Wednesday, 6 October 2021

ಪಿತೃವಿಜ್ಞಾನದ ಪ್ರತ್ಯಕ್ಷ ಸಾಧನಾ ಮಾರ್ಗ - ಷಣ್ಣವತೀ ಶ್ರಾದ್ಧ


ಇತ್ತೀಚೆಗೆ ಪಿತೃವಿಜ್ಞಾನ ಪರಿಚಯ ಪಾಠ ಮಾಡುವಾಗ ವಿಧ್ಯಾರ್ಥಿಗಳು ಇದು ಸೈದ್ಧಾಂತಿಕ ಭಾಗವಾಯಿತು, ಪಿತೃಗಳ ಬಗ್ಗೆ ಪ್ರತ್ಯಕ್ಷ ಅನುಭವ ಪಡೆಯುವ ಪ್ರಾಯೋಗಿಕ ವಿಧಾನವೇನು ಎಂದು ಕೇಳಿದರು. ಅದಕ್ಕೆ ಸುಲಭ ಮಾರ್ಗವೆಂದರೆ ನಿತ್ಯ ಪಿತೃತರ್ಪಣ ಕೊಡುವುದು ಎಂದು ಯಥಾಮತಿ ಹೇಳಿದೆ. ನೆನ್ನೆ (05-10-2021) ನಮ್ಮ ಗುರುಗಳಾದ ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಸಂಸ್ಥಾಪಕರಾದ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ಈ ವಿಚಾರವನ್ನು ಪ್ರಸ್ತಾಪಿಸಿದೆ. ಆಗ ಅವರು ಆರು ವರ್ಷಗಳ ಕಾಲ ಮಾಡಬಹುದಾದ "ಷಣ್ಣವತೀ ಶ್ರಾದ್ಧ" ಎಂಬ ಪುರಾತನ ಸಾಧನಾ ಮಾರ್ಗವನ್ನು ಸೂಚಿಸಿದರು. ಅವರು ತಿಳಿಸಿದ ವೇದೋಕ್ತ ಪುರಾತನ ಕ್ರಮಕ್ಕೂ ಪ್ರಸಕ್ತ ಆಚರಣೆಗೂ ಕೊಂಚ ವ್ಯತ್ಯಾಸಗಳಿವೆ. ಇಂತಹಾ ಸಾಧನೆಯನ್ನು ಕೈಗೊಳ್ಳುವವರು ಬ್ರಹ್ಮ ಋಷಿಗಳನ್ನು ಮುಖತಃ ಭೇಟಿಯಾಗಿ ಹೆಚ್ಚಿನ ವಿಚಾರ ತಿಳಿದುಕೊಳ್ಳಬಹುದು. ಈಗ ಪ್ರಸಕ್ತ ಪ್ರಕಟಿತ ಧರ್ಮಶಾಸ್ತ್ರ ಗ್ರಂಥಗಳ ಆಧಾರದಲ್ಲಿ ಸಿಗುವ ಷಣ್ಣವತೀ (96) ಶ್ರಾದ್ಧಗಳು ಯಾವವು ಎಂದು ನೋಡೋಣ.

 

1. ಮನ್ವಾದಿ ಶ್ರಾದ್ಧಗಳು - 14

2. ಅಮಾವಾಸ್ಯಾ ಶ್ರಾದ್ಧಗಳು - 12

3. ವೈಧೃತಿ ಶ್ರಾದ್ಧಗಳು - 12

4. ವ್ಯತೀಪಾತ ಶ್ರಾದ್ಧಗಳು - 12

5. ಯುಗಾದಿ ಶ್ರಾದ್ಧಗಳು - 4

6. ಮಹಾಲಯ ಪಕ್ಷದ ಶ್ರಾದ್ಧಗಳು - 15

7. ಸಂಕ್ರಾತಿ ಶ್ರಾದ್ಧಗಳು - 12

8. ಅಷ್ಟಕ ಶ್ರಾದ್ಧಗಳು - 5

9. ಅನ್ವಷ್ಟಕ ಶ್ರಾದ್ಧಗಳು - 5

10. ತಿಸ್ರೋಷ್ಟಕ ಶ್ರಾದ್ಧಗಳು - 5

 

14+12+12+12+4+15+12+5+5+5= 96 = ಷಣ್ಣವತೀ ಶ್ರಾದ್ಧ ಎಂದು ಪ್ರಸಿದ್ಧವಾಗಿದೆ.

