Saturday, 22 May 2021

ಶ್ರೀಮದ್ರಾಜಸೂಯ ಯಾಗ ವಿವರಣೆ (ಭಾಗ ೧-೨) ರಾಜಸೂಯ ಸೋಮಯಾಗವು

14-01-2021 ರಿಂದ ಆರಂಭವಾಗಿ 12-02-2021 ರಂದು ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು


"ರಾಜಸೂಯ ಸೋಮಯಾಗ" - ಪೂರ್ವ ಪೀಠಿಕಾ ಲೇಖನದ ಕೊಂಡಿ:-

https://veda-vijnana.blogspot.com/2020/12/blog-post.html


ಪ್ರತಿನಿತ್ಯ ನಡೆದ - ಹೋಮ ಭಾಗ

ವಟುಗಳಿಂದ ಪವಮಾನ ಮಂತ್ರಗಳಿಂದ ಸೋಮ ಉಪಾಸನೆ ಮತ್ತು ಹೋಮ (ಬೆಳಗ್ಗೆ 6 ಗಂಟೆಯಿಂದ)


ಪ್ರತಿನಿತ್ಯ ನಡೆದ - ಯಾಗ ಭಾಗ 

ಗೃಹಸ್ಥ ಪುರುಷರಿಂದ ಕಪಾಲ ಹೋಮದ ವಿಧಾನದಲ್ಲಿ

ಮಧ್ವಾಕ್ಷ ಪಿಂಡ, ಪಿಂಡಿಕಾ ಹೋಮ  (10 ಗಂಟೆಯಿಂದ)


ಪ್ರತಿನಿತ್ಯ ನಡೆದ - ಯಜ್ಞಭಾಗ

ಮೃತವಾದಂತಹವರಿಗೆ ಪುನಃ ಜನ್ಮ ಕೊಡುತ್ತೇವೆ ಎಂದು ಸ್ಥಾನ ನಿರ್ದೇಶನಕ್ಕಾಗಿ ಭಾರತದ ಸಮಗ್ರ ಮಹಿಳೆಯರ ಪ್ರತಿನಿಧಿಯಾಗಿ ವಿವಾಹಿತ ಮಹಿಳೆಯರಿಂದ ಹೋಮ (ಸಂಜೆ 5 ಗಂಟೆಯಿಂದ)


ಮೇಲೆ ತಿಳಿಸಿದ ಯಾಗದ ಆಯಾ ಭಾಗದಲ್ಲಿ ಆಸಕ್ತಿಯುಳ್ಳವರು ಜಾತಿ, ಮತ ಭೇದವಿಲ್ಲದೆ

ಅನೇಕರು ಭಾಗವಹಿಸಿದ್ದರು

 

 

ರಾಜಸೂಯ ಸೋಮಯಾಗದ

ನಿರ್ದೇಶಕರು : ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದರು


 

ಯಜ್ಞ ನಿಯೋಜಕರು

                                 

ಶ್ರೀಮತಿ ಸುಮತಿ ನಿತ್ಯಾನಂದ  

ಚಿಕ್ಕಮಗಳೂರು

ಶ್ರೀಮತಿ ಸುಮತಿ ಸತೀಶ್

ಬೇಲೂರು

ಶ್ರೀಮತಿ ಕುಸುಮ ಅರವಿಂದ್   

ಪಾವಂಜೆ

ಡಾ|| ಪೂನಂ ಅಭಿಜಿತ್ ವೈದ್ಯ

ರಾಹುರಿ, ಮಹಾರಾಷ್ಟ್ರ

ಶ್ರೀಮತಿ ಮೌಲ್ಯ ಅಶೋಕ್

ಶಿವಮೊಗ್ಗ

 

ಹೋಮ ಉಪಾಸಕರು

 

ಶ್ರೀ ಮದನ್ ಕುಮಾರ್    

ಚಿಕ್ಕಮಗಳೂರು

ಶ್ರೀ ಪ್ರಜ್ವಲ್ ಅಡಿಗ        

ಚಿಕ್ಕಮಗಳೂರು

ಶ್ರೀ ಗಿರೀಶ್  

ಮೂಡಿಗೆರೆ

ಶ್ರೀ ರವಿ ಕಿರಣ್     

ಮೂಡಿಗೆರೆ

ಶ್ರೀ ಮೋಹನ್      

ಚಿಕ್ಕಮಗಳೂರು

ಶ್ರೀ ಮಣಿಕಂಠ      

ಚಿಕ್ಕಮಗಳೂರು

 

ಯಾಗ ದೀಕ್ಷಿತರು

 

ಋಷಿ ಸುಬ್ರಹ್ಮಣ್ಯ

ಚಿಕ್ಕಮಗಳೂರು

ಯಾಜಿ ಋಷಿ ನಿರಂಜನ್ ಭಟ್

ಉಡುಪಿ (ಪಾವಂಜೆ)

ಶ್ರೀ ನಾಗೇಶ್. ಹೆಚ್.ಜಿ    

ಬೇಲೂರು

ಶ್ರೀ ಹೇಮಂತ್ ಕುಮಾರ್ ಜಿ         

ಚಿಕ್ಕಮಗಳೂರು

ಶ್ರೀ ಗುರುಪ್ರಸಾದ್ 

ಚಿಕ್ಕಮಗಳೂರು

ಶ್ರೀ ನಾಗೇಶ್ ಅಡಿಗ        

ಚಿಕ್ಕಮಗಳೂರು

ಶ್ರೀ ರವಿರಾಜ್       

ಚಿಕ್ಕಮಗಳೂರು

ಡಾ|| ಕುಮಾರ ಸ್ವಾಮಿ ಬಿ.ವಿ         

ಮೈಸೂರು


-: ಶ್ರೀಮದ್ರಾಜಸೂಯ ಯಾಗ ವಿವರಣೆ:- 

ವೇದ ವಿಜ್ಞಾನ ಮಂದಿರದಲ್ಲಿ ದಿನಾಂಕ: 14-01-2021 ರಿಂದ ಆರಂಭಿಸಿ ದಿನಾಂಕ: 12-02-2021 ರವರೆಗೆ ನಡೆದ ರಾಜಸೂಯ ಯಾಗದ ಕುರಿತು ಒಂದು ವರದಿ ಸಿದ್ಧಪಡಿಸಿರುತ್ತೇನೆ. ಕಾರಣ ಎಲ್ಲರಿಗೂ ತಿಳಿದಿರಲಿ ರಾಜಸೂಯದ ಉದ್ದೇಶ, ಆದರ್ಶ, ದೃಷ್ಠಿ, ಸಾಫಲ್ಯತೆ, ಅಗತ್ಯತೆ ಅರಿವಿರಲಿ ಎಂದು. ನಮ್ಮೀ ಭರತಖಂಡದಲ್ಲಿ ವಿಶೇಷವಾದ ಕರ್ತವ್ಯವೆಂದರೆ ಹಿರಿಯರನ್ನು ಗೌರವಿಸುವುದು. ಅದು ಈ ಕೊರೊನಾ ಕಾಲದಲ್ಲಿ ಕಾನೂನಾತ್ಮಕವಾಗಿ ದೇಶದ ಹಿತದೃಷ್ಟಿಯಿಂದ ನಿಷೇಧಿಸಲ್ಪಟ್ಟಿತು. ಹಿರಿಯರಾಗಲಿ ಅಥವಾ ಇನ್ಯಾರೇ ಆಗಲೀ ಸತ್ತರೆ ಶವ ಸಂಸ್ಕಾರ ಮಾಡಲೂ ಅವಕಾಶವಿಲ್ಲದಂತಾಯ್ತು. ಹಾಗಾಗಿ ಆ ಒಂದು ವಿಶೇಷ ಸ್ಪಂದನವೇ ಕೊಂಡಿ ಕಳಚಿಕೊಂಡಿತು. ಅದರ ಪುನರ್ನಿರ್ಮಾಣ ಮತ್ತು ಭವ್ಯ ಭಾರತದ ಉದ್ದೇಶದಿಂದ ಇದು ಸಂಘಟಿಸಲ್ಪಟ್ಟಿತು. ಅದೇ ರಾಜಸೂಯ ಯಾಗ. ಒಂದಲ್ಲಾ ಒಂದು ಜನ್ಮದಲ್ಲಿ ಈ ಕೊರೊನಾ ಕಾಲದಲ್ಲಿ ಸತ್ತವರೆಲ್ಲಾ ಏನಕೇನ ಪ್ರಕಾರೇಣ ಬಂಧುಗಳೇ. ಆತ್ಮಿಕ ಬಾಂಧವ್ಯ ಈ ನೆಲೆಯಲ್ಲಿ ಚಿಂತಿಸಿ ಈ ಸೂತ್ರೀಕೃತ ಯಾಗ ಮಾಡಲಾಗಿದೆ. 

