Thursday, 22 April 2021

ಕ್ವಾಂಟಮ್ ರಾಮ

 

ವೇದವೆಂದರೆ ಸಂಪೂರ್ಣ ಜ್ಞಾನ. ವೇದವು ಇತಿಹಾಸವಲ್ಲ, ಆದರದು ಇತಿಹಾಸ ಸೃಷ್ಟಿಸುವ ನಾದ, ಭವಿಷ್ಯ ರೂಪಿಸುವ ಕಿರಣ, ವರ್ತಮಾನದಲ್ಲಿ ಜೀವಿಸುವಂತೆ ಮಾಡುವ ಕಿರಣ+ತರಂಗ. ಪ್ರತೀ ಮನುವಿನ ಕಾಲದಲ್ಲಿ ವೇದಾಧಾರಿತ ದಶಾವತಾರ ಪುನರಾವರ್ತನೆಯಾಗುತ್ತದೆ; ಬೇರೆ ಬೇರೆ ರೂಪದಲ್ಲಿ. ಪ್ರಸಕ್ತ ವೈವಸ್ವತ ಮನ್ವಂತರದ ೨೪ನೇ ತ್ರೇತಾಯುಗದಲ್ಲಿ ರಾಮಾಯಣ ಘಟಿಸಿತು. ಈಗ ನಡೆಯುತ್ತಿರುವುದು ೨೮ನೇ ಕಲಿಯುಗ. ಒಂದು ಮಹಾಯುಗವು ೪೩,೨೦,೦೦೦ ವರ್ಷಗಳವರೆಗೆ ವ್ಯಾಪಿಸಬಹುದು. ಅದರ ಆಧಾರದಲ್ಲಿ ಲೆಕ್ಕ ಹಾಕಿದರೆ ರಾಮಾಯಣ ಘಟಿಸಿದ್ದು ಕೋಟ್ಯಂತರ ವರ್ಷಗಳ ಹಿಂದೆ ಎಂದು ತಿಳಿದುಬರುತ್ತದೆ. ಇತ್ತೀಚೆಗೆ ಕೆಲ ಸಾಫ್ಟ್ವೇರ್ ಬಳಸಿ ಕುಂಡಲಿ ರಚಿಸಿ ಎಲ್ಲೋ ಯಕಶ್ಚಿತ್ ಕೆಲ ಸಾವಿರ ವರ್ಷಗಳ ಹಿಂದೆ ರಾಮನ ಕಾಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅವರ ಸಾಫ್ಟ್ವೇರ್ ಮತ್ತು ಗಣಿತಗಳು ಶುದ್ಧ ಸುಳ್ಳು ಎಂದು ವಿರೋಧಿಸಲ್ಪಟ್ಟಿವೆ! ಈ ಭೂಮಿ ಸೃಷ್ಟಿಗೂ ಪೂರ್ವದಲ್ಲಿದ ವೇದವೆಂಬ ನಾದ ತರಂಗಗಳಲ್ಲಿ "ರಾಮ" ಎಂಬ ಶಬ್ದವು ಇದ್ದಿತು. ಸೃಷ್ಟಿಪೂರ್ವದ ನಾದವಾದ ವೇದಕ್ಕೆ ಕಾಲನಿರ್ಣಯವೆಂತು? ರಾಮಾಯಾಣವು ವೇದದಿಂದ ಘಟಿಸುವ ಇತಿಹಾಸವೆಂಬ ಭಾಗದಿಂದ ನಡೆದ ಸತ್ಯ ಘಟನೆ. ಅದು ಪ್ರಾಕೃತಿಕ ನಿಯಮಗಳು ಹೇಗೆ ವ್ಯವಹರಿಸುತ್ತವೆ ಎಂದು ತೋರಿಸಿಕೊಟ್ಟಿದೆ. ಭೂತ-ಭವಿಷ್ಯತ್-ವರ್ತಮಾನಗಳಲ್ಲಿ ನಡೆಯುತ್ತಲಿರುವ ನಿತ್ಯಸತ್ಯ ಪ್ರತಿಪಾದಕ ತತ್ವಶಾಸ್ತ್ರ, ದೇಹಶಾಸ್ತ್ರ, ಮನಶ್ಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಇತ್ಯಾದಿಗಳ ಮಹೋದಧಿ. ಈ ರಾಮನವಮಿಯ ಪ್ರಯುಕ್ತ ರಾಮಾವತಾರದ ಬಗ್ಗೆ ಕ್ವಾಂಟಮ್ ಭೌತಶಾಸ್ತ್ರ ಮತ್ತದರ ಮುಂದುವರೆದ ಭಾರತೀಯ ಪ್ರತಿಪಾದನೆಗಳ ರೀತ್ಯಾ ಒಂದು ವಿಶೇಷ ಚಿಂತನೆ ನಡೆಸೋಣ.