 

1. ಮನ್ವಾದಿಗಳು - 14

 

1. ಚೈತ್ರ ಶುದ್ಧ ತದಿಗೆ

2. ಚೈತ್ರ ಹುಣ್ಣಿಮೆ

3. ಜ್ಯೇಷ್ಠಾ ಹುಣ್ಣಿಮೆ

4. ಆಷಾಢ ಶುದ್ಧ ದಶಮಿ

5. ಆಷಾಢ ಹುಣ್ಣಿಮೆ

6. ಶ್ರಾವಣ ಬಹುಳ ಅಷ್ಟಮಿ

7. ಶ್ರಾವಣ ಅಮಾವಾಸ್ಯೆ

7. ಭಾದ್ರಪದ ಶುದ್ಧ ತೃತೀಯ

8. ಅಶ್ವಯುಜ ಶುದ್ಧ ನವಮಿ

9. ಕಾರ್ತಿಕ ಶುದ್ಧ ದ್ವಾದಶಿ

10. ಕಾರ್ತಿಕ ಹುಣ್ಣಿಮೆ

11. ಪುಷ್ಯ ಶುದ್ಧ ಏಕಾದಶಿ

12. ಮಾಘ ಶುದ್ಧ ಸಪ್ತಮಿ

13. ಫಲ್ಗುಣಿ ಹುಣ್ಣಿಮೆ

14. ಫಲ್ಗುಣಿ ಅಮಾವಾಸ್ಯೆ

 

2. ಅಮಾವಾಸ್ಯೆಗಳು - 12

 

1. ಚೈತ್ರ ಅಮಾವಾಸ್ಯೆ

2. ವೈಶಾಖ ಅಮಾವಾಸ್ಯೆ

3. ಜ್ಯೇಷ್ಠ ಅಮಾವಾಸ್ಯೆ

4. ಆಷಾಢ ಅಮಾವಾಸ್ಯೆ

5. ಶ್ರಾವಣ ಅಮಾವಾಸ್ಯೆ

6. ಭಾದ್ರಪದ ಅಮಾವಾಸ್ಯೆ

7. ಅಶ್ವಯುಜ ಅಮಾವಾಸ್ಯೆ

8. ಕಾರ್ತಿಕ ಅಮಾವಾಸ್ಯೆ

9. ಮಾರ್ಗಶಿರ ಅಮಾವಾಸ್ಯೆ

10. ಪುಷ್ಯ ಅಮಾವಾಸ್ಯೆ

11. ಮಾಘ ಅಮಾವಾಸ್ಯೆ

12. ಫಲ್ಗುಣಿ ಅಮಾವಾಸ್ಯೆ

 

3-4. ವೈಧೃತಿ ಹಾಗೂ ವ್ಯತೀಪಾತ - 12+12 ಎಂಬವು ಪಂಚಾಂಗದ ನಿತ್ಯ ಯೋಗ ಎಂಬುದರಲ್ಲಿ ಬರುವ 17ನೇ ಹಾಗೂ 27ನೇ ಯೋಗಗಳು. ಇವು ಪ್ರತೀ ತಿಂಗಳೂ ಬರುತ್ತವೆ. ಹಾಗಾಗಿ ಇದರಲ್ಲಿ 24 ಶ್ರಾದ್ಧಗಳು ಸಿಗುತ್ತವೆ.