ರಂಜಕನಾಗಿದ್ದವ ರಾಜನೆನೆಸಿಕೊಳ್ಳುತ್ತಾನೆ. ಪ್ರತಿಯೊ ಬ್ಬರನ್ನೂ ಸಂತೋಷವಾಗಿಡಬಲ್ಲವನೇ ರಾಜನೆನೆಸಿಕೊಳ್ಳು ತ್ತಾನೆ. ಹಾಗೇ ರಂಜನೆಯನ್ನು ಸೂಯ=ಕೂಡಿಸುವುದು. ಅದೇ ಱಾಜಸೂಯ. ನಮ್ಮ ಸುತ್ತಿನ ಎಲ್ಲಾ ಬಂಧು-ಮಿತ್ರರು, ನೆರೆಹೊರೆಯವರು, ಎಲ್ಲರ ಹಿತವನ್ನು ಬಯಸಿ ಮಾಡುವ ಯಾಗವೇ ರಾಜಸೂಯವೆನ್ನಿಸುತ್ತದೆ. ಇದನ್ನು ಸೂತ್ರೀಕರಿಸಿ ದವನು ಉದಂಕನೆಂಬ ಮಹರ್ಷಿ. ಜಗತ್ತಿನಲ್ಲಿ ಹುಟ್ಟುವ ಮಾನವರೆಲ್ಲಾ ಒಳ್ಳೆಯವರಾಗಿಯೇ ಹುಟ್ಟುವಂತೆ ಮಾಡುವ ಒಂದು ಪ್ರಕ್ರಿಯೆ ಇದಾಗಿರುತ್ತದೆ. ಹಾಗೇ ಯಾವುದೇ ರೀತಿಯ ದುರಂತ, ದುರ್ಮರಣ, ಅಸಹಜ ಸಾವು, ಉತ್ಪಾತ, ಭೂಕಂಪ, ನೆರೆ, ಬಿರುಗಾಳಿ, ಉಲ್ಕಾಪಾತ ಕಾರಣದಿಂದಾಗಿ ಸಾಮೂಹಿಕ ಸಾವು ಉಂಟಾದಲ್ಲಿ ಸಾಮೂಹಿಕ ಸದ್ಗತಿ ಒದಗಿಸುವ ಪ್ರಕ್ರಿಯೆಯೂ ಇದಾಗಿರುತ್ತದೆ ಈ ಉದ್ದೇಶದಿಂದ. ಉದಂಕಮುನಿಯ ಸಾಧನೆಯ ಬಗ್ಗೆ ಒಂದು ಮಾತು ನಿಮಗೆ ತಿಳಿದಿರಲೇಬೇಕು. ಉದಂಕನು ಅಜಾಮಿಳನ ಸಮಕಾಲೀನ, ಸಗರನ ಪೂರ್ವೀಕ ರಾಜರ್ಷಿ. ತನ್ನ ಅಧಿಕಾರ ತ್ಯಾಗ ಮಾಡಿ ಕಾಡಿಗೆ ತೆರಳಿ ತಪವನ್ನಾಚರಿಸಿ ಈ ಲೋಕ ಸೃಷ್ಟಿಯಲ್ಲಿ ಒಳ್ಳೆಯದೇ ಸೃಷ್ಟಿಯಾಗಬೇಕು ಎಂಬ ಸಂಕಲ್ಪದಲ್ಲಿ ಸಾಧನೆ ಮಾಡಿ ಈ ಯಾಗ ಸೂತ್ರವನ್ನು ಸಿದ್ಧಪಡಿಸಿ ಯಾಗಕ್ಕೆ ಸಿದ್ಧನಾಗುತ್ತಾನೆ. ಆದರೆ ಪತ್ನಿಯಿಲ್ಲದೇ ಯಾಗ ಮಾಡುವ ಆರ್ಹತೆ ಬರುವುದಿಲ್ಲವಾದ್ದರಿಂದ ವಿವಾಹನಾಗುವ ಉದ್ದೇಶದಿಂದ ಲೋಕ ಸಂಚಾರಕ್ಕೆ ತೆರಳುತ್ತಾನೆ. ಇದನ್ನರಿತ ಕೆಲ ಸ್ಥಾಪಿತ ಹಿತಾಸಕ್ತಿಗಳು ಜಿಂಕೆ ಮರಿಗೆ ಸ್ತ್ರೀ ರೂಪವನ್ನು ಕೊಟ್ಟು ಮದುವೆ ಮಾಡಿಸುತ್ತಾರೆ. ವಿವಾಹಾನಂತರ ಅದು ಪುನಃ ಜಿಂಕೆಯಾಗುತ್ತದೆ. ಹೀಗಾಗಿ ಮೋಸ ಹೋದ ಉದಂಕ ಈ ಯಾಗ ಕೈಬಿಟ್ಟು ಮುಂದೆ ಯಾರಾದರೂ ಈ ಯಾಗ ಮಾಡಿದಲ್ಲಿ ಅದರ ಸಾಫಲ್ಯತೆಗೆ ತನ್ನ ತಪೋಬಲವನ್ನು ಧಾರೆಯೆರೆಯುತ್ತಾನೆ. ಹಾಗಾಗಿ ಉದಂಕ ಮಹರ್ಷಿಯ ಅನುಗ್ರಹದಿಂದಾಗಿ ಯಾಗ ಸಾಫಲ್ಯತೆ ಪಡೆಯಲು ಸಹಕಾರಿಯಾಗುತ್ತದೆ. ಪ್ರಪಂಚವೆಲ್ಲಾ ಒಳ್ಳೆಯದೇ ಇರಲಿ, ಸತ್ಪರುಷರೇ ಇರಲಿ ಎಂಬ ಹಾರೈಕೆಯು ಕೈಗೂಡುತ್ತದೆ. ಈ ನೆಲೆಯಲ್ಲಿ ಉದಂಕನ ಆಶಿಷವು ಹಾಗೂ ಪ್ರಪಂಚಕ್ಷೇಮವೂ ನೆರವೇರಲು ಈ ಸಂದರ್ಭದಲ್ಲಿ ಬಂದ ಸಾಂಕ್ರಾಮಿಕ ರೋಗ ಉತ್ಪಾತಗಳ ಕಾರಣ ಸಾಕು. ಹಾಗಾಗಿ ಈ ಸಂದರ್ಭದಲ್ಲೇ ರಾಜಸೂಯ ಯಾಗ ಆಯೋಜಿಸಲ್ಪಟ್ಟಿತು. ಇದೊಂದು ಸೂತ್ರೀಕೃತ ವ್ಯವಸ್ಥಿತವಾದ ಸಕಲ ಲೋಕ ಕಲ್ಯಾಣಕಾರಕವಾದ ಯಾಗ. ಅದರ ವಿವರ ಈ ಕೆಳಗಿನಂತಿದೆ.

ಇದೊಂದು ನಾಲ್ಕು ವೇದಗಳಲ್ಲಿ ಉದಾಹರಿಸಿದ ಮಂತ್ರಸೂಕ್ತಗಳನ್ನು ಆಧರಿಸಿ ಸೂತ್ರೀಕರಿಸಿದ ಯಾಗ ಪ್ರಕ್ರಿಯೆಯಾಗಿರುತ್ತದೆ. ಅಥರ್ವಣವೇದದಲ್ಲಿ ಅತೀ ಹೆಚ್ಚು ವಿವರವಾಗಿ ನಿರೂಪಿಸಲ್ಪಟ್ಟಿರುವುದರಿಂದ ಅದನ್ನೇ ಆರಿಸಿಕೊಳ್ಳಲಾಗಿದೆ. ಇದು ಮೂರು ವಿಭಾಗಗೊಂಡು ನಡೆಯುವ ಪ್ರಕ್ರಿಯೆ.

1)   ಯಜ್ಞಭಾಗ - ಇದನ್ನು ಧರ್ಮವತಿಯರಾದ ಮಹಿಳೆಯರೇ ಆಚರಿಸಬೇಕು.

2)   ಉಪಾಸನಾಭಾಗ - ವಟುಗಳಿಂದ ನಡೆಯುವ ಉಪಾಸನಾ ವಿಧಿ ಸಹಿತ ಬಲ ಸಮೃದ್ಧಿ.

3)   ಯಾಗಭಾಗ ಪ್ರಯೋಗವಿಧಿ ಇರುತ್ತದೆ. ನಂತರ ಧರ್ಮದಲ್ಲಿ ಸಂಯೋಜನೆಯಾಗುತ್ತದೆ.

ಅದನ್ನಾಧರಿಸಿ ಪುನಃ ಮರುದಿನದ ಯಜ್ಞಭಾಗ. ಹೀಗೆ 5 ಬಾರಿಯ ಆವರ್ತನೆಯೊಂದಿಗೆ ಒಂದು ಪೂರ್ಣಾಂಕ. ಹಾಗೇ 5 ಪೂರ್ಣಾಂಕವೇ ಮೂಲಪ್ರಕೃತಿ. ನಂತರದ 3 ಆವರ್ತನೆಯು ತ್ರಿಗುಣಾತ್ಮಕ ಪ್ರಪಂಚ. ಸತ್-1   ತಮ-1, ಸತ್+ತಮ-1, ತಮ+ಸತ್-1, ಸಮತಾಸತ್+ ತಮ-1. ಹೀಗೆ ಪಂಚೀಕರಣಗೊಂಡು ಯಾಗ ನಡೆಯುತ್ತದೆ. ಗುಣಾತ್ಮಕ+ ಗುಣಾತಿರೇಕನ್ಯೂನ ವೆಂಬ ಕ್ರಿಯಾತ್ಮಕ ಪ್ರಪಂಚ ತೆರೆದುಕೊಳ್ಳುತ್ತದೆ. ಹಾಗಾಗಿಯೇ ಸತ್ಪ್ರಜಾವೃದ್ಧಿ ಸಾಧ್ಯ.

1) ಇಮಾಂ

2) ಪ್ರೇಮಾಂ

3) ಅಪೇಮಾಂ

4) ಈ ಈಮಾಂ

5) ನಿರಿಮಾಂ

6) ಉದಿಮಾಂ

7) ಸಮೇಮಾಂ

ಎಂಬ ಧಾತು ಸಂಘಟನಾ ಸೂತ್ರ ನಿರ್ದೇಶನದಂತೆ ಕಾಯಿಕ, ವಾಚಿಕ, ಆಂಗಿಕ, ಮಾನಸಿಕ, ಬೌದ್ಧಿಕ, ಬಾಲ್ಯಕ, ಶಲ್ಯಕ ವೆಂಬ ಸಪ್ತ ಪ್ರಕರಣ ಘಟಿಸಲ್ಪಟ್ಟು ಪೂರಕ ಜೀವ ರಚನೆ ಉಂಟಾಗುವುದರಿಂದ ಅದು ಭೂಮಿಯಲ್ಲಿ ಸತ್ ಆಗಿಯೇ ವ್ಯವಹರಿಸುತ್ತದೆ. ಮಿಥ್ಯಾ ಪ್ರಪಂಚದ ನಾಶಗುಣವನ್ನು ಜಯಿಸಿ ಸ್ಥಿರವೂ, ಶಾಶ್ವತವೂ ಆಗಬಹುದು. ಇದರಿಂದಾಗಿ ಉದಂಕನ ಯಜ್ಞೋದ್ದೇಶಕ್ಕೆ ಭಂಗ ತಂದರು ಹಿತಾಸಕ್ತಿಗಳು ಆ ಕಾಲದಲ್ಲಿ. ಈ 5 ರ ಸೂತ್ರವು ಮುಂದೆ ಪಂಚಕುಂಡಿಕಾ ಪ್ರಯೋಗವೆಂದು ಇತರೆ ಸೂತ್ರಕಾರರು ಹೊಗಳಿದ್ದಾರೆ. ಪ್ರಯೋಗ ನಿರ್ದಿಷ್ಟ ಗುರಿಯನ್ನು ಹೊಂದಿರುತ್ತದೆ. ನಿಖರತೆಯನ್ನೂ ಸಾಧಿಸುತ್ತದೆ. ಅದರ ಸೂತ್ರ -ಯೇ ಪಂಚ ಪಂಚಾಸ್ತ್ರಯೋ ದ್ವಾದಶ ಷಡ್ ವಿಂಶತಿ ದಶಭಾ ಸಹಸ್ರೈಃ ಏಕೋನ್ನತಿ ವಿಂಶತೈಃ ಪಂಚೇಕದಶಾದಿಭಿಃ ರಾಜಸೂಯಃ ಅದರಂತೆ ಮಂತ್ರಪುಂಜಗಳಲ್ಲಿ

ಕಣ್ವಃ ಕಕ್ಷೀವಾನ್ ಪುರುಮೀಢೋ ಅಗಸ್ತ್ಯಃ ಶ್ಯಾವಾಶ್ವಃ ಸೋಭರ್ಯಾರ್ಚನಾನಾಃ ವಿಶ್ವಾಮಿತ್ರೋಽಯಂ ಜಮದಗ್ನಿರತ್ರಿರವಂತು ನಃ ಕಶ್ಯಪೋ ವಾಮದೇವಃ ಎಂದಿದೆ.

