Saturday, 31 October 2020

ವೇದ ವಿಜ್ಞಾನದಲ್ಲಿ "ದೇವ ವಿಜ್ಞಾನ" ಅಧ್ಯಾಯ - ೧

-:: ಪ್ರಸ್ತಾವನೆ ::- 

ನಮ್ಮ ಗುರುಗಳಾದ ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು, ಇವರು ಆಗಸ್ಟ್ ೨೦೨೦ರ ಋತ್ವಿಕ್ ವಾಣಿ ಮಾಸ ಪತ್ರಿಕೆಯಲ್ಲಿ ಋತ್ವಿಕ್ ವಾಣಿ ಬಳಗಕ್ಕಾಗಿ ಪ್ರಕಟಿಸಿದ ಮಾಹಿತಿ (https://veda-vijnana.blogspot.com/2020/09/blog-post.html) ಮತ್ತು ಅವರ ಸಾಮೀಪ್ಯ ಸತ್ಸಂಗದ ಫಲವಾಗಿ ನಮ್ಮ ಮನೆಯಲ್ಲಿಯೂ ೨೦೨೦ರ ಆಶ್ವಯುಜ ಮಾಸದ ವಿಶೇಷ ಅಧ್ಯಾತ್ಮ ವೃದ್ಧಿ ಪ್ರಯೋಗಾಂಗ ೪೨ ದಿನಗಳ ಪ್ರಾಕೃತಿಕ ದೇವತಾ ಉಪಾಸನೆಯನ್ನು ಕೈಗೊಂಡೆವು. ಷೋಡಶ ಮಾತೃಕಾ ಮಂಡಲದಲ್ಲಿ ಪಂಚದುರ್ಗಾ ಮತ್ತು ೪೨ ದಿನಗಳಲ್ಲಿ ೪ ಸಲ ಆವರ್ತನೆಗೊಳ್ಳುವ ಸ್ವಭಾವ ಮೂಲದ ಪ್ರಕೃತಿಯನ್ನು ಒಲಿಸಿ ಜಯಿಸಿಕೊಳ್ಳುವ ನವರಾತ್ರಿ. ನಿತ್ಯಪೂಜೆ ಮತ್ತು ತದ್ದೇವತಾ ಹೋಮರೂಪೀ ಹೋರಾಟದಿಂದ ಪಡೆದ ದಿಗ್ವಿಜಯ ರೂಪೀ "ವಿಜಯದಶಮಿ". ಅದನ್ನು ಉತ್ತರಿಸಿ ಜಗತ್ಪ್ರಸೂತೀ ರೂಪೀ ಮಾಯೆಯಿಂದ ಪೂರ್ಣಾನಂದ ಹಾಗೂ ಕೊನೆಗೆ ಕಾಳಿಕಾ ರೂಪೀ ಪ್ರಕೃತಿಕ ಬೀಜೋತ್ಪತ್ತಿ. ಅದರ ಮುಖೇನ ನಿರಂತರ ಪ್ರವರ್ತನೆಯಲ್ಲಿರುವ ಪ್ರಕೃತಿಚಕ್ರದ ಜ್ಞಾನ ಪಡೆಯುವ ಉದ್ದೇಶ. ಇದಕ್ಕೆಲ್ಲ ನಿತ್ಯವೂ ಸಂಯೋಜನೆಗೆ ನೀಡಿದ್ದ ಋಗ್ವೇದದ ಸೂಕ್ತಗಳು, ಆಯಾದಿನದ ನಕ್ಷತ್ರ, ನಕ್ಷತ್ರಾಧಿಪತಿ ಗ್ರಹ, ದೇವತಾ, ತತ್ವ ಚಿಂತನೆ, ಎಲ್ಲವೂ ಸೂತ್ರೀಕೃತ ಕೋಷ್ಠಕದಂತೆ ಸುಲಭ ಗ್ರಾಹ್ಯವಾಗಿದ್ದವು. ಬರೇ ಬಾಹ್ಯ ಯಜ್ಞವು ಮಾತ್ರವಲ್ಲ ಆಂತರ್ಯದಲ್ಲಿ ನಿತ್ಯವೂ ಜ್ಞಾನಯಜ್ಞವಾಗಬೇಕು, ಅದರ ಫಲವು ಸಾರ್ವಜನಿಕವಾಗಿ ದೊರಕುವಂತಾಗಬೇಕು. ಎಲ್ಲರಿಗೂ ಅಧ್ಯಾತ್ಮದ ರುಚಿಯನ್ನಾದರೂ ಸವಿಯುವಂತೆ ಪ್ರೇರೇಪಿಸಬೇಕು ಎಂಬ ಸದಾಶಯವಿತ್ತು. ಈ ಸಂದರ್ಭದಲ್ಲಿ ಪ್ರತಿನಿತ್ಯ ಅಧ್ಯಯನ ಮಾಡಿ ನಮ್ಮಂತಹಾ ಪಾಮರರಿಗಾಗಿಯೇ ಶೋಧನಾರೂಪದಲ್ಲಿ ಬರೆಯುತ್ತಿದ್ದ "ದೇವ ವಿಜ್ಞಾನ"ದ ಮೊದಲನೆಯ ಅಧ್ಯಾಯಕ್ಕೆ ಸಂಬಂಧಪಟ್ಟ ವಿಚಾರಗಳ ಸಂಗ್ರಹವಿದು. ಈ ಲೇಖನ ಸರಣಿಯು ಜನಮನಕ್ಕೆ ಮುಟ್ಟಲೆಂದೇ ಸಾಧ್ಯವಾದಷ್ಟು ಸರಳ ಭಾಷಾಶೈಲಿಯನ್ನು ಅಡವಳಿಕೊಂಡು, ಪಾಖಂಡೀ ವಿದ್ವಾಂಸರನ್ನು ದೂರವಿಡಲೆಂದೇ ವಿಶೇಷ ಸೂಚನೆಯೊಂದಿಗೆ ಪ್ರಕಟಿಸಲಾಯಿತು. ಆ ಸೂಚನೆ ಏನೆಂದರೆ - "ಈ ಲೇಖನ ಸರಣಿ ವಿದ್ವಾಂಸರಿಗಲ್ಲ, ನಮ್ಮಂತಹಾ ಪಾಮರರಿಗೆ. ವಿದ್ವಾಂಸರು ಓದಲೇಬೇಡಿ". ಈ ಕಿರು ಪ್ರಸ್ತಾವನೆಯ ಮೂಲಕ ವಿಷಯ ಸೂಚಿಯೊಂದಿಗೆ ನೇರವಾಗಿ ವಿಷಯ ಪ್ರವೇಶ ಮಾಡೋಣ.