 

5. ಯುಗಾದಿಗಳು - 4

 

1. ಕೃತ ಯುಗಾದಿ - ಕಾರ್ತಿಕ ಶುದ್ಧ ನವಮಿ (ಅಕ್ಷಯ ನವಮಿ)

2. ತ್ರೇತಾ ಯುಗಾದಿ - ವೈಶಾಖ ಶುದ್ಧ ತೃತೀಯ (ಅಕ್ಷಯ ತೃತೀಯ)

3. ದ್ವಾಪರಾ ಯುಗಾದಿ - ಮಾಘ ಬಹುಳ ತ್ರಯೋದಶಿ

4. ಕಲಿ ಯುಗಾದಿ - ಭಾದ್ರಪದ ಬಹುಳ ತ್ರಯೋದಶಿ

 

6. ಮಹಾಲಯ ಪಕ್ಷ - 15

 

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ 15 ದಿನಗಳು.

 

7. ಸಂಕ್ರಾಂತಿಗಳು - 12

 

1. ಮೇಷ ಸಂಕ್ರಾಂತಿ

2. ವೃಷಭ ಸಂಕ್ರಾಂತಿ

3. ಮಿಥುನ ಸಂಕ್ರಾಂತಿ

4. ಕರ್ಕಾಟಕ ಸಂಕ್ರಾಂತಿ

5. ಸಿಂಹ ಸಂಕ್ರಾಂತಿ

6. ಕನ್ಯಾ ಸಂಕ್ರಾಂತಿ

7. ತುಲಾ ಸಂಕ್ರಾಂತಿ

8. ವೃಶ್ಚಿಕ ಸಂಕ್ರಾಂತಿ

9. ಧನುಸ್ ಸಂಕ್ರಾಂತಿ

10. ಮಕರ ಸಂಕ್ರಾಂತಿ

11. ಕುಂಭ ಸಂಕ್ರಾಂತಿ

12. ಮೀನ ಸಂಕ್ರಾಂತಿ

 

8. ಪೂರ್ವೇದ್ಯು - 5

 

1. ಭಾದ್ರಪದ ಬಹುಳ ಸಪ್ತಮಿ

2. ಮಾರ್ಗಶಿರ ಬಹುಳ ಸಪ್ತಮಿ

3. ಪುಷ್ಯ ಬಹುಳ ಸಪ್ತಮಿ

4. ಮಾಘ ಬಹುಳ ಸಪ್ತಮಿ

5. ಫಾಲ್ಗುಣ ಬಹುಳ ಸಪ್ತಮಿ

 

9. ಅಷ್ಟಕ - 5

 

1. ಭಾದ್ರಪದ ಬಹುಳ ಅಷ್ಟಮಿ

2. ಮಾರ್ಗಶಿರ ಬಹುಳ ಅಷ್ಟಮಿ

3. ಪುಷ್ಯ ಬಹುಳ ಅಷ್ಟಮಿ

4. ಮಾಘ ಬಹುಳ ಅಷ್ಟಮಿ

5. ಫಾಲ್ಗುಣ ಬಹುಳ ಅಷ್ಟಮಿ

 

10. ಅನ್ವಷ್ಟಕ ಶ್ರಾದ್ಧಗಳು - 5

 

1. ಭಾದ್ರಪದ ಬಹುಳ ನವಮಿ

2. ಮಾರ್ಗಶಿರ ಬಹುಳ ನವಮಿ

3. ಪುಷ್ಯ ಬಹುಳ ನವಮಿ

4. ಮಾಘ ಬಹುಳ ನವಮಿ

5. ಫಾಲ್ಗುಣ ಬಹುಳ ನವಮಿ

 

ಇಷ್ಟಕ್ಕೆ 96 ಶ್ರಾದ್ಧಗಳು ಸಿಗುವವು. ಇವುಗಳಲ್ಲದೆ ಇನ್ನೂ ಕೆಳಕಂಡ ದಿವಸಗಳು ಧರ್ಮಶಾಸ್ತ್ರದಲ್ಲಿ ಕೇಳಸಿಗುತ್ತದೆ -