ಅವೆಲ್ಲಾ ಆ ಋಷಿಮುನಿಗಳ ಕರ್ತೃತ್ವಶಕ್ತಿಯ ಸಂಖ್ಯಾಸೂಚಕವೆಂದೇ ಅರ್ಥ. ಅದರಂತೆ ವ್ಯಾಖ್ಯಾನಿಸಿದಾಗ ಮಾತ್ರ ಈ ಯಾಗಸೂತ್ರ ತೆರೆದುಕೊಳ್ಳುತ್ತದೆ. ಅದನ್ನಾಧರಿಸಿ ಈ ಉದಂಕಕೃತ ಪಂಚಕುಂಡಿಕಾ ಪ್ರಯೋಗ ಸೂತ್ರವನ್ನು ಉದ್ಘಾಟಿಸಿದಾಗ ಅಲ್ಲಿ ಕಂಡ ಅದ್ಭುತ ಸತ್ಯ ವರ್ಣನಾತೀತ. ಮಹಾದ್ಭುತ, ಕಲ್ಪನಾತೀತ ಪ್ರಪಂಚ. ಅದನ್ನು ತೆರೆದು ನೋಡಿದಾಗ ಇದರ ಪೂರ್ವೋದಾಹರಣೆಗಾಗಿ ಅನ್ವೇಷಣೆ ಮಾಡಿದಾಗ ಸರಿಯಾದ ಮಾಹಿತಿ ಸಿಗದಿದ್ದಾಗ ಅನಾರೋಗ್ಯದ ನೆಪವೊಡ್ಡಿ ಎಲ್ಲರಿಂದಲೂ ಮರೆಯಾಗಿ ಸತತ 7 ದಿನಗಳ ಕಾಲ ಅನ್ವೇಷಣೆ ಮಾಡಿದಾಗ ಅನ್ವೇಷಣೆಯಲ್ಲಿ ಸಿಕ್ಕಿದ ಹಿಂದಿನ ಮಹಾತ್ಮರ ನಿರ್ದೇಶನ, ಅನುಭವವಾಕ್ಯ, ಎಲ್ಲವನ್ನೂ ಮೇಳವಿಸಿ ಈ ಯಾಗ ನಿರ್ವಹಣೆಯಾಗಿರುತ್ತದೆ. ಈ ಸಂದರ್ಭದಲ್ಲಿ ಕೆಲ ವಿಶೇಷ ಸಾಧನೆಗೈದ ಋಷಿಗಳೂ, ಯೋಗಿನಿಯರೂ ಕೂಡ ಯಾಗದಲ್ಲಿ ಸಹಕರಿಸುವುದಾಗಿ ವಚನವಿತ್ತಿದ್ದರಿಂದ ಅವರ ಆಶ್ವಾಸನೆ ಮತ್ತು ಭರವಸೆಯ ಮೇರೆಗೆ ಯಾಗ ಮಾಡಲು ಸಂಕಲ್ಪಿಸಲಾಯ್ತು.

ಈ ಪಂಚಕುಂಡಿಕಾ ಪ್ರಯೋಗವು ಒಂದು ವಿಶೇಷ ರೀತಿಯ ಸಂಯೋಜನೆ, ತೀಕ್ಷ್ಣ ಅಗ್ನಿ ಸಂಯೋಜನೆ, ತನ್ಮೂಲಕ ಉನ್ಮಾದಿನೀ ಕಿರಣ ತರಂಗೋತ್ಪಾದನೆ, ಕ್ಷಿಪ್ರಗತಿ, ನಿಖರಗುರಿ, ನಿರ್ದಿಷ್ಟ ಕಾರ್ಯ ಸಾಧನೆ ಈ ಪ್ರಯೋಗದಿಂದ ಸಾಧ್ಯ. ಇದರಲ್ಲಿ ಯಜ್ಞಭಾಗದಲ್ಲಿ 5 ಜನ ಪ್ರಧಾನ ಮಹಿಳೆಯರು (ವಿವಾಹಿತ) ನಿರ್ವಹಿಸುತ್ತಾರೆ. ಅದರಲ್ಲಿ ಉದಾಹರಿಸಿದಂತೆ ಸೋಮ ಪ್ರಧಾನ ಹೋಮ ಮತ್ತು ಅಂಡ ಮೂಲಕ ಪ್ರಯೋಗವಿದೆ. ಇವರಲ್ಲಿ -

1.

ಕೆ.ಎನ್.ಸುಮತಿ ನಿತ್ಯಾನಂದ

ಸುಲಭಾ

ಕಾರ್ಯತಜ್ಞೆ

2.

ಸುಮತಿ ಸತೀಶ್

ಸುಭಗಾ

ಕ್ರಿಯಾತಜ್ಞೆ

3.

ಕುಸುಮಾ ಅರವಿಂದ

ಧಾತ್ರಿ

ಪ್ರಕೃತಿತಜ್ಞೆ

4.

ಪೂನಂ ಅಭಿಜಿತ್

ವೇದಾವತಿ

ಜ್ಞಾನತಜ್ಞೆ

5.

ಮೌಲ್ಯಅಶೋಕ್

ಮಾಲ್ಯವತಿ

ಸಂಸ್ಕಾರತಜ್ಞೆ


ಹೀಗೆ ಇವರ 5 ವಿಧದ ಮೂಲಜ್ಞಾನವನ್ನು ಪಡೆಯು ಯೋಜನೆಯಂತೆ ಪವಿತ್ರದಲ್ಲಿ ಅವರು ನೆಲಸಿ ನಿರಂತರ ಯಜ್ಞಾಂಗ ಮಾರ್ಗದರ್ಶನ ಮಾಡಿದ್ದರು. ಅವರು ಅವರ ಮಾತಿನಂತೆ ಯಜ್ಞಭಗದಲ್ಲಿ ಪೂರ್ಣ ಯಶಸ್ವಿಗಳಾಗಿದ್ದರು. ಅವರವರ ತಜ್ಞತೆಯಲ್ಲಿ ಅವಲೇಶವೂ ಕುಂದಿಲ್ಲ. ಹಾಗಾಗಿ ಯಾಗದ ಮೊದಲಭಾಗ ಸಂಪೂರ್ಣ ಯಶಸ್ವಿಯಾಗಲು ಸಹಕಾರಿಯಾಯ್ತು. ಈ ಹಿನ್ನೆಲೆಯಲ್ಲಿ ಮುಂದಿಡುವ ಪ್ರತೀ ಹೆಜ್ಜೆಯೂ ತುಂಬಾ ಎಚ್ಚರಿಕೆಯಿಂದಿಟ್ಟು ಮುನ್ನಡೆಯಲು ಸಹಕಾರಿಯಾಯ್ತು. ಈ 5 ಜನ ಮಹಿಳೆಯರಲ್ಲದೇ ಮತ್ತೆ ನಿತ್ಯವೂ ಉಪಹೋಮಕ್ಕೆ ತಾವೇ ಸ್ವಯಂ ಬಂದು ಸಹಕರಿಸಿದ ಅಸಂಖ್ಯ ಮಹಿಳೆಯರ ಸಹಕಾರವೂ ಇಲ್ಲಿ ಸ್ಮರಣಾ ಯೋಗ್ಯವಾಗಿರುತ್ತದೆ. ಮತ್ತು ನಿತ್ಯ ಕೃಷ್ಣಪೂಜೆಯನ್ನು ಈ ಮಹಿಳೆಯರೇ ನಿರ್ವಹಿಸಿರುವುದು ಶ್ಲಾಘನೀಯವಾಗಿದೆ ಮತ್ತು ಎಲ್ಲರಿಗೂ ಊಟ, ಕಾಫಿ, ತಿಂಡಿ, ಕಷಾಯ ಇತ್ಯಾದಿ ಸ್ವತಃ ತಯಾರಿಸಿ ಒದಗಿಸಿದ ಹಿರಿಮೆಯೂ ಹಲವು ಜನ ಮಹಿಳೆಯರ ಒಗ್ಗಟ್ಟಿನಿಂದ ಆಗಿರುತ್ತದೆ. ನಿತ್ಯಾನ್ನದಾನ ಸಣ್ಣಪ್ರಮಾಣದಲ್ಲಿ ಒಂದು ತಿಂಗಳು ಪರ್ಯಂತ ಚ್ಯುತಿಯಿಲ್ಲದೆ ನಡೆದಿರುತ್ತದೆ. ಈ ಯಜ್ಞಭಾಗದಲ್ಲಿ ಅನುಷ್ಠಿಸಿದ ಮಂತ್ರಭಾಗವು ಅಥರ್ವದ 19 ನೇ ಕಾಂಡದ ಮಂತ್ರಗಳು. ಶ್ರೀಸೂಕ್ತ ಹಾಗೂ ಇನ್ನಿತರ ಮಾತೃಕಾ ಮಂತ್ರಗಳು. ಒಟ್ಟಾರೆಯಾಗಿ ಸಮಗ್ರತೆಯಲ್ಲಿ 1+3+5+7+9+16 ಎಂಬ ರೀತಿಯಲ್ಲಿ ನಡೆದಿರುತ್ತದೆ. ಒಟ್ಟು ಮಂತ್ರಸಂಖ್ಯೆ 453. ಬಳಸಿದ ದ್ರವ್ಯಗಳು ಸೋಮ ಮತ್ತು ಅಕ್ಕಿ+ಹೆಸರು+ಕಡಲೆ ಮಿಶ್ರಿತ ಅಂಡಗಳು, ಅರಳು, ಬತ್ತ, ಎಳ್ಳು, ಔಷಧಿ ದ್ರವ್ಯಗಳು, ತುಪ್ಪ, ಎಲ್ಲವೂ ವಿಪುಲವಾಗಿ ಬಳಕೆಯಾಗುತ್ತಾ ಯಜ್ಞವು ಅನ್ಯೋನ್ಯ ಸಹಾಯ ನಿಯಮದಂತೆ ನಡೆದಿರುತ್ತದೆ ಸೂತ್ರಬದ್ಧರೀತಿಯಲ್ಲಿ. ಅದರ ಸಂಯೋಜನೆ ಯಾಗದಲ್ಲಿ ಪೂರ್ಣಪ್ರಮಾಣದಲ್ಲಿರುತ್ತದೆ. ಅದರ ಬಗ್ಗೆ ಬರೆಯುವುದಿದ್ದರೆ ಅದರಲ್ಲಿ ಸೋಮಶಕ್ತಿಯೇ ಪ್ರಧಾನವಾಗಿರುತ್ತದೆ. ಅದಕ್ಕಾಗಿ ಶಾಸ್ತ್ರೀಯವಾಗಿ 108+1 ಸೋಮಲತಾವನ್ನು ಅರಾವಳಿ ಪರ್ವತ ಪ್ರಾಂತ್ಯ ಮತ್ತು ಹಿಮಾಲಯ, ಅರುಣಾಚಲ ಪ್ರಾಂತ್ಯ, ಕದಳೀವನ ಪ್ರಾಂತ್ಯಗಳಿಂದ ವಿಶೇಷವಾಗಿ ಸಂಗ್ರಹಿಸಿ ತಂದು ಮಂತ್ರಪುರಸ್ಸರವಾಗಿ ಶುದ್ಧೀಕರಿಸಿ 48 ದಿನಗಳಲ್ಲಿ ಅದನ್ನು ಶಾಸ್ತ್ರೀಯವಾಗಿ ತಯಾರಿಸಿದವರು ಮಹಿಳೆಯರೇ. ನಿರ್ದೇಶನ ಮಾತ್ರ ನಾನು ಮಾಡಿರುತ್ತೇನೆ. ಅಲ್ಲದೆ ಯಾಗ ಪೂರ್ಣಾಹುತಿಯವರೆಗೂ ಅದರ ಮೂಲ ಚೈತನ್ಯ ಕಾಪಿಡುವ ಉದ್ದೇಶದಿಂದ ಯಾವುದೇ ಗಂಡಸರ ಸ್ಪರ್ಶ ಮಾಡಿರುವುದಿಲ್ಲ. ಶುದ್ಧ ಸೋಮಲತಾ, ಶುದ್ಧ ಸೋಮರಸ ಪರಿಪೂರ್ಣವಾದ ಶ್ರೌತ ಸೂತ್ರೋಕ್ತರೀತಿಯಲ್ಲಿ ರಾಜಸೂಯ ಸೋಮಯಾಗವನ್ನು ಉದಂಕ ಮಹರ್ಷಿಯ ಹಾರೈಕೆಯಂತೆ ನಿರಂತರ ಶ್ರಮದಿಂದ ತಯಾರಿಸಲ್ಪಟ್ಟು ಬಳಕೆಯಾಗಿರುತ್ತದೆ. ಎಲ್ಲಾ ನಮ್ಮ ಋತ್ವಿಕ್ ವಾಣಿ ಬಳಗಕ್ಕೂ ಈ ಸೋಮರಸ ತೀರ್ಥರೂಪದಲ್ಲಿ ಉಳಿದಿದ್ದನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.