ಅಧ್ಯಾತ್ಮ ವಿಜ್ಞಾನಾಸಕ್ತರು ಈ ಜ್ಞಾನಕಣಜದಿಂದ ಧಾನ್ಯ ಸಂಗ್ರಹಿಸಿ ಶ್ರದ್ಧಾ-ಭಕ್ತಿಯೆಂಬ ಅಗ್ನಿಯಿಂದ ಅಡುಗೆ ಮಾಡಿ ನಿಮ್ಮ ಸುತ್ತಮುತ್ತಲಿನವರಿಗೂ ಬಡಿಸಿ ಉಂಡು ತೃಪ್ತರಾದರೆ ಕೃಷಿ ಮಾಡಿದ ರೈತನಿಗೂ ಲೋಕಕ್ಕೂ ಆನಂದ ಪ್ರಾಪ್ತಿ.

ಇಂತು ಸತ್ಸಂಗಾಸಕ್ತ,

ಹೇಮಂತ್ ಕುಮಾರ್ ಜಿ

 

Wednesday, 14 October 2020

ಬ್ರಹ್ಮಪುರೀವೇದಗಳು ಹಾಗೂ ಉಪನಿಷತ್ತುಗಳಲ್ಲಿ ಈ ಶರೀರವನ್ನು ಬ್ರಹ್ಮಪುರೀ ಎನ್ನಲಾಗಿದೆ. 

ಈ ಪುರದಲ್ಲಿ ನೆಲೆಸಿರುವುದರಿಂದಲೇ ಬ್ರಹ್ಮಕ್ಕೆ ಪುರುಷನೆಂದು ಕರೆಯಲಾಯಿತು -

"ಊರ್ಧ್ವೋ ನು ಸೃಷ್ಟಾ೩ಸ್ತಿರ್ಯಙ್ ನು ಸೃಷ್ಟಾ೩ಃ

ಸರ್ವಾ ದಿಶಃ ಪುರುಷ ಆ ಬಭೂವಾ೩ |

ಪುರಂ ಯೋ ಬ್ರಹ್ಮಣೋ ವೇದ ಯಸ್ಯಾಃ ಪುರುಷ ಉಚ್ಯತೇ ||"

- ಅಥರ್ವ ವೇದ ೧೦||೨೮

ಅಂದರೆ - ಮೇಲೆ-ಕೆಳಗೆ, ತ್ರಿಪಾದ-ಏಕಪಾದದಲ್ಲಿ, ಅಮೃತ-ಮರ್ತ್ಯದಲ್ಲಿ ಎಲ್ಲೆಡೆ ಪುರುಷವೆಂಬುದರದ್ದೇ ಸೃಷ್ಟಿ ಇದೆ; ಎಲ್ಲಾ ದಿಕ್ಕುಗಳಲ್ಲಿ ಪುರುಷವೇ ಅಭಿವ್ಯಾಪ್ತವಾಗಿದೆ. ಯಾರು ಬ್ರಹ್ಮವೆಂಬ ಸಂಜ್ಞೆಯೇ ಪುರುಷವೆಂಬುದಕ್ಕೆ ಅನ್ವಯವಾಗಲು ಕಾರಣೀಭೂತವಾದ ಆ ಬ್ರಹ್ಮವೆಂಬುದರ ಪುರವನ್ನು ತಿಳಿದಿರುತ್ತಾರೋ, ಅವರು ಅಮೃತತ್ವವನ್ನು ಪಡೆಯುತ್ತಾರೆ. "ಪುರೀ ಶಯಾತ್ ಪುರುಷಃ" ಎಂಬ ನಿರುಕ್ತವೂ ಬ್ರಾಹ್ಮಣ ಗ್ರಂಥಗಳಲ್ಲಿ ಸಿಗುತ್ತದೆ. ಈ ಸಮಸ್ತ ವಿಶ್ವ ಅಥವಾ ಅನಂತ ಬ್ರಹ್ಮಾಂಡವು ಆ ಬ್ರಹ್ಮದ ರಚನೆಯೇ ಆಗಿದೆ. ವಿಶ್ವವು ಕ್ಷರ ಬ್ರಹ್ಮವಾಗಿದೆ, ಪುರುಷವು ಅಕ್ಷರ ಬ್ರಹ್ಮವಾಗಿದೆ. ಅಕ್ಷರ ಬ್ರಹ್ಮದಿಂದ ಕ್ಷರ ಬ್ರಹ್ಮದ ಉತ್ಪತ್ತಿಯಾಗುತ್ತದೆ. ಅದು ಈ ಲೋಕಗಳನ್ನು ರಚಿಸುತ್ತಾ ತಾನೇತಾನಾಗಿ ಅವುಗಳಲ್ಲಿ ಪ್ರವಿಷ್ಟವಾಗುತ್ತಿದೆ. ಬ್ರಹ್ಮ ಹೊರತಾಗಿ ಏನೂ ಇಲ್ಲ -

"ಪುರುಷ ಏವೇದಂ ಸರ್ವಂ ಯದ್ ಭೂತಂ ಯಚ್ಚ ಭಾವ್ಯಮ್" |

- ಶುಕ್ಲ ಯಜುರ್ವೇದ ೩೧|

ಆ ಪುರುಷದಲ್ಲಿ ಎರಡು ಭಾಗಗಳಿವೆ - ಅಮೃತ ಭಾಗ ಮತ್ತು ಅನ್ನ ಭಾಗ. ಅಮೃತ ಭಾಗವೇ ಅಕ್ಷರ ಎಂದು ಕರೆಯಲ್ಪಡುತ್ತದೆ, ಅದು ಅವಿನಾಶಿ ಹಾಗೂ ನಿತ್ಯವಾಗಿದೆ. ಅನ್ನವು ಕ್ಷರ ಎಂದು ಕರೆಯಲ್ಪಟ್ಟಿದೆ. ಅದು ನಶ್ವರ, ಅಚಿಂತ್ಯ ಅಥವಾ ಪರಿವರ್ತನಾಶೀಲವಾಗಿದೆ. ಎಷ್ಟು ಸೃಷ್ಟಿಗಳು ಅಥವಾ ಎಷ್ಟು ಬ್ರಹ್ಮಾಂಡಗಳಿವೆಯೋ, ಅವೆಲ್ಲವೂ ಅನ್ನ ಭಾಗವೇ ಆಗಿವೆ. ಅವುಗಳಿಗಾಗಿ ವೇದವು ಇಂತೆಂದಿದೆ -

"ಏತಾವಾನಸ್ಯ ಮಹಿಮಾಽತೋ ಜ್ಯಾಯಾಂಶ್ಚ ಪುರುಷಃ |

ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ||"

- ಶುಕ್ಲ ಯಜುರ್ವೇದ ೩೧|

ಅಂದರೆ - ಕೋಟ್ಯಾನುಕೋಟಿ ಬ್ರಹ್ಮಾಂಡಗಳು ಆ ಬ್ರಹ್ಮದ ಮಹಿಮೆ! ಎಲ್ಲಾ ವಿಶ್ವಗಳು ಅದರ ಒಂದು ಪಾದದಲ್ಲಿದೆ. ಸ್ವಯಂ ಪುರುಷ ಅಥವಾ ಬ್ರಹ್ಮವು ಸಮಸ್ತ ಬ್ರಹ್ಮಾಂಡಗಳಿಗಿಂತ ಎತ್ತರದಲ್ಲಿದೆ. ಅದರ ತ್ರಿಪಾದ ಭಾಗವು ಅಮೃತ! ಅದೇ ದ್ಯುಲೋಕದಲ್ಲಿ ಅಥವಾ ಭೂಲೋಕ ಮತ್ತು ಅಂತರಿಕ್ಷಕ್ಕೂ ಮೇಲ್ಗಡೆ ಇದೆ.