 

1. ಕಲ್ಪಾದಿ ತಿಥಿಗಳು - 7

2. ಭೀಷ್ಮಾಷ್ಟಮೀ

3. ಸಾಂವತ್ಸರಿಕ ಶ್ರಾದ್ಧ

4. ಶುಭ ದಿನಗಳು (ಉದಾ - ಪುತ್ರನ ಜನ್ಮ ಮಹೋತ್ಸವ)

5. ಶ್ರಾದ್ಧಕ್ಕೆ ಬೇಕಾದ ಪರಿಕರಗಳು ಯಥೇಚ್ಛವಾಗಿ ಲಭ್ಯವಿದ್ದಾಗ.

6. ಸೂಕ್ತ ಬ್ರಾಹ್ಮಣಾಗಮನದಿಂದ.

7. ಸಂಪತ್ ದಿನ

8. ಗಜಚ್ಛಾಯಾ ಯೋಗ

9. ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣ

10. ಶ್ರಾದ್ಧ ಮಾಡುವ ಅತೀವ ಇಚ್ಛೆಯುದಿಸಿದಾಗ.

 

ಇಲ್ಲಿಯವರೆಗೆ ತಂದೆ ಮಗನ ಸಂಬಂಧವನ್ನು ನಿರೂಪಿಸುವ ಯಾವುದೇ ಆಧುನಿಕ ವಿಜ್ಞಾನದ ಮಾನದಂಡಗಳಿಲ್ಲ. ಡಿ.ಎನ್.ಎ. ಪರೀಕ್ಷೆ ಎಂಬುದು ಕಟ್ಟುಕಥೆ, ಶುದ್ಧಸುಳ್ಳು, ವಿಜ್ಞಾವೇ ಅಲ್ಲ, ಅದರ ಬಳಕೆದಾರರಿಗೂ ತಿಳಿಯದಂತೆ ರೂಪಿಸಿರುವ ಮೋಸದ ಜಾಲವಷ್ಟೆ. ಆದರೆ ಪಿತೃ-ವಿಜ್ಞಾನವು ಪಿತೃ-ಪಿತಾಮಹ-ಪ್ರಪಿತಾಮಹ ಎಂಬುದು ಅತೀ ಸೂಕ್ಷ್ಮ ತರಂಗಗಳು ಎಂದು "ಷಣ್ಣವತೀ ಶ್ರಾದ್ಧದ" ಮುಖೇನ ಪ್ರತ್ಯಕ್ಷವಾಗಿ ಸ್ವಾನುಭವವನ್ನು ಪಡೆಯುವ ಅವಕಾಶವನ್ನೂ ಮಾಡಿಕೊಟ್ಟಿದೆ. ಒಟ್ಟು ಪಿತೃವರ್ಗವನ್ನು ಒಂದು ದೊಡ್ಡ ಬುಟ್ಟಿ ಎಂದುಕೊಳ್ಳಿ, ಅದರಿಂದ ಇಳಿದು ಬರುತ್ತಾ ಚೂಪಾಗಿ ಕೊನೆಗೊಳ್ಳುವ ನಳಿಕೆ ಎಂಬಂತಹಾ ಚಿತ್ರಣವನ್ನು ಕಲ್ಪಿಸಿಕೊಳ್ಳಿ. ನಳಿಕೆಯ ತುದಿಯಲ್ಲಿ ಬಟ್ಟಿ ಇಳಿದು ಬರುವುದೇ "ಪಿತೃ ಸ್ರೋತ". ಅದರಲ್ಲಿ ಅನಂತ ವರ್ಷಗಳ ಕಾಲ ಹಿಂದಕ್ಕೂ ಮುಂದಕ್ಕೂ ಹೋಗುವ ಪಿತೃ ಪರಂಪರೆಯ ದಾಖಲೆ ಇರುತ್ತದೆ. ಆರು ವರ್ಷಗಳ ಕಾಲ ಷಣ್ಣವತೀ ಶ್ರಾದ್ಧವನ್ನು ಮಾಡಿದಾಗ ಬರುವ ಕೊನೆಯ ಫಲಿತಾಂಶವೇ ಈ ಪಿತೃ ಸ್ರೋತದ ಸಂಪರ್ಕ ಸಾಧನೆ. ಸೋಮಮಂಡಲದಲ್ಲಿ ಹೇಗೆ ಪಿತೃಲೋಕವಿದೆ? ಅಲ್ಲಿನ ವ್ಯವಹಾರವೇನು? ಪಿತೃಸ್ವರೂಪವೇನು? ಪಿತೃಯಾನ ಹೇಗೆ? ಎಲ್ಲವೂ ಇದಮಿತ್ಥಂ ಪ್ರತ್ಯಕ್ಷವಾಗಿ ಪ್ರಮಾಣೀಕರಿಸುತ್ತದೆ ಎಂದು ದೃಢವಿಶ್ವಾಸದಿಂದ ಹೇಳುತ್ತಾರೆ ಬ್ರಹ್ಮ ಋಷಿಗಳು. ಹೆಚ್ಚೆಚ್ಚು ಮಂದಿ ಇದರ ಸಾಧನೆಗೆ ಇಳಿಯಬೇಕು. ಅದರಲ್ಲಿ ಪ್ರಪಂಚಕ್ಕೆ ಒಬ್ಬನಾದರೂ ಸಫನಲಾದರೆ ಉಳಿದವರಿಗೆಲ್ಲಾ ಮಾರ್ಗದರ್ಶನ ಮಾಡಬಲ್ಲನು.