ಲೋಕ ಕಲ್ಯಾಣಕರವೂ, ಶಾಂತಿ ಪುಷ್ಟಿಕರವೂ, ಆರೋಗ್ಯದಾಯಕವೂ ಆದ ಸೋಮರಸವು ವೇದೋಕ್ತವಾದ ರೀತಿಯಲ್ಲಿ ಆಸವ ಕಲ್ಪದಂತೆ ತಯಾರಿಸಲಾಗಿದೆ. ಅಂದಾಜು 100 ವರ್ಷಕ್ಕಿಂತಲೂ ಹೆಚ್ಚು ಕಾಲ ತನ್ನಲ್ಲಿ ಔಷಧೀಯ ಗುಣವನ್ನು ಹೊಂದಿ ಸಕಲ ಚೈತನ್ಯರೂಪಿಯಾಗಿ ಇದು ಉಳಿದಿರುತ್ತದೆ. ಇದರ ರಸಕಲ್ಪವು ವಿಶೇಷವಾದದ್ದು. ವೇದಗಳಲ್ಲಿ ಇದನ್ನು ರಸಕಲ್ಪಗೊಳಿಸುವ ವಿಧಾನ ವಿಸ್ತಾರವಾಗಿ ಸೂಚಿಸಲಾಗಿರುತ್ತದೆ. ಒಟ್ಟು 48 ದಿನಗಳ ಕಾಲದ ತಯಾರಿಕಾ ವಿಧಾನ ಇದಾಗಿರುತ್ತದೆ. 29 ದಿನಕಾಲ ನಿತ್ಯವೂ ಸೋಮದಿಂದಲೇ ಮೂರು ರೀತಿಯಲ್ಲಿ ಹೋಮವಿರುತ್ತದೆ. ಅಲ್ಲಿ ಸೋಮವನ್ನು ಯಾಗಶಾಲೆಗೆ ತರಲು ಕೂಡ ಗಂಡಸರು ಮುಟ್ಟುವಂತಿಲ್ಲ. ಮತ್ತು ಇತರೆ ಕಾಲದಲ್ಲಿ ಅದಕ್ಕೆ ಸಂಕರ್ಷಣ ನ ಕಾವಲಿರುತ್ತದೆ. ಕಾರಣ ಅದು ಬಹು ಅಮೂಲ್ಯವಾದದ್ದು.

ಈ ರೀತಿಯಲ್ಲಿ ಸಾಕ್ಷಾತ್ ಪ್ರಕೃತಿರೂಪರಾದ ಮಹಿಳೆಯರಿಂದ ಸೋಮೋದ್ಭವವಾಗಿ ಮೂಲಪ್ರಕೃತಿಯಲ್ಲಿ ನವಚೈತನ್ಯಪೂರ್ವಕ ಮುಂದಿನ ತಲೆಮಾರಿನ ಎಲ್ಲರೂ ಉತ್ತಮೋತ್ತಮರಾಗಿ ಹುಟ್ಟಿ ಬರಲಿ, ಎಲ್ಲರೂ ದೇಶಭಕ್ತರಾಗಲಿ ಹಾಗೂ ಧರ್ಮಬದ್ಧತೆಯಿಂದ ಬಾಳು ಬದುಕಲಿ, ದೇಶದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಮೋಸ, ವಂಚನೆ, ಕಳ್ಳತನ, ಭ್ರಷ್ಟಾಚಾರ ನಿರ್ಮೂಲನೆಯಾಗಲಿ ಎಂಬ ಹಾರೈಕೆಯೊಂದಿಗೆ ನಡೆದ ಈ ಯಾಗದ ವಿಶೇಷತೆ, ವಿಶಿಷ್ಟತೆ ಬರೆದು ತಿಳಿಸಲು ಅಸಾಧ್ಯವೇ ಆಗಿರುತ್ತದೆ. ಹಲಕೆಲವು ಅಂಶಗಳನ್ನು ಬರೆದು ವಿವರಿಸಬಹುದು. ಆದರೆ ಎಲ್ಲವನ್ನೂ ಬರೆಯಲು ಸಾಧ್ಯವೇ ಇಲ್ಲ. ಹಾಗಾಗಿ ನನ್ನ ಇತಿಮಿತಿಯಲ್ಲಿ ಮಹಿಳೆಯ ಪಾತ್ರವೇನು. ಎಷ್ಟು ಫಲಪ್ರದವೆಂದು ವಿವರಿಸಲು ಪ್ರಯತ್ನಿಸಿದ್ದೇನೆ. ದೇಶ ಕಟ್ಟುವಲ್ಲಿ ಯಾಗ, ಯಜ್ಞಗಳು ಮಾತ್ರವಲ್ಲ ಸ್ತ್ರೀಯರು ಪ್ರಯತ್ನಿಸಿದರೆ ಅದಿಲ್ಲದೇನೇ ಸಮೃದ್ಧಭಾರತ ಕಟ್ಟಬಲ್ಲರೆಂದು ಈ ಮೂಲಕ ಹೇಳುತ್ತಾ ಮುಂದಿನ ವಟುಗಳ ಕಾರ್ಯಕ್ಷಮತೆ ಬಗ್ಗೆ ಬರೆಯುತ್ತೇನೆ.

ಈ ಯಜ್ಞದ ನಂತರ ಅದರಲ್ಲಿ ಯೋಜಿಸಿದ ದೇವತಾ ಉಪಾಸನಾ ಭಾಗವೇ 2 ನೆಯದಾದ ಉಪಾಸನಾ ವೆಂಬ ವಟುಗಳಿಂದ ಆಚರಿಸಲ್ಪಟ್ಟ ಭಾಗ. ಇದರಲ್ಲಿ - 5+1 ರಂತೆಕೆ.ಎನ್. ಮದನ್ ಕುಮಾರ್

ಉದ್ಗಾತಾ

ಧ್ಯುಮಂತ

ರವಿಕಿರಣ್

ಸೋದ್ಗಾತಾ

ಋಚೀಕ

ಗಿರೀಶ್

ಸ್ತೋತ್ರಾ

ಮಣಿಮಂತ

ಪ್ರಜ್ವಲ್

ಪ್ರಸ್ತೋಭ

ಹಾರೀತ

ಮೋಹನ

ವಾಚಿಕ

ಕೇಶೀ

ಮಣಿಕಂಠ

ಅನುವಾಚಿಕ

ಋತಶ್ರವ
ಈ ರೀತಿಯಲ್ಲಿ ಪವಿತ್ರಪಾಣಿಗಳಾದ 6 ಜನ ವಟುಗಳ ಜೊತೆಯಲ್ಲಿ ಆಂಶಿಕವಾಗಿ ಸೇರಿಕೊಂಡು ನಿರಂತರ ಉಪಾಸನೆಯಲ್ಲಿ ಸಹಕರಿಸಿದ ಮುಖ್ಯರು. ಇವರಲ್ಲದೇ -

1)   ಹಾರೀತ

2)   ಪುಷ್ಕರ

3)   ವತ್ಸ

4)   ಕಾಣ್ವ

5)   ಅವತ್ಸಾರ

6)   ಪ್ರಾತಿಶಾಖ್ಯ

7)   ಮರೀಚಿ

8)   ಶುನಪುಚ್ಛ

9)   ಔದಲ

10)         ಮುದ್ಗಲ

11)         ಆತ್ರೇಯ

12)         ಋಚೀಕಪುತ್ರ

13)         ನೊಧಾ

14)         ಗೌತಮ

15)         ಬೃಹದ್ಭಾನು

16)         ಶ್ಯಾವಾಶ್ವ

17)         ಮಾನಸೀಪುತ್ರ

18)         ಉದ್ದಾಲಕ

ಆದಿಯಾಗಿ ಹಲವು ಜನ ಋಷಿಗಳು ಈ ಯಾಗದಲ್ಲಿ ನಮಗೆ ಸಲಹೆ ಮಾರ್ಗದರ್ಶನ ಮಾಡಿರುತ್ತಾರೆ ಎಂದು ಹೇಳಲು ಸಂತೋಷವಾಗುತ್ತದೆ. ಹಾಗಾಗಿ ಉಪಾಸನಾ ಭಾಗದಲ್ಲಿ ಪೂರ್ಣ ಯಶಸ್ಸನ್ನು ಕಾಣಲು ಸಾಧ್ಯವಾಯ್ತು. ಈ ಉಪಾಸನಾ ಭಾಗದಲ್ಲಿ ಸ್ಥಿತಿಕರ್ತನಾದ ಮಹಾವಿಷ್ಣುವಿನ ಲ್ಲಿರತಕ್ಕ ಸಕಲ ಕರ್ತೃತ್ವ ತತ್ವಗಳನ್ನೂ ಉದ್ದೇಶಿಸಿ ಮುಂದಿನ ಯಾಗ ಕಾರ್ಯಕ್ಕೆ ಸಹಕರಿಸುವಂತೆ ಪ್ರಾರ್ಥಿಸಲಾಗಿದೆ. ಹಾಗೇ ಋಗ್ವೇದೀಯ ಪಂಚ ಪವಮಾನ ಸೂಕ್ತ ಪಾರಾಯಣ, ಹೋಮಗಳನ್ನು ನಿತ್ಯವೂ ನಡೆಸಲಾಗಿರುತ್ತದೆ. ಶುದ್ಧ, ಸಾತ್ವಿಕ, ಶ್ರೌತವಿಧಿಯಂತೆ ಸೋಮರಸದಿಂದ ಪಂಚಕುಂಡಿಕಾ ಪ್ರಯೋಗರೀತ್ಯಾ ಸೋಮ ಪ್ರದಾನ ಮಾಡಲಾಗಿದೆ. ವ್ಯಾಸರೇ ಸಾಕ್ಷಾತ್ತಾಗಿ ಉಪಾಸನೆಯನ್ನು ಪುರಸ್ಕರಿಸಿರುತ್ತಾರೆ. ನಮ್ಮ ಯಾಗಕ್ಕೆ ಉಪಾಸನೆಯೇ ಸತ್ವ, ಬಲ, ವೀರ್ಯ. ಹಾಗಾಗಿ ವೈಷ್ಣವೀ ಶಕ್ತ್ಯಾದಿ 32 ಬಲ + ವೀರ್ಯವನ್ನು ಉಪಾಸನೆ ಮುಖೇನ ಒದಗಿಸಿ ಕೊಟ್ಟಿರುತ್ತಾರೆ. ಸೃಷ್ಟಿ ಶಕ್ತಿಯ ಎಲ್ಲವೂ ಆದ ಅಥರ್ವದ 17 ನೆಯ ಕಾಂಡದ ಮಂತ್ರಗಳು ಇಂತಹ ಮಹಾಯಾಗಕ್ಕೆ ಅತೀ ಹೆಚ್ಚು ಪೂರಕ, ಪ್ರಚೋದಕ, ಸಹಾಯಕವಾಗಿರುತ್ತವೆ. ಹಾಗೇ ಋಗ್ವೇದೀಯ ಪಂಚಪವಮಾನ ಸೂಕ್ತವೂ ಕೂಡ ಪರಮಶ್ರೇಷ್ಠ ಮಂತ್ರಗಳು. ಅವೆರಡನ್ನೂ ಸೂತ್ರಬದ್ಧ ರೀತಿಯಲ್ಲಿ ಸಂಯೋಜಿಸಿ ಉಪಾಸನೆ ಮಾಡಿದಲ್ಲಿ ಯಾವ ಶಕ್ತಿಯನ್ನಾದರೂ ಸಾಧಿಸಿಕೊಳ್ಳ ಬಹುದು. ಅದನ್ನು ನಮ್ಮ ವಟುಗಳ ಗುಂಪು ಯಶಸ್ವಿಯಾಗಿ ಸಾಧಿಸಿ ತೋರಿಸಿದ್ದಾರೆ. ಯಾಗಕ್ಕೆ ಅತೀವ ಬಲ ಬಂತು. ಪವಮಾನ ಮಂತ್ರಗಳಂತೂ ಯೋಗ, ಆರೋಗ್ಯ, ಆಯುಃ, ಧನ, ಶಕ್ತಿ, ಬಲ, ವೀರ್ಯ, ಸುಖ, ಸಂತೋಷ, ಆನಂದ, ತಾದಾತ್ಮ್ಯತೆ, ತುರೀಯವನ್ನು ಸಾಧಿಸುವಲ್ಲಿ ಪರಿಪೂರ್ಣವಾದ ಮಂತ್ರಪುಂಜವಾಗಿರುತ್ತದೆ. ಅದನ್ನು ಸಾಧಿಸಿ ತೋರಿಸಿದರು ನಮ್ಮ ವಟು ಸಮೂಹ ಮತ್ತು ಅವರಿಗೆ ಸಹಕರಿಸಿದ ಇತರೆ ಉಪಹೋಮಗಳಲ್ಲಿ ಭಾಗವಹಿಸಿದ ವಟುಗಳು.