ಈ ರೀತಿ ಬ್ರಹ್ಮ ಅಥವಾ ಪುರುಷವೇ ಕ್ಷರ ಮತ್ತು ಅಕ್ಷರ ಎಂಬೆರಡು ಸಾಪೇಕ್ಷ ಭಾಗಗಳನ್ನು ಹೊಂದಿರುತ್ತದೆ. ಇವುಗಳ ವಿವಿಧ ಕಲ್ಪನೆಗಳು ಕೆಳಗೆ ನೀಡಿರುವ ಪಟ್ಟಿಕೆಯಿಂದ ಸ್ಪಷ್ಟವಾಗುತ್ತದೆ -

೧. ಅಮೃತ, ಅಕ್ಷರ, ಊರ್ಧ್ವ, ತ್ರಿಪಾದ, ಅನ್ನಾದ ಅಥವಾ ಅಮೃತ, ಅನಂತ ಪುರುಷ.

೨. ಮರ್ತ್ಯ, ಕ್ಷರ, ಅಧಃ, ಏಕ ಪಾದ, ಅನ್ನ ಅಥವಾ ಮರ್ತ್ಯ ಭಾಗ, ಮಹಿಮಾ ಭಾಗ, ಅಥವಾ ವಿಶ್ವ ಭೂತ.

ಈ ರೀತಿ ಅಕ್ಷರ-ಕ್ಷರ, ಅಮೃತ-ಮರ್ತ್ಯ, ಎರಡೂ ಅವಿನಾಭೂತವಾಗಿವೆ; ಒಂದರೊಳಗೊಂದು ಬೆಸೆದಿವೆ. ಈ ಕ್ಷರ ಭಾಗವನ್ನೇ "ಪುರ" (ಪುರೀ) ಎನ್ನಲಾಗಿದೆ. ಈ ಪುರದಲ್ಲಿ ನಿವಾಸಿಸುವ ಅಕ್ಷರವೇ "ಪುರುಷ". ಈ ಪುರವು ಎಲ್ಲಾ ದಿಕ್ಕುಗಳಲ್ಲಿ ಅಮೃತದಿಂದ ಆವರಿಸಲ್ಪಟ್ಟಿದೆ; ಇದರ ಆಧಾರವೇ ಅಮೃತ. ಅದನ್ನು ಹೀಗೆಂದಿದೆ - 

"ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಮ್ |

ತಸ್ಮೈ ಬ್ರಹ್ಮ ಚ ಬ್ರಾಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ ||

ನ ವೈ ತಂ ಚಕ್ಷುರ್ಜಹಾತಿ ನ ಪ್ರಾಣೋ ಜರಸಃ ಪುರಾ |

ಪುರಂ ಯೋ ಬ್ರಹ್ಮಣೋ ವೇದ ಯಸ್ಯಾಃ ಪುರುಷ ಉಚ್ಯತೇ ||"

- ಅಥರ್ವ ವೇದ ೧೦||೨೯-೩೦ 

ಅಂದರೆ - ಎಲ್ಲೆಡೆ ಅಮೃತದಿಂದ ಪರಿಪೂರ್ಣವಾಗಿರುವ ಈ ಬ್ರಹ್ಮಪುರಿಯನ್ನು ಬ್ರಹ್ಮಜ್ಞಾನಿಗಳು ತಿಳಿದಿರುತ್ತಾರೆ. ಆತ್ಮಜ್ಞಾನಿ ಮಹಾತ್ಮರು ಬ್ರಹ್ಮವೇತ್ತರಾಗಿರುತ್ತಾರೆ; ಅವರನ್ನೇ ಕ್ಷೇತ್ರಜ್ಞರೆನ್ನಲಾಗಿದೆ. ಅವರು ಈ ಶರೀರರೂಪೀ ಕ್ಷೇತ್ರವನ್ನು ಹಾಗೂ ಇದರೊಳಗಿರುವ ಕ್ಷೇತ್ರಜ್ಞ ಪುರುಷನನ್ನು ಸಮಾಧಿಯ ಮುಖೇನ ಅನುಭವಕ್ಕೆ ತಂದುಕೊಳ್ಳುತ್ತಾರೆ -

"ಯಮಕ್ಷರಂ ಕ್ಷೇತ್ರವಿದೋ ವಿದುಸ್ತಮಾತ್ಮಾನಮಾತ್ಮನ್ಯವಲೋಕಯನ್ತಮ್ |" 

- ಕುಮಾರಸಂಭವ ೩|೫೦ 

ಅವರ ಪ್ರಾಣ ಹಾಗೂ ಇಂದ್ರಿಯಗಳು ಆಯಸ್ಸು ಇರುವವರೆಗೂ ಅಕ್ಷೀಣ ತೇಜಸ್ಸುಳ್ಳವಾಗಿರುತ್ತವೆ. ಅವುಗಳಿಗೆ ಮೃತ್ಯುವಿನ ಸಂಪರ್ಕ ಉಂಟಾಗುವುದಿಲ್ಲ. ಮಹರ್ಷಿ ಪಿಪ್ಪಲಾದರು ಗಾರ್ಗ್ಯರಿಗೆ ಏನು ಹೇಳಿದ್ದರೆಂದರೆ ಈ ನಗರಿಯಲ್ಲಿ ಪ್ರಾಣ ರೂಪೀ ಅಗ್ನಿಗಳು ನಿರಂತರ ಪ್ರಜ್ವಲಿಸುತ್ತಿರುತ್ತವೆ -

’ಪ್ರಾಣಗ್ನಯ ಏವೈತಸ್ಮಿನ್ಪುರೇ ಜಾಗ್ರತಿ’ |

- ಪ್ರಶ್ನೋಪನಿಷತ್ ೪| 

ಆ ಪ್ರಾಣದ ಅಗ್ನಿಗಳಾವವು? ಹೊರಗೆ ಕರ್ಮಕಾಂಡದ ಅನುಸಾರ ವೈಧ-ಯಜ್ಞ ಮಾಡಲಾಗುತ್ತದೆ. ಅದರ ಅನುರೂಪೀ ಅಧ್ಯಾತ್ಮಯಜ್ಞವು ಈ ದೇಹದಲ್ಲಿಯೂ ನಡೆಯುತ್ತಿರುತ್ತದೆ. ಉದಾ -

"ಪುರುಷೋ ವಾವ ಯಜ್ಞಃ" |

ಛಾಂ. ೩|೧೬|೧, ಶತಪಥ ೧||| 

ಹಾಗಾಗಿ ಬಾಹ್ಯ ಅಗ್ನಿತ್ರಯಗಳು ಶರೀರದೊಳಗೆ ಹೇಗಿವೆ ಎಂದು ಪಿಪ್ಪಲಾದರು ಪರಿಚಯಿಸುತ್ತಾರೆ -

೧. ಗಾರ್ಹಪತ್ಯ = ಅಪಾನ = ಉದರ ಸ್ಥಾನೀಯ.