ಕೃತಯುಗವು ಕ್ವಾರ್ಕ್ ಕಾಲಘಟ್ಟ, ತ್ರೇತಾಯುಗವು ಹಾರ್ಡನ್ ಕಾಲಘಟ್ಟ, ದ್ವಾಪರಾ ಯುಗವು ಲೆಪ್ಟನ್ ಕಾಲಘಟ್ಟ, ಕಲಿಯುಗವು ಫೋಟಾನ್ ಕಾಲಘಟ್ಟ. ತ್ರೇತಾಯುಗವೆಂದರೆ ದೃಢ, ಕ್ಷೀಣ ಹಾಗೂ ವಿದ್ಯುತ್ಕಾಂತೀಯ ಕ್ಷೇತ್ರಗಳ ಪ್ರಾಬಲ್ಯ. ಊರ್ಜೆಯ ಸಾಂದ್ರತೆಯು ತಗ್ಗಿದಂತೆ ಕಣಗಳಿಗೆ ಹಿಗ್ಸ್ ಪ್ರತಿಬಂಧವು ಹಗುರವಾಗುತ್ತದೆ. ಉನ್ನತ ಊರ್ಜೆಯ ಕಾರಣ ದೃಢ, ಕ್ಷೀಣ ಹಾಗೂ ವಿದ್ಯುತ್ಕಾಂತೀಯ ಕ್ಷೇತ್ರಗಳಾದರೋ ಬಲಶಾಲಿಗಳೇ ಆಗಿರುತ್ತವೆ. ಹಾಗಾಗಿ ಈ ಯುಗವು ಮೂರು ಕಾಲುಗಳ ಮೇಲೆ ನಿಂತಿತ್ತು ಎನ್ನಲಾಗಿದೆ. ಈ ಯುಗದಲ್ಲಿ ನ್ಯೂಟ್ರಿನೋಗಳು (ವಾಮನ), ಮೇಲ್ಮುಖ ಕ್ವಾರ್ಕ್ಗಳು (ರಾಮ) ಹಾಗೂ ಕೆಳಮುಖ ಕ್ವಾರ್ಕ್ಗಳು (ಪರಶು-ರಾಮ) ನಿರ್ಮಾಣವಾಗುತ್ತವೆ.

 

ಮೂರು ಬಲ-ಕ್ಷೇತ್ರಗಳ ಪ್ರಾಬಲ್ಯದಿಂದ, ಹಾರ್ಡನ್ಗಳು ಉಂಟಾಗಿ, ವಿಶ್ವದಲ್ಲಿ ಅವುಗಳ ಮೇಲ್ಗೈಯಾಗುತ್ತದೆ. ಇದೇ ವಿಶ್ವದ ಹಾರ್ಡನ್ ಕಾಲಘಟ್ಟ. ವಿಶ್ವದ ಕಾಲಾಕಾಶವು ಇನ್ನೂ ಹೆಚ್ಚು ವಿಸ್ತಾರವಾಗುತ್ತಾ ಇರುತ್ತದೆ. ಆದರೆ ದೃಢ ವ್ಯವಹಾರಗಳ ದಾಮಾಶಯಕ್ಕೂ ಹಾರ್ಡನೈಜೇಶನ್ ಎಂಬ ಮಿತಿ ಇರುತ್ತದೆ.

 

ವಿಶ್ರವರೆಂದರೆ ಬಲ-ಒಯ್ಯುವ ನಿಜವಾದ ಮೀಸಾನ್ಗಳು. ಕೈಕಸಿ ಮತ್ತು ವಿಶ್ರವನ ಪುತ್ರರೆಂದರೆ ಸ್ಪಿನ್-೧ ಉಳ್ಳ ವೆಕ್ಟರ್ ಅಥವಾ ಅರೇ-ವೆಕ್ಟರ್ ಮೀಸಾನ್ಗಳು. ರಾವಣ ಮತ್ತು ಕುಂಭಕರ್ಣಗಳು ಇವುಗಳ ಉತ್ಪತ್ತಿ. ಅವುಗಳು ’ಕ್ಷೀಣ ಮತ್ತು ವಿದ್ಯುತ್ಕಾಂತೀಯ ಸವಕಳಿ’ಗಳಾಗಿದ್ದು ವೆಕ್ಟರ್/ಅರೇ-ವೆಕ್ಟರ್ ಮೀಸಾನ್ಗಳಿಂದ ವಿಕಾಸ ಹೊಂದುತ್ತವೆ. ವೆಕ್ಟರ್ ಮೀಸಾನ್ಗಳ ಕ್ಷೀಣ ಸವಕಳಿಯೇ ರಾವಣ. ಈ ಮೀಸಾನ್ಗಳ ವಿದ್ಯುತ್ಕಾಂತೀಯ ಸವಕಳಿಯೇ ಕುಂಭಕರ್ಣ. ವೆಕ್ಟರ್ ಮೀಸಾನ್ಗಳ ಈ ಎರಡೂ ಸವಕಳಿಗಳು ಕ್ವಾರ್ಕ್ ಕಣಗಳಲ್ಲೇ ಹಗುರವಾದ ಮೇಲ್ಮುಖ ಕ್ವಾರ್ಕ್‌ಗಳ ಉಗಮಕ್ಕೆ ಕಾರಣವಾಗುತ್ತವೆ.