ಇನ್ನು ಮುಂದಿನದ್ದಾದ ಉಪಾಸನಾ ಸಾಧನೆಯನ್ನು ಹೇಳುವುದಿದ್ದರೆ ಮಂತ್ರರಾಜವೆನ್ನಿಸಿದ ಪವಮಾನ ಮಂತ್ರಗಳು ಮಾನವನಿಗೆ ಜೀವನ ಸ್ವಾದವನ್ನೂ, ಆರೋಗ್ಯವನ್ನೂ, ಮನಸ್ಸಿನ ಕ್ಷೋಭೆ ನಿವಾರಿಸುವುದನ್ನೂ ಹೇಳಿ ಕೊಡುವ ಸೂತ್ರ ಅದರಲ್ಲಿ ಅಡಕವಾಗಿದೆ. ಸ್ವಾದಿಷ್ಠಯಾ ಮದಿಷ್ಠಯಾ ಪವಸ್ವ ಸೋಮ ಧಾರಯಾ”“ಇಂದ್ರಾಯ ಪಾತವೇ ಸುತಃಎನ್ನುತ್ತದೆ ಆರಂಭ ಮಂತ್ರ. ಜೀವನ ಸ್ವಾದ ಅನುಭವಿಸಲು ಸ್ವಾದದ ಪರಿಚಯವಿರಬೇಕು. ಅದನ್ನು ಮಾಡಿಕೊಡುವುದು ಈ ಮಂತ್ರಪುಂಜಗಳು. ಪವಮಾನದಲ್ಲಿ ಇಂಥಾ ಎಷ್ಟೋ ಮಂತ್ರಗಳು ನೇರ ಮಾರ್ಗದರ್ಶಕವಾಗಿವೆ. ಅವುಗಳ ಉಪಾಸನೆಯು ಕೋಟಿ ಕೋಟಿ ಸಂಖ್ಯೆಯಲ್ಲಿ ಫಲನೀಡಬಲ್ಲ ಶಕ್ತಿ ಆ ಮಂತ್ರಗಳಿಗಿದೆ. ತಮೀಂ ಹಿನ್ವಂತ್ಯಗ್ರುವೋ ಧಮಂತಿ ಬಾಕುರಂದೃತಿಮ್”“ತ್ರಿಧಾತು ವಾರಣಂ ಮಧು ಎಂಬಂತೆ ತ್ರಿಗುಣಾತ್ಮಕ ಪ್ರಪಂಚದ ಅದ್ಭುತ ಸತ್ಯವನ್ನು ತೆರೆದಿಡುತ್ತದೆ. ಮತ್ತು ಧಾತು ಪ್ರಕ್ರಿಯಾವಿಧಿ ವಿಧಾನಗಳನ್ನು ವಿವರಿಸುತ್ತದೆ. ಹೀಗೆ ಪವಮಾನ ಮಂತ್ರಗಳು ಪ್ರಕೃತಿಯ ಮೂಲದಿಂದ ಬೀಜಾತ್ಮಕ ಪ್ರಚೋದನೆಯಿಂದ ಆರಂಭಿಸಿ ನಂತರದ ಜೀವಸೃಷ್ಟಿಯ ಭೇಧಗಳು, ಭಿನ್ನ ಭಿನ್ನ ರೂಪಗಳು, ಹೂ, ಹಣ್ಣು, ಕಾಯಿ, ಗಿಡ, ಮರ, ನೆಲ, ಜಲ, ಕಲ್ಲು, ಮಣ್ಣು ಪ್ರತಿಯೊಂದರದ್ದೂ ಅದರದ್ದೇ ಆದ ಪ್ರಕೃತಿ ಗುಣ ವಿಶ್ಲೇಷಿಸುತ್ತಾ ಅದನ್ನು ಮೂಲಕ್ಕೆ ಭಿನ್ನವಿಲ್ಲದಂತೆ ಹೊಂದಾಣಿಕೆಯನ್ನು ಮಾಡಿಕೊಡುತ್ತದೆ. ಅದೇ ತಂತ್ರಿಪೃಷ್ಠೇ ತ್ರಿವಂಧುರೇ ರಥೇ ಯುಂಜಂತಿ ಯಾತವೇ”“ಋಷೀಣಾಂ ಸಪ್ತಧೀತಿಭಿಃ ಎಂದು ಉಪಸಂಹಾರ ಮಾಡುತ್ತದೆ. ಜೊತೆ ಜೊತೆಯಲ್ಲಿಯೇ ಪ್ರಕೃತಿ ರಹಸ್ಯ, ದೇಹವೆಂಬ ಪ್ರಕೃತಿಯ ರಕ್ಷಣೆ, ಔಷಧೀಯ ಪದ್ಧತಿ, ಸುಖೀ ಜೀವನದ ಅರ್ಥ, ಸಂತೋಷದಾಯಕ ಮನಸ್ಥಿತಿ, ಆನಂದೋದ್ದೇಶ ಪ್ರವರ್ತನೆ, ನಿತ್ಯ ಕರ್ತವ್ಯ, ಕರ್ತವ್ಯ ನಿರ್ವಹಣೆಯ ಬದ್ಧತೆ, ಆತ್ಮೋನ್ನತಿ ಮಾರ್ಗ, ಪಾಪವಿದೂರವಿಧಿ, ಪುಣ್ಯಸಂಚಯನ ಹೀಗೆ ಒಂದಲ್ಲಾ ಒಂದು ವಿಧದಲ್ಲಿ ನಿತ್ಯವೂ ನಿರಂತರವೂ ಮಾನವನಿಗೆ ಬೋಧಿಸುತ್ತಲೇ, ಮಾರ್ಗದರ್ಶನ ಮಾಡುತ್ತಲೇ ಇರುವ ಪವಮಾನ ಮಂತ್ರವೇ ಅದ್ಭುತ.

ಹೀಗೆ ನಮ್ಮ ವಟು ಸಮೂಹ ನವರಾತ್ರಿ ಕಳೆಯುತ್ತಲೇ ಪವಮಾನ ಉಪಾಸನೆ ಕೈಗೊಂಡು ಪಾರಾಯಣ, ಅಭಿಷೇಕಾದಿಗಳಿಂದ ಸಾಧನೆ ಮಾಡುತ್ತಾ ನಂತರ ಯಾಗಕಾಲದಲ್ಲಿ ಸೂತ್ರೋಕ್ತ ವಿಧಿಯಲ್ಲಿ ಪವಮಾನ ಮಂತ್ರಗಳಿಂದ 5 ಕುಂಡಗಳಲ್ಲಿ ಸೋಮ ಪ್ರಧಾನ ಹೋಮ ಮಾಡಿದರು. ಪ್ರತೀನಿತ್ಯವೂ ಬೆಳಿಗ್ಗೆ ಪವಮಾನ ಹೋಮ ನಂತರ 10 ಗಂಟೆಗೆ ಯಾಗಾರಂಭವಾಗುತ್ತಿತ್ತು. ಈ ಉಪಾಸನಾ ಕಾಲದಲ್ಲಿ ದೇವತಾ ಸಂಪ್ರೀತಿಯ ಹಲ ಕೆಲವು ನಿದರ್ಶನಗಳು ದೊರಕಿರುತ್ತದೆ. ಅವುಗಳನ್ನೆಲ್ಲಾ ಈ ಲೇಖನದಲ್ಲಿ ಉದಾಹರಿಸಲು ಸಾಧ್ಯವಿಲ್ಲ. ಹಾಗಾಗಿ ಉಪಾಸನಾ ಬಲವೇ ಬಲ, ಉಪಾಸನೆ ಪ್ರಬಲವಾಗಿದ್ದಲ್ಲಿ ಯಾವುದೇ ಯಾಗದಲ್ಲಿ ಯಶಸ್ಸನ್ನು ಕಾಣಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಇದನ್ನು ಕಾರ್ಯಸಾಧ್ಯಗೊಳಿಸಿದವರು ನಮ್ಮ ವೇದ ವಿಜ್ಞಾನ ಮಂದಿರದ ವೇದಾಧ್ಯಯನ ನಿರತರಾದ ಹುಡುಗರು. ವಿಶೇಷ ಶ್ರದ್ಧಾ ಭಕ್ತಿಯಿಂದ ಹೇಳಿದ್ದನ್ನು ಚಾಚೂ ತಪ್ಪದಂತೆ ನಿಖರವಾಗಿ ಮಾಡುವ ಶಕ್ತಿ ಅವರಲ್ಲಿದೆಯೆಂದು ಸಾಬೀತು ಪಡಿಸಿದ್ದಾರೆ.  ಈ ಉಪಾಸನಾ ನೆಲೆಯಲ್ಲಿ ಯಾಗ ಪ್ರಯೋಗ ಭಾಗ ಸಂಪನ್ನಗೊಂಡಿತು.