೨. ದಕ್ಷಿಣಾಗ್ನಿ = ವ್ಯಾನ = ಹೃದಯ ಸ್ಥಾನೀಯ.

೩. ಆಹವನೀಯ = ಪ್ರಾಣ = ಮುಖ ಸ್ಥಾನೀಯ.

ಕಠೋಪನಿಷತ್ತಿನಲ್ಲಿಯೂ ಈ ಶರೀರವನ್ನು ೧೧ ಬಾಗಿಲುಗಳುಳ್ಳ ಪುರವೆಂದು ಹೇಳಿದೆ - 

"ಪುರಮೇಕಾದಶದ್ವಾರಮಜಸ್ಯಾವಕ್ತ್ರಚೇತಸಃ |

ಅನುಷ್ಠಾಯ ನ ಶೋಚತಿ ವಿಮುಕ್ತಶ್ಚ ವಿಮುಚ್ಯತೇ ||"

ಅಂದರೆ - ಅಜ ಪುರುಷಕ್ಕೆ ಈ ೧೧ ದ್ವಾರಗಳುಳ್ಳ ಪುರವಿದೆ. ಅವಕ್ರಚಿತ್ತದಿಂದ ಯಾರು ಇದರಲ್ಲಿ ನಿವಾಸ ಮಾಡುತ್ತಾರೋ, ಅವರು ಶೋಕವನ್ನು ಹೊಂದುವುದಿಲ್ಲ ಹಾಗೂ ಶರೀರವು ಕಳಚಿದ ನಂತರ (ಬಂಧ) ಮುಕ್ತರಾಗುತ್ತಾರೆ. ನೋಡಿ, ಇದೇ ಆ ಅಮೃತ ಪುರುಷ. 

ಚಿತ್ತವು ಕಂಚಿನಂತೆ. ಕಂಚಿನಲ್ಲಿ ಡೊಂಕುತನ ಹೆಚ್ಚಿರುವುದರಿಂದ ಸೂರ್ಯನ ಪ್ರತಿಬಿಂಬವು ನಿಲ್ಲುವುದಿಲ್ಲ. ಋಜು ಅಥವಾ ನೇರವಾಗಿ ಕನ್ನಡಿಯಲ್ಲಿ ಸೂರ್ಯ-ಕಿರಣಗಳು ಯಥಾರ್ಥ ಪ್ರತಿಬಿಂಬವನ್ನು ಮೂಡಿಸುತ್ತವೆ. ಇದೇ ರೀತಿ ಅವಕ್ರಚೇತಾ ಪುರುಷದಲ್ಲಿ ಬ್ರಹ್ಮದ ತೇಜವೂ ನೇರವಾಗಿಯೇ ಗೃಹೀತವಾಗುತ್ತದೆ. ಇದೇ ಕಾರಣದಿಂದ ಆ ಪುರಿಯಲ್ಲಿ ಬ್ರಹ್ಮ-ಪ್ರಕಾಶವು ಜಗಮಗಿಸುತ್ತಿರುತ್ತದೆ.

ಈ ರೀತಿ ಋಷಿಗಳು ಅಧ್ಯಾತ್ಮ-ಜ್ಞಾನದ ಆನಂದಮಯ ಸ್ಥಿತಿಯಲ್ಲಿ ಬ್ರಹ್ಮವೇತ್ತಾ ಹಾಗೂ ಬ್ರಹ್ಮಪುರಿಯ ವಿಲಕ್ಷಣ ಸಂಬಂಧಗಳ ಗುಣಗಾನ ಮಾಡಿದ್ದಾರೆ. ಇವರ ನಿತ್ಯ ಅಮೃತ-ಸಂದೇಶವನ್ನು ಮುಮುಕ್ಷುಗಳು ಕೇಳಿಸಿಕೊಳ್ಳುತ್ತಿರುತ್ತಾರೆ. ಯಾವ ಮಹಾತ್ಮರು ಈ ಬ್ರಹ್ಮಪುರಿಯಲ್ಲಿ ರಸದಿಂದ ತೃಪ್ತರಾಗಿ ನೆಲೆಸುತ್ತಾರೋ, ಅವರಿಗೇ ಶಾಂತಿ ಮತ್ತು ಆನಂದ ಲಭಿಸುವಂತಹದ್ದು. ಆ ಆತ್ಮತತ್ವವು ಸ್ವಯಂ ರಸರೂಪವಾಗಿದೆ -

ಅಕಾಮೋ ಧೀರೋ ಅಮೃತಃ ಸ್ವಯಮ್ಭೂ ರಸೇನ ತೃಪ್ತೋ ನ ಕುತಶ್ಚನೋನಃ |

ತಮೇವ ವಿದ್ವಾನ್ ನ ವಿಭಾಯ ಮೃತ್ಯೋರಾತ್ಮಾನಂ ಧೀರಮಜರಂ ಯುವಾನಮ್ || 

- ಅಥರ್ವ ವೇದ ೧೦||೪೪ 

ಆ ರಸಸ್ವರೂಪೀ ಈಶ್ವರದ ಸಾಕ್ಷಾತ್ಕಾರವೇ ಎಲ್ಲಕ್ಕಿಂತ ಉತ್ಕೃಷ್ಟ ಮಧು. ಉಪನಿಷತ್ತುಗಳಲ್ಲಿ ಆ ಜ್ಞಾನವನ್ನು ಮಧುವಿಧ್ಯೆ ಎಂದಿದ್ದಾರೆ. ಆ ಮಧು ಅಥವಾ ಸೋಮದ ಆಸ್ವಾದನೆ ಮಾಡಿದ ನಂತರ ಮನುಷ್ಯರು ನಿಜವಾಗಿ ಅಕಾಮರಾಗುತ್ತಾರೆ ಹಾಗೂ ಮೃತ್ಯುವಿನ ಭಯದಿಂದ ಪಾರಾಗುತ್ತಾರೆ. 

