಾಯಾ-3

ಜಗತ್ಪ್ರಸೂತಿ -3

1-2-3, 13+ಮಾತೃಕಾನಾಮ+51 ಸೂ.

ಸಾಧನೆ

22

09-10-2020

ಆಶ್ವೀಜ ಅಧಿಕ ಕೃ.೭-ಆರ್ದ್ರಾ

ಕಾಳಿ

ಕಾಳಿಕಾ

1-2-3, 13+ಮಾತೃಕಾನಾಮ+52 ಸೂ.

ಕ್ಷಮೆ

23

10-10-2020

ಆಶ್ವೀಜ ಅಧಿಕ ಕೃ.೮-ಪುನರ್ವಸು

ದುರ್ಗಾ

ದುರ್ಗಾ

1-2-3, 13+ಮಾತೃಕಾನಾಮ+53 ಸೂ.

ಶ್ರೇಯ

24

11-10-2020

ಆಶ್ವೀಜ ಅಧಿಕ ಕೃ.೯-ಪುಷ್ಯ

ಅಂಬಾ

ಅಂಬಾ

1-2-3, 13+ಮಾತೃಕಾನಾಮ+58 ಸೂ.

ಪ್ರೇಯ

25

12-10-2020

ಆಶ್ವೀಜ ಅಧಿಕ ಕೃ.೧೦-ಆಶ್ಲೇಷ

ಬ್ರಾಹ್ಮೀ

ಬ್ರಾಹ್ಮೀ

1-2-3, 13+ಮಾತೃಕಾನಾಮ+59 ಸೂ.

ದೃಢತೆ

26

13-10-2020

ಆಶ್ವೀಜ ಅಧಿಕ ಕೃ.೧೧-ಮಘ

ಮಾಹೇಶ್ವರೀ

ಮಾಹೇಶ್ವರೀ

1-2-3, 13+ಮಾತೃಕಾನಾಮ+60 ಸೂ.

ಭಕ್ತಿ

27

14-10-2020

ಆಶ್ವೀಜ ಅಧಿಕ ಕೃ.೧೨-ಹುಬ್ಬಾ

ಕೌಮಾರೀ

ಕೌಮಾರೀ

1-2-3, 13+ಮಾತೃಕಾನಾಮ+61 ಸೂ.

ಹರ್ಷ

28

15-10-2020

ಆಶ್ವೀಜ ಅಧಿಕ ಕೃ.೧೪-ಉತ್ತರಾ

ಸಿದ್ಧಿದಾತ್ರೀ

ಸಿದ್ಧಿದಾತ್ರೀ

1-2-3, 13+ಮಾತೃಕಾನಾಮ+62 ಸೂ.

ಪ್ರೀತಿ

29

16-10-2020

ಆಶ್ವೀಜ ಅಧಿಕ ಕೃ.೩೦-ಹಸ್ತಾ

ಇಂದ್ರಾಣೀ

ಇಂದ್ರಾಣೀ

1-2-3, 13+ಮಾತೃಕಾನಾಮ+63 ಸೂ.

ಔದಾರ್ಯ

30

17-10-2020

ಆಶ್ವೀಜ ನಿಜ ಶು.೧-ಚಿತ್ರಾ

ರಾಜರಾಜೇಶ್ವರೀ

ರಾಜರಾಜೇಶ್ವರೀ

1-2-3, 13+ಮಾತೃಕಾನಾಮ+64 ಸೂ.

ವೃತ್ತಿ

31

18-10-2020

ಆಶ್ವೀಜ ನಿಜ ಶು.೨ ಸ್ವಾತಿ

ಮಾಯಾ-4

ಜಗತ್ಪ್ರಸೂತಿ-4

1-2-3,13+ಮಾತೃಕಾನಾಮ+105ಸೂ.

ತ್ಯಾಗ

32

19-10-2020

ಆಶ್ವೀಜ ನಿಜ ಶು.೩ ವಿಶಾಖ

ಕಾಳಿ

ಕಾಳಿಕಾ

1-2-3,13+ಮಾತೃಕಾನಾಮ+106ಸೂ.

ದಾನ

33

20-10-2020

ಆಶ್ವೀಜ ನಿಜ ಶು.೪ ಅನುರಾಧ

ದುರ್ಗಾ

ದುರ್ಗಾ

1-2-3,13+ಮಾತೃಕಾನಾಮ+108 ಸೂ.

ಧರ್ಮ

34

21-10-2020

ಆಶ್ವೀಜ ನಿಜ ಶು.೫ ಜ್ಯೇಷ್ಠ

ಅಂಬಾ

ಅಂಬಾ

1-2-3,13+ಮಾತೃಕಾನಾಮ+113 ಸೂ.