ಪ್ರಯೋಗ ಯಾಗ ಭಾಗ :- 

ಅಥರ್ವವೇದದ ಕಾಂಡ -18 ಸೂಕ್ತ - 1-2-3-4 ಸೇರಿ ಒಂದು ಕಾಂಡ ಪೂರ್ತಿ ಯಾಗ ಮಂತ್ರಗಳ ಪುಂಜಗಳು. ಅದರಲ್ಲಿಯೇ ಹೆಸರಿಸಿದಂತೆ ಪಿತೃಮೇಧ ಕಾಂಡ. ಅಪಿ ಯಾ ಯಾ ತ್ರಾತಾರಯೋ ಅಸು ಮೇ ದಾಯತೀತಿ ಪಿತೃಮೇಧ ಯಾವುದು ಈ ಪ್ರಾಪಂಚಿಕದ ಕರ್ಮದೂಷಿತವಾದ ಪಾಪಭೂಯಿಷ್ಠ ಪ್ರಪಂಚವನ್ನು ದಾಟಿಸುವುದೋ ಅದಕ್ಕೆ ನಾನು ನನ್ನ ಶಕ್ತ್ಯಾನುಸಾರ ಕೊಡುತ್ತೇನೆ ಎನ್ನುವುದೇ ಪಿತೃಮೇಧ ಎಂಬುದರ ಅರ್ಥವಾಗಿರುತ್ತದೆ. ಇದೇ ಸೂತ್ರೀಕೃತವಾದ ಯಾಗವೆನ್ನಿಸಿ ರಾಜಸೂಯ ವೆನ್ನಿಸುತ್ತದೆ.  ಇದಕ್ಕೆ ನಮಗೆ ಸಿಗುವ ಜ್ವಲಂತ ಉದಾಹರಣೆ ಯುಧಿಷ್ಠಿರನು ತನ್ನ ತಂದೆ ಪಾಂಡು ಚಕ್ರವರ್ತಿಗೆ ಸದ್ಗತಿ ಪ್ರಾಪ್ತಿಗಾಗಿ ಮಾಡಿದ್ದುದಾಗಿ ಪ್ರಚಲಿತವಿದೆ. ಅದು ಬಿಟ್ಟರೆ ನಂತರ ಅಂತಹ ಯಾವುದೇ ಉದಾಹರಣೆ ಕಂಡುಬರುವುದಿಲ್ಲ. ಹಾಗಾಗಿ ಆ ಸಂಬಂಧಿಯಾಗಿ ಸೂತ್ರಾಧ್ಯಯನ ಉದ್ದೇಶಿತ ಉಕ್ತ ಮಂತ್ರ ಪುನಃ ಸಂಧಾನ, ಅನುಷ್ಠಾನ, ಸೂಕ್ಷ್ಮ ಪ್ರಯೋಗ, ಇತರೆ ಯಾಗಾನುಭವ, ಪರಿಣಾಮ, ದೇಶಕಾಲೀನ ಸಂದರ್ಭದಲ್ಲಿ ಬಳಸಿದ ವಿಧಿ ವಿಧಾನ, ವಿವೇಚನಾ ಪ್ರಕ್ರಿಯೆ, ಕ್ಷೇತ್ರವಿಧಿ, ಕ್ಷೇತ್ರಾನುಭವ, ಕ್ಷೇತ್ರಶಕ್ತಿ, ಇತ್ಯಾದಿ ಇತ್ಯಾದಿ ಹಲಕೆಲವು ರೀತಿಯಲ್ಲಿ ಪರೀಕ್ಷಿಸಿದೆ. ಉದಂಕ ಋಷಿಯ ಆಶೋತ್ತರಗಳಿಗೆ ಭಿನ್ನವಾಗದಂತೆ ಸಮಕಲೀನ ಸಮಸ್ಯೆಗೆ ತಾಳೆ ಹಾಕಿ ಸೂತ್ರೋಕ್ತ ರೀತಿಯಲ್ಲಿ ವಿಮರ್ಶಿಸಿ ಈ ಯಜ್ಞವನ್ನು ಆಯೋಜಿಸಿ ಸೂಕ್ತ ಯಾಗ ನಿರ್ವಹಣೆ ಮಾಡಲಾಗಿದೆ. ಅದರ ವಿವರಗಳು ಒಂದು ಗಣಿತ ಸೂತ್ರ ರೀತ್ಯಾ ವಿವರಿಸಲ್ಪಟ್ಟಿದೆ. ಅದು ಹೀಗಿದೆ ಗಮನಿಸಿ -

ಕಾಂಡ -19, ಸೂಕ್ತ- 51, ಬ್ರಹ್ಮಾ ದೇವತಾ, ಆತ್ಮಾ ಬೀಜ, ಅನುಷ್ಟುಪ್ ಛಂದಃ

ಅಯುತೋಽಹಮಯುತೋ ಮ ಆತ್ಮಾಯುತಂ ಮೇ ಚಕ್ಷುರಯುತಂ ಮೇ ಶ್ರೋತ್ರಮಯುತೋ ಮೇ ಪ್ರಾಣೋಽಯುತೋ ಮೇಽಪಾನೋಽಯುತೋ ಮೇ ವ್ಯಾನೋಽಯುತೋಽಹಂ ಸರ್ವಃ ।।

ದೇವಸ್ಯ ತ್ವಾ ಸವಿತುಃ ಪ್ರಸವೇಽಶ್ವಿನೋರ್ಬಾಹುಭ್ಯಾಂ ಪೂಷ್ಣೋ ಹಸ್ತಾಭ್ಯಾಂ ಪ್ರಸೂತ ಆ ರಭೇ

ಕಾಂಡ -19, ಸೂಕ್ತ- 53, ಭೃಗು ಋಷಿಃ ಕಾಲಃ ದೇವತಾ

ಕಾಲೋ ಅಶ್ವೋ ವಹತಿ ಸಪ್ತರಶ್ಮಿಃ ಸಹಸ್ರಾಕ್ಷೋ ಅಜರೋ ಭೂರಿರೇತಾಃ ತಮಾ ರೋಹಂತಿ ಕವಯೋ ವಿಪಶ್ಚಿತಸ್ತಸ್ಯ  ಚಕ್ರಾ ಭುವನಾನಿ ವಿಶ್ವಾ

ಸಪ್ತ ಚಕ್ರಾನ್ ವಹತಿ ಕಾಲ ಏಷ ಸಪ್ತಾಸ್ಯ ನಾಭೀರಮೃತಂ ನ್ವಕ್ಷಃ  

ಸ ಇಮಾ ವಿಶ್ವಾ ಭುವನಾನ್ಯಂಜತ್ ಕಾಲಃ ಸ ಈಯತೇ ಪ್ರಥಮೋ ನು ದೇವಃ

ಈ ಮಂತ್ರಗಳಲ್ಲಿ ಉದಾಹರಿಸಿದಂತೆ ಆತ್ಮ ಚಿಂತನೆಯೆಂಬುದು ಒಂದು ಗಣಕೀಕೃತ ಸಾಂಖ್ಯಯೋಗ. ಅದನ್ನು ಕಾಲನ ಅಡಿಯಲ್ಲಿ ಕಲಾ+ಲವ ವೆಂಬ ಮೂಲಸೂತ್ರದಲ್ಲಿ ಅಳವಡಿಸಲ್ಪಟ್ಟಿದೆ. ಅದರ ಅರಿವೇ ಬ್ರಹ್ಮಜ್ಞಾನ. ಆತ್ಮೋಪಮೋಕ್ಷವೇ ಇದರ ಗುರಿ, ಸಂಧಾನ. ಅದರ ಸಂಖ್ಯಾಮೊತ್ತ ಅಯತ. ಅಯತ ಮೀರಿದ ಆಯತನವಿದೆ ಅದರಲ್ಲಿ. ನಿಜವಾಗಿ ಅದನ್ನರಿಯಲು ಬೇಕು ಈ ಯಾಗಾನುಷ್ಠಾನ ಕರ್ಮಗಳು. ಇದನ್ನು ಉಚ್ಛಿಷ್ಠ ಬ್ರಹ್ಮೋಪಾಸನೆ ಎಂದೂ ಕೆಲ ಬ್ರಾಹ್ಮಣಗಳಲ್ಲಿ ಹೆಸರಿಸಲಾಗಿದೆ.  ಉಚ್ಛಿಷ್ಠ=ಎಂಜಲು ಅಲ್ಲ. ತಾನು ಅನುಭವಿಸಿ ಪಡೆಯುವ ಜ್ಞಾನವೆಂದು ಅರ್ಥ. ಇದು ಆತ್ಮಕ್ಕೆ ಆಯತನ ಒದಗಿಸುವ ಕ್ರಿಯೆಯಾಗಿರಬೇಕು. ತನ್ಮೂಲಕ ಆತ್ಮಜ್ಞಾನ ಪ್ರಾಪ್ತಿ ಪಡೆದು ಲೌಕಿಕ ಪ್ರಪಂಚ ಹೊರತಾದ ಮೂಲವಿಧ್ಯಾಮೂಲಕ ಆಧ್ಯಾತ್ಮ ಪ್ರಪಂಚಕ್ಕೆ ಪ್ರವೇಶವೆನ್ನುತ್ತದೆ ಕಾಲಾದೇಶ. ಕಾಲನ ಆದೇಶವೇ ಪ್ರಕೃತಿಯ ಚಲನೆ. ಆ ಚಲನೆಯೇ ಜಗತ್ಸೃಷ್ಟಿ. ಪಶು, ಪಕ್ಷಿ, ಮೃಗ, ಕ್ರಿಮಿಕೀಟ, ಸರೀಸೃಪ, ಜಂತು, ಮಾನವರು, ಗಿಡ, ಮರ, ಕಲ್ಲು, ಮಣ್ಣು, ಹೂ, ಹಣ್ಣು, ಹಂಪಲು, ಆಹಾರ, ಎಲ್ಲಾ ಪ್ರಕೃತಿಯ ಚಲನೆಯಿಂದ ಉತ್ಪಾದನೆ. ಅದಕ್ಕೆ ಕಾಲವೆಂಬ ಮಾರ್ತಾಂಡ ಕಿರಣ ಪ್ರಚೋದನೆ. ಇದನ್ನು ಸೂತ್ರಬದ್ಧ ರೀತಿಯಲ್ಲಿ ಸಂಯೋಜಿಸಲಾಗಿದೆ. ಅದನ್ನು ಅರಿತು ಹೊಂದಿಸಿದರೆ ಹೊಸ ಸೃಷ್ಟಿ ಸಾಧ್ಯ. ಅದಕ್ಕೆ ಬೇಕಾಗುವ ಆತ್ಮವೆಂಬ ಚೈತನ್ಯಮೂಲ ಹೊಂದಿಸಿಕೊಳ್ಳಬೇಕು. ಪ್ರಕೃತಿ ಸೃಷ್ಠಿಯಲ್ಲಿ ಆತ್ಮವೇ ಕಚ್ಚಾವಸ್ತುವಾಗಿದೆ. ಅದನ್ನು ನಿರ್ದೇಶಿಸುವವನು ಕಾಲ. ಹಾಗಾಗಿ ಕಾಲಾದೇಶಕ್ಕೆ ಕಾದು ಸೂಕ್ತ ಸಮಯದಲ್ಲಿ ಉತ್ತು ಬಿತ್ತಿದರೆ ವಿಪುಲ ಬೆಳೆ ಖಂಡಿತ. ಅದನ್ನು ಈ ಯಾಗದಲ್ಲಿ ಬಳಸಲಾಗಿದೆ.