- ಹೇಮಂತ್ ಕುಮಾರ್ ಜಿ

Tuesday, 13 October 2020

ದ್-ದ-ದಾ - ಗುಡುಗುಡಿಸಿ ನುಡಿದುದದು ದೈವೀ ವಾಕ್


ಬೃಹದಾರಣ್ಯಕ ಉಪನಿಷತ್ತಿನ ಆಧುನಿಕ ವ್ಯಾಖ್ಯಾನಗಳಲ್ಲಿ ಮರೆತು ಬಿಟ್ಟಿರುವ ಹ್ರಸ್ವ, ದೀರ್ಘ, ಪ್ಲುತಗಳ ಮಹತ್ವವನ್ನು ಸರ್ವಭಾಷಾಮಯೀ, ಸರ್ವಶಾಸ್ತ್ರಮಯೀ ಕಾಲಾತೀತ ಸಿರಿಭೂವಲಯದಿಂದ ಪೂರೈಸಲಾಗಿದೆ. ಹೆಚ್ಚಿನ ವ್ಯಾಖ್ಯಾನವನ್ನು ೩೫೦೦ ವರ್ಷಗಳಿಗೂ ಹಿಂದಿನ ಶಾರ್ಙ್ಘ್ಯಧರನ ಜ್ಯೋತಿರಾಯುರ್ವೇದದಿಂದ ಆಯ್ದು ಪೋಣಿಸಲಾಗಿದೆ. ಶ್ರೀಕ್ಷೇತ್ರ ನಾಗವೃಜ, ಪಾವಂಜೆಯ ಮಹಾವ್ರತ ದೀರ್ಘಸತ್ರ ಯಾಗದ ಸಂದರ್ಭದಲ್ಲಿ ಬೃಹದಾರಣ್ಯಕದ ವಾಕ್ಯಾರ್ಥ ಗೋಷ್ಠಿಯಲ್ಲಿ ಮಂಡಿಸಲ್ಪಟ್ಟ ಒಂದು ಭಾಗದ ವಿಚಾರವನ್ನು ಇಲ್ಲಿ ಕೊಡಲಾಗಿದೆ.

ವ್ಯಾಖ್ಯಾನ - ೧

ಶಬ್ದ ನಿತ್ಯವು. ಅರ್ಥ ನಿತ್ಯವು. ಶಬ್ದ ಹಾಗೂ ಅರ್ಥದ ಸಂಬಂಧವೂ ನಿತ್ಯವು. ಅದೇ ದೈವೀ-ವಾಕ್ ಆಗಿದೆ. ಆ ದೈವೀ-ವಾಕ್ಕಿನ ಸಂಕೇತವೇ ಮೇಘದ ಗರ್ಜನೆಯಲ್ಲಿ ನಮಗೆ ಪ್ರಾಪ್ತವಾಗುತ್ತದೆ -

ದ-ದ-ದ (ದ್-ದ-ದಾ)

ಈ ಮೂರು ಅಕ್ಷರಗಳಗಳೇ ಪ್ರಜಾಪತಿಯ ಮಹಾನ್ ಉಪೇಶವಾಗಿದೆ. ಹೇಳುವುದಕ್ಕಾಗಿ ಯಾವುದೋ ಒಂದು ದೇಶೀಯ ಶಾಸ್ತ್ರವು ಇವರಿಗೆ ಬೇಕಾಗಿಲ್ಲ. ಎಲ್ಲಾ ದೇಶಗಳ ಹಾಗೂ ಕಾಲಗಳಲ್ಲಿ ವ್ಯೂಮದ ಪ್ರಶಸ್ತ ಉದರದಲ್ಲಿ ಈ ಮೂರು ಅಕ್ಷರಗಳ ನಾದವು ತುಂಬಿರುತ್ತದೆ. ಮೇಘ-ಧ್ವನಿಯು ಕಾಲ-ಕಾಲಕ್ಕೆ ಇದನ್ನು ವ್ಯಂಜನಗೊಳಿಸುತ್ತದೆ.  ಈ ಸಂಕೇತಗಳ ಅರ್ಥಗಳನ್ನು ನಾವು ಎಂದು ಬೇಕೋ, ಎಲ್ಲಿ ಬೇಕೋ, ಅಲ್ಲಿ ಕೇಳಿಸಿಕೊಳ್ಳಬಹುದು. ವ್ಯಕ್ತಿಯ ಶಾಂತಿಯೂ ಇದೇ ಅರ್ಥಗಳ ಮೇಲೆ ನಿರ್ಭರವಾಗಿದೆ.

ದೇವ, ಅಸುರ ಹಾಗೂ ಮನುಷ್ಯರು ಯಾವುದೋ ಲೋಕ-ವಿಶೇಷದಲ್ಲಲ್ಲ, ಇಲ್ಲಿಯೇ ಸಿಗುವಂತಹಾ ವೃತ್ತಿಗಳ ಭೇದಗಳು. ದೇವ, ಅಸುರ ಹಾಗೂ ಮನುಷ್ಯರಿಗಾಗಿ ಪ್ರಜಾಪತಿಯು ಒಂದೇ ಸೃಷ್ಟಿಯನ್ನು ಮಾಡಿದ್ದಾನೆ, ಒಂದೇ ನಿಯಮವಿದೆ, ಒಂದೇ ಪರಿಣಾಮವುಳ್ಳ ಸುಖ-ದುಃಖಾದಿ ಭೋಗವಿದೆ. ಆದ್ದರಿಂದ ದೈವೀ-ವಾಕ್ಕೂ ಒಂದೇ ಇರುವುದು; ಆದರೆ ರುಚಿ-ವೈಚಿತ್ರ್ಯದಿಂದ ಅರ್ಥಗಳಲ್ಲಿ ಭೇದ ಮಾಡಲಾಗುತ್ತದೆ.

ದಾ-ದಾಮ್ಯತ

ದೇವತೆಗಳಿಗೆ ಒಂದೇ ಅನುಶಾಸನವಿದೆ- ಆತ್ಮ-ಶಾಸನ ಮಾಡಿರಿ. ಬ್ರಹ್ಮಚರ್ಯ, ಇನ್ದ್ರಿಯ-ಜಯ, ಸಾಧನೆಗಳು ಇವೆಲ್ಲವೂ ಇದರ ವಿಸ್ತಾರವೇ ಆಗಿವೆ. ವ್ಯಕ್ತಿಯ ಜೀವನದಲ್ಲಿ ಈ ಶಾಶ್ವತ ಮನ್ತ್ರವಿದೆ. ಎಲ್ಲಿ ಮೊದಲ ’ದ’ಕಾರದ ಅರ್ಥಗಳಲ್ಲಿ ಜಾಗರೂಕ ಶ್ರದ್ಧೆ ಇರುತ್ತದೆಯೋ, ಅಲ್ಲಿಯೇ ಶಾನ್ತಿ ಧ್ರುವ ರೂಪದಲ್ಲಿ ವಿರಾಜಿಸುತ್ತದೆ. ಎಂದೆಂದು ನಾವು ಆತ್ಮಿಕ ಶಾನ್ತಿಗಾಗಿ ಪ್ರಯತ್ನಿಸುತ್ತೇವೋ, ಆಗ ಪ್ರಜಾಪತಿಯ ಮೊದಲ ಉಪದೇಶವನ್ನು ತಿಳಿಯಲೇ ಬೇಕು.