 

ಪಿತೃ-ಪಿತಾಮಹ-ಪ್ರಪಿತಾಮಹ ಎಂಬ ಮೂರು ಪ್ರವಹನಾ ಮಾರ್ಗಗಳು ಸೋಮಮಂಡಲಕ್ಕಿವೆ. ಇವು ಮೂರು ವಿಶೇಷ ತರಂಗಗಳೂ ಹೌದು. ಒಂದು ಮಗುವು ಹುಟ್ಟಿದಾಗ, ನಾಳಾಚ್ಛೇದವಾದೊಡನೆ ಅದಕ್ಕೆ ಉಸಿರಾಟ, ಹಸಿವೆ, ಕಣ್ತೆರೆಯುವುದು ಎಂಬ ಮೂರು ಪ್ರಕ್ರಿಯೆಗಳನ್ನು ಚಾಲನೆಗೊಳಿಸುವುದೇ ಈ "ಪಿತೃ-ಪಿತಾಮಹ-ಪ್ರಪಿತಾಮಹ" ಎಂಬ ಮೂರು ತರಂಗಗಳು. ಬೆಳವಣಿಗೆಯಲ್ಲೂ, ಒಟ್ಟಾರೆ ಜೀವನದಲ್ಲೂ ಪಿತೃವರ್ಗದ ಕೊಡುಗೆಯಪಾರ. ಕೊನೆಗೆ ಮೃತ್ಯುವಾದಾಗ ಆತ್ಮದ ದೈವಿಕಾಂಶವನ್ನು ಹೊತ್ತು ಪಿತೃಲೋಕಕ್ಕೆ ಕರೆದೊಯ್ಯುವುದೂ ಇವೇ ಮೂರು ತರಂಗಗಳು. ಈ ಮೂರು ಸ್ಥಾನ ರೂಪೀ ಪಿತೃ ತರಂಗಗಳು ಪ್ರಧಾನ.