ಕಾಂಡ -19, ಸೂಕ್ತ- 47, ಗೋಪಥ ಸೂತ್ರ (ಸಾಧು ಮಾರ್ಗ) ಮಂತ್ರ 4+5

ಷಷ್ಟಿಶ್ಚ ಷಟ್ ಚ ರೇವತಿ ಪಂಚಾಶತ್ ಪಂಚ ಸುಮ್ನಯಿ

ಚತ್ವಾರಶ್ಚತ್ವಾರಿಂಶಚ್ಚ ತ್ರಯಸ್ತ್ರಿಂಶಚ್ಚ ವಾಜಿನಿ4

ದ್ವೌ ಚ ತೇ ವಿಂಶತಿಶ್ಚ ತೇ ರಾತ್ರ್ಯೇಕಾದಶಾವಮಾಃ

ತೇಭಿರ್ನೋ ಅದ್ಯ ಪಾಯುಭಿರ್ನು ಪಾಹಿ ದುಹಿತರ್ದಿವಃ 5

ಇದೂ ಕೂಡ ಕಾಲಾದೇಶಿತ ಪ್ರಾಕೃತಿಕ ನಿಯಮ ಅಥವಾ ಭೌತಶಾಸ್ತ್ರಸೂತ್ರ. ಇದು ಯಾಗ ಭಾಗದ ಋತ್ವಿಜರ ವಿವೇಚನೆಯಿಂದ ನಡೆಯುವ ಒಂದು ವಿಶಿಷ್ಠ ಪ್ರಕ್ರಿಯೆ. ಮಂತ್ರೋಕ್ತವಾದ ಹವಿಸ್ಸನ್ನು ಅದರ ಸ್ವರೂಪದಂತೆಯೇ ಪುನೀತಗೊಳಿಸಿ ಪ್ರಯೋಗಿಸುವ ವಿಧಾನವಾಗಿರುತ್ತದೆ. ಹಾಗೆ ಪ್ರಯೋಗ ಪ್ರಮಾಣ ಹೊಂದಾಣಿಕೆ ಹೇಗೆಂದು ವಿವರಿಸುತ್ತಾ ಅಪೇಕ್ಷಿತ ಕಾರ್ಯ ಸಾಫಲ್ಯತೆಯನ್ನು ಕೊಡುತ್ತದೆ. ಉದ್ದೇಶಿತ ಕಾರ್ಯ ಸಾಫಲ್ಯತೆಗೆ ಈ ಸೂತ್ರದರಿವು ಬಹಳ ಮುಖ್ಯ. ಇದನ್ನು ಅರಿತವನು ಬ್ರಹ್ಮವಿದನುಎಂದು ಕರೆಸಿ ಕೊಳ್ಳುತ್ತಾನೆ. ಅವನು ಈ ಸಕಲ ಚರಾಚರದ ರಹಸ್ಯವನ್ನು ಭೇಧಿಸಿ ಉತ್ತಮ ರೀತಿಯಲ್ಲಿ ಸಂಯೋಜಿಸಬಲ್ಲ. ಅದರ ಸೂತ್ರವೇ ಈ ಕೆಳಗಿನ ಮಂತ್ರವಾಗಿರುತ್ತದೆ. 

ಕಾಂಡ -19, ಸೂಕ್ತ- 43,

ಮಂತ್ರ 1+2+3+4+5+6+ 7+8

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ

ಅಗ್ನಿರ್ಮಾ ತತ್ರ ನಯತ್ವಗ್ನಿರ್ಮೇಧಾ ದಧಾತು ಮೇ

ಅಗ್ನಯೇ ಸ್ವಾಹಾ

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ವಾಯುರ್ಮಾ ತತ್ರ ನಯತು ವಾಯುಃ ಪ್ರಾಣಾನ್ ದಧಾತು ಮೇ ।

ವಾಯವೇ ಸ್ವಾಹಾ ॥೨

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ಸೂರ್ಯೋ ಮಾ ನಯತು ಚಕ್ಷುಃ ಸೂರ್ಯೋ ದಧಾತು ಮೇ ।

ಸೂರ್ಯಾಯ ಸ್ವಾಹಾ ॥೩

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ಚಂದ್ರೋ ಮಾ ನಯತು ಮನಶ್ಚಂದ್ರೋ ದಧಾತು ಮೇ ।

ಚಂದ್ರಾಯ ಸ್ವಾಹಾ ॥೪

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ಸೋಮೋ ಮಾ ತತ್ರ ನಯತು ಪಯಃ ಸೋಮೋ ದಧಾತು ಮೇ । 

ಸೋಮಾಯ ಸ್ವಾಹಾ

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ಇಂದ್ರೋ ಮಾ ತತ್ರ ನಯತು ಬಲಮಿಂದ್ರೋ ದಧಾತು ಮೇ ।

ಇಂದ್ರಾಯ ಸ್ವಾಹಾ ॥೬

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ಆಪೋ ಮಾ ತತ್ರ ನಯಂತ್ವಮೃತಂ ಮೋಪ ತಿಷ್ಠತು

ಅದ್ಭ್ಯಃ ಸ್ವಾಹಾ

ಯತ್ರ ಬ್ರಹ್ಮವಿದೋ ಯಾಂತಿ ದೀಕ್ಷಯಾ ತಪಸಾ ಸಹ ।

ಬ್ರಹ್ಮಾ ಮಾ ತತ್ರ ನಯತು ಬ್ರಹ್ಮಾ ಬ್ರಹ್ಮ ದಧಾತು ಮೇ ।

ಬ್ರಹ್ಮಣೇ ಸ್ವಾಹಾ ॥೮

ಒಟ್ಟು 8 ಮಂತ್ರಗಳು. ಮೂಲ ಧಾತ್ವಾತ್ಮಕ ಜ್ಞಾನ ಏಳು+ ಒಂದು ಸಮ ಎಂಟು ಎಂದು ವಿಭಾಗಿಸಬೇಕು. ಅದಕ್ಕೆ ಅಗ್ನಿ+ವಾಯು+ಸೂರ್ಯ+ಚಂದ್ರ+ಸೋಮ+ ಇಂದ್ರ+ಅದ್ಭ್ಯ+ಬ್ರಹ್ಮರೆಂಬ 7+1 ರ ಧಾತು ಸೂತ್ರವೇ ಈ ಮಂತ್ರಗಳ ಸಂಯೋಜನೆ. ಇದರ ಆಧಾರದಲ್ಲಿ ಆತ್ಮ ಚಿಂತನೆಮಾಡಿ ಪರಿಷ್ಕರಿತ ಆತ್ಮಗಳು ಈ ಮೇಲಿನ ಮಂತ್ರ ಸೂತ್ರದಂತೆ ಸ್ವಯಮಾಧಿಕಾರ ನೀಡುತ್ತಾ ಅವುಗಳು ಒಳ್ಳೆಯ ಜೀವರಾಗಿ ಹುಟ್ಟಿ ಬರಲಿ ಎಂಬ ಸಾಧನೆ ಕೈಗೊಂಡು ಯಾಗ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗ ಭಾಗದಲ್ಲಿ ಶ್ರಮಿಸಿದ ಸುಬ್ರಹ್ಮಣ್ಯ, ನಿರಂಜನಭಟ್ಟರಾದಿಯಾಗಿ ವಿವರಗಳು ಮುಂದಿವೆ. ಆದರೆ ಈ ಸೋಮಯಾಗದ ಪೂರ್ವಾನುಭವ ರಾಜಸೂಯವಲ್ಲದಿದ್ದರೂ ಇತರೆ ಸೋಮಯಾಗದ ಅನುಭವ ಹೊಂದಿದವರು ಇವರೆಲ್ಲಾ. ಅವರ ಮುಕ್ತ ಸಹಕಾರದೊಂದಿಗೆ ನಿರಂತರ ಒಂದು ತಿಂಗಳಕಾಲ ಆತ್ಮ ಸಂಯಮಿನೀ ಎಂಬ ವಿಶೇಷ ವಿಧಿಯ ಮೂಲಕ ಸಖ್ಯ ಬೆಳೆಸಿ ಅವರೆಲ್ಲಾ ಮುಂದಿನ ದೇಶ ಕಟ್ಟುವ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದು ಒಂದು ಅದ್ಭುತ ಸಾಹಸವೇ ಸರಿ. ಈ ಸಾಹಸವನ್ನು ಮಾಡಿದವರು ಅಧ್ವರ್ಯುಗಳು.

ಅಧ್ವರ್ಯುಗಳಲ್ಲಿ ಈ ಕೆಳಗಿನವರು ಮುಖ್ಯರು. ಮತ್ತು ನಿತ್ಯ ಹೋಮದಲ್ಲಿ ಸಹಾಯಕರಾದವರೂ ಇದ್ದಾರೆ. ಅವರ ವಿವರಗಳು ಗಮನಿಸಿ -

1.

ಯಾಜಿ ಹೆಚ್. ನಿರಂಜನ ಭಟ್ಟರು (ಋಷಿ)

2.

ಕೆ.ಎಸ್. ಸುಬ್ರಹ್ಮಣ್ಯರು (ಋಷಿ)

3.

ನಾಗೇಶ್ ಅಡಿಗರು

4.

ನಾಗೇಶ ಹೆಚ್.ಜಿ.

5.

ಹೇಮಂತಕುಮಾರ್ ಜಿ.

6.

ರವಿರಾಜ್

7.

ಗುರುಪ್ರಸಾದ್

8.

ಡಾ|| ಕುಮಾರಸ್ವಾಮಿಯವರು

ಇನ್ನು ಇವರೆಲ್ಲರ ಜೊತೆಯಲ್ಲಿ ನಾನಿದ್ದು ನನ್ನ ಶಕ್ತ್ಯಾನುಸಾರ ನಿರ್ವಹಣೆ ಮಾಡಿರುತ್ತೇನೆ. ಆ ನಿರ್ವಹಣೆ ಮುಖ್ಯವಾಗಿ ಆತ್ಮಾನುಸಂಧಾನ. ಅದನ್ನು ಈ ಉದ್ದೇಶಿತ ಮಂತ್ರ ಪುರಸ್ಸರವಾಗಿ ಮಾಡಲಾಗಿರುತ್ತದೆ.ಅಥರ್ವಕಾಂಡ 19, ಸೂಕ್ತ - 17, ಮಂತ್ರ 1-10

ಅಗ್ನಿರ್ಮಾ ಪಾತು ವಸುಭಿಃ ಪುರಸ್ತಾತ್ ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿಃ ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ

ವಾಯುರ್ಮಾಂತರಿಕ್ಷೇಣೈತಸ್ಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೨

ಸೋಮೋ ಮಾ ರುದ್ರೈರ್ದಕ್ಷಿಣಾಯಾಂ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ

ವರುಣೋಮಾದಿತ್ಯೈರೇತಸ್ಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೪

ಸೂರ್ಯೋ ಮಾ ದ್ಯಾವಾಪೃಥಿವೀಭ್ಯಾಂ ಪ್ರತೀಚ್ಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೫

ಆಪೋ ಮೌಷಧೀಮತೀರೇತಸ್ಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೬

ವಿಶ್ವಕರ್ಮಾ ಮಾ ಸಪ್ತಋಷಿಭಿರುದೀಚ್ಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೭

ಇಂದ್ರೋ ಮಾ ಮರುತ್ವಾನೇತಸ್ಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೮

ಪ್ರಜಾಪತಿರ್ಮಾ ಪ್ರಜನನವಾನ್ತ್ಸ ಪ್ರತಿಷ್ಠಾಯಾ ಧ್ರುವಾಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೯

ಬೃಹಸ್ಪತಿರ್ಮಾ ವಿಶೈರ್ದೇವೈರೂರ್ಧ್ವಾಯಾ ದಿಶಃ ಪಾತು ತಸ್ಮಿನ್ ಕ್ರಮೇ ತಸ್ಮಿಂಛ್ರಯೇ ತಾಂ ಪುರಂ ಪ್ರೈಮಿ । ಸ ಮಾ ರಕ್ಷತು ಸ ಮಾ ಗೋಪಾಯತು ತಸ್ಮಾ ಆತ್ಮಾನಾಂ ಪರಿ ದದೇ ಸ್ವಾಹಾ ॥೧೦