ಅಸುರರಿಗೆ ಪ್ರಜಾಪತಿಯ ವಾಕ್ ಏನು ಹೇಳುತ್ತದೆ -

ದ-ದಯಧ್ವಮ್

ದಯೆಯ ಉಪಾಸನೆ ಮಾಡಿ. ಹಿಂಸ್ರ-ಪ್ರವೃತ್ತಿಗಳ ದಮನ ಮಾಡಿ, ರಕ್ತ-ಪಿಪಾಸೆಯ ಸಂಯಮ ಮಾಡಿ. ಹಿಂಸೆ, ಯುದ್ಧ, ಭೀಷಣಗಳು ಅಶಾನ್ತಿಯ ಕಾರಣಗಳು. ಈಗೆಲ್ಲ ನಾಲ್ಕೂ ಕಡೆ ಹೊಡೆದಾಟದ ಭೇರಿ ಮೊಳಗುತ್ತಿದೆ. ಹಲ್ಲು ಕಡಿಕಡಿದು ಸೈನಿಕರು ಯುದ್ಧಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ. ಒಂದು ಕೈಯಲ್ಲಿ ಬೆತ್ತಲೆಯ ಕತ್ತಿ ಹಿಡಿದು ಮುಖದಿಂದ ಶಾನ್ತಿಯ ಮನ್ತ್ರೋಚ್ಚಾರಣೆ ಮಾಡುವುದರಿಂದ ಶಾನ್ತಿ ಎಂದಾದರೂ ಆಗುತ್ತದೆಯೇ? ಸತ್ಯವಾದ ಶಾನ್ತಿಗಾಗಿ ಪ್ರಜಾಪತಿಯ ಅರ್ಥಗಳನ್ನು ನಂಬಲೇಬೇಕು. ಈ ಉಪದೇಶವನ್ನು ಬೇಕಾದರೆ ನಾವಿಂದು ಕೇಳಿಸಿಕೊಳ್ಳಬಹುದು, ಇಲ್ಲದಿದ್ದರೆ ಹತ್ತು ವರ್ಷಗಳ ನಂತರವಾದರೂ ಕೇಳಿಸಿಕೊಳ್ಳಬಹುದು, ಆದರೆ ಅದನ್ನು ಕೇಳಿಸಿಕೊಳ್ಳದ ಹೊರತು ಗತಿಯಿಲ್ಲ.

ಸಮಾಜದ ಯಾವ ವಿಷಮತೆಗಳಿವೆಯೋ, ಅವುಗಳ ಕಾರಣ ಪಾರಸ್ಪರಿಕ ಕಲಹ ಉಂಟಾಗಿದೆ, ಅದನ್ನು ದೂರಗೊಳಿಸುವ ಯಾವುದಾದರೂ ಉಪಾಯವಿದ್ದರೆ, ಅದು ಪ್ರಜಾಪತಿಯ ಮೂರನೆಯ ಉಪದೇಶ -

ದ್-ದ್‌ತ್ತ

ದಾನ ಮಾಡಿರಿ, ಹಂಚಿ ತಿನ್ನಿರಿ, ಜಿಪುಣತನ ಬೇಡ, ವಿತರಣೆಯ ಪಾಠ ಓದಿರಿ. ಧನ ಹಾಗೂ ಉಪಯೋಗದ ಸಾಮಗ್ರಿ ಎಲ್ಲರಿಗೂ ಪ್ರಿಯವೆನಿಸಲಿದೆ. ಅವುಗಳನ್ನು ತನಗಾಗಿಯೇ ಇಚ್ಛಿಸುವುದು ಸ್ವಾರ್ಥ. ಎಲ್ಲರೊಂದಿಗೆ ಹಂಚಿಕೊಂಡು ಅವುಗಳನ್ನು ಭೋಗಿಸುವುದು ಸುಖದ ಮೂಲವಾಗಿದೆ. ಶ್ರೀಮಂತ-ಬಡವರ ನಡುವಿನ ಜಗಳದ ಬುನಾದಿ ಯಾವುದು? ಜಮೀಂದಾರರು ಮತ್ತು ರೈತರ ಸಂಘರ್ಷ ಏಕಿದೆ? ಧನಿಕರಲ್ಲಿಯೇ ಪರಸ್ಪರ ಜಗಳವೇಕಿದೆ? ಏಕೆಂದರೆ ಎಲ್ಲರೂ ತಾವೊಬ್ಬರೇ ಧನದ ಭೋಗವನ್ನು ಬಯಸುತ್ತಾರೆ. ದಾನ-ಯಜ್ಞದ ಭಾವನೆಗಳು ನಷ್ಟವಾಗಿವೆ. ಮನುಷ್ಯರು ಎಲ್ಲಿಯವರೆಗೆ ಉದಾರ ಹೃದಯದಿಂದ ಧನದ ವ್ಯವಹಾರ ಮಾಡುತ್ತಾರೋ, ಅಲ್ಲಿಯವರೆಗೆ ಶಾಂತಿಯಿಂದ ನಳನಳಿಸುತ್ತವೆ. ಅವರೇ ಎಂದು ಘರ್ಷಣೆ-ದೊಂಬಿಗಿಳಿಯುತ್ತಾರೋ, ಆಗ ಅಶಾಂತಿ ಉತ್ಪನ್ನವಾಗುತ್ತದೆ. ಸಮಾಜದ ವ್ಯವಸ್ಥೆಯನ್ನು ಹೇಗೆ ಬೇಕಾದರೂ ಬೆಸೆದರೂ, ಕೇವಲ ಅದರಿಂದ ಪಾರಸ್ಪರಿಕ ದ್ವಂದ್ವವು ಅಳಿಯುವುದಿಲ್ಲ. ಮನುಷ್ಯರ ಹೃದಯದಲ್ಲಿ ಔದಾರ್ಯವಿರಬೇಕು.

ಶಾಸ್ತ್ರಗಳ ಗಡಿಯನ್ನು ಕಟ್ಟುವುದರಿಂದ ಯುದ್ಧದ ಶಾಂತಿಯಾಗುವುದಿಲ್ಲ, ಅದಕ್ಕೆ ’ದಯಧ್ವಮ್’ ಎಂಬ ಭಾವನೆ ಬೇಕು. ಅದೇ ರೀತಿ ವ್ಯಕ್ತಿಗೆ ಧನದ ಗಡಿಯನ್ನು ಹಾಕುವುದರಿಂದ ಆರ್ಥಿಕ ಶಾಂತಿಯಾಗುವುದಿಲ್ಲ, ಅದಕ್ಕಾಗಿ ಜನರಲ್ಲಿ ಹಂಚಿ ತಿನ್ನುವ ಭಾವ ಅಥವಾ ಉದಾರತೆ ಇರಬೇಕಾದ್ದು ಅನಿವಾರ್ಯ. 