 

ಇಂತಹಾ ಪಿತೃ ತರಂಗಗಳಿಗೆ ತರ್ಪಣವಿತ್ತಾಗ ಸೋಮಮಂಡಲದಲ್ಲಿರುವ ಪಿತೃಗಳು ತೃಪ್ತರಾಗಿ ಸರಿಯಾದ ಮಳೆ-ಬೆಳೆ-ಆರೋಗ್ಯ ಕೊಡುವಂತೆ ಮಾಡುತ್ತಾರೆ. ಹಿಂದೆಲ್ಲಾ ನಿತ್ಯ ಪಿತೃ ತರ್ಪಣವು ಚಾಲ್ತಿಯಲ್ಲಿತ್ತು. ಮಹಾಲಯ ಅಮಾವಾಸ್ಯೆಗಂತೂ ಪುರೋಹಿತರು ಆಯಾಯ ಗ್ರಾಮದಲ್ಲಿ ಎಲ್ಲರ ಮನೆಮನೆಗೆ ಹೋಗಿ ತರ್ಪಣ ಕೊಡಿಸುತ್ತಿದ್ದರು. ಈಗ ನಮ್ಮ ಜನರಿಗೆ ಅದೆಲ್ಲಾ ಬೇಡವಾಗಿದೆ. ಅದರ ಹಿಂದಿನ ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಳ್ಳಲಾಗದ ಶಿಕ್ಷಣ ಹಾಗೂ ಉದ್ಯೋಗ ವ್ಯವಸ್ಥೆಯಲ್ಲಿದೆ. ಅದರಿಂದ ಕೊಂಚ ಹೊರಬಂದು ನಿತ್ಯ ತರ್ಪಣ ನೀಡಿ. ಹೋಗಲಿ, ಕನಿಷ್ಠ ಪಕ್ಷ ಮಹಾಲಯ ಅಮಾವಾಸ್ಯೆಗಾದರೂ ಕರ್ತವ್ಯವೆಂಬಂತೆ ಮೃತ ಪಿತೃಗಳಿಗೆ ತರ್ಪಣ ನೀಡಿ ಪಿತೃಕೃಪೆಗೆ ಪಾತ್ರರಾಗಿರಿ, ಜೊತೆಗೆ ಪ್ರಕೃತಿಯನ್ನು ಉಳಿಸಿರಿ. ಸೋಮಮಂಡಲದಲ್ಲಿ ತೃಪ್ತತೆ ಉಂಟಾದರೆ ಮಾತ್ರ ಈ ಭೂಪ್ರಕೃತಿಯು ಅತಿವೃಷ್ಟಿ ಅನಾವೃಷ್ಟಿಗಳಿಲ್ಲದೆ ಸಂತಸದಿಂದಿರಲು ಸಾಧ್ಯ. ತರ್ಪಣ ಕೊಡುವುದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ, ಪಡೆದುಕೊಳ್ಳುವುದು ಮಾತ್ರ ಅಗಾಧ.

 

1. ಪಿತೃ ತರ್ಪಣ ವಿಧಿ - https://www.vedavidhya.com/post/pitru-tarpana

2. ಪಿತೃ-ವಿಜ್ಞಾನ ಪರಿಚಯ ಪ್ರಾಥಮಿಕ ಎರಡು ಪಾಠವನ್ನು ನೊಂದಾಯಿಸಿ ಪಡೆದುಕೊಳ್ಳಬಹುದು - https://www.vedavidhya.com/challenge-page/pvp1

3. ಎರಡನೆಯ ಪಾಠವನ್ನು 2021ರ ನವೆಂಬರ್ 6-7 ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತರು ನೊಂದಾಯಿಸಿಕೊಳ್ಳಬಹುದು - https://www.vedavidhya.com/challenge-page/pvp2

4. "ಪಿತೃವಿಜ್ಞಾನ ಪರಿಚಯ" ಪುಸ್ತಕ ಈಗ ಅಮೇಜಾನಿನಲ್ಲಿ ಲಭ್ಯವಿದೆ - https://www.amazon.in/dp/B095KPFXCH/ref=cm_sw_em_r_mt_dp_WYJXRXX1B1H6K49RQFET

- ಹೇಮಂತ್ ಕುಮಾರ್ ಜಿ

https://www.vedavidhya.com