ಅಭಯ

35

22-10-2020

ಆಶ್ವೀಜ ನಿಜ ಶು.೬ ಮೂಲ

ಬ್ರಾಹ್ಮೀ

ಬ್ರಾಹ್ಮೀ

1-2-3,13+ಮಾತೃಕಾನಾಮ+114 ಸೂ.

ಸಂಪದ

36

23-10-2020

ಆಶ್ವೀಜ ನಿಜ ಶು.೭ ಪೂಷಾ

ಮಾಹೇಶ್ವರೀ

ಮಾಹೇಶ್ವರೀ

1-2-3,13+ಮಾತೃಕಾನಾಮ+115 ಸೂ.

ಜೀವನ

37

24-10-2020

ಆಶ್ವೀಜ ನಿಜ ಶು.೮ ಉಷಾ

ಕೌಮಾರೀ

ಕೌಮಾರೀ

1-2-3,13+ಮಾತೃಕಾನಾಮ+116 ಸೂ.

ತೃಪ್ತಿ

38

25-10-2020

ಆಶ್ವೀಜ ನಿಜ ಶು.೯ ಶ್ರವಣ

ಸಿದ್ಧಿದಾತ್ರೀ

ಸಿದ್ಧಿದಾತ್ರೀ

1-2-3,13+ಮಾತೃಕಾನಾಮ+117 ಸೂ.

ವೈರಾಗ್ಯ

39

26-10-2020

ಆಶ್ವೀಜ ನಿಜ ಶು.೧೦ ಧನಿಷ್ಠ

ಇಂದ್ರಾಣೀ

ಇಂದ್ರಾಣೀ

1-2-3,13+ಮಾತೃಕಾನಾಮ+120 ಸೂ.

ಅನುಗ್ರಹ

40

27-10-2020

ಆಶ್ವೀಜ ನಿಜ ಶು.೧೧ ಶತಭಿಷ

ರಾಜರಾಜೇಶ್ವರೀ

ರಾಜರಾಜೇಶ್ವರೀ

1-2-3,13+ಮಾತೃಕಾನಾಮ+121 ಸೂ.

ಕೃತಕೃತ್ಯತೆ

41

28-10-2020

ಆಶ್ವೀಜ ನಿಜ ಶು.೧೨ ಪೂಭಾ

ಮಾಯಾ-5

ಜಗತ್ಪ್ರಸೂತಿ-5

1-2-3, 13+ಮಾತೃಕಾನಾಮ+125 ಸೂ.

ಪೂರ್ಣಾನಂದ-1

42

29-10-2020

ದಿಗ್ವಿಜಯ

ಆಶ್ವೀಜ ನಿಜ ಶು.೧೩ ಉಭಾ

ಕಾಳಿ-6

ಕಾಳಿಕಾ

1-2-3, 13+ಮಾತೃಕಾನಾಮ+126 ಸೂ.

ಪರೋಕ್ಷಪ್ರಿಯಾ-2

 


1) ಪೃಥ್ವಿ 2) ಜಲ 3) ಅಗ್ನಿ 4) ವಾಯು 5) ಆಕಾಶ 6) ಕಾಳಿಕೆಯಾದಿ ಆತ್ಮದರ್ಶನ

 

ದೇವತಾ ಭಾಗ - ದಿನಗಳು - ಕಲ್ಪ - ನಮಸ್ಕಾರ ಸಂಖ್ಯೆ

1) ಮಾಯಾ-೧ ರಿಂದ ೧೦ ದಿನಗಳು : ಆಕಾಶಕಲ್ಪ - 5

2) ಮಾಯಾ-೨ ರಿಂದ ೧೦ ದಿನಗಳು : ವಾಯುಕಲ್ಪ - 15

3) ಮಾಯಾ-೩ ರಿಂದ ೧೦ ದಿನಗಳು : ಅಗ್ನಿಕಲ್ಪ - 45

4)  ಮಾಯಾ-೪ ರಿಂದ ೧೦ ದಿನಗಳು : ಜಲ ಕಲ್ಪ - 140

5) ಮಾಯಾ-೫ ರಿಂದ ೨ ದಿನಗಳು : ಪೃಥ್ವಿ ಕಲ್ಪ - 560  = ಶಕ್ತರು ಮಾಡುವಂತಹದ್ದು.