ಪ್ರಜಾಪತಿಯು ವಿಶ್ವವ್ಯಾಪೀ ಶಕ್ತಿ, ಅದರ ವಾಕ್ ಕೂಡ ವಿಶ್ವವ್ಯಾಪಿಯೇ. ಆ ವಾಕ್ಕಿನ ಸಂಕೇತಗಳಾದ ದಮ, ದಯಾ ಹಾಗೂ ದಾನಗಳೂ ಎಲ್ಲಾ ದೇಶ ಮತ್ತು ಎಲ್ಲಾ ಕಾಲಗಳಲ್ಲಿ ಇರುತ್ತದೆ. 

ದ-ದಾಮ್ಯತ

ದ-ದಯಧ್ವಮ್

ದ-ದತ್ತ


(ಆಕರ - ಬೃಹದಾರಣ್ಯಕ ಉಪನಿಷದ್. ೫|೨|೧-೩)

Friday, 9 October 2020

Sankalpa and Vikalpa during practice of Vedic Mantras

The reason behind the production of various effects caused by the recitation of the mantras is, to a great extent, a psychological one. Why? Understand from the below points:-

Mantras -> Prakruti Roopi Moola Padaartha -> First vibration "OM" -> Vibrating Prakruti Padaartha -> 

>> Vibrating Matter 

>> Vibrating Ahamkaara 

>> "Vibrating Manas" becomes the reason for (Spandita Manas ~ in the form of Chandas)

>> creates space, particle, waves, etc.,

>> Waves > Electricity, Tidal waves, Tsunami, etc., all good and bad.

If we want to get something good to be done to people, the first thing which is required is to get their mind inclined towards that thing. The mantras psychologically cause the people to believe that they are becoming the same as it is said in the mantras. A strong will-power which we call Sankalpa, a firm resolution, is the form of inner life as well as the source of accomplishment of the outer life. A will arising in the mind after taking a form of firm resolution starts working, again and again, to get itself accomplished. There are two aspects of mind, one is Sankalpa and the other is Vikalpa; the former being the firm resolution, is always inclined to accomplish the task, and the latter being the repeller of such resolutions always causes resistance in the accomplishment of the task. The constant struggle of Sankalpa and Vikalpa goes on. When resisting factors once come into the light, the people through their Sankalpa can get victory over them. But sometimes, when Sankalpa is not made powerful by the repeated practices, the resisting factors expressed through Vikalpa overcome the Sankalpa. The repetition of a mantra again and again, with the knowledge of its purport, makes the Sankalpa powerful. 

For example, a person desiring to undertake a Vrata recites the mantra: Agne vratapate vratam charishyaami tacCakeyam tanmE rAdhyatAm (SYV 1.5). Even though mantras are not in Sanskrit but in Braahmi language, the worldly books interpret this mantra in Sanskrit as - 'O Agni, lord of vows, I shall observe vow; may I do it successfully and may that vow of mine be accomplished.' Since the original Yajurveda is earthed, no issues here in interpreting in Sanskrit for the sake of giving an example. So the question is, can the recitation of this mantra help one to truly observe the vows in life? Does any vow become accomplished by the pronouncement of this mantra? The answer is affirmative. Is the understanding of the meaning important here? Not at all! Because "Mananaat Taarayate iti Mantra" and not "Arthaanusandhaanaat Taarayate iti Mantra"!!!! Vedas didn't originate to give meaning, but to do strong influence from their wave pattern. They are the source of creation and sustenance.

When people recite the said mantra a desire to observe the vow in their mind springs up without even knowing the meaning. They take a Sankalpa to accomplish their desire. Next moment a Vikalpa comes in the way in the form of an obstacle that they cannot observe it, for they have become accustomed to speaking a lie in their practical life. A struggle between Sankalpa and Vikalpa goes on, till through the vibration or the sound of the mantra being recited repeatedly, the purport of the mantra, i.e., 'O Agni, lord of vows, I shall observe the vow, I may be able to observe that vow and may that vow of mine be accomplished', becomes transformed into, 'O Agni, lord of vows, I will definitely observe the vow; I am definitely able to observe the vow and my observance of vow will certainly be fruitful'. As soon as this Sankalpa comes into their mind they develop confidence in success. When they start to observe this vow with this confidence, they definitely become successful in observance of the vow in their life. This is the way through which a mantra brings effects on one's life. 

- Hemanth Kumar G

Thursday, 8 October 2020

How Veda Mantras are the basis of creation?

Vedas created this universe, how? Because it is basically a Naada (wave) in the format of Chandobhyasta (metrical) under Braahmi language.

Chanda or metre is a great concern to the Vedic texts. Nirukta defines Chandas is so-called for covering (Chandaamsi Jhaadanaat. Nirukta 7.1). In Bhagavad Gita (15.1) lord Krishna himself said the metrical hymns lying on the Vedas are considered as the leaves of Vedas. Chanda means Veda without which the universal process will be stopped just as without leaves a tree can not live. Vedas are referred to by the term Chanda.

Moreover, it is learned from the tradition that Gods covered their bodies with the mantras to protect themselves from death. 

There are altogether seven prominent metres in Veda, but according to others, there are 21 metres in Veda. But only 7 metres of Veda are generally available in the Vedic texts. These are Gayatri, Ushnik, Anushtubh, Brhati, Pankti, Trishtub, and Jagati. These seven metres again divided into five categories having the same name:-

 1. Metres of Prajaapati
 2. Metres of Devas
 3. Metres of Asuras
 4. Metres of Rshis
 5. Metres of Braahmanas

There are a bunch of classifications under these headings. In the same order, the metres are also distributed according to color. For E.g.,

 • Gayatri - white, 
 • Ushnik - dappled Saranga (mix of black and white), 
 • Anushtubh - raddish brown (Pishanga), 
 • Brhati - black (Krishna), 
 • Viraat - blue (Neela), 
 • Trishtub - red (Lohita), 
 • Jagati - golden (Suvarna), 
 • Pankti - bright red (Aruna), 
 • Aticcanda - dark (Shyaama), 
 • Vicchanda - whitish (Gaura), 
 • Dvipada - brown (Babhru), 
 • Ekapada - gray (Nakula), 
 • Brahman, Rk, yajus, Saama - yellowish-brown (Kapila).

Chandas is not material. They have color, Gotra, etc., Whole Aakaasha is filled with a single Shabda (sound) which is in Chandas format. Who filled this sound? Me, you, or we all? No, it's the Paramaatma.

"Chandaamsi Chaadanaat" - It covers everything, so-called as Chandas. Body, tissues, cells, molecules, atoms, electrons, neutrons, protons, and all other particles any minute ones, are covered by Chandas. Devatas themselves are created by Chandas and those Chando Roopi Devatas did create and done changes to different lokas using the Chandas. 

This Chandas is viewed in 3 forms viz. Rig, Yajus & Saama from the perspective of the Chandas patterns:-

1) All matters having forms are due to Rk Chandas Kiranas. 

2) Space, motion, etc., is created by Yajur Chandas Kiranas.

3) The one which are inside all the light waves, they are due to Saama Chandas Kiranas.