ಈ ಮಂತ್ರಗಳಿಂದ ದಶದಿಕ್ಕುಗಳಿಗೆ ವ್ಯಾಪಿಸಿದ ಆತ್ಮ ಸಮೂಹಗಳನ್ನು ಯಶಸ್ವಿಯಾಗಿ ಸಂಪರ್ಕಿಸಿ ಅಭಿಶ್ಚಾರಣೆಗೊಳಿಸಿ ಪೂರ್ಣತೆಯಲ್ಲಿ ಪೂರ್ಣಗೊಳಿಸಿ ಯಾಗಮುಖೇನ ಮುಂದಿನ ಗತಿಗೆ ದಾಟಿಸುವ ವಿಧಾನ ಇದಾಗಿರುತ್ತದೆ. ಇದನ್ನು ವಿಂಶತಿ ಸೂತ್ರದಂತೆಯೂ. ತ್ರಿಂಶತಿ ಸೂತ್ರದಂತೆಯೂ ಗಣಕೀಕರಿಸಿ ಸಂಖ್ಯಾ ನಿರ್ಣಯ ಮಾಡಿ ರಾಷ್ಟ್ರದೆಲ್ಲೆಡೆ ಹರಡುವಂತೆ ಮಾಡಲಾಗಿದೆ. ಇದು ಯಾಗದ ಮುಖ್ಯ ಅಂಶ. ಅದಕ್ಕೆ ಪೂರಕವಾಗಿ ಪ್ರಯೋಗ ಮಂತ್ರಗಳಿಂದ ಪ್ರಯೋಗ ಮಾಡಲಾಗುತ್ತದೆ. ಅದನ್ನು ನಿರ್ವಹಿಸುವವರು ಅಧ್ವರ್ಯುಗಳು. ಅವರಲ್ಲಿ ಜನ್ಮ ಜನ್ಮಾಂತರದ ಪೂರ್ವಾನುಭವವನ್ನು ಇಲ್ಲಿ ಗಣಿಸಿ ಅದನ್ನು ಪ್ರಯೋಗದಲ್ಲಿ ಬಳಸಲಾಗಿದೆ. ಅದಕ್ಕಾಗಿ ಕಾಂಡ 19 ಸೂಕ್ತ -27 ರ ಮಂತ್ರ 3 ಮತ್ತು 4 ನೇ ಮಂತ್ರಗಳನ್ನು ಬಳಸಿ ಸೂತ್ರ ಸಿದ್ಧಪಡಿಸಲಾಗಿದೆ. ಇದೇ ಈ ಯಾಗದ ಕೀಲಕವಾಗಿರುತ್ತದೆ. ಅದು ಹೀಗಿದೆ -

ತಿಸ್ರೋ ದಿವಸ್ತಿಸ್ರಃ ಪೃಥಿವೀಸ್ತ್ರೀಣ್ಯಂತರಿಕ್ಷಾಣಿ ಚತುರಃ ಸಮುದ್ರಾನ್ ತ್ರಿವೃತಂ ಸ್ತೋಮಂ ತ್ರಿವೃತ ಆಪ ಆಹುಸ್ತಾಸ್ತ್ವಾ ರಕ್ಷಂತು ತ್ರಿವೃತಾ ತ್ರಿವೃದ್ಭಿಃ

ತ್ರೀನ್ನಾಕಾಂಸ್ತ್ರೀಂತ್ಸಮುದ್ರಾಂಸ್ತ್ರೀನ್ ಬ್ರಧ್ನಾಸ್ತ್ರೀನ್ ವೈಷ್ಟಪಾನ್

ತ್ರೀನ್ ಮಾತರಿಶ್ವನಸ್ತ್ರೀಂತ್ಸೂರ್ಯಾನ್ ಗೋಪ್ತೄನ್ ಕಲ್ಪಯಾಮಿ ತೇ

ಈ ಮಂತ್ರಗಳಿಂದ ಸೂತ್ರೀಕರಿಸಿ ಗುಪ್ತ ಸೂತ್ರಗಳ ಮುಖೇನ ಭಿನ್ನವಿಲ್ಲದಂತೆ ಪ್ರಯೋಗಿಸಲಾಗಿದೆ.

ಲೋಕಮುಖದಲ್ಲಿರತಕ್ಕ ದೂಷಿತಗಳು ನಿರಸನವಾಗ ಬೇಕು. ಅದು ಹೇಗೆ? ಈ ಭೂಖಂಡದಲ್ಲಿ ನಿರಂತರ ಒಂದು ಕಾಂತೀಯ ತರಂಗ ವರ್ತುಲಾಕಾರದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಆದರೆ ನೇರವಾಗಿ ತಿರುಗದೆ ನೈಋತ್ಯ ಈಶಾನ್ಯವೆಂಬ ರೇಖಾ ಸೂತ್ರದಂತೆಯೂ, ಹಾಗೇ ವಾಯುವ್ಯಾಗ್ನೇಯ ವೆಂಬ ರೇಖೆಯಲ್ಲಿಯೂ ಈ ಕಾಂತೀಯ ತರಂಗದ ಚಲನೆ ಇದೆ. ಅದನ್ನು ಬಳಸಿಕೊಂಡು ಕಾಂತಶಕ್ತಿಯಲ್ಲಿ ಈ ದೂಷಿತಗಳನ್ನು ಸಂಯೋಜಿಸಿದಲ್ಲಿ ಸ್ವಭಾವತ ದಕ್ಷಿಣಾ ಯಾನದಲ್ಲಿ ಇಂಧನ ನಷ್ಟವೆಂಬ ನಿಯಮದಂತೆ ಇದು ಇಂಧನವಾಗಿ ಪ್ರಯೋಗವಾಗುತ್ತದೆ. ಇದೇ ದೂಷಿತ ನಿರಸನಾ ಸೂತ್ರ.

ಇನ್ನು ಆತ್ಮೀಯವಾದ ಬಲ+ವೀರ್ಯ+ಓಜ+ ತೇಜದ ವೃದ್ಧಿ. ಅದನ್ನು ಕಾಲಾದೇಶ ತುಷ್ಟೀಕರಣ ಸೂತ್ರದಲ್ಲಿ ಸಂಯೋಜಿಸಿ ಜೀವ+ಜಲ+ಪ್ರಾಣ ಶುದ್ಧಿಗಾಗಿ ವಿನಿಯೋಗಿಸಲಾಗಿದೆ. ಹಾಗಾಗಿ ಆತ್ಮನಲ್ಲಿ ಕರ್ಮಶೇಷ ನಿರ್ಲೇಪನಾದ್ದರಿಂದ ಇಚ್ಛಾ ಜನನವಾಗುತ್ತದೆ. ಸದ್ಬುದ್ಧಿಯೇ ಪ್ರಾಪ್ತವಾಗುತ್ತದೆ. ಇದು ಯಾಗದ ಉದ್ದೇಶವಾಗಿ ಯಾವಾಗಲೂ ಸಜ್ಜನರೇ ಹುಟ್ಟಿ ಬರಲಿ ಎಂಬುದು ಯಾಗದ ಉದ್ದೇಶವಾಗಿದೆ. ಇದನ್ನೇ ರಾಜಸೂಯವೆನ್ನುತ್ತಾರೆ. 

ಕಾಂಡ 19, ಸೂಕ್ತ 24 ಮಂತ್ರ 1

ಯೇನ ದೇವಂ ಸವಿತಾರಂ ಪರಿದೇವಾ ಅದಾರಯನ್

ತೇನೇಮಂ ಬ್ರಹ್ಮಣಸ್ಪತೇ ಪರಿ ರಾಷ್ಟ್ರಾಯ ಧತ್ತನ

ಎಂಬಂತೆ ರಾಷ್ಟ್ರಹಿತ ಹೊರತುಪಡಿಸಿದ ಯಾವುದೇ ಉದ್ದೇಶವೂ ನಮ್ಮ ಋತ್ವಿಕ್ ವಾಣಿ ಬಳಗಕ್ಕಿರುವುದಿಲ್ಲ. ಎಲ್ಲರೂ ಸೇರಿ ಒಂದಾಗಿ ನಮ್ಮ ಸ್ವಂತಶಕ್ತಿಯಿಂದ  ಈ ಯಾಗ ಮಾಡಿದ್ದೇವೆ. ಅಂದಾಜು 350 ಜನ ಋತ್ವಿಕ್ ವಾಣಿ ಬಳಗದ ಸದಸ್ಯರ ಸಾಧನೆ ಇದು. ಶಾಸ್ತ್ರೀಯವಾಗಿ ಸೋಮ ತಯಾರಿಕೆ, ಅತೀ ಸಣ್ಣ ಜಾಗದಲ್ಲಿ ಈ ಕೊರೊನಾ ನಿಯಮಕ್ಕೆ ಬದ್ಧವಾಗಿ ಸೂತ್ರೋಕ್ತ ರೀತಿಯಲ್ಲಿ ಮಾಡಿ ಮುಗಿಸಿದ್ದೇವೆ ಎಂದು ತಿಳಿಸಲು ಸಂತೋಷವಾಗುತ್ತದೆ. ಅದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಗಮನಿಸಿ. ಮುಖ್ಯವಾದ ರಾಜಸೂಯ ಬಗ್ಗೆ ವಿವರಣೆ ಮುಂದಿನ ಸಂಚಿಕೆಯಲ್ಲಿ. ಉದಾಹರಣೆ ಮಾತ್ರಾ ಇಲ್ಲಿದೆ. ಕಾಂಡ 19 ಸೂಕ್ತ -33 ಮಂತ್ರ 1+2+3

ಸಹಸ್ರಾರ್ಘಃ ಶತಕಾಂಡಃ ಪಯಸ್ವಾನಪಾಮಗ್ನಿರ್ವೀರುಧಾಂ ರಾಜಸೂಯಮ್

ಸ ನೋಽಯಂ ದರ್ಭಃ ಪರಿಪಾತು ವಿಶ್ವತೋ ದೇವೋ ಮಣಿರಾಯುಷಾ ಸಂ ಸೃಜಾತಿ ನಃ

ಘೃತಾದುಲ್ಲುಪ್ತೋ ಮಧುಮಾನ್ ಪಯಸ್ವಾನ್ ಭೂಮಿ ದೃಂಹೋಚ್ಯುತಶ್ಚ್ಯಾವಯಿಷ್ಣುಃ ನುದಂತ್ಸಪತ್ನಾನಧರಾಂಶ್ಚ ಕೃಣ್ವನ್ ದರ್ಭಾ ರೋಹ ಮಹತಾಮಿಂದ್ರಿಯೇಣ

ತ್ವಂ ಭೂಮಿಮತ್ಯೇಷ್ಯೋಜಸಾ ತ್ವಂ ವೇದ್ಯಾಂ ಸೀದಸಿ ಚಾರುರಧ್ವರೇ ತ್ವಾಂ ಪವಿತ್ರಮೃಷಯೋಽಭರಂತ ತ್ವಂ ಪುನೀಹಿ ದುರಿತಾನ್ಯಸ್ಮತ್

ಮುಂದುವರೆಯುವುದು.....

-       ಯಾಗ ನಿರ್ದೇಶಕರು, ಕೆ.ಎಸ್. ನಿತ್ಯಾನಂದ