ತತ್ವಾಧಾರಿತವಾಗಿ ಪ್ರಧಾನ ದುರ್ಗಾ. ಆ ಸಂಬಂಧಿ ಇತರೆ ಅನುಷ್ಠಾನ ಸೇರಿಸಿಕೊಳ್ಳಬಹುದು. ಹಾಗೇ ಉಕ್ತ ಸೂಕ್ತದೇವತಾ ಭಾಗವೂ ಸೇರಿಸಬಹುದು.

ಹಾಗೇ ಶಕ್ತರು – ಕೆಳಗೆ ಸೂಚಿಸಿದ ವಸ್ತುಗಳನ್ನು ದಾನ ಮಾಡಬಹುದು

1) ಹಳದೀ ಅಥವಾ ಕಷಾಯವಸ್ತ್ರ

2) ಕೃಷ್ಣಾಜಿನ, ಉಪವೀತ, ಕಮಂಡಲು, ದರ್ಭೆ

3) ತಮ್ಮ ಕುಲದೇವರ ಪ್ರತೀಕ ಚಲಾವಣೆಯ ನಾಣ್ಯ, ಬೆಳ್ಳಿ ನಾಣ್ಯ, ಚಿನ್ನದ ನಾಣ್ಯ

4) ಪುರಾಣ ಗ್ರಂಥಗಳು, ಸ್ಮೃತಿ, ಇತಿಹಾಸ ಗ್ರಂಥಗಳು.


ಇಂತು

ಕೆ. ಎಸ್. ನಿತ್ಯಾನಂದ


(ಸೂಚನೆ:- ಮಾತೃಕಾ ಮಂಡಲ ಬರೆದು ಅದರಲ್ಲಿ ವಿಧಿವತ್ತಾಗಿ ಷೋಡಶ ಮಾತೃಕೆಯರನ್ನು ಪೂಜಿಸುವುದು. ಚಂಡಿಕಾ ಹೋಮವಿದ್ದರೆ ಪ್ರತ್ಯೇಕ ಚಂಡಿಕಾ ಯಂತ್ರ ಅಥವಾ ದುರ್ಗಾಯಂತ್ರ ಬರೆದುಕೊಂಡು ದೀಪವಿಟ್ಟು ಪೂಜಿಸಿ ದುರ್ಗಾ ನಮಸ್ಕಾರ ಮಾಡುವುದು. ಚಂಡಿಕಾ ಹೋಮವಿಲ್ಲದಿದ್ದರೆ ಮಾತೃಕಾ ಮಂಡಲದಲ್ಲಿಯೇ ದೀಪಗಳನ್ನು ಇಟ್ಟು ಪಂಚದುರ್ಗಾ ಮತ್ತು ಷೋಡಶ ಮಾತೃಕೆಯರನ್ನು ಒಟ್ಟಿಗೇ ಪೂಜಿಸುವುದು. ಮಾತೃಕಾ ಪೂಜಾ ವಿಧಿಯಲ್ಲಿ ಇದೆಲ್ಲಾ ಇರುತ್ತದೆ. ಹೋಮದಲ್ಲಿ ವಿಧಿಯಲ್ಲಿ ಪಟ್ಟಿಯಲ್ಲಿ ನೀಡಿರುವಂತೆ ಆಯಾ ಮಾತೃಕಾ ನಾಮದಿಂದ ಆಹುತಿಯಾಗುತ್ತದೆ. ಮಂಡಲ ಪೂಜಾ ಹೋಮಗಳನ್ನು ವಿಧಿವತ್ತಾಗಿ ಮಾಡಬೇಕಿದ್ದಲ್ಲಿ ಪೂರ್ವಪಾಠಗಳು ಆಗಿರಬೇಕು. ಅವೆಲ್ಲ ತಿಳಿದಿಲ್ಲವೆಂದರೆ ಹೇಗೇಗೋ ಮಾಡುವುದಕ್ಕಿಂತ ಸಹಜವಾಗಿ ಮಂಡಲ ಹಾಕದೆ ದೇವತಾ ಸಾಕಾರ ಪೂಜಾ ದ್ಯೋತಕವಾಗಿ ಬಳಸುವ ನ್ಯಾಸದಲ್ಲಿಯೇ ಉಕ್ತ ದೇವಿಯರನ್ನು ಪೂಜಿಸಬಹುದು. ಇಲ್ಲಿ ಶ್ರದ್ಧಾ-ಭಕ್ತಿಗಳೇ ಮುಖ್ಯವೇ ಹೊರತು ಅದ್ದೂರಿ ಆಡಂಬರಗಳಲ್ಲ ಎಂದು ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರು ಹೇಳಿದ್ದಾರೆ.)