Veda Mantras -> Prakruti Roopi Moola Padaartha -> 

First vibration "OM" -> Vibrating Prakruti Padaartha -> 

-->> Vibrating Matter 

-->> Vibrating Ahamkaara 

-->> "Vibrating Manas" becomes reason for (Spandita Manas ~ in the form of Chandas)

-->> creates space, particle, waves, etc.,

-->> Waves > Electricity, Tidal waves, Tsunami, etc., all good and bad

 • Which Taranga (wave/spandana) creates which Padaartha? 
 • Which Taranga (wave/spandana) exhibits which Gunas?
 • Which Taranga (wave/spandana) creates which Balas?
 • Which Tarnaga (wave/spandana) creates which Kirana (light/prakaasha)?
 • Who answers these? 

Ans:- Only when you understand the secret of creation in Vedas from the Chandas perspective and not from the Manas perspective.

There was water all over the world. Wait, there was water inside the waves. Then only the water will have its property of water waves.

Similarly, the vibration/spandana/Taranga which is there inside the Manas Tatva, itself is the "Chandas" which is nothing than "Mantras".

So Chandas is the reason of Srushti & Upaadaana.

Vyaakarana is like a torch, it just shreds light to show the materials. It says Gau = cow. But they don't know the real experienced meaning of Gau compared with a cowboy who does the Goseva day and night. Tarka Shaastra gets converted into Jalpa, Vitanda, etc., All these Shaastrajnaas just spend their time in Vaagvilaasa. One word to another, another to some other, etc., but they don't go deep into the level of "Padaartha". 

 • How the Agni shabda originated? They keep fighting with the Dhaatu, Pratyaya, Nirvachana, etc., 
 • But what exactly is the "Agni Padaartha" (Fiery objects)? 
 • How it gets created? 
 • What are their properties? 
 • Did they try to experience them? 

"No"

Then what is the use of studying the Nirukta and Vyaakarana? The glory of the Vedas is not protected by them. You studied material science, but can you treat a single patient? Then what is the meaning of studying material science? Electrical/Electronics/Computer Engineering, MTech, Ph.D., Pdf is attained but don't know how to open a camera or computer or any basic electrical device, what is the use? The word catchers run behind words, but will they attempt to "experience" the meaning behind any word?

Manas (Mind) and Vaak (speech) are not entirely different. Water and water waves are not separate. Creation happened from Manas, which happened from Vaak. Vaak got categorized, but not the Manas.

There are youngsters around us who see videos and read some articles from sites. Without experiencing the real meaning, they start making their own videos as a sign of popularity. If you ask them what is the basic material of creation, from where it started, why it gets created, who created? No answers. Then stop making the Videos. If you run out of the core questions, it is the sign of ignorance and arrogance. Till the time you understand, from which material the creation happened, you can't understand the process of creation. So present-day Physics is in a dark world due to ignorance of the starting point. Consider you are solving a mathematical derivation. If you leave its half part and start from the second half, is it meaningful derivation? Take a simple example of Roti. If you don't know that the Roti is created by flour, you can't explain its process clearly. But the person who doesn't know the process will attack the person who knows the process. How can you make this kind of people understand what is Veda Mantra? Because they don't know the Manas Tatva. They also don't know what is Photon? How it is created? What is Photon's or Quark's structure? If they don't know this, then how can they explore the things which are a 4-5th step beyond these topics? So arguing with them is waste of time. You can make a humble and honest scientist understand all these, but not all. They will be cool and dignified ones. But many youngsters not having these qualities are very adamant and just say that we don't believe anything other than what is in front of our eyes. Also, they say that we believe in experiments. If you ask them, have you done any experiments on your own, they say they haven't done it, but have done observation. They quote the names of big labs like NASA, Fermi, Plank's, Curie's, Harvard, MIT, etc., There they have done those experiments, but what you have done? 

Our people don't believe in the Rishi's invented formulae by the Pratyaksha in Samaadhi or beyond Samaadhi. But they believe in the words of some unknown person doing unknown experiments in an unknown place, even without visiting there. And they start glorifying the research without any pieces of evidence. Believing by closing the eyes with a piece of cloth is the height of stupidity. It is intellectual slavery. There are people who don't believe in their father's words but believe the neighbor's words. They don't even care about their parents. They are intellectual losers. 

Any creation or fluctuations after creation is due to that same "Dhwani Tarangas". Let the Science believe it or not now, but it will believe this in the future. If we focus on some of the niche scientific explorations, the scientists believe that the fluctuations in cosmic background radiations are due to variations in the Sound waves (Dhwani Taranga). They also believe that there will be sound waves in the minutest particle under the dark particle. But nobody knows what is that Sound wave is? 

Vaidhika Bhauta Shaastra says that there are sound waves under the Photons, there are sound waves under the quarks, there are sound waves under the strings, there are sound waves under the space also. Which are those sound waves? It is none other than Veda Mantras. Veda is like a cosmological epic, universal epic, non-communal epic, no caste, no country, no birds/animals, etc., no distinctions for usage at all. 

Wherever there is a creation, it happened due to the Veda Naada (vibration). It is in Manas Tatva. So Veda is for all. It is unfortunate that the Veda which is for all is not required for anyone now in its original format or intention. Unfortunately, our bodies are also created by the vibrations of Veda Mantras. But we are not ready to accept the Veda Mantras. 

Whatever we are seeing around us, is integrated with the vibrations of Veda Mantras. If you have any Yoga Saadhanaa or any technology by which you can experience (Saakshaatkaara) them, then everywhere you would have heard the Veda Mantras. But the majority of us don't have those Saadhaanaas now. In spite of that, the Veda Mantras are a highly debated topic in the world. 

Unfortunately, the Vedas are told as the epic of Hindus and Hindus used the Vedas majorly in Karmakaanda and forgot the original intention of Vedas. Let god bless us to separate the truth from illusions. Only by this, we can understand the "Yataartha Roopa" of Vedas. By this, we should experience the actual format of Rk, Yajus, Saama, Chandas, Praana. Then no human will be against humanity or any creature in the world. If the human had experienced the Vedas he never would have invented Atom bombs, Nuclear weapons, or Corona kind of bioweapons! 

So come on, leave all the prejudices, no one is your's and no one is others. Remove the illusive layer in front of your eyes and intellect. Then you can see that all are god, all are Vedas. It is the responsibility of all of us to take the reality of Vedas to humanity. It is not the job of a single person, it is the responsibility of humans. There are some people who started this initiative like a single man army. But the cunning questions and protests are done by both theists and atheists. Theists want to relate and glorify the cock and bull stories with Vedas and they can't understand the a,b,c,d of Vedic Science. The majority of them are just followers of blind beliefs. Please convert your blind beliefs into truth beliefs. Try to experience the real essence of Vedas as per the real intentions of respective Mantra Drashtaaraas and the intention of Paramatma. Let all get united by this approach and become one family of Paramatma. 

Om Shaantih, Shaantih, Shaantih.