 

ಹಾಗಾಗಿ ರಾಮ ಎಂಬುದು ವೆಕ್ಟರ್ ಮೀಸಾನ್ಗಳ ಕ್ಷೀಣ ಸ್ವವಕಳಿಯಿಂದ ಮೇಲ್ಮುಖ ಕ್ವಾರ್ಕ್‍ಗಳನ್ನು ಮೀರಿ ಪುಟಿದೇಳುವ ಹಿಗ್ಸ್ ಪರಿಬಂಧವಾಗಿದೆ. ಹಾಗೇ ರಾಮ ಎಂಬದು ವೆಕ್ಟರ್ ಮೀಸಾನ್ಗಳ ವಿದ್ಯುತ್ಕಾಂತೀಯ ಸವಕಳಿಯಿಂದ ಸೂಸುವ ಫೋಟಾನ್ಗಳಿಂದ ಪುಟಿದೇಳುವ ಹಿಗ್ಸ್ ಪರಿಬಂಧವೂ ಆಗಿದೆ. ಹಾಗಾಗಿ ರಾಮ ಎಂಬುದೇ ಭೌತಶಾಸ್ತ್ರೀಯವಾಗಿ ರಾವಣ ಹಾಗೂ ಕುಂಭಕರ್ಣರಿಗೆ ಒಂದು ಗತಿಯನ್ನು ತೋರಿಸಲು ಸಾಧ್ಯವಾಯಿತು.

 

ಈ ಮೇಲ್ಮುಖ ಕ್ವಾರ್ಕ್ಗಳು ಇನ್ನೂ ಭಾರವಾದ ಅಥವಾ ಹೆಚ್ಚು ಊರ್ಜೆಯುಳ್ಳ ಕೆಳಮುಖ ಕ್ವಾರ್ಕ್ಗಳೊಂದಿಗೆ ಸಂಯೋಗವಾಗಿ ಪಿಯಾನ್ಗಳಾಗಿ ವಿಕಾಸ ಹೊಂದುತ್ತವೆ. ಪಿಯಾನ್ಗಳೆಂದರೆ ಸ್ಪಿನ್-೦ ಉಳ್ಳ ಅರೇ-ಸ್ಕೇಲಾರ್ ಮೀಸಾನ್ಗಳು. ಈ ರೀತಿಯಲ್ಲಿ ರಾಮನು ಪರಶು-ರಾಮನಿಂದ ’ಶಿವ ಧನಸ್ಸನ್ನು’ ಪಡೆಯುತ್ತಾನೆ (ಭಾರವಾದ, ಹಿಂದಿನ ಅವತಾರವೆಂಬ ಕೆಳಮುಖ ಕ್ವಾರ್ಕಗಳು).

 

ಮೇಲ್ಮುಖ ಕ್ವಾರ್ಕ್ ಮತ್ತು ಕೆಳಮುಖ ಕ್ವಾರ್ಕ್ಗಳಿಗೆ ಹಿಗ್ಸ್ ಸಂಯೋಗವು ವಿಶ್ವದ ಎಲ್ಲಾ ರಾಶಿಗಳನ್ನು (ಮ್ಯಾಟರ್) ಸೃಜಿಸುತ್ತದೆ. ಇವುಗಳು ಚಾರ್ಜ್ ಉಳ್ಳ ಕಣಗಳೂ ಹೌದು. ಹಾಗಾಗಿ ಅವುಗಳನ್ನು ’ನರ’ ಎಂದಿದೆ. ಆ ನರರೆಂಬ ಮಾಸ್‌ಗಳ ಗುಂಪಿನೊಡೆಯನೇ ಹನುಮ. ಲಾಂಗೂಲ ಧ್ವಜವು ಆ ಕಣಗಳ ಪುಚ್ಛಬಲದ ದ್ಯೋತಕ. ಹುಡುಕಿದರೆ ಇಡೀ ರಾಮಾಯಣವೇ ನಿತ್ಯ ನಿರಂತರ ನಡೆಯುತ್ತಿರುವ ಕ್ವಾಂಟಮ್ ವಿಜ್ಞಾನ. ಜೈ ಶ್ರೀರಾಮ.

 

 (ಲೇಖಕರು: ಆರ್ಟಿಫಿಶ್ಯಲ್ ಇಂಟೆಲಿಜೆನ್ಸ್ ಡೆವಲೆಪ್ಮೆಂಟ್ ಟೀಮ್ ಲೀಡ್, ಇಂಟೆಲ್)